Tag: rekha nair

  • ತಮಿಳು ನಟಿ ರೇಖಾ ನಾಯರ್ ಕಾರು ಅಪಘಾತ: ವ್ಯಕ್ತಿಯೋರ್ವ ಸಾವು

    ತಮಿಳು ನಟಿ ರೇಖಾ ನಾಯರ್ ಕಾರು ಅಪಘಾತ: ವ್ಯಕ್ತಿಯೋರ್ವ ಸಾವು

    ಮಿಳು ನಟಿ ರೇಖಾ ನಾಯರ್ (Rekha Nair) ಕಾರು ಅಪಘಾತವಾಗಿದ್ದು, 55 ವಯಸ್ಸಿನ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ನಿನ್ನೆ (ಆ.28) ಚೆನ್ನೈನ ಜಾಫರ್‌ಖಾನ್‌ಪೇಟೆಯ ಅಣ್ಣಿ ಸತ್ಯನಗರದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಇದನ್ನೂ ಓದಿ:ಜೀವನ ಸಂಗಾತಿಯನ್ನು ಪರಿಚಯಿಸಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ರಂಜನಿ ರಾಘವನ್

    ಮೃತಪಟ್ಟ ವ್ಯಕ್ತಿಯನ್ನು ಮಂಜನ್ ಎಂದು ಗುರುತಿಸಲಾಗಿದ್ದು, ನಟಿ ರೇಖಾ ನಾಯರ್ ಅವರ ಡ್ರೈವರ್ ಕಾರನ್ನು ಅವರ ಎದೆಯ ಮೇಲೆ ಚಲಾಯಿಸಿದಕ್ಕೆ ರಸ್ತೆಯ ಮೇಲೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ, ಚಾಲಕ ಕಾರು ನಿಲ್ಲಿಸದೇ ಹಾಗೇ ಹೋಗಿದ್ದಾನೆ. ಸ್ಥಳಿಯರು ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

    ಇನ್ನೂ ನಟಿ ರೇಖಾ ನಾಯರ್ ಅವರ ಕಾರಿನ ಚಾಲಕನನ್ನು ಚೆನ್ನೈನ ಎಂಜಿಆರ್ ನಗರದ ಪೊಲೀಸರು ಬಂಧಿಸಿದ್ದಾರೆ. ಆದರೆ, ಘಟನೆಯ ವೇಳೆ ರೇಖಾ ನಾಯರ್ ವಾಹನದಲ್ಲಿದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನೂ ಮಂಜನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಪೆಟ್ಟ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಪಘಾತದ ಕುರಿತು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

  • ಹುಡುಗರು ಸೊಂಟದ ಮೇಲೆ ಕೈ ಇಟ್ಟರೆ ಮಜಾ ಮಾಡಿ-‘ಬಿಗ್‌ ಬಾಸ್‌’ ರೇಖಾ ನಾಯರ್

    ಹುಡುಗರು ಸೊಂಟದ ಮೇಲೆ ಕೈ ಇಟ್ಟರೆ ಮಜಾ ಮಾಡಿ-‘ಬಿಗ್‌ ಬಾಸ್‌’ ರೇಖಾ ನಾಯರ್

    ಕಾಲಿವುಡ್ (Kollywood) ನಟಿ ರೇಖಾ ನಾಯರ್ (Rekha Nair) ಅವರು ಪಾರ್ಥಿಬನ್ ನಿರ್ದೇಶನದ ‘ಇರವಿನ್ ನಿಹಾಲ್’ (Iravin (Nizhal) ಸಿನಿಮಾದಲ್ಲಿ ಬೆತ್ತಲೆ ದೃಶ್ಯದಲ್ಲಿ ನಟಿಸುವ ಮೂಲಕ ಭಾರೀ ಸುದ್ದಿಯಾಗಿದ್ರು. ಈಗ ಮತ್ತೊಮ್ಮೆ ವಿವಾದಾತ್ಮಕ ಮಾತುಗಳಿಂದ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ನಟಿ, ಬಿಗ್ ಬಾಸ್ ಸ್ಪರ್ಧಿ ರೇಖಾ ನಾಯರ್ ಅವರು ಸದಾ ಒಂದಲ್ಲಾ ಒಂದು ಕಿರಿಕ್ ಮೂಲಕ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ವಿವಾದದ ವಿಚಾರವಾಗಿಯೇ ಅತೀ ಹೆಚ್ಚು ಸುದ್ದಿಯಲ್ಲಿದ್ದಾರೆ. ಸೀಸನ್ 7 ತಮಿಳು ಬಿಗ್ ಬಾಸ್‌ನಲ್ಲೂ ರೇಖಾ ನಾಯರ್ ಗಮನ ಸೆಳೆದಿದ್ದರು. ಈಗ ಸಂದರ್ಶನವೊಂದರಲ್ಲಿ ರೇಖಾ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ನಟಿಯ ವರ್ತನೆಯನ್ನ ಅನೇಕರು ಖಂಡಿಸಿದ್ದಾರೆ.

    ಹುಡುಗಿಯರ ಸೊಂಟದ ಮೇಲೆ ಪುರುಷರು ಕೈಯಿಟ್ಟರೆ ಅದನ್ನು ಅವರು ಎಂಜಾಯ್ ಮಾಡಬೇಕು. ದೂರು ನೀಡಬಾರದು. ಹುಡುಗಿಯರು ತಮ್ಮ ಸ್ವಾತಂತ್ರ‍್ಯವನ್ನು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ನಾನು ಹಾಕುವ ಡ್ರೆಸ್‌ನ ಬಗ್ಗೆ ಸಾಕಷ್ಟು ಮಹಿಳೆಯರು ಪ್ರಶ್ನೆ ಮಾಡುತ್ತಾರೆ. ಹಾಗೇನಾದರೂ ನಾನು ಸೊಂಟ ಕಾಣಿಸುವಂಥ ಡ್ರೆಸ್ ಹಾಕಿದ್ದಾಗ, ಯಾರಾದರೂ ಪುರುಷ ನನ್ನ ಸೊಂಟದ ಮೇಲೆ ಕೈಯಿಟ್ಟರೆ ನಾನದನ್ನು ಎಂಜಾಯ್ ಮಾಡುತ್ತೇನೆ ಎಂದು ರೇಖಾ ನಾಯರ್ ಹೇಳಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್ ಭೇಟಿಗಾಗಿ ಮಲೇಷ್ಯಾಗೆ ಹೊರಟು ನಿಂತ ರಾಕಿಭಾಯ್ ಯಶ್

    ನಾನು ಸೀರೆ ಉಟ್ಟುಕೊಂಡಾಗ ಸಾಮಾನ್ಯವಾಗಿ ನನ್ನ ಸೊಂಟ ಕಾಣುತ್ತದೆ. ಬಸ್‌ನಲ್ಲಿ ಹೋಗುವಾಗ ಯಾವುದಾದರೂ ಪುರುಷ ಸೊಂಟದ ಮೇಲೆ ಕೈಯಿಟ್ಟರೆ ನನಗೇನೂ ಅನಿಸೋದಿಲ್ಲ. ಈ ದಿನಗಳಲ್ಲಿ ಮಹಿಳೆ ಕೂಡ ಇಂಥ ಮಾನಸಿಕತೆಗಳಿಂದ ಹೊರಬರಬೇಕು ಎಂದು ಹೇಳಿದ್ದಾರೆ. ಇನ್ನು ಜಾಗಿಂಗ್ ಮಾಡುವಾಗ ಯಾವುದಾದರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಾಗ ಕೂಡ ಸೊಂಟ ಕಾಣುವಂಥ ಡ್ರೆಸ್ ಹಾಕುತ್ತೇನೆ. ಇದು ನನಗೂ ಖುಷಿ ಕೊಡುತ್ತದೆ ಎಂದು ರೇಖಾ ನಾಯರ್ ಹೇಳಿದ್ದಾರೆ. ಸೊಂಟ ಕಾಣುವಂಥ ಡ್ರೆಸ್ ಹಾಕಿಕೊಂಡು ಮಾಲ್‌ಗೆ ಹೋದಾಗ, ಪುರುಷ ಅದನ್ನೇ ನೋಡುತ್ತಾನೆ. ಆತ ನಿಮ್ಮನ್ನೇ ನೋಡುವಂತೆ ಮಾಡಿದ್ದು ಯಾರು? ಹಾಗೇನಾದರೂ ನಾನು ಸ್ವಲ್ಪ ಪ್ರಮಾಣದಲ್ಲಿ ನನ್ನ ಬ್ಲೌಸ್‌ಅನ್ನು ಜಾರಿಸಿದರೆ, ಆತ ದಿಟ್ಟಿಸಿ ನೋಡವುದು ಇನ್ನೂ ಹೆಚ್ಚಾಗುತ್ತದೆ ಎಂದಿದ್ದಾರೆ.

    ನೀವು ಹಾಕುವಂಥ ಡ್ರೆಸ್‌ಅನ್ನು ಯಾರಾದರೂ ಮೆಚ್ಚಿಕೊಳ್ಳುವುದಿದ್ದರೆ, ಅದು ಪುರುಷರ ಮಾತ್ರ. ಅವರೇ ಮೆಚ್ಚಿಕೊಳ್ಳದಿದ್ದರೆ ಅದಕ್ಕೆ ಅರ್ಥವಿರುವುದಿಲ್ಲ ಎಂದು ರೇಖಾ ನಾಯರ್ ಮಾತನಾಡಿದ್ದಾರೆ. ನಟಿಯ ಮಾತಿಗೆ ಪುರುಷರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮಹಿಳೆಯರು ವಿರೋಧಿಸಿದ್ದಾರೆ. ಈ ಮೂಲಕ ನಟಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]