Tag: Rehearsal

  • ಗಣರಾಜ್ಯೋತ್ಸವ ಆಚರಣೆಗೆ ರಾಜಪಥದಲ್ಲಿ ಸಿದ್ಧತೆ

    ಗಣರಾಜ್ಯೋತ್ಸವ ಆಚರಣೆಗೆ ರಾಜಪಥದಲ್ಲಿ ಸಿದ್ಧತೆ

    ನವದೆಹಲಿ: ಗಣರಾಜ್ಯೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಇಡೀ ದೇಶವೇ ಗಣರಾಜ್ಯೋತ್ಸವದ ಸಿದ್ಧತೆಯಲ್ಲಿ ತೊಡಗಿದೆ. ದೆಹಲಿಯ ರಾಜಪಥನಲ್ಲಿ ಪರೇಡ್‌ಗಾಗಿ ಸೈನಿಕರು ಪೂರ್ಣ ಉಡುಗೆಯಲ್ಲಿ ಪೂರ್ವಾಭ್ಯಾಸ ಮಾಡಿದವು. ಇನ್ನೊಂದೆಡೆ ಹೆಲಿಕಾಪ್ಟರ್‌ಗಳು ಇಂದು ದೆಹಲಿಯ ರಾಜ್‌ಪಥ್‌ನ ಮೇಲೆ ಹಾರಾಡಿದವು.

    ಪ್ರತಿ ವರ್ಷ ಪರೇಡ್ ಸ್ಥಳದಲ್ಲಿ ನಡೆಯುವ ಪೂರ್ವ ಸಿದ್ಧತೆಯನ್ನು ವೀಕ್ಷಿಸಲು ಪ್ರೇಕ್ಷಕರು ಜಮಾಯಿಸಿದ್ದರು. ಈ ದೃಶ್ಯವು ರಾಜಪಥ ಸ್ಥಳದಿಂದ ರಾಷ್ಟ್ರಪತಿ ಭವನದವೆರೆಗೂ ನೋಡಬಹುದಾಗಿತ್ತು. ನಾಲ್ಕು ಮಿಗ್-17 ಹೆಲಿಕಾಪ್ಟರ್‌ಗಳು ವೈನ್‌ಗ್ಲಾಸ್ ರಚನೆಯಲ್ಲಿ ಹಾರಾಡುತ್ತಿದ್ದವು. ಇದನ್ನು ನೋಡಲು ಜನಸಂದಣಿಯೇ ತುಂಬಿತ್ತು. ರಾಷ್ಟ್ರ ಲಾಂಛನ ಹಾಗೂ ಸೇವಾ ಚಿಹ್ನೆಗಳು ಈ ಹೆಲಿಕಾಪ್ಟರ್ ಮೇಲಿದ್ದವು.

    ಭಾರತೀಯ ಸೈನಿಕರು ಗಣರಾಜ್ಯೋತ್ಸವಕ್ಕಾಗಿ ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಪರೇಡ್ ಮಾಡುವ ಮೂಲಕ ಗಮನ ಸೆಳೆದರು. ಮೊದಲ ಬಾರಿಗೆ, ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ನೆನಪಿಗಾಗಿ ಈ ಬಾರಿಯ ಗಣರಾಜ್ಯೋತ್ಸವವು ಇಂದಿನಿಂದಲೇ ಪ್ರಾರಂಭಗೊಳ್ಳಲಿದೆ. ಪ್ರತಿ ವರ್ಷ ಜನವರಿ 24 ರಂದು ಪ್ರಾರಂಭಗೊಳ್ಳುತ್ತಿತ್ತು. ಇದನ್ನೂ ಓದಿ: ನೇತಾಜಿ ಜನ್ಮ ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸಿ: ಮಮತಾ ಬ್ಯಾನರ್ಜಿ

    ಇಂದು ಸಂಜೆ 6 ಗಂಟೆಗೆ ಇಂಡಿಯಾ ಗೇಟ್‌ನಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್‌ರ ಪ್ರತಿಮೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ದೇಶಕ್ಕೆ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ

  • ಇತಿಹಾಸದಲ್ಲೇ ಮೊದಲು- ಈ ವರ್ಷ ಮೈಸೂರಿನಲ್ಲಿ 2 ಬಾರಿ ಜಂಬೂ ಸವಾರಿ

    ಇತಿಹಾಸದಲ್ಲೇ ಮೊದಲು- ಈ ವರ್ಷ ಮೈಸೂರಿನಲ್ಲಿ 2 ಬಾರಿ ಜಂಬೂ ಸವಾರಿ

    ಮೈಸೂರು: ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನೀವು ಎರಡು ಬಾರಿ ದಸರಾ ಜಂಬೂ ಸವಾರಿಯನ್ನು ಕಣ್ತುಂಬಿ ಕೊಳ್ಳಬಹುದು. ಇಷ್ಟು ದಿನ ವಿಜಯದಶಮಿ ದಿನ ಮಾತ್ರ ನಡೆಯುತ್ತಿದ್ದ ಜಂಬೂ ಸವಾರಿ ಈ ಬಾರಿ ಎರಡು ಬಾರಿ ನಡೆಯಲಿದೆ.

    ಪ್ರತಿ ವರ್ಷವೂ ದಸರಾ ಪಂಜಿನ ಕವಾಯತು ಎರಡು ಬಾರಿ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಎರಡು ದಿನ ಮುಂಚೆ ರಿಹರ್ಸಲ್ ರೂಪದಲ್ಲಿ ಪಂಚಿನ ಕವಾಯತು ನಡೆಯುತ್ತದೆ. ಈ ಬಾರಿ ಜಂಬೂ ಸವಾರಿಯೂ ಕೂಡ ರಿಹರ್ಸಲ್ ನಡೆಯುವ ಕಾರಣ ಎರಡು ಬಾರಿ ಜನರು ಜಂಬೂ ಸವಾರಿ ನೋಡಬಹುದಾಗಿದೆ.

    ಅಕ್ಟೋಬರ್ 17 ರಂದು ಜಂಬೂ ಸವಾರಿ ರಿಹರ್ಸಲ್ ನಡೆಯಲಿದೆ. ಮೈಸೂರಿನ ಅರಮನೆಯಿಂದ ಬನ್ನಿಮಂಟಪದವರೆಗೂ ರಿಹರ್ಸಲ್‍ನ ಮೆರವಣಿಗೆ ಸಾಗಲಿದೆ. ಸ್ಥಬ್ಧ ಚಿತ್ರ ಹೊರತು ಪಡಿಸಿ ಎಲ್ಲಾ ಕಲಾ ತಂಡಗಳು ಮತ್ತು ಜಂಬೂ ಸವಾರಿ ದಿನ ಪಾಲ್ಗೋಳುವುದಕ್ಕೆ ಅವಕಾಶ ಸಿಗದ ಕಲಾ ತಂಡಗಳು ರಿಹರ್ಸಲ್‍ನಲ್ಲಿ ಭಾಗಿಯಾಗಲಿವೆ.

    ಕ್ಯಾಪ್ಟನ್ ಅರ್ಜುನ ನೇತೃತ್ವದ ಎಲ್ಲಾ ಆನೆಗಳು ಮೆರವಣಿಗೆಯಲ್ಲಿ ಸಾಗಲಿವೆ. ಆದರೆ ಅರ್ಜುನನಿಗೆ ಚಿನ್ನದ ಅಂಬಾರಿ ಹೊರಿಸಬೇಕೆ ಅಥವಾ ಮರದ ಅಂಬಾರಿಯನ್ನು ಮಾತ್ರ ಹೊರಿಸಬೇಕೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಇದನ್ನು ಹೊರತು ಪಡಿಸಿ ಜಂಬೂ ಸವಾರಿ ಹೇಗೆ ನಡೆಯುತ್ತೋ ಅದೇ ರೀತಿ ರಿಹರ್ಸಲ್ ಕೂಡ ನಡೆಯುತ್ತದೆ. ಜಂಬೂ ಸವಾರಿ ದಿನ ಬಹುತೇಕರಿಗೆ ಮೆರವಣಿಗೆ ವೀಕ್ಷಿಸಲು ಆಗುವುದಿಲ್ಲ. ಅಂತವರಿಗೆ ಇದೊಂದು ಅವಕಾಶವಾಗಿದೆ. ಮೆರವಣಿಗೆ ದಿನಕ್ಕೆ ಹೆಚ್ಚಿನ ಜನರನ್ನು ಮೈಸೂರಿನತ್ತ ಸೆಳೆಯುವ ಉದ್ದೇಶದಿಂದ ಕೂಡ ಈ ರಿಹರ್ಸಲ್ ಸಹಕಾರಿ ಅನ್ನೋದು ಜಿಲ್ಲಾಡಳಿತದ ಲೆಕ್ಕಚಾರವಾಗಿದೆ ಎಂದು ಜಿಲ್ಲಾಧಿಕಾರಿಗಳು ಅಭಿರಾಮ್ ಜಿ. ಶಂಕರ್ ಹೇಳಿದ್ದಾರೆ.

    ಖುದ್ದು ಸಿಎಂ ಎಚ್.ಡಿ. ಕುಮಾರಸ್ವಾಮಿ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಜಂಬೂ ಸವಾರಿ ರಿಹರ್ಸಲ್ ನಡೆಸುವಂತೆ ಸೂಚನೆ ಕೊಟ್ಟಿದ್ದಾರೆ. ಈ ರಿಹರ್ಸಲ್ ಯಶಸ್ವಿಯಾಗಿ ನಡೆದರೆ ಜಂಬೂ ಸವಾರಿ ರಿಹರ್ಸಲ್ ಅನ್ನೋದು ದಸರಾದಲ್ಲಿ ಖಾಯಂ ಆಗಿ ಉಳಿಯುತ್ತದೆ ಎಂದು ಶಂಕರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv