Tag: reeshma nanaiah

  • KD ಚಿತ್ರದ ಸ್ಪೆಷಲ್‌ ವಿಡಿಯೋ ಔಟ್- ಮಸ್ತ್ ಆಗಿದೆ ಮಚ್ಚಲಕ್ಷ್ಮಿಯ ಅವತಾರ

    KD ಚಿತ್ರದ ಸ್ಪೆಷಲ್‌ ವಿಡಿಯೋ ಔಟ್- ಮಸ್ತ್ ಆಗಿದೆ ಮಚ್ಚಲಕ್ಷ್ಮಿಯ ಅವತಾರ

    ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯಗೆ (Reeshma Nanaiah) ಇಂದು (ಏ.28) 23ನೇ ವರ್ಷದ ಜನ್ಮದಿನದ (Birthday) ಸಂಭ್ರಮ. ಈ ಹಿನ್ನೆಲೆ ‘ಕೆಡಿ’ ಚಿತ್ರದ ವಿಶೇಷ ವಿಡಿಯೋವೊಂದನ್ನು ಶೇರ್ ಮಾಡಿ ನಾಯಕಿ ರೀಷ್ಮಾಗೆ ಡೈರೆಕ್ಟರ್ ಪ್ರೇಮ್ (Prem) ಶುಭಕೋರಿದ್ದಾರೆ. ಇದನ್ನೂ ಓದಿ:ಭಾರತ ಹಿಂದೂಗಳಂತೆ ಮುಸ್ಲಿಮರಿಗೂ ಸೇರಿದೆ – ಪಹಲ್ಗಾಮ್ ದಾಳಿ ಬಗ್ಗೆ ರಾಖಿ ಸಾವಂತ್ ಮಾತು

    ಧ್ರುವ ಸರ್ಜಾ ನಟನೆಯ ‘ಕೆಡಿ’ (KD) ಚಿತ್ರಕ್ಕೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದು, ಈ ಚಿತ್ರದ ಶೂಟಿಂಗ್ ಸಮಯದಲ್ಲಿ ತೆಗೆದಿರುವ ವಿಡಿಯೋ ಕ್ಲೀಪ್‌ಗಳನ್ನು ಡೈರೆಕ್ಟರ್ ಶೇರ್ ಮಾಡಿ, ನಟಿಗೆ ವಿಶೇಷವಾಗಿ ನಿರ್ದೇಶಕ ಪ್ರೇಮ್ ಶುಭಕೋರಿದ್ದಾರೆ. ಹ್ಯಾಪಿ ಬರ್ತ್ಡೇ ಮಗನೇ ಎಂದು ರೀಷ್ಮಾಗೆ ಹಾರೈಸಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ತುಂಬಾ ಕ್ರೂರವಾಗಿ ಸಾಯಿಸಿದ್ದಾರೆ: ಉಗ್ರರ ದಾಳಿ ಬಗ್ಗೆ ರಾಗಿಣಿ ಕಿಡಿ

     

    View this post on Instagram

     

    A post shared by Prem❣️s (@directorprems)

    ರೀಷ್ಮಾ ನಾಣಯ್ಯ ಅವರು ಧ್ರುವಗೆ (Dhruva Sarja) ಜೋಡಿಯಾಗಿ ನಟಿಸಿದ್ದಾರೆ. ಮಚ್ಚಲಕ್ಷ್ಮಿ ಎಂಬ ರಗಡ್ ಆಗಿರೋ ಪಾತ್ರದಲ್ಲಿ ಅವರು ಜೀವ ತುಂಬಿದ್ದಾರೆ. ಸದ್ಯ ಸೆಟ್‌ನಲ್ಲಿ ತೆಗೆದಿರುವ ನಟಿಯ ವಿಡಿಯೋ ತುಣುಕುಗಳು ಕ್ಯೂಟ್ ಆಗಿ ಮೂಡಿ ಬಂದಿದೆ.

    ಈ ಚಿತ್ರದಲ್ಲಿ ಧ್ರುವ, ರೀಷ್ಮಾ ಜೊತೆ ಶಿಲ್ಪಾ ಶೆಟ್ಟಿ, ರವಿಚಂದ್ರನ್, ಸಂಜಯ್ ದತ್, ರಮೇಶ್ ಅರವಿಂದ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಪ್ರೇಮ್ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸದ್ಯದಲ್ಲೇ ಸಿನಿಮಾದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

    ಅಂದಹಾಗೆ, ‘ಕೆಡಿ’ ಸಿನಿಮಾದ ಜೊತೆ ಡಾಲಿಗೆ ನಾಯಕಿಯಾಗಿ ‘ಅಣ್ಣ ಇನ್ ಮೆಕ್ಸಿಕೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • KD ಲೇಡಿ ರೀಷ್ಮಾಗೆ ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಎಂದ ಧ್ರುವ ಸರ್ಜಾ

    KD ಲೇಡಿ ರೀಷ್ಮಾಗೆ ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಎಂದ ಧ್ರುವ ಸರ್ಜಾ

    ಧ್ರುವ ಸರ್ಜಾ (Dhruva Sarja) ನಟನೆಯ ಪ್ಯಾನ್‌ ಇಂಡಿಯಾ ‘ಕೆಡಿ’ (KD) ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ರೀಷ್ಮಾ ನಾಣಯ್ಯಗೆ (Reeshma Nanaiah) ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಎನ್ನುತ್ತಾ ಧ್ರುವ ಸರ್ಜಾ ಹೆಜ್ಜೆ ಹಾಕಿದ್ದಾರೆ. ಈ ಸಾಂಗ್ ಸಖತ್ ಕ್ರೇಜಿ ಆಗಿ ಮೂಡಿ ಬಂದಿದೆ. ಇದು ಫ್ಯಾನ್ಸ್ ಸಖತ್ ಇಷ್ಟ ಆಗಿದೆ.

    ‘ಕೆಡಿ’ ಸಿನಿಮಾದಲ್ಲಿ ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಹಾಡಿಗೆ ಧ್ರುವ ಸರ್ಜಾ ಮತ್ತು ನಾಯಕಿ ರೀಷ್ಮಾ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಸಿನಿಮಾದಲ್ಲಿನ ರಿಯಲ್ ಲುಕ್ ರಿವೀಲ್ ಮಾಡದೆ ಇಬ್ಬರೂ ಟ್ರ್ಯಾಕ್‌ ಸೂಟ್‌ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಪ್ರೇಮ್ ಬರೆದಿರುವ ಕ್ಯಾಚಿ ಲಿರಿಕ್ಸ್‌ಗೆ ಮಿಕಾ ಸಿಂಗ್ ಸೊಗಸಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗೀನ ಜನರೇಷನ್‌ ಯೂತ್ಸ್‌ಗೆ ಹಾಡು ಕನೆಕ್ಟ್‌ ಆಗೋ ವಿಭಿನ್ನವಾಗಿ ಸಾಂಗ್‌ ಮಾಡಿದ್ದಾರೆ.

     

    View this post on Instagram

     

    A post shared by KVN Productions (@kvn.productions)

    ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ಜೊತೆ ಬಾಲಿವುಡ್ ನಟ ಸಂಜಯ್ ದತ್ (Sanjay Dutt), ಶಿಲ್ಪಾ ಶೆಟ್ಟಿ (Shilpa Shetty), ರವಿಚಂದ್ರನ್, ರಮೇಶ್ ಅರವಿಂದ್, ನೋರಾ ಫತೇಹಿ ನಟಿಸಿದ್ದಾರೆ. ಕೆವಿಎನ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಸದ್ಯದಲ್ಲೇ ರಿಲೀಸ್ ಡೇಟ್ ಬಗ್ಗೆ ಚಿತ್ರತಂಡ ರಿವೀಲ್ ಮಾಡಲಿದೆ.

  • ಉಪೇಂದ್ರ ನಟನೆಯ UI ನೋಡಲು ಬಂದ ಸ್ಯಾಂಡಲ್‌ವುಡ್ ತಾರೆಯರು

    ಉಪೇಂದ್ರ ನಟನೆಯ UI ನೋಡಲು ಬಂದ ಸ್ಯಾಂಡಲ್‌ವುಡ್ ತಾರೆಯರು

    ರಿಯಲ್ ಸ್ಟಾರ್ ಉಪೇಂದ್ರ ನಟನೆಯ UI ಸಿನಿಮಾ ಡಿ.20ರಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಇಂದು (ಡಿ.23) ಓರಾನ್ ಮಾಲ್‌ನಲ್ಲಿ ಈ ಚಿತ್ರದ ಪ್ರಿಮಿಯರ್‌ಗೆ ಸ್ಯಾಂಡಲ್‌ವುಡ್ ನಟ- ನಟಿಯರು ಭಾಗಿಯಾಗಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಧೀಮಂತ ವ್ಯಕ್ತಿತ್ವ ಎಸ್‌.ಎಂ. ಕೃಷ್ಣ ಅವರದಾಗಿತ್ತು: ಯಶ್

    ಉಪೇಂದ್ರ ತಂಡದ ಜೊತೆ ಯುಐ ಸಿನಿಮಾ ವೀಕ್ಷಿಸಲು ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಮೇಘನಾ ಗಾಂವ್ಕರ್, ಬಿಗ್ ಬಾಸ್ ಖ್ಯಾತಿಯ ಹಂಸ, ಪ್ರಿಯಾಂಕಾ ಉಪೇಂದ್ರ, ಅನುಪ್ರಭಾಕರ್ ದಂಪತಿ, ಸೋನು ಗೌಡ, ಗುರುಕಿರಣ್, ಡಿ.ವಿ ಸದಾನಂದ ಗೌಡ, ಆರ್.‌ ಚಂದ್ರು ಸೇರಿದಂತೆ ಅನೇಕರು ಆಗಮಿಸಿದ್ದಾರೆ.

    ಅಂದಹಾಗೆ, UI ಚಿತ್ರ ನೋಡಿ ಫ್ಯೂಚರ್ ಫಿಲ್ಮ್, ಮತ್ತೊಮ್ಮೆ ಸಿನಿಮಾ ನೋಡಿದ್ರೆನೇ ಅರ್ಥವಾಗೋದು ಎಂದು ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ. ಎಂದಿಗೂ ಕಾಯಕವೇ ಕೈಲಾಸ, ಕೆಲಸ ಮಾಡಿ ಅಂತ ಹೇಳಿದ್ದಾರೆ. ಜೀವನದ ಬಗ್ಗೆ ಫೋಕಸ್ ಮಾಡಿ ಅನ್ನುವ ಸಂದೇಶ ಜನರಿಗೆ ನಟ ಕೊಟ್ಟಿದ್ದಾರೆ. ಉಪೇಂದ್ರ ನಟನೆ, ನಿರ್ದೇಶನಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

    ಇನ್ನೂ 2040 ಭವಿಷ್ಯದ ಅಸಲಿ ಕಥೆಯೊಂದಿಗೆ UI ಸಿನಿಮಾ ಮೂಲಕ ಉಪೇಂದ್ರ ಅಬ್ಬರಿಸಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ (Reeshma Nanaiah) ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • UI ಚಿತ್ರವನ್ನು ಮೆಚ್ಚಿದ ಗ್ರಾಮಿ ಅವಾರ್ಡ್ಸ್ ವಿಜೇತ ರಿಕ್ಕಿ ಕೇಜ್

    UI ಚಿತ್ರವನ್ನು ಮೆಚ್ಚಿದ ಗ್ರಾಮಿ ಅವಾರ್ಡ್ಸ್ ವಿಜೇತ ರಿಕ್ಕಿ ಕೇಜ್

    ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಟನೆಯ UI ಚಿತ್ರ ಡಿ.20ರಂದು ರಿಲೀಸ್ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಕೋಟಿಗಟ್ಟಲೇ ಕಲೆಕ್ಷನ್ ಮಾಡುತ್ತಿದೆ. ಇದೀಗ ಯುಐ ಸಿನಿಮಾವನ್ನು ಗ್ರಾಮಿ ಅವಾರ್ಡ್ಸ್ ವಿಜೇತ ರಿಕ್ಕಿ ಕೇಜ್ (Ricky Kej) ವೀಕ್ಷಿಸಿ ಕೊಂಡಾಡಿದ್ದಾರೆ. ಯುಐ ಅದ್ಭುತವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಯುಐಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಗ್ರಾಮಿ ಅವಾರ್ಡ್ಸ್ ವಿಜೇತ ರಿಕ್ಕಿ ಕೇಜ್ ಯುಐ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರ ಅದ್ಭುತವಾಗಿದೆ. ಬೃಹತ್ ಬ್ಲಾಕ್ ಬಸ್ಟರ್ ಚಿತ್ರ ಇದಾಗಿದೆ. ಯುಐ ಅನನ್ಯವಾಗಿ ಮೂಡಿ ಬಂದಿದೆ. ನಾನು ಸಿನಿಮಾ ನೋಡಿದ್ದೇನೆ,ನೀವು ನೋಡಿ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಕಿಚ್ಚ

    ಅಂದಹಾಗೆ, UI ಚಿತ್ರ ನೋಡಿ ಫ್ಯೂಚರ್ ಫಿಲ್ಮ್, ಮತ್ತೊಮ್ಮೆ ಸಿನಿಮಾ ನೋಡಿದ್ರೆನೇ ಅರ್ಥವಾಗೋದು ಎಂದು ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ. ಎಂದಿಗೂ ಕಾಯಕವೇ ಕೈಲಾಸ, ಕೆಲಸ ಮಾಡಿ ಅಂತ ಹೇಳಿದ್ದಾರೆ. ಜೀವನದ ಬಗ್ಗೆ ಫೋಕಸ್ ಮಾಡಿ ಅನ್ನುವ ಸಂದೇಶ ಜನರಿಗೆ ನಟ ಕೊಟ್ಟಿದ್ದಾರೆ. ಉಪೇಂದ್ರ ನಟನೆ, ನಿರ್ದೇಶನಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

    ಇನ್ನೂ 2040 ಭವಿಷ್ಯದ ಅಸಲಿ ಕಥೆಯೊಂದಿಗೆ UI ಸಿನಿಮಾ ಮೂಲಕ ಉಪೇಂದ್ರ ಅಬ್ಬರಿಸಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • UI: ಉಪೇಂದ್ರ, ಶಿವಣ್ಣ ಫೋಟೋ ಇಟ್ಟು ಪೂಜೆ- ಫ್ಯಾನ್ಸ್ ಭರ್ಜರಿ ಸೆಲೆಬ್ರೇಶನ್

    UI: ಉಪೇಂದ್ರ, ಶಿವಣ್ಣ ಫೋಟೋ ಇಟ್ಟು ಪೂಜೆ- ಫ್ಯಾನ್ಸ್ ಭರ್ಜರಿ ಸೆಲೆಬ್ರೇಶನ್

    ಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡಿರುವ UI ಸಿನಿಮಾ ಡಿ.20ರಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಉಪ್ಪಿ ಎಂಟ್ರಿ ನೋಡಿ ಫ್ಯಾನ್ಸ್ ಅಬ್ಬರ, ಸೆಲೆಬ್ರೇಶನ್ ಎರಡು ಜೋರಾಗಿದೆ. ಸಿನಿಮಾ ರಿಲೀಸ್ ಸಂಭ್ರಮದ ನಡುವೆ ಉಪೇಂದ್ರ ಮತ್ತು ಶಿವಣ್ಣ ಫೋಟೋ ಇಟ್ಟು ವಿಶೇಷ ಪೂಜೆ ಮಾಡಿದ್ದಾರೆ. ಇದನ್ನೂ ಓದಿ:UI ಅಬ್ಬರ: ಉಪ್ಪಿ ನಟನೆ, ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ಕೊಟ್ಟ ಪ್ರೇಕ್ಷಕರು

    UI ರಿಲೀಸ್ ಸಮಯದಲ್ಲೇ ಸಂತೋಷ್ ಥಿಯೇಟರ್ ಮುಂದೆ ಅಭಿಮಾನಿ ಒಬ್ಬರು ಶಿವಣ್ಣ (Shivarajkumar) ಸರ್ಜರಿ ಬಳಿಕ ಆರೋಗ್ಯವಾಗಿ ಭಾರತಕ್ಕೆ ಹಿಂದಿರುಗಲಿ ಎಂದು ಪೂಜೆ ಮಾಡಿಸಿದ್ದಾರೆ. ಚಿತ್ರಮಂದಿರದ ಮುಂದೆ ಶಿವಣ್ಣ, ಉಪೇಂದ್ರ ಅವರ ಫೋಟೋಗಳನ್ನಿಟ್ಟು ಹೋಮ ಮಾಡಿದ್ದಾರೆ. ಮೂವರು ಪೂಜಾರಿಗಳು ಹೋಮ ಕುಂಡಕ್ಕೆ ತುಪ್ಪ ಸುರಿದು ಮಂತ್ರ ಪಠಿಸಿದ್ದಾರೆ.

    UI ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ತಲೆಗೆ ಉಪೇಂದ್ರ ಹುಳ ಬಿಟ್ಟಿದ್ದಾರೆ. ಚಿತ್ರದ ಕಥೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇಂದು ಬೆಳಗ್ಗೆ 6:30ರಿಂದಲೇ ಚಿತ್ರದ ಪ್ರದರ್ಶನ ಶುರುವಾಗಿದೆ. ‘ಯುಐ’ ಚಿತ್ರ ನೋಡಿ ಫ್ಯೂಚರ್ ಫಿಲ್ಮ್, ಮತ್ತೊಮ್ಮೆ ಸಿನಿಮಾ ನೋಡಿದ್ರೆನೇ ಅರ್ಥವಾಗೋದು ಎಂದು ಪ್ರೇಕ್ಷಕರಿಂದ ರೆಸ್ಪಾನ್ಸ್ ಬಂದಿದೆ. ಎಂದಿಗೂ ಕಾಯಕವೇ ಕೈಲಾಸ, ಕೆಲಸ ಮಾಡಿ ಅಂತ ಹೇಳಿದ್ದಾರೆ. ಜೀವನದ ಬಗ್ಗೆ ಫೋಕಸ್ ಮಾಡಿ ಅನ್ನುವ ಸಂದೇಶ ಜನರಿಗೆ ಕೊಟ್ಟಿದ್ದಾರೆ. ಉಪೇಂದ್ರ ನಟನೆ, ನಿರ್ದೇಶನಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

    ಇನ್ನೂ 2040 ಭವಿಷ್ಯದ ಅಸಲಿ ಕಥೆಯೊಂದಿಗೆ ಯುಐ ಸಿನಿಮಾ ಮೂಲಕ ಉಪೇಂದ್ರ ಅಬ್ಬರಿಸಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ (Reeshma Nanaiah) ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • UI ಫ್ಯಾನ್ಸ್‌ಗೆ ಉಪ್ಪಿ ಪ್ರಶ್ನೆ- ಕೊನೆಯ ಶಾಟ್ ಡಿಕೋಡ್ ಮಾಡಿ ಎಂದ ನಟ

    UI ಫ್ಯಾನ್ಸ್‌ಗೆ ಉಪ್ಪಿ ಪ್ರಶ್ನೆ- ಕೊನೆಯ ಶಾಟ್ ಡಿಕೋಡ್ ಮಾಡಿ ಎಂದ ನಟ

    ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿ, ನಿರ್ದೇಶನ ‘ಯುಐ’ (UI) ಸಿನಿಮಾ ಇಂದು (ಡಿ.20) ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಈ ಸಿನಿಮಾ ನಟ ಮತ್ತೆ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿರೋದಂತೂ ಗ್ಯಾರಂಟಿ. ‘ಯುಐ’ ರಿಲೀಸ್ ಬಳಿಕ ಫ್ಯಾನ್ಸ್ ಮುಂದೆ ನಟ ಪ್ರಶ್ನೆ ಇಟ್ಟಿದ್ದಾರೆ. ಕೊನೆಯ ಶಾಟ್ ಅನ್ನು ಡಿಕೋಡ್ ಮಾಡಿ ಎಂದು ಸವಾಲೆಸೆದಿದ್ದಾರೆ.

    ಕಾತುರದಿಂದ ಕಾಯುತ್ತಿದ್ದೇನೆ. ಯುಐ ಚಿತ್ರದ ಎಷ್ಟು ಸೀನ್‌ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತೀರಾ ಎಂದು ಪ್ರಶ್ನಿಸಿ ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.‌ ಇದನ್ನೂ ಓದಿ:ವ್ಯವಹಾರದಲ್ಲಿ ಲಾಸ್‌ ಆಗಿದ್ದಕ್ಕೆ ಬಿಗ್‌ ಬಾಸ್‌ನಿಂದ ನಿರ್ಗಮಿಸಿದ್ರಾ?: ಗೋಲ್ಡ್‌ ಸುರೇಶ್ ಸ್ಪಷ್ಟನೆ

    ಯುಐ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ತಲೆಗೆ ಉಪೇಂದ್ರ ಹುಳ ಬಿಟ್ಟಿದ್ದಾರೆ. ಚಿತ್ರದ ಕಥೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇಂದು ಬೆಳಗ್ಗೆ 6:30ರಿಂದಲೇ ಚಿತ್ರದ ಪ್ರದರ್ಶನ ಶುರುವಾಗಿದೆ. ‘ಯುಐ’ ಚಿತ್ರ ನೋಡಿ ಫ್ಯೂಚರ್ ಫಿಲ್ಮ್, ಮತ್ತೊಮ್ಮೆ ಸಿನಿಮಾ ನೋಡಿದ್ರೆನೇ ಅರ್ಥವಾಗೋದು ಎಂದು ಪ್ರೇಕ್ಷಕರಿಂದ ರೆಸ್ಪಾನ್ಸ್ ಬಂದಿದೆ. ಎಂದಿಗೂ ಕಾಯಕವೇ ಕೈಲಾಸ, ಕೆಲಸ ಮಾಡಿ ಅಂತ ಹೇಳಿದ್ದಾರೆ. ಜೀವನದ ಬಗ್ಗೆ ಫೋಕಸ್ ಮಾಡಿ ಅನ್ನುವ ಸಂದೇಶ ಜನರಿಗೆ ಕೊಟ್ಟಿದ್ದಾರೆ. ಉಪೇಂದ್ರ ನಟನೆ, ನಿರ್ದೇಶನಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

    ಇನ್ನೂ 2040 ಭವಿಷ್ಯದ ಅಸಲಿ ಕಥೆಯೊಂದಿಗೆ ಯುಐ ಸಿನಿಮಾ ಮೂಲಕ ಉಪೇಂದ್ರ ಅಬ್ಬರಿಸಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ (Reeshma Nanaiah) ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • ಹೊರದೇಶದಲ್ಲೂ UI ಹವಾ: ಉಪ್ಪಿ ಸಿನಿಮಾದ ಟಿಕೆಟ್ ಸೋಲ್ಡ್ ಔಟ್

    ಹೊರದೇಶದಲ್ಲೂ UI ಹವಾ: ಉಪ್ಪಿ ಸಿನಿಮಾದ ಟಿಕೆಟ್ ಸೋಲ್ಡ್ ಔಟ್

    ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡುತ್ತಿರುವ UI ಚಿತ್ರ ಹೊರದೇಶದಲ್ಲೂ ಹವಾ ಜೋರಾಗಿದೆ. ರಿಲೀಸ್‌ಗೂ ಮೊದಲೇ ಮುಂಗಡವಾಗಿ ಚಿತ್ರದ ಟಿಕೆಟ್‌ಗಳು ಸೋಲ್ಡ್ ಔಟ್ ಆಗ್ತಿದೆ. ಇದನ್ನೂ ಓದಿ:‘ಪುಷ್ಪ 2’ ಸಕ್ಸಸ್ ಬಳಿಕ ಬಿಗ್ ಚಾನ್ಸ್- ಪ್ರಭಾಸ್ ಸಿನಿಮಾದಲ್ಲಿ ತಾರಕ್ ಪೊನ್ನಪ್ಪ

    ‘ಯುಐ’ ಚಿತ್ರ ಇದೇ ಡಿ.20ರಂದು ಬಹುಭಾಷೆಗಳಲ್ಲಿ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಅದರಲ್ಲೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಆಗಿದೆ. ಮುಂಗಡವಾಗಿ ಟಿಕೆಟ್ ಬುಕ್ ಆಗುವ ಮೂಲಕ ಹೌಸ್‌ಫುಲ್ ಆಗಿದೆ.

    ಇನ್ನೂ ನಿನ್ನೆಯಷ್ಟೇ, ಬಾಲಿವುಡ್ ನಟ ಆಮೀರ್ ಖಾನ್ ಅವರು ಉಪೇಂದ್ರಗೆ ನಾನು ಅಭಿಮಾನಿ ಎಂದು ಹಾಡಿ ಹೊಗಳಿದರು. ‘ಯುಐ’ ನೋಡಿ ಸಿನಿಮಾವನ್ನು ಬೆಂಬಲಿಸಿ ಎಂದು ನಟ ಮನವಿ ಮಾಡಿದರು. ಇದನ್ನೂ ಓದಿ:ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್

     

    View this post on Instagram

     

    A post shared by Upendra Kumar (@nimmaupendra)

    ಅಂದಹಾಗೆ, UI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.

    ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • 2040ಕ್ಕೆ ಜಗತ್ತು ಹೇಗಿರುತ್ತದೆ? – UI ಸೀಕ್ರೆಟ್‌ ಬಿಚ್ಚಿಟ್ಟ ರಿಯಲ್‌ ಸ್ಟಾರ್

    2040ಕ್ಕೆ ಜಗತ್ತು ಹೇಗಿರುತ್ತದೆ? – UI ಸೀಕ್ರೆಟ್‌ ಬಿಚ್ಚಿಟ್ಟ ರಿಯಲ್‌ ಸ್ಟಾರ್

    ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡಿರುವ UI ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಎಐ ಯುಗದಲ್ಲಿ ಯುಐ ಜಗತ್ತು 2040ರಲ್ಲಿ ಹೇಗಿರುತ್ತದೆ? ಟ್ರೈಲರ್ ಉಪ್ಪಿ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಇಂದು (ಡಿ.2) ನಡೆದ ಸುದ್ದಿಗೋಷ್ಠಿಯಲ್ಲಿ ‘ಯುಐ’ ಚಿತ್ರದ ಸೀಕ್ರೆಟ್ ಅನ್ನು ನಟ ರಿವೀಲ್ ಮಾಡಿದ್ದಾರೆ.

    ‘ಯುಐ’ ಸಿನಿಮಾ ಇದು ತಲೆಗೆ ಹುಳ ಬಿಡೋ ಸಿನಿಮಾ ಅಲ್ಲ. ಹುಳ ತೆಗೆಯೋ ಸಿನಿಮಾ ಎಂದಿದ್ದಾರೆ. ನಿಮ್ಮ ತಲೆಯಲ್ಲಿ ಹುಳ ಎಷ್ಟಿದೆ ಅನ್ನೋದ್ದರ ಮೇಲೆ ಸಿನಿಮಾ ಎಷ್ಟು ಸಲ ನೋಡಬೇಕು ಅನ್ನೋದನ್ನ ನೀವು ನಿರ್ಧಾರ ಮಾಡಬೇಕು. ‘ಯು’ ಮತ್ತೆ ‘ಐ’ ಸೇರಿದ್ರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ. ಇದನ್ನೂ ಓದಿ:‘ಸಾಯಬೇಕು ಅಂದ್ರೆ ನೀನು ಸಾಯಿ’- ಶೋಭಿತಾ ಬರೆದ ಡೆತ್‌ನೋಟ್‌ನಲ್ಲಿ ಹೊಸ ಟ್ವಿಸ್ಟ್

    ನಾನು ವಾರ್ನರ್ (ಟ್ರೈಲರ್) ತೋರಿಸಿ ಹೆದರಿಸುತ್ತಿಲ್ಲ. ನನ್ನ ದೃಷ್ಟಿಕೋನದಲ್ಲಿ ಸಿನಿಮಾ ಮಾಡಿಲ್ಲ. ನಿಮ್ಮ ಎಲ್ಲರ ಯೋಚನೆ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಪ್ರೇಕ್ಷಕರು ಯಾವತ್ತೂ ತಪ್ಪು ಮಾಡಲ್ಲ. ಅವರ ನಿರ್ಧಾರ ಸರಿಯಾಗಿರುತ್ತದೆ. ಆ ನಂಬಿಕೆಯಲ್ಲೇ ಸಿನಿಮಾ ಮಾಡ್ತೀನಿ. ನಾನು ಕನ್ಫೂಸ್ ಮಾಡಲ್ಲ. ಕನ್ವಿನ್ಸ್ ಮಾಡೋಕೆ ಪ್ರಯತ್ನಪಡುತ್ತೇನೆ. ಸಿನಿಮಾ ಗೆಲ್ಲಿಸೋದು ಪ್ರೇಕ್ಷಕರ ಕೈಯಲ್ಲಿರುತ್ತದೆ ಎಂದು ಉಪೇಂದ್ರ ಮಾತನಾಡಿದರು.

    ಅಂದಹಾಗೆ, AI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತಾ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.

    ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • UI ಚಿತ್ರ ‘ಸೂಪರ್’ ಸಿನಿಮಾದ ಮುಂದುವರೆದ ಭಾಗನಾ?- ಉಪೇಂದ್ರ ಹೇಳೋದೇನು?

    UI ಚಿತ್ರ ‘ಸೂಪರ್’ ಸಿನಿಮಾದ ಮುಂದುವರೆದ ಭಾಗನಾ?- ಉಪೇಂದ್ರ ಹೇಳೋದೇನು?

    ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ‘ಯುಐ’ ಚಿತ್ರದ (UI) ವಾರ್ನರ್ (ಟ್ರೈಲರ್) ರಿಲೀಸ್ ಆಗಿದೆ. ಈ ಬೆನ್ನಲ್ಲೇ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿದ್ದು, ಸಿನಿಮಾ ಬಗ್ಗೆ ಹಲವು ವಿಚಾರಗಳನ್ನು ತಿಳಿಸಿದೆ. ‘ಯುಐ’ ಚಿತ್ರ ಸೂಪರ್ ಸಿನಿಮಾದ ಮುಂದುವರೆದ ಭಾಗನಾ? ಎಂದು ಕೇಳಲಾದ ಪ್ರಶ್ನೆಗೆ ಇಂಟರೆಸ್ಟಿಂಗ್ ಆಗಿ ಉಪೇಂದ್ರ ಉತ್ತರ ನೀಡಿದ್ದಾರೆ.

    2010ರ ‘ಸೂಪರ್’ (Super) ಸಿನಿಮಾದಲ್ಲಿ 2035ಕ್ಕೆ ಭಾರತ ಹೇಗಿರುತ್ತೆ ಎಂದು ತೋರಿಸಿದ್ದೀರಿ. ಈಗೀನ ‘ಯುಐ’ (UI) ಚಿತ್ರ 2040ರಲ್ಲಿ ಭಾರತ ಹೇಗಿರುತ್ತದೆ ಎಂಬುದು ತೋರಿಸಲು ಹೊರಟಿದ್ದೀರಾ, ಹಾಗಾದ್ರೆ UI ಚಿತ್ರ ಈ ಹಿಂದಿನ ಸೂಪರ್’ ಸಿನಿಮಾದ ಭಾಗನಾ? ಎಂದು ಸುದ್ದಿಗೋಷ್ಠಿಯಲ್ಲಿ ಉಪೇಂದ್ರಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ನಟ, ನೀವು ಹೇಗೆ ಬೇಕಾದರೂ ಅಂದುಕೊಳ್ಳಬಹುದು ಎಂದು ತಮಾಷೆಯಾಗಿ ಉತ್ತರ ನೀಡಿದ್ದಾರೆ.

     

    ಆ ನಂತರ ಆ ಚಿತ್ರದ ಕಥೆಗೂ ‘ಯುಐ’ಗೂ ಯಾವುದೇ ಸಂಬಂಧವಿಲ್ಲ. ‘ಯುಐ’ ಎಲ್ಲದ್ದಕ್ಕಿಂತ ವಿಭಿನ್ನವಾಗಿರುತ್ತದೆ. ಸಿನಿಮಾದಲ್ಲಿ ಟ್ವಿಸ್ಟ್ ಸಾಕಷ್ಟು ಇರುತ್ತದೆ. ನಮ್ಮ ಸಿನಿಮಾ ಕಥೆ ನಿಮ್ಮ ಮೇಲೆ ಡಿಫೆಂಡ್ ಆಗಿದೆ. ನೀವು ಅರ್ಥ ಮಾಡಿಕೊಳ್ಳುವುದರ ಮೇಲಿದೆ. ಇಡೀ ಸಿನಿಮಾ ಬೇರೆ ಬೇರೆ ಟಾಪಿಕ್ ಇರುತ್ತದೆ ಎಂದು ಉಪೇಂದ್ರ ಮಾತನಾಡಿದ್ದಾರೆ.

    ಅಂದಹಾಗೆ, ‘ಯುಐ’ ಸಿನಿಮಾ ವಾರ್ನರ್ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • ಉಪೇಂದ್ರ ನಟನೆಯ ‘ಯುಐ’ ವಾರ್ನರ್‌ ರಿಲೀಸ್

    ಉಪೇಂದ್ರ ನಟನೆಯ ‘ಯುಐ’ ವಾರ್ನರ್‌ ರಿಲೀಸ್

    ರಿಯಲ್‌ ಸ್ಟಾರ್‌ ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ವಾರ್ನರ್‌ (ಟ್ರೈಲರ್‌) ರಿಲೀಸ್‌ ಆಗಿದೆ. ಉಪೇಂದ್ರ ಸಿನಿಮಾಗಾಗಿ ಎದುರು ನೋಡುತ್ತಿದ್ದ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಉಪ್ಪಿ ಟ್ರೈಲರ್‌ನಲ್ಲಿ ಡಿಫರೆಂಟ್‌ ಗೆಟಪ್‌ ಮತ್ತು ಕಾನ್ಸೆಪ್ಟ್‌ನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ:Pushpa 2: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಸಿನಿಮಾಗೆ ಸಿಕ್ತು U/A ಸರ್ಟಿಫಿಕೇಟ್

    AI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್‌ ಆಗಿ ಮೂಡಿ ಬಂದಿದೆ.  ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್‌) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್‌ ಆಗಿ ಉಪೇಂದ್ರ ಡೈಲಾಗ್‌ ಹೊಡೆದಿದ್ದಾರೆ. ಗನ್‌ ಹಿಡಿದು ಜನಗಳ ಕಡೆ ಶೂಟ್‌ ಮಾಡುತ್ತ ಖಡಕ್‌ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.

    ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್‌ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ (Reeshma Nanaiah) ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.