Tag: recipe

  • ಮಟನ್ ದೋಸೆ ಮಾಡುವ ವಿಧಾನ ಮಾಂಸಪ್ರಿಯರಿಗಾಗಿ

    ಮಟನ್ ದೋಸೆ ಮಾಡುವ ವಿಧಾನ ಮಾಂಸಪ್ರಿಯರಿಗಾಗಿ

    ರಾಗಿ, ಗೋಧಿ ಎಂದು ವಿಧ ವಿಧವಾದ ದೋಸೆ ಮಾಡುವ ನಾವು ದೋಸೆಯನ್ನು ನಾವ್ ವೆಜ್ ಹಾಕಿಯೂ ಮಾಡಬಹುದು. ಅದರಲ್ಲಿ ಚಿಕನ್ ದೋಸೆ ಮತ್ತು ಮಟನ್ ದೋಸೆಯನ್ನು ಹೆಚ್ಚಾಗಿ ಮಾಡಲಾಗುವುದು. ನಾನ್ ವೆಜ್ ದೋಸೆ ತಯಾರಿಸಿ, ನಾನ್ ವೆಜ್ ಗ್ರೇವಿ ಜೊತೆ ಸವಿಯಲು ಸ್ವಾದಿಷ್ಟಕರವಾಗಿರುತ್ತದೆ. ಹೀಗಾಗಿ ಮಟನ್ ದೋಸೆ ಮಾಡುವ ವಿಧಾನ ನಿಮಗಾಗಿ.

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ – 1 ಕಪ್
    * ಉದ್ದಿನ ಬೇಳೆ -1 ಕಪ್
    * ಮಟನ್ ಖೀಮಾ -1 ಕಪ್
    * ಬಟಾಣಿ -ಅರ್ಧ ಕಪ್
    * ಹಸಿ ಮೆಣಸಿನಕಾಯಿ – 2
    * ಅರಿಶಿಣ ಪುಡಿ -ಅರ್ಧ ಚಮಚ
    * ಖಾರದ ಪುಡಿ- 1 ಚಮಚ
    * ಗರಂ ಮಸಾಲ- ಅರ್ಧ ಚಮಚ
    * ಕರಿಮೆಣಸಿನ ಪುಡಿ- 1 ಚಮಚ
    * ಕರಿಬೇವಿನ ಎಲೆ- ಸ್ವಲ್ಪ
    * ಚಕ್ಕೆ, ಲವಂಗ 2
    * ರುಚಿಗೆ ತಕ್ಕ ಉಪ್ಪು
    * ಅಡುಗೆ ಎಣ್ಣೆ – ಅರ್ಧ ಕಪ್

    ಮಾಡುವ ವಿಧಾನ:
    * ಅಕ್ಕಿ ಮತ್ತು ಉದ್ದಿನ ಬೇಳೆಯನ್ನು 5-6 ಗಂಟೆಗಳ ನೀರಿನಲ್ಲಿ ನೆನೆ ಹಾಕಿ. ನಂತರ ಮಿಕ್ಸಿಯಲ್ಲಿ ಹಾಕಿ, ಸ್ವಲ್ಪ ಉಪ್ಪು ಸೇರಿಸಿ ದೋಸೆಯ ಹದಕ್ಕೆ ರುಬ್ಬಿಟ್ಟುಕೊಳ್ಳಬೇಕು.

    * ತವಾಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಚಕ್ಕೆ, ಲವಂಗ ಹಾಕಿ, ನಂತರ ಹಸಿ ಮೆಣಸಿನ ಕಾಯಿ, ಕರಿ ಬೇವಿನ ಎಲೆ ಹಾಕಿ 2 ನಿಮಿಷ ಫ್ರೈ ಮಾಡಿ, ಮಟನ್ ಖೀಮಾ, ಕರಿ ಮೆಣಸಿನ ಪುಡಿ, ಖಾರದ ಪುಡಿ, ಗರಂ ಮಸಾಲ ಹಾಕಿ, ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ಬೇಯಿಸಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಮಟನ್ ಅರ್ಧ ಬೆಂದಾಗ ಬಟಾಣಿ ಹಾಕಿ ಸೌಟ್ ನಿಂದ ಆಡಿಸಿ ಪುನಃ ಬೇಯಿಸಿ, ಮಟನ್ ಬೆಂದು ಅದರಲ್ಲಿರುವ ನೀರಿನಂಶ ಆವಿಯಾಗಿ ಸಂಪೂರ್ಣ ಡ್ರೈಯಾಗುವವರೆಗೆ ಬೇಯಿಸಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ನಂತರ ಈ ಮಿಶ್ರಣವನ್ನು ದೋಸೆ ಹಿಟ್ಟಿನ ಜೊತೆ ಹಾಕಿ ಮಿಕ್ಸ್ ಮಾಡಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
    * ಈಗ ದೋಸಾ ತವಾವನ್ನು ಬಿಸಿ ಮಾಡಿ, ಅದರಲ್ಲಿ ಎಣ್ಣೆ ಸವರಿ, ದೋಸೆ ಹುಯ್ಯಿರಿ. ನಂತರ ಪಾತ್ರೆಯ ಬಾಯಿ ಮುಚ್ಚಿ 2 ನಿಮಿಷ ಬೇಯಿಸಿದರೆ ದೋಸೆಯನ್ನು ಮಟನ್ ಗ್ರೇವಿ ಜೊತೆ ಸವಿಯಲು ರುಚಿಯಾಗಿರುತ್ತದೆ.

  • ಬಿಸಿ ಬಿಸಿಯಾದ ನೂಡಲ್ಸ್ ಕಟ್ಲೆಟ್ ಮಾಡುವ ವಿಧಾನ ನಿಮಗಾಗಿ

    ಬಿಸಿ ಬಿಸಿಯಾದ ನೂಡಲ್ಸ್ ಕಟ್ಲೆಟ್ ಮಾಡುವ ವಿಧಾನ ನಿಮಗಾಗಿ

    ಕ್ಕಳಿಗಂತೂ ನೂಡಲ್ಸ್ ಅಂದರೆ ಪಂಚಪ್ರಾಣ. ಕೆಲಸಕ್ಕೆ ಹೋಗುವ ತಾಯಂದಿರು ನೂಡಲ್ಸ್ ಅನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಅತ್ಯಂತ ಸರಳವಾಗಿ ರುಚಿಯಾಗಿ ಬೇಗ ತಯಾರಿಸುವ ಅಡುಗೆಯನ್ನು ತಾಯಂದಿರು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಈ ನೂಡಲ್ಸ್ ಕಟ್ಲೆಟ್ ಮಕ್ಕಳಿಗೆ ಇಷ್ಟವಾಗುವುದು ಖಂಡಿತ. ಹಾಗಿದ್ದರೆ ನಿಮ್ಮ ಮಕ್ಕಳ ಹಸಿವನ್ನು ತಣಿಸುವ ರುಚಿಕರವಾದ ನೂಡಲ್ಸ್ ಖಾದ್ಯ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ನೂಡಲ್ಸ್ – 150 ಗ್ರಾಮ್ಸ್
    * ತರಕಾರಿ – ಅರ್ಧ ಕಪ್
    * ಬಟಾಣಿ – ಅರ್ಧ ಕಪ್
    * ಈರುಳ್ಳಿ – ಅರ್ಧ ಕಪ್
    * ಹಸಿಮೆಣಸು – 4
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಚಾಟ್ ಮಸಾಲಾ – ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- 1 ಕಪ್


    ಮಾಡುವ ವಿಧಾನ:
    * ಕುದಿಯುತ್ತಿರುವ ನೀರಿನಲ್ಲಿ ನೂಡಲ್ಸ್ ಹಾಕಿ ತೆಗೆದಿಟ್ಟುಕೊಳ್ಳಬೇಕು.
    * ಪಾತ್ರೆಯಲ್ಲಿ ಬೇಯಿಸಿದ ತರಕಾರಿ, ನೂಡಲ್ಸ್, ಬಟಾಣಿ, ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಚಾಟ್ ಮಸಾಲೆ, ಕಾರ್ನ್ ಫ್ಲೋರ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ಈಗ ಈ ಮಿಶ್ರಣವನ್ನು ನಿಮ್ಮ ಹಸ್ತವನ್ನು ಬಳಸಿಕೊಂಡು ಕಟ್ಲೆಟ್ ಆಕಾರವನ್ನು ನೂಡಲ್ಸ್ ಅನ್ನು ಮಾಡಿಕೊಳ್ಳಿ. ಇದನ್ನು ಚಪ್ಪಟೆ ಆಕಾರದಲ್ಲಿ ತಟ್ಟಿಕೊಳ್ಳಿ. ಇದನ್ನೂ ಓದಿ:  ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
    * ಬಿಸಿ ಎಣ್ಣೆಗೆ ನೂಡಲ್ ಕಟ್ಲೆಟ್ ಅನ್ನು ಹಾಕಿ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಇದನ್ನು ಎಣ್ಣೆಯಲ್ಲಿ ಬೇಯಿಸಿಕೊಳ್ಳಬೇಕು. ಈಗ ನೂಡಲ್ಸ್ ಕಟ್ಲೆಟ್ ಸವಿಯಲು ಸಿದ್ಧವಾಗುತ್ತದೆ. ನೀವು ಟೊಮೆಟೋ ಸಾಸ್ ಅನ್ನು ಬಳಸಿಕೊಂಡು ಈ ಆರೋಗ್ಯಕರ ಹಾಗೂ ರುಚಿಕರವಾದ ಖಾದ್ಯವನ್ನು ಸವಿಯಿರಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

  • ಚಳಿಗಾಲಕ್ಕೆ ಬಿಸಿ ಬಿಸಿಯಾದ ಮಟನ್ ಸೂಪ್ ಮಾಡಿ

    ಚಳಿಗಾಲಕ್ಕೆ ಬಿಸಿ ಬಿಸಿಯಾದ ಮಟನ್ ಸೂಪ್ ಮಾಡಿ

    ಳಿಗಾಲ ಬಂತೆಂದರೆ ಸಾಕು ಮಾಂಸಾಹಾರ ಪ್ರಿಯರಿಗಂತೂ ತಮ್ಮ ನಾಲಿಗೆ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ. ಚಳಿಗಾಲಕ್ಕೆ ಎಂದೇ ಹೆಸರುವಾಸಿಯಾಗಿರುವ ಕೆಲವೊಂದು ರುಚಿಕರ ಮತ್ತು ಸ್ವಾದಿಷ್ಟವಾದ ಕೆಲವು ಸೂಪ್‍ಗಳಿವೆ. ಬಿಸಿ ಬಿಸಿ, ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ಮಟನ್ ಸೂಪ್ ಎಂದಾದರೂ ಸೇವಿಸಿದ್ದೀರಾ..? ಈ ಸೂಪ್‌ ಮಾಡೋ ಸರಳ ವಿಧಾನ ನಿಮಗೆ ಗೊತ್ತಾ..?

    ಬೇಕಾಗುವ ಸಾಮಗ್ರಿಗಳು:
    * ಮಟನ್- 1 ಕೆಜಿ
    * ಟೊಮೆಟೋ- 1
    * ಕರಿಬೇವಿನ ಎಲೆಗಳು- ಸ್ವಲ್ಪ
    * ಎಳ್ಳಿನ ಎಣ್ಣೆ- 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಆಲೂಗಡ್ಡೆ- 1
    * ಕಾಳುಮೆಣಸು- 1 ಟೀಸ್ಪೂನ್
    * ಜೀರಿಗೆ- 2 ಟೀಸ್ಪೂನ್
    * ಶುಂಠಿ ಸ್ವಲ್ಪ
    * ಬೆಳ್ಳುಳ್ಳಿ – 2
    * ಅರಿಶಿಣ ಪುಡಿ- 1 ಚಮಚ
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲಿಗೆ ಮಟನ್ ಸ್ವಚ್ಛ ಮಾಡಿಕೊಳ್ಳಬೇಕು.
    * ಟೊಮೆಟೋ, ಆಲೂಗಡ್ಡೆ, ಕಾಳುಮೆಣಸು, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಅರಿಶಿಣವನ್ನು ಸೇರಿಸಿ ರುಬ್ಬಿ ಇಟ್ಟುಕೊಳ್ಳಿ.  ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಕುಕ್ಕರಲ್ಲಿ ಅಡುಗೆ ಎಣ್ಣೆ, ಮಟನ್ ತುಂಡುಗಳು ಹಾಗೂ ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ನಂತರ ಕರಿಬೇವಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನಂತರ ನೀರು ಮತ್ತು ಎಣ್ಣೆಯನ್ನು ಅದಕ್ಕೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿಕೊಳ್ಳಬೇಕು.


    * ಮಟ್ಟನ್ ಬೇಯಿಸಿದ ನಂತರ ಎಳ್ಳಿನ ಎಣ್ಣೆ, ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿ ರುಚಿಯಾದ ಮಟ್ಟನ್ ಸೂಪ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

  • ಬೇರೆಲ್ಲ ದೋಸೆಗಿಂತ ವಿಭಿನ್ನ ಆಲೂಗಡ್ಡೆ ದೋಸೆ

    ಬೇರೆಲ್ಲ ದೋಸೆಗಿಂತ ವಿಭಿನ್ನ ಆಲೂಗಡ್ಡೆ ದೋಸೆ

    ಆಲೂಗಡ್ಡೆ ದೋಸೆ ಸಖತ್ ಟೇಸ್ಟೀ ಮತ್ತು ಆರೋಗ್ಯಕಾರಿಯಾಗಿದೆ. ನಿಮ್ಮ ಹಸಿವನ್ನು ಇಂಗಿಸಿ ನಾಲಗೆಯಲ್ಲಿ ಆ ರುಚಿ ಇನ್ನೂ ಇರುವಂತೆ ಈ ದೋಸೆ ಮಾಡುತ್ತದೆ. ಸುಲಭವಾಗಿ ತಯಾರಿಸಬಹುದಾದ ಈ ಆಲೂಗಡ್ಡೆ ದೋಸೆ ಮಾಡುವ ವಿಧಾನ ನಿಮಗಾಗಿ ನೀಡಲಾಗಿದೆ. ರಾಗಿ ದೋಸೆ, ಗೋಧಿ ದೋಸೆಗಳಿಗಿಂತ ಈ ದೋಸೆ ವಿಭಿನ್ನವಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಆಲೂಗಡ್ಡೆ – 3
    * ಮೈದಾ – 2 ಸ್ಪೂನ್
    * ಹಸಿಮೆಣಸು – 2
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಅಡುಗೆಎಣ್ಣೆ – ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    ಮಾಡುವ ವಿಧಾನ:
    * ಮೊದಲು ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಪಕ್ಕದಲ್ಲಿರಿಸಿ.
    * ಒಂದು ಪಾತ್ರೆಗೆ ಸಿಪ್ಪೆ ತೆಗೆದ ಆಲೂಗಡ್ಡೆ, ಮೈದಾ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣವನ್ನು ಮಿಶ್ರಣ ಮಾಡಿ. ಇದನ್ನೂ ಓದಿ:  ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    * ಈ ಮಿಶ್ರಣ ಇಡ್ಲಿ ಹಿಟ್ಟಿನಂತೆ ಸ್ವಲ್ಪ ದಪ್ಪನೆಯ ಹಿಟ್ಟಿನಂತೆ ಇರಲಿ. ಹಿಟ್ಟಿಗೆ ಹಸಿಮೆಣಸು ಹಾಗೂ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಹಾಕಿ.
    * ತವಾಗೆ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ ದೋಸೆ ಹುಯ್ಯಿರಿ. ಈ ದೋಸೆ ಚೆನ್ನಾಗಿ ಬೇಯಿಸಿದರೆ ರುಚಿಯಾದ ಆಲೂಗಡ್ಡೆ ದೋಸೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

  • ಅಕ್ಕಿ ರೊಟ್ಟಿ ಜೊತೆಗೆ ಸವಿಯಲು ಮಾಡಿ ಬದನೆಕಾಯಿ ಚಟ್ನಿ

    ಅಕ್ಕಿ ರೊಟ್ಟಿ ಜೊತೆಗೆ ಸವಿಯಲು ಮಾಡಿ ಬದನೆಕಾಯಿ ಚಟ್ನಿ

    ಹೋಟೆಲ್ ಆಹಾರದಿಂದ ಕೆಲವರಿಗೆ ಕೊಬ್ಬು, ಆಸಿಡಿಟಿ, ಹೊಟ್ಟೆಯ ಸಮಸ್ಯೆಗಳನ್ನು ನೀವು ಅನುಭವಿಸುವುದು ಸಾಮಾನ್ಯವಾಗಿದೆ. ಇದಕ್ಕೆ ತಕ್ಕ ಪರಿಹಾರ ಎಂದರೆ ಮನೆಯಲ್ಲೇ ನಿಮಗೆ ಬೇಕಾದ ಸ್ವಾದಿಷ್ಟ ಖಾದ್ಯವನ್ನು ತಯಾರಿಸುವುದಾಗಿದೆ. ಮನೆಯಲ್ಲಿ ತಯಾರಿಸುವ ರೆಸಿಪಿ ಹೇಗಿರಬೇಕೆಂದರೆ ಸಮಯವನ್ನು ಉಳಿಸಿ ಎಲ್ಲರಿಂದಲೂ ನಿಮಗೆ ಮೆಚ್ಚುಗೆಯನ್ನು ನೀಡುವಂತೆ ಮಾಡುಬೇಕು. ಬಾಯಲ್ಲಿ ನೀರೂರಿಸುವ ಬದನೆಕಾಯಿ ಚಟ್ನಿ ರೊಟ್ಟಿ, ಚಪಾತಿ ದೋಸೆಗೆ ಸೂಪರ್ ಕಾಂಬಿನೇಷನ್ ಆಗಿದೆ.

    ಬೇಕಾದ ಸಾಮಾಗ್ರಿಗಳು:
    * ಬದನೆಕಾಯಿ – 4
    * ನೆಲಗಡಲೆ ಹುರಿದದ್ದು – ಎರಡು ಚಮಚ
    * ಹಸಿಮೆಣಸು – 2
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ತೆಂಗಿನಕಾಯಿ ತುರಿ – 1 ಕಪ್
    * ಬೆಳ್ಳುಳ್ಳಿ – 2 ಎಸಳು
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ – 1 ಚಮಚ
    * ಸಾಸಿವೆ – 1 ಚಮಚ
    * ಕರಿಬೇವು – ಸ್ವಲ್ಪ ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    ಮಾಡುವ ವಿಧಾನ:
    * ಮೊದಲಿಗೆ ಬದನೆಕಾಯಿ ಮತ್ತು ಬೆಳ್ಳುಳ್ಳಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
    * ಬೇಯಿಸಿದ ಬದನೆ, ಬೆಳ್ಳುಳ್ಳಿಯೊಂದಿಗೆ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಹುರಿದ ನೆಲಗಡಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ತೆಂಗಿನ ಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ:  ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    * ಬದನೆ ಬೇಯಿಸಿದ ನೀರನ್ನು ರುಬ್ಬುವಾಗ ಬಳಸಿಕೊಳ್ಳಿ.
    *ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ, ಇದಕ್ಕೆ ಸಾಸಿವೆಯನ್ನು ಹಾಕಿ. ಇದು ಸಿಡಿಯುತ್ತಿದ್ದಂತೆ ಕರಿಬೇವು ಇದಕ್ಕೆ ಸೇರಿಸಿ. ಚಟ್ನಿಗೆ ಒಗ್ಗರಣೆಯನ್ನು ಮಾಡಿಕೊಂಡು ಮೇಲೆ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಬೇಯಿಸಿದರೆ ರುಚಿಯಾದ ಬದನೆಕಾಯಿ ಚಟ್ನಿ ಸವಿಯಲು ಸಿದ್ದವಾಗುತ್ತದೆ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

  • ಇಂದು ಮಾಡಿ ಬಿಸಿಯಾದ ಗರಂ ಗರಂ ಕಚೋರಿ

    ಇಂದು ಮಾಡಿ ಬಿಸಿಯಾದ ಗರಂ ಗರಂ ಕಚೋರಿ

    ತಂಪಾದ ವಾತಾವರಣಕ್ಕೆ ಏನಾದರೂ ಬಿಸಿಬಿಸಿ, ರುಚಿಯಾದ ಖಾದ್ಯ ತಿನ್ನಲಿದ್ದರೆ ಬಹಳ ಚೆನ್ನಾಗಿರುತ್ತದೆ ಎಂದು ಹೆಚ್ಚಿನವರಿಗೆ ಅನಿಸುವುದುಂಟು. ಆದರೆ ಅದೇ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಬಿಸಿ ಬಿಸಿಯಾದ ಕಚೋರಿ ಒಮ್ಮೆ ಟ್ರೈ ಮಾಡಬಹುದು. ಮಕ್ಕಳು ಕಚೋರಿಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.

    ಬೇಕಾಗುವ ಸಾಮಗ್ರಿಗಳು:
    * ಮೈದಾಹಿಟ್ಟು – 2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಜ್ವಾನ – ಅರ್ಧ ಚಮಚ
    * ಅಡುಗೆ ಎಣ್ಣೆ- ಅರ್ಧ ಕಪ್
    * ದನಿಯಾ – 1 ಚಮಚ
    * ಜೀರಿಗೆ – 1 ಚಮಚ
    * ಸೋಂಪು – 1 ಚಮಚ
    * ಈರುಳ್ಳಿ – 3
    * ಹಸಿಮೆಣಸು – 2
    * ಕಡಲೆಹಿಟ್ಟು – 2 ಚಮಚ
    * ಖಾರದ ಪುಡಿ – 1 ಚಮಚ
    * ಗರಂಮಸಾಲೆ – ಅರ್ಧ ಚಮಚ
    * ಕಾಳುಮೆಣಸಿನ ಪುಡಿ – ಅರ್ಧ ಚಮಚ
    * ಅರಿಸಿಣ ಪುಡಿ – ಚಿಟಿಕೆ
    * ಆಲೂಗೆಡ್ಡೆ – 3 (ಬೇಯಿಸಿದ್ದು)
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಸಕ್ಕರೆ- 1 ಚಮಚ

    ಮಾಡುವ ವಿಧಾನ:
    * ಮೈದಾಹಿಟ್ಟಿಗೆ ಉಪ್ಪು, ಅಜ್ವಾನ, ಅಡುಗೆಎಣ್ಣೆ ಹಾಗೂ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚಪಾತಿ ಹಟ್ಟಿನ ಹದಕ್ಕೆ ಕಲೆಸಿಕೊಂಡು 20 ನಿಮಿಷಗಳ ಕಾಲ ನೆನೆಸಿಡಿ.
    * ದನಿಯಾ, ಜೀರಿಗೆ ಹಾಗೂ ಸೋಂಪನ್ನು ಹುಡಿ ಮಾಡಿಕೊಳ್ಳಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ಪಾತ್ರೆಯೊಂದಕ್ಕೆ 3 ಅಡುಗೆಎಣ್ಣೆ, ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಡಲೆಹಿಟ್ಟು, ಖಾರದಪುಡಿ, ಗರಂಮಸಾಲೆ, ಕಾಳುಮೆಣಸಿನ ಪುಡಿ, ಅರಿಸಿನ ಪುಡಿ, ಇಂಗು ಹಾಗೂ ಈಗಾಗಲೇ ಹುಡಿ ಮಾಡಿಟ್ಟುಕೊಂಡ ಹುಡಿಯನ್ನು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ:   ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ


    * ಅದಕ್ಕೆ ಪುಡಿ ಮಾಡಿದ ಆಲೂಗೆಡ್ಡೆ ಕೊತ್ತಂಬರಿ ಸೊಪ್ಪು, ಸಕ್ಕರೆ ಸೇರಿಸಿ ಕಲೆಸಿ. ಇದನ್ನು ಉಂಡೆ ಮಾಡಿಕೊಳ್ಳಿ. ಮೈದಾಹಿಟ್ಟಿನ ಮಿಶ್ರಣವನ್ನು ಉಂಡೆ ಮಾಡಿಕೊಂಡು ಅಂಗೈ ಅಗಲಕ್ಕೆ ತಟ್ಟಿಕೊಳ್ಳಿ. ಅದರೊಳಗೆ ಆಲೂಗೆಡ್ಡೆ ಉಂಡೆಯನ್ನು ಇರಿಸಿ ಲಟ್ಟಿಸಿಕೊಳ್ಳಿ. ಇದನ್ನು ಎಣ್ಣೆಯಲ್ಲಿ ಕರಿದರೆ ಕಚೋರಿ ಸವಿಯಲು ಸಿದ್ಧವಾಗುತ್ತದೆ.  ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

  • ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    ತಂಪಾದ ವಾತಾವರಣಕ್ಕೆ ಏನಾದರೂ ಬಿಸಿಬಿಸಿ, ರುಚಿಯಾದ ಖಾದ್ಯ ತಿನ್ನಲಿದ್ದರೆ ಬಹಳ ಚೆನ್ನಾಗಿರುತ್ತದೆ ಎಂದು ಹೆಚ್ಚಿನವರಿಗೆ ಅನಿಸುವುದುಂಟು. ಆದರೆ ಅದೇ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಬಿಸಿ ಬಿಸಿಯಾದ ಇಡ್ಲಿ ಮಂಚೂರಿಯನ್ ಒಮ್ಮೆ ಟ್ರೈ ಮಾಡಬಹುದು.

    ಬೇಕಾಗುವ ಸಾಮಗ್ರಿಗಳು:
    * ಇಡ್ಲಿ-5
    * ಮೈದಾ – ಅರ್ಧ ಕಪ್
    * ಕಾರ್ನ್ ಫ್ಲೋರ್- ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಕೆಂಪು ಮೆಣಸಿನ ಪುಡಿ-2 ಚಮಚ
    * ಕರಿಮೆಣಸಿನ ಹುಡಿ-1 ಟೀಸ್ಪೂನ್
    * ಸೋಯಾ ಸಾಸ್- 1 ಚಮಸ
    * ಅಡುಗೆ ಎಣ್ಣೆ- ಅರ್ಧ ಕಪ್
    * ಈರುಳ್ಳಿ – 1
    * ಶುಂಠಿ- ಸ್ವಲ್ಪ
    * ಬೆಳ್ಳುಳ್ಳಿ- 1
    * ಲವಂಗ- 2
    * ಕ್ಯಾಪ್ಸಿಕಂ- 1
    * ಟೊಮೆಟೊ ಸಾಸ್- 1 ಚಮಚ
    * ಚಿಲ್ಲಿ ಸಾಸ್- 2 ಚಮಚ
    * ವಿನೆಗರ್ -2 ಚಮಚ
    * ಸೋಯಾ ಸಾಸ್ – 1 ಚಮಚ ಇದನ್ನೂ ಓದಿ:   ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    ಮಾಡುವ ವಿಧಾನ:
    * ಮೊದಲಿಗೆ ಇಡ್ಲಿಗಳನ್ನು 4 ಭಾಗಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ.
    * ದೊಡ್ಡ ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಕೆಂಪುಮೆಣಸಿನ ಪುಡಿ, ಕರಿಮೆಣಸು ಮತ್ತು ಸೋಯಾ ಸಾಸ್ ಹಾಕಿ, ಒಟ್ಟಿಗೆ ಮಿಶ್ರಣ ಮಾಡಿ. ಈಗ ಇದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಇಡ್ಲಿ ತುಂಡುಗಳನ್ನು ಈ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಚೆನ್ನಾಗಿ ಫ್ರೈ ಮಾಡಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ಒಂದು ಪಾತ್ರೆಯಲ್ಲಿ ಅಡುಗೆಎಣ್ಣೆ ಹಾಕಿ ಬಿಸಿ ಮಾಡಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಕ್ಯಾಪ್ಸಿಕಂ, ಟೊಮೆಟೊ ಸಾಸ್, ಚಿಲ್ಲಿ ಸಾಸ್, ಉಪ್ಪು, ಸೋಯಾ ಸಾಸ್, ವಿನೆಗರ್ ಸೇರಿಸಿ, ಚೆನ್ನಾಗಿ ಬೇಯಿಸಿರಿ.
    *ನಂತರ ಹುರಿದ ಇಡ್ಲಿಗಳನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದರೆ ಇಡ್ಲಿ ಮಂಚೂರಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

  • ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಅಡುಗೆಯನ್ನು ತಯಾರಿಸಲು ಪ್ರತಿಯೊಬ್ಬರು ಬಯಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಬಹುದು. ಬಂಧುಗಳು ಅಥವಾ ನಿಮ್ಮ ಆಪ್ತರು ಆಗಮಿಸಿದಾಗ ಅವರನ್ನು ಖುಷಿಪಡಿಸಲು ನೀವು ಈ ಪಾಕವಿಧಾನವನ್ನು ತಯಾರಿಸಬಹುದು. ಹೋಟೆಲ್ ಆಹಾರಗಳಿಗಿಂತ ಮನೆಯಲ್ಲಿ ಮಾಂಸಹಾರ ಅಡುಗೆ ಮಾಡುವುದು ಎಂದರೆ ನಾನ್‍ವೆಜ್‍ಪ್ರಿಯರಿಗೆ ಸಖತ್ ಇಷ್ಟವಾಗುತ್ತದೆ. ಮನೆಯಲ್ಲಿಯೇ ಸುಲಭವಾಗಿ ಚಿಕನ್ ಮಸಾಲ ತಯಾರಿಸಬಹುದು. ಮಾಂಸಹಾರಿಗಳು ಬಗೆ ಬಗೆಯ ಖಾದ್ಯವನ್ನು ತಯಾರಿಸುತ್ತಾರೆ. ಈ ಖಾರವಾದ ಚಿಕನ್ ಮಸಾಲ  ಅಕ್ಕಿ ರೊಟ್ಟಿಯ ಜೊತೆಗೆ ಸೇವಿಸಲು ಸಖತ್ ರುಚಿಯಾಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಚಿಕನ್ – ಅರ್ಧ ಕೆಜಿ
    * ಕೆಂಪು ಮೆಣಸಿನಕಾಯಿ – 8
    * ಈರುಳ್ಳಿ – 2
    * ಟೊಮೆಟೊ – 2
    * ಗೋಡಂಬಿ – 2 ಟೇಬಲ್ ಚಮಚ,
    * ಅರಿಸಿಣ – 1 ಚಮಚ,
    * ಅಡುಗೆಎಣ್ಣೆ- 2 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ದನಿಯಾ ಪುಡಿ- 1 ಚಮಚ
    * ಗರಂಮಸಾಲ – 1 ಚಮಚ
    * ಕಸೂರಿ ಮೇಥಿ- 1 ಚಮಚ
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    ಮಾಡುವ ವಿಧಾನ:
    * ಒಣಮೆಣಸಿನಕಾಯಿ, ಟೊಮೆಟೋ, ಗೋಡಂಬಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
    * ಒಂದು ಬಾಣಲೆಯನ್ನು ಬಿಸಿಗೆ ಇಟ್ಟು 2 ಟೇಬಲ್ ಚಮಚ ಎಣ್ಣೆ ಹಾಕಿ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬಾಡಿಸಿಕೊಳ್ಳಿ.

    * ನಂತರ ಚಿಕನ್ ಸೇರಿಸಿ ಅದಕ್ಕೆ ಅರಿಶಿಣ, ಉಪ್ಪು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ. ಚಿಕನ್ ಅರ್ಧ ಬೇಯುವವರೆಗೂ ಎಣ್ಣೆಯಲ್ಲಿ ಫ್ರೈ ಮಾಡಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನಂತರ ರುಬ್ಬಿದ ಮಸಾಲೆಯನ್ನು ಸೇರಿಸಿ ಎಣ್ಣೆ ಬಿಡುವವರೆಗೂ ಬೇಯಿಸಿ.
    * ಕೊನೆಯಲ್ಲಿ ಗರಂಮಸಾಲೆ, ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು, ಅರ್ಧ ಲೋಟ ನೀರು ಸೇರಿಸಿದರೆ ರುಚಿಯಾದ ಚಿಕನ್ ಮಸಾಲ  ಸವಿಯಲು ಸಿದ್ಧವಾಗುತ್ತದೆ.

    </p>

  • ಫಟಾಫಟ್ ಮಾಡಿ ರುಚಿಯಾದ ಕಡಲೆಬೇಳೆ ಚಟ್ನಿ

    ಫಟಾಫಟ್ ಮಾಡಿ ರುಚಿಯಾದ ಕಡಲೆಬೇಳೆ ಚಟ್ನಿ

    ನಿಮ್ಮ ಮನೆಯವರಿಗೂ ಸದಾ ದೋಸೆಯೊಂದಿಗೆ ಕಾಯಿಚಟ್ನಿಯನ್ನೇ ತಿಂದು ಬೇಸರವಾಗಿರಬಹುದು, ಆದರೆ ಯಾರೂ ಬಾಯಿಬಿಟ್ಟು ಹೇಳುವುದಿಲ್ಲ. ಆದರೆ ಇಂದು ನಿಮ್ಮ ಮನೆಯವರು ಕೇಳುವ ಮುನ್ನವೇ ನೀವು ಕಡಲೆಬೇಳೆ ಚಟ್ನಿ ಮಾಡಿ. ಸರಳವಾಗಿ, ಫಟಾಫಟ್ ತಯಾರಿಸುವ ಅಡುಗೆ ಎಂದರೆ ಹಲವರಿಗೆ ಇಷ್ಟವಾಗುತ್ತದೆ. ಇನ್ನೇಕೆ ತಡ..? ಮನೆಯವರ ಮಚ್ಚುಗೆ ಪಡೆಯಲು ಈ ಸ್ವಾದಿಷ್ಟ ಚಟ್ನಿಯನ್ನು ತಯಾರಿಸಿ.

    ಬೇಕಾಗುವ ಸಾಮಗ್ರಿಗಳು:
    * ಕಡಲೆಬೇಳೆ – ಅರ್ಧ ಕಪ್
    * ಕಾಯಿತುರಿ-ಅರ್ಧ ಕಪ್
    * ಕೆಂಪು ಮೆಣಸಿನ ಕಾಯಿ -ಮೂರು
    * ಹುಣಸೆ ಹುಣ್ಣು – ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಅಡುಗೆಎಣ್ಣೆ- 4 ಚಮಚ
    * ಸಾಸಿವೆ – ಒಂದು ಚಮಚ
    * ಉದ್ದಿನ ಬೇಳೆ – 2 ಚಮಚ
    * ಈರುಳ್ಳಿ (ಸಾಂಬಾರ್ ಈರುಳ್ಳಿ) – ಐದು
    * ಕರೀಬೇವು- ಸ್ವಲ್ಪ ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ


    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಅಡುಗೆಎಣ್ಣೆ ಹಾಕಿ ಬಿಸಿಮಾಡಿ ಕೆಂಪುಮೆಣಸು, ಕಡಲೆ ಬೇಳೆಯನ್ನು ಚಿಕ್ಕ ಉರಿಯಲ್ಲಿ ಕೊಂಚ ಕಾಲ ಹುರಿಯಿರಿ. ಬಳಿಕ ಮೆಣಸನ್ನು ಪಕ್ಕಕ್ಕಿಡಿ.
    * ಈಗ ಉಳಿದ ಎಣ್ಣೆಯನ್ನು ಇದೇ ಪಾತ್ರೆಯಲ್ಲಿ ಹಾಕಿ ಸಾಸಿವೆ, ಉದ್ದಿನ ಬೇಳೆ, ಈರುಳ್ಳಿ ಮತ್ತು ಕರೀಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.

    * ಫ್ರೈ ಮಾಡಿಕೊಂಡ ಪದಾರ್ಥಗಳನ್ನು ಮಿಕ್ಸಿಯ ಜಾರ್‍ನೊಳಗೆ ಹಾಕಿ ರುಬ್ಬಿಕೊಳ್ಳಬೇಕು.
    * ಕೊತ್ತಂಬರಿ ಸೊಪ್ಪು, ಸಾಸಿವೆ, ಈರುಳ್ಳಿ, ಕೆಂಪು ಮೆಣಸಿನ ಕಾಯಿ ಹಾಕಿ ಒಗ್ಗರಣೆ ತಯಾರಿಸಿಕೊಂಡು ರುಬ್ಬಿದ ಮಿಶ್ರಣಕ್ಕೆ ಹಾಕಿದರೆ ಸ್ವಾದಿಷ್ಟ ಚಟ್ನಿ ತಯಾರಾಗುತ್ತದೆ.

  • ಆರೋಗ್ಯಕರವಾದ ಸೌತೆಕಾಯಿ ತಂಬುಳಿ ಮಾಡುವ ವಿಧಾನ

    ಆರೋಗ್ಯಕರವಾದ ಸೌತೆಕಾಯಿ ತಂಬುಳಿ ಮಾಡುವ ವಿಧಾನ

    ತಂಬುಳಿ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹಿರಿಯರು ಮನೆಯಲ್ಲಿ ಹೇಳುವುದನ್ನು ನಾವು ಕೇಳಿದ್ದೇವೆ. ಯಾವುದೇ ತಂಬುಳಿ ಮಾಡುವಾಗ ಹೆಚ್ಚು ಮಸಾಲೆ ಪದಾರ್ಥವನ್ನು ಬಳಕೆ ಮಾಡುವುದಿಲ್ಲ. ಹೀಗಾಗಿ ಆರೋಗ್ಯಕ್ಕೆ ಒಳ್ಳೆಯದಾಗಿದೆ. ಸೌತೆಕಾಯಿಂದ ತಯಾರಿಸುವ ಈ ತಂಬುಳಿ ನಾಲಗೆಗೆ ರುಚಿ ಮಾತ್ರವಲ್ಲ ನಿಮ್ಮ ಆರೋಗ್ಯಕ್ಕೂ ಹಿತವಾದ ಅಡುಗೆಯಾಗಿದೆ. ಕುಡಿಯಲೂ ಸೂಪರ್ ಅಷ್ಟೇ ಅಲ್ಲ ಅನ್ನಕ್ಕೆ ಕಲಸಿಕೊಂಡು ಊಟ ಮಾಡಲು ಕೂಡ ಟೇಸ್ಟಿಯಾಗಿರುತ್ತೆ. ಹಾಗಿದ್ದರೆ ಇನ್ಯಾಕೆ ತಡ ಸೌತೆಕಾಯಿ ತಂಬುಳಿ ಮಾಡು ವಿಧಾನವನ್ನು ನೋಡೋಣ.


    ಬೇಕಾಗುವ ಸಾಮಗ್ರಿಗಳು:
    * ಸೌತೆಕಾಯಿ – 2
    * ಜೀರಿಗೆ – 1 ಚಮಚ
    * ತೆಂಗಿನ ತುರಿ – ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಮಜ್ಜಿಗೆ – 2ಕಪ್
    * ಅಡುಗೆಎಣ್ಣೆ ಅಥವಾ ತುಪ್ಪ – 4 ಚಮಚ
    * ಕೆಂಪು ಬ್ಯಾಡಗಿ ಮೆಣಸು – 4


    ಮಾಡುವ ವಿಧಾನ:
    * ಮೊದಲು ಸೌತೆಕಾಯಿಯನ್ನು ಸಣ್ಣದಾಕಿ ಕಟ್ ಮಾಡಿಕೊಳ್ಳಬೇಕು.
    * ಸೌತೆಕಾಯಿ, ಜೀರಿಗೆ, ತೆಂಗಿನತುರಿ ಹಾಕಿ ಮಿಕ್ಸಿ ಮಾಡ್ಕೊಳ್ಳಿ. ರುಬ್ಬಿದ ಮಿಶ್ರಣದಿಂದ ಹಾಲನ್ನು ಬೇರ್ಪಡಿಸಿಕೊಂಡ್ರೆ ತಂಬುಳಿ ರುಚಿ ಅನ್ನಿಸುತ್ತೆ.


    * ನಂತ್ರ ಆ ಮಿಶ್ರಣಕ್ಕೆ ಮಜ್ಜಿಗೆ ಮತ್ತು ಉಪ್ಪು ಸೇರಿಸಿ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

    * ಎಣ್ಣೆ ಕಾದ ಬಳಿಗೆ ಜೀರಿಗೆ, ಕೆಂಪುಬ್ಯಾಡಗಿ ಮೆಣಸನ್ನು ಹಾಕಿ ಚಟಿಪಟಿ ಮಾಡಿ ತಂಬುಳಿಗೆ ಹಾಕಿ ಒಗ್ಗರಣೆ ನೀಡಿದರೆ ರುಚಿರುಚಿಯಾದ ತಂಬುಳಿ ಸಿದ್ಧವಾಗುತ್ತೆ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ