Tag: Red Carpet

  • ಫೋಟೋಶೂಟ್ ಮೂಡ್‌ನಲ್ಲಿ ಪವಿತ್ರಾ ಗೌಡ

    ಫೋಟೋಶೂಟ್ ಮೂಡ್‌ನಲ್ಲಿ ಪವಿತ್ರಾ ಗೌಡ

    ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಇದೀಗ ಬ್ಯುಸಿನೆಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ನೂರಾರು ದಿನಗಳ ಕಾಲ ಜೈಲಿನಲ್ಲಿ ಇದ್ದು ಬಂದ ನಂತರ ಟೆಂಪಲ್ ರನ್ ಮಾಡಿದ್ದ ಪವಿತ್ರಾ ಗೌಡ (Pavithra Gowda), ಆನಂತರ ರೆಡ್ ಕಾರ್ಪೆಟ್ (Red Carpet) ಕಂಪನಿಯಲ್ಲಿ ತೊಡಗಿಕೊಂಡಿದ್ದರು. ಅದಕ್ಕಾಗಿ ಹಲವು ರಾಜ್ಯಗಳನ್ನೂ ಸುತ್ತಿದ್ದರು. ಇದೀಗ ಆ ಬ್ಯುಸಿನೆಸನ್ನು ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋಗುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

    ಒಂದು ಕಡೆ ಪವಿತ್ರಾ ಗೌಡ ಬ್ಯುಸಿನೆಸ್ ಕೆಲಸಗಳನ್ನು ತೊಡಗಿಕೊಂಡಿದ್ದರೆ, ಮತ್ತೊಂದು ಕಡೆ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ರದ್ದು ಕುರಿತಾದ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ನೀಡಿರುವ ಜಾಮೀನನ್ನು ಸುಪ್ರೀಂಕೋರ್ಟ್ (Supreme Court) ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದ್ದಾರೆ. ಯಾಕೆ ಜಾಮೀನು ರದ್ದು ಮಾಡಬಾರದು ಎಂದು ಕೇಳಿದ್ದಾರೆ. ಒಂದು ವೇಳೆ ಜಾಮೀನು ರದ್ದಾದರೆ, ಮತ್ತೆ ಪವಿತ್ರಾಗೆ ಜೈಲೇ ಗತಿ. ಇದನ್ನೂ ಓದಿ:  ರಾಮ-ಲಕ್ಷ್ಮಣರ ಜೊತೆ `ರಾಮಾಯಣ’ ಸೃಷ್ಟಿಕರ್ತ!

    ಈ ಟೆನ್ಷನ್ ನಡುವೆಯೇ ರೆಡ್ ಕಾರ್ಪೆಟ್‌ಗಾಗಿ ಅವರು ಫೋಟೋಶೂಟ್ ಮಾಡಿಸಿದ್ದಾರೆ. ರೂಪದರ್ಶಿಗೆ ಪೋಸ್ ಹೇಗೆ ಕೊಡಬೇಕು ಎನ್ನುವುದನ್ನು ಪವಿತ್ರಾ ಗೌಡ ಪಾಠ ಮಾಡುತ್ತಿದ್ದಾರೆ. ಆ ವೀಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವೀಡಿಯೋ ಸದ್ಯ ವೈರಲ್ ಆಗಿದೆ. ಜುಲೈ 22ರಂದು ಜಾಮೀನು ಕುರಿತಾದ ತೀರ್ಪು ಬರಲಿದ್ದು, ಏನಾಗಲಿದೆ ಎಂದು ಕಾದು ನೋಡಬೇಕು.

  • ಪತ್ನಿ ಜೊತೆ ಕಾನ್ಸ್ ನಲ್ಲಿ ಕಾಣಿಸಿಕೊಂಡ ನಿರ್ದೇಶಕ ಅಟ್ಲಿ

    ಪತ್ನಿ ಜೊತೆ ಕಾನ್ಸ್ ನಲ್ಲಿ ಕಾಣಿಸಿಕೊಂಡ ನಿರ್ದೇಶಕ ಅಟ್ಲಿ

    ಫ್ರಾನ್ಸ್ ದೇಶದ ಕಾನ್ಸ್ ನಗರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾನ್ಸ್ ಚಿತ್ರೋತ್ಸವದ (Cannes Festival) ರೆಡ್ ಕಾರ್ಪೆಟ್ ವಿಭಾಗದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ (Atlee) ತಮ್ಮ ಪತ್ನಿ ಪ್ರಿಯಾ ಅಟ್ಲಿ (Priya Atlee) ಜೊತೆಗೆ ಭಾಗವಹಿಸಿದ್ದರು. ಕಪ್ಪು ಬಣ್ಣದ ಉಡುಗಿಯಲ್ಲಿ ಕಾಣಿಸಿಕೊಂಡ ದಂಪತಿ ನಗು ನಗುತ್ತಲೇ ಎಲ್ಲರತ್ತ ಕೈ ಬೀಸಿ ಹೆಜ್ಜೆ ಹಾಕಿದರು.

    ಒಂದು ಕಡೆ ಕಾನ್ಸ್ ನ ರೆಡ್ ಕಾರ್ಪೆಟ್ (Red Carpet) ಸಾಕಷ್ಟು ಸುದ್ದಿ ಮಾಡುತ್ತಿದ್ದರೆ, ಮತ್ತೊಂದು ಕಡೆ ಈ ಕುರಿತು ಟೀಕೆಗಳು ಕೇಳಿ ಬಂದಿವೆ. ಪ್ರತಿಷ್ಠಿತ ಕಾನ್ಸ್ (Cannes Festival) ಚಿತ್ರೋತ್ಸವದ ವಿರುದ್ಧ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಗರಂ ಆಗಿದ್ದಾರೆ. ಕಾನ್ಸ್ ಅದೊಂದು ಹೆಮ್ಮೆಯ ಚಿತ್ರೋತ್ಸವ, ಅದರ ಬದಲು ಅದನ್ನು ಫ್ಯಾಶನ್ ಶೋ ಆಗಿ ಪರಿವರ್ತನೆ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ. ಕಾನ್ಸ್ ಚಿತ್ರೋತ್ಸವದ ಪ್ರತಿಷ್ಠೆಯನ್ನು ಉಳಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ. ಇದನ್ನೂ ಓದಿ:ಈ ಕಾರಣಕ್ಕಾಗಿ ಯಶ್ ಸಿನಿಮಾ ಕೈ ಬಿಟ್ಟರು: ನಿರ್ದೇಶಕ ನರ್ತನ್

    ನಟಿಯರ ವಿವಿಧ ರೀತಿಯ ಕಾಸ್ಟ್ಯೂಮ್ ಗಳಿಂದಾಗಿ ಕಾನ್ಸ್ ಸಾಕಷ್ಟು ಸುದ್ದಿ ಆಗುತ್ತದೆ. ಅದರ ಹೊರತಾಗಿ ಚಿತ್ರೋತ್ಸವದಲ್ಲಿ ಏನೆಲ್ಲ ನಡೆಯುತ್ತದೆ ಎನ್ನುವುದು ಜಗತ್ತಿಗೆ ಗೊತ್ತೇ ಆಗುವುದಿಲ್ಲ. ರೆಡ್ ಕಾರ್ಪೆಟ್ ನಲ್ಲಿ ನಡೆಯುವ ಫ್ಯಾಷನ್ ಶೋ ಮಾತ್ರ ಹೆಚ್ಚು ಸದ್ದು ಮಾಡುತ್ತದೆ. ಇದೇ ವಿವೇಕ್ ಅಗ್ನಿಹೋತ್ರಿ ಕೋಪಕ್ಕೆ ಕಾರಣವಾಗಿದೆ. ಒಳ್ಳೊಳ್ಳೆ ಚಿತ್ರಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದಿದ್ದಾರೆ.

    ಈ ಬಾರಿಯ ಕಾನ್ಸ್ ನಲ್ಲಿ ಸಾಕಷ್ಟು ಸುದ್ದಿಯಾಗಿದ್ದು ಬಾಲಿವುಡ್ ನಟಿ ಐಶ್ವರ್ಯ ರೈ (Aishwarya Rai) ಅವರ ವಿಚಿತ್ರ ಕಾಸ್ಟ್ಯೂಮ್. ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ನಾನಾ ದೇಶಗಳು ಕೂಡ ಅದಕ್ಕೆ ಮಹತ್ವ ನೀಡಿದ್ದವು. ಹೀಗಾಗಿ ಪರೋಕ್ಷವಾಗಿ ಐಶ್ವರ್ಯ ವಿರುದ್ಧವೂ ವಿವೇಕ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಅದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಕನ್ನಡತಿ ಇತಿ ಆಚಾರ್ಯ

    ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಕನ್ನಡತಿ ಇತಿ ಆಚಾರ್ಯ

    ಪ್ರತಿಷ್ಠಿತ ಅಂತಾರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್ ಕ್ಯಾನೆಸ್ (Cannes Film Festival) ಹಬ್ಬ ಫ್ರಾನ್ಸ್ ನಲ್ಲಿ ನಡೆಯುತ್ತಿದೆ. ಬಾಲಿವುಡ್ ತಾರೆಯರು ಭಿನ್ನ ವಿಭಿನ್ನ ಉಡುಗೆ ತೊಟ್ಟು ಕ್ಯಾನೆಸ್ ಫಿಲ್ಮಂ ಫೆಸ್ಟಿವಲ್ ರೆಡ್ ಕಾರ್ಪೆಟ್ (Red Carpet) ನಲ್ಲಿ ಹೆಜ್ಜೆ ಹಾಕಿದ್ದಾರೆ. 10 ದಿನಗಳ ಕಾಲ ನಡೆಯುವ ಈ ಸಿನಿಮಾ ಹಬ್ಬದಲ್ಲಿ ಕನ್ನಡತಿ ಇತಿ ಆಚಾರ್ಯ (Ithi Acharya) ಮೊದಲ ಬಾರಿಗೆ ಹೆಜ್ಜೆ ಹಾಕಿದ್ದಾರೆ.

    ವಿಮ್ ವೆಂಡರ್ಸ್ ನಿರ್ದೇಶಿಸಿದ ಅನ್ಸೆಲ್ಮ್ ಸಿನಿಮಾಕ್ಕಾಗಿ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಹೆಜ್ಜೆ ಹಾಕುವ ಅವಕಾಶ ಇತಿ ಆಚಾರ್ಯ ಪಾಲಾಗಿದೆ. ಅದರಂತೆ ಕಪ್ಪು ಬಣ್ಣದ ಗೌನ್ ತೊಟ್ಟು, ಬೆಂಗಳೂರಿನ ಖಿಯಾ ಜ್ಯುವೆಲ್ಲರಿಯವರ ವಜ್ರದ ಆಭರಣ, ದೆಹಲಿ ಮೂಲದ ತಾರಿಣಿ ನಿರುಲಾ ಅವರ ಕರಕುಶಲ ಹಮ್ಮಿಂಗ್ ಬರ್ಡ್‌ ಕಪ್ಪು ಕೈ ಕ್ಲಚ್ ಹಿಡಿದು ಕ್ಯಾನೆಸ್ ನಲ್ಲಿ ರಂಗೇರಿಸಿದ್ದಾರೆ. ಇದನ್ನೂ ಓದಿ:ಕಂಗನಾ ಸಿನಿಮಾ ನೋಡಿ ಕಣ್ಣೀರಿಟ್ಟ ರಾಜಮೌಳಿ ತಂದೆ

    ನಟಿ ಹಾಗೂ ಮಾಡೆಲ್ ಆಗಿರುವ ಇತಿ ಆಚಾರ್ಯ 2016ರ ಮಿಸ್ ಸೌತ್ ಇಂಡಿಯಾ ವಿನ್ನರ್. ಆರ್ ವಿ ಎಸ್ ಪಿ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಒಳಗೊಂಡಂತೆ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ.

    ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್ ನಲ್ಲಿ ಕಾಣಿಸಿಕೊಂಡ ಹಿರಿಮೆ ಇವರದ್ದು, ಅಮೇರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.

  • Oscar- ಆಸ್ಕರ್ ಪ್ರಶಸ್ತಿ: ರೆಡ್ ಕಾರ್ಪೆಟ್ ಮೇಲೆ ಮನಮೋಹಕ ನೋಟ, ಬಳುಕಿದ ಹೆಜ್ಜೆ

    Oscar- ಆಸ್ಕರ್ ಪ್ರಶಸ್ತಿ: ರೆಡ್ ಕಾರ್ಪೆಟ್ ಮೇಲೆ ಮನಮೋಹಕ ನೋಟ, ಬಳುಕಿದ ಹೆಜ್ಜೆ

    ವಿಶ್ವದ ಪ್ರತಿಷ್ಠಿತ ಆಸ್ಕರ್ (Oscar) ಪ್ರಶಸ್ತಿ (award) ಪ್ರದಾನ ಸಮಾರಂಭ ಮುಕ್ತಾಯವಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ರೆಡ್ ಕಾರ್ಪೆಟ್ (red carpet) ಮೇಲೆ ವಿಶ್ವದ ಅನೇಕ ತಾರೆಯರು ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಕಪ್ಪು ಬಣ್ಣದ ಶೋಲ್ಡರ್ ವೆಲ್ವೆಟ್ ಗೌನ್ ಧರಿಸಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

    ಈ ವರ್ಷದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದಿದ್ದ ಡ್ವೇನ್ ಜಾನ್ಸನ್, ಜೊನಾಥನ್ ಮೇಜರ್ಸ್, ಮೆಲಿಸ್ಸಾ ಮೆಕಾರ್ಥಿ, ಎಮಿಲಿ ಬ್ಲಂಟ್, ಜೆನ್ನಿಫರ್ ಕೊನ್ನೆಲ್ಲಿ ಸೇರಿದಂತೆ ಹಾಲಿವುಡ್ ತಾರೆಯರು ಕೂಡ ಹೆಜ್ಜೆ ಹಾಕುವ ಮೂಲಕ ಕ್ಯಾಮೆರಾ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಭಾರತದ ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

    ಅಮೆರಿಕಾದ ಲಾಸ್ ಏಂಜಲೀಸ್ ಡಾಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಜಗತ್ತಿನ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಿದ್ದಾರೆ. ಅಲ್ಲದೇ ನಿರ್ದೇಶಕ ರಾಜಮೌಳಿ, ನಟರಾದ ರಾಮ್ ಚರಣ್, ಜ್ಯೂನಿಯರ್ ಎನ್.ಟಿ.ಆರ್ ಸೇರಿದಂತೆ ಆರ್.ಆರ್.ಆರ್ ಚಿತ್ರತಂಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ.

    ಈ ಬಾರಿ ಭಾರತದ ಎರಡು ಚಿತ್ರಗಳಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಂದಿದೆ. ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಓರಿಜನ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದರೆ, ಡಾಕ್ಯುಮೆಂಟರಿ ವಿಭಾಗದಲ್ಲಿ ಕಾರ್ತಿಕಿ ನಿರ್ದೇಶನದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಎರಡೂ ತಂಡಕ್ಕೂ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ಕೋರಿದ್ದಾರೆ. ಇದೊಂದು ಐತಿಹಾಸಿ ಕ್ಷಣ ಎಂದು ಬಣ್ಣಿಸಿದ್ದಾರೆ.

    ಅಮೆರಿಕಾದ ಲಾಸ್ ಏಂಜಲೀಸ್ ಡಾಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇಡೀ ಭಾರತ ಕುತೂಹಲದಿಂದ ವೀಕ್ಷಿಸುತ್ತಿತ್ತು. ಈ ಬಾರಿ ಭಾರತದ ಮೂರು ಸಿನಿಮಾಗಳು ನಾಮಿನೇಟ್ ಆಗಿ ಹಲವು ವಿಭಾಗಗಳ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದವು. ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡು ಬೆಸ್ಟ್ ಓರಿಜನಲ್ ಸಾಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದರೆ, ಬೆಸ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ‘ಆಲ್ ದೆಟ್ ಬ್ರೆತ್ಸ್’ ಮತ್ತು ಬೆಸ್ಟ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್’ ಇತ್ತು.

    ಆಸ್ಕರ್ ಪ್ರಶಸ್ತಿಯ ಟ್ರೋಫಿ ಜೊತೆ ನಗದು ಬಹುಮಾನ ಕೊಡದೇ ಇದ್ದರೂ, ಉಡುಗೊರೆಯ ರೂಪದಲ್ಲಿ ಅನೇಕ ವಸ್ತುಗಳು, ಪ್ರವಾಸ ಪ್ಯಾಕೇಜ್ ಗಳು ವಿಜೇತರಿಗೆ ಸಿಗುತ್ತವೆ. ಕೇವಲ ಪ್ರಶಸ್ತಿ ಗೆದ್ದವರಿಗೆ ಮಾತ್ರವಲ್ಲ, ನಾಮ ನಿರ್ದೇಶನಗೊಂಡವರಿಗೆ ಉಡುಗೊರೆ ಇರಲಿದೆ. ಈ ಬಾರಿ ಗಿಫ್ಟ್ ಬಾಕ್ಸ್ ನಲ್ಲಿ 1 ಲಕ್ಷ ಡಾಲರ್ ಮೌಲ್ಯದ ಉಡುಗೊರೆಗಳು ಇವೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಪೀಸೆಸ್ ಆಫ್ ಆಸ್ಟ್ರೇಲಿಯಾ ಹೆಸರಿನ ಕಂಪೆನಿಯೊಂದು ನಾಮ ನಿರ್ದೇಶನಗೊಂಡವರಿಗೆ ಆಸ್ಟ್ರೇಲಿಯಾದಲ್ಲಿ ಒಂದು ಚದರ ಮೀಟರ್ ಭೂಮಿ ಕೊಡಲು ಮುಂದಾಗಿದೆಯಂತೆ.

  • ಆಸ್ಕರ್ 2022 ರೆಡ್ ಕಾರ್ಪೆಟ್‍ನಲ್ಲಿ ಮಿಂಚಿದ ತಾರೆಯರು: ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ

    ಆಸ್ಕರ್ 2022 ರೆಡ್ ಕಾರ್ಪೆಟ್‍ನಲ್ಲಿ ಮಿಂಚಿದ ತಾರೆಯರು: ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ

    ಪ್ರತಿಯೊಬ್ಬ ಕಲಾವಿದನೂ ತನ್ನ ಕೈಲ್ಲೊಂದು ಆಸ್ಕರ್ ಪ್ರಶಸ್ತಿ ಇರಬೇಕು ಎಂದು ಬಯಸುವಷ್ಟು ಪ್ರಾಮುಖ್ಯತೆ ಹೊಂದಿರುವ ಆಸ್ಕರ್ 2022ರ ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ಬೆಳಗ್ಗೆ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು. ಈ ಇವೆಂಟ್ ಅದ್ದೂರಿಯಾಗಿ ನಡೆದಿದ್ದು, ಸಿನಿತಾರೆಯರು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ್ದಾರೆ.

    94ನೇ ಅಕಾಡೆಮಿ 2022ರ ಸಾಲಿನ ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಹಲವು ಸಿನಿತಾರೆಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಪ್ರಶಸ್ತಿಯಲ್ಲಿ ಡ್ಯೂನ್ ಮತ್ತು ಚೈಲ್ಡ್ ಆಫ್ ಡೆಫ್ ಅಡಲ್ಟ್ಸ್’ ಸಿನಿಮಾ ಸ್ಪರ್ಧಿಸಿದ್ದವು. ಈ ಬಾರಿಯ ಪ್ರಶಸ್ತಿಯ ಯಾರಿಗೆಲ್ಲ ಪಾಲಾಗಿದೆ ಎಂಬುದರ ಸಂಪೂರ್ಣ ಲಿಸ್ಟ್ ಇಲ್ಲಿದೆ. ಇದನ್ನೂ ಓದಿ: ಆಸ್ಕರ್ 2022: ಅತ್ಯುತ್ತಮ ಪೋಷಕ ಪಾತ್ರಗಳಿಗೆ ಅರಿಯಾನಾ ಡಿಬೋಸ್, ಟ್ರಾಯ್ಕೋಟ್ಸೂರ್‌ಗೆ ಅವಾರ್ಡ್

    ಉತ್ತಮ ಚಿತ್ರ: ಚೈಲ್ಡ್ ಆಫ್ ಡೆಫ್ ಅಡಲ್ಟ್ಸ್(ಸಿಒಡಿಎ)
    ಉತ್ತಮ ನಟ: ವಿಲ್ ಸ್ಮಿತ್(ಕಿಂಗ್ ರಿಚರ್ಡ್ ಮೂವೀ)
    ಉತ್ತಮ ನಟಿ: ಜೆಸ್ಸಿಕಾ ಚಸ್ಟೈನ್(ದಿ ಐ ಆಫ್ ಟಾಮಿ ಫೆ ಮೂವೀ)
    ಉತ್ತಮ ನಿರ್ದೇಶಕ: ಜೇನ್ ಕ್ಯಾಂಪಿಯನ್(ದಿ ಪವರ್ ಆಫ್ ದಿ ಡಾಗ್)
    ಉತ್ತಮ ಪೋಷಕ ನಟ: ಅರಿಯಾನ ಡಿಬೊಸ್(ವೆಸ್ಟ್ ಸೈಡ್ ಸ್ಟೋರಿ)
    ಉತ್ತಮ ಪೋಷಕ ನಟಿ: ಟ್ರಾಯ್ ಕೋಟ್ಸ್(ಸಿಒಡಿಎ)
    ಉತ್ತಮ ಸಿನಿಮಾಟೋಗ್ರಫಿ: ಗ್ರೇಗ್ ಫ್ರಾಸೆರ್(ಡ್ಯೂನ್)
    ಉತ್ತಮ ಒರಿಜಿನಲ್ ಸಾಂಗ್: ನೋ ಟೈಮ್ ಟು ಡೈ
    ಉತ್ತಮ ಸಾಕ್ಷ್ಯಚಿತ್ರ: ಸಮ್ಮರ್ ಆಫ್ ಸೋಲ್
    ಉತ್ತಮ ಒರಿಜಿನಲ್ ಸ್ಕ್ರೀನ್ಪ್ಲೇ: ಬೆಲ್ಫಾಸ್ಟ್(ಕಿನ್ನೆತ್ ಬ್ರಾನ)
    ಉತ್ತಮ ಕಾಸ್ಟೂಮ್ ಡಿಸೈನ್: ಜೆನ್ನಿ ಬೆವರ್(ಕ್ರುಯೆಲ್ಲ)
    ಉತ್ತಮ ಅಂತಾರಾಷ್ಟ್ರೀಯ ಫೀಚರ್: ಡ್ರೈವ್ ಮೈ ಕಾರ್(ಜಪಾನ್)
    ಉತ್ತಮ ಅನಿಮೇಟೆಡ್ ಫೀಚರ್: ಎನ್ಸಾಂಟೊ ಬೆಸ್ಟ್
    ಉತ್ತಮ ಫಿಲ್ಮ್ ಎಡಿಟಿಂಗ್: ಜೋ ವಾಕರ್(ಡ್ಯೂನ್)
    ಉತ್ತಮ ಸೌಂಡ್: ಡ್ಯೂನ್(ಮ್ಯಾಕ್ರುತ್, ಮಾರ್ಕ್ ಮಾಂಗಿನಿ, ಥಿಯೋ ಗ್ರೀನ್, ಡೌಗ್ ಹೆಂಫಿಲ್, ರಾನ್ ಬಾಟ್ರ್ಲೆಟ್)
    ಉತ್ತಮ ಪ್ರೊಡಕ್ಷನ್ ಡಿಸಥನ್: ಡ್ಯೂನ್(ಪ್ಯಾಟ್ರಿಸ್ ವರ್ಮಾಟ್, ಸೆಟ್ ವಿನ್ಯಾಸ – ಜುಜಾನಾ)
    ಉತ್ತಮ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್: ದಿ ಲಾಂಗ್ ಗುಡ್ಬೈ
    ಉತ್ತಮ ಅನಿಮೇಟೆಡ್ ಶಾರ್ಟ್ ಫಿಲ್ಮ್: ದಿ ವಿಂಡಶೀಲ್ಡ್ ಪೈಪರ್
    ಉತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್: ದಿ ಕ್ವೀನ್ ಆಫ್ ಬಾಸ್ಕೆಟ್ಬಾಲ್

    ಅತ್ಯುತ್ತಮ ಸಾಕ್ಷ್ಯ ಚಿತ್ರಕ್ಕೆ ಸ್ಪರ್ಧಿಸಿದ್ದ ಭಾರತೀಯ ಚಿತ್ರ ‘ರೈಟಿಂಗ್ ವಿತ್ ಫೈರ್’ ನಿರಾಸೆ ಮೂಡಿಸಿದೆ. ಈ ಪ್ರಶಸ್ತಿಯು ”ಸಮ್ಮರ್ ಆಫ್ ಸೋಲ್’ ಚಿತ್ರಕ್ಕೆ ಸಿಕ್ಕಿದೆ. ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ