Tag: recipe

  • ಇಡ್ಲಿ ಪಾತ್ರೆಯಲ್ಲಿ ಮಾಡಿ ‘ಚಾಕೊಲೇಟ್ ಚಿಪ್ ಕುಕೀಸ್’

    ಇಡ್ಲಿ ಪಾತ್ರೆಯಲ್ಲಿ ಮಾಡಿ ‘ಚಾಕೊಲೇಟ್ ಚಿಪ್ ಕುಕೀಸ್’

    ಚಾಕೊಲೇಟ್ ಎಂದರೇ ಎಲ್ಲರಿಗೂ ಇಷ್ಟ. ಚಾಕೊಲೇಟ್‍ನಿಂದ ಮಾಡುವ ಎಲ್ಲ ತಿನಿಸುಗಳನ್ನು ಜನರು ಇಷ್ಟಪಟ್ಟು ತಿನ್ನುತ್ತಾರೆ. ಈಗ ಟ್ರೆಂಡಿಯಾಗಿ ಪ್ರಾರಂಭವಾಗಿರುವ ‘ಚಾಕೊಲೇಟ್ ಚಿಪ್ ಕುಕೀಸ್’ ರೆಸಿಪಿಯನ್ನು ಮಾಡುವುದು ತುಂಬಾ ಸುಲಭ. ಇದಕ್ಕೆ ಕುಕೀಸ್ ಮೇಕಿಂಗ್ ಬೇಕು ಎಂಬುದೇನಿಲ್ಲ. ಇಡ್ಲಿ ಪಾತ್ರೆ ಇದ್ರೆ ಈ ಕುಕೀಸ್ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ನೀವು ಇದನ್ನು ಮನೆಯಲ್ಲಿ ಟ್ರೈ ಮಾಡಿ, ಟೇಸ್ಟ್ ನೋಡಿ.

    ಬೇಕಾಗಿರುವ ಪದರ್ಥಾಗಳು:
    * ಬೆಣ್ಣೆ – 1 ಕಪ್
    * ಸಕ್ಕರೆ – 1 ಕಪ್
    * ಬ್ರೌನ್ ಶುಗರ್ – 1 ಕಪ್
    * ಮೊಟ್ಟೆ – 2
    * ವೆನಿಲ್ಲಾ ಸಿರಂ – 2 ಟೀಸ್ಪೂನ್


    * ಅಡಿಗೆ ಸೋಡಾ – 1 ಟೀಸ್ಪೂನ್
    * ಬಿಸಿ ನೀರು – 2 ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ಮೈದಾ ಹಿಟ್ಟು – 3 ಕಪ್
    * ಚಾಕೊಲೇಟ್ ಚಿಪ್ಸ್ – 2 ಕಪ್
    * ಮಾಡಿದ ವಾಲ್ನುಟ್ಸ್ – 1 ಕಪ್ ಕಟ್

    ಮಾಡುವ ವಿಧಾನ:
    * ಪ್ಯಾನ್ ಬಿಸಿಯಾದ ಮೇಲೆ ಅದಕ್ಕೆ ಬೆಣ್ಣೆ, ಸಕ್ಕರೆ ಮತ್ತು ಬ್ರೌನ್ ಶುಗರ್ ಹಾಕಿ ಅದು ಪಾಕದ ರೀತಿ ಆಗುವವರೆಗೂ ಬೇಯಿಸಿ.
    * ನಂತರ ಮೊಟ್ಟೆಗಳನ್ನು ಒಡೆದು ಈ ಮಿಶ್ರಣಕ್ಕೆ ಹಾಕಿ. ನಂತರ ವೆನಿಲ್ಲಾ, ಅಡಿಗೆ ಸೋಡಾವನ್ನು ಬೆರೆಸಿ ಪಾಕ ರೆಡಿ ಮಾಡಿಕೊಳ್ಳಿ.
    * ಇನ್ನೊಂದು ಪಾತ್ರೆಯಲ್ಲಿ ಮೈದಾ ಹಿಟ್ಟಿಗೆ ಸ್ವಲ್ಪ ಉಪ್ಪು ಹಾಕಿ ಕಲಸಿ. ನಂತರ ಹಿಟ್ಟಿಗೆ ಚಾಕೊಲೇಟ್ ಚಿಪ್ಸ್ ಮತ್ತು ವಾಲ್ನುಟ್ಸ್ ಬೆರೆಸಿ. ನಂತರ ಇದಕ್ಕೆ ಪಾಕವನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ.
    * ಇದನ್ನು ಚಾಕೊಲೇಟ್ ಮೇಕಿಂಗ್‍ಗೆ ಅಥವಾ ಇಡ್ಲಿ ಪಾತ್ರೆಗೆ ಕುಕೀಸ್ ಮಿಶ್ರಣವನ್ನು ಹಾಕಿ, 20 ನಿಮಿಷ ಬಿಡಿ.

    _ ಈಗ ಬಿಸಿ, ಬಿಸಿಯಾದ ‘ಚಾಕೊಲೇಟ್ ಚಿಪ್ ಕುಕೀಸ್’ ಸವಿಯಲು ಸಿದ್ಧ.

    Live Tv

  • ‘ಬೋನ್ ಲೆಸ್ ಮಟನ್ ಫ್ರೈ’ ಮಾಡುವ ಸಿಂಪಲ್ ಟ್ರಿಕ್ಸ್

    ‘ಬೋನ್ ಲೆಸ್ ಮಟನ್ ಫ್ರೈ’ ಮಾಡುವ ಸಿಂಪಲ್ ಟ್ರಿಕ್ಸ್

    ಮಾಂಸಾಹಾರಿ ಪ್ರಿಯರಿಗೆ ಚಿಕನ್ ಎಷ್ಟು ಇಷ್ಟವೂ ಹಾಗೇ ಮಟನ್ ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲಿಯೂ ಬೋನ್ ಲೆಸ್ ಮಟನ್ ಎಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ಅಲ್ಲದೇ ವಿತ್ ಬೋನ್‌ಗಿಂತ ಬೋನ್ ಲೆಸ್ ಮಟನ್‍ಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲಿಯೂ ಇಂದು ನಾವು ಹೇಳಿಕೊಡುತ್ತಿರುವ ‘ಬೋನ್ ಲೆಸ್ ಮಟನ್ ಫ್ರೈ’ ಮಾಡಿದರೆ ಮನೆಯವರೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿನ್ನುವುದರಲ್ಲಿ ಅನುಮಾನವಿಲ್ಲ.

    ಬೇಕಾಗುವ ಪದಾರ್ಥಗಳು:
    * ಬೋನ್ ಲೆಸ್ ಮಟನ್ – 1/2 ಕೆಜಿ
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಅರಿಶಿನ ಪುಡಿ – 1 ಪಿಂಚ್
    * ನೀರು – 2 ಕಪ್
    * ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್


    * ಧನಿಯಾ ಪುಡಿ – 1/2 ಟೀಸ್ಪೂನ್
    * ಕಪ್ಪು ಮೆಣಸು ಪುಡಿ – 1/2 ಟೀಸ್ಪೂನ್
    * ಗರಂ ಮಸಾಲಾ ಪುಡಿ – 1/4 ಟೀಸ್ಪೂನ್
    * ಕರಿಬೇವು – 10 ಎಲೆಗಳು
    * ತುಪ್ಪ – 1 ಟೀಸ್ಪೂನ್
    * ಎಣ್ಣೆ – 2 ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಪ್ರೆಶರ್ ಕುಕ್ಕರ್‌ಗೆ ಮಟನ್ ಸಣ್ಣ ತುಂಡುಗಳಾಗಿ ಕಟ್ ಮಾಡಿ ಅರಿಶಿನ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ನೀರು ಹಾಕಿ ಬೇಯಿಸಿ.
    * ಬೇಯಿಸಿದ ಮಟನ್‍ ಕಡಾಯಿಯಲ್ಲಿ ಬಿಸಿ ಮಾಡಿ. ಅದಕ್ಕೆ ಅರಿಶಿನ ಪುಡಿ ಮತ್ತು 1/4 ಟೀಚಮಚ ಉಪ್ಪನ್ನು ಸೇರಿಸಿ ಬಿಸಿ ಮಾಡಿ.
    * ನಂತರ ಕೆಂಪು ಮೆಣಸಿನ ಪುಡಿ, ಧನ್ಯ ಪುಡಿ, ಕರಿಮೆಣಸಿನ ಪುಡಿ ಮತ್ತು ಗರಂ ಮಸಾಲಾ ಪುಡಿ ಸೇರಿಸಿ.
    * ಮಟನ್ ಮಸಾಲ ಜೊತೆಗೆ ಸರಿಯಾಗಿ ಬೇರೆಯುವವರೆಗೂ ಹುರಿಯಿರಿ. ಈ ಹಂತದಲ್ಲಿ ತುಪ್ಪವನ್ನು ಸೇರಿಸಿ ಮತ್ತು ನಿಧಾನವಾಗಿ ರೋಸ್ಟ್ ಮಾಡಿ 10 ನಿಮಿಷಗಳ ಕಾಲ ಫ್ರೈ ಮಾಡಿ.
    * ಕಡಿಮೆ ಉರಿಯಲ್ಲಿ ಬೇಯಿಸುವಾಗ ಸ್ವಲ್ಪ ಎಣ್ಣೆಯನ್ನು ಸೇರಿಸಿ ಹುರಿಯಿರಿ. ಈ ಹಂತದಲ್ಲಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ.

    • ನಂತರ ‘ಬೋನ್ ಲೆಸ್ ಮಟನ್ ಫ್ರೈʼ ಸವಿಯಲು ಸಿದ್ಧ.

  • ಸಾಂಪ್ರದಾಯಿಕ ಒತ್ತು ಶಾವಿಗೆ, ಕಾಯಿ ಹಾಲು ಮಾಡುವ ವಿಧಾನ

    ಸಾಂಪ್ರದಾಯಿಕ ಒತ್ತು ಶಾವಿಗೆ, ಕಾಯಿ ಹಾಲು ಮಾಡುವ ವಿಧಾನ

    ಸಿಹಿ ತಿನಿಸು ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಕೆಲವರಿಗೆ ಸಿಹಿ ತಿಂಡಿಗಳು ಇಷ್ಟವಿದ್ದರೂ ಸಕ್ಕರೆ ಹಾಕಿರುತ್ತಾರೆ ಎಂದು ತಿನ್ನುವುದಿಲ್ಲ. ಆದರೆ ಇಂದು ನಾವು ಹೇಳಿಕೊಡುತ್ತಿರುವ ಸಿಹಿ ತಿಂಡಿಯಲ್ಲಿ ಸಕ್ಕರೆಯನ್ನು ಬಳಸುವುದಿಲ್ಲ. ಬದಲಿಗೆ ಬೆಲ್ಲವನ್ನು ಬಳಸಿ ಈ ರೆಸಿಪಿ ಮಾಡಬಹುದು. ಒತ್ತು ಶಾವಿಗೆ ಮತ್ತು ಕಾಯಿ ಹಾಲು ಸಾಂಪ್ರದಾಯಿಕ ಪಾಕವಿಧಾನ. ಈ ರೆಸಿಪಿ ತುಂಬಾ ರುಚಿಯಾಗಿದ್ದು, ಸುಲಭವಾಗಿ ಮಾಡಬಹುದು.

    ಒತ್ತು ಶಾವಿಗೆಗೆ ಬೇಕಾಗುವ ಪದಾರ್ಥಗಳು:
    * ದೋಸೆ ಅಕ್ಕಿ – ಒಂದೂಕಾಲು ಕಪ್ (4 ಗಂಟೆ ನೆನೆಸಿಡಿ)
    * ತೆಂಗಿನ ತುರಿ – ಅರ್ಧ ಕಪ್
    * ಉಪ್ಪು – ರುಚಿಗೆ ತಕ್ಕಷ್ಟು
    * ತುಪ್ಪ – 2 ದೊಡ್ಡ ಚಮಚ

    ಕಾಯಿ ಹಾಲು ಮಾಡಲು ಬೇಕಾಗುವ ಪದಾರ್ಥಗಳು:
    * ನೆನೆಸಿರುವ ಅಕ್ಕಿ – 1 ಚಮಚ
    * ತೆಂಗಿನ ತುರಿ – 2 ದೊಡ್ಡ ಚಮಚ
    * ನೆನೆಸಿದ ಗಸ ಗಸೆ – 1 ದೊಡ್ಡ ಚಮಚ
    * ಬೆಲ್ಲ – ಅರ್ಧ ಕಪ್
    * ತೆಳುವಾದ ತೆಂಗಿನಕಾಯಿ ಹಾಲು – ಒಂದೂವರೆ ಕಪ್
    * ಉಪ್ಪು – ಅರ್ಧ ಟೀಸ್ಪೂನ್
    * ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    * ಹಾಲು – 1 ಕಪ್

    ಒತ್ತು ಶಾವಿಗೆ ಮಾಡುವ ವಿಧಾನ:
    * ಮಿಕ್ಸಿ ಜಾರಿಗೆ ನೆನೆಸಿದ ದೋಸೆ ಅಕ್ಕಿಯನ್ನು ಹಾಕಿ ರುಬ್ಬಿಕೊಳ್ಳಿ. ಇದರ ಜೊತೆಗೆ ಅರ್ಧ ಕಪ್ ತೆಂಗಿನ ತುರಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ.
    * ಈಗ ಇದನ್ನು ಒಂದು ಬಾಣಲೆಗೆ ಹಾಕಿ, 2 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಕಲಸುತ್ತಾ ಇರಿ.
    * ಈಗ ಇದಕ್ಕೆ 1 ದೊಡ್ಡ ಚಮಚ ತುಪ್ಪ ಹಾಕಿ ಕಲಸಿ. ಸಣ್ಣ ಉರಿಯಲ್ಲಿ ಬೇಯಿಸುತ್ತಾ ಮತ್ತೆ ಇದಕ್ಕೆ 1 ದೊಡ್ಡ ಚಮಚ ತುಪ್ಪ ಹಾಕಿ ಕಲಸಿ. ನಂತರ ಇನ್ನೊಂದು ಪಾತ್ರೆಗೆ ಹಾಕಿ ಚೆನ್ನಾಗಿ ಕಲಸಿ.
    * ಅಂಗೈಗೆ ಸ್ವಲ್ಪ ತುಪ್ಪ ಸವರಿಕೊಂಡು ಇದನ್ನು ಉದ್ದ ಉಡ್ಡೆಯಾಗಿ ಮಾಡಿ. ನಂತರ ಇದನ್ನು ಇಡ್ಲಿ ಪಾತ್ರೆಯಲ್ಲಿ ಇಟ್ಟು ಕಡುಬು ಬೇಯಿಸುವ ರೀತಿ 10 ರಿಂದ 12 ನಿಮಿಷ ಬೇಯಿಸಿ.
    * ಈಗ ಶಾವಿಗೆ ಅಚ್ಚಿಗೆ ಎಣ್ಣೆ ಸವರಿ, ಅದಕ್ಕೆ ಬೇಯಿಸಿರುವ ಕಡುಬು ಇಟ್ಟು ಮುಚ್ಚಳ ಮುಚ್ಚಿ, ಒಂದು ತಟ್ಟೆಯಲ್ಲಿ ಒತ್ತಿ. ಅಕ್ಕಿ ಶಾವಿಗೆ ಸಿದ್ಧವಾಗುತ್ತೆ.

    Akki Shavige/Ottu Shavige Recipe/(Idiyappam String Hopper Recipe) | GH49

    ಕಾಯಿ ಹಾಲು ಮಾಡುವ ವಿಧಾನ:
    * ಒಂದು ಮಿಕ್ಸಿ ಜಾರಿಗೆ ನೆನೆಸಿರುವ ಅಕ್ಕಿ, ಚಮಚ ತೆಂಗಿನ ತುರಿ, ನೆನೆಸಿದ ಗಸ ಗಸೆ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ.
    * ನಂತರ ಒಂದು ಪಾತ್ರೆಗೆ ಅರ್ಧ ಕಪ್ ಬೆಲ್ಲ, ಕಾಲು ಕಪ್ ನೀರು ಹಾಕಿ. ಬೆಲ್ಲ ಕರಗುವ ತನಕ ಬಿಸಿಮಾಡಿ. ಇದಕ್ಕೆ ರುಬ್ಬಿದ ಮಿಶ್ರಣ ಮತ್ತು ಒಂದೂವರೆ ಕಪ್ ತೆಳುವಾದ ತೆಂಗಿನಕಾಯಿ ಹಾಲು ಹಾಕಿ ಚೆನ್ನಾಗಿ ಕಲಸಿ.
    * ಚಿಟಿಕೆ ಉಪ್ಪು, ಏಲಕ್ಕಿ ಪುಡಿ ಹಾಕಿ ಮಧ್ಯಮ ಉರಿಯಲ್ಲಿ 3 ರಿಂದ 4 ನಿಮಿಷ ಕುದಿಸಿ. ನಂತರ ಇದಕ್ಕೆ 1 ಕಪ್ ತೆಂಗಿನಕಾಯಿ ಹಾಲು ಹಾಕಿ ಕಲಸಿ ಸಣ್ಣ ಉರಿಯಲ್ಲಿ 3 ನಿಮಿಷ ಕುದಿಸಿದರೆ ಕಾಯಿ ಹಾಲು ಸಿದ್ಧ.

    – ಒತ್ತು ಶಾವಿಗೆ ಜೊತೆ ಕಾಯಿ ಹಾಲನ್ನು ನಿಮ್ಮ ಮನೆಯಲ್ಲಿ ಎಲ್ಲರಿಗೂ ಬಡಿಸಿ, ನೀವು ರುಚಿ ನೋಡಿ.

  • ‘ತವಾ ಮಸಾಲಾ ಬೆಂಡೆಕಾಯಿ’ ಮಾಡುವ ಸೂಪರ್ ರೆಸಿಪಿ

    ‘ತವಾ ಮಸಾಲಾ ಬೆಂಡೆಕಾಯಿ’ ಮಾಡುವ ಸೂಪರ್ ರೆಸಿಪಿ

    ಬೆಂಡೆಕಾಯಿ ಒಂದು ಆರೋಗ್ಯಕರ ತರಕಾರಿಗಳಲ್ಲಿ ಒಂದು. ಬೆಂಡೆಕಾಯಿಯಿಂದ ಮಾಡುವ ಕರಿ, ಸಾರು ಎಂದರೆ ಎಲ್ಲರಿಗೂ ಇಷ್ಟ. ಇದನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಸ್ಪೆಷಲ್ ರೆಸಿಪಿ ‘ತವಾ ಮಸಾಲಾ ಬೆಂಡೆಕಾಯಿ’ ಮಾಡುವ ಸೂಪರ್ ವಿಧಾನ ಇಲ್ಲಿದೆ.

    ಬೇಕಾಗಿರುವ ಪದಾರ್ಥಗಳು:
    * ಬೆಂಡೆಕಾಯಿ – 400 ಗ್ರಾಂ
    * ಈರುಳ್ಳಿ – 3
    * ಬೆಳ್ಳುಳ್ಳಿ, ಶುಂಠಿ ಪೇಸ್ಟ್ – 2 ಚಮಚ
    * ಹಸಿರು ಮೆಣಸಿನಕಾಯಿ – 3
    * ಟೊಮೆಟೊ – 4
    * ಒಣ ಮಾವಿನಕಾಯಿ ಪುಡಿ – 1 ಟೀಸ್ಪೂನ್
    * ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    * ಅರಿಶಿನ ಪುಡಿ – 1/2 ಟೀಸ್ಪೂನ್
    * ಕೊತ್ತಂಬರಿ ಪುಡಿ – 1 ಟೀಸ್ಪೂನ್
    * ಜೀರಿಗೆ – 1/2 ಟೀಸ್ಪೂನ್
    * ಉಪ್ಪು – ರುಚಿಗೆ ತಕ್ಕಂತೆ

    ಮಾಡುವ ವಿಧಾನ:
    * ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆಯಿರಿ ಮತ್ತು ಅದರ ಮೇಲ್ಭಾಗ ಮತ್ತು ತುದಿಯನ್ನು ಕಟ್ ಮಾಡಿ. ಈರುಳ್ಳಿ ಮತ್ತು ಟೊಮೆಟೊ ಕಟ್ ಮಾಡಿಕೊಳ್ಳಿ.
    * ಮಿಕ್ಸಿಗೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಟೊಮೆಟೊ ಸೇರಿಸಿ. ಅವುಗಳನ್ನು ಉತ್ತಮ ಪೇಸ್ಟ್ ಮಿಶ್ರಣ ಮಾಡಿ.
    * ಒಂದು ಪ್ಯಾನ್ ತೆಗೆದುಕೊಂಡು, ಅದರಲ್ಲಿ ಎಣ್ಣೆಯನ್ನು ಸೇರಿಸಿ ಮತ್ತು ಬಿಸಿ ಮಾಡಿ. ಬೆಂಡೆಕಾಯಿಯನ್ನು ಸೇರಿಸಿ ಮತ್ತು ಅವುಗಳನ್ನು 5 ನಿಮಿಷಗಳ ಕಾಲ ಫ್ರೈ ಮಾಡಿ. ಬಣ್ಣವನ್ನು ಬದಲಾಯಿಸಲು ಪ್ರಾರಂಭಿಸಿ ನಂತರ ಅವುಗಳನ್ನು ಎಣ್ಣೆಯಿಂದ ತೆಗೆದುಹಾಕಿ ಮತ್ತು ಅವುಗಳನ್ನು ಪಕ್ಕಕ್ಕೆ ಇರಿಸಿ.
    * ಉಳಿದ ಎಣ್ಣೆಗೆ ಜೀರಿಗೆ ಹಾಕಿ ಈರುಳ್ಳಿ ಪೇಸ್ಟ್ ಅನ್ನು ಸೇರಿಸಿ 5 ನಿಮಿಷ ಫ್ರೈ ಮಾಡಿ.

    * ನಂತರ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಧನಿಯಾ ಪುಡಿ, ಒಣ ಮಾವಿನ ಪುಡಿ ಮತ್ತು ಉಪ್ಪು ಸೇರಿಸಿ. ಎಲ್ಲಾ ಮಸಾಲೆಗಳನ್ನು ಮಿಶ್ರಣ ಮಾಡಿ ಮತ್ತು ಎಣ್ಣೆಯಿಂದ ಬೇರ್ಪಡುವವರೆಗೆ ಬೇಯಿಸಿ.
    * ಈ ಮಿಶ್ರಣಕ್ಕೆ ಹುರಿದ ಬೆಂಡೆಕಾಯಿಯನ್ನು ಸೇರಿಸಿ ಮತ್ತು ಮಸಾಲೆಗಳೊಂದಿಗೆ ಮಿಶ್ರಣ ಮಾಡಿ.
    * 1/2 ಕಪ್ ನೀರು ಸೇರಿಸಿ ಮತ್ತು ಮುಚ್ಚಳವನ್ನು ಮುಚ್ಚಿ ಬೇಯಿಸಲು ಬಿಡಿ. ಇದನ್ನು 7 ರಿಂದ 8 ನಿಮಿಷ ಬೇಯಿಸಿ.

    – ಈಗ ನಿಮ್ಮ ತವಾ ಮಸಾಲಾ ಬೆಂಡೆಕಾಯಿ ಸಿದ್ಧವಾಗಿದೆ. ಇದನ್ನು ರೊಟ್ಟಿ, ಪರಾಠ ಅಥವಾ ಪೂರಿಯೊಂದಿಗೆ ಬಿಸಿಯಾಗಿ ಬಡಿಸಿ.

  • ಸಿಂಪಲ್, ಟೇಸ್ಟಿ ‘ಚಿಕನ್ ಲಿವರ್ ಫ್ರೈ’ ಮಾಡಿ

    ಸಿಂಪಲ್, ಟೇಸ್ಟಿ ‘ಚಿಕನ್ ಲಿವರ್ ಫ್ರೈ’ ಮಾಡಿ

    ಭಾನುವಾರ ಬಂತು ಎಂದರೆ ನಾನ್‍ವೆಜ್ ಪ್ರಿಯರಿಗೆ ಹಬ್ಬ. ಈ ಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು ಇಂದು ನಿಮ್ಮ ಮನೆಯಲ್ಲಿ ‘ಚಿಕನ್ ಲಿವರ್ ಫ್ರೈ’ ಮಾಡಿ. ಈ ರೆಸಿಪಿ ರುಚಿಕರವಾಗಿರುವುದರ ಜೊತೆ ಸಿಂಪಲ್ ಆಗಿ ಇರುತ್ತೆ. ಮನೆಯವರಿಗೆ ಚಿಕನ್ ಫ್ರೈ, ಸಾರು ಮಾಡುವ ಬದಲು ಈ ರೆಸಿಪಿಯನ್ನು ಮಾಡಲು ಬಲು ಸುಲಭ.  ಮನೆಯಲ್ಲಿಯೇ ಟ್ರೈ ಮಾಡಿ ಈ ರೆಸಿಪಿ.

    ಬೇಕಾಗಿರುವ ಪದಾರ್ಥಗಳು
    * ಕೋಳಿ ಲಿವರ್ – 300 ಗ್ರಾಂ
    * ಕೊತ್ತಂಬರಿ ಪುಡಿ – 1/2 ಟೀಚಮಚ
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ – 1/2 ಟೀಚಮಚ
    * ಟೊಮೆಟೊ – ಅರ್ಧ ಕಪ್
    * ಎಣ್ಣೆ – 2 ಟೇಬಲ್ಸ್ಪೂನ್
    * ಟೊಮೆಟೊ ಕೆಚಪ್ – 1 ಚಮಚ
    * ಜೀರಿಗೆ ಪುಡಿ – 1/2 ಟೀಚಮಚ
    * ಗರಂ ಮಸಾಲಾ ಪುಡಿ – 1/2 ಟೀಚಮಚ
    * ಹಸಿರು ಮೆಣಸಿನಕಾಯಿ – 4
    * ಕೊತ್ತಂಬರಿ ಸೊಪ್ಪು – 1 ಕಪ್
    * ಸೋಯಾ ಸಾಸ್ – 2 ಟೀಸ್ಪೂನ್

    How to Cook Chicken Livers and Gizzards - Licious Blog

    ಮಾಡುವ ವಿಧಾನ:
    * ಮೊದಲು ಕೋಳಿ ಲಿವರ್ ಸರಿಯಾಗಿ ತೊಳೆದು, ಸುಮಾರು 3 ಭಾಗಗಳಾಗಿ ಕಟ್ ಮಾಡಿ.
    * ಮಧ್ಯಮ ಉರಿಯಲ್ಲಿ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ, ಕಟ್ ಮಾಡಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಹಾಕಿ ಒಂದು ನಿಮಿಷ ಫ್ರೈ ಮಾಡಿ. ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ಈ ಮಿಶ್ರಣಕ್ಕೆ ಕಟ್ ಮಾಡಿದ ಲಿವರ್ ಸೇರಿಸಿ ಅದಕ್ಕೆ ಜೀರಿಗೆ, ಕೊತ್ತಂಬರಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಫ್ರೈ ಮಾಡಿ.
    * ಲಿವರ್‌ನಿಂದ ಎಣ್ಣೆ ಹೊರಬರುವವರೆಗೆ ಬೆರೆಸಿ. 10 ನಿಮಿಷಗಳ ಕಾಲ ಫ್ರೈ ಮಾಡಿ. ಇದಕ್ಕೆ ಸೋಯಾ ಸಾಸ್, ಕೆಚಪ್ ಮತ್ತು ಕಟ್ ಮಾಡಿದ ಕೊತ್ತಂಬರಿ ಸೇರಿಸಿ 10 ನಿಮಿಷಗಳ ಕಾಲ ಫ್ರೈ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

  • ಕರಾವಳಿ ಫೇಮಸ್ ರೆಸಿಪಿ ‘ಪತ್ರೋಡೆ’ ಮಾಡಿ ಸವಿಯಿರಿ

    ಕರಾವಳಿ ಫೇಮಸ್ ರೆಸಿಪಿ ‘ಪತ್ರೋಡೆ’ ಮಾಡಿ ಸವಿಯಿರಿ

    ಡುಪಿ ಮತ್ತು ಮಂಗಳೂರಿನ ಕರಾವಳಿ ಸ್ಥಳವು ಸಾತ್ವಿಕ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಇದು ಉಪಾಹಾರ, ಬಾಳೆ ಎಲೆ ಊಟಕ್ಕೆ ವ್ಯಾಪಕವಾಗಿ ಜನಪ್ರಿಯವಾಗಿದೆ. ಆದರೆ ಪತ್ರೋಡೆ ರೆಸಿಪಿ ಸಾಂಪ್ರದಾಯಿಕ ಸ್ನ್ಯಾಕ್ಸ್‌ ಪಾಕವಿಧಾನವಾಗಿದ್ದು, ಕೊಲೊಕೇಶಿಯಾ/ಕೆಸು ಎಲೆಯಲ್ಲಿ ಮಾಡಲಾಗುತ್ತದೆ. ಈ ವಿಧಾನ ಸುಲಭವಾಗಿದ್ದು, ಮನೆಯಲ್ಲಿ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ಅಕ್ಕಿ – 1 ಕಪ್
    * ಉದ್ದಿನ ಬೇಳೆ – 2 ಟೇಬಲ್ಸ್ಪೂನ್
    * ತುರಿದ ತೆಂಗಿನಕಾಯಿ – 1 ಕಪ್
    * ಕೊತ್ತಂಬರಿ ಬೀಜ – 2 ಟೀಸ್ಪೂನ್
    * ಜೀರಿಗೆ – 1 ಟೀಸ್ಪೂನ್
    * ಮೆಂತ್ಯೆ ಬೀಜ – ಅರ್ಧ ಟೀಸ್ಪೂನ್
    * ಅರಿಶಿನ – ಅರ್ಧ ಟೀಸ್ಪೂನ್
    * ಬೆಲ್ಲ – ಅರ್ಧ ಕಪ್
    * ಹುಣಿಸೇಹಣ್ಣು – 30 ಗ್ರಾಂ
    * ಉಪ್ಪು – 1 ಟೀಸ್ಪೂನ್
    * ಒಣಗಿದ ಕೆಂಪು ಮೆಣಸಿನಕಾಯಿ – 7
    * ಕೊಲೊಕೇಶಿಯಾ ಎಲೆಗಳು/ ಕೆಸುವಿನ ಎಲೆ – 20

    ಒಗ್ಗರಣೆಗೆ ಬೇಕಾದ ಪದಾರ್ಥ:
    * ತೆಂಗಿನ ಎಣ್ಣೆ – 2 ಟೇಬಲ್ಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಉದ್ದಿನ ಬೇಳೆ – 1 ಟೀಸ್ಪೂನ್
    * ಕಡ್ಲೆ ಬೇಳೆ – 1 ಟೀಸ್ಪೂನ್
    * ಕಡ್ಲೆ ಬೀಜ – 2 ಟೇಬಲ್ಸ್ಪೂನ್
    * ಕರಿ ಬೇವಿನ ಎಲೆ – ಅರ್ಧ ಕಪ್
    * ತುರಿದ ತೆಂಗಿನಕಾಯಿ – ಅರ್ಧ ಕಪ್
    * ಬೆಲ್ಲ – 2 ಟೇಬಲ್ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ 1 ಕಪ್ ಅಕ್ಕಿ ಮತ್ತು 2 ಟೇಬಲ್ಸ್ಪೂನ್ ಉದ್ದಿನ ಬೇಳೆಯನ್ನು 3 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಮಿಕ್ಸರ್ ಹಾಕಿ ರುಬ್ಬಿಕೊಳ್ಳಿ.
    * ಈ ಮಿಶ್ರಣಕ್ಕೆ ತೆಂಗಿನಕಾಯಿ, ಕೊತ್ತಂಬರಿ ಬೀಜ, ಜೀರಾ, ಮೆಂತ್ಯೆ ಮತ್ತು ಅರಿಶಿನವನ್ನು ಸೇರಿಸಿ ಮಿಕ್ಸ್ ಮಾಡಿ.
    * ಬೆಲ್ಲ, ಹುಣಿಸೇಹಣ್ಣು, ಉಪ್ಪು ಮತ್ತು ಕೆಂಪು ಮೆಣಸಿನಕಾಯಿಯನ್ನು ಸೇರಿಸಿ. ಅಗತ್ಯವಿರುವಂತೆ ನೀರನ್ನು ಸೇರಿಸಿ ರುಬ್ಬಿಕೊಳ್ಳಿ. ಈಗ ಮಸಾಲಾ ಪೇಸ್ಟ್ ಸಿದ್ಧವಾಗಿದೆ.
    * ಕೆಸುವಿನ ಎಲೆಗಳನ್ನು ತೆಗೆದುಕೊಂಡು ಗೆರೆಗಳನ್ನು ಟ್ರಿಮ್ ಮಾಡಿ. ಮಸಾಲಾ ಪೇಸ್ಟ್ ಎಲೆಗೆ ಸಮವಾಗಿ ಹರಡಿ.
    * ಕೆಸುವಿನ ಎಲೆಗಳಿಗೆ 4 ಬಾರಿ ಮಸಾಲಾ ಪೇಸ್ಟ್ ಹರಡಿ. ಈಗ ಎಲೆಯ ಒಂದು ಬದಿಗಳನ್ನು ಮಡಚಿ ರೋಲ್ ಮಾಡಿ. 30 ನಿಮಿಷಗಳ ಕಾಲ ಸ್ಟೀಮ್ ಮಾಡಿ. ತಣ್ಣಗಾದ ಮೇಲೆ ಅದನ್ನು ಕಟ್ ಮಾಡಿ.
    * ತೆಂಗಿನ ಎಣ್ಣೆಯನ್ನು ಬಿಸಿ ಮಾಡುವ ಮೂಲಕ ಒಗ್ಗರಣೆಯನ್ನು ತಯಾರಿಸಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಪೀನಟ್ಸ್ ಮತ್ತು ಕರಿ ಬೇವಿನ ಎಲೆಗಳನ್ನು ಸೇರಿಸಿ.
    * ಅದಕ್ಕೆ ತೆಂಗಿನಕಾಯಿ ಮತ್ತು ಬೆಲ್ಲವನ್ನು ಸೇರಿಸಿ. ಒಂದು ನಿಮಿಷ ಅಥವಾ ತೆಂಗಿನಕಾಯಿ ವಾಸನೆ ಹೋಗುವವರೆಗೂ ಫ್ರೈ ಮಾಡಿ.
    * ಅಲ್ಲದೇ ತುಂಡರಿಸಿದ ಪತ್ರೋಡೆ ತುಣುಕುಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.

    – ಪತ್ರೋಡೆಯನ್ನು ಬೆಳಗಿನ ತಿಂಡಿ ಅಥವಾ ಸಂಜೆಯ ಸ್ನ್ಯಾಕ್ಸ್‌ ಗೆ ಮಾಡಿ ಆನಂದಿಸಿ.

  • ಉಳಿದ ಅನ್ನದಿಂದ ಮಾಡಿ ಕಟ್ಲೆಟ್

    ಉಳಿದ ಅನ್ನದಿಂದ ಮಾಡಿ ಕಟ್ಲೆಟ್

    ಟ್ಲೆಟ್ಟನ್ನು ಸಾಮಾನ್ಯವಾಗಿ ತರಕಾರಿಯ ಮಿಶ್ರಣದೊಂದಿಗೆ ಮಾಡಲಾಗುತ್ತದೆ. ಇಂಥ ಈ ವಿಶೇಷ ರುಚಿಯ ಕಟ್ಲೆಟ್ಟನ್ನು ಅಷ್ಟೇ ರುಚಿರುಚಿಯಾಗಿ ಉಳಿದ ಅನ್ನದಿಂದಲೂ ಮಾಡಬಹುದು ಎಂದು ನಿಮಗೆ ಗೊತ್ತಾ? ಇನ್ನೊಮ್ಮೆ ಕಟ್ಲೆಟ್ ಮಾಡುವಾಗ ಅದಕ್ಕಾಗಿ ಬೇಯಿಸಿದ ತರಕಾರಿಗಳೊಡನೆ ಉಳಿದ ಅನ್ನವನ್ನೂ ಸೇರಿಸಿ ಕಲಸಿ. ಇದರಿಂದ ರೈಸ್ ಕಟ್ಲೆಟ್ ಹೊಟ್ಟೆಯನ್ನೂ ತುಂಬಿಸುತ್ತದೆ. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಕೊಡಲು ಇದು ಬಹಳ ಚೆನ್ನಾಗಿರುತ್ತೆ.

    ಬೇಕಾಗಿರುವ ಪದಾರ್ಥಗಳು:
    * ಚೆನ್ನಾಗಿ ಬೆಂದ ಅನ್ನ – 1 ಕಪ್
    * ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ – 1
    * ತುರಿದ ಕ್ಯಾರೆಟ್ – 1 ಕಪ್
    * ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸು – 2 ಚಮಚ
    * ಸ್ವೀಟ್ ಕಾರ್ನ್ – 2 ಚಮಚ


    * ಕಟ್ ಮಾಡಿದ ಗೋಡಂಬಿ – 2 ಚಮಚ
    * ಶುಂಠಿ ಪೇಸ್ಟ್ – ಅರ್ಧ ಕಪ್
    * ಕೆಂಪು ಮೆಣಸಿನ ಪುಡಿ – 1 ಚಮಚ
    * ಗರಂ ಮಸಾಲಾ – 1 ಚಮಚ
    * ಜೀರಿಗೆ ಪುಡಿ – 1 ಚಮಚ
    * ಉಪ್ಪು – 1 ಚಮಚ
    * ಸಣ್ಣಗೆ ಕಟ್ ಮಾಡಿದ ಕೊತ್ತಂಬರಿ ಸೊಪ್ಪು – 2 ಚಮಚ
    * ನಿಂಬೆರಸ – 1 ಚಮಚ
    * ಬ್ರೆಡ್ ಪೀಸ್‍ಗಳು – ಅರ್ಧ ಕಪ್


    * ಮೈದಾ – ಅರ್ಧ ಕಪ್
    * ಜೋಳದ ಹಿಟ್ಟು – 2 ಚಮಚ
    * ಪೆಪ್ಪರ್ – 1 ಚಮಚ
    ಇತರೆ ಸಾಮಗ್ರಿಗಳು- ಕರಿಯಲು ಎಣ್ಣೆ, 1 ಕಪ್ ಬ್ರೆಡ್ ಕ್ರಂಬ್ಸ್

    ಮಾಡುವ ವಿಧಾನ:
    * ದೊಡ್ಡ ಬಟ್ಟಲಿನಲ್ಲಿ ಅನ್ನವನ್ನು ತೆಗೆದುಕೊಂಡು ನುಣ್ಣಗೆ ಮ್ಯಾಶ್ ಮಾಡಿ. ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ 3 ವಿಶಲ್ ಬೇಯಿಸಿ, ಚೆನ್ನಾಗಿ ಕಲಸಿದ ಆಲೂಗಡ್ಡೆ ಸೇರಿಸಿ. ಕ್ಯಾರೆಟ್, ದೊಣ್ಣೆಮೆಣಸು, ಕಾರ್ನ್, ಗೋಡಂಬಿ ಸೇರಿಸಿ.
    * ಈ ಮಿಶ್ರಣಕ್ಕೆ ಶುಂಠಿ ಪೇಸ್ಟ್, ಮೆಣಸಿನ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ನಿಂಬೆರಸ ಸೇರಿಸಿ ಚೆನ್ನಾಗಿ ಕಲಸಿ. ಕಡೆಯಲ್ಲಿ ಬ್ರೆಡ್ ಕ್ರಂಬ್ಸ್ ಸೇರಿಸಿ ಮತ್ತೆ ಕಲಸಿ.
    * ಈಗ ಇನ್ನೊಂದು ಪಾತ್ರೆಯಲ್ಲಿ ಮೈದಾಹಿಟ್ಟು, ಜೋಳದ ಹಿಟ್ಟು, ಪೆಪ್ಪರ್, ಉಪ್ಪು ಸೇರಿಸಿ ಮಿಶ್ರಣ ಮಾಡಿ.
    * ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಕಟ್ಲೆಟ್ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.ಪ್ರತಿ ಉಂಡೆಯನ್ನೂ ಹಿಟ್ಟಿನಲ್ಲಿ ಅದ್ದಿ, ಪುಡಿ ಮಾಡಿಟ್ಟುಕೊಂಡ ಬ್ರೆಡ್ ಕ್ರಂಬ್ಸ್ ಮೇಲೆ ಉರುಳಾಡಿಸಿ.
    * ಹೊರಗಿನಿಂದ ಎರಡು ಲೇಯರ್ ಕೋಟ್ ಕೊಟ್ಟಾದ ಮೇಲೆ ಕಾದ ಎಣ್ಣೆಯಲ್ಲಿ ಈ ಉಂಡೆಗಳನ್ನು ಬಿಡಿ. ಕಟ್ಲೆಟ್‍ಗಳು ಕೆಂಪು ಬಣ್ಣಕ್ಕೆ ತಿರುಗುತ್ತಲೇ ಅದನ್ನು ಹೊರತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ.

    • ಎಣ್ಣೆಯನ್ನೆಲ್ಲ ಪೇಪರ್ ಹೀರಿಕೊಂಡ ಬಳಿಕ ಟೊಮ್ಯಾಟೊ ಸಾಸ್ ಅಥವಾ ಗ್ರೀನ್ ಚಟ್ನಿ ಜೊತೆ ಸವಿಯಲು ಕೊಡಿ.

     

  • ಮನೆಯಲ್ಲೇ ಮಟನ್ ಬ್ಲಡ್ ಫ್ರೈ ಮಾಡಿ – ರುಚಿ ನೋಡಿ

    ಮನೆಯಲ್ಲೇ ಮಟನ್ ಬ್ಲಡ್ ಫ್ರೈ ಮಾಡಿ – ರುಚಿ ನೋಡಿ

    ನಾನ್‌ವೆಜ್‌ ಪ್ರಿಯರಿಗೆ ಚಿಕನ್‌ ತಿನಿಸುಗಳಿಗಿಂತಲೂ ಮಟನ್‌ ನಿಂದ ಸಿದ್ಧವಾಗುವ ಖಾದ್ಯಗಳೇ ಹೆಚ್ಚು ಪ್ರಿಯವಾಗುತ್ತದೆ. ಕೆಲವರು ತುಪ್ಪದ ಮೂಳೆಗೆ ಮಾರುಹೋಗುತ್ತಾರೆ, ಇನ್ನೂ ಕೆಲವರಿಗೆ ತಲೆ ಮಾಂಸ ಇಷ್ಟವಾಗುತ್ತದೆ. ಆದರೆ ಬ್ಲಡ್‌ ಫ್ರೈ ಅತ್ಯಂತ ವಿಶೇಷ. ಸಾಮಾನ್ಯವಾಗಿ ಇದನ್ನು ಲಾಕಿ ಫ್ರೈ ಎಂದೂ ಕರೆಯುತ್ತಾರೆ. ಪ್ರತಿಷ್ಟಿತ ಹೋಟೆಲ್‌ಗಳಲ್ಲೂ ಬೇಡಿಕೆಯಿರುವ ಮಟನ್‌ ಬ್ಲಡ್‌ಫ್ರೈ ಅನ್ನು ಈಗ ಮನೆಯಲ್ಲೇ ಮಾಡಿ ಸವಿಯಬಹುದಾದ ಸರಕ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    * ಮಟನ್ ರಕ್ತ – 700 ಗ್ರಾಂ
    * ಎಳ್ಳಿನ ಎಣ್ಣೆ – 2 ಟೀಸ್ಪೂನ್
    * ಕರಿಬೇವಿನ ಎಲೆಗಳು – 1 ಚಿಗುರು
    * ಕಟ್ ಮಾಡಿದ ಸಾಂಬಾರ್ ಈರುಳ್ಳಿ – 1 ಕಪ್
    * ಹಸಿರು ಮೆಣಸಿನಕಾಯಿ – 4
    * ಪುಡಿಮಾಡಿದ ಜೀರಿಗೆ – 2 ಟೀಸ್ಪೂನ್
    * ಪುದೀನ ಎಲೆಗಳು – 10
    * ಕಟ್ ಮಾಡಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ತುರಿದ ತೆಂಗಿನಕಾಯಿ – 1/3 ಕಪ್

    ಮಾಡುವ ವಿಧಾನ:
    * ಮಟನ್ ರಕ್ತವನ್ನು ತೆಗೆದುಕೊಂಡು ಚೆನ್ನಾಗಿ ಸ್ಮ್ಯಾಶ್ ಮಾಡಿ.
    * ರಕ್ತವನ್ನು ಪಕ್ಕಕ್ಕೆ ಇಟ್ಟು. ಕಟ್ ಮಾಡಿದ ಈರುಳ್ಳಿ, ಹಸಿಮೆಣಸಿನಕಾಯಿ, ಪುದೀನಾ ಎಲೆಗಳನ್ನು ರೆಡಿಯಾಗಿ ಇಟ್ಟುಕೊಳ್ಳಿ.
    * ಬಾಣಲೆಗೆ 2 ಚಮಚ ಎಣ್ಣೆಯನ್ನು ಹಾಕಿ. ಅದು ಬಿಸಿಯಾದ ನಂತರ, ಹಸಿರು ಮೆಣಸಿನಕಾಯಿ, ಕರಿಬೇವಿನ ಎಲೆಗಳು ಮತ್ತು ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಫ್ರೈ ಮಾಡಿ.
    * ನಂತರ ಈ ಮಿಶ್ರಣಕ್ಕೆ ಮಟನ್ ರಕ್ತವನ್ನು ಸೇರಿಸಿ ಬೇಯಲು ಬಿಡಿ. ಅಡುಗೆ ಮಾಡಲು ಪ್ರಾರಂಭಿಸಿದ ನಂತರ, ಕೆಂಪು ಬಣ್ಣದಿಂದ ಗಾಢ ಬೂದು ಬಣ್ಣಕ್ಕೆ ಬದಲಾಗುತ್ತದೆ.
    * ಬೇಯಿಸಿದ ರಕ್ತದಿಂದ ಎಲ್ಲ ನೀರು ಆವಿಯಾಗುವವರೆಗೆ ಚೆನ್ನಾಗಿ ಬೇಯಿಸಿ. ಇದು ಸುಮಾರು 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈಗ, ಪುಡಿಮಾಡಿದ ಜೀರಿಗೆ ಸೇರಿಸಿ.
    * ತುರಿದ ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಪುದೀನ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

  • ‘ಮ್ಯಾಂಗೋ ಚಾಟ್’ ಮಾಡುವ ಸೂಪರ್ ವಿಧಾನ

    ‘ಮ್ಯಾಂಗೋ ಚಾಟ್’ ಮಾಡುವ ಸೂಪರ್ ವಿಧಾನ

    ಮಾವಿನಕಾಯಿ ಎಂದರೆ ಯಾರಿಗೆ ತಾನೇ ಇಷ್ಟವಿರಲ್ಲ. ಅದರಲ್ಲಿಯೂ ಮಾವಿನಿಂದ ಮಾಡಿದ ಯಾವುದೇ ತಿಂಡಿಗಳನ್ನು ಎಲ್ಲ ಮಂದಿ ಸಂತೋಷದಿಂದ ಸವಿಯುತ್ತಾರೆ. ಅದರಲ್ಲಿಯೂ ಮ್ಯಾಗೋ ಚಾಟ್ ಎಲ್ಲರ ಬಾಯಲ್ಲಿ ನೀರು ಬರಿಸುತ್ತೆ. ಅದಕ್ಕೆ ಇಂದು ನಿಮಗೆ ಸಿಂಪಲ್ ಆಗಿ ‘ಮ್ಯಾಗೋ ಚಾಟ್’ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತೇವೆ.

    ಬೇಕಾಗಿರುವ ಪದಾರ್ಥಗಳು:
    * ಕಡ್ಲೆ ಪುರಿ – 2 ಕಪ್
    * ಕಟ್ ಮಾಡಿದ ಹಸಿ ಮಾವಿನಕಾಯಿ ಅಥವಾ ತುರಿಯಬಹುದು – 1 ಕಪ್
    * ಹುರಿದ ಕಡಲೆಕಾಯಿ – 1/2 ಕಪ್
    * ಕಟ್ ಮಾಡಿದ ಈರುಳ್ಳಿ – 2
    * ಹಸಿರು ಮೆಣಸಿನಕಾಯಿ – 3* ನಿಂಬೆ ರಸ – 1 ಚಮಚ
    * ಚಾಟ್ ಮಸಾಲಾ ಪುಡಿ – 1 ಟೀಚಮಚ
    * ನ್ಯಾಚೋಸ್ – 1/2 ಕಪ್
    * ಕಟ್ ಮಾಡಿದ ಟೊಮೆಟೊ – 2
    * ಬೇಯಿಸಿದ ಆಲೂಗಡ್ಡೆ – 2
    * ಕೆಂಪು ಮೆಣಸಿನ ಪುಡಿ – 1 ಟೀಚಮಚ
    * ಅಗತ್ಯವಿರುವಂತೆ ಕಪ್ಪು ಉಪ್ಪು

    ಮಾಡುವ ವಿಧಾನ:
    * ದೊಡ್ಡ ಬಟ್ಟಲಿಗೆ ಕಟ್ ಮಾಡಿದ ಮಾವಿನಕಾಯಿ, ಬೇಯಿಸಿದ ಆಲೂಗಡ್ಡೆ, ಈರುಳ್ಳಿ ಮತ್ತು ಟೊಮೆಟೊ ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಈ ಮಿಶ್ರಣಕ್ಕೆ ಕಟ್ ಮಾಡಿದ ಹಸಿರು ಮೆಣಸಿನಕಾಯಿ, ಹುರಿದ ಕಡಲೆಕಾಯಿ, ಪುಡಿಮಾಡಿದ ನಾಚೋಸ್ ಮತ್ತು ಕಡ್ಲೆ ಪುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ರುಚಿಗೆ ತಕ್ಕಂತೆ ಚಾಟ್ ಮಸಾಲ, ಕೆಂಪು ಮೆಣಸಿನ ಪುಡಿ, ಕಪ್ಪು ಉಪ್ಪು ಮತ್ತು ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿ.

    – ಸರ್ವಿಂಗ್ ಬೌಲ್‍ಗೆ ಹಾಕಿ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಬಡಿಸಿ, ಆನಂದಿಸಿ.

  • ಆರೋಗ್ಯಕರವಾದ ಜೀರಿಗೆ ರಸಂ ಸುಲಭ ವಿಧಾನದಲ್ಲಿ ಮಾಡಿ ಸವಿಯಿರಿ

    ಆರೋಗ್ಯಕರವಾದ ಜೀರಿಗೆ ರಸಂ ಸುಲಭ ವಿಧಾನದಲ್ಲಿ ಮಾಡಿ ಸವಿಯಿರಿ

    ಕ್ಷಿಣ ಭಾರತದ ಕಡೆ ಅದರಲ್ಲೂ ಕರ್ನಾಟಕದಲ್ಲಿ ರಸಂ ಅಥವಾ ಸಾರು ಇಲ್ಲದಿದ್ದರೆ ಊಟ ಪೂರ್ತಿಯಾಗುವುದಿಲ್ಲ. ಅದರಲ್ಲಿಯೂ ಜೀರಿಗೆ ಸಾರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲರಿಗೂ ಬಹಳ ಇಷ್ಟ. ನೀವೂ ಕೂಡ ಒಮ್ಮೆ ಮಾಡಿ ರುಚಿ ನೋಡಿದರೆ ಮತ್ತೆ ಮತ್ತೆ ಈ ರೆಸಿಪಿನ ಮಾಡುತ್ತೀರಿ. ಇದನ್ನು ಮಾಡುವುದು ತುಂಬಾನೇ ಸುಲಭ. ಬಿಸಿ ಬಿಸಿ ಅನ್ನದ ಜೊತೆ ಬಡಿಸಿ ತಿನ್ನಲು ಜೀರಿಗೆ ರಸಂ ತುಂಬಾ ರುಚಿ. ಅಷ್ಟೇ ಅಲ್ಲ ಇದನ್ನು ಸೂಪ್ ತರಹ ಕುಡಿಯಲೂ ಬಹುದು. ಒಮ್ಮೆ ಮಾಡಿ ನೋಡಿ.

    ಬೇಕಾಗಿರುವ ಪದಾರ್ಥಗಳು:
    * ಒಣ ಮೆಣಸಿನಕಾಯಿ – 4 ರಿಂದ 5
    * ಎಣ್ಣೆ – 2 ದೊಡ್ಡ ಚಮಚ
    * ಜೀರಿಗೆ – 2 ಚಮಚ
    * ಬೇಯಿಸಿದ ತೊಗರಿ ಬೇಳೆ – 2 ಕಪ್
    * ಟೊಮೆಟೊ – 1 ಕಪ್
    * ಅರಶಿನ ಪುಡಿ – ಅರ್ಧ ಚಮಚ
    * ಉಪ್ಪು – ಅರ್ಧ ಚಮಚ
    * ನೀರು – ಬೇಕಾದಷ್ಟು(4 ರಿಂದ 5 ಕಪ್)

    * ತುಪ್ಪ – 1 ಚಮಚ
    * ಸಾಸಿವೆ – 1 ಚಮಚ
    * ಕರಿಬೇವು – 1 ದಂಟು
    * ಇಂಗು – ಒಂದು ಚಿಟಿಕೆ
    * ಕೊತ್ತಂಬರಿ ಸೊಪ್ಪು – 1 ಕಪ್

    ಮಾಡುವ ವಿಧಾನ:
    * ಹುರಿದ ಒಣ ಮೆಣಸಿನಕಾಯಿ ಹಾಗೂ ಜೀರಿಗೆಯನ್ನು ಒಂದು ಪಾತ್ರೆಯಲ್ಲಿ ಗರಿ-ಗರಿಯಾಗುವವರೆಗೆ ಹುರಿಯಿರಿ.
    * ಹುರಿದ ಮೆಣಸಿನಕಾಯಿ ಹಾಗೂ ಜೀರಿಗೆಯನ್ನು ಬೇಯಿಸಿದ ತೊಗರಿ ಬೇಳೆಯ ಜೊತೆ ನುಣ್ಣಗೆ ರುಬ್ಬಿಕೊಳ್ಳಿ.
    * ಎಣ್ಣೆಯನ್ನು ಬಿಸಿ ಮಾಡಿ ಟೊಮೆಟೊ ಹಾಕಿ ಸಣ್ಣ ಉರಿಯಲ್ಲಿ ಅರಶಿನ ಪುಡಿ ಹಾಗೂ ಉಪ್ಪನ್ನು ಹಾಕಿ ಬೇಯಿಸಿ.
    * ಅದಕ್ಕೆ ತಯಾರಿಸಿದ ಮೆಣಸಿನಕಾಯಿ-ಜೀರಿಗೆ-ಬೇಳೆ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ.


    * ನೀರನ್ನು ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಲಕಿ. ಈ ಸಾರನ್ನು ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲದವರೆಗೆ ಕುದಿಸಿ.
    * ಒಗ್ಗರಣೆಗೆ ಸ್ವಲ್ಪ ತುಪ್ಪದಲ್ಲಿ ಸಾಸಿವೆ ಹಾಕಿ ಕರಿಬೇವಿನ ಎಲೆ ಮತ್ತು ಇಂಗು ಹಾಕಿ ಹುರಿಯಿರಿ. ಹುರಿದದ್ದನ್ನು ಸಾರಿಗೆ ಹಾಕಿ ಚೆನ್ನಾಗಿ ಕಲಕಿ. ನಂತರ ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಕಿ.

    – ಈ ಸಾರನ್ನು ಬಿಸಿ-ಬಿಸಿ ಅನ್ನದ ಮತ್ತು ಹಪ್ಪಳದ ಜೊತೆ ಬಡಿಸಿ.