Tag: recipe

  • ಸಿಂಪಲ್‌ ಆಗಿ ಟ್ರೈ ಮಾಡಿ ʼಮಟನ್ ಬ್ರೈನ್ ಫ್ರೈʼ

    ಸಿಂಪಲ್‌ ಆಗಿ ಟ್ರೈ ಮಾಡಿ ʼಮಟನ್ ಬ್ರೈನ್ ಫ್ರೈʼ

    ತ್ತೀಚಿಗೆ ನಾನ್‍ವೆಜ್ ಆಹಾರ ಪ್ರಿಯರು ದಿನಕ್ಕೊಂದು ಬಗೆಯ ಖಾದ್ಯಗಳನ್ನು ಹುಡುಕುವುದು ಸಹಜ. ಕೆಲವರಂತೂ ನೆಚ್ಚಿನ ಖಾದ್ಯಕ್ಕಾಗಿ ಕಿಲೋ ಮೀಟರ್‌ಗಟ್ಟಲೇ ಅರಸಿ ಹೋಗುತ್ತಾರೆ. ವಾರಾಂತ್ಯ ಬಂತೆಂದರೆ ಸಾಕು ವಿಭಿನ್ನ ಖಾದ್ಯಗಳನ್ನೂ ಸಿದ್ಧಪಡಿಸಿ ಗ್ರಾಹಕರನ್ನು ಸೆಳೆಯಲು ಹೋಟೆಲ್ ಮಂದಿ ಕಾಯುತ್ತಿರುತ್ತಾರೆ. ಇದರಲ್ಲಿ ಮಟನ್ ಬ್ರೈನ್ ಫ್ರೈ (ಮೆದುಳು ಫ್ರೈ)ಸಹ ಒಂದು. ಆದರೀಗ ನೀವು ಯಾವುದೇ ಹೋಟೆಲ್‍ಗಳಿಗೆ ಅಲೆದಾಡಬೇಕಿಲ್ಲ. 15 ರಿಂದ 20 ನಿಮಿಷ ಸಮಯವಿದ್ದರೆ ಸಾಕು ಮನೆಯಲ್ಲೇ ಬ್ರೈನ್ ಫ್ರೈ ಮಾಡಿ ಸವಿಯಬಹುದು. ಅದರ ಚುಕುಟು ಮಾಹಿತಿ ಇಲ್ಲಿದೆ.

    ಬೇಕಾಗಿರುವ ಪದಾರ್ಥಗಳು:
    * ಮಟನ್ ಬ್ರೈನ್ – 1
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಹಸಿರು ಮೆಣಸಿನಕಾಯಿ – 1
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1/2 ಟೀಸ್ಪೂನ್
    * ಕರಿಬೇವಿನ ಎಲೆಗಳು – ಅರ್ಧ ಕಪ್
    * ಜೀರಿಗೆ – 1/4 ಟೀಸ್ಪೂನ್
    * ಲವಂಗ – 3
    * ಏಲಕ್ಕಿ – 1

    * ದಾಲ್ಚಿನ್ನಿ – 1/2
    * ಮೆಣಸು – 1/2 ಟೀಸ್ಪೂನ್
    * ಕೆಂಪು ಮೆಣಸಿನ ಪುಡಿ – 1/4 ಟೀಸ್ಪೂನ್
    * ಕೊತ್ತಂಬರಿ ಪುಡಿ – 1/4 ಟೀಸ್ಪೂನ್
    * ಗರಂ ಮಸಾಲಾ – 1 ಟೀಸ್ಪೂನ್
    * ಅರಿಶಿನ ಪುಡಿ – 1/4 ಟೀಸ್ಪೂನ್
    * ಅಗತ್ಯಕ್ಕೆ ತಕ್ಕಂತೆ ಅಡಿಗೆ ಎಣ್ಣೆ
    * ಅಗತ್ಯವಿರುವಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲು ಚೆನ್ನಾಗಿ ಮೆದುಳನ್ನು ತೊಳೆಯಿರಿ. ನಂತರ ಬೇರೆ ಪಾತ್ರೆಯಲ್ಲಿ ನೀರು, ಸ್ವಲ್ಪ ಉಪ್ಪು ಮತ್ತು ಮೆದುಳು ಸೇರಿಸಿ 5 ನಿಮಿಷಗಳ ಕಾಲ ಕುದಿಸಿ. ಪಕ್ಕದಲ್ಲಿ ಇಡಿ.
    * ಬೇರೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಜೀರಿಗೆ, ದಾಲ್ಚಿನ್ನಿ, ಲವಂಗ ಮತ್ತು ಏಲಕ್ಕಿ ಮತ್ತು ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
    * ನಂತರ ಅದಕ್ಕೆ ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಫ್ರೈ ಮಾಡಿ.


    * ಅದಕ್ಕೆ ಅರಿಶಿನ, ಉಪ್ಪು, ಮೆಣಸು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೇಯಿಸಿದ ಮೆದುಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಮಸಾಲಾದಲ್ಲಿ ಮೆದುಳನ್ನು ಸೇರಿಸಿ. ನಂತರ ಮಸಾಲೆ ಜೊತೆ ಮೆದುಳಿನೊಂದಿಗೆ ಚೆನ್ನಾಗಿ ಮಿಶ್ರಣವಾಗುವವರೆಗೆ ಮಿಕ್ಸ್ ಮಾಡಿ.
    * ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಲು ಬಿಡಿ.

    – ಈಗ ಮಟನ್ ಬ್ರೈನ್ ಪೆಪ್ಪರ್ ಫ್ರೈ ಸವಿಯಲು ಸಿದ್ಧವಾಗಿದೆ.

  • ಮುದ್ದೆ ಜೊತೆ ಸವಿಯಿರಿ ಮಸ್ಸೊಪ್ಪು ಸಾರು

    ಮುದ್ದೆ ಜೊತೆ ಸವಿಯಿರಿ ಮಸ್ಸೊಪ್ಪು ಸಾರು

    ಸ್ಸೊಪ್ಪು ಎಂಬುದು ಜನಪ್ರಿಯ ಸೊಪ್ಪು ಸಾರಿನಲ್ಲಿ ಅಗ್ರ ಸ್ಥಾನದಲ್ಲಿದೆ. ಈ ಸಾರಿನ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತೆ. ಅದರಲ್ಲಿಯೂ ಮುದ್ದೆ ಜೊತೆ ಇದರ ಕಾಂಬಿನೇಷನ್ ಸೂಪರ್ ಆಗಿ ಇರುತ್ತೆ. ಈ ಸಾರು ಮಾಡುವುದು ತುಂಬಾ ಸುಲಭ. ಅದರಲ್ಲಿಯೂ ಇದರಲ್ಲಿ ಎಲ್ಲ ರೀತಿಯ ಸೊಪ್ಪು ಮಿಶ್ರಣವಾಗಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಟ್ರೈ ಮಾಡಿ.

    ಬೇಕಾಗಿರುವ ಪದಾರ್ಥಗಳು:
    * ಕಟ್ ಮಾಡಿದ ಪಾಲಕ್ ಸೊಪ್ಪು – 2 ಕಪ್
    * ಸಬ್ಬಸಿಗೆ ಸೊಪ್ಪು – 1 ಕಪ್
    * ಮೆಂತ್ಯ ಸೊಪ್ಪು – 1 ಕಪ್
    * ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ಬೆಳೆ – 1 ಕಪ್
    * ಕಟ್ ಮಾಡಿದ ಈರುಳ್ಳಿ – ಒಂದುವರೆ ಕಪ್
    * ಕಟ್ ಮಾಡಿದ ಟೊಮೆಟೊ – 2 ಕಪ್
    * ಹಸಿ ಮೆಣಸಿನಕಾಯಿ – 3
    * ತುರಿದ ತೆಂಗಿನಕಾಯಿ – ಅರ್ಧ ಕಪ್


    * ಹುಣಸೆಹಣ್ಣು – 1 ಟೀಚಮಚ
    * ಸಾಂಬಾರ್ ಪುಡಿ – 2 ಚಮಚ
    * ಅಡುಗೆ ಎಣ್ಣೆ – 2-3 ಟೀಸ್ಪೂನ್
    * ಸಾಸಿವೆ – ಅರ್ಧ ಚಮಚ
    * ಕರಿಬೇವಿನ ಎಲೆಗಳು – 5 ಎಲೆಗಳು
    * ಒಣ ಕೆಂಪು ಮೆಣಸಿನಕಾಯಿ – 2
    * ಬೆಳ್ಳುಳ್ಳಿ – 4
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಎಲ್ಲ ಸೊಪ್ಪುಗಳನ್ನು ನೀರಿನಲ್ಲಿ ತೊಳೆಯಿರಿ. ಬೆಳೆ, ಟೊಮೆಟೊ, ಹಸಿರು ಮೆಣಸಿನಕಾಯಿ ಮತ್ತು 1 ಕಪ್ ನೀರು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ. ನಂತರ ಸ್ಪಲ್ಪ ಸಮಯ ತಣ್ಣಗಾಗಲು ಬಿಡಿ. ನಂತರ ಈ ಮಿಶ್ರಣವನ್ನು ಮಸಿಯಿರಿ. ಆದರೆ ಹೆಚ್ಚು ನುಣ್ಣಗೆ ಮಸಿಯ ಬಾರದು.
    * ಪ್ಯಾನ್‍ನಲ್ಲಿ ಎಣ್ಣೆ ಸಾಸಿವೆ, ಕರಿಬೇವು, ಒಣ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ತೆಂಗಿನಕಾಯಿ ತುರಿ, ಹುಣಸೆಹಣ್ಣು ರಸ ಮತ್ತು ಸಾಂಬಾರ್ ಪುಡಿಯನ್ನು ಹಾಕಿ ಫ್ರೈ ಮಾಡಿ.
    * ಇದಕ್ಕೆ ನೀರು 2 ರಿಂದ 3 ಕಪ್ ನೀರು ಸೇರಿಸಿ ಮಸಿದ ಸೊಪ್ಪಿನ ಮಿಶ್ರಣವನ್ನು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಸೇರಿಸಿ ಕುದಿಸಿ.
    * ಕುದಿಯಲು ಪ್ರಾರಂಭಿಸಿದ ನಂತರ, ಗ್ಯಾಸ್ ಆಫ್ ಮಾಡಿ.

    – ಈ ಸಾರನ್ನು ತುಪ್ಪದ ಜೊತೆ ರಾಗಿ ಮುದ್ದೆ / ಅನ್ನದೊಂದಿಗೆ ಬಡಿಸಿ. ಟೆಸ್ಟ್ ಮಾಡಿ.

  • 10 ನಿಮಿಷದಲ್ಲಿ ಮಾಡಿ ಪಾಲಕ್ ರೈಸ್

    10 ನಿಮಿಷದಲ್ಲಿ ಮಾಡಿ ಪಾಲಕ್ ರೈಸ್

    ಭಾರತದ ಜನರು ಮಸಾಲೆ ಪ್ರಿಯರು. ಅದರಲ್ಲಿಯೂ ದಕ್ಷಿಣ ಭಾರತದ ಜನರು ಅನ್ನವನ್ನು ಹೆಚ್ಚು ತಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುತ್ತಾರೆ. ನಾವು ಬೆಳಗಿನ ತಿಂಡಿ ವಿಭಿನ್ನವಾಗಿ ಹೇಗೆ ಮಾಡುವುದು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ. ʼಪಾಲಕ್ ರೈಸ್ʼ ರೆಸಿಪಿ  ರುಚಿಕರ ಮತ್ತು ಮಸಾಲೆಯುಕ್ತವಾಗಿದ್ದು, 10 ನಿಮಿಷದಲ್ಲಿಯೇ ಮಾಡಬಹುದು. ಅದರಲ್ಲಿಯೂ ಪಾಲಕ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಟ್ರೈ ಮಾಡಿ.

    ಬೇಕಾಗಿರುವ ಪದಾರ್ಥಗಳು:
    * ಬಾಸ್ಮತಿ ಅಕ್ಕಿ – 1 ಕಪ್
    * ತುಪ್ಪ – 2 ಚಮಚ
    * ಕಟ್ ಮಾಡಿದ ಈರುಳ್ಳಿ – ಕಪ್
    * ಹಸಿರು ಮೆಣಸಿನಕಾಯಿ – 2
    * ಕಟ್ ಮಾಡಿದ ಪಾಲಾಕ್ ಎಲೆಗಳು – 1 ಕಪ್

    * ನೆನೆಸಿದ ಬಟಾಣಿ – 1 ಕಪ್
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    * ಲವಂಗ – 1
    * ಪಲಾವ್ ಎಲೆ – 1
    * ಸಾಸಿವೆ – 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲನೆಯದಾಗಿ ಬಾಣಲೆಗೆ ತುಪ್ಪ ಹಾಕಿ ಅದಕ್ಕೆ ಸಾಸಿವೆ, ಪಲಾವ್ ಎಲೆ, ಲವಂಗ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ.
    * ಈ ಮಿಶ್ರಣಕ್ಕೆ ಕಟ್ ಮಾಡಿದ್ದ ಪಾಲಾಕ್ ಎಲೆಗಳನ್ನು ಹಾಕಿ ಒಂದು ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ.
    * ಪಾಲಾಕ್ ಎಲೆಗಳು ಫ್ರೈ ಮಾಡಿದ ನಂತರ, ಅದಕ್ಕೆ ಬಟಾಣಿ ಸೇರಿಸಿ ಫ್ರೈ ಮಾಡಿ.
    * ಈ ಫ್ರೈಗೆ ಬೇಯಿಸಿದ ಅನ್ನ ಮತ್ತು ರುಚಿಗೆ ಉಪ್ಪು ಮಿಶ್ರಣ ಮಾಡಿ, ಒಂದು ನಿಮಿಷ ಬೇಯಿಸಿ.

    – ಸ್ವಲ್ಪ ಸಮಯ ಬಿಟ್ಟು ‘ಪಾಲಕ್ ರೈಸ್’ ಅನ್ನು ರೈತಾದೊಂದಿಗೆ ಅಥವಾ ಹಾಗೆಯೇ ಬಡಿಸಿ.

  • ಬಾಯಲ್ಲಿ ನೀರೂರಿಸುವ ‘ಬೋಟಿ ಗೊಜ್ಜು’ ಮಾಡುವ ವಿಧಾನ

    ಬಾಯಲ್ಲಿ ನೀರೂರಿಸುವ ‘ಬೋಟಿ ಗೊಜ್ಜು’ ಮಾಡುವ ವಿಧಾನ

    ನಾನ್ ವೆಜ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಜನರು ನೆಚ್ಚಿನ ಆಹಾರ ಸವಿಯಲು ಪ್ರತಿಷ್ಠಿಯ ಹೋಟೆಲ್‍ಗಳನ್ನೇ ಹುಡುಕಿಕೊಂಡು ಹೋಗ್ತಾರೆ. ಆದ್ರೆ ಇನ್ಮುಂದೆ ಹಾಗೇ ಮಾಡಬೇಕಾದ್ದೇ ಇಲ್ಲ. ವಿವಿಧ ಬಗೆಯ ಮಾಂಸಾಹಾರ ಖಾದ್ಯಗಳನ್ನು ಸುಲಭವಾಗಿ ತಯಾರಿಸಿ ಮನೆಯಲ್ಲಿಯೇ ಸವಿಯಬಹುದಾಗಿದೆ. ಅದರಲ್ಲಿಯೂ ಬೋಟಿ ಗೊಜ್ಜು ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ. ಹೆಸರು ಹೇಳ್ತಿದ್ದಂತೆ ಬಾಯಲ್ಲಿ ನೀರೂರಿಸುತ್ತದೆ. ಇಂತಹ ಮಿಲ್ಟ್ರಿ ಹೋಟೆಲ್‍ಗಳ ಮೆನುವಿನಲ್ಲಿ ಕಾಣ ಸಿಗುವ ಬೋಟಿ ಗೊಜ್ಜನ್ನು ಈಗ ಮನೆಯಲ್ಲಿಯೇ ಮಾಡಿ ಸವಿಯಬಹುದಾಗಿದೆ. ಅದನ್ನು ಮಾಡೋ ವಿಧಾನ ಹೇಗೆ ಎಂಬ ಚುಟುಕು ಮಾಹಿತಿ ಇಲ್ಲಿದೆ.

    ಬೇಕಾಗಿರುವ ವಿಧಾನ:
    * ಬೋಟಿ – 500 ಗ್ರಾಂ
    * ತುರಿದ ತೆಂಗಿನಕಾಯಿ – 1 ಚಮಚ
    * ಕೊತ್ತಂಬರಿ ಪುಡಿ – 1 ಚಮಚ
    * ಅರಿಶಿನ ಪುಡಿ – ಅರ್ಧ ಚಮಚ
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    * ಗರಂ ಮಸಾಲಾ ಪುಡಿ – 2 ಚಮಚ
    * ಎಣ್ಣೆ – 1 ಚಮಚ


    * ಕೆಂಪು ಮೆಣಸಿನ ಪುಡಿ – 1 ಚಮಚ
    * ಕಟ್ ಮಾಡಿದ ಕೊತ್ತಂಬರಿ ಸೊಪ್ಪು – 1 ಕಪ್
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಲವಂಗ – 2
    * ಏಲಕ್ಕಿ – 1
    * ಚಿಕ್ಕ ಗಾತ್ರದ ದಾಲ್ಚಿನ್ನಿ – 1
    * ಅಗತ್ಯವಿರುವಷ್ಟು ನೀರು
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಬಿಸಿ ನೀರಿನಲ್ಲಿ ಬೋಟಿ ಸ್ವಚ್ಛಗೊಳಿಸಿ, ಕಟ್ ಮಾಡಿ. ಪಕ್ಕಕ್ಕೆ ಇಡಿ.
    * ಒಂದು ಪ್ಯಾನ್‍ಗೆ ಎಣ್ಣೆ ಹಾಕಿ, ನಂತರ ಅದಕ್ಕೆ ಲವಂಗ, ದಾಲ್ಚಿನ್ನಿ, ಏಲಕ್ಕಿ ಬೀಜಗಳನ್ನು ಸೇರಿಸಿ ಫ್ರೈ ಮಾಡಿ. ನಂತರ ಕಟ್ ಮಾಡಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಬೋಟಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ನೀರು ಹಾಕಿ ಬೇಯಿಸಿ.
    * ಬೋಟಿ ಗೊಜ್ಜುಗೆ ಕೊತ್ತಂಬರಿ ಪುಡಿ, ತೆಂಗಿನಕಾಯಿ ತುರಿ, ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ನಂತರ ಗರಂ ಮಸಾಲಾ ಪುಡಿ, ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿ ಕುದಿಸಿ.

    – ಇದನ್ನು ಬಿಸಿ ಬಿಸಿ ಅನ್ನ, ಚಪಾತಿ, ರೋಟಿಯೊಂದಿಗೆ ಬಡಿಸಿ.

  • ಮೊಟ್ಟೆ ಬಳಸಿ ವಿಶೇಷವಾಗಿ ಮಾಡಿ ಬ್ರೆಡ್ ಟೋಸ್ಟ್

    ಮೊಟ್ಟೆ ಬಳಸಿ ವಿಶೇಷವಾಗಿ ಮಾಡಿ ಬ್ರೆಡ್ ಟೋಸ್ಟ್

    ಬ್ರೆಡ್ ಟೋಸ್ಟ್ ಮಾಡುವುದು ಸುಲಭ . ಇದು ಮಕ್ಕಳಿಗೆ ತುಂಬಾ ಇಷ್ಟ. ಅದರಂತೆ ಮೊಟ್ಟೆಯನ್ನು ಬಳಸಿ ಬ್ರೆಡ್ ಟೋಸ್ಟ್ ಮಾಡಿದರೆ ತಿನ್ನಲು ಚೆನ್ನಾಗಿರುತ್ತದೆ. ಇದನ್ನು ಮಕ್ಕಳು ಮತ್ತು ಮನೆಯರು ಇಷ್ಟಪಟ್ಟು ತಿನ್ನುತ್ತಾರೆ. ಇಲ್ಲಿದೆ ಸರಳ ರೆಸಿಪಿ.

    ಬೇಕಾಗಿರುವ ಪದಾರ್ಥಗಳು:
    * ಬ್ರೆಡ್ – 2 ಪೀಸ್
    * ಮೊಟ್ಟೆ – 1
    * ಕಟ್ ಮಾಡಿದ ಈರುಳ್ಳಿ – ಅರ್ಧ ಕಪ್
    * ಹಸಿ ಮೆಣಸಿನಕಾಯಿ – 1
    * ಕಟ್ ಮಾಡಿದ ಟೊಮೆಟೊ – ಅರ್ಧ ಕಪ್


    * ಅರಿಶಿಣ – 1 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    * ಬೆಣ್ಣೆ – 2 ಟೀಸ್ಪೂನ್
    * ಕರದ ಪುಡಿ – 1 ಟೀಸ್ಪೂನ್
    * ತುರಿದ ಚೀಸ್ – ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಒಂದು ಬಟಲಿಗೆ ಕಟ್ ಮಾಡಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು, ಅರಿಶಿಣ ಮತ್ತು ಉಪ್ಪು ಹಾಕಿ ಕಳಸಿ.
    * ನಂತರ ಮೊಟ್ಟೆಯನ್ನು ಒಡೆದು ಮಿಶ್ರಣಕ್ಕೆ ಸೇರಿಸಿ.
    * ಪ್ಯಾನ್ ಬಿಸಿ ಮಾಡಿ ಅದಕ್ಕೆ ಮೊಟ್ಟೆ ಮಿಶ್ರಣವನ್ನು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಅದರ ಮೇಲೆ ಬ್ರೆಡ್ ಇಟ್ಟು ಬಿಸಿ ಮಾಡಿ. ಎರಡುಕಡೆ ಚೆನ್ನಾಗಿ ಬಿಸಿ ಮಾಡಿ. ಹೆಚ್ಚು ರೋಸ್ಟ್ ಆಗದಂತೆ ನೋಡಿಕೊಳ್ಳಿ.
    * ನಂತರ ಬ್ರೆಡ್‍ಗೆ ಚೀಸ್ ಹಾಕಿ ಬಿಸಿ ಮಾಡಿ.

    – ಬಿಸಿ ಇರುವಾಗಲೇ ‘ಮೊಟ್ಟೆ ಬ್ರೆಡ್ ಟೋಸ್ಟ್’ ಬಡಿಸಿ.

  • ಸಿರಿಧಾನ್ಯದಲ್ಲಿ ಒಂದಾದ ‘ನವಣೆ ಉಪ್ಪಿಟ್ಟು’ ಮಾಡಿ

    ಸಿರಿಧಾನ್ಯದಲ್ಲಿ ಒಂದಾದ ‘ನವಣೆ ಉಪ್ಪಿಟ್ಟು’ ಮಾಡಿ

    ವಣೆ ‘ಸಿರಿಧಾನ್ಯ’ಗಳಲ್ಲಿ ಒಂದು. ನವಣೆಯಲ್ಲಿ ಹೆಚ್ಚು ಕೊಬ್ಬಿನಂಶ ಇರುವುದಿಲ್ಲ. ಅದಕ್ಕೆ ಇದು ಡಯಟ್ ಫುಡ್‍ಗೆ ಹೆಚ್ಚು ಫೇಮಸ್. ಇತ್ತೀಚೆಗೆ ನವಣೆಯಲ್ಲಿ ಮಾಡಿದ ಆಹಾರಗಳು ರೆಸ್ಟೋರೆಂಟ್‌ನಿಂದ ಹಿಡಿದು ಬೀದಿ ವ್ಯಾಪಾರ ಮಾಡುವವರೆಗೂ ಸಿಗುತ್ತೆ. ಕೊರೊನಾ ನಂತರ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದ್ದು, ಆರೋಗ್ಯಕರ ಆಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಅದಕ್ಕೆ ಇಂದು ನೀವು ʼನವಣೆ ಉಪ್ಪಿಟ್ಟುʼ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ನವಣೆ – 1 ಕಪ್
    * ನೀರು – 2.5 ಕಪ್
    * ಸಾಸಿವೆ – 1/2 ಟೀಸ್ಪೂನ್
    * ಉದ್ದಿನ ಬೇಳೆ – 1 ಟೀಸ್ಪೂನ್
    * ಬೇಳೆ – 1 ಟೀಸ್ಪೂನ್
    * ಕಟ್ ಮಾಡಿದ ಈರುಳ್ಳಿ – 1 ಕಪ್


    * ಕಟ್ ಮಾಡಿದ ಟೊಮೆಟೊ – 1 ಕಪ್
    * ಹಸಿರು ಮೆಣಸಿನಕಾಯಿ – 2
    * ಕರಿಬೇವಿನ ಎಲೆಗಳು – 4-5
    * ಸಣ್ಣದಾಗಿ ಕಟ್ ಮಾಡಿದ ಶುಂಠಿ – 1 ಟೀಸ್ಪೂನ್
    * ಕಟ್ ಮಾಡಿದ ಕ್ಯಾರೆಟ್ – ಅರ್ಧ ಕಪ್
    * ಕಟ್ ಮಾಡಿದ ಬೀನ್ಸ್ – ಅರ್ಧ ಕಪ್
    * ನೆನೆಸಿದ ಹಸಿರು ಬಟಾಣಿ – ಅರ್ಧ ಕಪ್
    * ಅರಿಶಿನ ಪುಡಿ – 1/4 ಟೀಸ್ಪೂನ್
    * ಅಡುಗೆ ಎಣ್ಣೆ – 6-8 ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್
    * ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    * ತುರಿದ ತೆಂಗಿನಕಾಯಿ – 1/4 ಕಪ್

    ಮಾಡುವ ವಿಧಾನ:
    * ನವಣೆಯನ್ನು ನೀರಿನಲ್ಲಿ ತೋಳೆದು, ಸ್ವಲ್ಪ ಸಮಯ ನೆನೆಹಾಕಿ.
    * ಕ್ಯಾರೆಟ್, ಬೀನ್ಸ್ ಮತ್ತು ಬಟಾಣಿಯನ್ನು ಕುಕ್ಕರ್‍ನಲ್ಲಿ ಬೇಯಿಸಿ.
    * ನಂತರ ಒಂದು ಬಾಣಲಿಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ ಕಾಳು, ಉದ್ದಿನಬೇಳೆ ಮತ್ತು ಬೇಳೆಯನ್ನು ಹಾಕಿ ಫ್ರೈ ಮಾಡಿ. ಅದಕ್ಕೆ ಟೊಮೊಟೊ, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ ಮಧ್ಯಮ ಉರಿಯಲ್ಲಿ ಬೇಯಿಸಿ.


    * ಬೇಳೆ ಕಂದು ಬಣ್ಣಕ್ಕೆ ತಿರುಗಿದಾಗ ಕರಿಬೇವಿನ ಎಲೆಗಳು, ಕತ್ತರಿಸಿದ ಶುಂಠಿ ಮತ್ತು ಕಟ್ ಮಾಡಿದ ಹಸಿರು ಮೆಣಸಿನಕಾಯಿ ಸೇರಿಸಿ. ಇತರ ಎಲ್ಲ ತರಕಾರಿಗಳನ್ನು ಸೇರಿಸಿ. ಸ್ವಲ್ಪ ಹೊತ್ತು ಹುರಿಯಿರಿ.
    * ಅರಿಶಿನ ಪುಡಿಯಲ್ಲಿ ಸೇರಿಸಿ. ಕೆಲವು ನಿಮಿಷಗಳ ಕಾಲ ಫ್ರೈ ಮಾಡಿ ನೀರಿನ್ನು ಸೇರಿಸಿ.
    * ಈ ಫ್ರೈಗೆ ನೆನೆಸಿದ ನವಣೆ ಮತ್ತು ಉಪ್ಪು ಸೇರಿ ಸರಿಯಾಗಿ ಮಿಶ್ರಣ ಮಾಡಿ ತಟ್ಟೆಯನ್ನು ಅದರ ಮೇಲೆ ಮುಚ್ಚಿ. ಮಧ್ಯಮ ಉರಿಯಲ್ಲಿ ಬೇಯಿಸಿ.
    * ನವಣೆ ಉಪ್ಪಿಟ್ಟು ತಯಾರಾದ ನಂತರ ತೆಂಗಿನಕಾಯಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. 2 ಟೀಸ್ಪೂನ್ ನಿಂಬೆ ರಸ ಮಿಶ್ರಣ ಮಾಡಿ.

  • ಹಂದಿ ಕರಿ ಮಾಡುವ ಸಿಂಪಲ್ ವಿಧಾನ ನೋಡಿ

    ಹಂದಿ ಕರಿ ಮಾಡುವ ಸಿಂಪಲ್ ವಿಧಾನ ನೋಡಿ

    ಪ್ರತಿ ವಾರ ಚಿಕನ್, ಮಟನ್ ತಿಂದು ಬೇಜಾರಾಗಿರುತ್ತೆ. ಮನೆಯಲ್ಲಿ ಮಕ್ಕಳಿದ್ದರಂತೂ ಈ ವಾರ ಬೇರೆ ಏನದ್ರೂ ಸ್ಪೆಷಲ್ ಮಾಡಮ್ಮಾ ಅಂತ ಹೇಳುತ್ತಿರುತ್ತಾರೆ. ಹೀಗಾಗಿ ಈ ಬಾರಿ ಹಂದಿ ಕರಿ ಮಾಡುವ ಸುಲಭ ವಿಧಾನವನ್ನು ಹೇಳಿಕೊಡುತ್ತಿದ್ದೇವೆ. ಕೊಡಗು ಮಂದಿ ಹೆಚ್ಚಾಗಿ ಹಂದಿ ಮಾಂಸ ಸೇವನೆ ಮಾಡುತ್ತಾರೆ. ಇಲ್ಲಿ ಪ್ರಮುಖ ಹಬ್ಬಗಳಲ್ಲಿ ಕೈಲ್ ಮುಹೂರ್ತದಲ್ಲಿ ಹಂದಿ ಕರಿ ಇದ್ದೇ ಇರುತ್ತದೆ. ಇನ್ನು ಮದುವೆ, ಇತರ ಸಂಭ್ರಮಗಳಲ್ಲಿನ ವಿಶೇಷ ಅಡುಗೆಗಳಲ್ಲಿ ಹಂದಿ ಕರಿ ಇದ್ದೇ ಇರುತ್ತದೆ. ಹಂದಿ ಕರಿ ಇಲ್ಲದೇ ಇವರ ಊಟ ಪೂರ್ಣವಾಗುವುದಿಲ್ಲ.

    ಬೇಕಾಗುವ ಸಾಮಗ್ರಿಗಳು:
    * ಪೋರ್ಕ್ ಮಾಂಸ – 1 ಕೆ.ಜಿ
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – 1ಕಪ್
    * ಪುದೀನ ಸೊಪ್ಪು – 1ಕಪ್
    * ಖಾರದ ಪುಡಿ – 2 ಚಮಚ
    * ಕೊತ್ತಂಬರಿಪುಡಿ – 6 ಚಮಚ


    * ಅರಿಶಿಣ ಪುಡಿ – ಸ್ವಲ್ಪ
    * ಪೆಪ್ಪರ್ ಪುಡಿ – 1 ಚಮಚ
    * ಕಟ್ ಮಾಡಿದ ಈರುಳ್ಳಿ – 2
    * ಹಸಿ ಮೆಣಸಿನಕಾಯಿ – 8
    * ಕಟ್ ಮಾಡಿದ ಟೊಮೊಟೊ – 1
    * ನಿಂಬೆಹಣ್ಣು – 2 ಚಮಚ
    * ಎಣ್ಣೆ – 1 ಟೀಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಚೆನ್ನಾಗಿ ತೊಳೆದ ಹಂದಿ ಮಾಂಸವನ್ನು ಕಟ್ ಮಾಡಿ ಅದಕ್ಕೆ ಅರಿಶಿನಪುಡಿ, ಖಾರದ ಪುಡಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ನೀರು ಹಾಕದೆ ಕುಕ್ಕರ್‍ನಲ್ಲಿ ಬೇಯಿಸಿ.
    * ಕೊತ್ತಂಬರಿ ಪುಡಿಯನ್ನು ಕಾವಲಿ ಮೇಲೆ ಸಣ್ಣ ಉರಿಯಲ್ಲಿ ಸ್ವಲ್ಪ ಕಪ್ಪು ಬಣ್ಣ ಬರುವವರೆಗೂ ಹುರಿದಿಟ್ಟುಕೊಳ್ಳಿ.
    * ಒಂದು ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕಟ್ ಮಾಡಿದ ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಈರುಳ್ಳಿ ಹಾಕಿ ಕಂದುಬಣ್ಣ ಬರುವವರೆಗೆ ಟ್ರೈ ಮಾಡಿ.

    * ನಂತರ ಟೊಮೆಟೊ ಉದ್ದುದ್ದ ಕತ್ತರಿಸಿದ ಕೊತ್ತಂಬರಿ ಮತ್ತು ಪುದೀನ ಸೊಪ್ಪನ್ನು ಹಾಕಿದ ನಂತರ ಬೆಂದ ಪೆÇೀರ್ಕ್ ಹಾಕಿ. ಅದಕ್ಕೆ ಉಪ್ಪು, ಪೆಪ್ಪರ್‍ಪುಡಿ ಹಾಕಿ, ಸ್ವಲ್ಪ ಖಾರದ ಪುಡಿ ಹಾಕಿ ಬೇಯಲು ಬಿಡಿ.
    * ಬೆಂದ ನಂತರ ಸಣ್ಣ ಉರಿ ಮಾಡಿ ಹುರಿದ ಕೊತ್ತಂಬರಿ ಪುಡಿ ಹಾಕಿ ಚೆನ್ನಾಗಿ ತಿರುಗಿಸುತ್ತೀರಿ, ಇದಾದ ಮೇಲೆ ಅರ್ಧ ಹೋಳು ನಿಂಬೆಹಣ್ಣಿನ ರಸವನ್ನು ಹಾಕಿ ಮುಚ್ಚಳ ಮುಚ್ಚಿ ಒಂದೆರೆಡು ನಿಮಿಷ ಬೇಯಿಸಿ.

  • ಬ್ರಾಹ್ಮಣ ಶೈಲಿನಲ್ಲಿ ಮಾಡಿ ಸವಿಯಿರಿ ‘ಕಾಶಿ ಹಲ್ವಾ’

    ಬ್ರಾಹ್ಮಣ ಶೈಲಿನಲ್ಲಿ ಮಾಡಿ ಸವಿಯಿರಿ ‘ಕಾಶಿ ಹಲ್ವಾ’

    ಕಾಶಿ ಹಲ್ವಾ’ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತೆ. ಈ ರೆಸಿಪಿಯನ್ನ ಮಾಡುವುದು ತುಂಬಾ ಸುಲಭ. ಇದನ್ನು ಬಾಯಿಚಪ್ಪರಿಸಿಕೊಂಡು ಎಲ್ಲರೂ ತಿನ್ನುತ್ತಾರೆ. ಅದಕ್ಕೆ ಇಂದು ಕಾಶಿ ಹಲ್ವಾವನ್ನು ಬ್ರಾಹ್ಮಣರ ಶೈಲಿಯಲ್ಲಿ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ತುರಿದ ಬೂದು ಕುಂಬಳಕಾಯಿ – 3 ಕಪ್
    * ಸಕ್ಕರೆ – 1 ಕಪ್
    * ಕೇಸರಿ – ಅರ್ಧ ಟೀಸ್ಪೂನ್
    * ತುಪ್ಪ – ಅರ್ಧ ಕಪ್
    * ಗೋಡಂಬಿ – 15
    * ಏಲಕ್ಕಿ – ಅರ್ಧ ಟೀಸ್ಪೂನ್

    ಮಾಡುವ ವಿಧಾನ:
    * ತುರಿದ ಬೂದು ಕುಂಬಳಕಾಯಿಯನ್ನು 25-30 ನಿಮಿಷ ನೀರು ಹೀರಿಕೊಳ್ಳುವವರೆಗೆ ಬೇಯಿಸಿ.
    * ಅದಕ್ಕೆ ಸಕ್ಕರೆ ಮತ್ತು ಕೇಸರಿ ಸೇರಿಸಿ ಹುರಿಯಿರಿ. ಸಕ್ಕರೆ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಕುದಿಸಿ.
    * ಸಕ್ಕರೆ ಪಾಕವು ಸಂಪೂರ್ಣವಾಗಿ 10 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಚೆನ್ನಾಗಿ ಮಿಕ್ಸ್ ಮಾಡಿ.


    * ಗೋಡಂಬಿಯನ್ನು ಒಂದು ಚಮಚ ತುಪ್ಪ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.
    * ಹುರಿದ ಗೋಡಂಬಿಯನ್ನು ಹಲ್ವಾ ಜೊತೆಗೆ ಏಲಕ್ಕಿ ಪುಡಿಯೊಂದಿಗೆ ಸುರಿಯಿರಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.

    – ಅಂತಿಮವಾಗಿ, ಕಾಶಿ ಹಲ್ವಾ/ಬೂದಿ ಸೋರೆಕಾಯಿ ಹಲ್ವಾವನ್ನು ರೆಡಿ. ಇದನ್ನು ಬಡಿಸಿ ಅಥವಾ ಫ್ರಿಜ್‍ನಲ್ಲಿ ಇರಿಸಿ ಮತ್ತು ಒಂದು ವಾರದವರೆಗೂ ಸವಿದು ಆನಂದಿಸಿ.

     

  • ಬೆಳಗಿನ ಉಪಾಹಾರಕ್ಕೆ ಮಾಡಿ ಮಂಡಕ್ಕಿ ಇಡ್ಲಿ

    ಬೆಳಗಿನ ಉಪಾಹಾರಕ್ಕೆ ಮಾಡಿ ಮಂಡಕ್ಕಿ ಇಡ್ಲಿ

    ಮಂಡಕ್ಕಿಯಲ್ಲಿ ಇಡ್ಲಿ ಮಾಡಬಹುದಾ ಎಂದು ಎಲ್ಲರಿಗೂ ಅಚ್ಚರಿಯಾಗುತ್ತಿರಬಹುದು. ಆದರೆ ಇದು ನಿಜ. ಅಕ್ಕಿ, ರವೆಗಿಂತ ಸರಳವಾಗಿ ಮಂಡಕ್ಕಿಯಲ್ಲಿ ಇಡ್ಲಿ ಮಾಡಬಹುದು. ಈ ಇಡ್ಲಿಯನ್ನು ತುಂಬಾ ಸುಲಭ ವಿಧಾನದಲ್ಲಿ ಮಾಡಬಹುದು.

    ಬೇಕಾಗಿರುವ ಪದಾರ್ಥಗಳು:
    * ಮಂಡಕ್ಕಿ – 4 ಕಪ್
    * ರೆವೆ – 1 ಕಪ್
    * ಉಪ್ಪು – ಅರ್ಧ ಟೀಸ್ಪೂನ್


    * ಮೊಸರು – 1 ಕಪ್
    * ನೀರು (ಅಗತ್ಯವಿರುವಷ್ಟು)

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ ಮಂಡಕ್ಕಿಯನ್ನು ನೀರಿನಿಂದ ತೊಳೆಯಿರಿ. ನೀರನ್ನು ಹಿಂಡಿ ಮಂಡಕ್ಕಿಯನ್ನು ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ.
    * ಮಂಡಕ್ಕಿ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಅದಕ್ಕೆ ರೆವೆ, ಉಪ್ಪು, ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಅಗತ್ಯವಿರುವಷ್ಟು ನೀರನ್ನು ಸೇರಿಸಿ, ಹಿಟ್ಟನ್ನು ತಯಾರಿಸಿ. 20 ನಿಮಿಷಗಳ ಕಾಲ ಮುಚ್ಚಿಡಿ.


    * 20 ನಿಮಿಷಗಳ ನಂತರ, ಸರಿಯಾಗಿ ಹಿಟ್ಟು ಮಿಶ್ರಣವಾಗಿದೆಯೇ ಪರೀಕ್ಷಿಸಿಕೊಳ್ಳಿ.
    * ಇಡ್ಲಿ ಪಾತ್ರೆಗೆ ಹಿಟ್ಟನ್ನು ಹಾಕಿ 15 ನಿಮಿಷಗಳ ಕಾಲ ಸ್ಟೀಮ್ ಮಾಡಿ.

    ಅಂತಿಮವಾಗಿ, ಟೊಮೆಟೊ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಮಂಡಕ್ಕಿ ಇಡ್ಲಿಯನ್ನು ಸವಿಯಿರಿ.

  • ಆರೋಗ್ಯಕರ ಮೆಂತ್ಯ ಸಾಂಬಾರ್ ಮಾಡುವ ವಿಧಾನ

    ಆರೋಗ್ಯಕರ ಮೆಂತ್ಯ ಸಾಂಬಾರ್ ಮಾಡುವ ವಿಧಾನ

    ಮೆಂತ್ಯ ದೇಹಕ್ಕೆ ತುಂಬಾ ಒಳ್ಳೆಯದು. ಅದರಲ್ಲಿಯೂ ಇಂದು ದೇಹಕ್ಕೆ ತಂಪು. ಅದಕ್ಕೆ ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ ಮೆಂತ್ಯ ಸಾಂಬಾರ್ ಮಾಡಿ ಸವಿಯಿರಿ. ಈ ಸಾಂಬಾರ್ ಮಾಡುವ ವಿಧಾನವು ತುಂಬಾ ಸುಲಭವಾಗಿರುತ್ತೆ.

    ಬೇಕಾಗಿರುವ ಪದಾರ್ಥಗಳು:
    * ಮೆಂತ್ಯ ಬೀಜಗಳು – 2 ಟೀಸ್ಪೂನ್
    * ಕೆಂಪು ಮೆಣಸಿನಕಾಯಿ – 4-6
    * ಕೊತ್ತಂಬರಿ ಬೀಜಗಳು – 1 ಟೀಸ್ಪೂನ್
    * ಜೀರಿಗೆ ಬೀಜಗಳು – 1/4 ಟೀಸ್ಪೂನ್
    * ಸಾಸಿವೆ ಬೀಜಗಳು – 1/4 ಟೀಸ್ಪೂನ್
    * ತುರಿದ ತೆಂಗಿನಕಾಯಿ – 1/2 ಕಪ್
    * ಹುಣಸೆಹಣ್ಣು – 1 ತುಂಡು
    * ಬೆಲ್ಲ – 2 ಟೀಸ್ಪೂನ್
    * ಅಡುಗೆ ಎಣ್ಣೆ – 1 ಟೀಸ್ಪೂನ್
    * ರುಚಿಗೆ ತಕ್ಕಂತೆ ಉಪ್ಪು
    * ಕರಿಬೇವಿನ ಎಲೆ – 5-6
    * ಸಾಸಿವೆ – 5-6 ಟೀಸ್ಪೂನ್
    * ಅಡುಗೆ ಎಣ್ಣೆ – 2 ಟೀಸ್ಪೂನ್

    ಮಾಡುವ ವಿಧಾನ:
    * ಪ್ಯಾನ್‍ನಲ್ಲಿ ಕೆಂಪು ಮೆಣಸಿನಕಾಯಿ, ಕೊತ್ತಂಬರಿ, ಜೀರಿಗೆ ಮತ್ತು ಸಾಸಿವೆ ಸೇರಿಸಿ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ ಮತ್ತು ಪಕ್ಕಕ್ಕೆ ಇರಿಸಿ.
    * ಒಂದು ಪ್ಯಾನ್‍ಗೆ ಮೆಂತ್ಯ ಕಾಳುಗಳನ್ನು ಸೇರಿಸಿ ಗೋಲ್ಡನ್ ಬ್ರೌನ್ ಮಾಡುವವರೆಗೆ ಫ್ರೈ ಮಾಡಿ. 1 ಕಪ್ ನೀರು ಸೇರಿಸಿ ಅದನ್ನು ಕುದಿಸಿ. 10 ನಿಮಿಷ ಬೇಯಿಸಿ.

    * ತೆಂಗಿನಕಾಯಿ ಮತ್ತು ಹುರಿದ ಮಸಾಲೆಗಳನ್ನು(ಕೆಂಪು ಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ ಬೀಜಗಳು ಮತ್ತು ಸಾಸಿವೆ) ಮಿಕ್ಸಿ ಜಾರ್ ಹಾಕಿ ರುಬ್ಬಿಕೊಳ್ಳಿ. ಇದನ್ನೂ ಓದಿ: ರುಚಿಕರವಾದ ಟೊಮೆಟೊ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ

    * ರುಬ್ಬಿದ ಪೇಸ್ಟ್ ಮತ್ತು ಬೆಲ್ಲವನ್ನು ಬೇಯಿಸಿದ ಮೆಂತ್ಯ ಕಾಳುಗಳಿಗೆ ಸೇರಿಸಿ. ಅದಕ್ಕೆ ಹುಣಸೆ ಹಣ್ಣಿನಿಂದ ತೆಗೆದ ರಸವನ್ನು ಸೇರಿಸಿ. ಉಪ್ಪಿನಲ್ಲಿ ಸೇರಿಸಿ ಅದಕ್ಕೆ ಸುಮಾರು 2 ಕಪ್ ನೀರು ಸೇರಿಸಿ ಕುದಿಸಿ. ಇದನ್ನೂ ಓದಿ: ತುಪ್ಪದಲ್ಲಿ ಮಾಡಿ ಸವಿಯಿರಿ ರವೆ ಉಂಡೆ