Tag: Red Fort

  • 10,000 ಪೊಲೀಸರು.. ಆ್ಯಂಟಿ ಡ್ರೋನ್‌ ಸಿಸ್ಟಮ್‌, ಅತ್ಯಾಧುನಿಕ ಕ್ಯಾಮೆರಾ – ಸ್ವಾತಂತ್ರ್ಯೋತ್ಸವಕ್ಕೆ ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ

    10,000 ಪೊಲೀಸರು.. ಆ್ಯಂಟಿ ಡ್ರೋನ್‌ ಸಿಸ್ಟಮ್‌, ಅತ್ಯಾಧುನಿಕ ಕ್ಯಾಮೆರಾ – ಸ್ವಾತಂತ್ರ್ಯೋತ್ಸವಕ್ಕೆ ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ

    ನವದೆಹಲಿ: 77ನೇ ಸ್ವಾತಂತ್ರ್ಯೋತ್ಸವ (77th Independence Day) ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆ (Red Fort) ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ. 10,000 ಪೊಲೀಸರು ಹಾಗೂ 1,000 ಮುಖ ಗುರುತಿಸುವಿಕೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

    ಮಂಗಳವಾರದಂದು 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ರಾಷ್ಟ್ರ ರಾಜಧಾನಿ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಗಸ್ಟ್ 15 ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಂಡ ಹಿಜ್ಬುಲ್ ಭಯೋತ್ಪಾದಕನ ಸಹೋದರ

    ಹರಿಯಾಣದ ನುಹ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಂಪು ಕೋಟೆಯಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ವಾಯು ರಕ್ಷಣಾ ಗನ್‌ಗಳನ್ನು ಅಳವಡಿಸುವುದು ಸೇರಿದಂತೆ ಎಲ್ಲಾ ಭಯೋತ್ಪಾದನಾ ವಿರೋಧಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಧಾನ ಮಂತ್ರಿ ಮತ್ತು ಇತರ ವಿವಿಐಪಿ ಅತಿಥಿಗಳ ಭದ್ರತೆಗಾಗಿ ಸ್ನೈಪರ್‌ಗಳು, ಗಣ್ಯ SWAT ಕಮಾಂಡೋಗಳು ಮತ್ತು ಶಾರ್ಪ್‌ಶೂಟರ್‌ಗಳನ್ನು ಕಾರ್ಯತಂತ್ರದ ಸ್ಥಳಗಳಲ್ಲಿ ಇರಿಸಲಾಗುತ್ತದೆ.

    ಭದ್ರತಾ ವ್ಯವಸ್ಥೆಗಳ ವಿವರಗಳನ್ನು ಹಂಚಿಕೊಂಡಿರುವ ಪೊಲೀಸ್ ವಿಶೇಷ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ದೇಪೇಂದ್ರ ಪಾಠಕ್, ಈ ವರ್ಷ COVID-19 ಯಾವುದೇ ನಿರ್ಬಂಧಗಳಿಲ್ಲದೇ ಸ್ವಾತಂತ್ರ್ಯ ದಿನಾಚರಣೆಯನ್ನು ಉತ್ಸಾಹದಿಂದ ಆಚರಿಸಲಾಗುವುದು. ಆದ್ದರಿಂದ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಮಾಚಲದಲ್ಲಿ ಮೇಘಸ್ಫೋಟಕ್ಕೆ 7 ಬಲಿ – ಕೊಚ್ಚಿ ಹೋದ ಮನೆಗಳು

    ನಾವು ಭದ್ರತೆಯನ್ನು ಒದಗಿಸಲು ಇತರ ಏಜೆನ್ಸಿಗಳೊಂದಿಗೆ ಮಾಹಿತಿ ಸಂಯೋಜಿಸುತ್ತೇವೆ. ದೆಹಲಿ ಪೊಲೀಸರು ಭದ್ರತಾ ಉದ್ದೇಶಗಳಿಗಾಗಿ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಲಿದ್ದಾರೆ. ಭದ್ರತೆಗೆ ಸಂಬಂಧಿಸಿದಂತೆ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಗಳು ಸೇರಿದಂತೆ ಸುಮಾರು 1,800 ವಿಶೇಷ ಅತಿಥಿಗಳನ್ನು ಇಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಲು ದೇಶಾದ್ಯಂತ ಸರ್ಕಾರ ಆಹ್ವಾನಿಸಿದೆ. ಈ ವರ್ಷ 20,000 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ನಾಗರಿಕರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿಯ ಕೆಂಪು ಕೋಟೆ, ರಾಜ್‍ಘಾಟ್‍ನಲ್ಲಿ ಸೆಕ್ಷನ್ 144 ಜಾರಿ

    ದೆಹಲಿಯ ಕೆಂಪು ಕೋಟೆ, ರಾಜ್‍ಘಾಟ್‍ನಲ್ಲಿ ಸೆಕ್ಷನ್ 144 ಜಾರಿ

    ನವದೆಹಲಿ: ಕೆಂಪು ಕೋಟೆ, ರಾಜ್‍ಘಾಟ್ ಹಾಗೂ ಐಟಿಒನಲ್ಲಿ ದೆಹಲಿ ಪೊಲೀಸರು ಸೆಕ್ಷನ್ 144 ಜಾರಿ ಮಾಡಿದ್ದಾರೆ.

    ಪ್ರತಿವರ್ಷದಂತೆ ಈ ವರ್ಷವೂ ಆಗಸ್ಟ್ 15 ಸ್ವಾತಂತ್ರ್ಯ ದಿನವನ್ನು (Independent Day) ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಅಂತೆಯೇ ದೇಶಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸುತ್ತಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಉಪ ಪೊಲೀಸ್ ಆಯುಕ್ತ, ಕೆಂಪು ಕೋಟೆ ಹಾಗೂ ರಾಜ್‍ಘಾಟ್ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಭೆ, ಸಮಾರಂಭಗಳನ್ನು ಮಾಡಲು ಅನುಮತಿ ನೀಡಲ್ಲ ಎಂದು ಬರೆದುಕೊಂಡಿದ್ದಾರೆ.

    ಇನ್ನು ಎಂದಿನಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರು ಕೆಂಪು ಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ನೂತನ ಸಂಸತ್ ಭವನಕ್ಕೆ ದೇಶದ ವಿವಿಧತೆಯ ಮೆರುಗು

    ಭಾರತದ ನೂತನ ಸಂಸತ್ ಭವನಕ್ಕೆ ದೇಶದ ವಿವಿಧತೆಯ ಮೆರುಗು

    – ಎಲ್ಲೆಲ್ಲಿಂದ ಏನೇನು ಬಂದಿದೆ?

    ನವದೆಹಲಿ: ಭಾನುವಾರ ಉದ್ಘಾಟನೆಗೊಳ್ಳಲಿರುವ ದೇಶದ ನೂತನ ಸಂಸತ್ ಕಟ್ಟಡ (New Parliament) ಇಡೀ ಭಾರತದ ಸಾರವನ್ನು ಒಳಗೊಂಡಿದೆ. ಅಲ್ಲದೆ ಸಂಕೀರ್ಣದ ಒಳಗಿನ ಪ್ರತಿಯೊಂದು ಭಾಗಗಳೂ ವಿವಿಧ ರಾಜ್ಯಗಳ ಮಹತ್ವವನ್ನು ಇರಿಸಿಕೊಂಡಿದೆ.

    ಹೊಸ ಸಂಸತ್ತಿನ ಕಟ್ಟಡ ರಚನೆಗೆ ಹಲವಾರು ಸಾಮಾಗ್ರಿಗಳನ್ನು ತ್ರಿಪುರ, ಉತ್ತರ ಪ್ರದೇಶ, ರಾಜಸ್ಥಾನ (Rajasthan) ಮತ್ತು ಉಳಿದ ಇತರ ರಾಜ್ಯಗಳಿಂದ ಪಡೆಯಲಾಗಿದೆ. ಇದನ್ನೂ ಓದಿ: 2 ವರ್ಷ ಕಾಲ ಹುಡುಕಾಟ – ಇತಿಹಾಸದಿಂದ ಮರೆಮಾಚಲಾಗಿದ್ದ ಸೆಂಗೋಲ್ ಬೆಳಕಿಗೆ ಬಂದಿದ್ದು ಹೇಗೆ?

     

    ಎಲ್ಲೆಲ್ಲಿಂದ ಏನೇನು ಪ್ರಮುಖ ವಸ್ತುಗಳನ್ನು ತರಲಾಗಿದೆ?
    ದೆಹಲಿಯ ಕೆಂಪು ಕೋಟೆ (Red Fort) ಮತ್ತು ಹುಮಾಯೂನ್ ಸಮಾಧಿಗೆ ಬಳಸಲಾಗಿರುವ ಮರಳುಗಲ್ಲನ್ನು ರಾಜಸ್ಥಾನದ ಸರ್ಮಥುರಾದಿಂದ ತಂದು ಸಂಸತ್ ಕಟ್ಟಡಕ್ಕೆ ಬಳಸಿಕೊಳ್ಳಲಾಗಿದೆ. ಲೋಕಸಭೆಯ (Lok Sabha) ಕೊಠಡಿಯೊಳಗೆ ಅಳವಡಿಸಲಾಗಿರುವ ಕೇಶರಿಯಾ ಹಸಿರು ಕಲ್ಲನ್ನು ರಾಜಸ್ಥಾನದ ಉದಯಪುರದಿಂದ ತರಲಾಗಿದೆ. ರಾಜ್ಯಸಭಾ ಕೊಠಡಿಯೊಳಗೆ ಸ್ಥಾಪಿಸಲಾದ ಕೆಂಪು ಗ್ರಾನೈಟ್‍ನ್ನು ಅಜ್ಮೀರ್‌ನ ಲಾಖಾದಿಂದ ಮತ್ತು ರಾಜಸ್ಥಾನದ ಅಂಬಾಜಿಯಿಂದ ಬಿಳಿ ಮಾರ್ಬಲ್‍ಗಳನ್ನು ತರಲಾಗಿದೆ.

    ತೇಗದ ಮರಗಳನ್ನು ಮಹಾರಾಷ್ಟ್ರದ (Maharashtra) ನಾಗ್ಪುರದಿಂದ ತರಲಾಗಿದ್ದು, ಭವನದ ಒಳಗೆ ಇರಿಸಲಾದ ಪೀಠೋಪಕರಣಗಳನ್ನು ಮುಂಬೈನಲ್ಲಿ ತಯಾರಿಸಲಾಗಿದೆ. ಕಟ್ಟಡದ ಸುತ್ತಲೂ ಇರುವ ಕಲ್ಲಿನಿಂದ ತಯಾರಾದ ಜಾಲರಿಗಳನ್ನು ರಾಜಸ್ಥಾನ ಹಾಗೂ ಉತ್ತರಪ್ರದೇಶದ ನೋಯ್ಡಾದಿಂದ ತರಿಸಲಾಗಿದೆ. ಉಕ್ಕಿನಿಂದ ಮಾಡಿರುವ ಫಾಲ್ಸ್ ಸೀಲಿಂಗ್‍ಗಳನ್ನು ದಮನ್ ಮತ್ತು ದಿಯುನಿಂದ ಖರೀದಿಸಲಾಗಿದೆ.

    ಅಶೋಕ ಸ್ತಂಭ ಲಾಂಛನವನ್ನು ಕೆತ್ತಲು ಬಳಸಲಾದ ವಸ್ತುಗಳನ್ನು ಔರಂಗಾಬಾದ್ ಮತ್ತು ಜೈಪುರದಿಂದ ತರಿಸಲಾಗಿತ್ತು. ಮೇಲಿನ ಮತ್ತು ಕೆಳಗಿನ ಮನೆಗಳಲ್ಲಿ ಸ್ಥಾಪಿಸಲಾದ ಅಶೋಕ ಚಕ್ರಗಳನ್ನು ಇಂದೋರ್‍ನಿಂದ ತರಲಾಗಿದೆ. ರಾಜಸ್ಥಾನದ ಕೊಟ್ಪುಟಲಿಯಿಂದ ತರಲಾಗಿದ್ದ ಕಲ್ಲನ್ನು ಇದಕ್ಕೆ ಬಳಸಲಾಗಿದೆ. ಇದರ ಕೆತ್ತನೆಯ ಕೆಲಸವನ್ನು ಉದಯಪುರದ ಶಿಲ್ಪಿಗಳು ಮಾಡಿದ್ದಾರೆ. ಇದನ್ನೂ ಓದಿ: ಮೋದಿ ಕನಸಿನ ಸೆಂಟ್ರಲ್ ವಿಸ್ಟಾ ಯೋಜನೆಯಿಂದ ಉಳಿತಾಯವಾಗಲಿದೆ 1,000 ಕೋಟಿ ವಾರ್ಷಿಕ ಬಾಡಿಗೆ

  • ಕೆಂಪುಕೋಟೆಯ ಮೇಲೆ ದಾಳಿ –  ಲಷ್ಕರ್‌ ಉಗ್ರ ಅಶ್ಫಾಕ್ ಆರಿಫ್‌ ಗಲ್ಲು ಖಾಯಂ

    ಕೆಂಪುಕೋಟೆಯ ಮೇಲೆ ದಾಳಿ – ಲಷ್ಕರ್‌ ಉಗ್ರ ಅಶ್ಫಾಕ್ ಆರಿಫ್‌ ಗಲ್ಲು ಖಾಯಂ

    ನವದೆಹಲಿ : ಡಿಸೆಂಬರ್ 2000ರಲ್ಲಿ ದೆಹಲಿಯ ಕೆಂಪುಕೋಟೆಯ (Red Fort) ಸೇನಾ ಬ್ಯಾರಕ್ ಮೇಲೆ ದಾಳಿ ನಡೆಸಿದ ಲಷ್ಕರ್-ಎ-ತೊಯ್ಬಾ (LeT terrorist) ಉಗ್ರಗಾಮಿ ಮೊಹಮ್ಮದ್ ಅಶ್ಫಾಕ್ ಆರಿಫ್‌ (Mohammad Arif) ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ (Supreme Court)  ಖಾಯಂಗೊಳಿಸಿದೆ.

    ಸಿಜೆಐ ಯು.ಯು. ಲಲಿತ್ ನೇತೃತ್ವದ ತ್ರಿಸದಸ್ಯ ಪೀಠವು ಆರೀಫ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ. ಅಪರಾಧಿ ಮತ್ತು ಶಿಕ್ಷೆಯ ಆದೇಶವನ್ನು ಗಮನಿಸಿ ಯಾವುದೇ ಹಸ್ತಕ್ಷೇಪವನ್ನು ಸಮರ್ಥಿಸುವುದಿಲ್ಲ ಎಂದು ಮುಖ್ಯ ನ್ಯಾ. ಯು.ಯು ಲಲಿತ್ ಅಭಿಪ್ರಾಯಪಟ್ಟಿದ್ದಾರೆ.

    ದಾಳಿಯ ಮಾಸ್ಟರ್ ಮೈಂಡ್ ಅಪರಾಧಿಯಾಗಿರುವ ಪಾಕಿಸ್ತಾನಿ ವ್ಯಕ್ತಿ ಅಶ್ಫಾಕ್ ಆರಿಫ್‌‌ಗೆ 2005ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿತ್ತು. ದೆಹಲಿ ಹೈಕೋರ್ಟ್ 2007ರಲ್ಲಿ, 2011ರಲ್ಲಿ ಸುಪ್ರೀಂಕೋರ್ಟ್ ಕೆಳ‌ ನ್ಯಾಯಲಯದ ಆದೇಶವನ್ನು ಎತ್ತಿಹಿಡಿತ್ತು. ಇದನ್ನೂ ಓದಿ: ಬಸವಲಿಂಗ ಶ್ರೀಗಳ 11ನೇ ದಿನದ ಪುಣ್ಯಾರಾಧನೆ ಕಾರ್ಯಕ್ರಮ

    ಜನವರಿ 2014ರಲ್ಲಿ ಮರುಪರಿಶೀಲನೆ ಅರ್ಜಿಗಳನ್ನು ವಜಾಗೊಳಿಸಲಾಗಿತ್ತು. ಆದಾಗ್ಯೂ, 2016ರಲ್ಲಿ ಸುಪ್ರೀಂಕೋರ್ಟ್ ಆರಿಫ್‌ಗೆ ಮರಣದಂಡನೆಯ ವಿರುದ್ಧ ಹೋರಾಡಲು ಮತ್ತೊಂದು ಅವಕಾಶವನ್ನು ನೀಡಿತ್ತು. ಸೆಪ್ಟೆಂಬರ್ 2014ರ ಸಾಂವಿಧಾನಿಕ ಪೀಠವು ಶಿಕ್ಷೆಗೊಳಗಾದ ಕೈದಿಗಳ ಮರುಪರಿಶೀಲನಾ ಅರ್ಜಿಗಳ ವಿಚಾರಣೆಗೆ ಅನುಮತಿ ನೀಡಿತ್ತು.

    ಡಿಸೆಂಬರ್ 2000ರಲ್ಲಿ ನಡೆದ ದಾಳಿಯಲ್ಲಿ 3 ಜನರು ಕೆಂಪು ಕೋಟೆಯಲ್ಲಿ ಸಾವನ್ನಪ್ಪಿದ್ದರು. ಘಟನೆಯ 3 ದಿನಗಳ ನಂತರ ಆರಿಫ್ ಹಾಗೂ ಪತ್ನಿ ರೆಹಮಾನಾ ಯೂಸುಫ್ ಫಾರೂಕಿಯನ್ನು ಬಂಧಿಸಲಾಯಿತು. ವಿಚಾರಣಾ ನ್ಯಾಯಾಲಯವು ಅಕ್ಟೋಬರ್ 2005ರಲ್ಲಿ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಭಾರತದ ವಿರುದ್ಧ ಯುದ್ಧ ಮಾಡುವ ಆರೋಪದಡಿಯಲ್ಲಿ ಅವರನ್ನು ಮತ್ತು ಇತರ 6 ಜನರನ್ನು ದೋಷಿ ಎಂದು ತೀರ್ಪು ನೀಡಿತ್ತು. ಆತನಿಗೆ ಮರಣದಂಡನೆ ವಿಧಿಸಲಾಯಿತು. ಆದರೆ ಇತರರಿಗೆ ವಿವಿಧ ಅವಧಿಗಳ ಜೈಲು ಶಿಕ್ಷೆಯಾಗಿತ್ತು.  ಇದನ್ನೂ ಓದಿ: ದಲಿತರಿಗೆ ಚಪ್ಪಲಿ ಕಾಯುವ ಕೆಲಸ – ಇದು ಸಿದ್ದು ಸರ್ಕಾರದ ಆದೇಶ ಎಂದ ಬಿಜೆಪಿ

    ಸೆಪ್ಟೆಂಬರ್ 2007ರಲ್ಲಿ ದೆಹಲಿ ಹೈಕೋರ್ಟ್‌ ಅಶ್ಫಾಕ್ ಆರಿಫ್‌ ಅಪರಾಧಿ ಎಂದು ಪ್ರಕಟಿಸಿತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎಲ್ಲಾ ಇತರ ಸಹ-ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಪ್ರಾಸಿಕ್ಯೂಷನ್ ಪ್ರಕಾರ, 2000 ಇಸ್ವಿಯ ಡಿಸೆಂಬರ್ 22ರ ರಾತ್ರಿ ಇಬ್ಬರು ಬಂದೂಕುದಾರಿ ಉಗ್ರರು ಕೆಂಪು ಕೋಟೆಯನ್ನು ಪ್ರವೇಶಿಸಿ  ಸೇನಾ ಪೂರೈಕೆ ಡಿಪೋ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಇಬ್ಬರು ಸೈನಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು. ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೊಯ್ಬಾ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.

    Live Tv
    [brid partner=56869869 player=32851 video=960834 autoplay=true]

  • 2ನೇ ಎಲಿಜಬೆತ್ ನಿಧನಕ್ಕೆ ಇಂದು ದೇಶಾದ್ಯಂತ ಶೋಕಾಚರಣೆ

    2ನೇ ಎಲಿಜಬೆತ್ ನಿಧನಕ್ಕೆ ಇಂದು ದೇಶಾದ್ಯಂತ ಶೋಕಾಚರಣೆ

    ನವದೆಹಲಿ: ಗುರುವಾರ ನಿಧನರಾದ ಬ್ರಿಟನ್ ರಾಣಿ 2ನೇ ಎಲಿಜಬೆತ್‌ಗೆ ಗೌರವಾರ್ಥವಾಗಿ ಭಾನುವಾರ ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗಿದೆ. ಬ್ರಿಟನ್‌ನ ರಾಣಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಎಲಿಜಬೆತ್ ಗುರುವಾರ ಸ್ಕಾಟ್ಲೆಂಡ್‌ನಲ್ಲಿ ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾದರು.

    ಅಗಲಿದ ಗಣ್ಯರಿಗೆ ಗೌರವದ ಸೂಚಕವಾಗಿ ಸೆಪ್ಟೆಂಬರ್ 11ರಂದು ಒಂದು ದಿನದ ಶೊಕಾಚರಣೆಯನ್ನು ಮಾಡಬೇಕೆಂದು ಭಾರತ ಸರ್ಕಾರ ನಿರ್ಧರಿಸಿತ್ತು. ಇದರ ಹಿನ್ನೆಲೆ ಇಂದು ಭಾರತದ ಕೆಂಪು ಕೋಟೆ ಹಾಗೂ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಯಿತು.

    ಪ್ರಧಾನಿ ನರೇಂದ್ರ ಮೋದಿ ಅವರು ರಾಣಿಯ ಅಗಲಿಕೆಗೆ ಸಂತಾಪ ಸೂಚಿಸಿ, 2015 ಹಾಗೂ 2018ರಲ್ಲಿ ಬ್ರಿಟನ್‌ಗೆ ಭೇಟಿ ನೀಡಿದ್ದಾಗ ರಾಣಿಯೊಂದಿಗಿನ ಭೇಟಿಯನ್ನು ಸ್ಮರಿಸಿದ್ದರು. ಈ ಬಗ್ಗೆ ಟ್ವೀಟ್‌ನಲ್ಲಿ, ಬ್ರಿಟನ್ ರಾಣಿಯ ಕಾಳಜಿ ಹಾಗೂ ದಯೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಸಭೆಯೊಂದರಲ್ಲಿ ಅವರು ತಮ್ಮ ಮದುವೆಯ ಸಂದರ್ಭ ಮಹಾತ್ಮ ಗಾಂಧಿಯವರು ನೀಡಿದ್ದ ಕರವಸ್ತ್ರವನ್ನು ನನಗೆ ತೋರಿಸಿದ್ದರು. ನಾನು ಅವರ ನಡವಳಿಕೆಗೆ ಯಾವಾಗಲೂ ಋಣಿಯಾಗಿರುತ್ತೇನೆ ಎಂದು ಬರೆದಿದ್ದರು. ಇದನ್ನೂ ಓದಿ: ನಾಳೆಯಿಂದ ಮಳೆಗಾಲದ ಅಧಿವೇಶನ- ಕಾಂಗ್ರೆಸ್ ವಿರುದ್ಧ ರೀಡೂ ಅಸ್ತ್ರಕ್ಕೆ ಬಿಜೆಪಿ ಸಿದ್ಧತೆ

    ಅಗಲಿದ ರಾಣಿಯ ಸರ್ಕಾರಿ ಅಂತ್ಯಕ್ರಿಯೆ ಸೋಮವಾರ ಲಂಡನ್‌ನ ವೆಸ್ಟ್ಮಿನಿಸ್ಟರ್ ಅಬ್ಬೆಯಲ್ಲಿ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಅಪ್ಪು ನೆನಪು

     

    Live Tv
    [brid partner=56869869 player=32851 video=960834 autoplay=true]

  • ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಆಡಳಿತವಾಗಲಿ ಕಾಲಕ್ಕೆ ತಕ್ಕಂತೆ ಕೆಲಸ ಮಾಡಬೇಕು: ಮೋದಿ

    ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಆಡಳಿತವಾಗಲಿ ಕಾಲಕ್ಕೆ ತಕ್ಕಂತೆ ಕೆಲಸ ಮಾಡಬೇಕು: ಮೋದಿ

    ನವದೆಹಲಿ: ದೇಶದ ಎಲ್ಲ ಭಾಗದಲ್ಲೂ ಒಂದಲ್ಲ ಒಂದು ರೂಪದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತೀಯರು ಧ್ವಜಾರೋಹಣ ಮಾಡುತ್ತಿದ್ದಾರೆ. ಅನಿವಾಸಿ ಭಾರತೀಯರಿಗೂ ನಾನು ಶುಭಾಶಯ ಕೋರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

    ಇಂದು ಬೆಳಗ್ಗೆ ರಾಜಘಾಟ್ ಗೆ ಆಗಮಿಸಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ಬಳಿಕ ಕೆಂಪುಕೋಟೆಗೆ ತೆರಳಿ ಮಾತನಾಡಿದ ಅವರು, ಕೇಂದ್ರ, ರಾಜ್ಯ ಸರ್ಕಾರ, ಯಾವುದೇ ಆಡಳಿತವಾಗಲಿ ಕಾಲಕ್ಕೆ ತಕ್ಕಂತೆ ಕೆಲಸ ಮಾಡಬೇಕು. ದೇಶದ ಅಭಿವೃದ್ಧಿಗೆ ತಕ್ಕಂತೆ ಕೆಲಸ ಮಾಡಬೇಕು. ದೇಶದ ಜನರನ್ನು ಕಾಯಿಸಲು ಸಾಧ್ಯವಿಲ್ಲ ಎಂದರು.

    ಗುಲಾಮಿತನದ ವಿರುದ್ಧ ಸಾಕಷ್ಟು ಜನರು ಹೋರಾಟ ಮಾಡುತ್ತಿದ್ದಾರೆ. ಜೈಲು ಶಿಕ್ಷೆ ಅನುಭವಿಸಿದ್ದಾರೆ, ಯುದ್ಧ ಮಾಡಿದ್ದಾರೆ, ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹ ಮಹನೀಯರ ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಜೊತೆಗೆ ಅವರ ಕನಸುಗಳನ್ನು ಈಡೇರಿಸಬೇಕಿದೆ. ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವಾರು ಮಹಿಳೆಯರು ದೇಶ ಮಹಿಳೆಯ ಶಕ್ತಿ ಏನು ಎನ್ನುವುದು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

    ಅಂಬೇಡ್ಕರ್, ನೆಹರೂ, ಸರ್ದಾರ್ ಪಟೇಲ್ ಸೇರಿ ಹಲವಾರು ನಾಯಕರು ಸ್ವಾತಂತ್ರ್ಯ ಭಾರತವನ್ನು ಕಟ್ಟಿದ್ದಾರೆ. ನಾವು ಅವರಿಗೂ ನಮನಗಳನ್ನು ಸಲ್ಲಿಸಬೇಕು. ದೇಶದಲ್ಲಿ ಲಕ್ಷಾಂತರ ಕಾರ್ಯಕ್ರಮಗಳು ನಡೆದಿವೆ. ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ನಡೆದಿದೆ. ಏಕ ಉದ್ದೇಶದ ಇಂತಹ ಕಾರ್ಯಕ್ರಮ ನಡೆದಿರುವುದು ಇದೇ ಮೊದಲು. ಈ ಮೂಲಕ ಮಹನೀಯರ ನೆನಪು ಮಾಡಿಕೊಳ್ಳುವ ಪ್ರಯತ್ನ ಆಗಿದೆ. ಅವರಿಗೆ ಗೌರವ ಸಲ್ಲಿಸುವ ಕೆಲಸವೂ ಆಗಿದೆ. ನಿನ್ನೆ ಭಾರತ ಇಬ್ಭಾಗವಾದ ದಿನವನ್ನು ಆಚರಿಸಿದೆ ಎಂದು ತಿಳಿಸಿದರು.

    75 ವರ್ಷದ ಈ ಯಾತ್ರೆ ಹಲವು ಏಳು ಬೀಳು ಕಂಡಿದೆ. ಸುಖ-ದುಃಖಗಳನ್ನು ಕಂಡಿದೆ. ಇವುಗಳ ನಡುವೆ ಭಾರತವನ್ನು ಕಟ್ಟಿದೆ. ಎಲ್ಲೂ ಸೋಲನ್ನು ಒಪ್ಪಿಕೊಂಡಿಲ್ಲ. ಸ್ವಾತಂತ್ರ್ಯಕ್ಕೂ ಮುನ್ನ ಸಾಕಷ್ಟು ಕುತಂತ್ರಗಳನ್ನು ಮಾಡಲಾಯ್ತು. ಬ್ರಿಟಿಷ್‍ರು ಭಾರತ ಬಿಟ್ಟು ಹೋದರೇ ಭಾರತ ಒಡೆದು ಹೋಗುತ್ತದೆ. ನಾಗರಿಕ ಯುದ್ಧವಾಗುತ್ತೆ ಎಂದು ಭಯ ಹುಟ್ಟಿಸಿದರು. ಆದರೆ ಇದು ಹಿಂದೂಸ್ತಾನ್, ಇಲ್ಲಿ ಯಾವುದು ಆಗಲಿಲ್ಲ ಎಂದು ಮೋದಿ ನುಡಿದರು.

    ಸ್ವಾತಂತ್ರ್ಯದ ಬಳಿಕ ಸಾಕಷ್ಟು ಸಂಕಷ್ಟ ಎದುರಿಸಿದೆ. ಕೆಲವೊಮ್ಮೆ ಅನ್ನದ ಸಮಸ್ಯೆ, ಇನ್ನು ಕೆಲವೊಮ್ಮೆ ಯುದ್ಧ ಹೀಗೆ ಹಲವು ಸಂಕಷ್ಟಗಳ ನಡುವೆ ದೇಶ ಎದ್ದು ನಿಂತಿದೆ. ವಿವಿಧತೆಯಲ್ಲಿ ಏಕತೆ ಹೊಂದಿದೆ. ಪ್ರಜಾಪ್ರಭುತ್ವದ ತಾಯಿಯಾಗಿದೆ. ಸ್ವತಂತ್ರ ಸಿಕ್ಕಿದ ನಂತರ ಜನಿಸಿ ಪ್ರಧಾನಿಯಾದ ಮೊದಲ ವ್ಯಕ್ತಿ ನಾನು. ದೇಶದ ಜನರು ನನಗೆ ಆರ್ಶೀವಾದ ಮಾಡಿದರು. ದೇಶದ ನಿರೀಕ್ಷೆಗಳನ್ನು ಅರಿತು ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲ ವರ್ಗದ ಜನರ ಬಗ್ಗೆ ಚಿಂತಿಸುತ್ತಿದ್ದೇನೆ. ಮಹಾತ್ಮಾ ಗಾಂಧಿಅವರ ಚಿಂತನೆಯಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿ ಬಗ್ಗೆ ಚಿಂತಿಸಿದ್ದೇನೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • 75ನೇ ಅಮೃತ ಮಹೋತ್ಸವ – ದೆಹಲಿಯಲ್ಲಿ ಪ್ರಧಾನಿ ಮೋದಿ ಸುರಕ್ಷತೆಗೆ ಭಾರೀ ಭದ್ರತೆ

    75ನೇ ಅಮೃತ ಮಹೋತ್ಸವ – ದೆಹಲಿಯಲ್ಲಿ ಪ್ರಧಾನಿ ಮೋದಿ ಸುರಕ್ಷತೆಗೆ ಭಾರೀ ಭದ್ರತೆ

    ನವದೆಹಲಿ: ಸ್ವಾತಂತ್ರ‍್ಯ ದಿನಾಚರಣೆ ಸಮೀಪಿಸುತ್ತಿದ್ದು, ಈ ಬಾರಿ 75ನೇ ಅಮೃತ ಮಹೋತ್ಸವ ಅದ್ಧೂರಿಯಾಗಿ ಆಚರಿಸಲು ಭಾರತ ಸಜ್ಜಾಗಿದೆ. ಆದರೆ ಸ್ವಾತಂತ್ರ‍್ಯ ದಿನಾಚರಣೆಗೂ ಮುನ್ನವೇ ದಾಳಿ ನಡೆಸುವುದಾಗಿ ಉಗ್ರ ಸಂಘಟನೆಗಳು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭಾರೀ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

    ದೆಹಲಿಯ ಮಧ್ಯಭಾಗದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆಯಾದ್ಯಂತ ಅಣುಕು ಪ್ರದರ್ಶನ ಮಾಡಲಾಗಿದ್ದು, ಜನಸಂದಣಿ ಹಾಗೂ ಸೂಕ್ಷ್ಮವಲಯಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ದಯವಿಟ್ಟು ರಜೆ ಕೊಡಬೇಡಿ: ಜಿಲ್ಲಾಧಿಕಾರಿಗೆ ವಿದ್ಯಾರ್ಥಿನಿ ಮನವಿ

    ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದಕ್ಕಾಗಿ ದೆಹಲಿಯ ಕೆಂಪುಕೋಟೆ ಸುತ್ತಲೂ 10 ಸಾವಿರಕ್ಕೂ ಅಧಿಕ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

    ಈ ಬಾರಿ 75ನೇ ಅಮೃತ ಮಹೋತ್ಸವ ಆಗಿರುವುದರಿಂದ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗಿದೆ. ಕೇಂದ್ರದ ಏಜೆನ್ಸಿ ಹಾಗೂ ಗುಪ್ತಚರ ಇಲಾಖೆಗಳೊಂದಿಗೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಲಾಗುತ್ತದೆ. ಕೆಂಪುಕೋಟೆ ಹಾಗೂ ಸಮೀಪದ ಪ್ರದೇಶಗಳಲ್ಲಿ ನಿಗಾ ಇಡಲು 400 ಕಿಟ್ ಫ್ಲೈಯರ್ಸ್‌ (ಗಾಳಿಪಟ ಹಾರಾಟಗಾರರು)ಗಳನ್ನು ನಿಯೋಜಿಸಲಾಗಿದೆ. ಗಾಳಿಪಟ, ಡ್ರೋನ್ ಹಾಗೂ ಮೊದಲಾದ ಹಾರುವ ವಸ್ತುಗಳು ಕಾಣಿಸದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ 50 ಪೆಟ್ರೋಲ್‌ ಬಂಕ್‌ ತೆರೆಯಲಿದೆ ಐಒಸಿ

    ಸಾಂದರ್ಭಿಕ ಚಿತ್ರ

    1 ಸಾವಿರಕ್ಕೂ ಹೈ ಸ್ಪೆಸಿಫಿಕ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಈ ಕ್ಯಾಮೆರಾಗಳು ಕೆಂಪುಕೋಟೆಗೆ ಹೋಗುವ ವಿಐಪಿ ಮಾರ್ಗಗಳನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತವೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಉಗ್ರರ ಕರಿ ನೆರಳು – ಕೆಂಪುಕೋಟೆಯ ಸುತ್ತ 1,000 ಅಧಿಕ ಸಿಸಿಟಿವಿ ಕ್ಯಾಮೆರಾ

    ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಉಗ್ರರ ಕರಿ ನೆರಳು – ಕೆಂಪುಕೋಟೆಯ ಸುತ್ತ 1,000 ಅಧಿಕ ಸಿಸಿಟಿವಿ ಕ್ಯಾಮೆರಾ

    ನವದೆಹಲಿ: ದೇಶದಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿದ್ದು, ಈ‌ ಸಂಭ್ರಮಾಚರಣೆ ಮೇಲೆ ಭಯೋತ್ಪಾದಕರ ಕರಿ ನೆರಳು ಬಿದ್ದಿದೆ. ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ವೇಳೆ ಭಯೋತ್ಪಾದಕ ಚಟುವಟಿಕೆಗಳು ನಡೆಯುವ ಬೆದರಿಕೆಗಳು ಬಂದಿದೆ.

    ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್ ಸಂಘಟನೆಗಳಿಂದ ಸಂಭವನೀಯ ದಾಳಿಗಳ ಬಗ್ಗೆ ಗುಪ್ತಚರ ಇಲಾಖೆಯಿಂದ ಎಚ್ಚರಿಕೆ ಬಂದಿದ್ದು ಕೆಂಪುಕೋಟೆಯ ಸುತ್ತ ಭದ್ರತೆ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಕೆಂಪುಕೋಟೆಯ ಸುತ್ತ ಭಾರಿ ಭದ್ರತೆ ನಿಯೋಜಿಸಲು ಸಿದ್ದತೆಗಳು ಆರಂಭಗೊಂಡಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರತದ ಮೇಲೆ ಉಗ್ರರ ದಾಳಿ ಭೀತಿ: ಗುಪ್ತಚರ ಇಲಾಖೆ ಎಚ್ಚರಿಕೆ

    ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕೆಂಪುಕೋಟೆಗೆ ಸಿಸಿಟಿವಿ ಸರ್ಪಗಾವಲು ಹಾಕಲು ತಿರ್ಮಾನಿಸಿದ್ದು, 1,000 ಕ್ಕೂ ಇಂಟರ್ನೆಟ್ ಪ್ರೊಟೊಕಾಲ್ (IP) ಆಧಾರಿತ ಸಿಸಿಟಿವಿಗಳ ಅಳವಡಿಕೆಗೆ ನಿರ್ಧಾರ ಮಾಡಲಾಗಿದೆ. 2 ಮೆಗಾ ಪಿಕ್ಸೆಲ್‌ನ 80% IP ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಕೆಂಪುಕೋಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಸುಮಾರು 20%ನಷ್ಟು 4 ಮೆಗಾಫಿಕ್ಸೆಲ್‌ನ IP ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಕೋಟೆಯ ಆವರಣದೊಳಗೆ ಅಳವಡಿಕೆಗೆ ಚಿಂತಿಸಿದೆ.

    ಇಂಟರ್ನೆಟ್ ಪ್ರೊಟೊಕಾಲ್ ಸಿಸಿಟಿವಿ ಕ್ಯಾಮೆರಾಗಳು ಹೆಚ್ಚು ಸ್ಪಷ್ಟತೆ ಹೊಂದಿದ್ದು, ದೃಶ್ಯಗಳಲ್ಲಿ ವಿಶೇಷ ಜೂಮ್ ವ್ಯವಸ್ಥೆ ಹೊಂದಿದೆ. ಅಲ್ಲದೇ ಇದರಲ್ಲಿ ಮುಖ, ಧ್ವನಿ ಪತ್ತೆ ಮಾಡುವ ಸಾಮರ್ಥ್ಯವೂ ಇದೆ. ಅನುಮಾನಾಸ್ಪದ ಜನರ ಚಲನೆಯನ್ನು ಸುಲಭವಾಗಿ ಈ ಕ್ಯಾಮೆರಾಗಳ ಮೂಲಕ ಪತ್ತೆ ಹಚ್ಚಬಹುದಾಗಿದೆ. ಇನ್ನು ಎಂದಿಗಿಂತ ಹೆಚ್ಚು ಪೊಲೀಸ್ ಭದ್ರತೆಯೂ ಇರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಮುಂದಿನ CJI ಆಗಿ ಯು.ಯು.ಲಲಿತ್‌ ಹೆಸರು ಶಿಫಾರಸು

    Live Tv
    [brid partner=56869869 player=32851 video=960834 autoplay=true]

  • ಔರಂಗಜೇಬ ಅನೇಕರನ್ನು ಕೊಂದಿರ್ಬೋದು ಆದರೆ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ: ಮೋದಿ

    ಔರಂಗಜೇಬ ಅನೇಕರನ್ನು ಕೊಂದಿರ್ಬೋದು ಆದರೆ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ: ಮೋದಿ

    ನವದೆಹಲಿ: ಸಿಖ್ ಗುರು ತೇಗ್ ಬಹುದ್ದೂರ್ 400ನೇ ಜನ್ಮದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಕೆಂಪುಕೋಟೆಯಲ್ಲಿ ಸ್ಮರಣಾರ್ಥ ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡಿದರು. ನಂತರ ಗುರುಗಳ ತ್ಯಾಗದಿಂದ ಭಾರತ ಸಂಪ್ರದಾಯಗಳ ಬೀಡಾಗಿದೆ ಎಂದು ಜನರಿಗೆ ಹೇಳುತ್ತಾ, ಭಾರತವನ್ನು ಕಟ್ಟುವುದಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಕರೆಕೊಟ್ಟರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುರುಗಳ ಆರ್ಶೀವಾದದಿಂದ ಅವರ ಆದರ್ಶನವನ್ನು ದೇಶದ ಜನರು ಮುಂದುವರಿಸುತ್ತಿರುವುದು ತುಂಬಾ ಸಂತೋಷ ತರುತ್ತಿದೆ. ಈ ಶುಭ ಸಮಯದಲ್ಲಿ ನಾನು ಎಲ್ಲ 10 ಗುರುಗಳ ಪಾದಕ್ಕೆ ನಮನವನ್ನು ಸಲ್ಲಿಸುತ್ತಿದ್ದೇನೆ. ಈ ಪ್ರಕಾಶ್ ಪರ್ವ್ ಸಂದರ್ಭದಲ್ಲಿ ನಾನು ನಿಮ್ಮೆಲ್ಲರನ್ನು ಹೃದಯ ತುಂಬಿ ಅಭಿನಂದಿಸುತ್ತಿದ್ದೇನೆ ಎಂದರು. ಇದನ್ನೂ ಓದಿ:  ಧ್ವಂಸಗೊಂಡ ಅಪ್ಪನ ಅಂಗಡಿಯಲ್ಲಿ ಕಾಯಿನ್ ಸಂಗ್ರಸುತ್ತಿದ್ದ ಬಾಲಕ – ಫೋಟೋ ವೈರಲ್ 

    ಮೊಘಲ್ ದೊರೆ ಔರಂಗಜೇಬ್‍ನ ನಿರಂಕುಶ ಚಿಂತೆನೆಗಳಿಗೆ ಎದೆಯೊಡ್ಡಿದ ಗುರು ತೇಜ್ ಬಹಾದ್ದೂರ್, ಭಾರತದ ಆದರ್ಶಗಳ ರಕ್ಷಣೆಗೆ ಬಂಡೆಯಂತೆ ನಿಂತರು. ಔರಂಗಜೇಬ್ ನೂರಾರು ತಲೆಗಳನ್ನು ಕತ್ತರಿಸಿದರೂ, ಗುರು ತೇಜ್ ಬಹಾದ್ದೂರ್ ಅವರ ನಂಬಿಕೆಯನ್ನು ಆತನಿಂದ ಅಲುಗಾಡಿಲು ಸಾಧ್ಯವಾಗಲಿಲ್ಲ. ಆಧುನಿಕ ಭಾರತ ಕೂಡ ಗುರುಗಳ ಆಶೀರ್ವಾದದಿಂದ ಇಂತದ್ದೇ ಛಾತಿಯನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಅನೇಕ ಹೋರಾಟಗಾರರ ಬಲಿದಾನದಿಂದ ನಾವು ಇಲ್ಲಿದ್ದೇವೆ. ಈಗಿರುವ ನಮ್ಮ ಭಾರತ ಎಲ್ಲ ನಿರ್ಧಾರಗಳನ್ನು ಸ್ವತಃ ತೆಗೆದುಕೊಳ್ಳುತ್ತೆ. ರಾಜತಂತ್ರಗಳ ಬಗ್ಗೆ ಎಲ್ಲಾ ರೀತಿಯ ಮಾಹಿತಿಗಳ ಬಗ್ಗೆ ಭಾರತವೇ ನಿರ್ಧಾರ ಮಾಡುತ್ತೆ. ಪರೋಪಕಾರವನ್ನು ಹೇಳಿಕೊಟ್ಟಿರುವುದು ನಮ್ಮ ಹಿಂದೂಸ್ತಾನ್. ಭಾರತಕ್ಕೆ ಗೌರವ ತಂದುಕೊಂಡಲು ಎಷ್ಟೋ ಜನರು ತಮ್ಮ ಜೀವವನ್ನು ಬಲಿಕೊಟ್ಟಿದ್ದಾರೆ. ಈ ಭಾರತೀಯ ಭೂಮಿ ಕೇವಲ ದೇಶವಲ್ಲ. ಇದು ಶ್ರೇಷ್ಠವಾದ ಸಂಪ್ರದಾಯವನ್ನು ಹೊಂದಿದೆ. ಇದಕ್ಕಾಗಿ ನಮ್ಮ ಹಲವು ಖುಷಿಗಳು, ಸನ್ಯಾಸಿಗಳು ಹಲವು ವರ್ಷಗಳ ತಪಸ್ಸು ಮಾಡಿದ್ದಾರೆ. ಅವರ ವಿಚಾರವನ್ನು ಎಲ್ಲಕಡೆ ತಿಳಿಸಿದ್ದಾರೆ ಎಂದರು.

    ಈ ಕಾರ್ಯಕ್ರಮಕ್ಕೆ ಬಂದು ನನಗೆ ಯಾವ ರೀತಿಯ ಶಾಂತಿ ಸಿಕ್ಕಿದೆ ಎಂದು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೊಸ ಚಿಂತನೆ, ನಿರಂತರ ಶ್ರಮ ನಮ್ಮ ಸಿಖ್ ಧರ್ಮದ ಗುರುತು. ಇಂದು ಭಾರತವು ತನ್ನ ಗುರುಗಳ ಆದರ್ಶಗಳೊಂದಿಗೆ ಮುಂದೆ ನಡೆಯುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಕೆಂಪು ಕೋಟೆ ವಿಶೇಷ, ಶ್ರೇಷ್ಠ ದಿನಗಳ ಆಚರಣೆಗೆ ಸಾಕ್ಷಿಯಾಗಿದೆ. ಇಂದು ಗುರು ತೇಜ್ ಬಹುದ್ದೂರ್ ಅವರ ಹುತಾತ್ಮತೆಯ ಕಾರ್ಯಕ್ರಮ ಮಾಡುತ್ತಿರುವುದು ನಮಗೆ ಹೆಮ್ಮೆ ತರುತ್ತಿದೆ ಎಂದರು.

    ಭಾರತ ಯಾವತ್ತೂ ಬೇರೆ ದೇಶಕ್ಕೆ ತೊಂದರೆ ಕೊಡಲು ಇಷ್ಟಪಡುವುದಿಲ್ಲ. ಬೇರೆ ದೇಶಗಳಿಗೆ ಸಹಾಯ ಮಾಡುತ್ತೇವೆ. ಭಾರತ ವಿಶ್ವದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದೆ. ನಮ್ಮ ರಾಷ್ಟ್ರ ಶಾಂತಿಯಿಂದ ಎಲ್ಲವನ್ನು ಎದುರಿಸುತ್ತೆ. ನಾವು ತಮ್ಮ ಗುರುತಿನ ಬಗ್ಗೆ ಹೆಮ್ಮೆ ಪಡಬೇಕು. ನಾವು ನಮ್ಮ ಭಾರತವನ್ನು ಮೇಲೆ ತೆಗೆದುಕೊಂಡು ಹೋಗಬೇಕು. ಅದಕ್ಕೆ ಎಲ್ಲರೂ ಕೆಲಸ ಮಾಡಬೇಕು. ಇದಕ್ಕೆ ಗುರುಗಳ ಆರ್ಶೀವಾದಿಂದ ನಮ್ಮ ದೇಶ ಮೇಲೆ ಬರುತ್ತೆ ಎಂದು ಹೇಳಿದರು. ಇದನ್ನೂ ಓದಿ: ಕರ್ಮಭೂಮಿಯಿಂದ ಪುಣ್ಯ ಭೂಮಿವರೆಗೂ ಅಮರ ಜ್ಯೋತಿ ಯಾತ್ರೆ: ಡಾ.ರಾಜ್ ಸಹೋದರಿ ನಾಗಮ್ಮರಿಂದ ಚಾಲನೆ

    ನಮ್ಮ ಪ್ರತಿ ಕ್ಷಣವನ್ನು ದೇಶಕ್ಕಾಗಿ ಮೀಸಲಿಡಬೇಕು. ನಮ್ಮ ಪ್ರತಿಯೊಂದು ಯೋಚನೆಯನ್ನು ದೇಶಕ್ಕಾಗಿ ಮೀಸಲಿಡಬೇಕು. ಈ ಶುಭದಿನದಂದು ನಾನು ನಿಮ್ಮೆಲ್ಲರಲ್ಲೂ ಕೇಳಿಕೊಳ್ಳುವುದು ಒಂದೇ ನಾವು ದೇಶಕ್ಕಾಗಿ ಹೋರಾಟ ಮಾಡೋಣ. ದೇಶಕ್ಕಾಗಿ ಒಟ್ಟಿಗೆ ಸೇರಿ ಕೆಲಸ ಮಾಡೋಣ. ಎಲ್ಲರೂ ಸರಿಸಮಾನರು ಎಂದು ಕರೆ ಕೊಟ್ಟರು. ಇದೇ ವೇಳೆ ಭಾರತ ನಮ್ಮ ಗುರುಗಳು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ಮುನ್ನಡೆಯಲಿದೆ. ನಾವು ಭಾರತವನ್ನು ವಿಶ್ವ ಭೂಪಟದಲ್ಲಿ ಅತ್ಯಂತ ಬಲಿಷ್ಠ ಹಾಗೂ ಸಮರ್ಥ ರಾಷ್ಟ್ರವನ್ನಾಗಿ ಮಾಡುತ್ತೇವೆ. ಆಧುನಿಕ ಭಾರತದ ನಾಗಾಲೋಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದರು.

  • ಸಂಪ್ರದಾಯಕ್ಕೆ ಬ್ರೇಕ್‌ – ಸೂರ್ಯಾಸ್ತದ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಭಾಷಣ

    ಸಂಪ್ರದಾಯಕ್ಕೆ ಬ್ರೇಕ್‌ – ಸೂರ್ಯಾಸ್ತದ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಭಾಷಣ

    ನವದೆಹಲಿ: ಸಂಪ್ರದಾಯ ಮುರಿದು ಇದೇ ಮೊದಲ ಬಾರಿಗೆ ಸೂರ್ಯಾಸ್ತದ ಬಳಿಕ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ಭಾಷಣ ಮಾಡಲಿದ್ದಾರೆ.

    ಗುರು ತೇಗ್‌ ಬಹಾದ್ದೂರ್‌ ಅವರ 400ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 9:30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಕೆಂಪು ಕೋಟೆಯ ಮೇಲೆ ಭಾಷಣ ಮಾಡದೇ ಹುಲ್ಲುಹಾಸಿನ ಮೇಲೆ ಮಾತನಾಡುತ್ತಿರುವುದು ಇಂದಿನ ಕಾರ್ಯಕ್ರಮದ ವಿಶೇಷ.

    1675ರಲ್ಲಿ ಸಿಖ್ ಸಮುದಾಯದ 9ನೇ ಗುರು ಗುರು ತೇಗ್ ಬಹದ್ದೂರ್ ಕೊಲ್ಲಲು ಮೊಘಲ್ ದೊರೆ ಔರಂಗಜೇಬ್ ಆದೇಶ ನೀಡಿದ್ದ ಕಾರಣದಿಂದ ಕೆಂಪುಕೋಟೆಯನ್ನು ವೇದಿಕೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಶಾಂತಿ ಮೂಡಿಸುವ ಬಗ್ಗೆ ಭಾಷಣವಿರಲಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.  ಇದನ್ನೂ ಓದಿ: WHO ಮುಖ್ಯಸ್ಥರಿಗೆ ʼತುಳಸಿಭಾಯ್‌ʼ ಎಂದು ಗುಜರಾತಿ ಹೆಸರಿಟ್ಟ ಮೋದಿ

    ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿಗಳು ಕೆಂಪುಕೋಟೆಯ ಮೇಲೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದು ಸಂಪ್ರದಾಯ. ಸ್ವಾತಂತ್ರ್ಯ ದಿನ ಹೊರತು ಪಡಿಸಿ ಎರಡನೇ ಬಾರಿಗೆ ದಿ ಕೆಂಪುಕೋಟೆಯಿಂದ ಭಾಷಣ ಮಾಡುತ್ತಿದ್ದಾರೆ.

    2018ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಜಾದ್ ಹಿಂದ್ ಸರ್ಕಾರ ರಚನೆಯ 75ನೇ ವರ್ಷಾಚರಣೆ ಅಂಗವಾಗಿ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದ್ದ ಮೋದಿ  ಬೆಳಗ್ಗೆ 9 ಗಂಟೆಗೆ ಭಾಷಣ ಮಾಡಿದ್ದರು.

    ಇಂದು ರಾತ್ರಿ 400 ಸಿಖ್ ಸಂಗೀತಗಾರಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮೋದಿ ಅವರು ಅಂಚೆ ಸ್ಟಾಂಪ್ ಮತ್ತು ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಲಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಯಾರಿಗೂ ರಾಮನ ಪರಿಚಯವಿಲ್ಲವೆಂದ ಕಾಂಗ್ರೆಸ್ ಸಂಸದೆ

    ಗೃಹ ಸಚಿವ ಅಮಿತ್‌ ಶಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 11 ಮುಖ್ಯಮಂತ್ರಿಗಳು ಸೇರಿದಂತೆ ರಾಷ್ಟ್ರದ ವಿವಿಧೆಡೆಯಿಂದ ಸಿಖ್‌ ಪ್ರಮುಖರು ಭಾಗಿಯಾಗಲಿದ್ದಾರೆ. 400 ಸಿಖ್‌ ಜಥೆದಾರ್‌ ಕುಟುಂಬಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ.