Tag: recipe

  • ಸಂಕ್ರಾಂತಿ ಸ್ಪೆಷಲ್ – ಎಳ್ಳು, ಬೆಲ್ಲ ಮಾಡುವ ವಿಧಾನ

    ಸಂಕ್ರಾಂತಿ ಸ್ಪೆಷಲ್ – ಎಳ್ಳು, ಬೆಲ್ಲ ಮಾಡುವ ವಿಧಾನ

    ‘ಎಳ್ಳು ಬೆಲ್ಲ ತಿಂದು, ಒಳ್ಳೆಯ ಮಾತನಾಡಿ’ ಎಂಬ ಗಾದೆ ಇದೆ. ಅದರಂತೆಯೇ ಸಂಕ್ರಾಂತಿ ಹಬ್ಬದಂದು ಎಲ್ಲರೂ ಎಳ್ಳು ಬೆಲ್ಲ ತಿಂದು ಹೊಸ ವರ್ಷದ ಮೊದಲ ಹಬ್ಬವನ್ನು ಸಿಹಿಯಾಗಿ ಬರಮಾಡಿಕೊಳ್ಳುತ್ತಾರೆ. ಆದ್ದರಿಂದ ಹಬ್ಬಕ್ಕಾಗಿ ಅಂಗಡಿಯಿಂದ ತಂದು ಮಾಡುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರು ಮಾಡಿ. ನಿಮಗಾಗಿ ಎಳ್ಳು-ಬೆಲ್ಲ ತಯಾರು ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಬಿಳಿ ಎಳ್ಳು – 200 ಗ್ರಾಂ
    2. ಅಚ್ಚು ಬೆಲ್ಲ – 2
    3. ಕೊಬ್ಬರಿ – 2 ಓಳು
    4. ಹುರಿಗಡಲೆ – 1 ಕಪ್
    5. ಕಡ್ಲೆಕಾಯಿಬೀಜ – 1 ಕಪ್
    6. ಜೀರಿಗೆ ಪೆಪ್ಪರ್ ಮೆಂಟ್ – 100 ಗ್ರಾಂ
    7. ಬಿಳಿ ಬತಾಸು – 100 ಗ್ರಾಂ

    ಮಾಡುವ ವಿಧಾನ
    * ಕಡ್ಲೆಕಾಯಿ ಬೀಜವನ್ನು ಚೆನ್ನಾಗಿ ಹುರಿದು ಸಿಪ್ಪೆ ತೆಗೆದು ಬಿಡಿ ಬಿಡಿ ಮಾಡಿಕೊಳ್ಳಿ.
    * ಎಳ್ಳನ್ನು ಸ್ವಲ್ಪ ಹುರಿದುಕೊಳ್ಳಿ.
    * ಅಚ್ಚು ಬೆಲ್ಲವನ್ನು ಚಾಕುವಿನಿಂದ ಸಣ್ಣ ಸಣ್ಣದಾಗಿ ಕಟ್ ಮಾಡಿ.
    * ಕೊಬ್ಬರಿ ಕಪ್ಪು ಭಾಗವನ್ನು ತೆಗೆದು ಚಿಕ್ಕದಾಗಿ ಕಟ್ ಮಾಡಿ.
    * ಹುರಿಗಡಲೆಯನ್ನು ಬೆಚ್ಚಗಾಗುವಷ್ಟು ಹುರಿದುಕೊಳ್ಳಿ.
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಎಳ್ಳು, ಕಡ್ಲೆಕಾಯಿಬೀಜ, ಹುರಿಗಡಲೆ, ಸಣ್ಣಗೆ ತುಂಡರಿಸಿದ ಬೆಲ್ಲ, ಕೊಬ್ಬರಿ, ಜೀರಿಗೆ ಪೆಪ್ಪರ್ ಮೆಂಟ್, ಬಿಳಿ ಬತಾಸು ಸೇರಿಸಿ ಮಿಕ್ಸ್ ಮಾಡಿ.
    * ಒಂದು ಏರ್ ಟೈಟ್ ಜಾರ್ ಗೆ  ಶೇಖರಿಸಿಟ್ಟರೆ ತಿಂಗಳುಗಳ ಕಾಲ ತಿನ್ನಲು ಯೋಗ್ಯವಾಗಿರುತ್ತದೆ.
    * ಅಂಗಡಿಯಲ್ಲಿ ಸಿಗುವ ರೆಡಿ ಮಿಕ್ಸ್ ಗಿಂತ ಮನೆಯಲ್ಲೇ ಮಾಡಿ ಪ್ರೆಶ್ ಆಗಿ ತಿನ್ನಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು

    ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು

    ಕರ ಸಂಕ್ರಾಂತಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದುಕೊಂಡಿದೆ. ದೊಡ್ಡವರಿಗೆ ಪೂಜೆ ಪುನಸ್ಕಾರ ಮಾಡೋದರ ಚಿಂತೆಯಾದ್ರೆ, ಮಕ್ಕಳಿಗೆ ಸಕ್ಕರೆ ಅಚ್ಚು ತಿನ್ನುವ ಆಸೆ. ಸಂಕ್ರಾಂತಿ ಸಮೀಪಿಸುತ್ತಿದ್ದಂತೆ ಬಣ್ಣ ಬಣ್ಣದ ಸಕ್ಕರೆ ಅಚ್ಚುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತೇವೆ. ಖರೀದಿ ವೇಳೆ ಯಾವ ಸಕ್ಕರೆ ಅಚ್ಚು ಮಿಠಾಯಿ ಒಳ್ಳೆಯದು? ಗುಣಮಟ್ಟ ಹೇಗಿರುತ್ತೆ ಎಂಬ ಪ್ರಶ್ನೆ ಗ್ರಾಹಕರಲ್ಲಿ ಹುಟ್ಟಿಕೊಳ್ಳುತ್ತವೆ. ಈ ಎಲ್ಲ ಟೆನ್ಷನ್ ಬದಿಗಿಟ್ಟು ಮನೆಯಲ್ಲಿ ಸಕ್ಕರೆ ಅಚ್ಚು ಮಾಡಿ ಆರೋಗ್ಯಕರ ಸಂಕ್ರಾಂತಿ ಆಚರಿಸಿ.

    ಬೇಕಾಗುವ ಸಾಮಾಗ್ರಿಗಳು
    1. ಸಕ್ಕರೆ – ಅರ್ಧ ಕೆಜಿ
    2. ಹಾಲು – ಕಾಲು ಕಪ್
    3. ನೀರು – ಕಾಲು ಕಪ್
    4. ಮೊಸರು – ಕಾಲು ಕಪ್
    5. ಸಕ್ಕರೆ ಅಚ್ಚು ಮಾಡುವ ಮರದ ಮೌಲ್ಡ್ ಅಥವಾ ಪ್ಲಾಸ್ಟಿಕ್
    6. ಫುಡ್ ಕಲರ್ – ಬೇಕಿದ್ದಲ್ಲಿ

    ಮಾಡುವ ವಿಧಾನ
    * ಮೊದಲಿಗೆ ನೀವು ಸಕ್ಕರೆ ಅಚ್ಚು ಮಾಡಲು ಮರದ ಮೌಲ್ಡ್ ಬಳಸುತ್ತಿದ್ದರೆ, ಅದನ್ನು 3 – 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಸಕ್ಕರೆ ಪಾಕ ಮಾಡುವಾಗ ನೀರಿನಿಂದ ತೆಗೆದು ಒಣಗಿದ ಬಟ್ಟೆಯಲ್ಲಿ ಒರೆಸಿಡಿ. ಪ್ಲಾಸ್ಟಿಕ್ ಅಥವಾ ಫೈಬರ್ ಮೌಲ್ಡ್ ಆಗಿದ್ರೆ ಡೈರೆಕ್ಟ್ ಆಗೇ ಹಾಕಬಹುದು.
    * ಸಕ್ಕರೆ ಪಾಕ ತಯಾರಿಸಲು ಗಟ್ಟಿ ತಳದ ಪಾತ್ರೆ ಬಳಸಿ.
    * ಪಾತ್ರೆಗೆ ಸಕ್ಕರೆ ಹಾಕಿ ಅದಕ್ಕೆ ಕಾಲು ಕಪ್ ನೀರು ಹಾಕಿ ಕುದಿಸಿ. (ಸಕ್ಕರೆಯನ್ನು ನೀರಿನಲ್ಲಿ ಕರಗಿಸಿಯೂ ಬಳಸಬಹುದು)


    * ಸಕ್ಕರೆ ಕರಗಿದ ಮೇಲೆ ಅದಕ್ಕೆ ಕಾಲು ಕಪ್ ಹಾಲು ಹಾಕಿ 2-3 ನಿಮಿಷ ಕುದಿಸಿ.
    * ಬಳಿಕ ಮಿಶ್ರಣಕ್ಕೆ ಕಾಲು ಕಪ್ ಮೊಸರು ಹಾಕಿ 2-3 ನಿಮಿಷ ಕುದಿಸಿ. ಪಾಕ ಹಾಲು ಒಡೆದಂತೆ ಆಗುತ್ತದೆ. (ಹಾಲು, ಮೊಸರು ಬಳಸುವುದರಿಂದ ಅಚ್ಚು ಮೃದುವಾಗಿರುತ್ತದೆ)
    * ಈಗ ಸಕ್ಕರೆ ಪಾಕದ ಮಿಶ್ರಣವನ್ನು ಮತ್ತೊಂದು ಪಾತ್ರೆಗೆ ಸೋಸಿಕೊಳ್ಳಿ.
    * ಈಗ ಮರದ ಮೌಲ್ಡ್‍ಗೆ ಎರಡು ಕಡೆ ರಬ್ಬರ್ ಬ್ಯಾಂಡ್ ಹಾಕಿಡಿ. ಏಕೆಂದರೆ ಪಾಕ ಮಾಡಿ ರಬ್ಬರ್ ಬ್ಯಾಂಡ್ ಹಾಕುವಷ್ಟರಲ್ಲಿ ಪಾಕ ಗಟ್ಟಿ ಆಗಿರುತ್ತದೆ.
    * ಈಗ ಸೋಸಿಕೊಂಡ ಪಾಕವನ್ನು ಮತ್ತೆ ಒಲೆಯ ಮೇಲಿಟ್ಟು. ಚೆನ್ನಾಗಿ ಕುದಿಸಿ… ಚೆನ್ನಾಗಿ ಬಬಲ್ಸ್ ಬರುತ್ತದೆ.(ಕಡಿಮೆ ಉರಿಯಲ್ಲಿ ಕುದಿಸಿ).

    * ಪಾಕ್ ಥಿಕ್‍ನೆಸ್ ಬಂದಮೇಲೆ ಡೈರೆಕ್ಟ್ ಅಚ್ಚಿನ ಮೌಲ್ಡ್‍ಗೆ ಹಾಕಿ.. 10-15 ನಿಮಿಷ ಬಿಟ್ಟು ಮೌಲ್ಡ್‍ನಿಂದ ತೆಗೆದರೆ ಸಕ್ಕರೆ ಅಚ್ಚು ರೆಡಿ.
    ( ಸಕ್ಕರೆ ಅಚ್ಚು ಕಲರ್ ಕಲರ್ ಬೇಕಿದ್ದಲ್ಲಿ ಪಾಕ್ ಥಿಕ್‍ನೆಸ್ ಬರೋವಾಗ ಫುಡ್ ಕಲರ್ ಸೇರಿಸಿಕೊಳ್ಳಿ)
    * ಅಚ್ಚು ತೆಗೆಯುವಾಗ ಮುರಿದು ಹೋದ್ರೆ.. ಮತ್ತೆ ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಬಿಸಿ ಮಾಡಿ ಅಚ್ಚು ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಲಭವಾಗಿ ಎಗ್ ಕರಿ ಮಾಡುವ ವಿಧಾನ

    ಸುಲಭವಾಗಿ ಎಗ್ ಕರಿ ಮಾಡುವ ವಿಧಾನ

    ಭಾನುವಾರ ಬಂದರೆ ಸಾಕು ಮನೆಯಲ್ಲಿ ಚಿಕನ್, ಮಟನ್ ಮಾಡುತ್ತಿರಾ. ಆದರೆ ಪ್ರತಿ ಸಂಡೇ ಅದೇ ಅಡುಗೆ ಮಾಡಿದರೆ ಮನೆಯವರು ತಿನ್ನೋದಿಲ್ಲ. ಮೊಟ್ಟೆ ಎಂದರೆ ಎಲ್ಲರಿಗೂ ಇಷ್ಟ. ಆದ್ದರಿಂದ ಮೊಟ್ಟೆಯಲ್ಲಿ ಬೇರೆ ಬೇರೆ ವಿಧದ ಅಡುಗೆ ಮಾಡಬಹುದು. ಹೀಗಾಗಿ ಸಿಂಪಲ್ ಆಗಿ ಬೇಗ ಸಿದ್ಧವಾಗುವ ಎಗ್ ಕರಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಮೊಟ್ಟೆ – 4 (ಬೇಯಿಸಿರಬೇಕು)
    2. ಈರುಳ್ಳಿ – 2
    3. ಎಣ್ಣೆ – 3 ಚಮಚ
    4. ಹಸಿ ಮೆಣಸಿಕಾಯಿ – 2-3
    5. ಟೊಮೊಟೋ – 1
    6. ಖಾರದ ಪುಡಿ – 1 ಚಮಚ
    7. ಕೊತ್ತಂಬರಿ ಪುಡಿ – 1 ಚಮಚ
    8. ಅರಿಶಿಣ – ಚಿಟಿಕೆ
    9. ಗರಂ ಮಸಾಲಾ – 1 ಚಮಚ
    10. ಉಪ್ಪು – ರುಚಿಗೆ ತಕ್ಕಷ್ಟ ಉಪ್ಪು
    11. ಕೊತ್ತಂಬರಿ ಸೊಪ್ಪು

    ಮಾಡುವ ವಿಧಾನ
    * ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು 2 ಚಮಚ ಎಣ್ಣೆ ಹಾಕಿ ಕಾಯಲು ಬಿಡಿ.
    * ಎಣ್ಣೆ ಕಾದ ಬಳಿಕ ಅದಕ್ಕೆ ಸಣ್ಣಗೆ ಕತ್ತರಿಸಿದ್ದ ಈರಳ್ಳಿ ಹಾಕಿ ಫ್ರೈ ಮಾಡಿ.
    * ಈಗ ಹಸಿರು ಮೆಣಸಿಕಾಯಿ, ಸಣ್ಣಗೆ ಕತ್ತರಿಸಿದ ಟೊಮೆಟೋ ಹಾಕಿ ಮುಚ್ಚಳ ಮುಚ್ಚಿ 2-3 ನಿಮಿಷ ಬೇಯಿಸಿ.
    * ನಂತರ ಅದಕ್ಕೆ ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ, ಗರಂ ಮಸಾಲಾ ಹಾಕಿ 3 ನಿಮಿಷ ಮಿಕ್ಸ್ ಮಾಡಿ.
    * ಒಂದು ಸಣ್ಣ ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ 5 ನಿಮಿಷ ಕುದಿಸಿರಿ.
    * ಈಗ ಬೇಯಿಸಿ ಅರ್ಧ ಭಾಗ ಕಟ್ ಮಾಡಿ ಬೇಯಿಸಿರುವ ಮೊಟ್ಟೆ ಹಾಕಿ, ಬಳಿಕ ಅಲ್ಲೇ ಗ್ರೇವಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 2-3 ನಿಮಿಷ ಬೇಯಿಸಿರಿ.
    * ಈಗ ಲಿಡ್(ಮುಚ್ಚಳ) ಓಪನ್ ಮಾಡಿ ಅದರ ಮೇಲೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಎಗ್ ಕರಿ ಸಿದ್ಧ.
    * ಇದನ್ನು ಚಪಾತಿ ಅಥವಾ ರೋಟಿ ಜೊತೆ ಸವಿಯಬಹುದು ಅಷ್ಟೇ ಅಲ್ಲದೇ ರೈಸಿಗೂ ಮಿಕ್ಸ್ ಮಾಡಿಕೊಂಡು ತಿನ್ನಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಳಿಗೆ ಖಾರ-ಖಾರವಾಗಿ ಸೋಯಾ ಕಬಾಬ್ ಮಾಡಿ

    ಚಳಿಗೆ ಖಾರ-ಖಾರವಾಗಿ ಸೋಯಾ ಕಬಾಬ್ ಮಾಡಿ

    ಇಂದು ಭಾನುವಾರ ಎಲ್ಲರೂ ಮನೆಯಲ್ಲಿಯೇ ಇರುತ್ತಾರೆ. ಸ್ವಲ್ಪ ಮಟ್ಟಿಗೆ ಚಳಿಯ ವಾತಾವರಣದಿಂದ ಕೂಡಿದ್ದು, ಹೀಗಾಗಿ ಬಿಸಿಬಿಸಿಯಾಗಿ ಖಾರವಾಗಿ ಏನಾದರೂ ತಿನ್ನಬೇಕು ಎಂದನಿಸುತ್ತದೆ. ಆದ್ದರಿಂದ ನಿಮಗಾಗಿ ಸಿಂಪಲ್ ಆಗಿ ಸೋಯಾ ಕಬಾಬ್ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಾಗ್ರಿಗಳು
    1. ಆಲೂಗಡ್ಡೆ – 3
    2. ಬೇಯಿಸಿದ ತರಕಾರಿ – 1 ಕಪ್
    3. ಕತ್ತಂಬರಿ ಸೊಪ್ಪು – ಸ್ವಲ್ಪ
    4. ಹಸಿಮೆಣಸಿನಕಾಯಿ – 2-3
    5. ಶುಂಠಿ- ಬೆಳ್ಳುಳ್ಳಿ – ಸ್ವಲ್ಪ
    6. ಸೋಯಾ ಫ್ಲೋರ್ – 1 ಕಪ್
    7. ಚೀಸ್ – 2 ಚಮಚ
    8. ರವೆ – ಅರ್ಧ ಕಪ್
    9. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಆಲೂಗಡ್ಡೆ ಬೇಯಿಸಿ ಸ್ಮ್ಯಾಶ್ ಮಾಡಿ ಮೆತ್ತಗೆ ಮಾಡಿಕೊಳ್ಳಿ.
    * ಶುಂಠಿ, ಬೆಳ್ಳುಳ್ಳಿ, ಮೆಣಸಿಕಾಯಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
    * ನಂತರ ಬೇಯಿಸಿದ ತರಕಾರಿ ಹಾಗೂ ಎಲ್ಲಾ ಸಾಮಾಗ್ರಿಗಳನ್ನು ಒಂದು ಪಾತ್ರೆಯಲ್ಲಿ ಬೆರೆಸಿಕೊಂಡು ಗಟ್ಟಿಯಾದ ಮಿಶ್ರಣ ಸಿದ್ಧ ಮಾಡಿಕೊಳ್ಳಿ
    * ನಂತರ ಕಬಾಬ್ ಆಕಾರಕ್ಕೆ ಮಾಡಿಕೊಂಡು ರವೆಯಲ್ಲಿ ಉರುಳಾಡಿಸಿ ಎಣ್ಣೆಯಲ್ಲಿ ಹಾಕಿ ಗರಿಗರಿಯಾಗಿ ಕರಿಯಿರಿ.
    * ಈಗ ಸಾಸ್ ನೊಂದಿಗೆ ಸವಿಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರಿಸ್ ಮಸ್‍ಗಾಗಿ ಸಿಂಪಲ್ ಚಾಕ್ಲೇಟ್ ಕೇಕ್

    ಕ್ರಿಸ್ ಮಸ್‍ಗಾಗಿ ಸಿಂಪಲ್ ಚಾಕ್ಲೇಟ್ ಕೇಕ್

    ಈಗಾಗಲೇ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಸಿಂಪಲ್ ಕೇಕ್ ಹಾಗೂ ಎಗ್‍ಲೆಸ್ ಕೇಕ್ ಮಾಡಿದ್ದೀರಾ. ಚಾಕ್ಲೇಟ್ ಅಂದರೆ ಕೆಲವರಿಗೆ ತುಂಬಾ ಇಷ್ಟ. ಹಾಗಾಗಿ ನಿಮಗಾಗಿ ಚಾಕ್ಲೇಟ್ ಕೇಕ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಮೈದಾ – 1 ಕಪ್
    2. ಜೋಳದ ಹಿಟ್ಟು – 2-3 ಚಮಚ ( ಕಾರ್ನ್ ಫ್ಲೋರ್)
    3. ಸಕ್ಕರೆ – 100 ಗ್ರಾಂ
    4. ಎಣ್ಣೆ – 3-4 ಚಮಚ
    5. ಕೋಕೋ ಪೌಡರ್ – 2 ಚಮಚ
    6. ಬೇಕಿಂಗ್ ಪೌಡರ್ – 1 ಚಮಚ
    7. ಬೆಣ್ಣೆ- 50 ಗ್ರಾಂ
    8. ಕಂಡೆನ್ಸ್‍ಡ್ ಮಿಲ್ಕ್ – 100 ಎಂಎಲ್

    ಮಾಡುವ ವಿಧಾನ:
    * ಒಂದು ಬೌಲ್‍ಗೆ 2 ಚಮಚ ಕೋಕೋ ಪೌಡರ್ ಹಾಕಿ ಬಿಸಿ ನೀರು ಸೇರಿಸಿ ತಣ್ಣಗಾಗಲು ಬಿಡಿ.
    * ಒಂದು ಮಿಕ್ಸಿಂಗ್ ಬೌಲ್‍ಗೆ 50 ಗ್ರಾಂ ಬೆಣ್ಣೆ, ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಬೀಟ್ ಮಾಡಿ.
    * ಕಂಡೆನ್ಸಡ್ ಮಿಲ್ಕ್ ಹಾಕಿ ಬೀಟ್ ಮಾಡಿ. ಅದಕ್ಕೆ ಮೈದಾ, ಬೇಕಿಂಗ್ ಪೌಡರ್, ಜೋಳದ ಹಿಟ್ಟು ಹಾಕಿ ಮಿಕ್ಸ್ ಮಾಡಿ.
    * ಇದಕ್ಕೆ ಮಿಕ್ಸ್ ಮಾಡಿಟ್ಟಿದ್ದ ಕೋಕೋ ಪೌಡರ್ ಅನ್ನು ಸೇರಿಸಿ ಟ್ರೂಟಿ ಫ್ರೂಟಿ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಮಿಕ್ಸ್ ಮಾಡಿ.
    * ಗಂಟಿಲ್ಲದಂತೆ ಮಿಕ್ಸ್ ಆದ ಕೇಕ್ ಮಿಶ್ರಣವನ್ನು ಎಣ್ಣೆ ಸವರಿದ ಒಂದು ಅಗಲವಾದ ಪಾತ್ರೆಗೆ ಶಿಫ್ಟ್ ಮಾಡಿ.
    * ಖಾಲಿ ಕುಕ್ಕರ್‍ನಲ್ಲಿ ಮರಳು, ಉಪ್ಪು ಅಥವಾ ಪ್ಯಾನ್ ಸ್ಟ್ಯಾಂಡ್ ಇಟ್ಟು 5 ನಿಮಿಷ ಬಿಸಿ ಮಾಡಿ.
    * ಬಳಿಕ ಕೇಕ್ ಮಿಶ್ರಣ ಇರುವ ಪ್ಯಾನ್ ಅನ್ನು ಕುಕ್ಕರ್ ಒಳಗೆ ಇಟ್ಟು 30-40 ನಿಮಿಷ ಲೋ ಫ್ಲೇಮ್‍ನಲ್ಲಿ ಬೇಯಿಸಿ.
    * ಬೇಕಿದ್ದರೆ ಕೇಕ್ ಮಿಶ್ರಣಕ್ಕೆ ಮೇಲೆ ಡ್ರೈ ಫ್ರೂಟ್ಸ್ ಹಾಕಬಹುದು.
    * ಕೇಕ್ ಆದ ಬಳಿಕ ತಣ್ಣಗಾದ ಮೇಲೆ ಕಟ್ ಮಾಡಿ ಸೇವಿಸಿ.
    * ಬೇಕಿದ್ದಲ್ಲಿ ಇದಕ್ಕೆ ಗಾರ್ನಿಶ್ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯಲ್ಲೇ ಸಿಂಪಲ್ ಎಗ್‍ಲೆಸ್ PLUM CAKE  ಮಾಡೋದು ಹೇಗೆ?

    ಮನೆಯಲ್ಲೇ ಸಿಂಪಲ್ ಎಗ್‍ಲೆಸ್ PLUM CAKE ಮಾಡೋದು ಹೇಗೆ?

    ಕ್ರಿಸ್‍ಮಸ್ ಹಬ್ಬ ಬಂದರೆ ಸಾಕು ಥಟ್ಟನೆ ನೆನಪಾಗೋದು ಕೇಕ್. ಹೆಚ್ಚಿನ ಕೇಕ್ ಗಳನ್ನು ಮೊಟ್ಟೆ ಹಾಕಿಯೇ ಮಾಡುತ್ತಾರೆ. ಆದ್ರೆ ಈ ರೀತಿಯ ಕೇಕ್ ಎಲ್ಲರಿಗೂ ಇಷ್ಟವಾಗಲ್ಲ. ಆದ್ದರಿಂದ ಕೆಲವರಿಗಾಗಿ ಎಗ್‍ಲೆಸ್ ಕೇಕ್ ಮಾಡೋ ವಿಧಾನವನ್ನು ಇಲ್ಲಿ ನೀಡಲಾಗಿದೆ.

    ಬೇಕಾಗುವ ಸಾಮಾಗ್ರಿಗಳು
    * ಮಿಕ್ಸೆಡ್ ಫ್ರೂಟ್ ಜ್ಯೂಸ್ / ಆರೆಂಜ್ / ದ್ರಾಕ್ಷಿ / ಮಾಂಗ್ಯೋ – 50 ಎಂಎಲ್
    * ಗೋಡಂಬಿ – 3-4
    * ದ್ರಾಕ್ಷಿ – 6-7
    * ಖರ್ಜೂರ – 4-5
    * ಬಾದಾಮಿ – 5-6
    * ಟೂಟಿ ಫ್ರೂಟಿ – ಅರ್ಧ ಕಪ್
    * ಕಪ್ಪು ದ್ರಾಕ್ಷಿ – 5-10
    * ವಾಲ್‍ನಟ್ – 3-4
    * ಚಕ್ಕೆ -ಅರ್ಧ ಇಂಚು
    * ಲವಂಗ – 4
    * ಏಲಕ್ಕಿ – 2-3
    * ಶುಂಠಿ ಪೌಡರ್ – ಕಾಲು ಚಮಚ (ಒಣಶುಂಠಿ)
    * ಸಕ್ಕರೆ – ಅರ್ಧ ಕಪ್
    * ಮೈದಾ ಹಿಟ್ಟು – ಮುಕ್ಕಾಲು ಕಪ್
    * ಬೇಕಿಂಗ್ ಪೌಡರ್ – ಅರ್ಧ ಚಮಚ
    * ಬೇಕಿಂಗ್ ಸೋಡಾ – ಕಾಲು ಚಮಚ
    * ಮಿಲ್ಕ್ ಪೌಡರ್ – 2 ಚಮಚ
    * ಎಣ್ಣೆ – 3-4 ಚಮಚ (ಬೇಕಿದ್ದರೆ ಬೆಣ್ಣೆ, ತುಪ್ಪ ಬಳಸಬಹುದು)
    * ವೆನಿಲಾ ಎಸೆನ್ಸ್ – 3-4 ಹನಿ
    * ಹಾಲು – ಅರ್ಧ ಕಪ್

    ಮಾಡುವ ವಿಧಾನ
    * ಮೊದಲಿಗೆ ಒಂದು ಬೌಲ್‍ಗೆ ಮೇಲೆ ಹೇಳಿದ ಜ್ಯೂಸ್‍ಗಳಲ್ಲಿ ಯಾವುದಾದರು ಒಂದನ್ನು 50 ಎಂಎಲ್‍ರಷ್ಟು ಹಾಕಿಕೊಳ್ಳಿ. ಅದಕ್ಕೆ ಸಣ್ಣಗೆ ಕಟ್ ಮಾಡಿದ ಗೋಡಂಬಿ, ದ್ರಾಕ್ಷಿ, ಖರ್ಜೂರ, ಬಾದಾಮಿ, ಕಪ್ಪು ದ್ರಾಕ್ಷಿ, ವಾಲ್‍ನಟ್, ಟೂಟಿಫ್ರೂಟಿ ಸೇರಿಸಿ 1 ಗಂಟೆಗಳ ಕಾಲ ನೆನಸಿಡಿ. (ಫ್ರೀಜರ್ ನಲ್ಲಿ ಬೇಕಾದ್ರೂ ಇಡಬಹುದು)

    * ಒಂದು ಮಿಕ್ಸಿಂಗ್ ಬೌಲ್‍ಗೆ ಅರ್ಧ ಕಪ್ ಮೈದಾ ಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಮಿಲ್ಡ್ ಪೌಡರ್ ಹಾಕಿ ಕಲಸಿ.
    * ಬಳಿಕ ಚಕ್ಕೆ, ಲವಂಗ, ಏಲಕ್ಕಿ, ಶುಂಠಿ ಪೌಡರ್ ಸೇರಿಸಿ ಪುಡಿ ಮಾಡಿದ ಮಿಶ್ರಣವನ್ನು ಅರ್ಧ ಚಮಚ ಸೇರಿಸಿ. (ಮಾರುಕಟ್ಟೆಯಲ್ಲಿ ಸಿಗುವ ಕೇಕ್ ಮಸಾಲ ಸೇರಿಸಬಹುದು)
    * ಬಳಿಕ ಅದಕ್ಕೆ ಎಣ್ಣೆ, ವೆನಿಲಾ ಎಸೆನ್ಸ್ ಸೇರಿಸಿ ಮಿಕ್ಸ್ ಮಾಡಿ.

    * ಇತ್ತ ಜ್ಯೂಸ್‍ನಲ್ಲಿ ನೆನಸಿಟ್ಟ ಡ್ರೈ ಫ್ರೂಟ್ಸ್ ಅನ್ನು ಸೇರಿಸಿ. ಬಳಿಕ ಸ್ವಲ್ಪ ಸ್ವಲ್ಪವೇ ಹಾಲನ್ನು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿ.
    * ಕೇಕ್ ಮಿಶ್ರಣ ತುಂಬಾ ತೆಳ್ಳಗೆ ಆಗಬಾರದು. ತುಂಬಾ ಗಟ್ಟಿಯೂ ಆಗಬಾರದು. ಹೀಗಾಗಿ ಹಾಲನ್ನು ಮಿಶ್ರಣದ ಹದ ನೋಡಿಕೊಂಡು ಸೇರಿಸಬೇಕು.

    * ಬಳಿಕ ಬೆಣ್ಣೆ/ಎಣ್ಣೆ/ತುಪ್ಪ ಸವರಿದ ಕೇಕ್, ಪ್ಯಾನ್‍ಗೆ ಮಿಶ್ರಣವನ್ನು ಹಾಕಿ. ಓವನ್‍ನಲ್ಲಿ 180 ಡಿಗ್ರಿಯಲ್ಲಿ 30ರಿಂದ 35ನಿಮಿಷ ಬೇಕ್ ಮಾಡಿ.
    * ಓವನ್ ಇಲ್ಲದಿದ್ದರೆ ಕುಕ್ಕರ್ ಒಲೆ ಮೇಲಿಟ್ಟು ಅದಕ್ಕೆ ಮರಳು/ಉಪ್ಪು/ತಟ್ಟೆ ಇಡ್ಲಿ ಸ್ಟ್ಯಾಂಡ್ ಇಟ್ಟು 5 ನಿಮಿಷ ಕಾಯಲು ಬಿಡಿ.
    * ಆಮೇಲೆ ಕೇಕ್ ಮಿಶ್ರಣ ಹಾಕಿದ್ದ ಪ್ಯಾನ್ ಅನ್ನು ಇಟ್ಟು ವಿಷಲ್ ತೆಗೆದು ಅರ್ಧ ಗಂಟೆಗಳ ಕಾಲ ಲೋ ಫ್ಲೇಮ್‍ನಲ್ಲಿ ಕುಕ್ ಮಾಡಿ.
    * ಕೇಕ್ ಬೆಂದಿದ್ಯಾ ಎಂದು ಸ್ಟಿಕ್ ಇಟ್ಟು ನೋಡಿ. ತಣ್ಣಗಾದ ಬಳಿಕ ಕೇಕ್ ಅನ್ನು ಸಣ್ಣ ಸಣ್ಣಗೆ ಕಟ್ ಮಾಡಿ ಸರ್ವ್ ಮಾಡಿ. ಇದು ಎಗ್‍ಲೆಸ್ ಕೇಕ್ ಆಗಿರುವುದರಿಂದ ಹಲವು ದಿನಗಳವರೆಗೆ ಸ್ಟೋರ್ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರಿಸ್‍ಮಸ್‍ಗಾಗಿ ಸಿಂಪಲ್ ಕೇಕ್ ರೆಸಿಪಿ

    ಕ್ರಿಸ್‍ಮಸ್‍ಗಾಗಿ ಸಿಂಪಲ್ ಕೇಕ್ ರೆಸಿಪಿ

    ವಿಶೇಷ ದಿನಗಳು ಬಂದರೆ ಸಾಕು ಹಬ್ಬದ ಸಂಕೇತವಾಗಿ ಸಿಹಿ ಮಾಡುತ್ತೇವೆ. ಅದೇ ರೀತಿ ಕ್ರಿಸ್‍ಮಸ್ ಹಬ್ಬ ಬಂದರೆ ವಿವಿಧ ಕೇಕ್ ಗಳನ್ನು ಮಾಡಲಾಗುತ್ತದೆ. ಹಬ್ಬದಲ್ಲೂ ಅಂಗಡಿಯಿಂದ ತಂದು ಮಾಡುವ ಬದಲು ಮನೆಯಲ್ಲಿಯೇ ಕೇಕ್ ಮಾಡೋಣ ಅಂದುಕೊಂಡಿರುತ್ತೀರಾ. ಹೀಗಾಗಿ ನಿಮಗಾಗಿ ಸಿಂಪಲ್ ಆಗಿ ಕೇಕ್ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಮೈದಾ – 200 ಗ್ರಾಂ
    2. ಸಕ್ಕರೆ – 200 ಗ್ರಾಂ
    3. ಮೊಟ್ಟೆ – 3
    4. ಎಣ್ಣೆ – 100 ಗ್ರಾಂ
    5. ಬೇಕಿಂಗ್ ಪೌಡರ್
    6. ವೆನಿಲಾ ಎಸೆಲ್ಸ್ – 3-4 ಹನಿ
    7. ಟೂಟಿ ಫ್ರೂಟಿ – ಅರ್ಧ ಕಪ್

    ಮಾಡುವ ವಿಧಾನ
    * ಒಂದು ಮಿಕ್ಸಿ ಜಾರಿಗೆ ಸಕ್ಕರೆ ಹಾಕಿ ಅದನ್ನು ಪೌಡರ್ ಮಾಡಿಕೊಳ್ಳಿ.
    * ಬಳಿಕ ಅದಕ್ಕೆ ಮೈದಾ, ಮೊಟ್ಟೆ ಒಡೆದು ಹಾಕಿ, ಎಣ್ಣೆ, ಬೇಕಿಂಗ್, ಸೋಡ, ವೆನಿಲಾ ಎಸೆನ್ಸ್ ಸೇರಿಸಿ ಎಲ್ಲಾ ಮಿಕ್ಸ್ ಆಗುವಂತೆ ಗ್ರೈಂಡ್ ಮಾಡಿ. (ಸೂಚನೆ: ಯಾವುದೇ ಕಾರಣಕ್ಕೂ ನೀರು ಬಳಸಬಾರದು. ಬ್ಲೆಂಡರ್ ಇದ್ದರೆ ಅಗಲವಾದ ಬೌಲ್‍ಗೆ ಹಾಕಿ ಬೀಟ್ ಮಾಡಬಹುದು)
    * ಈಗ ಒಂದು ಅಗಲವಾದ ಕೇಕ್ ಪ್ಯಾನ್ ಅಥವಾ ಅಗಲವಾದ ಪಾತ್ರೆಗೆ ಎಣ್ಣೆ ಸವರಿ. ಗ್ರೈಂಡ್ ಮಾಡಿದ ಬ್ಯಾಟರ್ ಅನ್ನು ಸಮಪ್ರಮಾಣದಲ್ಲಿ ಹಾಕಿ. ಮೇಲೆ ಟೂಟಿ ಫ್ರೂಟಿ ಸೇರಿಸಿ.
    * ಬಳಿಕ ಒಮ್ಮೆ ಪ್ಯಾನ್ ಅನ್ನು ಶೇಕ್ ಮಾಡಿ. ಇದರಿಂದ ಬ್ಯಾಟರ್ ಪಾತ್ರೆಯಲ್ಲಿ ಸಮವಾಗಿ ಸೆಟಲ್ ಆಗುತ್ತೆ.
    * ಒಂದು ಅಗಲವಾದ ಕುಕ್ಕರ್ ಪ್ಯಾನ್‍ಗೆ 4-5 ಹಿಡಿಯಷ್ಟು ಪುಡಿ ಉಪ್ಪನ್ನು ಹಾಕಿ. 5 ನಿಮಿಷ ಬಿಸಿ ಮಾಡಿ.
    * ಬಳಿಕ ಉಪ್ಪಿನ ಮೇಲೆ ಬ್ಯಾಟರ್ ಹಾಕಿದ ಪ್ಯಾನ್ ಇಟ್ಟು. ಕುಕ್ಕರ್ ಮುಚ್ಚಳ ಮುಚ್ಚಿ. (ಉಪ್ಪಿನ ಬದಲಿಗೆ ಮರಳು, ಕುಕ್ಕರ್ ಒಳಗೆ ಇಡುವ ಸ್ಟ್ಯಾಂಡ್ ಬಳಸಬಹುದು)
    * 10-15 ನಿಮಿಷದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಪ್ಯಾನ್‍ನಿಂದ ಕೇಕ್ ತೆಗೆದು ಕಟ್ ಮಾಡಿ ಸೇವಿಸಿ. ಎಂಜಾಯ್ ಮಾಡಿ. ( ಸೂಚನೆ: ಕುಕ್ಕರ್ ಗೆ ವಿಷಲ್ ಅಥವಾ ವೈಟ್ ಹಾಕಬಾರದು. ಹಾಕಿದರೆ ಕುಕ್ಕರ್ ಸಿಡಿಯುವ ಸಾಧ್ಯತೆ ಇರುತ್ತದೆ).

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳ್ಳಿ ಶೈಲಿಯ ರುಚಿಯಾದ ಚಿಕನ್ ಚಾಪ್ಸ್ ಮಾಡುವ ವಿಧಾನ

    ಹಳ್ಳಿ ಶೈಲಿಯ ರುಚಿಯಾದ ಚಿಕನ್ ಚಾಪ್ಸ್ ಮಾಡುವ ವಿಧಾನ

    ಭಾನುವಾರ ರಜೆ ಇದ್ದ ಕಾರಣ ಯಾರಾದರೂ ಮನೆಗೆ ಅತಿಥಿಗಳು ಬರುತ್ತಾರೆ. ಸಂಡೇ ಸ್ಪೆಷಲ್ ಅಂದರೆ ನಾನ್ ವೆಜ್ ಆಗಿರುತ್ತದೆ. ಪ್ರತಿ ಸಂಡೇ ಬಿರಿಯಾನಿ, ಕಬಾಬ್, ಚಿಕನ್ ಫ್ರೈ ಮಾಡುತ್ತಿರುತ್ತೀರಾ. ಆದರೆ ಅತಿಥಿಗಳು ಬಂದರೆ ಏನಾದರೂ ಸ್ಪೆಷನ್ ಮಾಡಬೇಕು. ಹೀಗಾಗೀ ಹಳ್ಳಿ ಶೈಲಿಯ ಚಿಕನ್ ಚಾಪ್ಸ್ ಮಾಡುವ ವಿಧಾನ ನಿಮಗಾಗಿ….

    ಬೇಕಾಗುವ ಸಾಮಾಗ್ರಿಗಳು:
    1. ಈರುಳ್ಳಿ – 1 ದಪ್ಪದ್ದು
    2. ಪುದಿನ ಸೊಪ್ಪು – ಸ್ವಲ್ಪ
    3. ಕೊತ್ತಂಬರಿ ಸೊಪ್ಪು – ಸ್ವಲ್ಪ
    4. ತೆಂಗಿನ ತುರಿ – 2 ಚಮಚ
    5. ಬೆಳ್ಳುಳ್ಳಿ – ಒಂದು ಗೆಡ್ಡೆ
    6. ಹಸಿರು ಮೆಣಸಿನಕಾಯಿ – 3
    7. ಶುಂಠಿ – ಸ್ವಲ್ಪ
    8. ಚಕ್ಕೆ-ಲವಂಗ – 2-3
    9. ಚಿಕನ್ – 1/2 ಕೆ.ಜಿ
    10. ಎಣ್ಣೆ -3-4 ಚಮಚ
    11. ಉಪ್ಪು ರುಚಿಗೆ ತಕ್ಕಷ್ಟು
    12. ದನಿಯಾ ಪುಡಿ – 1 ಚಮಚ
    13. ಮೆಣಸಿನ ಪುಡಿ – 1 ಚಮಚ

    ಮಸಲಾ ರುಬ್ಬಿಕೊಳ್ಳಿ
    * ತೆಂಗಿನ ತುರಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ್, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದಿನ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.(ತುಂಬಾ ನುಣ್ಣಗೆ ಬೇಡ ಸ್ವಲ್ಪ ತುರಿಯಾಗಿ ರುಬ್ಬಿಕೊಳ್ಳಿ).

    ಮಾಡುವ ವಿಧಾನ
    * ಮೊದಲಿಗೆ ಚಿಕನ್ ಚೆನ್ನಾಗಿ ತೊಳೆದು ಚಿಟಿಕೆ ಅರಿಶಿಣ ಮತ್ತು ಚಿಟಿಕೆ ಉಪ್ಪನ್ನು ಹಾಕಿ ನೆನೆಸಿಡಿ.
    * ಈಗ ಒಂದು ಬಾಣಲಿಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ 2 ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ.(ಸ್ಟವ್ ಮೀಡಿಯಮ್ ನಲ್ಲಿ ಇರಲಿ)
    * ಸ್ವಲ್ಪ ಈರುಳ್ಳಿ ಫ್ರೈ ಆದ ಮೇಲೆ ತೊಳೆದಿಟ್ಟಿದ್ದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಿಕನ್ ಚೆನ್ನಾಗಿ ಫ್ರೈ ಮಾಡಿ.
    * ಚಿಕನ್ ಹಾಕಿದ ನಂತರ ನೀರಿನಾಂಶ ಬಿಟ್ಟುಕೊಳ್ಳುತ್ತದೆ. ಆದ್ದರಿಂದ ನೀರು ಸಂಪೂರ್ಣವಾಗಿ ಪಂಗೋವರೆಗೂ (ನೀರಿನ ಅಂಶ ಕಡಿಮೆ ಆಗುವವರೆಗೆ) ಚಿಕನ್ ಫ್ರೈ ಮಾಡಿಕೊಳ್ಳಿ.


    * ಈ ನೀರು ಪಂಗಿದ ನಂತರ 1 ಚಮಚ ದನಿಯಾ ಪುಡಿ ಮತ್ತು 1 ಚಮಚ ಮೆಣಸಿನ ಪುಡಿ ಹಾಕಿ ಫ್ರೈ ಮಾಡಿ.
    *  ರುಬ್ಬಿದ ಮಸಾಲೆ ಹಾಕಿ, ಸ್ವಲ್ಪ ನೀರು ಹಾಕಿ ಲಿಡ್ ಮುಚ್ಚಿ 10 ನಿಮಿಷ ಬೇಯಲು ಬಿಡಿ(ಆಗಾಗ ಲಿಡ್ ತೆಗೆದು ತಿರುಗಿಸುತ್ತೀರಿ)
    * ಈಗ ಸ್ಟವ್ ಆಫ್ ಮಾಡಿದರೆ ಚಿಕನ್ ಚಾಪ್ಸ್ ತಿನ್ನಲು ಸಿದ್ಧ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರುಚಿಕರವಾದ ಎಗ್ ಬೋಂಡಾ ಮನೆಯಲ್ಲೇ ಮಾಡಿ ಸವಿಯಿರಿ

    ರುಚಿಕರವಾದ ಎಗ್ ಬೋಂಡಾ ಮನೆಯಲ್ಲೇ ಮಾಡಿ ಸವಿಯಿರಿ

    ಸಾಮಾನ್ಯವಾಗಿ ಮೊಟ್ಟೆಯನ್ನು ಎಲ್ಲರೂ ಇಷ್ಟಪಡುತ್ತಾರೆ. ಕೆಲವರು ಬೇಯಿಸಿ ತಿಂದ್ರೆ ಇನ್ನೂ ಕೆಲವರು ಆಫ್ ಬಾಯಿಲ್ಡ್ ಮಾಡಿ ತಿಂತಾರೆ. ಮತ್ತೆ ಕೆಲವರು ಆಮ್ಲೆಟ್ ಮಾಡಿ ತಿಂತಾರೆ. ಆದ್ರೆ ಮೊಟ್ಟೆಯನ್ನು ಬೋಂಡಾ ಮಾಡಿ ತಿನ್ನಬಹುದು. ಅದಕ್ಕಾಗಿ ಸಲಭ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    ಬೇಯಿಸಿದ ಮೊಟ್ಟೆ- 5
    ಉಪ್ಪು- ರುಚಿಗೆ ತಕ್ಕಷ್ಟು
    ಅರಿಶಿಣ ಪುಡಿ- 1/4 ಚಮಚ
    ಚಿಲ್ಲಿ ಪೌಡರ್- 2 ಚಮಚ
    ಕರಿಮೆಣಸಿನ ಪುಡಿ- 1 ಚಮಚ
    ಕಡಲೆ ಹಿಟ್ಟು- 1/2 ಕಪ್
    ಅಕ್ಕಿ ಹುಡಿ- 2 ಚಮಚ
    ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
    ಈರುಳ್ಳಿ- 1
    ಕರಿಯಲು ಎಣ್ಣೆ
    ನೀರು

    ಮಾಡುವ ವಿಧಾನ:
    * ಒಂದು ಪ್ಲೇಟ್ ನಲ್ಲಿ ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಅರಿಶಿಣ ಪುಡಿ ಹಾಗೂ 1 ಚಮಚ ಚಿಲ್ಲಿ ಪೌಡರ್, 1/2 ಚಮಚ ಕರಿಮೆಣಸಿನ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಬಳಿಕ ಬೇಯಿಸಿದ ಮೊಟ್ಟೆಯ ಮೇಲಿನ ಭಾಗವನ್ನಷ್ಟೇ ಕತ್ತರಿಸಿ.
    * ಕತ್ತರಿಸಿಕೊಂಡ ಬಳಿಕ ಮಿಕ್ಸ್ ಮಾಡಿದ ಪುಡಿಯನ್ನು ಮೊಟ್ಟೆಯ ಮೇಲೆ ಸವರಿ.

    * ನಂತರ ಒಂದು ಪಾತ್ರೆಯಲ್ಲಿ ಅರ್ಧ ಕಪ್ ಕಡಲೆ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಚಿಲ್ಲಿ ಪೌಡರ್, ಅರ್ಧ ಚಮಚ ಕರಿಮೆಣಸಿನ ಪುಡಿ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ. ನಂತರ ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಈ ಮಿಕ್ಸ್ ಸ್ವಲ್ಪ ದಪ್ಪವಾಗಿರಬೇಕು. ಬಳಿಕ ಅದಕ್ಕೆ ಈಗಾಗಲೇ ರೆಡಿ ಮಾಡಿಟ್ಟಿದ್ದ ಮೊಟ್ಟೆಯ ಸುತ್ತಲೂ ಕವರ್ ಆಗುವಂತೆ ಡಿಪ್ ಮಾಡಿ.

    * ಇತ್ತ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಬಿಸಿಯಾದ ಬಳಿಕ ಮೊಟ್ಟೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ.
    * ಬೆಂದ ನಂತರ ಇನ್ನೊಂದು ಪಾತ್ರೆಗೆ ಬೋಂಡಾವನ್ನು ಎತ್ತಿಟ್ಟುಕೊಳ್ಳಿ.
    * ಬಳಿಕ ಬೋಂಡವನ್ನು 2 ಭಾಗವಾಗಿ ಕತ್ತರಿಸಿ ಅದಕ್ಕೆ ಕಟ್ ಮಾಡಿದ ಈರುಳ್ಳಿ ಮತ್ತು ಸ್ವಲ್ಪ ಚಿಲ್ಲಿ ಪೌಡರ್ ಹಾಕಿ ಸವಿಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಳಿಗೆ ಬಿಸಿಬಿಸಿ ಹೀರೆಕಾಯಿ ಬಜ್ಜಿ ಮಾಡುವ ವಿಧಾನ

    ಚಳಿಗೆ ಬಿಸಿಬಿಸಿ ಹೀರೆಕಾಯಿ ಬಜ್ಜಿ ಮಾಡುವ ವಿಧಾನ

    ಗಾಗಲೇ ಚಳಿಗಾಲ ಆರಂಭವಾಗಿದೆ. ಬೆಳಗ್ಗೆ ಹಾಗೂ ಸಂಜೆಯ ವೇಳೆಗೆ ಚಳಿ ಸ್ವಲ್ಪ ಜೋರಾಗಿಯೇ ಇರುತ್ತದೆ. ಹೀಗಾಗಿ ಸಂಜೆಯ ಹೊತ್ತಿಗೆ ಏನಾದ್ರೂ ಬಿಸಿಬಿಸಿಯಾಗಿ ತಿನ್ನೋಣ ಅನ್ನಿಸುತ್ತದೆ. ಆದ್ದರಿಂದ ನಿಮಗಾಗಿ ಸುಲಭವಾದ ಹೀರೆಕಾಯಿ ಬಜ್ಜಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಕಡ್ಲೆ ಹಿಟ್ಟು – ಒಂದು ಕಪ್
    2. ಹೀರೆಕಾಯಿ – 1
    3. ಗರಂ ಮಸಾಲ – 1/2 ಚಮಚ
    4. ಖಾರದ ಪುಡಿ – 1 ಚಮಚ
    5. ಅರಿಶಿಣ – 1/4 ಚಮಚ
    6. ಉಪ್ಪು – ರುಚಿಗೆ ತಕ್ಕಷ್ಟು
    7. ಸೋಡ – ಚಿಟಿಕೆ
    8. ಎಣ್ಣೆ – ಕರಿಯಲು
    9. ನೀರು

    ಮಾಡುವ ವಿಧಾನ
    * ಒಂದು ಬೌಲ್ ಗೆ ಕಡ್ಲೆ ಹಿಟ್ಟು, ಖಾರದ ಪುಡಿ, ಗರಂ ಮಸಲಾ, ಉಪ್ಪು, ಸೋಡ, ಅರಿಶಿಣ ಹಾಕಿಕೊಳ್ಳಿ.
    * ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ(ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು)
    * ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
    * ಕಾದ ಎಣ್ಣೆಗೆ ಒಂದೊಂದೇ ಹಿರೇಕಾಯಿ ಮಿಶ್ರಣವನ್ನು ಡಿಪ್ ಮಾಡಿ ಹಾಕಿ.
    * ಬೆಂಕಿಯ ಉರಿಯನ್ನು ಮೀಡಿಯಂನಲ್ಲಿಟ್ಟು ಹೀರೆಕಾಯಿ ಬ್ರೌನ್ ಕಲರ್ ಬರೋವರೆಗೆ ಬೇಯಿಸಿಕೊಳ್ಳಿ.
    * ಬೆಂದ ಬಳಿಕ ಒಂದು ಪ್ಲೇಟ್ ಗೆ ಹಾಕಿ
    * ಈಗ ಬಿಸಿಬಿಸಿ ಹೀರೆಕಾಯಿ ಬಜ್ಜಿಗೆ ಸ್ವಲ್ಪ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ತುರಿದ ಕ್ಯಾರೇಟ್ ಹಾಕಿ ಸವಿಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv