Tag: Relation

  • ಪ್ರೀತ್ಸಿ ಮದ್ವೆಯಾದವ ಕೈ ಕೊಟ್ಟ, ಮಗು&ನಿನ್ನ ನೋಡ್ಕೋತ್ತೀನಿ ಅಂದವನೂ ಬಿಟ್ಟು ಹೋದ: ಪತ್ನಿ ಕಣ್ಣೀರು

    ಪ್ರೀತ್ಸಿ ಮದ್ವೆಯಾದವ ಕೈ ಕೊಟ್ಟ, ಮಗು&ನಿನ್ನ ನೋಡ್ಕೋತ್ತೀನಿ ಅಂದವನೂ ಬಿಟ್ಟು ಹೋದ: ಪತ್ನಿ ಕಣ್ಣೀರು

    ಹಾವೇರಿ: ಯುವಕನೊಬ್ಬ ಪ್ರೀತಿಯ ನಾಟಕವಾಡಿ ಮದುವೆ ಮಾಡಿಕೊಂಡು ಗರ್ಭಿಣಿ ಮಾಡಿ ಬಳಿಕ ಕಣ್ಮರೆಯಾದ. ಆ ಬಳಿಕ ಸೋದರ ಸಂಬಂಧಿಯೊಬ್ಬ ತಾನು ಆಕೆಯನ್ನು ಮತ್ತು ಆಕೆಯ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮದುವೆಯಾಗಿ ಇದೀಗ ಆತನೂ ಕೈ ಕೊಟ್ಟ ಘಟನೆಯೊಂದು ನಡೆದಿದೆ.

    ಈ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ. ಸದ್ಯ ನೊಂದ ಮಹಿಳೆ ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ.

    ಘಟನೆ ವಿವರ: 22 ವರ್ಷದ ಯುವತಿ ಕಳೆದ ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ಮೂಲದ ಹನುಮಂತ ಎಂಬ ಯುವಕನನ್ನ ಪ್ರೀತಿಸುತ್ತಿದ್ದರು. ಪ್ರೀತಿ-ಪ್ರೇಮ-ಪ್ರಣಯ ಅಂತ ಇಬ್ಬರು ಪ್ರೇಮವಿವಾಹ ಮಾಡಿಕೊಂಡಿದ್ರಂತೆ. ಬಳಿಕ ಯುವಕ ಯುವತಿಯನ್ನು ಗರ್ಭಿಣಿ ಮಾಡಿ ಪರಾರಿ ಆಗಿದ್ದಾನಂತೆ. ಆದ್ರೆ ಬಳಿಕ ಯುವತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ತಂದೆ-ತಾಯಿ ಜೊತೆಗೆ ಕೆಲವು ತಿಂಗಳು ಕಳೆದಿದ್ದಾರೆ. ಆದ್ರೆ ಸಹೋದರ ಸಂಬಂಧಿಯಾದ ಸಂಜೀವ ಎಂಬಾತನ ಜೊತೆ ಮಹಿಳೆಗೆ ಮತ್ತೆ ಮದುವೆಯಾಗುತ್ತೆ, ಮಗು ಹಾಗೂ ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೆನೆ ಅಂತಾ ಒಂದು ವರ್ಷ ಕಾಲ ಈಕೆಯ ಜೊತೆಗಿದ್ದು ಈಗ ಮಹಿಳೆಯನ್ನು ಬಿಟ್ಟು ಹೋಗಿದ್ದಾನೆ. ಸದ್ಯ ಯುವತಿ ನನಗೆ ನ್ಯಾಯಬೇಕು ಅಂತಾ ಕಣ್ಣೀರು ಹಾಕುತ್ತಿದ್ದಾರೆ.

    ಸದ್ಯ ಮಹಿಳೆ ಹಾಗೂ ಮಗು ರಾಣೇಬೆನ್ನೂರು ನಗರದ ನಿಶಾರ್ಡ ಮಹಿಳಾ ಸ್ವಾಂತನ ಕೇಂದ್ರದಲ್ಲಿ ಆಶ್ರಯಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

  • ಕಟ್ಟಿಕೊಂಡವನು 4 ವರ್ಷದಿಂದ ಮಲಗದ್ದಕ್ಕೆ ಕೊಲೆ ಮಾಡ್ಸಿದ್ಳು!

    ಕಟ್ಟಿಕೊಂಡವನು 4 ವರ್ಷದಿಂದ ಮಲಗದ್ದಕ್ಕೆ ಕೊಲೆ ಮಾಡ್ಸಿದ್ಳು!

    ಬೆಂಗಳೂರು: ಮದುವೆಯಾದ ಗಂಡ ತನ್ನ ಜೊತೆಗೆ 4 ವರ್ಷದಿಂದ ಮಲಗದೇ ಇದ್ದಿದ್ದಕ್ಕೆ ಆತನನ್ನೇ ಕೊಲೆ ಮಾಡಿದ್ದ ಪತ್ನಿ ಈಗ ಅರೆಸ್ಟ್ ಆಗಿದ್ದಾಳೆ.

    ಪತಿ ಮಧುಸೂಧನ್ ಕೊಲೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಪತ್ನಿ ನೀಲಾಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಈ ಕೃತ್ಯಕ್ಕೆ ಸಹಕಾರ ನೀಡಿದ ಆರೋಪದಡಿ ಪ್ರದೀಪ್, ರಂಜಿತ್, ಹರಿಪ್ರಸಾದ್ ರನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ನೀಲಾಳಿಗೆ ಪ್ರದೀಪ್ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಗಂಡ ಮಧುಸೂಧನ್ ಮುಗಿಸಿಲು ಪ್ಲಾನ್ ಮಾಡಿದ್ದಳು. ಅದರಂತೆ ಅಕ್ಟೋಬರ್ 12 ರ ರಾತ್ರಿ ಮಧುಸೂಧನ್ ನನ್ನ ಕ್ಯಾಂಟರ್ ನಲ್ಲಿ ಪ್ರದೀಪ್ ಕರೆದೊಯ್ದಿದ್ದ. ದಾರಿ ಮಧ್ಯೆ ಸ್ನೇಹಿತರಾದ ರಂಜಿತ್ ಮತ್ತು ಹರಿಪ್ರಸಾದನನ್ನು ಕ್ಯಾಂಟರ್ ಗೆ ಹತ್ತಿಸಿಕೊಂಡಿದ್ದ ಪ್ರದೀಪ್ ಮಧುಸೂಧನ್ ಗೆ ಚೆನ್ನಾಗಿ ಮದ್ಯ ಕುಡಿಸಿದ್ದ.

    ರಾಜ್ ಕುಮಾರ್ ಸಮಾಧಿ ಬಳಿ ಕ್ಯಾಂಟರ್ ನಿಲ್ಲಿಸಿ ಪ್ರದೀಪ್ ಎಲ್ಲರ ಜೊತೆ ಮಲಗೋಣ ಎಂದು ಹೇಳಿದ್ದಾನೆ. ಮಧುಸೂಧನ್ ಮಲಗುತ್ತಿದ್ದ ಹಾಗೆ ಆರೋಪಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಕೆಂಗೇರಿ ಬಳಿಯ ರಾಜಕಾಲುವೆಗೆ ಶವ ಎಸೆದು ಪರಾರಿಯಾಗಿದ್ದರು.

    ಪ್ರಿಯತಮೆ ನೀಲಾಳಿಗೆ ಪ್ರದೀಪ್ ನಿನ್ನ ಗಂಡನನ್ನು ಕೊಲೆ ಮಾಡಿದ್ದೇವೆ ಎಂದು ಕರೆ ಮಾಡಿ ವಿಚಾರ ತಿಳಿಸಿದ್ದ. ಮರುದಿನ ರಾಜಗೋಪಾಲನಗರ ಪೊಲೀಸ್ ಠಾಣೆಗೆ ಹೋಗಿದ್ದ ನೀಲಾ ಗಂಡ ಕಾಣಿಸುತ್ತಿಲ್ಲ ಎಂದು ನಾಪತ್ತೆ ದೂರು ನೀಡಿದ್ದಳು. ಆರೋಪಿಗಳ ಜಾಡು ಹಿಡಿದ ಪೊಲೀಸರು ಈಗ ನಾಲ್ವರನ್ನು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ನನ್ನ ಗಂಡ ನಾಲ್ಕು ವರ್ಷದಿಂದ ಜೊತೆಯಲ್ಲಿ ಮಲಗುತ್ತಿರಲಿಲ್ಲ. ಹೀಗಾಗಿ ಕೊಲೆ ಮಾಡಿಸಿದ್ದೇನೆ ಎಂದು ನೀಲಾ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.