Tag: recipe

  • ಘಮ, ಘಮಿಸುವ ರುಚಿಯಾದ ಜೀರಾ ರೈಸ್ ಮಾಡುವ ವಿಧಾನ

    ಘಮ, ಘಮಿಸುವ ರುಚಿಯಾದ ಜೀರಾ ರೈಸ್ ಮಾಡುವ ವಿಧಾನ

    ನಾವು ಬೆಳಗಿನ ತಿಂಡಿ ವಿಭಿನ್ನವಾಗಿ ಹೇಗೆ ಮಾಡುವುದು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ. ಹಾಗೆಯೇ ನಾವು ಬಳಸುವ ಪದಾರ್ಥಗಳು ಹೆಚ್ಚು ವಿಭಿನ್ನವಾಗಿರುತ್ತದೆ. ಇನ್ನು ನಾವು ಹೆಚ್ಚು ರೈಸ್​ ಪದಾರ್ಥಗಳನ್ನು ಮಾಡುತ್ತೇವೆ. ನೀವೂ ಕೇವಲ 10 ನಿಮಿಷದಲ್ಲಿಯೇ ಜೀರಾ ರೈಸ್ ಮಾಡಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ- 1ಕಪ್
    * ತುಪ್ಪ- ಅರ್ಧ ಕಪ್
    * ಪಲಾವ್ ಎಲೆ- 2
    * ಚಕ್ಕೆ, ಲವಂಗ- ಸ್ವಲ್ಪ
    * ಜೀರಿಗೆ- 4 ಚಮಚ
    * ಹಸಿಮೆಣಸಿನಕಾಯಿ- 2
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿಸೊಪ್ಪು- ಸ್ವಲ್ಪ


    ಮಾಡುವ ವಿಧಾನ:
    * ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷಗಳ ಕಾಲ ನೆನೆಸಿಡಿ.
    * ಕುಕ್ಕರ್‌ಗೆ ತುಪ್ಪ ಹಾಕಿ ಬಿಸಿ ಮಾಡಿ ನಂತರ ಪಲಾವ್ ಎಲೆ, ಚಕ್ಕೆ, ಲವಂಗ, ಜೀರಿಗೆ, ಹಸಿಮೆಣಸಿನಕಾಯಿಯನ್ನು ಕತ್ತರಿಸಿ ಹಾಕಿ ಸ್ವಲ್ಪ ಫ್ರೈ ಮಾಡಿ ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ


    * ನಂತರ ಅಕ್ಕಿಯನ್ನು ಹಾಕಿ ಸ್ವಲ್ಪ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ಇದನ್ನೂ ಓದಿ:  ಬಸ್ಸಾರು ಮಾಡುವ ಸರಳ ವಿಧಾನ ನಿಮಗಾಗಿ

    * ನಂತರ ಇದಕ್ಕೆ 2 ಕಪ್ ನೀರು ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊತ್ತಂಬರಿ ಸೇರಿಸಿ ಬೇಯಿಸಿದರೆ ರುಚಿಯಾದ ಜೀರಾ ರೈಸ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ

  • ಬಸ್ಸಾರು ಮಾಡುವ ಸರಳ ವಿಧಾನ ನಿಮಗಾಗಿ

    ಬಸ್ಸಾರು ಮಾಡುವ ಸರಳ ವಿಧಾನ ನಿಮಗಾಗಿ

    ಸ್ಸಾರು ರುಚಿಯ ಜೊತೆಗೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. 3-4 ಬಗೆಯ ಸೊಪ್ಪನ್ನು ಬಳಸಿ ಈ ಬಸ್ಸಾರನ್ನು ಮಾಡಲಾಗುವುದು. ರುಬ್ಬಿ ಮಾಡುವ ಈ ಬಸ್ಸಾರನ್ನು ಮುದ್ದೆ ಅಥವಾ ಅನ್ನದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಬಸ್ಸಾರು ಮಾಡುವ ಸರಳ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ತೊಗರಿಬೇಳೆ – ಒಂದು ಕಪ್
    * ಸಬ್ಬಸ್ಸಿಗೆ ಸೊಪ್ಪು, ಬೆರೆಕೆಸೊಪ್ಪು, ದಂಟಿನಸೊಪ್ಪು(ಎಲ್ಲಾ ಒಂದೊಂದು ಕಟ್ಟು)
    * ಈರುಳ್ಳಿ -1
    * ಬೆಳ್ಳುಳ್ಳಿ-1
    * ಜೀರಿಗೆ -1 ಚಮಚ
    * ಮೆಣಸು – 5 ರಿಂದ 6
    * ಅರಿಶಿಣ – ಸ್ವಲ್ಪ
    * ಹುಣಸೆಹಣ್ಣು- ಸ್ವಲ್ಪ
    * ಖಾರದ ಪುಡಿ- 4 ಚಮಚ
    * ಸಾಂಬಾರ್ ಪುಡಿ – ಅರ್ಧ ಚಮಚ
    * ಕೊತ್ತಂಬರಿಸೊಪ್ಪು- ಸ್ವಲ್ಪ
    * ಕರಿಬೇವು- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ

    ಮಾಡುವ ವಿಧಾನ:
    * ಮೊದಲು ಸೊಪ್ಪನ್ನು ಚೆನ್ನಾಗಿ ಬಿಡಿಸಿಕೊಂಡು, ತೊಳೆದು, ಸಣ್ಣಗೆ ಹೆಚ್ಚಿಕೊಳ್ಳಿ.
    * ಈಗ ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಳೆದ ತೊಗರಿಬೇಳೆ, ಸೊಪ್ಪು, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ, ಬೇಳೆ ಬೇಯಲು ಬಿಡಿ. ಬೇಳೆಯನ್ನು ತುಂಬಾ ಬೇಯಿಸಬೇಡಿ.

    * ನಂತರ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು ಜಾಲರಿಯಲ್ಲಿ ಸೋಸಿಕೊಂಡು ಸೊಪ್ಪಿನ ನೀರನ್ನು ಮತ್ತು ಸೊಪ್ಪನ್ನು ಬೇರೆ ಬೇರೆಯಾಗಿ ತೆಗೆದಿಟ್ಟುಕೊಳ್ಳಿ.

    * ಈರುಳ್ಳಿ, ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಸ್ವಲ್ಪ ಹುರಿದುಕೊಂಡು, ಅದಕ್ಕೆ ಸ್ವಲ್ಪ ಬೇಯಿಸಿದ ಬೇಳೆ ಮತ್ತು ಸೊಪ್ಪಿನ ಮಿಶ್ರಣವನ್ನು, ಕಾಯಿತುರಿ ಜೀರಿಗೆ, ಖಾರದಪುಡಿ, ಮೆಣಸು, ಸಾರಿನಪುಡಿ, ಹುಣಸೆಹಣ್ಣು, ಕೊತ್ತುಂಬರಿಸೊಪ್ಪು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಬೇಕು.

    * ನಂತರ ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ ಹಾಕಿ, ಕರಿಬೇವು, ಇಂಗು, ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಹೊತ್ತು ಉರಿದು ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ, ಬಸಿದಿಟ್ಟುಕೊಂಡ ಸ್ವಲ್ಪ ಸೊಪ್ಪನ್ನು ಹಾಕಿ, ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ. ಬಸ್ಸಾರು ತಯಾರಾಗುತ್ತದೆ.

  • ರುಚಿಯಾಗಿ ಹೀರೆಕಾಯಿ ಪಲ್ಯ ಮಾಡುವುದು ಹೇಗೆ ಗೊತ್ತಾ?

    ರುಚಿಯಾಗಿ ಹೀರೆಕಾಯಿ ಪಲ್ಯ ಮಾಡುವುದು ಹೇಗೆ ಗೊತ್ತಾ?

    ರೊಟ್ಟಿ ಮಾಡಿದಾಗಲೆಲ್ಲ ಅದರ ಜೊತೆ ಏನು ಮಾಡುವುದು ಎಂಬ ತಲೆನೋವಿದ್ದರೆ, ನಿಮಗೆ ಇಲ್ಲೊಂದು ರುಚಿಕರವಾದ ರೆಸಿಪಿ ಇದೆ. ಅದೇ ಹೀರೆಕಾಯಿ ಪಲ್ಯವಾಗಿದೆ.  ಹೀರೆಕಾಯಿ ಪಲ್ಯ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಹೀರೆಕಾಯಿ- 2
    * ಅಡುಗೆ ಎಣ್ಣೆ- 2 ದೊಡ್ಡ ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಸಾಸಿವೆ – 1 ಚಮಚ
    * ಜೀರಿಗೆ – ಅರ್ಧ ಚಮಚ
    * ಈರುಳ್ಳಿ – 1
    * ಟೊಮ್ಯಾಟೋ- 2
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
    * ಅರಿಶಿಣ ಪುಡಿ- ಸ್ವಲ್ಪ
    * ಖಾರದ ಪುಡಿ- 1 ಚಮಚ
    * ಗರಂ ಮಸಾಲಾ ಪುಡಿ- 1 ಚಮಚ
    * ಕಸೂರಿ ಮೇಥಿ-ಸ್ವಲ್ಪ

    ಮಾಡುವ ವಿಧಾನ:
    * ಟೊಮ್ಯಾಟೋ, ಹೀರೆಕಾಯಿ ಚೆನ್ನಾಗಿ ತೊಳೆದು ಸಣ್ಣದಾಗಿ ಕಟ್ ಮಾಡಿಕೊಳ್ಳಿ.

    * ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಕಾಯಿಸಿ. ಸಾಸಿವೆ, ಜೀರಿಗೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮ್ಯಾಟೋ ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ


    * ನಂತರ ಹೆಚ್ಚಿದ ಹೀರೆಕಾಯಿ ಹಾಕಿ ಹಾಗೂ ಚಿಟಿಕೆ ಉಪ್ಪನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದನ್ನೂ ಓದಿ:  ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ
    * ನಂತರ ಅದಕ್ಕೆ ಗರಂ ಮಸಾಲಾ ಪುಡಿ, ಖಾರದ ಪುಡಿ, ಕಸೂರಿ ಮೇಥಿ, ಅರಿಶಿಣ ಪುಡಿ ಹಾಕಿ ಬೇಯಿಸಿದರೆ ರುಚಿ ರುಚಿಯಾದ ಹೀರೆಕಾಯಿ ಪಲ್ಯ ಸವಿಯಲು ಸಿದ್ಧವಾಗುತ್ತದೆ.

  • ನೀವು ಹೀಗೆ ಮಸಾಲೆ ಪರೋಟಾ ಮಾಡಿದ್ರೆ ಮಕ್ಕಳಿಗೆ ಸಖತ್ ಇಷ್ಟವಾಗುತ್ತೆ- ಒಮ್ಮೆ ಟ್ರೈ ಮಾಡಿ

    ನೀವು ಹೀಗೆ ಮಸಾಲೆ ಪರೋಟಾ ಮಾಡಿದ್ರೆ ಮಕ್ಕಳಿಗೆ ಸಖತ್ ಇಷ್ಟವಾಗುತ್ತೆ- ಒಮ್ಮೆ ಟ್ರೈ ಮಾಡಿ

    ನಾವು ಹೇಗೆ ದೋಸಾ, ಇಡ್ಲಿ ಮತ್ತು ವಡಾ ಮಾಡಿಕೊಂಡು ತಿನ್ನಲು ಇಷ್ಟ ಪಡುತ್ತೇವೆ. ಕೆಲವೊಮ್ಮೆ ನಮಗೆ ಉತ್ತರ ಭಾರತೀಯ ಶೈಲಿಯ ತಿಂಡಿಗಳು ಸಹ ಇಷ್ಟವಾಗುತ್ತದೆ. ಅದರಲ್ಲೂ ಪರೋಟಾ ಎಲ್ಲರ ನೆಚ್ಚಿನ ತಿಂಡಿಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಪರೋಟಾಗಳಲ್ಲಿ ಸಹ ಹಲವಾರು ವಿಧಗಳಲ್ಲಿ ಮಾಡುತ್ತೇವೆ. ನಾವು ಇಂದು ರುಚಿಯಾದ ಮಸಾಲೆ ಪರೋಟಾವನ್ನು ಮಾಡುವ ವಿಧಾನ ತಿಳಿಸಿಕೊಡುತ್ತಿದ್ದೇವೆ.

    ಬೇಕಾಗುವ ಸಾಮಗ್ರಿಗಳು:
    * ಬೆಳ್ಳುಳ್ಳಿ ಪೇಸ್ಟ್ – 3 ಚಮಚ
    * ಜೀರಿಗೆ ಪುಡಿ – 1 ಚಮಚ
    * ಗರಮ್ ಮಸಾಲಾ -1 ಚಮಚ
    * ಈರುಳ್ಳಿ-1
    * ಕಾಳುಮೆಣಸು ಪುಡಿ- 1 ಚಮಚ
    * ದನಿಯಾ ಪುಡಿ – 3 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಗೋಧಿ ಹಿಟ್ಟು- 1 ಕಪ್
    * ಅರಿಶಿನ ಪುಡಿ- ಸ್ವಲ್ಪ
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಒಂದು ಬಾಣಲೆಯನ್ನು ತೆಗೆದುಕೊಂಡು ಅಡುಗೆ ಎಣ್ಣೆ ಹಾಕಿ ಕಾಯಿಸಿ, ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಗರಮ್ ಮಸಾಲಾ, ಕಾಳುಮೆಣಸು ಪುಡಿ, ದನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಅನ್ನು ಸೇರಿಸಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಬೇಕು. ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

    * ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಗೋಧಿ ಹಿಟ್ಟನ್ನು ಹಾಕಿ ಸಾಕಷ್ಟು ನೀರು, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕಲಸಿ.

    * ಅಗಲವಾಗಿ ಇದನ್ನು ಲಟ್ಟಿಸಿ ಮಧ್ಯಕ್ಕೆ ಬೇಯಿಸಿದ ಮಿಶ್ರಣವನ್ನು ಇಡಿ. ತದನಂತರ ಇದನ್ನು ಅರ್ಧಕ್ಕೆ ಮಡಚಿ. ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿ. ಇದನ್ನೂ ಓದಿ: ಸೂಪರ್ ಕೂಲ್ ದ್ರಾಕ್ಷಿ ಹಣ್ಣಿನ ಲಸ್ಸಿ ಮಾಡುವ ಸರಳ ವಿಧಾನ ನಿಮಗಾಗಿ

    * ಬಾಣಲೆಗೆ ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಹಾಕಿ. ಪರೋಟಾವನ್ನು ಬಿಸಿದರೆ ರುಚಿಯಾದ ಪರೋಟ ಸವಿಯಲು ಸಿದ್ಧವಾಗುತ್ತದೆ.

  • ಗುಂಟೂರು ಮೆಣಸಿನಕಾಯಿ ಬಳಸಿ ಮಾಡುವ ಚಿಕನ್ ಗ್ರೇವಿ ಸಖತ್ ಟೇಸ್ಟ್

    ಗುಂಟೂರು ಮೆಣಸಿನಕಾಯಿ ಬಳಸಿ ಮಾಡುವ ಚಿಕನ್ ಗ್ರೇವಿ ಸಖತ್ ಟೇಸ್ಟ್

    ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಆದ್ರೆ ಅನ್ನದೊಂದಿಗೆ ಚಿಕನ್ ಗ್ರೇವಿ ಇದ್ರೆ ಎಷ್ಟು ಚಂದ ಅಲ್ವಾ. ಗುಂಟೂರು ಮೆಣಸಿನಕಾಯಿ ಬಳಸಿ ಮಾಡುವ ರುಚಿಯಾದ ಚಿಕನ್ ಗ್ರೇವಿಯನ್ನು ನೀವೂ ಒಮ್ಮೆ ಟ್ರೈ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಚಿಕನ್- 1 ಕೆ.ಜಿ
    * ಗುಂಟೂರು ಮೆಣಸಿನಕಾಯಿ-20
    * ಈರುಳ್ಳಿ- 2
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- ಅರ್ಧ ಕಪ್
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಸಾಸಿವೆ- ಅರ್ಧ ಚಮಚ
    * ಅರಿಸಿಣ- ಅರ್ಧ ಚಮಚ
    * ಬೆಳ್ಳುಳ್ಳಿ, ಶುಂಠಿ ಪೇಸ್ಟ್- 2 ಚಮಚ
    * ಲವಂಗ, ಚಕ್ಕೆ- ಸ್ವಲ್ಪ
    * ಕೊತ್ತಂಬರಿ- ಸ್ವಲ್ಪ
    * ಕರಿಬೇವು-ಸ್ವಲ್ಪ

    ಮಾಡುವ ವಿಧಾನ:
    * ಪಾತ್ರೆಗೆ ಸ್ವಲ್ಪ ಅಡುಗೆ ಎಣ್ಣೆ ಹಾಕಿ, ಈರುಳ್ಳಿ, ಕರಿಬೇವು, ಸಾಸಿವೆ, ಅರಿಸಿಣ, ಉಪ್ಪು ಹಾಕಿ ಹಾಕಿ ಫ್ರೈ ಮಾಡಿ ಚಿಕನ್ ಹಾಕಿ ಬೇಯಲು ಬಿಡಬೇಕು. ಇದನ್ನೂ ಓದಿ: ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ

    * ಗುಂಟೂರು ಮೆಣಸಿನಕಾಯಿ, ಕೊತ್ತಂಬರಿಯನ್ನು ರುಬ್ಬಿಕೊಳ್ಳಬೇಕು.

    * ನಂತರ ಮತ್ತೋಂದು ಬಾಣಲೆಗೆ ಅಡುಗೆ ಎಣ್ಣೆ, ಕರಿಬೇವು, ಸಾಸಿವೆ, ಕೊತ್ತಂಬರಿ, ಚಕ್ಕೆ, ಲವಂಗ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿಕೊಡಿ. ಇದನ್ನೂ ಓದಿ: ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ

    * ನಂತರ ಈಗಾಗಲೇ ಬೇಯಿಸಿದ ಚಿಕನ್ ಹಾಗೂ ರುಬ್ಬಿದ ಮಿಶ್ರಣವನ್ನು ಹಾಕಿ, ಕುದಿಯಲು ಬಿಡಿ. ನಂತರ ತೆಂಗಿನಕಾಯಿ ತುರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

    * ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ, ಗುಂಟೂರು ಮೆಣಸಿನಕಾಯಿ ಬಳಸಿ ಮಾಡುವ ಚಿಕನ್ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.

  • ಬೆಂಡೆಕಾಯಿ ಹಾಕಿ ಮೊಸರು ಸಾರು ಮಾಡಿದ್ರೆ ಸಖತ್ ಟೇಸ್ಟ್-ನೀವೂ ಒಮ್ಮೆ ಟ್ರೈ ಮಾಡಿ

    ಬೆಂಡೆಕಾಯಿ ಹಾಕಿ ಮೊಸರು ಸಾರು ಮಾಡಿದ್ರೆ ಸಖತ್ ಟೇಸ್ಟ್-ನೀವೂ ಒಮ್ಮೆ ಟ್ರೈ ಮಾಡಿ

    ಮೊಸರನ್ನು ಅನ್ನಕ್ಕೆ ಹಾಕಿ ಊಟ ಮಾಡುವ ಬದಲು ನೀವು ಸಾಂಬಾರ್ ಮಾಡಿದರೆ ಸಖತ್ ಟೇಸ್ಟ್ ಆಗಿರುತ್ತದೆ. ಈ ಮೊಸರು ಬೆಂಡೆಕಾಯಿ ಸಾರಿನ ರುಚಿ ಒಂದು ಹಿಡಿ ಅನ್ನವನ್ನು ಹೆಚ್ಚೇ ನಿಮ್ಮ ಹೊಟ್ಟೆ ತಲುಪುವಂತೆ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

    ಬೇಕಾಗುವ ಸಾಮಗ್ರಿಗಳು:
    * ಬೆಂಡೆಕಾಯಿ- ಕಾಲು ಕೆಜಿ
    * ಈರುಳ್ಳಿ-1
    * ಟೊಮೆಟೋ-1
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಮೊಸರು 2 ಕಪ್ ಸ್ವಲ್ಪ
    * ತೆಂಗಿನ ತುರಿ- ಸ್ವಲ್ಪ
    * ಗೋಡಂಬಿ 6-7
    * ಗರಂ ಮಸಾಲ- 1 ಚಮಚ
    * ಖಾರದ ಪುಡಿ- 1ಚಮಚ
    * ಅರಿಶಿಣ ಪುಡಿ- ಅರ್ಧ
    * ಅಡುಗೆ ಎಣ್ಣೆ- 4 ಚಮಚ
    * ರುಚಿಗೆ ತಕ್ಕ ಉಪ್ಪು
    * ಇಂಗು, ಸಾಸಿವೆ, ಜೀರಿಗೆ, ಉದ್ದಿನ ಬೇಳೆ- ಸ್ವಲ್ಪ
    * ಒಣ ಮೆಣಸು-3
    * ಕರಿ ಬೇವು- ಸ್ವಲ್ಪ

    ಮಾಡುವ ವಿಧಾನ:
    * ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಬೆಂಡೆ ಕಾಯಿ ಹಾಕಿ ಫ್ರೈ ಮಾಡಿಕೊಳ್ಳಬೇಕು.
    * ಗೋಡಂಬಿ, ತೆಂಗಿನ ತುರಿ ಹಾಕಿ ನುಣ್ಣನೆ ರುಬ್ಬಿ. ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

    * ಬಾಣಲೆಯಲ್ಲಿ ಅಡುಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಇಂಗು ಹಾಕಿ, ಈರುಳ್ಳಿ, ಒಣ ಮೆಣಸನ್ನು ಹಾಕಿ ಫ್ರೈ ಮಾಡಿಕೊಳ್ಳಿ.

    * ನಂತರ ಈಗಾಗಲೇ ರುಬ್ಬಿದ ಗೋಡಂಬಿ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂ ಪುಡಿ, ಅರಿಶಿಣ ಪುಡಿ, ಮೊಸರು, ನೀರು ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿಕೊಳ್ಳಿ. ಇದನ್ನೂ ಓದಿ:  ಸರಳ, ರುಚಿಯಾದ ಬೆಳ್ಳುಳ್ಳಿ ಚಟ್ನಿ ಮಾಡಲು ಟ್ರೈ ಮಾಡಿ

    * ಸಾರು ಕುದಿ ಬರುವಾಗ ಫ್ರೈ ಮಾಡಿದ ಬೆಂಡೆ ಕಾಯಿ ಹಾಕಿದರೆ ರುಚಿಯಾದ ಮೊಸರು ಬೆಂಡೆಕಾಯಿ ಸಾರು ಸವಿಯಲು ಸಿದ್ಧವಾಗುತ್ತದೆ.

  • ಮೃದುವಾದ ರವೆ ಇಡ್ಲಿ ಮಾಡುವ ಸರಳ ವಿಧಾನ

    ಮೃದುವಾದ ರವೆ ಇಡ್ಲಿ ಮಾಡುವ ಸರಳ ವಿಧಾನ

    ಹೋಟೆಲ್, ರೆಸ್ಟೋರೆಂಟ್‍ನಲ್ಲಿ ಮಾಡುವ ಹಾಗೆ ನಾನೂ ಕೂಡ ಇಡ್ಲಿ ಮಾಡಬೇಕು. ಯಾಕೋ ನಾನ್ ಮಾಡೋ ಇಡ್ಲಿ ಕೆಲವೊಮ್ಮೆ ಗಟ್ಟಿ ಆಗಿ ಬಿಡುತ್ತವೆ. ಮಲ್ಲಿಗೆ ಥರ ಬರೋದೇ ಇಲ್ಲ ಎನ್ನುವವರೇ ಹೆಚ್ಚು. ನೀವು ಮಾಡೋ ಇಡ್ಲಿ ಮೃದುವಾಗಿ, ಉದುರುದುರಾಗಿ ಬರಬೇಕಾ? ಹಾಗಾದರೆ ನಾವು ಹೇಳುವಂತೆ ಒಮ್ಮೆ ಮಾಡಿ ನೋಡಿ.

    ಬೇಕಾಗಿರುವ ಸಾಮಗ್ರಿಗಳು:
    * ರವೆ – 1 ಕಪ್
    * ಮೊಸರು – 1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ – 2 ಚಮಚ
    * ಬೇಕಿಂಗ್ ಸೋಡಾ – ಸ್ವಲ್ಪ


    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ರವೆ, ಉಪ್ಪು, ಮೊಸರು ತೆಗೆದುಕೊಂಡು ರವೆಗೆ ಸೇರಿಸಿ ಅವೆರಡನ್ನು ಹದವಾಗಿ ಮಿಕ್ಸ್ ಮಾಡಿಕೊಳ್ಳಬೇಕು.ಇದನ್ನೂ ಓದಿ: ಹೋಟೆಲ್‍ನಲ್ಲಿ ಸಿಗುವ ಇಡ್ಲಿ ಸಾಂಬಾರ್ ಮಾಡುವುದು ಹೇಗೆ ಗೊತ್ತಾ?

    * ಇಡ್ಲಿ ಮಿಶ್ರಣಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ನೀರನ್ನು ಸೇರಿಸಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ನಂತರ ಇಡ್ಲಿ ಮಿಶ್ರಣದ ಹಿಟ್ಟನ್ನು ಎಣ್ಣೆ ಸವರಿದ ಇಡ್ಲಿ ಪಾತ್ರೆಗೆ ಹಾಕಿ ಸ್ಟೀಮರ್‌ನಲ್ಲಿ ನೀರನ್ನು ಮೊದಲು ಸ್ವಲ್ಪ ಕುದಿಸಿ ಅದರಲ್ಲಿ ಇಡ್ಲಿಗಳನ್ನು ಸುಮಾರು 14-15 ನಿಮಿಷಗಳ ಕಾಲ ಬೇಯಲು ಬಿಡಿ. ದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನಂತರ ಇಡ್ಲಿ ಬೆಂದಿದ್ಯಾ ಎಂದು ನೋಡುತ್ತಿರಬೇಕು. ನಂತರ ಸ್ಟೀಮರ್‌ನಿಂದ ಹೊರತೆಗೆದು ಹಾಟ್ ಬಾಕ್ಸ್‌ನಲ್ಲಿ ಇಟ್ಟರೆ ರುಚಿಯಾದ ಇಡ್ಲಿ ಸಿದ್ಧ.

  • ಈರುಳ್ಳಿ ಚಟ್ನಿಗೆ, ಬೆಲ್ಲ ಹಾಕಿ ಮಾಡಿದ್ರೆ ಹೇಗಿರುತ್ತೆ ಗೊತ್ತಾ?

    ಈರುಳ್ಳಿ ಚಟ್ನಿಗೆ, ಬೆಲ್ಲ ಹಾಕಿ ಮಾಡಿದ್ರೆ ಹೇಗಿರುತ್ತೆ ಗೊತ್ತಾ?

    ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಅಡುಗೆ ಪರಿಣಿತರ ಪ್ರತಿಭೆಯಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಈ ಚಟ್ನಿ ಬಾಯಲ್ಲಿ ನೀರೂರಿಸುವಂತಿರುತ್ತದೆ. ದೋಸೆ, ಚಪಾತಿ, ರೊಟ್ಟಿಗೆ ತೆಂಗಿನ ಕಾಯಿ ಚಟ್ನಿ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ತೆಂಗಿನಕಾಯಿ ತುರಿ- 1 ಕಪ್
    * ಈರುಳ್ಳಿ- 2
    * ಹಸಿಮೆಣಸು- 5
    * ರುಚಿಗೆ ತಕ್ಕಷ್ಟು ಉಪ್ಪು
    * ಹುಣಸೆಹಣ್ಣು- ಸ್ವಲ್ಪ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಬೆಲ್ಲ- ಸ್ವಲ್ಪ
    * ಅಡುಗೆ ಎಣ್ಣೆ- 2 ಚಮಚ
    * ಸಾಸಿವೆ- ಅರ್ಧ ಚಮಚ
    * ಇಂಗು- ಸ್ವಲ್ಪ
    * ಕರಿ ಬೇವು- ಸ್ವಲ್ಪ

    ಮಾಡುವ ವಿಧಾನ:
    * ಮಿಕ್ಸರಿಗೆ ಕಾಯಿ, ಈರುಳ್ಳಿ, ಉಪ್ಪು, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಬೆಲ್ಲ, ಹುಣಸೆಹಣ್ಣು ಹಾಗೂ ಸ್ವಲ್ಪ ನೀರನ್ನು ಹಾಕಿ ಸಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ಬೇಕಾದಲ್ಲಿ ಮತ್ತೆ ನೀರನ್ನು ಹಾಕಿ ತಿರುವಿದರೆ ಚಟ್ನಿ ಈಗ ರೆಡಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಒಂದು ಸೌಟಿಗೆ ಚಮಚ ಅಡುಗೆ ಎಣ್ಣೆ, ಸಾಸಿವೆ, ಇಂಗು ಹಾಕಿ. ಸಾಸಿವೆ ಕರಿಬೇವನ್ನು ಹಾಕಿ. ಇದನ್ನು ಚಟ್ನಿಗೆ ಹಾಕಿ ಮಿಕ್ಸ್ ಮಾಡಿ ಒಗ್ಗರಣೆ ಮಾಡಿದರೆ ರುಚಿಯಾದ ಚಟ್ನಿ ಸವಿಯಲು ಸಿದ್ಧವಾಗುತ್ತದೆ.

  • ಹೋಟೆಲ್‍ನಲ್ಲಿ ಸಿಗುವ ಇಡ್ಲಿ ಸಾಂಬಾರ್ ಮಾಡುವುದು ಹೇಗೆ ಗೊತ್ತಾ?

    ಹೋಟೆಲ್‍ನಲ್ಲಿ ಸಿಗುವ ಇಡ್ಲಿ ಸಾಂಬಾರ್ ಮಾಡುವುದು ಹೇಗೆ ಗೊತ್ತಾ?

    ನಾವು ಹೋಟೆಲ್‍ನಲ್ಲಿ ಮಾಡುವ ಅಡುಗೆಗಳನ್ನು ಮನೆಯಲ್ಲಿ ಮಾಡಿ ಸವಿಯಬೇಕು ಎಂದು ಟ್ರೈ ಮಾಡುತ್ತಿರುತ್ತೇವೆ. ಇಡ್ಲಿ ಜೊತೆಗೆ ಕೊಡುವ ಸಾಂಬಾರ್‌ ಎಂದರೆ ಹಲವರಿಗೆ ಇಷ್ಟ.   ಸಾಂಬಾರ್ ಜೊತೆ ಇಡ್ಲಿ  ತಿನ್ನಲು ತುಂಬಾ ರುಚಿಯಾಗಿರುತ್ತದೆ. ಕೇವಲ 15 ನಿಮಿಷಗಳಲ್ಲಿ ಈ ಇಡ್ಲಿ, ಸಾಂಬಾರ್ ಮಾಡಲು ಟ್ರೈ ಮಾಡಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಹಸಿರು ಮೆಣಸಿನಕಾಯಿ – 4
    * ಟೊಮ್ಯಾಟೋ – 3
    * ಸಾಸಿವೆ – 1ಚಮಚ
    * ಕೊತ್ತಂಬರಿ- ಸ್ವಲ್ಪ
    * ಒಣ ಮೆಣಸಿನಕಾಯಿ- 2
    * ಕರಿಬೇವು- ಸ್ವಲ್ಪ
    * ಜೀರಿಗೆ – 1 ಚಮಚ
    * ಮೆಂತ್ಯ – ಅರ್ಧ ಚಮಚ
    * ಈರುಳ್ಳಿ – 2
    * ಹುಣಸೆ ಹಣ್ಣು- ಸ್ವಲ್ಪ
    * ತರಕಾರಿಗಳು -ನಿಮ್ಮ ಆಯ್ಕೆ
    * ಅರಿಶಿಣ ಪುಡಿ – ಸ್ವಲ್ಪ
    * ಮೆಣಸಿನ ಪುಡಿ – 1 ಚಮಚ
    * ಅಡುಗೆ ಎಣ್ಣೆ – 1 ಚಮಚ
    * ಸಾಂಬಾರ್ ಪುಡಿ – 2 ಚಮಚ
    * ತೊಗರಿ ಬೇಳೆ – 1 ಚಮಚ


    ಮಾಡುವ ವಿಧಾನ:
    * ಮೊದಲು ಕುಕ್ಕರ್‍ಗೆ ಅಡುಗೆ ಎಣ್ಣೆ, ಸಾಸಿವೆ, ಜೀರಿಗೆ, ಮೆಂತ್ಯ, . ಈರುಳ್ಳಿ, ಹಸಿರು ಮೆಣಸಿನಕಾಯಿ, ಕತ್ತರಿಸಿದ ಟೊಮ್ಯಾಟೋ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಬೇಯಿಸಲು ಬಿಡಿ.

    * ಟೊಮ್ಯಾಟೋ ಮೃದುವಾದ ನಂತರ, ನಿಮ್ಮ ಆಯ್ಕೆಯ ತರಕಾರಿಗಳನ್ನು ಸೇರಿಸಿ. ತರಕಾರಿಗಳು ಅರ್ಧ ಬೆಂದ ನಂತರದಲ್ಲಿ ಮೆಣಸಿನ ಪುಡಿ, ಅರಿಶಿಣ ಪುಡಿ, ಸಾಂಬಾರ್ ಪುಡಿ ಸೇರಿಸಿ ಮಿಶ್ರಣ ಮಾಡಿ ಬೇಯಿಸಿ ಸ್ವಲ್ಪ ಸಮಯ ಬೇಯಲು ಬಿಟ್ಟಿರಬೇಕು. ಇದನ್ನೂ ಓದಿ:  ಹುಣಸೆ ಹಣ್ಣಿನ ರಸಂ ಮಾಡುವ ವಿಧಾನ ನಿಮಗಾಗಿ

    * ತೊಗರಿ ಬೇಳೆ ಸೇರಿಸಿ. ನೀರು, ಹುಣಸೆ ಹಣ್ಣಿನ ಹುಳಿ ಸೇರಿಸಿ 4 ಸೀಟಿ ಬರುವವರೆಗೆ ಬೇಯಿಸಿ.
    * ತಣ್ಣಗಾದ ನಂತರ ಬೆಳೆಯನ್ನು ತರಕಾರಿಗಳಿಗೆ ಹಾಕಿ ಸ್ವಲ್ಪ ಸ್ಮಾಷ್ ಮಾಡಿ ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ಕೊತ್ತಂಬರಿ ಸೊಪ್ಪು, ಅಡುಗೆ ಎಣ್ಣೆ, ಸಾಸಿವೆ, ಕರಿಬೇವು, ಒಣ ಮೆಣಸಿನ ಕಾಯಿಯ ಒಗ್ಗರಣೆ ಹಾಕಿದರೆ ಸಾಂಬಾರ್ ಸಿದ್ಧವಾಗುತ್ತದೆ. ಇದನ್ನೂ ಓದಿ:  ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾ

  • ಹಂದಿ ಮಾಂಸದ ಗೊಜ್ಜನ್ನು ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸವಿಯಿರಿ

    ಹಂದಿ ಮಾಂಸದ ಗೊಜ್ಜನ್ನು ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸವಿಯಿರಿ

    ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಟನ್, ಚಿಕನ್, ಫಿಶ್, ಮೊಟ್ಟೆ ತಿಂದು ಬೇಜಾರಾಗಿದ್ಯಾ? ಹಾಗಿದ್ದರೆ ನಾವು ಇಂದು ಹೇಳಿರುವ ಹಂದಿ ಮಾಂಸದ ಗೊಜ್ಜುನ್ನು  ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಹಂದಿ ಮಾಂಸ – 1 ಕೆಜಿ
    * ಒಣ ಮೆಣಸಿನಕಾಯಿ – 10 ರಿಂದ 12
    * ಹುಣಸೆ ಹಣ್ಣಿನ ರಸ – 1 ಚಮಚ
    * ಅರಶಿಣ ಪುಡಿ – 1 ಚಮಚ
    * ಈರುಳ್ಳಿ – 2
    * ಬೆಳ್ಳುಳ್ಳಿ – 2
    * ಶುಂಠಿ, ದಾಲ್ಚಿನಿ, ಕರಿ ಬೇವು, ಮೆಂತ್ಯೆಕಾಳುಗಳು- ಸ್ವಲ್ಪ
    * ತೆಂಗಿನ ಹಾಲು – 2 ಕಪ್
    * ಅಡುಗೆ ಎಣ್ಣೆ- ಅರ್ಧ ಕಪ್
    * ತುಪ್ಪ- 2 ಚಮಚ
    * ನಿಂಬೆ ರಸ – 1 ಚಮಚ
    * ಟೊಮೆಟೋ-1
    * ಜೀರಿಗೆ-1 ಚಮಚ
    * ಖಾರದಪುಡಿ- 1 ಚಮಚ
    * ಕೊತ್ತಂಬರಿ ಇದನ್ನೂ ಓದಿ: ಖಾರ ಖಾರವಾದ ಕೊಡಗು ಶೈಲಿಯ ಹಂದಿ ಕರಿ ಮಾಡಿ

    ಮಾಡುವ ವಿಧಾನ:
    * ಹಂದಿ ಮಾಂಸವನ್ನು ತೊಳೆದು ಒಂದು ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ
    * ಒಣ ಮೆಣಸು, ಹುಣಸೆಹಣ್ಣು, ಅರಿಶಿಣ, ಈರುಳ್ಳಿ, ಬೆಳ್ಳುಳ್ಳಿ, ಖಾರದಪುಡಿ, ಜೀರಿಗೆ, ಟೊಮೆಟೋ ಹಾಕಿ ರುಬ್ಬಿಕೊಳ್ಳಿ.

    * ಮೊದಲೇ ಹೇಳಿರುವಂತೆ ಪಾತ್ರೆಯಲ್ಲಿರುವ ಹಂದಿ ಮಾಂಸಕ್ಕೆ, ದಾಲ್ಚಿನ್ನಿ ಹಾಗೂ ಹುಣಸೆ ಹಣ್ಣಿನ ನೀರನ್ನು ಸೇರಿಸಿ. ಅಲ್ಲದೇ ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ, ಕರಿಬೇವು, ಹಾಗೂ ಮೆಂತ್ಯೆಕಾಳುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

    * ತೆಂಗಿನ ಹಾಲು, ತುಪ್ಪ, ಈರುಳ್ಳಿ, ಕರಿಬೇವು, ಮೆಂತ್ಯಕಾಳುಗಳನ್ನು ಚೆನ್ನಾಗಿ ಫ್ರೈ ಮಾಡಬೇಕು
    * ಅದಕ್ಕೆ ನಿಂಬೆ ರಸ, ಹಸಿಮೆಣಸು, ಕೊತ್ತಂಬರಿ ಸೇರಿಸಿ ಬೇಯಿಸಿದರೆ ಹಂದಿ ಮಾಂಸದ ಗೊಜ್ಜು ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ಹಂದಿ ಮಾಂಸದ ಗ್ರೇವಿ ಮಾಡುವ ಸರಳ ವಿಧಾನ ನಿಮಗಾಗಿ