Tag: recipe

  • ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

    ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

    ಬ್ಬ ಎಂದರೆ ಪ್ರತಿಯೊಬ್ಬರ ಮನೆಯಲ್ಲಿ ಸಿಹಿಯಾದ ಅಡುಗೆ ಮಾಡುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ನವರಾತ್ರಿ ಹಬ್ಬ ಪ್ರಾರಂಭವಾಗಲಿದೆ. 9 ದಿನಗಳು ಮನೆಯಲ್ಲಿ ಸಿಹಿಯಾದ ಅಡುಗೆಯನ್ನು ಮಾಡಬೇಕು ಎಂದು ಯೋಚಿಸುತ್ತಿರುವ ನಿಮಗೆ ನಾವು ಇಂದು ಪೈನಾಪಲ್ ಪಾಯಸ ಮಾಡುವ ವಿಧಾನ ಹಾಗೂ ಬೇಕಾಗಿರುವ ಸಾಮಗ್ರಿಗಳು ಏನು ಎಂದು ಹೇಳುತ್ತೇವೆ. ಈ ಪಾಯಸವನ್ನು ಮಾಡಿ ಹಬ್ಬವನ್ನು ಸ್ಪೆಷಲ್ ಆಗಿ ಆಚರಣೆ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಪೈನಾಪಲ್- 2ಕಪ್
    * ಸಕ್ಕರೆ- ಕಾಲು ಕಪ್
    * ತೆಂಗಿನ ಹಾಲು- 2 ಬಟ್ಟಲು
    * ತುಪ್ಪ- ಅರ್ಧ ಕಪ್
    * ಗೋಡಂಬಿ- ಸ್ವಲ್ಪ
    * ಕಾರ್ನ್ ಫ್ಲೋರ್ (ಜೋಳದ ಹಿಟ್ಟು)- 2 ಚಮಚ

    ಮಾಡುವ ವಿಧಾನ:
    * ಮೊದಲು ಪೈನಾಪಲ್ ಪೀಸ್‍ಗಳನ್ನು ಗೋಡಂಬಿಯನ್ನು ತುಪ್ಪದೊಂದಿಗೆ ಫ್ರೈ ಮಾಡಿಕೊಳ್ಳಬೇಕು.
    * ನಂತರ ತೆಂಗಿನಕಾಯಿ ಹಾಲು ಕಾರ್ನ್‍ಫ್ಲೋರ್ ಸೇರಿಸಿ, ಸಕ್ಕರೆ ಬೆರೆಸಿ ಒಲೆಯ ಮೇಲಿಟ್ಟು ಚೆನ್ನಾಗಿ ಬೇಯಿಸಬೇಕು. ಇದನ್ನೂ ಓದಿ:  ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ

    * ನಂತರ ಈ ಮಿಶ್ರಣವು ಬಿಸಿಯಾಗುವಾಗ ಫ್ರೈ ಮಾಡಿದ ಪೈನಾಪಲ್ ಹಾಗೂ ಗೋಡಂಬಿ ಸೇರಿಸಿ ಒಂದು ಬಾರಿ ಕುದಿ ಬಂದ ಕೂಡಲೇ ಕೆಳಗಿಳಿಸಿದರೆ, ರುಚಿಕರವಾದ ಪೈನಾಪಲ್ ಪಾಯಸ ಸವಿಯಲು  ಸಿದ್ಧವಾಗುತ್ತದೆ.

  • ರುಚಿಯಾದ ಮೂಲಂಗಿ ಪರೋಟ ಮಾಡುವ ವಿಧಾನ ನಿಮಗಾಗಿ

    ರುಚಿಯಾದ ಮೂಲಂಗಿ ಪರೋಟ ಮಾಡುವ ವಿಧಾನ ನಿಮಗಾಗಿ

    ರೋಟ ಎಂದರೆ ಕೆಲವರು ಇಷ್ಟ ಪಟ್ಟು ಸವಿಯುತ್ತಾರೆ. ನಾವು ಇಂದು ಪರೋಟ ಪ್ರಿಯರಿಗಾಗಿ ಮೂಲಂಗಿ ಪರೋಟವನ್ನು ಮಾಡುವ ವಿಧಾನವನ್ನು ನಾವು ಹೇಳಲಿದ್ದೇವೆ. ಮೂಲಂಗಿಯೊಂದಿಗೆ ಮಿಶ್ರ ಮಾಡುವ ಮಸಾಲೆ ಪದಾರ್ಥಗಳು ಈ ಪರೋಟದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಸತ್ವಪೂರ್ಣ ತಿಂಡಿಯನ್ನು ನಿಮಗೆ ಒದಗಿಸುತ್ತದೆ. ಹಾಗಿದ್ದರೆ ಅತಿ ಸುಲಭವಾಗಿ ತಯಾರಿಸಬಹುದಾದ ಈ ಪರೋಟ ರೆಸಿಪಿಯ ತಯಾರಿ ವಿಧಾನವನ್ನು ಕೆಳಗೆ ನಾವು ನೀಡಿದ್ದೇವೆ. ಇಂದೆ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಮೂಲಂಗಿ – 2 ಕಪ್
    * ಈರುಳ್ಳಿ – 1
    * ಬೆಳ್ಳುಳ್ಳಿ ಪೇಸ್ಟ್ – 3 ಚಮಚ
    * ಜೀರಿಗೆ ಪುಡಿ – 1 ಚಮಚ
    * ಗರಮ್ ಮಸಾಲಾ -1 ಚಮಚ
    * ಕಾಳುಮೆಣಸು ಪುಡಿ- 1 ಚಮಚ
    * ದನಿಯಾ ಪುಡಿ – 3 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಗೋಧಿ ಹಿಟ್ಟು- 1 ಕಪ್
    * ಅಡುಗೆ ಎಣ್ಣೆ ಅಥವಾ ತುಪ್ಪ – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ತುರಿದ ಮೂಲಂಗಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
    * ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಗರಮ್ ಮಸಾಲಾ, ಕಾಳುಮೆಣಸು ಪುಡಿ, ದಿನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಅನ್ನು ಸೇರಿಸಿ ಬೇಯಿಸಿದ ಮೂಲಂಗಿಗೆ ಒಗ್ಗರಣೆ ಮಾಡಿ ಬೇಯಿಸಿಕೊಳ್ಳಿ. ಇದನ್ನೂ ಓದಿ:  ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ

    * ಗೋಧಿ ಹಿಟ್ಟನ್ನು ಸಾಕಷ್ಟು ನೀರು, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕಲಸಿ. ಅಗಲವಾಗಿ ಇದನ್ನು ಲಟ್ಟಿಸಿಕೊಳ್ಳಿ.
    * ಮಧ್ಯಕ್ಕೆ ಬೇಯಿಸಿದ ಮೂಲಂಗಿಯ ಮಿಶ್ರಣವನ್ನು ಇಡಿ.
    * ತದನಂತರ ಇದನ್ನು ಅರ್ಧಕ್ಕೆ ಮಡಚಿ. ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿಕೊಳ್ಳಿ.

    * ಬಾಣಲೆಗೆ ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಹಾಕಿ. 10. ಪರೋಟಾವನ್ನು ಬಿಸಿಯಾಗಿರುವ ಪ್ಯಾನ್‍ಗೆ ಹಾಕಿ ಬೇಯಿಸಿ. ಬೇಕಾದಲ್ಲಿ ಪರೋಟಾದ ಸುತ್ತಲೂ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೇಯುವವರೆಗೆ ಎರಡೂ ಬದಿ ಬಿಸಿ ಮಾಡಿಕೊಳ್ಳಿ.

  • ಸ್ಪೆಷಲ್ ನಾಟಿ ಕೋಳಿ ಸಾರು

    ಸ್ಪೆಷಲ್ ನಾಟಿ ಕೋಳಿ ಸಾರು

    ನಾಟಿ ಸ್ಟೈಲ್ ಆಹಾರ ಎಂದುರೆ ಹಲವರು ತುಂಬಾ ಇಷ್ಟ ಪಟ್ಟು ಸವಿಯುತ್ತಾರೆ. ಅಡುಗೆಮನೆಯಲ್ಲಿರುವ ಕೆಲವು ಸುಲಭ ಪರಿಕರಗಳಿಂದ ಭಿನ್ನವಾದ ರುಚಿಯಲ್ಲಿ ಅತ್ಯುತ್ತಮವಾದ ಖಾದ್ಯದೊಂದನ್ನು ಇಂದೇಕೆ ತಯಾರಿಸಬಾರದು? ಮೊಟ್ಟೆ, ತರಕಾರಿಗಳು ನಾಟಿಬೇಕು ಎಂದು ಕೇಳುವ ನಾವು ಇಂದು ನಾಟಿ ಸ್ಟೈಲ್‍ನಲ್ಲಿ ಅಡುಗೆ ಮಾಡಿ ಕುಟುಂಬದವರಿಗೆ ನೀಡಿದರೆ ನಿಜ್ವಾಗಲೂ ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಹಾಗಿದ್ದರೆ ಇನ್ನೇಕೆ ತಡ ಬನ್ನಿ ರುಚಿಯಾದ ನಾಟಿಕೋಳಿ ಸಾರು ಮಾಡೋಣ


    ಬೇಕಾಗುವ ಸಾಮಗ್ರಿಗಳು:
    * ಈರುಳ್ಳಿ – 1,
    * ಬೆಳ್ಳುಳ್ಳಿ-2
    * ಶುಂಠಿ – ಸ್ವಲ್ಪ
    * ಮೆಣಸಿನಕಾಯಿ – 6
    * ಹುರಿಗಡಲೆ – 1 ಚಮಚ
    * ಗಸೆಗಸೆ- ಚಮಚ
    * ಚಕ್ಕೆ- 1
    * ಲವಂಗ -2
    * ದನಿಯಾ ಪುಡಿ- 2 ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ತೆಂಗಿನತುರಿ- 1 ಕಪ್
    * ಅಡುಗೆ ಎಣ್ಣೆ- ಅರ್ಧ ಕಪ್
    * ಟೊಮೆಟೊ-1
    * ಮೆಂತ್ಯ ಸೊಪ್ಪು- ಸ್ವಲ್ಪ
    * ಅರಿಸಿಣ ಪುಡಿ – 1 ಚಮಚ ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ


    ಮಾಡುವ ವಿಧಾನ:

    * ದನಿಯಾ ಪುಡಿ, ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಹುರಿಗಡಲೆ, ಗಸೆಗಸೆ, ತೆಂಗಿನತುರಿ, ಈ ಎಲ್ಲಾ ಪದಾರ್ಥಗಳನ್ನು ಒಂದು ಚಮಚ ಎಣ್ಣೆ ಹಾಕಿ ಹುರಿದು, ನುಣ್ಣಗೆ ರುಬ್ಬಿಕೊಳ್ಳಬೇಕು.

    * ಕುಕರ್‍ಗೆ ಅಡುಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಲವಂಗ, ಚಕ್ಕೆ, ಈರುಳ್ಳಿ, ಟೊಮೆಟೊ, ಸ್ವಲ್ಪ ಮೆಂತ್ಯ ಸೊಪ್ಪು, ನಂತರ ನಾಟಿ ಕೋಳಿಯನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಅರಿಸಿಣ ಪುಡಿ ಹಾಕಿ 5 ನಿಮಿಷ ಬಾಡಿಸಿಕೊಳ್ಳಿ.

    * ಈಗ ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿ ನೀರು ಹಾಕಿ ಕುಕರ್ ಮುಚ್ಚಿ 5 ವಿಷಲ್ ಕೂಗಿಸಿದರೆ ಗೌಡ್ರು ಸ್ಪೆಷಲ್ ನಾಟಿಕೋಳಿ ಸಾರು ಮುದ್ದೆಯೊಂದಿಗೆ ಸವಿಯಲು ಸಿದ್ಧವಾಗುತ್ತದೆ.

  • ಖಾರವಾದ ಅಡುಗೆ ಇಷ್ಟ ಪಡುವವರಿಗಾಗಿ ಕ್ಯಾರೆಟ್ ಚಟ್ನಿ

    ಖಾರವಾದ ಅಡುಗೆ ಇಷ್ಟ ಪಡುವವರಿಗಾಗಿ ಕ್ಯಾರೆಟ್ ಚಟ್ನಿ

    ಕೊಬ್ಬರಿ, ಮಾವಿನಕಾಯಿ, ಬೆಳ್ಳುಳ್ಳಿ, ಟೊಮೆಟೊ ಚಟ್ನಿ ಎಲ್ಲರ ಮನೆಯಲ್ಲಿ ತಯಾರಿಸುತ್ತೇವೆ. ಆದರೆ ಇವತ್ತು ನಾವು ಖಾರ ಮತ್ತು ರುಚಿಯಾಗಿರುವ ಕ್ಯಾರೆಟ್ ಚಟ್ನಿ ಮಾಡುವುದರ ಕುರಿತು ತಿಳಿಯೋಣ. ಈ ಮಿಶ್ರಣವನ್ನು ಶುದ್ಧವಾದ ಗಾಜಿನ ಡಬ್ಬದಲ್ಲಿ ಹಾಕಿ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ 2 ದಿನಗಳವರೆಗೆ ಹಾಗೇ ಇಡಬಹುದಾಗಿದೆ, ಹಾಗಾದ್ರೆ ಬನ್ನಿ ಈ ಚಟ್ನಿಯನ್ನು ಹೇಗೆ ಮಾಡುವುದುಯ ಎನ್ನುವುದನ್ನು ಇಲ್ಲಿ ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಗೆ ವಿವರಿಸಲಾಗಿದೆ. ಇದನ್ನೂ ಓದಿ: ಪಡಿತರ ಅಕ್ಕಿ ಅಕ್ರಮವಾಗಿ ಗುಜರಾತ್‍ಗೆ ಸಾಗಣೆ- 8.10 ಲಕ್ಷದ ಅಕ್ಕಿ ವಶಕ್ಕೆ

    ಬೇಕಾಗುವ ಸಾಮಗ್ರಿಗಳು:
    * ಕ್ಯಾರೆಟ್ 3-4
    * ಕೆಂಪು ಮೆಣಸಿನ ಪುಡಿ- 2ಚಮಚ
    * ಕರಿಮೆಣಸಿನ ಪುಡಿ- 1 ಚಮಚ
    * ಶುಂಠಿ- ಸ್ವಲ್ಪ
    * ಬೆಳ್ಳುಳ್ಳಿ-2
    * ಬಾದಾಮಿ-2
    * ಗಸೆಗಸೆ- 2 ಚಮಚ
    * ಏಲಕ್ಕಿ-3
    * ವಿನಿಗರ್- 1 ಚಮಚ
    * ಚಮಚ ಸಕ್ಕರೆ- 1 ಚಮಚ

    Carrot Chutney

    ಮಾಡುವ ವಿಧಾನ:

    * ಚಿಕ್ಕ ತುಂಡಾಗಳಾಗಿ ಕ್ಯಾರೆಟ್‍ಗಳನ್ನು ಕತ್ತರಿಸಿ ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿ, ಮೆಣಸಿನ ಪುಡಿ, ಕರಿಮೆಣಸಿನ ಪುಡಿ ಸೇರಿಸಬೇಕು.
    * ಈ ಮಿಶ್ರಣಕ್ಕೆ ಒಂದು ಕಪ್ ನೀರು ಹಾಕಿ ಕ್ಯಾರೆಟ್ ಬೆಂದು ಆ ಮಿಶ್ರಣದಲ್ಲಿ ನೀರು ಬತ್ತಿ ಗಟ್ಟಿ ಮಿಶ್ರಣವಾಗುವವರೆಗೆ ಬೇಯಿಸಬೇಕು.

    Carrot Chutney

    * ಈ ಮಿಶ್ರಣವನ್ನು ಸೌಟ್ ನಿಂದ ಕುಟ್ಟುತ್ತಾ ಪೇಸ್ಟ್ ರೀತಿ ಮಾಡಬೇಕು.
    * ಈಗ ಆ ಮಿಶ್ರಣಕ್ಕೆ ವಿನಿಗರ್, ಸಕ್ಕರೆ, ಉಪ್ಪು, ಗಸೆಗಸೆ, ಬಾದಾಮಿ, ಗೋಡಂಬಿ, ಏಲಕ್ಕಿ ಹಾಕಿ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿ. ಇದನ್ನೂ ಓದಿ: ಅನಧಿಕೃತ ರೆಸಾರ್ಟ್ ತೆರವುಗೊಳಿಸದಿದ್ದರೆ ನೀವೇ ಹೊಣೆ- 4 ಅಧಿಕಾರಿಗಳಿಗೆ ಕೊಪ್ಪಳ ಡಿಸಿ ನೋಟಿಸ್

  • ಆರೋಗ್ಯಕರವಾದ ಹುರುಳಿಕಾಳು ಸಾರು ಮಾಡುವ ಸುಲಭ ವಿಧಾನ

    ಆರೋಗ್ಯಕರವಾದ ಹುರುಳಿಕಾಳು ಸಾರು ಮಾಡುವ ಸುಲಭ ವಿಧಾನ

    ಹುರುಳಿಕಾಳು ಆರೋಗ್ಯಕರವಾದ ಪ್ರೋಟೀನ್ ಅಂಶಗಳನ್ನು ಹೊಂದಿದೆ. ಡಯಟ್‍ನಲ್ಲಿ ಇದನ್ನು ಸೇರಿಸಿದರೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇವತ್ತು ನಾವು ಹುರುಳಿಕಾಳಿನ ಸಾರು ಮಾಡುವ ವಿಧಾನ ತಿಳಿಯೋಣ. ಈ ಸಾರು ಮಾಡಲು ಎಷ್ಟು ಸುಲಭವಾಗಿದೆಯೋ ಅಷ್ಟು ನಾಲಿಗೆಗೆ ರುಚಿಯನ್ನು ನೀಡಿತ್ತದೆ.

    ಬೇಕಾಗುವ ಸಾಮಾಗ್ರಿಗಳು:
    * ಹುರುಳಿಕಾಳು -ಅರ್ಧ ಕಪ್
    * ಟೊಮೆಟೊ -2
    * ಬೆಳ್ಳುಳ್ಳಿ 3
    * ನಿಂಬೆ ಹಣ್ಣು- 1 *
    * ಹುಣಸೆಹಣ್ಣೂ- ಸ್ವಲ್ಪ
    * ಇಂಗು ಚಿಟಿಕೆ
    * ಕರಿಮೆಣಸಿನ ಪುಡಿ- 1 ಚಮಚ
    * ಜೀರಿಗೆ- 1 ಚಮಚ
    * ಸಾಸಿವೆ -1 ಚಮಚ
    * ಒಣ ಮೆಣಸು 2
    * ಕರಿಬೇವಿನ ಎಲೆ- ಸ್ವಲ್ಪ
    * ಸಕ್ಕರೆ – ಅರ್ಧ ಚಮಚ
    * ಅಡುಗೆ ಎಣ್ಣೆ – ಅರ್ಧ ಕಪ್
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ರುಚಿಗೆ ತಕ್ಕ ಉಪ್ಪು

    ಮಾಡುವ ವಿಧಾನ:
    * ಹುರುಳಿಕಾಳನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿದು ನಂತರ ಬದಿಯಲ್ಲಿ ತೆಗೆದು ಇಡಬೇಕು.
    * ನಂತರ ಕುಕ್ಕರ್‍ನಲ್ಲಿ ಹಾಕಿ ಒಂದೂವರೆ ಕಪ್ ನೀರು ಹಾಕಿ ಸ್ವಲ್ಪ ಉಪ್ಪು ಸೇರಿಸಿ 3 ವಿಶಲ್ ಹಾಕಿಸಬೇಕು.

    * ಹುಣಸೆಹಣ್ಣಿನಿಂದ ರಸ ಮಾಡಿ ಆ ರಸಕ್ಕೆ ಸಕ್ಕರೆ ಹಾಕಿ ಬದಿಯಲ್ಲಿಡಬೇಕು.
    * ಈಗ ಹುರುಳಿಕಾಳನ್ನು ತೆಗೆದು ಜೀರಿಗೆ, ಕರಿಮೆಣಸಿನ ಪುಡಿ ಮತ್ತು ಬೆಳ್ಳುಳ್ಳಿ ಹಾಕಿ ನುಣ್ಣನೆ ರುಬ್ಬಿಕೊಳ್ಳಬೇಕು. (ಹುರುಳಿಕಾಳು ಬೇಯಿಸಿದ ನೀರನ್ನು ತೆಗೆದಿಡಿ)


    * ಈಗ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಒಣಮೆಣಸನ್ನು ಮುರಿದು ಹಾಕಬೇಕು ನಂತರ ಸ್ವಲ್ಪ ಇಂಗು ಮತ್ತು ಕರಿಬೇವಿನ ಎಲೆ ಹಾಕಿ ನುಣ್ಣನೆ ಅರೆದ ಹುರುಳಿಕಾಳು ಪೇಸ್ಟ್ ಅನ್ನು ಹಾಕಿ, ಹುರುಳಿಕಾಳು ಬೇಯಿಸಿದ ನೀರನ್ನು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
    * ಸಾರು ಕುದಿ ಬರುವಾಗ ಹುಣಸೆಹಣ್ಣಿನ ರಸ ಹಾಕಿ 5 ನಿಮಿಷ ಕುದಿಸಿ ಉರಿಯಿಂದ ಇಳಿಸಿದರೆ ಹುರುಳಿಕಾಳಿನ ಸಾರು ಸವಿಯಲು ಸಿದ್ಧವಾಗುತ್ತದೆ.

  • ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಅಡುಗೆಯನ್ನು ತಯಾರಿಸಲು ಪ್ರತಿಯೊಬ್ಬರು ಬಯಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಬಹುದು. ಬಂಧುಗಳು ಅಥವಾ ನಿಮ್ಮ ಆಪ್ತರು ಆಗಮಿಸಿದಾಗ ಅವರನ್ನು ಖುಷಿಪಡಿಸಲು ನೀವು ಈ ಪಾಕವಿಧಾನವನ್ನು ತಯಾರಿಸಬಹುದು. ಗರಿಗರಿಯಾದ ಪಕೋಡವನ್ನು ಸಂಜೆ ಸಮಯ ಟೀ ಅಥವಾ ಊಟದ ಜೊತೆಗೆ ಸೇವಿಸಬಹುದು. ಹಾಗಾದ್ರೆ ಇನ್ನೆಕೆ ತಡ ಬೇಕಾಗಿರುವ ಸಾಮಗ್ರಿಗಳ ಪಟ್ಟಿ, ಮಾಡುವ ವಿಧಾನವು ಈ ಕೆಳಗಿನಂತಿದೆ. ಇಂದು ನಾವು ಗರಿ ಗರಿಯಾದ ಪಕೋಡಾವನ್ನು ಮಾಡುವ ಬನ್ನಿ.


    ಬೇಕಾಗುವ ಸಾಮಗ್ರಿಗಳು:
    * ಚಿಕನ್- ಅರ್ಧ ಕೆಜಿ
    * ಮೈದಾ- ಅರ್ಧ ಕಪ್
    * ಅಕ್ಕಿ ಹಿಟ್ಟು- ಅರ್ಧ ಕಪ್
    * ಜೋಳದ ಹಿಟ್ಟು- 2 ಚಮಚ
    * ಮೊಟ್ಟೆ-1
    * ಖಾರದ ಪುಡಿ- 1 ಚಮಚ
    * ದನಿಯಾ ಪುಡಿ- 1ಚಮಚ
    * ಕರಿಮೆಣಸು- ಅರ್ಧ ಚಮಚ
    * ಅರಿಶಿಣ- ಅರ್ಧ ಚಮಚ
    * ಈರುಳ್ಳಿ- 2
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಬೆಳ್ಳುಳ್ಳಿ- 1
    * ಶುಂಠಿ- ಸ್ವಲ್ಪ
    * ಹಸಿಮೆಣಸಿನಕಾಯಿ- 2
    * ಜೀರಿಗೆ- 1 ಚಮಚ
    * ಗರಂ ಮಸಾಲ ಪುಡಿ- ಅರ್ಧ ಚಮಚ
    * ಅಡುಗೆ ಸೋಡಾ- ಸ್ವಲ್ಪ

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಮೈದಾ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ದನಿಯಾ, ಅರಿಶಿಣ, ಮೊಟ್ಟೆ, ಕತ್ತರಿಸಿದ ಬೆಳ್ಳುಳ್ಳಿ, ಶುಂಠಿ, ಕರಿಬೇವಿನ ಎಲೆ, ಹಸಿ ಮೆಣಸಿನಕಾಯಿ, ಜೀರಿಗೆ ಪುಡಿ, ಚಿಕನ್ ಮಸಾಲ, ಗರಂ ಮಸಾಲ, ಇಂಗು, ಬೇಕಿಂಗ್ ಪೌಡರ್ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಸೇರಿಸಿ ಸ್ವಲ್ಪ ನೀರನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಬೇಕು.
    * ನಂತರ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಮಸಾಲೆಯೊಂದಿಗೆ ಮಿಶ್ರಣ ಮಾಡಿಕೊಂಡು, ಮಾಂಸಜೊತೆಗೆ ಮಸಾಲೆ ಸೇರಿಕೊಳ್ಳಲು ಕೆಲವು ಸಮಯ ಇಟ್ಟಿರಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ಈಗ ಒಂದು ಬಾಣಲೆಯಲ್ಲಿ ಕರಿಯಲು ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ಬಳಿಕ ಮಾಂಸದ ತುಂಡುಗಳನ್ನು ಒಂದೊಂದಾಗಿಯೇ ಎಣ್ಣೆಯಲ್ಲಿ ಬಿಡಿ. ಪಕೋಡವು ಎರಡು ಭಾಗದಲ್ಲೂ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ಬರಬೇಕು. ಈಗ ರುಚಿಯಾದ ಪಕೋಡ ಸವಿಯಲು ಸಿದ್ಧವಾಗುತ್ತದೆ.

  • ಹೋಟೆಲ್ ಸ್ಟೈಲ್‍ನಲ್ಲಿ ಮಾಡಿ ಟೊಮೆಟೊ ರೈಸ್ ಬಾತ್

    ಹೋಟೆಲ್ ಸ್ಟೈಲ್‍ನಲ್ಲಿ ಮಾಡಿ ಟೊಮೆಟೊ ರೈಸ್ ಬಾತ್

    ನಾವು ಹೊಟೇಲ್‍ನಲ್ಲಿ ಸಿಗುವ ಆಹಾರವನ್ನು ಹೆಚ್ಚಾಗಿ ಇಷ್ಟ ಪಟ್ಟು ಸವಿಯುತ್ತೇವೆ. ಆದರೆ ಮನೆಯಲ್ಲಿಯೇ ಕೈಯಾರೇ ಮಾಡಿ ತಿನ್ನುವ ಮಜವೇ ಬೇರೆಯಾಗಿದೆ. ಹೀಗಾಗಿ ನಾವು ಮನೆಯಲ್ಲಿಯೇ ಇರುವ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ರುಚಿಯಾದ ಆಹಾರವನ್ನು ತಯಾರಿಸಬಹುದಾಗಿದೆ. ಬನ್ನಿ ನಾವು ಸರಳವಾಗಿ ಟೊಮೆಟೊ ರೈಸ್ ಬಾತ್ ಮಾಡುವ ವಿಧಾನವನ್ನು ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಯಲ್ಲಿ ಮಾಡುವ ವಿಧಾನವನ್ನು ಈಕೆಳಗಿನಂತೆ ವಿವರಿಸಿದ್ದೇವೆ.

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ- ಎರಡು ಕಪ್
    * ಈರುಳ್ಳಿ – ಒ0ದು
    * ಶು0ಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಟೊಮೆಟೊ – ಮೂರು
    * ದೊಣ್ಣೆಮೆಣಸು – ಒ0ದು
    * ಪನ್ನೀರ್ – ಅರ್ಧ ಕಪ್
    * ಹಸಿರು ಬಟಾಣಿಕಾಳು – ಅರ್ಧ ಕಪ್
    * ಹಸಿಮೆಣಸಿನಕಾಯಿ – ಎರಡು
    * ಟೊಮೇಟೊ ಕೆಚ್ ಅಪ್ – ಕಾಲು ಕಪ್
    * ಮೆಣಸಿನ ಪುಡಿ – ಒ0ದು ಟೇಬಲ್ ಚಮಚ
    * ಅರಿಶಿನ ಪುಡಿ – ಅರ್ಧ ಟೇಬಲ್ ಚಮಚ
    * ಪಾವ್ ಬಾಜಿ ಮಸಾಲಾ – 2 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ – 2 ಚಮಚ
    * ಕೊತ್ತ0ಬರಿ ಸೊಪ್ಪು – ಸ್ವಲ್ಪ

    ಮಾಡುವ ವಿಧಾನ:
    * ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿರಿ ಶು0ಠಿ,ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹೊ0ಬಣ್ಣ ಮಿಶ್ರಿಣಕ್ಕೆ ಹುರಿಯಿರಿ.
    * ಟೊಮೆಟೊ, ಅರಿಶಿಣಪುಡಿ, ಮೆಣಸಿನ ಪುಡಿ, ಪಾವ್ ಬಾಜಿ ಮಸಾಲಾ, ಟೊಮೆಟೊ ಕೆಚ್ ಅಪ್ ಅನ್ನು ಬೆರೆಸಿ ಮೂರರಿಂದ ನಾಲ್ಕು ನಿಮಿಷಗಳವರೆಗೆ ಬೇಯಿಸುವುದನ್ನು ಮುಂದುವರೆಸಿರಿ. ಇದನ್ನೂ ಓದಿ:  ಫಟಾಫಟ್ ಅಂತ ಮಾಡಿ ಬಿಸಿ ಬಿಸಿಯಾದ ಅನ್ನದ ಪಕೋಡ

    * ಇದಾದ ಬಳಿಕ ದೊಣ್ಣೆಮೆಣಸು, ಕಾಯಿಮೆಣಸು, ಹಸಿರು ಬಟಾಣಿಕಾಳು, ಹಾಗೂ ಉಪ್ಪನ್ನು ಸೇರಿಸಿ ನಾಲ್ಕರಿಂದ ಐದು ನಿಮಿಷಗಳವರೆಗೆ ಬೇಯಿಸುವುದನ್ನು ಮುಂದುವರೆಸಿರಿ.
    *ಈಗ ಪನೀರ್ ತುಣುಕುಗಳನ್ನು ಸೇರಿಸಿ, ಅತ್ಯಂತ ಹಗುರವಾಗಿ ಅವುಗಳನ್ನು ಹುರಿಯಿರಿ. ಇದಕ್ಕೆ ಒ0ದು ಕಪ್ ನಷ್ಟು ನೀರನ್ನು ಸೇರಿಸಿ ಹಾಗೂ ಮಧ್ಯಮ ಉರಿಯಲ್ಲಿ ಎಲ್ಲಾ ತರಕಾರಿಗಳನ್ನು ಮೂರರಿ0ದ ನಾಲ್ಕು ನಿಮಿಷಗಳವರೆಗೆ ಬೇಯಿಸಿದರೆ ರುಚಿಯಾದ ಟೊಮೆಟೊ ರೈಸ್ ಬಾತ್ ಸವಿಯಲು ಸಿದ್ಧವಾಗುತ್ತದೆ.

  • ಇಂದು ಮಾಡಿ ರುಚಿಯಾದ ಹೆಸರುಕಾಳು ಮಸಾಲಾ

    ಇಂದು ಮಾಡಿ ರುಚಿಯಾದ ಹೆಸರುಕಾಳು ಮಸಾಲಾ

    ಹೆಸರು ಕಾಳು ಮಸಾಲೆ ರೆಸಿಪಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯಕರವಾಗಿರುತ್ತದೆ. ಬೇಳೆ ಸಾರುಗಳನ್ನು ಮಾಡಿಕೊಂಡು ಕಾಲ ಕಳೆಯುತ್ತಿದ್ದಲ್ಲಿ, ನಾವು ಹೇಳುತ್ತಿರುವ ಈ ಹೆಸರು ಕಾಳು ರೆಸಿಪಿಯನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಇದರಲ್ಲಿ ಹಾಕಿರುವ ಮಸಾಲೆಗಳಿಂದಾಗಿ ಇದು ರೋಟಿ, ದೋಸೆ, ಅನ್ನ ಮತ್ತು ಮುದ್ದೆ ಹೀಗೆ ಎಲ್ಲದರ ಜೊತೆಯಲ್ಲಿ ಇದನ್ನು ಸೇವಿಸಬಹುದಾದ ಗ್ರೇವಿಯನ್ನಾಗಿಸಿದೆ. ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಗೆ ಮಾಡುವ ವಿಧಾನವನ್ನು ಈ ಕೆಳಗೆ ಸರಳ ವಿಧಾನದಲ್ಲಿ ವಿವರಿಸಲಾಗಿದೆ.


    ಬೇಕಾಗುವ ಸಾಮಗ್ರಿಗಳು:
    * ಹೆಸರು ಕಾಳು – 1 ಕಪ್
    * ಟೊಮೇಟೊ – 1
    * ಈರುಳ್ಳಿ -2
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    * ಬೆಳ್ಳುಳ್ಳಿ -1
    * ಹಸಿಮೆಣಸಿನ ಕಾಯಿ 3
    * ಲವಂಗ – 3
    * ಖಾರದ ಪುಡಿ – 1 ಚಮಚ
    * ಅರಿಶಿಣ ಪುಡಿ – 1 ಚಮಚ
    * ಅಡುಎಣ್ಣೆ – ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಹೆಸರು ಕಾಳುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ ಮತ್ತು 2-3 ವಿಷಲ್ ಕುಕ್ಕರಿನಲ್ಲಿ ಬೇಯಿಸಿಕೊಳ್ಳಬೇಕು.
    * ತವಾ ತೆಗೆದುಕೊಳ್ಳಿ, ಮತ್ತು ಅದರಲ್ಲಿ ಎಣ್ಣೆ, ಲವಂಗವನ್ನು ಹಾಕಿ ಹುರಿಯುವಾಗ ಸುವಾಸನೆಯ ಪರಿಮಳ ಬರಬೇಕು.

    * ಈಗ ಇದಕ್ಕೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಟೊಮೆಟೊ, ಈರುಳ್ಳಿ ಹಾಕಿ ಹೊಂಬಣ್ಣಕ್ಕೆ ಬರುವವರೆಗು ಬೇಯಿಸಿಕೊಳ್ಳಬೇಕು.

    * ನಂತರ, ಇದಕ್ಕೆ ಬೇಯಿಸಿದ ಹೆಸರು ಕಾಳುಗಳನ್ನು ಹಾಕಿ. ಖಾರದ ಪುಡಿ, ಅರಿಶಿಣ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

    * 3 ಕಪ್ ನೀರನ್ನು ಈ ಮಿಶ್ರಣಕ್ಕೆ ಹಾಕಿ. ಅತ್ತ ನೀರು ಅಲ್ಲದ-ಇತ್ತ ಗಟ್ಟಿಯು ಅಲ್ಲದ ಗ್ರೇವಿಯಾಗುವವರೆಗೆ ಇದನ್ನು ಬೇಯಿಸಿ. ಈಗ ನಿಮ್ಮ ಮುಂದೆ ಖಾರವಾಗಿರುವ ಹೆಸರು ಕಾಳು ಮಸಾಲೆಯು ತಯಾರಾಗಿದೆ. ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸವಿಯಲು ಸಿದ್ಧವಾಗುತ್ತದೆ.

  • ಫಟಾಫಟ್ ಅಂತ ಮಾಡಿ ಬಿಸಿ ಬಿಸಿಯಾದ ಅನ್ನದ ಪಕೋಡ

    ಫಟಾಫಟ್ ಅಂತ ಮಾಡಿ ಬಿಸಿ ಬಿಸಿಯಾದ ಅನ್ನದ ಪಕೋಡ

    ನ್ನ ಉಳಿದಿದೆ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇದ್ದೀರ. ಹಾಗಾದರೆ ನಾವು ಇಂದು ಉಳಿದ ಅನ್ನದಲ್ಲಿ ಬಿಸಿ ಬಿಸಿಯಾಗಿ ಮತ್ತು ನಾಲಿಗೆ ರುಚಿಯನ್ನು ಹೆಚ್ಚಿಸುವ ಪಕೋಡವನ್ನು ಮಾಡುವ ವಿಧಾನವನ್ನು ಹೇಳುತ್ತೇವೆ. ಕಡಲೆ ಹಿಟ್ಟಿನಿಂದ ಮಾಡುವ ಈರುಳ್ಳಿ ಪಕೋಡವನ್ನು ತಿಂದಿದ್ದೇವೆ. ಆದರೆ ಇಂದು ಮಾಡುತ್ತಿರುವ ಅನ್ನದ ಪಕೋಡ ಗರಂ ಗರಂ ಎಂದು ಸಖತ್ ರುಚಿಯಾಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಅನ್ನ – 3 ಕಪ್,
    * ಕಡಲೆಹಿಟ್ಟು – 4 ಚಮಚ
    * ಈರುಳ್ಳಿ – 2
    * ಹಸಿಮೆಣಸು – 2
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಚಾಟ್ ಮಸಾಲ- 1 ಚಮಚ,
    * ರುಚಿಗೆ ತಕ್ಕಷ್ಟು ಉಪ್ಪು
    * ಶುಂಠಿ 1 ಇಂಚು


    ಮಾಡುವ ವಿಧಾನ:

    * ಪಾತ್ರೆಯೊಂದಕ್ಕೆ ಬೇಯಿಸಿದ ಅನ್ನ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಜಜ್ಜಿದ ಶುಂಠಿ, ಚಾಟ್ ಮಸಾಲ, ಉಪ್ಪು ಹಾಗೂ ಕಡಲೆಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

    * ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಪಕೋಡ ಹದಕ್ಕೆ ಕಲೆಸಿಕೊಳ್ಳಿ. ಇದನ್ನೂ ಓದಿ:  ಅಲಸಂಡೆ ಕಾಳಿನ ಸಾರು ಅನ್ನದ ಜೊತೆಗೆ ಸೂಪರ್

    * ಕಾಯಿಸಿದ ಎಣ್ಣೆಗೆ ಹಿಟ್ಟನ್ನು ಉಂಡೆ ಮಾಡಿ ಒಂದೊಂದಾಗಿ ಬಿಡಿ. ಅದನ್ನು ಎರಡೂ ಕಡೆ ಚೆನ್ನಾಗಿ ಕರಿಯಿರಿ. ಸಂಜೆ ಹೊತ್ತಿಗೆ ತಿನ್ನಲು ಬಿಸಿಯಾದ ಅನ್ನದ ಪಕೋಡ ಸವಿಯಲು ಸಿದ್ಧವಾಗುತ್ತದೆ.

  • ಅಲಸಂಡೆ ಕಾಳಿನ ಸಾರು ಅನ್ನದ ಜೊತೆಗೆ ಸೂಪರ್

    ಅಲಸಂಡೆ ಕಾಳಿನ ಸಾರು ಅನ್ನದ ಜೊತೆಗೆ ಸೂಪರ್

    ನಾವು ತಿನ್ನುವ ಆಹಾರ ರುಚಿಯಾಗಿ ಮತ್ತು ಆರೋಗ್ಯವಾಗಿ ಇರಬೇಕು ಎಂದು ನಾವು ಬಯಸುತ್ತೇವೆ. ಕಡಿಮೆ ಕ್ಯಾಲೋರಿಯ, ರುಚಿಕರವಾದ ಆಹಾರವನ್ನು ತಿನ್ನ ಬಯಸುವುದಾದರೆ ಈ ಅಲಸಂಡೆ ಕಾಳಿನ ಸಾರು ಮಾಡಬಹುದು. ಸುಲಭವಾಗಿ ಮಾಡುವ ವಿಧಾನ ಈ ಕೆಳಗಿನಂತಿದೆ.

    ಬೇಕಾಗುವ ಸಾಮಗ್ರಿಗಳು:
    * ಅಲಸಂಡೆ ಕಾಳು -1 ಕಪ್
    * ಈರುಳ್ಳಿ 1
    * ಕ್ಯಾರೆಟ್ 2
    * ಬೆಳ್ಳುಳ್ಳಿ- 4-5 ಎಸಳು
    * ಶುಂಠಿ – ಸ್ವಲ್ಪ
    * ಟೊಮೆಟೊ -1
    * ಜೀರಿಗೆ- 1 ಚಮಚ
    * ಅರಿಶಿಣ ಪುಡಿ -ಅರ್ಧ ಚಮಚ
    * ಮೆಣಸಿನ ಪುಡಿ- ಅರ್ಧ ಚಮಚ
    * ಪಲಾವ್ ಎಲೆ- 1
    * ತುಪ್ಪ- 1 ಚಮಚ
    * ರುಚಿಗೆ ತಕ್ಕ ಉಪ್ಪು
    * ನಿಂಬೆ ರಸ ಸ್ವಲ್ಪ
    * ಕೊತ್ತಂಬರಿ ಸೊಪ್ಪು- ಸ್ವಲ್ಪ ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    ಮಾಡುವ ವಿಧಾನ:
    * ಅಲಸಂದೆ ಕಾಳನ್ನು ರಾತ್ರಿಯಲ್ಲಿ ನೆನೆ ಹಾಕಬೇಕು. ನಂತರ ಅಲಸಂದೆ ಕಾಳು ಮತ್ತು ಕ್ಯಾರೆಟ್ ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು.
    * ಬಾಣಲೆಗೆ ತುಪ್ಪ ಹಾಕಬೇಕು. ತುಪ್ಪ ಬಿಸಿಯಾದಾಗ ಜೀರಿಗೆ, ಕತ್ತರಿಸಿದ ಈರುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

    * ನಂತರ ಬೆಳ್ಳುಳ್ಳಿ, ಶುಂಠಿ, ಪಲಾವ್ ಎಲೆ ಹಾಕಿ ಸ್ವಲ್ಪ ಹುರಿದು, ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಬೇಕು.
    * ಚಿಟಿಕೆಯಷ್ಟು ಇಂಗು, ಬೇಯಿಸಿದ ಅಲಸಂಡೆ, ಕ್ಯಾರೆಟ್, ಉಪ್ಪು, ಅರಿಶಿಣ ಪುಡಿ, ಖಾರದ ಪುಡಿ ಹಾಕಿ ಕುದಿಸಬೇಕು. ನಂತರ ಸ್ವಲ್ಪ ನಿಂಬೆ ರಸ ಹಿಂಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಅಲಸಂದೆ ಕರಿ ಸಿದ್ಧವಾಗುತ್ತದೆ.