Tag: reddy

  • ಮಧ್ಯರಾತ್ರಿ ಬಳ್ಳಾರಿ ರೆಡ್ಡಿ ಜೊತೆ ಸಿದ್ದರಾಮಯ್ಯ ಮಾತುಕತೆ!

    ಮಧ್ಯರಾತ್ರಿ ಬಳ್ಳಾರಿ ರೆಡ್ಡಿ ಜೊತೆ ಸಿದ್ದರಾಮಯ್ಯ ಮಾತುಕತೆ!

    ಬಳ್ಳಾರಿ: ಮಾಜಿ ಸಿಎಂ ಸಿದ್ದರಾಮಯ್ಯ ಗುರುವಾರ ಮಧ್ಯರಾತ್ರಿ ಬಳ್ಳಾರಿ ರೆಡ್ಡಿ ಅವರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮಿಡ್ ನೈಟ್‍ನಲ್ಲಿ ಮೀಟ್ ಮಾಡಿದ್ದು ಜನಾರ್ದನರೆಡ್ಡಿ ಅವರನ್ನಲ್ಲ. ಬದಲಾಗಿ ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ.

    ಚುನಾವಣೆ ಘೋಷಣೆಯಾದ ದಿನದಿಂದ ಪಕ್ಷದೊಂದಿಗೆ ಮುನಿಸುಕೊಂಡಿರುವ ಸೂರ್ಯನಾರಾಯಣ ರೆಡ್ಡಿ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿ ಚರ್ಚೆ ನಡೆಸಿದರು. ಏನೇ ಭಿನ್ನಾಭಿಪ್ರಾಯ ಇದ್ದರೂ ಚುನಾವಣೆ ಮುಗಿದ ನಂತರ ಚರ್ಚೆ ಮಾಡೋಣ. ಸದ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪರನ್ನು ಗೆಲ್ಲಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ, ಮಾಜಿ ಸಚಿವ ಸಂತೋಷ ಲಾಡ್, ಶಾಸಕ ನಾಗೇಂದ್ರ ಸಹ ಸೂರ್ಯನಾರಾಯಣ ರೆಡ್ಡಿ ಮನವೊಲಿಸುವ ಪ್ರಯತ್ನ ಮಾಡಿದರು. ಸಿದ್ದರಾಮಯ್ಯ ಮನವೊಲಿಕೆ ನಂತರವೂ ಸೂರ್ಯನಾರಾಯಣ ರೆಡ್ಡಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡ್ತಾರೋ ಇಲ್ವೋ ಎನ್ನುವುದು ಇಂದು ಬಹಿರಂಗವಾಗಲಿದೆ.

    ಕಳೆದ ಒಂದು ವಾರದ ಹಿಂದೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಸಹ ಸೂರ್ಯನಾರಾಯಣ ರೆಡ್ಡಿ ಅವರನ್ನು ಭೇಟಿ ಮಾಡಿ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದರು. ಆದರೆ ಡಿಕೆಶಿ ಸಂಧಾನಕ್ಕೆ ಜಗ್ಗದ ರೆಡ್ಡಿ ಸಿದ್ದರಾಮಯ್ಯನವರ ಮಾತುಕತೆಯಿಂದ ತೃಪ್ತಿಯಾದ್ರಾ ಎನ್ನುವುದನ್ನು ಸೂೂರ್ಯನಾರಾಯಣರೆಡ್ಡಿ ಅವರೇ ತಿಳಿಸಬೇಕಾಗಿದೆ.

  • ನೂತನ ಪೊಲೀಸ್ ಮಹಾನಿರ್ದೇಶಕರ ಆಯ್ಕೆಗೆ ಪೈಪೋಟಿ

    ನೂತನ ಪೊಲೀಸ್ ಮಹಾನಿರ್ದೇಶಕರ ಆಯ್ಕೆಗೆ ಪೈಪೋಟಿ

    ಬೆಂಗಳೂರು: ನೂತನ ಪೊಲೀಸ್ ಮಹಾನಿರ್ದೇಶಕರ ಆಯ್ಕೆಗೆ ದಿನಗಣನೆ ಹೆಚ್ಚಾಗಿರೋ ಬೆನ್ನಲ್ಲೆ ಪೈಪೋಟಿಯೂ ಹೆಚ್ಚಾಗಿದೆ. ಈಗಾಗ್ಲೇ ಮೂರು ಅಧಿಕಾರಿಗಳು ರೇಸ್‍ನಲ್ಲಿದ್ದು ನಾ ಮುಂದು ತಾ ಮುಂದು ಅಂತಿದ್ದಾರೆ.

    ಹಿರಿಯ ಅಧಿಕಾರಿಗಳಾದ ನೀಲಮಣಿರಾಜು, ಎಂಎನ್ ರೆಡ್ಡಿ ಮತ್ತು ಕಿಶೋರ್ ಚಂದ್ರ ನಡುವೆ ಪೈಪೋಟಿ ಎದುರಾಗಿದೆ. ಆದ್ರೆ ರಾಜ್ಯ ಸರ್ಕಾರ ನೀಲಮಣಿರಾಜು ಅವರಿಗೆ ಪೊಲೀಸ್ ಮಹಾನಿರ್ದೇಶಕರ ಸ್ಥಾನವನ್ನು ನೀಡೋದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗ್ತಿದೆ.

    ನೀಲಮಣಿ ರಾಜು ಅವರಿಗೆ ಸ್ಥಾನ ನೀಡಿದ್ರೆ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗುತ್ತಾರೆ. ಅದರ ಲಾಭವನ್ನು ಪಡೆಯಲು ಸರ್ಕಾರ ಪ್ಲಾನ್ ಕೂಡ ಮಾಡ್ತಿರೋದು ಸುಳ್ಳಲ್ಲ. ಆದ್ರೆ ಕಿಶೋರ್ ಚಂದ್ರ ಮತ್ತು ಎಂಎನ್ ರೆಡ್ಡಿ ನೇರಾನೇರ ಪೈಪೋಟಿ ಮಾಡ್ತಾ ಇದ್ದಾರೆ ಎನ್ನಲಾಗಿದೆ. ರೂಪ್ ಕುಮಾರ್ ದತ್ತಾ ಅವಧಿ ಈ ತಿಂಗಳಾಂತ್ಯದಲ್ಲಿ ಕೊನೆಗೊಳ್ಳಲಿದೆ.