Tag: recipe

  • ಬೇಸಿಗೆಯಲ್ಲಿ ಕುಡಿಯಲು ಮಸಾಲಾ ಮಜ್ಜಿಗೆ ಮಾಡೋದೋ ಹೇಗೆ? ಇಲ್ಲಿದೆ ಸುಲಭ ಟಿಪ್ಸ್

    ಬೇಸಿಗೆಯಲ್ಲಿ ಕುಡಿಯಲು ಮಸಾಲಾ ಮಜ್ಜಿಗೆ ಮಾಡೋದೋ ಹೇಗೆ? ಇಲ್ಲಿದೆ ಸುಲಭ ಟಿಪ್ಸ್

    ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವಂತದ್ದು ಏನಾದರೂ ಕುಡೀಬೇಕು ಎನ್ನಿಸುತ್ತದೆ. ಆ ಸಂದರ್ಭದಲ್ಲಿ ಹೆಚ್ಚಿನವರು ಮಜ್ಜಿಗೆ ಕುಡಿಯಬೇಕು ಅಂತ ಅಂದುಕೊಳ್ಳುತ್ತಾರೆ. ಈ ಮಸಾಲಾ ಮಜ್ಜಿಗೆಯನ್ನು ಕುಡಿದಂತೆ ಸುಲಭವಾಗಿ ತಯಾರಿಸಬಹುದು. ಹೇಗೆ ತಯಾರಿಸಬಹುದು ಎನ್ನುವುದಕ್ಕೆ ಇಲ್ಲಿ ಮಸಾಲಾ ಮಜ್ಜಿಗೆ ಮಾಡುವ ಸಿಂಪಲ್ ವಿಧಾನವನ್ನು ನೀಡಲಾಗಿದೆ.

    ಬೇಗಾಗುವ ಸಾಮಾಗ್ರಿಗಳು
    * ಮೊಸರು – 1 ಕಪ್
    * ಪುದಿನ – 1/2 ಕಪ್
    * ಕೊತ್ತಂಬರಿ ಸೊಪ್ಪು – 1/2 ಕಪ್
    * ಉಪ್ಪು – 2 ಟೀ ಚಮಚ
    * ಹಸಿ ಮೆಣಸಿಕಾಯಿ – 1 ಚಮಚ
    * ಜೀರಿಗೆ ಪೌಡರ್ – 1 ಚಮಚ
    * ಪೆಪ್ಪರ್ ಪೌಡರ್ – 1 ಚಮಚ

    ಮಾಡುವ ವಿಧಾನ
    * ಮಿಕ್ಸಿಯಲ್ಲಿ ಮೆಣಸಿಕಾಯಿ, ಸ್ವಲ್ಪ ಕೊತ್ತಂಬರಿ ಮತ್ತು ಪುದಿನ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ
    * ನಂತರ ಅದಕ್ಕೆ 1 ಕಪ್ ಮೊಸರು, 2 ಚಮಚ ಉಪ್ಪು, 1/2 ಪೆಪ್ಪರ್ ಪುಡಿ, 1/2 ಜೀರಿಗೆ ಮತ್ತು ಒಂದು ಕಪ್ ನೀರು ಹಾಕಿ ಒಂದು ರೌಂಡ್ ತಿರುಗಿಸಿ.
    * ಬಳಿಕ ಇವೆಲ್ಲವನ್ನು ಒಂದು ಗ್ಲಾಸಿಗೆ ಹಾಕಿ. ಈವಾಗ ಮಸಾಲಾ ಮಜ್ಜಿಗೆ ಕುಡಿಯಲು ರೆಡಿ.

  • ಯುಗಾದಿ ಹಬ್ಬಕ್ಕೆ ಎಳ್ಳು ಹೋಳಿಗೆ ಮಾಡಿ ತಿನ್ನಿ: ಸುಲಭವಾಗಿ ಹೋಳಿಗೆ ತಯಾರಿಸೋದು ಹೇಗೆ?

    ಯುಗಾದಿ ಹಬ್ಬಕ್ಕೆ ಎಳ್ಳು ಹೋಳಿಗೆ ಮಾಡಿ ತಿನ್ನಿ: ಸುಲಭವಾಗಿ ಹೋಳಿಗೆ ತಯಾರಿಸೋದು ಹೇಗೆ?

    ಬೆಂಗಳೂರು: ಯುಗಾದಿ ಹಬ್ಬದಲ್ಲಿ ಹೋಳಿಗೆ ತಯಾರಿಸುವುದು ಸಾಮಾನ್ಯ. ಈ ಹೋಳಿಗೆ ರುಚಿಯಾಗಿರಬೇಕು. ಅಂತೆಯೇ ಸ್ವಾದಿಷ್ಟವಾದ ಎಳ್ಳು ಹೋಳಿಗೆ ಮಾಡುವ ಸುಲಭವಾದ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಬಿಳಿ ಎಳ್ಳು – 1 ಕಪ್
    * ಬೆಲ್ಲ – 1ಕಪ್
    * ಏಲಕ್ಕಿ ಪುಡಿ – ಚಿಟಿಕೆ
    * ಗೋಧಿ ಹಿಟ್ಟು – 1.5 ಕಪ್
    * ಹಾಲು – ಸ್ವಲ್ಪ
    * ಎಣ್ಣೆ – ಸ್ವಲ್ಪ
    * ಉಪ್ಪು – ರುಚಿಗೆ ತಕ್ಕಷ್ಟು
    (ಸೂಚನೆ: ಸಿಹಿ ಅಡುಗೆಗೆ ಉಪ್ಪು ಬಳಸುವುದು ಅವರವರ ಇಚ್ಛೆಗೆ ಬಿಟ್ಟಿದ್ದು, ಬಳಸಿದರೆ ಸ್ವಾದ ಇನ್ನಷ್ಟು ಹೆಚ್ಚುತ್ತದೆ)

    ಮಾಡುವ ವಿಧಾನ
    * ಒಂದು ಅಗಲವಾದ ಪಾತ್ರೆಗೆ ಗೋಧಿಹಿಟ್ಟು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಕಲಸುತ್ತಾ ಬನ್ನಿ. ಹಿಟ್ಟು(ಕಣಕ) ಮೃದುವಾಗಿರಬೇಕು, ಹೆಚ್ಚು ಗಟ್ಟಿ ಇದ್ರೆ ಹೋಳಿಗೆ ಲಟ್ಟಿಸುವುದು ಕಷ್ಟ
    * ಆ ಹಿಟ್ಟಿಗೆ ಸ್ವಲ್ಪ ಎಣ್ಣೆ ಸೇರಿಸಿ ಮೃದುವಾಗಿರುವಂತೆ ಕಲಸಿ ಒಂದು ಪಾತ್ರೆಗೆ ಹಾಕಿ 1 ಗಂಟೆ ಸಮಯ ತಟ್ಟೆ ಮುಚ್ಚಿ ಇಡಿ.
    * ಒಂದು ಪ್ಯಾನ್‍ಗೆ ಬಿಳಿ ಎಳ್ಳು ಹಾಕಿ ಕೆಂಪಾಗುವರೆಗೆ ಹುರಿಯಿರಿ. ನಂತರ ಅದನ್ನು ಮಿಕ್ಸಿ ಜಾರ್‍ಗೆ ಹಾಕಿ ಬೆಲ್ಲ ಹಾಕಿ ರುಬ್ಬಿಕೊಳ್ಳಿ. (ಸೂಚನೆ: ರುಬ್ಬಲು ನೀರು ಬಳಸಬೇಡಿ)
    * ರುಬ್ಬಿದ ಮಿಶ್ರಣವನ್ನು ಒಂದು ಬೌಲ್‍ಗೆ ಹಾಕಿಕೊಂಡು ಅದಕ್ಕೆ ಏಲಕಿ ಪುಡಿ, ಸ್ವಲ್ಪ ಹಾಲು ಹಾಕಿಕೊಂಡು ಕಲಸಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.
    * ಕೈಗೆ ಎಣ್ಣೆ ಸವರಿಕೊಂಡು ನಿಂಬೆಹಣ್ಣಿನ ಗಾತ್ರದಲ್ಲಿ ಹಿಟ್ಟನ್ನು ತೆಗೆದುಕೊಂಡು ಕೈಯಲ್ಲಿ ಸ್ವಲ್ಪ ಅಗಲ ಮಾಡಿ ಊರ್ಣವನ್ನು ಅದರೊಳಗೆ ಇಟ್ಟು ಲಟ್ಟಿಸಿ.
    * ತವಾ ಬಿಸಿಯಾದ ಮೇಲೆ ಹಾಕಿ ಎರಡು ಕಡೆ ಬೇಯಿಸಿದ್ರೆ ಎಳ್ಳು ಹೋಳಿಗೆ ಸವಿಯಲು ಸಿದ್ಧವಾಗುತ್ತದೆ.

  • ಯುಗಾದಿಗೆ ಸಿಂಪಲ್ಲಾಗಿ ರವೆ ಹೋಳಿಗೆ ಮಾಡೋದು ಹೇಗೆ?

    ಯುಗಾದಿಗೆ ಸಿಂಪಲ್ಲಾಗಿ ರವೆ ಹೋಳಿಗೆ ಮಾಡೋದು ಹೇಗೆ?

    ಯುಗಾದಿ ಹಬ್ಬದಲ್ಲಿ ಹೋಳಿಗೆಯದ್ದೇ ಕಾರುಬಾರು. ಹೋಳಿಗೆ ರುಚಿಯಾಗಿಯೂ ಇರಬೇಕು ಮತ್ತು ಆರೋಗ್ಯಕರವಾಗಿಯೂ ಇರಬೇಕು. ಹೀಗಾಗಿ ರುಚಿ ರುಚಿಯಾದ ಹಾಗೂ ಸಿಂಪಲ್ಲಾಗಿ ರವೆ ಹೋಳಿಗೆ ಮಾಡೋ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಗೋಧಿ ಹಿಟ್ಟು – 1 ಕಪ್
    * ಚಿರೋಟಿ ರವೆ – 1/4 ಕಪ್
    * ಸಣ್ಣ ರವೆ/ಮೀಡಿಯಂ ರವೆ – 1.5 ಕಪ್
    * ಬೆಲ್ಲ – 1 ಕಪ್
    * ಏಲಕ್ಕಿ ಪುಡಿ – ಚಿಟಿಕೆ
    * ಕೊಬ್ಬರಿ ತುರಿ – 1/2 ಕಪ್
    * ಅರಿಶಿನ – ಚಿಟಿಕೆ
    * ಎಣ್ಣೆ – 1 ಕಪ್
    * ನೀರು -2.5 ಕಪ್
    * ಉಪ್ಪು – ರುಚಿಗೆ ತಕ್ಕಷ್ಟು
    (ಸೂಚನೆ: ಸಿಹಿ ಅಡುಗೆಗೆ ಉಪ್ಪು ಬಳಸುವುದು ಅವರವರ ಇಚ್ಛೆಗೆ ಬಿಟ್ಟಿದ್ದು, ಬಳಸಿದರೆ ಸ್ವಾದ ಇನ್ನಷ್ಟು ಹೆಚ್ಚುತ್ತದೆ)

    ಮಾಡುವ ವಿಧಾನ:
    * ಒಂದು ಅಗಲವಾದ ಪಾತ್ರೆಗೆ ಗೋಧಿಹಿಟ್ಟು, ಚಿರೋಟಿ ರವೆ, ಅರಿಶಿನ, ಉಪ್ಪು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಕಲಸುತ್ತಾ ಬನ್ನಿ.. ಹಿಟ್ಟು(ಕಣಕ) ಮೃದುವಾಗಿರಬೇಕು, ಹೆಚ್ಚು ಗಟ್ಟಿಗಿದ್ರೆ ಹೋಳಿಗೆ ಲಟ್ಟಿಸುವುದು ಕಷ್ಟ.
    * ಕಣಕಕ್ಕೆ ಸ್ವಲ್ಪ ಎಣ್ಣೆ ಸೇರಿಸಿ ಮೃದುವಾಗಿರುವಂತೆ ಕಲಸಿ ಒಂದು ಪಾತ್ರೆಗೆ ಹಾಕಿ 1 ಗಂಟೆ ಸಮಯ ತಟ್ಟೆ ಮುಚ್ಚಿ ಇಡಿ.
    * ಒಲೆ ಮೇಲೆ ಒಂದು ಪಾತ್ರೆಗೆ ಬೆಲ್ಲ, ನೀರು ಹಾಕಿ ಕುದಿಸಿ. ಬೆಲ್ಲ ಕರಗಿ ನೀರು ಕುದಿಯುವಾಗ ಅದಕ್ಕೆ ರವೆಯನ್ನು, ಏಲಕ್ಕಿ ಪುಡಿ ಹಾಕಿ ಕಲಸಿ. ಈ ಮಿಶ್ರಣ ಹೆಚ್ಚು ಗಟ್ಟಿ ಆಗಬಾರದು. ಸಜ್ಜಿಗೆಗಿಂತ ಸ್ವಲ್ಪ ತೆಳ್ಳಗೆ ಇದ್ದರೆ ಒಳಿತು.
    * ರವೆಯ ಮಿಶ್ರಣ ಊರ್ಣಕ್ಕೆ ಕೊಬ್ಬರಿ ತುರಿ ಸೇರಿಸಿ ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಟ್ಟುಕೊಳ್ಳಿ.
    * ಕೈಗೆ ಎಣ್ಣೆ ಸವರಿಕೊಂಡು ನಿಂಬೆಹಣ್ಣಿನ ಗಾತ್ರದಲ್ಲಿ ಕಣಕವನ್ನು ತೆಗೆದುಕೊಂಡು ಕೈಯಲ್ಲಿ ಸ್ವಲ್ಪ ಅಗಲ ಮಾಡಿ ಊರ್ಣವನ್ನು ಅದರೊಳಗೆ ಇಟ್ಟು ಲಟ್ಟಿಸಿ.
    * ತವಾ ಬಿಸಿಯಾದ ಮೇಲೆ ಹಾಕಿ ಎರಡು ಕಡೆ ಬೇಯಿಸಿದ್ರೆ ರವೆ ಹೋಳಿಗೆ ಸವಿಯಲು ಸಿದ್ಧ.

  • ಆರೋಗ್ಯಕರವಾದ, ರುಚಿರುಚಿಯಾದ ಲಡ್ಡು ಮಾಡುವ ಸುಲಭ ವಿಧಾನ

    ಆರೋಗ್ಯಕರವಾದ, ರುಚಿರುಚಿಯಾದ ಲಡ್ಡು ಮಾಡುವ ಸುಲಭ ವಿಧಾನ

    ಲಡ್ಡು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದನ್ನು ಮಾಡುವ ವಿಧಾನ ಗೊತ್ತಿದ್ದರೆ ಸುಲಭದಲ್ಲಿ ಮಾಡಬಹುದು. ಅಂಗಡಿಯಲ್ಲಿ ಸಿಗೋ ಲಡ್ಡುಗಿಂತ ಮನೆಯಲ್ಲಿಯೇ ಎಣ್ಣೆ ಮತ್ತು ತುಪ್ಪ ಬಳಸದೆ ತಯಾರು ಮಾಡಬಹುದು. ಹೀಗಾಗಿ ಆರೋಗ್ಯಕರವಾದ ಸಿಂಪಲ್ ಲಡ್ಡು ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಕೆಂಪು ಅಕ್ಕಿ -1 ಕಪ್
    * ಬೆಲ್ಲ -3/4 ಕಪ್
    * ತುರಿದ ಕೊಬ್ಬರಿ – 1ಕಪ್
    * ಏಲಕ್ಕಿ 5-6
    * ಗೋಡಂಬಿ – 8,10 ಸಣ್ಣಗೆ ಚೂರು ಮಾಡಿದ್ದು


    ಮಾಡುವ ವಿಧಾನ
    * ಕೆಂಪು ಅಕ್ಕಿಯನ್ನು ಶುದ್ಧನೀರಿನಲ್ಲಿ 2 ಬಾರಿ ತೊಳೆದು ಸ್ವಲ್ಪ ಒಣಗಿಸಿ
    * ಬಳಿಕ ಒಂದು ಪ್ಯಾನ್‍ಗೆ ಅಕ್ಕಿ ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ
    * ಒಂದು ಮಿಕ್ಸಿ ಜಾರ್‍ಗೆ ಅಕ್ಕಿ ಹಾಗೂ ಏಲಕ್ಕಿ ಹಾಕಿ ಪುಡಿ ಮಾಡಿಕೊಳ್ಳಿ
    * ಅದಕ್ಕೆ ಬೆಲ್ಲ, ಕಾಯಿ ತುರಿ ಹಾಕಿ ರುಬ್ಬಿ
    * ರುಬ್ಬಿದ ಮಿಶ್ರಣವನ್ನು ಒಂದು ಬೌಲ್‍ಗೆ ಹಾಕಿಕೊಂಡು ಗೋಡಂಬಿ ಚೂರುಗಳನ್ನು ಮಿಕ್ಸ್ ಮಾಡಿ ಲಡ್ಡು ರೀತಿಯಲ್ಲಿ ಉಂಡೆ ಮಾಡಿ. ಬಳಿಕ ಆರೋಗ್ಯಕರವಾದ ಲಡ್ಡು ಸವಿಯಿರಿ.

  • ಸಿಂಪಲ್ ಆಲೂ ಚಾಟ್ ಮಾಡೋ ವಿಧಾನ

    ಸಿಂಪಲ್ ಆಲೂ ಚಾಟ್ ಮಾಡೋ ವಿಧಾನ

    ಹೋಳಿ ಹಬ್ಬದ ಟೈಮಲ್ಲಿ ಓಕುಳಿಯೊಂದಿಗೆ ಆಟವಾಡಿದ ನಂತರ ಹೊಟ್ಟೆ ಚುರುಗುಟ್ಟದೆ ಇರದು. ಹಾಗಂತ ಬಣ್ಣ ಬಳಿದುಕೊಂಡು ಊಟ ಮಾಡೋಕಾಗಲ್ಲ. ಇಂಥ ಹೊತ್ತಲ್ಲಿ ಏನಾದ್ರೂ ಸಿಂಪಲ್ ಚಾಟ್ಸ್ ತಿಂದ್ರೆ ಮನಸ್ಸಿಗೆ ಖುಷಿ. ಹೋಳಿ ಅಲ್ಲದಿದ್ರೂ ಮನೆಯಲ್ಲಿ ಸಂಜೆ ವೇಳೆಗೆ ಸುಲಭವಾಗಿ ಮಾಡಬಹುದಾದ ಆಲೂ ಚಾಟ್ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು: 
    1. ಆಲೂಗಡ್ಡೆ – 3 ಮಧ್ಯಮ ಗಾತ್ರದ್ದು
    2. ಖಾರದ ಪುಡಿ- 1 ಚಮಚ
    3. ಹುರಿದ ಜೀರಿಗೆ ಪುಡಿ- 1/2 ಚಮಚ
    4. ಆಮ್ಚೂರ್ ಪುಡಿ- 1/4 ಚಮಚ
    5. ಚಾಟ್ ಮಸಾಲಾ- 1/4 ಚಮಚ
    6. ಉಪ್ಪು- ರುಚಿಗೆ ತಕ್ಕಷ್ಟು
    7. ಎಣ್ಣೆ – 1 ಚಮಚ
    8. ನಿಂಬೆಹಣ್ಣು- 1/2 ಹೋಳು
    9. ಕೊತ್ತಂಬರಿ ಸೊಪ್ಪು- 1 ಚಮಚ

    ಮಾಡುವ ವಿಧಾನ:
    * ಕುಕ್ಕರ್‍ನಲ್ಲಿ ನೀರು, ತೊಳೆದ ಅಲೂಗಡ್ಡೆಗಳನ್ನ ಹಾಕಿ 2 ವಿಷಲ್ ಬರುವವರೆಗೆ ಬೇಯಿಸಿ. ಆಲೂಗಡ್ಡೆ ಮೆತ್ತಗಾಗಬಾರದು, ಕಟ್ ಮಾಡುವಷ್ಟು ಗಟ್ಟಿ ಇರಬೇಕು
    * ಬೆಂದ ಆಲೂಗಡ್ಡೆಗಳ ಸಿಪ್ಪೆ ತೆಗೆದು, ಚೌಕಾಕಾರದಲ್ಲಿ ಕಟ್ ಮಾಡಿಕೊಳ್ಳಿ.
    * ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಕಟ್ ಮಾಡಿದ ಆಲೂಗಡ್ಡೆ ತುಂಡುಗಳನ್ನ ಹಾಕಿ 7-10 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ ತೆಗೆಯಿರಿ.
    * ಒಂದು ಸಣ್ಣ ಪಾತ್ರೆಯಲ್ಲಿ ಫ್ರೈ ಮಾಡಿದ ಆಲೂಗಡ್ಡೆ ಹಾಕಿ, ಅದರ ಮೇಲೆ ಜೀರಿಗೆ ಪುಡಿ, ಖಾರದ ಪುಡಿ, ಆಮ್ಚೂರ್ ಪುಡಿ, ಚಾಟ್ ಮಸಾಲಾ ಹಾಗೂ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
    * ನಂತರ ಸ್ವಲ್ಪ ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪು ಉದುರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ, ಬಿಸಿಯಿರುವಾಗಲೇ ಸವಿಯಲು ಕೊಡಿ.

  • ಸ್ನ್ಯಾಕ್ ಟೈಮ್ ಗೆ ವೆಜ್ ಕಬಾಬ್ ಮಾಡೋ ಸಿಂಪಲ್ ವಿಧಾನ

    ಸ್ನ್ಯಾಕ್ ಟೈಮ್ ಗೆ ವೆಜ್ ಕಬಾಬ್ ಮಾಡೋ ಸಿಂಪಲ್ ವಿಧಾನ

    ಸಂಜೆ ವೇಳೆಯ ಕಾಫಿ, ಟೀ ಜೊತೆಗೆ ಏನಾದ್ರೂ ಸ್ನ್ಯಾಕ್ ಸೇವಿಸಬೇಕು ಅಂತಾ ಎಲ್ಲರ ಮನಸ್ಸು ಚಡಪಡಿಸುತ್ತದೆ. ಕೆಲಸದ ಒತ್ತಡದಲ್ಲಿ ಸ್ಪೈಸಿಯಾಗಿ ಏನಾದ್ರೂ ಮಾಡೋಣ ಅಂದ್ರೆ ಟೈಮ್ ಇಲ್ಲ ಅಂತಾ ಹೇಳ್ತಾರೆ. ಹೀಗಾಗಿ ಕಡಿಮೆ ಸಮಯದಲ್ಲಿ ವೆಜ್ ಕಬಾಬ್ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    * ಕ್ಯಾರೆಟ್ – 1/2 ಕಪ್ (ಸಣ್ಣಗೆ ಹಚ್ಚಿದ್ದು)
    * ಹಸಿರು ಬಟಾಣಿ – 1/2 ಕಪ್
    * ಹೂ ಕೋಸು – 1/2ಕಪ್ (ಸಣ್ಣಗೆ ಹಚ್ಚಿದ್ದು)
    * ಈರುಳ್ಳಿ – ಮಿಡಿಯಂ ಸೈಜ್‍ದು (ಸಣ್ಣಗೆ ಹಚ್ಚಿದ್ದು)
    * ಕ್ಯಾಪ್ಸಿಕಮ್- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
    * ಚಾಟ್ ಮಸಾಲ – 1 ಟಿಎಸ್‍ಪಿ(ಟೀ ಸ್ಪೂನ್)
    * ಜೀರಾ ಪೌಡರ್ – 1/2 ಟಿಎಸ್‍ಪಿ
    * ಹಸಿಮೆಣಸಿನ ಕಾಯಿ – 5-6 ಸಣ್ಣಗೆ ಹೆಚ್ಚಿದ್ದು
    * ಬೇಯಿಸಿದ ಆಲೂಗಡ್ಡೆ – 2 ಮೀಡಿಯಂ
    * ಕೆಂಪು ಮೆಣಸಿನಕಾಯಿ ಪುಡಿ – 1 ಟಿಎಸ್‍ಪಿ
    * ಅರಿಶಿನ ಪುಡಿ – ಚಿಟಿಕೆ
    * ಮೈದಾ – 1/2 ಕಪ್
    * ಜೋಳದ ಹಿಟ್ಟು – 1/2 ಕಪ್
    * ಉಪ್ಪು – ರುಚಿಗೆ
    * ಎಣ್ಣೆ – ಕರಿಯಲು
    * ಬ್ರೆಡ್ ಕ್ರಮ್ಸ್
    * ಉಪ್ಪು-ರುಚಿಗೆ ತಕ್ಕಷ್ಟು

     

    ಮಾಡುವ ವಿಧಾನ:
    * ಪ್ಯಾನ್‍ನ ಬಿಸಿಗಿಟ್ಟು 2 ಚಮಚ ಎಣ್ಣೆ ಹಾಕಿ ಅದಕ್ಕೆ ಕ್ಯಾರೆಟ್, ಬಟಾಣಿ, ಹೂ ಕೋಸು, ಈರುಳ್ಳಿ, ಕ್ಯಾಪ್ಸಿಕಮ್ ಹಾಕಿ ಫ್ರೈ ಮಾಡಿ.
    * ಬಳಿಕ ಅದಕ್ಕೆ ಜೀರಾ ಪೌಡರ್ 1/2 ಟಿಎಸ್‍ಪಿ, ಚಾಟ್ ಮಸಾಲ 1 ಟಿಎಸ್‍ಪಿ ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ನಂತರ ಆರಲು ಬಿಡಿ.
    * ಒಂದು ಅಗಲವಾದ ಪಾತ್ರೆಗೆ ಮೈದಾ 1/2 ಕಪ್, ಜೋಳದ ಹಿಟ್ಟು 1/2 ಕಪ್ ನೀರು ಹಾಕಿ ಬ್ಯಾಟರ್ ತಯಾರಿಸಿಕೊಳ್ಳಿ. ದೋಸೆ ಹಿಟ್ಟಿನ ಹದಕ್ಕೆ ಹಿಟ್ಟು ಸಿದ್ಧಪಡಿಸಿ, ಅದಕ್ಕೆ 1 ಚಮಚ ಎಣ್ಣೆ ಸೇರಿಸಿಡಿ.
    * ಬಳಿಕ ಬೇಯಿಸಿದ ಆಲೂಗಡ್ಡೆಯನ್ನು ಸ್ಮ್ಯಾಶ್ ಮಾಡಿ. ಅದಕ್ಕೆ ಫ್ರೈ ಮಾಡಿದ ತರಕಾರಿಗಳು, ಚಿಲ್ಲಿ ಪೌಡರ್, ಅರಿಶಿನ ಪುಡಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಮೈದಾ ಹಾಕಿ ಕಲಸಿ.
    * ಕಲಸಿದ ಆಲೂ ವೆಜ್‍ನ್ನು ಬಿಸ್ಕತ್ ಶೇಪ್ ಮಾಡಿ ಅದನ್ನು ಕಲಸಿದ ಮೈದಾ ಬ್ಯಾಟರ್‍ನಲ್ಲಿ ಉರುಳಿಸಿ. ಬ್ರೆಡ್ ಕ್ರಮ್ಸ್ ನಲ್ಲಿ ಡಿಪ್ ಮಾಡಿ. ಒಂದು ಕಡೆ ಇಟ್ಟುಕೊಳ್ಳಿ.
    * ಪ್ಯಾನ್‍ಗೆ ಎಣ್ಣೆ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೂ ಪ್ರೈ ಮಾಡಿ. ಈಗ ವೆಜ್ ಕಬ್ ಸವಿಯಲು ರೆಡಿ.

  • 10 ನಿಮಿಷದಲ್ಲಿ ಆ್ಯಪಲ್ ಹಲ್ವಾ ಮಾಡುವ ವಿಧಾನ

    10 ನಿಮಿಷದಲ್ಲಿ ಆ್ಯಪಲ್ ಹಲ್ವಾ ಮಾಡುವ ವಿಧಾನ

    ನಾಳೆ ಎಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿರುತ್ತಾರೆ. ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಅಂದುಕೊಂಡಿರುತ್ತೀರಾ. ಆದರೆ ದಿನಾ ಮಾಡುತ್ತಿರುವ ಸಿಹಿಯನ್ನೇ ಮಾಡಲು ಬೇಸರ. ಹೊಸ ವರ್ಷಕ್ಕೆ ಹೊಸದಾಗಿ ಸ್ವೀಟ್ ಮಾಡಬೇಕು. ಅದಕ್ಕಾಗಿ ಇಲ್ಲಿದೆ ಸಿಂಪಲ್ ಆಗಿ ಆ್ಯಪಲ್ ಹಲ್ವಾ ಮಾಡುವ ವಿಧಾನ.

    ಬೇಕಾಗುವ ಸಾಮಾಗ್ರಿಗಳು:
    1 ಸೇಬು – 3
    2 ತುಪ್ಪ – 1/4 ಬೌಲ್
    3 ಗೋಡಂಬಿ – 3 ಚಮಚ
    4 ಸಕ್ಕರೆ- 1 ಬೌಲ್
    5 ಕೇಸರಿ ಬಣ್ಣ
    6 ಏಲಕ್ಕಿ ಪುಡಿ

    ಮಾಡುವ ವಿಧಾನ
    *  ಮೊದಲು ಸೇಬುಗಳ ಸಿಪ್ಪೆ ತೆಗೆದು, ಸಣ್ಣಗೆ ಕತ್ತರಿಸಿ ರುಬ್ಬಿಕೊಳ್ಳಬೇಕು.
    *  ಇತ್ತ ಒಂದು ಬಾಣಲಿಗೆ 2 ಚಮಚ ತುಪ್ಪ ಹಾಕಿ ಗೋಡಂಬಿ ಹಾಕಿ ಫ್ರೈ ಮಾಡಿ ಇಟ್ಟುಕೊಳ್ಳಬೇಕು.
    *  ಅದೇ ಬಾಣಲಿಗೆ ರುಬ್ಬಿಕೊಂಡಿದ್ದ ಸೇಬನ್ನು ಹಾಕಿ ಸ್ವಲ್ಪ ಮಿಕ್ಸ್ ಮಾಡಬೇಕು.
    *  ನಂತರ ಸಕ್ಕರೆ, ಏಲಕ್ಕಿ ಪುಡಿ, ಹಾಕಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ.
    *  ಬಳಿಕ 3 ಚಮಚ ತುಪ್ಪ ಹಾಕಿ, ಕೇಸರಿ ಬಣ್ಣವನ್ನು ಬೆರೆಸಿ ಅದಕ್ಕೆ ಉರಿದಿಟ್ಟುಕೊಂಡಿದ್ದ ಗೋಡಂಬಿ ಹಾಕಿ ಮತ್ತೆ 2 ಚಮಚ ತುಪ್ಪ ಹಾಕಿ 5 ನಿಮಿಷ ಫ್ರೈ ಮಾಡಿ ಬೇಯಿಸಿದರೆ ಸಿಹಿ ಸಿಹಿ ಆ್ಯಪಲ್ ಹಲ್ವಾ ತಿನ್ನಲು ಸಿದ್ಧ.

  • ಐದೇ ನಿಮಿಷದಲ್ಲಿ ಚಾಕಲೇಟ್ ಮಗ್ ಕೇಕ್ ಮಾಡೋ ವಿಧಾನ

    ಐದೇ ನಿಮಿಷದಲ್ಲಿ ಚಾಕಲೇಟ್ ಮಗ್ ಕೇಕ್ ಮಾಡೋ ವಿಧಾನ

    ಕೇಕ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದ್ರಲ್ಲೂ ಚಾಕಲೇಟ್ ಫ್ಲೇವರ್ ಅಂದ್ರೆ ಅಚ್ಚುಮೆಚ್ಚು. ಕೇಕ್ ಗಳನ್ನು ಅಂಗಡಿಯಿಂದ ತಂದು ತಿನ್ನೋದಕ್ಕಿಂತ ಮನೆಯಲ್ಲೇ ಮಾಡಿದ್ರೆ ಹೇಗೆ? ಅದರಲ್ಲೂ ಕೇವಲ 5 ನಿಮಿಷದಲ್ಲೇ ಕೇಕ್ ರೆಡಿ ಮಾಡೋ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    * ಮೈದಾ ಹಿಟ್ಟು – 2 ಚಮಚ
    * ಸಕ್ಕರೆ – 4 ಚಮಚ
    * ಕೋಕೋ ಪೌಡರ್ – 2 ಚಮಚ
    * ಮೊಟ್ಟೆ – 1
    * ಹಾಲು ಅಥವಾ ಮಜ್ಜಿಗೆ – ಸ್ವಲ್ಪ
    * ವೆನಿಲ್ಲಾ ಎಸೆನ್ಸ್- 1/4 ಚಮಚ

    ಮಾಡೋ ವಿಧಾನ:

    * ಒಂದು ಬೌಲ್ ತೆಗೆದುಕೊಂಡು ಅದಕ್ಕೆ 4 ಚಮಚದಷ್ಟು ಮೈದಾ ಹಿಟ್ಟು, 4 ಚಮಚ ಸಕ್ಕರೆ, ಹಾಗೆಯೇ 2 ಚಮಚದಷ್ಟು ಕೋಕೋ ಪೌಡರ್ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
    * ನಂತ್ರ ಈ ಹಿಟ್ಟಿಗೆ ಒಂದು ಮೊಟ್ಟೆ ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ.
    * ಬಳಿಕ ಅದಕ್ಕೆ 3 ಚಮಚ ಹಾಲು ಅಥವಾ ಮಜ್ಜಿಗೆ ಹಾಕಿ ಮತ್ತೆ ಚೆನ್ನಾಗಿ ಕಲಸಿಕೊಂಡು ಅದರ ಮೇಲೆ 3 ಚಮಚ ವೆಜಿಟೇಬಲ್ ಆಯಿಲ್ ಬೆರೆಸಿ ಮತ್ತೆ ಮಿಕ್ಸ್ ಮಾಡಿ.
    * ಅದಾದ ಬಳಿಕ 1/4 ಚಮಚದಷ್ಟು ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ನಂತ್ರ 2-3 ಸಣ್ಣ ಸಣ್ಣ ಮಗ್ ಗಳಲ್ಲಿ ಇದನ್ನ ಹಾಕಿ ಓವೆನ್ ನಲ್ಲಿಡಿ. 2 ನಿಮಿಷದ ಬಳಿಕ ಓವೆನ್ ನಿಂದ ಹೊರತೆಗೆಯಿರಿ. ಈಗ ಚಾಕಲೇಟ್ ಮಗ್ ಕೇಕ್ ತಿನ್ನಲು ರೆಡಿ.

  • ರಾಗಿ ರೊಟ್ಟಿ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ

    ರಾಗಿ ರೊಟ್ಟಿ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ

    ಯ್ಯೋ ರಾಗಿ ರೊಟ್ಟಿ ಮಾಡೋಕೆ ನಮಗೆ ಗೊತ್ತಿಲ್ವಾ? ಅದನ್ನ ನೀವೇ ಹೇಳಿಕೊಡ್ಬೇಕಾ ಅಂತೆಲ್ಲಾ ಕೇಳ್ಬೇಡಿ. ಸಾಮಾನ್ಯವಾಗಿ ಕರ್ನಾಟಕದ ಪ್ರತಿ ಮನೆಗಳಲ್ಲೂ ರಾಗಿ ರೊಟ್ಟಿ ಮಾಡೇ ಮಾಡಿರ್ತಾರೆ. ಆದ್ರೆ ರೊಟ್ಟಿ ಮಾಡೋ ವಿಧಾನಗಳು ಮಾತ್ರ ಬೇರೆ. ನಾವು ಇಲ್ಲಿ ಹೇಳಿರೋದು ಸಖತ್ ಸುಲಭವಾದ ವಿಧಾನ.

    ಬೇಕಾಗುವ ಸಾಮಗ್ರಿಗಳು: 
    1. ರಾಗಿ ಹಿಟ್ಟು- 1 ಕಪ್
    2. ಈರುಳ್ಳಿ- 1 ಮಧ್ಯಮ ಗಾತ್ರದ್ದು
    3. ಹಸಿಮೆಣಸಿನಕಾಯಿ- 1
    4. ಕರಿಬೇವಿನಸೊಪ್ಪು- 5 ಎಸಳು
    5. ಉಪ್ಪು- ರುಚಿಗೆ ತಕ್ಕಷ್ಟು
    6. ನೀರು- ಅಗತ್ಯಕ್ಕೆ ತಕ್ಕಷ್ಟು
    7. ಎಣ್ಣೆ- 4 ಚಮಚ

    ಮಾಡುವ ವಿಧಾನ: 

    * ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವಿನಸೊಪ್ಪನ್ನು ಸಣ್ಣಗೆ ಕಟ್ ಮಾಡಿಕೊಳ್ಳಿ.
    * ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು, ಕಟ್ ಮಾಡಿದ ಈರುಳ್ಳಿ, ಹಸಿಮೆಣಸಿಕನಾಯಿ, ಕರಿಬೇವಿನಸೊಪ್ಪು, ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
    * ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಹಿಟ್ಟು ಕಲಸಿಕೊಳ್ಳಿ.


    * ಸ್ವಲ್ಪ ಹಿಟ್ಟು ತೆಗೆದುಕೊಂಡು ಉಂಡೆ ಮಾಡಿಕೊಳ್ಳಿ
    * ಮಣೆಯ ಮೇಲೆ ಒಂದು ಪ್ಲಾಸ್ಟಿಕ್ ಕವರ್ ಹಾಕಿ ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ ಹಿಟ್ಟನ್ನು ನಿಧಾನವಾಗಿ ತಟ್ಟಿಕೊಳ್ಳಿ.
    * ಒಲೆ ಮೇಲೆ ಪ್ಯಾನ್ ಇಟ್ಟು, ಅದು ಬಿಸಿಯಾದ ನಂತರ ಸ್ವಲ್ಪ ಎಣ್ಣೆ ಹಾಕಿ.
    * ತಟ್ಟಿಕೊಂಡ ರೊಟ್ಟಿಯನ್ನ ನಿಧಾನವಾಗಿ ತವಾ ಮೇಲೆ ಹಾಕಿ.
    * ಒಂದು ಬದಿ ಬೆಂದ ನಂತರ ಅದನ್ನ ತಿರುಗಿಸಿ, ಎಣ್ಣೆ ಹಾಕಿ ಎರಡೂ ಕಡೆ ಕೆಂಪಾಗುವಂತೆ ಬೇಯಿಸಿ.
    * ಹಿಟ್ಟು ಸಾಧ್ಯವಾದಷ್ಟು ತೆಳುವಾಗಿರಬೇಕು. ತುಂಬಾ ಗಟ್ಟಿಯಾದ್ರೆ ರೊಟ್ಟಿ ಚೂರಾಗುತ್ತದೆ.

  • ಬಾಯಲ್ಲಿ ನಿರೂರಿಸುವಂತಹ ಖಾಜು ಬರ್ಫಿ ಮಾಡೋ ಸುಲಭ ವಿಧಾನ

    ಬಾಯಲ್ಲಿ ನಿರೂರಿಸುವಂತಹ ಖಾಜು ಬರ್ಫಿ ಮಾಡೋ ಸುಲಭ ವಿಧಾನ

    ಅಂಗಡಿಯಲ್ಲಿ ಸಿಗೋ ಬರ್ಫಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಖಾಜು ಬರ್ಫಿ ಹೇಸರು ಕೇಳಿದ್ರೆನೇ ಬಾಯಲ್ಲಿ ನೀರು ಬರುತ್ತೆ. ಇಂತಹ ಖಾಜು ಬರ್ಫಿಯನ್ನು ಮನೆಯಲ್ಲಿ ತಯಾರಿಸಬಹುದು. ಅದನ್ನು ತಯಾರಿಸೋ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:

    * ಗೋಡಂಬಿ- 1 ಕಪ್
    * ಸಕ್ಕರೆ- ಅರ್ಧ ಕಪ್
    * ನೀರು- ಅರ್ಧ ಕಪ್
    * ತುಪ್ಪ- 1 ಚಮಚ
    * ರೋಸ್ ವಾಟರ್ ಅಥವಾ ಕೇಸರಿ- 1 ಚಮಚ

    ಮಾಡುವ ವಿಧಾನ:
    * ಗೋಡಂಬಿಯನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಂಡು ಒಣಗಿಸಿಕೊಳ್ಳಿ.
    * ನಂತ್ರ ಒಣಗಿದ ಬಳಿಕ ನೀರಿನ ಪಸೆ ಇಲ್ಲದ ಮಿಕ್ಸರ್ ನಲ್ಲಿ ಪುಡಿ ಮಾಡಿಕೊಳ್ಳಿ.
    * ಒಂದು ಪ್ಯಾನ್ ನಲ್ಲಿ ನೀರು ಮತ್ತು ಸಕ್ಕರೆ ಹಾಕಿ ಸಣ್ಣ ಉರಿಯಲ್ಲಿ ಕುದಿಸುತ್ತಿರಿ. ಸಕ್ಕರೆ ಪೂರ್ತಿಯಾಗಿ ನೀರಿನಲ್ಲಿ ಕರಗಿ ದಪ್ಪಗಾಗುವವರೆಗೆ ಕುದಿಸಿರಿ.
    * ನಂತರ ಗೋಡಂಬಿ ಪೌಡರ್ ನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. (ಬೇಕೆಂದಲ್ಲಿ ಏಲಕ್ಕಿ ಪುಡಿಯನ್ನು ಸೇರಿಸಿಕೊಳ್ಳಬಹುದು).
    * ಸುಮಾರು 5ರಿಂದ 10 ನಿಮಿಷಗಳವರೆಗೆ ಗೋಡಂಬಿ ಪುಡಿಯನ್ನು ಸಣ್ಣ ಉರಿಯಲ್ಲಿ ನಿಧಾನವಾಗಿ ಕದಡುತ್ತಾ ಇರಿ. ಆಗ ಅದು ನಿಧಾನವಾಗಿ ದಪ್ಪಗಾಗುತ್ತಾ ಬರುತ್ತದೆ. ನಂತ್ರ ಸ್ಟೌವ್ ನಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ.
    * ಇನ್ನೊಂದು ಕಡೆ ಒಂದು ಪ್ಲೇಟ್ ಗೆ ಸ್ವಲ್ಪ ತುಪ್ಪ ಸವರಿ ಇಟ್ಟುಕೊಳ್ಳಿ. ಈಗ ಪ್ಯಾನ್ ನಿಂದ ಗೋಡಂಬಿ ಮಿಕ್ಸರ್ ನ್ನು ಇಳಿಸಿ.
    * ಒಂದು ಪಾತ್ರೆಗೆ ಹಾಕಿ ಅದರ ಮೇಲೆ ಸ್ವಲ್ಪ ತುಪ್ಪ, ರೋಸ್ ವಾಟರ್ ಅಥವಾ ಕೇಸರಿ ಹಾಕಿ, ಸ್ವಲ್ಪ ತಣ್ಣಗಾದ ಮೇಲೆ ಈ ಗೋಡಂಬಿ ಹಿಟ್ಟನ್ನು ಚೆನ್ನಾಗಿ ನಾದಿ.
    * ನಾದಿದ ಗೋಡಂಬಿ ಹಿಟ್ಟನ್ನು ತುಪ್ಪ ಸವರಿದ ಪ್ಲೇಟ್ ಗೆ ಸಮತಟ್ಟಾಗಿ ಹಾಕಬೇಕು. ನಂತರ ಲಟ್ಟಣಿಗೆಯಲ್ಲಿ ನಿಧಾನವಾಗಿ ಹಿಟ್ಟಿನ ಮೇಲೆ ಸ್ವಲ್ಪ ದಪ್ಪ ಬರುವವರೆಗೆ ರೋಲ್ ಮಾಡಿ.
    * ನಂತರ ಒಂದು ಹರಿತವಾದ ಚಾಕುವಿನಿಂದ ವಜ್ರಾಕೃತಿಯ ಆಕಾರಕ್ಕೆ ಕತ್ತರಿಸಿ, ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
    * ಈಗ ರುಚಿರುಚಿಯಾದ ಖಾಜು ಬರ್ಫಿ ಯನ್ನು ಸವಿಯಲು ರೆಡಿಯಾಗಿದ್ದು, ಇನ್ನು ತಯಾರು ಮಾಡಿದ 5 ಅಥವಾ 6 ದಿನದೊಳಗೆ ಸವಿಯಬಹುದು. ಒಂದು ವೇಳೆ ನೀವು ಅದನ್ನು ಫ್ರಿಡ್ಜ್ ನಲ್ಲಿಟ್ಟರೆ ಸುಮಾರು 1 ತಿಂಗಳು ತಿನ್ನಬಹುದು.