Tag: recipe

  • ಮಳೆಗೆ ಬಿಸಿಬಿಸಿಯಾಗಿ ಮಾಡಿ ಸವಿಯಿರಿ ಪುಂಡಿ

    ಮಳೆಗೆ ಬಿಸಿಬಿಸಿಯಾಗಿ ಮಾಡಿ ಸವಿಯಿರಿ ಪುಂಡಿ

    ರಾವಳಿಯವರು ಮಾಡುವ ಬ್ರೇಕ್ಫಾಸ್ಟ್ ಗಳಲ್ಲಿ ಇದು ಪುಂಡಿ ಒಂದು. ಇದನ್ನು ಕುಂದಾಪುರದ ಕಡೆ ಅಕ್ಕಿ ಉಂಡಿ ಎಂದು ಕರೆದರೆ ತುಳುವಲ್ಲಿ ಪುಂಡಿ ಎಂದು ಕರೆಯುತ್ತಾರೆ.

    ಪುಂಡಿ ಅಥವಾ ಕಡುಬನ್ನು ಎರಡು ವಿಧಾನದಲ್ಲಿ ಮಾಡಬಹುದು. ಮೊದಲನೆಯ ವಿಧಾನವೆಂದರೆ ಅಕ್ಕಿಯನ್ನು ನೆನೆಸಿ, ರುಬ್ಬಿ, ಹಿಟ್ಟು ತಯಾರು ಮಾಡಿಕೊಂಡು ನಂತರ ಸಣ್ಣ ಉರಿಯಲ್ಲಿ ಕಲಕಿ ಬೇಯಿಸುತ್ತ ಮಿಶ್ರಣವನ್ನು ದಪ್ಪವಾಗಿಸಬೇಕು. ಹೀಗೆ ಮಾಡಿದ ಮಿಶ್ರಣದಿಂದ ಉಂಡೆ ಕಟ್ಟಿ ಹಬೆಯಲ್ಲಿ ಬೇಯಿಸಬೇಕು.

    ಇನ್ನೊಂದು ವಿಧಾನವೆಂದರೆ ಅಕ್ಕಿಯನ್ನು ನೆನೆಸಿ ರುಬ್ಬುವ ಬದಲು ಅಕ್ಕಿ ರವೆಯನ್ನು ಬಳಸುವುದು. ಇಲ್ಲಿ ಅಕ್ಕಿ ರವೆ ಹಾಕಿ ಮಾಡುವ ವಿಧಾನವನ್ನು ತೋರಿಸಲಾಗಿದೆ. ಇದನ್ನೂ ಓದಿ: ಘಮ ಘಮಿಸುವ ಪಾಲಕ್ ಚಿಕನ್ ಕರಿ ನೀವೂ ಮಾಡಿ

    ಬೇಕಾಗುವ ಸಾಮಗ್ರಿಗಳು:
    ಅಕ್ಕಿ ರವೆ – 1 ಕಪ್
    ಸಾಸಿವೆ – 1 ಚಮಚ
    ಜೀರಿಗೆ – 1 ಚಮಚ
    ಉದ್ದಿನ ಬೇಳೆ -1 ದೊಡ್ಡ ಚಮಚ
    ಕಡಲೆ ಬೇಳೆ- 1 ದೊಡ್ಡ ಚಮಚ

    ಎಣ್ಣೆ – 2 ದೊಡ್ಡ ಚಮಚ
    ಒಣ ಮೆಣಸಿನ ಕಾಯಿ – 1(ಕಟ್ ಮಾಡಿದ)
    ಗೋಡಂಬಿ – 1 ದೊಡ್ಡ ಚಮಚ( ಕಟ್ ಮಾಡಿದ)
    ತೆಂಗಿನ ತುರಿ – ಅರ್ಧ ಕಪ್
    ನೀರು – ಎರಡೂವರೆ ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಕರಿಬೇವು – ಸ್ವಲ್ಪ

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ. ಇದನ್ನೂ ಓದಿ: ಸಿಹಿಯಾದ ಅಂಜೂರ ಹಲ್ವಾ ನೀವು ಮಾಡಿ

    * ಇತ್ತ ತುಂಡು ಮಾಡಿದ ಒಣ ಮೆಣಸಿನಕಾಯಿಯನ್ನು ಹಾಗೂ ಗೋಡಂಬಿಯನ್ನು ಹಾಕಿ 8 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಿರಿ. ಬಳಿಕ ಎಲ್ಲಾ ಐಟಂಗಳನ್ನು ಒಂದು ತಟ್ಟೆಗೆ ಹಾಕಿಡಿ. ಇನ್ನೊಂದು ಪಾತ್ರೆಯಲ್ಲಿ ಎರಡೂವರೆ ಕಪ್ ನೀರು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ನೀರು ಒಂದು ಕುದಿ ಬರುವ ತನಕ ಬಿಡಿ.

    * ನಂತರ ಹುರಿದಿಟ್ಟ ರವೆಯನ್ನು ಹಾಕಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ ಬೇಯಿಸಿ. ನಂತರ ಅರ್ಧ ಕಪ್ ಹಸಿ ತೆಂಗಿನ ತುರಿ ಹಾಕಿ ಚೆನ್ನಾಗಿ ಕಲಸಿ. ಆಗ ಮಿಶ್ರಣವು ಗಟ್ಟಿಯಾಗುತ್ತಾ ಹೋಗುತ್ತದೆ. ಮಿಶ್ರಣವು ತಳ ಬಿಡಲು ಪ್ರಾಂಭಿಸಿದಾಗ ಉರಿಯನ್ನು ನಿಲ್ಲಿಸಿ. ಬಳಿಕ ಮಿಶ್ರಣವನ್ನು ಬೇರೊಂದು ಪಾತ್ರೆಗೆ ಹಾಕಿಕೊಂಡು ಅಂಗೈಯನ್ನು ತಣ್ಣೀರಿನಲ್ಲಿ ಅದ್ದಿಕೊಂಡು ಪುಂಡಿ(ಉಂಡೆ) ಮಾಡಿ.

    * ಇದಾದ ನಂತರ ಒಂದು ಇಡ್ಲಿ ಸ್ಟೀಮರ್ ನಲ್ಲಿ ಪ್ಲೇಟ್ ಇಟ್ಟು ಅದನ್ನು ಎಣ್ಣೆಯಿಂದ ಸವರಿ, ಅದರ ಮೇಲೆ ಈಗಾಗಲೇ ತಯಾರಿಸಿದ ಪುಂಡಿಗಳನ್ನು ಇಡಿ.ಪುಂಡಿಗಳನ್ನು 12 ನಿಮಿಷಗಳ ಕಾಲ ದೊಡ್ಡ ಉರಿಯಲ್ಲಿ ಹಬೆಯಲ್ಲಿ ಬೇಯಿಸಿದರೆ ಅಕ್ಕಿ ಪುಂಡಿ ತಯಾರಾಗುತ್ತದೆ. ಬಿಸಿ ಬಿಸಿಯಾಗಿರುವ ಈ ಪುಂಡಿಯನ್ನುಯ ತೆಂಗಿನ ಕಾಯಿ ಚಟ್ನಿ ಜೊತೆ ಸವಿಯಿರಿ.

  • ಖಾರವಾದ ಮೊಟ್ಟೆ ಚಿಲ್ಲಿ ನೀವೂ ಮಾಡಿ

    ಖಾರವಾದ ಮೊಟ್ಟೆ ಚಿಲ್ಲಿ ನೀವೂ ಮಾಡಿ

    ಮೊಟ್ಟೆ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಮೊಟ್ಟೆಯಿಂದ ನಾನಾಬಗೆಯ ಆಹಾರವನ್ನು ತಯಾರಿಸಬಹುದಾಗಿದೆ. ಚಿಕನ್ ಚಿಲ್ಲಿ, ಮಟನ್ ಚಿಲ್ಲಿಯನ್ನು ಎಲ್ಲರೂ ತಿಂದಿರುತ್ತಾರೆ.ಇಂದು ನೀವು ಕೊಂಚ ಡಿಫರೆಂಟ್ ಆಗಿ  ನಿಮ್ಮ ಮನೆಯಲ್ಲಿ ಖಾರವಾದ ಮೊಟ್ಟೆ ಚಿಲ್ಲಿಯನ್ನು ಮಾಡಲು ಪ್ರಯತ್ನಿಸಿ.

    ಬೇಕಾಗುವ ಸಾಮಗ್ರಿಗಳು:
    * ಮೊಟ್ಟೆಗಳು – 4
    *ಕಾರ್ನ್‌ಫ್ಲೋರ್ (ಜೋಳದ ಹಿಟ್ಟು)-  ಅರ್ಧ ಕಪ್
    *ಒಣ ಮೆಣಸಿನಕಾಯಿ – 2
    * ಶುಂಠಿ
    *ಬೆಳ್ಳುಳ್ಳಿ – 4-5
    *ಈರುಳ್ಳಿ- 1
    *ರೆಡ್ ಚಿಲ್ಲಿ ಸಾಸ್- 2 ಟೀ ಸ್ಪೂನ್
    *ಸೋಯಾ ಸಾಸ್ – 1 ಟೀ ಸ್ಪೂನ್
    *ನಿಂಬೆ ರಸ – 1 ಟೀ ಸ್ಪೂನ್
    *ಜೇನು ತುಪ್ಪ- 1 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- 1ಕಪ್
    * ಹಸಿ ಮೆಣಸಿನಕಾಯಿ- 4
    * ಕ್ಯಾಪ್ಸಿಕಂ-1

    ಮಾಡುವ ವಿಧಾನ:
    * ನೀರು, ಕಾರ್ನ್‌ಫ್ಲೋರ್, ಉಪ್ಪು ಹಾಕಿ ಮಿಶ್ರಣವನ್ನು ಹಾಕಿ ಬಜ್ಜಿ ಹಿಟ್ಟಿನ ರೀತಿ ಮಾಡಿಕೊಳ್ಳಿ.
    * ಈಗ ತಯಾರಿಸಿಟ್ಟಿರುವ ಹಿಟ್ಟಿನಲ್ಲಿ ಕತ್ತರಿಸಿಟ್ಟ ಮೊಟ್ಟೆಗಳನ್ನು ಅದ್ದಿ ಅಡುಗೆ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಮೊಟ್ಟೆಗಳು ಬಜ್ಜಿಯ ರೀತಿ ಹೊಂಬಣ್ಣಕ್ಕೆ ಬರುವರೆ ಬೇಯಿಸಬೇಕು.

    * ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಇದಕ್ಕೆ ಒಣ ಮೆಣಸಿನಕಾಯಿ,ಹಸಿ ಮೆಣಸಿನಕಾಯಿ, ಕ್ಯಾಪ್ಸಿಕಂ, ಬೆಳ್ಳುಳ್ಳಿ, ಶುಂಠಿಯನ್ನು ಹಾಕಿ ಚೆನ್ನಾಗಿ ಬೇಯಿಸಬೇಕು.


    * ನಂತರ ಇದಕ್ಕೆ ಈರುಳ್ಳಿ, ರೆಡ್ ಚಿಲ್ಲಿಸಾಸ್, ಸೋಯಾ ಸಾಸ್, ಉಪ್ಪು, ಜೇನು ತುಪ್ಪ ಮತ್ತು ನಿಂಬೆರಸವನ್ನು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ, 3-4 ನಿಮಿಷಗಳ ಕಾಲ ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸಬೇಕು.

    * ನಂತರ ಈಗ ಇದಕ್ಕೆ ಈ ಮೊದಲೇ ಫ್ರೈಮಾಡಿದ ಮೊಟ್ಟೆ ತುಂಡು, ಕಾರ್ನ್‌ಫ್ಲೋರ್ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. 2-3 ನಿಮಿಷಗಳ ಕಾಲ ಬೇಯಿಸಿದರೆ ಮೊಟ್ಟೆ ಚಿಲ್ಲಿ ಸವಿಯಲು ಸಿದ್ಧವಾಗುತ್ತದೆ.

  • ಸರಳವಾಗಿ ಮಾಡಿ ಶೇಂಗಾ ಹೋಳಿಗೆ

    ಸರಳವಾಗಿ ಮಾಡಿ ಶೇಂಗಾ ಹೋಳಿಗೆ

    ಸಿಹಿಯಾದ ತಿಂಡಿಗಳನ್ನು ತಿನ್ನಬೇಕು ಎಂದು ಬಯಸುತ್ತಿದ್ದೀರಾ? ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹೀಗಾಗಿ ನೀವು ಇಂದು ರುಚಿಯಾಗಿ ಶೇಂಗಾ ಹೋಳಿಗೆ ಮಾಡಿ ಸವಿಯಲು ಮಾಡಲು ವಿಧಾನ ಇಲ್ಲಿದೆ. ಇದನ್ನೂ ಓದಿ:  ಖಾರ ಖಾರವಾದ ಕೊಡಗು ಶೈಲಿಯ ಹಂದಿ ಕರಿ ಮಾಡಿ

    ಬೇಕಾಗುವ ಸಾಮಗ್ರಿಗಳು:
    * ಗೋಧಿ ಹಿಟ್ಟು- 1 ಕಪ್
    * ಬಿಳಿ ಎಳ್ಳು- ಅರ್ಧ ಕಪ್
    * ಶೇಂಗಾ- 1 ಕಪ್ ಕಪ್
    * ಬೆಲ್ಲ- 2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- 1 ಕಪ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಗೆ ಗೋಧಿ ಹಿಟ್ಟು, ಕಾಯಿಸಿದ ಎಣ್ಣೆ, ಉಪ್ಪು, ನೀರು ಹಾಕಿ ಕಲಸಿಕೊಳ್ಳಿ.
    * ಬಳಿಕ ಹಿಟ್ಟುನ್ನು ಚಿಕ್ಕ ಉಂಡೆ ಮಾಡಿ, ಸ್ವಲ್ಪ ತಟ್ಟಿ.

    * ನಂತರ ಬಿಳಿ ಎಳ್ಳು, ಶೇಂಗಾ, ಬೆಲ್ಲ, ಉಪ್ಪು ಹಾಕಿ ಮಿಶ್ರಣ ಸಿದ್ಧ ಮಾಡಿಕೊಳ್ಳಿ.
    * ನಂತರ ಹೋಳಿಗೆ ಆಕಾರಕ್ಕೆ ಗೋಧಿ ಹಿಟ್ಟನ್ನು ತಟ್ಟಿಕೊಳ್ಳಿ.

    * ಬಳಿಕ ಒಂದು ತವಾಗೆ ಎಣ್ಣೆ ಹಾಕಿ, ಅದು ಕಾದ ಮೇಲೆ ತಟ್ಟಿದ ಹೋಳಿಗೆ ಹಾಕಿ ಬೇಯಿಸಿದರೆ ಈಗ ರುಚಿಕರವಾದ ಶೇಂಗಾ ಹೋಳಿಗೆ ಸವಿಯಲು ಸಿದ್ಧವಾಗುತ್ತದೆ.

  • ಗರಿ ಗರಿಯಾದ ಸಬ್ಬಕ್ಕಿ ವಡೆ ಮಾಡಿ

    ಗರಿ ಗರಿಯಾದ ಸಬ್ಬಕ್ಕಿ ವಡೆ ಮಾಡಿ

    ಮುಂಗಾರಿನ ಮಳೆ ಶುರುವಾಗಿದೆ ನಾಲಿಗೆರುಚಿಯಾದ ಬಿಸಿಯಾದ ಆಹಾರವನ್ನು ಸವಿಯಲು ಬಯಸುತ್ತದೆ. ಹೀಗಿರುವಾಗ ನಾವು ಇಂದು ತುಂಬಾ ಸರವಾಗಿ ಮಾಡುವ ಸಬ್ಬಕ್ಕಿ ವಡೆಯನ್ನು ಮಾಡಲು ಪ್ರಯತ್ನಿಸಲು ಇಲ್ಲದೆ ಮಾಡುವ ವಿಧಾನ.

    ಬೇಕಾಗುವ ಸಾಮಗ್ರಿಗಳು: 
    * ಆಲೂಗಡ್ಡೆ – 2 ರಿಂದ3
    * ಸಬ್ಬಕ್ಕಿ- 100 ಗ್ರಾಂ
    * ಹಸಿಮೆಣಸಿನಕಾಯಿ- 4
    * ಜೀರಿಗೆ- 1 ಟೀ ಸ್ಪೂನ್
    * ಕೊತ್ತಂಬರಿ ಸೊಪ್ಪು
    * ಕಾಳು ಮೆಣಸಿನ ಪುಡಿ- ಅರ್ಧ ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಕಡಲೆಕಾಯಿ ಬೀಜ- ಹುರಿದು ಪುಡಿ ತರಿತರಿಯಾಗಿ ಪುಡಿ ಮಾಡಿಕೊಂಡದ್ದು ಸ್ವಲ್ಪ
    *ಅಡುಗೆ ಎಣ್ಣೆ- 1ಕಪ್ ಇದನ್ನೂ ಓದಿ:  ಸೋಮವಾರಕ್ಕೆ ಮಾಡಿ ಸಿಹಿಯಾದ ಪನ್ನೀರ್ ಪಾಯಸ

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಸಬಕ್ಕಿಯನ್ನು ಹಾಕಿ ಚೆನ್ನಾಗಿ ತೊಳೆಯೆಬೇಕು. ನಂತರ ಅದಕ್ಕೆ ನೀರನ್ನು ಹಾಕಿ 2 ಗಂಟೆಗಳ ಕಾಲ ನೆನೆಯಲು ಬಿಡಬೇಕು.

    * ನಂತರ ಬೇಯಿಸಿಕೊಂಡ ಆಲೂಗಡ್ಡೆಯನ್ನು ತುರಿದುಕೊಳ್ಳಬೇಕು.

    * ಬಳಿಕ ಒಂದು ಪಾತ್ರೆಯಲ್ಲಿ ತುರಿದ ಆಲೂಗಡ್ಡೆ, ನೆನೆಸಿಟ್ಟುಕೊಂಡ ಸಬ್ಬಕ್ಕಿ. ಜೀರಿಗೆ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ, ಉಪ್ಪು, ಕಡಲೆಕಾಯಿ ಬೀಜದ ಪುಡಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಬೇಕು.

    * ನಂತರ ಅಂಗೈ ಮೇಲೆ ಎಣ್ಣೆಯನ್ನು ಹಚ್ಚಿಕೊಂಡು, ವಡೆಯ ಆಕಾರದಲ್ಲಿ ತಟ್ಟಿಕೊಳ್ಳಬೇಕು.ತಟ್ಟಿಕೊಂಡ ಸಬ್ಬಕ್ಕಿಯನ್ನು 5 ನಿಮಿಷ ಬಿಡಬೇಕು.

    * ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ಮೇಲೆ ವಡೆಯನ್ನು ಹಾಕಿ, ಚೆನ್ನಾಗಿ ಫ್ರೈ ಮಾಡಿದರೆ ರುಚಿಕರವಾದ ಸಬ್ಬಕ್ಕಿ ವಡೆ ಸವಿಯಲು ಸಿದ್ಧವಾಗುತ್ತದೆ.

  • ಮಧ್ಯಾಹ್ನ ಊಟಕ್ಕೆ ಮಾಡಿ ನುಗ್ಗೇಕಾಯಿ ದಾಲ್

    ಮಧ್ಯಾಹ್ನ ಊಟಕ್ಕೆ ಮಾಡಿ ನುಗ್ಗೇಕಾಯಿ ದಾಲ್

    ಇಂದು ಊಟಕ್ಕೆ ಏನು ಮಾಡಬೇಕು ಎಂದು ಯೋಚಿಸುತ್ತಾ ಇರುವ ಮನೆಯಲ್ಲಿ ಬಿಸಿ ಬಿಸಿಯಾಗಿ ಅನ್ನವನ್ನು ಮಾಡಿ. ಅನ್ನದ ಜೊತೆಗೆ ತರಕಾರಿ ಸಾಂಬಾರ್ ಮಾಡಬೇಕು ಎಂದು ಯೋಸಿಸುತ್ತಾ ಇದ್ದರೆ ಇಂದು ನೀವು ಮನೆಯಲ್ಲಿ ನುಗ್ಗೇಕಾಯಿ ದಾಲ್ ಮಾಡಿ.

    ಬೇಕಾಗುವ ಸಾಮಗ್ರಿಗಳು:

    * ನುಗ್ಗೇಕಾಯಿ- 4
    * ತೊಗರಿಬೇಳೆ – 3 ಟೀ ಸ್ಪೂನ್
    * ಕಡಲೇಬೇಳೆ- 2 ಟೀ ಸ್ಪೂನ್
    * ಬೇಳೆ- 3 ಟೀ ಸ್ಪೂನ್
    * ಹೆಸರುಬೇಳೆ- 2 ಟೀ ಸ್ಪೂನ್
    * ಟೊಮೆಟೋ
    * ಈರುಳ್ಳಿ- 1
    * ಅಚ್ಚಖಾರದ ಪುಡಿ- 1 ಟೀ ಸ್ಪೂನ್
    * ಕೊತ್ತಂಬರಿ ಸೊಪ್ಪು
    * ಜೀರಿಗೆ- 1 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲು ಬೇಳೆಗಳೆಲ್ಲವನ್ನೂ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬೇಕು.

    * ನುಗ್ಗೇಕಾಯಿಗಳನ್ನು ಚೆನ್ನಾಗಿ ತೊಳೆದುಕೊಂಡು ತುಂಡು ಮಾಡಿಟ್ಟುಕೊಳ್ಳಿ.

    * ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಖಾರದ ಪುಡಿಯನ್ನು ರುಬ್ಬಿಟ್ಟುಕೊಳ್ಳಿ.

    * ಸ್ವಲ್ಪ ನೀರಿಗೆ ಉಪ್ಪು ಹಾಕಿ ನುಗ್ಗೆಕಾಯಿ ಬೇಯಿಸಿಕೊಳ್ಳಿ. ಬೆಂದ ನುಗ್ಗೆಕಾಯಿದೆ ಬೇಯಿಸಿದ ಬೇಳೆಯನ್ನು ಹಾಕಿ ಮಿಶ್ರಣ ಮಾಡಿ. ನಂತರ ಈಗಾಗಲೇ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ.

    * ಬಳಿಕ ಉಪ್ಪು, ಅರಿಶಿನದ ಪುಡಿ, ಜೀರಿಗೆ ಪುಡಿ ಹಾಗೂ ಟೊಮೆಟೋ ಪ್ಯೂರಿಯನ್ನು ಹಾಕಿ ಕುದಿಯಲು ಬಿಡಿ. ಮಿಶ್ರಣ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿ ಕುದಿಸಿದರೆ ರುಚಿಕರವಾದ ನುಗ್ಗೇಕಾಯಿ ದಾಲ್ ಸವಿಯಲು ಸಿದ್ಧವಾಗುತ್ತದೆ.

  • ಮನೆಯಲ್ಲೇ ಈರುಳ್ಳಿ ಚಿಕನ್ ಸ್ಪೆಷಲ್ ಗ್ರೇವಿ ಮಾಡಿ ತಿನ್ನಿ

    ಮನೆಯಲ್ಲೇ ಈರುಳ್ಳಿ ಚಿಕನ್ ಸ್ಪೆಷಲ್ ಗ್ರೇವಿ ಮಾಡಿ ತಿನ್ನಿ

    ಮಾಂಸಾಹಾರ ಸೇವಿಸುವವರಿಗೆ ವಾರದಲ್ಲಿ ಒಮ್ಮೆಯಾದರೂ ಮಾಂಸದ ಅಡುಗೆ ಸೇವಿಸಲೇಬೇಕು. ಅನ್ನದೊಡನೆ ಬೇಯಿಸಿ ಬಿರಿಯಾನಿಯ ಸವಿ ಒಂದಾದರೆ ತೆಳುವಾದ ಅಕ್ಕಿರೊಟ್ಟಿ ಅಥವಾ ನೀರು ದೋಸೆಯೊಂದಿಗೆ ಖಾರವಾದ ಕೋಳಿಮಾಂಸದ ಸಾರು ಅಥವಾ ಗ್ರೇವಿ ನೆನೆಸಿಕೊಂಡು ಸವಿಯುವುದು ಕರಾವಳಿಯ ಜನರಿಗೆ ಹೆಚ್ಚು ಇಷ್ಟಪಡುತ್ತಾರೆ. ಹೀಗಿರುವಾಗ ಇಂದು ನೀವು ಮನೆಯಲ್ಲಿ ಈರುಳ್ಳಿ ಚಿಕನ್ ಸ್ಪೆಷಲ್ ಗ್ರೇವಿ ಮಾಡಿ ತಿನ್ನಿ

    ಬೇಕಾಗುವ ಸಾಮಗ್ರಿಗಳು:
    * ಕೋಳಿಮಾಂಸ- 1 ಕೆಜಿ
    * ಈರುಳ್ಳಿ – 4
    * ಟೊಮಾಟೊ: 4
    * ಶುಂಠಿ ಬೆಳ್ಳುಳ್ಳಿ ಪೇಸ್ಟ್- 2 ಟೀ ಸ್ಪೂನ್
    * ಹಸಿಮೆಣಸು- 5 ರಿಂದ 6
    * ಮೊಸರು- 1 ಕಪ್
    * ಕೆಂಪು ಮೆಣಸಿನ ಪುಡಿ- 2 ಟೀ ಸ್ಪೂನ್
    * ಅಡುಗೆ ಎಣ್ಣೆ- 1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:

    * ಒಂದು ಬಾಣಲೆಯಲ್ಲಿ ಕೊಂಚ ಎಣ್ಣೆ ಹಾಕಿ ಇದಕ್ಕೆ ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಕಂದುಬಣ್ಣಬರುವವರೆಗೆ ಹುರಿಯಿರಿ.
    * ಇದಕ್ಕೆ ಕೊಂಚ ನೀರು ಹಾಕಿ (ಈರುಳ್ಳಿ ಮುಳುಗುವಷ್ಟು ಸಾಕು) ಸುಮಾರು ಐದರಿಂದ ಹತ್ತು ನಿಮಿಷ ಬೇಯಿಸಿ.

    * ಈಗ ಟೊಮೇಟೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಉಪ್ಪು ಹಾಕಿ ಸುಮಾರು ಹತ್ತು ನಿಮಿಷ ಬೇಯಲು ಬಿಡಿ

    * ಇನ್ನೊಂದು ಪಾತ್ರೆ ಅಥವಾ ಬಾಣಲೆಯಲ್ಲಿ ಕೊಂಚ ಎಣ್ಣೆ ಹಾಕಿ ಕೋಳಿಯ ಮಾಂಸವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಈರುಳ್ಳಿ, ಚಿಕನ್ ಒಂದೇ ಪಾತ್ರೆಗೆ ಹಾಕಿ ಫ್ರೈ ಮಾಡಿ. ಅಗತ್ಯಕ್ಕೆ ತಕ್ಕಷ್ಟು ನೀರು, ಮೊಸರು ಹಾಕಿ ಕೊಂಚ ತಿರುವಿ ಉರಿ ಹೆಚ್ಚಿಸಿ ಬೇಯಿಸಿದರೆ ಈರುಳ್ಳಿ ಚಿಕನ್ ಸ್ಪೆಷಲ್ ಗ್ರೇವಿ ಸಿದ್ಧವಾಗುತ್ತದೆ.

  • ಖಾರ ಖಾರ ಎಗ್ ಮಂಚೂರಿ ಮಾಡುವ ವಿಧಾನ

    ಖಾರ ಖಾರ ಎಗ್ ಮಂಚೂರಿ ಮಾಡುವ ವಿಧಾನ

    ಮೊಟ್ಟೆ ಮಂಚೂರಿಯನ್ನು ಒಮ್ಮೆ ತಿಂದರೆ ಪದೇ ಪದೇ ತಿನ್ನಬೇಕು ಅಂತ ಅನಿಸುತ್ತೆ. ಹೊರಗೆ ಹೋಟೆಲ್‍ಗೆ ಹೋಗಿ ತರುವ ಬದಲು, ಮನೆಯಲ್ಲೇ ಮೊಟ್ಟೆ ಮಂಚೂರಿಯನ್ನು ಮಾಡಿ ಸವಿಯಿರಿ. ಹೋಟೆಲ್‍ನಲ್ಲಿ ಎಗ್ ಮಂಚೂರಿ ಟೇಸ್ಟ್ ನೋಡಿರುವ ನೀವು ನಿಮ್ಮ ಕೈಯಾರೆ ಸಿದ್ಧಮಾಡುವುದಕ್ಕೆ ಒಮ್ಮೆ ಟ್ರೈ ಮಾಡಲು ಇಲ್ಲಿದೆ ಮಾಡುವ ವಿಧಾನ.

    ಬೇಕಾಗುವ ಸಾಮಗ್ರಿಗಳು: ಮೊಟ್ಟೆ- 4
    * ಹಾಲು- 1ಕಪ್
    * ಉಪ್ಪು-ರುಚಿಗೆ ತಕ್ಕಷ್ಟು
    * ಕಾಳು ಮೆಣಸಿನ ಪುಡಿ- ಚಿಟಿಕೆಯಷ್ಟು
    * ಈರುಳ್ಳಿ- 2
    * ಕಡಲೆಹಿಟ್ಟು- 2 ಟೀ ಸ್ಪೂನ್
    * ಜೋಳದ ಹಿಟ್ಟು- 2 ಟೀ ಸ್ಪೂನ್
    * ಮೈದಾ ಹಿಟ್ಟು- 2 ಟೀ ಸ್ಪೂನ್
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಟೀ ಸ್ಪೂನ್
    * ಎಣ್ಣೆ – 1ಕಪ್
    * ಕ್ಯಾಪ್ಸಿಕಂ- 1
    * ಸೋಯಾ ಸಾಸ್- 1 ಟೀ ಸ್ಪೂನ್
    * ಚಿಲ್ಲಿ ಸಾಸ್- 1 ಟೀ ಸ್ಪೂನ್
    * ಟೊಮೆಟೊ ಸಾಸ್-1 ಟೀ ಸ್ಪೂನ್
    * ವಿನೇಗರ್- 1 ಟೀ ಸ್ಪೂನ್

    ಮಾಡುವ ವಿಧಾನ:

    * ಮೊದಲು ಮೊಟ್ಟೆಗಳನ್ನು ಒಡೆದು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ಇದಕ್ಕೆ ಉಪ್ಪು, ಮೆಣಸಿನ ಪುಡಿ, ಈರುಳ್ಳಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

    * ಒಲೆಯ ಮೇಲೆ ದೊಡ್ಡ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ನೀರು ಕುದಿಯುವ ವೇಳೆ ಮೊಟ್ಟೆಯ ಮಿಶ್ರಣ ಇದ್ದ ಪಾತ್ರೆಯನ್ನು ಅದರಲ್ಲಿಟ್ಟು ಆವಿಯಲ್ಲಿ ಮೊಟ್ಟೆಯನ್ನು ಬೇಯಿಸಬೇಕು. ಬೆಂದ ಈ ಮೊಟ್ಟೆಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.

    * ನಂತರ ಮತ್ತೊಂದು ಪಾತ್ರೆಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೋಳದ ಹಿಟ್ಟು, ಉಪ್ಪು, ಸ್ವಲ್ಪ ಅಚ್ಛ ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ತುಂಡರಿಸಿದ ಮೊಟ್ಟೆಗಳನ್ನು ಇದರಲ್ಲಿ ಅದ್ದಿ, ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೂ ಕರಿಯಬೇಕು.

    * ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿರು ಈರುಳ್ಳಿ, ಉಪ್ಪು ಹಾಗೂ ಎಲ್ಲಾ ಸಾಸ್, ವಿನೇಗರ್ ಹಾಕಿ ಮಿಶ್ರಣ ಮಾಡಬೇಕು. ನಂತರ ನೀರು ಹಾಕಿ ಕುದಿಯಲು ಬಿಟ್ಟು ಗ್ರೇವಿ ಗಟ್ಟಿಯಾದ ಬಳಿಕ ಈಗಾಗಲೇ ಎಣ್ಣೆಯಲ್ಲಿ ಕರಿದ ಮೊಟ್ಟೆಗಳನ್ನು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಮಂಚೂರಿ ಸವಿಯಲು ಸಿದ್ಧವಾಗುತ್ತದೆ.

  • ಆಲೂ ಪರೋಟ ಮಾಡಿ ಸಂಜೆಯ ತಿಂಡಿ ಸವಿಯಿರಿ

    ಆಲೂ ಪರೋಟ ಮಾಡಿ ಸಂಜೆಯ ತಿಂಡಿ ಸವಿಯಿರಿ

    ನಿತ್ಯವೂ ಒಂದೇ ಬಗೆಯ ಆಹಾರವನ್ನು ನಾವು ಸೇವಿಸಲಾರೆವು ಮತ್ತು ಬೇರೆ ಬೇರೆ ರುಚಿಗಳನ್ನು ನಾಲಗೆಗೆ ಬಯಸುತ್ತದೆ. ಮಾಂಸಾಹಾರವೇ ಆಗಿರಲಿ ಸಸ್ಯಾಹಾರವೇ ಆಗಿರಲಿ ನಾವಂತೂ ಬಾಯಲ್ಲಿ ನೀರೂರಿಸುವ ಖಾದ್ಯಗಳ ರುಚಿ ಸವಿಯಲು ಯಾವಾಗಲೂ ತಯಾರಾಗಿರುತ್ತೇವೆ. ಹೀಗಾಗಿ ಇಲ್ಲಿ ಸುಲಭವಾಗಿ ಆಲೂ ಪರೋಟ ಮಾಡುವ ವಿಧಾನವನ್ನು ತಿಳಿಸಲಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಆಲೂಗಡ್ಡೆ- 4
    * ಹಸಿಮೆಣಸು – 4 ರಿಂದ 5
    * ಮೆಣಸಿನ ಹುಡಿ – 2 ಟೀ ಸ್ಪೂನ್
    * ಅಮೆಚೂರ್ ಹುಡಿ 2 ರಿಂದ 3 ಟೀ ಸ್ಪೂನ್
    * ಕೊತ್ತಂಬರಿ ಸೊಪ್ಪು
    * ಉಪ್ಪು ರುಚಿಗೆ ತಕ್ಕಷ್ಟು
    * ಎಣ್ಣೆ ಅಥವಾ ತುಪ್ಪ
    * ಗೋಧಿ ಹಿಟ್ಟು- 2ಕಪ್

    ಮಾಡುವ ವಿಧಾನ:
    * ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದಿಟ್ಟುಕೊಳ್ಳಿ. ನಂತರ ಅದನ್ನು ಚೆನ್ನಾಗಿ ಹಿಸುಕಿ ಹಸನಾಗಿಸಿಕೊಳ್ಳಬೇಕು.

    * ಇದೀಗ ಸಣ್ಣಗೆ ಹೆಚ್ಚಿದ ಹಸಿಮೆಣಸನ್ನು, ಗರಂ ಮಸಾಲಾ ಪೌಡರ್, ಮೆಣಸಿನ ಹುಡಿ, ಅಮೆಚೂರ್ ಹುಡಿ ಮತ್ತು ಉಪ್ಪನ್ನು ಆಲೂ ಪಲ್ಯಕ್ಕೆ ಸೇರಿಸಿ, ಬೇಕಾದಲ್ಲಿ ಕರಿಬೇವು ಮತ್ತು ಸಣ್ಣಗೆ ಹೆಚ್ಚಿನ ಈರುಳ್ಳಿಯನ್ನು ಆಲೂ ಜೊತೆಗೆ ಮಿಶ್ರ ಮಾಡಿಕೊಳ್ಳಿ.

    * ನಂತರ ಮತ್ತೊಂದು ಪಾತ್ರೆಯಲ್ಲಿ, ಗೋಧಿ ಹಿಟ್ಟನ್ನು ತೆಗೆದುಕೊಂಡು ಉಪ್ಪು ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಸ್ವಲ್ಪ ಸಮಯ ಕಲಸಿದ ಹಿಟ್ಟನ್ನು ಹಾಗೆಯೇ ತೆಗೆದಿಡಿ.

    * ಮೊದಲಿಗೆ ನಾದಿದ ಚಪಾತಿ ಹಿಟ್ಟನ್ನು ಪೂರಿ ಗಾತ್ರಕ್ಕೆ ಲಟ್ಟಿಸಿಕೊಳ್ಳಿ.
    * ನಂತರ ಮಧ್ಯಭಾಗಕ್ಕೆ ಆಲೂ ಪಲ್ಯವನ್ನಿಟ್ಟು ನಾಲ್ಕೂ ಭಾಗ ಮಡಚಿಕೊಳ್ಳಿ. 2. ಸ್ವಲ್ಪ ಗೋಧಿ ಹಿಟ್ಟನ್ನು ತೆಗೆದುಕೊಂಡು ಕಲಸಿದ ಉಂಡೆಯನ್ನು ಲಟ್ಟಿಸಿಕೊಳ್ಳಿ ಆದಷ್ಟು ಮೃದುವಾಗಿ ಲಟ್ಟಿಸಿ. ಬಿರುಸಾಗಿ ಲಟ್ಟಿಸಿದಲ್ಲಿ ಪಲ್ಯ ಹೊರಕ್ಕೆ ಬರಬಹುದು.

    * ಗ್ಯಾಸ್‍ನಲ್ಲಿ ಮೇಲೆ ತವಾ ಇಟ್ಟುಕೊಂಡು ಸ್ವಲ್ಪ ಎಣ್ಣೆ ಹಾಕಿ. ತವಾ ಕಾಯುತ್ತಿದ್ದಂತೆ ನಿಧಾನವಾಗಿ ಲಟ್ಟಿಸಿದ ಪರೋಟಾವನ್ನು ತವಾದಲ್ಲಿರಿಸಿ. ಬೇಕಾದಷ್ಟು ಎಣ್ಣೆಯನ್ನು ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿದರೆ ರುಚಿಯಾದ ಪರೋಟ ಸವಿಯಲು ಸಿದ್ಧವಾಗುತ್ತದೆ.

  • ಆರೋಗ್ಯಕರವಾದ ಮಸಾಲೆ ಮುದ್ದೆ ಮಾಡೋ ಸುಲಭ ವಿಧಾನ

    ಆರೋಗ್ಯಕರವಾದ ಮಸಾಲೆ ಮುದ್ದೆ ಮಾಡೋ ಸುಲಭ ವಿಧಾನ

    ದಿನಂಪ್ರತಿ ರಾಗಿ ಮುದ್ದೆ ತಿಂದು ಬೇಜಾರಾಗುವುದು ಸಹಜ. ಹೀಗಾಗಿ ಆರೋಗ್ಯಕರವಾದ ಹಾಗೂ ರುಚಿಯಾದ ಮಸಾಲೆ ಜೋಳದ ಮುದ್ದೆ ಮಾಡುವ ಸುಲಭ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ. ಇದನ್ನು ಬೇಳೆ ಸಾರು(ದಾಲ್) ಜೊತೆ ಬೆಳಗ್ಗಿನ ಉಪಹಾರ ಅಥವಾ ಮಧ್ಯಾಹ್ನದ ಊಟಕ್ಕೂ ತಿನ್ನಬಹುದು.

    ಬೇಕಾಗುವ ಸಾಮಾಗ್ರಿಗಳು:
    ಎಣ್ಣೆ- 1 ಟೀ ಸ್ಪೂನ್
    ಸಾಸಿವೆ- ಕಾಲು ಚಮಚ
    ಜೀರಿಗೆ- ಅರ್ಧ ಚಮಚ
    ಬೆಳ್ಳುಳ್ಳಿ- 1 ಚಮಚ (ಸಣ್ಣಗೆ ಹೆಚ್ಚಿಕೊಳ್ಳಿ)
    ಈರುಳ್ಳಿ- 1 ಟೀ ಸ್ಪೂನ್
    ಟೊಮೆಟೋ- 1
    ಬಟಾಣಿ- 2 ಚಮಚ
    ಕ್ಯಾರೆಟ್- 2 ಚಮಚ


    ಕ್ಯಾಪ್ಸಿಕಮ್- 2 ಚಮಚ
    ಉಪ್ಪು- ರುಚಿಗೆ ತಕ್ಕಷ್ಟು
    ಖಾರದ ಪುಡಿ- ಅರ್ಧ ಚಮಚ
    ಅರಿಶಿಣ- ಕಾಲು ಚಮಚ
    ನೀರು- 2 ಕಪ್
    ಕೊತ್ತಂಬರಿ ಸೊಪ್ಪು- ಸ್ವಲ್ಪ
    ಜೋಳದ ಹಿಟ್ಟು- 1 ಕಪ್
    ತುಪ್ಪ

    ಮಾಡುವ ವಿಧಾನ:
    * ಸ್ಟೌ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಒಂದು ಸ್ಪೂನ್ ಎಣ್ಣೆ ಹಾಕಿ. ಅದು ಬಿಸಿಯಾದ ಮೇಲೆ ಕಾಲು ಚಮಚ ಸಾಸಿವೆ, ಅರ್ಧ ಸ್ಪೂನ್ ಜೀರಿಗೆ ಬೆರೆಸಿ ಸ್ವಲ್ಪ ಹುರಿಯಿರಿ. ನಂತರ ಇದಕ್ಕೆ ಒಂದು ಚಮಚ ಸಣ್ಣಗೆ ಹೆಚ್ಚಿರುವ ಹಸಿ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಮತ್ತೆ ಹುರಿಯಿರಿ. ಇದನ್ನೂ ಓದಿ: ಮತ್ತೆ ಮತ್ತೆ ತಿನ್ನಬೇಕೆನಿಸುವ ಮಟನ್ ಮಸಾಲ ಚಾಪ್ಸ್

    * ಇದಾದ ಬಳಿಕ ಒಂದು ಚಮಚ ಸಣ್ಣಗೆ ಹೆಚ್ಚಿರುವ ಈರುಳ್ಳಿ ಹಾಕಿ ಹುರಿದು, ನಂತರ ಇದಕ್ಕೆ ಸಣ್ಣಗೆ ಹೆಚ್ಚಿರುವ ಒಂದು ಟೊಮೆಟೋವನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು. ಆ ಬಳಿಕ 3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಲು ಬಿಡಿ.

    * ನಂತರ 2 ಚಮಚದಷ್ಟು ಬಟಾಣಿ, 2 ಸ್ಪೂನ್ ಕಟ್ ಮಾಡಿರುವ ಕ್ಯಾರೆಟ್, ಕ್ಯಾಪ್ಸಿಕಮ್ ಹಾಗೂ ಅರ್ಧ ಚಮಚ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮತ್ತೆ ಸಣ್ಣ ಉರಿಯಲ್ಲಿ ನಿಮಿಗಳ ಕಾಲ ಬೇಯಿಸಿ. ಸೀದು ಹೋಗದಂತೆ ಆಗಾಗ ಮುಚ್ಚಳ ತೆರೆದು ತಿರುವುತ್ತಾ ಇರಿ.

    * ಬೆಂದ ಬಳಿಕ ಅರ್ಧ ಚಮಚ ಅಚ್ಚಖಾರದ ಪುಡಿ ಹಾಗೂ ಕಾಲು ಚಮಚ ಅರಿಶಿಣ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಎರಡು ಕಪ್ ನೀರು ಹಾಕಿ, ಜೊತೆಗೆ ಸಣ್ಣಗೆ ಹಚ್ಚಿರುವ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

    * ಈ ನೀರು ಒಂದು ಕುದಿ ಬಂದ ಬಳಿಕ ಒಂದು ಕಪ್ ಜೋಳದ ಹಿಟ್ಟು ಹಾಕಿ ಗಂಟು ಆಗದಂತೆ ಚೆನ್ನಾಗಿ ಕಲಸಿಕೊಳ್ಳಿ. 5-7 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಹೀಗೆ ಚೆನ್ನಾಗಿ ಬೆಂದ ಬಳಿಕ ಮತ್ತೊಮ್ಮೆ ಕಲಸಿಕೊಂಡು ಒಂದು ದೊಡ್ಡ ಪಾತ್ರೆಗೆ ಹಾಕಿ ತಣಿಯಲು ಬಿಡಿ.

    * ಇತ್ತ ಒಂದು ಪ್ಲೇಟಿಗೆ ಸ್ವಲ್ಪ ತುಪ್ಪ ಸವರಿಕೊಂಡು ಒಂದು ಮುದ್ದೆಗೆ ಬೇಕಾದ ಪ್ರಮಾಣವನ್ನು ತೆಗೆದುಕೊಂಡು ಗಂಟು ಇರದಂತೆ ಚೆನ್ನಾಗಿ ನಾದಬೇಕು. ಹೀಗೆ ಚೆನ್ನಾಗಿ ನಾದುಕೊಂಡು ಮುದ್ದೆ ಕಟ್ಟಿ ಮಧ್ಯದಲ್ಲಿ ಒಂದು ತೂತು ಮಾಡಿ ಅದಕ್ಕೆ ಸ್ವಲ್ಪ ಹಾಕಿದರೆ ಮಸಾಲೆ ಮುದ್ದೆ ಸವಿಯಲು ರೆಡಿ. ಇದನ್ನು ಬಿಸಿ ಬಿಸಿಯಾಗಿರುವ ವೇಳೆಯೇ ಬೇಳೆ ಸಾರಿನ ಜೊತೆ ಸವಿದರೆ ಸ್ವರ್ಗಕ್ಕೆ ಮೂರೇ ಗೇಣು.

  • ಮನೆಯಲ್ಲಿ ಮಾಡಿ ರುಚಿಯಾದ ಪುಳಿಯೋಗರೆ ಗೊಜ್ಜು

    ಮನೆಯಲ್ಲಿ ಮಾಡಿ ರುಚಿಯಾದ ಪುಳಿಯೋಗರೆ ಗೊಜ್ಜು

    ರುಚಿ ರುಚಿಯಾದ ಪುಳಿಯೋಗರೆ ಗೊಜ್ಜು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬೆಳಗ್ಗಿನ ಉಪಹಾರಕ್ಕೆ ಹೆಚ್ಚಿನವರು ಪುಳಿಯೋಗರೆ ತಿನ್ನಲು ಇಷ್ಟಪಡುತ್ತಾರೆ. ಹೀಗಿರುವಾಗ ನಾವು ಮನೆಯಲ್ಲಿಯೇ ರುಚಿಯಾದ ಪುಳಿಯೋಗರೆ ಗೊಜ್ಜು ಮಾಡಿಟ್ಟರೆ ನಮಗೆ ಬೇಕಾದಾಗ ಉಪಯೋಗಿಸಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:

    * ಒಣಮೆಣಸು- 10 ರಿಂದ 15
    * ಹುಣಸೆಹಣ್ಣು(ರಾತ್ರಿ ನೆನೆಹಾಕಿರ ಬೇಕು)
    * ಸಾಸಿವೆ- 1 ಟೀ ಸ್ಪೂನ್
    * ಜೀರಿಗೆ- 2 ಟೀ ಸ್ಪೂನ್
    * ಎಳ್ಳು- 1 ಟೀ ಸ್ಪೂನ್
    * ತೆಂಗಿನಕಾಯಿ- 1 ಕಪ್
    * ಕಡಲೆ ಬೇಳೆ- 2 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಬೀಜ- 2 ಟೀ ಸ್ಪೂನ್
    * ಕರಿಬೇವು
    * ಕರಿಮೆಣಸು- 2 ಟೀ ಸ್ಪೂನ್
    * ಮೆಂತೆ- 1 ಟೀ ಸ್ಪೂನ್
    * ಅರಿಶಿಣ- 1 ಟೀ ಸ್ಪೂನ್
    * ಬೆಲ್ಲ- ಅರ್ಧ ಕಪ್
    * ಶೇಂಗಾ
    * ಇಂಗು
    * ಉದ್ದಿನ ಬೇಳೆ- 2 ಟೀ ಸ್ಪೂನ್

    ಮಾಡುವ ವಿಧಾನ:
    * ಒಂದು ಬಾಣಲೆಯನ್ನು ಬಿಸಿಗೆ ಇಟ್ಟು, ಎಣ್ಣೆ ಸೇರಿಸದೆಯೇ ಎಳ್ಳನ್ನು ಹುರಿದು ತೆಗೆದಿಟ್ಟುಕೊಳ್ಳಬೇಕು. ಇದನ್ನೂ ಓದಿ: ಬಬ್ರುವಾಹನ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ನಿಧನ

    * ನಂತರ ಮತ್ತೊಂದು ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ನಂತರ ಒಣ ಮೆಣಸಿನ ಕಾಯಿ, ಉದ್ದಿನ ಬೇಳೆ, ಕಡ್ಲೇ ಬೇಳೆ, ಧನಿಯಾ, ಕಾಳು ಮೆಣಸು, ಜೀರಿಗೆ, ಸಾಸಿವೆ, ಮೆಂತ್ಯೆ ಕಾಳು ಸೇರಿಸಿ, 4-5 ನಿಮಿಷಗಳ ಕಾಲ ಹುರಿದುಕೊಳ್ಳಬೇಕು.

    * ಹುರಿದ ಸಾಮಾಗ್ರಿಗಳು ತಣ್ಣಗಾದ ಬಳಿಕ ಮಿಕ್ಸರ್ ಪಾತ್ರೆಗೆ ಸೇರಿಸಿ, ಚೆನ್ನಾಗಿ ರುಬ್ಬಿಕೊಳ್ಳಿಬೇಕು.

    * ಒಂದು ಬಾಣಲೆಯಲ್ಲಿ ಎಣ್ಣೆಹಾಕಿ ಬಿಸಿ ಮಾಡಬೇಕು. ಬಳಿಕ ಸಾಸಿವೆ ಕಾಳು, ಕಡ್ಲೇ ಬೇಳೆ, ಉದ್ದಿನ ಬೇಳೆ, ಶೇಂಗಾ, ಅರಿಶಿನ, ಇಂಗು, ಕರಿಬೇವಿನ ಎಲೆ ಮತ್ತು ಕೆಂಪು ಒಣ ಮೆಣಸಿನಕಾಯಿ ಸೇರಿಸಿ ಸ್ವಲ್ಪ ಹುರಿದುಕೊಳ್ಳಬೇಕು.

    * ಅದೇ ಬಾಣಲೆಗೆ ಉಪ್ಪನ್ನು ಸೇರಿಸಿ, ಚೆನ್ನಾಗಿ ಫ್ರೈ ಮಾಡಬೇಕು. ನಂತರ ಈ ಮೊದಲು ತಯಾರಿಸಿಕೊಂಡ ಮಸಾಲಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಬೇಕು. ಪಾತ್ರೆಯ ಸುತ್ತಲ ತಳ ಬಿಡುವ ತನಕ ಬೇಯಿಸಬೇಕು.

    * ನಂತರ ಗೊಜ್ಜನ್ನು ಆರಿಸಿ, ಒಂದೆಡೆ ತಣ್ಣಗಾಗಲು ಬಿಡಬೇಕು. ತಣ್ಣಗಾದ ಪುಳಿಯೋಗರೆ ಗೊಜ್ಜನ್ನು ಗಾಳಿಯಾಡದ ಡಬ್ಬದಲ್ಲಿ ಸೇರಿಸಿ, 3-4 ತಿಂಗಳುಗಳ ಕಾಲ ಕೆಡದಂತೆ ಸಂಗ್ರಹಿಸಿ ಇಡಬಹುದು. ಅಗತ್ಯವಿದ್ದಾಗ ಗೊಜ್ಜನ್ನು ಅನ್ನದೊಂದಿಗೆ ಬೆರೆಸಿ, ಸವಿಯಬಹುದಾಗಿದೆ.