Tag: recipe

  • ಮನೆಯಲ್ಲಿ ಮಾಡಿ ಹಲಸಿನ ಹಣ್ಣಿನ ಇಡ್ಲಿ

    ಮನೆಯಲ್ಲಿ ಮಾಡಿ ಹಲಸಿನ ಹಣ್ಣಿನ ಇಡ್ಲಿ

    ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಲಸಿನ ಹಣ್ಣುಗಳ ಸಿಗುವ ಸಮಯ ಇದು. ಈ ಹಣ್ಣಿನಿಂದ ಬೇರೆ ಬೇರೆ ರೀತಿಯ ಅಡುಗೆಯನ್ನು ಮಾಡಬಹುದು. ಆದರೆ ಇಂದು ಹಲಸಿನ ಹಣ್ಣಿನ ಇಡ್ಲಿ ಮಾಡುವುದು ಹೇಗೆ ಎಂದು ತಿಳಿದುಕೊಂಡು ನೀವು ಮನೆಯಲ್ಲಿಯೇ ರುಚಿಯಾಗಿ ಹಲಸಿನ ಹಣ್ಣಿನ ಇಡ್ಲಿ ಮಾಡಿ ಸಿವಿಯಿರಿ..

    ಬೇಕಾಗುವ ಸಾಮಗ್ರಿಗಳು:

    * ಏಲಕ್ಕಿ – 4-5
    * ಅಕ್ಕಿ ರವೆ – 1 ಕಪ್
    * ಹಲಸಿನ ಹಣ್ಣು- 2ಕಪ್
    * ರಚಿಗೆ ತಕ್ಕಷ್ಟು ಉಪ್ಪು
    * ಕೊಬ್ಬರಿ ತುರಿ- ಅರ್ಧ ಕಪ್
    * ಬಾಳೆ ಎಲೆ- 4
    * ತುಪ್ಪ- ಅರ್ಧ ಕಪ್

    * ಬೆಲ್ಲ-  1 ಕಪ್

    ಮಾಡುವ ವಿಧಾನ:
    * ಹಲಸಿನ ಹಣ್ಣನ್ನು ಚೆನ್ನಾಗಿ ಕಿವುಚಿ ರಸ ತೆಗೆದುಕೊಳ್ಳಬೇಕು. ನಂತರ ಅದಕ್ಕೆ ಸಕ್ಕರೆ ಹಾಕಿ ಕಲಸಿಕೊಳ್ಳಬೇಕು.

    * ಬಳಿಕ ಅದಕ್ಕೆ ಉಪ್ಪು, ಏಲಕ್ಕಿ ಪುಡಿ, ತೆಂಗಿನಕಾಯಿ ತುರಿ, ಅಕ್ಕಿರವೆ ಹಾಕಿ ಕಲಸಬೇಕು. ಒಂದು ಗಂಟೆ ಅದನ್ನು ಹಾಗೆ ಇಡಬೇಕು.

    * ನಂತರ ಇಡ್ಲಿ ಪಾತ್ರೆಗೆ ಸ್ವಲ್ಪ ನೀರು ಹಾಕಿ ಅದರ ಮೇಲೆ ಒಂದು ತಟ್ಟೆ ಇಟ್ಟು, ಬಾಳೆ ಎಲೆಗೆ ತುಪ್ಪವನ್ನು ಸವರಿ ಸಿದ್ಧಪಡಿಸಿಕೊಂಡ ಹಲಸಿನಕಾಯಿ ಹಿಟ್ಟನ್ನು ಅದರೊಳಗೆ ಹಾಕಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಹಾಕಿ.

    * ಬಳಿಕ ಮುಚ್ಚಳವನ್ನು ಮುಚ್ಚಿ. 25 ನಿಮಿಷ ಬೇಯಿಸಬೇಕು. ನಂತರ ರುಚಿಕರವಾದ ಹಲಸಿನ ಹಣ್ಣಿನ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.

  • ಈ ದಿನ ಮಾಡಿ ಮಾವಿನ ಹಣ್ಣಿನ ಕೇಸರಿ ಬಾತ್

    ಈ ದಿನ ಮಾಡಿ ಮಾವಿನ ಹಣ್ಣಿನ ಕೇಸರಿ ಬಾತ್

    ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ ಮಾವಿನ ಹಣ್ಣಿನ ಸೀಸನ್ ಮುಗಿಯುತ್ತಾ ಬಂದಿದೆ. ಹೀಗಾಗಿ ನೀವು ಇಂದು ಸಿಹಿಯಾದ ಮಾವಿನ ಹಣ್ಣಿನ ಕೇಸರಿ ಬಾತ್ ಮಾಡಿ ಸಿವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಮಾವಿನ ಹಣ್ಣು- 1ಕಪ್
    * ಚಿರೋಟಿ ರವೆ- 1ಕಪ್
    * ಹಾಲು- 1ಕಪ್
    * ತುಪ್ಪ- ಅರ್ಧ ಕಪ್
    * ದ್ರಾಕ್ಷಿ ,ಗೋಡಂಬಿ
    * ಏಲಕ್ಕಿ ಪುಡಿ – ಅರ್ಧ ಟೀ ಸ್ಪೂನ್
    * ಹಳದಿ ಬಣ್ಣದ ಫುಡ್ ಕಲರ್
    * ಕೇಸರಿ ದಳ

    ಮಾಡುವ ವಿಧಾನ:
    * ಮೊದಲು ಬಾಣಲೆಗೆ 2 ಚಮಚ ತುಪ್ಪ ಹಾಕಿ ಅದು ಬಿಸಿ ಆದ ಮೇಲೆ ದ್ರಾಕ್ಷಿ ಮತ್ತು ಗೋಡಂಬಿ ಹಾಕಿ ಹುರಿದುಕೊಳ್ಳಿ, ಈಗ ಅದನ್ನು ತೆಗೆದು ಬದಿಯಲ್ಲಿ ಇಟ್ಟಿರಬೇಕು.  ಇದನ್ನೂ ಓದಿ: ಬೆಳಗ್ಗಿನ ಟಿಫಿನ್‌ಗೆ ಮಾಡಿ ಬಿಸಿ ಬೇಳೆ ಬಾತ್

    * ಮಾವಿನ ಹಣ್ಣಿನ ಮಿಶ್ರಣವನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು, ಬಳಿಕ ಅದಕ್ಕೆ ಹಾಲು ಹಾಕಿ ತಿರುಗಿಸಿಕೊಳ್ಳಬೇಕು, ನಂತರ ಅದಕ್ಕೆ ನೀರು ಹಾಕಿ 2 ನಿಮಿಷ ಕುದಿಯಲು ಬಿಡಬೇಕು.

    * ಬಳಿಕ ಏಲಕ್ಕಿ ಪುಡಿ, ಕೇಸರಿ ದಳ, ಹಳದಿ ಬಣ್ಣದ ಫುಡ್ ಕಲರ್ ಹಾಕಿ, ಆ ಮೇಲೆ ಹುರಿದ ದ್ರಾಕ್ಷಿ- ಗೋಡಂಬಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

    * ನಂತರ ಹುರಿದ ಚಿರೋಟಿ ರವೆ, ಸ್ವಲ್ಪ ತುಪ್ಪ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ, ನಂತರ ಬೇಕಾದರೆ ಸ್ವಲ್ಪ ಸಕ್ಕರೆ ಸೇರಿಸಿ. ಬಳಿಕ 2 ರಿಂದ 3 ನಿಮಿಷ ಬೇಯಿಸಿದರೆ ಬಿಸಿ ಬಿಸಿ ಮಾವಿನ ಹಣ್ಣಿನ ಕೇಸರಿ ಬಾತ್ ಸವಿಯಲು ಸಿದ್ಧವಾಗುತ್ತದೆ.

  • ಶನಿವಾರ ಮಾಡಿ ವೆಜ್ ಬಿರಿಯಾನಿ

    ಶನಿವಾರ ಮಾಡಿ ವೆಜ್ ಬಿರಿಯಾನಿ

    ವೀಕ್‍ಎಂಡ್‍ನಲ್ಲಿ ಮಾಂಸ ಊಟವನ್ನು ಮಾಡಲು ಪ್ರತ್ರಿಯೊಬ್ಬರು ಆಸೆ ಪಡುತ್ತಾರೆ. ಹೆಚ್ಚಿನವರು ಶನಿವಾರ ಆಗಿರುವುದರಿಂದ ಮಾಂಸ ಸೇವೆನೆ ಮಾಡುವುದಿಲ್ಲ. ನಾಳೆ ಮಾಂಸದ ಊಟವನ್ನು ಮಾಡುವ ನೀವು ಇಂದು ಮೆನೆಯಲ್ಲಿ ರುಚಿ ರುಚಿಯಾದ ವೇಜ್ ಬಿರಿಯಾನಿ ಮಾಡಿ.. ಇದನ್ನೂಓದಿ: ಗರಿಗರಿಯಾದ ಆಲೂ ಬೋಂಡಾ ಮಾಡುವ ವಿಧಾನ

    ಬೇಕಾಗುವ ಸಾಮಗ್ರಿಗಳು:
    * ಬಾಸ್ಮತಿ ಅಕ್ಕಿ -1 ಕಪ್ ನೆನೆ ಹಾಕಿರಬೇಕು
    * ಈರುಳ್ಳಿ – 1 ಕಪ್
    * ಬೀನ್ಸ್ – 1 ಕಪ್
    * ಕ್ಯಾರೆಟ್ – 1 ಕಪ್
    * ಬಟಾಣಿ – 1/2 ಕಪ್
    * ಬೆಳ್ಳುಳ್ಳಿ ಪೇಸ್ಟ್ – 2 ಟೀ ಸ್ಪೂನ್
    * ಶುಂಠಿ ಪೇಸ್ಟ್ – 2 ಟೀ ಸ್ಪೂನ್
    * ಟೊಮೆಟೊ ಪೇಸ್ಟ್ – 1 ಕಪ್
    * ಪುದೀನಾ- ಅಗತ್ಯಕ್ಕೆ ತಕ್ಕಷ್ಟು
    * ಕೊತ್ತಂಬರಿ ಸೊಪ್ಪು
    * ತುಪ್ಪ – 4 1ಈ ಸ್ಪೂನ್
    * ಮೊಸರು – 1 ಕಪ್
    * ಖಾರದ ಪುಡಿ – ಅರ್ಧ ಟೀ ಸ್ಪೂನ್
    * ಚಕ್ಕೆ – 1
    * ಲವಂಗದ ಎಲೆ
    * ಲವಂಗ- 2
    * ಇಂಗು ಚಿಟಿಕೆ
    * ಉಪ್ಪು ರುಚಿಗೆ ತಕ್ಕಷ್ಟು
    * ಗರಂ ಮಸಾಲ ಪುಡಿ
    * ಜೀರಿಗೆ – 1 ಟೀ ಸ್ಪೂನ್
    * ಏಲಕ್ಕಿ – 4

    ಮಾಡುವ ವಿಧಾನ:
    * ಅಕ್ಕಿಯನ್ನು ಚೆನ್ನಾಗಿ ತೊಳೆದು, ಒಂದು ಪಾತ್ರೆಯಲ್ಲಿ 5-10 ನಿಮಿಷಗಳ ಕಾಲ ನೆನೆಯಿಟ್ಟಿರಬೇಕು.
    * ಒಂದು ಪಾತ್ರೆಯಲ್ಲಿ ಅಕ್ಕಿಗೆ ಎರಡರಷ್ಟು ಪ್ರಮಾಣದಲ್ಲಿ ನೀರನ್ನು ಹಾಕಿ ಕುದಿಸಿ. ನಂತರ ಅಕ್ಕಿ, ಉಪ್ಪು, ಒಂದು ಏಲಕ್ಕಿ, ಲವಂಗ ಮತ್ತು ಒಂದು ಟೀ ಚಮಚ ತುಪ್ಪ ಸೇರಿಸಿ, ಬೇಯಲು ಬಿಡಿ.


    * ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಇಂಗು, ಜೀರಿಗೆ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಸೇರಿಸಿ ಹುರಿಯಿರಿ. ಈರುಳ್ಳಿ ಬೇಯುತ್ತಿದ್ದಂತೆ ಏಲಕ್ಕಿ ಮತ್ತು ಬೇ ಎಲೆಯನ್ನು ಸೇರಿಸಿ.  ಇದನ್ನೂ ಓದಿ : ಮೊಟ್ಟೆ, ಆಲೂಗಡ್ಡೆ, ಟೊಮಾಟೋ ಬಳಸಿ ತಯಾರಿಸಿ ಅಫ್ಘಾನಿ ಆಮ್ಲೆಟ್


    * ನಂತರ ಕ್ಯಾರೆಟ್, ಬೀನ್ಸ್, ಟೊಮೆಟೊ ಪೇಸ್ಟ್, ಅರಿಶಿಣ, ಉಪ್ಪು, ಬಟಾಣಿ, ಪುದೀನಾ, ಕೊತ್ತಂಬರಿ ಮತ್ತು ಮೊಸರನ್ನು ಸೇರಿಸಿ, ತರಕಾರಿಗಳು ಸ್ವಲ್ಪ ಮೃದುವಾಗುವವರೆಗೆ 2-3 ನಿಮಿಷಗಳ ಕಾಲ ಬೇಯಿಸಬೇಕು.


    * ನಂತರ ಈ ಮೊದಲೆ ತಯಾರಿಸಿದ ಮಸಾಲೆ ಇರುವ ಪಾತ್ರೆಗೆ ತಪ್ಪ ಹಾಗೂ ಇನ್ನಿತರ ಮಸಾಲೆಯನ್ನು ಹಾಕಿ ಬೇಯಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಯಾದ ವೇಜ್ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.

  • ಮೊಟ್ಟೆ, ಆಲೂಗಡ್ಡೆ, ಟೊಮಾಟೋ ಬಳಸಿ ತಯಾರಿಸಿ ಅಫ್ಘಾನಿ ಆಮ್ಲೆಟ್

    ಮೊಟ್ಟೆ, ಆಲೂಗಡ್ಡೆ, ಟೊಮಾಟೋ ಬಳಸಿ ತಯಾರಿಸಿ ಅಫ್ಘಾನಿ ಆಮ್ಲೆಟ್

    ಲಾಕ್‍ಡೌನ್ ನಿಂದ ಮನೆಯಲ್ಲಿ ಬಂಧಿಯಾಗಿರೋ ಎಷ್ಟೋ ಜನಕ್ಕೆ ಹೊಸ ರುಚಿ ನೋಡಬೇಕೆಂದು ಕಾಯುತ್ತಿದ್ದಾರೆ. ಹೊರಗೆ ಹೋಗಿ ತರೋಣ ಅಂದ್ರೆ ಲಾಕ್‍ಡೌನ್. ಇನ್ನು ಮತ್ತೆ ಕೆಲವರಿಗೆ ವರ್ಕ್ ಫ್ರಂ ಹೋಮ್ ಇರೋದರಿಂದ ಹೊರಗೆ ಹೋಗಕ್ಕೂ ಆಗಲ್ಲ. ಮನೆಯಲ್ಲಿ ಅಡುಗೆ ಮಾಡಿಕೊಳ್ಳೋಕು ಸಮಯ ಇರಲ್ಲ. ಮನೆಯಲ್ಲಿ ಮೊಟ್ಟೆ, ಆಲೂಗಡ್ಡೆ ಮತ್ತು ಟೊಮಾಟೋ ಇದ್ರೆ ರುಚಿಯಾದ ಅಫ್ಘಾನಿ ಆಮ್ಲೆಟ್ ಟ್ರೈ ಮಾಡಿ. ಬೇಗನೂ ಆಗುತ್ತೆ, ಬಾಯಿಗೆ ಹೊಸ ರುಚಿ ಸಿಕ್ಕಂತೆ ಆಗುತ್ತೆ.

    ಬೇಕಾಗುವ ಸಾಮಾಗ್ರಿಗಳು
    * ಆಲೂಗಡ್ಡೆ – ಒಂದು ಮಧ್ಯಮ ಗಾತ್ರದ್ದು
    * ಟೊಮಾಟೋ – ಒಂದು ಅಥವಾ ಎರಡು
    * ಈರುಳ್ಳಿ- 1 (ಚಿಕ್ಕದು)
    * ಮೊಟ್ಟೆ – 4 ರಿಂದ 5
    * ಅಡುಗೆ ಎಣ್ಣೆ – 1/4 ಕಪ್
    * ಉಪ್ಪು- ರುಚಿಗೆ ತಕ್ಕಷ್ಟು
    * ಬ್ಲ್ಯಾಕ್ ಪೆಪ್ಪರ್ ಪೌಡರ್ – 1/4 ಟೀ ಸ್ಪೂನ್
    * ಹಸಿ ಮೆಣಸಿನಕಾಯಿ- 2
    * ಕೋತಂಬರಿ ಸೊಪ್ಪು

    ಮಾಡುವ ವಿಧಾನ
    * ಮೊದಲಿಗೆ ಸ್ಟೌವ್ ಮೇಲೆ ಪ್ಯಾನ್ ಇರಿಸಿ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಆಲೂಗಡ್ಡೆಯ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿ ಪ್ಯಾನ್‍ಗೆ ಹಾಕಿ. ಹೀಗೆ ಆಲೂಗಡ್ಡೆಯನ್ನು ಕಡಿಮೆ ಉರಿಯಲ್ಲಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ.
    * ಆಲೂಗಡ್ಡೆ ಬೇಯುತ್ತಿದ್ದಂತೆ ಸಣ್ಣದಾಗಿ ಕತ್ತರಿಸಿರುವ ಈರುಳ್ಳಿ ಸೇರಿಸಿ ಚೆನ್ನಾಗಿ ಕಲಕಿ. ಈರುಳ್ಳಿ ಹಸಿ ವಾಸನೆ ಹೋದ ನಂತ್ರ ಕತ್ತರಿಸಿದ ಟೊಮಾಟೋ ಮಿಕ್ಸ್ ಮಾಡಿಕೊಂಡು ಎರಡರಿಂದ ಮೂರು ನಿಮಿಷ ಫ್ರೈ ಮಾಡಿಕೊಳ್ಳಿ.

    * ಆಲೂಗಡ್ಡೆ, ಟೊಮಾಟೋ ಮತ್ತು ಈರುಳ್ಳಿ ಮಿಶ್ರಣ ಬೇಯುತ್ತಿದ್ದಂತೆ ಬ್ಲ್ಯಾಕ್ ಪೆಪ್ಪರ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಕಿ. ನಂತರ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ನಾಲ್ಕರಿಂದ ಐದು ನಿಮಿಷ ಬೇಯಿಸಿ.
    * ಈಗ ಆಲೂಗಡ್ಡೆ ಸಾಫ್ಟ್ ಆಗಿರುತ್ತೆ. ಈಗ ಮೇಲೆ ಒಂದೊಂದರಂತೆ ಮೊಟ್ಟೆಗಳನ್ನು ಒಡೆದು ಹಾಕಿ. ತದನಂತರ ಮೇಲೆ ಸ್ವಲ್ಪ ಬ್ಲ್ಯಾಕ್‍ಪೆಪ್ಪರ್ ಪೌಡರ್ ಉದುರಿಸಿ. ಉದ್ದವಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಕಿ, ಕೊನೆಗೆ ಕೋತಂಬರಿ ಸೊಪ್ಪು ಉದುರಿಸಿ. ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿದ್ರೆ ಸ್ಪೈಸಿ ಅಫ್ಘಾನಿ ಆಮ್ಲೆಟ್ ಸವಿಯಲು ಸಿದ್ಧ

  • 10 ನಿಮಿಷದಲ್ಲಿ ತಯಾರಿಸಿ ಮೊಸರು ಗೊಜ್ಜು

    10 ನಿಮಿಷದಲ್ಲಿ ತಯಾರಿಸಿ ಮೊಸರು ಗೊಜ್ಜು

    ಲಾಕ್‍ಡೌನ್ ಇದೆ ಹೊರಗಡೆ ಹೋಗಿ ತರಕಾರಿ ಹಾಗೂ ಇನ್ನಿತರ ವಸ್ತಗಳನ್ನು ಖರೀದಿಸುವುದು ಕಷ್ಟವಾಗುತ್ತದೆ. ಮನೆಯಲ್ಲಿರುವ ಕೆಲವು ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಸರಳವಾಗಿ 10 ನಿಮಿಷದಲ್ಲಿ ಮೊಸರು ಗೊಜ್ಜು ಮಾಡಿಕೊಂಡು ಅನ್ನ ಮತ್ತು ರೊಟ್ಟಿ ಜೊತೆಗೆ ಸವಿಯಲು ಇಲ್ಲಿದೆ ಮಾಡುವ ವಿಧಾನ…

    ಬೇಕಾಗುವ ಸಾಮಗ್ರಿಗಳು
    * ಮೊಸರು – 1 ಕಪ್
    * ಕೆಂಪುಮೆಣಸಿನ ಪುಡಿ – 1 ಟೀ ಸ್ಪೂನ್
    * ಕೊತ್ತಂಬರಿ ಪುಡಿ- ಅರ್ಧ ಚಮಚ
    * ಜೀರಿಗೆ ಪುಡಿ- ಅರ್ಧ ಚಮಚ
    * ಅರಿಶಿಣ -ಅರ್ಧ ಚಮಚ
    * ಗರಂಮಸಾಲೆ ಪುಡಿ – ಕಾಲು ಚಮಚ
    * ಬೆಳ್ಳುಳ್ಳಿ – 1
    * ಅಡುಗೆ ಎಣ್ಣೆ- 3 ಟೀ ಸ್ಪೂನ್
    * ಸಾಸಿವೆ- ಅರ್ಧ ಚಮಚ
    * ಜೀರಿಗೆ – ಅರ್ಧ ಚಮಚ
    * ಒಣಮೆಣಸು – 2
    * ಕರಿಬೇವು
    * ಇರುಳ್ಳಿ – 1 ದೊಡ್ಡಗಾತ್ರದ್ದು
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:

    * ಮೊಸರನ್ನು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ಆ ಪಾತ್ರೆಗೆ ಮೆಣಸಿನ ಪುಡಿ, ಜೀರಿಗೆ ಪುಡಿ, ಅರಿಶಿಣ, ಗರಂಮಸಾಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಕಡೆ ತೆಗೆದಿಟ್ಟುಕೊಳ್ಳಬೇಕು. ಇದನ್ನೂ ಓದಿ: ಘಮ್ ಎನ್ನುವ ಗಸಗಸೆ ಪಾಯಸ ಮಾಡುವುದು ಹೇಗೆ ಗೊತ್ತಾ?

    * ಒಂದು ಬಾಣಲೆಗೆ ಅಡುಗೆಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು. ಅದಕ್ಕೆ ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು, ಬೆಳ್ಳುಳ್ಳಿ, ಇರುಳ್ಳಿ ಹಾಕಿ ಫ್ರೈ ಮಾಡಬೇಕು.

    * ನಂತರ ಈ ಪಾತ್ರೆಗೆ ಈ ಮೊದಲೇ ತಯಾರಿಸಿಟ್ಟ ಮೊಸರಿನ ಮಸಲಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 5 ನಿಮಿಷ ಕುದಿಸಿದರೆ ರುಚಿಯಾದ ಮೊಸರು ಗೊಜ್ಜು ಸವಿಯಲು ಸಿದ್ಧವಾಗುತ್ತದೆ.

  • ಘಮ ಘಮಿಸುವ ಮಸಾಲ ಚಿಕನ್ ಫ್ರೈ

    ಘಮ ಘಮಿಸುವ ಮಸಾಲ ಚಿಕನ್ ಫ್ರೈ

    ಲಾಕ್‍ಡೌನ್ ಇರುವುದರಿಂದ ಹೋಟೆಲ್‍ಗಳಿಗೆ ಹೋಗಿ ಊಟ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲಿ ನೀವು ಸರಳವಾಗಿ ಮತ್ತು ಸುಲಭವಾಗಿ ಎಲ್ಲರಿಗೂ ಇಷ್ಟವಾಗುವ ಘಮ ಘಮಿಸುವ ಮಸಾಲಾ ಚಿಕನ್ ಫ್ರೈ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:

    * ಚಿಕನ್ – 1 ಕೆಜಿ
    * ನಿಂಬೆಹಣ್ಣಿನ ರಸ- 1 ಚಮಚ
    * ಉಪ್ಪು- 1 ಚಮಚ
    * ಅರಿಶಿನದ ಪುಡಿ- ಸ್ವಲ್ಪ
    * ಅಚ್ಛಖಾರದ ಪುಡಿ- 2 ಚಮಚ
    * ಅಡುಗೆ ಎಣ್ಣೆ -3-4 ಚಮಚ
    * ಈರುಳ್ಳಿ- ಉದ್ದಕ್ಕೆ ಹೆಚ್ಚಿದ್ದು 1-2
    * ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು
    * ಟೊಮೆಟೋ- ಸಣ್ಣಗೆ ಹೆಚ್ಚಿದ್ದು 1
    * ದನಿಯಾ ಪುಡಿ – 1 ಚಮಚ
    * ಗರಂ ಮಸಾಲೆ ಪುಡಿ – 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:

    * ಮೊದಲಿಗೆ ಪಾತ್ರೆಯೊಂದನ್ನು ತೆಗೆದುಕೊಂಡು ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು, ಅದಕ್ಕೆ ನಿಂಬೆಹಣ್ಣಿನ ರಸ, ಉಪ್ಪು, ಅರಿಶಿನದ ಪುಡಿ, ಅಚ್ಚಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 20 ನಿಮಿಷ ನೆನೆಯಲು ಬಿಡಬೇಕು.

    * ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಂಡು ನಂತರ ಪಕ್ಕಕ್ಕಿಟ್ಟುಕೊಳ್ಳಬೇಕು.

    * ನಂತರ ಬಾಣಲೆಯಲ್ಲಿಯೇ ಉಳಿದ ಎಣ್ಣೆಗೆ ಶುಂಠಿ, ಬೆಳ್ಳುಳ್ಳಿ ಹಾಕಿ ಕೆಂಪಗೆ ಹುರಿದುಕೊಂಡು ನಂತರ ಈಗಾಗಲೇ ನೆನೆಸಿದ ಮಾಂಸವನ್ನು ಹಾಕಿ 5 ನಿಮಿಷ ಬೇಯಲು ಬಿಡಬೇಕು.

    *ನಂತರ ಟೊಮೆಟೋ, ದನಿಯಾ ಪುಡಿ, ಗರಂ ಮಸಾಲೆ ಪುಡಿ ಹಾಕಿ 15 ನಿಮಿಷ ಬೇಯಿಸಬೇಕು. ನಂತರ ಈಗಾಗಲೇ ಹುರಿದಿಟ್ಟುಕೊಂಡ ಈರುಳ್ಳಿಯನ್ನು ಹಾಕಿ 10 ನಿಮಿಷ ಬೇಯಿಸಿದರೆ, ರುಚಿಕರವಾದ ಮಸಾಲಾ ಚಿಕನ್ ಫ್ರೈ ಸವಿಯಲು ಸಿದ್ಧ.

  • ಸುಲಭವಾಗಿ ಮಾಡಿ ಸ್ಪೆಷಲ್ ರೆಸಿಪಿ ಲ್ಯಾಂಬ್ ವಿಥ್ ಡೇಟ್ಸ್

    ಸುಲಭವಾಗಿ ಮಾಡಿ ಸ್ಪೆಷಲ್ ರೆಸಿಪಿ ಲ್ಯಾಂಬ್ ವಿಥ್ ಡೇಟ್ಸ್

    ರೋಗ್ಯಕರ ಹಾಗೂ ರುಚಿಕರವಾದ ಆಹಾರವನ್ನು ಎಲ್ಲರೂ ಇಷ್ಟಪಡುತ್ತಾರೆ. ಲಾಕ್‍ಡೌನ್ ಇರುವ ಕಾರಣದಿಂದ ಮನೆಯಲ್ಲಿಯೇ ಸುಲಭ ಹಾಗೂ ಸರಳ ವಿಧಾನದಲ್ಲಿ ಒಮ್ಮೆ ಸವಿದರೆ ನಾಲಿಗೆ ಮತ್ತೆ ಮತ್ತೆ ಚಪ್ಪರಿಸಲು ಬಯಸುವ ರುಚಿಕರವಾದ ಲ್ಯಾಂಬ್ ವಿಥ್ ಡೇಟ್ಸ್ ನೀವು ಮಾಡಿ ಸಿವಿಯಿರಿ..

    ಬೇಕಾಗುವ ಸಾಮಗ್ರಿಗಳು:
    * ಬೋನ್ ಲೇಸ್ ಕುರಿ ಮಾಂಸ – ಅರ್ಧ ಕೇಜಿ
    * ಅಡುಗೆ ಎಣ್ಣೆ- 1 ಕಪ್
    * ಈರುಳ್ಳಿ- 2 ದೊಡ್ಡದು
    * ಸಿಹಿ ಗೆಣಸು- ಚಿಕ್ಕದಾಗಿ ಕತ್ತರಿಸಿರುವುದು 250 ಗ್ರಾಂ
    * ಕೊತ್ತಂಬರಿ ಪುಡಿ- 2 ಟೀ ಸ್ಪೂನ್
    * ಟೊಮೆಟೋ ಪೇಸ್ಟ್ – 1 ಚಮಚ
    * ಚಕ್ಕೆಪುಡಿ- 1 ಚಮಚ
    * ಒಣ ಖರ್ಜೂರ – 50 ಗ್ರಾಂ
    * ಕೊತ್ತಂಬರಿ ಸುಪ್ಪು
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ದಪ್ಪ ತಳವಿರುವ ಪ್ಯಾನ್‍ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಈಗ ಈರುಳ್ಳಿ, ಕುರಿ ಮಾಂಸ ಹಾಕಿ ಫ್ರೈ ಮಾಡಿ, ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವಷ್ಟು ಫ್ರೈ ಮಾಡಿ.

    * ನಂತರ ಸಿಹಿ ಗೆಣಸು ಹಾಗೂ ಹಾಕಿ ಮಿಶ್ರ ಮಾಡಿ. ಈಗ ಅರ್ಧ ಲೀಟರ್ ಕುದಿಯುವ ನೀರು ಹಾಕಿ, ಟೊಮೆಟೋ ಪೇಸ್ಟ್ ಹಾಕಿ ಕುದಿಸಿ.

    * ಈಗ ಪಾತ್ರೆಯ ಬಾಯಿ ಮುಚ್ಚಿ 15 ನಿಮಿಷ ಬೇಯಿಸಿ. ಸಿಹಿ ಗೆಣಸು, ಕುರಿ ಮಾಂಸ ಚೆನ್ನಾಗಿ ಬೇಯಲಿ. ಸಿಹಿ ಗೆಣಸು ಮುಕ್ಕಾಲು ಬೆಂದಾಗ ಒಣ ಖರ್ಜೂರ ಹಾಕಿ ಬೇಯಿಸಿ, ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸರ್ವ್ ಮಾಡಿದರೆ ರುಚಿಯಾದ ಲ್ಯಾಂಬ್ ವಿಥ್ ಡೇಟ್ಸ್ ರೆಸಿಪಿ ಸವಿಯಲು ಸಿದ್ಧವಾಗುತ್ತದೆ.

  • ಯುಗಾದಿ ಹಬ್ಬಕ್ಕೆ ಕಾಯಿ ಹೋಳಿಗೆ

    ಯುಗಾದಿ ಹಬ್ಬಕ್ಕೆ ಕಾಯಿ ಹೋಳಿಗೆ

    ಯುಗಾದಿ ಹಬ್ಬ ಹತ್ತಿರ ಬರುತ್ತಿದೆ. ಮನೆಯಲ್ಲಿ ಸಿಹಿಯಾದ ತಿಂಡಿಗಳನ್ನು ಮಾಡಬೇಕು. ಹಬ್ಬ ಎಂದರೆ ಮೊದಲಿಗೆ ನೆನಪಿಗೆ ಬರುವುದೆ ಹೋಳಿಗೆ. ಬೇಳೆ ಹೋಳಿಗೆ ತಿಂದು ಬೇಸರವಾಗಿದ್ರೆ ಈ ಬಾರಿ ಮನೆಯೆಲ್ಲಿ ಕಾಯಿ ಹೋಳಿಗೆ ಮಾಡಿ ಸವಿಯಿರಿ. ಇಲ್ಲಿದೆ ಮಾಡುವ ವಿಧಾನ…

    ಬೇಕಾಗುವ ಸಾಮಗ್ರಿಗಳು:
    * ಕಾಯಿ- 3 ಕಪ್
    * ಬೆಲ್ಲ- 2 ಕಪ್
    * ಹುರಗಡಲೆ- 1 ಟೇಬಲ್ ಸ್ಪೂನ್
    * ಗಸಗಸೆ- 2 ಟೀ ಸ್ಪೂನ್
    * ಏಲಕ್ಕಿ ಪುಡಿ – 1 ಟೀ ಸ್ಪೂನ್
    * ಹೋಳಿಗೆ ರವೆ- ಕಾಲು ಕೆಜಿ
    * ಮೈದಾಹಿಟ್ಟು- 100 ಗ್ರಾಂ
    * ಅರಿಶಿನ- 1 ಟೀ ಸ್ಪೂನ್
    * ಅಡುಗೆ ಎಣ್ಣೆ- 1 ಕಪ್
    * ಉಪ್ಪು ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಒಂದು ಅಗಲವಾದ ಪಾತ್ರೆಗೆ ಹೋಳಿಗೆ ರವೆ, ಮೈದಾಹಿಟ್ಟು, ಅರಿಶಿನ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಕಲಸುತ್ತಾ ಬನ್ನಿ. ಹಿಟ್ಟು ಮೃದುವಾಗಿರಬೇಕು, ಹೆಚ್ಚು ಗಟ್ಟಿಗಿದ್ರೆ ಹೋಳಿಗೆ ಲಟ್ಟಿಸುವುದು ಕಷ್ಟವಾಗುತ್ತದೆ.
    * ಈ ಮಿಶ್ರಣಕ್ಕೆ ಸ್ವಲ್ಪ ಎಣ್ಣೆ ಸೇರಿಸಿ ಮೃದುವಾಗಿರುವಂತೆ ಕಲಸಿ ಒಂದು ಪಾತ್ರೆಗೆ ಹಾಕಿ 1 ಗಂಟೆ ಸಮಯ ಮುಚ್ಚಿ ಇಟ್ಟಿರಬೇಕು.

    * ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಹುರಿಗಡೆಲೆ ಹಾಕಿ 2 ಸ್ಪೂನ್ ನೀರು ಹಾಕಿ ಸಣ್ಣದಾಗಿ ರುಬ್ಬಿಕೊಳ್ಳಬೇಕು.
    * ಒಲೆ ಮೇಲೆ ಒಂದು ಪಾತ್ರೆಗೆ ಬೆಲ್ಲ, ನೀರು ಹಾಕಿ ಕುದಿಸಿ. ಬೆಲ್ಲ ಕರಗಿ ನೀರು ಕುದಿಯುವಾಗ ಅದಕ್ಕೆ ರುಬ್ಬಿರುವ ಕಾಯಿ ಮಿಶ್ರಣವನ್ನು ಹಾಕಬೇಕು.
    * ಏಲಕ್ಕಿ ಪುಡಿ ಹಾಕಿ ಕಲಸಿ. ಈ ಮಿಶ್ರಣ ಬಣ್ಣ ಬದಲಾಗಿ ಗಟ್ಟಿಯಾಗಿ ಬರುವವರೆಗೆ ಸಣ್ಣ ಉರಿ ಬೆಂಕಿಯಲ್ಲಿ ಬೇಯಿಸಬೇಕು. ಇದಕ್ಕೆ ಗಸಗಸೆ, ಏಲಕ್ಕಿ ಹಾಕಿ ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಬೇಕು.

    * ಊರ್ಣಕ್ಕೆ ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಟ್ಟುಕೊಳ್ಳಿ.
    * ಕೈಗೆ ಎಣ್ಣೆ ಸವರಿಕೊಂಡು ತೆಗೆದುಕೊಂಡು ಹಿಟ್ಟನ್ನು ಕೈಯಲ್ಲಿ ಸ್ವಲ್ಪ ಅಗಲ ಮಾಡಿ ಊರ್ಣವನ್ನು ಅದರೊಳಗೆ ಇಟ್ಟು ಹೋಳಿಗೆ ಪೇಪರ್ ಮೇಲೆ ಇಟ್ಟು ಲಟ್ಟಿಸಿ.
    * ತವಾ ಬಿಸಿಯಾದ ಮೇಲೆ ಹಾಕಿ ಎರಡು ಕಡೆ ಬೇಯಿಸಿದ್ರೆ ಕಾಯಿ ಹೋಳಿಗೆ ಸವಿಯಲು ಸಿದ್ಧವಾಗುತ್ತದೆ. ಬಿಸಿಯಾದ ತುಪ್ಪದೊಂದಿಗೆ ಹೋಳಿಗೆಯನ್ನು ಸವಿಯ ಬಹುದಾಗಿದೆ.

  • ತಂಪಾದ ಸೌತೆಕಾಯಿ ಮಜ್ಜಿಗೆ ಹುಳಿ ಮಾಡುವ ಸುಲಭ ವಿಧಾನ

    ತಂಪಾದ ಸೌತೆಕಾಯಿ ಮಜ್ಜಿಗೆ ಹುಳಿ ಮಾಡುವ ಸುಲಭ ವಿಧಾನ

    ಬಿಸಿಲ ಬೇಗೆಗೆ ತಂಪಾದ ಆಹಾರವನ್ನು ಸೇವಿಸಬೇಕು ಎನ್ನಿಸುತ್ತದೆ. ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗಿರುತ್ತದೆ. ಈ ವೇಳೆ ರೈಸ್ ಜೊತೆಗೆ ಏನು ಮಾಡುವುದು ಎಂದು ಯೋಚಿಸುವವರಿಗೆ ತುಂಬಾ ಸುಲಭವಾಗಿ ಆರೋಗ್ಯಕರವಾದ ಮತ್ತು ತಂಪಾದ ಸೌತೆಕಾಯಿ ಮಜ್ಜಿಗೆ ಹುಳಿ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಸೌತೆಕಾಯಿ-2
    * ಮೊಸರು- 1 ಕಪ್
    * ತೆಂಗಿನಕಾಯಿ-1ಕಪ್
    * ಹಸಿಮೆಣಸಿನಕಾಯಿ-4 ರಿಂದ 5
    * ಕೊತ್ತಂಬರಿ
    * ಕರಿಬೇವು
    * ಸಾಸಿವೆ -1 ಸ್ಪೂನ್
    * ಅಡುಗೆ ಎಣ್ಣೆ- 4 ಸ್ಪೂನ್
    * ನೆನಸಿಟ್ಟ ಕಡ್ಲೆಬೆಳೆ – 2ಟೀ ಸ್ಪೂನ್
    * ಅರಿಶಿಣ- 1 ಸ್ಪೂನ್
    * ಜೀರಿಗೆ- 1 ಸ್ಪೂನ್
    * ಇಂಗು -ಚಿಟಿಕೆ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:

    * ಒಂದು ಪಾತ್ರೆಯಲ್ಲಿ ನೀರು ಸೌತೆಕಾಯಿ ಹಾಕಿ ಚೆನ್ನಾಗಿ ಬೇಯಲು ಬಿಡಬೇಕು.
    * ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ, ಹಸಿಮೆಣಸಿನಕಾಯಿ, ನೆನೆಸಿಟ್ಟ ಕಡ್ಲೆಬೇಳೆ, ಜೀರಿಗೆ, ಅರಿಶಿಣ, ಕೊತ್ತಂಬರಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

    * ನಂತರ ಒಂದು ಪಾತ್ರೆಗೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು. ಬಿಸಿಯಾದ ಎಣ್ಣೆಗೆ ಸಾಸಿವೆ ಮತ್ತು ಕರಿಬೇವು, ಇಂಗು ಹಾಕಿ ಪ್ರೈ ಮಾಡಬೇಕು.
    * ಈ ಬಾಣಲೆಗೆ ಈಗಾಗಲೇ ರುಬ್ಬಿ ತಯಾರಿಸಿರುವ ಮಸಾಲೆಯನ್ನು ಹಾಕಬೇಕು. ಹಸಿವಾಸನೆ ಹೋಗುವವರೆಗೆ ಪ್ರೈ ಮಾಡಬೇಕು.

    * ಈ ಒಗ್ಗರಣೆ ಪಾತ್ರೆಗೆ ಈ ಮೊದಲೇ ಬೇಯಿಸಿದ ಸೌತೆಕಾಯಿಯನ್ನು ಹಾಕಿ ಮಸಾಲೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು.
    * ಸಾಂಬಾರ್ ಚೆನ್ನಾಗಿ ಬೇಯಿಸಿದ ನಂತರ ಇದಕ್ಕೆ ಮೊಸರನ್ನು ಹಾಕಿ ಮಿಶ್ರಣ ಮಾಡಿ ಬೇಕಾದಷ್ಟು ಉಪ್ಪನ್ನು ಹಾಕಬೇಕು. ಈಗ ರುಚಿಯಾದ ಮತ್ತು ತಂಪಾದ ಸೌತೆಕಾಯಿ ಹುಳಿ ಸಿದ್ಧವಾಗುತ್ತದೆ.

  • ಬಿಸಿಲಿನ ಬೇಗೆಗೆ  ಕುಡಿಯಿರಿ ತಂಪಾದ ಜೋಳದ ಅಂಬಲಿ

    ಬಿಸಿಲಿನ ಬೇಗೆಗೆ ಕುಡಿಯಿರಿ ತಂಪಾದ ಜೋಳದ ಅಂಬಲಿ

    ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ದೇಹಕ್ಕೆ ತಂಪಾದ ಆಹಾರ ಪದಾರ್ಥಗಳ ಅವಶ್ಯಕತೆ ಇರುತ್ತದೆ. ಅಂಗಡಿಯಲ್ಲಿ ಸಿಗುವ ಜ್ಯೂಸ್ ಹಾಗೂ ತಂಪಾದ ಪಾನಿಯಗಳನ್ನು ಕುಡಿಯುವ ಬದಲಾಗಿ ನೀವೇ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಜೋಳದ ಅಂಬಲಿಯನ್ನು ಮಾಡಿ ಪ್ರತಿನಿತ್ಯ ಬೆಳಗ್ಗೆ ಸೇವಿಸಬಹುದಾಗಿದೆ. ಅಂತೆಯೇ ಅತ್ಯಂತ ಸುಲಭ ಹಾಗೂ ಸತಿ ಬೇಗನೆ ತಯಾರಿಸಬಹುದಾದ ಜೋಳದ ಅಂಬಲಿ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ. ನೀವೂ ಒಂದು ಬಾರಿ ಟ್ರೈ ಮಾಡಿ..

    ಬೇಕಾಗುವ ಸಾಮಗ್ರಿಗಳು:
    * ಜೋಳದ ಹಿಟ್ಟು- 1 ಕಪ್
    * ಬೆಳ್ಳುಳ್ಳಿ – 4 ರಿಂದ 5
    * ಜೀರಿಗೆ ಪೌಡರ್- ಅರ್ಧ ಸ್ಪೂನ್
    * ಶುಂಠಿ ಪೇಸ್ಟ್- ಅರ್ಧ ಸ್ಪೂನ್
    * ಕೊತ್ತಂಬರಿ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಒಂದು ಪಾತ್ರೆಗೆ ಅರ್ಧ ಲೋಟದಷ್ಟು ನೀರು ಹಾಕಿ ನಂತರ ಅದಕ್ಕೆ ಜೋಳದ ಹಿಟ್ಟು ಬೆರೆಸಿ, ಹಿಟ್ಟು ಗಂಟು ಆಗದ ರೀತಿಯಲ್ಲಿ ಚೆನ್ನಾಗಿ ಮಿಶ್ರಣವನ್ನು ಮಾಡಬೇಕು. ಇದನ್ನು ಓದಿ : ರಾಗಿ ಅಂಬಲಿ ಕುಡಿಯಿರಿ ದೇಹವನ್ನು ಕೂಲ್ ಆಗಿಟ್ಟುಕೊಳ್ಳಿ – ಅಂಬಲಿ ಮಾಡೋ ಸುಲಭ ವಿಧಾನ ಓದಿ

    * ಇತ್ತ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿಗೆ ಇಟ್ಟಿರಬೇಕು. ನೀರು ಬಿಸಿಯಾದ ನಂತರ ಆ ಪಾತ್ರೆಗೆ ನಾವು ಈ ಮೊದಲೇ ತಯಾರಿಸಿದ ಜೋಳದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ಮೊಸರು ಹಾಕಿ ಸ್ಪೂನ್ ನಲ್ಲಿ ತಿರುಗಿಸಿ ತೆಳುವಾಗಿ ಬರುವಂತೆ ಮಾಡಬೇಕು. ಇದನ್ನು ಓದಿ : ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡೋ ವಿಧಾನ

    * ಈ ಮೊದಲೇ ನಾವು ಕುದಿಸಿ ತಯಾರಿಸಿದ ಜೋಳದ ಗಂಜಿ ಮತ್ತು ಮಜ್ಜಿಗೆ ಎರಡನ್ನು ಒಂದೇ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪೌಡರ್, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.ಇದನ್ನು ಓದಿ : ರುಚಿಯಾದ ರಾಗಿ ಪಾಯಸ ಮಾಡುವ ವಿಧಾನ

    * ನಂತರ ಈ ಕೊತ್ತಂಬರಿಯನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಯಾದ ಮತ್ತು ಆರೋಗ್ಯಕರವಾದ ತಂಪುಪಾನೀಯ ಮನೆಯಲ್ಲಿಯೇ ತಯಾರಿಸಿ ಸವಿಯಿರಿ. ಇದನ್ನು ಓದಿ : ಬೇಸಿಗೆಯಲ್ಲಿ ತಂಪಾಗಿರೋಕೆ ಇಲ್ಲಿದೆ ರಾಗಿ ಗಂಜಿ ಮಾಡೋ ವಿಧಾನ