Tag: recipe

  • ಖಾರವಾದ ಮಸಾಲಾ ಚಿಕನ್ ಲೆಗ್ ಸಖತ್ ಟೇಸ್ಟ್

    ಖಾರವಾದ ಮಸಾಲಾ ಚಿಕನ್ ಲೆಗ್ ಸಖತ್ ಟೇಸ್ಟ್

    ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಅಡುಗೆಯನ್ನು ತಯಾರಿಸಲು ಪ್ರತಿಯೊಬ್ಬರು ಬಯಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಬಹುದು. ಮಸಾಲಾ ಚಿಕನ್ ಲೆಗ್‌ನ್ನು ಮನೆಯಲ್ಲಿಯೇ ಸುಲಭವಾಗಿ  ತಯಾರಿಸಬಹುದು.

    ಬೇಕಾಗುವ ಸಾಮಗ್ರಿಗಳು:
    * ಚಿಕನ್ ಲೆಗ್ಸ್ – 4
    * ಕಾಳುಮೆಣಸು – 2 ಚಮಚ
    * ಶುಂಠಿ – ಸ್ವಲ್ಪ
    * ಬೆಳ್ಳುಳ್ಳಿ – 2
    * ಮೆಣಸಿನ ಪುಡಿ- 2 ಚಮಚ
    * ಚಿಕನ್ ಮಸಾಲಾ – 2 ಚಮಚ
    * ಗೋಧಿ ಹಿಟ್ಟು – ಅರ್ಧ ಕಪ್
    * ಅಡುಗೆ ಎಣ್ಣೆ – 2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಚಿಕನ್ ಮಸಾಲಾ- 1 ಪ್ಯಾಕೆಟ್ ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    ಮಾಡುವ ವಿಧಾನ:
    * ಚಿಕನ್ ಲೆಗ್‍ಗಳನ್ನು ಚೆನ್ನಾಗಿ ತೊಳೆದು ಸ್ವಚ್ಚಗೊಳಿಸಿ.
    * ಕಾಳುಮೆಣಸು, ಶುಂಠಿ, ಮೆಣಸಿನ ಹುಡಿ, ಹಾಗೂ ಬೆಳ್ಳುಳ್ಳಿ, ಚಿಕನ್ ಮಸಾಲಾವನ್ನು ಚೆನ್ನಾಗಿ ಮಿಶ್ರಣವನ್ನು ಮಾಡಿ. ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಚಿಕನ್ ಕಾಲುಗಳಿಗೆ ಈ ಮಸಾಲಾ ಮಿಶ್ರಣವನ್ನು ಸವರಿ ಹಾಗೂ 30 ನಿಮಿಷಗಳ ಕಾಲ ಇದನ್ನು ಹಾಗೆಯೆ ಬಿಡಿ.
    * ಪ್ಯಾನ್‍ನಲ್ಲಿ ಎಣ್ಣೆ ಬಿಸಿ ಮಾಡಲು ಇಡಿ. ಅದು ಕಾಯುತ್ತಿದ್ದಂತೆ, ಗೋಧಿ ಹುಡಿಯಲ್ಲಿ ಚಿಕನ್ ಕಾಲುಗಳನ್ನು ಉರುಳಿಸಿ ಕಾದಿರುವ ಎಣ್ಣೆಗೆ ಹಾಕಿ ಮತ್ತು ಚೆನ್ನಾಗಿ ಬೇಯಿಸಿದರೆ ಚಿಕನ್ ಮಸಾಲಾ ಚಿಕನ್ ಲೆಗ್ ಸವಿಯಲು ಸಿದ್ಧವಾಗುತ್ತದೆ.

  • ಫಟಾಫಟ್ ಆಗಿ ಮಾಡಿ ಶಾವಿಗೆ ಉಪ್ಪಿಟ್ಟು

    ಫಟಾಫಟ್ ಆಗಿ ಮಾಡಿ ಶಾವಿಗೆ ಉಪ್ಪಿಟ್ಟು

    ಬೆಳಗ್ಗಿನ ತಿಂಡಿಗೆ ಹೆಚ್ಚಿನವರ ಮನೆಯಲ್ಲಿ ಉಪ್ಪಿಟ್ಟು ಮಾಡಲಾಗುತ್ತದೆ. ಉಪ್ಪಿಟ್ಟಿನಲ್ಲಿ ಸಹ ವೆರೈಟಿ ಇದೆ. ಸಬ್ಬಕ್ಕಿ ಉಪ್ಪಿಟ್ಟು, ಓಟ್ಸ್ ಒಪ್ಪಿಟ್ಟು ಮಾಡಲಾಗುತ್ತದೆ. ಆದರೆ ಇಂದು ನಾವು ಹುಳಿ, ಖಾರ ರುಚಿಯಾಗಿರುವ ಶಾವಿಗೆ ಉಪ್ಪಿಟ್ಟು ಮಾಡುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಈ ಉಪ್ಪಿಟ್ಟು ಅಂದ್ರೆ ಮಕ್ಕಳಿಗೂ ಇಷ್ಟ. ಅಲ್ಲದೇ ಶಾವಿಗೆ ಉದ್ದವಿರುವುದರಿಂದ ಇದನ್ನು ಮ್ಯಾಗಿ ಅಂದುಕೊಂಡು ಇಷ್ಟಪಟ್ಟು ತಿನ್ನುತ್ತಾರೆ.

    ಬೇಕಾಗುವ ಸಾಮಗ್ರಿಗಳು:
    * ಶಾವಿಗೆ- 2ಕಪ್
    * ಉದ್ದಿನ ಬೇಳೆ- 2 ಚಮಚ
    * ಈರುಳ್ಳಿ- 1
    * ಟೊಮ್ಯಾಟೋ-1
    * ಹಸಿ ಮೆಣಸಿನಕಾಯಿ- 3
    * ಕರಿಬೇವು- ಸ್ವಲ್ಪ
    * ಶುಂಠಿ- ಸ್ವಲ್ಪ
    * ಅರಿಶಿನ ಪುಡಿ- ಅರ್ಧ ಚಮಚ
    * ಅಡುಗೆ ಎಣ್ಣೆ- 2 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ- ಸ್ವಲ್ಪ
    * ತೆಂಗಿನ ತುರಿ- ಅರ್ಧ ಕಪ್
    * ಸಾಸಿವೆ- 1 ಚಮಚ

    ಮಾಡುವ ವಿಧಾನ:
    * ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಶಾವಿಗೆಯನ್ನು ಹಾಕಿ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿದಿಟ್ಟುಕೊಳ್ಳಬೇಕು.  ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ 

    * ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ನಂತರ ಸಾಸಿವೆ ಮತ್ತು ಉದ್ದಿನ ಬೆಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ, ಉಪ್ಪು, ಅರಿಶಿಣವನ್ನು ಹಾಕಿ ಬೇಯಿಸಿರಿ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

    * ನಂತರ ಅಳತೆ ಪ್ರಕಾರ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದಾಗ ಕೂಡಲೇ ಹುರಿದಿಟ್ಟ ಶಾವಿಗೆ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮುಚ್ಚಿ ಸ್ವಲ್ಪ ಸಮಯ ಬೇಯಿಸಿದರೆ ರುಚಿಯಾದ ಶಾವಿಗೆ ಉಪ್ಪಿಟ್ಟು ಸವಿಯಲು ಸಿದ್ಧವಾಗುತ್ತದೆ.  ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

  • ಕಡಲೆ ಹಿಟ್ಟಿನಿಂದ ಬಜ್ಜಿ ಮಾತ್ರವಲ್ಲ, ರುಚಿಯಾದ ಲಾಡು ಮಾಡಿ!

    ಕಡಲೆ ಹಿಟ್ಟಿನಿಂದ ಬಜ್ಜಿ ಮಾತ್ರವಲ್ಲ, ರುಚಿಯಾದ ಲಾಡು ಮಾಡಿ!

    ಡಲೆ ಹಿಟ್ಟಿನಿಂದ ಬಜ್ಜಿಯನ್ನು ತಯಾರಿಸಿ ಗೊತ್ತಿದೆ. ಆದರೆ ಕಡಲೆ ಹಿಟ್ಟಿನಿಂದ ಸಿಹಿಯಾದ ತಿಂಡಿಯನ್ನು ತಯಾರಿಸಬಹುದು. ಯಾವುದೇ ವಿಶೇಷ ದಿನ ಅಥವಾ ಹಬ್ಬದ ಸಂದರ್ಭದಲ್ಲಿ ರುಚಿಯಾಗಿ ಏನಾದರೂ ತಿನ್ನಬೇಕು. ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ ಅನ್ನಿಸುತ್ತಿರುತ್ತದೆ. ಹೀಗಾಗಿ ನೀವು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ ಲಾಡು ಮಾಡಿ, ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಕಡಲೆ ಹಿಟ್ಟು- 3 ಕಪ್
    * ಎಳ್ಳು – 4-5 ಚಮಚ
    * ತೆಂಗಿನ ತುರಿ -1 ಕಪ್
    * ಬೆಲ್ಲ-2 ಕಪ್
    * ತುಪ್ಪ- ಅರ್ಧ ಕಪ್
    * ಗೋಡಂಬಿ- ಸ್ವಲ್ಪ ಇದನ್ನೂ ಓದಿ:  ಬಿಸ್ಕೆಟ್ ನಿಂದ ತಯಾರಿಸಿ ಸಿಹಿಯಾದ ಬರ್ಫಿ

    ಮಾಡುವ ವಿಧಾನ:
    *  ಪಾತ್ರೆಗೆ ಕಡಲೆ ಹಿಟ್ಟನ್ನು ಹಾಕಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಕಲೆಸಿ, ಮಿಶ್ರಣ ತಯಾರಿಸಿಕೊಳ್ಳಬೇಕು.
    * ನಂತರ ತವಾಗೆ ತುಪ್ಪ ಹಾಕಿ ಬಿಸಿಯಾದಾಗ ಅದರಲ್ಲಿ ಕಡಲೆ ಹಿಟ್ಟು ಹಾಕಿ ಫ್ರೈ ಮಾಡಿ. ಬಳಿಕ ಇದೇ ರೀತಿ ಎಳ್ಳು ಮತ್ತು ತೆಂಗಿನ ತುರಿ ಹಾಕಿ ಫ್ರೈ ಮಾಡಿಕೊಳ್ಳಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ನಂತರ ಉಳಿದ ತುಪ್ಪವನ್ನು ಪ್ಯಾನ್‍ಗೆ ಹಾಕಿ 2 ನಿಮಿಷ ಬಿಸಿ ಮಾಡಿ. ಬಳಿಕ ಅದಕ್ಕೆ ಸ್ವಲ್ಪ ಬೆಲ್ಲ ಹಾಕಿ ಬೆಲ್ಲ ಕರಗುವಷ್ಟು ಹೊತ್ತು ಬಿಸಿ ಮಾಡಿ. ಫ್ರೈ ಮಾಡಿಟ್ಟ ಹಿಟ್ಟು, ಎಳ್ಳು ಮತ್ತು ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ


    * ಕೈಗೆ ತುಪ್ಪ ಸವರಿಕೊಂಡು ಆ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆ ಕಟ್ಟಿದರೆ ಲಾಡು ಸಿದ್ಧವಾಗುತ್ತದೆ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

  • ಮಕ್ಕಳಿಗೆ ಇಷ್ಟವಾಗುವ ಬಾಳೆಹಣ್ಣಿನ ದೋಸೆ ಮಾಡಿ ಸವಿಯಿರಿ

    ಮಕ್ಕಳಿಗೆ ಇಷ್ಟವಾಗುವ ಬಾಳೆಹಣ್ಣಿನ ದೋಸೆ ಮಾಡಿ ಸವಿಯಿರಿ

    ರಾಗಿ, ಗೋಧಿ ಎಂದು ವಿಧ ವಿಧವಾದ ದೋಸೆ ಮಾಡುವ ನಾವು ಬಾಳೆಹಣ್ಣಿನ ದೋಸೆ ಮಾಡಬಹುದು. ಹಾಗೆಯೇ ಬಾಳೆಹಣ್ಣಿನ ದೋಸೆಯ ಬಗ್ಗೆ ಗೊತ್ತಾ? ಹೌದು, ಬಾಳೆಹಣ್ಣಿನ್ನು ಬಳಸಿ ನೀವು ರುಚಿ ರುಚಿಯಾದ ದೋಸೆ ಮಾಡಬಹುದು. ನೀವು ಮಕ್ಕಳಿಗೆ ಇಷ್ಟವಾಗುವ ಸಿಹಿಯಾದ ಈ ದೋಸೆಯನ್ನು ಮಾಡಲು ಟ್ರೈ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಬಾಳೆಹಣ್ಣು- 8
    * ಗೋಧಿ ಹಿಟ್ಟು- 1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಬೆಲ್ಲ – ಸ್ವಲ್ಪ
    * ತುಪ್ಪ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲಿಗೆ ಬಾಳೆಹಣ್ಣನ್ನು ತೆಗೆದುಕೊಂಡು ಚನ್ನಾಗಿ ಕಿವುಚಿಕೊಂಡು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
    * ಬಾಳೆ ಹಣ್ಣಿನ ಪೇಸ್ಟ್‍ಗೆ ಸ್ವಲ್ಪ ಗೋಧಿ ಹಿಟ್ಟು ಹಾಗೂ ಸ್ವಲ್ಪ ನೀರನ್ನು ಹಾಕುತ್ತಾ ಕಲಸಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಚನ್ನಾಗಿ ಕಲಸಿದ ನಂತರ ಈ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಬರಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
    * ಗೋಧಿ ದೋಸೆಯ ಹಿಟ್ಟು ಸಿದ್ದವಾಗಿದೆ. ಈಗ ಒಂದು ಕಾವಲಿ ತೆಗೆದುಕೊಂಡು ಕಾಯಲು ಇಡಿ. ಅದಕ್ಕೆ ಮೇಲೆ ತುಪ್ಪ ಸವರಿ ದೋಸೆ ಆಕಾರದಲ್ಲಿ ಈ ಮಿಶ್ರಣವನ್ನು ಹಾಕಿದರೆ ರುಚಿಯಾದ ಬಾಳೆಹಣ್ಣಿನ ದೋಸೆ ಸವಿಯಲು ಸಿದ್ಧವಾಗುತ್ತದೆ.

  • ಸ್ಪೆಷಲ್ ಚುರುಮುರಿ ಸಖತ್ ಟೇಸ್ಟ್

    ಸ್ಪೆಷಲ್ ಚುರುಮುರಿ ಸಖತ್ ಟೇಸ್ಟ್

    ರೋಡ್ ಸೈಡ್ ಫುಡ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪಾನಿಪುರಿ, ಸೇವ್ ಪುರಿ, ಆಲೂ ಚಾಟ್, ಗೋಲ್ ಗಪ್ಪೆ ಅಥವಾ ಭೇಲ್ ಪುರಿ ಹೀಗೆ ಕೆಲವು ಅತ್ಯುತ್ತಮ ಬೀದಿ ಆಹಾರಗಳು ನಿಜಕ್ಕೂ ರುಚಿಕರವಾಗಿದೆ. ಸಂಜೆಯ ತಿಂಡಿಯಾಗಿ ಬಿಸಿ ಕಾಫಿಯ ಜೊತೆ ಹೆಚ್ಚಾಗಿ ಸೇವಿಸಲಾಗುತ್ತದೆ. ಸಂಜೆಯ ಸಮಯದಲ್ಲಿ ಅದರಲ್ಲೂ ಮಳೆ ಬರುವಾಗ ಈ ಚುರುಮುರಿ ಸೂಪರ್ ಆಗಿರುತ್ತದೆ.


    ಬೇಕಾಗುವ ಸಾಮಗ್ರಿಗಳು:
    * ಮಂಡಕ್ಕಿ- 4 ಕಪ್
    * ಈರುಳ್ಳಿ- 2
    * ಶೇಂಗಾ- ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಸೇವ್- ಸ್ವಲ್ಪ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಹಸಿಮೆಣಸು- 2
    * ಟೊಮ್ಯಾಟೋ- 1
    * ಜೀರಿಗೆ- 1 ಚಮಚ
    * ಖಾರದ ಪುಡಿ- 1 ಚಮಚ
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಒಂದು ಪಾತ್ರೆಯನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ನಂತರ ಈರುಳ್ಳಿ, ಶೇಂಗಾ, ಹಸಿಮೆಣಸು, ಟೊಮ್ಯಾಟೋ, ಜಿರಿಗೆ ಹಾಗೂ ಸ್ವಲ್ಪ ಅಚ್ಚ ಖಾರದ ಪುಡಿ ಹಾಕಿ ಚನ್ನಾಗಿ ಮಿಶ್ರಣ ಮಾಡಿ. ನಿಮಗೆ ಇಷ್ಟವಿದ್ದರೆ ಇದಕ್ಕೆ ಕ್ಯಾರೆಟ್ ತುರಿದು ಹಾಕಬಹುದು.

    * ನಂತರ ಚಾಟ್ ಮಸಾಲಾ ಸಹ ಹಾಕಿದರೆ ಹೆಚ್ಚಿನ ರುಚಿ ಸಿಗುತ್ತದೆ.
    * ಇನ್ನು ಆ ಮಿಶ್ರಣಕ್ಕೆ ಮಂಡಕ್ಕಿ, ಉಪ್ಪು, ಕೊತ್ತಂಬರಿ ಹಾಕಿ ಕಲಸಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ನಂತರ ಉಪ್ಪು ಮತ್ತು ಖಾರದ ಅಗತ್ಯ ಇದೆಯಾ ನೋಡಿ ಅಗತ್ಯವಿದ್ದರೆ ಹಾಕಿ ಕಲಸಿದರೆ ರುಚಿ ರುಚಿಯಾದ ಚುರುಮುರಿ ಸಿದ್ಧವಾಗುತ್ತದೆ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

  • ಬಿಸ್ಕೆಟ್ ನಿಂದ ತಯಾರಿಸಿ ಸಿಹಿಯಾದ ಬರ್ಫಿ

    ಬಿಸ್ಕೆಟ್ ನಿಂದ ತಯಾರಿಸಿ ಸಿಹಿಯಾದ ಬರ್ಫಿ

    ಯಾವುದೇ ವಿಶೇಷವಿಲ್ಲ. ಆದರೂ ರುಚಿಯಾಗಿ ಎನಾದರೂ ತಿನ್ನಬೇಕು ಅನ್ನಿಸುತ್ತದೆ. ಇಂದು ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ  ಬರ್ಫಿ ಮಾಡಿ ಸವಿಯಿರಿ…

    ಬೇಕಾಗುವ ಸಾಮಗ್ರಿಗಳು:
    * ಪಾರ್ಲೆಜಿ ಬಿಸ್ಕೆಟ್ – 3 ಪ್ಯಾಕೆಟ್
    * ಸಕ್ಕರೆ – ಅ ಕಪ್
    * ತುಪ್ಪ- ಅರ್ಧ ಕೆಜಿ
    * ಹಾಲಿನ ಪುಡಿ- 2 ಚಮಚ
    * ಹಾಲು- 1 ಕಪ್
    * ಡ್ರೈಫ್ರೂಟ್ಸ್- ಅರ್ಧ ಕಪ್

    ಮಾಡುವ ವಿಧಾನ:
    * ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಪಾರ್ಲೆಜಿ ಬಿಸ್ಕೆಟ್‍ಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವಂತೆ ಕರಿದುಕೊಳ್ಳಿ.
    * ನಂತರ ತುಪ್ಪದಲ್ಲಿ ಹುರಿದ ಬಿಸ್ಕೇಟ್‍ನ್ನು ಮಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಇದನ್ನೂ ಓದಿ:   ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    biscuit barfi

    * ಬಿಸ್ಕೇಟ್ ಪುಡಿಯನ್ನು ಹಾಲಿನ ಪುಡಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
    * ಮತ್ತೊಂದು ಬಾಣೆಲೆ ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಳ್ಳಿ. ಪಾಕ ಗಟ್ಟಿಯಾದ ಬಳಿಕ ಹಾಲಿನ ಪುಡಿ, ಬಿಸ್ಕೆಟ್ ಪುಡಿಯನ್ನು ಹಾಕಿ ಮಿಶ್ರಣವನ್ನು ಹಾಕಿ ಕುದಿಯಲು ಬಿಡಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ತಟ್ಟೆಯೊಂದಕ್ಕೆ ತುಪ್ಪವನ್ನು ಸವರಿ ಮಿಶ್ರಣವನ್ನು ಹಾಕಿ ಕದಡಿಕೊಂಡು, ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು, ಡ್ರೈಫ್ರೂಟ್ಸ್ ಗಳಿಂದ ಅಲಂಕರಿಸಿದರೆ, ರುಚಿಕರವಾದ ಬಿಸ್ಕೆಟ್ ಬರ್ಫಿ ಸವಿಯಲು ಸಿದ್ಧವಾಗುತ್ತದೆ.  ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

  • ಸಖತ್ ಟೇಸ್ಟ್ ಆಗಿರುವ ಬಿಸಿ ಬಿಸಿಯಾದ ಕಿಚಡಿ ಮಾಡಿ

    ಸಖತ್ ಟೇಸ್ಟ್ ಆಗಿರುವ ಬಿಸಿ ಬಿಸಿಯಾದ ಕಿಚಡಿ ಮಾಡಿ

    ಬೆಳಗ್ಗೆ, ಸಂಜೆ ಯಾವ ಹೊತ್ತಿನಲ್ಲಿ ಬೇಕಾದರೂ ಸವಿಯಬಹುದಾದ ರೆಸಿಪಿ ಹುಡುಕುತ್ತಿದ್ದೀರಾ? ಪೌಷ್ಠಿಕಾಂಶದ ಆಹಾರ, ತಿನ್ನಲು ರುಚಿಕರವಾಗಿರುವ ಮತ್ತು ಮಕ್ಕಳಿಗೆ ತುಂಬಾನೇ ಇಷ್ಟವಾಗುವುದು ಕಿಚಡಿಯಾಗಿದೆ. ಈ ಅಡುಗೆಯನ್ನು ಮಾಡುವುದು ತುಂಬಾ ಸುಲಭ ಮತ್ತು ನಾಲಿಗೆಗೆ ರುಚಿ ನೀಡುವ ಅಡುಗೆಯಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಹೆಸರು ಬೇಳೆ- ಅರ್ಧ ಕಪ್
    * ತೋಗರಿ ಬೇಳೆ- ಅರ್ಧ ಕಪ್
    * ಅಕ್ಕಿ – 2 ಕಪ್
    * ಕಾಳು ಮೆಣಸು- ಸ್ವಲ್ಪ
    * ಈರುಳ್ಳಿ 2
    * ಟೊಮೆಟೋ- 2
    * ಒಣ ಮೆಣಸು- 3
    * ಬಾದಾಮಿ/ಪಿಸ್ತಾ ಪುಡಿ- 1 ಚಮಚ
    * ಜೀರಿಗೆ ಪುಡಿ- 1 ಚಮಚ
    * ದನಿಯಾ ಪುಡಿ- 1 ಚಮಚ
    * ಅರಿಶಿಣ ಪುಡಿ- 1 ಚಮಚ
    * ಲವಂಗ- 2
    * ತುಪ್ಪ- 3
    * ಕರಿಬೇವು-
    * ಪಲಾವ್ ಎಲೆ
    * ರುಚಿಗೆ ತಕ್ಕಷ್ಟು ಉಪ್ಪು

    Kichadi

    ಮಾಡುವ ವಿಧಾನ:
    * ಕುಕ್ಕರಿನಲ್ಲಿ ಹೆಸರು ಬೇಳೆ, ತೋಗರಿ ಬೇಳೆ, ಅಕ್ಕಿ, ಟೊಮೆಟೊ, ಈರುಳ್ಳಿ, ಕಾಳು ಮೆಣಸು, ರುಚಿಗೆ ತಕ್ಕ ಉಪ್ಪು, ಅರಿಶಿಣ ಹಾಕಿ 4 ಲೋಟ ನೀರು ಹಾಕಿ ಬೇಯಿಸಿಕೊಳ್ಳಬೇಕು.  ಇದನ್ನೂ ಓದಿ: ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟ್ರಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

    Kichadi

    * ಈಗ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಸ್ವಲ್ಪ ಜೀರಿಗೆ, ಒಣ ಮೆಣಸು ಮುರಿದು ಹಾಕಿ, ನಂತರ ಪಲಾವ್ ಎಲೆ ಅಥವಾ ಸ್ವಲ್ಪ ಕರಿಬೇವು ಹಾಕಿ ಲವಂಗ ಸೇರಿಸಿ ಫ್ರೈ ಮಾಡಬೇಕು.

    * ನಂತರ ಬೇಯಿಸಿದ ಅಕ್ಕಿ- ಬೇಳೆ ಸೇರಿಸಿ, ಅದಕ್ಕೆ ಸ್ವಲ್ಪ ಖಾರ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಡ್ರೈಫ್ರೂಟ್ಸ್ ಪುಡಿ ಸೇರಿಸಿ ಕುದಿಸಿದರೆ ಆರೊಗ್ಯಕರವಾದ ಕಿಚಡಿ ಸಿದ್ಧವಾಗುತ್ತದೆ. ಇದನ್ನೂ ಓದಿ: ಆಫ್ರಿಕಾದಲ್ಲಿ ರೂಪಾಂತರ ಕೋವಿಡ್ ತಳಿ ಪತ್ತೆ – ಕಟ್ಟೆಚ್ಚರಕ್ಕೆ ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ

     

  • ಮಸಾಲಾ ಚಪಾತಿ ಸಖತ್ ರುಚಿಯಾಗಿದೆ ನೀವೂ ಒಮ್ಮೆ ಟ್ರೈ ಮಾಡಿ

    ಮಸಾಲಾ ಚಪಾತಿ ಸಖತ್ ರುಚಿಯಾಗಿದೆ ನೀವೂ ಒಮ್ಮೆ ಟ್ರೈ ಮಾಡಿ

    ತಂಪಾದ ವಾತಾವರಣಕ್ಕೆ ಏನಾದರೂ ಬಿಸಿಬಿಸಿ, ರುಚಿಯಾದ ಖಾದ್ಯ ತಿನ್ನಲಿದ್ದರೆ ಬಹಳ ಚೆನ್ನಾಗಿರುತ್ತದೆ ಎಂದು ಹೆಚ್ಚಿನವರಿಗೆ ಅನಿಸುವುದುಂಟು. ಆದರೆ ಅದೇ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಬಿಸಿ ಬಿಸಿಯಾದ ಮಸಾಲಾ ಚಪಾತಿ ಟ್ರೈ ಮಾಡಬಹುದು. ನೀವು ಇಷ್ಟು ದಿನ ಮಾಡುತ್ತಿದ್ದ ಚಪಾತಿಗಿಂತ ವಿಭಿನ್ನವಾಗಿತ್ತದೆ ಮತ್ತು ಸಖತ್ ರುಚಿಯಾಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಈರುಳ್ಳಿ- ಅರ್ಧ ಕಪ್
    * ಎಲೆಕೋಸು- ಅರ್ಧ ಕಪ್
    * ಕ್ಯಾರೆಟ್- ಅರ್ಧಕಪ್
    * ಕ್ಯಾಪ್ಸಿಕಂ- ಕಾಲು ಕಪ್
    * ಹಸಿಮೆಣಸಿನಕಾಯಿ- 3
    * ಕರೀಬೇವು, ಕೊತ್ತಂಬರಿ ಸೊಪ್ಪು- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಶುಂಠಿ ಪೇಸ್ಟ್- ಸ್ವಲ್ಪ
    * ದನಿಯಾ ಪುಡಿ- ಅರ್ಧ ಚಮಚ
    * ಖಾರದಪುಡಿ- ಅರ್ಧ ಚಮಚ
    * ಗರಂ ಮಸಾಲಾ- ಸ್ವಲ್ಪ
    * ಜೀರಿಗೆ ಪುಡಿ- ಸ್ವಲ್ಪ
    * ಗೋಧಿ ಹಿಟ್ಟು – 2 ಕಪ್
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಒಂದು ಪಾತ್ರೆ ಈರುಳ್ಳಿ, ಎಲೆಕೋಸು, ಕ್ಯಾರೆಟ್, ಕ್ಯಾಪ್ಸಿಕಂ, ಹಸಿಮೆಣಸಿನಕಾಯಿ, ಕರೀಬೇವು, ಕೊತ್ತಂಬರಿ ಸೊಪ್ಪು, ಶುಂಠಿ ಪೇಸ್ಟ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸ್ವಲ್ಪ ಮಿಶ್ರಣ ಮಾಡಿಕೊಳ್ಳಬೇಕು.
    * ನಂತರ ಅದೇ ಮಿಶ್ರಣಕ್ಕೆ ದನಿಯಾ ಪುಡಿ, ಖಾರದಪುಡಿ, ಗರಂ ಮಸಾಲಾ, ಜೀರಿಗೆ ಪುಡಿ ಹಾಗೂ ಗೋಧಿ ಹಿಟ್ಟು ಹಾಕಿ ನೀರನ್ನು ಸೇರಿಸುತ್ತಾ ಮೃದುವಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ಈಗ ಈ ಮಿಶ್ರಣವನ್ನು ಚಪಾತಿಯ ಆಕಾರದನ್ನು ಲಟ್ಟಿಸಿಕೊಂಡಿಟ್ಟುಕೊಂಡಿರಬೇಕು.
    * ನಂತರ ತವಾಗೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಮಾಡಿ ಒಂದೊಂದೆ ಮಸಾಲಾ ಚಪಾತಿಯನ್ನು ಬೇಯಿಸಿಕೊಳ್ಳಬೇಕು. ಇದನ್ನೂ ಓದಿ:   ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

  • ರುಚಿಕರವಾದ ಮೊಟ್ಟೆ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ

    ರುಚಿಕರವಾದ ಮೊಟ್ಟೆ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ

    ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ. ನಾನ್‍ವೆಜ್ ಅಡುಗೆಯಲ್ಲಿ ಮೊಟ್ಟೆ ಬಿರಿಯಾನಿ ಸರಳವಾಗಿ ಮಾಡುವ ಅಡುಗೆಯಲ್ಲಿ ಒಂದಾಗಿದೆ. ಈ ಅಡುಗೆಗೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ. ನಾನ್‍ವೆಜ್ ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಮೊಟ್ಟೆ ಬಿರಿಯಾನಿ ಮಾಡಿ, ಅದರ ರುಚಿ ಸವಿದು ಎಂಜಾಯ್ ಮಾಡಿ.

    ಬೇಕಾಗುವ ಪದಾರ್ಥಗಳು

    ಅಕ್ಕಿ- 2ಕಪ್‌
    ಮೊಟ್ಟೆ- 5
    ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ- ಸ್ವಲ್ಪ
    ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
    ಹಸಿಮೆಣಸಿನ ಕಾಯಿ- 3
    ಈರುಳ್ಳಿ- 2
    ಟೊಮೆಟೋ- 2
    ಕೊಬ್ಬಂಬರಿ ಸೊಪ್ಪು- ಸ್ವಲ್ಪ
    ಮೊಸರು – ಅರ್ಧ ಕಪ್‌
    ದನಿಯಾ ಪುಡಿ- 1 ಚಮಚ
    ಖಾರದ ಪುಡಿ- 1 ಚಮಚ
    ಬಿರಿಯಾನಿ ಮಸಾಲೆ ಪುಡಿ- 2 ಚಮಚ
    ಅರಿಶಿಣದ ಪುಡಿ- ಅರ್ಧ ಚಮಚ
    ರುಚಿಗೆ ತಕ್ಕಷ್ಟು ಉಪ್ಪು
    ಅಡುಗೆ ಎಣ್ಣೆ- ಅಧ ಕಪ್‌
    ತುಪ್ಪ- 2 ಚಮಚ

    ಮಾಡುವ ವಿಧಾನ:
    *ಮೊದಲಿಗೆ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಗೂ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ನಂತರ ಇದಕ್ಕೆ ಚಕ್ಕೆ, ಲವಂಗ, ಪಲಾವ್ ಎಲೆ, ಏಲಕ್ಕಿ, ಕಲ್ಲು ಹೂ ಹಾಕಿ ಫ್ರೈ ಮಾಡಿಕೊಳ್ಳಬೇಕು.

    * ನಂತರ ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೋವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.

    *ತದನಂತರ ಖಾರದ ಪುಡಿ, ಅರಿಶಿಣ, ದನಿಯಾ ಪುಡಿ ಹಾಗೂ ಬಿರಿಯಾನಿ ಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.

    * ಬಳಿಕ ಮೊಸಲು ಕುದಿಸಿ. ಅಳತೆಗೆ ತಕ್ಕಷ್ಟು ನೀರು ಹಾಗೂ ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2-3 ಕೂಗು ಕೂಗಿಸಿಕೊಂಡು, ಬೇಯಿಸಿದ ಮೊಟ್ಟೆಗಳನ್ನು ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಬಿರಿಯಾನಿ ಸವಿಯಲು ಸಿದ್ಧ.

  • ಬೆಳಗ್ಗಿನ ತಿಂಡಿಗೆ ಮಾಡಿ ಶೇಂಗಾ ಬಾತ್

    ಬೆಳಗ್ಗಿನ ತಿಂಡಿಗೆ ಮಾಡಿ ಶೇಂಗಾ ಬಾತ್

    ಬೇಕಾಗುವ ಸಾಮಗ್ರಿಗಳು:
    * ಶೇಂಗಾ- ಅರ್ಧ ಕಪ್
    * ಕಡಲೆಬೇಳೆ- 1 ಚಮಚ
    * ಮೆಣಸು- 1 ಚಮಚ
    * ಜೀರಿಗೆ- 1 ಚಮಚ
    * ಕರಿಬೇವು ಸ್ವಲ್ಪ
    * ಒಣಮೆಣಸಿನಕಾಯಿ- ಮೂರು
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಒಂದು ಬಾಣಲೆಯನ್ನು ಬಿಸಿಗಿಟ್ಟು ಅದಕ್ಕೆ ಮೂರರಿಂದ ನಾಲ್ಕು ಚಮಚ ಎಣ್ಣೆ ಸೇರಿಸಿ ಸಾಸಿವೆ, ಕಡಲೆಬೇಳೆ, ಶೇಂಗಾವನ್ನು ಹುರಿದು ನಂತರ ಪುಡಿ ಮಾಡಿಕೊಂಡಿರಬೇಕು.
    * ಅಡುಗೆ ಎಣ್ಣೆ,ಹುರಿದ ಮಸಾಲೆ, ಕರಿಬೇವು, ಒಣಮೆಣಸಿನಕಾಯಿ, ಅರ್ಧ ಚಮಚ ಇಂಗು ಸೇರಿಸಿ ಒಗ್ಗರಣೆ ತಯಾರಿಸಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಇದಕ್ಕೆ ಮೊದಲೇ ತಯಾರಿಸಿದ ಅನ್ನವನ್ನು ಸೇರಿಸಿ ಕಾಲು ಚಮಚ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ.
    *ಬೇಕಿದ್ದಲ್ಲಿ ಅರ್ಧ ನಿಂಬೆ ರಸ ಸೇರಿಸಿಕೊಳ್ಳಬಹುದು. ಚೆನ್ನಾಗಿ ಕಲೆಸಿದ ನಂತರ ಅನ್ನವನ್ನು 2 ನಿಮಿಷ ಬಿಸಿ ಮಾಡಿದರೆ ರುಚಿಯಾದ ಶೇಂಗಾ ಬಾತ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮಟನ್ ದೋಸೆ ಮಾಡುವ ವಿಧಾನ ಮಾಂಸಪ್ರಿಯರಿಗಾಗಿ