Tag: recipe

  • ಡಾಬಾ ಶೈಲಿಯ ದಾಲ್ ಫ್ರೈ ಮಾಡೋ ವಿಧಾನ

    ಡಾಬಾ ಶೈಲಿಯ ದಾಲ್ ಫ್ರೈ ಮಾಡೋ ವಿಧಾನ

    ಲಾಕ್‍ಡೌನ್ ಆದಗಿನಿಂದ ಎಲ್ಲರೂ ಮನೆಯಲ್ಲಿದ್ದೀರಾ. ಪ್ರತಿದಿನ ಮನೆ ಊಟ ಮಾಡಿ ಕೆಲವರಿಗೆ ಬೇಸರವಾಗಿರುತ್ತದೆ. ಒಂದು ದಿನ ಹೋಟೆಲ್‍ಗೆ ಹೋಗಿ ಊಟ ಮಾಡೋಣ ಎಂದರೆ ಸಾಧ್ಯವಿಲ್ಲ. ಇನ್ನೂ ಮನೆಯಲ್ಲಿ ರುಚಿ-ರುಚಿಯಾಗಿ ಏನಾದರೂ ಮಾಡುವಂತೆ ಮನೆಯವರು ಕೇಳುತ್ತಿರುತ್ತಾರೆ. ಹೀಗಾಗಿ ಮನೆಯಲ್ಲೇ ಡಾಬಾ ಶೈಲಿಯ ದಾಲ್ ಫ್ರೈ ಮಾಡಿ ಕೊಡಿ. ಸಿಂಪಲ್ ಆಗಿ ದಾಲ್ ಫ್ರೈ ಮಾಡುವ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಾಗ್ರಿಗಳು
    1. ತೊಗರಿಬೇಳೆ – 1 ಕಪ್
    2. ಟೊಮೆಟೊ – 1
    3. ಈರುಳ್ಳಿ – 1
    4. ಹಸಿ ಮೆಣಸಿನಕಾಯಿ  – 2 ರಿಂದ 3
    5. ಶುಂಠಿ ಮತ್ತು ಬೆಳ್ಳುಳ್ಳಿ – 1/2 ಚಮಚ
    6. ಕರಿಬೇವು
    7. ಸಾಸವೆ
    8. ಜೀರಿಗೆ
    9. ಎಣ್ಣೆ – 3 ಚಮಚ
    10. ಉಪ್ಪು – ರುಚಿಗೆ ತಕ್ಕಷ್ಟು
    11. ಅರಿಶಿಣ – ಚಿಟಿಕೆ

    ಮಾಡುವ ವಿಧಾನ
    * ಮೊದಲಿಗೆ ಕುಕ್ಕರ್ ನಲ್ಲಿ ತೊಗರಿಬೇಳೆಯನ್ನು ಎರಡರಿಂದ ಮೂರು ವಿಷಲ್ ಕೂಗಿಸಿಕೊಳ್ಳಿ.
    * ಹಸಿ ಮೆಣಸಿನಕಾಯಿ, ಟೊಮೆಟೊ ಮತ್ತು ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ.
    * ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು ಒಗ್ಗರಣೆಗೆ ಎರಡರಿಂದ ಮೂರು ಚಮಚ ಎಣ್ಣೆ ಹಾಕಿಕೊಳ್ಳಿ. ಒಗ್ಗರಣೆಗೆ ಆಗುವರೆಗೂ ಸ್ಟೌವ್ ಕಡಿಮೆ ಉರಿಯಲ್ಲಿರಲಿ.
    * ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸಿವೆ, ಜೀರಿಗೆ, ಕರಿಬೇವು ಹಾಕಿ. ತದನಂತರ ಕತ್ತರಿಸಿಕೊಂಡಿದ್ದ ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಈರುಳ್ಳಿ ಕಂದು ಬಣ್ಣಕ್ಕೆ ಬರುತ್ತಿದ್ದಂತೆ ಚಿಟಿಕೆ ಅರಿಶಿಣ, ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿಕೊಳ್ಳಿ.
    * ಕೊನೆಯದಾಗಿ ಕುದಿಸಿದ ತೊಗರಿ ಬೇಳೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ದಾಲ್ ಮಿಕ್ಸ್ ಮಾಡುತ್ತಿದ್ದಂತೆ ಒಂದು ಕಪ್ ನೀರು ಸೇರಿಸಿ, ಐದರಿಂದ ಹತ್ತು ನಿಮಿಷ ಕುದಿಸಿದ್ರೆ ಡಾಬಾ ಶೈಲಿಯ ದಾಲ್ ಫ್ರೈ ರೆಡಿ.

  • ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ಶುಂಠಿ ಜ್ಯೂಸ್

    ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ಶುಂಠಿ ಜ್ಯೂಸ್

    ಲಾಕ್‍ಡೌನ್‍ನಿಂದ ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಇದೆ. ಇದರಿಂದ ಕೆಲವರು ಪ್ರತಿದಿನ ಮಾಡುತ್ತಿದ್ದ ಜಿಮ್, ವರ್ಕೌಟ್ ಎಲ್ಲವೂ ಬಂದ್ ಆಗಿದೆ. ಹೀಗಾಗಿ ಅವರಿಗೆ ಮನೆಯಲ್ಲಿಯೇ ಇದ್ದು ತೂಕ ಹೆಚ್ಚಾಗುತ್ತಿದೆ ಎಂಬ ಭಯವಿರುತ್ತದೆ. ಶುಂಠಿ ಜ್ಯೂಸ್ ಕುಡಿದ ದೇಹದ ತೂಕ ಹೆಚ್ಚಾಗುವುದನ್ನು ಕಡಿಮೆ ಮಾಡಿಕೊಳ್ಳಬಹುದು. ಸಿಂಪಲ್ ಆಗಿ ಶುಂಠಿ ಜ್ಯೂಸ್ ಮಾಡುವ ವಿಧಾನ ನಿಮಗಾಗಿ.

    ಬೇಕಾಗುವ ಸಾಮಗ್ರಿಗಳು
    1. ಶುಂಠಿ – ಅರ್ಧ ಇಂಚು
    2. ನೀರು – ಒಂದು ಗ್ಲಾಸ್
    3. ಜೇನು ತುಪ್ಪ – ಅರ್ಧ ಚಮಚ
    4. ನಿಂಬೆಹಣ್ಣು – ಎರಡು ಹನಿ

    ಬೇಕಾಗುವ ಸಾಮಾಗ್ರಿಗಳು
    * ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟುಕೊಂಡು ಒಂದು ಗ್ಲಾಸ್ ನೀರು ಹಾಕಿಕೊಳ್ಳಿ. ಇದಕ್ಕೆ ಅರ್ಧ ಇಂಚು ಶುಂಠಿ ಮಿಕ್ಸ್ ಮಾಡಿಕೊಳ್ಳಿ.
    * ನೀರು ಮತ್ತು ಶುಂಠಿ 10 ನಿಮಿಷ ಕುದಿಸಿದ ನಂತರ ಸೋಸಿಕೊಳ್ಳಿ.
    * ಜ್ಯೂಸ್ ತಣ್ಣಗಾದ ಮೇಲೆ ಎರಡು ಹನಿ ನಿಂಬೆರಸ ಮತ್ತು ಜೇನುತುಪ್ಪ ಸೇರಿಸಿದ್ರೆ ಶುಂಠಿ ಜ್ಯೂಸ್ ರೆಡಿ.

    ಇದನ್ನು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಕುಡಿಯುವದರಿಂದ ನಿಮ್ಮ ದೇಹದಲ್ಲಿ ಕೊಬ್ಬು ಸಂಗ್ರಹಣೆ ಕಡಿಮೆ ಆಗೋದನ್ನು ತಡೆಯುತ್ತದೆ. ಈ ಜ್ಯೂಸ್ ಸೇವನೆ ಜೊತೆ ಡಯಟ್ ಪಾಲಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

  • ಮನೆಯಲ್ಲಿದ್ದು ತೂಕ ಹೆಚ್ಚಾಗ್ತಿದಿಯಾ – ಜೀರಾ ಜ್ಯೂಸ್ ಕುಡಿಯಿರಿ

    ಮನೆಯಲ್ಲಿದ್ದು ತೂಕ ಹೆಚ್ಚಾಗ್ತಿದಿಯಾ – ಜೀರಾ ಜ್ಯೂಸ್ ಕುಡಿಯಿರಿ

    ಲಾಕ್‍ಡೌನ್‍ನಿಂದ ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಇದೆ. ಇದರಿಂದ ಕೆಲವರು ಪ್ರತಿದಿನ ಮಾಡುತ್ತಿದ್ದ ಜಿಮ್, ವರ್ಕೌಟ್ ಎಲ್ಲವೂ ಬಂದ್ ಆಗಿದೆ. ಹೀಗಾಗಿ ಅವರಿಗೆ ಮನೆಯಲ್ಲಿಯೇ ಇದ್ದು ತೂಕ ಹೆಚ್ಚಾಗುತ್ತಿದೆ ಎಂಬ ಭಯವಿರುತ್ತದೆ. ಮನೆಯಲ್ಲಿ ಜೀರಿಗೆ ಇದ್ದೆ ಇರುತ್ತದೆ. ಆದ್ದರಿಂದ ಪ್ರತಿದಿನ ಜೀರಾ ಜ್ಯೂಸ್ ಕುಡಿದು ದೇಹದ ತೂಕ ಹೆಚ್ಚಾಗುವುದನ್ನು ಕಡಿಮೆ ಮಾಡಿಕೊಳ್ಳಬಹುದು. ಸಿಂಪಲ್ ಆಗಿ ಜೀರಾ ಜ್ಯೂಸ್ ಮಾಡುವ ವಿಧಾನ ನಿಮಗಾಗಿ….

    ಬೇಕಾಗುವ ಸಾಮಾಗ್ರಿಗಳು
    1. ಜೀರಿಗೆ – ಒಂದು ಟೀ ಸ್ಪೂನ್
    2. ನೀರು – ಒಂದು ಗ್ಲಾಸ್
    3. ಜೇನುತುಪ್ಪ – 1/2 ಟೀ ಸ್ಪೂನ್
    4. ನಿಂಬೆಹಣ್ಣು – 2 ಹನಿ

    ಬೇಕಾಗುವ ಸಾಮಾಗ್ರಿಗಳು
    * ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ನೀರಿನಲ್ಲಿ ಒಂದು ಟೀ ಸ್ಪೂನ್ ಜೀರಿಗೆ ಮಿಕ್ಸ್ ಮಾಡಿ ಮುಚ್ಚಿಡಿ.
    * ಬೆಳಗ್ಗೆ ಜೀರಿಗೆ ಮಿಶ್ರಿತ ನೀರನ್ನ 5 ರಿಂದ 7 ನಿಮಿಷ ಕುದಿಸಿಕೊಳ್ಳಿ. ಕುದಿಸಿದ ಮೇಲೆ ನೀರನ್ನು ಸೋಸಿಕೊಳ್ಳುವ ಮೂಲಕ ಜೀರಿಗೆಯನ್ನು ಬೇರ್ಪಡಿಸಿಕೊಳ್ಳಿ.
    * ಜೀರಿಗೆ ಮಿಶ್ರಿತ ನೀರು ಕುದಿಸಿದ ಮೇಲೆ ತಣ್ಣಗಾಗಲು ಬಿಡಿ.
    * ಸಂಪೂರ್ಣವಾಗಿ ತಣ್ಣಗಾಗುವ ಮೊದಲೇ ಎರಡು ಹನಿ ನಿಂಬೆ ರಸ ಮತ್ತು ಅರ್ಧ ಟೀ ಸ್ಪೂನ್ ಸೇರಿಸಿದರೆ ಜೀರಾ ಜ್ಯೂಸ್ ಕುಡಿಯಲು ಸಿದ್ಧ.

    ಇದನ್ನು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಕುಡಿಯುವುದರಿಂದ ದೇಹದಲ್ಲಿ ಕೊಬ್ಬು ಸಂಗ್ರಹಣೆ ಕಡಿಮೆ ಆಗೋದನ್ನು ತಡೆಯುತ್ತದೆ. ಈ ಜ್ಯೂಸ್ ಸೇವನೆ ಜೊತೆ ಡಯಟ್ ಪಾಲಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

  • ಬೇಸಿಗೆಯಲ್ಲಿ ಆರೋಗ್ಯಕರವಾದ ಅಕ್ಕಿ ಗಂಜಿ ಮಾಡಿ ಕುಡಿಯಿರಿ

    ಬೇಸಿಗೆಯಲ್ಲಿ ಆರೋಗ್ಯಕರವಾದ ಅಕ್ಕಿ ಗಂಜಿ ಮಾಡಿ ಕುಡಿಯಿರಿ

    ಒಂದು ಕಡೆ ಲಾಕ್‍ಡೌನ್. ಮತ್ತೊಂಡೆ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಹೊರಗೆ ಹೋಗಿ ತಂಪಾದ ಪಾನೀಯ ಕುಡಿಯೋಣ ಅಂದರೆ ಸಾಧ್ಯವಾಗುತ್ತಿಲ್ಲ.  ಹೀಗಾಗಿ ಮನೆಯಲ್ಲಿ ತಂಪು ಪಾನೀಯ ಮಾಡಿಕೊಂಡು ಕುಡಿಯಬಹುದು. ನಿಮಗಾಗಿ ಇಲ್ಲಿದೆ ಆರೋಗ್ಯಕರವಾದ ಅಕ್ಕಿ ಗಂಜಿ ಮಾಡುವ ವಿಧಾನ..

    ಬೇಕಾಗುವ ಸಾಮಾಗ್ರಿಗಳು
    1. ಅಕ್ಕಿ – ಒಂದು ಕಪ್
    2. ಹಸಿ ತೆಂಗಿನಕಾಯಿ ತುರಿ – 2 ಚಮಚ
    3. ಜೀರಿಗೆ – 1/2 ಚಮಚ
    3. ಹಸಿ ಮೆಣಸಿನಕಾಯಿ – ಒಂದು (ಸಣ್ಣಗೆ ಕತ್ತರಿಸಬೇಕು)
    4. ತುಪ್ಪ- 1 ಟೀ ಸ್ಪೂನ್
    5. ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.
    * ಈಗ ಅಕ್ಕಿಯನ್ನು ಕುಕ್ಕರ್ ನಲ್ಲಿ ಹಾಕಿಕೊಳ್ಳಿ. ಅಕ್ಕಿ ತೆಗೆದುಕೊಂಡ ಕಪ್‍ನಿಂದಲೇ 7-8 ಕಪ್ ನೀರು ಹಾಕಿ. (ಗಂಜಿ ತೆಳುವಾಗಿದ್ರೆ ಚೆನ್ನಾಗಿರುತ್ತೆ. ಹಾಗಾಗಿ ಹೆಚ್ಚು ನೀರು ಹಾಕಿಕೊಳ್ಳಿ).
    * ನೀರು ಹಾಕಿದ ಬಳಿಕ ಹಸಿ ತೆಂಗಿನ ತುರಿ, ಜೀರಿಗೆ, ತುಪ್ಪ, ಕತ್ತರಿಸಿದ ಹಸಿ ಮೆಣಸಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ.
    * ಈಗ ಕುಕ್ಕರ್ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ವಿಶಲ್ ಹೊಡಿಸಿದರೆ ನಿಮ್ಮ ಅಕ್ಕಿ ಗಂಜಿ ರೆಡಿ.
    * ಗಂಜಿ ತಣ್ಣಗಾದ ಮೇಲೆ ಬೇಕಾದಲ್ಲಿ ಮಜ್ಜಿಗೆ, ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಕುಡಿಯಬಹುದು.

  • ಕೆಲವೇ ತರಕಾರಿ ಬಳಸಿ, ಎರಡೇ ನಿಮಿಷದಲ್ಲಿ ತಯಾರಿಸಿ ರಸಂ

    ಕೆಲವೇ ತರಕಾರಿ ಬಳಸಿ, ಎರಡೇ ನಿಮಿಷದಲ್ಲಿ ತಯಾರಿಸಿ ರಸಂ

    ಲಾಕ್‍ಡೌನ್ ಆಗಿದ್ದರಿಂದ ಊರಿಗೆ ತೆರಳದೇ ರೂಮಿನಲ್ಲಿ ಉಳಿದುಕೊಂಡಿರುವ ಬಹುತೇಕ ಯುವಕರಿಗೆ ಊಟದ್ದೇ ದೊಡ್ಡ ಚಿಂತೆ. ಇನ್ನು ಹೋಟೆಲ್ ಗಳ ಮೇಲೆ ಅವಲಂಬಿತರಾದವರು ಪ್ರತಿದಿನ ಏನು ಮಾಡಿಕೊಳ್ಳೋದು ಅನ್ನೋ ಚಿಂತೆಯಲ್ಲಿಯೇ ಅರ್ಧ ದಿನ ಕಳೆದು ಬಿಡ್ತಾರೆ. ಕೆಲವೇ ತರಕಾರಿ ಬಳಸಿ, ಕಡಿಮೆ ಸಮಯದಲ್ಲಿ ರಸಂ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    ಟೊಮೆಟೋ- 2
    ಹುಣಸೆ ಹಣ್ಣು- ಸ್ವಲ್ಪ
    ಹಸಿ ಮೆಣಸಿನಕಾಯಿ- 5 ರಿಂದ 6
    ಬೆಳ್ಳುಳ್ಳಿ- 5 ರಿಂದ 6 ಎಸಳು
    ಕೋತಂಬರಿ ಸೊಪ್ಪು
    ಉಪ್ಪು ರುಚಿಗೆ ತಕ್ಕಷ್ಟು
    ಎಣ್ಣೆ-ಒಗ್ಗರಣೆಗೆ

    ಮಾಡುವ ವಿಧಾನ
    * ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನಷ್ಟು ನೀರು ಹಾಕಿಕೊಂಡು ಅದರಲ್ಲಿ ಹುಣಸೆ ಹಣ್ಣನ್ನು ನೆನಸಿಟ್ಟುಕೊಳ್ಳಿ.
    * ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಸೇರಿಸಿ ಮಿಕ್ಸಿಗೆ ಹಾಕಿಕೊಂಡು ರುಬ್ಬಿಕೊಳ್ಳಿ.
    * ಈಗ ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟುಕೊಂಡು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾದ ಮೇಲೆ ಮಿಕ್ಸಿ ಹಾಕಿಕೊಂಡಿದ್ದ ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
    * ಈಗ ಹುಣಸೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
    * ರುಚಿಗೆ ತಕ್ಕಷ್ಟು ಮತ್ತು ಕತ್ತರಿಸಿದ ಟೊಮೆಟೋ ಪೀಸ್ ಗಳನ್ನು ಮಿಕ್ಸ್ ಮಾಡಿ 5 ರಿಂದ 6 ನಿಮಿಷ ಕುದಿಸಿಕೊಳ್ಳಿ. ಕೊನೆಗೆ ಸಣ್ಣದಾಗಿ ಕೋತಂಬರಿ ಸೇರಿಸಿದ್ರೆ ರಸಂ ಸವಿಯಲು ಸಿದ್ಧ.

  • ಈರುಳ್ಳಿ, ಟೊಮೆಟೊ ಇಲ್ಲದೆ ಗೊಜ್ಜು ಮಾಡೋ ವಿಧಾನ

    ಈರುಳ್ಳಿ, ಟೊಮೆಟೊ ಇಲ್ಲದೆ ಗೊಜ್ಜು ಮಾಡೋ ವಿಧಾನ

    ದೇಶದಲ್ಲಿ ಎರಡನೇ ಲಾಕ್‍ಡೌನ್ ಆರಂಭವಾಗಿದ್ದು, ಎಲ್ಲರೂ ಕಡ್ಡಾಯವಾಗಿ ಮನೆಯಲ್ಲಿರಬೇಕು. ಹೀಗಾಗಿ ಅನೇಕ ಬ್ಯಾಚುರಲ್ಸ್ ತಮ್ಮ ಮನೆಗೆ ಹೋಗಲು ಸಾಧ್ಯವಾಗದೆ ಇರುವಲ್ಲಿಯೇ ಉಳಿದುಕೊಂಡಿರುತ್ತಾರೆ. ಹೊರಗೆ ಹೋಗಿ ಊಟ ಮಾಡೋಣ ಅಂದರೆ ಹೋಟೆಲ್ ತೆರೆದಿರುವುದಿಲ್ಲ. ಇನ್ನೂ ಮನೆಯಲ್ಲಿಯೂ ಯಾವಾಗಲೂ ತರಕಾರಿ ಇರುವುದಿಲ್ಲ. ಹೀಗಾಗಿ ಸಿಂಪಲ್ ಆಗಿ ಈರುಳ್ಳಿ, ಟೊಮೆಟೋ ಇಲ್ಲದೆ ಗೊಜ್ಜು ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಕಡಲೆಬೀಜ (ಶೇಂಗಾ)- 1/2 ಕಪ್
    2. ಬ್ಯಾಡಗಿ ಮೆಣಸಿನಕಾಯಿ- 10 ರಿಂದ 12
    3. ದನಿಯಾ – 1 ಟೀ ಸ್ಪೂನ್
    4. ಮೆಂತೆ ಕಾಳು – 1/2 ಟೀ ಸ್ಪೂನ್
    5. ಬಿಳಿ ಎಳ್ಳು – 1 ಟೀ ಸ್ಪೂನ್
    6. ಕಾಳು ಮೆಣಸು – 8 ರಿಂದ 10
    7. ಹುಣಸೆ ಹಣ್ಣು – 50 ಗ್ರಾಂ
    8. ಎಣ್ಣೆ- ಕರಿಯಲು
    9. ಉದ್ದಿನ ಬೇಳೆ – 1 ಚಮಚ
    10. ಕಡಲೆ ಬೇಳೆ – 1 ಚಮಚ
    11. ಇಂಗು – ಚಿಟಿಕೆ
    12. ಕರಿಬೇವು- 10 ರಿಂದ 12 ದಳ
    13. ಅರಿಶಿಣ- ಚಿಟಿಕೆ
    14. ಉಪ್ಪು – ರುಚಿಗೆ ತಕ್ಕಷ್ಟು
    15. ಅಚ್ಚು ಬೆಲ್ಲದ ಪುಡಿ – 2 ಚಮಚ

    ಮಾಡುವ ವಿಧಾನ
    * ಮೊದಲಿಗೆ ಒಂದು ಬೌಲ್‍ನಲ್ಲಿ ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿಕೊಳ್ಳಿ.
    * ಎರಡನೇಯಾದಾಗಿ ಕಡಲೆ ಬೀಜಗಳನ್ನು ಹುರಿದುಕೊಂಡು, ಸಿಪ್ಪೆಯಿಂದ ಬೇರ್ಪಡಿಸಿ. ಕಾಳನ್ನು ಎರಡು ಎಸಳು ಮಾಡಿಕೊಂಡು ಎತ್ತಿಟ್ಟುಕೊಳ್ಳಿ.
    * ಈಗ ಬ್ಯಾಡಗಿ ಮೆಣಸಿನಕಾಯಿಗಳನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. (ಒಂದು ವೇಳೆ ಬ್ಯಾಡಗಿ ಮೆಣಸಿನಕಾಯಿ ಇರದಿದ್ರೆ ಅಚ್ಚ ಖಾರದ ಪುಡಿ ಬಳಸಬಹುದು)
    * ದನಿಯಾ, ಮೆಂತೆ, ಬಿಳಿ ಎಳ್ಳು, ಕಾಳು ಮೆಣಸು ಎಲ್ಲವನ್ನು ಹುರಿದುಕೊಳ್ಳಬೇಕು. ತುಂಬಾ ಕಪ್ಪು ಆಗದಂತೆ ಕಡಿಮೆ ಉರಿಯಲ್ಲಿ ಫ್ರೈ ಮಾಡಬೇಕು.
    * ಮೆಣಸಿನಕಾಯಿ, ಹುರಿದಿಟ್ಟುಕೊಂಡಿರುವ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ರುಬ್ಬಿಕೊಳ್ಳಿ.


    * ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟುಕೊಂಡು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ನಂತರ ಸ್ಟೌವ್ ಸ್ಲೋ ಮಾಡಿಕೊಂಡು ಉದ್ದಿನಬೇಳೆ, ಕಡಲೆ ಬೇಳೆ, ಇಂಗು, ಕರಿಬೇವು, ಕಡಲೆ ಬೀಜ, ಅರಿಶಿಣ ಹಾಕಿ. ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿದ ನಂತರ ನೆನೆಸಿಟ್ಟಿದ್ದ ಹುಣಸೆ ಹಣ್ಣಿನ ರಸವನ್ನು ಒಗ್ಗರಣೆಗೆ ಹಾಕಿ.
    * ಹುಣಸೆ ರಸ ಹಾಕುತ್ತಿದ್ದಂತೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕಡಿಮೆ ಉರಿಯುಲ್ಲಿ 5-6 ನಿಮಿಷ ಕುದಿಸಿ.
    * ನಂತರ ಪುಡಿ ಮಾಡಿಕೊಂಡಿದ್ದ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
    * ಮಿಶ್ರಣ ಕುದಿಯುತ್ತಿರುವಾಗ ಬೆಲ್ಲದ ಪುಡಿ ಸೇರಿಸಿ 2-3 ನಿಮಿಷ ಕುದಿಸಿದರೆ ಗೊಜ್ಜು ಸಿದ್ಧ.

  • ಮನೆಯಲ್ಲಿಯೇ ಇರಿ – ಬೇಕರಿ ಶೈಲಿಯ ಆಲೂ ಚಿಪ್ಸ್ ಮಾಡಿ ತಿನ್ನಿ

    ಮನೆಯಲ್ಲಿಯೇ ಇರಿ – ಬೇಕರಿ ಶೈಲಿಯ ಆಲೂ ಚಿಪ್ಸ್ ಮಾಡಿ ತಿನ್ನಿ

    ಲಾಕ್‍ಡೌನ್‍ನಿಂದ ಎಲ್ಲರೂ ಮನೆಯಲ್ಲಿದ್ದೀರಿ. ಹೀಗಾಗಿ ಟೈಂ ಪಾಸ್ ಮಾಡುವುದು ತುಂಬಾ ಕಷ್ಟ. ಅದರಲ್ಲೂ ಮಕ್ಕಳು ತಿನ್ನಲು ಏನಾದರೂ ತಿಂಡಿಯನ್ನು ಕೇಳುತ್ತಿರುತ್ತಾರೆ. ಅವರನ್ನು ಹೊರಗೆ ಕರೆದುಕೊಂಡು ಹೋಗುವುದು ಕಷ್ಟ. ಹೀಗಾಗಿ ಮನೆಯಲ್ಲಿ ಆಲೂಗೆಡ್ಡೆ ಇದ್ದೆ ಇರುತ್ತದೆ. ಅದರಲ್ಲಿ ಬೇಕರಿ ಶೈಲಿಯ ಆಲೂ ಚಿಪ್ಸ್ ಮಾಡಿ ಕೊಡಿ. ಆಲೂ ಚಿಪ್ಸ್ ಮಾಡುವ ವಿಧಾನ ನಿಮಗಾಗಿ…

    ಬೇಕಾಗುವ ಸಾಮಗ್ರಿಗಳು
    1. ಆಲೂಗಡ್ಡೆ – 2
    2. ಎಣ್ಣೆ – ಕರಿಯಲು
    3. ಉಪ್ಪು – ರುಚಿಗೆ ತಕ್ಕಷ್ಟು
    4. ಖಾರದ ಪುಡಿ – 1/2 ಚಮಚ

    ಮಾಡುವ ವಿಧಾನ
    * ಮೊದಲಿಗೆ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದುಕೊಳ್ಳಿ.
    * ಮಾರುಕಟ್ಟೆಯಲ್ಲಿ ಚಿಪ್ಸ್ ಮಾಡುವ ವಿವಿಧ ಮಣೆಗಳು ಸಿಗುತ್ತವೆ. ಈ ಮಣೆ ಬಳಸಿ, ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಸ್ಲೈಸ್ ಮಾಡಿಕೊಳ್ಳಿ. ಆಲೂಗಡ್ಡೆ ತೆಳ್ಳಗೆ ಸ್ಲೈಸ್ ಮಾಡಿಕೊಂಡರೆ ಚೆನ್ನಾಗಿರುತ್ತೆ.
    * ಸ್ಲೈಸ್ ಮಾಡಿದ ನಂತರ ಆಲೂಗಡ್ಡೆ ಮೇಲೆ ನೀರಿನ ಅಂಶ ಹೆಚ್ಚಿರುತ್ತೆ. ಹಾಗಾಗಿ ಸ್ಲೈಸ್ ಮಾಡಿ ಆಲೂಗಡ್ಡೆಯ ಪೀಸ್‍ಗಳನ್ನು ಸ್ವಚ್ಛವಾದ ಕಾಟನ್ ಬಟ್ಟೆಯ ಮೇಲೆ ಹಾಕಿ ಒರೆಸಬೇಕು. ಹೀಗೆ ಮಾಡಿದರೆ ಆಲೂಗಡ್ಡೆಯ ಮೇಲಿನ ನೀರಿನ ಅಂಶ ಕಡಿಮೆಯಾಗುತ್ತೆ.
    * ಒಂದು ಪ್ಯಾನ್‍ಗೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸ್ಟೌವ್ ಸ್ಲೋ ಮಾಡಿಕೊಂಡು, ಸ್ಲೈಸ್ ಮಾಡಿದ ಚಿಪ್ಸ್ ಒಂದೊಂದಾಗಿ ಹಾಕಿ ಕರಿಯಿರಿ.
    * ಕರಿದ ಚಿಪ್ಸ್ ಗಳನ್ನು ಸರ್ವಿಂಗ್ ಬೌಲ್‍ಗೆ ಹಾಕಿ. ರುಚಿಗೆ ಬೇಕಾದಷ್ಟು ಉಪ್ಪು ಮತ್ತು ಖಾರ ಬೆರಸಿದರೆ ಬೇಕರಿ ಶೈಲಿಯ ಆಲೂ ಚಿಪ್ಸ್ ರೆಡಿ.

  • ಸಂಡೇ ಸ್ಪೆಷಲ್ – ಬೋಟಿ ಗೊಜ್ಜು ಮಾಡೋ ವಿಧಾನ

    ಸಂಡೇ ಸ್ಪೆಷಲ್ – ಬೋಟಿ ಗೊಜ್ಜು ಮಾಡೋ ವಿಧಾನ

    ಲಾಕ್‍ಡೌನ್‍ನಿಂದ ಎಲ್ಲರೂ ಮನೆಯಲ್ಲಿದ್ದೀರಿ. ಅದರಲ್ಲೂ ಇಂದು ಭಾನುವಾರ ಹೀಗಾಗಿ ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಆದರೆ ಯಾವಾಗಲೂ ಚಿಕನ್ ಬಿರಿಯಾನಿ, ಕಬಾಬ್, ಚಾಪ್ಸ್, ಮಟನ್ ಇದೇ ಅಡುಗೆ ಮಾಡುತ್ತೀರ. ಈಗ ತುಂಬಾ ಸಮಯವಿದೆ. ಇತ್ತ ಸರ್ಕಾರ ಮಟನ್, ಚಿಕನ್ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಬೋಟಿ ತೆಗೆದುಕೊಂಡು ಬನ್ನಿ. ಸುಲಭವಾಗಿ ಬೋಟಿ ಗೊಜ್ಜು ಮಾಡುವ ವಿಧಾನ ಇಲ್ಲದೆ…

    ಬೇಕಾಗುವ ಸಾಮಾಗ್ರಿಗಳು
    1. ಬೋಟಿ – 1 ಸೆಟ್
    2. ಕಡಲೆಕಾಳು – 100 ಗ್ರಾಂ
    3. ಕಾಯಿ ತುರಿ – 1/2 ಬಟ್ಟಲು
    4. ಈರುಳ್ಳಿ – 2
    5. ಟೊಮೆಟೊ – 1 ಮೀಡಿಯಂ
    6. ಶುಂಠಿ – ಅರ್ಧ ಇಂಚು
    7. ಬೆಳ್ಳುಳ್ಳಿ – 7-8 ಎಸಳು
    8. ದನಿಯಾ ಪುಡಿ – 1 ಚಮಚ
    9. ಚಕ್ಕೆ, ಲವಂಗ – 3-4
    10. ಕೆಂಪು ಒಣಮೆಣಸಿನಕಾಯಿ – 5-6
    11. ಕೊತ್ತಂಬರಿ ಸೊಪ್ಪು – ಸ್ವಲ್ಪ
    12. ಹುರಿಗಡಲೆ – 3 ಚಮಚ
    13. ಎಣ್ಣೆ – 3-4 ಚಮಚ
    14. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಕಡಲೆಕಾಳನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಯಲು ಬಿಡಿ.
    * ಮಾಂಸದಂಗಡಿಯಿಂದ ತಂದ ಬೋಟಿಯನ್ನು ಚೆನ್ನಾಗಿ ಬಿಸಿನೀರು, ಸುಣ್ಣವನ್ನು ಸೇರಿಸಿ ಸ್ವಚ್ಛ ಮಾಡಿಕೊಳ್ಳಿ.
    * ಬಳಿಕ ಬೋಟಿಯನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮತ್ತೆ ಚೆನ್ನಾಗಿ ಬಿಸಿ ನೀರಿನಲ್ಲಿ ತೊಳೆದು ನೀರಿಲ್ಲದಂತೆ ಹಿಂಡಿ.
    * ಈಗ ಒಂದು ಪ್ಯಾನ್‍ಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ ಲವಂಗ, ಕೆಂಪು ಒಣಮೆಣಸಿನಕಾಯಿ ಎಲ್ಲಾವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
    * ಈಗ ಮಿಕ್ಸಿ ಜಾರ್‌ಗೆ ಕಾಯಿತುರಿ, ಟೊಮೆಟೋ, ಹುರಿಗಡಲೆ, ಫ್ರೈ ಮಾಡಿದ್ದ ಮಿಶ್ರಣ, ದನಿಯಾ ಪುಡಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
    * ಅಗತ್ಯ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
    * ಈಗ ಒಂದು ಅಗಲವಾದ ಪಾತ್ರೆಯನ್ನು ಸ್ಟೌ ಮೇಲಿಟ್ಟು ನೀರನ್ನು ಬಿಸಿಗಿಡಿ.
    * ನೀರು ಕುದಿ ಬಂದ ಮೇಲೆ ನೆನೆಸಿದ್ದ ಕಡಲೆಕಾಳನ್ನು ತೊಳೆದು ಹಾಕಿ.


    * 5 ನಿಮಿಷ ಬಳಿಕ ತೊಳೆದು ಸಣ್ಣಗೆ ಹೆಚ್ಚಿದ್ದ ಬೋಟಿಯನ್ನು ಸೇರಿಸಿ. ಕುದಿಸಿ.
    * 5-10 ನಿಮಿಷಗಳ ಕಾಲ ಕಾಳು, ಬೋಟಿ ಬೆಂದ ಮೇಲೆ ಅದಕ್ಕೆ ರುಬ್ಬಿದ ಖಾರದ ಮಿಶ್ರಣ, ಉಪ್ಪು ಸೇರಿಸಿ.
    * ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ ಕಾಯಿ ಚೂರುಗಳನ್ನು ಸೇರಿಸಿ.
    * 15-20 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ.
    * ಗೊಜ್ಜನ್ನು ಆರಿದ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಒಮ್ಮೆ ತಿರುಗಿಸಿ ತಟ್ಟೆ ಮುಚ್ಚಿ. (ಗೊಜ್ಜಿಗೆ ನಿಂಬೆಹಣ್ಣಿನ ರಸವನ್ನು ಸಹ ಹಿಂಡಬಹುದು)

  • ಅವಲಕ್ಕಿಯಿಂದ ಹೊಸ ತಿಂಡಿ ಮಾಡೋ ವಿಧಾನ

    ಅವಲಕ್ಕಿಯಿಂದ ಹೊಸ ತಿಂಡಿ ಮಾಡೋ ವಿಧಾನ

    ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ದಿನಪೂರ್ತಿ ಮನೆಯಲ್ಲಿಯೇ ಇರಬೇಕು. ಬೇಸರವಾದಾಗ ಹೊರಗೆ ಹೋಗಿ ಏನಾದರೂ ತಿಂದುಕೊಂಡು ಬರೋಣ ಎಂದರೂ ಆಗುವುದಿಲ್ಲ. ಆದ್ದರಿಂದ ನಿಮಗಾಗಿ ಅವಲಕ್ಕಿಯಿಂದ ಹೊಸ ರೀತಿಯ ತಿಂಡಿ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ದಪ್ಪ ಅವಲಕ್ಕಿ – 3 ಕಪ್
    2. ಚಿರೋಟಿ ರವೆ- 1 ಕಪ್ (ಚಿರೋಟಿ ರವೆ ಬದಲಾಗಿ ಅಕ್ಕಿ ರವೆ ಸಹ ಬಳಸಬಹುದು)
    3. ಮೊಸರು – 1/4 ಕಪ್
    4. ಖಾರದ ಪುಡಿ – 1/2 ಚಮಚ
    5. ಗರಂ ಮಸಾಲ- 1/2 ಚಮಚ
    6. ಜೀರಿಗೆ ಪೌಡರ್ – ಸ್ಪಲ್ಪ
    7. ಮೆಣಸಿನಕಾಯಿ – ಎರಡು
    8. ಈರುಳ್ಳಿ – 1
    9. ಕೋತಂಬರಿ ಸೊಪ್ಪು – ಸ್ವಲ್ಪ
    10. ಅರಿಶಿಣ – ಚಿಟಿಕೆ
    11. ಆಲೂಗಡ್ಡೆ – 1
    12. ಎಣ್ಣೆ
    13. ಉಪ್ಪು – ರುಚಿಗೆ ತಕ್ಕಷ್ಟು
    14. ನಿಂಬೆ ಹಣ್ಣು – 1

    ಮಾಡುವ ವಿಧಾನ
    * ಮೊದಲಿಗೆ ಅವಲಕ್ಕಿಯನ್ನು ನೀರಿನಲ್ಲಿ 5 ನಿಮಿಷ ನೆನೆಯಲು ಬಿಡಬೇಕು. ನಂತರ ಅವಲಕ್ಕಿಯಲ್ಲಿ ನೀರು ಹೋಗುವಂತೆ ಹಿಂಡಿ ಮಿಕ್ಸಿಂಗ್ ಬೌಲ್‍ಗೆ ಹಾಕಿಕೊಳ್ಳಿ.
    * ಎರಡು ಮೆಣಸಿನಕಾಯಿ, ಈರುಳ್ಳಿ ಮತ್ತು ಕೋತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
    * ಈ ಮಿಕ್ಸಿಂಗ್ ಬೌಲ್‍ಗೆ 1 ಕಪ್ ಚಿರೋಟಿ ರವೆ, ಮೊಸರು, ಖಾರದ ಪುಡಿ, ಉಪ್ಪು, ಗರಂ ಮಸಾಲ, ಉಪ್ಪು, ಜೀರಿಗೆ ಪೌಡರ್, ಅರಿಶಿಣ ಮತ್ತು ಕತ್ತರಿಸಿಕೊಂಡಿದ್ದ ತರಕಾರಿಯನ್ನು ಸೇರಿಸಿ.
    * ಈ ಮಿಶ್ರಣಕ್ಕೆ ಬೇಯಿಸಿದ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. (ಚಪಾತಿ ಹಿಟ್ಟಿನ ಹದಕ್ಕೆ ಬರುವ ರೀತಿಯಲ್ಲಿ ಇರಬೇಕು)
    * ಸಿದ್ಧಗೊಂಡ ಮಿಶ್ರಣಕ್ಕೆ ನಿಂಬೆ ಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ, 10 ನಿಮಿಷ ನೆನೆಯಲು ಬಿಡಿ.
    * ಈಗ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ.


    * ಸ್ಟೌವ್ ಮೇಲೆ ತವೆ ಇಟ್ಟು, ಬಿಸಿಯಾದ ಮೇಲೆ ಎಣ್ಣೆ ಸವರಿ. ಈಗ ತಯಾರಿಸಿದ ಉಂಡೆಗಳನ್ನು ತವ ಮೇಲಿಟ್ಟು ಚಮಚದಿಂದ ನಯವಾಗಿ ಒತ್ತಬೇಕು. ಹೀಗೆ ಒತ್ತುತ್ತಾ ಎರಡು ಬದಿ ಚೆನ್ನಾಗಿ ಬೇಯಿಸಿದರೆ ಅವಲಕ್ಕಿಯ ಹೊಸ ತಿಂಡಿ ಸವಿಯಲು ರೆಡಿ.
    * ಇದನ್ನು ಕೊಬ್ಬರಿ ಚಟ್ನಿ ಅಥವಾ ತುಪ್ಪ ಅಥವಾ ಮೊಸರು ಜೊತೆ ತಿಂದರೆ ರುಚಿಯಾಗಿರುತ್ತೆ. (ಮಿಶ್ರಣ ತಯಾರಿಸುವಾಗ ಬೇಕಾದಲ್ಲಿ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಬಳಸಬಹುದು)

  • ಅಕ್ಕಿ ಹಿಟ್ಟಿನಿಂದ ಮಸಾಲ ಚಿಪ್ಸ್ ಮಾಡೋ ವಿಧಾನ

    ಅಕ್ಕಿ ಹಿಟ್ಟಿನಿಂದ ಮಸಾಲ ಚಿಪ್ಸ್ ಮಾಡೋ ವಿಧಾನ

    ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿರುವುದರಿಂದ ಯಾವಾಗಲೂ ತಿಂಡಿ ತಿನ್ನಬೇಕು ಎನ್ನಿಸುತ್ತದೆ. ಚಿಪ್ಸ್, ಪಾನಿಪುರಿ, ಮಸಾಲ ಪುರಿ ಸೇರಿದಂತೆ ಸ್ನ್ಯಾಕ್ಸ್ ತಿನ್ನಲು ಹೊರಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಅಕ್ಕಿ ಹಿಟ್ಟಿನಿಂದ ಮಸಾಲ ಚಿಪ್ಸ್ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಅಕ್ಕಿ ಹಿಟ್ಟು – ಒಂದು ಕಪ್
    2. ಜೀರಿಗೆ – 1/2 ಟೀ ಸ್ಪೂನ್
    3. ಅಜ್ವಾನ – 1/2 ಟೀ ಸ್ಪೂನ್
    4. ಇಂಗು – ಚಿಟಿಕೆ
    5. ಉಪ್ಪು – ರುಚಿಗೆ ತಕ್ಕಷ್ಟು
    6. ತುಪ್ಪ – 1/2 ಟೀ ಸ್ಪೂನ್
    7. ಎಣ್ಣೆ – ಕರಿಯಲು
    8. ನೀರು

    ಮಾಡುವ ವಿಧಾನ
    * ಸ್ಟೌವ್ ಮೇಲೆ ಒಂದು ಪ್ಯಾನ್ ಇಟ್ಟು, ಅರ್ಧ ಗ್ಲಾಸ್ ನೀರು ಹಾಕಿಕೊಳ್ಳಬೇಕು.
    * ನೀರು ಬಿಸಿ ಆಗುತ್ತಿದ್ದಂತೆ ಜೀರಿಗೆ, ಅಜ್ವಾನ, ಇಂಗು ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ತುಪ್ಪ ಹಾಕಿ ಮಿಕ್ಸ್ ಮಾಡಿ 2 ನಿಮಿಷ ಕುದಿಸಿ.
    * ಮಿಶ್ರಣ ಕುದಿಯುತ್ತಿರುವಾಗ ಸ್ಟೌವ್ ಕಡಿಮೆ ಮಾಡಿಕೊಂಡು ಅಕ್ಕಿ ಹಿಟ್ಟು ಹಾಕಿಕೊಳ್ಳಿ.
    * ಸ್ಟೌವ್ ಕಡಿಮೆ ಮಾಡಿಕೊಂಡು ಮಿಶ್ರಣದ ಜೊತೆ ಅಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಬೇಕು. ನೀರಿನ ಅಂಶ ಕಡಿಮೆ ಆಗುತ್ತಿದ್ದಂತೆ ಸ್ಟೌವ್ ಆಫ್ ಮಾಡಿ. ಪ್ಯಾನ್ ಮುಚ್ಚಳ ಮುಚ್ಚಿ ಐದು ನಿಮಿಷ ಬಿಡಿ.
    * ಮಿಶ್ರಣ ತಣ್ಣದಾಗದ ಕೂಡಲೇ ಚಪಾತಿ ಹಿಟ್ಟಿನ ಹದಕ್ಕೆ ನಯವಾಗಿ ಕಲಿಸಿಕೊಳ್ಳಿ.
    * ಮತ್ತೊಂದು ಕಡೆ ಸ್ಟೌವ್ ಮೇಲೆ ಪ್ಯಾನ್ ಇರಿಸಿ, ಚಿಪ್ಸ್ ಕರಿಯಲು ಎಣ್ಣೆ ಹಾಕಿ ಕಾಯಲು ಬಿಡಿ.
    * ಮಿಶ್ರಣವನ್ನು ಚೆನ್ನಾಗಿ ಚಪಾತಿ ರೀತಿಯಲ್ಲಿ ಮಾಡಿಕೊಳ್ಳಿ.
    * ಚಪಾತಿಯನ್ನು ನಿಮಗೆ ಬೇಕಾದ ಆಕಾರ (ತ್ರಿಕೋನ/ಡೈಮಂಡ್/ಚೌಕ)ದಲ್ಲಿ ಕತ್ತರಿಸಿಕೊಳ್ಳಿ.
    * ಈಗ ಕಾದ ಎಣ್ಣೆಗೆ ಕತ್ತರಿಸಿದ ಪೀಸ್‍ಗಳನ್ನು ಹಾಕಿ, ಕರೆಯಿರಿ.
    * ಗೋಲ್ಡನ್ ಬ್ರೌನ್ ಬಂದ ಮೇಲೆ ಕರೆದು ಪ್ಲೇಟ್‍ನಲ್ಲಿ ಹಾಕಿ ಸರ್ವ್ ಮಾಡಿ.
    * ಸರ್ವ್ ಮಾಡುವ ಮುನ್ನ ರೆಡಿಯಾದ ಚಿಪ್ಸ್ ಮೇಲೆ ಖಾರದ ಪುಡಿ, ಚಾಟ್ ಮಸಾಲ ಹಾಕಿದರೆ ತಿನ್ನಲು ಸ್ಪೈಸಿಯಾಗಿರುತ್ತೆ.