Tag: Refrigerator

  • ವ್ಯಕ್ತಿ ಹತ್ಯೆಗೈದು, ಅವನ ಮನೆಯ ಫ್ರಿಡ್ಜ್‌ನಲ್ಲೇ ಬಚ್ಚಿಟ್ರು

    ವ್ಯಕ್ತಿ ಹತ್ಯೆಗೈದು, ಅವನ ಮನೆಯ ಫ್ರಿಡ್ಜ್‌ನಲ್ಲೇ ಬಚ್ಚಿಟ್ರು

    ನವದೆಹಲಿ: 50 ವರ್ಷದ ವ್ಯಕ್ತಿಯ ಶವ ಆತನ ಮನೆಯ ರೆಫ್ರಿಜರೇಟರ್‌ನಲ್ಲಿ ಪತ್ತೆಯಾಗಿರುವ ಘಟನೆ ಶುಕ್ರವಾರ ಈಶಾನ್ಯ ದೆಹಲಿಯ ಸೀಲಂಪುರ್ ಪ್ರದೇಶದಲ್ಲಿ ನಡೆದಿದೆ.

    CRIME 2

    ಮೃತ ದುರ್ದೈವಿಯನ್ನು ಝಾಕಿರ್ ಎಂದು ಗುರುತಿಸಲಾಗಿದ್ದು, ಶುಕ್ರವಾರ ಸಂಜೆ 7.15 ರ ಸುಮಾರಿಗೆ ಆತನ ಮೊಬೈಲ್‍ಗೆ ಸಂಬಂಧಿಯೊಬ್ಬರು ಕರೆ ಮಾಡಿದ್ದಾರೆ. ಆದರೆ ಎಷ್ಟು ಬಾರಿ ಕರೆ ಮಾಡಿದರೂ, ಝಾಕಿರ್ ಕರೆ ಸ್ವೀಕರಿಸದ ಹಿನ್ನೆಲೆ ಸಂಬಂಧಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಝಾಕಿರ್ ಮನೆಗೆ ತಲುಪಿ ಪರಿಶೀಲನೆ ನಡೆಸಿದ ಪೊಲೀಸರಿಗೆ ವ್ಯಕ್ತಿ ಶವ ರೆಫ್ರಿಜರೇಟರ್‌ನಲ್ಲಿ ಕಂಡು ಬಂದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಭಟ್ಕಳದಲ್ಲಿ ಮಹಿಳಾ ಪೊಲೀಸರಿಂದಲೇ ರಾತ್ರಿ ಗಸ್ತು – ನಿರ್ಭೀತಿಯಿಂದ ವಾಹನಗಳ ತಪಾಸಣೆ, ವಿಚಾರಣೆ

    ಈ ಸಂಬಂಧ ಪ್ರಾಥಮಿಕ ತನಿಖೆ ವೇಳೆ ಪೊಲೀಸರಿಗೆ ವ್ಯಕ್ತಿ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಪತ್ನಿ ಮತ್ತು ಮಕ್ಕಳು ಪ್ರತ್ಯೇಕವಾಗಿ ದೂರದ ಪ್ರದೇಶವೊಂದರಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಕೃತ್ಯವನ್ನು ಎಸಗಿದ ಆರೋಪಿಯ ಸುಳಿವು ಸಿಕ್ಕಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಕಸದ ವಾಹನಗಳ ಮೇಲೆ BBMP ನಾಮಫಲಕ ಹಾಕುವಂತಿಲ್ಲ – ಹೆಸರು ಹಾಕಿದ ವಾಹನಗಳ ಮೇಲೆ ಕ್ರಿಮಿನಲ್ ಕೇಸ್

    Live Tv
    [brid partner=56869869 player=32851 video=960834 autoplay=true]

  • ತಾತನ ಮೃತದೇಹವನ್ನೇ ಫ್ರಿಡ್ಜ್‌ನಲ್ಲಿಟ್ಟ ಮೊಮ್ಮಗ – ಕಾರಣವೇನು ಗೊತ್ತಾ?

    ತಾತನ ಮೃತದೇಹವನ್ನೇ ಫ್ರಿಡ್ಜ್‌ನಲ್ಲಿಟ್ಟ ಮೊಮ್ಮಗ – ಕಾರಣವೇನು ಗೊತ್ತಾ?

    ಹೈದರಾಬಾದ್: ಅಂತ್ಯಕ್ರಿಯೆ ನಡೆಸಲು ಹಣವಿಲ್ಲದೇ ವ್ಯಕ್ತಿಯೊಬ್ಬರು ತಮ್ಮ 93 ವರ್ಷದ ತಾತನ ದೇಹವನ್ನು ಫ್ರಿಡ್ಜ್ ಒಳಗೆ ಅಡವಿಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ನೆರೆಹೊರೆಯವರು ದುರ್ವಾಸನೆ ಕುರಿತಂತೆ ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ವಾರಂಗಲ್‍ನ ಪರ್ಕಳದಲ್ಲಿರುವ ಮನೆಯನ್ನು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ರೆಫ್ರಿಜರೇಟರ್ ಒಳಗೆ ಕೊಳೆತ ದೇಹವೊಂದು ಪತ್ತೆಯಾಗಿದೆ. ನಿವೃತ್ತ ವ್ಯಕ್ತಿ ಹಾಗೂ ಆತನ ಮೊಮ್ಮಗ ನಿಖಿಲ್ ಬಾಡಿಗೆಗೆ ಈ ಮನೆಯಲ್ಲಿ ವಾಸವಾಗಿದ್ದು, ವೃದ್ಧನಿಗೆ ಬರುವ ಪಿಂಚಣಿ ಹಣದಿಂದ ಜೀವನ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ.

    ಈ ಕುರಿತಂತೆ ನಿಖಿಲ್(23) ಇತ್ತೀಚೆಗಷ್ಟೆ ನನ್ನ ತಾತ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಆದರೆ 3 ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ. ಅವರು ನಿಧನರಾದ ಬಳಿಕ ಅಂತಿಮ ವಿಧಿವಿಧಾನ ನಡೆಸಲು ಹಣವಿಲ್ಲದ ಕಾರಣ, ಒಂದು ಬೆಡ್‍ಶೀಟ್‍ನಲ್ಲಿ ಮೊದಲು ತಾತನ ದೇಹವನ್ನು ಸುತ್ತಿ ನಂತರ ರೆಫ್ರಿಜರೇಟರ್‍ನಲ್ಲಿ ಇಟ್ಟಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ಸದ್ಯ ಪೊಲೀಸರಿಗೆ ನಿಖಿಲ್ ತನ್ನ ತಾತನ ಪಿಂಚಣಿ ಹಣಕ್ಕಾಗಿ ದೇಹವನ್ನು ಬಚ್ಚಿಟ್ಟಿದ್ದಾನೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಈ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ತಾನು ನಿರ್ಮಿಸಿದ ಹೆಲಿಕಾಪ್ಟರ್‌ನಿಂದಲೇ ಯುವಕನಿಗೆ ಕಾದಿತ್ತು ಆಪತ್ತು

  • ಫಿಡ್ಜ್ ಟ್ರೇ ಬಳಸಿ ಆನ್‍ಲೈನ್ ಕ್ಲಾಸ್- ಶಿಕ್ಷಕಿ ಐಡಿಯಾಕ್ಕೆ ನೆಟ್ಟಿಗರು ಫಿದಾ

    ಫಿಡ್ಜ್ ಟ್ರೇ ಬಳಸಿ ಆನ್‍ಲೈನ್ ಕ್ಲಾಸ್- ಶಿಕ್ಷಕಿ ಐಡಿಯಾಕ್ಕೆ ನೆಟ್ಟಿಗರು ಫಿದಾ

    ನವದೆಹಲಿ: ಕೊರೊನಾ ವೈರಸ್ ಎಂಬ ಚೀನಿ ಮಾಹಾಮಾರಿ ದೇಶಕ್ಕೆ ಕಾಲಿಟ್ಟ ಬಳಿಕ ಜನ-ಜೀವನ ಅಸ್ತವ್ಯಸ್ತವಾಗಿದೆ. ಕೊರೊನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಹೇರಲಾಗಿತ್ತು. ಇತ್ತ ಶಾಲಾ-ಕಾಲೇಜು ಹಾಗೂ ಕಚೇರಿಗಳನ್ನು ಕೂಡ ಬಂದ್ ಮಾಡಲಾಗಿದ್ದು, ಇನ್ನೂ ತೆರೆಯಲು ಅನುಮತಿ ಸಿಕ್ಕಿಲ್ಲ. ಸದ್ಯ ಆನ್‍ಲೈನ್ ಮೂಲಕ ತರಗತಿಗಳು ನಡೆಯುತ್ತಿವೆ.

    ಈ ಆನ್‍ಲೈನ್ ಕ್ಲಾಸ್‍ಗೆ ಹಾಜರಾಗಲು ಅನೇಕ ಮಕ್ಕಳು ಒದ್ದಾಡುತ್ತಿದ್ದಾರೆ. ಇತ್ತ ಶಿಕ್ಷಕರು ಕೂಡ ಮಕ್ಕಳಿಗೆ ಪಾಠ ಹೇಳಿಕೊಡಲು ಹರಸಾಹಸ ಪಡುತ್ತಿದ್ದಾರೆ. ಅಂತೆಯೇ ಇಲ್ಲೊಬ್ಬ ಶಿಕ್ಷಕಿ ಆನ್‍ಲೈನ್ ಕ್ಲಾಸ್ ನಡೆಸಲು ಹೂಡಿರುವ ಐಡಿಯಾವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

    ಟ್ವಿಟ್ಟರ್ ಬಳಕೆದಾರೆ ಮೋನಿಕಾ ಯಾದವ್, ಇತ್ತೀಚೆಗೆ ರೆಫ್ರಿಜರೇಟರ್ ಟ್ರೇ ಬಳಸಿ ಶಿಕ್ಷಕಿಯೊಬ್ಬರು ಆನ್ ಲೈನ್ ತರಗತಿ ನಡೆಸುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಆನ್‍ಲೈನ್ ನಲ್ಲಿ ಪಾಠ ಮಾಡಲು ಶಿಕ್ಷಕಿ ಫ್ರಿಡ್ಜ್ ಟ್ರೇ ಬಳಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮನೆಯ ಹಂಚು ಏರಿದ ಬಿಎ ವಿದ್ಯಾರ್ಥಿನಿ

    ಫೋಟೋದಲ್ಲಿ ಶಿಕ್ಷಕಿ ಪಾರದರ್ಶಕತೆಯಿಂದ ಕೂಡಿರುವ ಫ್ರಿಡ್ಜ್ ಟ್ರೇ ಬಳಸಿಕೊಂಡಿದ್ದಾರೆ. ಎರಡು ಡಬ್ಬಗಳನ್ನು ಇಟ್ಟು ಅದರ ಮೇಲೆ ಟ್ರೇ ಇಟ್ಟಿದ್ದಾರೆ. ಟ್ರೇ ಮೇಲೆ ಮೊಬೈಲ್ ಇಟ್ಟು ಕೆಳಗಡೆ ಇರುವ ಪೇಪರ್ ಗಳನ್ನು ತೋರಿಸಿ ಪಾಠ ಹೇಳಿಕೊಡುತ್ತಿರುವುದನ್ನು ಕಾಣಬಹುದಾಗಿದೆ.

    ತನಗೆ ಕಷ್ಟ ಆದರೂ ಪರವಾಗಿಲ್ಲ, ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪಾಠ ಹೇಳಿಕೊಡಬೇಕೆಂಬ ಶಿಕ್ಷಕಿಯ ಈ ಪ್ರಯತ್ನಕ್ಕೆ ನೆಟ್ಟಿಗರು ಶಹಬ್ಬಾಸ್ ಅಂದಿದ್ದಾರೆ.

  • ರೆಫ್ರಿಜರೇಟರ್ ಸ್ಫೋಟ, ಮೂವರ ಸಾವು

    ರೆಫ್ರಿಜರೇಟರ್ ಸ್ಫೋಟ, ಮೂವರ ಸಾವು

    ಚೆನ್ನೈ: ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿ ದಂಪತಿ ಹಾಗೂ ತಾಯಿ ಒಟ್ಟು ಮೂವರು ಮೃತಪಟ್ಟಿರುವ ಘಟನೆ ಚೆನ್ನೈ ಬಳಿಯ ತಂಬರಂ ಪೂರ್ವದ ಸೆಲಾಯುರ್‍ನಲ್ಲಿ ನಡೆದಿದೆ.

    ಖಾಸಗಿ ಸುದ್ದಿ ವಾಹಿನಿ ವರದಿಗಾರ ಪ್ರಸನ್ನ(35) ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ರೆಫ್ರಿಜಿರೇಟರ್ ಗ್ಯಾಸ್ ಸ್ಫೋಟಗೊಂಡು ದಂಪತಿ ಹಾಗೂ ವ್ಯಕ್ತಿಯ ತಾಯಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ವಸ್ತುಗಳು ಚೂರು ಚೂರಾಗಿದ್ದು, ಗೋಡೆ ಕಪ್ಪಾಗಿದ್ದರಿಂದ ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ.

    https://www.facebook.com/IETamil/videos/2134065873549946/

    ಗುರುವಾರ ಬೆಳಗ್ಗೆ ಪಕ್ಕದ ಮನೆಯವರು ಮನೆಯತ್ತ ನೋಡಿದ್ದಾರೆ. ತುಂಬಾ ಹೊತ್ತಾದರೂ ಯಾರೂ ಮನೆಯಿಂದ ಹೊರಗೆ ಬಾರದ್ದನ್ನು ಮನಗಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ಧಾವಿಸಿದ್ದು, ಬಾಗಿಲನ್ನು ಮುರಿದು ಒಳಗೆ ತೆರಳಿದ್ದಾರೆ.

    ಬಾಗಿಲು ತೆರೆದು ಒಳಗೆ ಹೋಗುತ್ತಿದ್ದಂತೆ ಚೂರು ಚೂರಾದ ವಸ್ತುಗಳು ಹಾಗೂ ಗೋಡೆ ಕಪ್ಪಾಗಿರುವುದನ್ನು ಕಂಡಿದ್ದಾರೆ. ಪ್ರಸನ್ನ, ಪತ್ನಿ ಅರ್ಚನಾ(32) ಹಾಗೂ ತಾಯಿ ರೇವತಿ(59) ಅವರ ದೇಹ ಮನೆಯ ವಿವಿಧ ಸ್ಥಳಗಳಲ್ಲಿ ಕಂಡಿವೆ. ಮನೆಯೊಳಗಿನ ರೆಫ್ರಿಜರೇಟರ್ ಸ್ಫೋಟಗೊಂಡಿದ್ದು, ರೆಫ್ರಿಜರೇಟರ್‍ನಿಂದ ಸ್ಫೋಟಗೊಂಡ ವಿಷಕಾರಿ ಅನಿಲದಿಂದ ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ.

  • ರೆಫ್ರಿಜರೇಟರ್ ಸ್ಫೋಟಗೊಂಡು ಯುವತಿ ದುರ್ಮರಣ

    ರೆಫ್ರಿಜರೇಟರ್ ಸ್ಫೋಟಗೊಂಡು ಯುವತಿ ದುರ್ಮರಣ

    ಹೈದರಾಬಾದ್: ರೆಫ್ರಿಜರೇಟರ್ ಸ್ಫೋಟಗೊಂಡ ಪರಿಣಾಮ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಬೊಂಗುಲೂರಿನಲ್ಲಿ ಗುರುವಾರ ನಡೆದಿದೆ.

    ದೀಪಿಕಾ ಮೃತ ದುರ್ದೈವಿ. ಈಕೆ ಶ್ರೀ ಇಂದು ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದಳು. ಗುರುವಾರ ದೀಪಿಕಾ ಕುಟುಂಬ ಸದಸ್ಯರೆಲ್ಲರೂ ಕಾರ್ಯಕ್ರಯಕ್ಕೆ ಹೋಗುತ್ತಿದ್ದರು. ಈ ವೇಳೆ ದೀಪಿಕಾ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ. ಪರೀಕ್ಷೆ ಇದೆ ಓದಬೇಕು ಒಬ್ಬಳೇ ಇರುತ್ತೇನೆ ಎಂದು ಹೇಳಿ ಕಾರ್ಯಕ್ರಮಕ್ಕೆ ಹೋಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದಳು.

    ಮನೆಯವರು ಹೋದ ಬಳಿಕ ತಿಂಡಿ ತಿನ್ನೋಣ ಎಂದು ರೆಫ್ರಿಜರೇಟರ್ ತೆರೆದಿದ್ದಾಳೆ. ಆಗ ಇದ್ದಕ್ಕಿದ್ದಂತೆ ಫ್ರಿಜ್ ಸ್ಫೋಟವಾಗಿದೆ. ಪರಿಣಾಮ ಮನೆಯ ತುಂಬಾ ಹೊಗೆ ಆವರಿಸಿ ಬೆಂಕಿ ಹೊತ್ತಿಕೊಂಡಿದೆ. ಇತ್ತ ಫ್ರೀಜ್ ಸ್ಫೋಟಕ್ಕೆ ದೀಪಿಕಾ ಜೀವಂತವಾಗಿ ಸುಟ್ಟು ಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    ಮನೆಯಲ್ಲಿ ಹೊಗೆ ತುಂಬಿಕೊಂಡಿದ್ದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ದೌಡಾಯಿಸಿ ದೀಪಿಕಾ ಕುಟುಂಬದವರಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ ದೀಪಿಕಾ ಮನೆಯವರು ಹಿಂದಿರುಗಿ ಬಂದು ನೋಡಿದಾಗ ದೀಪಿಕಾ ಮೃತ ದೇಹವು ಸಂಪೂರ್ಣ ಸುಟ್ಟು ಹೋಗಿದ್ದ ಸ್ಥಿತಿಯಲ್ಲಿ ಕಂಡುಬಂದಿದೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಇದ್ದಕ್ಕಿದ್ದಂತೆ ರೆಫ್ರಿಜರೇಟರ್ ಹೇಗೆ ಸ್ಫೋಟಗೊಂಡಿತ್ತು. ಇದಕ್ಕೆ ಕಾರಣವೇನು? ಎಂಬುದು ತನಿಖೆಯ ನಂತರ ತಿಳಿದು ಬರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಫ್ರಿಡ್ಜ್!- ವಿಡಿಯೋ

    ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಫ್ರಿಡ್ಜ್!- ವಿಡಿಯೋ

    ಬೀಜಿಂಗ್: ಸಾಮಾನ್ಯವಾಗಿ ಮೊಬೈಲ್ ಬ್ಲಾಸ್ಟ್ ಆಗಿರುವ ಸುದ್ದಿ ಕೇಳಿರ್ತೀರ. ಆದರೆ ಚೀನಾದ ಕೆಫೆಯೊಂದರಲ್ಲಿ ಫ್ರಿಡ್ಜ್ ವೊಂದು ಸ್ಫೋಟಗೊಂಡ ಘಟನೆ ನಡೆದಿದೆ.

    ಮಾರ್ಚ್ 19ರಂದು ಚೀನಾದ ಪಿಂಗ್‍ದಿನ್‍ಶಾನ್ ಸಿಟಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಫೋಟದ ದೃಶ್ಯ ಸೆರೆಯಾಗಿದೆ. ಈ ವಿಡಿಯೋವನ್ನು ಇದೀಗ ಇಲ್ಲಿನ ಮಾಧ್ಯಮವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ.

    ಚೀನಾದ ಇಂಟರ್ ನೆಟ್ ಕೆಫೆಯೊಂದರಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯಾವಳಿಗಳು ಸೆರೆಯಾಗಿ ಇದೀಗ ವಿಡಿಯೋ ವೈರಲ್ ಆಗಿದೆ. ಈ ಘಟನೆಯಲ್ಲಿ ಕೆಫೆಯಲ್ಲಿದ್ದವರಿಗೆ ಯಾವುದೇ ಪ್ರಾಣಾಹಾನಿ ಆಗಿಲ್ಲ ಎಂದು ವರದಿಯಾಗಿದೆ.

    ಈ ವಿಡಿಯೋ ಸುಮಾರು 30 ಸೆಕೆಂಡ್‍ಗಳಿದ್ದು, ಗ್ರಾಹಕರೊಬ್ಬರು ಕ್ಯಾಶ್ ಕೌಂಟರ್ ಬಳಿ ನಡೆದುಕೊಂಡು ಹೋಗುವಾಗ ಆತನ ಹಿಂದೆ ಇದ್ದ ಫ್ರಿಡ್ಜ್ ಸ್ಫೋಟಗೊಂಡಿದೆ. ಬೆಂಕಿ ಹೊತ್ತಿಕೊಂಡು ಫ್ರಿಡ್ಜ್ ಸ್ಫೋಟವಾಗುತ್ತಿದ್ದಂತೆ ಅಲ್ಲಿದ್ದ ಗ್ರಾಹಕರು ಓಡಿ ಹೋಗಿದ್ದಾರೆ.

    ಸದ್ಯ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.