Tag: Red Fort

  • ದೇಶ ಮೊದಲು.. ಭಾರತವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ: ಪ್ರಧಾನಿ ಮೋದಿ ಪ್ರತಿಜ್ಞೆ

    ದೇಶ ಮೊದಲು.. ಭಾರತವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ: ಪ್ರಧಾನಿ ಮೋದಿ ಪ್ರತಿಜ್ಞೆ

    – 78ನೇ ಸ್ವಾತಂತ್ರ್ಯೋತ್ಸವದಂದು ದೇಶದ ಜನರನ್ನುದ್ದೇಶಿಸಿ ಮೋದಿ ಭಾಷಣ

    ನವದೆಹಲಿ: ಜನಜೀವನ ಪರಿವರ್ತಿಸಲು, ದೇಶವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ. ನಮಗೆ ರಾಷ್ಟ್ರ ಮೊದಲು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತಿಜ್ಞೆ ಮಾಡಿದರು.

    78ನೇ ಸ್ವಾತಂತ್ರ ದಿನಾಚರಣೆ (78th Independence Day) ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ದೇಶವನ್ನುದ್ದೇಶಿ ಮಾತನಾಡಿದ ಮೋದಿ, ದೇಶದ ಸ್ವಾತಂತ್ರ್ಯಕ್ಕಾಗಿ ಜೀವನ ಸಮರ್ಪಣೆ ಮಾಡಿದ, ಸಂಘರ್ಷ ಮಾಡಿದ ಅಗಣಿತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡುವ ಶುಭ ದಿನ ಎಂದು ಹೇಳಿದರು. ಇದನ್ನೂ ಓದಿ: Independence Day: ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವದ ಸಂಭ್ರಮ – ಧ್ವಜಾರೋಹಣ ನೆರವೇರಿಸಿದ ಪ್ರಧಾನಿ

    ಸುಧಾರಣೆಗಳಿಗೆ ನಮ್ಮ ಬದ್ಧತೆ ಗುಲಾಬಿ ಪತ್ರಿಕೆಯ ಸಂಪಾದಕೀಯಕ್ಕಾಗಿ ಅಲ್ಲ. ದೇಶವನ್ನು ಬಲಿಷ್ಠಗೊಳಿಸುವುದು ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡಲು ಬಯಸುತ್ತೇನೆ. ತಜ್ಞರು ಅಥವಾ ಬೌದ್ಧಿಕ ಚರ್ಚಾ ಕ್ಲಬ್‌ಗಳನ್ನು ತೃಪ್ತಿಪಡಿಸಲು ಸರ್ಕಾರವು ವ್ಯಾಪಕವಾದ ಸುಧಾರಣೆಗಳನ್ನು ಜಾರಿಗೆ ತಂದಿಲ್ಲ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ‘ನೇಷನ್ ಫಸ್ಟ್’ ಪ್ರತಿಜ್ಞೆಯೇ ನಮ್ಮ ಆದ್ಯತೆ ಎಂದು ತಿಳಿಸಿದರು.

    ದೇಶದ ರಕ್ಷಣೆ ಮತ್ತು ನಿರ್ಮಾಣಕ್ಕೆ ಪೂರ್ಣ ಮನಸ್ಸಿನಿಂದ, ಬದ್ಧತೆಯಿಂದ ರೈತರು ಮತ್ತು ಯುವಕರು ಕೆಲಸ ಮಾಡುತ್ತಿದ್ದಾರೆ. ನಾನು ಎಲ್ಲರಿಗೂ ಗೌರವ ಪೂರ್ವಕವಾಗಿ ನಮಸ್ಕರಿಸುತ್ತೇನೆ. ಅವಿತರ ಹೋರಾಟದಿಂದ ಸ್ವಾತಂತ್ರ್ಯ ಬಂದಿದೆ. ಅಂದು 40 ಕೋಟಿ ಜನರು ಒಂದು ಕನಸು, ಸಂಕಲ್ಪದೊಂದಿಗೆ ಹೋರಾಡಿದರು. ಅವರದೇ ರಕ್ತ ನಮ್ಮಲ್ಲಿ ಇದೆ ಎನ್ನುವ ಹೆಮ್ಮೆ ಇದೆ. 40 ಕೋಟಿ ಜನರು ವಿಶ್ವದ ಬಲಿಷ್ಠ ಸರ್ಕಾರವನ್ನು ಕಿತ್ತೊಗೆಯಿತು. 140 ಕೋಟಿ ಜನರು ಸಂಕಲ್ಪದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೊರಟರೇ ಏನೇ ಸವಾಲು ಬಂದರೂ, ಎಲ್ಲವನ್ನೂ ಮೀರಿ ನಾವು ಸಮೃದ್ಧ ಭಾರತ್, ವಿಸಕಿತ ಭಾರತ ಕನಸು ಪೂರ್ಣ ಮಾಡಬಹುದು ಎಂದು ಕರೆ ನೀಡಿದರು. ಇದನ್ನೂ ಓದಿ: Independence Day | ಇತಿಹಾಸ, ಮಹತ್ವ, ನೀವು ತಿಳಿದಿರಲೇಬೇಕಾದ ಸಂಗತಿಗಳಿವು

    ಅಂದು ದೇಶಕ್ಕೆ ಸಾಯಲು ಜನರು ಪ್ರತಿಬದ್ಧವಾಗಿದ್ದರು. ನಾವು ಅಭಿವೃದ್ಧಿ ಭಾರತಕ್ಕೆ ಪ್ರತಿಬದ್ಧರವಾಗಿರಬೇಕು. ವಿಕಸಿತ ಭಾರತಕ್ಕಾಗಿ ದೇಶದ ಜನರು ಸಾಕಷ್ಟು ಸಲಹೆ ನೀಡಿದ್ದಾರೆ. ದೇಶದ ಪ್ರತಿಯೊಬ್ಬ ಜನರ ಕನಸು, ಸಂಕಲ್ಪ ಅದರೊಳಗಿದೆ. 2047 ಸ್ವಾತಂತ್ರ್ಯ ದಿನಾಚರಣೆ 100 ವರ್ಷಕ್ಕಾಗಿ ಸಾಕಷ್ಟು ಸಲಹೆ ನೀಡಿದ್ದಾರೆ. ಕೆಲವು ಜನರು ಉತ್ಪಾದನೆ ಹಬ್, ಸ್ಕಿಲ್ ಸಿಟಿ, ಆತ್ಮ ನಿರ್ಭರ್, ಸಿರಿ ಧಾನ್ಯಗಳನ್ನು ಜನಪ್ರಿಯ ಮಾಡಲು ಸೇರಿ ಅನೇಕ ಸಲಹೆ ನೀಡಿದ್ದಾರೆ. ನ್ಯಾಯ ವಿಳಂಬದ ಹಿನ್ನಲೆ ನ್ಯಾಯ ವಲಯದಲ್ಲಿ ವೇಗಬೇಕು. ಭಾರತದ ಸ್ಪೇಸ್ ಸ್ಟೇಷನ್ ನಿರ್ಮಾಣ, ಗ್ರೀನ್ ಸಿಟಿ ನಿರ್ಮಾಣ, ಪಾರಂಪರಿಕ ಔಷಧಿ ಅಭಿವೃದ್ಧಿ ಹೀಗೆ ಸಾಕಷ್ಟು ಸಲಹೆಗಳಿವೆ. ನನ್ನ ದೇಶದ ಸಾಮಾನ್ಯ ನಾಗರಿಕರು ಈ ಸಲಹೆ ನೀಡಿದ್ದಾರೆ. ದೇಶದ ಜನರಲ್ಲಿ ಇಷ್ಟು ದೊಡ್ಡ ಕನಸ್ಸುಗಳಿವೆ. ಇದರಿಂದ ನನ್ನ ಮನಸ್ಸಿನಲ್ಲಿ ಆತ್ಮ ವಿಶ್ವಾಸ ಇನ್ನಷ್ಟು ಹೆಚ್ಚುತ್ತದೆ ಎಂದರು.

    ಕೊರೊನಾ ಸಂಕಷ್ಟ ಮರೆಯಲು ಸಾಧ್ಯವಿಲ್ಲ. ಕೋಟ್ಯಂತರ ಜನರಿಗೆ ಉಚಿತವಾಗಿ ಲಸಿಕೆ ನೀಡಲಾಯಿತು. ಭಯೋತ್ಪಾದಕರು ಬಂದು ದಾಳಿ ಮಾಡಿ ಹೋಗುತ್ತಿದ್ದರು. ಈಗ ನಮ್ಮ ಸೇನೆ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟೈಕ್ ಮಾಡುತ್ತದೆ. ಇದನ್ನು ನೋಡಿ ನಮ್ಮ ಸೇನೆಯ ಬಗ್ಗೆ ಹೆಮ್ಮೆಯಾಗುತ್ತದೆ ಎಂದು ಖುಷಿ ವ್ಯಕ್ತಪಡಿಸಿದರು. ಇದನ್ನೂ ಓದಿ: Independence Day | ರಾಜಸ್ಥಾನಿ ಲೆಹರಿಯಾ ಪೇಟ ಧರಿಸಿ ಗಮನ ಸೆಳೆದ ಮೋದಿ

    ಏನಿದೆ ಅದರಲ್ಲಿ ಜೀವನ ಮಾಡಿ, ಏನು ಹೆಚ್ಚಿನದು ಆಗುವುದಿಲ್ಲ ಎನ್ನುವ ಮನಸ್ಥಿತಿ ಜನರಲ್ಲಿ ಇತ್ತು. ಈ ಮಾನಸಿಕತೆ ಬದಲಿಸಬೇಕಿತ್ತು. ಜನರಲ್ಲಿ ಬದಲಾಗುವ ಮನಸ್ಸಿದ್ದರೂ, ಅವರನ್ನು ಬದಲಾಗಲು ಬಿಡಲಿಲ್ಲ. ನಮಗೆ ಅವಕಾಶ ಸಿಕ್ಕಾಗ ನಾವು ಬದಲಾವಣೆ ಆರಂಭಿಸಿದೆವು. ದೇಶದ ಜನರಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಿದೆವು. ನಮ್ಮ ಬದ್ಧತೆ ನಾಲ್ಕು ದಿನದ್ದಲ್ಲ, ದೇಶಕ್ಕೆ ನಿರಂತರ ಶಕ್ತಿ ತುಂಬುವುದು ಎಂದು ತಿಳಿಸಿದರು.

  • ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವಕ್ಕೆ ಮೋದಿಯಿಂದ ಆಹ್ವಾನ!

    ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವಕ್ಕೆ ಮೋದಿಯಿಂದ ಆಹ್ವಾನ!

    – 50 ಗಿಡ ನೆಟ್ಟು ಪೋಷಿಸಿದ ಸಾಧಕರನ್ನು ಕೊಂಡಾಡಿದ ಮೋದಿ

    ಗದಗ: ಇಲ್ಲಿನ (Gadag) ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‍ಎಸ್‍ಎಸ್ (NSS) ಘಟಕದ ಇಬ್ಬರು ವಿದ್ಯಾರ್ಥಿಗಳಿಗೆ ದೆಹಲಿ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ (Independence Day) ಕಾಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಆಹ್ವಾನಿಸಿದ್ದಾರೆ.

    ಕೇಂದ್ರ ಸರ್ಕಾರದ `ಮೇರಿ ಮಾಟಿ, ಮೇರಾ ದೇಶ’ ಎನ್ನುವ ಕಾರ್ಯಕ್ರಮವನ್ನು ಕಾಲೇಜಿನ ಎನ್‍ಎಸ್‍ಎಸ್ ಘಟಕ ಯಶಸ್ವಿ ಮಾಡುತ್ತ ಬಂದಿದೆ. ಅಮೃತ ವಾಟಿಕಾ ಕಾರ್ಯಕ್ರಮದಡಿ, 50 ಗಿಡಗಳನ್ನು ನೆಟ್ಟು ಸತೀಶ್ ಕನ್ನೇರ್ ಹಾಗೂ ಆದಿತ್ಯ ಕೊರವರ ಎಂಬ ವಿದ್ಯಾರ್ಥಿಗಳು ಪೋಷಿಸಿದ್ದಾರೆ. ಇದನ್ನು ಗಮನಿಸಿ ಪ್ರಧಾನಿ ಕಚೇರಿಯಿಂದ ವಿಶೇಷ ಅತಿಥಿಗಳಾಗಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಇಬ್ಬರು ವಿದ್ಯಾರ್ಥಿಗಳಿಗೆ ಆಹ್ವಾನ ನೀಡಲಾಗಿದೆ.

    ಕಾಲೇಜಿನ ವತಿಯಿಂದ ಒಂದು ವರ್ಷದಿಂದ ಅಮೃತ ವಾಟಿಕಾ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಮಾಡಿಕೊಂಡು ಬಂದಿದೆ. ಎನ್‍ಎಸ್‍ಎಸ್ ಘಟಕದಿಂದ ಕಾಲೇಜಿನ ಮುಂದೆ 50 ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಲಾಗಿದೆ. ಆ ಗಿಡಗಳನ್ನು ಪೋಷಣೆ ಮಾಡುವುದನ್ನು ಕಾಲೇಜಿನ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಮಾಡಲಾಗಿದೆ. 100 ವಿದ್ಯಾರ್ಥಿಗಳ ಪೈಕಿ ಸತೀಶ್ ಹಾಗೂ ಆದಿತ್ಯ ಎಂಬ ವಿದ್ಯಾರ್ಥಿಗಳು ಬಹಳಷ್ಟು ಅಚ್ಚುಕಟ್ಟಾಗಿ ಗಿಡಗಳನ್ನು ಬೆಳೆಸಿದ್ದರು. ಇದನ್ನು ಗಮನಿಸಿ ಅವರಿಗೆ ಪ್ರಧಾನಿ ಕಚೇರಿಯಿಂದ ವಿಶೇಷ ಅತಿಥಿಗಳಾಗಿ ಅಹ್ವಾನ ನೀಡಲಾಗಿದೆ.‌

    ಈ ಬಗ್ಗೆ ಮಾತನಾಡಿರುವ ಎನ್‍ಎಸ್‍ಎಸ್ ಘಟಕದ ಶಿಕ್ಷಕರು, ಸ್ವಾತಂತ್ರ್ಯೋವದ ಅಮೃತ ಮಹೋತ್ಸವ ಸಮಯದಲ್ಲಿ ವಿದ್ಯಾರ್ಥಿಗಳು ಮಹಾಗನಿ ಹಾಗೂ ತಬೀಬ್ ರೋಜಾ ಜಾತಿಯ ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 24 ಜನರಿಗೆ ಪ್ರಧಾನಿ ಕಚೇರಿಯಿಂದ ಆಹ್ವಾನ ಬಂದಿದೆ. ಆ ಪೈಕಿ ಗದಗ ಜಿಲ್ಲೆಯ ಸತೀಶ್ ಮತ್ತು ಆದಿತ್ಯ ಎಂಬ ಇಬ್ಬರು ವಿದ್ಯಾರ್ಥಿಗಳಿಗೆ ವಿಶೇಷ ಅತಿಥಿಗಳಾಗಿ ಆಹ್ವಾನ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಸಂವಾದ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಹ್ವಾನ ಬಂದಿರುವುದು ಬಹಳ ಖುಷಿ ತಂದಿದೆ. ಇದು ನಮ್ಮ ಕಾಲೇಜಿಗೆ ಅಷ್ಟೇ ಅಲ್ಲ, ನಮ್ಮ ಜಿಲ್ಲೆಗೆ ಹೆಮ್ಮೆ ಎಂದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್‍ಎಸ್‍ಎಸ್ ಘಟಕದ ನೋಡಲ್ ಅಧಿಕಾರಿ ಶ್ರೀನಿವಾಸ ಬಡಿಗೇರ ಅವರು, ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಸಾಮಾನ್ಯ. ಆದರೆ ವಿದ್ಯಾರ್ಥಿಗಳ ಕೆಲಸ ಕಾರ್ಯವನ್ನು ಪ್ರಧಾನಿಗಳು ಮೆಚ್ಚಿ, ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಸಂತಸ ತಂದಿದೆ. ಅದಕ್ಕೆ ಹೇಳೋದು ಒಂದು ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ತಕ್ಕ ಪ್ರತಿಫಲ ಸಿಗುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದಿದ್ದಾರೆ.

  • ಮನೆಯಲ್ಲಿ ಧ್ವಜಾರೋಹಣ ಮಾಡ್ತಾರೆ: ಮುಂದಿನ ವರ್ಷ ಕೆಂಪು ಕೋಟೆಯಲ್ಲಿ ಮತ್ತೆ ಸಿಗೋಣ ಎಂದಿದ್ದ ಮೋದಿಗೆ ಖರ್ಗೆ ಟಾಂಗ್‌

    ಮನೆಯಲ್ಲಿ ಧ್ವಜಾರೋಹಣ ಮಾಡ್ತಾರೆ: ಮುಂದಿನ ವರ್ಷ ಕೆಂಪು ಕೋಟೆಯಲ್ಲಿ ಮತ್ತೆ ಸಿಗೋಣ ಎಂದಿದ್ದ ಮೋದಿಗೆ ಖರ್ಗೆ ಟಾಂಗ್‌

    ನವದೆಹಲಿ: ಮುಂದಿನ ವರ್ಷ ಕೆಂಪು ಕೋಟೆಯಲ್ಲಿ (Red Fort) ಸಿಗೋಣ ಎನ್ನುವ ಮೂಲಕ ಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ನಿಶ್ಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತಿರುಗೇಟು ನೀಡಿದ್ದಾರೆ.

    ಪ್ರಧಾನಿಯ ಈ ಹೇಳಿಕೆಗಳು ಅವರ ಅಹಂಕಾರವನ್ನು ತೋರಿಸುತ್ತವೆ. ಅವರು ಮುಂದಿನ ವರ್ಷ ತಮ್ಮ ಮನೆಯಲ್ಲಿ ಧ್ವಜಾರೋಹಣ ಮಾಡುತ್ತಾರೆ ಎಂದು ಖರ್ಗೆ ಕುಟುಕಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷ ಸಿಗೋಣ; ಸ್ವಾತಂತ್ರ‍್ಯ ದಿನದ ಭಾಷಣದಲ್ಲಿ ಲೋಕಸಭೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ

    ನಿಮ್ಮನ್ನು ಗೆಲ್ಲಿಸುವುದು ಅಥವಾ ತಿರಸ್ಕರಿಸುವುದು ಮತದಾರರ ಕೈಯಲ್ಲಿದೆ. 2024ರಲ್ಲಿ ಮತ್ತೊಮ್ಮೆ ಧ್ವಜಾರೋಹಣ ಮಾಡುತ್ತೇನೆ ಅಂತ ಈಗಲೇ ಹೇಳುವುದು ದುರಹಂಕಾರ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕಣ್ಣಿನ ಸಮಸ್ಯೆಯಿಂದಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಗೈರಾಗಿದ್ದರು. ಅವರಿಗಾಗಿ ಮೀಸಲಿರಿಸಿದ್ದ ಖುರ್ಚಿ ಖಾಲಿ ಇತ್ತು. ಇದನ್ನೂ ಓದಿ: ನಾವು ತೆಗೆದುಕೊಳ್ಳುವ ನಿರ್ಧಾರ ಮುಂದಿನ 1,000 ವರ್ಷ ಭಾರತಕ್ಕೆ ದಿಕ್ಕು ತೋರಲಿದೆ: ಮೋದಿ

    ನನಗೆ ಕಣ್ಣಿನ ಸಮಸ್ಯೆಯಿದೆ. ಮುಖ್ಯವಾಗಿ ಶಿಷ್ಟಾಚಾರದ ಪ್ರಕಾರ ಬೆಳಿಗ್ಗೆ 9:20 ಕ್ಕೆ ನನ್ನ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಬೇಕಾಗಿತ್ತು. ನಂತರ ಕಾಂಗ್ರೆಸ್ ಕಚೇರಿಗೆ ಬಂದು ತ್ರಿವರ್ಣ ಧ್ವಜವನ್ನು ಹಾರಿಸಬೇಕಾಗಿತ್ತು. ಭದ್ರತೆ ತುಂಬಾ ಬಿಗಿಯಾಗಿದ್ದರಿಂದ ನಾನು ಪಕ್ಷದ ಕಚೇರಿಗೂ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಖರ್ಗೆ ಸ್ಪಷ್ಟನೆ ನೀಡಿದ್ದಾರೆ.

    2024ರ ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೊನೆಯ ಸ್ವಾತಂತ್ರ‍್ಯ ದಿನದ ಭಾಷಣದಲ್ಲಿ ಮುಂದಿನ ವರ್ಷ ಇದೇ ಸ್ಥಳದಿಂದ ಭರವಸೆಗಳ ಪ್ರಗತಿಯ ಬಗ್ಗೆ ಮಾತನಾಡುವುದಾಗಿ ಹೇಳಿದ್ದರು. ಆ ಮೂಲಕ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಂದಿನ ವರ್ಷ ಸಿಗೋಣ; ಸ್ವಾತಂತ್ರ‍್ಯ ದಿನದ ಭಾಷಣದಲ್ಲಿ ಲೋಕಸಭೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ

    ಮುಂದಿನ ವರ್ಷ ಸಿಗೋಣ; ಸ್ವಾತಂತ್ರ‍್ಯ ದಿನದ ಭಾಷಣದಲ್ಲಿ ಲೋಕಸಭೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮೋದಿ

    ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಕೊನೆಯ ಸ್ವಾತಂತ್ರ‍್ಯ ದಿನದ (77th Independence Day) ಭಾಷಣದಲ್ಲಿ ಮುಂದಿನ ವರ್ಷ ಇದೇ ಸ್ಥಳದಿಂದ ಭರವಸೆಗಳ ಪ್ರಗತಿಯ ಬಗ್ಗೆ ಮಾತನಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಮತ್ತೊಮ್ಮೆ ಆಯ್ಕೆಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆ ಕೆಂಪುಕೋಟೆಯ ಮೇಲೆ ನಿಂತು ಭಾಷಣ ಮಾಡಿದ ಅವರು, 2014 ರಲ್ಲಿ ಬದಲಾವಣೆ ಭರವಸೆಯೊಂದಿಗೆ ನಿಮ್ಮ ಮುಂದೆ ಬಂದೆ. ಅಭೂತಪೂರ್ವ ಜಯ ನೀಡುವ ಮೂಲಕ ಅವಕಾಶ ನೀಡಿದ್ದೀರಿ. 5 ವರ್ಷದಲ್ಲಿ ಮಾಡಿದ ಕೆಲಸ ನಿಮಗೆ ಭರವಸೆಯಿಂದ ವಿಶ್ವಾಸ ಮೂಡಿಸಿದೆ ಎಂದರು.

    ನೀವು ನನ್ನ ಮೇಲೆ ನಂಬಿಕೆ ಇಟ್ಟಿದ್ದೀರಿ, ನೀವು ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಈಡೇರಿಸಲು ನಾನು ಪ್ರಯತ್ನಿಸಿದೆ. ಕಳೆದ 5 ವರ್ಷಗಳಲ್ಲಿ ನಾನು ನೀಡಿದ ಭರವಸೆಗಳು ನನಗೆ ಆತ್ಮವಿಶ್ವಾಸವನ್ನು ತಂದುಕೊಟ್ಟಿವೆ. ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ಮೂಲಕ ನಾನು ನಿಮಗೆ ಭರವಸೆ ನೀಡಿದ್ದೇನೆ. ನಾನು ಶ್ರಮಿಸಿದ್ದೇನೆ. ರಾಷ್ಟ್ರ ಮತ್ತು ನಾನು ಹೆಮ್ಮೆಯಿಂದ ಕೆಲಸ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ತಾಯಿ, ಸಹೋದರಿಯರಿಗೆ ಅವಮಾನ – ದೇಶವೇ ಮಣಿಪುರದೊಂದಿಗೆ ನಿಂತಿದೆ: ಮೋದಿ

    ಮುಂದಿನ ವರ್ಷ ಆಗಸ್ಟ್ 15 ರಂದು ಇದೇ ಕೆಂಪು ಕೋಟೆಯಿಂದ ನಾನು ರಾಷ್ಟ್ರವು ಸಾಧಿಸಿದ ಪ್ರಗತಿಯನ್ನು ಓದುತ್ತೇನೆ. ನಿಮ್ಮ ಶಕ್ತಿ, ನಿಮ್ಮ ಸಂಕಲ್ಪ ಮತ್ತು ನಿಮ್ಮ ಯಶಸ್ಸಿಗೆ ಹೆಚ್ಚಿನ ವಿಶ್ವಾಸದಿಂದ ಕೆಲಸ ಮಾಡುತ್ತೇನೆ ಎಂದರು.

    ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯು ದೇಶದ ಕನಸನ್ನು ನನಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದ ಅವರು, 3 ಅಂಶಗಳಿಂದ ಭಾರತದ ಎಲ್ಲಾ ಕನಸುಗಳನ್ನು ನನಸಾಗಿಸಬಹುದು ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾವು ತೆಗೆದುಕೊಳ್ಳುವ ನಿರ್ಧಾರ ಮುಂದಿನ 1,000 ವರ್ಷ ಭಾರತಕ್ಕೆ ದಿಕ್ಕು ತೋರಲಿದೆ: ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾವು ತೆಗೆದುಕೊಳ್ಳುವ ನಿರ್ಧಾರ ಮುಂದಿನ 1,000 ವರ್ಷ ಭಾರತಕ್ಕೆ ದಿಕ್ಕು ತೋರಲಿದೆ: ಮೋದಿ

    ನಾವು ತೆಗೆದುಕೊಳ್ಳುವ ನಿರ್ಧಾರ ಮುಂದಿನ 1,000 ವರ್ಷ ಭಾರತಕ್ಕೆ ದಿಕ್ಕು ತೋರಲಿದೆ: ಮೋದಿ

    – ಸ್ವಾತಂತ್ರ್ಯೋತ್ಸವ ಉದ್ದೇಶಿಸಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ಭಾಷಣ

    ನವದೆಹಲಿ: ನಾವು ತೆಗೆದುಕೊಳ್ಳುವ ನಿರ್ಧಾರ ಮುಂದಿನ ಒಂದು ಸಾವಿರ ವರ್ಷ ಭಾರತ ದಿಕ್ಕನ್ನು ತೋರಿಸಲಿದೆ. ಈ ಅವಧಿಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಮುಂದಿನ ಒಂದು ಸಾವಿರ ವರ್ಷದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ಸಮಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ ಇಂದು (ಮಂಗಳವಾರ) ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಗುಲಾಮಿ ಮನಸ್ಥಿತಿಯಿಂದ ಹೊರ ಬರುವ ನಿರ್ಧಾರ ತೆಗೆದುಕೊಳ್ಳುವ ಸಮಯವಾಗಿದೆ. ಭಾರತ ಹೊಸ ಸಾಮರ್ಥ್ಯದೊಂದಿಗೆ ಎಲ್ಲರನ್ನು ಸೆಳೆಯಲಿದೆ‌. ಈ ಹಿಂದಿನ ಗುಲಾಮಿ ವ್ಯವಸ್ಥೆ ಮತ್ತು ಮುಂದಿನ ಒಂದು ಸಾವಿರ ವರ್ಷದ ಭವ್ಯ ಭಾರತದ ನಡುವೆ ನಾವಿದ್ದೇವೆ ಎಂದು ತಿಳಿಸಿದರು.

    ಸ್ವಾತಂತ್ರ್ಯ ಹೋರಾಟಗಾರದಲ್ಲಿ ಹೋರಾಟ ಮಾಡಿದ, ಬಲಿದಾನ ನೀಡಿದ ಎಲ್ಲ ಹೋರಾಟಗಾರಿಗೆ ಗೌರವ ಸಲ್ಲಿಸುತ್ತೇನೆ. ಇದು ಅಮೃತ ಕಾಲದ ಮೊದಲ ವರ್ಷ. ಈ ಅವಧಿಯಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರ ದೇಶದ ಎಲ್ಲ ಜನರ ಹಿತಾಸಕ್ತಿ ಕಾಪಾಡಲಿದೆ. ಇಂದು ನಮ್ಮ ಯುವಕರಿಗೆ ಹೊಸ ಅವಕಾಶ ಸಿಕ್ಕಿದೆ. ನಮ್ಮ ಸರ್ಕಾರದ ನೀತಿಯೂ ಯುವ ಶಕ್ತಿಗೆ ಬಲ ನೀಡಲಿದೆ. ಸ್ಟಾರ್ಟ್ ಅಪ್‌ಗೆ ಅವಕಾಶ ನೀಡಿದೆ. ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ದೇಶವಾಗಿದೆ. T2, T3 ನಗರಗಳಿಂದಲೂ ಪ್ರತಿಭೆಗಳು ಹೊರ ಬರುತ್ತಿವೆ. ಸಣ್ಣ ಊರುಗಳು ಚಿಕ್ಕದಾಗಿರಬಹುದು, ಅವುಗಳ ಶಕ್ತಿ ದೊಡ್ಡದಿದೆ. ಬಡ ಕುಟುಂಬಗಳಿಂದ ಬರುವ ಯುವಕರು ಸಾಧನೆ ಮಾಡುತ್ತಿದ್ದಾರೆ. 100 ಕ್ಕೂ ಅಧಿಕ ಶಾಲಾ ಮಕ್ಕಳು ಸೆಟಲೈಟ್ ಉಡಾವಣೆ ಮಾಡುತ್ತಿವೆ. ಅವಕಾಶಗಳಿಗೆ ಕಡಿಮೆ ಏನು ಇಲ್ಲ. ಎಲ್ಲ ಅವಕಾಶಗಳನ್ನು ಸರ್ಕಾರ ನೀಡಲಿದೆ ಎಂದರು.

    ಮಹಿಳೆಯರಿಂದ ದೇಶ ಮುಂದುವರಿಯುತ್ತಿದೆ. ದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ದೇಶದಲ್ಲಿ ಜಿ20 ಕಾರ್ಯಕ್ರಮ ನಡೆಯುತ್ತಿವೆ. ದೇಶದ ಶಕ್ತಿ, ವಿವಿಧತೆಯನ್ನು ಪರಿಚಯಿಸಲಾಗುತ್ತಿದೆ. ಭಾರತ ಎಲ್ಲರನ್ನು ಆಕರ್ಷಿಸುತ್ತಿದೆ. ಭಾರತದ ರಪ್ತು ಹೆಚ್ಚಾಗುತ್ತಿದೆ. ಇನ್ನು ಭಾರತವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೊರೊನಾ ಕಾಲದಲ್ಲಿ ವಿಶ್ವ ನಮ್ಮ ಶಕ್ತಿಯನ್ನು ನೋಡಿದೆ. ಸಂಕಷ್ಟದ ಸಮಯದಲ್ಲೂ ಮಾನವೀಯತೆ ಮೆರೆದಿದ್ದೇವೆ. ಭಾರತದ ಮೇಲೆ ಹೊಸ ವಿಶ್ವಾಸ ಮೂಡಿದೆ. ಈ ಸಮಯವನ್ನು ನಾವು ಬಿಟ್ಟು ಕೊಡಬಾರದು ಎಂದು ಕರೆ ನೀಡಿದರು.

    ಈ ಅವಧಿಯಲ್ಲಿ ಕೆಲಸ ಮಾಡಲು ಬಲಿಷ್ಠವಾದ ಮತ್ತು ಸ್ಥಿರ ಸರ್ಕಾರದ ಅವಶ್ಯಕತೆ ಇದೆ. ದೇಶದ ಜನರು ಅಂತಹ ಸ್ಥಿರ ಸರ್ಕಾರ ನೀಡಿದ್ದಾರೆ. ನಮ್ಮ ಸರ್ಕಾರ ದೇಶದ ಜನರ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ರಾಷ್ಟ್ರವೇ ಮೊದಲು ಎನ್ನುವುದು ನಮ್ಮ ಸರ್ಕಾರ ಧ್ಯೇಯ. 2014 ರಲ್ಲಿ ಮೋದಿ ಸರ್ಕಾರಕ್ಕೆ ಫಾರಂ ಮಾಡಿದ್ದೀರಿ. ಮೋದಿ ಸರ್ಕಾರ ದೇಶದಲ್ಲಿ ಸುಧಾರಣೆ ಮಾಡುತ್ತಿದೆ. ದೇಶದ ಜನರಿಗೆ ಶುದ್ಧ ಕುಡಿಯುವ ನೀರು ನೀಡಿದೆ. ವೈದ್ಯಕೀಯ ವ್ಯವಸ್ಥೆ ನೀಡಿದೆ. ಯೋಗ ಮತ್ತು ಆಯುಷ್ಯ ಹೊಸ ಗುರುತು ನೀಡಿದೆ ಎಂದು ಮಾತನಾಡಿದರು.

    ಮೀನುಗಾರರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಮಾಡಲಾಯ್ತು. ಸಹಕಾರಿ ವ್ಯವಸ್ಥೆಗೆ ಶಕ್ತಿ ನೀಡಲು ಪ್ರತ್ಯೇಕ ಸಚಿವಾಲಯ ಮಾಡಲಾಯ್ತು. ಬಡ ಜನರ ಅವಶ್ಯಕತೆ ಪೂರೈಸಲು ಕೆಲಸ ಮಾಡಲಾಗುತ್ತಿದೆ. ನಾವು ಅಧಿಕಾರಕ್ಕೆ ಬಂದಾಗ 10 ನೇ ಆರ್ಥಿಕ ದೇಶವಾಗಿದ್ದೆವು. ಇಂದು ಐದನೇ ಸ್ಥಾನವನ್ನು ತಲುಪಿದ್ದೇವೆ. ಇದು ಹಾಗೆಯೇ ಆಗಿಲ್ಲ, ಭ್ರಷ್ಟಾಚಾರ ದೇಶವನ್ನು ಬುಡಮೇಲು ಮಾಡಿತ್ತು. ಭ್ರಷ್ಟಾಚಾರ ನಿಯಂತ್ರಿಸಿ, ಬಡವರ ಕಲ್ಯಾಣಕ್ಕೆ ಕೆಲಸ ಮಾಡಿದ್ದೇವೆ. ದೇಶದ ಜನರಿಗೆ ಹಣ ಖರ್ಚು ಮಾಡುವ ಕೆಲಸ ಮಾಡಿದೆ. ಇದು ಜನರ ಶಕ್ತಿ ಹೆಚ್ಚಿಸುವ ಕೆಲಸ ಮಾಡಿತು. ಇದರಿಂದ ದೇಶದ ಆರ್ಥಿಕ ಬಲಿಷ್ಠವಾಗಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

    ಹಿಂದೆ 30 ಲಕ್ಷ ಕೋಟಿ ರಾಜ್ಯಗಳಿಗೆ ನೀಡಲಾಗುತ್ತಿತ್ತು. ಇಂದು ಒಂದು ಲಕ್ಷ ಕೋಟಿ ರಾಜ್ಯಗಳಿಗೆ ನೀಡಲಾಗುತ್ತಿದೆ. ಬಡತನದಿಂದ ಮುಕ್ತವಾಗಿ ಮಧ್ಯಮ ವರ್ಗಕ್ಕೆ ಜನರ ಜೀವನ ಮಟ್ಟ ಬರುತ್ತಿದೆ. ಇದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ವಿಶ್ವದ ಮೂರನೇ ಬಲಿಷ್ಠ ದೇಶವಾಗಲಿದೆ, ಇದು‌ ಮೋದಿ ಗ್ಯಾರಂಟಿ. ನಗರದಲ್ಲಿ ಮನೆ ಇಲ್ಲದ ಜನರಿಗೆ ಹೊಸ ಯೋಜನೆ ತರಲಿದ್ದೇವೆ. ಅಂತಹ ಜನರಿಗೆ ಬ್ಯಾಂಕ್ ಸಾಲದಲ್ಲಿ ಬಡ್ಡಿ ರಿಯಾಯಿತಿ ನೀಡಿ ಮನೆ ಕಟ್ಟುವ ಕನಸು ನನಸು ಮಾಡುವ ಕೆಲಸ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.

    ಅತಿ ಕಡಿಮೆ ದರದಲ್ಲಿ ಡೇಟಾ ಲಭ್ಯವಾಗುತ್ತಿದೆ. ದೇಶ ಹೊಸ ಶಕ್ತಿಗಳ ಮೇಲೆ ಆಧಾರದ ಮೇಲೆ ಕೆಲಸ ಮಾಡುತ್ತಿದೆ. ಮೆಟ್ರೋ ಅಭಿವೃದ್ಧಿಯಾಗುತ್ತಿದೆ. ವಂದೇ ಭಾರತ ಟ್ರೇನ್ ಓಡುತ್ತಿದೆ. ಹಳ್ಳಿ‌ಹಳ್ಳಿಗೂ ಇಂಟರ್ನೆಟ್ ತಲುಪುತ್ತಿದೆ. ಪ್ಯಾರಾ ಒಲಿಂಪಿಕ್‌ನಲ್ಲಿ ಸಾಧನೆ ಮಾಡುತ್ತಿದೆ. ನಮ್ಮ ಸರ್ಕಾರದಲ್ಲಿ ನಾವು ಆರಂಭಿಸುವ ಕೆಲಸವನ್ನು ನಾವೇ ಉದ್ಘಾಟನೆ ಮಾಡುತ್ತೇವೆ. ಈಗ ಶಂಕುಸ್ಥಾಪನೆ ಮಾಡಿರುವ ಕೆಲಸಗಳನ್ನು ನಾವೇ ಉದ್ಘಾಟನೆ ಮಾಡಲಿದ್ದೇವೆ. 6G ಕಡೆಗೆ ಕೆಲಸ ಆರಂಭಿಸಿದ್ದೇವೆ. 500 ಬಿಲಿಯನ್ ಡಾಲರ್ ರಫ್ತು ಬಗ್ಗೆ ಮಾತನಾಡಿದ್ದೆವು, ಪೂರೈಸಿದ್ದೇವೆ. ಸಂಸತ್ ಭವನವನ್ನು ಅವಧಿಗೂ ಮುಂಚೆ ನಿರ್ಮಿಸಿದ್ದೇವೆ. ಇದು ಮೋದಿ ಸರ್ಕಾರ, ಅವಧಿಗೂ ಮುನ್ನ ಕೆಲಸ ಮಾಡಿ ಮುಗಿಸುತ್ತದೆ ಎಂದು ಕೇಂದ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿದರು.

    ನಮ್ಮ ಗಡಿ ಮೊದಲಗಿಂತ ಬಲಿಷ್ಠವಾಗಿವೆ. ನಮ್ಮ‌ ಸೈನಿಕರು ದೇಶವನ್ನು ಕಾಯುತ್ತಿದ್ದಾರೆ. ಅವರಿಗೂ ನಾನು ಶುಭಾಶಯ ಕೋರುತ್ತೇನೆ. ಮೊದಲು ಬಾಂಬ್ ದಾಳಿಯ ಸುದ್ದಿಗಳು ಕೇಳಿ ಬರುತ್ತಿದ್ದವು. ಇಂದು ದೇಶದಲ್ಲಿ ಶಾಂತಿ‌ ನೆಲೆಸಿದೆ. ಭಯೋತ್ಪಾದಕ ದಾಳಿ ಕಡಿಮೆಯಾಗಿದೆ. ನಕ್ಸಲ್ ಚಟುವಟಿಕೆ ಕಡಿಮೆಯಾಗಿದೆ. ಭಾರತದ ಮಣಿಪುರ, ಕೇರಳ, ಮಹಾರಾಷ್ಟ್ರ ಹೀಗೆ ಯಾವುದೇ ರಾಜ್ಯದಲ್ಲಿ ಕೆಟ್ಟ ಘಟನೆಗಳು ನಡೆದರೆ ಅದು ಭಾರತದ ಅವಿಭಾಜ್ಯ ಅಂಗಕ್ಕೆ ದಕ್ಕೆಯಾದಂತೆ ಎಂದರು.

    ಕೃಷಿ ವಲಯದಲ್ಲಿ ಡ್ರೋನ್ ಬಳಕೆ ಆದ್ಯತೆ ನೀಡಲಾಗುವುದು. ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಟ್ರೈನಿಂಗ್ ನೀಡಲಾಗುವುದು. ಮೊದಲ ಹಂತದಲ್ಲಿ ಹದಿನೈದು ಸಾವಿರ ಗುಂಪುಗಳ ಮೂಲಕ ಕೆಲಸ ಆರಂಭಿಸಲಿದ್ದೇವೆ. ಮಾತೃ ಭಾಷೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕೋರ್ಟ್‌ ಆದೇಶಗಳು ಮಾತೃ ಭಾಷೆಯಲ್ಲೇ ಇರಲಿದೆ. ಸುಪ್ರೀಂ ಕೋರ್ಟ್ ಈ ಬಗೆಗೆ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • IndependenceDay: ಭಾಗ-3: ಕರ್ನಾಟಕ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ದುರಂತ ಸ್ಮರಣೀಯ

    IndependenceDay: ಭಾಗ-3: ಕರ್ನಾಟಕ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ದುರಂತ ಸ್ಮರಣೀಯ

    ಕ್ವಿಟ್‌ ಇಂಡಿಯಾ ಚಳವಳಿ (1942): ಬ್ರಿಟಿಷ್ ಸರ್ಕಾರವು ಭಾರತೀಯ ನಾಯಕರೊಂದಿಗೆ ಸಂಧಾನಕ್ಕಾಗಿ ಕಳುಹಿಸಿದ್ದ ಸ್ಟಾಫರ್ಡ್ ಕ್ರಿಪ್ಸ್ ಆಯೋಗವು 1942ರಲ್ಲಿ ಕೆಲವು ಸಲಹೆಗಳನ್ನು ಭಾರತೀಯರ ಮುಂದಿಟ್ಟಿತು. ಈ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡುವುದು, ಅದಕ್ಕಾಗಿ ಸಂವಿಧಾನ ರಚಿಸಲು ಸಭೆ ಕರೆಯುವುದು, ಹೊಸ ಸಂವಿಧಾನದಲ್ಲಿ ಭಾರತ ಒಕ್ಕೂಟವನ್ನು ಸೇರುವ ಅಥವಾ ಬಿಡುವ ಸ್ವಾತಂತ್ರ್ಯವನ್ನು ಸಂಬಂಧಿಸಿದ ರಾಜ್ಯಗಳಿಗೆ ಬಿಡುವಂತಹ ಸಲಹೆಗಳನ್ನು ನೀಡಿತು. ಈ ಸಲಹೆಗಳನ್ನು ಕಾಂಗ್ರೆಸ್‌ ಒಪ್ಪದೆ ಕ್ವಿಟ್‌ ಇಂಡಿಯಾ ಚಳವಳಿಗೆ ಕರೆ ನೀಡಿತು. ಸಲಹೆಗಳನ್ನು ಕಾಂಗ್ರೆಸ್ ಒಪ್ಪದೆ ‘ಭಾರತ ಬಿಟ್ಟು ತೊಲಗಿ’ ಎನ್ನುವುದು ಕ್ವಿಟ್ ಇಂಡಿಯಾ ಚಳವಳಿಯ ಆಶಯವಾಗಿತ್ತು. 

    ಈಸೂರು ದುರಂತ-1942: 

    ಈಸೂರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಮುದಿನಿ ನದಿಯ ದಂಡೆಯ ಮೇಲಿರುವ ಒಂದು ಚಿಕ್ಕ ಗ್ರಾಮ. ಈ ಗ್ರಾಮವು ಭಾರತದಲ್ಲೇ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಮೊದಲ ಗ್ರಾಮವಾಯಿತು. ಈ ಗ್ರಾಮದ ಜನರು ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದರು. ಚಲೇಜಾವ್‌ ಚಳವಳಿಯಿಂದ ಪ್ರಭಾವಿತರಾದ ಈ ಗ್ರಾಮದ ಯುವಕರೆಲ್ಲರೂ ಗಾಂಧೀ ಟೋಪಿ ಧರಿಸಿ ರಾಷ್ಟ್ರಧ್ವಜ ಹಿಡಿದು ಸಭೆಗಳನ್ನ ನಡೆಸುತ್ತಿದ್ದರು. 1942ರ ಸೆಪ್ಟೆಂಬರ್‌ 25ರಂದು ಈ ಗ್ರಾಮದ ಜನರು ತಮ್ಮ ಗ್ರಾಮವು ಸ್ವತಂತ್ರವೆಂದು ಘೋಷಿಸಿ ವೀರಭದ್ರನ ದೇವಾಲಯದ ಮೇಲೆ ರಾಷ್ಟ್ರಧ್ವಜ ಹಾರಿಸಿದರು. ಪಟೇಲ ಮತ್ತು ಶಾನುಭೋಗರ ದಫ್ತರುಗಳನ್ನು ಕಿತ್ತುಕೊಂಡು ಸುಟ್ಟು ಹಾಕಿದರು. ಈ ಘಟನೆ ಘಟಿಸಿದ 3 ದಿನಗಳ ತರುವಾಯ ಒಬ್ಬ ಅಮಲ್ದಾರ್‌ ಮತ್ತು ಒಬ್ಬ ಪೊಲೀಸ್‌ ಅಧಿಕಾರಿಯು ಪೊಲೀಸರೊಂದಿಗೆ ಬಂದು ಪ್ರತಿಭಟನೆ ನಡೆಸಿದ ಗ್ರಾಮಸ್ಥರ ಮೇಲೆ ಗುಂಡು ಹಾರಿಸಿ 3 ಜನ ಗ್ರಾಮಸ್ಥರನ್ನು ಕೊಂದು ಹಾಕಿದರು. 

    ಈ ಘಟನೆಯಿಂದ ಕ್ರೋಧಗೊಂಡ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ದಂಗೆಯೆದ್ದರು. ಈ ಗಲಭೆಯಲ್ಲಿ ಪೊಲೀಸ್‌ ಅಧಿಕಾರಿಗಳೂ ಮರಣ ಹೊಂದಿದರು. ಈ ಸುದ್ದಿ ತಿಳಿದ ತಕ್ಷಣ ಸರ್ಕಾರವು ಈಸೂರು ಗ್ರಾಮಕ್ಕೆ ಸೈನ್ಯ ಮತ್ತು ಪೊಲೀಸ್‌ ಪಡೆಯನ್ನ ಕಳಿಸಿತು. ಈ ಸೈನ್ಯವು ಮುಗ್ಧ ಜನರ ಮೇಲೆ ಚಿತ್ರಹಿಂಸೆಯನ್ನು ಕೈಗೊಂಡಿತು. ಗುಂಡು ಹಾರಿಸಿ 41 ಜನರನ್ನು ಬಂಧಿಸಿತು. ದಂಗೆಗೆ ಕಾರಣರಾದವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಹೂಡಿತು. 1943ರ ಜನವರಿ 9 ರಂದು ಅಂದು ರಾಜ್ಯವಾಗಿದ್ದ ಮೈಸೂರು ಉಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಗುರಪ್ಪ, ಮಲ್ಲಪ್ಪ, ಹಾಲಪ್ಪ, ಸೂರ್ಯನಾರಾಯಣಾಚಾರ್ಯ ಮತ್ತು ಶಂಕರಪ್ಪ ಎಂಬ 5 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಸಿದ್ಧಮ್ಮ, ಹಾಲಮ್ಮ ಮತ್ತು ಪಾರ್ವತಮ್ಮ ಎಂಬ ಐದು ಜನರಿಗೆ ಜೀವಾವಧಿ ಗಡಿಪಾರು ಶಿಕ್ಷೆ ನೀಡಿತು. 1946ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಮೂವರು ಮಹಿಳೆಯರನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ದುರಂತವು ಸ್ಮರಣೀಯವಾದುದಾಗಿದೆ. 

    ಭಾರತದ ವಿಭಜನೆ: 

    ಸ್ವಾತಂತ್ರ್ಯ ಚಳವಳಿಯ ಉದ್ದಕ್ಕೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಖಂಡ ರಾಷ್ಟ್ರದ ಕಲ್ಪನೆ ಹೊಂದಿತ್ತು. ಆದರೆ ಮಹಮ್ಮದ್‌ ಅಲಿ ಜಿನ್ನಾ ಅವರು ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮಂಡಿಸುತ್ತಲೇ ಇದ್ದರು. 1940ರಲ್ಲಿ ನಡೆದ ಮುಸ್ಲಿಂ ಲೀಗ್‌ನ ಲಾಹೋರ್ ಅಧಿವೇಶನದಲ್ಲಿ ಜಿನ್ನಾ ಹಿಂದೂ ಮತ್ತು ಮುಸ್ಲಿಮರು ಒಂದು ದೇಶವಾಗಲು ಸಾಧ್ಯವೇ? ಎಂದು ಘೋಷಿಸಿದರು. ಇದನ್ನೂ ಓದಿ: IndependenceDay: ಭಾಗ-1: ಸ್ವಾತಂತ್ರ್ಯ ಹೋರಾಟದ ಹಾದಿ ವಿಭಿನ್ನ… ತ್ಯಾಗ ಬಲಿದಾನಗಳ ಸಂಕೇತ

    2ನೇ ಮಹಾಯುದ್ಧ ಮುಗಿದು ಬ್ರಿಟನ್‌ನಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿತು. ಇದು ಭಾರತದಲ್ಲಿನ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸಲು ಕ್ರಮ ಕೈಗೊಂಡಿತು. ಇದು ಕ್ಯಾಬಿನೆಟ್‌ ನಿಯೋಗವನ್ನು ಭಾರತಕ್ಕೆ ಸ್ವಯಂ ಅಧಿಕಾರವನ್ನು ನೀಡುವ ಕುರಿತು ಚರ್ಚಿಸಲು ಕಳುಹಿಸಿತು. ಈ ನಿಯೋಗವು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ನೊಂದಿಗೆ ಚರ್ಚಿಸಿತು. ಭಾರತಕ್ಕೆ ಫೆಡರಲ್ ಮಾದರಿ ಸರ್ಕಾರವನ್ನು ಸೂಚಿಸಿತು. ಸಂವಿಧಾನ ರಚನಾ ಸಮಿತಿ ಕರೆಯುವುದಾಗಿ  ಮತ್ತು ಮಧ್ಯಂತರ ರಾಷ್ಟ್ರೀಯ ಸರ್ಕಾರವನ್ನು ಸ್ಥಾಪಿಸಲು ಶಿಫಾರಸು ಮಾಡಿತು. ಆದ್ರೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಭಿನ್ನತೆ ಉಂಟಾಯಿತು.

    ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರಕ್ಕಾಗಿ 1946ರ ಆಗಸ್ಟ್ 16 ರಂದು ನೇರ ಕಾರ್ಯಾಚರಣೆ ದಿನಕ್ಕೆ ಕರೆ ನೀಡಿತು. ಇದರಿಂದ ದೇಶಾದ್ಯಂತ ಕೋಮುಗಲಭೆಗಳು ನಡೆದವು. ಬಂಗಾಳ ಒಂದರಲ್ಲೇ ಮುಸ್ಲಿಂ ಮೂಲಭೂತವಾದಿಗಳು ಕೇವಲ 48 ಗಂಟೆಗಳಲ್ಲಿ ಸಾವಿರಾರು ಹಿಂದೂಗಳನ್ನ ಕೊಂದರು. ಡಾ. ಬಾಬು ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ಸೇರಿದ ಸಂವಿಧಾನ ಸಭೆಯಲ್ಲಿ ಮುಸ್ಲಿಂ ಲೀಗ್ ಭಾಗವಹಿಸಲಿಲ್ಲ. ಇದನ್ನೂ ಓದಿ: ಭಾಗ-2: ಮರೆಯದ ದುರಂತ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ – ಗಾಂಧಿಯುಗದಲ್ಲಿ ಏನೆಲ್ಲಾ ಆಯ್ತು?

    ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸಂಬಂಧ ತೀರಾ ಹದಗೆಟ್ಟಿತ್ತು. ಈ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಶೀಘ್ರವಾಗಿ ಅಧಿಕಾರವನ್ನ ಹಸ್ತಾಂತರಿಸುವುದಾಗಿ ತಿಳಿಸಿ, 1946ರ ಮಾರ್ಚ್‌ನಲ್ಲಿ ಲಾರ್ಡ್ ಮೌಂಟ್ ಬ್ಯಾಟನ್ ಅವರನ್ನು ಭಾರತಕ್ಕೆ ವೈಸ್‌ರಾಯ್ ಆಗಿ ಕಳುಹಿಸಿತು. ಬ್ಯಾಟನ್‌ ಅವರು ಗಾಂಧೀಜಿ, ಜಿನ್ನಾ ಮತ್ತಿತರ ನಾಯಕರೊಂದಿಗೆ ಮಾತುಕತೆ ನಡೆಸಿ ಭಾರತವನ್ನು ವಿಭಜಿಸುವ ಯೋಜನೆ ರೂಪಿಸಿದರು. 1947ರ ಜುಲೈನಲ್ಲಿ ಭಾರತ ಸ್ವಾತಂತ್ರ್ಯ ಮಸೂದೆಯು ಕಾಯ್ದೆಯ ರೂಪವನ್ನು ಪಡೆಯಿತು. ಕಾಯ್ದೆಯನ್ವಯ 1947ರ ಆಗಸ್ಟ್ 15ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಪ್ರತ್ಯೇಕ ರಾಷ್ಟ್ರಗಳು ಉದಯಿಸಿದವು. ರಾಡ್‌ ಕ್ಲಿಫ್‌ ಆಯೋಗವು ಈ ದೇಶಗಳ ಗಡಿಗಳನ್ನು ಗುರುತಿಸಿತು. ಪಂಡಿತ್ ಜವಾಹರಲಾಲ್ ನೆಹರೂರವರು ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾಗ-2: ಮರೆಯಲಾಗದ ದುರಂತ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ – ಗಾಂಧಿಯುಗದಲ್ಲಿ ಏನೆಲ್ಲಾ ಆಯ್ತು?

    ಭಾಗ-2: ಮರೆಯಲಾಗದ ದುರಂತ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ – ಗಾಂಧಿಯುಗದಲ್ಲಿ ಏನೆಲ್ಲಾ ಆಯ್ತು?

    ಗಾಂಧಿಯುಗ- (1920-1947): ಇಂಗ್ಲೆಂಡ್‌ನಲ್ಲಿ (England) ಬ್ಯಾರಿಸ್ಟರ್‌ ಪದವಿ ಪಡೆದ ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಅಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಟವನ್ನೂ ಮಾಡಿದರು. ದಕ್ಷಿಣ ಆಫ್ರಿಕಾದಲ್ಲಿ (South Africa) ಬ್ರಿಟಿಷರ ವಿರುದ್ಧ ಮಾಡಿದ ಚಳವಳಿಯ ಸ್ಫೂರ್ತಿಯೂ ಭಾರತದಲ್ಲಿ ಬ್ರಿಟಿಷರನ್ನು ವಿಮೋಚನೆ ಮಾಡಲು ಸಹಕಾರಿಯಾಯಿತು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ 1920-1947ರ ಕಾಲವನ್ನು ಗಾಂಧಿಯುಗವೆಂದೂ ಕೆಲವರು ಗುರುತಿಸುತ್ತಾರೆ. ಭಾರತ ಸ್ವಾತಂತ್ರ್ಯ ಪಡೆಯುವವರೆಗೂ ನಡೆದ ಘಟನಾವಳಿಗಳಲ್ಲಿ ಗಾಂಧೀಜಿಯವರು ಮುಖ್ಯಭೂಮಿಕೆಯಲ್ಲಿದ್ದರು.

    ಮಹಾತ್ಮ ಗಾಂಧೀಜಿಯವರ ಪ್ರವೇಶದಿಂದಾಗಿ ಸ್ವಾತಂತ್ರ್ಯ ಚಳವಳಿಯು ಹೊಸ ಆಯಾಮ ಪಡೆಯಿತು. ಗಾಂಧೀಜಿಯವರು ತಮ್ಮ ಹೋರಾಟದಲ್ಲಿ ‘ಪರೋಕ್ಷ ಪ್ರತಿರೋಧ’, ‘ಅಹಿಂಸೆ’ ಮತ್ತು ‘ಸತ್ಯಾಗ್ರಹ ಪ್ರಮುಖ ತಂತ್ರಗಳನ್ನಾಗಿ ಬಳಸಿಕೊಂಡರು. ತಮ್ಮ ಸಿದ್ಧಾಂತಗಳನ್ನು ಅವರು ‘ಯಂಗ್ ಇಂಡಿಯಾ’ (Young India) ಪತ್ರಿಕೆಯಲ್ಲಿ ವ್ಯಕ್ತಪಡಿಸುತ್ತಾ ಹೋದರು. ಸತ್ಯಾಗ್ರಹವು ಇವರ ಹೋರಾಟದ ಪ್ರಮುಖ ಅಸ್ತ್ರವಾಯಿತು. ಇದನ್ನೂ ಓದಿ: IndependenceDay: ಭಾಗ-1: ಸ್ವಾತಂತ್ರ್ಯ ಹೋರಾಟದ ಹಾದಿ ವಿಭಿನ್ನ… ತ್ಯಾಗ ಬಲಿದಾನಗಳ ಸಂಕೇತ

    ಭಾರತದಲ್ಲಿ ತೀವ್ರಗೊಂಡ ಕ್ರಾಂತಿಕಾರಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಅದನ್ನ ಹತ್ತಿಕ್ಕುವ ಉದ್ದೇಶದಿಂದ ಅನೇಕ ಕಾಯ್ದೆಗಳನ್ನ ತರಲಾಯಿತು. ಅವುಗಳಲ್ಲಿ ಫೆಬ್ರವರಿ 1919ರಲ್ಲಿ ಜಾರಿಗೆ ತರಲಾದ ರೌಲತ್ ಕಾಯಿದೆಯು ಪ್ರಮುಖವಾಗಿದೆ. ಇದು ಕೇವಲ ಗುಮಾನಿಯ ಮೇಲೆ ಜನರನ್ನು ಬಂಧಿಸಿ ವಿಚಾರಣೆ ನಡೆಸುವ ಅಧಿಕಾರವನ್ನ ನ್ಯಾಯಾಧೀಶರಿಗೆ ನೀಡಿತು. ಗಾಂಧೀಜಿ ಅವರು ಈ ಕಾಯ್ದೆ ವಿರುದ್ಧ ಸತ್ಯಾಗ್ರಹ ಅಸ್ತ್ರ ಬಳಸಿ ಹೋರಾಟ ಪ್ರರಂಭಿಸಿದರು. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.

    ನೆನಪಿದ್ಯಾ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ?:

    ರೌಲತ್ ಕಾಯ್ದೆಯ ವಿರುದ್ಧ ಪಂಜಾಬ್‌ನಲ್ಲಿ ಚಳವಳಿಯು ವ್ಯಾಪಕವಾಗಿ ಹರಡಿತ್ತು. ಅಲ್ಲಲ್ಲಿ ಇದು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಸರ್ಕಾರವು ಅಮೃತಸರ ನಗರವನ್ನ ಜನರಲ್ ಡಯರ್ ಎಂಬ ಸೇನಾಧಿಕಾರಿಯ ಉಸ್ತುವಾರಿಗೆ ನೀಡಿತು. ಜನರಲ್ ಡಯರ್ ಪಕ್ಷುಬ್ಧ ಪರಿಸ್ಥಿತಿಯಲ್ಲಿ ನಗರವನ್ನು ಸೇನಾಳ್ವಿಕೆಗೆ ಒಳಪಡಿಸಿ ಸಭೆಗಳನ್ನು ನಿಷೇಧಿಸಿದನು. ಆದರೆ ಜಲಿಯನ್‌ ವಾಲಾಬಾಗ್‌ನಲ್ಲಿ ಸಭೆ ಸೇರಲು ಹೋರಾಟಗಾರರು ಮೊದಲೇ ನಿರ್ಧರಿಸಿದ್ದರು. ಅವರಿಗೆ ಈ ನಿಷೇಧದ ಬಗ್ಗೆ ಪೂರ್ಣ ತಿಳುವಳಿಕೆ ಇರಲಿಲ್ಲ. ಸುಮಾರು 20 ಸಾವಿರ ಜನ ರೌಲತ್ ಕಾಯ್ದೆಯ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಸೇರಿದ್ದರು. ಸುತ್ತಲೂ ಎತ್ತರವಾದ ಗೋಡೆಗಳಿಂದ, ಕಿರಿದಾದ ಪ್ರವೇಶ ದ್ವಾರದಿಂದ ಕೂಡಿದ ಜಲಿಯನ್ ವಾಲಾಬಾಗ್‌ನಲ್ಲಿ ಸಭೆಯು ಶಾಂತಿಯಿಂದ ನಡೆಯುತ್ತಿತ್ತು. ಅಲ್ಲಿಗೆ ತನ್ನ ಸೈನ್ಯದೊಂದಿಗೆ ಬಂದ ಜನರಲ್ ಡಯರ್‌ ಯಾವ ಮುನ್ಸೂಚನೆ ನೀಡದೆ ಶಾಂತಿಯುತವಾಗಿ ಪ್ರತಿಭಟನಾ ಸಭೆ ಸೇರಿದ್ದ ಜನರ ಮೇಲೆ ಅಮಾನುಷವಾಗಿ ಗುಂಡಿನ ಮಳೆಗರೆದನು.

    ಈ ಹತ್ಯಾಕಾಂಡದಲ್ಲಿ 379 ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡರು. ಸಹಸ್ರಾರು ಜನರು ಗಾಯಗೊಂಡರು. ಈ ಘಟನೆಯನ್ನ ಜಲಿಯನ್ ವಾಲಾಬಾಗ್ ದುರಂತ ಎಂದು ಕರೆಯಲಾಯಿತು. ಸರ್ಕಾರವು ಜಲಿಯನ್‌ ವಾಲಾಬಾಗ್ ದುರಂತದ ವಿಚಾರಣೆಗಾಗಿ ಹಂಟರ್ ಆಯೋಗ ನೇಮಿಸಿತು. ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಭಾರತೀಯರ ಮೇಲಿನ ದೌರ್ಜನ್ಯ ಮತ್ತೂ ಮುಂದುವರಿಯಿತು.

    ಅಸಹಾಕಾರ ಚಳವಳಿ:

    ಗಾಂಧೀಜಿ ಬ್ರಿಟಿಷರ ವಿರುದ್ಧ 1920ರಲ್ಲಿ ಅಸಹಕಾರ ಚಳವಳಿಗೆ ಕರೆ ನೀಡಿದರು. ಅವರ ಕರೆಯನ್ನು ಬೆಂಬಲಿಸಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನ ಬಹಿಷ್ಕರಿಸಿದರು. ವಕೀಲರು ನ್ಯಾಯಾಲಯಕ್ಕೆ ಬಹಿಷ್ಕರಿಸಿದರು. ಭಾರತೀಯ ಗಣ್ಯರು, ಬ್ರಿಟಿಷರು ನೀಡಿದ್ದ ಪುರಸ್ಕಾರಗಳನ್ನ ಹಿಂದಿರುಗಿಸಿದರು. ಈ ಚಳವಳಿಯನ್ನು ಬೆಂಬಲಿಸಿ ಮೋತಿಲಾಲ್‌ ನೆಹರೂ ಸಿ.ಆರ್‌ ದಾಸ್‌ ತಮ್ಮ ವಕೀಲ ವೃತ್ತಿಯನ್ನೇ ತ್ಯಜಿಸಿದರು. ಈ ಅವಧಿಯಲ್ಲಿ ಬ್ರಿಟನ್‌ ರಾಜಕುಮಾರನ ಭಾರತ ಭೇಟಿಯನ್ನೂ ವಿರೋಧಿಸಲಾಯಿತು. ರಾಜಕುಮಾರನ ಭೇಟಿಯ ವಿರೋಧವಾಗಿ ದೇಶಾದ್ಯಂತ ಹರತಾಳಗಳು ನಡೆದವು. ಇದನ್ನೂ ಓದಿ: 77th Independence Day: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ

    ಕಾನೂನು ಭಂಗ ಚಳವಳಿ:

    ಕಾನೂನು ಭಂಗ ಚಳವಳಿಯ ನೇತೃತ್ವ ವಹಿಸಿಕೊಂಡ ಗಾಂಧೀಜಿಯವರು ವೈಸರಾಯ್ ಇರ್ವಿನ್ ಮುಂದೆ ಉಪ್ಪಿನ ಮೇಲಿನ ತೆರಿಗೆ ರದ್ದತಿಯು ಸೇರಿದಂತೆ 11 ಬೇಡಿಕೆಗಳನ್ನು ಸಲ್ಲಿಸಿದ್ದರು. ಈ ಬೇಡಿಕೆಗಳು ಈಡೇರದೇ ಹೋದಲ್ಲಿ ಕಾನೂನು ಭಂಗ ಚಳವಳಿ ಆರಂಭಿಸುವುದಾಗಿ ಗಾಂಧೀಜಿಯವರು ಘೋಷಿಸಿದರು. ಆದ್ರೆ ಇರ್ವಿನ್ ಅವರ ಬೇಡಿಕೆಗಳನ್ನ ಪರಿಗಣಿಸಲಿಲ್ಲ. ಇದರ ಪರಿಣಾಮವಾಗಿ ಗಾಂಧೀಜಿಯವರು 1930ರಲ್ಲಿ ಸಬರಮತಿ ಆಶ್ರಮದಿಂದ ಸೂರತ್‌ನ ಸಮೀಪದ ಸಮುದ್ರ ತೀರದ ದಂಡಿಯವರೆಗೆ ತಮ್ಮ ಅನುಯಾಯಿಗಳೊಂದಿಗೆ ಹೊರಟು ದಂಡಿಯ ಕಡಲ ತೀರದಲ್ಲಿ ತಾವೇ ಉಪ್ಪು ತಯಾರಿಸಿ ಕಾನೂನು ಭಂಗ ಚಳವಳಿ ಪ್ರಾರಂಭಿಸಿದರು. ಈ ಘಟನೆಯನ್ನು ಇತಿಹಾಸದಲ್ಲಿ ‘ದಂಡಿ ಕಾಲ್ನಡಿಗೆಯಲ್ಲಿ ಎಂದು ಕರೆಯುತ್ತಾರೆ.

    ಕಾನೂನು ಭಂಗ ಚಳವಳಿಯಲ್ಲಿ ಭಾಗವಹಿಸಿದ್ದ ವಿಜಯಲಕ್ಷ್ಮಿ ಪಂಡಿತ್, ಕಮಲಾ ನೆಹರೂ, ವಲ್ಲಭಬಾಯಿ ಪಟೇಲ್‌, ರಾಜಗೋಪಾಲಚಾರಿ, ಬಾಬು ರಾಜೇಂದ್ರ ಪ್ರಸಾದ್‌ ಮೊದಲಾದ ಸಾವಿರಾರು ಜನರನ್ನ ದೇಶದ ನಾನಾ ಭಾಗಗಳಲ್ಲಿ ವ್ಯಾಪಿಸಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • IndependenceDay: ಭಾಗ-1: ಸ್ವಾತಂತ್ರ್ಯ ಹೋರಾಟದ ಹಾದಿ ವಿಭಿನ್ನ… ತ್ಯಾಗ ಬಲಿದಾನಗಳ ಸಂಕೇತ

    IndependenceDay: ಭಾಗ-1: ಸ್ವಾತಂತ್ರ್ಯ ಹೋರಾಟದ ಹಾದಿ ವಿಭಿನ್ನ… ತ್ಯಾಗ ಬಲಿದಾನಗಳ ಸಂಕೇತ

    ಭಾರತವು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಿ 76 ವರ್ಷ ಕಳೆದು 77ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಇವತ್ತು ನಾವು ಮಾತನಾಡುವ, ಸ್ವಂತ ವಿಚಾರಧಾರೆಗಳನ್ನ ಹಂಚಿಕೊಳ್ಳುವ, ಅಪೇಕ್ಷೆಯಂತೆ ಬದುಕುವ ಸ್ವಾತಂತ್ರ್ಯನ್ನ ಯಥೇಚ್ಛವಾಗಿ ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯ ಸೇನಾನಿಗಳು, ನೇತಾರರ ತ್ಯಾಗ, ನೋವು, ಸಂಘರ್ಷ, ರಕ್ತ, ಬೆವರ ಹನಿ ಇದಕ್ಕೆ ಕಾರಣ. ಈ ಸುದೀರ್ಘ ಹೋರಾಟದ ಚಿತ್ರಣ ಕಟ್ಟಿಕೊಡುವುದು ಸುಲಭವಲ್ಲ. ಕೆಲ ಪ್ರಮುಖ ಘಟನಾವಳಿಗಳನ್ನ ಇಲ್ಲಿ ದಾಖಲಿಸಲಾಗಿದೆ.

    ಸ್ವಾತಂತ್ರ್ಯ ಹೋರಾಟದ ಹಾದಿ 

    ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನ ಜಾರಿಗೆ ತಂದಿದ್ದರು. ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು. ಇದರಿಂದಾಗಿ ಭಾರತೀಯರು ಅಸಮಾಧಾನಗೊಂಡರು. ಬ್ರಿಟಿಷರ ಆಡಳಿತದ ಬಗ್ಗೆಯೂ ಜನರಲ್ಲಿ ಅಸಮಾಧಾನವಿತ್ತು. ಅಸಮಾಧಾನವು 1857ರಲ್ಲಿ ಮಹಾಪ್ರತಿಭಟನೆಯ ರೂಪದಲ್ಲಿ ಸ್ಫೋಟಗೊಂಡಿತು. ಇದನ್ನ ಕೆಲವು ಭಾರತೀಯ ಇತಿಹಾಸಕಾರರು ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಕರೆದರು. ಆದ್ರೆ ಇತಿಹಾಸಕಾರರು ಈ ದಂಗೆಯಲ್ಲಿ ಕೇವಲ ಸಿಪಾಯಿಗಳು ಮಾತ್ರ ಪಾಲ್ಗೊಂಡಿದ್ದರಿಂದ ʻಸಿಪಾಯಿ ದಂಗೆʼ ಎಂದು ಕರೆದರು. ಇದನ್ನೂ ಓದಿ: ಸ್ವಾತಂತ್ರ್ಯೋತ್ಸವಕ್ಕೆ ಕೆಂಪುಕೋಟೆ ಸಿದ್ದ- ಮೋದಿ ಭಾಷಣ ಕೇಳಲಿದ್ದಾರೆ 1800 ವಿಶೇಷ ಆಹ್ವಾನಿತರು

    ಸ್ವಾತಂತ್ರ್ಯ ಹೋರಾಟ: 

    ಭಾರತದಲ್ಲಿ ಬ್ರಿಟಿಷ್‌ ಸಾಮ್ರಾಜ್ಯ ಸ್ಥಾಪನೆಯನ್ನು ವಿರೋಧಿಸುವ ಹಲವು ಹೋರಾಟಗಳು ನಡೆದವು. ಅನೇಕ ರಾಜಪ್ರಭುತ್ವಗಳು ಬ್ರಿಟಿಷರ ವಿರುದ್ಧ ಹೋರಾಡಿದ್ದು, ಅವರ ಸ್ವಹಿತಾಸಕ್ತಿಯಾಗಿತ್ತು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಹಲವಾರು ಬದಲಾವಣೆಗಳು ಹಾಗೂ ಪರಿಣಾಮಕಾರಿ ಸುಧಾರಣೆಗಳು ಕಂಡುಬಂದವು. ಸಾರಿಗೆ ಮತ್ತು ಸಂಪರ್ಕ, ಪತ್ರಿಕೋದ್ಯಮ, ಸಂಘಗಳ ಸ್ಥಾಪನೆ ಮೊದಲಾದ ಆಡಳಿತಗಳಲ್ಲಿ ಸುಧಾರಣೆಗಳು ಕಂಡುಬಂದವು. ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯನು ಸಮಾನ ಪ್ರಜೆ, ಪ್ರತಿಯೊಬ್ಬನಿಗೂ ಸಮಾನ ಹಕ್ಕುಗಳಿವೆ: ದ್ರೌಪದಿ ಮುರ್ಮು

    ಜನರು ಅಲ್ಲಲ್ಲಿ ಸಂಘಟಿತರಾಗಿ ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಸಂಸ್ಥೆಗಳನ್ನು ಅನೇಕ ಪ್ರಾಂತ್ಯಗಳಲ್ಲಿ ಹುಟ್ಟುಹಾಕಿದರು. ಲಾರ್ಡ್ ಲಿಟ್ಟನ್ ಪತ್ರಿಕೋದ್ಯಮದಲ್ಲಿ ಜನರನ್ನು ನಿಯಂತ್ರಿಸಲು 1878ರಲ್ಲಿ ‘ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ’ ಒಂದೆಡೆ ಜಾರಿಗೆ ತಂದರೆ, ಮತ್ತೊಂದೆಡೆ ಲಾರ್ಡ್ ರಿಪ್ಪನ್ ಇಲ್ಬರ್ಟ್ ಮಸೂದೆಯನ್ನು ಜಾರಿಗೆ ತಂದು, ಏಕರೂಪ ಕಾನೂನು ವ್ಯವಸ್ಥೆಗೆ ದಾರಿ ಮಾಡಿಕೊಟ್ಟನು. ಈ ಮಸೂದೆಯನ್ನು ವಿರೋಧಿಸಿ ಭಾರತದಲ್ಲಿನ ಬ್ರಿಟಿಷರು ಸಂಘಟಿತ ಪ್ರಯತ್ನ ನಡೆಸಿ ಜಯಶೀಲರಾದರು.

    ದೇಶಾದ್ಯಂತ ಹಲವಾರು ರೀತಿಯ ಹೋರಾಟಗಳ ಫಲವಾಗಿ ಸ್ವಾತಂತ್ರ್ಯ ಹೋರಾಟವು ಒಂದು ಸ್ವರೂಪ ಪಡೆಯಲು ಸಾಧ್ಯವಾಯಿತು. ಇನ್ಮುಂದೆ ಸಶಸ್ತ್ರ ಹೋರಾಟಗಳು ಉದ್ಭವವಾಗಬಾರದೆಂದು ಬ್ರಿಟಿಷರು ಕಾರ್ಯತಂತ್ರ ರೂಪಿಸಿದರು. ಪರಿಣಾಮವಾಗಿ 1858ರ ರಾಣಿ ಮಹಾಸನ್ನದನ್ನು ಬ್ರಿಟಿಷ್ ಸರ್ಕಾರವು ಘೋಷಿಸಿ ಭಾರತೀಯರನ್ನ ಬ್ರಿಟನ್ನಿನ ಪ್ರಜೆಗಳೆಂದು ಪರಿಗಣಿಸಿತು. ಆ ಮೂಲಕ ಭಾರತೀಯರಿಗೆ ಅನೇಕ ಬಗೆಯ ಸವಲತ್ತುಗಳನ್ನ ನೀಡುವುದಾಗಿ ಬ್ರಿಟಿಷ್ ಸರ್ಕಾರ ಘೋಷಣೆ ಮಾಡಿತು. ನಂತರದ ಬೆಳವಣಿಗೆಯಲ್ಲಿ ಉನ್ನತ ವರ್ಗದ ಇಂಗ್ಲಿಷ್ ವಿದ್ಯಾಭ್ಯಾಸವನ್ನ ಕಲಿತ ಹೊಸ ಪೀಳಿಗೆಯ ಭಾರತೀಯರು ಸಂವಿಧಾನಾತ್ಮಕವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಲು ಆರಂಭಿಸಿದರು. ಇವರ ಒಟ್ಟಾರೆ ಪ್ರಯತ್ನಗಳ ಪ್ರತಿಫಲವೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೆ ನಾಂದಿಯಾಯಿತು. ಅಂದುಕೊಂಡಂತೆ 1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸ್ಥಾಪನೆಯಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತೀಯರಲ್ಲಿ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಮುಂದಾಯಿತು. ದೇಶೀ ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸಿ ಆ ಮೂಲಕ ರಾಜಕೀಯ ಚರ್ಚೆಗಳನ್ನು ಕಾಲನಂತರದಲ್ಲಿ ಕಾಂಗ್ರೆಸ್‌ ಸಹ ಇಬ್ಬಾಗವಾಯಿತು. 

    ಬಂಗಾಳ ವಿಭಜನೆ: 

    ಬಂಗಾಳವು ಬ್ರಿಟಿಷ್ ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಕೇಂದ್ರವಾಗಿತ್ತು. ಇದನ್ನ ಹತ್ತಿಕ್ಕಲು ವೈಸ್‌ರಾಯ್ ಲಾರ್ಡ್ ಕರ್ಜನ್‌ ಆಡಳಿತಾತ್ಮಕ ನೆಪ ಮುಂದಿಟ್ಟುಕೊಂಡು ಬಂಗಾಳ ವಿಭಜನೆಯ ಯೋಜನೆ ರೂಪಿಸಿದನು. ಪೂರ್ವ ಮತ್ತು ಪಶ್ಚಿಮ ಬಂಗಾಳವನ್ನು ಹಿಂದೂ ಮತ್ತು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಾಗಿ ವಿಂಗಡಿಸಿದನು. ಹೀಗೆ ಸಮುದಾಯಗಳ ನಡುವೆ ಕಂದಕವನ್ನುಂಟುಮಾಡಿ ಸ್ವಾತಂತ್ರ್ಯ ಹೋರಾಟದ ತೀವ್ರತೆ ಕುಗ್ಗಿಸುವ ಸಂಚು ರೂಪಿಸಿದನು. 

    ಬ್ರಿಟಿಷರ ಒಡೆದು ಆಳುವ ನೀತಿಯ ಪ್ರತೀಕವಾಗಿದ್ದ 1905ರ ಬಂಗಾಳ ವಿಭಜನೆಯನ್ನು ಅಂದಿನ ರಾಷ್ಟ್ರೀಯ ಕಾಂಗ್ರೆಸ್ ವಿರೋಧಿಸಿತು. ಆದ್ರೆ 1906ರಲ್ಲಿ ಸ್ಥಾಪನೆಯಾದ ಮುಸ್ಲಿಂ ಲೀಗ್ ಬಂಗಾಳ ವಿಭಜನೆಯನ್ನ ಬೆಂಬಲಿಸಿತು. ಬಂಗಾಳದ ವಿಭಜನೆಯ ವಿರುದ್ಧ ದೇಶಾದ್ಯಂತ ಪ್ರತಿರೋಧ ವ್ಯಕ್ತವಾಯಿತು. ಪ್ರತಿರೋಧ ಒಂದು ಬಗೆಯಾಗಿ ಸ್ವದೇಶಿ ಚಳವಳಿಯನ್ನು ಪ್ರಾರಂಭಿಸಲಾಯಿತು. ತೀವ್ರವಾದಿಗಳು ಇದನ್ನ ದೇಶಾದ್ಯಂತ ಕೊಂಡೊಯ್ದರು. ಈ ನಡುವೆ ವಿದೇಶಿ ವಸ್ತುಗಳು ಮತ್ತು ಅದನ್ನು ಪ್ರೋತ್ಸಾಹಿಸುವ ಸಂಸ್ಥೆಗಳನ್ನ ಬಹಿಷ್ಕರಿಸಲು ಸ್ವದೇಶಿ ಆಂದೋಲನ ಕರೆ ನೀಡಿತು. ಸ್ವದೇಶಿ ವಸ್ತುಗಳನ್ನು ಬಳಸುವಂತೆ ಅವರು ಭಾರತೀಯರನ್ನ ಪ್ರೇರೇಪಿಸಿದರು. ಭಾರತೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ 1911ರಲ್ಲಿ ಬ್ರಿಟಿಷ್‌ ಸರ್ಕಾರ ಬಂಗಾಳ ವಿಭಜನೆಯನ್ನು ಹಿಂಪಡೆಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 77th Independence Day: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ

    77th Independence Day: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ

    ನವದೆಹಲಿ: ದೇಶದೆಲ್ಲೆಡೆ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ನವದೆಹಲಿಯ ಕೆಂಪು ಕೋಟೆಯಲ್ಲಿ ಇಂದು (ಮಂಗಳವಾರ) ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿದರು.

    77ನೇ ಸ್ವಾತಂತ್ರ್ಯ ದಿನದಂದು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಪುತ್ಥಳಿಗೆ ಪ್ರಧಾನಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಕೆಂಪು ಕೋಟೆ ಕಡೆ ಆಗಮಿಸಿದರು.

    ಬಳಿಕ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಐಎಎಫ್ ಹೆಲಿಕಾಪ್ಟರ್ ತ್ರಿವರ್ಣ ಧ್ವಜಕ್ಕೆ ಪುಷ್ಪವೃಷ್ಟಿ ಮಾಡಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವಾತಂತ್ರ್ಯೋತ್ಸವಕ್ಕೆ ಕೆಂಪುಕೋಟೆ ಸಿದ್ದ- ಮೋದಿ ಭಾಷಣ ಕೇಳಲಿದ್ದಾರೆ 1800 ವಿಶೇಷ ಆಹ್ವಾನಿತರು

    ಸ್ವಾತಂತ್ರ್ಯೋತ್ಸವಕ್ಕೆ ಕೆಂಪುಕೋಟೆ ಸಿದ್ದ- ಮೋದಿ ಭಾಷಣ ಕೇಳಲಿದ್ದಾರೆ 1800 ವಿಶೇಷ ಆಹ್ವಾನಿತರು

    ನವದೆಹಲಿ: 77ನೇ ಸ್ವಾತಂತ್ರ್ಯ ದಿನಾಚರಣೆಗೆ (Independence Day) ಇಡೀ ದೇಶ ಸಜ್ಜಾಗಿದ್ದು, ಈಗಾಗಲೇ ಸ್ವಾತಂತ್ರ್ಯ ಸಂಭ್ರಮ ಎಲ್ಲೆಡೆ ಕಂಡು ಬರುತ್ತಿದೆ.

    ಸ್ವಾತಂತ್ರ್ಯೋತ್ಸವಕ್ಕೆ ದೆಹಲಿಯ ಕೆಂಪುಕೋಟೆ (Red Fort) ಸಿದ್ದವಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಲ್ಲಿ ಧ್ವಜಾರೋಹಣ ಮಾಡಲಿದ್ದು, ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜನ ಭಾಗಿದಾರ್ ಥೀಮ್‍ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ NEP ರದ್ದು: ಸಿದ್ದರಾಮಯ್ಯ ಘೋಷಣೆ

     

    1800 ವಿಶೇಷ ಆಹ್ವಾನಿತರು ಸೇರಿ ಒಟ್ಟು 20 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಭಯೋತ್ಪಾದಕ ದಾಳಿ ತಡೆಯಲು ಹದ್ದಿನಗಣ್ಣಿಡಲಾಗಿದೆ. ಆಂಟಿ ಡ್ರೋನ್ ಸಿಸ್ಟಂ ಅಳವಡಿಸಲಾಗಿದೆ.

    ವಿಶೇಷ ಅತಿಥಿಗಳಲ್ಲಿ 600 ಕ್ಕೂ ಹೆಚ್ಚು ಗ್ರಾಮಗಳ 400 ಸರಪಂಚ್‌ಗಳು, ರೈತ ಉತ್ಪಾದಕ ಸಂಸ್ಥೆಗಳ ಯೋಜನೆಯ 250 ಅತಿಥಿಗಳು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಯ ತಲಾ 50 ಮಂದಿ ಭಾಗವಹಿಸಲಿದ್ದಾರೆ. ಸೆಂಟ್ರಲ್‌ ವಿಸ್ತಾ ಕಟ್ಟಡ ಕಟ್ಟಿದ 50 ಮಂದಿ ಶ್ರಮ ಯೋಗಿ ಕಾರ್ಮಿಕರು, 50 ಖಾದಿ ಕಾರ್ಮಿಕರು, ಗಡಿಯಲ್ಲಿ ರಸ್ತೆ ನಿರ್ಮಾಣ ಮಾಡಿದ 50 ಮಂದಿ, ಅಮೃತ್ ಸರೋವರ ಮತ್ತು ಹರ್ ಘರ್ ಜಲ ಯೋಜನೆಯಲ್ಲಿ ತೊಡಗಿದ 50 ಮಂದಿ, 50 ಪ್ರಾಥಮಿಕ ಶಾಲಾ ಶಿಕ್ಷಕರು, 50 ದಾದಿಯರು ಮತ್ತು 50 ಮೀನುಗಾರರನ್ನು ವಿಶೇಷವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

    ದೇಶಾದ್ಯಂತ ಹರ್ ಘರ್ ತಿರಂಗಾ (Har Ghar Tiranga) ಅಭಿಯಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮಂತ್ರಿ ಅಮಿತ್ ಶಾ ದಂಪತಿ ತಮ್ಮ ನಿವಾಸದ ಮೇಲೆ ತಿರಂಗಾ ಹಾರಿಸಿದ್ದಾರೆ. ಪ್ರಧಾನಿ ಕರೆ ಮೇರೆಗೆ ಪ್ರಮುಖರು ತಮ್ಮ ಟ್ವಿಟ್ಟರ್ ಪ್ರೊಫೈಲ್‍ಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]