Tag: recipe

  • ಉತ್ತರ ಕರ್ನಾಟಕ ಶೈಲಿಯಲ್ಲಿ ಬೇವು-ಬೆಲ್ಲದ ಪಾನಕ ಮಾಡುವ ವಿಧಾನ

    ಉತ್ತರ ಕರ್ನಾಟಕ ಶೈಲಿಯಲ್ಲಿ ಬೇವು-ಬೆಲ್ಲದ ಪಾನಕ ಮಾಡುವ ವಿಧಾನ

    ಬ್ಬಗಳು ಭಾರತೀಯ ಸಂಪ್ರದಾಯದ ತಿಲಕ ಎಂಬ ಮಾತಿದೆ. ಭಾರತದ ಪ್ರತಿ ಹಬ್ಬ ತನ್ನದೇ ಆದ ವಿಶೇಷತೆ, ಆಚರಣೆಯನ್ನು ಹೊಂದಿರುತ್ತದೆ. ಪೂಜೆ-ಪುನಸ್ಕಾರಗಳ ಜೊತೆಯಲ್ಲಿ ಆ ಹಬ್ಬದ ವಿಶೇಷ ಸಿಹಿ ಅಡುಗೆ ಸಿದ್ಧವಾಗಿರುತ್ತದೆ. ಯುಗಾದಿ ಹಬ್ಬ ಸ್ವಲ್ಪ ಭಿನ್ನವಾಗಿರುತ್ತದೆ. ಕಾರಣ ಈ ಹಬ್ಬದಂದು ಸಿಹಿ ಜೊತೆಯಲ್ಲಿ ಬೇವು ನೀಡಲಾಗುತ್ತದೆ. ಅಂತೆಯೇ ಯುಗಾದಿ ಹಬ್ಬದಂದು ಬೇವು-ಬೆಲ್ಲವನ್ನು ತಿನ್ನುವುದು ಆಚರಣೆ. ಇದೇ ಬೇವು-ಬೆಲ್ಲದಿಂದ ಬಿಸಿಲ ನಾಡು ಉತ್ತರ ಕರ್ನಾಟಕದ ಜನತೆ ಸ್ಪೆಷಲ್ ಪಾನಕ ತಯಾರಿಸಿ, ಮನೆಗೆ ಗೆಳೆಯರು- ನೆರೆಹೊರೆಯವರನ್ನು ಕರೆಸಿ ಎಲ್ಲರೊಂದಿಗೆ ಸೇವಿಸಿ ಹಬ್ಬವನ್ನು ಐಕ್ಯತೆಯೊಂದಿಗೆ ಆಚರಿಸುತ್ತಾರೆ. ಇದನ್ನೂ ಓದಿ: ಯುಗಾದಿ ಸ್ಪೆಷಲ್: ಬೇವು-ಬೆಲ್ಲ ಮಾಡುವ ವಿಧಾನ

    ಬೇಕಾಗುವ ಸಾಮಾಗ್ರಿಗಳು:
    1. ಬೇವಿನ ಹೂವು – ಸ್ವಲ್ಪ
    2. ದ್ರಾಕ್ಷಿ – 4-5
    3. ಮಾವಿನ ಕಾಯಿ – 3 ಚಮಚ
    4. ಬೆಲ್ಲ – ಅರ್ಧ ಕಪ್
    5. ಬಾಳೆಹಣ್ಣು – ಒಂದು
    6. ಹುರಿಗಡಲೆ ಹಿಟ್ಟು – ಅರ್ಧ ಪಕ್
    7. ಹುಣಸೆ ಹಣ್ಣಿನ ರಸ – 1 ಕಪ್
    8. ಕತ್ತರಿಸಿದ ಕಲ್ಲಂಗಡಿ- 4, 5 ಪೀಸ್
    9. ಶುಂಠಿ ಪೌಡರ್ – ಚಿಟಿಕೆ
    10. ಉಪ್ಪು – ರುಚಿಗೆ ತಕ್ಕಷ್ಟು
    11. ಬಾದಾಮಿ, ಗೋಡಂಬಿ ಮತ್ತು ಕಲ್ಲು ಸಕ್ಕರೆ -ಸ್ವಲ್ಪ

    ಬೇವು ಬೆಲ್ಲದ ಪಾನಕ ಮಾಡುವ ವಿಧಾನ:
    * ಒಂದು ಕಪ್ ಹುಣಸೆ ಹಣ್ಣಿನ ರಸವನ್ನು ದೊಡ್ಡ ಪಾತ್ರೆಗೆ ಹಾಕಿ, ಅದಕ್ಕೆ ಬೆಲ್ಲ ಮತ್ತು ಕಲ್ಲು ಸಕ್ಕರೆ ಹಾಕಿ ನೆನೆಯಲು ಬಿಡಿ.
    * ಹುಣಸೆ ಹಣ್ಣು, ಬೆಲ್ಲ ಮತ್ತು ಕಲ್ಲು ಸಕ್ಕರೆಯ ಮಿಶ್ರಣಕ್ಕೆ 2 ಚಮಚ ಹುರಿಗಡಲೆ ಹಿಟ್ಟು ಹಾಕಿ ಗಂಟು ಬರದಂತೆ ಬೆರೆಸಿ.
    * ಇತ್ತ ಮಾವಿನ ಕಾಯಿ, ದ್ರಾಕ್ಷಿ, ಕಲ್ಲಂಗಡಿ, ಬಾಳೆಹಣ್ಣು, ಬಾದಾಮಿ, ಗೋಡಂಬಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. (ಮಾವಿನ ಕಾಯಿ ಕಾಯಿಯನ್ನು ಕೊಬ್ಬರಿ ತುರಿಯಂತೆ ಮಾಡಿಕೊಳ್ಳುವುದು ಉತ್ತಮ)
    * ಹುಣಸೆ ಹಣ್ಣಿನ ಮಿಶ್ರಣಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಎಲ್ಲ ಹಣ್ಣುಗಳನ್ನು ಒಂದೊಂದಾಗಿ ಹಾಕುತ್ತಾ ಹೋಗಬೇಕು.
    * ಈ ಮಿಶ್ರಣಕ್ಕೆ ಒಂದರಿಂದ ಎರಡು ಗ್ಲಾಸ್ ನೀರನ್ನು ಬೆರೆಸಿಕೊಳ್ಳಿ.
    * ನೀರು ಸೇರಿಸಿದ ಬಳಿಕ ಸ್ವಲ್ಪ ಶುಂಠಿ ಪೌಡರ್, ಸ್ವಲ್ಪ ಉಪ್ಪು ಹಾಕಿ, ಕೊನೆಯದಾಗಿ ಬೇವಿನ ಹೂಗಳನ್ನು ಹಾಕಿದರೆ ಬೇವು-ಬೆಲ್ಲದ ಪಾನಕ ರೆಡಿ. ಇದನ್ನೂ ಓದಿ: ಬೇವು-ಬೆಲ್ಲ ತಿಂದು ಯುಗಾದಿಯ ವಿಶೇಷತೆ ತಿಳಿಯಿರಿ 

    ವಿಶೇಷ ಸೂಚನೆ:
    ಉತ್ತರ ಕರ್ನಾಟಕದಲ್ಲಿ ಬೇವು-ಬೆಲ್ಲದ ಪಾನಕ ತಯಾರಿಸಲು ಹೊಸದಾಗಿ ಮಡಿಕೆ ಖರೀದಿ ಮಾಡುತ್ತಾರೆ. ಮಡಿಕೆಯಲ್ಲಿ ಪಾನಕ ಹಾಕಿದ ಕೆಲವೇ ಗಂಟೆಗಳಲ್ಲಿ ತಣ್ಣಗಾಗುತ್ತದೆ. ಪಾನಕ ಸಿದ್ಧಗೊಂಡ ಬಳಿಕ ಮಡಿಕೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಪೂಜೆಯ ಬಳಿಕ ನೆರೆಹೊರೆಯವರಿಗೆ, ಗೆಳೆಯರನ್ನು ಮನೆಗೆ ಕರೆಸಿ ಪಾನಕ ನೀಡಿ ಎಲ್ಲರೊಂದಿಗೆ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. (ಮಡಿಕೆ ಇಲ್ಲದವರು ಐಸ್ ಕ್ಯೂಬ್‍ಗಳನ್ನು ಬಳಸಿಕೊಳ್ಳುತ್ತಾರೆ)

  • ರಾಗಿ ಅಂಬಲಿ ಕುಡಿಯಿರಿ ದೇಹವನ್ನು ಕೂಲ್ ಆಗಿಟ್ಟುಕೊಳ್ಳಿ – ಅಂಬಲಿ ಮಾಡೋ ಸುಲಭ ವಿಧಾನ ಓದಿ

    ರಾಗಿ ಅಂಬಲಿ ಕುಡಿಯಿರಿ ದೇಹವನ್ನು ಕೂಲ್ ಆಗಿಟ್ಟುಕೊಳ್ಳಿ – ಅಂಬಲಿ ಮಾಡೋ ಸುಲಭ ವಿಧಾನ ಓದಿ

    ಗಾಗಲೇ ಬಿಸಿಲು ಹೆಚ್ಚಾಗುತ್ತಿದ್ದು, ಜನ ಬಿಸಿಲಿನ ಶಾಖದಿಂದ ದೇಹವನ್ನು ತಂಪಾಗಿಡಲು ಅಧಿಕ ನೀರು, ಎಳನೀರು ಜ್ಯೂಸ್ ಮೊರೆ ಹೋಗಿದ್ದಾರೆ. ಜ್ಯೂಸ್, ಎಳನೀರು ಸ್ವಲ್ಪ ದುಬಾರಿಯಾದ ಹಿನ್ನೆಲೆಯಲ್ಲಿ ನೀವು ಮನೆಯಲ್ಲೇ ಕುಳಿತು ರಾಗಿ ಅಂಬಲಿ ತಯಾರಿಸಿದರೆ ಕಡಿಮೆ ಖರ್ಚಿನಲ್ಲಿ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ದೇಹವನ್ನು ತಂಪಾಗಿ ಇಡಬಹುದು. ‘ರಾಗಿ ತಿಂದರೆ ರೋಗವಿಲ್ಲ’ ಎನ್ನುವ ಗಾದೆ ಮಾತಿನಂತೆ ಬೇಸಿಗೆಯಲ್ಲಿ ರಾಗಿ ಅಂಬಲಿ ಮಾಡಿ ಕುಡಿದರೆ ದೇಹದ ತಾಪಮಾನ ಕಡಿಮೆಯಾಗುತ್ತದೆ. ಹೀಗಾಗಿ ಇಲ್ಲಿ ನಿಮಗಾಗಿ ಸುಲಭವಾಗಿ ಚೆನ್ನಾಗಿ ರಾಗಿ ಅಂಬಲಿ ಮಾಡುವ ವಿಧಾನವನ್ನು ತಿಳಿಸಲಾಗಿದೆ. ಇಲ್ಲಿ ತಿಳಿಸಿದಂತೆ ಪಾಕ ಮಾಡಿ ಅಂಬಲಿ ಸಿದ್ಧಪಡಿಸಿ ನಿಮ್ಮ ದೇಹವನ್ನು ಕೂಲಾಗಿ ಇಡಿ.


    ಬೇಕಾಗುವ ಸಾಮಾಗ್ರಿಗಳು
    1. ರಾಗಿ ಹಿಟ್ಟು – ಅರ್ಧ ಕಪ್
    2. ಕತ್ತರಿಸಿದ ಈರುಳ್ಳಿ – ಅರ್ಧ ಕಪ್
    3. ಕತ್ತರಿಸಿದ ಹಸಿ ಮೆಣಸಿನಕಾಯಿ – ಒಂದು ಚಮಚ
    4. ಕತ್ತರಿಸಿದ ಕೊತ್ತಂಬರಿ ಸೊಪ್ಪು – ಎರಡು ಚಮಚ
    5. ಉಪ್ಪು – ರುಚಿಗೆ ಬೇಕಾದಷ್ಟು
    6. ಜೀರಿಗೆ ಪುಡಿ – ಒಂದು ಚಮಚ
    7. ಕರಿಬೇವು – 6 ಎಲೆಗಳು,
    8. ಮಜ್ಜಿಗೆ – ಎರಡು ಕಪ್
    9. ನಿಂಬೆಹಣ್ಣು – ಒಂದು
    10. ನೀರು – ಅರ್ಧ ಲೀಟರ್

    ಮಾಡುವ ವಿಧಾನ
    * ಮೊದಲಿಗೆ ಒಂದು ಕಪ್ ನೀರಿನಲ್ಲಿ ಅರ್ಧ ಕಪ್ ರಾಗಿ ಹಿಟ್ಟನ್ನು ಹಾಕಿ, ಗಂಟು ಬರದಂತೆ ಮಿಕ್ಸ್ ಮಾಡಿ ಇಟ್ಟುಕೊಳ್ಳಿ.
    * ಅರ್ಧ ಲೀಟರ್ ನೀರನ್ನು ಕುದಿಸಿ ಅದರಲ್ಲಿ ನಾವು ಮೊದಲು ತಯಾರಿ ಮಾಡಿಕೊಂಡ ರಾಗಿ ಮಿಶ್ರಣವನ್ನು ಇದರಲ್ಲಿ ಹಾಕಿ.
    * ಸುಮಾರು 7 ನಿಮಿಷಗಳ ಕಾಲ ಚೆನ್ನಾಗಿ ಉಂಡೆ ಬಾರದಂತೆ ಕುದಿಸಿರಿ.
    * ಬಳಿಕ ಅದು ತಣ್ಣಗಾದ ಮೇಲೆ ಅದಕ್ಕೆ ಮಜ್ಜಿಗೆ, ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಕರಿಬೇವು, ರುಚಿಗೆ ಬೇಕಾದಷ್ಟು ಉಪ್ಪು, ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ.
    * ಈಗ ಅದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಬೆರೆಸಿ ರಾಗಿ ಅಂಬಲಿ ಸವಿಯಿರಿ.

  • ಸಿಂಪಲ್ ಹೆಲ್ತಿ ಪಾಲಕ್ ಪೂರಿ ಮಾಡುವ ವಿಧಾನ

    ಸಿಂಪಲ್ ಹೆಲ್ತಿ ಪಾಲಕ್ ಪೂರಿ ಮಾಡುವ ವಿಧಾನ

    ವತ್ತು ಸಂಡೆ ಬಹುತೇಕ ಮನೆಯಲ್ಲಿ ಎಲ್ಲರು ರಿಲ್ಯಾಕ್ಸ್ ಮೂಡಿನಲ್ಲಿ ಇರುವಾಗ, ಇವಾಗ ತಿಂಡಿಗೆ ಏನಪ್ಪ ಮಾಡೋದು ಅಂತ ಯೋಚನೆ ಮಾಡ್ತಾ ಇದ್ದೀರ? ಸಿಂಪಲ್ ಆಗಿ ಬೇಗನೇ ಆಗೋ ಯಾವ ತಿಂಡಿ ಮಾಡೋದಪ್ಪ ಅಂತ ಪೂಲ್ ಕಂನ್ಫೋಷನ್ ನಲ್ಲಿ ಇದ್ದೀರಾ? ಹಾಗಾದ್ರೆ ಜಾಸ್ತಿ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳಬೇಡಿ. ಸಿಂಪಲ್ಲಾಗಿ, ರುಚಿಕರ ಹಾಗೂ ಹೆಲ್ತಿ ಪಾಲಕ್ ಪೂರಿ ಮಾಡೋ ವಿಧಾನವನ್ನು ನಾವು ನಿಮ್ಗೆ ತಿಳಿಸ್ತಿವಿ, ಮನೆಯಲ್ಲಿ ಇದನ್ನು ಟ್ರೈ ಮಾಡಿ ಸಂಡೇಯನ್ನು ಹೆಲ್ತಿ ಬ್ರೇಕ್‍ಫಾಸ್ಟ್ ಮೂಲಕ ಮೆಲ್‍ಕಮ್ ಮಾಡಿ.

    ಸಿಂಪಲ್ ಪಾಲಕ್ ಪೂರಿಗೆ ಬೇಕಾಗುವ ಸಾಮಾಗ್ರಿ
    1. 2 ಕೈಮುಷ್ಟಿಯಷ್ಟು ಪಾಲಕ್ ಸೊಪ್ಪು
    2. 1ರಿಂದ 1.5 ಕಪ್ ಗೋದಿ ಹಿಟ್ಟು
    3. ಅರ್ಧ ಚಮಚ ಓಂ ಕಾಳು(ಅಜವನ ಕಾಳು)
    4. 2-4 ಹಸಿಮೆಣಸಿನಕಾಯಿ
    5. ರುಚಿಗೆ ತಕ್ಕಷ್ಟು ಉಪ್ಪು
    5. 1/2 ಅಥವಾ 1/4 ಕಪ್ಪು ನೀರು

    ಮಾಡುವ ವಿಧಾನ

    ಮೊದಲು ಪಾಲಕ್ ಸೊಪ್ಪನ್ನು ನೀರಿಯಿಂದ ಚೆನ್ನಾಗಿ ತೊಳೆದುಕೊಳ್ಳಿ, ಬಳಿಕ ಒಂದು ಪ್ಯಾನ್‍ನಲ್ಲಿ 1/4 ಕಪ್ ನೀರು ಹಾಕಿ ಸ್ಟವ್ ಮೇಲೆ ಬಿಸಿ ಮಾಡಲು ಇಡಿ. ನೀರು ಬಿಸಿಯಾದ ಬಳಿಕ ಅದಕ್ಕೆ ತೊಳೆದಿಟ್ಟಿದ್ದ ಪಾಲಕ್ ಸೊಪ್ಪು ಸೇರಿಸಿ ಬೇಯಿಸಿ. ನಂತರ ಪಾಲಕ್ ಬೆಂದ ನಂತರ ಸ್ಟವ್ ಆಫ್ ಮಾಡಿ, ಪಾಲಕ್ ತಣ್ಣಗಾಗಲು ಬಿಡಿ.

    ಪಾಲಕ್ ಸೊಪ್ಪನ್ನು ಹಾಗೂ 2-4 ಹಸಿಮೆಣಸನ್ನು ಮಿಕ್ಸಿ ಜಾರ್‍ಗೆ ಹಾಕಿ ರುಬ್ಬಿಕೊಳ್ಳಿ, ಆಮೇಲೆ ಒಂದು ಪಾತ್ರೆಯಲ್ಲಿ 1 ರಿಂದ 1/5 ಕಪ್ ಗೋದಿ ಹಿಟ್ಟು, ಅರ್ಧ ಚಮಚ ಓಂ ಕಾಳು, ರುಚಿಗೆ ತಕ್ಕಷ್ಟು ಉಪ್ಪು, ರುಬ್ಬಿಕೊಂಡ ಪಾಲಕ್ ಮಿಶ್ರಣ ಹಾಕಿ ಚೆನ್ನಾಗಿ ಕಲಿಸುತ್ತ, ನಿಧಾನಕ್ಕೆ ನೀರನ್ನು ಸೇರಿಸಿ ಹದವಾಗಿ ಹಿಟ್ಟನ್ನು ಕಲಸಿಕೊಳ್ಳಿ.

    5-10 ನಿಮಿಷ ಕಲಸಿದ ಪೂರಿ ಹಿಟ್ಟನ್ನು ಹಾಗೆಯೇ ಇಡಬೇಕು. ನಂತರ ಈ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಒಂದೊಂದನ್ನೆ ಪೂರಿ ಆಕಾರಕ್ಕೆ ಲಟ್ಟಿಸಿಕೊಳ್ಳಿ. ಹೀಗೆ ಉಳಿದ ಪಾಲಕ್ ಮಿಶ್ರಿತ ಹಿಟ್ಟನ್ನು ಲಟ್ಟಿಸಿಕೊಳ್ಳಿ.

    ನಂತರ ಒಂದು ಪಾನ್‍ನಲ್ಲಿ ಎಣ್ಣೆ ಬಿಸಿಗೆ ಇಟ್ಟು, ಅದು ಕಾದ ನಂತರ ಲಟ್ಟಿಸಿಟ್ಟಿದ್ದ ಪೂರಿಗಳನ್ನು ಎಣ್ಣೆಯಲ್ಲಿ ಕರಿಯಿಸಿ. ಬಳಿಕ ಅದನ್ನು ಪ್ಲೇಟ್‍ನಲ್ಲಿ ಹಾಕಿ ಕಾಯಿ ಚಟ್ನಿ ಅಥವಾ ಪುದೀನ ಚಟ್ನಿ ಜೊತೆ ಸವಿದು ಖುಷಿಪಡಿ.

  • ದಿಢೀರ್ ಫಿಶ್ ಫ್ರೈ ಮಾಡುವ ವಿಧಾನ

    ದಿಢೀರ್ ಫಿಶ್ ಫ್ರೈ ಮಾಡುವ ವಿಧಾನ

    ಮೀನು ಎಲ್ಲರಿಗೂ ಆರೋಗ್ಯಕರವಾದ ಆಹಾರವಾಗಿದೆ. ಹೀಗಾಗಿ ಕೆಲ ಮಂದಿ ಪ್ರತಿವಾರ ಸಂಡೇ ಬಂದರೆ ಚಿಕನ್, ಮಟನ್, ಮಾಡಿ ತಿನ್ನುತ್ತಿರುತ್ತಾರೆ. ಇಲ್ಲಿ ಎರಡು ಬಗೆಯ ಮೀನಿನ ಖಾದ್ಯವನ್ನು ತಯಾರಿಸುವ ವಿಧಾನದ ಮಾಹಿತಿಯನ್ನು ನೀಡಲಾಗಿದೆ.

    ಬೇಕಾಗುವ ಸಾಮಾಗ್ರಿಗಳು
    1. ಕ್ಲೀನ್ ಮಾಡಿ ಸ್ಲೈಸ್ ಮಾಡಿದ ಫಿಶ್ – ಅರ್ಧ ಕೆಜಿ
    2. ಖಾರದ ಪುಡಿ – 1 ಚಮಚ
    3. ದನಿಯಾ ಪುಡಿ – 1 ಚಮಚ
    4. ಅರಿಶಿಣ ಪುಡಿ – ಚಿಟಿಕೆ
    5. ಕಾಳು ಮೆಣಸಿನ ಪುಡಿ – 1 ಚಮಚ
    6. ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    7. ಉಪ್ಪು – ರುಚಿಗೆ ತಕ್ಕಷ್ಟು
    8. ಕರಿಬೇವಿನ ಸೊಪ್ಪು
    9. ನಿಂಬೆಹಣ್ಣು – ಅರ್ಧ ಹೋಳು
    10. ನೀರು – 1 ಚಮಚ
    11. ಎಣ್ಣೆ – 3-4 ಚಮಚ

    ಮಾಡುವ ವಿಧಾನ
    * ಒಂದು ಬೌಲ್‍ಗೆ ಖಾರದಪುಡಿ, ದನಿಯಾ ಪುಡಿ, ಅರಿಶಿಣ ಪುಡಿ, ಕಾಳು ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕರಿಬೇವಿನ ಸೊಪ್ಪು ಸಣ್ಣಗೆ ಹೆಚ್ಚಿದ್ದು, ಅರ್ಧ ನಿಂಬೆಹಣ್ಣು ಹಿಂಡಿ 1 ಚಮಚ ನೀರು ಸೇರಿಸಿ ಮೀನಿಗೆ ಲೇಪಿಸುವಷ್ಟು ಗಟ್ಟಿ ಇರುವಂತೆ ಕಲಸಿಕೊಳ್ಳಿ. ತುಂಬಾ ನೀರು ಮಾಡಿಕೊಳ್ಳಬೇಡಿ.
    * ಬಳಿಕ ಮೀನಿನ 2 ಭಾಗಕ್ಕೆ ಮಿಶ್ರಣ ಲೇಪಿಸಿ ಅರ್ಧ ಗಂಟೆ ಕಾಲ ಇಟ್ಟುಬಿಡಿ. ನೆನಸಿಡಿ.
    * ಬಳಿಕ ಒಂದು ಪ್ಯಾನ್‍ಗೆ 3-4 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮಸಾಲೆ ಹಾಕಿದ್ದ ಫಿಶ್ ಹಾಕಿ 2 ಕಡೆ ಚೆನ್ನಾಗಿ ಫ್ರೈ ಮಾಡಿ. ಈರುಳ್ಳಿ, ನಿಂಬೆಹಣ್ಣಿನ ಜೊತೆಗ ಸವಿಯಿರಿ..

    ಈ ಫಿಶ್ ಫ್ರೈ ಅನ್ನು ಮತ್ತೊಂದು ವಿಧಾನದಲ್ಲೂ ಮಾಡಬಹುದು
    * ಮೊದಲಿಗೆ ಚೆನ್ನಾಗಿ ಕ್ಲೀನ್ ಮಾಡಿದ ಸ್ಲೈಸ್ ಕಟ್ ಮಾಡಿದ ಮೀನಿಗೆ ಅರಿಶಿಣ ಸ್ವಲ್ಪ, ಉಪ್ಪು ಸೇರಿಸಿ ಎರಡೂ ಕಡೆ ಲೇಪಿಸಿ 10ರಿಂದ 15 ನಿಮಿಷ ಇಡಿ.
    * ಹೀಗೆ ಮಾಡುವುದರಿಂದ ಫಿಶ್‍ನಲ್ಲಿನ ವಾಸನೆ ಕಡಿಮೆ ಆಗುತ್ತದೆ ಜೊತೆಗೆ ರುಚಿಯೂ ಹೆಚ್ಚಿರುತ್ತದೆ.
    * ಈಗ ಒಂದು ಬೌಲ್‍ಗೆ ಖಾರದಪುಡಿ, ಧನಿಯಾ ಪುಡಿ, ಅರಿಶಿಣ ಪುಡಿ, ಕಾಳು ಮೆಣಸಿನ ಪುಡಿ, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕರಿಬೇವಿನ ಸೊಪ್ಪು ಸಣ್ಣಗೆ ಹೆಚ್ಚಿದ್ದು, ಅರ್ಧ ನಿಂಬೆಹಣ್ಣು ಹಿಂಡಿ 1 ಚಮಚ ನೀರು ಸೇರಿಸಿ ಮೀನಿಗೆ ಲೇಪಿಸುವಷ್ಟು ಗಟ್ಟಿ ಇರುವಂತೆ ಕಲಸಿಕೊಳ್ಳಿ. (ಈ ಮೊದಲೇ ಫಿಶ್‍ಗೂ ಉಪ್ಪು ಹಾಕಿರುವುದರಿಂದ ನೋಡಿಕೊಂಡು ಉಪ್ಪು ಸೇರಿಸಿ)
    * ಬಳಿಕ ಮೊದಲೇ ಅರಿಶಿಣ ಉಪ್ಪು ಹಚ್ಚಿಟ್ಟಿದ್ದ ಮೀನಿನ 2 ಭಾಗಕ್ಕೆ ಮಿಶ್ರಣ ಲೇಪಿಸಿ 5 ರಿಂದ 10 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ. ನೆನಸಿಡಿ.
    * ಬಳಿಕ ಒಂದು ಪ್ಯಾನ್‍ಗೆ 3-4 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮ್ಯಾರಿನೇಟ್ ಮಾಡಿದ ಫಿಶ್ ಹಾಕಿ 2 ಕಡೆ ಚೆನ್ನಾಗಿ ಫ್ರೈ ಮಾಡಿ. ಈರುಳ್ಳಿ, ನಿಂಬೆಹಣ್ಣಿನ ಜೊತೆಗ ಸವಿಯಿರಿ.
    * ಇದು ಫಿಶ್ ಫ್ರೈ ಅನ್ನು ಸೈಡ್ ಡಿಶ್ ಆಗಿಯೂ ಬಳಸಬಹುದು..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿಂಪಲ್ ಕಾಲು ಸೂಪ್ ಮಾಡುವ 2 ವಿಧಾನ

    ಸಿಂಪಲ್ ಕಾಲು ಸೂಪ್ ಮಾಡುವ 2 ವಿಧಾನ

    ಇಂದು ಭಾನುವಾರ ಮನೆಯಲ್ಲಿ ನಾನ್‍ವೆಜ್ ಮಾಡುತ್ತೀರ. ಪ್ರತಿ ಸಂಡೇ, ಚಿಕನ್, ಮಟನ್, ಫಿಶ್ ತಿನ್ನುತ್ತೀರಾ. ಹೀಗಾಗಿ ಈ ವಾರ ಆರೋಗ್ಯಕ್ಕೆ ಉತ್ತಮವಾದ ಕಾಲ್ ಸೂಪ್ ಮಾಡಿ ಸವಿಯಿರಿ. ಮಕ್ಕಳಿಂದ ವೃದ್ಧರವೆಗೂ ಕಾಲ್ ಸೂಪನ್ನು ಕುಡಿಯುತ್ತಾರೆ. ಆದರೆ ಮಕ್ಕಳು ಕುಡಿಯಲು ಇಷ್ಟಪಡುವುದಿಲ್ಲ. ಅದಕ್ಕೆ ಮಸಲಾ ಹಾಕಿ ರುಚಿಕರವಾಗಿ ಮಾಡಿಕೊಟ್ಟರೆ ಕುಡಿಯುತ್ತಾರೆ. ಆದ್ದರಿಂದ ಎರಡು ವಿಧಾನದಲ್ಲಿ ಕಾಲ್ ಸೂಪ್ ಮಾಡುವ ವಿಧಾನ ನಿಮಗಾಗಿ…

    ಬೇಕಾಗುವ ಸಾಮಾಗ್ರಿಗಳು
    1. ಮೇಕೆ ಕಾಲು – 2
    2. ಈರುಳ್ಳಿ – ಮೀಡಿಯಂ
    3. ಬೆಳ್ಳುಳ್ಳಿ – 2-3 ಎಸಳು
    4. ಶುಂಠಿ – ಸ್ವಲ್ಪ
    5. ಚಕ್ಕೆ – ಸ್ವಲ್ಪ
    6. ಲವಂಗ – 2-3
    7. ದನಿಯಾ ಪುಡಿ – ಅರ್ಧ ಚಮಚ
    8. ಕೆಂಪು ಮೆಣಸಿನಕಾಯಿ – ಖಾರಕ್ಕೆ ಬೇಕಾದಷ್ಟು
    9. ಕೊತ್ತಂಬರಿ ಸೊಪ್ಪು – ಸ್ವಲ್ಪ
    10. ಉಪ್ಪು – ರುಚಿಗೆ ತಕ್ಕಷ್ಟು
    11. ಎಣ್ಣೆ – 2 ಚಮಚ
    12. ಅರಿಶಿಣ – ಚಿಟಿಕೆ

    ಮಾಡುವ ವಿಧಾನ
    * ಮೊದಲಿಗೆ ಅಂಗಡಿಯಿಂದ ಸುಟ್ಟು ತಂದ ಕಾಲನ್ನು ಚೆನ್ನಾಗಿ 2 ರಿಂದ 3 ಬಾರಿ ಶುದ್ಧ ನೀರಿನಲ್ಲಿ ತೊಳೆಯಬೇಕು.
    * ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ.
    * ತಣ್ಣಗೆ ಆದ ಮೇಲೆ ಒಂದು ಮಿಕ್ಸರ್ ಜಾರ್‍ಗೆ ಹಾಕಿ ಫ್ರೈ ಮಾಡಿದ ಪದಾರ್ಥಗಳನ್ನು ಹಾಕಿ ಜೊತೆಗೆ ಧನಿಯಾ, ಅರಿಶಿಣ ಪುಡಿ ಸೇರಿಸಿ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
    * ಈಗ ಒಂದು ಕುಕ್ಕರ್ ಬಿಸಿಗಿಟ್ಟು, ಎಣ್ಣೆ ಹಾಕಿ ಬಿಸಿಯಾದ ಮೇಲೆ ತೊಳೆದ ಕಾಲುಗಳನ್ನು ಹಾಕಿ. 2 ನಿಮಿಷ ಫ್ರೈ ಮಾಡಿ.
    * ಈಗ ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಉಪ್ಪು ಸೇರಿಸಿ, ಜಾಸ್ತಿ ನೀರು ಹಾಕಿ 3-5 ಕೂಗು ಕೂಗಿಸಿ.
    * ಸೂಪ್ ನೀರಿನಂತೆ ಇದ್ದರೆ ಕುಡಿಯಲು ಚೆನ್ನಾಗಿರುತ್ತದೆ. ಹೀಗಾಗಿ ಜಾಸ್ತಿ ನೀರು ಹಾಕಿ ಚೆನ್ನಾಗಿ ಕೂಗಿಸಬೇಕು.
    * ಕುಕ್ಕರ್ ಪ್ರೆಶರ್ ಇಳಿದ ಮೇಲೆ ಕಾಲನ್ನು ಬೇರ್ಪಡಿಸಿ, ಸೂಪನ್ನು ಪ್ರತ್ಯೇಕಿಸಿ.
    * ಸರ್ವ್ ಮಾಡುವಾಗ ಸೂಪ್‍ಗೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಸರ್ವ್ ಮಾಡಿ. ಕುಡಿಯಲು ಚೆನ್ನಾಗಿರುತ್ತದೆ.
    * ಸೂಪ್‍ನೊಂದಿಗೆ ಕಾಲನ್ನು ಸೇವಿಸಬಹುದು ಅಥವಾ ಅದೇ ಕಾಲನ್ನು ಮೇಲೆ ತಿಳಿಸಿದ ಮಸಾಲೆ ಪದಾರ್ಥಗಳನ್ನು ಸೇರಿಸಿ ಸಾರು ಮಾಡಿಕೊಂಡು ಸೇವಿಸಬಹುದು.

    ಮತ್ತೊಂದು ವಿಧಾನ
    * ಕಾಲು ಸೂಪಿಗೆ ಮಸಾಲೆ ಇಲ್ಲದೆಯೂ ಸೂಪ ತಯಾರಿಸಬಹುದು.
    * ಕುಕ್ಕರ್ ಬಿಸಿಗಿಟ್ಟು ಚೆನ್ನಾಗಿ ತೊಳೆದ ಕಾಲು, ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 3-4 ಕೂಗು ಕೂಗಿಸಿ.
    * ಆರಿದ ಬಳಿಕ ಸೂಪಿಗೆ ಕಾಳು ಮೆಣಸಿನ ಪುಡಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕುಡಿಯಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ

    ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ

    ಭಾನುವಾರ ರಜಾ ದಿನವಾದ್ದರಿಂದ ಎಲ್ರೂ ಮನೆಯಲ್ಲಿರುತ್ತಾರೆ. ಇಂದು ಮನೆಗೆ ಅತಿಥಿಗಳು ಕೂಡ ಬರಬಹುದು, ಆದರೆ ಪ್ರತಿಬಾರಿಯೂ ಚಿಕನ್ ಕಬಾಬ್, ಸಾಂಬಾರ್, ಗ್ರೇವಿ ಮಾಡುತ್ತಿರುತ್ತೀರಾ. ಹೀಗಾಗಿ ನಿಮಗಾಗಿ ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಾಗ್ರಿಗಳು
    1. ಬೋನ್‍ಲೆಸ್ ಚಿಕನ್ – 500 ಗ್ರಾಂ
    2. ಈರುಳ್ಳಿ – 1 ಮೀಡಿಯಂ ಸೈಜ್
    3. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    4. ಪೆಪ್ಪರ್ ಪೌಡರ್ – 1.5 ಚಮಚ
    5. ಹಸಿ ಮೆಣಸಿನಕಾಯಿ – 2-3
    6. ಕರಿಬೇವು – 10-15 ಎಲೆಗಳು
    7. ಉಪ್ಪು – ರುಚಿಗೆ ತಕ್ಕಷ್ಟು
    8. ನಿಂಬೆಹಣ್ಣು – ಅರ್ಧ ಹೋಳು
    9. ಅರಿಶಿಣ – ಚಿಟಿಕೆ
    10. ಬೆಳ್ಳುಳ್ಳಿ ಎಸಳು – 5-6
    11. ಎಣ್ಣೆ – 3-4 ಚಮಚ
    12. ಕೊತ್ತಂಬರಿ ಸೊಪ್ಪು – ಸಣ್ಣಗೆ ಹೆಚ್ಚಿದ್ದು ಸ್ವಲ್ಪ

    ಮಾಡುವ ವಿಧಾನ:
    ಪೆಪ್ಪರ್ ಚಿಕನ್ ಅನ್ನು 2 ರೀತಿಯಲ್ಲಿ ಮಾಡಬಹುದು. ನಿಮಗೆ ಯಾವುದು ಸುಲಭವೋ ಅದನ್ನು ಟ್ರೈ ಮಾಡಿ..
    -ಮೊದಲ ವಿಧಾನ
    * ಮೊದಲಿಗೆ ಒಂದು ಬೌಲ್‍ಗೆ ತೊಳೆದ ಚಿಕನ್ ಹಾಕಿ ಅದಕ್ಕೆ ಚಿಟಿಕೆ ಅರಿಶಿಣ, ಸ್ವಲ್ಪ ಕರಿಮೆಣಸಿನ ಪುಡಿ, ಉಪ್ಪು ಸೇರಿಸಿ ಕಲಸಿ ಅರ್ಧ ಮುಕ್ಕಾಲು ಗಂಟೆ ಮ್ಯಾರಿನೇಟ್ ಮಾಡಿ ನೆನಸಿಡಿ.
    * ಒಂದು ಪ್ಯಾನ್ ಅನ್ನು ಬಿಸಿಗಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಎಸಳು, ಕರಿಬೇವು ಒಂದಾದ ಮೇಲೆ ಒಂದು ಹಾಕಿ ಫ್ರೈ ಮಾಡಿ.
    * ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಳಿದ ಕರಿಮೆಣಸಿನ ಪುಡಿ ಹಾಕಿ ಫ್ರೈ ಮಾಡಿ.
    * ಈಗ ಮ್ಯಾರಿನೇಟ್ ಮಾಡಿಟ್ಟಿದ್ದ ಚಿಕನ್ ಅನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಬೇಯಲು ಅಗತ್ಯವಿರುವಷ್ಟು ನೀರು ಸೇರಿಸಿ ಲಿಡ್ ಮುಚ್ಚಿ ಬೇಯಿಸಿ.
    * ಕೊನೆಗೆ ಚಿಕನ್ ಎಲ್ಲಾ ಫ್ರೈ ಆದ ಮೇಲೆ ಕೆಳಗಿಳಿಸುವಾಗ ನಿಂಬೆ ಹಣ್ಣಿನ ರಸ ಹಿಂಡಿ. ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.
    * ನೀರು ಬಳಸುವಾಗ ಆದಷ್ಟು ಕಡಿಮೆ ಮಾಡಿ. ಇಲ್ಲವಾದಲ್ಲಿ ಚಿಕನ್ ಫ್ರೈ ಹೋಗಿ ಗ್ರೇವಿ ಆಗುತ್ತದೆ.

    ಇನ್ನೊಂದು ವಿಧಾನ
    * ಒಂದು ಪ್ಯಾನ್ ಅನ್ನು ಬಿಸಿಗಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಎಸಳು, ಕರಿಬೇವು ಒಂದಾದ ಮೇಲೆ ಒಂದು ಹಾಕಿ ಫ್ರೈ ಮಾಡಿ.
    * ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಅರಿಶಿಣ ಹಾಕಿ ಫ್ರೈ ಮಾಡಿ.
    * ಈಗ ತೊಳೆದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 2-3 ನಿಮಿಷ ಫ್ರೈ ಮಾಡಿ.
    * ಈಗ ಬೇಯಲು ಅಗತ್ಯವಿರುವಷ್ಟು ನೀರು ಸೇರಿಸಿ ಲಿಡ್ ಮುಚ್ಚಿ ಬೇಯಿಸಿ.
    * ಕೊನೆಗೆ ಚಿಕನ್ ಎಲ್ಲಾ ಫ್ರೈ ಆದ್ಮೇಲೆ ಕೆಳಗಿಳಿಸುವಾಗ ನಿಂಬೆ ಹಣ್ಣಿನ ರಸ ಹಿಂಡಿ, ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.
    * ನೀರು ಬಳಸುವಾಗ ಆದಷ್ಟು ಕಡಿಮೆ ಮಾಡಿ. ಇಲ್ಲವಾದಲ್ಲಿ ಚಿಕನ್ ಪೆಪ್ಪರ್ ಫ್ರೈ ಹೋಗಿ ಗ್ರೇವಿ ಆಗುತ್ತೆ.
    * ಈ ರೆಸಿಪಿಯಲ್ಲಿ ಖಾರಕ್ಕೆ ಕರಿಮೆಣಸಿನ ಪುಡಿಯನ್ನೇ ಬಳಸುವುದರಿಂದ ಖಾರವನ್ನು ರುಚಿ ನೋಡಿಕೊಂಡು ಬಳಸಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರುಚಿಕರವಾದ ಫಿಶ್ ಫ್ರೈ ಮಾಡುವ ವಿಧಾನ

    ರುಚಿಕರವಾದ ಫಿಶ್ ಫ್ರೈ ಮಾಡುವ ವಿಧಾನ

    ಫಿಶ್ ಐಟಂಗಳು ಎಲ್ಲರಿಗೂ ತುಂಬಾ ಫೆವರೇಟ್ ಆಹಾರವಾಗಿದೆ. ಫಿಶ್ ತಿಂದರೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮೀನು ಸೇವಿಸಿದರೆ ಮೆದುಳು ಚುರುಕಾಗುತ್ತದೆ. ಮನೆಯಲ್ಲಿ ಮಾಡಿ ಫಿಶ್ ಫ್ರೈ ತಿನ್ನುವುದರಿಂದ ರುಚಿಯೂ ಹೆಚ್ಚಾಗಿರುತ್ತದೆ. ಆದ್ದರಿಂದ ನಿಮಗಾಗಿ ಫಿಶ್ ಫ್ರೈ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಖಾರದ ಪುಡಿ – 1 ಚಮಚ
    2. ಕಾಳು ಮೆಣಸಿನ ಪುಡಿ – ಕಾಲು ಚಮಚ
    3. ಅರಿಶಿಣ – ಚಿಟಿಕೆ
    4. ಉಪ್ಪು – ರುಚಿಗೆ ತಕ್ಕಷ್ಟು
    5. ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    6. ನಿಂಬೆ ಹಣ್ಣು – 1
    7. ಎಣ್ಣೆ – 4-5 ಚಮಚ
    8. ಫಿಶ್ – 6-8 ಪೀಸ್‍ಗಳು
    (ಖಾರ ಜಾಸ್ತಿ ಬೇಕಾದವರು ಖಾರದ ಪುಡಿ ಜಾಸ್ತಿ ಬಳಸಬಹುದು)

    ಮಾಡುವ ವಿಧಾನ
    * ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್‍ಗೆ ಖಾರದ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿಣ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಹೋಳು ನಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿ. 2 ರಿಂದ 3 ಚಮಚದಷ್ಟು ನೀರು ಸೇರಿಸಿ ಮಿಕ್ಸ್ ಮಾಡಿ. (ತುಂಬಾ ತೆಳ್ಳಗೆ ಮಿಶ್ರಣ ಬೇಡ)
    * ಮಿಶ್ರಣಕ್ಕೆ ತೊಳೆದ ಮೀನಿನ ಪೀಸ್‍ಗಳನ್ನು ಸೇರಿಸಿ. ಫಿಶ್‍ಪೀಸ್‍ಗೆ ಮಿಶ್ರಣವನ್ನು ಸಮಪ್ರಮಾಣದಲ್ಲಿ ಕೋಟ್ ಮಾಡಿ ಲೇಪಿಸಿ.
    * ಸುಮಾರು ಅರ್ಧ ಗಂಟೆಗಳ ಕಾಲ ಮುಚ್ಚಿಡಿ.
    * ಈಗ ಒಂದು ಫ್ರೈಯಿಂಗ್ ಪ್ಯಾನ್‍ಗೆ 2-3 ಚಮಚ ಎಣ್ಣೆ ಹಾಕಿ, ಕಾದ ಬಳಿಕ ಫಿಶ್ ಪೀಸ್‍ಗಳನ್ನು ಹಾಕಿ ಎರಡೂ ಬದಿ ಚೆನ್ನಾಗಿ ಫ್ರೈ ಮಾಡಿ. (ಬೇಕಿದ್ದಲ್ಲಿ ಮಾತ್ರ ಮತ್ತೆ ಎಣ್ಣೆ ಬಳಸಿ)
    * ಈಗ ಫ್ರೈ ಆದ ಫಿಶ್ ಪೀಸ್‍ಗೆ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ.. ಈರುಳ್ಳಿ, ನಿಂಬೆಹಣ್ಣಿನ ಸ್ಲೈಸ್ ಜೊತೆಗೆ ಸವಿಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕೆಲವೇ ನಿಮಿಷದಲ್ಲಿ ಎಗ್ ಪೆಪ್ಪರ್ ಫ್ರೈ ಮಾಡುವ ವಿಧಾನ

    ಕೆಲವೇ ನಿಮಿಷದಲ್ಲಿ ಎಗ್ ಪೆಪ್ಪರ್ ಫ್ರೈ ಮಾಡುವ ವಿಧಾನ

    ರಜೆ ಬಂದರೆ ಸಾಕು ಮನೆಯಲ್ಲಿ ಎಲ್ಲರು ಇರುತ್ತಾರೆ. ಒಂದು ಕಡೆ ಎಲ್ರೂ ಇದ್ದರೆ ಸಾಕು ಏನಾದರೂ ಸ್ಪೈಸಿಯಾಗಿ ತಿನ್ನಲೂ ಕೇಳುತ್ತಾರೆ. ಪ್ರತಿದಿನ ಅದೇ ತಿಂಡಿ ಅಂತ ಬೇಸರ ಮಾಡಿಕೊಂಡು ತಿನ್ನುವುದಿಲ್ಲ. ಹೀಗಾಗಿ ಬೇಗ ತಯಾರಾಗುವ ಎಗ್ ಪೆಪ್ಪರ್ ಫ್ರೈ ಮಾಡುವ ವಿಧಾನ..

    ಬೇಕಾಗುವ ಸಾಮಾಗ್ರಿಗಳು
    1. ಮೊಟ್ಟೆ – 4
    3. ಎಣ್ಣೆ – 2-3 ಚಮಚ
    3. ಮೆಣಸು – 1 ಚಮಚ
    4. ಉಪ್ಪು – ರುಚಿಗೆ ತಕ್ಕಷ್ಟು
    5. ಕೊತ್ತಂಬರಿ ಸೊಪ್ಪು -ಸ್ವಲ್ಪ
    6. ಅರಿಶಿಣ – ಚಿಟಿಕೆ

    ಮಾಡುವ ವಿಧಾನ
    * ಮೊದಲಿಗೆ ನಾಲ್ಕು ಮೊಟ್ಟೆಗಳನ್ನು ಒಂದು ಕುಕ್ಕರ್ ಗೆ ಹಾಕಿ, ಸ್ವಲ್ಪ ಉಪ್ಪು, ನೀರು ಹಾಕಿ ಒಂದು ವಿಶಲ್ ಕೂಗಿಸಿ ಬೇಯಿಸಿಕೊಳ್ಳಿ.
    * ಈಗ ಮೊಟ್ಟೆ ಬಿಡಿಸಿ ಒಂದು ಮೊಟ್ಟೆಯನ್ನು ಎರಡು ಭಾಗ ಮಾಡಿ ಕಟ್ ಮಾಡಿಕೊಳ್ಳಿ.
    * ಬಳಿಕ ಒಂದು ಪ್ಯಾನ್ ಗೆ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಆದ ಮೇಲೆ ಕಟ್ ಮಾಡಿದ್ದ ಮೊಟ್ಟೆಯನ್ನು ಇಟ್ಟು 1 ನಿಮಿಷ ಬೇಯಿಸಿಕೊಳ್ಳಿ.
    * ನಂತರ ಮೊಟ್ಟೆಯನ್ನು ಉಲ್ಟಾ ಮಾಡಿ ಸ್ವಲ್ಪ ಬ್ರೌನ್ ಬಣ್ಣ ಬರುವರೆಗೆ ಬೇಯಿಸಿಕೊಳ್ಳಿ.
    * ಈಗ ಕಡಿಮೆ ಉರಿ ಇಟ್ಟು ಅದರ ಮೇಲೆ ಚಿಟಿಕೆ ಅರಿಶಿಣ ಉದುರುಸಿ.
    * ಈಗ ಮೆಣಸು ಮತ್ತು ಉಪ್ಪನ್ನು ಪುಡಿ ಮಾಡಿಕೊಂಡು ಮೊಟ್ಟೆಯ ಮೇಲೆ ಉದುರಿಸಿ.
    * ಮತ್ತೆ ಮೊಟ್ಟೆಯನ್ನು ಉಲ್ಟಾ ಮಾಡಿ ಮೆಣಸು ಮತ್ತು ಉಪ್ಪಿನ ಪುಡಿ ಉದುರಿಸಿ.
    * ನಂತರ ಸಣ್ಣಗೆ ಕಟ್ ಮಾಡಿದ್ದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸ್ಪೈಸಿ ಸ್ಪೈಸಿಯಾಗಿ ಎಗ್ ಪೆಪ್ಪರ್ ಫ್ರೈ ತಿನ್ನಲು ಸಿದ್ಧ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಂಪಲ್ ಅವಲಕ್ಕಿ ಸಿಹಿ ಪೊಂಗಲ್ ಮಾಡುವ ವಿಧಾನ

    ಸಿಂಪಲ್ ಅವಲಕ್ಕಿ ಸಿಹಿ ಪೊಂಗಲ್ ಮಾಡುವ ವಿಧಾನ

    ಸಂಕ್ರಾಂತಿ ಹಬ್ಬ ಅಂದರೆ ಮನೆಯಲ್ಲಿ ಸಿಹಿ ಪೊಂಗಲ್ ಮಾಡಲೇಬೇಕು. ಪ್ರತಿವರ್ಷದಂತೆ ಅಕ್ಕಿ ಪೊಂಗಲ್ ಮಾಡಿ ಮಾಡಿ ಬೇಸರವಾಗಿರುತ್ತದೆ. ಹೊಸ ವರ್ಷದ ಮೊದಲ ಹಬ್ಬಕ್ಕಾಗಿ ಅಕ್ಕಿ ಪೊಂಗಲ್ ಮಾಡುವ ಬದಲು ಅವಲಕ್ಕಿ ಸಿಹಿ ಪೊಂಗಲ್‍ನ ಒಮ್ಮೆ ಟ್ರೈ ಮಾಡಿ ನೋಡಿ. ನಿಮಗಾಗಿ ಅವಲಕ್ಕಿ ಪೊಂಗಲ್ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಾಗ್ರಿಗಳು
    1. ಗಟ್ಟಿ ಅವಲಕ್ಕಿ – ಕಾಲು ಕೆಜಿ
    2. ಹೆಸರು ಬೇಳೆ – 100 ಗ್ರಾಂ
    3. ಕೊಬ್ಬರಿ ತುರಿ – 1 ಬಟ್ಟಲು
    4. ಉದ್ದುದ್ದ ಹೆಚ್ಚಿದ ಕೊಬ್ಬರಿ ಸ್ಲೈಸ್ – 10-15
    5. ಬೆಲ್ಲ – ಸಿಹಿಗೆ ತಕ್ಕಷ್ಟು
    6. ಹಾಲು – ಅರ್ಧ ಕಪ್(ಬೇಕಾದಲ್ಲಿ)
    7. ಏಲಕ್ಕಿ ಪುಡಿ – ಚಿಟಿಕೆ
    8. ಒಣದ್ರಾಕ್ಷಿ, ಗೋಡಂಬಿ – ಸ್ವಲ್ಪ
    9. ತುಪ್ಪ – 2 ಚಮಚ

    ಮಾಡುವ ವಿಧಾನ
    * ಮೊದಲು ಗಟ್ಟಿ ಅವಲಕ್ಕಿಯನ್ನು ತೊಳೆದು ಸೋಸಿಟ್ಟುಕೊಳ್ಳಿ. ನೀರಿನಲ್ಲಿ ನೆನೆಸೋದು ಬೇಡ.
    * ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಸೋಸಿಟ್ಟುಕೊಳ್ಳಿ.
    * ಈಗ ಕುಕ್ಕರ್ ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ ಹೆಸರು ಬೇಳೆ ಹಾಕಿ ಸ್ವಲ್ಪ ಹುರಿದು ನೀರು ಸೇರಿಸಿ 1-2 ವಿಸಿಲ್ ಕೂಗಿಸಿಕೊಳ್ಳಿ.
    * ವಿಸಿಲ್ ಇಳಿದ ಮೇಲೆ ಸ್ವಲ್ಪ ನೀರು ಸೇರಿಸಿ 1-2 ನಿಮಿಷ ಕುದಿಸಿ.
    * ಬಳಿಕ ತೊಳೆದಿಟ್ಟ ಗಟ್ಟಿ ಅವಲಕ್ಕಿ, ಕರಗಿಸಿ ಸೋಸಿಟ್ಟುಕೊಂಡಿದ್ದ ಬೆಲ್ಲ, ಕೊಬ್ಬರಿ ತುರಿ, ಹಾಲು (ಆಪ್ಷನಲ್) ಸೇರಿಸಿ ಕುದಿಸಿ.
    * ತುಪ್ಪ ಹಾಕಿ ಫ್ರೈ ಮಾಡಿಟ್ಟುಕೊಂಡಿದ್ದ ದ್ರಾಕ್ಷಿ ಗೋಡಂಬಿ, ಕೊಬ್ಬರಿಯ ಉದ್ದುದ್ದ ತುಂಡುಗಳನ್ನು ಸೇರಿಸಿ.
    * ಏಲಕ್ಕಿ ಪುಡಿ ಸೇರಿಸಿ ಬೇಕಾದ ಅಗತ್ಯವಿರುವಷ್ಟು ನೀರು ಸೇರಿಸಿ 5 ರಿಂದ 6 ನಿಮಿಷ ಕುದಿಸಿ ಸಾಕು.
    * ಆರಿದ ಬಳಿಕ ಸಿಹಿ ಪೊಂಗಲ್ ಗಟ್ಟಿ ಆಗುತ್ತದೆ. ತುಂಬಾ ಗಟ್ಟಿಯಾದಂತೆ ಅನ್ನಿಸಿದರೆ ಬಿಸಿ ನೀರು ಸೇರಿಸಿ ತೆಳ್ಳಗೆ ಮಾಡಿಕೊಳ್ಳಬಹುದು.
    * ನಿಮಗೆ ಬೇಕಾದ ರೀತಿಯಲ್ಲಿ (ಗಟ್ಟಿ ಅಥವಾ ತೆಳು) ಪೊಂಗಲ್ ಮಾಡಿಕೊಳ್ಳಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಳ್ಳು ಬೆಲ್ಲದ ಜೊತೆ ಹಬ್ಬಕ್ಕಾಗಿ ಸಿಹಿ ಪೊಂಗಲ್ ಮಾಡುವ ವಿಧಾನ

    ಎಳ್ಳು ಬೆಲ್ಲದ ಜೊತೆ ಹಬ್ಬಕ್ಕಾಗಿ ಸಿಹಿ ಪೊಂಗಲ್ ಮಾಡುವ ವಿಧಾನ

    ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ತಮಿಳುನಾಡು ಮತ್ತು ದೇಶದ ಹಲವೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಆದ್ದರಿಂದ ನಿಮಗಾಗಿ ಸಿಹಿ ಪೊಂಗಲ್ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು:
    1. ಹೆಸರುಬೇಳೆ – 1 ಕಪ್
    2. ಅಕ್ಕಿ – 1 ಕಪ್
    3. ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್
    4. ಏಲಕ್ಕಿ – 4
    5. ದ್ರಾಕ್ಷಿ ,ಗೋಡಂಬಿ- 50 ಗ್ರಾಂ
    6. ತುಪ್ಪ – 4 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಕುಕ್ಕರ್ ನಲ್ಲಿ ತೊಳೆದ ಅಕ್ಕಿ ಮತ್ತು ಹುರಿದ ಹೆಸರುಬೇಳೆ ಹಾಕಿ 4 ಕಪ್ ನೀರು ಹಾಕಿ ಒಂದು ವಿಷಲ್ ಬರುವ ತನಕ ಬೇಯಿಸಿ.
    * ಮತ್ತೊಂದು ಪ್ಯಾನ್ ನಲ್ಲಿ ಪುಡಿಮಾಡಿದ ಬೆಲ್ಲ ಹಾಕಿ ಕರಗಿಸಿ.(ಒಂದು ವೇಳೆ ಬೆಲ್ಲದಲ್ಲಿ ಕಲ್ಮಶವಿದ್ದರೆ ಒಮ್ಮೆ ಶೋಧಿಸಿಕೊಳ್ಳಿ)
    * ಈಗ ಬೆಂದ ಅಕ್ಕಿ ಮತ್ತು ಬೇಳೆಗೆ ಬೆಲ್ಲದ ಪಾಕ ಹಾಕಿ ಚೆನ್ನಾಗಿ ತಿರುವಿ.
    * ನಂತರ ಪುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ ಹಾಕಿ ಒಲೆಯಿಂದ ಇಳಿಸಿ.
    (ಇದಕ್ಕೆ ಬೇಕಿದ್ದಲ್ಲಿ ಸ್ವಲ್ಪ ಪಚ್ಚ ಕರ್ಪೂರ ಮತ್ತು ಒಂದು ಚಿಟಿಕೆ ಲವಂಗದ ಪುಡಿಯನ್ನು ಸೇರಿಸಬಹುದು)

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv