Tag: recipe

  • ಮನೆಯಲ್ಲೇ ಮಾಡಿ ‘ಚೀಸೀ ಪಾಸ್ಟಾ ಕಟ್ಲೆಟ್’

    ಮನೆಯಲ್ಲೇ ಮಾಡಿ ‘ಚೀಸೀ ಪಾಸ್ಟಾ ಕಟ್ಲೆಟ್’

    ಸಾಮಾನ್ಯವಾಗಿ ಸ್ನಾಕ್ಸ್ ಎಂದರೇ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲಿಯೂ ಚೀಸ್‍ನಲ್ಲಿ ಮಾಡುವ ತಿಂಡಿ ಎಂದರೆ ಎಲ್ಲರ ಬಾಯಲ್ಲಿ ನೀರು ಬರುತ್ತೆ. ಚೀಸ್ ಪ್ರಿಯರಿಗೆ ಇಷ್ಟವಾಗುವ ರೆಸಿಪಿಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮ ಮನೆಯಲ್ಲೇ ಒಮ್ಮೆ ‘ಚೀಸೀ ಪಾಸ್ಟಾ ಕಟ್ಲೆಟ್’ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    * ಬೇಯಿಸಿದ ಮ್ಯಾಕರೋನಿ ಪಾಸ್ಟಾ – 1 ಕಪ್
    * ಬೆಣ್ಣೆ – 1 ಟೀಸ್ಪೂನ್
    * ಹಾಲು – 1 ಕಪ್
    * ತುರಿದ ಚೀಸ್ – 1 ಕಪ್


    * ಪುಡಿಮಾಡಿದ ಕಾರ್ನ್‍ಫ್ಲೇಕ್‍ಗಳು – 1 ಕಪ್
    * ಮೈದಾ – 2 ಕಪ್
    * ಕತ್ತರಿಸಿದ ಕೊತ್ತಂಬರಿ ಸೊಪ್ಪು – 1/2 ಕಪ್
    * ಹುರಿಯಲು ಎಣ್ಣೆ
    * ರುಚಿಗೆ ಉಪ್ಪು ಮತ್ತು ಮೆಣಸು

    ಮಾಡುವ ವಿಧಾನ:
    * ಒಂದು ಬಾಣಲೆಯಲ್ಲಿ ಬೆಣ್ಣೆ ಮತ್ತು ಮೈದಾ ಸೇರಿಸಿ ಹಿಟ್ಟು ತಯಾರಿಸಿಕೊಳ್ಳಿ.
    * ಹಾಲು, ಚಿಲ್ಲಿ ಫ್ಲೇಕ್ಸ್, ಉಪ್ಪು ಮತ್ತು ಮೆಣಸು, ಚೀಸ್ ಸೇರಿಸಿ ಉಂಡೆ ಮಾಡಿ.
    * ಕಲಸಿಟ್ಟ ಹಿಟ್ಟಿಗೆ ಎಲ್ಲ ಮಿಶ್ರಣವನ್ನು ಹಾಕಿ ಮಧ್ಯಕ್ಕೆ ಬೇಯಿಸಿದ ಮ್ಯಾಕರೋನಿ ಪಾಸ್ಟಾ ಸೇರಿಸಿ.


    * ಈ ಮಿಶ್ರಣವನ್ನು ಎಣ್ಣೆಯಲ್ಲಿ ಹಾಕಿ ಸರಿಯಾಗಿ ಫ್ರೈ ಮಾಡಿ. 30 ನಿಮಿಷಗಳ ಕಾಲ ಫ್ರಿಜ್‍ನಲ್ಲಿ ಇರಿಸಿ
    * ನಂತರ ಮತ್ತೆ ಎಣ್ಣೆಯಲ್ಲಿ ಗರಿಗರಿಯಾಗುವವರೆಗೆ ಫ್ರೈ ಮಾಡಿ

  • ಫಟಾಫಟ್‌ ಅಂತ ಮಾಡಿ ಹೆಸರುಬೇಳೆ ಹಲ್ವಾ

    ಫಟಾಫಟ್‌ ಅಂತ ಮಾಡಿ ಹೆಸರುಬೇಳೆ ಹಲ್ವಾ

    ಲ್ವಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಂತೂ ಸಿಹಿಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ದಿನಾ ಬಾಳೆಹಣ್ಣು, ಕ್ಯಾರೆಟ್, ಗೋಧಿ ಹಿಟ್ಟಿನ ಹಲ್ವಾ ಮಾಡಿ ಬೇಜಾರಾಗಿರುತ್ತೆ. ಅದಕ್ಕೆ ಈ ಬಾರಿ ಅತ್ಯಂತ ಸುಲಭ ಹಾಗೂ ರುಚಿ ರುಚಿಯಾದ ಹೆಸರುಬೇಳೆ ಹಲ್ವಾ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಹೆಸರು ಬೇಳೆ- 1 ಕಪ್
    * ತುಪ್ಪ- ಅರ್ಧ ಕಪ್
    * ಹಾಲು- 1 ಕಪ್
    * ಸಕ್ಕರೆ- 1 ಕಪ್
    * ಏಲಕ್ಕಿ ಪುಡಿ- 1 ಟೀ ಸ್ಪೂನ್
    * ಡ್ರೈಫ್ರೂಟ್ಸ್

    ಮಾಡುವ ವಿಧಾನ:
    * ಮೊದಲು ಹೆಸರು ಬೇಳೆಯನ್ನು ತೊಳೆದುಕೊಂಡು ನೀರನ್ನು ಬಸಿದಿಟ್ಟುಕೊಳ್ಳಿ. ಇತ್ತ ಸ್ಟೌವ್‍ನಲ್ಲಿ ಪ್ಯಾನ್ ಇಟ್ಟು ಅದಕ್ಕೆ 1 ಚಮಚ ತುಪ್ಪ ಹಾಕಿ. ಈ ತುಪ್ಪ ಸ್ವಲ್ಪ ಬಿಸಿಯಾಗ್ತಿದ್ದಂತೆ ಅದಕ್ಕೆ ಹೆಸರುಬೇಳೆ ಹಾಕಿ. ನಂತರ ಇದನ್ನು 5-6 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಇದು ಗರಿಗರಿಯಾದ ಬಳಿಕ ತಣಿಯಲು ಬಿಡಿ.

    * ಪೂರ್ತಿ ತಣಿದ ಬಳಿಕ ಮಿಕ್ಸಿ ಜಾರಿಗೆ ಹುರಿದಿಟ್ಟ ಹೆಸರುಬೇಳೆಯನ್ನು ಹಾಕಿ ಸ್ವಲ್ಪ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಮತ್ತೆ ಅದೇ ಪ್ಯಾನಿಗೆ 2 ಚಮಚ ತುಪ್ಪ ಹಾಕಿ ಅದಕ್ಕೆ ಪುಡಿ ಮಾಡಿಟ್ಟ ಹೆಸರು ಬೇಳೆ ಸೇರಿಸಿ ಮತ್ತೆ 2 ರಿಂದ 3 ನಿಮಿಷ ಸಣ್ಣ ಉರಿಯಲ್ಲಿ ಉರಿದುಕೊಳ್ಳಿ. ಇದನ್ನೂ ಓದಿ: ಶಿವನ ನೈವೇದ್ಯಕ್ಕೆ ಮಾಡಿ ‘ಪಾಲ್ ಪಾಯಸ’

    * ಅದಕ್ಕೆ 1 ಕಪ್ ಹಾಲು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಗಂಟಾಗಲು ಬಿಡಬೇಡಿ. ಹೆಸರು ಬೇಳೆ ಪುಡಿ ಹಾಲನ್ನು ಪೂರ್ತಿಯಾಗಿ ಹೀರಿಕೊಂಡ ಬಳಿಕ ಅದಕ್ಕೆ ಉಳಿದ ತುಪ್ಪವನ್ನು ಬೆರೆಸಿ ಮತ್ತೆ ಪುನಃ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ 1 ಕಪ್ ಸಕ್ಕರೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಪ್ಯಾನ್ ಬದಿಯಲ್ಲಿ ತುಪ್ಪ ಬಿಡಲು ಶುರುವಾದಾಗ ಕಾಲು ಚಮಚ ಏಲಕ್ಕಿ ಪುಡಿ ಮಿಕ್ಸ್ ಮಾಡಿಕೊಳ್ಳಿ. ಕೊನೆಗೆ ಡ್ರೈಫ್ರೂಟ್ಸ್ ಹಾಕಿ ಚೆನ್ನಾಗಿ ಕಲಸಿ. ಈಗ ಮೂಂಗು ದಾಲ್ ಹಲ್ವಾ ಅಥವಾ ಹೆಸೆರುಬೇಳೆ ಹಲ್ವಾ ಸವಿಯಲು ಸಿದ್ಧ.

  • ಶಿವನ ನೈವೇದ್ಯಕ್ಕೆ ಮಾಡಿ ‘ಪಾಲ್ ಪಾಯಸ’

    ಶಿವನ ನೈವೇದ್ಯಕ್ಕೆ ಮಾಡಿ ‘ಪಾಲ್ ಪಾಯಸ’

    ಶುಭ ಸೋಮವಾರ ಶಿವನಿಗೆ ತುಂಬಾ ಇಷ್ಟವಾದ ದಿನ. ಈ ದಿನ ಶಿವನ ನೈವೇದ್ಯಕ್ಕೆ ವಿಶೇಷ ರೆಸಿಪಿ ಟ್ರೈ ಮಾಡಿ. ಅದೇ ‘ಪಾಲ್ ಪಾಯಸ’ ಇದನ್ನು ಮಾಡುವುದು ತುಂಬಾ ಸುಲಭ ಮತ್ತು ಕಡಿಮೆ ಪದಾರ್ಥದಲ್ಲಿ ಮಾಡಬಹುದು. ಈ ಪಾಯಸವನ್ನು ದೇಶಾದ್ಯಂತ ವಿವಿಧ ದೇವಾಲಯಗಳಲ್ಲಿ ‘ಪ್ರಸಾದ’ವಾಗಿ ನೀಡಲಾಗುತ್ತದೆ.

    ಬೇಕಾದ ಪದಾರ್ಥಗಳು:
    * ಅಕ್ಕಿ – 50 ಗ್ರಾಂ
    * ಹಾಲು – 1 ಲೀಟರ್
    * ಏಲಕ್ಕಿ ಪುಡಿ – 5 ಗ್ರಾಂ
    * ಸಕ್ಕರೆ – 100 ಗ್ರಾಂ


    * ತುಪ್ಪ – 50 ಮಿಲಿ
    * ಗೋಡಂಬಿ – 50 ಗ್ರಾಂ
    * ಒಣದ್ರಾಕ್ಷಿ – 25 ಗ್ರಾಂ

    ಮಾಡುವ ವಿಧಾನ:
    * ಅಕ್ಕಿಯನ್ನು ತೊಳೆದು 1/2 ಗಂಟೆ ನೆನೆಸಿಡಿ.
    * ಒಂದು ಬಾಣಲಿಯಲ್ಲಿ ಹಾಲನ್ನು ಹಾಕಿ ನಂತರ ಅದಕ್ಕೆ ಅಕ್ಕಿಯನ್ನು ಹಾಕಿ ಬೇಯಿಸಿ.
    * ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ಸಕ್ಕರೆ ಕರಗುವ ತನಕ ಸರಿಯಾಗಿ ಬೆರೆಸಿ(ಗಟ್ಟು ಆಗದಂತೆ ನೋಡಿಕೊಳ್ಳಿ)


    * ಇನ್ನೊಂದು ಪ್ಯಾನ್‍ನಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಗೋಡಂಬಿ ಹಾಕಿ ಗೋಲ್ಡನ್ ಆಗುವವರೆಗೂ ಹುರಿಯಿರಿ. ನಂತರ ಅದಕ್ಕೆ ಒಣದ್ರಾಕ್ಷಿ ಸೇರಿಸಿ ಮತ್ತು ಒಂದು ನಿಮಿಷ ಹುರಿಯಿರಿ.
    * ಅಕ್ಕಿ ಮಿಶ್ರಣದ ಮೇಲೆ ತುಪ್ಪದಿಂದ ಕರಿದ ದ್ರಾಕ್ಷಿ, ಗೋಡಂಬಿ ಹಾಕಿ, ಸ್ವಲ್ಪ ತಣ್ಣಗಾದ ಮೇಲೆ ಬಡಿಸಿ.

  • 10 ನಿಮಿಷದಲ್ಲಿ ಮಾಡಿ ‘ಚಿಕನ್ ಸೀಕ್ ಕಬಾಬ್’

    10 ನಿಮಿಷದಲ್ಲಿ ಮಾಡಿ ‘ಚಿಕನ್ ಸೀಕ್ ಕಬಾಬ್’

    ಭಾನುವಾರ ಏನಾದರೂ ವಿಶೇಷ ಅಡುಗೆ ಮಾಡಬೇಕು ಎಂದು ಎಲ್ಲರಿಗೂ ಅನಿಸುತ್ತೆ. ಅದೇ ರೀತಿ ಕೇವಲ ಹತ್ತೇ ನಿಮಿಷದಲ್ಲಿ ʼಚಿಕನ್ ಸೀಕ್ ಕಬಾಬ್ʼ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಸಲಾಗುತ್ತೆ.

    ಬೇಕಾಗುವ ಪದಾರ್ಥಗಳು:
    * ಚಿಕನ್ – 500 ಗ್ರಾಂ
    * ಬೆಳ್ಳುಳ್ಳಿ, ಲವಂಗ – 4-6(ನುಣ್ಣಗೆ ಕತ್ತರಿಸಿಕೊಳ್ಳಿ)
    * ಶುಂಠಿ – ಸ್ವಲ್ಪ
    * ಕತ್ತರಿಸಿದ ಈರುಳ್ಳಿ – 1 ಕಪ್
    * ಚಾಟ್ ಮಸಾಲಾ – 1 ಟೀಸ್ಪೂನ್
    * ಗರಂ ಮಸಾಲಾ – 1 ಟೀಸ್ಪೂನ್


    * ಬಿಳಿ ಮೆಣಸು ಪುಡಿ – 1 ಟೀಸ್ಪೂನ್
    * ಕತ್ತರಿಸಿದ ತಾಜಾ ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ತುಪ್ಪ ಇದನ್ನೂನ ಓದಿ: ಚೆಟ್ಟಿನಾಡ್ ಶೈಲಿಯಲ್ಲಿ ಮಾಡಿ ಫಿಶ್ ಫ್ರೈ

    ಮಾಡುವ ವಿಧಾನ:
    * ಒಂದು ಬಟ್ಟಲಿನಲ್ಲಿ ಕಟ್ ಮಾಡಿದ ಚಿಕನ್, ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಚಾಟ್ ಮಸಾಲಾ, ಗರಂ ಮಸಾಲಾ, ಬಿಳಿ ಮೆಣಸು ಪುಡಿ, ತಾಜಾ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
    * ತವಾವನ್ನು ಬಿಸಿ ಮಾಡಿ ಅದರ ಮೇಲೆ ಸ್ವಲ್ಪ ತುಪ್ಪ ಸವರಿ.


    * ನಿಮ್ಮ ಕೈಗಳನ್ನು ಒದ್ದೆ ಮಾಡಿ, ಸ್ವಲ್ಪ ಚಿಕ್ಕನ್ ಮಿಶ್ರಣವನ್ನು ತೆಗೆದುಕೊಂಡು ಅದನ್ನು ತವಾದ ಮೇಲೆ ಹರಡಿ.
    * ತವಾ ಮೇಲೆ ಸೀಕ್ ಕಬಾಬ್ ಇರಿಸಿ ಬೇಯಿಸುತ್ತ ತಿರುಗಿಸಿ. ಇದರಿಂದ ಚಿಕನ್ ಸುತ್ತಲೂ ಸಮವಾಗಿ ಬೇಯುತ್ತೆ.
    * ಕೊನೆಗೆ ಚಿಕನ್ ಸೀಕ್ ಕಬಾಬ್ ಒಂದು ಪ್ಲಾಟ್‍ಗೆ ಇಟ್ಟು, ನಿಂಬೆ ರಸ ಹಾಕಿ ಬಡಿಸಿ.

  • ಮನೆಯಲ್ಲಿಯೇ ಮಾಡಬಹುದು ಸರಳವಾದ ಸಬ್ಬಕ್ಕಿ ಪಾಯಸ

    ಮನೆಯಲ್ಲಿಯೇ ಮಾಡಬಹುದು ಸರಳವಾದ ಸಬ್ಬಕ್ಕಿ ಪಾಯಸ

    ಸಾಮಾನ್ಯವಾಗಿ ಸಿಹಿ ಎಂದ ತಕ್ಷಣ ಮೊದಲಿಗೆ ನೆನೆಪಾಗುವುದು ಪಾಯಸ. ಯಾವುದೇ ಹಬ್ಬ, ಕಾರ್ಯಕ್ರಮಗಳಲ್ಲಿ ಸಿಹಿಯೂಟದ ಜೊತೆಗೆ ಪಾಯಸ ಕಡ್ಡಾಯವಾಗಿ ಹಾಕುತ್ತಾರೆ. ಮಕ್ಕಳಿಂದ ವಯಸ್ಸಾದವರವರೆಗೂ ಪಾಯಸ ಎಂದರೆ ಎಲ್ಲರೂ ಬಾಯಿ ಚಪ್ಪರಿಸುತ್ತಾರೆ. ಪಾಯಸದಲ್ಲಿ ಹಾಲು ಪಾಯಸ, ಶಾವಿಗೆ ಪಾಯಸ, ಹೆಸರು ಬೆಳೆ ಪಾಯಸ ಹೀಗೆ ವಿಧ, ವಿಧವಾದ ಹಲವಾರು ಪಾಯಸಗಳಿದೆ. ಅವುಗಳಲ್ಲಿ ಸಬ್ಬಕ್ಕಿ ಪಾಯಸ ಕೂಡ ಒಂದು. ನಿಮಗೆ ತಕ್ಷಣಕ್ಕೆ ಸಿಹಿ ಮಾಡಿ ಸವಿಯ ಬೇಕೆಂದರೆ ಮನೆಯಲ್ಲಿಯೇ ಫಟಾಫಟ್ ಎಂದು ಸಬ್ಬಕ್ಕಿ ಪಾಯಸ ಮಾಡಿ ಸವಿಯಬಹುದು.

    ಬೇಕಾಗುವ ಸಾಮಗ್ರಿಗಳು:
    * 1/4 ಕಪ್ ಸಬ್ಬಕ್ಕಿ
    * ಏಲಕ್ಕಿಕಾಯಿ ಪುಡಿ
    * 1/4 ಕಪ್ ಸಕ್ಕರೆ
    * ದ್ರಾಕ್ಷಿ, ಗೋಡಂಬಿ
    * ಕೇಸರಿ ದಳ
    * ಬಾದಮಿ ಪುಡಿ- 1 ಚಮಚ
    * ಹಾಲು – 3 ಕಪ್
    * ತುಪ್ಪ -1 ಚಮಚ

    ಮಾಡುವ ವಿಧಾನ:
    * ಒಂದು ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ ಗೋಡಂಬಿಯನ್ನು ಉರಿದುಕೊಳ್ಳಬೇಕು.
    * ಬಾಣಲಿಲೆಗೆ ಹಾಲನ್ನು ಸುರಿದುಕೊಂಡು ನೀರಿನಲ್ಲಿ ನೆನೆಸಿಟ್ಟಿದ್ದ ಸಬ್ಬಕ್ಕಿಯನ್ನು ಬೆರೆಸಬೇಕು.
    * ಸಬ್ಬಕ್ಕಿ ಬೆಂದ ನಂತರ ಇದಕ್ಕೆ ಸಕ್ಕರೆ ಹಾಕಬೇಕು. ನಂತರ ಒಂದು ಕಪ್ ಹಾಲಿನಲ್ಲಿ ನೆನಸಿಟ್ಟ ಕೇಸರಿಯನ್ನು ಮಿಶ್ರಣ ಮಾಡಬೇಕು. ಬಳಿಕ 5-6 ನಿಮಿಷ ಚೆನ್ನಾಗಿ ಕುದಿಸಬೇಕು.
    * 10 ನಿಮಿಷ ಕುದಿಸಿದ ನಂತರ ಬಾದಾಮಿ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಬೇಕು. ಕ್ರೀಮಿ ರೀತಿ ಇರುವ ಪಾಯಸವನ್ನು ಸ್ಟವ್ ಮೇಲಿಂದ ಕೆಳಗೆ ಇಳಿಸಿ ಕಪ್‍ನಲ್ಲಿ ಬಡಿಸಿಕೊಂಡರೆ, ಪಾಯಸ ಸವಿಯಲು ಸಿದ್ಧ. ಇದನ್ನೂ ಓದಿ: ಚೆಟ್ಟಿನಾಡ್ ಶೈಲಿಯಲ್ಲಿ ಮಾಡಿ ಫಿಶ್ ಫ್ರೈ

  • ಬಾಯಿ ಚಪ್ಪರಿಸುವ ‘ಆಲೂ ಚಾಟ್’ ಮಾಡಿ ಸವಿಯಿರಿ

    ಬಾಯಿ ಚಪ್ಪರಿಸುವ ‘ಆಲೂ ಚಾಟ್’ ಮಾಡಿ ಸವಿಯಿರಿ

    ಲ್ಲೂಗೆಡ್ಡೆಯಲ್ಲಿ ಹೆಚ್ಚು ಚಾಟ್, ಚಿಪ್ಸ್‌ಗಳು ಬರುತ್ತಿದ್ದು, ಇದನ್ನು ಆಹಾರಪ್ರಿಯರು ಸವಿದು ಖುಷಿಪಡುತ್ತಿದ್ದಾರೆ. ಅದರಂತೆ ಇಂದು ವಿಶೇಷವಾಗಿ ಮತ್ತು ಸರಳವಾಗಿ ‘ಆಲೂ ಚಾಟ್’ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಹೇಳಿಕೊಡಲಾಗುತ್ತೆ. ಈ ರೆಸಿಪಿ ಸರಳವಾಗಿದ್ದು, ರುಚಿಕರವಾಗಿದೆ.

    ಬೇಕಾಗುವ ಸಾಮಾಗ್ರಿಗಳು:
    * ಬೇಯಿಸಿದ ಆಲೂಗಡ್ಡೆ- 2(ಸಿಪ್ಪೆ ಸುಲಿಯಬೇಕು)
    * ರೆಡ್ ಚಿಲ್ಲಿ ಪೌಡರ್ – 1/2 ಟೀ ಸ್ಪೂನ್
    * ಜೀರಿಗೆ-ಕೊತ್ತಂಬರಿ ಪುಡಿ – 1/2 ಟೀಸ್ಪೂನ್
    * ಚಾಟ್ ಮಸಾಲಾ ಪೌಡರ್ – 1/2 ಟೀಸ್ಪೂನ್
    * ನಿಂಬೆ ರಸ – 1 ಟೀಸ್ಪೂನ್


    * ಸಣ್ಣದಾಗಿ ಕತ್ತರಿಸಿದ ಈರುಳ್ಳಿ – 1/4 ಕಪ್
    * ಹಸಿರು ಕೊತ್ತಂಬರಿ ಚಟ್ನಿ – 1 ಟೀಸ್ಪೂನ್
    * ಸಿಹಿ ಹುಣಸೆಹಣ್ಣಿನ ಚಟ್ನಿ – 1 ಟೀಸ್ಪೂನ್
    * ಮೊಸರು – 4 ಟೇಬಲ್ಸ್ಪೂನ್
    * ಸೆವ್ – 2 ಟೇಬಲ್ಸ್ಪೂನ್
    * ದಾಳಿಂಬೆ – 1 ಕಪ್
    * ಕತ್ತರಿಸಿದ ಕೊತ್ತಂಬರಿ ಸೋಪ್ಪು – 2 ಟೀಸ್ಪೂನ್
    * ರುಚಿಗೆ ಉಪ್ಪು ಮತ್ತು 2 ಟೇಬಲ್ಸ್ಪೂನ್ ಎಣ್ಣೆ ಇದನ್ನೂ ಓದಿ: ಸೋರೆಕಾಯಿಯಲ್ಲಿ ಮಾಡಿ ಸೂಪರ್ ರೆಸಿಪಿ ‘ಸ್ಟಫ್ಡ್ ಲೌಕಿ’

    ಮಾಡುವ ವಿಧಾನ:
    * ಫ್ರೈಯಿಂಗ್ ಪ್ಯಾನ್‍ಗೆ ಎಣ್ಣೆ ಹಾಕಿ ಬಿಸಿ ಮಾಡಿ. ಬೇಯಿಸಿದ ಆಲೂಗಡ್ಡೆ ದಪ್ಪ-ದಪ್ಪದಾಗಿ ಕತ್ತರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಡೀಪ್ ಫ್ರೈ ಮಾಡಿ. ಆಲೂಗಡ್ಡೆ ಗೋಲ್ಡನ್ ಬ್ರೌನ್ ಬಂದ ಮೇಲೆ 4-5 ನಿಮಿಷಗಳು ತಣ್ಣಗಾಗಲು ಬಿಡಬೇಕು.

    * ಆಲೂಗಡ್ಡೆಯನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಅದಕ್ಕೆ 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 1/2 ಟೀಸ್ಪೂನ್ ಜೀರಿಗೆ, ಕೊತ್ತಂಬರಿ ಪುಡಿ ಮತ್ತು 1/2 ಟೀಸ್ಪೂನ್ ಚಾಟ್ ಮಸಾಲಾ ಪುಡಿಯನ್ನು ಸೇರಿಸಿ. 1 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆಲೂಗಡ್ಡೆ ತುಂಡುಗಳನ್ನು ಮಸಾಲಾದೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ.

    * 1 ಟೀಸ್ಪೂನ್ ಹಸಿರು ಕೊತ್ತಂಬರಿ ಚಟ್ನಿ, 1 ಟೀಸ್ಪೂನ್ ಸಿಹಿ ಹುಣಸೆಹಣ್ಣಿನ ಚಟ್ನಿ ಮತ್ತು 1/4 ಕಪ್ ಸಣ್ಣದಾಗಿ ಕೊಚ್ಚಿದ ಈರುಳ್ಳಿ ಸೇರಿಸಿ ಎಲ್ಲವನ್ನು ಸರಿಯಾಗಿ ಮಿಕ್ಸ್ ಮಾಡಿ. ಇದನ್ನೂ ಓದಿ: ಥಟ್ಟನೆ ಮಾಡಿ ಹೆಸರು ಬೇಳೆ ಚಾಟ್

    * ಈ ಮಿಶ್ರಣವನ್ನು ಒಂದು ಬೌಲ್ ಹಾಕಿಕೊಳ್ಳಿ. ಮೊಸರು ಇಷ್ಟ ಇದ್ದವರು ಆಲೂ ಚಾಟ್ ಮೇಲೆ ಹಾಕಿಕೊಂಡು ಅದರ ಮೇಲೆ ಸೇವ್, ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆ ಹಣ್ಣನ್ನು ಹಾಕಿ ಅಲಂಕರಿಸಿ. ಕೊನೆಗೆ ಆಲೂ ಚಾಟ್ ಬಡಿಸಿ ಆನಂದಿಸಿ.

  • ಆರೋಗ್ಯಕರ, ಸಖತ್ ಟೇಸ್ಟಿಯಾದ ಕ್ಯಾರೆಟ್ ಜ್ಯೂಸ್ ಮಾಡಿ ಕುಡಿಯಿರಿ

    ಆರೋಗ್ಯಕರ, ಸಖತ್ ಟೇಸ್ಟಿಯಾದ ಕ್ಯಾರೆಟ್ ಜ್ಯೂಸ್ ಮಾಡಿ ಕುಡಿಯಿರಿ

    ಕ್ಯಾರೆಟ್‍ನಲ್ಲಿ ಹಲವಾರು ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೆ ಜೀರ್ನಾಂಗ ವ್ಯವಸ್ಥೆ, ತ್ವಚೆಯ ಆರೋಗ್ಯ, ಹೃದಯದ ಆರೋಗ್ಯ, ಮೆದುಳಿನ ಕ್ಷಮತೆ ಎಲ್ಲದಕ್ಕೂ ಕ್ಯಾರೆಟ್ ರಾಮಬಾಣವಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಶುಂಠಿ- 1 ಇಂಚು
    * ನಿಂಬೆ ಹಣ್ಣು- 1
    * ಕ್ಯಾರೆಟ್- 4
    * ಪೆಪ್ಪರ್ ಪೌಡರ್- ಸ್ವಲ್ಪ
    * ಬ್ಲ್ಯಾಕ್ ಸಾಲ್ಟ್- ಸ್ವಲ್ಪ
    * ಪುದಿನ ಎಲೆ- 2 ಇದನ್ನೂ ಓದಿ: ಸುಡುಬಿಸಿಲಿಗೆ ತಂಪಾದ ಎಳ್ಳು ಜ್ಯೂಸ್‌ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ

    ಮಾಡುವ ವಿಧಾನ:
    * ಮೊದಲು ನೀರಿನಿಂದ ಕ್ಯಾರೆಟ್‍ಗಳನ್ನು ತೊಳೆದುಕೊಂಡು ನಂತರ ಅದರ ಮೇಲ್ಪದರದ ಸಿಪ್ಪೆಯನ್ನು ತೆಗೆದು ಕ್ಯೂಸ್ ಜಾರಿಗೆ ಹಾಕಿ.
    * ಇದಕ್ಕೆ ಶುಂಠಿ, ನಿಂಬೆ ಹಣ್ಣಿನ ರಸ ಮತ್ತು ಪುದೀನಾ ಎಲೆಗಳನ್ನು ಒಟ್ಟಿಗೆ ಸೇರಿಸಿ, ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ.
    * ಬಳಿಕ ಒಂದು ಗ್ಲಾಸ್ ಕಂಟೈನರ್ ಗೆ ರುಬ್ಬಿದ ಮಿಶ್ರಣವನ್ನು ಫಿಲ್ಟರ್ ಮಾಡಿ. ಇದಕ್ಕೆ ಪೆಪ್ಪರ್ ಪೌಡರ್, ಬ್ಲ್ಯಾಕ್ ಸಾಲ್ಟ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಿಂಪಲ್ ಮತ್ತು ಆರೋಗ್ಯಕರವಾದ ಸ್ಪೈಸೀ ಕ್ಯಾರೆಟ್ ಜ್ಯೂಸ್ ಈಗ ರೆಡಿ.

  • ಬೆಳಗಿನ ತಿಂಡಿಗೆ ಮಾಡಿ ‘ಪಾಟ್ ವೆಜಿಟೆಬಲ್ ಬಿರಿಯಾನಿ’

    ಬೆಳಗಿನ ತಿಂಡಿಗೆ ಮಾಡಿ ‘ಪಾಟ್ ವೆಜಿಟೆಬಲ್ ಬಿರಿಯಾನಿ’

    ಬೇಸಿಗೆ ಸಮಯದಲ್ಲಿ ಹೆಚ್ಚು ಪೋಷಕಾಂಶ ಆಹಾರ ಸವಿಯುವುದು ತುಂಬಾ ಮುಖ್ಯ. ಅದರಲ್ಲಿಯೂ ತರಕಾರಿಯಿಂದ ಮಾಡಿದ ಆಹಾರ ಸವಿರುವುದು ದೇಹವನ್ನು ನಿಶಕ್ತಿಯಿಂದ ತಪ್ಪಿಸಲು ತುಂಬಾ ಸಹಾಯಕವಾಗುತ್ತೆ. ‘ಪಾಟ್ ವೆಜಿಟೆಬಲ್ ಬಿರಿಯಾನಿ’ಯಲ್ಲಿ ಮಸಾಲೆ ಜೊತೆಗೆ ನಿಮಗಿಷ್ಟವಾದ ತರಕಾರಿಯನ್ನು ಹಾಕಬಹುದು.

    ಬೇಕಾಗಿರುವ ಪದಾರ್ಥಗಳು:
    * ಬಾಸ್ಮತಿ ಅಕ್ಕಿ – 2 ಕಪ್
    * ಹಸಿರು ಬಟಾಣಿ – 1 ಕಪ್
    * ಕತ್ತರಿಸಿದ ಕ್ಯಾರೆಟ್ – 1 ಕಪ್
    * ಹೂಕೋಸು ಹೂಗಳು – 1 ಕಪ್
    * ಹಸಿರು ಬೀನ್ಸ್ – 1 ಕಪ್
    * ಈರುಳ್ಳಿ ಕತ್ತರಿಸಿ – 1 ಅರ್ಧ ಕಪ್
    * ಮೊಸರು – 1/2 ಕಪ್
    * ನಿಂಬೆ ರಸ – 1 ಟೀಸ್ಪೂನ್


    * ಕತ್ತರಿಸಿದ ತಾಜಾ ಪುದೀನ – 1/3 ಕಪ್
    * ಕತ್ತರಿಸಿದ ತಾಜಾ ಕೊತ್ತಂಬರಿ – 1/3 ಕಪ್
    * ಮೆಣಸಿನಕಾಯಿಗಳು – 2 ರಿಂದ 3 ಹಸಿರು
    * ಕತ್ತರಿಸಿದ ಬೆಳ್ಳುಳ್ಳಿ, ಲವಂಗ – 2 ರಿಂದ 3
    * ಕಪ್ಪು ಜೀರಿಗೆ – 1 ಟೀಸ್ಪೂನ್
    * ಬಿರಿಯಾನಿ ಮಸಾಲಾ_ 2 ಟೀಸ್ಪೂನ್(ಹೆಚ್ಚು ಅಗತ್ಯವಿದ್ದರೆ)
    * ಅಡುಗೆ ಎಣ್ಣೆ – 2 ಟೀಸ್ಪೂನ್
    * ನೀರು – 4 ಕಪ್
    * ರುಚಿಗೆ ಉಪ್ಪು

    ಮಾಡುವ ವಿಧಾನ:
    * ಅಕ್ಕಿಯನ್ನು ನೀರಿನಲ್ಲಿ ನೆನೆಸಿ ಮತ್ತು 15-20 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
    * ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಈರುಳ್ಳಿ, ಕಪ್ಪು ಜೀರಿಗೆ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಹಾಕಿ ಸುಮಾರು 8-10 ನಿಮಿಷಗಳ ಕಾಲ ಫ್ರೈ ಮಾಡಿ.
    * ಹೂಕೋಸು, ಕ್ಯಾರೆಟ್ ಮತ್ತು ಫ್ರೆಂಚ್ ಬೀನ್ಸ್ ಸೇರಿಸಿ 6-8 ನಿಮಿಷಗಳ ಕಾಲ ಹುರಿಯಿರಿ
    * ಅಂತಿಮವಾಗಿ ಮೊಸರು, ನಿಂಬೆ ರಸ, ಹಸಿರು ಬಟಾಣಿ ಮತ್ತು ನೆನೆಸಿದ ಅಕ್ಕಿ ಸೇರಿಸಿ ನಿಧಾನವಾಗಿ ಚೆನ್ನಾಗಿ ಮಿಶ್ರಣ ಮಾಡಿ.
    * ಮಿಶ್ರಣವನ್ನು ಉಪ್ಪು ಮತ್ತು ಬಿರಿಯಾನಿ ಮಸಾಲಾದೊಂದಿಗೆ ಹಾಕಿ.
    * ನಂತರ ಕತ್ತರಿಸಿದ ಪುದೀನ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಬಿರಿಯಾನಿ ಮಿಶ್ರಣವನ್ನು ಕಡಿಮೆ ಶಾಖದಲ್ಲಿ ಸುಮಾರು 18-20 ನಿಮಿಷಗಳ ಕಾಲ ಕುದಿಸಿ.

    ಈ ಸುವಾಸನೆಯ ‘ಪಾಟ್ ವೆಜ್ ಬಿರಿಯಾನಿ’ಯನ್ನು ಆನಂದಿಸಿ. ಮಸಾಲೆಯುಕ್ತ ಮೊಸರಿನೊಂದಿಗೆ ಬಿರಿಯಾನಿ ನಿಜವಾಗಿಯೂ ರುಚಿಯಾಗಿರುತ್ತದೆ.

  • ದೇವಸ್ಥಾನದ ಸ್ಟೈಲ್‍ನಲ್ಲಿ ಮಾಡಿ ‘ನೈ ಪಾಯಸ’

    ದೇವಸ್ಥಾನದ ಸ್ಟೈಲ್‍ನಲ್ಲಿ ಮಾಡಿ ‘ನೈ ಪಾಯಸ’

    ‘ನೈ ಪಾಯಸ’ ಸಾಮಾನ್ಯವಾಗಿ ಶಬರಿಮಲೈ ದೇವಸ್ಥಾನಗಳಲ್ಲಿ, ಕೇರಳದ ಅನೇಕ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ನೀಡಲಾಗುವ ವಿಶೇಷವಾದ ಸಾಂಪ್ರದಾಯಿಕ ಪಾಯಸವಾಗಿದೆ. ಈ ಟೆಸ್ಟ್‌ನಲ್ಲೇ ಪಾಯಸ ಸವಿಯಲು ನಿಮಗೆ ಈ ರೆಸಿಪಿ ಸಹಾಯ ಮಾಡುತ್ತೆ.

    ಬೇಕಾಗುವ ಸಾಮಗ್ರಿಗಳು:
    * ನುಚ್ಚು ಮಾಡಿದ ಬ್ರೌನ್ ರೈಸ್ – 1/2 ಕಪ್
    * ತುಪ್ಪ – 4 ಟೀಸ್ಪೂನ್
    * ನುಚ್ಚು ಮಾಡಿ ಬೆಲ್ಲ – 1 ಕಪ್
    * ನೀರು – 1 ಕಪ್

    * ತುರಿದ ತೆಂಗಿನಕಾಯಿ – 1/4 ಕಪ್
    * ಏಲಕ್ಕಿ ಪುಡಿ – 1/4 ಟೀಸ್ಪೂನ್
    * ಒಣ ಶುಂಠಿ ಪುಡಿ – ಒಂದು ಸಣ್ಣ ಪಿಂಚ್
    * ಮುರಿದ ಗೋಡಂಬಿ – 7 ಇದನ್ನೂ ಓದಿ: ಸೋರೆಕಾಯಿಯಲ್ಲಿ ಮಾಡಿ ಸೂಪರ್ ರೆಸಿಪಿ ‘ಸ್ಟಫ್ಡ್ ಲೌಕಿ’

    ಮಾಡುವ ವಿಧಾನ:
    * ಬೆಲ್ಲವನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಅದನ್ನು ಚೆನ್ನಾಗಿ ಪುಡಿಮಾಡಿ. ನಂತರ ಅದನ್ನು ಸ್ವಲ್ಪ ಬಿಸಿ ಮಾಡಿ, ಪಾಕದ ರೀತಿ ಮಾಡಿಕೊಳ್ಳಿ.
    * ಮಧ್ಯಮ ಉರಿಯಲ್ಲಿ ಕನಿಷ್ಠ 5 ಸೀಟಿಗಳವರೆಗೆ ಬ್ರೌನ್ ರೈಸ್ ಮೃದುವಾಗುವವರೆಗೆ ಬೇಯಿಸಬೇಕು. ನಂತರ ಬೆಲ್ಲದ ಪಾಕವನ್ನು ಬ್ರೌನ್ ರೈಸ್‍ಗೆ       ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

    * ಬೆಲ್ಲದ ಪಾಕವು ಅನ್ನದೊಂದಿಗೆ ಚೆನ್ನಾಗಿ ಮಿಶ್ರಣವಾಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ತುರಿದ ತೆಂಗಿನಕಾಯಿಯನ್ನು ಸೇರಿಸಿ.
    * ಕೊನೆಗೆ ಗೋಡಂಬಿ, ಏಲಕ್ಕಿ ಪುಡಿ, ಒಣ ಶುಂಠಿ ಪುಡಿ ಸೇರಿಸಿ ಮಿಶ್ರಣ ಮಾಡಿ ಗ್ಯಾಸ್ ಸ್ವಿಚ್ ಆಫ್ ಮಾಡಿ.
    * ಪಾಯಸ ಬೆಚ್ಚಗಾದ ಮೇಲೆ ಬಡಿಸಿ ಇದನ್ನೂ ಓದಿ:   ಬೇಸಿಗೆಗೆ ತಂಪಾದ ಸೋಲ್ ಕಡಿ ಅಥವಾ ಕೋಕಮ್ ಡ್ರಿಂಕ್ ಮಾಡಿ ಸವಿಯಿರಿ

  • ಸುಡುಬಿಸಿಲಿಗೆ ತಂಪಾದ ಎಳ್ಳು ಜ್ಯೂಸ್‌ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ

    ಸುಡುಬಿಸಿಲಿಗೆ ತಂಪಾದ ಎಳ್ಳು ಜ್ಯೂಸ್‌ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ

    ನೆತ್ತಿ ಮೇಲೆ ಬಿಸಿಲು ಸುಡುತ್ತಿದ್ದರೆ ಏನಾದ್ರೂ ತಂಪು ತಂಪಾಗಿರುವ ಪಾನೀಯ ಕುಡಿಯಬೇಕು ಅನಿಸುವುದು ಸಹಜ. ಅಂತೆಯೇ ಈ ವೇಳೆ ನಾವು ಹಣ್ಣುಗಳ ಜ್ಯೂಸ್‌ ಕುಡಿಯಲು ಅಂಗಡಿಗಳಿಗೆ ತೆರಳುತ್ತೇವೆ. ಆದರೆ ಮನೆಯಲ್ಲಿಯೇ ತಂಪಾದ ಎಳ್ಳು ಜ್ಯೂಸ್‌ ಮಾಡಿ ಕುಡಿಯಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು.

    ಹೌದು. ಎಳ್ಳು ಅನೇಕ ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ. ಇದು ಅಸ್ತಮಾ, ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು, ಕರುಳಿನ ಕ್ಯಾನ್ಸರ್‌, ಆಸ್ಟಿಯೊಪೊರೋಸಿಸ್‌, ಮೈಗ್ರೇನ್‌ ಹಾಗೂ ಮಧುಮೇಹ ರೋಗಗಳಿಗೆ ರಾಮಬಾಣ ಎಂದು ಹೇಳಲಾಗುತ್ತಿದೆ. ಇಷ್ಟು ಆರೋಗ್ಯಕರವಾದ ಎಳ್ಳು ಜ್ಯೂಸ್‌ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    ಬಿಳಿ ಎಳ್ಳು- ಅರ್ಧ ಕಪ್‌
    ಪುಡಿ ಮಾಡಿದ ಬೆಲ್ಲ- ಅರ್ಧ ಕಪ್‌
    ನೀರು- 2 ಕಪ್‌
    ಹಾಲು- 2 ಕಪ್‌
    ಏಲಕ್ಕಿ- 1

    ಮಾಡುವ ವಿಧಾನ:
    * ಚಿಕ್ಕ ಬಾಣಲೆಗೆ ಎಣ್ಣೆ ಹಾಕದೆ ಎಳ್ಳು ಸ್ವಲ್ಪ ಉಬ್ಬುವವರೆಗೆ ಹುರಿದಿಟ್ಟುಕೊಳ್ಳಬೇಕು. ನಂತರ ಅದು ತಣ್ಣಗಾಗುವವರೆಗೆ ಬಿಡಬೇಕು.
    * ಎಳ್ಳು ತಣಿದ ಬಳಿಕ ಅದಕ್ಕೆ ಬೆಲ್ಲ ಹಾಗೂ ಏಲಕ್ಕಿಯನ್ನು ಹಾಕಿ ಮಿಕ್ಸಿ ಜಾರಿನಲ್ಲಿ ಪುಡಿಮಾಡಿಕೊಳ್ಳಿ. ಈ ವೇಳೆ ಅಗತ್ಯಕ್ಕೆ ಬೇಕಾದಷ್ಟು ನೀರು ಬಳಸಿಕೊಂಡು ನಯವಾಗಿ ಅರೆಯಿರಿ. ಇದನ್ನೂ ಓದಿ: ಬೇಸಿಗೆಗೆ ತಂಪಾದ ಸೋಲ್ ಕಡಿ ಅಥವಾ ಕೋಕಮ್ ಡ್ರಿಂಕ್ ಮಾಡಿ ಸವಿಯಿರಿ

    * ಹೀಗೆ ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಹಾಲು ಮತ್ತು ಉಳಿದ ನೀರು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ.
    * ಚೆನ್ನಾಗಿ ಮಿಕ್ಸ್‌ ಆದ ಬಳಿಕ ಕೆಲ ಹೊತ್ತು ಫ್ರಿಡ್ಜ್‌ ನಲ್ಲಿಡಿ. ಈಗ ತಂಪಾದ ಎಳ್ಳು ಜ್ಯೂಸ್‌ ಸವಿಯಿರಿ. ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ಬಯಸುವವರು ಓಟ್ಸ್ ಸೂಪ್ ಮಾಡಿ ಸವಿಯಿರಿ