Tag: reject

  • 10 ಕೋಟಿ ಆಫರ್ ತಿರಸ್ಕರಿಸಿದ ಶಿಲ್ಪಾ ಶೆಟ್ಟಿ

    10 ಕೋಟಿ ಆಫರ್ ತಿರಸ್ಕರಿಸಿದ ಶಿಲ್ಪಾ ಶೆಟ್ಟಿ

    ಮುಂಬೈ: ನಟಿ ಶಿಲ್ಪಾ ಶೆಟ್ಟಿ ಅವರು ಸದಾ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಇದೀಗ 13 ವರ್ಷಗಳ ನಂತರ ಬೆಳ್ಳಿತೆರೆಗೆ ಕಮ್‍ಬ್ಯಾಕ್ ಮಾಡುತ್ತಿದ್ದಾರೆ. ಆದರೆ ಈ ನಡುವೆ ಅವರು ಬರೋಬ್ಬರಿ 10 ಕೋಟಿ ರೂ. ಆಫರ್‌ವೊಂದನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.

    ನಟಿ ಶಿಲ್ಪಾ ಶೆಟ್ಟಿಗೆ ಅವರನ್ನು ಆಯುರ್ವೇದಿಕ್ ಕಂಪನಿಯೊಂದು ಸ್ಲಿಮ್ಮಿಂಗ್ ಮಾತ್ರೆ (ಸ್ಲಿಮ್ ಆಗಲು ಮಾತ್ರೆ) ಬಗ್ಗೆ ಜಾಹೀರಾತು ಮಾಡುವಂತೆ ಸಂಪರ್ಕಿಸಿತ್ತು. ಜೊತೆಗೆ ಇದಕ್ಕಾಗಿ ಅವರಿಗೆ 10 ಕೋಟಿ ಆಫರ್ ನೀಡಿತ್ತು. ಆದರೆ ಈ ಅವಕಾಶವನ್ನ ಶಿಲ್ಪಾ ಶೆಟ್ಟಿ ತಿರಸ್ಕರಿಸಿದ್ದಾರೆ. ಈ ಬಗ್ಗೆ ಸ್ವತಃ ಶಿಲ್ಪಾ ಶೆಟ್ಟಿ ಅವರೇ ಸಂದರ್ಶನವೊಂದಲ್ಲಿ ಮಾತನಾಡಿದ್ದಾರೆ.

    “ಸ್ಲಿಮ್ ಮಾತ್ರೆ ಬಗ್ಗೆ ಜಾಹೀರಾತು ನೀಡುವಂತೆ ಕಂಪನಿಯೊಂದು ನನ್ನನ್ನು ಸಂಪರ್ಕಿಸಿತ್ತು. ನಾನು ನೈಸರ್ಗಿಕ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. ಹೀಗಾಗಿ ವೈಜ್ಞಾನಿಕವಾಗಿ ಕೆಲವನ್ನ ಪ್ರೋತ್ಸಾಹಿಸುವುದಿಲ್ಲ. ಆರೋಗ್ಯಕರ ಆಹಾರ ಮತ್ತು ವ್ಯಾಯಮದಿಂದ ಸೌಂದರ್ಯ ಸಾಧ್ಯ. ಆದರೆ ನನಗೆ ನಂಬಿಕೆ, ಭರವಸೆ ಇಲ್ಲದ ವಿಚಾರದ ಬಗ್ಗೆ ನಾನು ಪ್ರಚಾರ ಮಾಡುವುದು ಸರಿಯಿರಲ್ಲ” ಎಂದು ಶಿಲ್ಪಾ ಶೆಟ್ಟಿ ಅವರು ರಿಜೆಕ್ಟ್ ಮಾಡಿದ್ದಾರೆ.

    ಈ ಹಿಂದೆ ನಟಿ ಸಾಯಿ ಪಲ್ಲವಿ ಅವರು ಕೂಡ 2 ಕೋಟಿಯ ಫೇಸ್ ಕ್ರೀಮ್ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದರು. ಶಿಲ್ಪಾ ಶೆಟ್ಟಿ ಅವರು 2007ರ ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು. ಇದೀಗ ‘ನಿಕಮ್ಮಾ’ ಸಿನಿಮಾದ ಮೂಲಕ ಮತ್ತೆ ತಮ್ಮ ಸಿನಿ ಪಯಣವನ್ನು ಮುಂದುವರಿಸುತ್ತಿದ್ದಾರೆ.

  • ಅಮರಾವತಿ ಯೋಜನೆಗೆ 2.5 ಸಾವಿರ ಕೋಟಿ ಸಾಲ ನೀಡಲು ವಿಶ್ವಬ್ಯಾಂಕ್ ಹಿಂದೇಟು

    ಅಮರಾವತಿ ಯೋಜನೆಗೆ 2.5 ಸಾವಿರ ಕೋಟಿ ಸಾಲ ನೀಡಲು ವಿಶ್ವಬ್ಯಾಂಕ್ ಹಿಂದೇಟು

    ಅಮರಾವತಿ: ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಯನ್ನು ವಿಶ್ವಬ್ಯಾಂಕ್ ಕೈ ಬಿಟ್ಟಿದ್ದು, ಇದರಿಂದ ಆಂಧ್ರದ ರಾಜಧಾನಿ ಅಮರಾವತಿ ಅಭಿವೃದ್ಧಿಗೆ ಅಡ್ಡಿ ಎದುರಾಗಿದೆ.

    ಈ ಹಿಂದೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಗೆ ವಿಶ್ವಬ್ಯಾಂಕ್ ಸುಮಾರು 300 ಮಿಲಿಯನ್ ಡಾಲರ್(2.5 ಸಾವಿರ ಕೋಟಿ ರೂ.) ಸಾಲ ನೀಡಲು ಒಪ್ಪಿಕೊಂಡಿತ್ತು. ಆದರೆ ಈಗ ಈ ಯೋಜನೆಯನ್ನು ಕೈಬಿಡಲಾಗಿದೆ ಎಂದು ವಿಶ್ವಬ್ಯಾಂಕ್ ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ತೋರಿಸುತ್ತಿದೆ. ಅಲ್ಲದೆ ಯೋಜನೆಗೆ ಸಂಬಂಧಿಸಿದಂತೆ ವಿಶ್ವಬ್ಯಾಂಕ್ ಅಧಿಕಾರಿಗಳು ಕೂಡ ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ, ಜೊತೆಗೆ ಈ ಬಗ್ಗೆ ಯಾವುದೇ ಕಾರಣವನ್ನು ಸ್ಪಷ್ಟಪಡಿಸಿಲ್ಲ.

    ರಾಜಧಾನಿ ಅಭಿವೃದ್ಧಿಗಾಗಿ ಅಮರಾವತಿ ವಲಯದಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂದು ರೈತರು ದೂರು ದಾಖಲಿಸಿದ್ದರು. ಈ ದೂರನ್ನು ವಿಶ್ವಬ್ಯಾಂಕ್ ಪರಿಗಣನೆಗೆ ತೆಗೆದುಕೊಂಡಿದ್ದು, ಸಾಲ ನೀಡುವ ಒಪ್ಪಂದ ಕೈ ಬಿಡುವ ಬಂದಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

    ಟಿಡಿಪಿ(ತೆಲುಗು ದೇಶಂ ಪಕ್ಷ) ಸರ್ಕಾರವಿದ್ದಾಗ ಕೃಷ್ಣ ನದಿಗೆ ಹತ್ತಿರವಾಗಿರುವ ಅಮರಾವತಿ ಪ್ರದೇಶ ಅಭಿವೃದ್ಧಿ ಯೋಜನೆಗಾಗಿ ಬಲವಂತವಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದನ್ನು ವಿರೋಧಿಸಿ ಅನೇಕ ಎನ್‍ಜಿಓಗಳು ಹಾಗೂ ಪರಿಸರವಾದಿಗಳು ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿ, ವಿರೋಧ ವ್ಯಕ್ತಪಡಿಸಿದ್ದರು.

    ಚಂದ್ರಬಾಬು ನಾಯ್ಡು ಸರ್ಕಾರವು ಇದನ್ನು ನರೇಂದ್ರ ಮೋದಿ ಸರ್ಕಾರ 2016 ರಲ್ಲಿ ಘೋಷಿಸಿದ ವಿಶೇಷ ಸಹಾಯ ಕ್ರಮಗಳ ಅಡಿಯಲ್ಲಿ, ಬಾಹ್ಯ ನೆರವಿನ ಯೋಜನೆಗಳ ಅಡಿಯಲ್ಲಿ ಪಟ್ಟಿಮಾಡಿದೆ ಎಂದು ವರದಿಯಾಗಿದೆ, ಆದ್ದರಿಂದಾಗಿ ಸಾಲ ಮರುಪಾವತಿ ಹೊರೆಯನ್ನು ಕೇಂದ್ರವು ತೆಗೆದುಕೊಳ್ಳಬೇಕಿತ್ತು.

    ಬಾಹ್ಯ ನೆರವಿನ ಯೋಜನೆಯ ಪ್ರಸ್ತಾವನೆಯಂತೆ ಅಮರಾವತಿ ಯೋಜನೆಗೆ ವಿಶ್ವಬ್ಯಾಂಕ್ 300 ಮಿಲಿಯನ್ ಡಾಲರ್ (ಸುಮಾರು 2.5 ಸಾವಿರ ಕೋಟಿ) ಹಾಗೂ ಎಐಐಬಿ 200 ಮಿಲಿಯನ್ ಡಾಲರ್ ಸಾಲ ನೀಡಲು ಒಪ್ಪಿಗೆ ಸೂಚಿಸಿದ್ದವು. ಆದರೆ ಇತ್ತ ವಿಶ್ವಬ್ಯಾಂಕ್ ಈ ಯೋಜನೆ ಕೈ ಬಿಟ್ಟಿದೆ, ಅತ್ತ ಎಐಐಬಿ ಇನ್ನೂ ತನ್ನ ನಿರ್ಧರದ ಬಗ್ಗೆ ಸ್ಪಷ್ಟಪಡಿಸಿಲ್ಲ. ಹೀಗಾಗಿ ಅಮರಾವತಿ ಯೋಜನೆ ಕಾರ್ಯರೂಪಕ್ಕೆ ಬರುವುದು ಕೊಂಚ ಅನುಮಾನವಾಗಿದೆ.

  • ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ದರ್ಶನ್ ಅಪ್ಪಟ ಅಭಿಮಾನಿ ಆತ್ಮಹತ್ಯೆ!

    ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ದರ್ಶನ್ ಅಪ್ಪಟ ಅಭಿಮಾನಿ ಆತ್ಮಹತ್ಯೆ!

    ಹಾಸನ: ಗೆಳತಿ ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ತಾಲೂಕು ಮಳಲಿ ಹೊಸೂರು ಗ್ರಾಮದಲ್ಲಿ ನಡೆದಿದೆ.

    ಪ್ರಜ್ವಲ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಪ್ರಜ್ವಲ್ ಕಳೆದ 2 ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ನಂತರ ಆತನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

    ಪ್ರಜ್ವಲ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ತನ್ನ ಎದೆ ಮೇಲೆ ದರ್ಶನ್ ಮುಖ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದ. ಇನ್ನೂ ಚಿಕಿತ್ಸೆ ಫಲಕಾರಿಯಾಗದೇ ಪ್ರಜ್ವಲ್ ಸೋಮವಾರ ರಾತ್ರಿ ಹಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಈ ಬಗ್ಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗೆಳತಿಯ ಹುಟ್ಟುಹಬ್ಬಕ್ಕೆ ಕಳಿಸಲು ಪೋಷಕರು ನಿರಾಕರಿಸಿದ್ದಕ್ಕೆ ಯುವತಿ ಆತ್ನಹತ್ಯೆಗೆ ಶರಣು!

    ಗೆಳತಿಯ ಹುಟ್ಟುಹಬ್ಬಕ್ಕೆ ಕಳಿಸಲು ಪೋಷಕರು ನಿರಾಕರಿಸಿದ್ದಕ್ಕೆ ಯುವತಿ ಆತ್ನಹತ್ಯೆಗೆ ಶರಣು!

    ಬೆಂಗಳೂರು: ಗೆಳತಿಯ ಹುಟ್ಟುಹಬ್ಬಕ್ಕೆ ಕಳುಹಿಸಲು ಪೋಷಕರು ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅರ್ಪಿತಾ(18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪಿಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಅರ್ಪಿತಾ ತನ್ನ ಗೆಳತಿಯ ಹುಟ್ಟುಹಬ್ಬಕ್ಕೆ ಹೋಗಲು ಪೋಷಕರ ಹತ್ತಿರ ಕೇಳಿಕೊಂಡಿದ್ದಾಳೆ. ಆದರೆ ಅರ್ಪಿತಾ ಪೋಷಕರು ಆಕೆಯನ್ನು ಕಳುಹಿಸಿಲು ನಿರಾಕರಿಸಿದ್ದರು.

    ಪೋಷಕರ ನಡೆಯಿಂದ ಬೇಸತ್ತ ಅರ್ಪಿತಾ ಯಾರೂ ಇಲ್ಲದ ವೇಳೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಇಂದು ಬೆಳಗ್ಗೆ ರೂಮ್ ಬಾಗಿಲು ತೆಗೆದ ವೇಳೆ ಘಟನೆ ಬೆಳಕಿಗೆ ಬಂದಿದೆ.

    ಸದ್ಯ ಘಟನಾ ಸ್ಥಳಕ್ಕೆ ಕೆಂಪೇಗೌಡ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಮಗನನ್ನು ಮದ್ವೆಯಾಗಲು ನಿರಾಕರಿಸಿದಕ್ಕೆ ಯುವತಿಯ ಮನೆಗೆ ನುಗ್ಗಿ ಯುವಕನ ಮನೆಯವರಿಂದ ದಾಂಧಲೆ!

    ಮಗನನ್ನು ಮದ್ವೆಯಾಗಲು ನಿರಾಕರಿಸಿದಕ್ಕೆ ಯುವತಿಯ ಮನೆಗೆ ನುಗ್ಗಿ ಯುವಕನ ಮನೆಯವರಿಂದ ದಾಂಧಲೆ!

    ಮೈಸೂರು: ಮದುವೆಗೆ ನಿರಾಕರಿಸಿದ ಯುವತಿಗೆ ಯುವಕ ಕಿರುಕುಳ ನೀಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ತನ್ನ ಮಗನನ್ನು ಮದುವೆ ಆಗಲು ನಿರಾಕರಿಸಿದ ಯುವತಿ ಮನೆಗೆ ಯುವಕನ ಇಡೀ ಕುಟುಂಬ ನುಗ್ಗಿ ದಾಂಧಲೆ ನಡೆಸಿದ್ದಾರೆ.

    ಮೈಸೂರು ಜಿಲ್ಲೆಯ ಬನ್ನೂರಿನ ತುರಗನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆ ನಿರಾಕರಿಸಿದ ಹಿನ್ನಲೆಯಲ್ಲಿ ಯುವಕ ಹಾಗೂ ಯುವಕನ ಹೆತ್ತವರು ಯುವತಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಆಕೆಯ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.

    ತುರಗನೂರು ಗ್ರಾಮದ ಮಲ್ಲಿಕಾರ್ಜುನ, ಅದೇ ಗ್ರಾಮದ ಸುಕನ್ಯಾ(18)ಎಂಬ ಯುವತಿಯನ್ನು ಮದುವೆಯಾಗಲು ಇಚ್ಛಿಸಿದ್ದ. ಸುಕನ್ಯಾಳನ್ನು ತನಗೇ ಕೊಟ್ಟು ಮದುವೆ ಮಾಡುವಂತೆ ಸುಕನ್ಯಾ ಕುಟುಂಬವನ್ನು ಒತ್ತಾಯಿಸುತ್ತಿದ್ದ. ಇದಕ್ಕೆ ಒಪ್ಪದ ಸುಕನ್ಯಾ ಹೆತ್ತವರು ಮಗಳಿಗೆ ಬೇರೆ ಕಡೆ ವರನ ಹುಡುಕಾಟ ನಡೆಸಿದ್ದರು.

    ಈ ಮಾಹಿತಿ ಅರಿತ ಮಲ್ಲಿಕಾರ್ಜುನ ಸೋಮವಾರ ತನ್ನ ತಂದೆ ಸಿದ್ದಯ್ಯ, ತಾಯಿ ಮಹದೇವಮ್ಮ ಹಾಗೂ ತನ್ನ ಅಕ್ಕಂದಿರಾದ ಭಾರತಿ, ಸುಮಿತ್ರ ಹಾಗು ಭಾವಂದಿರಾದ ಸಿದ್ಧರಾಜು ಮತ್ತು ಕುಮಾರ್ ಜೊತೆ ಸೇರಿ ಸುಕನ್ಯಾ ಮನೆಗೆ ನುಗ್ಗಿ ಹಿಗ್ಗಾಮುಗ್ಗ ಥಳಿಸಿ ಮನೆಯಲ್ಲಿ ದಾಂಧಲೆ ಮಾಡಿದ್ದಾರೆ.

    ಹಲ್ಲೆಯಿಂದ ಗಾಯಗೊಂಡ ಸುಕನ್ಯಾಳಿಗೆ ಬನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರೀತಿ ನಿರಾಕರಿಸಿದ ವಿವಾಹಿತ ಮಹಿಳೆಯ ಬೆನ್ನಿಗೆ ಬಿಯರ್ ಬಾಟಲ್ ನಿಂದ ಚುಚ್ಚಿದ ಪಾಗಲ್ ಪ್ರೇಮಿ

    ಪ್ರೀತಿ ನಿರಾಕರಿಸಿದ ವಿವಾಹಿತ ಮಹಿಳೆಯ ಬೆನ್ನಿಗೆ ಬಿಯರ್ ಬಾಟಲ್ ನಿಂದ ಚುಚ್ಚಿದ ಪಾಗಲ್ ಪ್ರೇಮಿ

    ಬೆಂಗಳೂರು: ಪ್ರೀತಿಸಲಿಲ್ಲ ಎಂದು ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಗೆ ಬಿಯರ್ ಬಾಟಲಿನಿಂದ ಹಲ್ಲೆ ಮಡಿದ ಘಟನೆ ಬೆಂಗಳೂರಿನ ಕೆ.ಜಿ ನಗರದಲ್ಲಿ ನಡೆದಿದೆ.

    ರಜನಿಕಾಂತ್ ಎಂಬಾತನೇ ಮಹಿಳೆಯ ಹಲ್ಲೆ ಮಾಡಿದ ಪಾಗಲ್ ಪ್ರೇಮಿ. ಈತ ಮೂಲತಃ ಪಾಂಡವಪುರದ ನಿವಾಸಿಯಾಗಿದ್ದು, ವಿವಾಹಿತ ಮಂಜುಳಾ (ಹೆಸರು ಬದಲಾಯಿಸಿದೆ)ರನ್ನು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದನು. ಇವನ ಪ್ರೀತಿ ನಿರಾಕರಿಸಿದ್ದಕ್ಕೆ ಕೆರಳಿದ ರಜನಿಕಾಂತ್ ಮಂಜುಳಾರ ಬೆನ್ನಿಗೆ ಬೀರ್ ಬಾಟಲ್‍ನಿಂದ ಚುಚ್ಚಿದ್ದಾನೆ.

    ಸೋಮವಾರ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಂಜುಳಾರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆಗೆ ಸಂಬಂಧಿಸಿದಂತೆ ಕೆ.ಜಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿ, ಆಕೆಯ ಸಹೋದರಿಯನ್ನೂ ಕೊಂದ ಎಂಜಿನಿಯರ್!

    ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿ, ಆಕೆಯ ಸಹೋದರಿಯನ್ನೂ ಕೊಂದ ಎಂಜಿನಿಯರ್!

    ಲಕ್ನೌ: ಪ್ರೀತಿಯನ್ನು ನಿರಾಕರಿಸಿದಕ್ಕೆ ಎಂಜಿನಿಯರ್ ಒಬ್ಬ ತನ್ನ ಪ್ರೇಯಸಿಯನ್ನು ಕೊಂದು ನಂತರ ಆಕೆಯ ಸಹೋದರಿಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್‍ನಲ್ಲಿ ನಡೆದಿದೆ.

    ಅಂಕಿತ್ ಕೊಲೆ ಮಾಡಿದ ಆರೋಪಿಯಾಗಿದ್ದು, ಶೀಲು ಮತ್ತು ಶಿವಾನಿ ಮೃತ ದುರ್ದೈವಿಗಳು. ಅಂಕಿತ್ ದಾಕೋಲಿ ಗ್ರಾಮದವನಾಗಿದ್ದು, ಪಕ್ಕದ ಗ್ರಾಮದ ಬಾಪುರ್ ನ ಶೀಲುನನ್ನು ಬೆಂಕಿ ಹಾಕಿ ಸುಟ್ಟಿದ್ದಾನೆ. ಅದನ್ನು ನೋಡಿದ ಆಕೆಯ ಸಹೋದರಿಯನ್ನು ಕೂಡ ಬೆಂಕಿ ಹಚ್ಚಿ ಸುಟ್ಟಿದ್ದಾನೆ.

    ಅಂಕಿತ್ ಶೀಲು ಮನೆಗೆ ತೆರಳಿ ನನ್ನನ್ನು ಮದುವೆಯಾಗುವಂತೆ ಕೇಳಿ ಕೊಂಡಿದ್ದಾನೆ. ಆದರೆ ಶೀಲು ಆತನ ಪ್ರೀತಿಯನ್ನು ನಿರಾಕರಿಸಿದ್ದಾರೆ. ಪ್ರೀತಿ ನಿರಾಕರಿಸಿದ್ದಕ್ಕೆ ಅಂಕಿತ್ ಆಕೆಯನ್ನು ಕೊಲೆ ಮಾಡಿದ್ದಾನೆ. ಶೀಲು ಕೊಲೆಯನ್ನು ಪ್ರತ್ಯಕ್ಷವಾಗಿ ನೋಡಿದ ಶಿವಾನಿಯನ್ನು ಕೂಡ ಬೈಕಿನ ಕ್ಲಚ್ ವೈರ್‍ನಿಂದ ಕೊಲೆ ಮಾಡಿದ್ದಾನೆ. ನಂತರ ತನ್ನ ಬೈಕಿನಲ್ಲಿದ್ದ ಪೆಟ್ರೋಲ್ ಹೊರತೆಗೆದು ಅವರ ದೇಹವನ್ನು ಸುಟ್ಟು ಹಾಕಿದ್ದಾನೆ ಎಂದು ಎಸ್‍ಎಸ್‍ಪಿ ಮುನಿರಾಜ್. ಜಿ ಹೇಳಿದ್ದಾರೆ.

    ಘಟನೆ ನಡೆದ 24 ಗಂಟೆಯೊಳಗೆ ಆರೋಪಿ ಅಂಕಿತ್ ನನ್ನು ಪೊಲೀಸರು ಸೆರೆ ಹಿಡಿದಿದ್ದು, ಆತನ ಮೊಬೈಲ್ ವಶ ಪಡಿಸಿಕೊಂಡಿದ್ದಾರೆ. ಈ ಘಟನೆ ಸಂಬಂಧ ಪೊಲೀಸರಿಗೆ ಇನ್ನೂ ಕೆಲವರ ಮೇಲೆ ಅನುಮಾನವಿದ್ದು, ಅವರ ಮೇಲೂ ಕಣ್ಣಿಟ್ಟಿದ್ದಾರೆ. ಕೊಲೆ ನಡೆದ ದಿನ ಶೀಲು ಮನೆಯಲ್ಲೇ ಇದ್ದೆ ಹಾಗೂ ಆಕೆಯ ಸಹೋದರಿಯನ್ನು ನಾನೇ ಕೊಂದೇ ಎಂದು ಅಂಕಿತ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

  • ಗೌರವಯುತವಾಗಿ ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ

    ಗೌರವಯುತವಾಗಿ ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ

    ವಿಜಯಪುರ: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರು ಪ್ರಶಸ್ತಿಯನ್ನು ಗೌರವಯುತವಾಗಿ ಹಿಂತಿರುಗಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದಲ್ಲಿ ಅವರಿಗೆ ಪ್ರಶಸ್ತಿ ಹಿಂತಿರುಗಿಸುವ ಮನವಿಯನ್ನು ಮಾಡಿದ್ದಾರೆ. ಇದೇ ವೇಳೆ ನನ್ನನ್ನು ಸಂಪರ್ಕಿಸಿದೇ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ನಾನೊಬ್ಬ ಸಾಮಾನ್ಯ ಆಧ್ಯಾತ್ಮಿಕ ಜೀವಿ, ಅದಕ್ಕಾಗಿ ನಾನು ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ ತಾವುಗಳು ಅನ್ಯತ ತಪ್ಪು ಭಾವಿಸಬೇಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ಹಿಂದೆಯೂ ಹಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಕೊಡುವುದಾಗಿ ಸ್ವಾಮೀಜಿ ಅವರನ್ನು ಸಂಪರ್ಕಿಸಿದ್ದವು, ಈ ವೇಳೆಯೂ ಅವರು ಪ್ರಶಸ್ತಿಗಳನ್ನು ತಿರಸ್ಕರಿಸಿದ್ದರು.

    ಈ ವೇಳೆ ಇಂತಹ ಪ್ರಶಸ್ತಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಸಾಧಕರಿಗೆ ನೀಡಿ ಗೌರವಿಸಿ ಎಂದು ಮನವಿ ಮಾಡಿದ್ದಾರೆ.

    https://www.youtube.com/watch?v=ttnH724akH8

    https://www.youtube.com/watch?v=GJyM56B95hE

     

  • ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಕೊಂದೇ ಬಿಟ್ಟ!

    ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಕೊಂದೇ ಬಿಟ್ಟ!

    ಹೈದರಾಬಾದ್: ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ಕೊಂದಿರುವ ಅಮಾನವೀಯ ಘಟನೆ ನಗರದ ಮೋಸಾಪೇಟ್‍ನಲ್ಲಿ ನಡೆದಿದೆ.

    ಶ್ರೀಕಾಕುಲಂನ ಬೋನು ಜಾನಕಿ ಕೊಲೆಯಾದ ದುರ್ದೈವಿ. ಈಕೆ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಹಬಿಬ್‍ನಗರದಲ್ಲಿ ವಾಸವಿದ್ದಳು. ಅದೇ ನಗರದಲ್ಲಿ ವಾಸವಿದ್ದ ಆನಂದ್. ಪ್ರೀತಿ ಹೆಸರಲ್ಲಿ ಆಕೆಯ ಹಿಂದೆ ಸುತ್ತಾಡುತ್ತ ತೊಂದರೆ ಕೊಡುತ್ತಿದ್ದನು.

    ಆನಂದ್ ಒಂದು ದಿನ ತನ್ನ ಪ್ರೀತಿಯನ್ನು ಹೇಳಿದ್ದಾನೆ. ಆದರೆ ಜಾನಕಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆನಂದ್ ಜಾನಕಿಗೆ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಜಾನಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಪೊಲೀಸರು ಈ ಬಗ್ಗೆ ಕಠಿಣವಾದ ಕ್ರಮವನ್ನು ತೆಗೆದುಕೊಂಡಿಲ್ಲ.

    ಮಂಗಳವಾರ ಸಂಜೆ ಜಾನಕಿ ತನ್ನ ಮನೆಯಲ್ಲಿ ಒಬ್ಬಳೆ ಇದ್ದಳು. ಈ ಸಂದರ್ಭದಲ್ಲಿ ಆನಂದ್ ಮನೆಗೆ ಬಂದು ಏಕಾಏಕಿ ಜಾನಕಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಂದಿದ್ದಾನೆ. ಆರೋಪಿ ಆನಂದ್ ಕೊಲೆ ಮಾಡಿ ತಲೆ ಮರಿಸಿಕೊಂಡಿದ್ದನು. ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.