Tag: Release

  • ‘ಇದು ನಮ್ ಶಾಲೆ’ ಚಿತ್ರದ ಸಾಂಗ್ ರಿಲೀಸ್ ಮಾಡಿ ಐಪಿಎಸ್ ಅಧಿಕಾರಿ

    ‘ಇದು ನಮ್ ಶಾಲೆ’ ಚಿತ್ರದ ಸಾಂಗ್ ರಿಲೀಸ್ ಮಾಡಿ ಐಪಿಎಸ್ ಅಧಿಕಾರಿ

    ದು ನಮ್ ಶಾಲೆ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರೆವೇರಿತು. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಮೊದಲ ಹಾಡನ್ನು ಖ್ಯಾತ ಐ ಪಿ ಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್  (Ravi Channannavar) ಬಿಡುಗಡೆ ಮಾಡಿದರು. ಎರಡನೇ ಗೀತೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಅನಾವರಣಗೊಳಿಸಿದರು. ಇದೇ ಸಮಯದಲ್ಲಿ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಯಿತು. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.

    ಇದು ಖಾಸಗಿ ಹಾಗೂ ಸರ್ಕಾರಿ ಶಾಲೆಯ ಸುತ್ತಲಿನ ಕಥೆ ಎಂದು ಮಾತನಾಡಿದ ಐ ಪಿ ಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್, ನಾನು ಕೂಡ ಸರ್ಕಾರಿ ಶಾಲೆಯಲ್ಲೇ ಕಲಿತು ಐ ಪಿ ಎಸ್ ಅಧಿಕಾರಿ ಆಗಿದ್ದೇನೆ. ಸಿನಿಮಾ ಮೂಲಕ ಒಳ್ಳೆಯ ವಿಷಯಗಳನ್ನು ಹೇಳಿದಾಗ ಜನರಿಗೆ ಬೇಗ ತಲಪುತ್ತದೆ. ನನಗೆ ರಾಜಕುಮಾರ್ ಎಂದರೆ ಪಂಚಪ್ರಾಣ.  ಸುದೀಪ್ ಅಭಿನಯದ ಚಿತ್ರಗಳ ಗೆದ್ದೆ ಗೆಲುವೆ ಒಂದು ದಿನ, ಅರಳುವ ಹೂವುಗಳೆ ಹಾಗೂ ಶಿವರಾಜಕುಮಾರ್ ಅವರ ಓಂ ಚಿತ್ರದ ಹೇ ದಿನಕರ ಹಾಡುಗಳು ನನಗೆ ಸ್ಪೂರ್ತಿ.. ಕಾಲೇಜು ದಿನಗಳಲ್ಲಿ ಈ ಹಾಡುಗಳನ್ನು ಕೇಳಿ ಬೆಳೆದವನು ನಾನು ಎಂದು ತಿಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

    ಸಿನಿಮಾ, ರಾಜಕೀಯ ಸೇರಿದಂತೆ ಅನೇಕ ವಿಭಾಗಗಳಲ್ಲಿ ಪತ್ರಕರ್ತನಾಗಿ ಕಾರ್ಯ ನಿರ್ವಹಿಸರುವ ನಾನು, “ಬಣ್ಣದಕೊಡೆ” ಚಿತ್ರದ ಮೂಲಕ ನಿರ್ದೇಶಕನಾದೆ, “ಇದು ನಮ್ ಶಾಲೆ” ನನ್ನ ನಿರ್ದೇಶನದ ಮೂರನೇ ಚಿತ್ರ. ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಕುರಿತಾದ ಚಿತ್ರ. ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ತಿಳಿಸಿ ಕೊಡುವ ಚಿತ್ರ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಸೆನ್ಸರ್ ಕೂಡಾ ಆಗಿದ್ದು, ಬಿಡುಗಡೆಯ ಹೊಸ್ತಿಲಿನಲ್ಲಿದೆ‌.   ಅರಸೀಕೆರೆ, ಜೇನುಕಲ್, ಗೀಜಿಹಳ್ಳಿ ಹಾಗೂ ಬೆಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ‌.

     

    ರವಿ ಆಚಾರ್ ನಿರ್ಮಾಣ ಮಾಡಿದ್ದು, ಅರಸೀಕೆರೆ ಉಮೇಶ್ ಅವರ ಸಹಕಾರ ಚಿತ್ರಕ್ಕಿದೆ. ನಾಗರಾಜ್ ಅದವಾನಿ ಛಾಯಾಗ್ರಾಹಣ, ಹಿತನ್ ಹಾಸನ್ ಸಂಗೀತ ಈ ಸಿನಿಮಾಕ್ಕಿದ್ದು, ಪುಣ್ಯ ಹಾಗೂ ಪೂಜ್ಯ ಅನ್ನುವ ಇಬ್ಬರು ಹೆಣ್ಣು ಮಕ್ಕಳು ಪ್ರಧಾನ ಭೂಮಿಕೆಯಲ್ಲಿ ಇದ್ದಾರೆ. ಶಂಕರ್ ಭಟ್, ಪೂಜಾ ಸುಮನ್, ಈಶ್ವರ್ ದಲ, ಮಲ್ಲಿಕಾರ್ಜುನ್ ತುಮಕೂರು, ಶಿವಲಿಂಗೇಗೌಡ ಮಂಡ್ಯ, ಮುರಳಿಕೃಷ್ಣ, ಬಸವರಾಜ್, ವಾಣಿ ಗೌಡ, ರಾಜು ನಾಯಕ್, ಮಾಸ್ಟರ್ ರಾಮು, ಗಂಗಾ ರವಿ, ಕಲಾ ಉಮೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಸಿನಿಮಾದಲ್ಲಿ ಅರಸೀಕೆರೆ ಜನಪ್ರಿಯ  ಶಾಸಕರಾದ ಶಿವಲಿಂಗೇಗೌಡರು ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದು ನಿರ್ದೇಶಕ ಕೃಷ್ಣ ಬೆಳ್ತಂಗಡಿ ತಿಳಿಸಿದರು. ನಿರ್ಮಾಪಕರಾದ ರವಿ ಆಚಾರ್, ಕಾರ್ಯಕಾರಿ ನಿರ್ಮಾಪಕರಾದ ಅರಸೀಕೆರೆ ಉಮೇಶ್ ಹಾಗೂ ಸಂಗೀತ ನಿರ್ದೇಶಕ ಹಿತನ್ ಹಾಸನ್ “ಇದು ನಮ್ ಶಾಲೆ” ಚಿತ್ರದ ಕುರಿತು ಮಾತನಾಡಿದರು.

  • ಸದ್ಯಕ್ಕಿಲ್ಲ ಶರಣ್ ನಟನೆಯ ‘ಛೂ ಮಂತರ್’ ಸಿನಿಮಾ ರಿಲೀಸ್

    ಸದ್ಯಕ್ಕಿಲ್ಲ ಶರಣ್ ನಟನೆಯ ‘ಛೂ ಮಂತರ್’ ಸಿನಿಮಾ ರಿಲೀಸ್

    ರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ,  ‘ಕರ್ವ’ ಖ್ಯಾತಿಯ ನವನೀತ್ ನಿರ್ದೇಶಿಸಿರುವ ಹಾಗೂ ಹೆಸರಾಂತ ನಟ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ‘ಛೂ‌ ಮಂತರ್’ (Choo Mantar) ಚಿತ್ರ  ಮೇ 10 ರಂದು ಬಿಡುಗಡೆ ಮಾಡುವುದಾಗಿ ಮೊದಲು ತಿಳಿಸಲಾಗಿತ್ತು. ಈಗ ಸಿನಿಮಾ ಬಿಡುಗಡೆ ಸ್ವಲ್ಪ ಮುಂದೆ ಹೋಗಿದೆ.

    ಚಿತ್ರವನ್ನು ವೀಕ್ಷಿಸಿರುವ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳ ವಿತರಕರು, ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಹಾರಾರ್ ಚಿತ್ರವಾಗಿದ್ದು, ಉತ್ತಮವಾಗಿ ಮೂಡಿಬಂದಿದೆ ಎಲ್ಲಾ ಭಾಷೆಗಳ ಜನರು ನೋಡುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಈಗ ದೇಶಾದ್ಯಂತ ಚುನಾವಣೆ ಕೂಡ ನಡೆಯುತ್ತಿದೆ. ಹಾಗಾಗಿ, ಸರಿಯಾದ ಸಮಯ ನೋಡಿಕೊಂಡು ಚಿತ್ರ ಬಿಡುಗಡೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಈ ಕಾರಣಗಳಿಂದ ನಮ್ಮ ಚಿತ್ರವನ್ನು ಮೇ 10 ರಂದು ಬಿಡುಗಡೆ ಮಾಡುತ್ತಿಲ್ಲ. ಮುಂದಿನ ದಿನಾಂಕವನ್ನು ಸದ್ಯದಲ್ಲೇ ತಿಳಿಸುತ್ತವೆ ಎಂದು ನಿರ್ಮಾಪಕ ತರುಣ್ ಶಿವಪ್ಪ ತಿಳಿಸಿದ್ದಾರೆ‌. .

    ಈಗಾಗಲೇ‌ ಟೀಸರ್, ಟ್ರೇಲರ್ ಮೂಲಕ ಜನಪ್ರಿಯವಾಗಿರುವ ಈ ಚಿತ್ರದ ತಾರಾಬಳಗದಲ್ಲಿ  ಶರಣ್ , ಚಿಕ್ಕಣ್ಣ,    ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಮುಂತಾದವರಿದ್ದಾರೆ.

    ಅನುಪ್ ಕಟ್ಟುಕರನ್ ಛಾಯಾಗ್ರಹಣ ಹಾಗೂ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನವಿರುವ “ಛೂ ಮಂತರ್” ಚಿತ್ರಕ್ಕೆ ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

  • ಹಾಲಿವುಡ್ ನಲ್ಲೂ ಪ್ರಭಾಸ್ ನಟನೆಯ ‘ಕಲ್ಕಿ’ ರಿಲೀಸ್

    ಹಾಲಿವುಡ್ ನಲ್ಲೂ ಪ್ರಭಾಸ್ ನಟನೆಯ ‘ಕಲ್ಕಿ’ ರಿಲೀಸ್

    ಪ್ರಭಾಸ್ ನಟನೆಯ ಕಲ್ಕಿ ಸಿನಿಮಾದ ರಿಲೀಸ್ (Release) ಡೇಟ್ ಅಧಿಕೃತವಾಗಿ ಘೋಷಣೆಯಾಗಿದೆ. ಇದೇ ಜೂನ್ 27ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದೆ. ಜೊತೆಗೆ ಹೊಸ ಪೋಸ್ಟರ್ ಕೂಡ ರಿಲೀಸ್ ಮಾಡಿದೆ. ಭಾರತದ ಭಾಷೆಗಳಿಗೆ ಅಷ್ಟೇ ಅಲ್ಲ, ಇಂಗ್ಲಿಷ್ ಗೂ ಈ ಸಿನಿಮಾ ಡಬ್ ಆಗಿ ಹಾಲಿವುಡ್ (Hollywood) ನಲ್ಲೂ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಈ ಸಿನಿಮಾ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದೆ. ಈ ಬಾರಿ ಕಲಾವಿದರಿಗೆ ನೀಡಿರುವ ಸಂಭಾವನೆಯಿಂದಾಗಿ (Remuneration) ಸಖತ್ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ ಕಲಾವಿದರಿಗಾಗಿಯೇ ಒಟ್ಟು 250 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರಂತೆ ನಿರ್ಮಾಪಕರು. ಅದರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರೋದು ಚಿತ್ರ ನಾಯಕ ಪ್ರಭಾಸ್.

    ಪ್ರಭಾಸ್‌ (Prabhas) ಈ ಸಿನಿಮಾಗಾಗಿ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.  ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್‌ ಹಾಸನ್‌ ತಲಾ 20 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿಕೊಂಡಿದ್ದಾರೆ. ನಾಯಕಿ ದಿಶಾ ಪಟಾಣಿ 5 ಕೋಟಿ ರೂಪಾಯಿಗೆ ತೃಪ್ತಿ ಪಟ್ಟಿದ್ದಾರೆ. ಲಕ್ಷದಲ್ಲಿ ಸಂಭಾವನೆ ಪಡೆಯುವ ಅನೇಕ ನಟರೂ ಈ ಸಿನಿಮಾದಲ್ಲಿ ಇದ್ದಾರೆ.

     

    ನಾಗ್‌ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ (Kalki 2898 AD) ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ  ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್‌ ಆದ ಅಮಿತಾಭ್ ಬಚ್ಚನ್‌ ಅವರ ಹೊಸ ಲುಕ್‌.

  • ಜೂನ್ 27ಕ್ಕೆ ‘ಕಲ್ಕಿ’ ರಿಲೀಸ್: ಚಿತ್ರತಂಡದಿಂದ ಅಧಿಕೃತ ಘೋಷಣೆ

    ಜೂನ್ 27ಕ್ಕೆ ‘ಕಲ್ಕಿ’ ರಿಲೀಸ್: ಚಿತ್ರತಂಡದಿಂದ ಅಧಿಕೃತ ಘೋಷಣೆ

    ಪ್ರಭಾಸ್ ನಟನೆಯ ಕಲ್ಕಿ ಸಿನಿಮಾದ ರಿಲೀಸ್ (Release) ಡೇಟ್ ಅಧಿಕೃತವಾಗಿ ಘೋಷಣೆಯಾಗಿದೆ. ಇದೇ ಜೂನ್ 27ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದೆ. ಜೊತೆಗೆ ಹೊಸ ಪೋಸ್ಟರ್ ಕೂಡ ರಿಲೀಸ್ ಮಾಡಿದೆ.

    ಈ ಸಿನಿಮಾ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದೆ. ಈ ಬಾರಿ ಕಲಾವಿದರಿಗೆ ನೀಡಿರುವ ಸಂಭಾವನೆಯಿಂದಾಗಿ (Remuneration) ಸಖತ್ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ ಕಲಾವಿದರಿಗಾಗಿಯೇ ಒಟ್ಟು 250 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರಂತೆ ನಿರ್ಮಾಪಕರು. ಅದರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರೋದು ಚಿತ್ರ ನಾಯಕ ಪ್ರಭಾಸ್.

    ಪ್ರಭಾಸ್‌ (Prabhas) ಈ ಸಿನಿಮಾಗಾಗಿ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.  ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್‌ ಹಾಸನ್‌ ತಲಾ 20 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿಕೊಂಡಿದ್ದಾರೆ. ನಾಯಕಿ ದಿಶಾ ಪಟಾಣಿ 5 ಕೋಟಿ ರೂಪಾಯಿಗೆ ತೃಪ್ತಿ ಪಟ್ಟಿದ್ದಾರೆ. ಲಕ್ಷದಲ್ಲಿ ಸಂಭಾವನೆ ಪಡೆಯುವ ಅನೇಕ ನಟರೂ ಈ ಸಿನಿಮಾದಲ್ಲಿ ಇದ್ದಾರೆ.

     

    ನಾಗ್‌ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ (Kalki 2898 AD) ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ  ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್‌ ಆದ ಅಮಿತಾಭ್ ಬಚ್ಚನ್‌ ಅವರ ಹೊಸ ಲುಕ್‌.

  • ಬಹುನಿರೀಕ್ಷಿತ ‘ಕಲ್ಕಿ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಬಹುನಿರೀಕ್ಷಿತ ‘ಕಲ್ಕಿ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಹುಭಾಷೆಯಲ್ಲಿ ಮೂಡಿ ಬರುತ್ತಿರುವ ಕಲ್ಕಿ ಸಿನಿಮಾದ ರಿಲೀಸ್ (Release) ಡೇಟ್ ಬಹುತೇಕ ಫಿಕ್ಸ್ ಆಗಿದೆ. ಜೂನ್ 27ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಇಂದು ಸಂಜೆ ಅಧಿಕೃತವಾಗಿ ಸಿನಿಮಾ ತಂಡವೇ ಮಾಹಿತಿಯನ್ನು ಹಂಚಿಕೊಳ್ಳಲಿದೆ.

    ಈ ಸಿನಿಮಾ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದೆ. ಈ ಬಾರಿ ಕಲಾವಿದರಿಗೆ ನೀಡಿರುವ ಸಂಭಾವನೆಯಿಂದಾಗಿ (Remuneration) ಸಖತ್ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ ಕಲಾವಿದರಿಗಾಗಿಯೇ ಒಟ್ಟು 250 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರಂತೆ ನಿರ್ಮಾಪಕರು. ಅದರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರೋದು ಚಿತ್ರ ನಾಯಕ ಪ್ರಭಾಸ್.

    ಪ್ರಭಾಸ್‌ (Prabhas) ಈ ಸಿನಿಮಾಗಾಗಿ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.  ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್‌ ಹಾಸನ್‌ ತಲಾ 20 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿಕೊಂಡಿದ್ದಾರೆ. ನಾಯಕಿ ದಿಶಾ ಪಟಾಣಿ 5 ಕೋಟಿ ರೂಪಾಯಿಗೆ ತೃಪ್ತಿ ಪಟ್ಟಿದ್ದಾರೆ. ಲಕ್ಷದಲ್ಲಿ ಸಂಭಾವನೆ ಪಡೆಯುವ ಅನೇಕ ನಟರೂ ಈ ಸಿನಿಮಾದಲ್ಲಿ ಇದ್ದಾರೆ.

    ನಾಗ್‌ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ (Kalki 2898 AD) ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ  ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್‌ ಆದ ಅಮಿತಾಭ್ ಬಚ್ಚನ್‌ ಅವರ ಹೊಸ ಲುಕ್‌.

     

    ಹೌದು, ಕಳೆದ ವರ್ಷಅಮಿತಾಭ್ (Amitabh Bachchan)  ಅವರ ಬರ್ತ್‌ಡೇ ದಿನದಂದು ಕಲ್ಕಿ ಚಿತ್ರದಲ್ಲಿನ ಅವರ ಲುಕ್‌ ಹೇಗಿರಲಿದೆ ಎಂಬ ಸಣ್ಣ ಝಲಕ್‌ ರಿಲೀಸ್‌ ಆಗಿತ್ತು. ಅದಾದ ಬಳಿಕ ಚಿತ್ರದಲ್ಲಿ ಅಮಿತಾಭ್ ಪಾತ್ರ ಹೇಗಿರಲಿದೆ ಎಂಬ ಕುತೂಹಲವೂ ಹೆಚ್ಚಾಗಿತ್ತು. ಇದೀಗ ಆ ಕೌತುಕವನ್ನು ತಣಿದಿದೆ. ಅಂದರೆ, ಕಲ್ಕಿ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‌ ಪಾತ್ರದ ಝಲಕ್‌ ಹೊರಬಿದ್ದಿದೆ.

  • ಶರಣ್ ನಟನೆಯ ‘ಛೂ ಮಂತರ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ಶರಣ್ ನಟನೆಯ ‘ಛೂ ಮಂತರ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ,  ಕರ್ವ ಖ್ಯಾತಿಯ ನವನೀತ್ ನಿರ್ದೇಶಿಸಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಗೆದ್ದಿರುವ ನಟ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ‘ಛೂ‌ ಮಂತರ್ ಚಿತ್ರ ಇದೇ ಮೇ 10 ರಂದು ರಾಜ್ಯಾದ್ಯಂತ. ಬಿಡುಗಡೆಯಾಗುತ್ತಿದೆ. ಈಗಾಗಲೇ  ಟೀಸರ್ ಹಾಗೂ ಪೋಸ್ಟರ್ ಗಳ ಮೂಲಕ “ಛೂ ಮಂತರ್” ಚಿತ್ರ ಜನರ ಮನ ತಲುಪಿದೆ. ಏಪ್ರಿಲ್ 19(ಶುಕ್ರವಾರ) ರಂದು ಟ್ರೇಲರ್ ಬರಲಿದ್ದು, ಚಿತ್ರ ಮೇ 10 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

    ಇದೊಂದು ಹಾರಾರ್ ಚಿತ್ರ.‌ ಕನ್ನಡದಲ್ಲಿ ಸಾಕಷ್ಟು ಹಾರಾರ್ ಚಿತ್ರಗಳು ಬಂದಿದೆಯಾದರೂ ಇದು ಸ್ವಲ್ಪ ವಿಭಿನ್ನವಾಗಿದೆ.  ಚಿತ್ರದ ಮೇಕಿಂಗ್ ನೋಡಿದಾಗ ಹಾಲಿವುಡ್ ಚಿತ್ರಗಳನ್ನು ನೋಡಿದ ಹಾಗೆ ಭಾಸವಾಗುತ್ತದೆ. ಶರಣ್ ಅವರ ಪಾತ್ರ ಕೂಡ ಈ ಹಿಂದಿನ ಚಿತ್ರಗಳಿಗಿಂತ ಬೇರೆ ರೀತಿಯಲ್ಲಿಯೇ ಇದೆ. ಉಪಾಧ್ಯಕ್ಷನಾಗಿ ಯಶಸ್ಸು ಕಂಡಿರುವ ಚಿಕ್ಕಣ್ಣ ಕೂಡ ಈ ಚಿತ್ರದ ಪ್ರಮುಖಪಾತ್ರದಲ್ಲಿದ್ದಾರೆ. ಮತ್ತೊಮ್ಮೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಈ ಚಿತ್ರದಲ್ಲಿ ಒಟ್ಟಾಗಿ ನೋಡಬಹುದು.  ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ,  ಪ್ರಭು ಮುಂಡ್ಕರ್ ಮುಖ್ಯಭೂಮಿಕೆಯಲ್ಲಿದ್ದಾರೆ.

    ಕರ್ವ  ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ನವನೀತ್ ಅವರಿಂದ ಮತ್ತೊಂದು ಸದಭಿರುಚಿಯ ಚಿತ್ರ ಬರುತ್ತಿದೆ. ಅನುಪ್ ಕಟ್ಟುಕರನ್ ಛಾಯಾಗ್ರಹಣ ಹಾಗೂ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನವಿರುವ “ಛೂ ಮಂತರ್” ಚಿತ್ರಕ್ಕೆ ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

  • ಜೂ.20ಕ್ಕೆ ಪ್ರಭಾಸ್ ನಟನೆಯ ‘ಕಲ್ಕಿ’ ರಿಲೀಸ್

    ಜೂ.20ಕ್ಕೆ ಪ್ರಭಾಸ್ ನಟನೆಯ ‘ಕಲ್ಕಿ’ ರಿಲೀಸ್

    ಪ್ರಭಾಸ್ ನಟನೆಯ ಕಲ್ಕಿ (Kalki) ಸಿನಿಮಾದ ಬಿಡುಗಡೆ ದಿನಾಂಕ ಬದಲಾಗುತ್ತಲೇ ಇದೆ. ಈಗಾಗಲೇ ಎರಡು ಬಾರಿ ಡೇಟ್ ಬದಲಾವಣೆಯ ಬಗ್ಗೆ ಚರ್ಚೆಯಾಗಿದೆ. ಅಂತಿಮವಾಗಿ ಜೂನ್ 20ರಂದು ಚಿತ್ರ ಬಿಡುಗಡೆ (Release) ಮಾಡುವುದಾಗಿ ತಿಳಿದುಬಂದಿದೆ. ಚುನಾವಣೆ, ಫಲಿತಾಂಶ ಎಲ್ಲವೂ ಮುಗಿದ ನಂತರ ಕಲ್ಕಿ ಬಿಡುಗಡೆ ಆಗಲಿದೆ.

    ಬಿಡುಗಡೆಗೂ ಮುನ್ನ ಕಲ್ಕಿ ಸಿನಿಮಾ ನೂರು ಕೋಟಿ ಕ್ಲಬ್ ಸೇರಿತಾ? ಹೌದು ಎನ್ನುತ್ತಿದೆ ಬಿಟೌನ್. ಹಿಂದಿ ಭಾಷೆಯಲ್ಲೇ ಕಲ್ಕಿ 175 ಕೋಟಿ ರೂಪಾಯಿಗೆ ಒಟಿಟಿಗೆ (OTT) ಸೇಲ್ ಆಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ದಕ್ಷಿಣದ ಭಾಷೆಗಳಿಗೂ ನೂರಾರು ಕೋಟಿ ಕೊಟ್ಟು ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ರಿಲಿಸ್ ಗೂ ಮುನ್ನ ದಾಖಲೆಯ ಮೊತ್ತ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ.

    ಅಮಿತಾಭ್ ಬಚ್ಚನ್ ಸಿನಿಮಾ ಶೂಟಿಂಗ್ (Shooting) ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ರಾತ್ರಿ ಶೂಟಿಂಗ್ ಮುಗಿಸಿ ಬಂದೆ. ಚಿತ್ರದ ಚಿತ್ರೀಕರಣ ಮುಗಿದಿದೆ. ಅಂದುಕೊಂಡಂತೆ ಮೇ 9ಕ್ಕೆ ಚಿತ್ರ ರಿಲೀಸ್ ಆಗಲಿದೆ ಎಂದು ಅವರು ಮಾಹಿತಿಯನ್ನು ಹಂಚಿಕೊಂಡಿದ್ದರು. ಆದರೆ, ಮೇನಲ್ಲಿ ಸಿನಿಮಾ ರಿಲೀಸ್ ಆಗುತ್ತಿಲ್.

    ಈ ಸಿನಿಮಾ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಪ್ರಭಾಸ್ (Prabhas) ನಟನೆಯ ಈ ಸಿನಿಮಾದ ಮತ್ತೊಂದು ಪೋಸ್ಟರ್ (Poster) ಮೊನ್ನೆಯಷ್ಟೇ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಭೈರವ (Bhairava) ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಜುಟ್ಟು ಬಿಟ್ಟುಕೊಂಡು ಸ್ಟೈಲಿಶ್ ಆಗಿ ಕಂಡಿದ್ದಾರೆ ಪ್ರಭಾಸ್. ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  • ‘ಮ್ಯಾಕ್ಸ್’ ಸಿನಿಮಾ ಮೇ ತಿಂಗಳಲ್ಲಿ ರಿಲೀಸ್ ಎಂದ ಸುದೀಪ್

    ‘ಮ್ಯಾಕ್ಸ್’ ಸಿನಿಮಾ ಮೇ ತಿಂಗಳಲ್ಲಿ ರಿಲೀಸ್ ಎಂದ ಸುದೀಪ್

    ಕ್ರಿಕೆಟ್ ಪಂದ್ಯ ಮುಗಿಸಿಕೊಂಡು ಮತ್ತೆ ಮ್ಯಾಕ್ಸ್ ಚಿತ್ರೀಕರಣದಲ್ಲಿ ತೊಡಗಿರುವ ಸುದೀಪ್ (Sudeep), ಇದೀಗ ಮ್ಯಾಕ್ಸ್ ಚಿತ್ರದ ಬಗ್ಗೆ ಹೊಸ ಅಪ್ ಡೇಟ್ ನೀಡಿದ್ದಾರೆ. 15 ದಿನಗಳ ಕಾಲ ಶೂಟಿಂಗ್ ಮುಗಿಸಿದರೆ, ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಮುಕ್ತಾಯವಂತೆ. ನಂತರ ಮೇ ತಿಂಗಳಿನಲ್ಲಿ ಚಿತ್ರ ರಿಲೀಸ್ (Release) ಆಗಬಹುದು ಅಂದಿದ್ದಾರೆ ಕಿಚ್ಚ ಸುದೀಪ್. ಚಂದನ್ ಅವರ ಹೋಟೆಲ್ ಗೆ ಆಗಮಿಸಿದ್ದ ಸುದೀಪ್ ಮ್ಯಾಕ್ಸ್ ಬಗ್ಗೆ ಕೆಲವು ವಿಷಯಗಳನ್ನೂ ಮಾತನಾಡಿದ್ದಾರೆ.

    ‘ಮ್ಯಾಕ್ಸ್’ ಸಿನಿಮಾ ಬಗ್ಗೆ ಅಭಿಮಾನಿಗಳು ಪದೇ ಪದೇ ಅಪ್‌ಡೇಟ್ ಕೇಳುತ್ತಲೇ ಇರುತ್ತಾರೆ. ಅದಕ್ಕೆ ಈ ಹಿಂದೆಯೂ ಪ್ರತಿಕ್ರಿಯೆ ನೀಡಿದ್ದರು ಸುದೀಪ್,  ‘ನಿಮ್ಮ ಪ್ರೀತಿ, ಕ್ಯೂರಿಯಾಸಿಟಿ ನನಗೆ ಅರ್ಥವಾಗುತ್ತದೆ. ಆದರೆ, ಸಿನಿಮಾ ಶೂಟ್ (Shooting) ಪೂರ್ಣಗೊಳ್ಳದೆ ಆ ಬಗ್ಗೆ ಅಪ್‌ಡೇಟ್ ನೀಡೋದು ಹೇಗೆ’ ಅನ್ನೋದು ಸುದೀಪ್ ಅವರ ಪ್ರಶ್ನೆಯಾಗಿತ್ತು. ನವೆಂಬರ್‌ನಲ್ಲಿ ಮಳೆಯಿಂದ ಶೂಟ್ ಮಾಡಲು ಸಾಧ್ಯವಾಗಿರಲಿಲ್ಲ. ಡಿಸೆಂಬರ್‌ನಲ್ಲಿ ಕೆಲವು ಅಡೆತಡೆಗಳು ಎದುರಾದವು. ಈಗ ಸಂಕ್ರಾಂತಿ ಬಳಿಕ ಮತ್ತೆ ‘ಮ್ಯಾಕ್ಸ್’ ಶೂಟಿಂಗ್ ಶುರು ಆಗಿದೆ ಎಂದು ತಿಳಿಸಿದ್ದರು.

    ಮೊನ್ನೆಯಷ್ಟೇ ಸಿನಿಮಾದ ಪ್ರಮುಖ ದೃಶ್ಯವನ್ನು ಶೂಟ್ ಮಾಡಿ ಮುಗಿಸಿದ್ದಾರೆ. ಅದೊಂದು ಪ್ರಮುಖ ಘಟ್ಟ. ಜೊತೆಗೆ ಸಣ್ಣದೊಂದು ಭಾಗದ ಚಿತ್ರೀಕರಣ ಮುಗಿದರೆ ಸಿನಿಮಾ ಮುಗಿದಂತೆ. ಎಲ್ಲ ರಫ್ ಕಟ್ ದೃಶ್ಯಗಳನ್ನು ನೋಡಿದೆ. ಸೂಪರ್. ಅದ್ಭುತವಾಗಿ ಸಿನಿಮಾ ಮೂಡಿ ಬಂದಿದೆ. ಪ್ರತಿಯೊಬ್ಬರ ಎಫರ್ಟ್ ಕಾಣುತ್ತಿದೆ ಎಂದು ಸುದೀಪ್ ಈ ಹಿಂದೆ ಎಕ್ಸ್ (ಟ್ವಿಟ್) ಮಾಡಿದ್ದರು.

    ಕ್ರಿಕೆಟ್, ಬಿಗ್ ಬಾಸ್ ನಡುವೆಯೂ ನಿರೀಕ್ಷಿತ ಮ್ಯಾಕ್ಸ್ (Max) ಸಿನಿಮಾದ ಚಿತ್ರೀಕರಣ ಮುಗಿಸುತ್ತಿದ್ದಾರೆ ಕಿಚ್ಚ ಸುದೀಪ್. ಈಗಷ್ಟೇ ಚಿತ್ರದ ಕ್ಲೈಮ್ಯಾಕ್ಸ್ (Climax) ಶೂಟಿಂಗ್ ಮುಗಿಸಿದ್ದಾರೆ. ಅಂದುಕೊಂಡ ತಿಂಗಳಲ್ಲೇ ಸಿನಿಮಾ ತೆರೆಗೆ ತರಬೇಕಾಗಿದ್ದರಿಂದ ಚಿತ್ರೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರಂತೆ. ಇನ್ನು ಕೆಲವೇ ದಿನಗಳಲ್ಲಿ ಮ್ಯಾಕ್ಸ್ ಸಿನಿಮಾದ ಸಂಪೂರ್ಣ ಚಿತ್ರೀಕರಣ ಕೂಡ ಮುಗಿಯಲಿದೆ.

     

    ಈ ಸಿನಿಮಾ ಮುಗಿಯುತ್ತಿದ್ದಂತೆಯೇ ಬೇರೆ ಯಾವ ಸಿನಿಮಾದಲ್ಲಿ ಅವರು ತೊಡಗಿಕೊಳ್ಳಲ್ಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ಮ್ಯಾಕ್ಸ್ ಮುಗಿದ ನಂತರ ಬಹುಶಃ ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ಸುದೀಪ್ ತೊಡಗಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

  • ಚುನಾವಣೆ ಎಫೆಕ್ಟ್: ಪ್ರಭಾಸ್ ನಟನೆಯ ‘ಕಲ್ಕಿ’ ರಿಲೀಸ್ ಮುಂದಕ್ಕೆ

    ಚುನಾವಣೆ ಎಫೆಕ್ಟ್: ಪ್ರಭಾಸ್ ನಟನೆಯ ‘ಕಲ್ಕಿ’ ರಿಲೀಸ್ ಮುಂದಕ್ಕೆ

    ಪ್ರಭಾಸ್ ಮತ್ತು ಅಮಿತಾಭ್ ಬಚ್ಚನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಕಲ್ಕಿ ಸಿನಿಮಾ ಮೇ 9ಕ್ಕೆ ಬಿಡುಗಡೆ ಆಗಬೇಕಿತ್ತು. ಈ ಮಾಹಿತಿಯನ್ನು ಸ್ವತಃ ಬಿಗ್ ಬಿ ಅಮಿತಾಭ್ ಅವರೇ ಹೇಳಿಕೊಂಡಿದ್ದರು. ಆದರೆ, ಅಂದು ಸಿನಿಮಾ ರಿಲೀಸ್ ಆಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆ ಕಾರಣದಿಂದಾಗಿ ಬಿಡುಗಡೆಯನ್ನು ಚುನಾವಣೆ ನಂತರ ಮಾಡಲು ನಿರ್ಧರಿಸಿದ್ದಾರಂತೆ.

    ಸಿನಿಮಾ (Kalki)  ರಿಲೀಸ್ (release) ಡೇಟ್ ಅನ್ನು ಸ್ವತಃ ಅಮಿತಾಭ್ ಅವರೇ ಮಾಡಿದ್ದರೂ, ಮುಂದೂಡಿರುವ ವಿಚಾರವನ್ನು ಚಿತ್ರತಂಡ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಮುಂದೂಡುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ.

    ಮೊನ್ನೆಯಷ್ಟೇ ಅಮಿತಾಭ್ ಬಚ್ಚನ್ ಸಿನಿಮಾ ಶೂಟಿಂಗ್ (Shooting) ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಶೂಟಿಂಗ್ ಮುಗಿಸಿ ಬಂದೆ. ಚಿತ್ರದ ಚಿತ್ರೀಕರಣ ಮುಗಿದಿದೆ. ಅಂದುಕೊಂಡಂತೆ ಮೇ 9ಕ್ಕೆ ಚಿತ್ರ ರಿಲೀಸ್ ಆಗಲಿದೆ ಎಂದು ಅವರು ಮಾಹಿತಿಯನ್ನು ಹಂಚಿಕೊಂಡಿದ್ದರು. ಇತ್ತೀಚೆಗಷ್ಟೇ ನಟ ಅಮಿತಾಭ್ ಬಚ್ಚನ್  (Amitabh Bachchan) ಅವರ ಹುಟ್ಟು ಹಬ್ಬದ (Birthday) ದಿನದಂದು ಕಲ್ಕಿ ಸಿನಿಮಾ ಟೀಮ್ ಅಮಿತಾಭ್ ಬಚ್ಚನ್ ಪಾತ್ರದ ಫಸ್ಟ್ ಲುಕ್(First Look)  ರಿಲೀಸ್ ಮಾಡಿತ್ತು. ವಿಚಿತ್ರ ವೇಷದಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದು ಪಾತ್ರದ ಬಗ್ಗೆ ಕುತೂಹಲ ಮೂಡಿಸಿತ್ತು.

    ಈ ಸಿನಿಮಾ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಪ್ರಭಾಸ್ (Prabhas) ನಟನೆಯ ಈ ಸಿನಿಮಾದ ಮತ್ತೊಂದು ಪೋಸ್ಟರ್ (Poster) ಮೊನ್ನೆಯಷ್ಟೇ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಭೈರವ (Bhairava) ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಜುಟ್ಟು ಬಿಟ್ಟುಕೊಂಡು ಸ್ಟೈಲಿಶ್ ಆಗಿ ಕಂಡಿದ್ದಾರೆ ಪ್ರಭಾಸ್. ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

     

    ಜೊತೆಗೆ ಈ ಸಿನಿಮಾದಲ್ಲಿ ರಾಜಮೌಳಿಯೂ (Rajamouli) ಪಾತ್ರ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಅವರು ಮಹತ್ವದ ಪಾತ್ರವೊಂದನ್ನು ನಿರ್ವಹಿಸಿದ್ದು, ಅದು ವಿಜ್ಞಾನಿ (Scientist) ಪಾತ್ರವಾಗಿದೆಯಂತೆ. ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಳ್ಳದೇ ಇದ್ದರೂ, ಇಂಥದ್ದೊಂದು ಸುದ್ದಿಯಂತೂ ಸಖತ್ ಜೋರಾಗಿಯೇ ಕೇಳಿ ಬರುತ್ತಿದೆ.

  • ನೆಲದ ಘಮಲಿನ ಕಥೆಯೊಂದಿಗೆ ‘ಕೆರೆಬೇಟೆ’ಗಿಳಿದ ಡೈರೆಕ್ಟರ್ ರಾಜ್ ಗುರು

    ನೆಲದ ಘಮಲಿನ ಕಥೆಯೊಂದಿಗೆ ‘ಕೆರೆಬೇಟೆ’ಗಿಳಿದ ಡೈರೆಕ್ಟರ್ ರಾಜ್ ಗುರು

    ಒಂದು ಸಿನಿಮಾ ಬಿಡುಗಡೆಯ ಅಂಚಿಗೆ ಬಂದು ನಿಂತಿದೆಯೆಂದರೆ ಅದರ ಹಿಂದೆ ಹತ್ತಾರು ಜನರ ಶ್ರಮ, ಕನಸು, ಶ್ರದ್ಧೆಗಳಿರುತ್ತವೆ. ವಾರವೊಂದಕ್ಕೆ ದಂಡಿ ದಂಡಿ ಸಿನಿಮಾಗಳು ತೆರೆಗಾಣುತ್ತಿರುವ ಈ ಹೊತ್ತಿನಲ್ಲಿ ಅದರ ಭಾಗವಾಗಿರುವವರ ಖಾಸಗೀ ಕಥೆ ಕೇಳಲು, ಬೆನ್ತಟ್ಟಿ ಪ್ರೋತ್ಸಾಹಿಸಲು ಯಾರಿಗೂ ಪುರಸೊತ್ತಿಲ್ಲ. ಸೋಲು ಗೆಲುವುಗಳಾಚೆಗೆ ಒಂದು ಸಿನಿಮಾದ ಹಿಂದೆ ಹತ್ತಾರು ಮನಮುಟ್ಟುವ ಕಥೆಗಳಿರುತ್ತವೆ. ಕಡುಗಷ್ಟ ಸುತ್ತಿಕೊಂಡರೂ ಇಡೀ ಬದುಕನ್ನು ಕನಸಿಗೋಸ್ಕರವೇ ಪಣಕ್ಕಿಟ್ಟಂತೆ ಬದುಕುವ ಅಪರೂಪದ ವ್ಯಕ್ತಿತ್ವಗಳೂ ಸಿನಿಮಾಗಳ ಹಿನ್ನೆಲೆಯಲ್ಲಿರುತ್ತವೆ. ಅಂಥಾದ್ದೊಂದು ಸಿನಿಮಾ ವ್ಯಾಮೋಹವಿಟ್ಟುಕೊಂಡು ಹದಿನೇಳು ವರ್ಷಗಳ ಕಾಲ ಶತಪ್ರಯತ್ನ ನಡೆಸಿ, ಹಂತ ಹಂತವಾಗಿ ಪಳಗಿಕೊಂಡು `ಕೆರೆಬೇಟೆ’ (Kerebete) ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದವರು ರಾಜ್ ಗುರು.

    ಇದೀಗ ಎಲ್ಲ ದಿಕ್ಕುಗಳಲ್ಲಿಯೂ ಕೆರೆಬೇಟೆಯ ಬಗ್ಗೆ ಸಕಾರಾತ್ಮಕ ವಾತಾವರಣ ಹಬ್ಬಿಕೊಂಡಿದೆ. ಬಿಡುಗಡೆಗೆ ದಿನಗಣನೆ ಶುರುವಾಗಿರುವ ಈ ಹೊತ್ತಿನಲ್ಲಿ ಸಿನಿಮಾ ರಂಗದವರೂ ಕೂಡಾ ನಿರ್ದೇಶಕ ರಾಜ್ ಗುರು ಕಸುಬುದಾರಿಕೆಯ ಬಗ್ಗೆ ಮೆಚ್ಚುಗೆ, ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ಇನ್ನು ಪ್ರೇಕ್ಷಕರತ್ತ ಕಣ್ಣು ಹಾಯಿಸಿದರೆ ಅಲ್ಲಿಯೂ ಕೂಡಾ ಕೆರೆಬೇಟೆಯೆಡೆಗಿನ ನಿರೀಕ್ಷೆಯ ಹೊಳಪು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದೆಲ್ಲದರ ಹಿಮ್ಮೇಳದಲ್ಲಿ ಖುಷಿಗೊಂಡಿರುವ ರಾಜ್ ಗುರು, ತಮ್ಮ ಇಷ್ಟೂ ವರ್ಷಗಳ ಶ್ರಮ, ಕನಸು, ಪಟ್ಟ ಪಡಿಪಾಟಲುಗಳೆಲ್ಲ ಸಾರ್ಥಕವಾಗೋ ಘಳಿಗೆ ಹತ್ತಿರಾದ ಖುಷಿಯಲ್ಲಿದ್ದಾರೆ.

    ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬದವರಾದ ರಾಜ್ ಗುರು (Rajaguru) ಪತ್ರಿಕೋದ್ಯಮ ಪದವೀಧರರೂ ಹಾದು. ಒಂದಷ್ಟು ಕಾಲ ದಿನಪತ್ರಿಕೆಯೊಂದರಲ್ಲಿ ಕಾರ್ಯ ನಿರ್ವಹಿಸಿದ್ದವರಿಗೆ ತನ್ನ ಬದುಕೇನಿದ್ದರೂ ಸಿನಿಮಾಕ್ಕಷ್ಟೇ ಮೀಸಲೆಂಬ ದೃಢ ನಿರ್ಧಾರ ಅಂಟಿಕೊಂಡಿತ್ತು. ಹಾಗೆ ಗಾಂಧಿನಗರದತ್ತ ಬಂದು, ಸಣ್ಣ ಪುಟ್ಟ ಅವಕಾಶಗಳಿಗೆ ಕೈಚಾಚುತ್ತಾ ಅಲೆದಾಡಿದ ದಿನಗಳು, ಅರೆಹೊಟ್ಟೆಯ ಸಂಕಟ, ಕನಿಷ್ಠ ಒಂದು ಸೂರಿಗೂ ದಿಕ್ಕಿಲ್ಲದ ಯಾತನಾಮಯ ಕ್ಷಣಗಳೆಲ್ಲವನ್ನೂ ಕಂಡುಂಡವರು ರಾಜ್ ಗುರು. ಕಡೆಗೂ 2008ರಲ್ಲಿ ತೆರೆಗಂಡಿದ್ದ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಅವರಿಗೊಲಿದಿತ್ತು. ನಿರ್ದೇಶಕ ಎ ಆರ್ ಬಾಬು ಗರಡಿಯಲ್ಲಿ ವರ್ಷಾಂತರಗಳ ಕಾಲ ಪಳಗಿಕೊಂಡಿದ್ದ ರಾಜ್ ಗುರು ಆ ನಂತರ ಗೆಳೆಯ ಪವನ್ ಒಡೆಯರ್ ಜೊತೆಗೂ ಕಾರ್ಯನಿರ್ವಹಿಸಿದ್ದಾರೆ.

    ಹೀಗೆ ಹದಿನೇಳು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಪಳಗಿಕೊಂಡಿದ್ದ ರಾಜ್ ಗುರು ಪಾಲಿಗೆ ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿ ಮಾರನ್ ಅಂದರೆ ಅದೆಂಥಾದ್ದೋ ಸೆಳೆತ. ನೆಲಮೂಲದ ಕಥೆಗಳನ್ನು ಅದ್ಭುತವಾಗಿ ದೃಷ್ಯವಾಗಿಸುವ ವೆಟ್ರಿ ಮಾರನ್ ರಾಜ್ ಗುರುಗೆ ಸಾರ್ವಕಾಲಿಕ ಸ್ಫೂರ್ತಿ. ಅವರ ಹಾದಿಯಲ್ಲಿಯೇ ನೆಲದ ಕಥೆಗಳನ್ನು ಕಮರ್ಶಿಯಲ್ ಚೌಕಟ್ಟಿನಲ್ಲಿ ಹೇಳಬೇಕೆಂಬ ಉದ್ದೇಶದಿಂದಲೇ ಅವರು, ಮಲೆನಾಡು ಸೀಮೆಯ ಕೆರೆಬೇಟೆ ಕಥೆಯನ್ನು ಸಿದ್ಧಪಡಿಸಿದ್ದರು. ಆ ನಂತರ ಮಲೆನಾಡಿನವರೇ ಆದ ಗೌರಿಶಂಕರ್ ಅವರ ತುಂಬು ಸಹಕಾರದಿಂದ ಈ ಚಿತ್ರ ಅಣಿಗೊಂಡಿದೆ. ಈ ಮೂಲಕ ತನ್ನ ವೃತ್ತಿಬದುಕು ದಿಕ್ಕು ಬದಲಿಸುತ್ತೆ, ದೊಡ್ಡ ಮಟ್ಟದ ಗೆಲುವು ಲಭಿಸುತ್ತದೆಂಬ ನಂಬಿಕೆ ರಾಜ್ ಗುರು ಅವರಲ್ಲಿದೆ.

     

    ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.