Tag: recipe

  • ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    ಶುಂಠಿ ಟೀ ಕುಡಿದರೆ ಶೀತ, ಕೆಮ್ಮಿನಂತಹ ಕಾಯಿಲೆಗಳು ದೂರ ಉಳಿಯುತ್ತದೆ. ಶುಂಠಿ ಹಾಕಿ ತಯಾರಿಸಿದ ಆಹಾರ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಾಂಸಹಾರದ ಅಡುಗೆಗಳಲ್ಲಿ ಹೆಚ್ಚಾಗಿ ಶುಂಠಿಯನ್ನು ಬಳಕೆ ಮಾಡುತ್ತಾರೆ. ಆದರೆ ನಾವು ಇಂದು ಶುಂಠಿ ಉಪ್ಪಿನಕಾಯಿಯನ್ನು ಮಾಡುವುದು ಹೇಗೆ ಎಂದು ಸರಳ ವಿಧಾನದ ಮೂಲಕವಾಗಿ ವಿವರಿಸಲಿದ್ದೇವೆ.

    ಬೇಕಾಗುವ ಸಾಮಗ್ರಿಗಳು:
    * ಶುಂಠಿ – 1ಕಪ್
    * ಮೆಂತೆ – 2 ಚಮಚ
    * ಜೀರಿಗೆ – 2 ಚಮಚ
    * ಖಾರದ ಪುಡಿ – 1 ಚಮಚ
    * ಹುಣಸೆ ಹಣ್ಣಿನ ರಸ
    * ಇಂಗು ಚಿಟಿಕೆಯಷ್ಟು
    * ಅರಿಶಿಣ ಪುಡಿ- ಅರ್ಧ ಚಮಚ
    * ತೆಂಗಿನಕಾಯಿ – 1 ಕಪ್
    * ಅಡುಗೆ ಎಣ್ಣೆ – 1 ಕಪ್
    * ರುಚಿಗೆ ತಕ್ಕ ಉಪ್ಪು

    ಮಾಡುವ ವಿಧಾನ:
    * ಬಾಣಲೆಯನ್ನು ತೆಗದುಕೊಂಡು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಬೇಕು. ಎಣ್ಣೆ ಬಿಸಿಯಾದಾಗ ಅದಕ್ಕೆ ದೊಡ್ಡ ಜೀರಿಗೆ, ಮೆಂತೆ, ಖಾರದ ಪುಡಿ ಹಾಕಬೇಕು.
    * ನಂತರ ಶುಂಠಿಯನ್ನು ಎಣ್ಣೆಯಲ್ಲಿ ಹಾಕಿ 10-15 ನಿಮಿಷ ಹುರಿಯಬೇಕು. ಇದನ್ನೂ ಓದಿ:  ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ

    * ಕತ್ತರಿಸಿದ ತೆಂಗಿನ ತುಂಡುಗಳನ್ನು ಸ್ವಲ್ಪ ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಹುರಿಯಬೇಕು.
    * ನಂತರ ಶುಂಠಿಯನ್ನು ತೆಂಗಿನಕಾಯಿಯ ಜೊತೆ ಸೇರಿಸಿ, ಇದಕ್ಕೆ ಹುಣಸೆ ಹಣ್ಣಿನ ರಸ, ಇಂಗು, ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಎರಡು ನಿಮಿಷ ಹುರಿದು ತಣ್ಣಗಾಗಲು ಇಡಬೇಕು.

    * ತಣ್ಣಗಾದ ಮೇಲೆ ಅದನ್ನು ಬಾಕ್ಸ್‌ನಲ್ಲಿ ಹಾಕಿ ಮುಚ್ಚಿಡಬೇಕು. ಈ ಉಪ್ಪಿನಕಾಯಿಯನ್ನು 2 ವಾರಗಳ ಕಾಲ ಇಡಬಹುದಾಗಿದೆ.

  • ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ

    ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ

    ನೀವು ಎಗ್ ಬುರ್ಜಿ, ಎಗ್ ರೋಸ್ಟ್ ಎಲ್ಲಾ ಮಾಡಿದ್ದರೆ ಇದೊಂದು ಸರಳವಾದ ರೆಸಿಪಿ ಟ್ರೈ ಮಾಡಿ ನೋಡಿ, ರುಚಿ ನಿಮಗೆ ಖಂಡಿತ ಇಷ್ಟವಾಗುತ್ತದೆ. ಮೊಟ್ಟೆಯನ್ನು ನೀವು ಅನೇಕ ರುಚಿಯಲ್ಲಿ ತಯಾರಿಸಬಹುದು, ನೀವು ಮೊಟ್ಟೆಯಿಂದ ಸಾರು ಅಥವಾ ಬುರ್ಜಿ ಮಾಡುವಾಗ ಕೆಲವು ಮಸಾಲೆಯನ್ನು ಹಾಕಿದರೆ ಅದೇ ವಿಭಿನ್ನವಾದ ರುಚಿಯನ್ನು ಕೊಡುತ್ತದೆ. ನಾವು ಇಂದು ಮನೆಯಲ್ಲಿಯೇ ಇರುವ ಕೆಲವೇ ಸಾಮಗ್ರಿಗಳು ಬಳಸಿಕೊಂಡು ರುಚಿಯಾಗಿ ಮಾಡುವ ಮೊಟ್ಟೆ ಪಲ್ಯ ಮಾಡುವ ವಿಧಾನ ಇಲ್ಲಿದೆ.


    ಬೇಕಾಗುವ ಸಾಮಗ್ರಿಗಳು:
    * ಮೊಟ್ಟೆ – 4
    * ಕ್ಯಾಪ್ಸಿಕಂ -1 (ಇದರ ಬೀಜ ಹಾಕಬೇಡಿ)
    * ಟೊಮೆಟೊ -1
    * ಅಡುಗೆ ಎಣ್ಣೆ -4 ಚಮಚ
    * ಅರಿಶಿಣ ಪುಡಿ – ಅರ್ಧ ಚಮಚ
    * ಜೀರಿಗೆ ಪುಡಿ -1 ಚಮಚ
    * ರುಚಿಗೆ ತಕ್ಕ ಉಪ್ಪು
    * ಖಾರದ ಪುಡಿ – 1 ಚಮಚ
    * ಕಸೂರಿ ಮೇಥಿ – 1 ಚಮಚ
    * ಎಗ್ ಮಸಾಲ 1 ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಮೊದಲು ಮೊಟ್ಟೆಗಳನ್ನು ಬೇಯಿಸಿ ಕಟ್ ಮಾಡಿ ಇಟ್ಟುಕೊಳ್ಳಿ
    * ಒಂದು ಬಾಣಲೆ ತೆಗೆದುಕೊಂಡು ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ

    * ಎಣ್ಣೆ ಬಿಸಿಯಾದಾಗ ಕತ್ತರಿಸಿದ ಕ್ಯಾಪ್ಸಿಕಂ, ಟೊಮೆಟೊ, ಅರಿಶಿಣ ಪುಡಿ, ಜೀರಿಗೆ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಫ್ರೈ ಮಾಡಿ.
    * ನಂತರ ಕಸೂರಿ ಮೇಥಿಯನ್ನು ಕೈಯಲ್ಲೇ ಪುಡಿ ಮಾಡಿ ಹಾಕಿ. ಇದನ್ನೂ ಓದಿ: ಗರಿ ಗರಿಯಾದ ನಿಪ್ಪಟ್ಟು ಮಾಡುವ ಸರಳ ವಿಧಾನ

    * ಈಗ ಕತ್ತರಿಸಿದ ಮೊಟ್ಟೆಯನ್ನು ಮಸಾಲೆಗೆ ಹಾಕಿ.
    * ಈಗ ಒಂದು ಚಮಚ ಎಗ್ ಮಸಾಲ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮೊಟ್ಟೆ ಪಲ್ಯ ಸವಿಯಲು ಸಿದ್ಧವಾಗುತ್ತದೆ.

  • ಗರಿ ಗರಿಯಾದ ನಿಪ್ಪಟ್ಟು ಮಾಡುವ ಸರಳ ವಿಧಾನ

    ಗರಿ ಗರಿಯಾದ ನಿಪ್ಪಟ್ಟು ಮಾಡುವ ಸರಳ ವಿಧಾನ

    ತಿಂಡಿ ಪ್ರಿಯರು ಏನಾದರೂ ತಿನ್ನುತ್ತಲೆ ಇರುತ್ತಾರೆ. ಬರ್ಗರ್, ನಿಪ್ಪಟ್ಟು, ಬೇಲ್ ಪುರಿ, ಮಸಾಲ್ ಪುರಿ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜೊತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಸರಳವಾಗಿ ಮನೆಯಲ್ಲಿ ಕೇವಲ 10 ನಿಮಿಷಗಳಲ್ಲಿ ನಿಪ್ಪಟ್ಟು ತಯಾರಿಸಬಹುದು.


    ಬೇಕಾಗುವ ಸಾಮಗ್ರಿಗಳು:
    * ಕಡಲೆಕಾಯಿ- 1ಕಪ್
    * ಎಳ್ಳು- ಅರ್ಧ ಕಪ್
    * ಜೀರಿಗೆ- ಅರ್ಧ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಖಾರದ ಪುಡಿ- 2 ಟೀ ಸ್ಪೂನ್
    * ಕಡಲೆ ಹಿಟ್ಟು- ಅರ್ಧ ಕಪ್
    * ಕರಿಬೇವು- ಸ್ವಲ್ಪ
    * ಅಕ್ಕಿ ಹಿಟ್ಟು- ಅರ್ಧ ಕಪ್
    * ಅಡುಗೆ ಎಣ್ಣೆ


    ಮಾಡುವ ವಿಧಾನ:
    * ಮೊದಲು ಒಂದು ಮಿಕ್ಸಿ ಜಾರಿಗೆ ಕಡಲೆಕಾಯಿ ಹಾಕಿ ಪುಡಿ ಮಾಡಿಕೊಳ್ಳಿ,

    * ಒಂದು ಬೌಲ್‍ಗೆ ಪುಡಿ ಮಾಡಿದ ಕಡಲೆಕಾಯಿ ಪುಡಿ, ಜೀರಿಗೆ, ಎಳ್ಳು, ಕಡಲೆ ಹಿಟ್ಟು, ಖಾರದ ಪುಡಿ, ಅಕ್ಕಿ ಹಿಟ್ಟು, ಉಪ್ಪು, ಕರಿಬೇವು, ಬಿಸಿ ಮಾಡಿದ ಅಡುಗೆ ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

    * ಬಳಿಕ ಇದನ್ನು ಸಣ್ಣ ಉಂಡೆ ಮಾಡಿಕೊಳ್ಳಿ. ನಂತರ ಇದನ್ನು ಸಣ್ಣದಾಗಿ ತಟ್ಟಿಕೊಳ್ಳಬೇಕು.

    * ನಂತರ ಎಣ್ಣೆ ಬಿಸಿಯಾದ ಬಳಿಕ ತಟ್ಟಿದ ನಿಪ್ಪಟ್ಟನ್ನು ಕರಿಯುರಿ. ಇದನ್ನೂ ಓದಿ: ಎಲ್ಲರಿಗೂ ಇಷ್ಟವಾಗುವಂತ ರುಚಿ ರುಚಿಯಾದ ಕ್ಯಾರೆಟ್ ಪಾಯಸ ಮಾಡಿ

    * ಈಗ ರುಚಿಕರವಾದ ಖಾರ ನಿಪ್ಪಟ್ಟು ಸವಿಯಲು ಸಿದ್ಧವಾಗುತ್ತದೆ.

  • ಎಲ್ಲರಿಗೂ ಇಷ್ಟವಾಗುವಂತ ರುಚಿ ರುಚಿಯಾದ ಕ್ಯಾರೆಟ್ ಪಾಯಸ ಮಾಡಿ

    ಎಲ್ಲರಿಗೂ ಇಷ್ಟವಾಗುವಂತ ರುಚಿ ರುಚಿಯಾದ ಕ್ಯಾರೆಟ್ ಪಾಯಸ ಮಾಡಿ

    ಕ್ಯಾರೆಟ್ ನಿಂದ ತಯಾರಿಸಲಾಗುವ ಈ ಪಾಯಸವು ಅತ್ಯಂತ ರುಚಿಕರವಾಗಿರುತ್ತದೆ. ಇದನ್ನು ನೀವು ಒಮ್ಮೆ ಸವಿದರೆ ಮನಸ್ಸು ಮತ್ತು ನಾಲಿಗೆ ಮತ್ತೆ ಮತ್ತೆ ತಿನ್ನಲು ಬಯಸುತ್ತದೆ. ಕ್ಯಾರೆಟ್ ಪಾಯಸವು ಅತ್ಯಂತ ಪೌಷ್ಠಿಕಾಂಶಗಳಿಂದ ಕೂಡಿರುತ್ತದೆ. ಈ ಪಾಯಸವನ್ನು ಭಾರತಾದ್ಯಂತ ತಯಾರಿಸುತ್ತಾರೆ. ಇದನ್ನು ಕಡಿಮೆ ಸಮಯದಲ್ಲಿ ತಯಾರಸಿಬಹುದಾಗಿದ್ದು, ಇದರಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿರುತ್ತದೆ.

    ಬೇಕಾಗುವ ಸಾಮಾಗ್ರಿಗಳು:
    * ಹಾಲು- 2ಕಪ್
    * ಕ್ಯಾರೆಟ್- 1ಕಪ್
    * ಗೋಡಂಬಿ, ಬಾದಾಮಿ 6-7(ಹಾಲಿನಲ್ಲಿ ನೆನೆ ಹಾಕಿರಿ)
    * ಏಲಕ್ಕಿ ಪುಡಿ – 1 ಚಮಚ
    * ತುಪ್ಪ ಸ್ವಲ್ಪ – 4 ಚಮಚ
    * ಕೇಸರಿ – ಸ್ವಲ್ಪ

    ಮಾಡುವ ವಿಧಾನ:
    * ಹಾಲನ್ನು ಗಟ್ಟಿಯಾಗುವವರೆಗೆ ಚೆನ್ನಾಗಿ ಕುದಿಸಿಕೊಳ್ಳಬೇಕು. ಇದನ್ನೂ ಓದಿ: ಸರಳ, ರುಚಿಯಾದ ಬೆಳ್ಳುಳ್ಳಿ ಚಟ್ನಿ ಮಾಡಲು ಟ್ರೈ ಮಾಡಿ
    * ನಂತರ ಬೇರೆ ಪಾತ್ರೆಗೆ ತುಪ್ಪ ಗೋಡಂಬಿ, ಬಾದಾಮಿಯನ್ನು ಹಾಕಿ 4-5 ನಿಮಿಷ ಫ್ರೈ ಮಾಡಿ ಒಂದು ಬದಿಯಲ್ಲಿ ತೆಗೆದಿಡಿ.

    * ನಂತರ ಅದೇ ಪಾತ್ರೆಗೆ ತುರಿದ ಕ್ಯಾರೆಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ, ನಂತರ ಈ ಮೊದಲೇ ಹುರಿದ ಬಾದಾಮಿ, ಗೋಡಂಬಿ ಹಾಗೂ ಸ್ವಲ್ಪ ಹಾಲನ್ನು ಕ್ಯಾರೆಟ್ ಜೊತೆ ಹಾಕಿ ಫ್ರೈ ಮಾಡಬೇಕು.

    * ಈಗ ಕ್ಯಾರೆಟ್ ಮತ್ತು ಬಾದಾಮಿ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಿಕೊಳ್ಳಬೇಕು. ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ
    * ಈಗ ಪುನಃ ಹಾಲನ್ನು ಕುದಿಯಲು ಇಟ್ಟು, ಅದಕ್ಕೆ ಸಕ್ಕರೆ, ರುಬ್ಬಿದ ಕ್ಯಾರೆಟ್ ಹಾಕಿ ಸೌಟ್ ನಿಂದ ಮಿಕ್ಸ್ ಮಾಡುತ್ತಾ 5 ನಿಮಿಷ ಕುದಿಸಬೇಕು. ಸಕ್ಕರೆ ಅಥವಾ ಹಾಲು ಬೇಕಿದ್ದರೆ ಸ್ವಲ್ಪ ಸೇರಿಸಬಹುದು. ಇದೀಗ ರುಚಿಯಾದ ಕ್ಯಾರೆಟ್ ಪಾಯಸ ಸವಿಯಲು ಸಿದ್ಧವಾಗುತ್ತದೆ.

  • ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

    ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

    ಹೀರೆಕಾಯಿಯನ್ನು ಮಾರುಕಟ್ಟೆಯಿಂದ ತಂದಿದ್ದೀರ. ಆದರೆ ನಿಮಗೆ ಪಲ್ಯ, ಸಾರು ಮಾಡಲು ಇಷ್ಟ ಇಲ್ಲ. ಬೇರೆ ಏನಾದ್ರೂ ಹೊಸ ಅಡುಗೆ ಮಾಡಲು ಟ್ರೈ ಮಾಡಬೇಕು ಅಂದುಕೊಂಡಿದ್ದೀರಾ? ಏನ್ ಮಾಡ್ಬೋದಪ್ಪ ಅಂತ ಯೋಚ್ನೆ ಮಾಡ್ತಾ ಇದ್ದೀರಾ? ಹಾಗಾದ್ರೆ ನಾವಿಂದು ನಿಮಗೆ ಬಿಸಿಬಿಸಿ ಹೀರೆಕಾಯಿ ದೋಸೆ ಹೇಗೆ ಮಾಡೋದು ಅನ್ನೋದನ್ನ ಹೇಳಿಕೊಡಲಿದ್ದೇವೆ. ಹೀರೆಕಾಯಿಂದ ನಾವೆಲ್ಲರೂ ಸಾಮಾನ್ಯವಾಗಿ ಮಾಡೋದು, ಒಂದು ಪಲ್ಯ ಬಿಟ್ರೆ ಸಾಂಬಾರ್. ಆದ್ರೆ ಇದೇ ಹೀರೆಕಾಯಿಂದ ಬೆಳಗ್ಗಿನ ಬ್ರೇಕ್ ಫಾಸ್ಟ್ ಕೂಡ ಮಾಡಬಹುದು.

    ಬೇಕಾಗುವ ಸಾಮಗ್ರಿಗಳು:
    * ಹೀರೆಕಾಯಿ 1 ಕಪ್
    * ಅಕ್ಕಿ -2 ಚಮಚ
    * ಉದ್ದಿನ ಬೇಳೆ- 2 ಚಮಚ
    * ಮೆಂತ್ಯೆ – 2 ಚಮಚ
    * ಒಣಮೆಣಸಿನಕಾಯಿ -2
    * ತೆಂಗಿನಕಾಯಿ- ಅರ್ಧ ಕಪ್
    * ದನಿಯಾ – 1 ಚಮಚ
    * ಜೀರಿಗೆ – 1 ಚಮಚ
    * ಬೆಲ್ಲ- ಸ್ವಲ್ಪ
    * ಹುಣಸೆಹಣ್ಣು- ಸ್ವಲ್ಪ
    * ಅರಿಶಿಣ – ಅರ್ಧ ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- 1

    ಮಾಡುವ ವಿಧಾನ:
    *ಮೊದಲನೆಯದಾಗಿ, ಒಂದು ದೊಡ್ಡ ಬಟ್ಟಲಿನಲ್ಲಿ ಅಕ್ಕಿ, ಉದ್ದಿನಬೇಳೆ, ಮೆಂತ್ಯೆ, ಒಣ ಮೆಣಸಿನಕಾಯಿಯನ್ನು ಹಾಕಿ 4 ಗಂಟೆಗಳ ಕಾಲ ನೆನೆಸಿಡಿ. ಇದನ್ನೂ ಓದಿ:  ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ

    *ನಂತರ ಅದರ ನೀರನ್ನು ಬಸಿದು ಮಿಕ್ಸಿಗೆ ಹಾಕಿ, ಅದಕ್ಕೆ ತೆಂಗಿನಕಾಯಿ, ದನಿಯಾ, ಜೀರಿಗೆ, ಬೆಲ್ಲ, ಹುಣಸೆಹಣ್ಣು, ಅರಿಶಿಣ, ಉಪ್ಪು ಸೇರಿಸಿ, ಅಗತ್ಯವಿರುವಂತೆ ನೀರನ್ನು ಹಾಕಿ, ನೈಸ್ ಆಗಿ ರುಬ್ಬಿಕೊಳ್ಳಿ.ಈ ಹಿಟ್ಟನ್ನು ದೊಡ್ಡ ಬಟ್ಟಲಿಗೆ ಹಾಕಿಕೊಳ್ಳಿ.

    * ಹೀರೆಕಾಯಿಯ ಸಿಪ್ಪೆ ತೆಗೆದು. ಸ್ಲೈಸ್ ರೀತಿ ಕತ್ತರಿಸಿ. ಈಗ ಹಿರೇಕಾಯಿ ಸ್ಲೈಸ್ ಅನ್ನು ಹಿಟ್ಟಿನಲ್ಲಿ ಅದ್ದಿ, ತವಾದ ಮೇಲೆ ಹಾಕುತ್ತಾ, ಆ ಹೀರೆಕಾಯಿಯ ಹೋಳುಗಳನ್ನೇ ವೃತ್ತಾಕಾರವಾಗಿ ದೋಸೆಯಂತೆ ಇಡುತ್ತಾ ಬನ್ನಿ.

    * ತದನಂತರ, ಅದರ ಮೇಲೆ 1 ಚಮಚ ಎಣ್ಣೆ ಸೇರಿಸಿ ಚೆನ್ನಾಗಿ ಬೇಯಿಸಿದರೆ ಹೀರೆಕಾಯಿ ದೋಸೆ ಸವಿಯಲು ಸಿದ್ಧವಾಗುತ್ತದೆ.

  • ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ

    ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ

    ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಅಡುಗೆ ಪರಿಣಿತರ ಪ್ರತಿಭೆಯಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಈ ಚಟ್ನಿ ಬಾಯಲ್ಲಿ ನೀರೂರಿಸುವಂತಿರುತ್ತದೆ. ಶೇಂಗಾ, ಹಸಿಮೆಣಸು, ಟೊಮೆಟೊ ಚಟ್ನಿಯೆಂದು ಹಲವು ಬಗೆಯ ಚಟ್ನಿಯನ್ನು ತಯಾರಿಸಲಾಗುತ್ತದೆ. ಆದರೆ ನಾವು ಇಂದು ಹೇಳುತ್ತೀರುವ ಚಟ್ನಿ ಅತ್ಯಂತ ಸರಳ ಮತ್ತು ರುಚಿಯಾಗಿರುತ್ತದೆ. ಕಡಿಮೆ ಸಾಮಗ್ರಿಗಳನ್ನು ಬಳಸಿಕೊಂಡು ರುಚಿಯಾದ ಅಡುಗೆ ಮಾಡುವ ವಿಧಾನ ಈ ಕೆಳಗಿನಂತಿದೆ.

    ಬೇಕಾಗುವ ಸಾಮಗ್ರಿಗಳು:
    * ಈರುಳ್ಳಿ -2
    * ತೆಂಗಿನತುರಿ- 1ಕಪ್
    * ಹಸಿಮೆಣಸು 2 – 3
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- 4 ಟೀ ಸ್ಪೂನ್
    * ಸಾಸಿವೆ- 1 ಟೀ ಸ್ಪೂನ್
    * ಬೆಳ್ಳುಳ್ಳಿ-1
    * ಜೀರಿಗೆ- ಅರ್ಧ ಟೀ ಸ್ಪೂನ್
    * ಕರೀಬೇವು- ಸ್ವಲ್ಪ
    * ಹುಣಸೆಹಣ್ಣು- ಸ್ವಲ್ಪ
    * ಕೊತ್ತಂಬರಿ ಸೊಪ್ಪು
    * ಕೆಂಪು ಮೆಣಸು-2

    ಮಾಡುವ ವಿಧಾನ:
    * ಒಂದು ಬಾಣಲೆ ಒಲೆಯ ಮೇಲೆ ಇಟ್ಟು ಅಡುಗೆ ಎಣ್ಣೆಯನ್ನು ಹಾಕಿ ಕಾಯುತ್ತಿದ್ದಂತೆ, ಜೀರಿಗೆ, ಕರೀಬೇವು, ಬೆಳ್ಳುಳ್ಳಿ, ಕರಿಬೇವು, ಈರುಳ್ಳಿ. ಹಸಿ ಮೆಣಸು, ಕೆಂಪು ಮೆಣಸು, ತೆಂಗಿನಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಇದನ್ನೂ ಓದಿ:  ರುಚಿಯಾದ ಮೊಟ್ಟೆ ಗ್ರೇವಿ ಮಾಡಿ ಮನೆ ಮಂದಿ ಕುಳಿತು ಸವಿಯಿರಿ

    * ಈಗ ಫ್ರೈ ಮಾಡಿರುವ ಮಸಾಲೆಯನ್ನು ಮಿಕ್ಸಿಗೆ ಹಾಕಿ ಜೊತೆಗೆ ಕೊತ್ತಂಬರಿಯನ್ನು ಹಾಕಿ ರುಬ್ಬಿಕೊಳ್ಳಬೇಕು.

    * ಇದೀಗ ಬಾಣಲೆಗೆ ಅಡುಗೆ ಎಣ್ಣೆ, ಸಾಸಿವೆ, ಕೊತ್ತಂಬರಿ ಹಾಕಿ ಒಗ್ಗರಣೆಗೆ ತಯಾರಿಸಿಕೊಂಡು ರುಬ್ಬಿಕೊಂಡಿರುವ ಚಟ್ನಿ,ಉಪ್ಪು, ಹುಣಸೆಹಣ್ಣು  ಹಾಕಿ ಚೆನ್ನಾಗಿ ಮಿಶ್ರಣವನ್ನು ಮಾಡಿ ಸ್ವಲ್ಪ ಬಿಸಿ ಮಾಡಿದರೆ ರುಚಿಯಾದ ಈರುಳ್ಳಿ ಚಟ್ನಿ ಸವಿಯಲು ಸಿದ್ಧವಾಗುತ್ತದೆ.

  • ಗಣೇಶನಿಗೆ ಪ್ರಿಯವಾದ ಬೇಸನ್ ಲಾಡು ಮಾಡುವ ಸರಳ ವಿಧಾನ

    ಗಣೇಶನಿಗೆ ಪ್ರಿಯವಾದ ಬೇಸನ್ ಲಾಡು ಮಾಡುವ ಸರಳ ವಿಧಾನ

    ವಿಘ್ನವನ್ನು ನಿವಾರಿಸುವ ವಿನಾಯಕನ ಚತುರ್ಥಿಯನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಹಬ್ಬಕ್ಕೆ ಸಿಹಿ ತಿಂಡಿ ಇಲ್ಲವೆಂದರೆ ಹಬ್ಬಕ್ಕೆ ಮೆರಗು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಈ ಬಾರಿ ಬೇಸನ್ ಲಾಡು ಮಾಡಿ.

    ಕೆಲವೇ ಸಮಯದಲ್ಲಿ ತಯಾರಿಸಬಹುದಾದ ಈ ಲಾಡು ನಿಮ್ಮ ಮನೆಮಂದಿಯ ಮೆಚ್ಚುಗೆಗೆ ಪಾತ್ರವಾಗುತ್ತದೆ. ಹಬ್ಬಕ್ಕೆಂದು ಮನೆಗೆ ಬರುವ ಅತಿಥಿಗಳಿಗೆ ಖಂಡಿತ ಇಷ್ಟವಾಗುತ್ತದೆ. ಇನ್ನೇಕೆ ತಡ, ಕೆಳಗೆ ನಾವು ಹೇಳಿರುವ ಸಾಮಗ್ರಿಗಳನ್ನು ಬಳಸಿಕೊಂಡು ಬೇಸನ್ ಲಾಡು ಮಾಡುವ ಸರಳ ವಿಧಾನಗಳು ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಕಡಲೆ ಹಿಟ್ಟು – 1 ಕಪ್
    * ಪುಡಿ ಸಕ್ಕರೆ – ಅರ್ಧ ಕಪ್
    * ತುಪ್ಪ – ಅರ್ಧ ಕಪ್
    * ಗೋಡಂಬಿ ಬೀಜ – ಅರ್ಧ ಕಪ್
    * ಏಲಕ್ಕಿ ಪುಡಿ – ಅರ್ಧ ಚಮಚ

    ಮಾಡುವ ವಿಧಾನ:
    * ಕಡಲೆ ಹಿಟ್ಟನ್ನು ಹುರಿದುಕೊಂಡು ಅದನ್ನು ಪಕ್ಕದಲ್ಲಿಡಿ.
    * ಪಾತ್ರೆಯಲ್ಲಿ ಒಂದು ಚಮಚದಷ್ಟು ತುಪ್ಪವನ್ನು ಬಿಸಿ ಮಾಡಿಕೊಳ್ಳಿ ಮತ್ತು ಕತ್ತರಿಸಿದ ಗೇರುಬೀಜವನ್ನು ಹಾಕಿ ಹುರಿದುಕೊಳ್ಳಿ.

    * ನಾನ್ ಸ್ಟಿಕ್ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಂಡು ಹುರಿದ ಕಡಲೆ ಹಿಟ್ಟನ್ನು ಹಾಕಿ ಚೆನ್ನಾಗಿ ಹುರಿಯಬೇಕು.
    * ನಂತರ ಇದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರ ಮಾಡಿಕೊಳ್ಳಿ.

    * ನಂತರ ಗ್ಯಾಸ್ ಆರಿಸಿ ಈ ಮಿಶ್ರಣಕ್ಕೆ ಹುಡಿ ಸಕ್ಕರೆ, ಗೋಡಂಬಿ, ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಂಡು ಬಳಿಕ ಇದನ್ನು ಒಂದು ಪಾತ್ರೆಗೆ ವರ್ಗಾಯಿಸಿ.
    * ನಿಮ್ಮ ಕೈಗಳಿಗೆ ಸ್ವಲ್ಪ ತುಪ್ಪ ಹಚ್ಚಿಕೊಂಡು ಹಿಟ್ಟಿನಿಂದ ಲಾಡಿನ ಉಂಡೆಗಳನ್ನು ಕಟ್ಟಲು ಪ್ರಾರಂಭಿಸಿದರೆ ರುಚಿಯಾದ ಬೇಸನ್ ಲಾಡು ಸವಿಯಲು ಸಿದ್ಧವಾಗುತ್ತದೆ.

  • ಗಣೇಶ ಹಬ್ಬಕ್ಕೆ ಸ್ಪೆಷಲ್ ಆಗಿ ಮಾಡಿ ಬಾದಾಮಿ ಹಲ್ವಾ

    ಗಣೇಶ ಹಬ್ಬಕ್ಕೆ ಸ್ಪೆಷಲ್ ಆಗಿ ಮಾಡಿ ಬಾದಾಮಿ ಹಲ್ವಾ

    ಹಬ್ಬ ಎಂದರೆ ಸಿಹಿ ಅಡುಗೆ ಹೆಚ್ಚಾಗಿರುತ್ತದೆ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ವಿಘ್ನ ವಿನಾಶಕನಾಗಿರುವ ಗಣಪನ ಪೂಜೆಗೆ ಸಿಹಿ ತಿಂಡಿಗಳನ್ನು ಮಾಡುತ್ತೀರಾ. ಸರಳವಾಗಿ ಹೊಸ ಹೊಸ ರೆಸಿಪಿಗಳನ್ನು ನೀವೆನಾದ್ರೂ ತಯಾರಿಸಿ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚು ಮಾಡಬೇಕು ಎಂದರೆ ಬಾದಾಮಿ ಹಲ್ವಾ ರೆಸಿಪಿಯನ್ನು ಮಾಡಲು ಟ್ರೈ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಬಾದಾಮಿ – 1 ಕಪ್ (ರಾತ್ರಿ ನೆನೆಸಿಟ್ಟಿರಬೇಕು)
    * ಸಕ್ಕರೆ – 1 ಕಪ್
    * ಹಾಲು – 1 ಕಪ್
    * ತುಪ್ಪ – ಅರ್ಧ ಕಪ್
    * ಕೇಸರಿ – ಕೆಲವು ಎಸಳು (ಹಾಲಿನಲ್ಲಿ ನೆನೆಹಾಕಿರಬೇಕು) ಇದನ್ನೂ ಓದಿ:  ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ

    ಮಾಡುವ ವಿಧಾನ:

    * ನೆನೆಸಿಟ್ಟಿರುವ ಬಾದಾಮಿಗೆ ಹಾಲನ್ನು ಹಾಕಿ ರುಬ್ಬಿಕ್ಕೊಳ್ಳಬೇಕು.

    * ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಬಿಸಿಯಾಗುತ್ತಿದ್ದಂತೆ ಸಕ್ಕರೆಯನ್ನು ಹಾಕಿ ಸಕ್ಕರೆ ಕರಗುವವರೆಗೆ ಇದನ್ನು ಮಿಶ್ರಣ ಮಾಡಿಕೊಳ್ಳಬೇಕು.

    * ಇದೀಗ ಬಾದಾಮಿ ಪೇಸ್ಟ್ ಅನ್ನು ಸೇರಿಸಿಕೊಂಡು ಸೌಟ್‍ನಿಂದ ಚೆನ್ನಾಗಿ ತಿರುಗಿಸುತ್ತಾ, ಕೇಸರಿ ಮತ್ತು ಬೇಕಾದಲ್ಲಿ ಇನ್ನಷ್ಟು ತುಪ್ಪವನ್ನು ಸೇರಿಸಿಕೊಂಡು ಚೆನ್ನಾಗಿ ಬೇಯಿಸಿಕೊಳ್ಳಬೇಕು.

    * ಹಲ್ವಾ ದಪ್ಪ ಹದಕ್ಕೆ ಬರುವವರೆಗೆ ಬೇಯಿಸಬೇಕು. ಆಗ ರುಚಿತಯಾದ ಬಾದಾಮಿ ಹಲ್ವಾ ಸವಿಯಲು ಸಿದ್ಧವಾಗುತ್ತದೆ.

  • ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ

    ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ

    ಹಾಗಲಕಾಯಿ ಕಹಿಯಾಗಿರುವುದರಿಂದ ಅದನ್ನು ಕೆಲವರು ಆದಷ್ಟು ದೂರವಿಡುತ್ತಾರೆ. ಆದರೆ ಈ ಕಹಿಯನ್ನು ಹೋಗಲಾಡಿಸಲು ಕೆಲವೊಂದು ಸಾಮಾಗ್ರಿಗಳನ್ನು ಸೇರಿಸಿಕೊಂಡು ಇದನ್ನು ರುಚಿ ರೆಸಿಪಿಯನ್ನ ತಯಾರಿಸಬಹುದಾಗಿದೆ. ವಾರಕ್ಕೆ ಒಮ್ಮಯಾದ್ರೂ ಹಾಗಲಕಾಯಿ ಪಲ್ಯವನ್ನು ತಿನ್ನುವುದು ಒಳ್ಳೆಯದಾಗಿದೆ. ಕಹಿಯಾದ ಹಾಗಲಕಾಯಿಯನ್ನು ಬಳಸಿಕೊಂಡು ಒಂದು ರುಚಿಯಾದ ರೆಸಿಪಿಯನ್ನು ತಯಾರಿಸಿ ಸೇವಿಸಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಹಾಗಲಕಾಯಿ – 1 ಕಪ್
    * ಈರುಳ್ಳಿ – ಅರ್ಧ ಕಪ್
    * ಹಸಿಮೆಣಸು – 4 ರಿಂದ 5
    * ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    * ಹುಣಸೆ ಹಣ್ಣಿನ ಹುಳಿ ನೀರು – 1 ಚಮಚ
    * ಅರಿಶಿಣ – ಅರ್ಧ ಚಮಚ
    * ಕೆಂಪು ಮೆಣಸಿನ ಹುಡಿ -2 ಚಮಚ
    * ಗರಮಂ ಮಸಾಲಾ – 1 ಚಮಚ
    * ಅಡುಗೆ ಎಣ್ಣೆ – ಅರ್ಧ ಕಪ್

    ಮಾಡುವ ವಿಧಾನ:
    * ಹಾಗಲಕಾಯಿ ಸಿಪ್ಪೆಯನ್ನು ತೆಗೆದು ಕತ್ತರಿಸಿಕೊಂಡು ಉಪ್ಪು ಹಾಕಿ ಸ್ವಲ್ಪ ಸಮಯ ನೆನೆಸಿಟ್ಟಿರಬೇಕು.
    * ನಂತರ ಹಾಗಲಕಾಯಿಯನ್ನು ನೀರಿಗೆ ಹಾಕಿ ಕುದಿಸಿಕೊಂಡು ಇದಕ್ಕೆ ಕತ್ತರಿಸಿದ ಹಾಗಲಕಾಯಿಯನ್ನು ಹಾಕಿ ಕುದುಸಿಕೊಂಡು ನೀರಿನಿಂದ ತೆಗೆದು ಬೇರೆ ಬಟ್ಟಲಿನಲ್ಲಿ ಎತ್ತಿಟ್ಟಿರಬೇಕು. ಇದನ್ನೂ ಓದಿ:  ರುಚಿಕರವಾದ ಆಲೂ ಕ್ಯಾಪ್ಸಿಕಂ ಕರಿ ಮಾಡಲು ಟ್ರೈ ಮಾಡಿ

     

    * ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಸೇರಿಸಿ. ಇದಕ್ಕೆ ಹಸಿಮೆಣಸು, ಅರಿಶಿಣ, ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿಮೆಣಸನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಇದನ್ನೂ ಓದಿ:  ಬಿದಿರು ಕಳಲೆ ಸಾಂಬಾರ್ ಸೂಪರ್ ಟೇಸ್ಟ್

    * ತದನಂತರ ಕೆಂಪು ಮೆಣಸಿನ ಹುಡಿ, ಗರಮಂ ಮಸಾಲಾವನ್ನು ಹಾಕಿ ಮತ್ತು ಸ್ವಲ್ಪ ನೀರು ಸೇರಿಸಿ ಬೇಯಿಸಬೇಕು ಇದನ್ನೂ ಓದಿ:  ಘಮ ಘಮಿಸುವ ಚಿಕನ್ ಮಸಾಲ ಮಾಡುವ ವಿಧಾನ

     

    * ಇದಕ್ಕೆ ಹುಳಿ ನೀರು, ಉಪ್ಪು, ನೀರನ್ನು ಮಿತವಾಗಿ ಹಾಕಿ, ಸಣ್ಣ ಉರಿಯಲ್ಲಿ ಇದನ್ನು ಬೇಯಿಸಿಕೊಳ್ಳಿ.

    * ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದ ರುಚಿಯಾದ ಹಾಗಲಕಾಯಿ ರೆಸಿಪಿ ಸಿದ್ಧವಾಗುತ್ತದೆ.

  • ಬಿದಿರು ಕಳಲೆ ಸಾಂಬಾರ್ ಸೂಪರ್ ಟೇಸ್ಟ್

    ಬಿದಿರು ಕಳಲೆ ಸಾಂಬಾರ್ ಸೂಪರ್ ಟೇಸ್ಟ್

    ಮಾಡುವ ಅಡುಗೆ ರುಚಿಯಾಗಿ ಮತ್ತು ಆರೋಗ್ಯವಾಗಿಯೂ ಇರಬೇಕು ಎಂದು ನಾವು ಬಯಸುತ್ತೇವೆ. ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರವಾಗಿದೆ. ನಾವು ಇಂದು ಹೇಳಲು ಹೊರಟಿರುವ ಅಡುಗೆ ಮಲೆನಾಡ ಭಾಗಗಗಲ್ಲಿ ಹೆಚ್ಚಾಗಿ ಮಾಡುತ್ತಾರೆ. ಬಿದಿರು ಕಳಲೆ ಸಾಂಬಾರ್ ಅನ್ನು ಒಬ್ಬೊಬ್ಬರು ಒಂದು ವಿಧವಾಗಿ ಮಾಡುತ್ತಾರೆ. ಇಂದು ಹೇಳಲು ಹೊರಟಿರುವ ರೆಸಿಪಿಗೆ ಬಿದರು ಕಳಲೆ ಜೊತೆಗೆ ಸೊಪ್ಪು, ಕಾಳು ತರಕಾರಿಗಳನ್ನು ಹೆಚ್ಚಾಗಿ ಬಳಸಿ ಮಾಡುತ್ತೀರುವುದರಿಂದ ಸಖತ್ ಟೇಸ್ಟ್ ಕೊಡುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಸಾಸಿವೆ- ಅರ್ಧ ಸ್ಪೂನ್
    * ಕರಿಬೇವು – ಸ್ವಲ್ಪ
    * ಅಡುಗೆ ಎಣ್ಣೆ- ಅರ್ಧ ಕಪ್
    * ಬಿದಿರು ಕಳಲೆ – 2 ಕಪ್
    * ಟೊಮೆಟೋ- 2
    * ಬದನೆಕಾಯಿ, ಕೋಸು, ಹುರುಳಿ ಕಾಯಿ, ನುಗ್ಗೆಕಾಯಿ, ಮೂಲಂಗಿ, ಆಲೂಗಡ್ಡೆ, ಕ್ಯಾರೆಟ್- 1 ಕಪ್
    * ಹರವೆ ಸೊಪ್ಪು, ಮೆಂತೆ ಸೊಪ್ಪು, ಸಬ್ಬಸಿಗೆ ಸೊಪ್ಪು, ನುಗ್ಗೆ ಸೊಪ್ಪು – ಅರ್ಧ ಕಪ್
    * ಬಟಾಣಿ, ಹೆಸರು ಕಾಳು, ಅವರೆ ಕಾಳು, ಅಲಸಂಡೆ ಕಾಳು, ಹುರುಳಿ ಕಾಳು- ಅರ್ಧ ಕಪ್
    * ಬೆಳ್ಳುಳ್ಳಿ-1
    * ಬ್ಯಾಡಗಿ ಮೆಣಸಿನಕಾಯಿ-3
    * ಕಾಯಿ ತುರಿ- ಅರ್ಧ ಕಪ್
    * ಕೊತ್ತಂಬರಿ ಸೊಪ್ಪು- ಸ್ವಲ್ಪ ಇದನ್ನೂ ಓದಿ:  ರುಚಿಕರವಾದ ಆಲೂ ಕ್ಯಾಪ್ಸಿಕಂ ಕರ್ರಿ ಮಾಡಲು ಟ್ರೈ ಮಾಡಿ

    ಮಾಡುವ ವಿಧಾನ:
    * ಹುರಿದ ಬ್ಯಾಡಗಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

    * ಬಳಿಕ ಒಂದು ಕುಕ್ಕರ್‍ಗೆ ಬಿದಿರು ಕಳಲೆ, ಬದನೆಕಾಯಿ, ಕೋಸು, ಹುರುಳಿ ಕಾಯಿ, ಈರುಳ್ಳಿ, ಟೊಮೆಟೋ, ನುಗ್ಗೆಕಾಯಿ, ಮೂಲಂಗಿ, ಆಲೂಗಡ್ಡೆ, ಸೀಮೆ ಬದನೆಕಾಯಿ, ಕ್ಯಾರೆಟ್, ಹರವೆ ಸೊಪ್ಪು, ಮೆಂತೆ ಸೊಪ್ಪು, ಸಬ್ಬಸಿಗೆ ಸೊಪ್ಪು, ನುಗ್ಗೆ ಸೊಪ್ಪು, ಬಟಾಣಿ, ಹೆಸರು ಕಾಳು, ಅವರೆ ಕಾಳು, ಅಲಸಂಡೆ ಕಾಳು, ಹುರುಳಿ ಕಾಳು, ಉಪ್ಪು ಹಾಕಿ ಬೇಯಿಸಿ.

    * ಬಳಿಕ ಬೇಯಿಸಿದ ತರಕಾರಿಯನ್ನು ಒಂದು ಪಾತ್ರೆಗೆ ಹಾಕಿ, ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಕುದಿಸ ಬೇಕು.

    * ನಂತರ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಹಾಕಿದರೆ ಬಿದಿರು ಕಳಲೆ ಸಾಂಬಾರ್ ಸವಿಯಲು ಸಿದ್ಧವಾಗುತ್ತದೆ.