Tag: Reena Dutt

  • ಮಾಜಿ ಪತ್ನಿಯರೊಡನೆ ಈದ್ ಹಬ್ಬ ಆಚರಿಸಿದ ಆಮೀರ್ ಖಾನ್

    ಮಾಜಿ ಪತ್ನಿಯರೊಡನೆ ಈದ್ ಹಬ್ಬ ಆಚರಿಸಿದ ಆಮೀರ್ ಖಾನ್

    ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಮನೆಯಲ್ಲಿ ಈದ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ಹಿನ್ನೆಲೆ ನಟ ಆಮೀರ್ ಮಾಜಿ ಪತ್ನಿಯರು ಕೂಡ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಹಬ್ಬದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ:ಅಂದು ಹೈದರಾಬಾದ್‌ನವಳು, ಇಂದು ಕರ್ನಾಟಕ: ರಶ್ಮಿಕಾ ಮಂದಣ್ಣ ಹೇಳಿಕೆ ವೈರಲ್

    ರಂಜಾನ್ ಹಬ್ಬವನ್ನು ಮಾಜಿ ಪತ್ನಿಯರಾದ ರೀನಾ ದತ್ (Reena Dutt) ಮತ್ತು ಕಿರಣ್ ರಾವ್ (Kiran Rao) ಜೊತೆ ನಟ ಸೆಲೆಬ್ರೇಟ್ ಮಾಡಿದ್ದಾರೆ. ಮಕ್ಕಳಾದ ಜುನೈದ್ ಖಾನ್, ಆಜಾದ್ ರಾವ್ ಖಾನ್, ಇರಾ ಖಾನ್ ಸೇರಿದಂತೆ ಮುಂತಾದವರು ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಹಬ್ಬದ ಖುಷಿಯನ್ನು ದುಪ್ಪಟ್ಟು ಮಾಡಿದ್ದಾರೆ.

    ಆಮೀರ್ ಖಾನ್ ಮಾಜಿ ಪತ್ನಿಯರಿಗೆ ಡಿವೋರ್ಸ್ ನೀಡಿದ್ದರೂ ಕೂಡ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಮಕ್ಕಳಿಗೆ ಯಾವುದೇ ಕೊರತೆ ಬರದೆ ಇರೋ ಹಾಗೆ ಪೋಷಕರಾಗಿ ಜವಾಬ್ದಾರಿ ನಿಭಾಯಿಸುರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:ದುನಿಯಾ ವಿಜಯ್ ನಿರ್ದೇಶನದ ಸಿನಿಮಾದಲ್ಲಿ ಉಮಾಶ್ರೀ

     

    View this post on Instagram

     

    A post shared by Manav Manglani (@manav.manglani)


    ಅಂದಹಾಗೆ, ಇತ್ತೀಚೆಗೆ ಬೆಂಗಳೂರಿನ ಬೆಡಗಿ ಗೌರಿಯೊಂದಿಗೆ ಡೇಟಿಂಗ್ ಮಾಡ್ತಿರೋದಾಗಿ ಆಮೀರ್ ಖಾನ್ ಅಧಿಕೃತವಾಗಿ ಘೋಷಿಸಿದ್ದರು. ಇದೀಗ ಗೌರಿಯೊಂದಿಗೆ ವಾಸಿಸುತ್ತಿರೋದಾಗಿ ನಟ ತಿಳಿಸಿದ್ದರು.

  • ಲಗಾನ್ ಚಿತ್ರಕ್ಕೆ ಎರಡು ದಶಕ : ಸಿನಿಮಾ ಸಕ್ಸಸ್ ಹಿಂದಿದ್ದಾರೆ ಆಮೀರ್ ಖಾನ್ ಮಾಜಿ ಪತ್ನಿ

    ಲಗಾನ್ ಚಿತ್ರಕ್ಕೆ ಎರಡು ದಶಕ : ಸಿನಿಮಾ ಸಕ್ಸಸ್ ಹಿಂದಿದ್ದಾರೆ ಆಮೀರ್ ಖಾನ್ ಮಾಜಿ ಪತ್ನಿ

    ಬಾಲಿವುಡ್ ನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಚಿತ್ರ ಆಮೀರ್ ಖಾನ್ ನಟನೆಯ ಲಗಾನ್. ಈ ಸಿನಿಮಾ ರಿಲೀಸ್ ಆಗಿ 21 ವರ್ಷಗಳ ಕಳೆದಿವು. ಆಮೀರ್ ಖಾನ್ ವೃತ್ತಿ ಬದುಕಿನ ಅಪರೂಪದ ಸಿನಿಮಾ ಇದಾಗಿದ್ದು, ಅವರ ವೃತ್ತಿ ಜೀವನವನ್ನೇ ಬದಲಿಸಿತು. ಹಾಗಾಗಿ ಈ ಸಿನಿಮಾದ ಮೇಲೆ ಆಮೀರ್ ಅವರಿಗೆ ವಿಶೇಷ ಅಭಿಮಾನವಿದೆ. ಹಾಗಾಗಿ ಎರಡು ದಶಕದ ನಂತರವೂ ಆ ಸಿನಿಮಾ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ ಆಮೀರ್.

    15 ಜೂನ್ 2001ರಲ್ಲಿ ತೆರೆಕಂಡ ಲಗಾನ್ ಸಿನಿಮಾ, ಭಾರತೀಯ ಯುವಕರಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿತ್ತು. ಅಶುತೋಷ್ ಗೋವಾರಿಕರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಚಿತ್ರದಲ್ಲಿ ಆಮೀರ್ ಜೊತೆ ಗ್ರೇಸಿಂಗ್ ಮತ್ತು ರಾಚೆಲ್ ಕೂಡ ನಟಿಸಿದ್ದರು. ಈ ಸಿನಿಮಾ ಭಾರತೀಯ ಸಿನಿಮಾ ರಂಗದ ಬಹುತೇಕ ದಾಖಲೆಗಳನ್ನು ಉಡಿಸ್ ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಲ್ ಮಾಡಿತ್ತು. ಇಂತಹ ಸಿನಿಮಾದ ಸಕ್ಸಸ್ಗೆ ತಮ್ಮ ಮಾಜಿ ಪತಿ ರೀನಾ ದತ್ ಕಾರಣ ಎಂದಿದ್ದಾರೆ ಆಮೀರ್ ಖಾನ್. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಆಮೀರ್ ಖಾನ್, ‘ಸಾಮಾನ್ಯವಾಗಿ ರೀನಾ ಸಿನಿಮಾಗಳಿಂದ ದೂರವೇ ಇರುತ್ತಾರೆ. ಅವರಿಗೆ ಚಿತ್ರರಂಗದಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಸಿನಿಮಾ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೂ, ಕೊಟ್ಟಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಈ ಗೆಲುವಿನ ಪಾಲಲ್ಲಿ ಅವರದ್ದೂ ಪಾಲು ಇದೆ ಎಂದು ಬರೆದುಕೊಂಡಿದ್ದಾರೆ.

    Live Tv

  • ಅಮೀರ್ ಖಾನ್ ಪುತ್ರಿ ಇರಾ ಪೂಲ್ ಸೈಡ್ ಬರ್ತ್‌ಡೇಗೆ ವ್ಯಾಪಕ ಟೀಕೆ- ಬಿಕಿನಿ ಬರ್ತ್‌ಡೇನಾ ಎಂದ ಕಾಲೆಳೆದ ನೆಟ್ಟಿಗರು

    ಅಮೀರ್ ಖಾನ್ ಪುತ್ರಿ ಇರಾ ಪೂಲ್ ಸೈಡ್ ಬರ್ತ್‌ಡೇಗೆ ವ್ಯಾಪಕ ಟೀಕೆ- ಬಿಕಿನಿ ಬರ್ತ್‌ಡೇನಾ ಎಂದ ಕಾಲೆಳೆದ ನೆಟ್ಟಿಗರು

    ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಬಾಲಿವುಡ್ ಹೆಸರಾಂತ ನಟ ಅಮೀರ್ ಖಾನ್ ಪುತ್ರಿ ಇರಾ ಅವರದ್ದೇ ಹವಾ. ಇರಾ ತಮ್ಮ 25ನೇ ವರ್ಷದ ಹುಟ್ಟು ಹಬ್ಬವನ್ನು ಪೂಲ್ ಸೈಡ್ ಆಚರಿಸಿದ್ದು, ಅವರು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಅವರ ಬಾಯ್ ಫ‍್ರೆಂಡ್ ಜತೆ ಅರೆ ಬೆತ್ತಲೆಯಾಗಿಯೇ ತಬ್ಬಿಕೊಂಡು ಮುತ್ತಿಟ್ಟಿದ್ದಾರೆ. ಅಂದು ಪಾರ್ಟಿಯಲ್ಲಿ ಸೇರಿದವರೆಲ್ಲ ಬಿಕಿನಿಯಲ್ಲೇ ಇದ್ದ ಕಾರಣಕ್ಕಾಗಿ ಇರಾ ವ್ಯಾಪಕ ಟೀಕೆಯನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ಮೊದಲು ಇರಾ ಅಪ್ಪ, ಅಮ್ಮ ಹಾಗೂ ಸಹೋದರ ಜತೆ ಕೇಕ್ ಕತ್ತಿರಿಸಿದ್ದಾರೆ. ಈ ವೇಳೆಯಲ್ಲೂ ಅವರು ಬಿಕಿನಿಯಲ್ಲೇ ಇದ್ದಾರೆ. ಅಮೀರ್ ಖಾನ್ ಮತ್ತು ಪುತ್ರ ಕೂಡ ಶರ್ಟ್ ಲೆಸ್ ಆಗಿದ್ದಾರೆ. ಅಲ್ಲದೇ, ಬಾಯ್ ಫ್ರೆಂಡ್ ಮತ್ತು ಫ್ರೆಂಡ್ಸ್ ಜತೆಯೂ ಇರುವಾಗ ಇರಾ ಅಷ್ಟೇ ಅಲ್ಲ, ಅಲ್ಲಿದ್ದ ಬಹುತೇಕರು ಅರೆಬೆತ್ತಲೆಯಲ್ಲೇ ಇದ್ದಾರೆ. ಹಾಗಾಗಿ ಆ ಫೋಟೋಗಳು ಟೀಕಾ ವಸ್ತುವಾಗಿವೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಅಮೀರ್ ಖಾನ್ ಮತ್ತು ಅಮೀರ್ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ. ವಿಚ್ಚೇದನದ ನಂತರವೂ ರೀನಾ ಮತ್ತು ಅಮೀರ್ ಒಂದೊಳ್ಳೆ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹಾಗಾಗಿ ಒಟ್ಟಿಗೆ ಸೇರಿ ಮಗಳ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಅಮೀರ್, ಅಮೀರ್ ಪುತ್ರ ಶರ್ಟ್ ಲೆಸ್ ಆಗಿದ್ದು, ಮಗಳು ಮಾತ್ರ ಬಿಕಿನಿಲ್ಲೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಆ ವಿಡಿಯೋವನ್ನು ಸ್ವತಃ ಅಮೀರ್ ಖಾನ್ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.  ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಇರಾ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಅಮೀರ್ ಖಾನ್, ರೀನಾ ದತ್ತ ಮತ್ತು ಅಮೀರ್ ಅವರ ಎರಡನೇ ಪತ್ನಿಯ ಮಗ ಅಜಾದ್ ಕೂಡ ಹಾಜರಿದ್ದು, ಇರಾ ಅವರ 25ನೇ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಅಲ್ಲದೇ, ಮಗಳಿಗೆ ವಿಶೇಷವಾಗಿ ಶುಭಾಶಯಗಳನ್ನೂ ಹೇಳಿದ್ದಾರೆ ಅಮೀರ್ ಖಾನ್. ಜೀವನ ಪೂರ್ತಿ ಸಂತೋಷವಾಗಿರು ಎಂದು ಹಾರೈಸಿದ್ದಾರೆ.

    ರೀನಾ ದತ್ ಮತ್ತು ಅಮೀರ್ ಖಾನ್ 1986ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಇರಾ ಮತ್ತು ಜುನೈದ್ ಖಾನ್ ಇಬ್ಬರು ಮಕ್ಕಳಿದ್ದಾರೆ. ಮದುವೆಯಾಗಿ ಒಂದೂವರೆ ದಶಕದ ನಂತರ ಈ ಜೋಡಿ ವಿಚ್ಚೇದನ ಪಡೆಯಿತು. ಆ ಬಳಿಕ ಅಮೀರ್ ಖಾನ್ ಅವರು ಕಿರಣ್ ರಾವ್ ಅವರ ಜತೆ ಹೊಸ ಜೀವನಕ್ಕೆ ಕಾಲಿಟ್ಟರು. ಈಗ ಕಿರಣ್ ರಾವ್ ಜೊತೆಯೂ ಅಮೀರ್ ಡೈವೋರ್ಸ್ ಪಡೆದುಕೊಂಡಿದ್ದಾರೆ.

  • ಬಿಕಿನಿಯಲ್ಲೇ ಕೇಕ್ ಕತ್ತರಿಸಿದ ಅಮೀರ್ ಖಾನ್ ಪುತ್ರಿ ಇರಾ

    ಬಿಕಿನಿಯಲ್ಲೇ ಕೇಕ್ ಕತ್ತರಿಸಿದ ಅಮೀರ್ ಖಾನ್ ಪುತ್ರಿ ಇರಾ

    ಬಾಲಿವುಡ್ ನ ಹೆಸರಾಂತ ನಟ ಅಮೀರ್ ಖಾನ್ ಪುತ್ರಿ ಇರಾ 25ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ವಿಶೇಷ ಅಂದರೆ, ಬಿಕಿನಿಯಲ್ಲೇ ಅವರು ಕೇಕ್ ಕಟ್ ಮಾಡುವ ಮೂಲಕ ಟ್ರೋಲ್ ಗೆ ಆಹಾರವಾಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಂತೂ ವೈರಲ್ ಆಗಿದೆ. ಇದು ನಿಜವಾದ ಫೋಟೋನಾ ಅಥವಾ ಎಡಿಟ್ ಮಾಡಲಾಗಿದೆ ಎಂಬ ಅನುಮಾನವನ್ನೂ ಹುಟ್ಟು ಹಾಕಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಅಮೀರ್ ಖಾನ್ ಮತ್ತು ಅಮೀರ್ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ. ವಿಚ್ಚೇದನದ ನಂತರವೂ ರೀನಾ ಮತ್ತು ಅಮೀರ್ ಒಂದೊಳ್ಳೆ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹಾಗಾಗಿ ಒಟ್ಟಿಗೆ ಸೇರಿ ಮಗಳ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಅಮೀರ್, ಅಮೀರ್ ಪುತ್ರ ಶರ್ಟ್ ಲೆಸ್ ಆಗಿದ್ದು, ಮಗಳು ಮಾತ್ರ ಬಿಕಿನಿಲ್ಲೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಆ ವಿಡಿಯೋವನ್ನು ಸ್ವತಃ ಅಮೀರ್ ಖಾನ್ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಇರಾ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಅಮೀರ್ ಖಾನ್, ರೀನಾ ದತ್ತ ಮತ್ತು ಅಮೀರ್ ಅವರ ಎರಡನೇ ಪತ್ನಿಯ ಮಗ ಅಜಾದ್ ಕೂಡ ಹಾಜರಿದ್ದು, ಇರಾ ಅವರ 25ನೇ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಅಲ್ಲದೇ, ಮಗಳಿಗೆ ವಿಶೇಷವಾಗಿ ಶುಭಾಶಯಗಳನ್ನೂ ಹೇಳಿದ್ದಾರೆ ಅಮೀರ್ ಖಾನ್. ಜೀವನ ಪೂರ್ತಿ ಸಂತೋಷವಾಗಿರು ಎಂದು ಹಾರೈಸಿದ್ದಾರೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?

    ರೀನಾ ದತ್ ಮತ್ತು ಅಮೀರ್ ಖಾನ್ 1986ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಇರಾ ಮತ್ತು ಜುನೈದ್ ಖಾನ್ ಇಬ್ಬರು ಮಕ್ಕಳಿದ್ದಾರೆ. ಮದುವೆಯಾಗಿ ಒಂದೂವರೆ ದಶಕದ ನಂತರ ಈ ಜೋಡಿ ವಿಚ್ಚೇದನ ಪಡೆಯಿತು. ಆ ಬಳಿಕ ಅಮೀರ್ ಖಾನ್ ಅವರು ಕಿರಣ್ ರಾವ್ ಅವರ ಜತೆ ಹೊಸ ಜೀವನಕ್ಕೆ ಕಾಲಿಟ್ಟರು. ಈಗ ಕಿರಣ್ ರಾವ್ ಜೊತೆಯೂ ಅಮೀರ್ ಡೈವೋರ್ಸ್ ಪಡೆದುಕೊಂಡಿದ್ದಾರೆ.