Tag: recipe

  • ಎಗ್ ಘೀ ರೋಸ್ಟ್ ಮಾಡುವ ಸರಳ ವಿಧಾನ ನಿಮಗಾಗಿ

    ಎಗ್ ಘೀ ರೋಸ್ಟ್ ಮಾಡುವ ಸರಳ ವಿಧಾನ ನಿಮಗಾಗಿ

    ಬೇಕಾಗುವ ಸಾಮಗ್ರಿಗಳು:
    * ಬೇಯಿಸಿದ ಮೊಟ್ಟೆ – 4
    * ಟೊಮೆಟೊ 3
    * ಈರುಳ್ಳಿ 2
    * ಒಣಮೆಣಸು – 6 ರಿಂದ 7
    * ಕಾಳುಮೆಣಸು – 1 ಚಮಚ
    * ದನಿಯಾ ಪೌಡರ್ – 1 ಚಮಚ
    * ಜೀರಿಗೆ – 1 ಚಮಚ
    * ಬೆಳ್ಳುಳ್ಳಿ – 6 ಎಸಳು
    * ದಾಲ್ಚಿನ್ನಿ ಎಲೆ- 1
    * ಶುಂಠಿ ಪೇಸ್ಟ್- 1ಚಮಚ
    * ಅರಿಸಿಣ ಪುಡಿ – ಅರ್ಧ ಚಮಚ
    * ಕರಿಬೇವು – ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಬಾಣಲೆಗೆ ಒಣಮೆಣಸು, ಕಾಳುಮೆಣಸು, ಕೊತ್ತಂಬರಿ, ಬೆಳ್ಳುಳ್ಳಿ, ಶುಂಠಿ, ಜೀರಿಗೆ ಹಾಗೂ ದಾಲ್ಚಿನ್ನಿ ಹಾಕಿ ಪರಿಮಳ ಬರುವವರೆಗೂ ಹುರಿಯಿರಿ. ನಂತರ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನೂ ಓದಿ:  ರಷ್ಯಾ-ಉಕ್ರೇನ್ ವಾರ್ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೈನಿಕ

    * ನಂತರ ಪಾತ್ರೆಗೆ ತುಪ್ಪ ಹಾಕಿ ಬಿಸಿಯಾದ ಮೇಲೆ ಕರಿಬೇವು ಹಾಗೂ ಈರುಳ್ಳಿ, ಈರುಳ್ಳಿ, ಅರಿಸಿನ, ಉಪ್ಪು ಹಾಗೂ ಈಗಾಲೇ ರುಬ್ಬಿಕೊಂಡ ಮಸಾಲೆ ಹಾಕಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
    * ಅದಕ್ಕೆ ಬೇಯಿಸಿ ಸ್ಮ್ಯಾಶ್ ಮಾಡಿದ ಟೊಮೆಟೊ ಸೇರಿಸಿ ಹದಕ್ಕೆ ತಕ್ಕಷ್ಟು ನೀರು ಸೇರಿಸಿ ಕುದಿಸಿ. ಈ ಮಿಶ್ರಣ ಕುದಿಯಲು ಆರಂಭಿಸಿದ ಮೇಲೆ ಬೇಯಿಸಿದ ಮೊಟ್ಟೆಯನ್ನು ಅರ್ಧ ಮಾಡಿ ಹಾಕಿ. ಮಿಶ್ರಣ ದಪ್ಪಕ್ಕೆ ಆಗುವವರೆಗೂ ಕುದಿಸಿದರೆ ಎಗ್ ಘೀ ರೋಸ್ಟ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ನಿಮ್ಮ ಎವ್ರಿಡೇ ಮೇಕಪ್ ಕಿಟ್‌ನಲ್ಲಿರಲಿ ಈ ವಸ್ತುಗಳು

  • ಹರಿಯಾಲಿ ಮಟನ್ ಗ್ರೇವಿ ಮಾಡುವುದು ಹೇಗೆ ಗೊತ್ತಾ?

    ಹರಿಯಾಲಿ ಮಟನ್ ಗ್ರೇವಿ ಮಾಡುವುದು ಹೇಗೆ ಗೊತ್ತಾ?

    ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಾಂಸಾಹಾರ ಅಡುಗೆಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ.  ಅತಿಥಿಗಳು ಬಂದಾಗ ಅಥವಾ ನಾಲಿಗೆ ರುಚಿಯಾದ ಆಹಾರ ತಿನ್ನಲು ಬಯಸಿದಾಗ,  ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ಹರಿಯಾಲಿ ಮಟನ್ ಗ್ರೇವಿಯನ್ನು ತಯಾರಿಸಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಮಟನ್- 1 ಕೆಜಿ
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಹಸಿ ಮೆಣಸಿನಕಾಯಿ- 3
    * ಈರುಳ್ಳಿ- 1
    * ಶುಂಠಿ-ಬೆಳ್ಳುಳ್ಳಿ- ಪೇಸ್ಟ್
    * ಗೋಡಂಬಿ- 6-7
    * ಚಕ್ಕೆ-1
    * ಜೀರಿಗೆ ಪುಡಿ- 1 ಚಮಚ
    * ದನಿಯಾ ಪೌಡರ್-2 ಚಮಚ
    * ರುಚಿಗೆ ತಕ್ಕ ಉಪ್ಪು-
    * ಎಣ್ಣೆ – ಅರ್ಧ ಕಪ್

    ಮಾಡುವ ವಿಧಾನ:
    * ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಈರುಳ್ಳಿ, ಗೋಡಂಬಿ, ಚಕ್ಕೆ, ಲವಂಗ, ಕರಿ ಮೆಣಸು ಹಾಕಿ ಪೇಸ್ಟ್ ಮಾಡಿಕೊಳ್ಳಿ.

    * ಪಾತ್ರೆಯಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ, ಈಗಾಗಲೇ ತಯಾರು ಮಾಡಿದ ಮಿಶ್ರಣದ ಪೇಸ್ಟ್ ಹಾಕಿ ಚೆನ್ನಾಗಿ ಬೇಯಿಸಬೇಕು.

    * ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ, ದನಿಯಾ ಪೌಡರ್, ಜೀರಿಗೆ ಪುಡಿ ಹಾಗೂ ರುಬ್ಬಿದ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ.

    * ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಟನ್ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಅರ್ಧ ಗಂಟೆ ಬೇಯಿಸಿದರೆ ರುಚಿಯಾದ ಹರಿಯಾಲಿ ಮಟನ್ ಸವಿಯಲು ಸಿದ್ಧವಾಗುತ್ತದೆ.

  • ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಮಕ್ಕಳಿಗೆ ನೀಡಿ ಬ್ರಾಹ್ಮಿ ಎಲೆ ಚಟ್ನಿ

    ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಮಕ್ಕಳಿಗೆ ನೀಡಿ ಬ್ರಾಹ್ಮಿ ಎಲೆ ಚಟ್ನಿ

    ಣ್ಣ ಮಕ್ಕಳಲ್ಲಿ ಕಲಿಕೆಗೆ ಸಂಬಂಧಿಸಿದಂತೆ ನೆನಪಿನ ಶಕ್ತಿಯ ಕೊರತೆಯಿದ್ದರೆ, ಆ ಮಕ್ಕಳಿಗೆ ದಿನವೂ ಒಂದು ಅಥವಾ ಎರಡು ಎಳೆಯ ಒಂದೆಲಗ ಎಲೆಗಳನ್ನು ತಿನ್ನಿಸಿದರೆ ಸ್ಮರಣಶಕ್ತಿ ವೃದ್ಧಿಯಾಗುತ್ತದೆ. ಹಲವಾರು ವಿಧದ ಔಷಧೀಯ ಗುಣಗಳನ್ನು ಹೊಂದಿರುವಂತಹ ಇದು ಒಂದು ಅದ್ಭುತ ಸೊಪ್ಪು ಇದಾಗಿದ್ದು, ಆಯುರ್ವೇದಲ್ಲೂ ಹೇಳಲಾಗಿದೆ.

    ಕನ್ನಡದಲ್ಲಿ ಒಂದೆಲಗ, ತಿಮರೆ ಎಂದು ಕರೆದರೆ, ಸಂಸ್ಕೃತದಲ್ಲಿ ಬ್ರಾಹ್ಮಿ ಎಂಬ ಹೆಸರಿದೆ. ಮಕ್ಕಳಲ್ಲಿ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ವೃದ್ಧಿ, ಕಲಿಕೆಯ ಶಕ್ತಿ ಹೆಚ್ಚಿಸಲು, ದೊಡ್ಡವರಲ್ಲೂ ಮಾನಸಿಕ ಒತ್ತಡದ ನಿವಾರಣೆಗೆ ಇದು ಸಹಾಯಕಾರಿಯಾಗುತ್ತದೆ. ಒಂದೆಲಗದ ರೆಡಿಮೇಡ್ ಪುಡಿಗಳೂ ಲಭ್ಯ. ಇದನ್ನು ಹಾಲು ಅಥವಾ ಜೇನಿನ ಜೊತೆಗೆ ಕೊಡಬಹುದು.

    ಬೇಕಾಗುವ ಸಾಮಗ್ರಿಗಳು:
    ಹಸಿಮೆಣಸು – 2
    ಬ್ರಾಹ್ಮಿ ಎಲೆಗಳು – ಒಂದು ಕಪ್
    ಉದ್ದಿನ ಬೇಳೆ- 1 ಚಮಚ
    ಹುಣಸೆ ಹಣ್ಣು- ರುಚಿಗೆ ತಕ್ಕಷ್ಟು
    ಉಪ್ಪು- ರುಚಿಗೆ ತಕ್ಕಷ್ಟು
    ನೀರು- ಸ್ವಲ್ಪ
    ತೆಂಗಿನ ತುರಿ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲು ಒಂದು ಮಿಕ್ಸ್ ಜಾರಿಗೆ 2 ಹಸಿಮೆಣಸನ್ನು ಕಟ್ ಮಾಡಿ ಹಾಕಿ. ನಂತರ ಈಗಾಗಲೇ ತೊಳೆದುಟ್ಟುಕೊಂಡ ಎಲೆಗಳನ್ನು ಅದೇ ಮಿಕ್ಸಿ ಜಾರಿಗೆ ಹಾಕಿ.
    * ಇತ್ತ ಒಂದು ಚಮಚದಷ್ಟು ಉದ್ದಿನ ಬೇಳೆಯನ್ನು ಉರಿದಿಟ್ಟುಕೊಳ್ಳಿ. ಹೀಗೆ ಉರಿದಿಟ್ಟುಕೊಂಡ ಉದ್ದಿನ ಬೇಳೆಯನ್ನು ಕೂಡ ಮಿಕ್ಸಿ ಜಾರಿಗೆ ಹಾಕಿ.
    * ಅಲ್ಲದೆ ಇದಕ್ಕೆ ರುಚಿಗೆ ತಕ್ಕಷ್ಟು ಹುಣಸೆ ಹಣ್ಣು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.್ಪದಕ್ಕೆ ನೀರು ಬೆರೆಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಹೀಗೆ ತರಿತರಿಯಾಗಿ ರುಬ್ಬಿದ ಬಳಿಕ ಅದಕ್ಕೆ ಅರ್ಧ ಕಪ್ ನಷ್ಟು ತೆಂಗಿನ ತುರಿಯನ್ನು ಬೆರೆಸಿ ಮತ್ತೊಮ್ಮೆ ರುಬ್ಬಿಕೊಳ್ಳಿ.
    * ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಂಡ ಬಳಿಕ ಎಣ್ಣೆ, ಉದ್ದಿನ ಬೇಳೆ ಹಾಗೂ 1 ಒಂದು ಒಣ ಮೆಣಸು ಹಾಕಿ ಒಗ್ಗರಣೆ ಕೊಟ್ಟರೆ ಬ್ರಾಹ್ಮಿ ಎಲೆಯ ಚಟ್ನಿ ರೆಡಿ. ಇದನ್ನು ದೋಸೆ ಇನ್ನಿತರ ಆಹಾರಗಳಿಗೆ ಸೈಡ್ ಡಿಶ್ ಆಗಿ ಸೇವಿಸಬಹುದು.

  • ಹಲಸಿನಕಾಯಿ ಬಿರಿಯಾನಿ ಮಾಡುವುದು ಹೇಗೆ ಗೊತ್ತಾ?

    ಹಲಸಿನಕಾಯಿ ಬಿರಿಯಾನಿ ಮಾಡುವುದು ಹೇಗೆ ಗೊತ್ತಾ?

    ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದಿರಾ? ಚಳಿ ಇರುವುದರಿಂದ ಬಿಸಿಯಾ ಟೀ, ಕಾಫಿ ಜೊತೆಗೆ ಹಲಸಿನಕಾಯಿ ಬಿರಿಯಾನಿ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಹಲಸಿನಕಾಯಿ ಬಿರಿಯಾನಿ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಯಾಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಹಲಸಿನ ಕಾಯಿ- 2 ಕಪ್
    * ಈರುಳ್ಳಿ- 2
    * ತುಪ್ಪ- ಅರ್ಧ ಕಪ್
    * ಹಸಿಮೆಣಸಿನಕಾಯಿ- 4
    * ಅರಿಶಿಣ ಪುಡಿ- ಅರ್ಧ ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಬಿರಿಯಾನಿ ಪೌಡರ್- 4 ಚಮಚ
    * ಬಿರಿಯಾನಿ ಎಲೆ, ಚಕ್ಕೆ, ಲವಂಗ, ಏಲಕ್ಕಿ
    * ಮೊಸರು- 1 ಕಪ್
    * ಜೀರಿಗೆ- 1 ಚಮಚ
    * ಶುಂಠಿ, ಬೆಳ್ಳುಳ್ಳು ಪೇಸ್ಟ್
    * ಅಕ್ಕಿ- 2 ಕಪ್
    * ಪುದೀನಾ- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಕುಕ್ಕರ್‌ಗೆ ತುಪ್ಪ, ಚಕ್ಕೆ, ಪಲಾವ್ ಎಲೆ, ಲವಂಗ, ಏಲಕ್ಕಿ, ಜೀರಿಗೆ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
    * ನಂತರ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಪುದೀನಾ, ಹಲಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡುತ್ತಾ ಬೇಯಿಸಬೇಕು. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನಂತರ ಹಲಸಿನಕಾಯಿ ಸ್ವಲ್ಪ ಬೆಂದ ಮೇಲೆ ಅರಿಶಿಣ, ಬಿರಿಯಾನಿ ಪೌಡರ್, ಮೊಸರು, ಉಪ್ಪು ಸೇರಿಸಿ ಬೇಯಿಸಬೇಕು.  ಇದನ್ನೂ ಓದಿ: ಫಟ್​ ಅಂತ ಮಾಡಬಹುದು ಮೈದಾ ದೋಸೆ

    * ನಂತರ ಕುಕ್ಕರ್‌ಗೆ ಅಕ್ಕಿಯನ್ನು ಸೇರಿಸಿ ಅಳತೆಗೆ ಹೊಂದುವಷ್ಟು ನೀರು ಸೇರಿಸಿ ಕುಕ್ಕರ್ ಮುಚ್ಚಳ ಹಾಕಿ 2 ವಿಶಲ್ ಕೂಗಿಸಿದರೆ ರುಚಿಯಾದ ಹಲಸಿನಕಾಯಿ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.

  • ಚಿಕನ್ ಮಸ್ತಾನಿ ಮಾಡಿ ಸವಿಯಲು ಇಲ್ಲಿದೆ ಮಾಡುವ ವಿಧಾನ

    ಚಿಕನ್ ಮಸ್ತಾನಿ ಮಾಡಿ ಸವಿಯಲು ಇಲ್ಲಿದೆ ಮಾಡುವ ವಿಧಾನ

    ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಾಂಸಾಹಾರ ಅಡುಗೆಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ.  ಅತಿಥಿಗಳು ಬಂದಾಗ ಅಥವಾ ನಾಲಿಗೆ ರುಚಿಯಾದ ಆಹಾರ ತಿನ್ನಲು ಬಯಸಿದಾಗ,  ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ಚಿಕನ್ ಮಸ್ತಾನಿಯನ್ನು ತಯಾರಿಸಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಚಿಕನ್-1 ಕೆಜಿ
    * ಅಡುಗೆ ಎಣ್ಣೆ- ಅರ್ಧ ಕಪ್
    * ತುಪ್ಪ-2 ಚಮಚ,
    * ಈರುಳ್ಳಿ ಪೇಸ್ಟ್- ಅರ್ಧ ಕಪ್
    * ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಚಮಚ
    * ಜೀರಿಗೆ ಪುಡಿ-1 ಚಮಚ
    * ಗರಂ ಮಸಾಲ-1 ಚಮಚ
    * ಮೆಣಸಿನ ಹುಡಿ-1 ಚಮಚ
    * ಅರಿಶಿನ ಹುಡಿ – 1 ಚಮಚ
    * ಕರಿಮೆಣಸಿನ ಹುಡಿ-1 ಚಮಚ
    * ಚಾಟ್ ಮಸಾಲ-1 ಚಮಚ
    * ಮೊಸರು-1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಒಂದು ಬಾಣಲೆಗೆ ಅಡುಗೆ ಎಣ್ಣೆ, ಈರುಳ್ಳಿ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಚಿಕನ್ ಹಾಕಿ ಅದಕ್ಕೆ ಒಂದೊಂದು ಚಮಚ ಜೀರಿಗೆ, ಮೆಣಸಿನ ಹುಡಿ, ಗರಂ ಮಸಾಲೆ, ಅರಿಸಿನ ಹುಡಿ, ಕಾಳುಮೆಣಸು ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ: ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ

    * ನಂತರ ಚಾಟ್ ಮಸಾಲ, ಗಟ್ಟಿ ಮೊಸರು ಸೇರಿಸಿ. ಚೆನ್ನಾಗಿ ಬೇಯಿಸಿ. ಇದನ್ನೂ ಓದಿ: ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ
    * ನಂತರ ಇನ್ನೊಂದು ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ,ಕೊತ್ತಂಬರಿ ಒಗ್ಗರಣೆ ಮಾಡಿಕೊಂಡು ಚಿಕನ್ ಪಾತ್ರಗೆ ಹಾಕಿದರೆ ರುಚಿಯಾದ ಚಿಕನ್ ಮಸ್ತಾನಿ ಸವಿಯಲು ಸಿದ್ಧವಾಗುತ್ತದೆ.

  • ಹುಣಸೆಹಣ್ಣು ಇದ್ದರೆ ಸಾಕು ಸೂಪರ್ ಆಗಿ ಜ್ಯೂಸ್ ಮಾಡಬಹುದು

    ಹುಣಸೆಹಣ್ಣು ಇದ್ದರೆ ಸಾಕು ಸೂಪರ್ ಆಗಿ ಜ್ಯೂಸ್ ಮಾಡಬಹುದು

    ಬಿಸಿಲಿನ ತಾಪದಿಂದ ಬಾಯಾರಿಕೆ ಆಗುವುದು ಸಾಮಾನ್ಯವಾಗಿದೆ. ದಣಿವು ನಿವಾರಿಸಿಕೊಳ್ಳಲು ಮನೆಯಲ್ಲಿರುವ ಸಾಮಗ್ರಿಗಳನ್ನೇ ಬಳಸಿ ಜ್ಯೂಸ್‍ಗಳನ್ನು ತಯಾರಿಸ ಬುಜದಾಗಿದೆ. ಇಂದು ಹುಣಸೆಹಣ್ಣಿನಿಂದ ರುಚಿಯಾದ ಮತ್ತು ಆರೋಗ್ಯಕರವಾದ ಜ್ಯೂಸ್ ಸಿದ್ಧಪಡಿಸಬಹುದಾಗಿದೆ. ಪಿತ್ತದ ವಾಂತಿಗೂ, ಪಿತ್ತದಿಂದ ತಲೆನೋವಿಗೂ ಈ ಜ್ಯೂಸ್ ಮದ್ದಾಗಿದೆ.

    ಬೇಕಾಗಿರುವ ಸಾಮಗ್ರಿಗಳು:
    * ಹುಣಸೆಹಣ್ಣು- ಸ್ವಲ್ಪ
    * ಕಾಳುಮೆಣಸಿನ ಪುಡಿ – ಸ್ವಲ್ಪ
    * ಬೆಲ್ಲ- ಅಗತ್ಯವಿದ್ದಷ್ಟು
    * ಉಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಹುಣಸೆಹಣ್ಣನ್ನು ನೆನೆಸಿ ಕಿವುಚಿ ರಸ ತೆಗೆಯಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

    * ಹುಳಿ ನೀರು, ಬೆಲ್ಲ, ಚಿಟಿಕೆ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
    * ನಂತರ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿದರೆ ಪಾನಕ ಸಿದ್ಧವಾಗುತ್ತದೆ.

  • ಬಾಯಾರಿಕೆಗೆ ಹೆಸರುಬೇಳೆ ಪಾನಕ ಮಾಡಿ ಕುಡಿಯಿರಿ, ಆರೋಗ್ಯಕ್ಕೂ ಒಳ್ಳೆಯದು

    ಬಾಯಾರಿಕೆಗೆ ಹೆಸರುಬೇಳೆ ಪಾನಕ ಮಾಡಿ ಕುಡಿಯಿರಿ, ಆರೋಗ್ಯಕ್ಕೂ ಒಳ್ಳೆಯದು

    ವಾತಾವರಣ ಬದಲಾಗುತ್ತಿದೆ. ಬಿಸಿಲ ಬೆಗೆ ಹೆಚ್ಚಾಗುತ್ತಿದ್ದು, ಬಾಯಾರಿಕೆಗೆ ಅಂಗಡಿಗಳಲ್ಲಿ ಸಿಗುವ ತಂಪು ಪಾನಿಯಗಳ ಮೊರೆ ಹೋಗುವುದು ಸಹಜ. ಆದರೆ ಇಂದು ನೀವು ಮನೆಯಲ್ಲಿಯೇ ರುಚಿಯಾದ ಹೆಸರುಬೇಳೆ ಪಾನಕ ತಯಾರಿಸಿ ಸವಿಯಿರಿ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಮೈ ತುರಿಕೆ, ಪಿತ್ತಕ್ಕೆ ಒಳ್ಳೆಯ ಪಾನಕವಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಹೆಸರುಬೇಳೆ- ಅರ್ಧ ಕಪ್
    * ಬೆಲ್ಲ – ಅರ್ಧ ಕಪ್
    * ತೆಂಗಿನಕಾಯಿ ತುರಿ – ಅರ್ಧ ಕಪ್
    * ಏಲಕ್ಕಿ – 2
    * ನಿಂಬೆರಸ- ಸ್ವಲ್ಪ

    ಮಾಡುವ ವಿಧಾನ:
    * ಹೆಸರುಬೇಳೆಯನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಟ್ಟಿರಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ
    * ಹೆಸರುಬೇಳೆ, ಬೆಲ್ಲ, ತೆಂಗಿನಕಾಯಿ ತುರಿ, ಏಲಕ್ಕಿ ಬೀಜ ಮತ್ತು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು.

    * ರುಬ್ಬಿಕೊಂಡ ಮಿಶ್ರಣವನ್ನು ಸೋಸಿ ಕೊಳ್ಳಿ. ನಂತರ ನೀರು, ನಿಂಬೆರಸ ಹಾಕಿ ಮಿಶ್ರಣ ಮಾಡಿದರೆ ರುಚಿಯಾದ ಪಾನಕ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

  • ಬೆಂಡೆಕಾಯಿ ಮಸಾಲ ಮಾಡಿ- ರೊಟ್ಟಿ ಜೊತೆಗೆ ಸಖತ್ ಟೇಸ್ಟ್ ಆಗಿರುತ್ತೆ

    ಬೆಂಡೆಕಾಯಿ ಮಸಾಲ ಮಾಡಿ- ರೊಟ್ಟಿ ಜೊತೆಗೆ ಸಖತ್ ಟೇಸ್ಟ್ ಆಗಿರುತ್ತೆ

    ರೊಟ್ಟಿ ಮಾಡಿದಾಗಲೆಲ್ಲ ಅದರ ಜೊತೆ ಏನು ಮಾಡುವುದು ಎಂಬ ತಲೆನೋವಿದ್ದರೆ, ನಿಮಗೆ ಇಲ್ಲೊಂದು ರುಚಿಕರವಾದ ರೆಸಿಪಿ ಇದೆ. ಅದೇ ಬೆಂಡೆಕಾಯಿ ಮಸಾಲವಾಗಿದೆ. ಬೆಂಡೆಕಾಯಿ ಮಸಾಲ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಬೆಂಡೆಕಾಯಿ- ಅರ್ಧ ಕೆಜಿ
    * ಅರಿಶಿಣ- 1 ಚಮಚ
    * ಮೆಣಸಿನ ಪುಡಿ- 1ಚಮಚ
    * ಗರಂ ಮಸಾಲಾ- ಸ್ವಲ್ಪ
    * ಅಡುಗೆ ಎಣ್ಣೆ- ಅರ್ಧ ಕಪ್
    * ಕಸೂರಿ ಮೇಥಿ- ಸ್ವಲ್ಪ
    * ಜೀರಿಗೆ- 1 ಚಮಚ
    * ಈರುಳ್ಳಿ- 1
    * ಬೆಳ್ಳುಳ್ಳಿ- 2
    * ಶುಂಠಿ ಪೇಸ್ಟ್- 1 ಚಮಚ
    * ದನಿಯಾ ಪುಡಿ- 1ಚಮಚ
    * ಜೀರಿಗೆ ಪುಡಿ
    * ಟೊಮೆಟೋ- 1
    * ಮೊಸರು- 1ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಸೊಪ್ಪು – ಸ್ವಲ್ಪ

    ಮಾಡುವ ವಿಧಾನ:
    * ಬೆಂಡೆಕಾಯಿಯನ್ನು ಕತ್ತರಿಸಿಕೊಂಡು ಅದಕ್ಕೆ ಅರಿಶಿಣ, ಮೆಣಸಿನ ಪುಡಿ, ಗರಂ ಮಸಾಲಾ ಸೇರಿಸಿ ಎಲ್ಲಾ ಮಸಾಲೆ ಬೆಂಡೆಕಾಯಿಗೆ ಲೇಪಿಸಲು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ:  ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ

    * ಒಂದು ಪಾತ್ರೆಗೆ ಸ್ವಲ್ಪ ಅಡುಗೆ ಎಣ್ಣೆಯನ್ನು ಹಾಕಿ ಕಸೂರಿ ಮೇಥಿ, ಜೀರಿಗೆ ಸೇರಿಸಿ ಮಸಾಲೆಗಳು ಸುವಾಸನೆಯುಕ್ತವಾಗುವವರೆಗೆ ಹುರಿಯಿರಿ.

    * ಈಗ ಈರುಳ್ಳಿ, ಬೆಳ್ಳುಳ್ಳಿ ಮತ್ತು 1 ಟೀಸ್ಪೂನ್ ಶುಂಠಿ ಪೇಸ್ಟ್, ಅರಿಶಿಣ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಟೊಮೆಟೋ, ಮೊಸರು 1 ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಫ್ರೇ ಮಾಡಿಕೊಳ್ಳಿ. ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

    * ಮತ್ತೊಂದು ಪ್ಯಾನ್‍ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಬೆಂಡೆಕಾಯಿ, ಈರುಳ್ಳಿ, ಟೊಮೆಟೊ, ಗರಂ ಮಸಾಲಾ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಫ್ರೈ ಮಾಡಿ ಮಸಾಲೆ ಬೆಂದಿರುವ ಪಾತ್ರೆಗೆ ಹಾಕಿ ಬೇಯಿಸಿದರೆ ರುಚಿಯಾದ ಬೆಂಡೆಕಾಯಿ ಮಸಾಲಾ ಸವಿಸಲು ಸಿದ್ಧವಾಗುತ್ತದೆ.

  • ಆರೋಗ್ಯಕರವಾದ ಟೊಮೆಟೋ ಸಲಾಡ್ ಮಾಡಿ ಸವಿಯಿರಿ

    ಆರೋಗ್ಯಕರವಾದ ಟೊಮೆಟೋ ಸಲಾಡ್ ಮಾಡಿ ಸವಿಯಿರಿ

    ಟೊಮೆಟೋ ಸಲಾಡ್ ಸುಲಭ ಮತ್ತು ಆರೋಗ್ಯಕರ ಸಲಾಡ್ ಪಾಕವಿಧಾನವಾಗಿದೆ. ಈ ಸಲಾಡ್ ಆರೋಗ್ಯಕ್ಕೂ ಒಳ್ಳೆಯದು ಮತ್ತು ತಿನ್ನಲು ರುಚಿಯಾಗಿರುತ್ತದೆ. ಡಯೆಟ್ ಮಾಡುವವರಿಗೆ ಈ ಸಲಾಡ್ ಹೇಳಿ ಮಾಡಿಸಿದ್ದಾಗಿದೆ. ದಿನಕ್ಕೊಮ್ಮೆ ಮಾಡಿ ತಿಂದರೆ ಆರೋಗ್ಯ ಹಿತ ದೃಷ್ಟಿಯಿಂದ ಒಳ್ಳೆಯದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಸೌತೆಕಾಯಿ- 1 ಕಪ್
    * ಟೊಮೆಟೋ- 1 ಕಪ್
    * ಕ್ಯಾರೆಟ್ – 1ಕಪ್
    * ಈರುಳ್ಳಿ- ಅರ್ಧ ಕಪ್
    * ಎಲೆಕೋಸು- ಅರ್ಧ ಕಪ್
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಕಾಳು ಮೆಣಸು ಪುಡಿ- ಸ್ವಲ್ಪ
    * ಮೆಣಸಿನಕಾಯಿ – 3
    * ಚಾಟ್ ಮಸಾಲಾ- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ನಿಂಬೆ ರಸ- ಸ್ವಲ್ಪ
    * ಪುದೀನ ಎಲೆ- ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಸೌತೆಕಾಯಿ, ಟೊಮೆಟೋ, ಕ್ಯಾರೆಟ್, ಈರುಳ್ಳಿ, ಎಲೆಕೋಸು, ಕೊತ್ತಂಬರಿ ಸೊಪ್ಪು, ಕಾಳು ಮೆಣಸು, ಮೆಣಸಿನಕಾಯಿ, ಚಾಟ್ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣವನ್ನು ಮಾಡಿ.

    * ಎಲ್ಲಾ ಮಸಾಲೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಯಾದ ಸಲಾಡ್ ಸವಿಯಲು ಸಿದ್ಧವಾಗುತ್ತದೆ.

  • ಪ್ರೇಮಿಗಳ ದಿನದ ಸೆಲೆಬ್ರೆಷನ್‍ಗೆ ಅನಾನಸ್ ಹಲ್ವಾ ಮಾಡಿ ನಿಮ್ಮ ಪ್ರಿಯಕರನಿಗೆ ನೀಡಿ

    ಪ್ರೇಮಿಗಳ ದಿನದ ಸೆಲೆಬ್ರೆಷನ್‍ಗೆ ಅನಾನಸ್ ಹಲ್ವಾ ಮಾಡಿ ನಿಮ್ಮ ಪ್ರಿಯಕರನಿಗೆ ನೀಡಿ

    ಪ್ರೇಮಿಗಳ ದಿನದ ಸೆಲೆಬ್ರೆಷನ್‍ಗೆ ನಿಮ್ಮ ಪ್ರಿಯಕರನನ್ನು ಖುಷಿಪಡಿಸಲು ರುಚಿಯಾದ ಹಾಗೂ ಸಿಹಿಯಾದನ್ನು ತಿಂಡಿಯನ್ನು ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಅಂತ ಅನಾನಸ್ ಹಲ್ವಾ ಮಾಡಬಹುದು.

    ಬೇಕಾಗುವ ಸಾಮಗ್ರಿಗಳು:
    * ಅನಾನಸ್- 2 ಕಪ್
    * ಕಾರ್ನ್ ಹಿಟ್ಟು- 1 ಕಪ್
    * ಸಕ್ಕರೆ- 1 ಕಪ್
    * ತುಪ್ಪ- ಅರ್ಧ ಕಪ್
    * ಏಲಕ್ಕಿ ಪೌಡರ್- ಸ್ವಲ್ಪ
    * ಡ್ರೈ ಪ್ರೂಟ್ಸ್- ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ, ಮಿಕ್ಸಿ ಜಾರ್‍ಗೆ ಅನಾನಸ್ ಹಾಗೆ ರುಬ್ಬಿಕೊಳ್ಳಿ. ಈ ಜ್ಯೂಸ್‍ನ್ನು ಚೆನ್ನಾಗಿ ಸೊಸೆಕೊಳ್ಳಬೇಕು. ಇದನ್ನೂ ಓದಿ: ಸೂಪರ್ ಕೂಲ್ ದ್ರಾಕ್ಷಿ ಹಣ್ಣಿನ ಲಸ್ಸಿ ಮಾಡುವ ಸರಳ ವಿಧಾನ ನಿಮಗಾಗಿ

    * ನಂತರ ಅನಾನಸ್ ಜ್ಯೂಸ್‍ನ್ನು ಒಂದು ಬೌಲ್‍ಗೆ ಹಾಕಿ ಕಾನ್ ಪ್ಲೋರ್ ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು.
    * ನಂತರ ಒಂದು ಬಾಣಲೆಗೆ ನೀರು, ಸಕ್ಕರೆ ಸೇರಿಸಿ ಕುದಿಸಿಕೊಳ್ಳಬೇಕು.

    * ಈಗ ಇದೆ ಬಾಣಲೆಗೆ ಅನಾನಸ್ ಜ್ಯೂಸ್ ಮಿಶ್ರಣ, ಡ್ರೈ ಪ್ರೂಟ್ಸ್, ತುಪ್ಪ ಬೇಕಾದಲ್ಲಿ ಸ್ವಲ್ಪ ಬಣ್ಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ ತುಪ್ಪ ಸವರಿದ ತಟ್ಟೆಗೆ ಹಾಕಿ ಬೇಕಾದ ರೀತಿಯಲ್ಲಿ ಕತ್ತರಿಸಿದರೆ ರುಚಿಯಾದ ಅನಾನಸ್ ಹಲ್ವಾ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ