Tag: recipe

  • ರುಚಿಯಾದ ತರಕಾರಿ ಸಾಗು ನಾಲಿಗೆಗೆ ರುಚಿ, ಆರೋಗ್ಯಕ್ಕೆ ಒಳ್ಳೆಯದು

    ರುಚಿಯಾದ ತರಕಾರಿ ಸಾಗು ನಾಲಿಗೆಗೆ ರುಚಿ, ಆರೋಗ್ಯಕ್ಕೆ ಒಳ್ಳೆಯದು

    ನಾವು ಸೇವಿಸುವ ಆಹಾರ ರುಚಿಯಾಗಿರಲಿ ಮತ್ತು ಆರೋಗ್ಯವಾಗಿರಬೇಕು ಎಂದು ಪ್ರತಿಯೊಬ್ಬರು ಅಂದುಕೊಳ್ಳುತ್ತೇವೆ. ನಾವು ಇಂದು ತಿಳಿಸುತ್ತಿರುವ ತರಕಾರಿ ಸಾಗು ಸಖತ್ ರುಚಿಯಾಗಿದೆ ಮತ್ತು ತರಕಾರಿಗಳನ್ನು ಬಳಸುತ್ತಿರುವುದರಿಂದ ಆರೋಗ್ಯಕ್ಕೆ ಬೇಕಾಗಿರುವ ಪ್ರೋಟಿನ್ ಕೂಡಾ ಸಿಗುತ್ತದೆ. ನೀವು ಸರಳವಾಗಿ ಮತ್ತು ದಿಡೀರ್ ಆಗಿ ಆಹಾರ ತಯಾರಿಸಬೇಕು ಎಂದು ಯೋಚಿಸುತ್ತಿದ್ದರ ಎಂದಾದರೆ ಇಂದು ಈ ಅಡುಗೆಯನ್ನು ಮಾಡಲು ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಸಾಮಗ್ರಿಗಳು:
    ಬೀನ್ಸ್, ಕ್ಯಾರೆಟ್, ಬಟಾಣಿ, ಹೂಕೋಸು, ಆಲೂಗಡ್ಡೆ – 1ಕಪ್
    ಉಪ್ಪು-ರುಚಿಗೆ ತಕ್ಕಷ್ಟು
    ಈರುಳ್ಳಿ- 1
    ಟೊಮೆಟೋ- 2
    ಗೋಡಂಬಿ-ಸ್ವಲ್ಪ
    ಬೆಳ್ಳುಳ್ಳಿ- ಸ್ವಲ್ಪ
    ಹಸಿಮೆಣಸಿನ ಕಾಯಿ-6-6
    ಹುರಿಗಡಲೆ- 4 ಚಮಚ
    ದನಿಯಾ ಪುಡಿ- 1 ಚಮಚ
    ಶುಂಠಿ-ಸ್ವಲ್ಪ
    ಗಸಗಸೆ-ಸ್ವಲ್ಪ
    ಪುದೀನಾ-ಸ್ವಲ್ಪ
    ಕೊತ್ತಂಬರಿ ಸೊಪ್ಪು-ಸ್ವಲ್ಪ
    ಚಕ್ಕ,ಲವಂಗ, ಏಲಕ್ಕಿ, ಪಲಾವ್ ಎಲೆ
    ಅಡುಗೆ ಎಣ್ಣೆ- 1ಕಪ್

    ಮಾಡುವ ವಿಧಾನ:
    * ಮೊದಲಿಗೆ ಪಾತ್ರೆಯೊಂದಕ್ಕೆ ಸ್ವಲ್ಪ ನೀರು, ಉಪ್ಪು ಹಾಗೂ ತರಕಾರಿಗಳನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
    * ಮಿಕ್ಸರ್ ಜಾರ್ ನಲ್ಲಿ ಈರುಳ್ಳಿ, ಟೊಮೆಟೋ, ಗೋಡಂಬಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಹುರಿಗಡಲೆ, ದನಿಯಾ ಅಥವಾ ದನಿಯಾ ಪುಡಿ, ಶುಂಠಿ, ಗಸಗಸೆ, ಪುದೀನಾ, ಕೊತ್ತಂಬರಿ ಸೊಪ್ಪು, ಚಕ್ಕ,ಲವಂಗ, ಏಲಕ್ಕಿ, ಪಲಾವ್ ಎಲೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

    * ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಉಳಿದ ಈರುಳ್ಳಿ ಹಾಗೂ ಟೊಮೆಟೋವನ್ನು ಸಣ್ಣಗೆ ಕತ್ತರಿಸಿಕೊಂಡು ಬಿಸಿಯಾದ ಎಣ್ಣೆಗೆ ಹಾಕಿ ಹುರಿದುಕೊಳ್ಳಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
    * ರುಬ್ಬಿಕೊಂಡ ಮಸಾಲೆಯನ್ನು ಕುದಿಸಿಕೊಳ್ಳಬೇಕು.
    * ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಈಗಾಗಲೇ ಬೇಯಿಸಿಕೊಂಡ ತರಕಾರಿಗಳನ್ನು ಹಾಕಿ ಕುದಿಸಿದರೆ ರುಚಿಕರವಾದ ತರಕಾರಿ ಸಾಗು ಸವಿಯಲು ಸಿದ್ಧವಾಗುತ್ತದೆ.

  • ದೀಪಾವಳಿ ಹಬ್ಬಕ್ಕೆ ಮಾಡಿ ಸ್ಪೆಷಲ್ ಬರ್ಫಿ

    ದೀಪಾವಳಿ ಹಬ್ಬಕ್ಕೆ ಮಾಡಿ ಸ್ಪೆಷಲ್ ಬರ್ಫಿ

    ಬ್ಬ ಎಂದರೆ ಸಿಹಿ ತಿಂಡಿ ಇರಲೇಬೇಕು. ದೀಪಾವಳಿಗಾಗಿ ಪ್ರತಿ ಮನೆಯಲ್ಲಿಯೂ ವಿಶೇಷ ತಿಂಡಿಗಳ ಖಾದ್ಯಗಳು ತಯಾರಾಗುತ್ತವೆ. ಈ ವರ್ಷ ಕೊಂಚ ಭಿನ್ನವಾಗಿರುವ ಬರ್ಫಿಯನ್ನು ಮಾಡುವ ಮೂಲಕ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಬಾರದೇಕೆ? ಹಬ್ಬದ ಸಂತೋಷದ ಸಮಯದಲ್ಲಿ ಈ ಬರ್ಫಿಯನ್ನು ಸ್ನೇಹಿತರು, ಕುಟುಂಬದವರೊಂದಿಗೆ ಹಂಚಿ ಸಂತೋಷವನ್ನು ಹೆಚ್ಚಿಸುತ್ತದೆ.

    ಬೇಕಾಗಿರುವ ಸಾಮಗ್ರಿಗಳು:
    * ಕಡ್ಲೆಹಿಟ್ಟು- 1 ಕಪ್
    * ಸಕ್ಕರೆ- 2 ಕಪ್
    * ಹಾಲು-1 ಕಪ್
    * ತುಪ್ಪ-1 ಕಪ್
    * ಕಾಯಿತುರಿ- 1 ಕಪ್
    * ಬಾದಾಮಿ- ಒಂದು ಕಪ್

    ಮಾಡುವ ವಿಧಾನ:
    * ಒಂದು ಪಾತ್ರೆಗೆ ತುಪ್ಪ ಹಾಕಿ, ಕರಗಿದ ಬಳಿಕ ಕಡ್ಲೆಹಿಟ್ಟು ಹಾಕಿ ಕಂದುಬಣ್ಣ ಬರುವವರೆಗೂ ಹುರಿಯಿರಿ.
    * ನಂತರ ಹಾಲು, ಸಕ್ಕರೆ ಮಿಶ್ರಣ ಮಾಡುತ್ತಾ ಚೆನ್ನಾಗಿ ಬೇಯಿಸಿರಿ.

    * ಇನ್ನು ಉಳಿದ ತುಪ್ಪ, ಬಾದಾಮಿ, ಕಾಯಿತುರಿ ಹಾಕಿ ಮಿಶ್ರಣ ಮಾಡಿ
    *ತದನಂತರ ಈ ಮಿಶ್ರಣವನ್ನು ಇನ್ನೊಂದು ಪಾತ್ರೆಗೆ ಸುರಿದು ತಣಿಯಲು ಬಿಡಿ

    * ನಂತರ ಅರ್ಧ ಗಂಟೆಯ ಬಳಿಕ ಚಾಕು ಉಪಯೋಗಿಸಿ ನಿಮಗೆ ಸೂಕ್ತವೆನಿಸಿದ ಆಕೃತಿಯಲ್ಲಿ ಕತ್ತರಿಸಿದರೆ ರುಚಿಯಾದ ಬರ್ಪಿ ಸವಿಯಲು ಸಿದ್ಧವಾಗುತ್ತದೆ.

  • ಖಾರವಾದ ಚಿಕನ್ ಲಿವರ್ ಡ್ರೈ ಮಾಡಿ

    ಖಾರವಾದ ಚಿಕನ್ ಲಿವರ್ ಡ್ರೈ ಮಾಡಿ

    ಡುಗೆಯಲ್ಲಿ, ವಿಶೇಷವಾಗಿ ಮಾಡುವ  ಅಡುಗೆ ಮಾಂಸದ ಅಡುಗೆಯಾಗಿದೆ. ನಾವು ಅಡುಗೆ ಮಾಡಲು ಬಳಸುವ ಪದಾರ್ಥಗಳು ಹಿಡಿತದಲ್ಲಿದ್ದಾಗ ಮಾತ್ರ ಅಡುಗೆ ರುಚಿಯಾಗಿ ಆಗುತ್ತದೆ. ನಾವು ಇಂದು ಖಾರವಾದ ಅಡುಗೆ ತಿನ್ನಲು ಬಯಸುವವರಿಗಾಗಿ ರುಚಿಯಾದ ಖಾರವಾದ ಚಿಕನ್ ಲಿವರ್ ಡ್ರೈ ಮಾಡುವ ವಿಧಾನ ಹೇಳುತ್ತಿದ್ದೇವೆ


    ಬೇಕಾಗುವ ಸಾಮಗ್ರಿಗಳು:
    * ಚಿಕನ್ ಲಿವರ್- ಅರ್ಧ ಕೆಜಿ
    * ಈರುಳ್ಳಿ-3
    * ಟೊಮೆಟೊ- 1
    * ಹಸಿಮೆಣಸಿನಕಾಯಿ -4
    * ಕರಿಬೇವು – ಸ್ವಲ್ಪ,
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    * ಕಾಳುಮೆಣಸಿನಪುಡಿ – 1 ಚಮಚ,
    * ಕೆಂಪು ಮೆಣಸಿನಕಾಯಿಪುಡಿ -1 ಚಮಚ
    * ದನಿಯಾ ಪುಡಿ- 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಅರಿಸಿಣ- ಸ್ವಲ್ಪ
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಒಂದು ಬಾಣಲೆಯನ್ನು ಬಿಸಿಗಿಟ್ಟು, ಅಡುಗೆ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕರಿಬೇವು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ.

    * ನಂತರ ಚಿಕನ್ ಲಿವರ್ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಅರಿಸಿಣ, ಕೆಂಪುಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ ಚಿಕನ್ ಲಿವರ್ ಅನ್ನು ಬೇಯಿಸಿಕೊಳ್ಳಿ.

    * ನೀರು ಸೇರಿಸುವ ಅವಶ್ಯಕತೆ ಇಲ್ಲ. ಲಿವರ್ ಬೆಂದ ನಂತರ ಕಾಳುಮೆಣಸಿನ ಪುಡಿ, ಗರಂಮಸಾಲೆ ಸೇರಿಸಿ ಮತ್ತೆ ಬೇಯಿಸಿ ಕೊನೆಯದಾಗಿ ಕೊತ್ತಂಬರಿಯನ್ನು ಹಾಕಿದರೆ ಚಿಕನ್ ಲಿವರ್ ಡ್ರೈ ಸಿದ್ಧವಾಗುತ್ತದೆ.

  • ಬಿಸಿಯಾದ ನವಣೆ ಉಪ್ಪಿಟ್ಟು ಮಾಡಿ ಸವಿಯಿರಿ

    ಬಿಸಿಯಾದ ನವಣೆ ಉಪ್ಪಿಟ್ಟು ಮಾಡಿ ಸವಿಯಿರಿ

    ನಾವು ಉಪವಾಸ ದಿನಗಳಲ್ಲಿ ಉಪ್ಪಿಟ್ಟನ್ನು ಹೆಚ್ಚಾಗಿ ಸೇವಿಸುತ್ತೇವೆ. ಆದರೆ ಈ ರುಚಿಯಾದ ನವಣೆ ಉಪ್ಪಿಟ್ಟನ್ನು ಮಾಡುವ ವಿಧಾನ ಸರಳ ಮತ್ತು ಸಖತ್ ರುಚಿಯಾಗಿದೆ. ಇಂದು ನೀವು ಮಾಡಿದರೆ ನಿಮ್ಮ ಮನೆಮಂದಿಗೆ ಇಷ್ಟವಾಗುತ್ತದೆ. ಇನ್ಯಾಕೆ ತಡ ಈ ರುಚಿಯಾದ ಉಪ್ಪಿಟ್ಟು ಮಾಡಲು ಇಂದೇ ಟ್ರೈ ಮಾಡಿ.


    ಬೇಕಾಗುವ ಸಾಮಗ್ರಿಗಳು:
    * ನವಣೆ -1 ಕಪ್
    * ತುಪ್ಪ – 2 ಚಮಚ
    * ಜೀರಿಗೆ- 1 ಚಮಚ
    * ಲವಂಗ -2
    * ಏಲಕ್ಕಿ -1
    * ಗೋಡಂಬಿ- 4
    * ಒಣದ್ರಾಕ್ಷಿ -10
    * ಹಸಿ ಮೆಣಸಿನಕಾಯಿ- 3
    * ಬಟಾಣಿ- ಅರ್ಧ ಕಪ್
    * ನಿಂಬೆರಸ -2 ಚಮಚ
    * ಕೊತ್ತಂಬರಿ ಸೊಪ್ಪು-ಸ್ವಲ್ಪ


    ಮಾಡುವ ವಿಧಾನ:
    * ನವಣೆಯನ್ನು 2 ಗಂಟೆಗಳ ನೀರಿನಲ್ಲಿ ನೆನೆ ಹಾಕಿ ಇಟ್ಟಿರಬೇಕು.
    * ನಂತರ ತುಪ್ಪವನ್ನು ಬಿಸಿ ಮಾಡಿ, ಜೀರಿಗೆ, ಲವಂಗ, ಏಲಕ್ಕಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

    * ಈಗ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಹಾಕಿ ಫ್ರೈ ಮಾಡಿಕೊಳ್ಳಬೇಕು.
    * ಈಗ ಹಸಿ ಮೆಣಸಿನ ಕಾಯಿ ಸೇರಿಸಿ 2-3 ಸೆಕೆಂಡ್ ಫ್ರೈ ಮಾಡಿ, ನೀರು ಹಾಕಿ, ಹಸಿ ಬಟಾಣಿ ಹಾಕಿ. ರುಚಿಗೆ ತಕ್ಕ ಉಪ್ಪು ಸೇರಿಸಿ. ಇದನ್ನೂ ಓದಿ ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ

    * ನೀರು ಕುದಿಯಲಾರಂಭಿಸಿದಾಗ ನವಣೆ, ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಸೇರಿಸಿ ಬೇಯಿಸಿದರೆ ರುಚಿಯಾದ ನವಣೆ ತಿನ್ನಲು ಸಿದ್ಧವಾಗುತ್ತದೆ. ಇದನ್ನೂ ಓದಿ  ಹಬ್ಬದ ಸಿಹಿ ತಿಂಡಿಯಲ್ಲಿ ಇರಲಿ ಎಳ್ಳು ಉಂಡೆ

  • ಗರಿಗರಿಯಾದ ರವೆ ರೊಟ್ಟಿ ಮಾಡುವುದು ಸರಳ, ಅಷ್ಟೇ ರುಚಿ

    ಗರಿಗರಿಯಾದ ರವೆ ರೊಟ್ಟಿ ಮಾಡುವುದು ಸರಳ, ಅಷ್ಟೇ ರುಚಿ

    ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದಿರಾ? ಚಳಿ ಇರುವುದರಿಂದ ಬಿಸಿಯಾ ಟೀ, ಕಾಫಿ ಜೊತೆಗೆ ರವೆ ರೊಟ್ಟಿ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಈ ರೊಟ್ಟಿ ಎಷ್ಟು ಸುಲಭ ಅಷ್ಟೇ ರುಚಿಯಾಗಿದೆ. ರವೆ ರೊಟ್ಟಿ ಮಾಡುವ ಸರಳ ವಿಧಾನ ಈ ಕೆಳಗಿನಂತಿದೆ.

    ಬೇಕಾಗುವ ಸಾಮಗ್ರಿಗಳು:
    * ಚಿರೋಟಿ ರವೆ-2ಕಪ್
    * ಈರುಳ್ಳಿ-2
    * ಕರೀಬೇವು- ಸ್ವಲ್ಪ
    * ಹಸಿಮೆಣಸು- 3
    * ಜೀರಿಗೆ- 2 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ- ಸ್ವಲ್ಪ
    * ಮೊಸರು- ಸ್ವಲ್ಪ

    ಮಾಡುವ ವಿಧಾನ:
    * ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ರವೆ, ಇರುಳ್ಳಿ, ಕೊತ್ತಂಬರಿ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಮೊಸರು, ಕರಿಬೇವು, ಹಸಿಮೆಣಸು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

    * ನಂತರ ಈ ಮಿಶ್ರಣವನ್ನು ಅರ್ಧ ಗಂಟೆ ಹಾಗೇ ಇಟ್ಟಿರಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

    * ಈಗ ಒಂದು ತವಾವನ್ನು ತೆಗೆದುಕೊಂಡು ಅದಕ್ಕೆ ಅಡುಗೆ ಎಣ್ಣೆಯನ್ನು ಚೆನ್ನಾಗಿ ಸವರಿ ನಂತ್ರ ಅದಕ್ಕೆ ಈ ಮಿಶ್ರಣವನ್ನು ಹಾಕಿ ರೊಟ್ಟಿಯ ಆಕಾರದಲ್ಲಿ ತಟ್ಟಿಕೊಳ್ಳಿ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

    * ಇದೀಗ ಚೆನ್ನಾಗಿ ಬೇಯಿಸಿದರೆ ರುಚಿಯಾದ ರವೆ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.

  • ಖಾರವಾದ ಚಿಕನ್ 65 ಮಾಡಿ ನಾಲಿಗೆ ರುಚಿ ಹೆಚ್ಚಿಸಿ

    ಖಾರವಾದ ಚಿಕನ್ 65 ಮಾಡಿ ನಾಲಿಗೆ ರುಚಿ ಹೆಚ್ಚಿಸಿ

    ಮಾಂಸಹಾರಿಗಳಿಗೆ ವಾರಕ್ಕೊಮ್ಮೆಯಾದರೂ ನಾಲಿಗೆ ಮಾಂಸದ ಆಹಾರವನ್ನು ತಿನ್ನಲು ಬಯಸುತ್ತದೆ. ಆದರೆ ಹೋಟೆಲ್‍ಗಳಿಗೆ ಹೋಗಿ ತಿಂದರೆ ಕೆಲಮೊಮ್ಮೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಖಾರದ ಚಿಕನ್  65 ತಿನ್ನಬೇಕೆಂದು ಅನಿಸುತ್ತಿದೆಯೇ? ಹಾಗಾದರೆ ಹೋಟೆಲ್‍ಗೆ ಹೋಗುವ ಶ್ರಮವೇಕೆ? ಮನೆಯಲ್ಲಿ ಇರುವ ಸಾಮಾಗ್ರಿಗಳನ್ನು ಬಳಸಿ ಚಿಕನ್ 65ಯನ್ನು ಸರಳ ವಿಧಾನದ ಜೊತೆಗೆ ಮಾಡಬಹುದು. ಹಾಗಿದ್ದರೆ ಚಿಕನ್ 65 ಮಾಡಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ


    ಬೇಕಾಗುವ ಸಾಮಗ್ರಿಗಳು:
    * ಚಿಕನ್- ಅರ್ಧ ಕೆಜಿ (ಬೋನ್ ಲೆಸ್ ಬೆಸ್ಟ್)
    * ಜೋಳದ ಹಿಟ್ಟು-2 ಚಮಚ
    * ಮೈದಾ -2 ಚಮಚ ಖಾರದ ಪುಡಿ
    * ಮೊಟ್ಟೆ- 1
    * ಮೊಸರು- 1ಕಪ್
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀ ಸ್ಪೂನ್
    * ರುಚಿಗೆ ತಕ್ಕ ಉಪ್ಪು
    * ಅಡುಗೆ ಎಣ್ಣೆ- 1ಕಪ್
    * ಹಸಿ ಮೆಣಸಿನಕಾಯಿ-3
    * ಗರಂ ಮಸಾಲ- ಸ್ವಲ್ಪ
    * ನಿಂಬೆ ರಸ- ಅರ್ಧ ಕಪ್
    * ಈರುಳ್ಳಿ -4
    * ಬೆಳ್ಳುಳ್ಳಿ- 1
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಚಿಕನ್ ಚೆನ್ನಾಗಿ ತೊಳೆದು ತೆಗೆದಿಟ್ಟುಕೊಳ್ಳಿ
    * ಜೋಳದ ಹಿಟ್ಟು, ಮೈದಾ, ಮೊಟ್ಟೆ, ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕ ಉಪ್ಪನ್ನು ಒಂದು ಬಟ್ಟಲಿಗೆ ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿಕೊಳ್ಳಬೇಕು.

    * ನಂತರ ಈ ಮಿಶ್ರಣಕ್ಕೆ ಚಿಕನ್ ಹಾಕಿ ಮಿಕ್ಸ್ ಮಾಡಿ 2 ಗಂಟೆ ಕಾಲ ಇಡಿ.
    * ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ, ಈಗ ಕುದಿಯುತ್ತಿರುವ ಎಣ್ಣೆಗೆ ಚಿಕನ್ ಪೀಸ್ ಹಾಕಿ ಚೆನ್ನಾಗಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ.

    * ಈಗ ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಅಡುಗೆ ಎಣ್ಣೆ, ಹಸಿ ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಉಪ್ಪು ಹಾಕಿ, ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.


    * ಈಗ ಗರಂ ಮಸಾಲ, ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ,
    * ನಂತರ ಫ್ರೈ ಮಾಡಿದ ಚಿಕನ್ ಪೀಸ್ ಹಾಕಿ ಮಿಕ್ಸ್ ಮಾಡಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ 65 ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

  • ಆರೋಗ್ಯಕರವಾದ ಮಸಾಲಾ ಟೀ ಒಮ್ಮೆ ಮಾಡಿ ನೋಡಿ

    ಆರೋಗ್ಯಕರವಾದ ಮಸಾಲಾ ಟೀ ಒಮ್ಮೆ ಮಾಡಿ ನೋಡಿ

    ಯಾವುದೇ ಮನೆಗೆ ಹೋದರೂ ಟೀ ಬೇಕಾ ಎಂದು ಕೇಳುವುದು ವಾಡಿಕೆ. ಒಂದು ಪರಿಪೂರ್ಣವಾದ ಚಹಾ ಹೇಗೆ ಮಾಡಿಕೊಳ್ಳಬೇಕು ಎಂದು ಹೇಳುತ್ತಾ ಹೋದರೆ ನಮಗೆ ಒಂದೇ, ಎರಡೇ ಅನೇಕ ವಿಧಗಳು ಸಿಗುತ್ತವೆ. ಚಹಾದ ನಿಜವಾದ ರುಚಿ ಯಾವಾಗಲೂ ಅದರಲ್ಲಿ ಸೇರಿಸುವ ಮಸಾಲೆಯಲ್ಲಿದೆ ಎಂದರೆ ತಪ್ಪಾಗುವುದಿಲ್ಲ. ಈ ಮಸಾಲೆಗಳ ಮಿಶ್ರಣವು ನಮ್ಮ ಚಹಾವನ್ನು ಇನ್ನಷ್ಟು ಪರಿಮಳ ಭರಿತ ಮತ್ತು ರುಚಿಯನ್ನಾಗಿಸುತ್ತದೆ.

    ಕುಟುಂಬದವರನ್ನೇ ಆಗಲಿ, ಅಪರಿಚಿತರನ್ನೇ ಆಗಲಿ ಅಥವಾ ಸಹೋದ್ಯೋಗಿಗಳನ್ನಿರಬಹುದು, ಒಟ್ಟಿಗೆ ತರುವ ಶಕ್ತಿ ಒಂದು ಕಪ್ ಚಹಾಕ್ಕಿದೆ. ಇಂತಹ ರುಚಿಯಾದ ಮತ್ತು ಆರೋಗುಕರವಾದ ಮಸಾಲಾ ಟೀ ಮಾಡುವ ವಿಧಾನವನ್ನು ಹೇಳಲಿದ್ದೇವೆ.

    ಬೇಕಾಗುವ ಸಾಮಗ್ರಿಗಳು:
    * ಏಲಕ್ಕಿ-2
    * ಚಕ್ಕೆ-1
    * ಕರಿಮೆಣಸು ಕಾಳು- 1 ಟೀ ಸ್ಪೂನ್
    * ಲವಂಗ- 2
    * ಟೀ ಪೌಡರ್- 2 ಚಮಚ
    * ಒಣಗಿಸಿದ ಶುಂಠಿ ಪೌಡರ್- 1 ಚಮಚ
    * ಸಕ್ಕರೆ- 4 ಚಮಚ
    * ಹಾಲು- 1 ಲೋಟ

    ಮಾಡುವ ವಿಧಾನ:
    * ಏಲಕ್ಕಿ, ಚಕ್ಕೆ, ಕರಿಮೆಣಸು ಕಾಳು, ಲವಂಗ ಎಲ್ಲ ಮಸಾಲೆ ಪದಾರ್ಥಗಳನ್ನೂ ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.
    * ನಂತರ ಪಾತ್ರೆಯಲ್ಲಿ 4 ಲೋಟ ನೀರು ಕುದಿಯಲು ಇಡಿ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

    * ಕುದಿಯುವಾಗ ಟೀ ಪುಡಿ ಹಾಗೂ ಮಸಾಲಾ ಪುಡಿ, ಸಕ್ಕರೆ ಹಾಕಿ ಕುದಿಸಿ.
    * ನಂತರ ಶುಂಠಿ ಪೌಡರ್ ಹಾಗೂ ಹಾಲು ಹಾಕಿ ಮತ್ತೆ ಕುದಿಸಿದರೆ ಮಸಾಲಾ ಟೀ ಸವಿಯಲು ಸಿದ್ಧವಾಗುತ್ತದೆ. ದನ್ನೂ ಓದಿ: ಫಟಾಫಟ್ ಅಂತಾ ಮಾಡಿ ರುಚಿಯಾದ ಸಿಗಡಿ ಮಸಾಲ 

  • ಹೆಸರುಬೇಳೆ ಪಾಯಸ ಮಾಡುವ ಸರಳ ವಿಧಾನ ನಿಮಗಾಗಿ

    ಹೆಸರುಬೇಳೆ ಪಾಯಸ ಮಾಡುವ ಸರಳ ವಿಧಾನ ನಿಮಗಾಗಿ

    ಯಾವುದೇ ವಿಶೇಷವಿಲ್ಲ. ಆದರೂ ರುಚಿಯಾಗಿ ಎನಾದರೂ ತಿನ್ನಬೇಕು ಅನ್ನಿಸುತ್ತದೆ. ಇಂದು ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ ಹೆಸರುಬೆಳೆ ಪಾಯಸ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಹೆಸರುಬೇಳೆ – 1ಕಪ್
    * ಸಬ್ಬಕ್ಕಿ – 1ಕಪ್
    * ಬೆಲ್ಲ- 2 ಕಪ್
    * ಒಣದ್ರಾಕ್ಷಿ, ಗೋಡಂಬಿ, ಬಾದಾಮಿ- ಸ್ವಲ್ಪ
    * ಏಲಕ್ಕಿ 4 (ಕುಟ್ಟಿ ಪುಡಿ ಮಾಡಿದ್ದು)
    * ತುಪ್ಪ- ಅರ್ಧ ಕಪ್
    * ಹಾಲು- 2 ಕಪ್ ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    ಮಾಡುವ ವಿಧಾನ:

    * ಸಬ್ಬಕ್ಕಿಯನ್ನು ಅರ್ಧ ಗಂಟೆಗಳ ಕಾಲ ನೆನೆಸಿಡಿ. ನಂತರ ಹೆಸರುಬೇಳೆ ತೊಳೆದು ಇಟ್ಟುಕೊಳ್ಳಬೇಕು.
    * ಈಗ ಸ್ಟವ್ ಮೇಲೆ ಕುಕ್ಕರ್ ಇರಿಸಿ ಅದಕ್ಕೆ ತುಪ್ಪ ಹಾಕಿ. ಅದಕ್ಕೆ ಹೆಸರುಬೇಳೆ ಹಾಕಿ ಕೆಂಬಣ್ಣ ಬರುವವರೆಗೂ ಹುರಿದುಕೊಳ್ಳಿ.

    * ಇದಕ್ಕೆ 2ಕಪ್ ನೀರು ಸೇರಿಸಿ. ನಂತರ ಅದಕ್ಕೆ ನೆನೆದ ಸಬ್ಬಕ್ಕಿ ಹಾಕಿ 4 ವಿಷಲ್ ಕೂಗಿಸಿ.
    * ಈಗ ಪಾತ್ರೆಯೊಂದಕ್ಕೆ ಬೆಲ್ಲ, 1 ಕಪ್ ನೀರು ಹಾಕಿ ಕರಗಿಸಿಕೊಳ್ಳಿ.

    * ಈಗ ಕುಕ್ಕರ್‌ಗೆ  ಹಾಲು, ಕರಗಿಸಿದ ಬೆಲ್ಲ ನೀರು, ಏಲಕ್ಕಿ ಪುಡಿ, ಸೇರಿಸಿ ಮಿಶ್ರಣ ಮಾಡಿ.
    * ಈಗ ತುಪ್ಪದಲ್ಲಿ ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ ಹುರಿದು ಪಾಯಸಕ್ಕೆ ಸೇರಿಸಿ ಚೆನ್ನಾಗಿ ಕುದಿಸಿದರೆ ರುಚಿಯಾದ ಪಾಯಸ ಸವಿಯಲು ಸಿದ್ಧವಾಗುತ್ತದೆ.

  • ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

    ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

    ವರಾತ್ರಿ  ಹಬ್ಬಕ್ಕೆ ಮನೆಯಲ್ಲಿ ಪ್ರತಿ ನಿತ್ಯ ಒಂದಲ್ಲ  ಒಂದು ಸಿಹಿ ತಿಸಿಸು ಕಾಮನ್. ನವರಾತ್ರಿಯನ್ನು ವಿಶೇಷವಾಗಿ ಆಚರಿಸುವ ಉತ್ತರ ಭಾರತದಲ್ಲಿ ಬಗೆಗೆಯ ಸಿಹಿ ತಿನಿಸು ಹಬ್ಬದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉತ್ತರ ಭಾರತದಲ್ಲಿ ಅತಿ ಹೆಚ್ಚು ಇಷ್ಟಪಡುವ ಸಿಹಿ ತಿನಿಸು ಜಿಲೇಬಿ, ಅದರಲ್ಲೂ ನವರಾತ್ರಿ ಸಮಯದಲ್ಲಿ ತುಪ್ಪದ ಜಿಲೇಬಿಗೆ ಎಲ್ಲಿಲ್ಲದ ಬೇಡಿಕೆ.

    ಜೇಬಿಗೆ ಇದು ತುಸು ಭಾರ  ಅನಿಸಿದರೂ ಟೇಸ್ಟ್ ಮಾತ್ರ ಬೊಂಬಾಟಾಗಿರುತ್ತದೆ. ಹಾಗಾಗೀ ಶುಭ ಸಂದರ್ಭಗಳಲ್ಲಿ ತುಪ್ಪದ ಜಿಲೇಬಿ ಉತ್ತರ ಭಾರತದಲ್ಲಿ ವಿಶೇಷವಾಗಿರುತ್ತದೆ. ಸಾಮಾನ್ಯವಾಗಿ ನಾವೂ ಜಿಲೇಬಿಗೂ ಮತ್ತು ತುಪ್ಪದ ಜಿಲೇಬಿಗೂ ಹೆಚ್ಚೆನೂ ವ್ಯತ್ಯಾಸ ಇಲ್ಲ.

    ತುಪ್ಪದ ಜಿಲೇಬಿ ಮಾಡುವ ವಿಧಾನ
    ಮೈದಾ ಹಿಟ್ಟಿಗೆ ನೀರನ್ನ ಬೆರೆಸಿಕೊಳ್ಳಬೇಕು. ಜಿಲೇಬಿ ಹಾಕಲು ಬರುವಂತೆ ಹದವಾಗಿ ನೀರು ಬೆರೆಸಿಕೊಂಡು ಹಿಟ್ಟು ತಯಾರಿಸಿಕೊಳ್ಳಬೇಕು. ಇದಕ್ಕೆ ನೀರು ಮತ್ತು ಮೈದಾ ಹೊರತುಪಡಿಸಿ ಬೇರೇನು ಬೆರೆಸಿಕೊಳ್ಳುವುದಿಲ್ಲ. ಹಿಟ್ಟು ತಯಾರಾದ ಬಳಿಕ ನಿಮ್ಮಿಷ್ಟದ ತುಪ್ಪವನ್ನು ಆಯ್ಕೆ ಮಾಡಿಕೊಂಡು ಕಡಾಯಿಗೆ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಬೇಕು.

    ಕಾದ ತುಪ್ಪಕ್ಕೆ ತಯಾರಿಸಿಟ್ಟ ಹಿಟ್ಟಿನಿಂದ ಜಿಲೇಬಿ ಹಾಕಿಕೊಂಡು ಕೆಂಪಗೆ ರೋಸ್ಟ್ ಆಗುವರೆಗೂ ಕರಿದುಕೊಳ್ಳಬೇಕು. ಆದಾದ ಬಳಿಕ ಸಕ್ಕರೆ ಪಾಕಕ್ಕೆ ತುಪ್ಪದಲ್ಲಿ ಕರೆದ ಜಿಲೆಬಿ ಅದ್ದಿದ್ರೆ ಬಿಸಿ ಬಿಸಿ ತುಪ್ಪದ ಜಿಲೇಬಿ ಸವಿಯಬಹುದು. ಇದನ್ನೂ ಓದಿ: ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    ಸಾಮನ್ಯವಾಗಿ ಜಿಲೇಬಿಗೆ ಹಿಂದಿನ ದಿನಾ ರಾತ್ರಿಯೇ ಹಿಟ್ಟನ್ನು ಮಾಡಿಟ್ಟುಕೊಳ್ಳಬೇಕು, ಆದರೆ ತುಪ್ಪದ ಜಿಲೇಬಿಗೆ ಅದರ ಅವಶ್ಯಕತೆ ಇಲ್ಲ ಬಯಕೆ ಆದಾಕ್ಷಣ ಪಟಾಪಟ್ ಅಂತಾ ಆಗಲೇ ಹಿಟ್ಟು ತಯಾರಿಸಿ ಜಿಲೇಬಿ ಮಾಡಬಹುದು.

    ದೆಹಲಿಯಲ್ಲಿ ಈ ಜಿಲೇಬಿ ತುಂಬಾ ಪ್ರಖ್ಯಾತಿ, ಸಾಮಾನ್ಯ ದಿನಗಳಲ್ಲೂ ತುಪ್ಪದ ಜಿಲೇಬಿ ಸವಿಬಹುದು. ಚಾಂದನಿ ಚೌಕ್ ನಲ್ಲಿ ತುಪ್ಪದ ಜಿಲೇಬಿ ಮಾರುವ ಅಂಗಡಿ ಒಂದೇ ಒಂದು ಇದ್ದು ದೂರದೂರಿನಿಂದ ಬಂದವರೆಲ್ಲ ಒಮ್ಮೆ ತುಪ್ಪದ ಜಿಲೇಬಿ ಸವಿಯಬಹುದು.

     

  • ನವರಾತ್ರಿ ಹಬ್ಬಕ್ಕೆ ವಿಶೇಷವಾಗಿ ಮಾಡಿ ಸಿಹಿಯಾದ ಎರಿಯಪ್ಪ

    ನವರಾತ್ರಿ ಹಬ್ಬಕ್ಕೆ ವಿಶೇಷವಾಗಿ ಮಾಡಿ ಸಿಹಿಯಾದ ಎರಿಯಪ್ಪ

    ವರಾತ್ರಿ ಹಬ್ಬದ ಸಂಭ್ರಮ ಎಲ್ಲಡೆ ಮನೆಮಾಡಿದೆ. ಹಬ್ಬ ಎಂದರೆ ನೆನಪಾಗೋದು, ಸಂಭ್ರಮ, ಉಡುಗೆ-ತೊಡುಗೆ ಜೊತೆಗೆ ಸಿಹಿತಿಂಡಿಗಳು. ಅಮ್ಮ ಮಾಡೋ ವಿವಿಧ ತರಹದ ಸ್ವೀಟ್‍ಗಳು ಎಲ್ಲರ ಫೇವರೆಟ್. ಆದರೆ ನಾವು ಇಂದು ಎರಿಯಪ್ಪ ಮಾಡುವ ವಿಧಾನವನ್ನು ಹೇಳಿಕೊಡಲಿದ್ದೇವೆ. ಟ್ರೈ ಮಾಡಿ ನೋಡಿ, ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಡೌಟೇ ಇಲ್ಲ. ಈ ವರ್ಷದ ನವರಾತ್ರಿ ಹಬ್ಬವನ್ನು ನೀವು ಈ ಸಿಹಿ ತಿಂಡಿ ಜೊತೆಗೆ ವಿಶೇಷವಾಗಿ ಆಚರಿಸಬಹುದಾಗಿದೆ.


    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ – 1 ಕಪ್
    * ಕಾಯಿತುರಿ- ಅರ್ಧ ಕಪ್
    * ಬೆಲ್ಲದ- 1 ಕಪ್,
    * ಉಪ್ಪು- ಸ್ವಲ್ಪ
    * ಗಸಗಸೆ- 1 ಟೀ ಚಮಚ
    * ಏಲಕ್ಕಿ ಪುಡಿ-1 ಟೀ ಚಮಚ,
    * ಅಡುಗೆ ಎಣ್ಣೆ- 2ಕಪ್

    ಮಾಡುವ ವಿಧಾನ:
    * ಅಕ್ಕಿಯನ್ನು 4-5 ಗಂಟೆಗಳ ಕಾಲ ನೆನೆ ಹಾಕಿ. ನಂತರ ಅಕ್ಕಿಯ ಜೊತೆಗೆ ತೆಂಗಿನತುರಿ, ಬೆಲ್ಲದ ಪುಡಿ, ಉಪ್ಪು ಮತ್ತು ಅರ್ಧ ಕಪ್ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

    * ರುಬ್ಬಿದ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಇರಲಿ. ಹಿಟ್ಟಿಗೆ ಗಸಗಸೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.

    * ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಕಾದ ಎಣ್ಣೆಗೆ ಚಿಕ್ಕ ಸೌಟಿನಲ್ಲಿ 1 ಸೌಟು ಹಿಟ್ಟನ್ನು ಹಾಕಿ.
    * ಈ ಮಿಶ್ರಣ ಹಿಟ್ಟು ಕಜ್ಜಾಯದ ರೀತಿಯಲ್ಲಿ ಎಣ್ಣೆಯಿಂದ ಮೇಲಕ್ಕೆ ತೇಲಿಕೊಂಡು ಬರುತ್ತದೆ. ಎರಡೂ ಬದಿಯನ್ನೂ ಕೆಂಬಣ್ಣ ಬರುವಂತೆ ಬೇಯಿಸಿ. ಇದನ್ನೂ ಓದಿ: ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ

    * ಈಗ ರುಚಿಕರವಾದ ಎರಿಯಪ್ಪ ಸವಿಯಲು ಸಿದ್ಧವಾಗುತ್ತದೆ. ನೀವು ಇದನ್ನು ತುಪ್ಪದ ಜೊತೆಗೆ ತಿಂದರೆ ಇನ್ನಷ್ಟು ರುಚಿಯಾಗಿರುತ್ತದೆ.