Tag: recipe

  • ರುಚಿಯಾದ ಚಿಕನ್ ತವಾ ಫ್ರೈ

    ರುಚಿಯಾದ ಚಿಕನ್ ತವಾ ಫ್ರೈ

    ವೀಕೆಂಡ್‍ಗೆ ರುಚಿಯಾದ ಅಡುಗೆಯನ್ನು ತಿನ್ನಬೇಕು ಎಂದೂ ಎಲ್ಲರು ಬಯಸುತ್ತೇವೆ. ಪ್ರತಿನಿತ್ಯ ಹೋಟೆಲ್‍ಗಳಲ್ಲಿ ಸಿಗುವ ಆಹಾರ ಸೇವಿಸಿ ಸಾಕಾಗಿದೆ. ಮನೆಯಲ್ಲಿಯೇ ಸರಳವಾಗಿ ಫಟಾಫಟ್ ಆಗಿ ರುಚಿಯಾಗಿ ಏನಾದರೂ ಮಾಡಬೇಕು ಎಂದು ಕೊಂಡಿರುವವರು ಚಿಕನ್ ತವಾ ಫ್ರೈ ಮಾಡಿ ನೋಡಿ….

    ಬೇಕಾಗುವ ಸಾಮಗ್ರಿಗಳು:
    * ಚಿಕನ್- 1 ಕೆಜಿ
    * ಅರಿಶಿನ ಪುಡಿ- ಚಿಟಿಕೆ
    * ಅಚ್ಚಖಾರದ ಪುಡಿ- 1 ಟೀ ಸ್ಪೂನ್
    * ದನಿಯಾ ಪೌಡರ್- 1 ಟೀ ಸ್ಪೂನ್
    * ಜೀರಿಗೆ ಪೌಡರ್ _ 1 ಟೀ ಸ್ಪೂನ್
    * ಗರಂಮಸಾಲಾ ಪೌಡರ್- ಅರ್ಧ ಟೀ ಸ್ಪೂನ್
    * ನಿಂಬೆಹಣ್ಣು- ಅರ್ಧ
    * ಮೊಸರು – ಅರ್ಧ ಕಪ್
    * ಕಸೂರಿಮೇತಿ _ 1 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ – 1 ಕಪ್

    ಮಾಡುವ ವಿಧಾನ:
    * ಒಂದ ಬೌಲ್‍ಗೆ ಚಿಕನ್ ಹಾಕಿ ಚೆನ್ನಾಗಿ ತೊಳೆಯಬೇಕು.
    * ಚಿಕನ್ ಇರುವ ಬೌಲ್‍ಗೆ ಅರಿಶಿನ ಪುಡಿ, ಅಚ್ಚಖಾರದಪುಡಿ, ದನಿಯಾ ಪೌಡರ್, ಜೀರಿಗೆ ಪೌಡರ್, ಗರಂಮಸಾಲಾ ಪೌಡರ್, ನಿಂಬೆಹಣ್ಣು, ಮೊಸರು, ಕಸೂರಿಮೇತಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
    * ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಸಾಲೆಯು ಚೆನ್ನಾಗಿ ಚಿಕನ್‍ನೊಂದಿಗೆ ಮಿಶ್ರಣವಾಗುವ ಹಾಗೆ ಮಿಕ್ಸ್ ಮಾಡಬೇಕು.


    * ಈ ಮಸಾಲೆ ಚಿಕನ್‍ನೊಂದಿಗೆ ಮೀಶ್ರಣವಾಗಬೇಕು ಹಾಗಾಗಿ 10 ನಿಮಿಷಗಳಕಾಲ ಹಾಗೆ ಇಟ್ಟಿರಬೇಕು.
    * ನಂತರ ಒಂದು ತವಾಗೆ 4 ರಿಂದ 5 ಸ್ಪೂನ್ ಅಡುಗೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಬಿಸಿಯಾಗುವವರೆಗೂ ಕಾಯಬೇಕು.
    * ನಂತರ ಒಂದೊಂದೆ ಚಿಕನ್ ಪೀಸ್‍ಗಳನ್ನು ತವಾಗೆ ಹಾಕಬೇಕು.
    * ಸಣ್ಣ ಉರಿ ಬೆಂಕಿಯಲ್ಲಿ ಕೆಂಪಗಾಗುವವರೆಗೆ ಬೇಯಿಸಿದರೆ ಚಿಕನ್ ತವಾ ಫ್ರೈ ಸವಿಯಲು ಸಿದ್ಧವಾಗುತ್ತದೆ.

  • ರುಚಿ ರುಚಿಯಾದ ಎಗ್ ಫ್ರೈ ಮಸಾಲ ಆಮ್ಲೆಟ್ ಮಾಡುವ ವಿಧಾನ

    ರುಚಿ ರುಚಿಯಾದ ಎಗ್ ಫ್ರೈ ಮಸಾಲ ಆಮ್ಲೆಟ್ ಮಾಡುವ ವಿಧಾನ

    ಪ್ರತಿನಿತ್ಯ ಒಂದೇ ಒಂದೇ ರೀತಿಯ ಆಮ್ಲೆಟ್ ಮಾಡಿ ತಿನ್ನುವುದಕ್ಕಿಂತ ಕೊಂಚ ಭಿನ್ನವಾಗಿ ಎಗ್ ಮಸಾಲಾ ಆಮ್ಲೆಟ್ ಮಾಡಿ ಚಪಾತಿ ಮತ್ತು ಅನ್ನದ ಜೊತೆಗೆ ಸವಿಯಬಹುದು. 5 ನಿಮಿಷದಲ್ಲಿ ಫಟಾಪಟ್ಟಾಗಿ ಮಾಡುವ ಸರಳವಾಗಿ ಎಗ್ ಪ್ರೈ ಮಸಾಲಾ ಆಮ್ಲೆಟ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    ಮೊಟೆ-4
    ಈರುಳ್ಳಿ-3 (ದೊಡ್ಡಗಾತ್ರದ್ದು)
    ಟೋಮೆಟೋ- 3
    ಗರಂಮಸಾಲೆ ಪೌಡರ್- ಚಿಟಿಕೆ
    ಚಿಲ್ಲಿಪೌಡರ್- 1 ಟೀ ಸ್ಪೂನ್
    ಅಡುಗೆಎಣ್ಣೆ- 2 ಟೀ ಸ್ಪೂನ್
    ಹಸಿಮೆಣಸಿನಕಾಯಿ- 4
    ಶುಂಠಿ-ಬೆಳ್ಳುಳ್ಳಿ ಪೇಸ್ಟ್
    ಅರಿಶಿಣ ಅರ್ಧ ಟೀ ಸ್ಪೂನ್
    ರುಚಿಗೆ ತಕ್ಕಷ್ಟು ಉಪ್ಪು
    ಕೊತ್ತಂಬರಿ ಸೊಪ್ಪು ಸ್ವಲ್ಪ

    ಮಾಡುವ ವಿಧಾನ
    * ಸ್ಟೌ ಮೇಲೆ ತವಾಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಲು ಇಡಬೇಕು
    * ಸಣ್ಣದಾಗಿ ಕತ್ತರಿಸಿದ ಈರುಳ್ಳಿಯನ್ನು ಚೆನ್ನಾಗಿ ಫ್ರೈ ಮಾಡಿಟ್ಟುಕೊಳ್ಳಬೇಕು.
    * ನಂತರ ಈ ಮಸಾಲೆಗೆ ಈ ಮೊದಲೇ ರುಬ್ಬಿಟ್ಟುಕೊಂಡಿರುವ ಟೊಮೆಟೋವನ್ನು ಹಾಕಿ ಚೆನ್ನಾಗಿ ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಬೇಕು.
    * ನಂತರ ಗರಂಮಾಸಾಲೆ, ಚಿಲ್ಲಿ ಪೌಡರ್, ಅರಿಶಿಣ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿಟ್ಟುಕೊಳ್ಳಬೇಕು.


    * ಮಸಾಲೆ ಚೆನ್ನಾಗಿ ಫ್ರೈ ಆದ ನಂತರ 4 ಮೊಟ್ಟೆಯನ್ನು ಹಾಕಬೇಕು. ಈ ಮಸಾಲೆಯ ಮೇಲೆ ರಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು.
    * ಈ ಮಸಾಲೆಯ ಮೇಲೆ ಮೆಣಸಿನ ಪೌಡರ್, ಅರಿಶಿಣ, ಗರಂಮಾಸಾಲೆ ಅಥವಾ ಚಾಟ್ ಮಸಾಲೆಯನ್ನು ಹಾಕಿ ಸಣ್ಣ ಬೆಂಕಿ ಉರಿಯಲ್ಲಿ ಹಾಕಿ ಬೇಯಿಸಬೇಕು.
    * 2 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಬಹುದು ಅಥವಾ ಹಾಫ್ ಬಾಯಲ್ ಬೇಕು ಎಂದವರು ಮಾಡಿಕೊಳ್ಳಬಹುದು. ಇದೀಗ ರುಚಿ ರುಚಿಯಾದ ಎಗ್ ಫ್ರೈ ಮಸಾಲಾ ಆಮ್ಲೆಟ್ ಸವಿಯಲು ಸಿದ್ಧವಾಗುತ್ತದೆ.

     

  • ರುಚಿಯಾದ ಮಸಾಲಾ ಸೀಗಡಿ ಫ್ರೈ ಮಾಡುವ ವಿಧಾನ

    ರುಚಿಯಾದ ಮಸಾಲಾ ಸೀಗಡಿ ಫ್ರೈ ಮಾಡುವ ವಿಧಾನ

    ಪ್ರತಿ ಭಾನುವಾರ ಚಿಕನ್, ಮಟನ್ ರೆಸಪಿ ತಿಂದು ಬೇಜಾರು ಆಗಿರುತ್ತೆ. ಹಾಗಾಗಿ ಈ ವಾರ ರುಚಿ ರುಚಿಯಾದ ಖಾರ ಮಸಾಲಾ ಸೀಗಡಿ ಫ್ರೈ ಮಾಡಿ.

    ಬೇಕಾಗುವ ಸಾಮಾಗ್ರಿಗಳು
    * ಸೀಗಡಿ – 250 ರಿಂದ 300 ಗ್ರಾಂ
    * ಅಚ್ಚ ಖಾರದ ಪುಡಿ – 1 ಟೀ ಸ್ಪೂನ್
    * ಅರಿಶಿನ- 1/4 ಟೀ ಸ್ಪೂನ್
    * ಬೆಳ್ಳುಳ್ಳಿ-ಶುಂಠಿ ಪೇಸ್ಟ್ – 1 ಟೀ ಸ್ಪೂನ್
    * ಧನಿಯಾ ಪೌಡರ್ – 1 ಟೀ ಸ್ಪೂನ್
    * ಜೀರಿಗೆ ಪೌಡರ್- 1/2 ಟೀ ಸ್ಪೂನ್
    * ಸೋಂಪು ಪೌಡರ್ – 1/2 ಟೀ ಸ್ಪೂನ್
    * ಗರಂ ಮಸಾಲ- 1/2 ಟೀ ಸ್ಪೂನ್
    * ಈರುಳ್ಳಿ – 2 ಮಧ್ಯಮ ಗಾತ್ರದ್ದು (ಉದ್ದವಾಗಿ ಕತ್ತರಿಸಿಕೊಳ್ಳಬೇಕು)
    * ಹಸಿ ಮೆಣಸಿನಕಾಯಿ – 4
    * ಕರಿಬೇವು – 15 ರಿಂದ 20 ಎಲೆ
    * ನಿಂಬೆ ರಸ – 1.5 ಟೀ ಸ್ಪೂನ್
    * ಎಣ್ಣೆ- 3 ಟೀ ಸ್ಪೂನ್
    * ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಸೀಗಡಿಯನ್ನು ಚೆನ್ನಾಗಿ ಬಿಡಿಸಿಕೊಂಡು ಮಿಕ್ಸಿಂಗ್ ಬೌಲ್ ನಲ್ಲಿ ಹಾಕಿಕೊಳ್ಳಿ. ಈಗ ಬೆಳ್ಳುಳ್ಳಿ-ಪೇಸ್ಟ್, ಅಚ್ಚ ಖಾರದ ಪುಡಿ, ಅರಿಶಿನ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 30 ನಿಮಿಷ ಎತ್ತಿಟ್ಟುಕೊಳ್ಳಿ.
    * ಸ್ಟೌವ್ ಆನ್ ಮಾಡ್ಕೊಂಡು ಪ್ಯಾನ್ ಇಟ್ಕೊಳ್ಳಿ. ಪ್ಯಾನ್ ಬಿಸಿ ಆಗುತ್ತಿದ್ದಂತೆ ಎಣ್ಣೆ ಹಾಕಿ.

    * ಎಣ್ಣೆ ಬಿಸಿಯಾಗುತ್ತಿದ್ದ ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿ ಗೋಲ್ಡನ್ ಕಲರ್ ಬರೋವರೆಗೂ ಫ್ರೈ ಮಾಡಬೇಕು.
    * ತದನಂತರ ಕತ್ತರಿಸಿದ ಹಸಿ ಮೆಣಸಿನಕಾತಿ, ಕರಿಬೇವು ಹಾಕಿ 2 ನಿಮಿಷ ಬಾಡಿಸಿಕೊಂಡ ನಂತರ ಮಸಾಲೆಯಲ್ಲಿ ಮಿಕ್ಸ್ ಮಾಡಿರುವ ಸೀಗಡಿಯನ್ನು ಹಾಕಿ ಚೆನ್ನಾಗಿ ಮೂರರಿಂದ ಐದು ನಿಮಿಷ ಕಡಿಮೆ ಉರಿಯಲ್ಲಿ ಫ್ರೈ ಮಾಡಬೇಕು.

    * ನಂತರ ಧನಿಯಾ, ಜೀರಿಗೆ ಪೌಡರ್ ಹಾಕಿ ಚೆನ್ನಾಗಿ ಮೂರರಿಂದ ನಾಲ್ಕು ನಿಮಿಷ ಬೇಯಿಸಿದ ನಂತರ ನಿಂಬೆ ರಸ ಮಿಕ್ಸ್ ಮಾಡಿದ್ರೆ ರುಚಿ ರುಚಿಯಾದ ಸ್ಪೈಸಿ ಮಸಾಲಾ ಸೀಗಡಿ ಫ್ರೈ ಸವಿಯಲು ಸಿದ್ಧ.
    * ಬಿಸಿ ಅನ್ನ ಅಥವಾ ನೀರದೋಸೆ, ಚಪಾತಿ, ಬಿಸಿ ರೊಟ್ಟಿಗೆ ಸೀಗಡಿ ಫ್ರೈ ಒಳ್ಳೆಯ ಕಾಂಬಿನೇಷನ್.

  • ಬ್ಯಾಚ್ಯೂಲರ್ಸ್ ರೆಸಿಪಿ – ಐದೇ ನಿಮಿಷದಲ್ಲಿ ಸಿದ್ಧವಾಗುವ ಗ್ರೀನ್ ಚಿಲ್ಲಿ ಚಿಕನ್

    ಬ್ಯಾಚ್ಯೂಲರ್ಸ್ ರೆಸಿಪಿ – ಐದೇ ನಿಮಿಷದಲ್ಲಿ ಸಿದ್ಧವಾಗುವ ಗ್ರೀನ್ ಚಿಲ್ಲಿ ಚಿಕನ್

    ಹುತೇಕರಿಗೆ ಸಂಡೇ ಬಂದ್ರೆ ಬಾಡೂಟ ಇರಲೇಬೇಕು. ಇನ್ನೂ ಮನೆಯಿಂದ ದೂರ ರೂಮ್ ಮಾಡಿಕೊಂಡು ಹುಡುಗರಿಗೆ ಅಮ್ಮ ಮಾಡುವ ಚಿಕನ್ ರೆಸಿಪಿ ನೆನೆಪಾಗುತ್ತಾ ಇರುತ್ತೆ. ರೂಮಿನಲ್ಲಿಯೇ ಮಾಡೋಣ ಅಂದ್ರೆ ಎಲ್ಲ ಸಾಮಾಗ್ರಿಗಳ ವ್ಯವಸ್ಥೆ ಇರಲ್ಲ. ಪಾತ್ರೆ ಇದ್ರೆ ಮಿಕ್ಸಿ ಇರಲ್ಲ. ಹಾಗಾಗಿ ಕಡಿಮೆ ಪದಾರ್ಥ ಬಳಸಿ ರುಚಿ ರುಚಿಯಾದ ಗ್ರೀನ್ ಚಿಲ್ಲಿ ಚಿಕನ್ ಮಾಡುವ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಚಿಕನ್ – 1/4 ಕೆಜಿ
    * ಹಸಿ ಮೆಣಸಿನಕಾಯಿ – 5 ರಿಂದ 6
    * ಬೆಳ್ಳುಳ್ಳಿ-ಶುಂಠಿ ಪೇಸ್ಟ್ – 2 ಟೀ ಸ್ಪೂನ್
    * ಜೀರಿಗೆ – ಒಂದು ಟೀ ಸ್ಪೂನ್
    * ಈರುಳ್ಳಿ- 1 ಮಧ್ಯಮ ಗಾತ್ರದ್ದು
    * ಟೊಮೆಟೋ – 1 (ದೊಡ್ಡ ಗಾತ್ರದ್ದು)
    * ಕೋತಂಬರಿ, ಪುದಿನಾ ಸೊಪ್ಪು
    * ಅರಿಶಿನ- ಚಿಟಿಕೆ
    * ಗರಂ ಮಾಸಾಲಾ ಪೌಡರ್- 1 ಟೀ ಸ್ಪೂನ್
    * ಉಪ್ಪು- ರುಚಿಗೆ ತಕ್ಕಷ್ಟು
    * ಎಣ್ಣೆ

    ಮಾಡುವ ವಿಧಾನ
    * ಮೊದಲಿಗೆ ಚಿಕನ್ ಚೆನ್ನಾಗಿ ಬಿಸಿನೀರಿನಲ್ಲಿ ತೊಳೆದು ಎತ್ತಿಟ್ಟುಕೊಳ್ಳಿ.
    * ಸ್ಟೌವ್ ಆನ್ ಮಾಡಿಕೊಂಡು ಪ್ಯಾನ್ ಇರಿಸಿ. ಎರಡರಿಂದ ಮೂರು ಟೀ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗ್ತಿದ್ದಂತೆ ಜೀರಿಗೆ ಹಾಕಿ. ಜೀರಿಗೆ ಫ್ರೈ ಆಗ್ತಿದ್ದಂತೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಕಲಸಿ. ನಂತರ ಚಿಕ್ಕದಾಗಿ ಕಟ್ ಮಾಡಿರುವ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವರೆಗೂ ಬೇಯಿಸಬೇಕು.
    * ತದನಂತರ ಟೊಮಾಟೋ ಮತ್ತು ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ.
    * ಈಗ ತೊಳೆದು ಕತ್ತರಿಸಿಕೊಂಡಿರುವ ಚಿಕನ್ ಹಾಕಿ. ಮಸಾಲೆ ಜೊತೆ ಚಿಕನ್ ಚೆನ್ನಾಗಿ ಮಿಕ್ಸ್ ಮಾಡಿ.

    * ತದನಂತರ ಚಿಟಿಕೆ ಅರಿಶಿನ, ಗರಂ ಮಸಾಲಾ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 5 ರಿಂದ 6 ನಿಮಿಷ ಬೇಯಿಸಿ.
    * ಬೇಯಿಸಿದ ನಂತರ ಮುಚ್ಚಳ ತೆಗೆದು ಕೋತಂಬರಿ ಮತ್ತು ಪುದಿನಾ ಸೊಪ್ಪು ಉದುರಿಸಿ ಮೂರರರಿಂದ ನಾಲ್ಕು ಟೀ ಸ್ಪೂನ್ ನೀರು ಸೇರಿಸಿ ಚೆನ್ನಾಗಿ ಕಲಕಿ, ಮತ್ತೆ ಎರಡು ನಿಮಿಷ ಬೇಯಿಸಿದ್ರೆ ರುಚಿ ರುಚಿಯಾದ ಗ್ರೀನ್ ಚಿಲ್ಲಿ ಚಿಕನ್ ರೆಡಿ.

  • ಸಂಕ್ರಾಂತಿಗೆ ಇರಲಿ ಘಮ ಘಮಿಸುವ ಸಿಹಿಯಾದ ಅವಲಕ್ಕಿ ಪೊಂಗಲ್

    ಸಂಕ್ರಾಂತಿಗೆ ಇರಲಿ ಘಮ ಘಮಿಸುವ ಸಿಹಿಯಾದ ಅವಲಕ್ಕಿ ಪೊಂಗಲ್

    ಸಾಮಾನ್ಯವಾಗಿ ಸಂಕ್ರಾಂತಿ ಬಂದ್ರೆ ಮನೆಯಲ್ಲಿ ಘಮ ಘಮಿಸುವ ಸಿಹಿ ಪೊಂಗಲ್ ರೆಡಿಯಾಗುತ್ತೆ. ಅಕ್ಕಿ ಪೊಂಗಲ್ ಮಾಡೋದು ಕಾಮನ್. ಹಬ್ಬ ಇಲ್ಲದಿದ್ದಾಗಲೂ ಅದೆಷ್ಟೋ ಜನ ಪೊಂಗಲ್ ಮಾಡಿಕೊಳ್ಳುತ್ತಿರುತ್ತಾರೆ. ಹಬ್ಬ ಆಗಿದ್ದರಿಂದ ವಿಶೇಷವಾಗಿ ಸಿಹಿಯಾದ ಅವಲಕ್ಕಿ ಪೊಂಗಲ್ ಮಾಡಿ ಸಂಭ್ರಮದಿಂದ ಹಬ್ಬವನ್ನ ಆಚರಿಸಿ.

    ಬೇಕಾಗುವ ಸಾಮಾಗ್ರಿಗಳು
    1. ಗಟ್ಟಿ ಅವಲಕ್ಕಿ – ಕಾಲು ಕೆಜಿ
    2. ಹೆಸರು ಬೇಳೆ – 100 ಗ್ರಾಂ
    3. ಕೊಬ್ಬರಿ ತುರಿ – 1 ಬಟ್ಟಲು
    4. ಉದ್ದುದ್ದ ಹೆಚ್ಚಿದ ಕೊಬ್ಬರಿ ಸ್ಲೈಸ್ – 10-15
    5. ಬೆಲ್ಲ – ಸಿಹಿಗೆ ತಕ್ಕಷ್ಟು
    6. ಹಾಲು – ಅರ್ಧ ಕಪ್(ಬೇಕಾದಲ್ಲಿ)
    7. ಏಲಕ್ಕಿ ಪುಡಿ – ಚಿಟಿಕೆ
    8. ಒಣದ್ರಾಕ್ಷಿ, ಗೋಡಂಬಿ – ಸ್ವಲ್ಪ
    9. ತುಪ್ಪ – 2 ಚಮಚ

    ಮಾಡುವ ವಿಧಾನ
    * ಮೊದಲು ಗಟ್ಟಿ ಅವಲಕ್ಕಿಯನ್ನು ತೊಳೆದು ಸೋಸಿಟ್ಟುಕೊಳ್ಳಿ. ನೀರಿನಲ್ಲಿ ನೆನೆಸೋದು ಬೇಡ.
    * ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಸೋಸಿಟ್ಟುಕೊಳ್ಳಿ.
    * ಈಗ ಕುಕ್ಕರ್ ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ ಹೆಸರು ಬೇಳೆ ಹಾಕಿ ಸ್ವಲ್ಪ ಹುರಿದು ನೀರು ಸೇರಿಸಿ 1-2 ವಿಸಿಲ್ ಕೂಗಿಸಿಕೊಳ್ಳಿ.
    * ವಿಸಿಲ್ ಇಳಿದ ಮೇಲೆ ಸ್ವಲ್ಪ ನೀರು ಸೇರಿಸಿ 1-2 ನಿಮಿಷ ಕುದಿಸಿ.
    * ಬಳಿಕ ತೊಳೆದಿಟ್ಟ ಗಟ್ಟಿ ಅವಲಕ್ಕಿ, ಕರಗಿಸಿ ಸೋಸಿಟ್ಟುಕೊಂಡಿದ್ದ ಬೆಲ್ಲ, ಕೊಬ್ಬರಿ ತುರಿ, ಹಾಲು (ಆಪ್ಷನಲ್) ಸೇರಿಸಿ ಕುದಿಸಿ.
    * ತುಪ್ಪ ಹಾಕಿ ಫ್ರೈ ಮಾಡಿಟ್ಟುಕೊಂಡಿದ್ದ ದ್ರಾಕ್ಷಿ ಗೋಡಂಬಿ, ಕೊಬ್ಬರಿಯ ಉದ್ದುದ್ದ ತುಂಡುಗಳನ್ನು ಸೇರಿಸಿ.
    * ಏಲಕ್ಕಿ ಪುಡಿ ಸೇರಿಸಿ ಬೇಕಾದ ಅಗತ್ಯವಿರುವಷ್ಟು ನೀರು ಸೇರಿಸಿ 5 ರಿಂದ 6 ನಿಮಿಷ ಕುದಿಸಿ ಸಾಕು.
    * ಆರಿದ ಬಳಿಕ ಸಿಹಿ ಪೊಂಗಲ್ ಗಟ್ಟಿ ಆಗುತ್ತದೆ. ತುಂಬಾ ಗಟ್ಟಿಯಾದಂತೆ ಅನ್ನಿಸಿದರೆ ಬಿಸಿ ನೀರು ಸೇರಿಸಿ ತೆಳ್ಳಗೆ ಮಾಡಿಕೊಳ್ಳಬಹುದು.
    * ನಿಮಗೆ ಬೇಕಾದ ರೀತಿಯಲ್ಲಿ (ಗಟ್ಟಿ ಅಥವಾ ತೆಳು) ಪೊಂಗಲ್ ಮಾಡಿಕೊಳ್ಳಿ.

  • ಕ್ರಿಸ್ಪಿ ಮೊಟ್ಟೆ ಮಂಚೂರಿ

    ಕ್ರಿಸ್ಪಿ ಮೊಟ್ಟೆ ಮಂಚೂರಿ

    ವಾತಾವರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಚಳಿ ಮತ್ತು ಮಳೆಯ ವಾತಾವರಣ ಇದ್ದು ತಂಪಾಗಿರುವುದರಿಂದ ನಾಲಿಗೆ ಬಿಸಿ ಬಿಸಿಯಾದ ಮತ್ತು ರುಚಿಯಾಗಿ ಏನನ್ನಾದರೂ ತಿನ್ನಲು ಬಯಸುತ್ತದೆ. ಹಾಗಾಗಿ ಮನೆಯಲ್ಲಿಯೇ ರುಚಿಯಾದ ಮತ್ತು ಆರೋಗ್ಯಕರವಾದ ಕ್ರಿಸ್ಪಿ ಮೊಟ್ಟೆ ಮಂಚೂರಿ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು :
    * ಬೇಯಿಸಿದ ಮೊಟ್ಟೆ- 4 ರಿಂದ 5
    * ಅಕ್ಕಿಹಿಟ್ಟು ಅಥವಾ ಕಾನ್‍ಫ್ಲೋರ್ -2 ರಿಂದ 3 ಟೀ ಸ್ಪೂನ್
    * ಅರಿಶಿಣ- ಚಿಟಿಕೆಯಷ್ಟು
    * ಕೆಂಪು ಮೆಣಸಿನ ಪೌಡರ್
    * ಗರಂಮಸಾಲಾ- 1 ಟೀ ಸ್ಪೂನ್
    * ಜೀರಿಗೆ ಪೌಡರ್- ಅರ್ಧ ಟೀ ಸ್ಪೂನ್
    * ಈರುಳ್ಳಿ- 1 ದೊಡ್ಡ ಗಾತ್ರದ್ದು
    * ಬ್ರೇಡ್ ಪೌಡರ್- 4 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಹಸಿಮೆಣಸು – 5 ರಿಂದ 6
    * ಎಣ್ಣೆ -1 ಕಪ್
    * ಶುಂಠಿ
    * ಟೊಮೆಟೊ ಸಾಸ್ – ಅರ್ಧ ಕಪ್
    * ಸೊಯಾಸಾಸ್
    * ಕೊತ್ತಂಬರಿ

    ಮಾಡುವ ವಿಧಾನ :
    * ಬೇಯಿಸಿದ ಮೊಟ್ಟೆಯನ್ನು ತೆಗೆದುಕೊಳ್ಳಬೇಕು. ಮೊಟ್ಟೆಯ ಒಳಗೆ ಇರುವ ಹಳದಿ ಅಂಶವನ್ನು ತೆಗೆದು ಹಾಕಬೇಕು.
    * ನಂತರ ಮೊಟ್ಟೆಯನ್ನು ಸಣ್ಣಸಣ್ಣದಾಗಿ ಕತ್ತರಿಸಿ ಒಂದು ಬೌಲ್‍ನಲ್ಲಿ ಹಾಕಿಟ್ಟುಕೊಳ್ಳಬೇಕು.
    * ಹಾಗೆ ಬೆಕರಿಯಲ್ಲಿ ಸಿಗುವ ಬ್ರೆಡ್‍ನ್ನು ಸಣ್ಣದಾಗಿ ಪೌಡರ್ ಮಾಡಿ ತಯಾರಿಸಿಟ್ಟುಕೊಂಡಿರಬೇಕು.
    * ಈ ಬೌಲ್‍ಗೆ ಅರಿಶಿಣ, ಕೆಂಪು ಮೆಣಸಿನ ಪೌಡರ್, ಗರಂಮಸಾಲಾ, ಜೀರಿಗೆ ಪೌಡರ್, ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಬೇಕು. ಈ ಮೊದಲೇ ತಯಾರಿಸಿ ಇಟ್ಟಿರುವ ಬ್ರೆಡ್ ಪೌಡರ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮೊಟ್ಟೆಯೊಂದಿಗೆ ಮಸಾಲೆ ಮಿಶ್ರಣವಾಗಲು ಒಂದು ಹಸಿಮೊಟ್ಟೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

    * ಈ ಮೊಟ್ಟೆ ಮಸಾಲೆಯ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಕಾದ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಬೇಕು.
    * ಮಸಾಲೆಯೊಂದಿಗೆ ಮಿಶ್ರಣವಾದ ಮೊಟ್ಟೆಯನ್ನು ಚೆನ್ನಾಗಿ ಕೆಂಪಗಾಗುವವರೆಗೂ ಫ್ರೈ ಮಾಡಿ ತೆಗೆಯಬೇಕು.
    * ನಂತರ ಇನ್ನೊಂದು ಪಾತ್ರೆಯನ್ನು ತೆಗೆದುಕೊಳ್ಳಬೇಕು ಸಣ್ಣ ಉರಿ ಬೆಂಕಿಯಲ್ಲಿ ಇಟ್ಟು ಎಣ್ಣೆಯನ್ನು ಹಾಕಬೇಕು.
    * ಎಣ್ಣೆ ಚೆನ್ನಾಗಿ ಕಾದ ನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿದ ಹಸಿಮೆಣಸು, ಶುಂಠಿ, ಟೊಮೆಟೊ ಸಾಸ್, ಸೊಯಾ ಸಾಸ್ ಹಾಗೂ ಅರ್ಧ ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಬೇಕು.
    * ಮಸಾಲೆ ಚೆನ್ನಾಗಿ ಬೆಂದ ನಂತರ ಇದಕ್ಕೆ ಈ ಮೊದಲೇ ಫ್ರೈ ಮಾಡಿಟ್ಟ ಮೊಟ್ಟೆಯನ್ನು ಹಾಕಬೇಕು.
    * ಚೆನ್ನಾಗಿ ಮಸಾಲೆ ಹೀರಿಕೊಳ್ಳುವರೆಗೂ ಪ್ರೈಮಾಡಬೇಕು. ಕೊನೆಯಲ್ಲಿ ಕೊತ್ತಂಬರಿಯನ್ನು ಹಾಕಿದರೆ ರುಚಿ ರುಚಿಯಾದ ಕ್ರಿಸ್ಪಿ ಮೊಟ್ಟೆ ಮಂಚೂರಿ ಸವಿಯಲು ಸಿದ್ಧವಾಗುತ್ತದೆ.

  • ಸುಲಭವಾಗಿ ಮಾಡಿ ಈರುಳ್ಳಿ ಸಮೋಸಾ

    ಸುಲಭವಾಗಿ ಮಾಡಿ ಈರುಳ್ಳಿ ಸಮೋಸಾ

    ವೀಕೆಂಡ್ ರಜೆಯಲ್ಲಿ ಮನೆಯಲ್ಲಿ ಕಾಲ ಕಳೆಯುವವರು ಹೆಚ್ಚು. ಏನನ್ನಾದರೂ ತಿನ್ನ ಬೇಕು ಎಂದು ನಾಲಿಗೆ ರುಚಿ ರುಚಿಯಾದ ತಿಂಡಿಯನ್ನು ಬಯಸುತ್ತದೆ. ಹೀಗಿರುವಾಗ ರುಚಿಯಾದ ಮತ್ತು ಆರೋಗ್ಯಕರವಾದ ಈರುಳ್ಳಿ ಸಮೋಸವನ್ನು ಮನೆಯಲ್ಲಿಯೇ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಮೈದಾ ಹಿಟ್ಟು- 1 ಕಪ್
    * ಗೋಧಿ ಹಿಟ್ಟು -1 ಕಪ್
    * ಎಣ್ಣೆ- 2 ಕಪ್
    * ಅವಲಕ್ಕಿ_ ಅರ್ಧ ಕಪ್
    * ಈರುಳ್ಳಿ- 2 ಕಪ್
    * ಹಸಿಮೆಣಸು- 3 ರಿಂದ 4
    * ಗರಂ ಮಸಾಲಾ- ಒಂದು
    * ಜೀರಿಗೆ ಪೌಡರ್
    * ಅರಿಶಿಣ- ಚಿಟಿಕೆ
    * ಅಚ್ಚಖಾರದ ಪುಡಿ- 1 ಟೀ ಸ್ಪೂನ್
    * ದನಿಯಾ ಪುಡಿ – ಅರ್ಧ ಟೀ ಸ್ಪೂನ್
    * ಶುಂಠಿ ಬೆಳ್ಳುಳ್ಳಿ ಪೇಸ್ಟ್- 1 ಟೀ ಸ್ಪೂನ್
    * ಕೊತ್ತಂಬರಿ
    * ಉಪ್ಪು ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಒಂದು ಪಾತ್ರೆಗೆ ಮೈದಾ ಮತ್ತು ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ಈ ಹಿಟ್ಟಿನ ಮಿಶ್ರಣಕ್ಕೆ ಬಿಸಿ ಎಣ್ಣೆಯನ್ನು ಮೂರರಿಂದ ನಾಲ್ಕು ಟೀ ಸ್ಪೂನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ನೀರನ್ನು ಹಾಕಿ ಹಿಟ್ಟನ್ನು ಮೃದುವಾಗಿ ಕಲಸಿಟ್ಟುಕೊಳ್ಳ ಬೇಕು. ಇದನ್ನು ಅರ್ಧ ಗಂಟೆಗಳ ಕಾಲ ಇಟ್ಟಿರಬೇಕು.

    * ನಂತರ ಈ ಹಿಟ್ಟಿನಿಂದ ಚಪಾತಿ ಹಾಗೇ ತೆಳುವಾಗಿ ಮಾಡಿಕೊಳ್ಳಬೇಕು. ನಂತರ ಚಪಾತಿಯನ್ನು ಸಣ್ಣ ಉರಿಯ ಬೆಂಕಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬೇಯಿಸಿಕೊಳ್ಳಬೇಕು. ನಂತರ ಇವುಗಳನ್ನು ಚೌಕಾಕಾರದಲ್ಲಿ ಕತ್ತರಿಸಿಟ್ಟುಕೊಳ್ಳಬೇಕು.

    * ಒಂದು ಪಾತ್ರೆಗೆ ತೆಗೆದುಕೊಂಡು ಈರುಳ್ಳಿ, ಸಣ್ಣದಾಗಿ ಕತ್ತರಿಸಿದ ಹಸಿಮೆಣಸು ಹಾಗೂ ಜೊತೆಯಲ್ಲಿ ಗರಂ ಮಸಾಲಾ, ಜೀರಿಗೆ ಪೌಡರ್, ಚಿಟಿಕೆ ಅರಿಶಿಣ, ಅಚ್ಚಖಾರದ ಪುಡಿ, ದನಿಯಾ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಕೊತ್ತಂಬರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

    * ನಂತರ ಮೊದಲೇ ತಯಾರಿಸಿಟ್ಟ ತ್ರಿಕೋನಾಕಾರದಲ್ಲಿ ಕತ್ತರಿಸಿದ ಚಪಾತಿಯ ಒಳಗೆ ಈ ಮಿಶ್ರಣವನ್ನು ಹಾಕಿ ಸಮೋಸ ತುಯಾರಿಸಿಟ್ಟುಕೊಳ್ಳಬೇಕು. ನಂತರ ಈ ಮೊದಲೇ ತಯಾರಿಸಿದ ಸಮೋಸವನ್ನು ಚೆನ್ನಾಗಿ ಕಾದಿರುವ ಎಣ್ಣೆಯಲ್ಲಿ ಬಿಟ್ಟು ಕೆಂಪು ಬಣ್ಣ ಬರುವವರೆಗೆ ಫ್ರೈ ಮಾಡಬೇಕು.

    ಈಗ ಬಿಸಿಬಿಸಿಯಾದ ಮತ್ತು ರುಚಿಯಾದ ಸಮೋಸ ಸವಿಯಲು ಸಿದ್ಧವಾಗಿದೆ. ಜೊತೆಯಲ್ಲಿ ಟೋಮೆಟೋ ಸಾಸ್ ನೊಂದಿಗೆ ಸವಿಯಿರಿ

  • ಫ್ರೆಂಚ್ ಫ್ರೈಸ್ ಮಾಡುವ ವಿಧಾನ

    ಫ್ರೆಂಚ್ ಫ್ರೈಸ್ ಮಾಡುವ ವಿಧಾನ

    ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜನರು ಸಹ 2021ರ ಬರಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಕೊರೊನಾ ಹಿನ್ನೆಲೆ ಸರ್ಕಾರ ನಿಷೇಧಾಜ್ಞೆ ವಿಧಿಸಿದೆ. ಇಂದು ಸಂಜೆಯಿಂದಲೇ ಬಹುತೇಕ ಬಂದ್ ವಾತಾವಾರಣ ನಿರ್ಮಾಣವಾಗೋದು ಖಚಿತ. ಹಾಗಾಗಿ ಮೆನೆಯಲ್ಲಿಯೇ ಸಂಜೆಯ ಸ್ನ್ಯಾಕ್ಸ್ ಮಾಡಿಕೊಳ್ಳಿ. ಫ್ರೆಂಚ್ ಫ್ರೈಸ್ ಮಾಡುವ ವಿಧಾನ ಇಲ್ಲಿದೆ

    ಬೇಕಾಗುವ ಸಾಮಾಗ್ರಿಗಳು
    * ಆಲೂಗಡ್ಡೆ – 250 ಗ್ರಾಂ
    * ಚಾಟ್ ಮಸಲಾ – 3 ರಿಂದ 4 ಟೀಸ್ಪೂನ್
    * ಎಣ್ಣೆ ಕರಿಯಲು
    * ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲಿಗೆ ಆಲೂಗಡ್ಡೆಯ ಸಿಪ್ಪೆ ತೆಗೆದು ಉದ್ದವಾಗಿ ಫ್ರೆಂಚ್ ಫ್ರೈಸ್ ಶೇಪ್ ನಲ್ಲಿ ಕಟ್ ಮಾಡ್ಕೊಂಡು 5 ರಿಂದ 6 ನಿಮಿಷ ನೀರಿನಲ್ಲಿ ನೆನೆಸಿ ತೊಳೆದು ಎತ್ತಿಟ್ಟುಕೊಳ್ಳಿ.
    * ಸ್ಟೌವ್ ಆನ್ ಮಾಡಿಕೊಂಡು ಪ್ಯಾನ್ ಇರಿಸಿ. ಪ್ಯಾನ್ ಒಂದರಿಂದ ಎರಡು ಕಪ್ ನಷ್ಟು ನೀರು ಹಾಕಿ. ನೀರು ಕುದಿಯುತ್ತಿದ್ದಂತೆ ಕತ್ತರಿಸಿ ತೊಳೆದಿಟ್ಟುಕೊಂಡಿರುವ ಆಲೂಗಡ್ಡೆ ಪೀಸ್ ಮತ್ತು ಒಂದು ಟೀ ಸ್ಪೂನ್ ಉಪ್ಪು ಹಾಕಿ ಎರಡರಿಂದ ಮೂರು ನಿಮಿಷ ಬೇಯಿಸಿ.

    * ಆಲೂಗಡ್ಡೆಯನ್ನ ನೀರಿನಿಂದ ಬೇರ್ಪಡಿಸಿ ತಣ್ಣಗಾಗಲು ಬಿಡಿ.
    * ಸ್ಟೌವ್ ಮೇಲೆ ಮತ್ತೊಂದು ಪ್ಯಾನ್ ಇರಿಸಿ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ.
    * ತಣ್ಣಗಾಗಿರುವ ಆಲೂಗಡ್ಡೆ ಪೀಸ್ ಗಳನ್ನ ಕಾಟನ್ ಬಟ್ಟೆಯಿಂದ ಮೃದುವಾಗಿ ಒರೆಸಿ ಡ್ರೈ ಮಾಡಿಕೊಳ್ಳಿ.
    * ಎಣ್ಣೆ ಬಿಸಿಯಾಗುತ್ತಿದ್ದಂತೆ ಒಂದೊಂದಾಗಿ ಆಲೂಗಡ್ಡೆ ಪೀಸ್ ಹಾಕಿ ಗೋಲ್ಡನ್ ಕಲರ್ ಬರೋವರೆಗೆ ಫ್ರೈ ಮಾಡಿ, ಸರ್ವಿಂಗ್ ಪ್ಲೇಟ್ ಹಾಕಿ ಚಾಟ್ ಮಸಾಲಾ ಉದುರಿಸಿದ್ರೆ ನಿಮ್ಮ ಫ್ರೆಂಚ್ ಫ್ರೈಸ್ ರೆಡಿ. (ನೀವು ಖಾರ ಪ್ರಿಯರಾಗಿದ್ರೆ ಅಚ್ಚ ಖಾರದ ಪುಡಿ ಸಹ ಉದುರಿಸಿಕೊಳ್ಳಬಹುದು)

  • ಹೊಸ ವರ್ಷಕ್ಕೆ ಮನೆಯಲ್ಲಿಯೇ ಮಾಡಿ ವೈಟ್ ಕೇಕ್

    ಹೊಸ ವರ್ಷಕ್ಕೆ ಮನೆಯಲ್ಲಿಯೇ ಮಾಡಿ ವೈಟ್ ಕೇಕ್

    ಹೊಸ ವರ್ಷದ ಆಚರಣೆಗೆ ಇನ್ನೇನು ಕೌಂಟ್‍ಡೌನ್ ಶುರುವಾಗಿದೆ. ಕೇಕ್ ಕಟ್ ಮಾಡದೇ ಎಷ್ಟೋ ಜನರಿಗೆ ನ್ಯೂ ಇಯರ್ ಕಂಪ್ಲೀಟ್ ಆಗುವುದೇ ಇಲ್ಲ. ಇನ್ನೂ ಮಕ್ಕಳಿಗಂತೂ ನ್ಯೂ ಇಯರ್ ಎಂದ ತಕ್ಷಣ ನೆನಪಾಗುವುದೇ ಕೇಕ್. ಆದ್ರೆ ಈ ಬಾರಿ ಕೊರೊನಾ ರೂಪಾಂತರಿ ಹೊಸ ವರ್ಷದ ಸಂಭ್ರಮಾಚರಣೆಗೆ ಅಡ್ಡಿಯಾಗಿದೆ.

    ಈ ಬಾರಿ ಮನೆಯಲ್ಲಿಯೇ ಕೇಕ್ ತಯಾರಿಸಿ ಮಕ್ಕಳೊಂದಿಗೆ ರುಚಿಯಾದ ಕೇಕ್ ತಿಂದು ಕಾಲ ಕಳೆಯಿರಿ. ಸುಲಭವಾಗಿ ತಯಾರಿಸುವ ಕೇಕ್ ಯಾವುದು ಅಂತೀರಾ? ವೈಟ್ ಕೇಕ್. ಇದು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿವ ಕೇಕ್ ರೆಸಿಪಿಯಾಗಿದೆ. ವೈಟ್ ಮಾಡುವ ವಿಧಾನ ಈ ಕೆಳಗೆ ನೀಡಲಾಗಿದೆ.

    ಬೇಕಾಗುವ ಸಾಮಾಗ್ರಿಗಳು
    * ವೈಟ್ ಶುಗರ್ – 1 ಕಪ್
    * ಬೆಣ್ಣೆ – 1/2 ಕಪ್
    * ಮೊಟ್ಟೆ – 2
    * ವೆನಿಲ್ಲಾ ಎಕ್ಸಟ್ರ್ಯಾಕ್ಟ್ – 2 ಟೀ ಸ್ಪೂನ್
    * ಮೈದಾ ಹಿಟ್ಟು- ಒಂದೂವರೆ ಕಪ್
    * ಬೇಕಿಂಗ್ ಪೌಡರ್ – ಒಂದು ಮುಕ್ಕಾಲು ಟೀ ಸ್ಪೂನ್
    * ಹಾಲು – ಅರ್ಧ ಕಪ್

    ಮಾಡುವ ವಿಧಾನ
    * ಸ್ಟವ್ ಮೇಲೆ ಪ್ಯಾನ್ ಅಥವಾ ಮಫಿನ್ ಪ್ಯಾನ್ ಇಟ್ಟು. ಪ್ಯಾನ್ ಸುತ್ತಲು ಗ್ರೀಸ್ ಮಾಡಿ.
    * ಒಂದು ಬಟ್ಟಲಿನಲ್ಲಿ ಸಕ್ಕರೆ ಮತ್ತು ಬೆಣ್ಣೆಯೊಂದಿಗೆ ಮೊಟ್ಟೆಯನ್ನು ಬೆರಸಿ, ನಂತರ ವೆನಿಲ್ಲಾ ಸಾರವನ್ನು ಹಾಕಿ. ಹಿಟ್ಟು ಮತ್ತು ಬೇಕಿಂಗ್ ಪೌಡರ್‍ನನ್ನು ಮಿಶ್ರಣ ಮಾಡಿ. ತಯಾರಿಸಿಕೊಂಡ ಕ್ರೀಮ್‍ನನ್ನು ಹಿಟ್ಟಿನ ಮಿಶ್ರಣದೊಂದಿಗೆ ಸೇರಿಸಿ. ಹಾಲಿನಲ್ಲಿ ಮೃದುವಾಗುವವರೆಗೂ ಬೆರಸಿ, ಒಲೆ ಮೇಲಿರುವ ಪ್ಯಾನ್‍ಗೆ ಹಾಕಿ.
    * ಒವನ್‍ನಲ್ಲಿ 30 ರಿಂದ 40 ನಿಮಿಷಗಳ ಕಾಲ ಬೇಯಿಸಿ. ಕಪ್‍ನಲ್ಲಿ ಆದ್ರೆ 20 ರಿಂದ 25 ನಿಮಿಷ ಬೇಯಿಸಿದರೆ ವೈಟ್ ಕೇಕ್ ರೆಡಿ

  • ನಾಲ್ಕು ಸ್ಟೆಪ್‍ಗಳಲ್ಲಿ ಮಾಡಿ ಹೊಸ ವರ್ಷಕ್ಕೆ ಮಗ್ ಕೇಕ್

    ನಾಲ್ಕು ಸ್ಟೆಪ್‍ಗಳಲ್ಲಿ ಮಾಡಿ ಹೊಸ ವರ್ಷಕ್ಕೆ ಮಗ್ ಕೇಕ್

    ಬಾರಿ ಹೊಸ ವರ್ಷಾಚರಣೆಗೆ ಕೊರೊನಾ ಅಡ್ಡಗಾಲು ಹಾಕಿದೆ. ಕೊರೊನಾ ಜೊತೆ ಹೊಸ ತಳಿಯ ಆತಂಕ ಸಹ ಹೆಚ್ಚಾಗಿದೆ. ಮನೆಯಲ್ಲಿಯೇ ಇದ್ದು ಕುಟುಂಬಸ್ಥರ ಜೊತೆ ನೀವೇ ಕೇಕ್ ತಯಾರಿಸಿ 2021ನ್ನು ಸ್ವಾಗತಿಸಿಕೊಳ್ಳಿ. ಬೇಕರಿಯಿಂದ ಬಣ್ಣ ಬಣ್ಣದ ಕೆಮಿಕಲ್, ಕ್ರೀಮ್ ಲೇಪಿತ ಕೇಕ್ ತರುವ ಬದಲು ಆರೋಗ್ಯಕರವಾಗಿ ಹೊಸ ವರ್ಷ ಬರಮಾಡಿಕೊಳ್ಳಿ. ನಿಮಗಾಗಿ ಸರಳವಾಗಿ ಮಗ್ ಕೇಕ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಮೈದಾ – 1/2 ಕಪ್
    * ಮೊಟ್ಟೆ -1
    * ಸಕ್ಕರೆ – 3-4 ಸ್ಪೂನ್
    * ಹಾಲು – ಸ್ವಲ್ಪ
    * ವೆನಿಲಾ ಎಸೆನ್ಸ್- ಸ್ವಲ್ಪ
    * ಬೇಕಿಂಗ್ ಪೌಡರ್ – ಚಿಟಿಕೆ
    * ಸ್ಪ್ರಿಂಕಲ್ಸ್ – ಸ್ವಲ್ಪ
    * ಬೆಣ್ಣೆ – 2 ಸ್ಪೂನ್

    ಮಾಡುವ ವಿಧಾನ
    * 2 ಕಾಫಿ ಮಗ್‍ಗೆ ಮೊದಲು ಬೆಣ್ಣೆ ಹಚ್ಚಿ.
    * ಬಳಿಕ ಅದಕ್ಕೆ ಸ್ಪ್ರಿಂಕಲ್ಸ್ ಬಿಟ್ಟು ಉಳಿದೆಲ್ಲಾ ಸಾಮಗ್ರಿಗಳನ್ನು ಸೇರಿಸಿ ಮಿಕ್ಸ್ ಮಾಡಿ.
    * ಈಗ ಮೈಕ್ರೋವೇವ್‍ನಲ್ಲಿಟ್ಟು 1 ನಿಮಿಷಗಳ ಕಾಲ ಬೇಯಿಸಿ.
    * ಕೇಕ್ ಆದ್ಮೇಲೆ ಓವನ್‍ನಿಂದ ತೆಗೆದು ಕೇಕ್ ಮೇಲೆ ಫ್ರೆಶ್ ಕ್ರಿಮ್, ಸ್ಪ್ರಿಂಕಲ್ಸ್ ಹಾಕಿ ಸರ್ವ್ ಮಾಡಿ.