Tag: recipe

  • ರಂಜಾನ್ ಸ್ಪೆಷಲ್ – ಚಿಕನ್ ಬಿರಿಯಾನಿ ಮಾಡೋ ವಿಧಾನ

    ರಂಜಾನ್ ಸ್ಪೆಷಲ್ – ಚಿಕನ್ ಬಿರಿಯಾನಿ ಮಾಡೋ ವಿಧಾನ

    ಸೋಮವಾರ ರಂಜಾನ್ ಹಬ್ಬ ಇದೆ. ಸಾಮಾನ್ಯವಾಗಿ ಮುಸ್ಲಿಂ ಬಾಂಧವರ ಮನೆಯಲ್ಲಿ ಬಿರಿಯಾನಿ ಮಾಡೋದು ಫಿಕ್ಸ್. ಕೆಲವರು ಹಬ್ಬಕ್ಕಾಗಿ ಸ್ಪೆಷಲ್ ಬಿರಿಯಾನಿಯ ಮೊರೆ ಹೋಗುತ್ತಾರೆ. ನಿಮಗಾಗಿ ರುಚಿಯಾದ ಚಿಕನ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು
    1. ಅಕ್ಕಿ – 1/2 ಕೆ.ಜಿ
    2. ಚಿಕನ್ – 1/2 ಕೆ.ಜಿ
    3. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    4. ಎಣ್ಣೆ – 5 ಚಮಚ
    5. ಚಕ್ಕೆ – 3-4
    6. ಲವಂಗ- 10
    7. ಏಲಕ್ಕಿ – 5
    8. ಮರಾಠಿ ಮೊಗ್ಗು – 4
    9. ತುಪ್ಪ- 2 ಚಮಚ
    10. ಗರಂ ಮಸಾಲ – 2 ಚಮಚ

    11. ಖಾರದ ಪುಡಿ – 1 ಚಮಚ
    12. ಅರಿಶಿಣ – 1/2 ಚಮಚ
    13. ದನಿಯಾ ಪುಡಿ – 1 ಚಮಚ
    14. ಈರುಳ್ಳಿ – 2
    15. ಮೊಸರು – ಅರ್ಧ ಕಪ್
    16. ಟೊಮೆಟೊ – 4
    17. ಕೊತ್ತಂಬರಿ ಸೊಪ್ಪು, ಪುದಿನ – ಸ್ವಲ್ಪ
    18. ಉಪ್ಪು – ರುಚಿಗೆ ತಕ್ಕಷ್ಟು
    19. ಹಸಿರು ಮೆಣಸಿನ ಕಾಯಿ – 8

    ಮಾಡುವ ವಿಧಾನ
    * ಮೊದಲಿಗೆ ಸ್ಟೌವ್ ಮೇಲೆ ಕುಕ್ಕರ್ ಇಟ್ಟು ಎಣ್ಣೆ ಮತ್ತು ತುಪ್ಪ ಹಾಕಿ. ಬಿಸಿಯಾಗುತ್ತಿದ್ದಂತೆ ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ನಂತರ ಈರುಳ್ಳಿ, ಹಸಿರು ಮೆಣಸಿಕಾಯಿ ಹಾಕಿ ಫ್ರೈ ಮಾಡಿ
    * ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿ
    * ಬಳಿಕ ಖಾದರ ಪುಡಿ, ಅರಿಶಿಣ, ಟೊಮೆಟೊ ಹಾಕಿ ಚೆನ್ನಾಗಿ ಮೇಯಿಸಿ.
    * ಈಗ ತೊಳೆದ ಚಿಕನ್, ಮೊಸರು, ಕೊತ್ತಂಬರಿ, ಪುದಿನ ಸೊಪ್ಪು ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ.
    * ದನಿಯಾ ಪುಡಿ, ಗರಂ ಮಸಲಾ ಹಾಕಿ ಪ್ಲೇಟ್ ಮುಚ್ಚಿ 15 ನಿಮಿಷ ಚೆನ್ನಾಗಿ ಬೇಯಿಸಿ. (ಕಡಿಮೆ ಉರಿಯಲ್ಲಿ ಬೇಯಿಸಿ)
    * ಈಗ ನಾಲ್ಕು ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ, ನೀರು ಕುದಿಯುತ್ತಿದ್ದಂತೆ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಿ.
    * ನಂತರ ಕುಕ್ಕರ್ 2 ವಿಶಲ್ ಬಂದರೆ ಚಿಕನ್ ಬಿರಿಯಾನಿ ಸವಿಯಲು ರೆಡಿ

  • ದಿಢೀರನೇ ಎಗ್ ಮಲೈ ಕರ್ರಿ ಮಾಡೋ ವಿಧಾನ

    ದಿಢೀರನೇ ಎಗ್ ಮಲೈ ಕರ್ರಿ ಮಾಡೋ ವಿಧಾನ

    ಕೊರೊನಾದಿಂದ ಮೂರನೇ ಬಾರಿ ಲಾಕ್‍ಡೌನ್ ಆಗಿದ್ದು, ಎಲ್ಲರೂ ಮನೆಯಲ್ಲಿದ್ದೀರಿ. ಅದರಲ್ಲೂ ಇಂದು ಭಾನುವಾರ ಹೀಗಾಗಿ ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಚಿಕನ್ ಬಿರಿಯಾನಿ, ಕಬಾಬ್, ಮಟನ್ ಯಾವುದೇ ಇರಲಿ ಜೊತೆಗೆ ಗರಂಗರಂ ಆದ ಎಗ್ ಕರ್ರಿ ಮಾಡಿ. ದಿಢೀರನೇ ಎಗ್ ಮಲೈ ಕರ್ರಿ ಮಾಡುವ ವಿಧಾನ ಇಲ್ಲಿದೆ…..

    ಬೇಕಾಗುವ ಸಾಮಗ್ರಿಗಳು
    1. ಮೊಟ್ಟೆ – 4
    2. ಹಾಲು – ಒಂದೂವರೆ ಕಪ್
    3. ತುಪ್ಪ – 1 ಟೀ ಸ್ಪೂನ್
    4. ಈರುಳ್ಳಿ – 2
    5. ಹಸಿ ಮೆಣಸಿನಕಾಯಿ- 2 ರಿಂದ 3
    6. ಬೆಳ್ಳುಳ್ಳಿ – 4 ರಿಂದ 5


    7. ಹಸಿ ಶುಂಠಿ – 1 ಇಂಚು
    8. ಜೀರಿಗೆ ಪೌಡರ್ – 1 ಟೀ ಸ್ಪೂನ್
    9. ದನಿಯಾ ಪೌಡರ್ – 1/2 ಟೀ ಸ್ಪೂನ್
    10. ಪೆಪ್ಪರ್ – 1/2 ಟೀ ಸ್ಪೂನ್
    11. ಗರಂ ಮಸಾಲ – 1/2 ಟೀ ಸ್ಪೂನ್
    12. ಅರಿಶಿಣ – ಚಿಟಿಕೆ
    13. ಉಪ್ಪು – ರುಚಿಗೆ ತಕ್ಕಷ್ಟು
    14. ಕೋತ್ತಂಬರಿ ಸೊಪ್ಪು
    15. ಎಣ್ಣೆ

    ಮಾಡುವ ವಿಧಾನ
    * ಮೊದಲಿಗೆ ನಾಲ್ಕು ಮೊಟ್ಟೆಗಳನ್ನು ಕುದಿಸಿ, ಎರಡು ಭಾಗಗಳಾಗಿ ಪೀಸ್ ಮಾಡಿಟ್ಟುಕೊಳ್ಳಿ.
    * ಮಿಕ್ಸಿ ಜಾರಿಗೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ ನೀರು ಹಾಕದೆ ರುಬ್ಬಿಕೊಳ್ಳಿ.
    * ಒಂದು ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗ್ತಿದ್ದಂತೆ ರುಬ್ಬಿಕೊಂಡಿರುವ ಮಿಶ್ರಣ ಸೇರಿಸಿ ಎರಡರಿಂದ ಮೂರು ನಿಮಿಷ ಫ್ರೈ ಮಾಡಿ.
    * ಫ್ರೈ ಮಾಡಿದ ಮಿಶ್ರಣಕ್ಕೆ ಜೀರಿಗೆ ಪೌಡರ್, ದನಿಯಾ ಪಡಿ, ಪೆಪ್ಪರ್, ಗರಂ ಮಸಾಲ ಮತ್ತು ಎರಡರಿಂದ ಮೂರು ಟೀ ಸ್ಪೂನ್ ನೀರು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.


    * ಮಸಾಲಾ ಫ್ರೈ ಆಗ್ತಿದ್ದಂತೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿದ ನಂತರ ಒಂದೂವರೆ ಕಪ್ ಹಾಲು ಹಾಕಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ.
    * ಎರಡು ನಿಮಿಷದ ಬಳಿಕ ಮೊಟ್ಟೆಯ ಪೀಸ್‍ಗಳನ್ನು ಒಂದೊಂದಾಗಿ ಸೇರಿಸಿ ಮತ್ತೆ ಕುದಿಸಿ. ಎರಡು ನಿಮಿಷದ ಬಳಿಕ ಮೊಟ್ಟೆಯನ್ನು ಉಲ್ಟ್ ಮಾಡಿಕೊಂಡು ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ. ಕೊನೆಗೆ ಒಂದು ಟೀ ಸ್ಪೂನ್ ತುಪ್ಪ ಹಾಕಿದ್ರೆ ಘಮ ಘಮಿಸುವ ಎಗ್ ಮಲೈ ಕರ್ರಿ ರೆಡಿ.

  • ರಂಜಾನ್ ಡ್ರಿಂಕ್ಸ್ – ಬಿಸಿಲಿನಲ್ಲಿ ತಂಪಾಗಿಸುವ ಕುಲ್ಕಿ ಶರಬತ್

    ರಂಜಾನ್ ಡ್ರಿಂಕ್ಸ್ – ಬಿಸಿಲಿನಲ್ಲಿ ತಂಪಾಗಿಸುವ ಕುಲ್ಕಿ ಶರಬತ್

    ರ್ಷಕ್ಕೊಮ್ಮೆ ಬರುವ ರಂಜಾನ್ ಮುಸ್ಲಿಮರಿಗೆ ಅತ್ಯಂತ ಪವಿತ್ರ ಹಬ್ಬ. ಈ ಹಬ್ಬದ ಪ್ರಯುಕ್ತ ಒಂದು ತಿಂಗಳು ಕಠಿಣ ಉಪವಾಸ ಇರುತ್ತಾರೆ. ಪ್ರತಿದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಹೀಗಾಗಿ ಸೂರ್ಯಾಸ್ತವಾದ ನಂತರ ಬಿಸಿಲಿನಿಂದ ತಂಪಾಗುವ ಪಾನೀಯವನ್ನು ಕುಡಿಯಿರಿ. ನಿಮಗಾಗಿ ಕುಲ್ಕಿ ಶರಬತ್ ಮಾಡುವ ವಿಧಾನ ಇಲ್ಲದೆ….

    ಬೇಕಾಗುವ ಸಾಮಗ್ರಿಗಳು
    1. ನಿಂಬೆ ಹಣ್ಣು – 1
    2. ಉಪ್ಪು – ರುಚಿಗೆ ತಕ್ಕಷ್ಟು
    3. ಹಸಿ ಮೆಣಸಿನಕಾಯಿ
    4. ಐಸ್ ಕ್ಯೂಬ್

    ಮಾಡುವ ವಿಧಾನ
    * ಒಂದು ಗ್ಲಾಸ್ ನಲ್ಲಿ ಅರ್ಧದಷ್ಟು ನೀರು ಹಾಕಿ.
    * ಈಗ ನಿಂಬೆ ರಸ, ಐಸ್ ಕ್ಯೂಬ್ ಮತ್ತು ಉದ್ದಕ್ಕೆ ಸೀಳಿರುವ ಹಸಿ ಮೆಣಸಿನಕಾಯಿ ಹಾಕಿ.
    * ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತೊಂದು ದೊಡ್ಡ ಗ್ಲಾಸ್ ನಿಂದ ಜ್ಯೂಸ್ ಗ್ಲಾಸ್ ಮುಚ್ಚಿ ಮೇಲಿಂದ ಕೆಳಕ್ಕೆ ಚೆನ್ನಾಗಿ ಕಲಕಿದ್ರೆ ಕೂಲ್ ಕೂಲ್ ಕುಲ್ಕಿ ಶರಬತ್ ರೆಡಿ.

  • ಚಟಾಪಟ್ ಅಂತ ಮಾಡಿ ಕ್ರಿಸ್ಪಿ ಆಲೂ ವಡೆ

    ಚಟಾಪಟ್ ಅಂತ ಮಾಡಿ ಕ್ರಿಸ್ಪಿ ಆಲೂ ವಡೆ

    ಕೊರೊನಾ ಲಾಕ್‍ಡೌನ್‍ನಿಂದ ಎಲ್ಲರೂ ಮನೆಯಲ್ಲಿದ್ದೀರಿ, ಸಂಜೆಯಾದರೆ ಸಾಕು ಮಕ್ಕಳು ರುಚಿಯಾದ ಸ್ನ್ಯಾಕ್ಸ್ ತಿನ್ನಲೂ ಸ್ನ್ಯಾಕ್ಸ್ ಕೇಳುತ್ತಿರುತ್ತಾರೆ. ಆದ್ದರಿಂದ ಮನೆಯಲ್ಲಿಯೇ ಇದ್ದು ರುಚಿಯಾದ ಕ್ರಿಸ್ಪಿ ಆಲೂ ವಡೆ ಮಾಡಿಕೊಡಿ. ನಿಮಗಾಗಿ ಕ್ರಿಸ್ಪಿ ಆಲೂ ವಡೆ ಮಾಡುವ ವಿಧಾನ ಇಲ್ಲಿದೆ?.

    ಬೇಕಾಗುವ ಸಾಮಗ್ರಿಗಳು
    1. ಸಣ್ಣ ರವೆ – 1 ಕಪ್
    2. ಆಲೂಗಡ್ಡೆ – 1
    3. ಅಕ್ಕಿ ಹಿಟ್ಟು – 2 ಟೀ ಸ್ಪೂನ್
    4. ಜೀರಿಗೆ – 1 ಟೀ ಸ್ಪೂನ್
    5. ಖಾರದ ಪುಡಿ- 1 ಟೀ ಸ್ಪೂನ್
    6. ಉಪ್ಪು -ರುಚಿಗೆ ತಕ್ಕಷ್ಟು
    7. ಕೊತ್ತಂಬರಿ ಸೊಪ್ಪು
    8. ಎಣ್ಣೆ

    ಮಾಡುವ ವಿಧಾನ
    * ಮೊದಲಿಗೆ ಸ್ಟೌವ್ ಮೇಲೆ ಪ್ಯಾನ್ ಇಟ್ಟುಕೊಂಡು ಒಂದೂವರೆ ಕಪ್ ನೀರು ಹಾಕಿ. ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಬಿಸಿ ಮಾಡಿ. ನೀರು ಕುದಿಯುತ್ತಿದ್ದಂತೆ ರವೆ ಸೇರಿಸಿ ಚೆನ್ನಾಗಿ ಬೇಯಿಸಿ ತಣ್ಣಗಾಗಲು ಬಿಡಿ.
    * ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ.
    * ಸ್ಮ್ಯಾಶ್ ಮಾಡಿದ ಆಲೂಗಡ್ಡೆ ಮತ್ತು ಬೇಯಸಿದ ರವೆ ಒಂದು ಮಿಕ್ಸಿಂಗ್ ಬೌಲ್‍ಗೆ ಹಾಕಿಕೊಂಡು ಅಕ್ಕಿ ಹಿಟ್ಟು, ಜೀರಿಗೆ, ಖಾರದ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಿಮ್ಮ ಮಿಶ್ರಣ ಚಪಾತಿ ಮಾಡಿಕೊಳ್ಳುವ ಹಿಟ್ಟಿನ ಹದಕ್ಕೆ ಬರಬೇಕು.
    * ರೆಡಿಯಾದ ಮಿಶ್ರಣದಿಂದ ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದುಕೊಂಡು ರೌಂಡ್ ಶೇಪ್‍ನಲ್ಲಿ ರೋಲ್ ಮಾಡಿಟ್ಟುಕೊಳ್ಳಿ.
    * ಮತ್ತೊಂದು ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು ವಡೆ ಕರಿಯಲು ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.
    * ಎಣ್ಣೆ ಬಿಸಿಯಾಗ್ತಿದ್ದಂತೆ ಸ್ಟೌವ್ ಸ್ಲೋ ಮಾಡಿಕೊಂಡು ರೌಂಡ್ ಶೇಪ್ ಮಾಡಿಕೊಂಡಿದ್ದ ವಡೆಯನ್ನ ಹಾಕಿ ಗೋಲ್ಡನ್ ಕಲರ್ ಬರೋವರೆಗೂ ಫ್ರೈ ಮಾಡಿದ್ರೆ ಕ್ರಿಸ್ಪಿ ಆಲೂ ವಡೆ ರೆಡಿ.

  • ಆಲೂಗೆಡ್ಡೆ, ಗೋಧಿ ಹಿಟ್ಟಿನಿಂದ ಮಾಡಿ ರುಚಿಕರವಾದ ತಿಂಡಿ

    ಆಲೂಗೆಡ್ಡೆ, ಗೋಧಿ ಹಿಟ್ಟಿನಿಂದ ಮಾಡಿ ರುಚಿಕರವಾದ ತಿಂಡಿ

    ಕ್ಕಳು ಮನೆಯಲ್ಲಿರುವುದರಿಂದ ತಿನ್ನಲು ಏನಾದರೂ ಕೇಳುತ್ತಿರುತ್ತಾರೆ. ಮನೆಯಲ್ಲಿ ಆಲೂಗೆಡ್ಡೆ ಇದ್ದೆ ಇರುತ್ತದೆ. ಹೀಗಾಗಿ ರುಚಿಯಾದ ಆಲೂಗೆಡ್ಡೆ ಮತ್ತು ಗೋಧಿ ಹಿಟ್ಟಿನಿಂದ ಸ್ನ್ಯಾಕ್ಸ್ ಮಾಡಿ ಕೊಡಿ. ನಿಮಗಾಗಿ ಆಲೂಗೆಡ್ಡೆ, ಗೋಧಿ ಹಿಟ್ಟಿನಿಂದ ಮಾಡುವ ತಿಂಡಿಯ ವಿಧಾನ…

    ಬೇಕಾಗುವ ಸಾಮಗ್ರಿಗಳು
    1. ಆಲೂಗಡ್ಡೆ – 2
    2. ಗೋಧಿ ಹಿಟ್ಟು – 1 ಕಪ್
    3. ಜೀರಿಗೆ – 1 ಚಮಚ
    4. ಹಸಿಮೆಣಸಿನಕಾಯಿ – 2
    5. ಖಾರದ ಪುಡಿ – 1 ಟೀ ಸ್ಪೂನ್
    6. ಕೋತ್ತಂಬರಿ ಸೊಪ್ಪು
    7. ಎಣ್ಣೆ
    8. ಅರಿಶಿಣ -ಚಿಟಿಕೆ
    9. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಆಲೂಗಡ್ಡೆಯ ಸಿಪ್ಪೆ ತೆಗೆದು ತೊಳೆದು ತುರಿದುಕೊಳ್ಳಿ. ತುರಿದುಕೊಂಡಿದ್ದ ಆಲೂಗಡ್ಡೆಯನ್ನು ಮತ್ತೊಮ್ಮೆ ತೊಳೆದು ಜರಡಿಯಲ್ಲಿ ಎತ್ತಿಟ್ಟುಕೊಳ್ಳಿ. ಆಲೂಗಡ್ಡೆಯ ನೀರಿನಂಶ ಕಡಿಮೆ ಆಗಬೇಕು.
    * ಆಲೂಗಡ್ಡೆಯ ನೀರಿನಂಶ ಕಡಿಮೆಯಾದ ನಂತರ ಮಿಕ್ಸಿಂಗ್ ಬೌಲ್‍ಗೆ ಹಾಕಿಕೊಳ್ಳಿ. ಈಗ ಬೌಲ್‍ಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಕೋತ್ತಂಬರಿ ಸೊಪ್ಪು, ಜೀರಿಗೆ, ಅರಿಶಿಣ, ಉಪ್ಪು ಸೇರಿಸಿ ಎಲ್ಲವನ್ನು ಮಿಕ್ಸ್ ಮಾಡಿಕೊಳ್ಳಿ.
    * ಈಗ ಮಿಶ್ರಣಕ್ಕೆ ಗೋಧಿ ಹಿಟ್ಟು ಹಾಕಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಸ್ಟೌವ್ ಮೇಲೆ ಪಡ್ಡು ಮಡೋ ಮಣೆಯನ್ನು ಇಟ್ಟುಕೊಂಡು ಎಲ್ಲ ಅಚ್ಚುಗಳಿಗೆ ಎಣ್ಣೆ ಹಾಕಿ.
    * ಎಣ್ಣೆ ಬಿಸಿಯಾಗ್ತಿದ್ದಂತೆ ರೆಡಿಯಾದ ಮಿಶ್ರಣವನ್ನು ಎಲ್ಲ ಅಚ್ಚುಗಳಿಗೆ ಹಾಕಿ ಎರಡು ಕಡೆ ಬೇಯಿಸಿಕೊಂಡ್ರೆ ರುಚಿಕರವಾದ ಆಲೂಗೆಡ್ಡೆ ಸ್ನ್ಯಾಕ್ಸ್  ಸವಿಯಲು ಸಿದ್ಧ.

  • ಅನ್ನ ಉಳಿದಿದೆಯಾ? ಹೀಗೆ ರುಚಿಕರವಾದ ದೋಸೆ ಮಾಡಿ

    ಅನ್ನ ಉಳಿದಿದೆಯಾ? ಹೀಗೆ ರುಚಿಕರವಾದ ದೋಸೆ ಮಾಡಿ

    ಲಾಕ್‍ಡೌನ್ ಸಡಿಲಿಕೆ ಬಳಿಕ ಬಹುತೇಕರಿಗೆ ಕೆಲಸಕ್ಕೆ ಹೋಗುವ ತವಕ ಮತ್ತು ಸಂಜೆ ಬೇಗ ಮನೆ ಸೇರಿಕೊಳ್ಳಲು ಅವಸರ. ಸುಮಾರು 40 ದಿನ ಮನೆಯಲ್ಲಿದ್ದವರಿಗೆ ಈಗ ಅಡುಗೆ ಮಾಡಿಕೊಳ್ಳಲು ಬೇಸರ. ಒಂದು ವೇಳೆ ಮಧ್ಯಾಹ್ನ ಮಾಡಿದ ಅನ್ನ ಉಳಿದಿದ್ದರೆ ಅದನ್ನೇ ಬಳಸಿ ರುಚಿಕರವಾದ ದೋಸೆಯನ್ನ ಮಾಡಬಹುದು. ಹೊಸ ರುಚಿಯಾದ ತಿಂಡಿಯೂ ಮಾಡಿದಂತೆ ಆಗುತ್ತೆ, ಆಹಾರ ಕೆಡದಂತೆ ನೋಡಿಕೊಂಡಂತೆಯೂ ಆಗುತ್ತೆ.

    ಬೇಕಾಗುವ ಸಾಮಾಗ್ರಿಗಳು
    ಅನ್ನ- 1 ಕಪ್
    ಹಸಿ ಮೆಣಸಿನಕಾಯಿ-4
    ಬೆಳ್ಳುಳ್ಳಿ- 6 ರಿಂದ 7 ಎಸಳು
    ಕ್ಯಾರೆಟ್- 1
    ಕೋತಂಬರಿ ಸೊಪ್ಪು
    ಜೀರಿಗೆ- 1/2 ಟೀ ಸ್ಪೂನ್
    ಕಾರ್ನ್ ಫ್ಲೋರ್ – 1/2 ಟೀ ಸ್ಪೂನ್
    ಮೈದಾ ಹಿಟ್ಟು- 1/2 ಟೀ ಸ್ಪೂನ್
    ಗೋಧಿ ಹಿಟ್ಟು – 1/2 ಟೀ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    ಎಣ್ಣೆ

    ಮಾಡುವ ವಿಧಾನ
    * ಮಿಕ್ಸಿ ಜಾರಿಗೆ ಒಂದು ಕಪ್ ಅನ್ನ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಕಿ ಒಂದು ಕಪ್ ನೀರಿನೊಂದಿಗೆ ಚೆನ್ನಾಗಿ ರುಬ್ಬಿಕೊಳ್ಳಿ.
    * ರುಬ್ಬಿಕೊಂಡ ಮಿಶ್ರಣವನ್ನು ಮಿಕ್ಸಿಂಗ್ ಬೌಲ್ ಗೆ ಹಾಕಿಕೊಂಡು, ಗೋಧಿ ಹಿಟ್ಟು, ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಕತ್ತರಿಸಿದ ಕೋತಂಬರಿ, ಜೀರಿಗೆ, ಕ್ಯಾರೆಟ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಗ್ಯಾಸ್ ಆನ್ ಮಾಡ್ಕೊಂಡು ಪ್ಯಾನ್ ಇಟ್ಟಿಕೊಳ್ಳಿ. ಪ್ಯಾನ್ ಬಿಸಿಯಾಗ್ತಿದ್ದಂತೆ ಪ್ಯಾನ್‍ಗೆ ಎಣ್ಣೆ ಸವರಿ ಮಿಶ್ರಣವನ್ನ ದೋಸೆ ರೀತಿಯಲ್ಲಿ ಹಾಕಿ, ಎರಡು ಕಡೆ ಬೇಯಿಸಿದ್ರೆ ರುಚಿಕರವಾದ ತಿಂಡಿ ರೆಡಿ.

  • ಗರಿ ಗರಿಯಾದ ಮಸಾಲಾ ಶೇಂಗಾ ಮಾಡೋ ವಿಧಾನ

    ಗರಿ ಗರಿಯಾದ ಮಸಾಲಾ ಶೇಂಗಾ ಮಾಡೋ ವಿಧಾನ

    ಶೇಂಗಾ ಬೀಜ (ಕಡ್ಲೆ ಬೀಜ) ಎಂದರೆ ಎಲ್ಲರಿಗೂ ಇಷ್ಟ. ಹೀಗಾಗಿ ಸಂಜೆ ಟೀ ಜೊತೆಗೆ ಮಸಾಲಾ ಶೇಂಗಾ ಫ್ರೈ ಮಾಡಿಕೊಂಡು ಸವಿಯಿರಿ. ನಿಮಗಾಗಿ ಮಸಾಲಾ ಶೇಂಗಾ ಮಾಡುವ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಗ್ರಿಗಳು
    1. ಕಡಲೆ ಹಿಟ್ಟು – 1/2 ಕಪ್
    2. ಅಕ್ಕಿ ಹಿಟ್ಟು – 1/4 ಕಪ್
    3. ಶುಂಠಿ,ಬೆಳ್ಳುಳ್ಳಿ ಪೇಸ್ಟ್ – 1/2 ಚಮಚ
    4. ಖಾರದ ಪುಡಿ – ಒಂದೂವರೆ ಚಮಚ
    5. ಅರಿಶಿಣ – ಚಿಟಿಕೆ
    6. ಉಪ್ಪು – ರುಚಿಗೆ ತಕ್ಕಷ್ಟು
    7. ಇಂಗು -ಚಿಟಿಕೆ
    8. ಎಣ್ಣೆ
    9. ಶೇಂಗಾ ಬೀಜ – 2 ಕಪ್

    ಮಾಡುವ ವಿಧಾನ
    * ಒಂದು ಬೌಲ್‍ಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಚಿಟಿಕೆ ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು, ಇಂಗು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ಮೂರು ಚಮಚ ಬಿಸಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ.
    * ಶೇಂಗಾ ಬೀಜವನ್ನು ಹಾಕಿ, ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷ ನೆನೆಯಲು ಬಿಡಿ.
    * ನಂತರ 2 ಚಮಚ ಅಕ್ಕಿ ಹಿಟ್ಟು ಹಾಕಿ ಮತ್ತೆ ಕಲಸಿಕೊಳ್ಳಿ (ನೀರು ಹಾಕಬಾರದು)
    * ಸ್ಟೌವ್ ಮೇಲೆ ಎಣ್ಣೆ ಕಾಯಲು ಬಿಡಿ, ಎಣ್ಣೆ ಬಿಸಿಯಾಗುತ್ತಿದ್ದಂತೆ ಕಲಸಿದ್ದ ಶೇಂಗಾ ಬೀಜವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿದರೆ ಮಸಾಲಾ ಶೇಂಗಾ ಸವಿಯಲು ಸಿದ್ಧ

  • ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡೋ ವಿಧಾನ

    ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡೋ ವಿಧಾನ

    ಕೊರೊನಾ ಲಾಕ್‍ಡೌನ್ ಇಂದಿನಿಂದ ಸಡಿಲಿಕೆ ಆಗಿದೆ. ಆದರೆ ಜನರು ಆರೋಗ್ಯವನ್ನು ಕಾಪಾಡಿಕೊಳ್ಳವ ಬಗ್ಗೆ ಎಚ್ಚರವಹಿಸಬೇಕು. ಒಂದುಕಡೆ ಕೊರೊನಾ ವೈರಸ್ ಮತ್ತೊಂದೆಡೆ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ರಾಗಿ ಆರೋಗ್ಯ ಉತ್ತಮವಾದ ಆಹಾರ. ಹೀಗಾಗಿ ಮನೆಯಲ್ಲಿರುವ ಮಕ್ಕಳು, ವೃದ್ಧರಿಗೆ ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡಿ ಕೊಡಿ. ಪ್ರತಿದಿನ ರಾಗಿ ಮಾಲ್ಟ್ ಮಾಡಿ ಕುಡಿದರೆ ತೂಕವನ್ನು ಕಡಿಮೆ ಮಾಡಬಹುದು. ರಾಗಿ ಮಾಲ್ಟ್ ಮಾಡುವ ವಿಧಾನ ಇಲ್ಲಿದೆ. ಇದನ್ನೂ ಓದಿ: ರಾಗಿ ಅಂಬಲಿ ಕುಡಿಯಿರಿ ದೇಹವನ್ನು ಕೂಲ್ ಆಗಿಟ್ಟುಕೊಳ್ಳಿ – ಅಂಬಲಿ ಮಾಡೋ ಸುಲಭ ವಿಧಾನ ಓದಿ

    ಬೇಕಾಗುವ ಸಾಮಗ್ರಿಗಳು
    1. ರಾಗಿ ಹಿಟ್ಟು – 2 ಚಮಚ
    2. ಬೆಲ್ಲ – 1 ಚಮಚ
    3. ಹಾಲು – ಅರ್ಧ ಕಪ್
    4. ಏಲಕ್ಕಿ ಪುಡಿ – 1/4 ಚಮಚ

    ಮಾಡುವ ವಿಧಾನ
    * ಮೊದಲಿಗೆ ರಾಗಿ ಹಿಟ್ಟು, ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ಸ್ಟೌವ್ ಮೇಲೆ ಒಂದು ಪ್ಯಾನ್ ಇಟ್ಟು ಒಂದು ಕಪ್ ನೀರು ಹಾಕಿ ಕುದಿಸಿ.
    * ಈಗ ನೀರು ಕುದಿಯುತ್ತಿದ್ದಂತೆ ಮಿಕ್ಸ್ ಮಾಡಿಕೊಂಡಿದ್ದ ರಾಗಿಯನ್ನು ಹಾಕಿ ಗಂಟು ಬರದಂತೆ ಸುಮಾರು 9 ನಿಮಿಷ ಬೇಯಿಸಿ (ತಳ ಹಿಡಿಯದಂತೆ, ಗಂಟು ಬಾರದಂತೆ ಬಾಡಿಸುತ್ತಿರಬೇಕು)
    * ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ನಂತರ ಅರ್ಧ ಕಪ್ ಹಾಲು ಹಾಕಿ ಮಿಕ್ಸ್ ಮಾಡಿ (ಸ್ಟೌವ್ ಕಡಿಮೆ ಉರಿಯಲ್ಲಿರಬೇಕು)
    * ಈಗ ಏಲಕ್ಕಿ ಪುಡಿ ಹಾಕಿ ಎರಡ್ಮೂರು ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿದರೆ ರಾಗಿ ಮಾಲ್ಟ್ ಸಿದ್ಧ (ಮುಚ್ಚುಳವನ್ನು ಮುಚ್ಚಬಾರದು)

  • ಸ್ಪೈಸಿ ಚಿಕನ್ ಡ್ರೈ ರೋಸ್ಟ್ ಮಾಡೋ ವಿಧಾನ

    ಸ್ಪೈಸಿ ಚಿಕನ್ ಡ್ರೈ ರೋಸ್ಟ್ ಮಾಡೋ ವಿಧಾನ

    ಕೊರೊನಾದಿಂದ ಮೂರನೇ ಬಾರಿ ಲಾಕ್‍ಡೌನ್ ಆಗಿದ್ದು, ಎಲ್ಲರೂ ಮನೆಯಲ್ಲಿದ್ದೀರಿ. ಅದರಲ್ಲೂ ಇಂದು ಭಾನುವಾರ ಹೀಗಾಗಿ ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಆದರೆ ಯಾವಾಗಲೂ ಚಿಕನ್ ಬಿರಿಯಾನಿ, ಕಬಾಬ್, ಚಾಪ್ಸ್, ಮಟನ್ ಇದೇ ಅಡುಗೆ ಮಾಡುತ್ತೀರ. ಈಗ ತುಂಬಾ ಸಮಯವಿದೆ. ಇತ್ತ ಸರ್ಕಾರ ಮಟನ್, ಚಿಕನ್ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಚಿಕಿನ್ ತೆಗೆದುಕೊಂಡು ಬನ್ನಿ. ಸುಲಭವಾಗಿ ಚಿಕನ್ ಡ್ರೈ ರೋಸ್ಟ್ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು
    1. ಚಿಕನ್- 1/2 ಕೆಜಿ
    2. ಈರುಳ್ಳಿ – 1
    3. ಅರಿಶಿಣ – 1/2 ಟೀ ಸ್ಪೂನ್
    4. ಖಾರದ ಪುಡಿ – 1/2 ಟೀ ಸ್ಪೂನ್
    5. ಗರಂ ಮಸಾಲ – 1/2 ಟೀ ಸ್ಪೂನ್
    6. ಪೆಪ್ಪರ್ – 1/4 ಟೀ ಸ್ಪೂನ್
    7. ಜೀರಿಗೆ ಪೌಡರ್ – 1/4 ಟೀ ಸ್ಪೂನ್
    8. ದನಿಯಾ ಪೌಡರ್ -1/2 ಟೀ ಸ್ಪೂನ್
    9. ಶುಂಠಿ-ಬೆಳ್ಳುಳ್ಳಿ ಪೇಸ್ಟ್ -1 ಟೀ ಸ್ಪೂನ್
    10. ಹಸಿ ಮೆಣಸಿನಕಾಯಿ -3
    11. ಕರಿಬೇವು – 5 ರಿಂದ 6 ಎಲೆ
    12. ಎಣ್ಣೆ
    13. ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲಿಗೆ ಚಿಕನ್ ತೊಳೆದುಕೊಂಡು ಒಂದು ಬೌಲ್‍ನಲ್ಲಿ ಹಾಕಿಕೊಳ್ಳಿ.
    * ಇದಕ್ಕೆ ಅರಿಶಿಣ, ಖಾರದ ಪುಡಿ, ಗರಂ ಮಸಾಲ, ಪೆಪ್ಪರ್ ಪೌಡರ್, ಜೀರಿಗೆ ಪೌಡರ್, ದನಿಯಾ ಪೌಡರ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಎರಡು ಟೇಬಲ್ ಸ್ಪೂನ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 30 ನಿಮಿಷ ಬಿಡಿ.
    * ಈರುಳ್ಳಿಯನ್ನು ಕತ್ತರಿಸಿಕೊಂಡು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
    * ಮತ್ತೊಂದು ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು ಎರಡು ಸ್ಪೂನ್ ಎಣ್ಣೆ ಹಾಕಿಕೊಳ್ಳಿ (ನಿಮ್ಮ ಡಿಶ್ ರೆಡಿ ಆಗೋವರೆಗೂ ಸ್ಟೌವ್ ಸಣ್ಣ ಉರಿಯಲ್ಲಿರಬೇಕು). ಎಣ್ಣೆ ಬಿಸಿಯಾಗುತ್ತಿದ್ದಂತೆ ಈರುಳ್ಳಿ ಪೇಸ್ಟ್ ಮತ್ತು ಕರಿಬೇವು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
    * ಈರುಳ್ಳಿ ಪೇಸ್ಟ್ ಫ್ರೈ ಆಗ್ತಿದ್ದಂತೆ ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಚಿಟಿಕೆ ಅರಿಶಿಣ ಮತ್ತು ಅರ್ಧ ಟೀ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಸೇರಿಸಿ ಕಡಿಮೆ ಉರಿಯಲ್ಲಿ ಫ್ರೈ ಮಾಡುತ್ತಿರಬೇಕು.


    * ಈರುಳ್ಳಿ ಪೇಸ್ಟ್ ಗೋಲ್ಡನ್ ಕಲರ್ ಬಂದ ಮೇಲೆ ಮಸಾಲ ಮಿಕ್ಸ್ ಮಾಡಿದ ಚಿಕನ್ ಸೇರಿಸಿಕೊಳ್ಳಿ.
    * ಚಿಕನ್ ಮಿಕ್ಸ್ ಮಾಡಿದ ನಂತರ ಮುಚ್ಚಳ ಮುಚ್ಚಿ ಎರಡರಿಂದ ಮೂರು ನಿಮಿಷ ಬೇಯಲು ಬಿಡಿ. ಮತ್ತೆ ಮುಚ್ಚಳ ತೆಗೆದ ಮೇಲೆ ಚೆನ್ನಾಗಿ ಕಲಕಬೇಕು. ಹೀಗೆ ಮಸಾಲ ಸೀದು ಹೋಗದಂತೆ ಚೆನ್ನಾಗಿ ಕಲಕುತ್ತಿರಬೇಕು. ( ಡ್ರೈ ರೋಸ್ಟ್ ಆಗಿದ್ದರಿಂದ ನೀರು ಸೇರಿಸಬಾರದು/ ಒಂದು ವೇಳೆ ತುಂಬಾನೇ ಡ್ರೈ ಅನಿಸಿದ್ರೆ ಬಿಸಿನೀರನ್ನ ಸ್ವಲ್ಪ ಸೇರಿಸಬಹುದು)
    * ಹೀಗೆ ಚಿಕನ್ ಕಡಿಮೆ ಉರಿಯಲ್ಲಿ ಏಳರಿಂದ ಎಂಟು ನಿಮಿಷ ಬೇಯಿಸಿದ್ರೆ ನಿಮ್ಮ ಭಾನುವಾರದ ಸ್ಪೈಸಿ ಚಿಕನ್ ಡ್ರೈ ರೋಸ್ಟ್ ರೆಡಿ.

  • ಕ್ರಿಸ್ಪಿ ಆಲೂ, ರವೆ ಫಿಂಗರ್ ಚಿಪ್ಸ್

    ಕ್ರಿಸ್ಪಿ ಆಲೂ, ರವೆ ಫಿಂಗರ್ ಚಿಪ್ಸ್

    ಕೊರೊನಾದಿಂದ ಮೂರನೇ ಬಾರಿ ಲಾಕ್‍ಡೌನ್ ಮುಂದುವರಿದಿದೆ. ಹೀಗಾಗಿ ಎಲ್ಲರೂ ಮನೆಯಲ್ಲಿದ್ದೀರಿ. ಹೀಗಾಗಿ ಟೈಂ ಪಾಸ್ ಮಾಡುವುದು ತುಂಬಾ ಕಷ್ಟ. ಅದರಲ್ಲೂ ಮಕ್ಕಳು ತಿನ್ನಲು ತಿಂಡಿಯನ್ನು ಕೇಳುತ್ತಿರುತ್ತಾರೆ. ಅವರನ್ನು ಹೊರಗೆ ಕರೆದುಕೊಂಡು ಹೋಗುವುದು ಕಷ್ಟ. ಹೀಗಾಗಿ ಮನೆಯಲ್ಲಿ ಆಲೂಗೆಡ್ಡೆ, ರವೆ ಇದ್ದೆ ಇರುತ್ತದೆ. ಅದರಲ್ಲಿ ಕ್ರಿಸ್ಪಿ ಆಲೂ, ರವೆ ಫಿಂಗರ್ ಚಿಪ್ಸ್ ಮಾಡಿ ಕೊಡಿ. ಆಲೂ, ರವೆ ಫಿಂಗರ್ ಚಿಪ್ಸ್ ಮಾಡುವ ವಿಧಾನ ನಿಮಗಾಗಿ?

    ಬೇಕಾಗುವ ಸಾಮಗ್ರಿಗಳು
    1. ಸಣ್ಣ ರವೆ – 1 ಕಪ್
    2. ಆಲೂಗಡ್ಡೆ – 2
    3. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    4. ಕೋತ್ತಂಬರಿ ಸೊಪ್ಪು -ಸ್ವಲ್ಪ
    5. ಕಾಳು ಮೆಣಸು ಪುಡಿ – 1/2 ಚಮಚ
    6. ಒಣ ಮೆಣಸಿನಕಾಯಿ ಪುಡಿ – 1/2 ಚಮಚ
    7. ಜೀರಿಗೆ – 1 ಚಮಚ
    8. ಅರಿಶಿಣ – 1/2 ಟೀ ಸ್ಪೂನ್
    9. ಎಣ್ಣೆ
    10. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲಿಗೆ ಆಲೂಗಡ್ಡೆ ಬೇಯಿಸಿಕೊಂಡು ಚಪಾತಿ ಹಿಟ್ಟಿನಂತೆ ಕಲಸಿಕೊಂಡು ಎತ್ತಿಡಿ.
    * ಗ್ಯಾಸ್ ಆನ್ ಮಾಡಿಕೊಂಡು ಪ್ಯಾನ್‍ಗೆ ಒಂದು ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಜೀರಿಗೆ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಚಿಟಿಕೆ ಅರಿಶಿಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಈಗ ಒಂದೂವರೆ ಕಪ್ ನೀರು ಹಾಕಿ, ಸ್ವಲ್ಪ ಉಪ್ಪು ಹಾಕಿ ಕುದಿಸಿಕೊಳ್ಳಿ.
    * ನೀರು ಕುದಿಯುತ್ತಿದ್ದಂತೆ ರವೆ ಹಾಕಿ ಗಂಟು ಬರದಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
    * ರವೆ ಮಿಶ್ರಣ ತಣ್ಣಗಾಗುತ್ತಿದ್ದಂತೆ ಆಲೂಗಡ್ಡೆಯ ಪೇಸ್ಟ್ ಸೇರಿಸಿ. ಈಗ ಕಾಳು ಮೆಣಸು ಪುಡಿ, ಉಪ್ಪು (ಮೊದಲು ಸ್ವಲ್ಪ ಹಾಕಿರುವುದರಿಂದ ನೋಡಿಕೊಂಡು ಹಾಕಿ), ಒಣ ಮೆಣಸಿನಕಾಯಿ ಪುಡಿ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.


    * ಒಂದು ಪ್ಯಾನ್‍ಗೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ, ಕಾಯಲು ಬಿಡಿ.
    * ಕೈಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ರವೆ-ಆಲೂಗಡ್ಡೆ ಮಿಶ್ರಣದಿಂದ ಫಿಂಗರ್  ಚಿಪ್ಸ್ ನಂತೆ ಮಾಡಿ.
    * ಬಿಸಿಯಾದ ಎಣ್ಣೆಗೆ ಅದನ್ನು ಹಾಕಿ ಕರಿದರೆ ಕ್ರಿಸ್ಪಿ ಆಲೂ ಫಿಂಗರ್ ಚಿಪ್ಸ್ ರೆಡಿ.