Tag: recipe

  • ಚಟ್ನಿ ಜೊತೆ ಸವಿಯಿರಿ ಮಂಗಳೂರು ಸ್ಪೆಷಲ್ ನೀರ್ ದೋಸೆ

    ಚಟ್ನಿ ಜೊತೆ ಸವಿಯಿರಿ ಮಂಗಳೂರು ಸ್ಪೆಷಲ್ ನೀರ್ ದೋಸೆ

    ದೋಸೆ ಎಲ್ಲರಿಗೂ ಇಷ್ಟ. ದೋಸೆಯಲ್ಲಿಯೇ ಹಲವಾರು ವಿಧಗಳನ್ನು ಮಾಡಲಾಗುತ್ತದೆ. ಪುದೀನಾ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ಖಾಲಿ ದೋಸೆ, ಗ್ರೀನ್ ಪೀಸ್ ದೋಸೆ ಹೀಗೆ ಇದರ ಪಟ್ಟಿ ಬೆಳೆಯುತ್ತದೆ. ಈ ದೋಸೆ ತಿಂದು ನಿಮಗೆ ಬೇಸರವಾಗಿದ್ಯಾ? ಹಾಗಿದ್ರೆ ಇವತ್ತು ಮಂಗಳೂರು ಸ್ಪೇಷಲ್ ನೀರ್ ದೋಸೆ ಮಾಡಲು ಟ್ರೈ ಮಾಡೋಣ.

    ಬೇಕಾಗುವ ಸಾಮಾಗ್ರಿಗಳು:
    1 ಕಪ್ ಸೋನಾ ಮಸೂರಿ ಅಕ್ಕಿ/ ದೋಸೆ ಅಕ್ಕಿ
    ಅರ್ಧ ಕಪ್ ತುರಿದ ತೆಂಗಿನಕಾಯಿ
    1 ಟೀಸ್ಪೂನ್ ಉಪ್ಪು
    2 ಅರ್ಧ ಕಪ್ ನೀರು

    ಮಾಡುವ ವಿಧಾನ:
    * 1 ಕಪ್ ಅಕ್ಕಿಯನ್ನು 5-6 ಗಂಟೆಗಳ ಕಾಲ ನೆನೆಸಿಡಿ. ನಂತರ ಆ ನೀರನ್ನು ಸಂಪೂರ್ಣವಾಗಿ ತೆಗೆಯಿರಿ.
    *  ಅದಕ್ಕೆ 4 ಕಪ್ ತೆಂಗಿನಕಾಯಿಯನ್ನು ಸೇರಿಸಿ.
    * ಹೆಚ್ಚು ನೀರು ಸೇರಿಸದೆ ಅದನ್ನು ರುಬ್ಬಿರಿ.

    * ಅದಕ್ಕೆ 1 ಟೀಸ್ಪೂನ್ ಉಪ್ಪು ಮತ್ತು 2 ಕಪ್ ನೀರು ಸೇರಿಸಿ. ಇದನ್ನೂ ಓದಿ: ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್
    * ಹಿಟ್ಟು ತೆಳುವಾಗುವವರೆಗೂ ಚೆನ್ನಾಗಿ ಮಿಶ್ರಣ ಮಾಡಿ.
    *ನಂತರ ಬಿಸಿ ತವಾ ಮೇಲೆ ದೋಸೆ ಹಿಟ್ಟು ಸುರಿದರೇ ರುಚಿಯಾದ ನೀರ್ ದೋಸೆ ಸವಿಯಲು ಸಿದ್ಧ. ಇದನ್ನೂ ಓದಿ: ನಾಲಿಗೆ ರುಚಿ ಹೆಚ್ಚಿಸುವ ಸ್ವೀಟ್ ಕಾರ್ನ್ ಫ್ರೈಡ್ ರೈಸ್

  • ಬೇಸಿಗೆಗೆ ತಂಪಾದ ಸೋಲ್ ಕಡಿ ಅಥವಾ ಕೋಕಮ್ ಡ್ರಿಂಕ್ ಮಾಡಿ ಸವಿಯಿರಿ

    ಬೇಸಿಗೆಗೆ ತಂಪಾದ ಸೋಲ್ ಕಡಿ ಅಥವಾ ಕೋಕಮ್ ಡ್ರಿಂಕ್ ಮಾಡಿ ಸವಿಯಿರಿ

    ಬೇಸಿಗೆ ಬಂದ ತಕ್ಷಣ  ಜನರು ಹೆಚ್ಚು ದ್ರವ ರೂಪದ ಆಹಾರ ಸವಿಯಲು ಇಷ್ಟಪಡುತ್ತಾರೆ. ಅದರಲ್ಲಿ ‘ಕೋಕಮ್ ಡ್ರಿಂಕ್’ ಬೇಸಿಗೆ ಸಮಯದಲ್ಲಿ ದೇಹವನ್ನು ತಂಪಾಗಿಡಲು ತುಂಬಾ ಸಹಾಯ ಮಾಡುತ್ತೆ. ಈ ‘ಸೋಲ್ ಕಡಿ’ಗೆ ಕೋಕಮ್ ಮತ್ತು ತೆಂಗಿನ ಹಾಲನ್ನು ಬಳಸುವುದರಿಂದ ದೇಹಕ್ಕೆ ತುಂಬಾ ಉತ್ತಮವಾಗಿರುತ್ತೆ.

    Konkani Style Sol Kadhi Recipe by Archana's Kitchen
    ಬೇಕಾಗುವ ಸಾಮಾಗ್ರಿಗಳು:
    * ಕೋಕಮ್ ಅಥವಾ ಅಮ್ಸೋಲ್ – 6-8
    * ತೆಂಗಿನಕಾಯಿ ತುರಿ – 1 ಕಪ್
    * ಬಿಸಿನೀರು – 1 ಕಪ್
    * ಲವಂಗ – 2
    * ಬೆಳ್ಳುಳ್ಳಿ – 1 ಟೀ ಸ್ಪೂನ್
    * ಶುಂಠಿ – 1 ಟೀ ಸ್ಪೂನ್
    * ಹಸಿರು ಮೆಣಸಿನಕಾಯಿ – 1-2
    * ಇಂಗು – ಒಂದು ಚಿಟಿಕೆ
    * ರುಚಿಗೆ ಉಪ್ಪು, ಅಲಂಕರಿಸಲು ಕೊತ್ತಂಬರಿ ಸೊಪ್ಪು ಇದನ್ನೂ ಓದಿ:  ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್

    What Health Benefits Make Solkadhi A Popular Konkani Drink?

    ಮಾಡುವ ವಿಧಾನ:
    * ಇಂಗು ಮತ್ತು ಉಪ್ಪನ್ನು ಸೇರಿಸಿ ಸುಮಾರು 3 ರಿಂದ 4 ಕಪ್ ನೀರಿನಲ್ಲಿ ಕೋಕಮ್ ಅನ್ನು ನೆನೆಸಿ.
    * 3 – 4 ಗಂಟೆಗಳ ಕಾಲ ಪಕ್ಕಕ್ಕೆ ಇರಿಸಿ.
    * ತುರಿದ ತೆಂಗಿನಕಾಯಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿಯನ್ನು ಸ್ವಲ್ಪ ನೀರಿನೊಂದಿಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.

    Sol Kadi (Konkani Kokum Drink) – Creatively Yours

    * ರುಬ್ಬಿದ ಪೇಸ್ಟ್‍ನಿಂದ ‘ಹಾಲನ್ನು’ ಹಿಂಡಿ, 3 ರಿಂದ 4 ನೇ ಕಪ್ ನೀರನ್ನು ಸೇರಿಸಿ.
    * ನೀರಿನಿಂದ ಕೋಕಮ್ ತೆಗೆದು ಅದಕ್ಕೆ ಪೇಸ್ಟ್‍ನಿಂದ ಹಿಡಿದ ಹಾಲಿನ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
    * ಕೊನೆಯದಾಗಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಇದನ್ನೂ ಓದಿ: ನಾಲಿಗೆ ರುಚಿ ಹೆಚ್ಚಿಸುವ ಸ್ವೀಟ್ ಕಾರ್ನ್ ಫ್ರೈಡ್ ರೈಸ್

     

  • ಫಟಾ ಫಟ್ ಮಾಡಿ ಕಡಲೆಕಾಯಿ ಚಾಟ್

    ಫಟಾ ಫಟ್ ಮಾಡಿ ಕಡಲೆಕಾಯಿ ಚಾಟ್

    ಸಂಜೆ ವೇಳೆ ಟೀ, ಕಾಫಿ ಜೊತೆಗೆ ನಾಲಿಗೆ ಏನನ್ನಾದರು ತಿನ್ನಲು ಬಯಸುತ್ತದೆ. ನಾಲಿಗೆಗೆ ರುಚಿಕೊಡಬೇಕು ಹಾಗೂ ಆರೋಗ್ಯಕರವಾದ ತಿಂಡಿಯನ್ನು ತಿನ್ನಲು ನಾವು ಬಯಸುತ್ತೇವೆ. ಕಡಲೆಕಾಯಿ ಚಾಟ್ ಕೇವಲ ರುಚಿಕರ ಮಾತ್ರವಲ್ಲ,  ಆರೋಗ್ಯಕರ ಆಹಾರವಾಗಿದೆ. ಈ ಚಾಟ್ ಇನ್ನೊಂದು ಹೆಗ್ಗಳಿಕೆ ಎಂದರೆ ಇದನ್ನು ದಿನದ ಯಾವುದೇ ಹೊತ್ತಿನಲ್ಲಿ ಸೇವಿಸಬಹುದು.

    ಬೇಕಾಗುವ ಸಾಮಗ್ರಿಗಳು:
    * ಕಡಲೆಕಾಯಿ- 1 ಕಪ್
    * ಅರಿಶಿಣ- 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಮೆಣಸಿನ ಪುಡಿ- 2ಚಮಚ
    * ಚಾಟ್ ಮಸಾಲ- ಸ್ವಲ್ಪ
    * ಈರುಳ್ಳಿ- 1
    * ಟೊಮೆಟೋ- 1
    * ಬೇಯಿಸಿದ ಜೋಳ- ಅರ್ಧ ಕಪ್
    * ಮಾವಿನಕಾಯಿ- ಅರ್ಧ ಕಪ್
    * ದಾಳಿಂಬೆ- ಅರ್ಧ ಕಪ್
    * ಆಲೂಗಡ್ಡೆ (ಬೇಯಿಸಿದ್ದು)- ಅರ್ಧ ಕಪ್
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ನಿಂಬೆ ರಸ- 1ಚಮಚ

    ಮಾಡುವ ವಿಧಾನ:
    * ಮೊದಲನೆಯದಾಗಿ, ಪ್ರೆಶರ್ ಕುಕ್ಕರ್‌ನಲ್ಲಿ ಕಡಲೆಕಾಯಿ, ಅರಿಶಿಣ, ಉಪ್ಪು, ನೀರು ಸೇರಿಸಿ ಬೇಯಿಸಿಕೊಳ್ಳಬೇಕು.
    * ಒಂದು ಬೌಲ್‍ಗೆ ಮೆಣಸಿನ ಪುಡಿ, ಚಾಟ್ ಮಸಾಲ, ಕತ್ತರಿಸಿದ ಈರುಳ್ಳಿ, ಟೊಮೆಟೋ, ಜೋಳ, ಮಾವಿನಕಾಯಿ, ದಾಳಿಂಬೆ, ಮೆಣಸಿನ ಪುಡಿ, ಆಲಗಡ್ಡೆ, ಕೊತ್ತಂಬರಿ, ನಿಂಬೆರಸ ಮತ್ತು ಉಪ್ಪು ಸೇರಿಸಿ. ಇದನ್ನೂ ಓದಿ:  ನಾಲಿಗೆ ರುಚಿ ಹೆಚ್ಚಿಸುವ ಸ್ವೀಟ್ ಕಾರ್ನ್ ಫ್ರೈಡ್ ರೈಸ್


    * ನಂತರ ಬೇಯಿಸಿದ ಕಡಲೆಕಾಯಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಕಡಲೆಕಾಯಿ ಚಾಟ್ ಸಂಜೆ ತಿಂಡಿ ಆಗಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್

  • ರಾಮನವಮಿ ಸ್ಪೆಷಲ್- ಹೆಸರುಬೇಳೆ ಕೋಸಂಬರಿ ಮಾಡೋದು ಹೇಗೆ?

    ರಾಮನವಮಿ ಸ್ಪೆಷಲ್- ಹೆಸರುಬೇಳೆ ಕೋಸಂಬರಿ ಮಾಡೋದು ಹೇಗೆ?

    ರ್ನಾಟಕ ಶೈಲಿಯ ಪ್ರಮುಖ ಪಾಕವಿಧಾನಗಳಲ್ಲಿ ಹೆಸರು ಬೇಳೆ ಕೋಸಂಬರಿಯೂ ಒಂದಾಗಿದೆ. ಇದನ್ನು ಉತ್ಸವ ಹಾಗೂ ಹಬ್ಬಗಳಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿದೆ. ಹೀಗಾಗಿ ಹೆಸರು ಬೇಳೆ ಕೋಸಂಬರಿ ಮಾಡೋ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಹೆಸರು ಬೇಳೆ – 50 ಗ್ರಾಂ
    * ಬಿಡಿಸಿದ ದಾಳಿಂಬೆ ಕಾಳು – 1/4 ಕಪ್
    * ಸೌತೆಕಾಯಿ- 1
    * ಕೊತ್ತಂಬರಿ – ಸ್ವಲ್ಪ
    * ಕಾಯಿ ತುರಿ – ಸ್ವಲ್ಪ
    * ಕ್ಯಾರೆಟ್ ತುರಿ – ಸ್ವಲ್ಪ
    * ಈರುಳ್ಳಿ – ಚಿಕ್ಕದು, ಸಣ್ಣಗೆ ಹೆಚ್ಚಿದ್ದು
    * ನಿಂಬೆಹಣ್ಣು – ಮೀಡಿಯಂ ಸೈಜ್

    ಒಗ್ಗರಣೆಗೆ ಬೇಕಾಗುವ ಸಾಮಾಗ್ರಿಗಳು
    * ಕಡ್ಲೆಬೇಳೆ – 1 ಟಿಎಸ್‍ಪಿ
    * ಉದ್ದಿನ ಬೇಳೆ – 1 ಟಿಎಸ್‍ಪಿ
    * ಎಣ್ಣೆ – 2 ಟಿಎಸ್‍ಪಿ
    * ಕೆಂಪು ಮೆಣಸಿನಕಾಯಿ – 3-4
    * ಸಾಸಿವೆ – ಚಿಟಿಕೆ
    * ಇಂಗು – ಚಿಟಿಕೆ
    * ಜೀರಿಗೆ – ಚಿಟಿಕೆ
    * ಕರಿಬೇವು – ಸ್ವಲ್ಪ ಇದನ್ನೂ ಓದಿ: ರಾಜ್ಯದಲ್ಲಿಂದು ಶ್ರೀರಾಮನವಮಿ ಆಚರಣೆ – ಆಂಜನೇಯನ ದೇಗುಲಗಳಲ್ಲಿ ರಾಮನ ಆರಾಧನೆ

    ಮಾಡುವ ವಿಧಾನ
    * ಮೊದಲು ಹೆಸರುಬೇಳೆಯನ್ನು ಅರ್ಧಗಂಟೆ ನೆನೆಸಿ, ಸೋಸಿಡಿ.
    * ಒಂದು ಮಿಕ್ಸಿಂಗ್ ಬೌಲ್‍ಗೆ ಸಣ್ಣಗೆ ಹೆಚ್ಚಿ ನೀರು ಹಿಂಡಿದ ಸೌತೆಕಾಯಿ, ನೆನೆಸಿ ಸೋಸಿದ ಹೆಸರುಬೇಳೆ, ಬಿಡಿಸಿದ ದಾಳಿಂಬೆ, ಕ್ಯಾರೆಟ್ ತುರಿ, ಕಾಯಿ ತುರಿ, ಸಣ್ಣಗೆ ಕಟ್ ಮಾಡಿದ ಕೊತ್ತಂಬರಿಸೊಪ್ಪು, ಈರುಳ್ಳಿ, ನಿಂಬೆ ಹಣ್ಣಿನ ರಸ ಹಿಂಡಿ ಮಿಕ್ಸ್ ಮಾಡಿ.
    * ಒಂದು ಪ್ಯಾನ್‍ಗೆ ಎಣ್ಣೆ ಹಾಕಿ, ಎಣ್ಣೆ ಕಾದ ಮೇಲೆ ಸಾಸಿವೆ, ಜೀರಿಗೆ, ಇಂಗು, ಹಾಕಿ ಸಿಡಿದ ಮೇಲೆ, ಕಡ್ಲೆಬೇಳೆ, ಉದ್ದಿನಬೇಳೆ ಹಾಕಿ ಫ್ರೈ ಮಾಡಿ. ಆಮೇಲೆ ಕರಿಬೇವು, ಕೆಂಪು ಮೆಣಸಿನಕಾಯಿ ಹಾಕಿ ಫ್ರೈ ಮಾಡಿಡಿ.
    * ಬಳಿಕ ಫ್ರೈ ಮಾಡಿಟ್ಟ ಒಗ್ಗರಣೆಯನ್ನು ಮಿಕ್ಸಿಂಗ್ ಬೌಲ್‍ನಲ್ಲಿರುವ ಹೆಸರುಬೇಳೆ ಮಿಕ್ಸ್‍ಗೆ ಸೇರಿಸಿ ಕಲಸಿ ಸವಿಯಿರಿ.

  • ಮೊಸರು ರಾಯಿತ ಮಾಡುವ ವಿಧಾನ ನಿಮಗಾಗಿ

    ಮೊಸರು ರಾಯಿತ ಮಾಡುವ ವಿಧಾನ ನಿಮಗಾಗಿ

    ರೋಗ್ಯವಾದ ‘ಮೊಸರು ರಾಯಿತ’ ಮಾಡಿವುದರಿಂದ ಈ ಬೇಸಿಗೆಯಲ್ಲಿ ನಿಮ್ಮ ಚರ್ಮಕ್ಕೆ ಬೇಕಾದ ಪೋಷಕಾಂಶ ಹೆಚ್ಚು ಸೀಗುತ್ತೆ. ಇದನ್ನು ಮಾಡುವುದು ಸುಲಭವಾಗಿದ್ದು, ಮನೆಯಲ್ಲಿರುವ ಸಾಮಾಗ್ರಿಗಳನ್ನೆ ಬಳಸಿಕೊಂಡು ಮೊಸರು ರಾಯಿತ ರೆಡಿ ಮಾಡಬಹುದು.

    ಬೇಕಾಗುವ ಸಾಮಗ್ರಿಗಳು:
    * ಮೊಸರು- 1 ಕಪ್
    * ಈರುಳ್ಳಿ – 1
    * ರುಚಿಗೆ ತಕ್ಕಷ್ಟು ಉಪ್ಪು
    * ಜೀರಿಗೆ ಪುಡಿ- 1 ಚಮಚ
    * ಖಾರದಪುಡಿ- ಅರ್ಧ ಚಮಚ
    * ತುಪ್ಪ- 1 ಚಮಚ
    * ಸಾಸಿವೆ – ಅರ್ಧ ಚಮಚ
    * ಜೀರಿಗೆ – ಅರ್ಧ ಚಮಚ
    * ಉದ್ದಿನ ಬೇಳೆ- 1 ಚಮಚ
    * ಒಣ ಮೆಣಸಿನಕಾಯಿ- 2
    * ಕರಿಬೇವು- 8 ರಿಂದ 10 ಎಲೆ

    ಮಾಡುವ ವಿಧಾನ:

    * ಒಂದು ಬಟ್ಟಲಿನಲ್ಲಿ ಮೊಸರು ಹಾಕಿ ಅದಕ್ಕೆ ಕತ್ತರಿಸಿದ ಈರುಳ್ಳಿ, ತುಪ್ಪ ಹಾಕಿ ಬಿಸಿಯಾದ ಬಳಿಕ ಅರ್ಧ ಚಮಚ ಸಾಸಿವೆ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.

    * ನಂತರ ಸಾಸಿವೆ ಸಿಡಿದ ನಂತರ 1 ಚಮಚ ಉದ್ದಿನ ಬೇಳೆ, 1 ಒಣ ಮೆಣಸಿನಕಾಯಿ, ಕರಿಬೇವು ಹಾಕಿ ಹುರಿಯಿರಿ ಬಳಿಕ ಒಗ್ಗರಣೆಯನ್ನು ಮೊಸರಿಗೆ ಸೇರಿಸಿದ್ರೆ ರಾಯಿತ ಸವಿಯಲು ಸಿದ್ಧವಾಗುತ್ತದೆ.

  • ಮೆಲೆನಾಡ ಸ್ಪೆಷಲ್ ಮಾವಿನಕಾಯಿ ಅಪ್ಪೆಹುಳಿ ಮಾಡುವ ವಿಧಾನ

    ಮೆಲೆನಾಡ ಸ್ಪೆಷಲ್ ಮಾವಿನಕಾಯಿ ಅಪ್ಪೆಹುಳಿ ಮಾಡುವ ವಿಧಾನ

    ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ  ಮನೆಗಳಲ್ಲಿ ಮಾಡುವ ವಿಶಿಷ್ಟ ಪದಾರ್ಥ ಅಪ್ಪೆ ಹುಳಿಯಾಗಿದೆ. ಇದು ಸ್ವಲ್ಪ ಹುಳಿಯಾಗಿದ್ದು ಕುಡಿಯಲು ಬರುತ್ತದೆ. ಹೆಚ್ಚಾಗಿ ಇದನ್ನು ಅಪ್ಪೆಕಾಯಿ ಎಂದು ಕರೆಯಲ್ಪಡುವ ಮಾವಿನಕಾಯಿಯಿಂದ ಮಾಡುವುದರಿಂದ ಅಪ್ಪೆಹುಳಿ ಎಂದು ಹೆಸರು ಬಂದಿದೆ.

    ಬೇಕಾಗುವ ಸಾಮಗ್ರಿಗಳು:
    * ಮಾವಿನಕಾಯಿ- 1
    * ಹಸಿಮೆಣಸು- 4
    * ಜೀರಿಗೆ- 1 ಚಮಚ್
    * ಸಾಸಿವೆ- 1ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- 4 ಚಮಚ
    * ಒಣ ಮೆಣಸಿನಕಾಯಿ- 2
    * ಬೆಳ್ಳುಳ್ಳಿ- 1

    ಮಾಡುವ ವಿಧಾನ:
    * ಮಾವಿನ ಕಾಯಿಯನ್ನು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
    * ಒಂದು ಮಿಕ್ಸಿ ಜಾರಿಗೆ ಹಸಿಮೆಣಸಿನಕಾಯಿ, ಹಾಗೂ ಮಾವಿನಕಾಯಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ನಂತರ ಒಂದು ಬಾಣಲೆಗೆ ಸಾಸಿವೆ, ಅಡುಗೆ ಎಣ್ಣೆ, ಜೀರಿಗೆ, ಒಣಮೆಣಸು, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿಕೊಂಡು ರುಬ್ಬಿದ ಮಾವಿನ ಕಾಯಿ ಮಿಶ್ರಣ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

    * ನಂತರ ಅಗತ್ಯವಿದ್ದಷ್ಟು ಉಪ್ಪು, ನೀರು ಸೇರಿಸಿ ಕುದಿಸಿದರೆ ರುಚಿಯಾದ ಮಾವಿನಕಾಯಿ ಅಪ್ಪೆ ಹುಳಿ ಸವಿಯಲು ಸಿದ್ಧವಾಗುತ್ತದೆ.

  • ಚುರುಮುರಿ ಚಿಕ್ಕಿ ಮಾಡುವುದು ತುಂಬಾ ಸುಲಭ ಒಮ್ಮೆ ಟ್ರೈ ಮಾಡಿ

    ಚುರುಮುರಿ ಚಿಕ್ಕಿ ಮಾಡುವುದು ತುಂಬಾ ಸುಲಭ ಒಮ್ಮೆ ಟ್ರೈ ಮಾಡಿ

    ನಿಮಗೆ ಯಾವುದಾದರೂ ಸಿಹಿ ತಿನ್ನಬೇಕು ಎಂದು ಆಸೆಯಾದಾಗ, ಮನೆಯಲ್ಲಿ ಸಮಾರಂಭ ಇದ್ದಾಗ ಅಥವಾ ವಿಶೇಷ ಹಬ್ಬಕ್ಕೆ ಮನೆಯಲ್ಲೇ ಸಿಹಿ ತಿನಿಸು ತಯಾರಿಸಬೇಕು ಎಂದಿದ್ದರೆ ಚುರುಮುರಿ ಚಿಕ್ಕಿ ಮಾಡಿ ಸಖತ್ ಟೇಸ್ಟ್ ಆಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಮಂಡಕ್ಕಿ- 4 ಕಪ್
    * ಬಾದಾಮಿ – ಅರ್ಧ ಕಪ್
    * ಕುಂಬಳಕಾಯಿ ಬೀಜಗಳು- ಸ್ವಲ್ಪ
    * ಬೆಲ್ಲ- 2 ಕಪ್
    * ತುಪ್ಪ- ಅರ್ಧ ಕಪ್
    * ಏಲಕ್ಕಿ ಪುಡಿ- 1 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಮಂಡಕ್ಕಿ ಹುರಿಯಿರಿದಿಡ್ಡುಕೊಳ್ಳಿ.
    * ನಂತರ ಬಾದಾಮಿ, ಕುಂಬಳಕಾಯಿ ಬೀಜಗಳನ್ನು ಹುರಿಯಿರಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
    * ಒಂದು ಪಾತ್ರೆಗೆ ಬೆಲ್ಲ, ತುಪ್ಪ, ನೀರನ್ನು ಹಾಕಿ, ಬೆಲ್ಲ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ.

    * ಈಗ ನೊರೆಯಾಗುವವರೆಗೆ ಕುದಿಸಿ. ಹುರಿದ ಚುರುಮುರಿ ಮತ್ತು ¼ ಟೀಸ್ಪೂನ್ ಏಲಕ್ಕಿ ಪುಡಿ, ಬಾದಾಮಿ, ಕುಂಬಳಕಾಯಿ ಬೀಜ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.  ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
    * ನಂತರ ಒಂದು ಬಟ್ಟಲಿಗೆ ತುಪ್ಪವನ್ನು ಸವರಿ ಅದಕ್ಕೆ ಬೇಯಿಸಿದ ಮಿಶ್ರಣವನ್ನು ಹಾಕಿ ತಣ್ಣಗಾಗಲು ಬಿಡಿ.
    * ಒಂದು ನಿಮಿಷ ತಣ್ಣಗಾಗಲು ಬಿಡಿ, ಮತ್ತು ಅದು ಇನ್ನೂ ಬೆಚ್ಚಗಿರುವಾಗ ತುಂಡುಗಳಾಗಿ ಕತ್ತರಿಸಿದರೆ ಚುರುಮುರಿ ಚಿಕ್ಕಿ ಸವಿಯಲು ಸಿದ್ಧವಾಗುತ್ತದೆ.

  • ಟೊಮೆಟೋ ಪಪ್ಪು ಮಾಡಿ ಅನ್ನದ ಜೊತೆಗೆ ಸೂಪರ್

    ಟೊಮೆಟೋ ಪಪ್ಪು ಮಾಡಿ ಅನ್ನದ ಜೊತೆಗೆ ಸೂಪರ್

    ಟಕ್ಕೆ ಏನನ್ನು ಮಾಡಬೇಕು ಎನ್ನುವ ಯೋಚನೆ ಇದ್ದೆ ಇರುತ್ತದೆ. ಅನ್ನ ಮಾಡಿ ಟೊಮೆಟೋ ಪಪ್ಪು ಮಾಡಿ ಸಖತ್‌ ರುಚಿ ಮತ್ತು ಆರೋಗ್ಯಕ್ಕೂ ಒಳ್ಳೆಯದಾಗಿದೆ. ಟೊಮೆಟೋ ಪಪ್ಪು ಮಾಡುವುದು ಸುಲಭ ಮತ್ತು ಸರಳವಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ತೊಗರಿ ಬೇಳೆ- ಅರ್ಧ ಕಪ್
    * ಟೊಮೆಟೊ- 3
    * ಹುಣಸೆಹಣ್ಣು- ಸ್ವಲ್ಪ
    * ಈರುಳ್ಳಿ- 1
    * ಅರಿಶಿಣ- ಸ್ವಲ್ಪ
    * ಕೆಂಪು ಮೆಣಸಿನ ಪುಡಿ- 1 ಚಮಚ
    * ಮೆಣಸಿನಕಾಯಿ- 2
    * ಅಡುಗೆ ಎಣ್ಣೆ- 2 ಚಮಚ
    * ಬೆಳ್ಳುಳ್ಳಿ- 2
    * ಸಾಸಿವೆ- 1 ಚಮಚ
    * ಉದ್ದಿನ ಬೇಳೆ- 2ಚಮಚ
    * ಜೀರಿಗೆ- 1
    * ಕೆಂಪು ಮೆಣಸಿನಕಾಯಿ- 2
    * ಕರಿಬೇವಿನ ಎಲೆ- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಕುಕ್ಕರ್‌ನಲ್ಲಿ ತೊಗರಿ ಬೇಳೆ, ಟೊಮೆಟೋ, ಹುಣಸೆಹಣ್ಣು, ಈರುಳ್ಳಿ, ಅರಿಶಿಣ, ಮೆಣಸಿನ ಪುಡಿ, ಮೆಣಸಿನಕಾಯಿ, ಅಡುಗೆ ಎಣ್ಣೆ ಮತ್ತು 3 ಕಪ್ ನೀರು ಸೇರಿಸಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ: ಕ್ಯಾಪ್ಸಿಕಂ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸೂಪರ್

    * ನಂತರ ಬಾಣೆಲೆಗೆ ಅಡುಗೆ ಎಣ್ಣೆ, ಬೆಳ್ಳುಳ್ಳಿ, ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ.

    * ನಂತರ ಬೇಯಿಸಿದ ಟೊಮೆಟೊ ದಾಲ್ ಮತ್ತು ಉಪ್ಪನ್ನು ಸೇರಿಸಿ. ಇದನ್ನೂ ಓದಿ: ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?
    * ನಂತರ ಅಗತ್ಯವಿದ್ದಷ್ಟು ನೀರು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಕುದಿಸಿದರೆ ಪಪ್ಪುವನ್ನು ಸವಿಯಲು ಸಿದ್ಧವಾಗುತ್ತದೆ.

  • ಯುಗಾದಿ ಸ್ಪೆಷಲ್ – ಬೇವು, ಬೆಲ್ಲ ಮಾಡುವ ವಿಧಾನ

    ಯುಗಾದಿ ಸ್ಪೆಷಲ್ – ಬೇವು, ಬೆಲ್ಲ ಮಾಡುವ ವಿಧಾನ

    ಹೊಸ ವರ್ಷದ ಆರಂಭದ ಸಂಕೇತವಾಗಿ ಯುಗಾದಿ ಹಬ್ಬ ಬರುತ್ತಿದೆ. ಹಬ್ಬದ ತಯಾರಿಗೆ ಈಗಾಗಲೇ ಮನೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯುಗಾದಿ ಎಂದರೆ ಸಿಹಿ-ಕಹಿಯ ಹಬ್ಬವಾಗಿದೆ. ಹಾಗಾಗಿ ಈ ಹಬ್ಬದಲ್ಲಿ ಬೇವು-ಬೆಲ್ಲ ಮಾಡುವುದು ಸಂಪ್ರದಾಯ. ಆದ್ದರಿಂದ ನಿಮಗಾಗಿ ಸಿಂಪಲ್ ಆಗಿ ಬೇವು ಬೆಲ್ಲ ಮಾಡುವ ವಿಧಾನ ಇಲ್ಲಿದೆ. ಇದನ್ನೂ ಓದಿ: ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ

    ಬೇಕಾಗುವ ಸಾಮಾಗ್ರಿ
    1. ಹುರಿಗಡಲೆ- 2 ಚಮಚ
    2. ಬೆಲ್ಲ- 1 ಚಮಚ
    3. ಒಣ ಕೊಬ್ಬರಿ ತುರಿ- 2 ಚಮಚ
    4. ಬೇವಿನ ಹೂವಿನ ದಳಗಳು -ಸ್ವಲ್ಪ ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ವಿಶೇಷ ಪಾನಕ

    ಮಾಡುವ ವಿಧಾನ:
    * ಮೊದಲಿಗೆ ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಬೇಕು.
    * ನಂತರ ಬೆಲ್ಲವನ್ನು ಸಣ್ಣದಾಗಿ ಪುಡಿ ಮಾಡಿಕೊಳ್ಳಿ.
    * ಒಣಕೊಬ್ಬರಿಯನ್ನು ಸಣ್ಣದಾಗಿ ತುರಿದುಕೊಳ್ಳಬೇಕು.
    * ಬೇವು ಸೊಪ್ಪಿನಲ್ಲಿನ ಕೇವಲ ಹೂವಿನ ದಳಗಳನ್ನು ಮಾತ್ರ ಬಿಡಿಸಿಟ್ಟುಕೊಳ್ಳಬೇಕು. ಇಲ್ಲಿ ಎಲೆಗಳ ಬದಲಾಗಿಯೇ ಹೂವಿನ ದಳ ತೆಗೆದುಕೊಳ್ಳಲಾಗಿರುತ್ತದೆ.
    * ಮೊದಲಿಗೆ ಹುರಿಗಡಲೆ ಪೌಡರ್‍ಗೆ ಬೇವು ಹೂವಿನ ದಳಗಳನ್ನು ಹದವಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ನಂತರ ಕೊಬ್ಬರಿ ತುರಿ ಹಾಕಿ ಕಲಸಿಕೊಳ್ಳಿ.
    * ಕೊನೆಗೆ ಬೆಲ್ಲದ ಪುಡಿಯನ್ನು ಮಿಶ್ರಣದಲ್ಲಿ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಯುಗಾದಿ ಹಬ್ಬ ಆಚರಿಸಲು ಬೇವು-ಬೆಲ್ಲ ರೆಡಿ ಇದನ್ನೂ ಓದಿ: ಬೇವು-ಬೆಲ್ಲ ತಿಂದು ಯುಗಾದಿಯ ವಿಶೇಷತೆ ತಿಳಿಯಿರಿ

  • ಹುರುಳಿ ರಸಂ ಮಾಡಿ ಬಿಸಿ ಅನ್ನದ ಜೊತೆಗೆ ಸೂಪರ್ ಟೇಸ್ಟ್

    ಹುರುಳಿ ರಸಂ ಮಾಡಿ ಬಿಸಿ ಅನ್ನದ ಜೊತೆಗೆ ಸೂಪರ್ ಟೇಸ್ಟ್

    ಟಕ್ಕೆ ಏನನ್ನು ಮಾಡಬೇಕು ಎನ್ನುವ ಯೋಚನೆ ಇದ್ದೆ ಇರುತ್ತದೆ. ಅನ್ನ ಮಾಡಿ ರಸಂ ಮಾಡುವ ಯೋಚನೆ ಇದ್ದರೆ ಇಂದು ಹುರುಳಿ ರಸಂ ಮಾಡಿ ಸಖತ್‌ ರುಚಿ ಮತ್ತು ಆರೋಗ್ಯಕ್ಕೂ ಒಳ್ಳೆಯದಾಗಿದೆ. ಹುರುಳಿ ರಸಂ ಮಾಡುವುದು ಸುಲಭ ಮತ್ತು ಸರಳವಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಹುರುಳಿ ಕಾಯಿ- ಅರ್ಧ ಕಪ್
    * ಅಡುಗೆ ಎಣ್ಣೆ- ಅರ್ಧ ಕಪ್
    * ಸಾಸಿವೆ- 1 ಚಮಚ
    * ಕರೀಬೇವು- ಸ್ವಲ್ಪ
    * ಮೆಂತ್ಯ- ಅರ್ಧ ಚಮಚ
    * ಜೀರಿಗೆ- 1ಚಮಚ
    * ಟೊಮೆಟೋ- 1
    * ಹುಣಿಸೇಹಣ್ಣು- ಸ್ವಲ್ಪ
    * ಅರಿಶಿಣ- ಅರ್ಧ ಚಮಚ
    * ಬೆಲ್ಲ- ಅರ್ಧ ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಬೆಳ್ಳುಳ್ಳಿ- 2
    * ಕಾಳು ಮೆಣಸು- ಅರ್ಧ ಚಮಚ

    ಮಾಡುವ ವಿಧಾನ:
    * ಹುರುಳಿ, ಉಪ್ಪು, ನೀರು ಕುಕ್ಕರ್‍ನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
    * ಬೆಳ್ಳುಳ್ಳಿ, ಜೀರಿಗೆ, ಪೆಪ್ಪರ್ ಮತ್ತು 2 ಟೀಸ್ಪೂನ್ ಬೇಯಿಸಿದ ಹುರುಳಿಯನ್ನು ಹಾಕಿ ರುಬ್ಬಿಕೊಳ್ಳಿ.
    * ಒಂದು ಪಾತ್ರೆಗೆ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಮೆಂತೆ, ಜೀರಿಗೆ ಕರಿ ಬೇವಿನ ಎಲೆಗಳನ್ನು ಸೇರಿಸಿ. ಇದನ್ನೂ ಓದಿ: ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?
    * ನಂತರ ಈ ಮೊದಲು ತಯಾರಾದ ಮಸಾಲಾವನ್ನು ಸೇರಿಸಿ ಬೇಯಿಸಬೇಕು. ಇದನ್ನೂ ಓದಿ: ಕ್ಯಾಪ್ಸಿಕಂ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸೂಪರ್

    * ಟೊಮೆಟೊ, ಹುಣಿಸೇಹಣ್ಣು, ಅರಿಶಿನ, ಬೆಲ್ಲ ಉಪ್ಪು, ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸ ಬೇಕು.
    * ನಂತರ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಯಾದ ಹುರುಳು ರಸಂ ಅನ್ನು ಬಿಸಿ ಅನ್ನದ ಜೊತೆ ಸವಿಯಲು ಸಿದ್ಧವಾಗುತ್ತದೆ.