Tag: recipe

  • ಸಂಕ್ರಾಂತಿ ಸ್ಪೆಷಲ್ ಸ್ವೀಟ್ ಪೊಂಗಲ್ ಹೀಗೆ ಮಾಡಿ

    ಸಂಕ್ರಾಂತಿ ಸ್ಪೆಷಲ್ ಸ್ವೀಟ್ ಪೊಂಗಲ್ ಹೀಗೆ ಮಾಡಿ

    ಮಕರ ಸಂಕ್ರಾಂತಿಯಲ್ಲಿ ಪೊಂಗಲ್ ಬಹಳ ವಿಶೇಷ. ಸಾಮಾನ್ಯವಾಗಿ ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಪೊಂಗಲ್ ತಯಾರಿಸುತ್ತಾರೆ. ಪೊಂಗಲ್ ಆರೋಗ್ಯಕ್ಕೂ ಉತ್ತಮ. ಅನ್ನ, ಬೇಳೆಯೊಂದಿಗೆ ಬೆಲ್ಲ ಬೆರೆಸಿ ಸಿಹಿ ಪೊಂಗಲ್ ಕೂಡ ತಯಾರಿಸಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಸ್ವೀಟ್ ಪೊಂಗಲ್ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ಹೆಸರುಬೇಳೆ- 1 ಕಪ್
    ಅಕ್ಕಿ – 1 ಕಪ್
    ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್
    ಏಲಕ್ಕಿ – 4
    ದ್ರಾಕ್ಷಿ, ಗೋಡಂಬಿ – 50 ಗ್ರಾಂ
    ತುಪ್ಪ – 4 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಈಗ ಕುಕ್ಕರ್‌ನಲ್ಲಿ ತೊಳೆದ ಅಕ್ಕಿ ಮತ್ತು ಹುರಿದ ಹೆಸರುಬೇಳೆ ಹಾಕಿ 4 ಕಪ್ ನೀರು ಹಾಕಿ ಒಂದು ವಿಷಲ್ ಬರುವ ತನಕ ಬೇಯಿಸಿ.
    * ಮತ್ತೊಂದು ಪ್ಯಾನ್‌ನಲ್ಲಿ ಪುಡಿಮಾಡಿದ ಬೆಲ್ಲ ಹಾಕಿ ಕರಗಿಸಿ. (ಬೆಲ್ಲದಲ್ಲಿ ಕಲ್ಮಶವಿದ್ದರೆ ಒಮ್ಮೆ ಶೋಧಿಸಿಕೊಳ್ಳಿ)
    * ಈಗ ಬೆಂದ ಅಕ್ಕಿ ಮತ್ತು ಬೇಳೆಗೆ ಬೆಲ್ಲದ ಪಾಕ ಹಾಕಿ ಚೆನ್ನಾಗಿ ತಿರುವಿ.
    * ನಂತರ ಪುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ ಹಾಕಿ ಒಲೆಯಿಂದ ಇಳಿಸಿ.
    (ಇದಕ್ಕೆ ಬೇಕಿದ್ದಲ್ಲಿ ಸ್ವಲ್ಪ ಪಚ್ಚ ಕರ್ಪೂರ ಮತ್ತು ಒಂದು ಚಿಟಿಕೆ ಲವಂಗದ ಪುಡಿಯನ್ನು ಸೇರಿಸಬಹುದು)
    * ಈಗ ಸ್ವೀಟ್ ಪೊಂಗಲ್ ಸವಿಯಲು ಸಿದ್ಧ.

  • ಕೇವಲ 10 ನಿಮಿಷದಲ್ಲಿ ಮಾಡಿ ಪನೀರ್ ಪಕೋಡ

    ಕೇವಲ 10 ನಿಮಿಷದಲ್ಲಿ ಮಾಡಿ ಪನೀರ್ ಪಕೋಡ

    ಚುಮುಚುಮು ಚಳಿಗೆ ಚಹಾದೊಂದಿಗೆ ಬಿಸಿಬಿಸಿಯಾಗಿ ತಿನ್ನಲು ಏನಾದರೂ ಸಿಕ್ಕರೆ ಅದರಲ್ಲಿ ಸಿಗುವ ಆನಂದವೇ ಬೇರೆ. ಅದರಲ್ಲೂ ಬಜ್ಜಿ, ಪಕೋಡ ಮುಂತಾದ ತಿನಿಸುಗಳು ಮನಸ್ಸಿಗೆ ಇನ್ನೂ ಮುದನೀಡುವುದಲ್ಲದೇ ಬಾಯಿಗೂ ರುಚಿಕೊಡುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕೇವಲ 10 ನಿಮಿಷದಲ್ಲಿ ತಯಾರಿಸಬಹುದಾದ ಪನೀರ್ ಪಕೋಡ ರೆಸಿಪಿ ಹೇಗೆ ಮಾಡುವುದು ಎಂಬುದನ್ನು ತಿಳಿಸುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಸ್ಪೆಷಲ್ ದಿನಗಳಲ್ಲಿ ಮಾಡಿ ಟೇಸ್ಟಿ ಸ್ಟಾರ್ಟರ್ – ಹನಿ ಚಿಲ್ಲಿ ಆಲೂಗಡ್ಡೆ

    ಬೇಕಾಗುವ ಸಾಮಗ್ರಿಗಳು:
    ಪನೀರ್ ಕ್ಯೂಬ್ಸ್ – 500 ಗ್ರಾಂ
    ಕಡ್ಲೆ ಹಿಟ್ಟು – 1 ಕಪ್
    ಅಚ್ಚಖಾರದ ಪುಡಿ – 1 ಚಮಚ
    ಅರಶಿಣ – 1 ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಜೀರಿಗೆ ಪುಡಿ – ಅರ್ಧ ಚಮಚ
    ಅಡುಗೆ ಸೋಡಾ – 1 ಚಮಚ
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
    ಚಾಟ್ ಮಸಾಲ – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟನ್ನು ಹಾಕಿಕೊಂಡು ಅದಕ್ಕೆ ನೀರು, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಉಪ್ಪು, ಅರಶಿಣ ಮತ್ತು ಸೋಡಾ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಂಡು ದಪ್ಪ ಮಿಶ್ರಣವನ್ನು ಮಾಡಿಕೊಳ್ಳಿ.
    * ಈಗ ಪನೀರ್ ಕ್ಯೂಬ್ಸ್ ಅನ್ನು ಈ ಮಿಶ್ರಣದಲ್ಲಿ ಚನ್ನಾಗಿ ಅದ್ದಿ ಮಿಶ್ರಣದೊಂದಿಗೆ ಪನೀರ್ ಚನ್ನಾಗಿ ಹೊಂದಿಕೊಳ್ಳುವಂತೆ ಕೋಟಿಂಗ್ ಮಾಡಿ.
    * ಬಳಿಕ ಒಂದು ಬಾಣಾಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿಗಿಟ್ಟು, ಕಾದ ಬಳಿಕ ಅದಕ್ಕೆ ಕಡ್ಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿದ ಪನೀರ್ ಕ್ಯೂಬ್ಸ್ ಅನ್ನು ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಿ. ಅದೇ ರೀತಿ ಎಲ್ಲಾ ಪನೀರ್ ಕ್ಯೂಬ್ಸ್‌ಗಳನ್ನು ಕಾಯಿಸಿಕೊಳ್ಳಿ.
    * ನಂತರ ಅದನ್ನು ಎಣ್ಣೆಯಿಂದ ತೆಗೆದು ಅದರ ಮೇಲೆ ಸ್ವಲ್ಪ ಚಾಟ್ ಮಸಾಲ ಪುಡಿಯನ್ನು ಹಾಕಿಕೊಂಡು ಕೆಚಪ್ ಅಥವಾ ಗ್ರೀನ್ ಚಟ್ನಿಯೊಂದಿಗೆ ಬಿಸಿಬಿಸಿ ತಿನ್ನಲು ಕೊಡಿ. ಇದನ್ನೂ ಓದಿ: ಟ್ರೈ ಮಾಡಿ ಟೇಸ್ಟಿ ಗ್ರೀನ್ ಚಟ್ನಿ ಸ್ಯಾಂಡ್‌ವಿಚ್

  • ಸಿಹಿ ಪ್ರಿಯರಿಗಾಗಿ ತೆಂಗಿನಕಾಯಿ ರಾಬ್ರಿ ರೆಸಿಪಿ

    ಸಿಹಿ ಪ್ರಿಯರಿಗಾಗಿ ತೆಂಗಿನಕಾಯಿ ರಾಬ್ರಿ ರೆಸಿಪಿ

    ತೆಂಗಿನಕಾಯಿ ರಾಬ್ರಿ ಉತ್ತರ ಭಾರತದ ಜನಪ್ರಿಯ ಸಿಹಿ ತಿನಿಸು. ಯಾವುದೇ ಭಾರತೀಯ ಊಟ ಸಿಹಿಯಿಲ್ಲದೇ ಪರಿಪೂರ್ಣವಾಗಲಾರದು. ಅದೇ ರೀತಿ ಉತ್ತರ ಭಾರತದಲ್ಲಿ ತೆಂಗಿನಕಾಯಿ ರಾಬ್ರಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಈ ಸಿಹಿ ತಿನಿಸು ಮೊದಲಿಗೆ ಉತ್ತರ ಪ್ರದೇಶದ ಮಥುರಾದಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಇದು ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರವರೆಗೂ ನೆಚ್ಚಿನ ಸಿಹಿಯಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ತೆಂಗಿನಕಾಯಿ ರಾಬ್ರಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ವೆಜ್‌ಪ್ರಿಯರಿಗಾಗಿ ಎಗ್‌ಲೆಸ್ ಚಾಕ್ಲೆಟ್ ಕೇಕ್ ರೆಸಿಪಿ

    ಬೇಕಾಗುವ ಸಾಮಗ್ರಿಗಳು:
    ಕ್ರೀಮ್ ಮಿಲ್ಕ್ – 1 ಲೀಟರ್
    ತುರಿದ ತೆಂಗಿನಕಾಯಿ – ಅರ್ಧ ಕಪ್
    ಖೋಯಾ – ಅರ್ಧ ಕಪ್
    ಸಕ್ಕರೆ – ಅಗತ್ಯಕ್ಕೆ ತಕ್ಕಷ್ಟು
    ಗೋಡಂಬಿ – 10-15
    ಏಲಕ್ಕಿ ಪುಡಿ – ಅಗತ್ಯಕ್ಕೆ ತಕ್ಕಷ್ಟು
    ಹೆಚ್ಚಿದ ಬಾದಾಮಿ ಮತ್ತು ಪಿಸ್ತಾ – ಸ್ವಲ್ಪ
    ಕೇಸರಿ – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‌ನಲ್ಲಿ ಗೋಡಂಬಿ ಹಾಕಿಕೊಂಡು ಅದಕ್ಕೆ ನೀರು ಹಾಕಿ 15 ನಿಮಿಷಗಳ ಕಾಲ ನೆನೆಸಿಡಿ.
    * ಈಗ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಕ್ರೀಮ್ ಮಿಲ್ಕ್ ಹಾಕಿಕೊಂಡು ಕುದಿಸಿಕೊಳ್ಳಿ. ಹಾಲು ಕುದಿಯಲು ಪ್ರಾರಂಭವಾದ ಬಳಿಕ ಗ್ಯಾಸ್ ಅನ್ನು ಮೀಡಿಯಮ್ ಫ್ಲೇಮ್‌ನಲ್ಲಿ ಇಟ್ಟುಕೊಂಡು ಹಾಲು ಸ್ವಲ್ಪ ಕುಂದುವವರೆಗೆ ಕುದಿಸಿಕೊಳ್ಳಿ. ಈ ವೇಳೆ ಮಧ್ಯ ಮಧ್ಯ ಹಾಲನ್ನು ತಿರುವಿಕೊಳ್ಳುವುದು ಒಳ್ಳೆಯದು.
    * ಬಳಿಕ ಇದಕ್ಕೆ ಕೇಸರಿ ಮತ್ತು ಖೋಯಾವನ್ನು ಹಾಕಿಕೊಂಡು ಹಾಲು ತಳಹಿಡಿಯದಂತೆ ಚನ್ನಾಗಿ ತಿರುವಿಕೊಳ್ಳಿ.
    * ಈಗ ನೆನೆಸಿಟ್ಟ ಗೋಡಂಬಿಯನ್ನು ಒಂದು ಮಿಕ್ಸರ್‌ನಲ್ಲಿ ಹಾಕಿ ಚನ್ನಾಗಿ ರುಬ್ಬಿಕೊಳ್ಳಿ.
    * ನಂತರ ಕುದಿಯುತ್ತಿರುವ ಹಾಲಿಗೆ ತುರಿದ ತೆಂಗಿನಕಾಯಿ ಹಾಗೂ ಸಕ್ಕರೆಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೆ ರುಬ್ಬಿದ ಗೋಡಂಬಿ ಮಿಶ್ರಣವನ್ನೂ ಸೇರಿಸಿಕೊಂಡು ಮತ್ತೊಮ್ಮೆ ತಿರುವಿಕೊಳ್ಳಿ.
    * ಹಾಲು ಮಂದವಾಗುತ್ತಿದ್ದಂತೆ ಇದಕ್ಕೆ ಏಲಕ್ಕಿ ಪುಡಿಯನ್ನು ಹಾಕಿಕೊಂಡು ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.
    * ಈಗ ಒಂದು ಸರ್ವಿಂಗ್ ಬೌಲ್‌ನಲ್ಲಿ ತೆಂಗಿನಕಾಯಿ ರಾಬ್ರಿಯನ್ನು ಹಾಕಿಕೊಂಡು ಅದರ ಮೇಲೆ ಹೆಚ್ಚಿದ ಬಾದಾಮಿ ಮತ್ತು ಪಿಸ್ತಾವನ್ನು ಹಾಕಿ ಸವಿಯಲು ಕೊಡಿ. ಇದನ್ನೂ ಓದಿ: ಸುಲಭವಾಗಿ ಮಾಡ್ಬೋದು ಕೆಟೊ ಮಗ್ ಕೇಕ್

  • ಸುಲಭವಾಗಿ ಮಾಡ್ಬೋದು ಕೆಟೊ ಮಗ್ ಕೇಕ್

    ಸುಲಭವಾಗಿ ಮಾಡ್ಬೋದು ಕೆಟೊ ಮಗ್ ಕೇಕ್

    ಸಾಮಾನ್ಯವಾಗಿ ಬರ್ತ್‌ಡೇ, ಆ್ಯನಿವರ್ಸರಿ ಮುಂತಾದ ಕಾರ್ಯಕ್ರಮಗಳಲ್ಲಿ ಕೇಕ್ ಕಟ್ ಮಾಡುವುದು ಕಾಮನ್ ಆಗಿದೆ. ಈ ದುಬಾರಿ ಕೇಕ್‌ಗಳನ್ನು ಪ್ರತಿನಿತ್ಯ ದುಡ್ಡುಕೊಟ್ಟು ತಿನ್ನಲು ಅಸಾಧ್ಯ. ಹಾಗಾಗಿ ಇವತ್ತಿನ ನಮ್ಮ ರೆಸಿಪಿಯಲ್ಲಿ ಅತ್ಯಂತ ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಹಾಗೂ ಮಕ್ಕಳಿಗೂ ಇಷ್ಟವಾಗುವಂತಹ ಕೆಟೊ ಮಗ್ ಕೇಕ್ ರೆಸಿಪಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ವೆಜ್‌ಪ್ರಿಯರಿಗಾಗಿ ಎಗ್‌ಲೆಸ್ ಚಾಕ್ಲೆಟ್ ಕೇಕ್ ರೆಸಿಪಿ

    ಬೇಕಾಗುವ ಸಾಮಗ್ರಿಗಳು:
    ಮೊಟ್ಟೆ – 3
    ಸ್ವೀಟ್ನರ್ – 3 ಚಮಚ
    ಕೋಕೋ ಪೌಡರ್ – 6 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಗಾಜಿನ ಗ್ಲಾಸ್ ಅಥವಾ ಮಗ್‌ಗೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಸವರಿಕೊಂಡು ಪಕ್ಕಕ್ಕಿಡಿ.
    * ಬಳಿಕ ಒಂದು ಬೌಲ್‌ಗೆ ಮೊಟ್ಟೆ ಒಡೆದು ಹಾಕಿ. ಅದಕ್ಕೆ ಸ್ವೀಟ್ನರ್ ಹಾಗೂ ಕೋಕೋ ಪೌಡರ್ ಸೇರಿಸಿಕೊಂಡು ಗಂಟಿಲ್ಲದಂತೆ ಚನ್ನಾಗಿ ತಿರುವಿಕೊಳ್ಳಿ.
    * ನಂತರ ಈ ಮಿಶ್ರಣವನ್ನು ಮಗ್‌ಗೆ ಹಾಕಿಕೊಂಡು 45 ಸೆಕೆಂಡ್‌ಗಳ ಕಾಲ ಮೈಕ್ರೋ ಓವನ್‌ನಲ್ಲಿ ಬೇಯಿಸಿಕೊಳ್ಳಿ.
    * ಈಗ ಬಿಸಿಬಿಸಿಯಾದ ಕೆಟೊ ಮಗ್ ಕೇಕ್ ಸವಿಯಲು ಸಿದ್ಧ. ಇದರ ಮೇಲೆ ಅಲಂಕಾರಕ್ಕಾಗಿ ಚೋಕೋ ಚಿಪ್‌ಗಳನ್ನು ಹಾಕಿಕೊಂಡರೆ ಉತ್ತಮ ಟೇಸ್ಟ್ ನೀಡುತ್ತದೆ. ಇದರ ಬದಲು ಚಾಕ್ಲೇಟ್ ಸಿರಪ್ ಕೂಡ ಹಾಕಿಕೊಳ್ಳಬಹುದು. ಇದನ್ನೂ ಓದಿ: ಸಿಂಪಲ್ಲಾಗಿ ಮಾಡಿ ಬಾದಾಮಿ ಟಾಫಿ ಬಾರ್ಸ್

  • ಕ್ರಿಸ್ಮಸ್‌ಗೆ ಮಾಡಿ ಸುಲಭದ ಚೆರಿ ಕುಕೀಸ್

    ಕ್ರಿಸ್ಮಸ್‌ಗೆ ಮಾಡಿ ಸುಲಭದ ಚೆರಿ ಕುಕೀಸ್

    ಕ್ರಿಸ್ಮಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಹಬ್ಬಕ್ಕೆ ವಿಧ ವಿಧದ ತಿಂಡಿಗಳನ್ನು ತಯಾರಿಸಿ ಹಂಚುವುದು ಸಂಪ್ರದಾಯ. ಈ ಸ್ಪೆಷಲ್ ದಿನಕ್ಕಾಗಿ ನಾವಿಂದು ಡಿಫರೆಂಟ್ ರೆಸಿಪಿಯೊಂದನ್ನು ಹೇಳಿಕೊಡುತ್ತೇವೆ. ಚೆರಿ ಕುಕೀಸ್ ಅನ್ನು ಕ್ರಿಸ್ಮಸ್ ಮಾತ್ರವಲ್ಲದೇ ಇತರ ಸ್ಪೆಷಲ್ ದಿನಗಳಲ್ಲೂ ಮಾಡಿ ಸವಿಯಬಹುದು. ಸಿಂಪಲ್ ಆಗಿರೋ ಈ ರೆಸಿಪಿಯನ್ನು ನೀವೂ ಮಾಡಿ, ಕ್ರಿಸ್ಮಸ್ ಆಚರಿಸಿ.

    ಬೇಕಾಗುವ ಪದಾರ್ಥಗಳು:
    ಚೆರಿ ರಸ – 2 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಬೆಣ್ಣೆ – 1 ಕಪ್
    ಚೆರಿ – ಅರ್ಧ ಕಪ್
    ಬಾದಾಮಿ ಸಾರ – ಅರ್ಧ ಟೀಸ್ಪೂನ್
    ಸಕ್ಕರೆ ಪುಡಿ – 1 ಕಪ್
    ಮೈದಾ ಹಿಟ್ಟು – ಎರಡೂವರೆ ಕಪ್
    ಚಾಕ್ಲೇಟ್ ಚಿಪ್ಸ್ – ಮುಕ್ಕಾಲು ಕಪ್
    ಕೆಂಪು ಆಹಾರ ಬಣ್ಣ – ಐಚ್ಛಿಕ ಇದನ್ನೂ ಓದಿ: ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲೇ ತಯಾರಿಸಿ ರೆಡ್ ವೆಲ್ವೆಟ್ ಕೇಕ್

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬೌಲ್‌ನಲ್ಲಿ ಬೆಣ್ಣೆ, ಸಕ್ಕರೆ ಪುಡಿ, ಉಪ್ಪು, ಚೆರಿ ರಸ, ಬಾದಾಮಿ ಸಾರ ಮತ್ತು ಆಹಾರ ಬಣ್ಣವನ್ನು ಹಾಕಿ ಮಿಶ್ರಣ ಮಾಡಿ.
    * ಬಳಿಕ ಕತ್ತರಿಸಿದ ಚೆರಿ ಹಾಗೂ ಚಾಕ್ಲೇಟ್ ಚಿಪ್ಸ್ ಹಾಕಿ ಮಿಶ್ರಣ ಮಾಡಿ.
    * ಈಗ ಬೇಕಿಂಗ್ ಟ್ರೇಗೆ ಬಟರ್ ಪೇಪರ್ ಜೋಡಿಸಿ, ಟೀಸ್ಪೂನ್‌ಗಳಷ್ಟು ಮಿಶ್ರಣವನ್ನು ಸ್ವಲ್ಪ ಸ್ವಲ್ಪ ಅಂತರಗಳಲ್ಲಿ ಬಿಡಿ.
    * ಟ್ರೇಯನ್ನು ಓವನ್‌ನಲ್ಲಿ ಇಟ್ಟು 350 ಪ್ಯಾರಾಹಿಟ್‌ನಲ್ಲಿ ಸುಮಾರು 9-10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಬಳಿಕ ಓವನ್‌ನಿಂದ ತೆಗೆದು ಕುಕೀಸ್ ತಣ್ಣಗಾಗಲು ಬಿಡಿ.
    * ಇದೀಗ ಕ್ರಿಸ್ಮಸ್ ಸ್ಪೆಷಲ್ ಚೆರಿ ಕುಕೀಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ.
    * ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಇಡಬಹುದು. ಇದನ್ನೂ ಓದಿ: ಸಿಂಪಲ್ಲಾಗಿ ಮಾಡಿ ಬಾದಾಮಿ ಟಾಫಿ ಬಾರ್ಸ್

  • ವೆಜ್‌ಪ್ರಿಯರಿಗಾಗಿ ಎಗ್‌ಲೆಸ್ ಚಾಕ್ಲೆಟ್ ಕೇಕ್ ರೆಸಿಪಿ

    ವೆಜ್‌ಪ್ರಿಯರಿಗಾಗಿ ಎಗ್‌ಲೆಸ್ ಚಾಕ್ಲೆಟ್ ಕೇಕ್ ರೆಸಿಪಿ

    ಕೇಕ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕೇಕ್ ಅನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಯಾವುದೇ ಶುಭಸಮಾರಂಭಗಳಿದ್ದರೂ ಅಲ್ಲಿ ಕೇಕ್ ಇದ್ದೇ ಇರುತ್ತದೆ. ಆದರೆ ಕೆಲವರು ಮೊಟ್ಟೆ ಹಾಕಿದ ಕೇಕ್ ತಿನ್ನಲು ಬಯಸುವುದಿಲ್ಲ. ಇಂಥವರಿಗಾಗಿಯೇ ಇವತ್ತಿನ ನಮ್ಮ ರೆಸಿಪಿಯಲ್ಲಿ ಎಗ್‌ಲೆಸ್ ಚಾಕ್ಲೆಟ್ ಕೇಕ್ ಯಾವ ರೀತಿ ಮಾಡಬಹುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲೇ ತಯಾರಿಸಿ ರೆಡ್ ವೆಲ್ವೆಟ್ ಕೇಕ್

    ಬೇಕಾಗುವ ಸಾಮಗ್ರಿಗಳು: 
    ಕೋಕೋ ಪೌಡರ್ – ಕಾಲು ಕಪ್
    ಬಿಸಿ ನೀರು – ಕಾಲು ಕಪ್
    ಎಣ್ಣೆ – ಕಾಲು ಕಪ್
    ಮೊಸರು – ಅರ್ಧ ಕಪ್
    ಬೇಕಿಂಗ್ ಪೌಡರ್ – ಅರ್ಧ ಕಪ್
    ಬೇಕಿಂಗ್ ಸೋಡಾ – ಕಾಲು ಕಪ್
    ಮೈದಾ, ಗೋಧಿ ಹಿಟ್ಟು – ಮುಕ್ಕಾಲು ಕಪ್
    ಸಕ್ಕರೆ – ಮುಕ್ಕಾಲು ಕಪ್
    ಕಾಫಿ ಪೌಡರ್ – ಒಂದು ಚಮಚ
    ಚಾಕ್ಲೆಟ್ ಸಿರಪ್ – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‌ನಲ್ಲಿ ಬಿಸಿ ನೀರು ತೆಗೆದುಕೊಳ್ಳಿ. ಅದಕ್ಕೆ ಕೋಕೋ ಪೌಡರ್, ಕಾಫಿ ಪೌಡರ್ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ನಂತರ ಈ ಮಿಶ್ರಣಕ್ಕೆ ಸಕ್ಕರೆ, ಎಣ್ಣೆ ಹಾಗೂ ಮೊಸರನ್ನು ಹಾಕಿಕೊಂಡು ಗಂಟಿಲ್ಲದಂತೆ ತಿರುವಿಕೊಳ್ಳಿ. ಬೆಣ್ಣೆ ಅಥವಾ ತುಪ್ಪ ಇಷ್ಟಪಡುವವರು ಅದನ್ನೂ ಸೇರಿಸಿಕೊಳ್ಳಬಹುದು.
    * ಈಗ ಇದಕ್ಕೆ ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಹಾಗೂ ಮೈದಾ, ಗೋಧಿ ಹಿಟ್ಟನ್ನು ಹಾಕಿಕೊಂಡು ಮತ್ತೊಮ್ಮೆ ಚನ್ನಾಗಿ ತಿರುವಿಕೊಳ್ಳಿ.
    * ಬಳಿಕ ಈ ಮಿಶ್ರಣವನ್ನು ಕೇಕ್ ಟ್ರೇಗೆ ಹಾಕಿಕೊಂಡು 6 ನಿಮಿಷಗಳ ಕಾಲ ಓವನ್‌ನಲ್ಲಿ ಬೇಯಿಸಿಕೊಳ್ಳಿ.
    * ನಂತರ ಕೇಕ್ ಅನ್ನು ಟ್ರೇಯಿಂದ ತೆಗೆದು ಒಂದು ಪ್ಲೇಟ್‌ಗೆ ಹಾಕಿಕೊಳ್ಳಿ. ಈಗ ಅದರ ಮೇಲೆ ಚಾಕ್ಲೆಟ್ ಸಿರಪ್ ಹರಡಿಕೊಂಡು ಅದರ ಮೇಲೆ ಹೆಚ್ಚಿದ ಡ್ರೈಫ್ರೂಟ್ಸ್‌ನಿಂದ ಅಲಂಕರಿಸಿ.
    * ಈಗ ನಿಮ್ಮ ಚಾಕ್ಲೆಟ್ ಕೇಕ್ ಸವಿಯಲು ಸಿದ್ಧ. ಇದನ್ನೂ ಓದಿ: ಸ್ಪೆಷಲ್ ದಿನಗಳಲ್ಲಿ ಮಾಡಿ ಟೇಸ್ಟಿ ಸ್ಟಾರ್ಟರ್ – ಹನಿ ಚಿಲ್ಲಿ ಆಲೂಗಡ್ಡೆ

  • ಸಿಂಪಲ್ಲಾಗಿ ಮಾಡಿ ಬಾದಾಮಿ ಟಾಫಿ ಬಾರ್ಸ್

    ಸಿಂಪಲ್ಲಾಗಿ ಮಾಡಿ ಬಾದಾಮಿ ಟಾಫಿ ಬಾರ್ಸ್

    ಬಾದಾಮಿ ಟಾಫಿ ಬಾರ್ಸ್ ಬೆಣ್ಣೆಯಂತಹ ಕ್ರಸ್ಟ್ ಜೊತೆಗೆ ಕುರುಕಲಾದ ಬಾದಾಮಿಗಳನ್ನು ಬಳಸಿ ಮಾಡುವ ಸಿಹಿ. ಇದನ್ನು ನೀವೊಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನೋಣ ಎಂದೆನಿಸುತ್ತದೆ ಖಂಡಿತಾ. ಮಕ್ಕಳಿಗಂತೂ ಟಾಫಿ ಎಂದರೆ ಪಂಚಪ್ರಾಣ. ಅವರಿಗಾಗಿ ಬಾದಾಮಿ ಟಾಫಿ ಬಾರ್ಸ್ ನೀವೂ ಮಾಡಿ ಸವಿಯಲು ನೀಡಿ.

    ಬೇಕಾಗುವ ಪದಾರ್ಥಗಳು:
    ಕ್ರಸ್ಟ್ ತಯಾರಿಸಲು:
    ಹಿಟ್ಟು – ಒಂದೂವರೆ ಕಪ್
    ಸಕ್ಕರೆ ಪುಡಿ – ಅರ್ಧ ಕಪ್
    ಬೆಣ್ಣೆ – ಅರ್ಧ ಕಪ್
    ಫಿಲ್ಲಿಂಗ್ ತಯಾರಿಸಲು:
    ಸಿಹಿ ಕಂಡೆನ್ಸ್‌ಡ್ ಮಿಲ್ಕ್ – 30 ಎಂಎಲ್
    ಮೊಟ್ಟೆ – 1
    ವೆನಿಲ್ಲಾ ಸಾರ – 1 ಟೀಸ್ಪೂನ್
    ಟಾಫಿ ಬಿಟ್ಸ್ – 1 ಕಪ್
    ಬಾದಾಮಿ ಚೂರುಗಳು – 1 ಕಪ್ ಇದನ್ನೂ ಓದಿ: ಚಾಕ್ಲೇಟ್ ಪ್ರಿಯರಿಗಾಗಿ ಲಾವಾ ಕೇಕ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಬೆಣ್ಣೆ, ಹಿಟ್ಟು ಮತ್ತು ಸಕ್ಕರೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ಈ ಮಿಶ್ರಣವನ್ನು ಗ್ರೀಸ್ ಮಾಡಿದ ಪ್ಯಾನ್‌ಗೆ ಹರಡಿ, ಸುಮಾರು 18 ನಿಮಿಷಗಳ ಕಾಲ ಓವನ್‌ನಲ್ಲಿ 325 ಡಿಗ್ರಿ ಪ್ಯಾರಾಹೀಟ್‌ಗೆ ಬಿಸಿ ಮಾಡಿ ಕ್ರಸ್ಟ್ ತಯಾರಿಸಿ.
    * ಮತ್ತೊಂದು ಪಾತ್ರೆಯಲ್ಲಿ ಹಾಲು, ಮೊಟ್ಟೆ, ವೆನಿಲ್ಲಾ ಸಾರ ಹಾಕಿ ಚೆನ್ನಾಗಿ ಬಿಟ್ ಮಾಡಿ ಬಳಿಕ ಅದಕ್ಕೆ ಟಾಫಿ ಬಿಟ್ಸ್ ಹಾಗೂ ಬಾದಾಮಿ ಹಾಕಿ ಮಿಶ್ರಣ ಮಾಡಿ.
    * ಈಗ ಬೇಯಿಸಿದ ಕ್ರಸ್ಟ್ ಮೇಲೆ ಹಾಲಿನ ಮಿಶ್ರಣ ಹಾಕಿ, ಮತ್ತೆ 25 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ನಂತರ ಅದನ್ನು ಓವನ್‌ನಿಂದ ತೆಗೆದು ತಣ್ಣಗಾಗಲು ಬಿಡಿ.
    * ಬಳಿಕ ಚಾಕು ಸಹಾಯದಿಂದ ಚೌಕಾಕಾರವಾಗಿ ಕತ್ತರಿಸಿಕೊಳ್ಳಿ.
    * ಇದೀಗ ಬಾದಾಮಿ ಟಾಫಿ ಬಾರ್ಸ್ ತಯಾರಾಗಿದ್ದು, ಮಕ್ಕಳಿಗೆ ಸವಿಯಲು ನೀಡಿ. ಇದನ್ನೂ ಓದಿ: ಮನೆಯಲ್ಲೇ ಮಾಡಿ ಟೇಸ್ಟಿ ಪೀನಟ್ ಬಟರ್

  • ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲೇ ತಯಾರಿಸಿ ರೆಡ್ ವೆಲ್ವೆಟ್ ಕೇಕ್

    ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲೇ ತಯಾರಿಸಿ ರೆಡ್ ವೆಲ್ವೆಟ್ ಕೇಕ್

    ಕ್ರಿಸ್‌ಮಸ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಕ್ರಿಸ್‌ಮಸ್ ಸಂಭ್ರಮಾಚರಣೆಗೆ ಈಗಿನಿಂದಲೇ ತಯಾರಿ ನಡೆಯುತ್ತಿದೆ. ಬಗೆಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸಲು ಸಿದ್ಧತೆಗಳು ಆರಂಭಗೊಂಡಿದೆ. ಹಬ್ಬ ಎಂದ ಮೇಲೆ ಅಲ್ಲಿ ಸಿಹಿ ತಿನಿಸು ಇರಲೇಬೇಕು. ಅದರಂತೆ ಈ ಬಾರಿ ಕ್ರಿಸ್‌ಮಸ್‌ಗೆ ವಿವಿಧ ಬಗೆಯ ಕೇಕ್‌ಗಳನ್ನು ಮನೆಯಲ್ಲಿಯೇ ಮಾಡಬಹುದಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾದ ರೆಡ್ ವೆಲ್ವೆಟ್ ಕೇಕ್ ಹೇಗೆ ಮಾಡುವುದು ಎಂಬುದನ್ನು ತಿಳಿಸುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವರೀತಿ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಊಟಕ್ಕೆ ತಯಾರಿಸಿ ಇರಾನಿ ಚಿಕನ್ ಕಡೈ

    ಬೇಕಾಗುವ ಸಾಮಗ್ರಿಗಳು:
    ಗೋಧಿ ಹಿಟ್ಟು – ಕಾಲು ಕಪ್
    ಉಪ್ಪು – ಅರ್ಧ ಚಮಚ
    ಸಕ್ಕರೆ – 1 ಕಪ್
    ಎಣ್ಣೆ – 1 ಕಪ್
    ಕಲರ್ ಪೌಡರ್ – ಅರ್ಧ ಚಮಚ
    ಅಡುಗೆ ಸೋಡಾ – ಅರ್ಧ ಚಮಚ
    ಕೋಕೋ ಪೌಡರ್ – 1 ಚಮಚ
    ಮೊಟ್ಟೆ – 1
    ಮಜ್ಜಿಗೆ – ಅರ್ಧ ಕಪ್
    ವೆನಿಲ್ಲಾ ಸಾರಾ – 1 ಚಮಚ
    ಕ್ರೀಮ್ ಚೀಸ್ – ಅರ್ಧ ಕಪ್
    ಸಣ್ಣದಾಗಿ ಹೆಚ್ಚಿದ ಬಾದಾಮಿ – 1 ಚಮಚ
    ಬೆಣ್ಣೆ – ಕಾಲು ಕಪ್
    ಹೆಚ್ಚಿದ ಗೋಡಂಬಿ – 1 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‌ನಲ್ಲಿ ಗೋಧಿ ಹಿಟ್ಟು, ಅಡುಗೆ ಸೋಡಾ, ಕೋಕೋ ಪೌಡರ್ ಮತ್ತು ಉಪ್ಪನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಬಳಿಕ ಅದಕ್ಕೆ ಸಕ್ಕರೆ ಮತ್ತು ಮೊಟ್ಟೆಯನ್ನು ಹಾಕಿಕೊಂಡು ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ಮತ್ತೊಮ್ಮೆ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ಈ ಮಿಶ್ರಣಕ್ಕೆ ಮಜ್ಜಿಗೆ, ವೆನಿಲ್ಲಾ ಸಾರಾ ಮತ್ತು ರೆಡ್ ಕಲರ್ ಪೌಡರ್ ಸೇರಿಸಿಕೊಂಡು ಮತ್ತೊಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದನ್ನು ಕೇಕ್ ಪ್ಯಾನ್‌ಗೆ ಹಾಕಿಕೊಂಡು 30ರಿಂದ 40 ನಿಮಿಷಗಳ ಕಾಲ ಓವನ್‌ನಲ್ಲಿ ಬೇಯಿಸಿಕೊಳ್ಳಿ.
    * ನಂತರ ಕೇಕ್ ತಣ್ಣಗಾಗಲು ಬಿಡಿ. ಬಳಿಕ ಕೇಕ್ ಮೇಲೆ ಕ್ರೀಮ್ ಚೀಸ್ ಮತ್ತು ಬೆಣ್ಣೆಯನ್ನು ಹರಡಿಕೊಂಡು ಅದರ ಮೇಲೆ ಹೆಚ್ಚಿದ ಗೋಡಂಬಿ ಹಾಗೂ ಬಾದಾಮಿಯನ್ನು ಹಾಕಿಕೊಳ್ಳಿ.
    * ಈಗ ನಿಮ್ಮ ಕ್ರಿಸ್ಮಸ್ ಕೇಕ್ ಸವಿಯಲು ಸಿದ್ಧ. ಇದನ್ನೂ ಓದಿ: ಚಾಕ್ಲೇಟ್ ಪ್ರಿಯರಿಗಾಗಿ ಲಾವಾ ಕೇಕ್ ರೆಸಿಪಿ

  • ಸ್ಪೆಷಲ್ ದಿನಗಳಲ್ಲಿ ಮಾಡಿ ಟೇಸ್ಟಿ ಸ್ಟಾರ್ಟರ್ – ಹನಿ ಚಿಲ್ಲಿ ಆಲೂಗಡ್ಡೆ

    ಸ್ಪೆಷಲ್ ದಿನಗಳಲ್ಲಿ ಮಾಡಿ ಟೇಸ್ಟಿ ಸ್ಟಾರ್ಟರ್ – ಹನಿ ಚಿಲ್ಲಿ ಆಲೂಗಡ್ಡೆ

    ನಿ ಚಿಲ್ಲಿ ಆಲೂಗಡ್ಡೆ ಜನಪ್ರಿಯ ಇಂಡೋ-ಚೈನೀಸ್ ಖಾದ್ಯ. ಇದು ಪ್ರಪಂಚದಾದ್ಯಂತದ ಆಹಾರಪ್ರಿಯರಲ್ಲಿ ಅಚ್ಚುಮೆಚ್ಚಿನಾಗಿದೆ. ಇದು ಸಿಹಿ ಮತ್ತು ಮಸಾಲೆಯುಕ್ತ ಪರಿಪೂರ್ಣ ಸಂಯೋಜನೆಯಾಗಿದ್ದು ಎಲ್ಲರಿಗೂ ಇಷ್ಟವಾಗುತ್ತದೆ. ಈ ರುಚಿಕರ ಖಾದ್ಯವನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಇದು ಸ್ಟಾರ್ಟರ್, ಸ್ನ್ಯಾಕ್ಸ್ ಅಥವಾ ಊಟಕ್ಕೆ ಸೈಡ್ ಡಿಶ್ ಆಗಿಯೂ ಸವಿಯಬಹುದು. ಸ್ಪೆಷಲ್ ದಿನಗಳಲ್ಲಿ ಇದನ್ನು ತಯಾರಿಸಿದರೆ ಊಟಕ್ಕೆ ಹೊಸ ಸ್ವಾದವಿರುತ್ತದೆ. ನೀವು ಕೂಡಾ ಇದನ್ನೊಮ್ಮೆ ಟ್ರೈ ಮಾಡಿ, ಮನೆಮಂದಿಯನ್ನು ಮೆಚ್ಚಿಸಿ.

    ಬೇಕಾಗುವ ಪದಾರ್ಥಗಳು:
    ಆಲೂಗಡ್ಡೆ – 500 ಗ್ರಾಂ
    ಕಾರ್ನ್ ಫ್ಲೋರ್ – 3-4 ಟೀಸ್ಪೂನ್
    ಮೈದಾ ಹಿಟ್ಟು – 1-2 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಎಣ್ಣೆ – ಹುರಿಯಲು ಬೇಕಾಗುವಷ್ಟು
    ಕೊಚ್ಚಿದ ಬೆಳ್ಳುಳ್ಳಿ – 4-5
    ಕೊಚ್ಚಿದ ಹಸಿರು ಮೆಣಸಿನಕಾಯಿ – 2-3
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಕ್ಯಾಪ್ಸಿಕಂ – 1
    ಟೊಮೆಟೋ ಸಾಸ್ – 2 ಟೀಸ್ಪೂನ್
    ಚಿಲ್ಲಿ ಸಾಸ್ – ಟೀಸ್ಪೂನ್
    ಸೋಯಾ ಸಾಸ್ – 1 ಟೀಸ್ಪೂನ್
    ಜೇನುತುಪ್ಪ – 2 ಟೀಸ್ಪೂನ್
    ವಿನೆಗರ್ – 1 ಟೀಸ್ಪೂನ್
    ನೀರು – ಅರ್ಧ ಕಪ್ ಇದನ್ನೂ ಓದಿ: ಟ್ರೈ ಮಾಡಿ ಟೇಸ್ಟಿ ಗ್ರೀನ್ ಚಟ್ನಿ ಸ್ಯಾಂಡ್‌ವಿಚ್

    ಮಾಡುವ ವಿಧಾನ:
    * ಮೊದಲಿಗೆ ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆಯಿರಿ. ಅವುಗಳನ್ನು ತೆಳ್ಳಗೆ ಇಲ್ಲವೇ ಉದ್ದದ ಪಟ್ಟಿಗಳಾಗಿ ಕತ್ತರಿಸಿ.
    * ಬಳಿಕ ಆಲೂಗಡ್ಡೆಯನ್ನು 10-15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ.
    * ಬಳಿಕ ನೀರನ್ನು ಹರಿಸಿ ಟಿಶ್ಯೂ ಪೇಪರ್ ಬಳಸಿ ಆಲೂಗಡ್ಡೆಯನ್ನು ಒಣಗಿಸಿ.
    * ಒಂದು ಬಟ್ಟಲಿನಲ್ಲಿ ಕಾರ್ನ್‌ಫ್ಲೋರ್, ಮೈದಾ ಹಿಟ್ಟು ಮತ್ತು ಉಪ್ಪನ್ನು ಸೇರಿಸಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಮೃದುವಾದ ಮಿಶ್ರಣವನ್ನಾಗಿ ಮಾಡಿ.
    * ಆಳವಾದ ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಆಲೂಗೆಡ್ಡೆಯನ್ನು ಹಿಟ್ಟಿನಲ್ಲಿ ಅದ್ದಿ ಮತ್ತು ಬಿಸಿ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಹುರಿಯಿರಿ.
    * ಬಳಿಕ ಹುರಿದ ಆಲೂಗಡ್ಡೆಯನ್ನು ತೆಗೆದು ಹೆಚ್ಚುವರಿ ಎಣ್ಣೆಯನ್ನು ತೆಗೆಯಲು ಟಿಶ್ಯೂ ಪೇಪರ್ ಮೇಲೆ ಹರಡಿಕೊಳ್ಳಿ.
    * ಮತ್ತೊಂದು ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ. ಹೆಚ್ಚಿದ ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕತ್ತರಿಸಿದ ಈರುಳ್ಳಿ ಸೇರಿಸಿ. ಅವು ಅರೆಪಾರದರ್ಶಕವಾಗುವವರೆಗೆ ಹುರಿಯಿರಿ.
    * ನಂತರ ಹೆಚ್ಚಿದ ಕ್ಯಾಪ್ಸಿಕಂ ಸೇರಿಸಿ ಮತ್ತು 1 ನಿಮಿಷ ಹುರಿಯಿರಿ.
    * ಟೊಮೆಟೋ ಸಾಸ್, ಚಿಲ್ಲಿ ಸಾಸ್, ಸೋಯಾ ಸಾಸ್, ಜೇನುತುಪ್ಪ, ವಿನೆಗರ್ ಮತ್ತು ನೀರನ್ನು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ 2-3 ನಿಮಿಷ ಬೇಯಲು ಬಿಡಿ.
    * ಹುರಿದ ಆಲೂಗಡ್ಡೆಯನ್ನು ಸಾಸ್‌ಗೆ ಸೇರಿಸಿ ಚೆನ್ನಾಗಿ ಮಿಶ್ರಣವಾಗುವಂತೆ ಟಾಸ್ ಮಾಡಿ.
    * ಹೆಚ್ಚಿದ ಸ್ಪ್ರಿಂಗ್ ಆನಿಯನ್‌ನಿಂದ ಅಲಂಕರಿಸಿದರೆ ಹನಿ ಚಿಲ್ಲಿ ಆಲೂಗಡ್ಡೆ ಸವಿಯಲು ಸಿದ್ಧವಾಗುತ್ತದೆ. ಇದನ್ನು ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಮನೆಯಲ್ಲೇ ಮಾಡಿ ಸ್ವಾದಿಷ್ಟಕರ ಚೀಸ್ ಚಿಕನ್ ಬರ್ಗರ್

  • ಊಟಕ್ಕೆ ತಯಾರಿಸಿ ಇರಾನಿ ಚಿಕನ್ ಕಡೈ

    ಊಟಕ್ಕೆ ತಯಾರಿಸಿ ಇರಾನಿ ಚಿಕನ್ ಕಡೈ

    ರ್ಷಿಯನ್ ಆಹಾರ ಪರಿಮಳಯುಕ್ತ ರಸಭರಿತವಾದ ಖಾದ್ಯಗಳಿಗೇ ಫೇಮಸ್. ಇಲ್ಲಿನ ಪ್ರಸಿದ್ಧ ಪಾಕಪದ್ಧತಿ ಅನೇಕ ಬ್ರೆಡ್‌ಗಳೊಂದಿಗೆ ಸವಿಯಬಹುದು. ಅದರಲ್ಲಿ ಒಂದು ಮುಖ್ಯ ರೆಸಿಪಿ ಇರಾನಿ ಚಿಕನ್ ಕಡೈ. ಇದು ಬೇಯಿಸಿದ ಭಾರತೀಯ ಫ್ಲ್ಯಾಟ್ ಬ್ರೆಡ್‌ನೊಂದಿಗೆ ಸವಿಯಲು ಅದ್ಭುತ ಎನಿಸುತ್ತದೆ. ನಾವಿಂದು ಇರಾನಿ ಚಿಕನ್ ಕಡೈ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಚಿಕನ್ ತುಂಡುಗಳು – 500 ಗ್ರಾಂ
    ಎಣ್ಣೆ – ಕಾಲು ಕಪ್
    ಬೆಣ್ಣೆ/ತುಪ್ಪ – 4 ಟೀಸ್ಪೂನ್
    ತೆಳ್ಳಗೆ ಹೆಚ್ಚಿದ ಈರುಳ್ಳಿ – 2
    ತೆಳ್ಳಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 3
    ಹೆಚ್ಚಿದ ಟೊಮೆಟೋ – 2
    ಚಿಲ್ಲಿ ಫ್ಲೇಕ್ಸ್ – 2 ಟೀಸ್ಪೂನ್
    ಶುಂಠಿ ಪೇಸ್ಟ್ – 1 ಟೀಸ್ಪೂನ್
    ಕೊತ್ತಂಬರಿ ಬೀಜ – 1 ಟೀಸ್ಪೂನ್
    ಕಾಳು ಮೆಣಸು – 1 ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಫ್ರೆಶ್ ಕ್ರೀಂ – 2 ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ರಾಜಸ್ಥಾನದ ರಾಯಲ್ ಟೇಸ್ಟ್ – ಜೋಧಪುರಿ ಧುವಾನ್ ಮಾಸ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಕಡಾಯಿಯಲ್ಲಿ ಎಣ್ಣೆ ಮತ್ತು ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ತೊಳೆದು ಒಣಗಿಸಿದ ಚಿಕನ್ ತುಂಡುಗಳನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ಅದಕ್ಕೆ ಹಸಿರು ಮೆಣಸಿನಕಾಯಿ, ಈರುಳ್ಳಿ ಮತ್ತು ಟೊಮೆಟೋಗಳನ್ನು ಸೇರಿಸಿ ಟಾಸ್ ಮಾಡಿ.
    * ಈ ನಡುವೆ ಮಿಕ್ಸರ್ ಜಾರ್‌ಗೆ ಜೀರಿಗೆ, ಕರಿಮೆಣಸು ಮತ್ತು ಕೊತ್ತಂಬರಿ ಬೀಜವನ್ನು ಹಾಕಿ ಪುಡಿಮಾಡಿಕೊಳ್ಳಿ.
    * ಈಗ ಚಿಕನ್‌ಗೆ ಪುಡಿ ಮಾಡಿದ ಮಸಾಲೆ ಸೇರಿಸಿ ಚೆನ್ನಾಗಿ ಲೇಪಿಸಿಕೊಳ್ಳಿ.
    * ಮಿಶ್ರಣಕ್ಕೆ ಉಪ್ಪು ಸೇರಿಸಿ, ಪ್ಯಾನ್ ಅನ್ನು ಮುಚ್ಚಳದಿಂದ ಮುಚ್ಚಿ 15 ನಿಮಿಷಗಳ ಕಾಲ ಬೇಯಲು ಬಿಡಿ.
    * ನಂತರ ಮುಚ್ಚಳವನ್ನು ತೆಗೆದು ಫ್ರೆಶ್ ಕ್ರೀಂ ಸೇರಿಸಿ ಮಿಶ್ರಣ ಮಾಡಿ.
    * ಬಳಿಕ ಉರಿಯನ್ನು ಆಫ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
    * ಇದೀಗ ಟೇಸ್ಟಿ ಇರಾನಿ ಚಿಕನ್ ಕಡೈ ಸಿದ್ಧವಾಗಿದ್ದು, ನಿಮ್ಮ ಆಯ್ಕೆಯ ಯಾವುದೇ ಬ್ರೆಡ್ ಅಥವಾ ರುಮಾಲಿ ರೊಟ್ಟಿ ಜೊತೆ ಸವಿಯಿರಿ. ಇದನ್ನೂ ಓದಿ: ವೀಕೆಂಡ್‌ನಲ್ಲಿ ಮಾಡಿ ಕೊಲ್ಹಾಪುರಿ ಪಂದ್ರಾ ರಸ