Tag: Recruitment Letter

  • 71,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

    71,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

    ನವದೆಹಲಿ: ಗೃಹ ಸಚಿವಾಲಯ, ಅಂಚೆ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳು/ಇಲಾಖೆಗಳಿಗೆ ನೇಮಕಗೊಂಡ 71,000 ಉದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ನೇಮಕಾತಿ ಪತ್ರ (Appointment Letter) ವಿತರಿಸಿದರು.

    ಉದ್ಯೋಗ ಮೇಳದ ಭಾಗವಾಗಿ ದೇಶದ 41 ಭಾಗಗಳಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಭಾಗಿಯಾದ ಪ್ರಧಾನಿ ಮೋದಿ ನೇಮಕಾತಿ ಪತ್ರ ವಿತರಿಸಿ ಶುಭ ಹಾರೈಸಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಸರಣಿ ಅಪಘಾತ – KSRTC ಬಸ್‌, ಆಟೋ ಸಂಪೂರ್ಣ ಜಖಂ!

    ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಮಾತನಾಡಿ, 71 ಸಾವಿರ ನೇಮಕಾತಿಗಳಲ್ಲಿ 20,901 (29.21%) ಒಬಿಸಿ ಸಮುದಾಯದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುತ್ತಿದೆ. 11,355 (15.8%) ಪರಿಶಿಷ್ಟ ಜಾತಿ ಮತ್ತು 6,862 (9.59%) ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ನೇಮಕವಾಗಿದ್ದಾರೆ. 2004ರಿಂದ 2014ಕ್ಕೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ಉದ್ಯೋಗದ ಅಂಕಿಅAಶಗಳು 60% ರಿಂದ 70% ರಷ್ಟು ಹೆಚ್ಚಾಗಿದೆ. 2004ರಿಂದ 2014ರವರೆಗೆ 7,22,161 ನೇಮಕಾತಿ ನಡೆದಿದೆ. ಕಳೆದ 10 ವರ್ಷಗಳ ಮೋದಿ ಸರ್ಕಾರದ ಅವಧಿಯಲ್ಲಿ ನೇಮಕಾತಿ ಸಂಖ್ಯೆ ಸುಮಾರು 11 ಲಕ್ಷಕ್ಕೆ ತಲುಪಿದೆ ಎಂದರು. ಇದನ್ನೂ ಓದಿ: Pune | ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್ – ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ

    ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಸರ್ಕಾರದ ಎಲ್ಲಾ ನೀತಿಗಳನ್ನು ರೂಪಿಸುವಾಗ ಯುವಕರಿಗೆ ವಿಶೇಷ ಗಮನ ನೀಡಲಾಗುತ್ತದೆ. ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ನೀತಿಗಳನ್ನು ಬದಲಿಸಿದೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಉತ್ಪಾದನೆಯನ್ನು ಉತ್ತೇಜಿಸಿದೆ. ಇಂದು ನಾವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: Uttar Pradesh | ಖಾಲಿಸ್ತಾನ್‌ ಕಮಾಂಡೋ ಫೋರ್ಸ್‌ನ ಮೂವರು ಭಯೋತ್ಪಾದಕರು ಎನ್‌ಕೌಂಟರ್‌

    ಇಂದು ಭಾರತವು ಮೊಬೈಲ್ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ. ನವೀಕರಿಸಬಹುದಾದ ಇಂಧನದಿAದ ಸಾವಯವ ಕೃಷಿಗೆ, ಬಾಹ್ಯಾಕಾಶದಿಂದ ರಕ್ಷಣಾ ಕ್ಷೇತ್ರಕ್ಕೆ, ಪ್ರವಾಸೋದ್ಯಮದಿಂದ ಸ್ವಾಸ್ಥ್ಯ ಕ್ಷೇತ್ರ ಸೇರಿ ಪ್ರತಿಯೊಂದು ಕ್ಷೇತ್ರದಲ್ಲೂ ಅನುಕೂಲವಾಗಿದೆ. ದೇಶವನ್ನು ಮುನ್ನಡೆಸಲು ಯುವ ಪ್ರತಿಭೆಗಳನ್ನು ಬೆಳೆಸುವ ಅಗತ್ಯವಿದೆ ಎಂದರು. ಇದನ್ನೂ ಓದಿ: ಹೊರರಾಜ್ಯದ ಯುವತಿಯರನ್ನ ಕರೆಸಿ ಬೆಂಗ್ಳೂರಲ್ಲಿ ಹೈಟೆಕ್ ವೇಶ್ಯವಾಟಿಕೆ ದಂಧೆ – ಆರೋಪಿ ಅಂದರ್‌

    ನವ ಭಾರತವನ್ನು ನಿರ್ಮಿಸಲು ಆಧುನಿಕ ಶಿಕ್ಷಣ ವ್ಯವಸ್ಥೆಯ ಅಗತ್ಯವಿತ್ತು. ಎನ್‌ಇಪಿ ಮೂಲಕ ದೇಶವು ಈಗ ಆ ದಿಕ್ಕಿನತ್ತ ಸಾಗಿದೆ. ಅಧ್ಯಯನದ ಸಮಯದಲ್ಲಿ ಗ್ರಾಮೀಣ, ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ಯುವಕರಿಗೆ ಭಾಷೆ ತಡೆಗೋಡೆಯಾಗುತ್ತಿತ್ತು. ಈಗ ಮಾತೃಭಾಷೆಯಲ್ಲಿ ಶಿಕ್ಷಣ ಮತ್ತು ಪರೀಕ್ಷೆಯ ನೀತಿಯನ್ನು ಮಾಡಿದೆ. ಸರ್ಕಾರವು ಯುವಕರಿಗೆ 13 ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಒದಗಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹೆಣ್ಣು ಮಗಳು ಊಹಿಸಿಕೊಂಡು ಈ ರೀತಿಯ ಆರೋಪ ಮಾಡೋಕೆ ಸಾಧ್ಯನಾ? – ಎಂ.ಬಿ ಪಾಟೀಲ್

  • ಒಲಿಂಪಿಕ್ಸ್, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಪಡೆದವರಿಗೆ ನೇಮಕಾತಿ ಪತ್ರ ವಿತರಿಸಿದ ಸಿಎಂ 

    ಒಲಿಂಪಿಕ್ಸ್, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಪಡೆದವರಿಗೆ ನೇಮಕಾತಿ ಪತ್ರ ವಿತರಿಸಿದ ಸಿಎಂ 

    ಬೆಂಗಳೂರು: ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ಸರ್ಕಾರಿ ಗ್ರೂಪ್ ಎ, ಬಿ ಹುದ್ದೆಗಳ ನೇಮಕಾತಿ ಸಂಬಂಧ 12 ಮಂದಿ ವಿಜೇತರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಆಫರ್ ಲೆಟರ್ ವಿತರಣೆ ಮಾಡಿದ್ದಾರೆ.
    ಹೆಚ್.ಎನ್ ಗಿರೀಶ್, ಟಿ.ಎಸ್ ದಿವ್ಯಾ, ಎನ್.ಉಷಾರಾಣಿ, ಸುಷ್ಮಿತಾ ಪವಾರ್, ನಿಕ್ಕಿನ್ ತಿಮ್ಮಯ್ಯ, ಎಸ್.ವಿ ಸುನೀಲ್, ಮಲಪ್ರಭಾ ಯಲ್ಲಪ್ಪ, ಗುರುರಾಜ, ಎಂ.ಎಸ್ ಶರತ್, ವಿ.ರಾಧಾ, ರಾಘವೇಂದ್ರ, ಕಿಶನ್ ಗಂಗೊಳ್ಳಿ ಅವರಿಗೆ ನೇಮಕಾತಿ ಪತ್ರವನ್ನು (Recruitment Letter) ಸಿಎಂ ವಿತರಿಸಿದ್ದಾರೆ.
    ನೇಮಕಾತಿ ಪತ್ರ ವಿತರಣೆ ಬಳಿಕ ಮಾತನಾಡಿದ ಸಿಎಂ, ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ (Siddaramaiah), ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್ (Para Asiad Games), ಕಾಮನ್‍ವೆಲ್ತ್ ಗೇಮ್ಸ್‌ಗಳಲ್ಲಿ ಪದಕ ಪಡೆದ 12 ಜನರಿಗೆ ಅವಕಾಶ ಪತ್ರ ನೀಡಿ ನೇರ ನೇಮಕಾತಿ ಮಾಡುತ್ತಿದ್ದೇವೆ. 2016-17 ರಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಘೋಷಣೆ ಮಾಡಲಾಗಿತ್ತು. ಪದಕ ಪಡೆದವರಿಗೆ ಆದ್ಯತೆ ಮೇರೆಗೆ ಕೆಲಸ ನೀಡುವ ಘೋಷಣೆ ಮಾಡಿದ್ದೆ. ನಂತರ ಬಂದ ಸರ್ಕಾರ ಇದನ್ನು ಮಾಡಲಿಲ್ಲ. ಈಗ ನಾನು ಅಧಿಕಾರಕ್ಕೆ ಬಂದಿದ್ದೇನೆ. ಈಗ ನೇಮಕ ಮಾಡಿಕೊಳ್ಳುತ್ತೇವೆ. ಪದವಿ ಪಡೆದು ಪದಕ ಪಡೆದವರಿಗೆ ಕ್ಲಾಸ್ 1, ಕ್ಲಾಸ್ 2 ಹುದ್ದೆ ಕೊಡುತ್ತಿದ್ದೇವೆ. ಒಬ್ಬರಿಗೆ ಕ್ಲಾಸ್ 1 ಉಳಿದ 11 ಮಂದಿಗೆ ಕ್ಲಾಸ್ 2 ಉದ್ಯೋಗ ಕೊಡ್ತಿದ್ದೇವೆ. ಸಮಿತಿಯ ಶಿಫಾರಸ್ಸಿನ ಮೇರೆಗೆ ನೇಮಕಾತಿ ಪತ್ರ ಕೊಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
    ವಯಸ್ಸಿನ ಮಿತಿಯ ವಿನಾಯಿತಿ ನೀಡಿ, 45 ವರ್ಷದವರಿಗೂ ಅವಕಾಶ ನೀಡ್ತಿದ್ದೇವೆ. ನಮ್ಮ ಸರ್ಕಾರ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ನೀವೆಲ್ಲ ನಮ್ಮ ರಾಷ್ಟ್ರಕ್ಕೆ ಗೌರವ ಕೊಟ್ಟಿದ್ದೀರಿ ಎಂದು ಪದಕ ಪಡೆದ ಕ್ರೀಡಾಪಟುಗಳನ್ನು ಅವರು ಅಭಿನಂದಿಸಿದ್ದಾರೆ.