Tag: Refugee

  • ಯುದ್ಧ ಪೀಡಿತ ಉಕ್ರೇನ್‍ನಿಂದ ಒಂಟಿಯಾಗಿ ಪ್ರಯಾಣಿಸಿದ 11 ವರ್ಷದ ಬಾಲಕ

    ಯುದ್ಧ ಪೀಡಿತ ಉಕ್ರೇನ್‍ನಿಂದ ಒಂಟಿಯಾಗಿ ಪ್ರಯಾಣಿಸಿದ 11 ವರ್ಷದ ಬಾಲಕ

    ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದಿದ್ದು, ಅಲ್ಲಿನ ನಿವಾಸಿಗಳು ವಾಸಸ್ಥಳ ತೊರೆದು ಬೇರೆಡೆ ವಲಸೆ ಹೋಗುತ್ತಿದ್ದಾರೆ. ಉಕ್ರೇನ್‍ನ ಝಪೊರಿಜಿಯಾ ಪ್ರದೇಶದ 11 ವರ್ಷದ ಬಾಲಕ ಯುದ್ಧ ಭೂಮಿಯಲ್ಲಿ ಏಕಾಂಗಿಯಾಗಿ ಸಾವಿರ ಕಿಲೋ ಮೀಟರ್ ಪ್ರಯಾಣಿಸಿದ್ದಾನೆ. ಈ ಹುಡುಗನನ್ನು ಉಕ್ರೇನ್ ವಿದೇಶಾಂಗ ಸಚಿವರು ದಿ ಬಿಗ್ಗೆಸ್ಟ್ ಹೀರೋ ಆಫ್ ಲಾಸ್ಟ್ ನೈಟ್ ಎಂದು ಬಣ್ಣಿಸಿದ್ದಾರೆ.

    ಒಂದು ಬ್ಯಾಗ್‍ನಲ್ಲಿ ಟೆಲಿಫೋನ್ ನಂಬರ್, ಪಾಸ್ ಪೋರ್ಟ್ ಮತ್ತು ತಿನ್ನಲು ಆಹಾರವಿರುವ ಪೇಪರ್ ಬ್ಯಾಗ್‍ನ್ನು ಹೆಗಲ ಮೇಲೆ ಹಾಕಿ ಹೊರಡು ಎಂದು ನನ್ನ ತಾಯಿ ಹೇಳಿ ಕಳುಸಿದ್ದಾರೆ. ಧೈರ್ಯ ಮಾಡಿ ರೈಲು ಹತ್ತಿ ಗಡಿ ತಲುಪಿದೆ. ರೈಲು ಪ್ರಯಾಣದ ನಂತರ ಸ್ಲೋವಾಕಿಯಾದಲ್ಲಿರುವ ಸಂಬಂಧಿಕರು ಇರುವ ಸ್ಥಳಕ್ಕೆ ತಲುಪಿದ್ದಾನೆ. ಬಾಲಕನ ನಗು, ನಿರ್ಭಯತೆ ಮತ್ತು ಸಮರ್ಪಣೆ ಎಲ್ಲವೂ ನಿಜವಾದ ನಾಯಕನ ಗುಣಗಳು ಎಂದು ಉಕ್ರೇನಿಯನ್ ಗೃಹ ಸಚಿವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್‌ ಸ್ವಾವಲಂಬನೆಯತ್ತ ಹೆಜ್ಜೆ

    ಗಡಿ ಕಾವಲುಗಾರರು ಬಾಲಕನ ಬಳಿ ಇದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಬ್ರಾಟಿಸಾಲ್ವಾದಿಂದ ಬಂದ ಸಂಬಂಧಿಕರಿಗೆ ಬಾಲಕನನ್ನು ಹಸ್ತಾಂತರಿಸಿದ್ದಾರೆ. ಈ ವಿಚಾರ ತಿಳಿದ ಬಾಲಕನ ತಾಯಿ ಸ್ಲೋವಾಕ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ

  • ಧ್ವಜಾರೋಹಣ ಮಾಡಬೇಕಿದೆ, ಶಾಲೆ ಖಾಲಿ ಮಾಡಿ- ನಿರಾಶ್ರಿತರಿಗೆ ಪಿಡಿಒ ಅವಾಜ್

    ಧ್ವಜಾರೋಹಣ ಮಾಡಬೇಕಿದೆ, ಶಾಲೆ ಖಾಲಿ ಮಾಡಿ- ನಿರಾಶ್ರಿತರಿಗೆ ಪಿಡಿಒ ಅವಾಜ್

    ಬೆಳಗಾವಿ: ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರಿಗೆ ಶಾಲೆ ಖಾಲಿ ಮಾಡಿ ಎಂದು ಧಮ್ಕಿ ಹಾಕಿರುವ ಆರೋಪವೊಂದು ಪಿಡಿಒ, ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಪೊಲೀಸರ ವಿರುದ್ಧ ಕೇಳಿಬಂದಿದೆ.

    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದ ಪರಿಹಾರ ಕೇಂದ್ರದಲ್ಲಿ ನೂರಕ್ಕೂ ಅಧಿಕ ನಿರಾಶ್ರಿತರಿದ್ದು, ಈಗ ಅಗಸ್ಟ್ 15 ರಂದು ಧ್ವಜಾರೋಹಣ ಮಾಡಬೇಕಿದೆ ಇಂದು ಶಾಲೆ ಬಿಡುವಂತೆ ಅಧಿಕಾರಿಗಳು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.

    ಅಧಿಕಾರಿಗಳ ಧಮ್ಕಿಯಿಂದ ಮನೆ ಕಳೆದುಕೊಂಡವರು ಕಂಗಾಲಾಗಿದ್ದು, ಎಲ್ಲಿಗೆ ಹೋಗಬೇಕು ಎಂದು ದಿಕ್ಕೆ ತೋಚದಂತಾಗಿ ಕಣ್ಣೀರಿಡುತ್ತಿದ್ದಾರೆ. ಸರ್ಕಾರದಿಂದ 3,800 ಚೆಕ್ ಕೊಟ್ಟು ಈಗ ಜಾಗ ಖಾಲಿ ಮಾಡಿಸುತ್ತಿರುವ ಪಿಡಿಒ ಮತ್ತು ಪೊಲೀಸರ ವಿರುದ್ಧ ನಿರಾಶ್ರಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.