Tag: Registration

  • ಭಾರೀ ಮೊತ್ತ ನೀಡಿ `ಬಾಸ್’ ನಂಬರ್ ಪಡೆದ ಮೊಹಮ್ಮದ್ ನಲಪಾಡ್!

    ಭಾರೀ ಮೊತ್ತ ನೀಡಿ `ಬಾಸ್’ ನಂಬರ್ ಪಡೆದ ಮೊಹಮ್ಮದ್ ನಲಪಾಡ್!

    ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಶಾಂತಿನಗರ ಶಾಸಕ ಎನ್.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಬಾಸ್ ಎನ್ನುವ ಫ್ಯಾನ್ಸಿ ನಂಬರಿಗಾಗಿ 2.75 ಲಕ್ಷ ರೂಪಾಯಿ ಪಾವತಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ಹೌದು, ಬಾಸ್ ಎಂದು ಕಾಣುವ 8055 ಫ್ಯಾನ್ಸಿ ನಂಬರಿಗಾಗಿ ಮೊಹಮದ್ ನಲಪಾಡ್ 2.75 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಈ ಮೂಲಕ ತಮ್ಮ ನೂತನ ಮರ್ಸಿಡೀಸ್ ಬೆನ್ಜ್ ಕಾರಿಗೆ ಕೆಎ-03-ಎನ್‍ಇ-8055 ಎಂಬ ನೋಂದಣಿ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ.

    ಶಾಂತಿನಗರ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ `KA-03-NE’ ಶ್ರೇಣಿಯ ನೋಂದಣಿ ಸಂಖ್ಯೆಯ ಬಹಿರಂಗ ಹರಾಜಿನಲ್ಲಿ ನಲಪಾಡ್ ಬಾಸ್ ಸಂಖ್ಯೆಯನ್ನು ಖರೀದಿ ಮಾಡಿದ್ದಾರೆ. ಈ ಹರಾಜಿನಲ್ಲಿ ಒಟ್ಟು 23 ಫ್ಯಾನ್ಸಿ ನೋಂದಣಿ ಸಂಖ್ಯೆಗಳು ಹರಾಜು ಆಗಿದ್ದು, ಸಾರಿಗೆ ಇಲಾಖೆಗೆ 22,46,500 ರೂ. ಆದಾಯ ಬಂದಿದೆ. ಇದನ್ನೂ ಓದಿ: ತನ್ನ ಬೆಂಜ್ ಕಾರಿಗೆ ಸ್ಪೆಶಲ್ ‘ಬಾಸ್’ ನಂಬರ್ ಪಡೆದ್ರು ಯಶ್!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಿಯಲ್ ಸ್ಟಾರ್ ಉಪೇಂದ್ರರಿಂದ ಹೊಸ ಪಕ್ಷ ಸ್ಥಾಪನೆ

    ರಿಯಲ್ ಸ್ಟಾರ್ ಉಪೇಂದ್ರರಿಂದ ಹೊಸ ಪಕ್ಷ ಸ್ಥಾಪನೆ

    ಬೆಂಗಳೂರು: ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಕೆಪಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಈಗ ತಾವೇ ಹೊಸ ಪಕ್ಷವನ್ನು ಸ್ಥಾಪಿಸಿ ನೋಂದಣಿ ಮಾಡಿಸುತ್ತಿದ್ದಾರೆ.

    ದೆಹಲಿಯ ಚುನಾವಣಾ ಕಚೇರಿಗೆ ಹೋಗಿ ತನ್ನ ಉತ್ತಮ ಪ್ರಜಾಕೀಯ ಪಕ್ಷವನ್ನು ನೋಂದಣಿ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ದೆಹಲಿಯ ಚುನಾವಣಾ ಕಚೇರಿಯ ಮುಂಭಾಗ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಟ್ವೀಟ್ ಮಾಡಿ ಉತ್ತಮ ಪ್ರಜಾಕೀಯ ಪಕ್ಷ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೆಪಿಜೆಪಿಗೆ ನಟ ಉಪೇಂದ್ರ ರಾಜೀನಾಮೆ – ಹೊಸ ಪಕ್ಷ ಸ್ಥಾಪನೆಗೆ ನಿರ್ಧಾರ

    ಕೆಪಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮಗೂ ಕೆಪಿಜೆಪಿಗೂ ಇನ್ಮುಂದೆ ಸಂಬಂಧ ಇರಲ್ಲ. ಪ್ರಜಾಕೀಯ ಹೆಸರಲ್ಲಿ ಹೊಸ ಪಕ್ಷ ಕಟ್ಟಲು ತೀರ್ಮಾನ ಮಾಡಿದ್ದೇವೆ. ಇಂದಿನಿಂದಲೇ ಹೊಸ ಪಕ್ಷ ಸ್ಥಾಪನೆ ಕಾರ್ಯ ಆರಂಭಿಸುತ್ತೇವೆ. ಪ್ರಜಾಕೀಯದ ಸಿದ್ಧಾಂತ ಇಟ್ಟುಕೊಂಡೇ ಹೊಸ ಪಕ್ಷ ಕಟ್ಟುತ್ತೇವೆ. ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತೇವೆ. ಎಲ್ಲರೂ ಸೇರಿ ಒಮ್ಮತದ ತೀರ್ಮಾನಕ್ಕೆ ಬಂದ್ದಿದ್ದೇವೆ. ನಾನು ಹಾಗೂ ನನ್ನ ಜೊತೆ ನಾಲ್ಕೈದು ಜನ ಸೇರಿ ಎಲ್ಲರೂ ರಾಜೀನಾಮೆ ನೀಡುತ್ತಿದ್ದೇವೆ ಎಂದು ಹೇಳಿದ್ದರು.

    ಪ್ರಜಾಕೀಯ ವಿಷಯವನ್ನು ಜನರಿಗೆ ತಿಳಿಸುತ್ತೇವೆ. ಅದಷ್ಟು ಬೇಗ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡುತ್ತೇವೆ. ಇದೇ ವಿಧಾನಸಭೆ ಚುನಾವಣೆಗೆ ಸ್ಫರ್ಧೆ ಮಾಡುತ್ತೇವೆ. ಇಲ್ಲವಾದ್ರೆ ಪಾಲಿಕೆ ಚುನಾವಣೆ ಅಥವಾ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಪ್ರಜಾಕೀಯ ಬಿಟ್ಟು ರಾಜಕೀಯ ಮಾಡಲ್ಲ ಎಂದು ಅಂದು ತಿಳಿಸಿದ್ದರು.