Tag: recipe

  • ನಿಂಬೆ ಹಣ್ಣಿನಿಂದ ಮಾಡಿ ರುಚಿಯಾದ  ರಸಂ

    ನಿಂಬೆ ಹಣ್ಣಿನಿಂದ ಮಾಡಿ ರುಚಿಯಾದ ರಸಂ

    ನಿಮ್ಮ ದೇಹದಲ್ಲಿ ರೋಗನಿರೋಧ ಶಕ್ತಿಯನ್ನು ಹೆಚ್ಚಿಸಲು ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ಕರಿಬೇವಿನ ಎಲೆಗಳಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳೊಂದಿಗೆ ತಯಾರಿಸಿದ ರಸಂ ಬಹಳ ಸಹಕಾರಿ. ರೋಗನಿರೋಧಕ ಶಕ್ತಿಯನ್ನು ನೀವು ಹೆಚ್ಚಿಸಿಕೊಳ್ಳಬೇಕಾ? ಹಾಗಿದ್ದರೆ ಈ ರಸಂ ಮಾಡಿ ಸವಿಯ ಬಹುದಾಗಿದೆ. ಬೇಯಿಸಿದ ಅನ್ನದೊಂದಿಗೆ ನಿಂಬೆಹಣ್ಣಿನ ರಸಂ ಸವಿಯಲ್ ಸಖತ್ ಟೇಸ್ಟ್ ಆಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಟೊಮೆಟೋ-1
    * ಶುಂಠಿ- ಸ್ವಲ್ಪ
    * ಕರಿಬೇವಿನ ಎಲೆ
    * ಹಸಿ ಮೆಣಸಿನಕಾಯಿ- 3
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಅರಿಶಿಣ- 1 ಚಮಚ
    * ತೊಗರಿ ಬೇಳೆ-  ಅರ್ಧ ಕಪ್‌
    * ರುಚಿಗೆ ತಕ್ಕಷ್ಟು ಉಪ್ಪು
    * ನಿಂಬೆ- 1
    * ತುಪ್ಪ- 2 ಚಮಚ
    * ಸಾಸಿವೆ- 1 ಚಮಚ
    * ಜೀರಿಗೆ- 1 ಚಮಚ
    * ಒಣ ಮೆಣಸಿನಕಾಯಿ- 1
    * ಕಾಳು ಮೆಣಸಿನ ಪುಡಿ- ಅರ್ಧ ಚಮಚ

    ಮಾಡುವ ವಿಧಾನ:
    * ಪಾತ್ರೆಯಲ್ಲಿ ಟೊಮೆಟೋ, ಶುಂಠಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಎಲೆ, ಅರಿಶಿಣ 10 ನಿಮಿಷ ಕುದಿಸಬೇಕು.
    * ಪ್ರೆಶರ್ ಕುಕ್ಕರ್ನಲ್ಲಿ ತೊಗರಿ ಬೇಳೆಯನ್ನು ಬೇಯಿಸಿಕೊಳ್ಳಬೇಕು.

    * ಬೇಯಿಸಿದ ತೊಗರಿ ಬೇಳೆ ಹಾಗೂ ಟೊಮೆಟೋವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರನ್ನು ಸೇರಿಸಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
    * ಈಗ ರಸಂನ್ನು ಕುದಿಯುಲು ಬಿಡಬೇಕು
    * ತುಪ್ಪ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕೆಂಪು ಮೆಣಸಿನಕಾಯಿ, ಕರಿಬೇವು, ಕಾಳು ಮೆಣಸು ಸೇರಿಸಿ ರಸಂಗೆ ಒಗ್ಗರಣೆ ಹಾಕಿ. ಇದನ್ನೂ ಓದಿ:  ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾಡಿ

    * ನಂತರ ಕೊನೆಯಲ್ಲಿ ರಸಂಗೆ ನಿಂಬೆ ರಸವನ್ನು ಹಿಂಡಿದರೆ ರುಚಿಯಾದ ರಸಂ ಸವಿಯಲು ಸಿದ್ಧವಾಗುತ್ತದೆ.

  • ಗೋಧಿ ಬಳಸಿ ಹೀಗೆ ಒಂದು ಸ್ವೀಟ್ ಮಾಡಿ

    ಗೋಧಿ ಬಳಸಿ ಹೀಗೆ ಒಂದು ಸ್ವೀಟ್ ಮಾಡಿ

    ನಿಮಗೆ ಯಾವುದಾದರೂ ಸಿಹಿ ತಿನ್ನಬೇಕು ಎಂದು ಆಸೆಯಾದಾಗ, ಮನೆಯಲ್ಲಿ ಸಮಾರಂಭ ಇದ್ದಾಗ ಅಥವಾ ವಿಶೇಷ ಹಬ್ಬಕ್ಕೆ ಮನೆಯಲ್ಲೇ ಸಿಹಿ ತಿನಿಸು ತಯಾರಿಸಬೇಕು ಎಂದಿದ್ದರೆ ಗೋಧಿ ಹಿಟ್ಟಿನ ಹಲ್ವಾ ಮಾಡಿ ಸಖತ್ ಟೇಸ್ಟ್ ಆಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಸಕ್ಕರೆ- 1 ಕಪ್
    * ಗೋಧಿ ಹಿಟ್ಟು- 2ಕಪ್
    * ತುಪ್ಪ- ಅರ್ಧ ಕಪ್
    * ದ್ರಾಕ್ಷಿ, ಗೋಡಂಬಿ- ಸ್ವಲ್ಪ

    ಮಾಡುವ ವಿಧಾನ:
    * ಪಾತ್ರಯಲ್ಲಿ ಸಕ್ಕರೆ, ಅಳತೆಗೆ ತಕ್ಕಂತೆ ನೀರು ಹಾಕಿ ಕುದಿಸಿಕೊಂಡು ಮಿಶ್ರಣವನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು.
    * ಬಾಣಲೆಗೆ ತುಪ್ಪ, ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ತೆಗೆದಿಟ್ಟುಕೊಳ್ಳಬೇಕು.

    * ಬಾಣಲೆಗೆ ಸಕ್ಕರೆ ನೀರಿನ ಮಿಶ್ರಣವನ್ನು ಸುರಿಯಿರಿ ಮತ್ತು ಚೆನ್ನಾಗಿ ಕಲಸಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನಂತರ ಗೋಧಿ ಹಿಟ್ಟಿನ ಮಿಶ್ರಣವನ್ನು ಹಾಕಿ, ಹಲ್ವಾ ತಳ ಬಿಡುವ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ನಂತರ ತುಪ್ಪ ಸವರಿದ ಬಟ್ಟಲಿಗೆ ಮಿಶ್ರಣವನ್ನು ಹಾಕಿ ಹರಡಲು ಬಿಡಬೇಕು. ಈಗ ರುಚಿಯಾದ ಹಲ್ವಾ ಸವಿಯಲು ಸಿದ್ಧವಾಗುತ್ತದೆ.

  • ಹೋಳಿ ಹಬ್ಬಕ್ಕೆ ಮಾಡಿ ಗರಂ ಗರಂ ಮಸಾಲೆ ವಡೆ

    ಹೋಳಿ ಹಬ್ಬಕ್ಕೆ ಮಾಡಿ ಗರಂ ಗರಂ ಮಸಾಲೆ ವಡೆ

    ಬೇಕಾಗುವ ಸಾಮಗ್ರಿಗಳು:
    * ಮೈದಾಹಿಟ್ಟು- 1 ಕಪ್
    * ಅಕ್ಕಿ ಹಿಟ್ಟಿ- 1ಕಪ್
    * ಹೋಳಿಗೆ ರವೆ- 1ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಜೀರಿಗೆ- ಸ್ವಲ್ಪ
    * ಅಡುಗೆ ಎಣ್ಣೆ- 1 ಕಪ್
    * ಹಸಿಮೆಣಸಿನಕಾಯಿ- 5 ರಿಂದ 6
    * ಈರುಳ್ಳಿ- 1
    * ಕೊತ್ತಂಬರಿ, ಕರಿಬೇವಿ- ಸ್ವಲ್ಪ

    ಮಾಡುವ ವಿಧಾನ:
    * ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಹಸಿಮೆಣಸಿನಕಾಯಿ, ಎಲ್ಲವನ್ನು ಸಣ್ಣಕ್ಕೆ ಕಟ್ ಮಾಡಿ ಕೊಂಡು ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಹೋಳಿಗೆ ರವೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

    * ನಂತರ ಹಿಟ್ಟಿನ ಮಿಶ್ರಣದಿಂದ ವಡೆಯನ್ನು ತಟ್ಟಿಕೊಳ್ಳಬೇಕು.
    * ನಂತರ ಅಡುಗೆ ಎಣ್ಣೆಯನ್ನು ಬಿಸಿ ಮಾಡಿ ವಡೆಗಳನ್ನು ಬಿಟ್ಟು ಬೇಯಿಸಿದರೆ ರುಚಿಯಾ ವಡೆ ಸವಿಯಲು ಸಿದ್ಧವಾಗುತ್ತದೆ.

     

  • ಹೋಳಿ ಸ್ಪೆಷಲ್ – ಥಂಡಾಯಿ ಪೌಡರ್ ಮಿಲ್ಕ್ ಮಾಡುವ ವಿಧಾನ

    ಹೋಳಿ ಸ್ಪೆಷಲ್ – ಥಂಡಾಯಿ ಪೌಡರ್ ಮಿಲ್ಕ್ ಮಾಡುವ ವಿಧಾನ

    ಇಂದು ಎಲ್ಲೆಲ್ಲೂ ಬಣ್ಣದ ಹಬ್ಬ. ಕುಟುಂಬದವರು, ಸ್ನೇಹಿತರು, ಮಕ್ಕಳು ಎಲ್ಲರೂ ಒಟ್ಟಿಗೆ ಸೇರಿ ಬಣ್ಣಗಳಲ್ಲಿ ಮಿಂದೇಳುತ್ತಾರೆ. ಪ್ರತಿ ಹಬ್ಬಕ್ಕೂ ಅದರದ್ದೆ ಆದ ಸಿಹಿ ತಿನಿಸು ಇರುತ್ತದೆ. ಅದೇ ಹೋಳಿ ಹಬ್ಬದ ಪ್ರಯುಕ್ತ ಥಂಡಾಯಿ ಪೌಡರ್ ಹಾಲು ಮಾಡುವ ವಿಧಾನ ಇಲ್ಲದೆ.

    ಬೇಕಾಗುವ ಸಾಮಾಗ್ರಿಗಳು
    1. ಬಾದಾಮಿ – ಅರ್ಧ ಕಪ್ (75 ಗ್ರಾಂ)
    2. ಗೋಡಂಬಿ – ಒಂದು ಕಪ್ (140 ಗ್ರಾಂ)
    3. ಪಿಸ್ತಾ – ಅರ್ಧ ಕಪ್(60 ಗ್ರಾಂ)
    4. ಜೀರಿಗೆ – 3 ಚಮಚ
    5. ಗಸಗಸೆ – 2 ಚಮಚ
    6. ಕೇಸರಿ – ಚಿಟಿಕೆ
    7. ಮೆಣಸು – 1 ಚಮಚ
    8. ಏಲಕ್ಕಿ – 10-12
    9. ಕಲ್ಲಂಗಡಿ ಹಣ್ಣಿನ ಬೀಜಗಳು- ಕಾಲ್‍ ಕಪ್(38 ಗ್ರಾಂ)
    10. ಒಳಗಿದ ಗುಲಾಬಿ ದಳಗಳು – 1 ಚಮಚ
    11. ಚಕ್ಕೆ – ಒಂದು

    ಮಾಡುವ ವಿಧಾನ
    * ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಗೋಡಂಬಿ, ಬಾದಾಮಿ, ಪಿಸ್ತಾ, ಕಲ್ಲಂಗಡಿ ಹಣ್ಣಿನ ಬೀಜಗಳು ಹಾಕಿ 5-10 ನಿಮಿಷ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
    * ಪುಡಿಯನ್ನು ಒಂದು ಬೌಲ್‍ಗೆ ಹಾಕಿಕೊಳ್ಳಿ.
    * ಈಗ ಅದೇ ಜಾರಿಗೆ ಮೆಣಸು, ಜೀರಿಗೆ, ಗಸಗಸೆ, ಒಣಗಿದ ಗುಲಾಬಿ ದಳಗಳು, ಏಲಕ್ಕಿ, ಚಕ್ಕೆ, ಕೇಸರಿ ಹಾಕಿ 10-15 ನಿಮಿಷ ರುಬ್ಬಿಕೊಳ್ಳಿ.
    * ಈಗ ಮೊದಲು ಮಾಡಿಟ್ಟುಕೊಂಡಿದ್ದ ಪುಡಿಗೆ ಇದನ್ನು ಹಾಕಿ ಮಿಕ್ಸ್ ಮಾಡಿ.
    * ಈಗ ಒಂದು ಲೋಟ ಬಿಸಿ ಹಾಲು ತೆಗೆದುಕೊಂಡು ಅದಕ್ಕೆ 3 ಚಮಚ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ.
    * ಈಗ ಇನ್ನೊಂದು ಲೋಟ ಹಾಲಿಗೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ, ಬಳಿಕ ಪುಡಿ ಮಿಕ್ಸ್ ಮಾಡಿದ್ದ ಹಾಲನ್ನು ಅದರೊಳಗೆ ಹಾಕಿ ಮಿಕ್ಸ್ ಮಾಡಿದರೆ ಥಂಡಾಯಿ ಹಾಲು ಕುಡಿಯಲು ಸಿದ್ಧ.

  • ಸ್ವೀಟ್ ಕ್ಯಾರೆಟ್ ಚಪಾತಿ ಮಾಡಿ ಸಖತ್ ಟೇಸ್ಟ್

    ಸ್ವೀಟ್ ಕ್ಯಾರೆಟ್ ಚಪಾತಿ ಮಾಡಿ ಸಖತ್ ಟೇಸ್ಟ್

    ಬೆಳಗ್ಗಿನ ತಿಂಡಿಗೆ ಏನು ಮಾಡಬೇಕು ಎನ್ನುವ ಯೋಚನೆ ಇದ್ದೆ ಇರುತ್ತದೆ. ಹೀಗಾಗಿ ನೀವು ಸ್ವೀಟ್ ಕ್ಯಾರೆಟ್ ಚಪಾತಿ ಮಾಡಿದ್ರೆ ಪಯ್ಯವನ್ನು ಮಾಡುವ ಅವಶ್ಯಕತೆ ಇರುವುದಿಲ್ಲ, ಈ ಸ್ವೀಟ್ ಕ್ಯಾರೆಟ್ ಚಪಾತಿ ಮಾಡಲು ಒಮ್ಮೆ ಟ್ರೈ ಮಾಡಿ ಸಖತ್ ಟೇಸ್ಟ್ ಆಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಗೋಧಿಹಿಟ್ಟು- 2ಕಪ್
    * ಕ್ಯಾರೆಟ್- 1 ಕಪ್
    * ಸಕ್ಕರೆ- ಅರ್ಧ ಕಪ್
    * ಏಲಕ್ಕಿ ಪುಡಿ- ಸ್ವಲ್ಪ
    * ತುಪ್ಪ- ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಏಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಗೋಧಿಹಿಟ್ಟಿಗೆ ಉಪ್ಪು, ಅಡುಗೆ ಎಣ್ಣೆ, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಇದನ್ನೂ ಓದಿ: ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?
    * ತುರಿದ ಕ್ಯಾರೆಟ್, ಸಕ್ಕರೆ, ಏಲಕ್ಕಿ ಪುಡು ಎನ್ನವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

    * ಈಗ ಈ ಮಿಶ್ರಣದಿಂದ ಚಿಕ್ಕ ಉಂಡೆಗಳನ್ನಾಗಿ ಮಾಡಿ ಚಪಾತಿ ಹಿಟ್ಟಿನ ಮಿಶ್ರಣದ ಒಳಗೆ ಹಾಕಿ ಲಟ್ಟಿಸಿಕೊಳ್ಳಬೇಕು. ಇದನ್ನೂ ಓದಿ: ಕ್ಯಾಪ್ಸಿಕಂ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸೂಪರ್
    * ನಂತರ ತವಾ ಕಾದ ನಂತರ ಸ್ವಲ್ಪ ತುಪ್ಪವನ್ನು ಹಾಕಿ ಬೇಯಿಸಿದರೆ ರುಚಿಯಾದ ಕ್ಯಾರೆಟ್ ಚಪಾತಿ ಸವಿಯಲು ಸಿದ್ಧವಾಗುತ್ತದೆ.

  • ಕ್ಯಾಪ್ಸಿಕಂ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸೂಪರ್

    ಕ್ಯಾಪ್ಸಿಕಂ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸೂಪರ್

    ಬೆಳ್ಳುಳ್ಳಿ ಅಥವಾ ಈರುಳ್ಳಿಗಳಿಂದ ಇದನ್ನು ತಯಾರಿಸಲಾಗುತ್ತದೆ, ಆದರೆ ಇತರ ರೀತಿಯ ತರಕಾರಿಗಳೊಂದಿಗೆ ಸಹ ಮಾಡಬಹುದಾಗಿದೆ. ಅಂತಹ ಒಂದು ಸುಲಭ ಮತ್ತು ಸರಳ ನವೀನ ಚಟ್ನಿ ಪಾಕವಿಧಾನವಾಗಿದೆ. ಸುಟ್ಟ ಕ್ಯಾಪ್ಸಿಕಂ ಚಟ್ನಿ ಫ್ರಿಡ್ಜ್‌ನಲ್ಲಿಟ್ಟು ಒಂದು ವಾರದವರೆಗೆ ಉಳಿಯುತ್ತದೆ. ಈ ಚಟ್ನಿ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಕ್ಯಾಪ್ಸಿಕಂ-2
    * ಟೊಮೆಟೊ- 1
    * ಬೆಳ್ಳುಳ್ಳಿ- 1
    * ಅಡುಗೆ ಎಣ್ಣೆ- ಅರ್ಧ ಕಪ್
    * ಉದ್ದಿನ ಬೇಳೆ- ಸ್ವಲ್ಪ
    * ಕಡ್ಲೆ ಬೇಳೆ- ಸ್ವಲ್ಪ
    * ದನಿಯಾ- ಸ್ವಲ್ಪ
    * ಜೀರಿಗೆ – ಸ್ವಲ್ಪ
    * ಕೆಂಪು ಮೆಣಸಿನಕಾಯಿ- 2
    * ರುಚಿಗೆ ತಕ್ಕಷ್ಟು ಉಪ್ಪು
    ಒಗ್ಗರಣೆಗೆ: * ಅಡುಗೆ ಎಣ್ಣೆ
    * ಸಾಸಿವೆ- ಸ್ವಲ್ಪ
    * ಉದ್ದಿನ ಬೇಳೆ- ಸ್ವಲ್ಪ
    * ಕೆಂಪು ಮೆಣಸಿನಕಾಯಿ-2
    * ಅರಿಶಿಣ- ಸ್ವಲ್ಪ
    * ಮೆಣಸಿನ ಪುಡಿ- ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ 2 ಕ್ಯಾಪ್ಸಿಕಂ, 2 ಟೊಮೆಟೊ ಮತ್ತು 1 ಇಡೀ ಬೆಳ್ಳುಳ್ಳಿಯನ್ನು ರೋಸ್ಟ್ ಮಾಡಿಕೊಳ್ಳಿ.
    * ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಉದ್ದಿನ ಬೇಳೆ, ಕಡ್ಲೆ ಬೇಳೆ, ದನಿಯಾ, ಜೀರಿಗೆ ಕೆಂಪು ಮೆಣಸಿನಕಾಯಿ ಫ್ರೈ ಮಾಡಿಕೊಳ್ಳಬೇಕು. ಇದನ್ನೂ ಓದಿ: ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?

    * ಹುರಿದ ಪದಾರ್ಥಗಳನ್ನು ಮಿಕ್ಸರ್ ಜಾರ್ಗೆ ಹಾಕಿ ಸ್ವಲ್ಪ ಉಪ್ಪು ಸೇರಿಸಿ ರುಬ್ಬಿಕೊಳ್ಳಬೇಕು.

    * ಅಡುಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕೆಂಪು ಮೆಣಸಿನಕಾಯಿ, ಅರಿಶಿಣ, ಮೆಣಸಿನ ಪುಡಿ ಸೇರಿಸಿ ಒಗ್ಗರಣೆಯನ್ನು ತಯಾರಿಸಿ ಕೊಳ್ಳಬೇಕು.
    * ರುಬ್ಬಿ ಮಿಶ್ರಣಕ್ಕೆ ಒಗ್ಗರಣೆಯನ್ನು ಸೇರಿಸಿದರೆ ರುಚಿಯಾದ ಕ್ಯಾಪ್ಸಿಕಂ ಚಟ್ನಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

  • ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?

    ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?

    ವಿಶೇಷವೇನಿಲ್ಲ, ಆದರೂ ರುಚಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ.  ಹಾಗಾದರೆ ನೀವು ಹೋಟೆಲ್‌ನಲ್ಲಿ ನಾಲಿಗೆ ಚಪ್ಪರಿಸಿ ತಿನ್ನುವ ಪನೀರ್ ಭುರ್ಜಿವನ್ನು ಮನೆಯಲ್ಲಿ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಪನೀರ್ – 2 ಕಪ್
    * ಅಡುಗೆ ಎಣ್ಣೆ- ಅರ್ಧ ಕಪ್
    * ಬೆಣ್ಣೆ- ಸ್ವಲ್ಪ
    * ಜೀರಿಗೆ- 1 ಚಮಚ
    * ರಚಿಗೆ ತಕ್ಕಷ್ಟು ಉಪ್ಪು
    * ಕಡಲೆ ಹಿಟ್ಟು- 1 ಚಮಚ
    * ಟೊಮೆಟೊ – 1
    * ಕ್ಯಾಪ್ಸಿಕಂ- 1
    * ಗರಂ ಮಸಾಲಾ- 1 ಚಮಚ
    * ಕಸೂರಿ ಮೇಥಿ- ಸ್ವಲ್ಪ
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಈರುಳ್ಳಿ-1
    * ಶುಂಠಿ ಬೆಳ್ಳುಳ್ಳಿ ಪೇಸ್ಟ್- 2 ಚಮಚ
    * ಅರಿಶಿಣ- 1 ಚಮಚ
    * ಮೆಣಸಿನ ಪುಡಿ- 1ಚಮಚ
    * ಜೀರಿಗೆ ಪುಡಿ- 1 ಚಮಚ
    * ದನಿಯಾ ಪುಡಿ- 1ಚಮಚ

    ಮಾಡುವ ವಿಧಾನ:
    * ಪಾತ್ರೆಗೆ ಅಡುಗೆ ಎಣ್ಣೆ, ಬೆಣ್ಣೆ, ಜೀರಿಗೆ, ಈರುಳ್ಳಿ, ಟೊಮೆಟೋ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಹಾಕಿ ಚೆನ್ನಾಗಿ ಬೇಯಿಸಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ಈಗ ಅರಿಶಿಣ, ಮೆಣಸಿನ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಉಪ್ಪು, ಕ್ಯಾಪ್ಸಿಕಂ, ಹಿಸುಕಿದ ಪನೀರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.

    * ಗರಂ ಮಸಾಲಾ, ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬೇಯಿಸಿದರೆ ಪನೀರ್ ಭುರ್ಜಿ ಸವಿಯಲು ಸಿದ್ಧವಾಗುತ್ತದೆ. ಚಪಾತಿಯೊಂದಿಗೆ ಪನೀರ್ ಭುರ್ಜಿಯನ್ನು ಸೇವಿಸಬಹುದಾಗಿದೆ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

  • ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡಿ- ಸಖತ್ ಟೇಸ್ಟ್ ಆಗಿರುತ್ತೆ

    ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡಿ- ಸಖತ್ ಟೇಸ್ಟ್ ಆಗಿರುತ್ತೆ

    ಬಿಸಿಲಿನ ತಾಪಮಾನ ಹೆಚ್ಚಾಗಿದೆ. ರಾಗಿ ಆರೋಗ್ಯಕ್ಕೆ ಉತ್ತಮವಾದ ಆಹಾರ. ಹೀಗಾಗಿ ಮನೆಯಲ್ಲಿರುವ ಮಕ್ಕಳು, ವೃದ್ಧರಿಗೆ ಆರೋಗ್ಯಕರವಾದ ರಾಗಿ ಮಾಲ್ಟ್ ಮಾಡಿ ಕೊಡಿ. ಪ್ರತಿದಿನ ರಾಗಿ ಮಾಲ್ಟ್ ಮಾಡಿ ಕುಡಿದರೆ ತೂಕವನ್ನು ಕಡಿಮೆ ಮಾಡಬಹುದು. ರಾಗಿ ಮಾಲ್ಟ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ರಾಗಿ ಹಿಟ್ಟು- 1 ಕಪ್
    * ಟೀಸ್ಪೂನ್ ಬೆಲ್ಲ- 2ಚಮಚ
    * ಹಾಲು- 1ಕಪ್
    * ಏಲಕ್ಕಿ ಪುಡಿ -ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲನೆಯದಾಗಿ, ಸಣ್ಣ ಕಪ್‍ನಲ್ಲಿ ರಾಗಿ ಹಿಟ್ಟು ನೀರನ್ನು ಹಾಕಿ ಯಾವುದೇ ಉಂಡೆಗಳಾಗದಂತೆ ಮಿಶ್ರ ಮಾಡಿಟ್ಟಿರಿ.

    * ಈಗ ಪಾತ್ರೆಗೆ ನೀರನ್ನು ಹಾಕಿ, ನೀರು ಕುದಿಯಲು ಬಂದ ನಂತರ ಕರಗಿದ ರಾಗಿ ಹಿಟ್ಟಿನಲ್ಲಿ ಸೇರಿಸಿ. ಇದನ್ನೂ ಓದಿ: ಚೆನ್ನ ಪಲಾವ್ ಮಾಡುವ ಸರಳ ವಿಧಾನ ನಿಮಗಾಗಿ

    * ಮಿಶ್ರಣವು 5 ನಿಮಿಷಗಳ ನಂತರ ದಪ್ಪವಾಗುತ್ತದೆ. ಆಗ ಬೆಲ್ಲ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಬೇಕು. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನಂತರ ಹಾಲು, ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಬಿಸಿ ಬಿಸಿ ರಾಗಿ ಗಂಜಿ ಅಥವಾ ರಾಗಿ ಮಾಲ್ಟ್ ಸವಿಯಲು ಸಿದ್ಧವಾಗುತ್ತದೆ.

  • ಮನೆಯಲ್ಲಿರುವ ಸಾಮಗ್ರಿಗಳಲ್ಲಿ ಮಾಡಿ ಸೂಪರ್ ಆಗಿರುವ ಟೊಮೆಟೊ ಸೂಪ್

    ಮನೆಯಲ್ಲಿರುವ ಸಾಮಗ್ರಿಗಳಲ್ಲಿ ಮಾಡಿ ಸೂಪರ್ ಆಗಿರುವ ಟೊಮೆಟೊ ಸೂಪ್

    ನಾಲಿಗೆಯ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ. ಬಿಸಿ ಬಿಸಿಯಾದ ವಿಭಿನ್ನ ರುಚಿಯನ್ನು ಹೊಂದಿರುವ ಸೂಪ್‌ನ್ನು ಸೇವಿಸಬೇಕು ಎನಿಸುತ್ತಿದೆಯಾ. ಹಾಗಾದರೆ ಮನೆಯಲ್ಲಿರುವ ಸಾಮಗ್ರಿಗಳಲ್ಲಿ ಸೂಪರ್ ಆಗಿರುವ ಟೊಮೆಟೊ ಸೂಪ್‌ನ್ನು ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಬೆಣ್ಣೆ- 2 ಚಮಚ
    * ಈರುಳ್ಳಿ – 1
    * ಬೆಳ್ಳುಳ್ಳಿ- 1
    * ಪಲಾವ್ ಎಲೆ- 1
    * ಟೊಮೆಟೊ -3
    * ಕ್ಯಾರೆಟ್- 1
    * ರುಚಿಗೆ ತಕ್ಕಷ್ಟು ಉಪ್ಪು
    * ಸಕ್ಕರೆ- 1 ಚಮಚ
    * ಪೆಪ್ಪರ್ ಪೌಡರ್ 1ಚಮಚ

    ಮಾಡುವ ವಿಧಾನ:
    * ಮೊದಲಿಗೆ, ಬೆಣ್ಣೆ ಬಿಸಿ ಮಾಡಿ, ಈರುಳ್ಳಿ, ಬೆಳ್ಳುಳ್ಳಿ, ಎಲೆ ಸೇರಿಸಿ ಸ್ವಲ್ಪ ಬೇಯಿಸಿಕೊಳ್ಳಿ.
    * ನಂತರ ಟೊಮೆಟೊ, ಕ್ಯಾರೆಟ್ ಉಪ್ಪು ಸೇರಿಸಿ, ಟೊಮೆಟೊ ಮೃದುಬಾಗಿ ಬಣ್ಣ ಬದಲಾಯಿಸುವ ತನಕ ಬೇಯಿಸಿಕೊಳ್ಳಬೇಕು. ನಂತರ ಮೆದುವಾದ ಪೇಸ್ಟ್‌ಗೆ ರುಬ್ಬಿಕೊಳ್ಳಿ.

    * ಈಗ ಜರಡಿ ಇಟ್ಟು ಟೊಮೆಟೊ ಪೇಸ್ಟ್ ಅನ್ನು ಸೋಸಿರಿ.
    * ನೀರು, ಟೊಮೆಟೊ ಮಿಶ್ರಣ, ಸಕ್ಕರೆ, ಪೆಪ್ಪರ್ ಪೌಡರ್, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿದರೆ ರುಚಿಯಾದ ಸೂಪ್ ಸವಿಯಲು ಸಿದ್ಧವಾಗುತ್ತದೆ.

  • ಫಟಾ ಫಟ್ ಅಂತಾ ಮಾಡಿ ರುಚಿಯಾದ ಅಕ್ಕಿ ರೊಟ್ಟಿ

    ಫಟಾ ಫಟ್ ಅಂತಾ ಮಾಡಿ ರುಚಿಯಾದ ಅಕ್ಕಿ ರೊಟ್ಟಿ

    ರೈಸ್ ಬಾತ್​ಗಳು, ಇಡ್ಲಿ, ದೋಸೆ ಹೀಗೆ. ನಾವು ಮಸಾಲೆ ರೊಟ್ಟಿ, ಮಾಡುವುದು ಸಾಮಾನ್ಯ, ಅಕ್ಕಿ ರೊಟ್ಟಿ ಎಂದರೆ ಪ್ರತಿಯೊಬ್ಬರು ಇಷ್ಟ ಪಡುತ್ತಾರೆ. ಅಕ್ಕಿ ರೊಟ್ಟಿಯನ್ನು ಬೆಣ್ಣೆ ಅಥವಾ ತುಪ್ಪದೊಂದಿಗೆ ಬಿಸಿಯಾಗಿ ತಿಂದರೆ ಅದರ ರುಚಿಯೇ ಬೇರೆ. ಇದು ತನ್ನದೇ ಆದ ರುಚಿಯನ್ನು  ಹೊದಿದೆ. ಇನ್ನೇಕ ತಡ ಅಕ್ಕಿ ರೊಟ್ಟಿ ಮಾಡುವ ಸರಳ ವಿಧಾನ ಇಲ್ಲಿದೆ. ಒಮ್ಮೆ ಈ ಅಡುಗೆ ಮಾಡಲು ಟ್ರೈ ಮಾಡಿ ನೋಡಿ.

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ ಹಿಟ್ಟು- 2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ದೊಡ್ಡ ಪಾತ್ರೆಯಲ್ಲಿ ನೀರು, ಅಡುಗೆ ಎಣ್ಣೆ, ಉಪ್ಪು ಹಾಕಿ ನೀರನ್ನು ಕುದಿಯಲು ಬಿಡಿ.

    * ಈಗ 2 ಕಪ್ ಅಕ್ಕಿ ಹಿಟ್ಟು ಸೇರಿಸಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಅಕ್ಕಿ ಹಿಟ್ಟಿನ ಮಿಶ್ರಣವನ್ನು ದೊಡ್ಡ ಬಟ್ಟಲಿಗೆ ಹಾಕಿಕೊಂಡು ನಯವಾದ ಮತ್ತು ಮೃದುವಾಗಿ ಮಿಶ್ರ ಮಾಡಿಕೊಳ್ಳಿ. ಬೇಕಾದಲ್ಲಿ ಅಕ್ಕಿ ಹಿಟ್ಟನ್ನು ಸೇರಿಸಿಕೊಳ್ಳ ಬಹುದಾಗಿದೆ. ಇದನ್ನೂ ಓದಿ: ಫಟ್​ ಅಂತ ಮಾಡಬಹುದು ಮೈದಾ ದೋಸೆ

    * ಈಗ ಹಿಟ್ಟಿನ ಮಿಶ್ರಣದಿಂದ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಬೇಕು.
    * ನಂತರ ರೊಟ್ಟಿಯನ್ನು ಕೈಯಿಂದ ತಟ್ಟಿಕೊಳ್ಳಬೇಕು.

    * ರೊಟ್ಟಿಯನ್ನು ಬಿಸಿ ತವಾಕ್ಕೆ ವರ್ಗಾಯಿಸಿ ಬೇಯಿಸಿದರೆ ರುಚಿಯಾದ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.