Tag: recipe

  • ಬೆಳಗ್ಗಿನ ತಿಂಡಿಗೆ 5 ನಿಮಿಷದಲ್ಲೇ ಹೆಲ್ತಿ ದೋಸೆ ಮಾಡೋ ವಿಧಾನ

    ಬೆಳಗ್ಗಿನ ತಿಂಡಿಗೆ 5 ನಿಮಿಷದಲ್ಲೇ ಹೆಲ್ತಿ ದೋಸೆ ಮಾಡೋ ವಿಧಾನ

    ಲಾಕ್‍ಡೌನ್ ಪರಿಣಾಮ ಎಲ್ಲರೂ ಮನೆಯಲ್ಲಿದ್ದೀರಿ. ಹೀಗಾಗಿ ದಿನಕ್ಕೆ ಮೂರು ಹೊತ್ತು ಬಿಸಿ ಬಿಸಿ ಅಡುಗೆ ಮಾಡಬೇಕು. ಅದರಲ್ಲೂ ಪ್ರತಿದಿನ ಬೆಳಗ್ಗೆ ಬೇರೆ ಬೇರೆ ರೀತಿಯ ತಿಂಡಿ ಮಾಡಿಕೊಡಬೇಕು. ಪ್ರತಿದಿನ ಯಾವ ಬಗೆಯ ತಿಂಡಿ ಮಾಡುವುದು ಎಂದು ಯೋಚನೆ ಮಾಡುತ್ತಿದ್ದೀರಾ. ನಿಮಗಾಗಿ ಆರೋಗ್ಯಕರವಾದ ಗೋಧಿ ದೋಸೆ ಮಾಡುವ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಾಗ್ರಿಗಳು
    1. ಗೋಧಿ ಹಿಟ್ಟು- 2 ಕಪ್
    2. ದನಿಯಾ ಪುಡಿ – 1/2 ಟೀ ಸ್ಪೂನ್
    3. ಅರಿಶಿಣ – ಚಿಟಿಕೆ
    4. ಖಾರದ ಪುಡಿ – 1/4 ಟೀ ಸ್ಪೂನ್
    5. ಎಣ್ಣೆ – ಸ್ಪಲ್ಪ
    6. ಉಪ್ಪು – ರುಚಿಗೆ ತಕ್ಕಷ್ಟು
    7. ಟೊಮೆಟೋ – 1
    8. ಈರುಳ್ಳಿ – 1
    9. ಗಜ್ಜರಿ (ಕ್ಯಾರೆಟ್) – 1
    10. ಕೋತಂಬರಿ – ಸ್ವಲ್ಪ

    ಮಾಡುವ ವಿಧಾನ
    * ಮೊದಲಿಗೆ ಟೊಮೆಟೊ, ಈರುಳ್ಳಿ, ಕ್ಯಾರೆಟ್, ಕೋತಂಬರಿ ಸಣ್ಣದಾಗಿ ಕತ್ತರಿಸಿ ಒಂದು ಪ್ಲೇಟ್‍ನಲ್ಲಿ ತೆಗೆದಿಡಿ.
    * ನಂತರ ಒಂದು ಮಿಕ್ಸಿಂಗ್ ಬೌಲ್‍ನಲ್ಲಿ ಗೋಧಿ ಹಿಟ್ಟು, ಉಪ್ಪು, ಅರಿಶಿಣ, ದನಿಯಾ ಪುಡಿ, ಖಾರದ ಪುಡಿ, ಉಪ್ಪು ಹಾಕಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಿ.
    * ಹಿಟ್ಟಿನಲ್ಲಿ ಯಾವುದೇ ಗಂಟುಗಳಿಲ್ಲದಂತೆ ಮಿಕ್ಸ್ ಮಾಡಿ.
    * ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು, ಸ್ಪಲ್ಪ ಎಣ್ಣೆ ಸವರಿ. ಪ್ಯಾನ್ ಕಾದ ನಂತರ ಸಿದ್ಧಮಾಡಿಕೊಂಡಿದ್ದ ಹಿಟ್ಟನ್ನ ಪ್ಯಾನ್ ಮೇಲೆ ದೋಸೆ ರೀತಿಯಲ್ಲಿ ಹಾಕಿ (ಸೆಟ್ ದೋಸೆ ಹಾಗೆ ದಪ್ಪಗಿರಲಿ)
    * ಮೊದಲಿಗೆ ಕತ್ತರಿಸಿಕೊಂಡಿದ್ದ ತರಕಾರಿಯನ್ನು ದೋಸೆ ಮೇಲೆ ಹಾಕಿ. ಈರುಳ್ಳಿ, ಕ್ಯಾರೆಟ್, ಟೊಮೆಟೋ ಕೊನೆಯದಾಗಿ ಕೋತಂಬರಿ ಸೊಪ್ಪು ಉದುರಿಸಿ.
    * ದೋಸೆ ಬೆಂದ ಕೂಡಲೇ ತಿರುಚಿ ಹಾಕಿ, ಇನ್ನೊಂದು ಮೇಲ್ಭಾಗದಲ್ಲಿದ್ದ ತರಕಾರಿ ಚೆನ್ನಾಗಿ ಬೇಯುತ್ತದೆ. (ಬೇಕಾದಲ್ಲಿ ನೀವು ದೋಸೆ ಮೇಲೆ ಚಾಟ್ ಮಸಾಲ ಹಾಕಬಹುದು).

  • ಕೇವಲ ಒಂದೇ ನಿಮಿಷದಲ್ಲಿ ಸಿಹಿ ಅವಲಕ್ಕಿ ಮಾಡೋ ವಿಧಾನ

    ಕೇವಲ ಒಂದೇ ನಿಮಿಷದಲ್ಲಿ ಸಿಹಿ ಅವಲಕ್ಕಿ ಮಾಡೋ ವಿಧಾನ

    ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಎಲ್ಲರೂ ಮನೆಯಲ್ಲಿದ್ದಾರೆ. ಅಲ್ಲದೇ ಪ್ರತಿದಿನ ಏನಾದರೂ ತಿನ್ನಲೂ ಕೇಳುತ್ತಿರುತ್ತಾರೆ. ಹೊರಗೆ ಹೋಗಿ ತಿಂಡಿ ತಂದು ಕೊಡೋಣ ಎಂದರೆ ಬೇಕರಿ ಓಪನ್ ಇರುವುದಿಲ್ಲ. ಹೀಗಾಗಿ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿ ಒಂದೇ ನಿಮಿಷದಲ್ಲಿ ಸಿಹಿ ಅವಲಕ್ಕಿ ಮಾಡುವ ವಿಧಾನ ಇಲ್ಲಿದೆ…..

    ಬೇಕಾಗುವ ಸಾಮಗ್ರಿಗಳು
    1. ಅವಲಕ್ಕಿ – 100 ಗ್ರಾಂ
    2. ಸಕ್ಕರೆ – ಸಿಹಿಗೆ ತಕ್ಕಷ್ಟು
    3. ಹಾಲು – 1 ಲೋಟ

    ಮಾಡುವ ವಿಧಾನ
    * ಒಂದು ಊಟದ ತಟ್ಟೆಗೆ ಅವಲಕ್ಕಿ, ಸಕ್ಕರೆ ಹಾಕಿಕೊಳ್ಳಿ.
    * ಅದಕ್ಕೆ ಬಿಸಿಬಿಸಿಯಾದ ಹಾಲನ್ನು ಸೇರಿಸಿದರೆ ಸಿಹಿ ಅವಲಕ್ಕಿ ತಿನ್ನಲು ರೆಡಿ. (ಬೇಕಿದ್ದರೆ ಸಕ್ಕರೆ ಪುಡಿಯನ್ನು ಹಾಕಬಹುದು).

  • ಗರಂ ಗರಂ ಕಡ್ಲೆಪುರಿ ಒಗ್ಗರಣೆ ಮಾಡೋ ವಿಧಾನ

    ಗರಂ ಗರಂ ಕಡ್ಲೆಪುರಿ ಒಗ್ಗರಣೆ ಮಾಡೋ ವಿಧಾನ

    ಲಾಕ್‍ಡೌನ್‍ನಿಂದ ಎಲ್ಲರೂ ಮನೆಯಲ್ಲಿದ್ದೀರಿ. ಹೀಗಾಗಿ ಟೈಂ ಪಾಸ್ ಮಾಡುವುದು ತುಂಬಾ ಕಷ್ಟ. ಏನಾದರೂ ತಿಂಡಿ ತಿಂದುಕೊಂಡು ಸಿನಿಮಾ ನೋಡಿಕೊಂಡು ಟೈಂ ಪಾಸ್ ಮಾಡೋಣ ಎಂದರೆ ಹೊರಗೆ ಯಾವುದೇ ಬೇಕರಿ ಓಪನ್ ಇರಲ್ಲ. ದಿನಸಿ ಅಂಗಡಿ ತೆರೆದಿರುತ್ತೆ, ಮಾಸ್ಕ್ ಧರಿಸಿ ಹೋಗಿ ಕಡ್ಲೆಪುರಿ ತೆಗೆದುಕೊಂಡು ಬನ್ನಿ. ಕಡ್ಲೆಪುರಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ಬರಿ ಕಡ್ಲೆಪುರಿಯನ್ನು ತುಂಬಾ ತಿನ್ನಲು ಸಾಧ್ಯವಿಲ್ಲ. ಹೀಗಾಗಿ ಸಿಂಪಲ್ ಆಗಿ ಕಡ್ಲೆಪುರಿ ಒಗ್ಗರಣೆ ಮಾಡುವ ವಿಧಾನ ನಿಮಗಾಗಿ…

    ಬೇಕಾಗುವ ಸಾಮಗ್ರಿಗಳು
    1. ಕಡ್ಲೆಪುರಿ – 1 ಪ್ಯಾಕೆಟ್ (ಸಪ್ಪೆ ಪುರಿ)
    2. ಖಾರದಪುಡಿ – 1 ಚಮಚ
    3. ಅರಿಶಿಣ – 1/4 ಚಮಚ
    4. ಎಣ್ಣೆ – 3 ಚಮಚ
    5. ಕಡ್ಲೆಬೀಜ – 150 ಗ್ರಾಂ
    6. ಕರಿಬೇಕು – ಸ್ವಲ್ಪ
    7. ಬೆಳ್ಳುಳ್ಳಿ – 7-8 ಎಳಸು
    8. ಮೆಣಸಿನಕಾಯಿ – 4-5
    9. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಒಂದು ಬಾಣಲೆಯನ್ನು ಬಿಸಿಗಿಟ್ಟು 3 ಚಮಚ ಎಣ್ಣೆ ಹಾಕಿ. ಕಾದ ಮೇಲೆ ಕಡ್ಲೆಬೀಜ ಹಾಕಿ ಫ್ರೈ ಮಾಡಿಕೊಳ್ಳಿ.
    * ಈಗ ಕರಿಬೇವು, ಬೆಳ್ಳುಳ್ಳಿ, ಮೆಣಸಿನಕಾಯಿ ಹಾಕಿ ಫ್ರೈ ಮಾಡಿಕೊಳ್ಳಿ.
    * ನಂತರ ಖಾರದಪುಡಿ, ಅರಿಶಿಣ ಹಾಕಿ ಮಿಕ್ಸ್ ಮಾಡಿ.
    * ಕೊನೆಗೆ ಕಡ್ಲೆಪುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಗರಂ ಗರಂ ಅಂತಿರುವ ಕಡ್ಲೆಪುರಿ ಒಗ್ಗರಣೆ ರೆಡಿ.

  • ಸಣ್ಣ ಚೌಚೌ ಮಾಡಿ – ಸಂಜೆ ಟೀ ಜೊತೆ ಸವಿಯಿರಿ

    ಸಣ್ಣ ಚೌಚೌ ಮಾಡಿ – ಸಂಜೆ ಟೀ ಜೊತೆ ಸವಿಯಿರಿ

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿದ್ದಾರೆ. ಸಂಜೆ ಆದರೆ ಸಾಕು ಎಲ್ಲರೂ ಟೀ ಜೊತೆ ತಿನ್ನಲು ಏನಾದರೂ ಸ್ಯಾಕ್ಸ್ ಕೇಳುತ್ತಾರೆ. ಆದ್ದರಿಂದ ನಿಮಗಾಗಿ ಸಣ್ಣ ಚೌಚೌ ಮಾಡುವ ವಿಧಾನ ಇಲ್ಲಿದೆ……

    ಬೇಕಾಗುವ ಸಾಮಗ್ರಿಗಳು
    1. ಕಡ್ಲೆಹಿಟ್ಟು – 1/2 ಕಪ್
    2. ಉಪ್ಪು – ರುಚಿಗೆ ತಕ್ಕಷ್ಟು
    3. ಓಂ ಕಾಳು – ಸ್ವಲ್ಪ
    4. ಖಾರದ ಪುಡಿ – ಸ್ವಲ್ಪ
    5. ಚಕ್ಕುಲಿ ಒರಳು
    6. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಒಂದು ಮಿಕ್ಸಿಂಗ್ ಬೌಲ್‍ಗೆ ಕಡ್ಲೆಹಿಟ್ಟು, ಉಪ್ಪು, ಖಾರದ ಪುಡಿ, ಓಂ ಕಾಳನ್ನು ಪುಡಿ ಮಾಡಿ ಹಾಕಿ ಮಿಕ್ಸ್ ಮಾಡಿ.
    * ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಚಕ್ಕುಲಿ ಹದಕ್ಕೆ ಕಲಿಸಿಕೊಳ್ಳಿ.
    * 15-20 ನಿಮಿಷ ನೆನೆಯಲು ಬಿಡಿ
    * ಈಗ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
    * ಈ ವೇಳೆ ಚಕ್ಕುಲಿ ಒರಳಿಗೆ ಸಣ್ಣ ಸಣ್ಣ ತೂತಿನ ಪ್ಲೇಟ್ ಹಾಕಿ ಎಣ್ಣೆ ಸವರಿ ಒಂದು ಉಂಡೆ ಹಿಟ್ಟನ್ನು ಹಾಕಿ.
    * ಎಣ್ಣೆ ಕಾದ ಮೇಲೆ ಡೈರೆಕ್ಟ್ ಆಗಿ ಎಣ್ಣೆಗೆ ಚೌಚೌವನ್ನು ಒರಳಿನಿಂದ ಪ್ರೆಸ್ ಮಾಡಿ ಹಾಕಿ ಫ್ರೈ ಮಾಡಿ.
    * 2-4 ನಿಮಿಷಗಳ ಫ್ರೈ ಮಾಡಿದರೆ ಸಣ್ಣ ಚೌಚೌ ಸವಿಯಲು ಸಿದ್ಧ.

  • ಮನೆಯಲ್ಲಿಯೇ ಗೋಧಿ ಬಿಸ್ಕೆಟ್ ಮಾಡೋ ವಿಧಾನ

    ಮನೆಯಲ್ಲಿಯೇ ಗೋಧಿ ಬಿಸ್ಕೆಟ್ ಮಾಡೋ ವಿಧಾನ

    ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆರಂಭವಾಗಿ 10 ದಿನಗಳು ಕಳೆದಿದೆ. ಆದರೆ ಇನ್ನೂ 11 ದಿನ ಮನೆಯಲ್ಲಿಯೇ ಇರಬೇಕು. ಹೀಗಾಗಿ ಮನೆಯಲ್ಲಿರುವುದು ಸ್ವಲ್ಪ ಕಷ್ಟ. ಆದರೆ ಆರೋಗ್ಯದ ದೃಷ್ಟಿಯಿಂದ ಮನೆಯಲ್ಲಿಯೇ ಇರಬೇಕು. ಹೀಗಾಗಿ ಮನೆಯಲ್ಲಿ ಇದ್ದರೆ ಮಕ್ಕಳು ಯಾವಾಗಲೂ ಏನಾದರೂ ತಿನ್ನಲು ಕೊಡಿ ಎಂದು ಕೇಳುತ್ತಿರುತ್ತಾರೆ. ಆದ್ದರಿಂದ ಮನೆಯಲ್ಲಿಯೇ ಗೋಧಿ ಬಿಸ್ಕೆಟ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು
    1. ಗೋಧಿ ಹಿಟ್ಟು – 1/2 ಕಪ್
    2. ಸಕ್ಕರೆ – ಸ್ವಲ್ಪ
    3. ತುಪ್ಪ – 3 ಚಮಚ
    4. ಎಣ್ಣೆ – ಕರಿಯಲು
    5. ಎಳ್ಳು – ಸ್ವಲ್ಪ

    ಮಾಡುವ ವಿಧಾನ
    * ಮೊದಲು ಒಂದು ಮಿಕ್ಸಿಂಗ್ ಬೌಲ್‍ಗೆ ಗೋಧಿ ಹಿಟ್ಟು, ಸಕ್ಕರೆ (ಮಿಕ್ಸಿಯಲ್ಲಿ ಸಕ್ಕರೆಯನ್ನು ಪುಡಿ ಮಾಡಿಕೊಳ್ಳಿ), ತುಪ್ಪ, ಸೇರಿಸಿ ಮಿಕ್ಸ್ ಮಾಡಿ.
    * ಈಗ ಸ್ವಲ್ಪ ಸ್ವಲ್ಪ ನೀರು ಸೇರಿಸಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
    * ಬಳಿಕ 15-20 ನಿಮಿಷಗಳ ಕಾಲ ನೆನೆಯಲು ಬಿಡಿ.
    * ಈಗ ಹಿಟ್ಟನ್ನು ದಪ್ಪವಾಗಿ ಲಟ್ಟಿಸಿ, ಬೇಕಾದ ಶೇಪ್‍ಗೆ ಕತ್ತರಿಸಿ.
    * ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
    * ಕಾದ ಎಣ್ಣೆಗೆ ಕತ್ತರಿಸಿದ ಶೇಪ್‍ಗಳನ್ನು ಹಾಕಿ ಕರಿಯಿರಿ.
    * ಗೋಲ್ಡನ್ ಬ್ರೌನ್ ಬರೋತನಕ ಫ್ರೈ ಮಾಡಿ.
    * ನಂತರ ಅದನ್ನು ಒಂದು ಪ್ಲೇಟ್ ಹಾಕಿದರೆ ಗೋಧಿ ಬಿಸ್ಕೆಟ್ ಸವಿಯಲು ಸಿದ್ಧ.

  • ಸಂಜೆ ಸ್ನಾಕ್ಸ್‌ಗೆ ಮನೆಯಲ್ಲಿಯೇ ಮಾಡಿ ಖಾರ ಕಡ್ಲೆಬೀಜ

    ಸಂಜೆ ಸ್ನಾಕ್ಸ್‌ಗೆ ಮನೆಯಲ್ಲಿಯೇ ಮಾಡಿ ಖಾರ ಕಡ್ಲೆಬೀಜ

    ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿದ್ದಾರೆ. ಹಿರಿಯರು ಹೇಗೋ ಮನೆಯಲ್ಲಿ ಟೈಂ ಪಾಸ್ ಮಾಡುತ್ತಾರೆ. ಆದರೆ ಈಗ ಮಕ್ಕಳು ಕೂಡ ಮನೆಯಲ್ಲಿರುವುದರಿಂದ ಸಂಜೆ ಏನಾದ್ರೂ ಸ್ನಾಕ್ಸ್ ಬೇಕೇ ಬೇಕು ಎಂದು ಕೇಳುತ್ತಾರೆ. ಆದ್ದರಿಂದ ನಿಮಗಾಗಿ ಖಾರ ಕಡ್ಲೆಬೀಜ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು
    1. ಕಡ್ಲೆಬೀಜ – 1/4 ಕೆಜಿ
    2. ಕಡಲೆಹಿಟ್ಟು – 100 ಗ್ರಾಂ
    3. ಖಾರದ ಪುಡಿ – ರುಚಿಗೆ ತಕ್ಕಷ್ಟು
    4. ಉಪ್ಪು – ರುಚಿಗೆ ತಕ್ಕಷ್ಟು
    5. ಅರಿಶಿನ ಪುಡಿ – ಚಿಟಿಕೆ
    6. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಒಂದು ಮಿಕ್ಸಿಂಗ್ ಬೌಲ್‍ಗೆ ಕಡಲೆಹಿಟ್ಟು, ಖಾರದ ಪುಡಿ, ಉಪ್ಪು, ಅರಿಶಿಣ, ನೀರು ಸೇರಿಸಿ ಬೋಂಡ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳಿ.
    * ಈಗ ಕಡ್ಲೆಬೀಜವನ್ನು ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಮಿಶ್ರಣ ಚೆನ್ನಾಗಿ ಮಿಕ್ಸ್ ಆಗಲು 15-20 ನಿಮಿಷಗಳ ಕಾಲ ನೆನೆಯಲು ಬಿಡಿ.
    * ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ
    * ಎಣ್ಣೆ ಕಾದ ಮೇಲೆ ಮಿಶ್ರಣದಲ್ಲಿದ್ದ ಕಡ್ಲೆಬೀಜವನ್ನು ಕೈಯಲ್ಲಿ ಎತ್ತಿಕೊಂಡು ಬಿಡಿಬಿಡಿಯಾಗಿ ಪಕೋಡ ಮಾಡುವ ರೀತಿ ಬಿಡಿ.
    * ಚೆನ್ನಾಗಿ ಕಡ್ಲೆಬೀಜ ಫ್ರೈ ಮಾಡಿದರೆ ಖಾರ ಕಡ್ಲೆಬೀಜ ಸವಿಯಲು ಸಿದ್ಧ.

  • ಮನೆಯಲ್ಲಿದ್ದು ಬೇಜಾರಾಗ್ತಿದೆಯಾ? ಐದೇ ನಿಮಿಷದಲ್ಲಿ ಕಾಬೂಲ್ ಕಡಲೆ ಫ್ರೈ ಮಾಡ್ಕೊಳ್ಳಿ

    ಮನೆಯಲ್ಲಿದ್ದು ಬೇಜಾರಾಗ್ತಿದೆಯಾ? ಐದೇ ನಿಮಿಷದಲ್ಲಿ ಕಾಬೂಲ್ ಕಡಲೆ ಫ್ರೈ ಮಾಡ್ಕೊಳ್ಳಿ

    ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಜನರು ಗೃಹಬಂಧನದಲ್ಲಿದ್ದಾರೆ. ಹಿರಿಯರು ಹೇಗೋ ಮನೆಯಲ್ಲಿ ಟೈಂ ಪಾಸ್ ಮಾಡ್ತಾರೆ. ಕುಟುಂಬಸ್ಥರು ಜೊತೆಯಾಗಿ ಇರೋದರಿಂದ ಸಂಜೆ ಏನಾದ್ರೂ ಸ್ನಾಕ್ಸ್ ಬೇಕೇ ಬೇಕು. ಸರ್ಕಾರ ಲಾಕ್‍ಡೌನ್ ಘೋಷಿಸುವದರಿಂದ ಹೊರಗಡೆ ಹೋಗುವ ಹಾಗಿಲ್ಲ. ಹಾಗಾಗಿ ಆರೋಗ್ಯಕರವಾದ ಕಾಬೂಲ್ ಕಡಲೆ ಫೈ ಮಾಡಿಕೊಳ್ಳಿ.

    ಬೇಕಾಗುವ ಸಾಮಗ್ರಿಗಳು
    ಕಾಬೂಲ್ ಕಡಲೆ – 1/4 ಕೆಜಿ
    ಉಪ್ಪು – ರುಚಿಗೆ ತಕ್ಕಷ್ಟು
    ಖಾರದ ಪುಡಿ – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲು ಕಾಬೂಲ್ ಕಡಲೆಯನ್ನು ಕುಕ್ಕರ್‍ಗೆ ಹಾಕಿ 1 ಕೂಗು ಕೂಗಿಸಿಕೊಳ್ಳಿ ಅಥವಾ ಒಂದು ದಿನವಿಡೀ ನೀರಿನಲ್ಲಿ ನೆನಸಿಡಿ..
    (ನೀರಿನಲ್ಲಿ ನೆನೆಸುವುದಕ್ಕಿಂತ ಕುಕ್ಕರ್‍ನಲ್ಲಿ ಕೂಗಿಸಿದ್ರೆ ಒಳ್ಳೆದು)
    * ಈಗ ಕುಕ್ಕರ್ ನಿಂದ ಕಾಬೂಲ್ ಕಡಲೆಯನ್ನು ಸೋಸಿಕೊಳ್ಳಿ
    * ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ
    * ಎಣ್ಣೆ ಕಾದ ಮೇಲೆ ಸಣ್ಣ ಸಣ್ಣ ತೂತಿರುವ ಜಾಲರಿಯೊಳಗೆ ಕಾಬೂಲ್ ಕಡಲೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ
    * ಹೀಗೆ ಎಲ್ಲಾ ಕಾಬೂಲ್ ಕಡಲೆಯನ್ನು ಫ್ರೈ ಮಾಡಿಕೊಳ್ಳಿ
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಫ್ರೈ ಮಾಡಿದ ಕಾಬೂಲ್ ಕಡಲೆಯನ್ನು ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು, ಖಾರವನ್ನು ಮಿಕ್ಸ್ ಮಾಡಿ

  • ಎರಡೇ ಸಾಮಗ್ರಿಯಿಂದ ಕಡ್ಲೆಕಾಳಿನ ಹುರಿಗಡಲೆ ಮಾಡೋ ವಿಧಾನ

    ಎರಡೇ ಸಾಮಗ್ರಿಯಿಂದ ಕಡ್ಲೆಕಾಳಿನ ಹುರಿಗಡಲೆ ಮಾಡೋ ವಿಧಾನ

    ಕೊರೊನಾ ಭೀತಿಯಿಂದ ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಮನೆಯಲ್ಲಿ ಇದ್ದರೆ ಟೈಂ ಪಾಸ್ ಮಾಡುವುದು ತುಂಬಾ ಕಷ್ಟ. ಅದರಲ್ಲೂ ಮಕ್ಕಳಿದ್ದರೆ ಅವರು ತಿನ್ನಲು ತಿಂಡಿ ಕೇಳುತ್ತಿರುತ್ತಾರೆ. ಹೊರಗೆ ಹೋಗಿ ತಂದು ಕೊಡೋಣ ಎಂದ್ರೆ ಯಾವುದೇ ಅಂಗಡಿ ಓಪನ್ ಇರುವುದಿಲ್ಲ. ಆದರೆ ದಿನಸಿ ಅಂಗಡಿ ಓಪನ್ ಇರುತ್ತೆ. ಹೀಗಾಗಿ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಲೆಕಾಳು ತನ್ನಿ. ಇನ್ನೂ ಮನೆಯಲ್ಲಿ ಉಪ್ಪು ಇರುತ್ತದೆ. ಈ ಎರಡು ಸಾಮಗ್ರಿಗಳಿಂದಲೇ ಕಡ್ಲೆಕಾಳಿನ ಉಪ್ಪುಪ್ಪು ಹುರಿಗಡಲೆ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು
    1. ಕಡ್ಲೆಕಾಳು- 1/4 ಕೆಜಿ
    2. ಉಪ್ಪು – 2 ಕಪ್

    ಮಾಡುವ ವಿಧಾನ
    * ಒಂದು ಅಲ್ಯೂಮಿನಿಯಂ ಅಥವಾ ಕಬ್ಬಿಣದ ಬಾಣಲೆ ಇದ್ದರೆ ಒಳಿತು.
    * ಬಾಣಲೆಗೆ 2 ಕಪ್ ಉಪ್ಪನ್ನು ಹಾಕಿ 2 ನಿಮಿಷ ಫ್ರೈ ಮಾಡಿ.
    * ಈ ಉಪ್ಪು ಬಿಸಿಯಾದ ಮೇಲೆ ಕಡ್ಲೆಕಾಳನ್ನು ಹಾಕಿ ಹೈ ಫ್ಲೇಮ್‍ನಲ್ಲಿ ಫ್ರೈ ಮಾಡಿ.
    * ಉಪ್ಪಿನ ಕಾವಿಗೆ ಕಡ್ಲೆಕಾಳಿನ ಸಿಪ್ಪೆ ಹೊಡೆದು ಹುರಿಗಡಲೆ ಆಗುತ್ತದೆ.
    * ಬಳಿಕ ಉಪ್ಪಿನಿಂದ ಹುರಿಗಡಲೆಯನ್ನು ಬೇರ್ಪಡಿಸಿದರೆ ಕಡ್ಲೆಕಾಳಿನ ಉಪ್ಪುಪ್ಪು ಹುರಿಗಡಲೆ ಸಿದ್ಧ

  • ದಿಢೀರನೇ ಹೆಸರುಬೇಳೆ ಫ್ರೈ ಮಾಡುವ ವಿಧಾನ

    ದಿಢೀರನೇ ಹೆಸರುಬೇಳೆ ಫ್ರೈ ಮಾಡುವ ವಿಧಾನ

    ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ದಿನಪೂರ್ತಿ ಮನೆಯಲ್ಲಿಯೇ ಇರಬೇಕು. ಬೇಸರವಾದಾಗ ಹೊರಗೆ ಹೋಗಿ ಏನಾದರೂ ತಿಂದುಕೊಂಡು ಬರೋಣ ಎಂದರೂ ಆಗುವುದಿಲ್ಲ. ಆದ್ದರಿಂದ ನಿಮಗಾಗಿ ದಿಢೀರನೇ ರೆಡಿಯಾಗುವ ಉಪ್ಪುಪ್ಪು ಹೆಸರು ಬೇಳೆ ಫ್ರೈ ಮಾಡುವ ವಿಧಾನ ಇಲ್ಲಿದೆ…..

    ಬೇಕಾಗುವ ಸಾಮಗ್ರಿಗಳು
    1. ಹೆಸರುಬೇಳೆ – 1/4 ಕೆಜಿ
    2. ಉಪ್ಪು – ರುಚಿಗೆ ತಕ್ಕಷ್ಟು
    3. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಸುಮಾರು 2 ಗಂಟೆಗಳ ಕಾಲ ಹೆಸರುಬೇಳೆಯನ್ನು ನೀರಿನಲ್ಲಿ ನೆನೆಸಿ, ಸೋಸಿಕೊಳ್ಳಿ.
    * ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
    * ಎಣ್ಣೆ ಕಾದ ಮೇಲೆ ಸಣ್ಣ ಸಣ್ಣ ತೂತಿರುವ ಜಾಲರಿಯೊಳಗೆ ಹೆಸರುಬೇಳೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಹೀಗೆ ಎಲ್ಲಾ ಬೇಳೆಯನ್ನು ಫ್ರೈ ಮಾಡಿಕೊಳ್ಳಿ.
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಫ್ರೈ ಮಾಡಿದ ಹೆಸರುಬೇಳೆ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿದರೆ ಸವಿಯಲು ಸಿದ್ಧ

    ಈ ಹೆಸರುಬೇಳೆ ರೆಸಿಪಿಗೆ ಉಪ್ಪು ಬೆಸ್ಟ್ ಕಾಂಬಿನೇಷನ್. ಇದನ್ನು ಒಂದು ವಾರಗಳ ಕಾಲ ಇಟ್ಟುಕೊಂಡು ತಿನ್ನಬಹುದು.

  • ಕೆಲವೇ ನಿಮಿಷಗಳಲ್ಲಿ ಮಾಡಿ ಕಡ್ಲೆಬೇಳೆ ಖಾರ ಫ್ರೈ

    ಕೆಲವೇ ನಿಮಿಷಗಳಲ್ಲಿ ಮಾಡಿ ಕಡ್ಲೆಬೇಳೆ ಖಾರ ಫ್ರೈ

    ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ದಿನಪೂರ್ತಿ ಮನೆಯಲ್ಲಿಯೇ ಇರಬೇಕು. ಬೇಸರವಾದಾಗ ಹೊರಗೆ ಹೋಗಿ ಏನಾದರೂ ತಿಂದುಕೊಂಡು ಬರೋಣ ಎಂದರೂ ಆಗುವುದಿಲ್ಲ. ಇತ್ತ ಮನೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರೂ ಇರುವುದರಿಂದ ತಿನ್ನಲೂ ಏನಾದರೂ ಕೇಳುತ್ತಿರುತ್ತಾರೆ…ಅವರಿಗಾಗಿ ಏನ್ ಮಾಡೋದು ಎಂದು ಯೋಚನೆ ಮಾಡುತ್ತಿರುತ್ತೀರಾ. ಆದ್ದರಿಂದ ನಿಮಗಾಗಿ ಕೆಲವೇ ನಿಮಿಷಗಳಲ್ಲಿ ರೆಡಿಯಾಗುವ ಕಡ್ಲೆಬೇಳೆ ಖಾರ ಫ್ರೈ ಮಾಡುವ ವಿಧಾನ ಇಲ್ಲಿದೆ…..

    ಬೇಕಾಗುವ ಸಾಮಗ್ರಿಗಳು
    1. ಕಡ್ಲೆಬೇಳೆ – 1/4 ಕೆಜಿ
    2. ಖಾರದ ಪುಡಿ – ರುಚಿಗೆ ತಕ್ಕಷ್ಟು
    3. ಉಪ್ಪು – ರುಚಿಗೆ ತಕ್ಕಷ್ಟು
    4. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲು 4-5 ಗಂಟೆಗಳ ಕಾಲ ಕಡ್ಲೆಬೇಳೆಯನ್ನು ನೀರಿನಲ್ಲಿ ನೆನೆಸಿ ಸೋಸಿಕೊಳ್ಳಿ.
    * ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
    * ಎಣ್ಣೆ ಕಾದ ಮೇಲೆ ಸಣ್ಣ ಸಣ್ಣ ತೂತಿರುವ ಜಾಲರಿಯೊಳಗೆ ಕಡ್ಲೆಬೇಳೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಬೇಳೆ ನಿಂದಿರುವ ಕಾರಣ 2-3 ನಿಮಿಷಗಳ ಕಾಲ ಬೇಯಿಸಿದರೆ ಗರಿಗರಿ ಎನ್ನುತ್ತೆ. ಹೀಗೆ ಎಲ್ಲಾ ಬೇಳೆಯನ್ನು ಫ್ರೈ ಮಾಡಿಕೊಳ್ಳಿ.
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಫ್ರೈ ಮಾಡಿದ ಕಡ್ಲೆಬೇಳೆ ಹಾಕಿಕೊಂಡು ಉಪ್ಪು ಖಾರವನ್ನು ಮಿಕ್ಸ್ ಮಾಡಿ.
    (ನಿಮಗೆ ಉಪ್ಪು, ಖಾರ ತಿಂದು ಬೇಜರಾಗಿದ್ರೆ, ಗರಂ ಮಸಾಲ, ಮ್ಯಾಗಿ ಮಸಾಲ, ಪೆಪ್ಪರ್ ಪೌಡರ್ ಮಸಾಲವನ್ನು ಸಹ ಬಳಸಬಹುದು. ಟೇಸ್ಟೂ ಚೆನ್ನಾಗಿರುತ್ತದೆ)

    ಈ ರೀತಿ ಕಡ್ಲೆಬೇಳೆ ಖಾರ ಫ್ರೈ ಮಾಡಿದರೆ ಇದನ್ನು ಕೆಲದಿನಗಳ ಕಾಲ ಇಟ್ಟುಕೊಂಡು ತಿನ್ನಬಹುದು.