Tag: recipe

  • ರುಚಿಕರವಾದ ಆಲೂ ಕ್ಯಾಪ್ಸಿಕಂ ಕರಿ ಮಾಡಲು ಟ್ರೈ ಮಾಡಿ

    ರುಚಿಕರವಾದ ಆಲೂ ಕ್ಯಾಪ್ಸಿಕಂ ಕರಿ ಮಾಡಲು ಟ್ರೈ ಮಾಡಿ

    ನಾಲಿಗೆಯನ್ನು ತಣಿಸುವ ರುಚಿಕರ ತರಕಾರಿ ಸಾರು ಮಾಡಿಕೊಳ್ಳುವ ಬಯಕೆ ನಿಮಗಾಗಿಲ್ಲವೆ. ಹಾಗದ್ರೆ ಕ್ಯಾರೆಟ್, ಮೂಲಂಗಿ, ಕ್ಯಾಪ್ಸಿಕಂ (ದಪ್ಪ ಮೆಣಸಿನ ಕಾಯಿ), ಹಸಿರು ಬಟಾಣಿ, ಬೀಟ್‍ರೂಟ್, ಎಲೆಕೋಸು, ಹೂಕೋಸು ಹೀಗೆ ತರಹೇವಾರಿ ತರಕಾರಿಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಇಂದು ರುಚಿಕರವಾದ ಆಲೂ ಕ್ಯಾಪ್ಸಿಕಂನ  ಕರಿಯನ್ನು ಮಾಡಿದರೆ ಬಿಸಿ ಬಿಸಿಯಾದ ಅನ್ನಕ್ಕೆ ಸೂಪರ್ ಆಗಿರುತ್ತದೆ. ಒಮ್ಮೆ ನೀವು ಮನೆಯಲ್ಲಿ ಮಾಡಲು ಪ್ರಯತ್ನಿಸಲು ಇಲ್ಲಿದೆ ಮಾಡುವ ವಿಧಾನ ಜೊತೆಗೆ ಬೇಕಾಗುವ ಸಾಮಗ್ರಿಗಳ ಪಟ್ಟಿ.

    ಬೇಕಾಗುವ ಸಾಮಗ್ರಿಗಳು:

    * ಆಲೂಗಡ್ಡೆ- 4
    * ಕ್ಯಾಪ್ಸಿಕಂ – 3
    * ಈರುಳ್ಳಿ – 1
    * ಟೊಮೆಟೊ – 2
    * ಬೆಳ್ಳುಳಿ – 1
    * ಅರಿಶಿಣ ಪುಡಿ – 1 ಟೀ ಸ್ಪೂನ್
    * ಖಾರದ ಪುಡಿ – 1 ಟೀ ಸ್ಪೂನ್
    * ಜೀರಿಗೆ ಪುಡಿ – 2 1 ಟೀ ಸ್ಪೂನ್
    * ಗರಂ ಮಸಾಲ ಪುಡಿ – 1 ಟೀ ಸ್ಪೂನ್
    * ಜೀರಿಗೆ – 1 1 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಅಡುಗೆ ಎಣ್ಣೆ- 1 ಟೀ ಸ್ಪೂನ್

    ಮಾಡುವ ವಿಧಾನ:

    * ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ ಮತ್ತು ಅದಕ್ಕೆ ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ ಸೇರಿಸ ಚೆನ್ನಾಗಿ ಫ್ರೈ ಮಾಡಿ.

    * ನಂತರ ಅರಿಶಿಣ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಆಲೂಗಡ್ಡೆಗಳು, ಕ್ಯಾಪ್ಸಿಕಂ ಅನ್ನು ಬೆರೆಸಿ. 4-5 ನಿಮಿಷಗಳ ಕಾಲ ಬೇಯಿಸಿ. ನಂತರ, ಇದಕ್ಕೆ ಕತ್ತರಿಸಿದ ಟೊಮೇಟೊ, ಉಪ್ಪು, ಸ್ವಲ್ಪ ನೀರು ಸೇರಿಸಿ ಬೇಯಿಸಬೇಕು. ಇದನ್ನೂ ಓದಿ:
    ಫಟಾ ಫಟ್ ಅಂತ ಮಾಡಿ ಟೊಮೆಟೊ ಚಟ್ನಿ

    * ತರಕಾರಿಗಳೆಲ್ಲ ಬೆಂದ ಮೇಲೆ, ಮುಚ್ಚಳವನ್ನು ತೆಗೆಯಿರಿ, ಅದರ ಮೇಲೆ ಗರಂ ಮಸಾಲವನ್ನು ಚಿಮುಕಿಸಿ.

    * ಈಗ ಉರಿಯನ್ನು ಆರಿಸಿ, ಕರಿಯ ಮೇಲೆ ಕೊತ್ತಂಬರಿಯ ಸೊಪ್ಪನ್ನು ಚಿಮುಕಿಸಿ, ಅಲಂಕಾರಿಕವಾಗಿ ಕಾಣುವಂತೆ ಮಾಡಿ. ಈಗ ನಿಮ್ಮ ಮುಂದೆ ರುಚಿಕರವಾದ ಆಲೂ ಕರಿ ತಯಾರಾಗಿದೆ.

  • ಫಟಾ ಫಟ್ ಅಂತ ಮಾಡಿ ಟೊಮೆಟೊ ಚಟ್ನಿ

    ಫಟಾ ಫಟ್ ಅಂತ ಮಾಡಿ ಟೊಮೆಟೊ ಚಟ್ನಿ

    ಡಿಬಿಡಿಯ ಜೀವನದಲ್ಲಿ ಅಡುಗೆ ಮಾಡಿಕೊಳ್ಳಲು ಹಲವರಿಗೆ ಸಮಯ ಸಿಗುವುದಿಲ್ಲ. ಹೀಗಾಗಿ ಹೆಚ್ಚಿನವರು ಹೋಟೆಲ್‍ಗಳ ಮೊರೆ ಹೋಗುತ್ತಾರೆ. ಹೊರಗೆ ಸಿಗುವ ಆಹಾರ ತಿಂದು ಆರೋಗ್ಯವು ಹದಗೆಡುತ್ತದೆ. ಹೀಗಾಗಿ ನೀವು ಮನೆಯಲ್ಲಿಯೇ ಮಾಡುವ ಸರಳ ಅಡುಗೆಗಳನ್ನು ಹಡುಕುತ್ತಿದ್ದೀರ. ಹಾಗಾದ್ರೆ ಟೊಮೆಟೊ ಚಟ್ನಿ ಮಾಡಲು ಟ್ರೈ ಮಾಡಿ.

    ರೆಡಿಮೇಡ್ ಆಹಾರ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಸ್ವಾದಿಷ್ಟವಾಗಿ ನಿಮ್ಮ ಕೈಯಲ್ಲೇ ಮಾಡಿ ತಯಾರಿಸಬಹುದಾದ ಖಾದ್ಯಗಳು ನಿಮಗೂ ಖುಷಿಯನ್ನು ನೀಡುತ್ತದೆ ಜೊತೆಗೆ ನಿಮ್ಮ ಮನೆಯವರಿಗೂ ಆನಂದನ್ನು ಉಂಟುಮಾಡುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಮಶ್ರೂಮ್ ಮಸಾಲ ಮಾಡಲು ಟ್ರೈ ಮಾಡಿ

    ಬೇಕಾಗುವ ಸಾಮಗ್ರಿಗಳು:
    * ಟೊಮೇಟೊ – ಅರ್ಧ ಕೆಜಿ
    * ಈರುಳ್ಳಿ – 2
    * ಬೆಳ್ಳುಳ್ಳಿ – 10 ಎಸಳು
    * ಒಣಮೆಣಸಿನಕಾಯಿ – 2- 3
    * ಹುಣಸೆಹಣ್ಣು- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಕರಿಬೇವಿನ ಸೊಪ್ಪು- 4-5 ಎಸಳು

    ಮಾಡುವ ವಿಧಾನ:

    * ಮೊದಲಿಗೆ ಬಾಣಲೆಯನ್ನು ಒಲೆ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಬೆಳ್ಳುಳ್ಳಿ ಟೊಮೆಟೊ ಮತ್ತು ಒಣಮೆಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ

    * ಚೆನ್ನಾಗಿ ಹುರಿದುಕೊಂಡ ನಂತರ ಕೊತ್ತಂಬರಿ ಸೊಪ್ಪು, ಕರಿಬೇವಿನೆಸಳು, ಹುಣಸೆಹಣ್ಣು ಮತ್ತು ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ

    * ಸಾಸಿವೆ, ಇಂಗು, ಜೀರಿಗೆಯ ಒಗ್ಗರಣೆಯನ್ನು ರೆಡಿ ಮಾಡಿ ಈ ಚಟ್ನಿಗೆ ಸೇರಿಸಿ.

    * ನಂತರ ಈ ಟೊಮೆಟೊ ಚಟ್ನಿಯನ್ನು ಚೆನ್ನಾಗಿ ಕುದಿಸಿಕೊಳ್ಳಿ. ಈ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿದರೆ ಚಟ್ನಿ ಸವಿಯಲು ಸಿದ್ಧವಾಗುತ್ತದೆ.

  • ಮನೆಮಂದಿಗೆ ಇಷ್ಟವಾಗುವ ಮಶ್ರೂಮ್ ಮಸಾಲ ಮಾಡಲು ಟ್ರೈ ಮಾಡಿ

    ಮನೆಮಂದಿಗೆ ಇಷ್ಟವಾಗುವ ಮಶ್ರೂಮ್ ಮಸಾಲ ಮಾಡಲು ಟ್ರೈ ಮಾಡಿ

    ಹೋಟೆಲ್ ಅಡುಗೆ ಎಂದರೆ ಹಲವರು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಹೋಟೆಲ್‌ಗಳಲ್ಲಿ ನಾಲಿಗೆ ಚಪ್ಪರಿಸಿ ತಿನ್ನುವ ಬದಲಾಗಿ ನಾವೇ ಮನೆಯಲ್ಲಿಯೇ ಆರೋಗ್ಯಕರವಾದ ಆಹಾರವನ್ನು ತಯಾರಿಸಿ ಸೇವಿಸ ಬಹುದಾಗಿದೆ. ಮಶ್ರೂಮ್ ಮಸಾಲ ಮಾಡಿದರೆ ಮನೆಮಂದಿಯ ಜೊತೆಗೆ ಕುಳಿತು ಸೇವಿಸಬಹುದಾಗಿದೆ.

    ಮಶ್ರೂಮ್ ಅನ್ನು ಇಷ್ಟ ಪಡುತ್ತಿರಿ ಎಂದಾದರೆ ಹಾಗೂ ಆರೋಗ್ಯಯುಕ್ತವಾಗಿರುವ ಪದಾರ್ಥಗಳನ್ನು ಬಳಸಿಕೊಂಡು ಕೆಲವು ಡಿಶ್ ಅನ್ನು ತಯಾರಿಸಲು ನೀವು ಬಯಸುವಿರಿ ಎಂದಾದರೆ, ಖಂಡಿತವಾಗಿಯೂ ಮಶ್ರೂಮ್ ಮಸಾಲವನ್ನು ಮಾಡಲು ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು
    * ಅಣಬೆ- ೨೦೦ ಗ್ರಾಂ
    * ಗಸಗಸೆ- ೧ ಚಮಚ
    * ಗೋಡಂಬಿ- ೬-೭
    * ಹಸಿಮೆಣಸಿನ ಕಾಯಿ-೩
    * ಕಾಯಿ ತುರಿ- ಅರ್ಧ ಬಟ್ಟಲು
    * ಎಣ್ಣೆ- ೩ ಚಮಚ
    * ಚಕ್ಕ, ಲವಂಗ-ಸ್ವಲ್ಪ
    * ಪಲಾವ್ ಎಲೆ- ೨
    * ಜೀರಿಗೆ – ೧ ಚಮಚ
    * ಈರುಳ್ಳಿ- ಸಣ್ಣಗೆ ಹೆಚ್ಚಿದ್ದು ೧
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
    * ಟೊಮೆಟೋ- ಸಣ್ಣಗೆ ಹೆಚ್ಚಿದ್ದು ಒಂದು ಬಟ್ಟಲು
    * ಅರಿಶಿಣದ ಪುಡಿ- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ದನಿಯಾ ಪುಡಿ- ಅರ್ಧ ಚಮಚ
    * ಖಾರದ ಪುಡಿ – ೧ ಚಮಚ
    * ಜೀರಿಗೆ ಪುಡಿ – ಕಾಲು ಚಮಚ
    * ತುಪ್ಪ- ೨ ಚಮಚ
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಗರಂ ಮಸಾಲಾ ಪುಡಿ – ಅರ್ಧ ಚಮಚ

    ಮಾಡುವ ವಿಧಾನ:

    * ಮೊದಲಿಗೆ ಮಿಕ್ಸಿ ಜಾರ್‌ಗೆ ಗಸಗಸೆ, ಗೋಡಂಬಿ, ಹಸಿಮೆಣಸಿನ ಕಾಯಿ ಹಾಗೂ ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು.
    * ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಚಕ್ಕೆ, ಲವಂಗ, ಪಲಾವ್ ಎಲೆ, ಜೀರಿಗೆ ಹಾಗೂ ಈರುಳ್ಳಿ, ಟೊಮೆಟೊವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.

    * ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣದ ಪುಡಿ, ಉಪ್ಪು, ದನಿಯಾ ಪುಡಿ, ಖಾರದ ಪುಡಿ, ಜೀರಿಗೆ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ೨-೩ ನಿಮಿಷ ಕುದಿಯಲು ಬಿಡಿ.

    * ನಂತರ ಅಣಬೆ ಹಾಗೂ ರುಬ್ಬಿಕೊಂಡ ಮಿಶ್ರಣ ಹಾಕಿ ಅಗತ್ಯವಿದ್ದಷ್ಟು ನೀರು ಹಾಕಿ ಕುದಿಯಲು ಬಿಡಿ.
    * ಪ್ಯಾನ್ ಒಂದಕ್ಕೆ ಸ್ವಲ್ಪ ತುಪ್ಪ ಹಾಕಿ ಕಾದ ನಂತರ ಗರಂ ಮಸಾಲಾ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ ಇದನ್ನು ಕುದಿಯುತ್ತಿರುವ ಮಸಾಲೆಗೆ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಮಶ್ರೂಮ್ ಮಾಸಾಲಾ ಸವಿಯಲು ಸಿದ್ಧವಾಗುತ್ತದೆ.

  • ಹೀಗೆ ಮಾಡಿ ಕಾಬೂಲ್ ಕಡಲೆ ಬಿರಿಯಾನಿ

    ಹೀಗೆ ಮಾಡಿ ಕಾಬೂಲ್ ಕಡಲೆ ಬಿರಿಯಾನಿ

    ಹೋಟೆಲ್ ಅಥವಾ ರೆಸ್ಟೋರೆಂಟ್‍ಗಳಲ್ಲಿ ಸಿಗುವ ರುಚಿ ಮನೆಯಲ್ಲಿ ಮಾಡಿದಾಗ ಸಿಗಲ್ಲ ಅಂತಾರೆ. ಈ ಬಗ್ಗೆ ಚಿಂತೆ ಬೇಡ. ನಾವು ತಿಳಿಸಿದ ಸಾಮಾಗ್ರಿಗಳನ್ನು ಬಳಸಿ ಬಿರಿಯಾನಿ ಮಾಡಿದರೆ ಸಿಗುವ ರುಚಿ ಯಾವ ರೆಸ್ಟೋರೆಂಟ್‍ಗಳಿಗೂ ಕಡಿಮೆ ಇರಲ್ಲ. ನಿಮ್ಮ ನಾಲಿಗೆ ರುಚಿಯಾದ ಮತ್ತು ಆರೋಗ್ಯವಾಗಿರುವ ಹಾರವನ್ನು ಬಯಸುತ್ತದೆ. ನಿಮಗೆ ಪ್ರತಿನಿತ್ಯ ಒಂದೇ ತರಹದ ರೈಸ್ ಬಾತ್ ತಿಂದು ಬೇಸರವಾಗಿರುತ್ತದೆ. ಇಂದು ಕೊಂಚ ಭಿನ್ನವಾಗಿ ಈ ಕಾಬೂಲ್ ಕಡಲೆ ಬಿರಿಯಾನಿ ಮಾಡಿ ನೋಡಿ. ನಿಮ್ಮ ಮನೆಮಂದಿಗೆ ತುಂಬಾ ಇಷ್ಟವಾಗುತ್ತದೆ.

    Kabul Kadale Biryani,

    ಬೇಕಾಗುವ ಸಾಮಗ್ರಿಗಳು:
    * ಕಾಬೂಲ್ ಕಡಲೆ – 2 ಕಪ್‍ಗಳು
    * ಅಕ್ಕಿ – 2 ಕಪ್‍ಗಳು
    * ತೆಂಗಿನ ಹಾಲು – 2 ಕಪ್‍ಗಳು
    * ನೀರು- 1 1/2 ಕಪ್
    * ಈರುಳ್ಳಿ – 2
    * ಟೊಮೆಟೊ – 2
    * ಮೆಣಸಿನ ಪುಡಿ – 1ಟೀ ಸ್ಪೂನ್
    * ಗರಂ ಮಸಾಲ – 1ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1ಟೀ ಸ್ಪೂನ್
    * ತುಪ್ಪ – 2 1ಟೀ ಸ್ಪೂನ್
    * ಎಣ್ಣೆ – 1ಕಪ್
    * ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ,
    * ಕೊತ್ತಂಬರಿ
    * ಪುದೀನಾ
    * ಬೆಳ್ಳುಳ್ಳಿ-2
    * ಹಸಿಮೆಣಸಿನ ಕಾಯಿ-2

    kabul kadale

    ಮಾಡುವ ವಿಧಾನ:

    * ಕಾಬೂಲ್ ಕಡಲೆ ಹಾಗೂ ರುಚಿ ತಕ್ಕಷ್ಟು ಉಪ್ಪನ್ನು ಕುಕ್ಕರಿನಲ್ಲಿ ಹಾಕಿ 4 ವಿಶಲ್ ಹಾಕಿಸಿಕೊಳ್ಳಬೇಕು.
    * ನಂತರ ಒಂದು ಪ್ರೆಶ್ಶರ್ ಕುಕ್ಕರಿನಲ್ಲಿ ತುಪ್ಪ ಮತ್ತು ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ.
    * ಇದು ಬಿಸಿಯಾದ ಮೇಲೆ ಇದಕ್ಕೆ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಈರುಳ್ಳಿಯನ್ನು ಹಾಕಿ ಹುರಿದುಕೊಳ್ಳಿ.

    * ನಂತರ ಕೊತ್ತಂಬಂರಿ, ಪುದಿನಾ, ಈರುಳ್ಳಿ, ತುರಿದ ತೆಂಗಿನಕಾಯಿ, ಹಸಿ ಮೆಣಸಿನ ಕಾಯಿಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ.
    * ಈರುಳ್ಳಿಯು ಹೊಂಬಣ್ಣಕ್ಕೆ ಬಂದ ಮೇಲೆ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಬೆರೆಸಿ. ಆಮೇಲೆ ಅದಕ್ಕೆ ಟೊಮೇಟೊ, ರುಬ್ಬಿಕೊಂಡಿರುವ ಮಿಶ್ರಣವನ್ನು ಹಾಕಿ ನಂತರ ಈ ಪದಾರ್ಥಗಳನ್ನು ಹುರಿದುಕೊಳ್ಳಿ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ನಿರ್ದೇಶಕ ಸಂತೋಷ್ ಆನಂದ್ ರಾಮ್

    Kabul Kadale Biryani,

    * ಈಗ ಇದಕ್ಕೆ ಖಾರದ ಪುಡಿ, ಗರಂ ಮಸಾಲ ಪುಡಿ, ಉಪ್ಪು ಮತ್ತು ಬೇಯಿಸಿದ ಕಾಬೂಲ್ ಕಡಲೆ, ಅಕ್ಕಿಯನ್ನು ಹಾಕಿ ಕುಕ್ಕರಿನಲ್ಲಿ ನೀರನ್ನು ಬೆಯಿಸಿದರೆ ರುಚಿಯಾದ ಕಾಬೂಲ್ ಕಡಲೆ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:ಕರಾವಳಿಯಲ್ಲಿ ಪತ್ತೆಯಾದ ಹಾಕ್ಸ್ ಬಿಲ್ ಆಮೆ ಕಳೆಬರ

  • ಡಾಬಾ ಶೈಲಿಯ ದಾಲ್ ಚಪಾತಿ ಜೊತೆಗೆ ಸೂಪರ್

    ಡಾಬಾ ಶೈಲಿಯ ದಾಲ್ ಚಪಾತಿ ಜೊತೆಗೆ ಸೂಪರ್

    ನಿಮಗೂ ಮನೆಯಲ್ಲಿ ನಿತ್ಯ ಒಂದೇ ರೀತಿಯ ದಾಲ್ ತಿಂದು ಬೋರ್ ಆದಾಗ ವಿಭಿನ್ನ ಶೈಲಿಯ ದಾಲ್ ಮಾಡಬೇಕು ಎಂದರೆ ಈ ದಾಲ್ ಮಾಡಬಹುದು. ನಾವು ಈ ಕೆಳಗೆ ಹೇಳಲಿರುವ ಶೈಲಿಯಲ್ಲಿ ದಾಲ್ ಮಾಡಿದರೆ ಮನೆಯಲ್ಲೇ ಡಾಬಾ ಶೈಲಿಯ ದಾಲ್ ಅನ್ನು ಜೀರಾ ರೈಸ್, ಚಪಾತಿ, ಪರೋಟ ಜೊತೆ ಸವಿಯಬಹುದು.

    ಬೇಕಾಗುವ ಸಾಮಗ್ರಿಗಳು:
    * ಕಡಲೇಬೇಳೆ- ಅರ್ಧ ಕಪ್
    * ತೊಗರಿ ಬೇಳೆ ಅರ್ಧ ಕಪ್
    * ಮಸೂರ್ ದಾಲ್ ಅರ್ಧ ಕಪ್
    * ಹೆಸರು ಬೇಳೆ ಅರ್ಧ ಕಪ್
    * ಉದ್ದಿನ ಬೇಳೆ- ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ – ಅರ್ಧ ಕಪ್
    * ಜೀರಿಗೆ 1 ಚಮಚ
    * ತುಪ್ಪ 1 ಚಮಚ
    * ಒಣ ಮೆಣಸಿನಕಾಯಿ 2
    * ಈರುಳ್ಳಿ-1
    * ಬೆಳ್ಳುಳ್ಳಿ-1
    * ಶುಂಠಿ
    * ಹಸಿ ಮೆಣಸಿನಕಾಯಿ -2
    * ಟೊಮೆಟೊ -2
    * ಕಸೂರಿ ಮೇತಿ- ಅರ್ಧ ಚಮಚ
    * ಮೆಣಸಿನ ಪುಡಿ -1 ಚಮಚ
    * ಅರಿಶಿನ ಪುಡಿ – ಅರ್ಧ ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಚಮಚ ನಿಂಬೆ ಹಣ್ಣು- ಅರ್ಧ ಇದನ್ನೂ ಓದಿ:  ಬಾಯಲ್ಲಿ ನೀರೂರಿಸುವ ದೊನ್ನೆ ಬಿರಿಯಾನಿ ಮನೆಯಲ್ಲಿ ಮಾಡಿ

    ಮಾಡುವ ವಿಧಾನ:
    * ಎಲ್ಲಾ ಬೇಳೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮತ್ತು ಒಂದೆರಡು ಬಾರಿ ನೀರಿನಿಂದ ತೊಳೆದು ಅರ್ಧ ಗಂಟೆ ನೆನೆಸಿಡಿ.
    * ಪ್ರೆಶರ್ ಕುಕ್ಕರ್‍ನಲ್ಲಿ ಬೇಳೆಗಳು, ನೀರು, ಅರಿಶಿನ ಪುಡಿ ಸೇರಿಸಿ ಮುಚ್ಚಳವಿಲ್ಲದೆ ಒಲೆಯ ಮೇಲೆ ಇಡಿ, ಮೊದಲ ಕುದಿಯ ನಂತರ ಮುಚ್ಚಳವನ್ನು ಹಾಕಿ. 3-5 ಸೀಟಿಗಳಿಗೆ ಬೇಯಿಸಿ.


    * ಪ್ರೆಶರ್ ಕುಕ್ಕರ್ ತಣ್ಣಗಾಗಲು ಬಿಡಿ ನಂತರ ಬೇಯಿಸಿದ ದಾಲ್ ಅನ್ನು ಮ್ಯಾಶ್ ಮಾಡಿ.
    * ಬಾಣಲೆ ಎಣ್ಣೆ ಹಾಕಿ ನಂತರ ಜೀರಿಗೆ, ಹಿಂಗು,ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ.

    * ಮಿಶ್ರಣವನ್ನು ಒಂದೆರಡು ನಿಮಿಷ ಹುರಿದು ನಂತರ ಹಸಿ ಮೆಣಸಿನಕಾಯಿ, ಟೊಮೆಟೊ, ಕಸೂರಿ ಮೇತಿ ಸೇರಿಸಿ ಮತ್ತು ಸಂಪೂರ್ಣವಾಗಿ ಬೇಯಿಸಿ.
    * ನಂತರ ಈ ಮಿಶ್ರಣಕ್ಕೆ ಬೇಯಿಸಿದ ದಾಲ್ ಸೇರಿಸಿ ಸ್ವಲ್ಪ ನೀರು ಹಾಕಿ.
    * ಉಪ್ಪು ಸೇರಿಸಿ 10-12 ನಿಮಿಷಗಳ ಕಾಲ ಕುದಿಸಲು ಬಿಡಿ.
    * ಈಗ ಬೇಯಿಸಿದ ದಾಲ್‍ಗೆ ನಿಂಬೆ ರಸ, ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಬಿಸಿಬಿಸಿ ದಾಲ್ ಸಿದ್ಧವಾಗುತ್ತದೆ.

  • ಬಾಯಲ್ಲಿ ನೀರೂರಿಸುವ ದೊನ್ನೆ ಬಿರಿಯಾನಿ ಮನೆಯಲ್ಲಿ ಮಾಡಿ

    ಬಾಯಲ್ಲಿ ನೀರೂರಿಸುವ ದೊನ್ನೆ ಬಿರಿಯಾನಿ ಮನೆಯಲ್ಲಿ ಮಾಡಿ

    ಮಾಂಸಹಾರ ಅಡುಗೆಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ. ಮಾಂಸಹಾರಿ ಖಾದ್ಯಗಳಲ್ಲಿ ದೊನ್ನೆ ಬಿರಿಯಾನಿಯೂ ಒಂದು. ದೊನ್ನೆ ಬಿರಿಯಾನಿಗೆ ಕಡಿಮೆ ಪ್ರಮಾಣದ ಮಸಾಲೆಯನ್ನು ಬಳಸಲಾಗುತ್ತದೆ. ಅತಿಥಿಗಳು ಬಂದಾಗ ಅಥವಾ ಮನಸ್ಸು ಬಿರಿಯಾನಿ ತಿನ್ನಲು ಬಯಸಿದಾಗ ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ದೊನ್ನೆ ಬಿರಿಯಾನಿಯನ್ನು ತಯಾರಿಸಬಹುದಾಗಿದೆ. ಇಂದೆ ಈ ರುಚಿಯಾದ ದೊನ್ನೆ ಬಿರಿಯಾನಿ ಮಾಡಲು ಇಲ್ಲಿದೆ ಮಾಡುವ ವಿಧಾನ.

    ಬೇಕಾಗುವ ಸಾಮಗ್ರಿಗಳು
    * ಕೋಳಿ ಮಾಂಸ- 1ಕೆಜಿ
    * ಮೊಸರು- ಅರ್ಧ ಕಪ್
    * ನಿಂಬೆ ಹಣ್ಣಿ ರಸ- 1ಟೀ ಸ್ಪೂನ್
    * ಖಾರದ ಪುಡಿ- 1 ಟೀ ಸ್ಪೂನ್
    * ಅರಿಶಿಣ- ಅರ್ಧ ಟೀ ಸ್ಪೂನ್
    * ಹಸಿಮೆಣಸಿನಕಾಯಿ-4
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಪುದೀನಾ ಎಲೆ- ಸ್ವಲ್ಪ
    * ಅಕ್ಕಿ- 3 ಕಪ್
    * ಈರುಳ್ಳಿ-2
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 2 ಟೀ ಸ್ಪೂನ್
    * ಪುಲಾವ್ ಎಲೆ
    * ಚಕ್ಕೆ-2
    * ಲವಂಗ, ನಕ್ಷತ್ರ ಮೊಗ್ಗು, ಸೋಂಪು, ಏಲಕ್ಕಿ- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು, ನಿಂಬೆ ರಸ, ಅರಿಶಿನ, ಮೆಣಸಿನ ಪುಡಿ ಮತ್ತು ಚಿಕನ್ ಅನ್ನು ಮಿಶ್ರಣ ಮಾಡಿ 30 ನಿಮಿಷಗಳ ಕಾಲ ಬಿಡಿ.
    * ಕುಕ್ಕರ್ ಪಾತ್ರೆಗೆ ಸ್ವಲ್ಪ ಎಣ್ಣೆ ಮತ್ತು ತುಪ್ಪವನ್ನು ಸೇರಿಸಿ ಬಿಸಿಯಾದ ನಂತರ ಗರಮ್ ಮಸಾಲ, ಈರುಳ್ಳಿ ಸೇರಿಸಿ, ಹೊಂಬಣ್ಣ ಬರುವ ತನಕ ಹುರಿಯಿರಿ.

    * ಈಗ ಮಿಶ್ರಣಕ್ಕೆ ಚಿಕನ್ ಸೇರಿಸಿ, ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಗೊಳಿಸಿ, ಒಂದು ಸೀಟಿಯನ್ನು ಕೂಗಿಸಿಕೊಳ್ಳಬೇಕು. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿರು ಚಟ್ನಿ ಸೇರಿಸಿ, ಮಸಾಲೆ ಹುರಿಯಿರಿ. ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಮಾಡಿ ನೋಡಿ ಪೋರ್ಕ್ ಬಿರಿಯಾನಿ

    * ಈಗ ನೆನೆಸಿಕೊಂಡ ಅಕ್ಕಿ ಮತ್ತು ನೀರನ್ನು ಕುಕ್ಕರ್ ಪಾತ್ರೆಗೆ ಸೇರಿಸಿ, ಒಂದು ಸೀಟಿಯನ್ನು ಕೂಗಿಸಿಕೊಗಿಸಿಕೊಂಡರೆ ರುಚಿಯಾದ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಘಮ ಘಮಿಸುವ ಪನ್ನೀರ್ ಬಿರಿಯಾನಿ

  • ಒಮ್ಮೆ ತಿಂದರೆ ಮತ್ತೆ ಬೇಕು ಎನ್ನಿಸುವ ರುಚಿಯಾದ ಅವಲಕ್ಕಿ ಲಾಡು

    ಒಮ್ಮೆ ತಿಂದರೆ ಮತ್ತೆ ಬೇಕು ಎನ್ನಿಸುವ ರುಚಿಯಾದ ಅವಲಕ್ಕಿ ಲಾಡು

    ಡುಗೆ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಇರುವ ಪದಾರ್ಥವೆಂದರೆ ಅವಲಕ್ಕಿಯಾಗಿದೆ. ಗಡಿಬಿಡಿಯ ಸಮಯದಲ್ಲಿ ಸಹಾಯಕ್ಕೆ ಬರುವುದು. ಸ್ವಲ್ಪ ಹೊತ್ತು ನೆನೆ ಹಾಕಿ ಅವಲಕ್ಕಿ ಒಗ್ಗರಣೆಯಿಂದ ಹಿಡಿದು, ಕೇಸರಿಭಾತ್, ಉಪ್ಪಿಟ್ಟು, ಬಿಸಿ ಬೇಳೆ ಬಾತ್, ದೋಸೆ ಮೊದಲಾದ ತಿಂಡಿಗಳನ್ನು ಸಿದ್ಧಪಡಿಸಬಹುದಾಗಿದೆ. ಹೀಗಿರುವಾಗ ನೀವು ಒಮ್ಮೆಯಾದರೂ ಅವಲಕ್ಕಿ ಲಾಡು ತಿಂದಿಲ್ಲವೆಂದರೆ ಒಮ್ಮೆ ಮಾಡಿ ನೋಡಲು ಇಲ್ಲಿದೆ ವಿಧಾನ.

    ಬೇಕಾಗುವ ಸಾಮಗ್ರಿಗಳು:
    * ಅವಲಕ್ಕಿ – 1 ಕಪ್
    * ತೆಂಗಿನ ಹುಡಿ – ಅರ್ಧ ಕಪ್
    * ಸಕ್ಕರೆ – 2 ಕಪ್
    * ಏಲಕ್ಕಿ ಪುಡಿ – ಅರ್ಧ ಚಮಚ
    * ಗೋಡಂಬಿ – 3-4
    * ಬಾದಾಮಿ – 3-4
    * ಪಿಸ್ತಾ – 3-4
    * ದ್ರಾಕ್ಷಿ – 8 9.
    * ತುಪ್ಪ – 4-5 ಚಮಚ
    * ಹಾಲು- 1 ಕಪ್


    ಮಾಡುವ ವಿಧಾನ:
    * ಅವಲಕ್ಕಿಯನ್ನು ಬಿಸಿಯಾದ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.
    * ತೆಂಗಿನ ತುರಿ ಪೌಡರ್ ಅನ್ನು ಸೇರಿಸಿಕೊಂಡು ಹುರಿದ ಅವಲಕ್ಕಿಯೊಂದಿಗೆ ಮಿಶ್ರ ಮಾಡಿ. ಇದನ್ನೂ ಓದಿ:  ಸುಲಭವಾಗಿ ಮಾಡಿ ಬಿಸಿ ಬಿಸಿಯಾದ ತೆಂಗಿನ ಕಾಯಿ ದೋಸೆ

    * ಈಗ ಸಕ್ಕರೆ, ಅವಲಕ್ಕಿ, ತೆಂಗಿನ ತುರಿ ಪೌಡರ್ ಗ್ರೈಂಡರ್‍ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು.
    * ದ್ರಾಕ್ಷಿ, ಗೋಡಂಬಿ, ಬಾದಾಮಿ ಮತ್ತು ಪಿಸ್ತಾವನ್ನು ಮಂದ ಉರಿಯಲ್ಲಿ ಹುರಿದುಕೊಳ್ಳಿ.

    * ಅವಲಕ್ಕಿ ಮಿಶ್ರಣಕ್ಕೆ ಈಗ ಎಲ್ಲಾ ಡ್ರೈ ಪ್ರುಟ್ಸ್ ಅನ್ನು ಸೇರಿಸಿಕೊಳ್ಳಿ. ಹಾಲನ್ನು ತುಸು ಬೆಚ್ಚಗೆ ಮಾಡಿಕೊಂಡು ಅದಕ್ಕೆ ಸೇರಿಸಿ.
    * ಇನ್ನು ಲಾಡು ಕಟ್ಟುವುದಕ್ಕಾಗಿ ತುಪ್ಪವನ್ನು ಸೇರಿಸಿಕೊಂಡು ಉಂಡೆಯನ್ನು ಸಿದ್ಧಪಡಿಸಿಕೊಳ್ಳಿ. ಈಗ ರುಚಿಯಾದ ಅವಲಕ್ಕಿ ಲಾಡು ಸವಿಯಲು ಸಿದ್ಧವಾಗುತ್ತದೆ.

  • ಸುಲಭವಾಗಿ ಮಾಡಿ ಬಿಸಿ ಬಿಸಿಯಾದ ತೆಂಗಿನ ಕಾಯಿ ದೋಸೆ

    ಸುಲಭವಾಗಿ ಮಾಡಿ ಬಿಸಿ ಬಿಸಿಯಾದ ತೆಂಗಿನ ಕಾಯಿ ದೋಸೆ

    ಬಿಟ್ರೋಟ್ ದೋಸೆ, ರಾಗಿ ದೋಸೆ, ಗೋಧಿ ದೋಸೆ ಎಂದು ನೀವು ತಿಂದಿರುತ್ತೀರ ಆದರೆ ಪ್ರತಿಸಲ, ಅದೇ ಉದ್ದಿನ ದೋಸೆ ತಿಂದು ಬೋರಾಗಿದ್ರೆ ಈ ತೆಂಗಿನ ಕಾಯಿ ದೋಸೆ ಟ್ರೈ ಮಾಡಿ. ಮಕ್ಕಳಿಂದ ಹಿಡಿದು, ನಿಮ್ಮ ಮನೆಯಲ್ಲಿ ಪ್ರತಿಯೊಬ್ಬರೂ ಇಷ್ಟಪಟ್ಟು ತಿನ್ನುತ್ತಾರೆ. ಇದರ ಹಿಟ್ಟು ಹದ ಬರಬೇಕಾಗಿರೋದ್ರಿಂದ ರಾತ್ರಿ ರುಬ್ಬಿಟ್ಟು ಬೆಳಗ್ಗೆ ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಇದನ್ನೂ ಓದಿ: ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ- 1ಕಪ್
    * ಮೆಂತ್ಯೆ- 2 ಚಮಚ
    * ತೆಂಗಿನಕಾಯಿ – 1 ಕಪ್
    * ಅವಲಕ್ಕಿ – ಸ್ವಲ್ಪ

    ಮಾಡುವ ವಿಧಾನ:
    * ಮೊದಲನೆಯದಾಗಿ, ಒಂದು ಬೌಲ್‍ಗೆ ಅಕ್ಕಿ ಮತ್ತು ಮೆಂತ್ಯೆ ಹಾಕಿ 4 ಗಂಟೆಗಳ ಕಾಲ ನೆನೆಸಿಟ್ಟಿರಬೇಕು.
    * ನಂತರ, ನೆನಸಿಟ್ಟ ಅಕ್ಕಿ, ಮೆಂತೆ, ತೆಂಗಿನಕಾಯಿ ಮಿಕ್ಸಿ ಜಾರ್‍ಗೆ ಹಾಕಿ ಸ್ವಲ್ಪ ನೀರು  ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.

    * ರುಬ್ಬಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ 8 ಗಂಟೆಗಳ ಕಾಲ ಮುಚ್ಚಿಡಿ. ( ರಾತ್ರಿ ರುಬ್ಬಿಟ್ಟು ಬೆಳಗ್ಗೆ ಮಾಡುವುದು ಉತ್ತಮ)
    * ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಫಟಾಫಟ್ ಮಾಡಿ ಸಿಗಡಿ ಫ್ರೈ

    * ತವಾ ಬಿಸಿಗಿಟ್ಟು, ಅದು ಬಿಸಿಯಾದ ನಂತರ, ದೋಸೆ ಹಾಕಿ ಚೆನ್ನಾಗಿ ಬೇಯಿಸಿದರೆ ಬಿಸಿ ಬಿಸಿಯಾದ ತೆಂಗಿನ ಕಾಯಿ ದೋಸೆ ಅವಿಯಲು ಸಿದ್ಧವಾಗುತ್ತದೆ.

  • ಭಾನುವಾರದ ಬಾಡೂಟಕ್ಕೆ ಫಟಾಫಟ್ ಮಾಡಿ ಸಿಗಡಿ ಫ್ರೈ

    ಭಾನುವಾರದ ಬಾಡೂಟಕ್ಕೆ ಫಟಾಫಟ್ ಮಾಡಿ ಸಿಗಡಿ ಫ್ರೈ

    ಮಾಂಸಾಹಾರದಲ್ಲಿ ಅತ್ಯಂತ ಆರೋಗ್ಯಕರವಾದ ಆಹಾರವೆಂದರೆ ಸಾಗರೋತ್ಪನ್ನಗಳು. ಸಿಗಡಿ ಎಲ್ಲರ ಪ್ರಥಮ ಆಯ್ಕೆಯಾಗಿದೆ. ಸಿಗಡಿಯನ್ನು ಬಳಸಿ ಸಾವಿರಾರು ವಿಧಾನದ ಅಡುಗೆಗಳನ್ನು ಮಾಡಬಹುದು. ಒಂದು ವೇಳೆ ಮಸಾಲೆಯುಕ್ತ ಮತ್ತು ಗರಿಗರಿಯಾದ ಸಿಗಡಿಯನ್ನು ನೀವು ತಿನ್ನ ಬಯಸಿದರೆ ಇಂದು ಮಸಾಲೆ ಸಿಗಡಿ ಫ್ರೈಯನ್ನೇಕೆ ಪ್ರಯತ್ನಿಸಬಾರದು? ನಿಮ್ಮ ಮನೆಗೆ ಅತಿಥಿಗಳು ಆಗಮಿಸಿದ್ದರೆ ಈ ಖಾದ್ಯ ಔತಣದ ಪ್ರಮುಖ ಆಕರ್ಷಣೆಯಾಗುವುದರಲ್ಲಿ ಅನುಮಾನವೇ ಇಲ್ಲ.

    ಬೇಕಾಗುವ ಸಾಮಗ್ರಿಗಳು:
    * ಸಿಗಡಿ: ಅರ್ಧ ಕೆಜಿ
    * ಮೆಣಸಿನ ಪುಡಿ – 2 ಟೀ ಸ್ಪೂನ್
    * ಅರಿಶಿನ ಪುಡಿ – 1 ಟೀ ಸ್ಪೂನ್
    * ಎಣ್ಣೆ – ಅರ್ಧ ಕಪ್
    * ದನಿಯ ಪುಡಿ – 2 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಬೆಳ್ಳುಳ್ಳಿ-ಶುಂಠಿ ಪೇಸ್ಟ್ – 3 ಟೀ ಸ್ಪೂನ್
    * ಈರುಳ್ಳಿ – 1
    * ಕರಿಬೇಬಿನ ಎಲೆಗಳು – 7-8
    * ಲಿಂಬೆರಸ – 1 ಟೀ ಸ್ಪೂನ್
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಒಂದು ಚಿಕ್ಕ ಪಾತ್ರೆಯಲ್ಲಿ ಸಿಗಡಿ, ಉಪ್ಪು, ಮೆಣಸಿನ ಪುಡಿ, ದನಿಯ ಪುಡಿ, ಅರಿಶಿನ ಪುಡಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸುಮಾರು ಹತ್ತು ನಿಮಿಷ ಹಾಗೇ ಬಿಡಿ. ಇದನ್ನೂ ಓದಿ: ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು


    * ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಮೊದಲ ಪಾತ್ರೆಯಿಂದ ಸಿಗಡಿಯನ್ನು ಹಾಕಿ ಇದರ ಜೊತೆಗೆ ಕರಿಬೇವಿನ ಎಲೆಗಳನ್ನು ಹಾಕಿ ಮಿಶ್ರಣ ಮಾಡಿ.

    * ಬಳಿಕ ನೀರು ಹಾಕಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ಸುಮಾರು ಐದರಿಂದ ಎಂಟು ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ.


    *ಬಳಿಕ ಮುಚ್ಚಳವನ್ನು ತೆರೆದು ಚೆನ್ನಾಗಿ ತಿರುವುತ್ತಾ ಸಿಗಡಿಯ ಎಲ್ಲಾ ಭಾಗಗಳು ಸರಿಯಾಗಿ ಬೇಯುವಂತೆ ಇನ್ನಷ್ಟು ಹುರಿಯಿರಿ. ತುಂಬಾ ಒಣಗಿದ್ದಂತೆ ಕಂಡುಬಂದರೆ ಕೊಂಚ ಎಣ್ಣೆಯನ್ನು ಸೇರಿಸಬಹುದು. ಇದಕ್ಕೆ ಕೊಂಚ ಲಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿದರೆ ಇದೀಗ ಸಿಗಡಿ ಫ್ರೈ ಸವಿಯಲು ಸಿದ್ಧವಾಗುತ್ತದೆ.

  • ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು

    ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು

    ಬ್ಬಗಳು ಒಂದೊಂದಾಗಿಯೆ ಬರುತ್ತಿವೆ. ರಕ್ಷಾ ಬಂಧನಕ್ಕೆ ಸಿಹಿ ತಿಂಡಿ ಇದ್ದರೆ ಹಬ್ಬದ ಮೆರಗು ಹೆಚ್ಚಾಗುತ್ತದೆ. ಹಬ್ಬದ ದಿನ ಬಗೆಬಗೆಯಾದ ಸಿಹಿ ತಿಂಡಿಗಳನ್ನು ದೇವರಿಗೆ ನೈವೇದ್ಯ ಅರ್ಪಿಸಿಬೇಕು. ಸಿಹಿ ತಿಂಡಿಗಳು ರುಚಿಯ ಜೊತೆಗೆ ಆರೋಗ್ಯದ ಕಾಳಜಿಯಿಂದಲೂ ತಯಾರಿಸಬೇಕು ಎಂಬುದು ಮುಖ್ಯವಾಗುತ್ತದೆ. ಹೀಗಾಗಿ ನೀವು ಮನೆಯಲ್ಲಿಯೆ ಸರಳವಾಗಿ ಗೋಧಿ ಹಿಟ್ಟಿನ ಲಡ್ಡು ಮಾಡಿ.

    ಬೇಕಾಗುವ ಸಾಮಗ್ರಿಗಳು:

    * ಗೋಧಿ ಹಿಟ್ಟು- 1 ಕಪ್
    * ತುಪ್ಪ – ಅರ್ಧ ಕಪ್
    * ನೀರು – 3 ಚಮಚ
    * ತೆಂಗಿನ ತುರಿ- ಅರ್ಧ ಕಪ್
    * ಬಾದಾಮಿ – 5 ರಿಂದ 6
    * ಗೋಡಂಬಿ – 5 ರಿಂದ 6
    * ಒಣದ್ರಾಕ್ಷಿ – 8-10
    * ಪಿಸ್ತಾ – ¼ ಚಮಚ
    * ಏಲಕ್ಕಿ ಪುಡಿ – ಅರ್ಧ ಚಮಚ
    * ಸಕ್ಕರೆ ಪುಡಿ – ಅರ್ಧ ಕಪ್


    ಮಾಡುವ ವಿಧಾನ:
    * ಮಿಕ್ಸಿಂಗ್ ಬೌಲ್‍ನಲ್ಲಿ ಗೋಧಿ ಹಿಟ್ಟು ತುಪ್ಪ ಸೇರಿಸಿ.
    * ಮಿಶ್ರಣಕ್ಕೆ ಬೆಚ್ಚಗಿನ ನೀರನ್ನು ಸೇರಿಸಿ ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ.
    * ಅಂಗೈಯಲ್ಲಿ ಹಿಡಿದಾಗ ಮಿಶ್ರಣ ಒಟ್ಟಿಗೆ ಅಂಟಿಕೊಳ್ಳಬೇಕು.
    * ಬಿಸಿ ಮಾಡಿದ ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಸೇರಿಸಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದನ್ನೂ ಓದಿ:  ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್

    * ನಂತರ ತೆಂಗಿನ ಪುಡಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ಟವ್ ಆಫ್ ಮಾಡಿ.
    * ಕತ್ತರಿಸಿದ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಪಿಸ್ತಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಏಲಕ್ಕಿ ಪುಡಿಯನ್ನು ಸೇರಿಸಿ 10 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಪುಡಿ ಮಾಡಿದ ಸಕ್ಕರೆಯನ್ನು ಸೇರಿಸಿ ಕೈಬಳಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸಣ್ಣ ಲಡ್ಡುಗಳಾಗಿ ಮಾಡಿದರೆ ಗೋಧಿ ಲಡ್ಡು ಸವಿಯಲು ಸಿದ್ಧವಾಗುತ್ತದೆ.