Tag: recipe

  • ಬೆಳಗ್ಗಿನ ಉಪಹಾರಕ್ಕೆ ಸುಲಭವಾಗಿ ಮಾಡಿ ಈರುಳ್ಳಿ ಉತ್ತಪ್ಪ

    ಬೆಳಗ್ಗಿನ ಉಪಹಾರಕ್ಕೆ ಸುಲಭವಾಗಿ ಮಾಡಿ ಈರುಳ್ಳಿ ಉತ್ತಪ್ಪ

    ಕ್ಷಿಣ ಭಾರತದ ತಿನಿಸುಗಳ ಪೈಕಿ ಉತ್ತಪ್ಪ ಕೂಡ ಒಂದು. ಉಡುಪಿ, ಕರಾವಳಿಯಲ್ಲಿ ಮುಂಜಾನೆ ಈ ತಿಂಡಿಯನ್ನು ಹೆಚ್ಚಾಗಿ ಮಾಡುತ್ತಾರೆ. ದೋಸೆ ಅಥವಾ ಇಡ್ಲಿ ಹಿಟ್ಟಿನಿಂದ ಮಾಡುವ ಈ ಉತ್ತಪ್ಪ ಬೆಳಗಿನ ಉಪಹಾರಕ್ಕೆ ಉತ್ತಮ ಆಯ್ಕೆಯಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಈರುಳ್ಳಿ ಉತ್ತಪ್ಪ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ದೋಸೆ ಅಕ್ಕಿ – 2 ಕಪ್
    ಉದ್ದಿನ ಬೇಳೆ- ಅರ್ಧ ಕಪ್
    ಮೆಂತ್ಯೆ – 1 ಚಮಚ
    ಅವಲಕ್ಕಿ – 2 ಮುಷ್ಟಿ
    ಉಪ್ಪು – 2 ಚಮಚ
    ಸಣ್ಣದಾಗಿ ಹೆಚ್ಚಿದ ಈರುಳ್ಳಿ – 2
    ಹಸಿಮೆಣಸಿನಕಾಯಿ – 2 ರಿಂದ 3
    ಕರಿಬೇವಿನ ಎಲೆಗಳು – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ದೋಸೆ ಅಕ್ಕಿಯನ್ನು ತೊಳೆದು, ಅದಕ್ಕೆ ಕರಿಬೇವು ಮತ್ತು ಮೆಂತ್ಯ ಬೀಜಗಳನ್ನು ಸೇರಿಸಿ 3 ರಿಂದ 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
    * ರುಬ್ಬುಲು 15 ನಿಮಿಷಗಳ ಮೊದಲು ಅವಲಕ್ಕಿ ನೆನೆಸಿಕೊಳ್ಳಿ. ನಂತರ ಎಲ್ಲಾ ಪದಾರ್ಥಗಳನ್ನು ಅಗತ್ಯವಿರುವ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
    * ಬಳಿಕ ಈ ಹಿಟ್ಟನ್ನು ರಾತ್ರಿಯಿಡೀ ಹುದುಗಲು ಬಿಡಿ.
    * ಮರುದಿನ ಮುಂಜಾನೆ ಉತ್ತಪ್ಪ ಹಿಟ್ಟಿಗೆ ಉಪ್ಪನ್ನು ಸೇರಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ದೋಸೆ ತವಾ ಬಿಸಿಗಿಟ್ಟು ಅದರ ಮೇಲೆ ಸ್ವಲ್ಪ ಅಡುಗೆ ಎಣ್ಣೆಯನ್ನು ಸವರಿ. ಬಳಿಕ ತವಾ ಮಧ್ಯದಲ್ಲಿ ಉತ್ತಪ್ಪ ಹಿಟ್ಟನ್ನು ಸುರಿಯಿರಿ. ಇದನ್ನು ದೋಸೆ ರೀತಿ ಹರಡದೇ ಹಾಗೇ ಬೇಯಲು ಬಿಡಿ.
    * ಬಳಿಕ ದೋಸೆ ಮೇಲೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸನ್ನು ಸಮವಾಗಿ ಹರಡಿ. ಅದನ್ನು 2 ನಿಮಿಷಗಳ ಕಾಲ ಬೇಯಲು ಬಿಡಿ.
    * ಈಗ ದೋಸೆಯನ್ನು ತಿರುವಿ ಹಾಕಿ ಇನ್ನೊಂದು ಬದಿಯನ್ನೂ ಬೇಯಿಸಿಕೊಳ್ಳಿ.
    * ಎರಡೂ ಕಡೆ ಚೆನ್ನಾಗಿ ಬೆಂದ ಬಳಿಕ ತವಾದಿಂದ ದೋಸೆ ತೆಗೆದು ಪ್ಲೇಟ್‌ಗೆ ಹಾಕಿ.
    * ಈರುಳ್ಳಿ ಉತ್ತಪ್ಪಕ್ಕೆ ಚಟ್ನಿ ಅಥವಾ ಸಾಂಬಾರ್ ಪರ್ಫೆಕ್ಟ್ ಕಾಂಬಿನೇಷನ್.

  • ಚುಮುಚುಮು ಮಳೆಗೆ ಬಿಸಿ ಬಿಸಿ ಬೆಂಡೆಕಾಯಿ ಬಜ್ಜಿ!

    ಚುಮುಚುಮು ಮಳೆಗೆ ಬಿಸಿ ಬಿಸಿ ಬೆಂಡೆಕಾಯಿ ಬಜ್ಜಿ!

    ಮುಂಗಾರು ಮಳೆ ಜೋರಾಗಿದೆ..! ಈ ಚಳಿ ಮಳೆಗೆ ಬಾಯಿಗೆ ಬಿಸಿ ಬಿಸಿ ರುಚಿ ಬೇಕಾ? ಹಾಗಾದ್ರೇ ಈ ಬೆಂಡೆಕಾಯಿ ಬಜ್ಜಿ (Bendekayi Bajji) ಮಾಡಿ ತಿನ್ನಿ. ಇದು ಸಾಮಾನ್ಯ ಎಲ್ರಿಗೂ ಇಷ್ಟ ಆಗುತ್ತೆ.. ಹಾಗಾದ್ರೆ ಬೆಂಡೆಕಾಯಿ ಬಜ್ಜಿ ಮಾಡೋದು ಹೇಗೆ ಅಂತ ತಿಳ್ಕಳ್ಳೋಣ ಬನ್ನಿ.

    ಬೇಕಾಗುವ ಪದಾರ್ಥಗಳು
    * ಬೆಂಡೆಕಾಯಿ 10-15
    * ಕಡಲೆಬೇಳೆ ಹಿಟ್ಟು ಅರ್ಧ ಕಪ್
    * ಕಾರ್ನ್‌ಫ್ಲೋರ್ 2 ಚಮಚ
    * ಅಕ್ಕಿ ಹಿಟ್ಟು 1 ಚಮಚ
    * ಓಂಕಾಳು ಅರ್ಧ ಟೇಬಲ್ ಸ್ಪೂನ್
    * ಅಡುಗೆ ಸೋಡ ಚಿಟಿಕೆಯಷ್ಟು
    * ಉಪ್ಪು ರುಚಿಗೆ ತಕ್ಕಷ್ಟು
    * ಎಣ್ಣೆ
    * ಟೊಮೆಟೋ 2
    * ಜೀರಿಗೆ ಪುಡಿ
    *ಹಸಿಮೆಣಸಿನಕಾಯಿ 3

    ತಯಾರಿಸುವ ವಿಧಾನ
    ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ಇಟ್ಟು ಒಣಗಿಸಿಕೊಳ್ಳಬೇಕು. ಬಳಿಕ ಒಂದು ಪಾತ್ರೆಯಲ್ಲಿ ಕಡಲೇಬೇಳೆ ಹಿಟ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಇದಕ್ಕೆ ಕಾರ್ನ್‌ಫ್ಲೋರ್, ಅಕ್ಕಿ ಹಿಟ್ಟು, ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, ಓಂಕಾಳು ಹಾಕಿ ಚೆನ್ನಾಗಿ ಕಲಸಿ ಒಂದು ಪಾತ್ರೆಯನ್ನು ಮುಚ್ಚಿ 20 ನಿಮಿಷ ಬಿಡಿ. ನಂತರ ಬೆಂಡೆಕಾಯಿಯನ್ನು ಮಧ್ಯಭಾಗದಲ್ಲಿ ಸೀಳಿಕೊಳ್ಳಿ. ಅದರೊಳಗೆ ಜೀರಿಗೆ ಹಾಗೂ ಉಪ್ಪು ಮಿಶ್ರಣವನ್ನು ತುಂಬಿ. ಬಳಿಕ ಟೊಮೆಟೊವನ್ನು ಕಟ್ ಮಾಡಿಕೊಂಡು ಅದನ್ನು ಎಣ್ಣೆಯಲ್ಲಿ ಹಾಕಿ ಬಾಡಿಸಿ, ಅದಕ್ಕೆ ಕಟ್ ಮಾಡಿ ಹಸಿಮೆಣಸಿನಕಾಯಿಯನ್ನು ಹಾಕಿ ಹುರಿದುಕೊಳ್ಳಿ. ಬಳಿಕ ಎರಡನ್ನೂ ಮಿಕ್ಸಿ ಜಾರ್‌ಗೆ ಹಾಕಿ ಚೆನ್ನಾಗಿ ರುಬ್ಬಿ. ಈ ರುಬ್ಬಿದ ಮಿಶ್ರಣವನ್ನು ಎಲ್ಲಾ ಬೆಂಡೆಕಾಯಿಯ ಒಳಗೆ ಸ್ವಲ್ಪ ಸ್ವಲ್ಪ ತುಂಬಿ.

    ಇದಾದ ಬಳಿಕ ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಸ್ವಲ್ಪ ಎಣ್ಣೆ ಹಾಕಿ ಬೆಂಡೆಕಾಯಿಯನ್ನು ಹುರಿದುಕೊಳ್ಳಿ. ನಂತರ ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಕರಿಯಲು ಬೇಕಾಗುವಷ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿ ಆದ ಮೇಲೆ ಹಿಟ್ಟಿನಲ್ಲಿ ಹುರಿದ ಬೆಂಡೆಕಾಯಿಗಳನ್ನು ಅದ್ದಿ ಕರಿಯಿರಿ. ಬೆಂಡೆಕಾಯಿ ಕಂದು ಬಣ್ಣ ಬರುವವರೆಗೂ ಕರಿದರೆ ಆಯ್ತು, ಬೆಂಡೆಕಾಯಿ ಬಜ್ಜಿ ಸವಿಯಲು ಸಿದ್ಧ!

  • ಪಂಜಾಬಿ ಶೈಲಿಯ ಮ್ಯಾಂಗೋ ಲಸ್ಸಿ ಸವಿಯಿರಿ

    ಪಂಜಾಬಿ ಶೈಲಿಯ ಮ್ಯಾಂಗೋ ಲಸ್ಸಿ ಸವಿಯಿರಿ

    ಬೇಸಿಗೆಯಲ್ಲಿ ಬಾಯಾರಿಕೆ ನೀಗಿಸುವುದು ಬಹಳ ಮುಖ್ಯ. ಕೆಲವರು ಬಿಸಿಲಿನ ದಾಹ ತೀರಿಸಿಕೊಳ್ಳಲು ಜ್ಯೂಸ್ ಅಥವಾ ಎಳನೀರು ಮೊರೆಹೋದರೇ ಇನ್ನೂ ಕೆಲವರು ಲಸ್ಸಿ ಕುಡಿಯುತ್ತಾರೆ. ಮೊಸರಿನಿಂದ ತಯಾರಿಸಲಾದ ಲಸ್ಸಿ ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿದ್ದು, ಬೇಸಿಗೆಯ ಶಾಖದಲ್ಲಿ ನಮ್ಮನ್ನು ಹೈಡ್ರೇಟ್ ಆಗಿರಿಸುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಂಜಾಬಿ ಶೈಲಿಯ ಮ್ಯಾಂಗೋ ಲಸ್ಸಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ.

    ಬೇಕಾಗುವ ಸಾಮಗ್ರಿಗಳು:
    ಮಾವಿನ ಹಣ್ಣು – 2
    ಮೊಸರು – 1 ಕಪ್
    ಹಾಲು – ಅರ್ಧ ಕಪ್
    ಸಕ್ಕರೆ – 4 ಚಮಚ
    ಏಲಕ್ಕಿ ಪುಡಿ – ಅರ್ಧ ಚಮಚ
    ಐಸ್ ಕ್ಯೂಬ್ – 3
    ಸಣ್ಣದಾಗಿ ಹೆಚ್ಚಿದ ಡ್ರೈಫ್ರೂಟ್ಸ್‌ – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಮಾವಿನ ಹಣ್ಣಿನ ಸಿಪ್ಪೆ ತೆಗೆದು ತಿರುಳನ್ನು ಒಂದು ಮಿಕ್ಸರ್ ಜಾರಿಗೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಮೊಸರು, ಸಕ್ಕರೆ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
    * ಬಳಿಕ ಅದಕ್ಕೆ ಐಸ್‌ಕ್ಯೂಬ್ ಸೇರಿಸಿಕೊಂಡು ತಣ್ಣಗಾಗಲು ಬಿಡಿ.
    * ಈಗ ಅದಕ್ಕೆ ಹಾಲನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
    * ನಂತರ ಈ ಮಿಶ್ರಣವನ್ನು ಒಂದು ಗ್ಲಾಸ್‌ಗೆ ವರ್ಗಾಯಿಸಿಕೊಳ್ಳಿ. ಬಳಿಕ ಅದರ ಮೇಲೆ ಹೆಚ್ಚಿದ ಡ್ರೈಫ್ರೂಟ್ಸ್‌ ಹಾಕಿದರೆ ಪಂಜಾಬಿ ಶೈಲಿಯ ಮ್ಯಾಂಗೋ ಲಸ್ಸಿ ಸವಿಯಲು ಸಿದ್ಧ.

     

  • ಥಟ್ ಅಂತ ರೆಡಿ ಮಾಡಿ ವೆಜ್ ಕಟ್ಲೆಟ್

    ಥಟ್ ಅಂತ ರೆಡಿ ಮಾಡಿ ವೆಜ್ ಕಟ್ಲೆಟ್

    ಹೊರಗಡೆ ಫುಡ್ ತಿಂದು ಬೋರ್ ಆಗಿದ್ಯಾ ನಿಮಗೆ. ಮನೆಯಲ್ಲೇ ಏನಾದರೂ ಮಾಡಿ ತಿನ್ನಬೇಕು ಅಂತಾ ಅನ್ಕೊಂಡಿದಿರಾ? ಹಾಗಿದ್ರೆ ನಾವು ಇವತ್ತು ಗರಿಗರಿಯಾದ ವೆಜ್ ಕಟ್ಲೆಟ್ ಅನ್ನು ಸುಲಭವಾಗಿ ಮನೆಯಲ್ಲಿ ಮಾಡೋದು ಹೇಗೆ ಅಂತಾ ಹೇಳಿ ಕೊಡುತ್ತೇವೆ. ಗರಿಗರಿಯಾದ ವೆಜ್ ಕಟ್ಲೆಟ್(Veg Cutlet) ತಿಂದು ಬಾಯಿ ಚಪ್ಪರಿಸಿ.

    ಬೇಕಾಗಿರುವ ಸಾಮಗ್ರಿಗಳು:
    ಆಲೂಗಡ್ಡೆ – 2
    ಕ್ಯಾರೆಟ್ – ¼ ಕಪ್
    ಬೀನ್ಸ್ – ¼ ಕಪ್
    ಸ್ವೀಟ್ ಕಾರ್ನ್ – ¼ ಕಪ್
    ಬಟಾಣಿ – ½ ಕಪ್
    ಬೀಟ್ರೂಟ್ – ½ ಕಪ್
    ಬ್ರೆಡ್ ಕ್ರಂಬ್ಸ್ – ¼ ಕಪ್
    ಮೆಣಸಿನ ಪುಡಿ – ½ ಟೀಸ್ಪೂನ್
    ಜೀರಿಗೆ ಪುಡಿ – ¼ ಟೀಸ್ಪೂನ್
    ಗರಂ ಮಸಾಲಾ – ¼ ಟೀಸ್ಪೂನ್
    ಆಮ್ಚೂರ್ ಪುಡಿ – ½ ಟೀಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಕೊತ್ತಂಬರಿ ಸೊಪ್ಪು – ಸ್ವಲ್ಪ
    ಕಾರ್ನ್ ಫ್ಲೇಕ್ಸ್ – 1 ಕಪ್
    ಕಾರ್ನ್ ಹಿಟ್ಟು – 3 ಟೇಬಲ್ ಸ್ಪೂನ್
    ಮೈದಾ- 2 ಟೇಬಲ್ ಸ್ಪೂನ್
    ಪೆಪ್ಪರ್ ಪುಡಿ – ¼ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:

    * ಮೊದಲಿಗೆ, ಪ್ರೆಷರ್ ಕುಕ್ಕರ್‌ನಲ್ಲಿ 2 ಕಪ್ ನೀರು ಹಾಕಿ 2 ಆಲೂಗಡ್ಡೆ, ಕ್ಯಾರೆಟ್, ಬೀನ್ಸ್, ಸ್ವೀಟ್ ಕಾರ್ನ್, ಬಟಾಣಿ, ಬೀಟ್ರೂಟ್ ಮತ್ತು ಸ್ವಲ್ಪ ಉಪ್ಪು ಸೇರಿಸಿ. 5 ಸೀಟಿಗಳಿಗೆ ಬೇಯಿಸಿ

    * ಇದು ತಣ್ಣಗಾದ ನಂತರ ತರಕಾರಿಗಳನ್ನು ಮ್ಯಾಶ್ ಮಾಡಿ.

    * ಬಳಿಕ ಬ್ರೆಡ್ ಕ್ರಂಬ್ಸ್‌ಗಳನ್ನು ಸೇರಿಸಿ. ಮೆಣಸಿನ ಪುಡಿ, ಜೀರಾ ಪುಡಿ, ಗರಂ ಮಸಾಲಾ, ಆಮ್ಚೂರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

    * ನಂತರ ಕಾರ್ನ್ ಹಿಟ್ಟು, ಮೈದಾ, ಪೆಪ್ಪರ್ ಮತ್ತು ಉಪ್ಪು ಸೇರಿಸಿ ಕಾರ್ನ್ ಫ್ಲೋರ್ ಬ್ಯಾಟರ್ ತಯಾರಿಸಿ.

    * ತರಕಾರಿ ಮಿಶ್ರಣವನ್ನು ತೆಗೆದುಕೊಂಡು ಸಿಲಿಂಡರಾಕಾರದ ಆಕಾರವನ್ನು ನೀಡಿ, ಕಾರ್ನ್ ಹಿಟ್ಟು ಬ್ಯಾಟರ್‌ನಲ್ಲಿ ಅದನ್ನು ಡಿಪ್ ಮಾಡಿ.

    * ನಂತರ ಬ್ರೆಡ್ ಕ್ರಂಬ್ಸ್‌ಗಳಿಂದ ಕೋಟ್ ಮಾಡಿ.

    * 15-20 ನಿಮಿಷಗಳ ಕಾಲ ಮೀಡಿಯಂ ಫ್ಲೇಮ್ ನಲ್ಲಿ ಎಣ್ಣೆಯಲ್ಲಿ ಫ್ರೈ ಮಾಡಿ. ಗೋಲ್ಡ್ ಬಣ್ಣ ಬಂದ ಮೇಲೆ ತೆಗೆಯಿರಿ.

    * ಗರಿಗರಿಯಾದ ವೆಚ್ ಕಟ್ಲೆಟ್ ಅನ್ನು ಟೊಮೆಟೊ ಸಾಸ್ ನೊಂದಿಗೆ ಸವಿಯಿರಿ.

  • ಮನೆಯಲ್ಲೇ ಮಾಡಿ ಟೇಸ್ಟಿ ಚಿಲ್ಲಿ ಗಾರ್ಲಿಕ್ ಪನೀರ್!

    ಮನೆಯಲ್ಲೇ ಮಾಡಿ ಟೇಸ್ಟಿ ಚಿಲ್ಲಿ ಗಾರ್ಲಿಕ್ ಪನೀರ್!

    ನೀರ್ ಅನೇಕರಿಗೆ ಪ್ರಿಯವಾದದ್ದು. ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಪನೀರ್‌ನಲ್ಲಿ ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶಗಳ ಮಿಶ್ರಣ ಲಭ್ಯವಿರುವ ಕಾರಣ, ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಇದೊಂದು ಅತ್ಯುತ್ತಮವಾದ ಆಹಾರ ಎಂದು ಹೇಳಬಹುದು. ಪನೀರ್‌ನಲ್ಲಿ ಅತ್ಯುತ್ತಮವಾದ ಕ್ಯಾಲ್ಸಿಯಂ ಅಂಶ ಇರುವ ಕಾರಣ ಎಲ್ಲಾ ವಯಸ್ಸಿನವರಿಗೂ ಅವರ ದೇಹಕ್ಕೆ ಅನುಗುಣವಾದ ಪೌಷ್ಟಿಕ ಸತ್ವಗಳು ಪನೀರ್‌ನಿಂದ ಸಿಗುತ್ತವೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವ ಚಿಲ್ಲಿ ಗಾರ್ಲಿಕ್ ಪನೀರ್ ಅನ್ನು ಮನೆಯಲ್ಲೇ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ನೀವು ಕೂಡ ನಿಮ್ಮ ಮನೆಯಲ್ಲಿ ಒಂದ್ಸಲ ಇದನ್ನು ಟ್ರೈ ಮಾಡಿ ನೋಡಿ.

    ಬೇಕಾಗುವ ಸಾಮಗ್ರಿಗಳು:
    ಪನೀರ್ – 200 ಗ್ರಾಂ
    ಮೆಣಸಿನಕಾಯಿ – 2
    ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    ಕೊತ್ತಂಬರಿ ಪುಡಿ – 1 ಚಮಚ
    ಕಸೂರಿ ಮೇತಿ – 1 ಚಮಚ
    ಬೆಳ್ಳುಳ್ಳಿ ಎಸಳು – 8
    ಮೊಸರು – ಅರ್ಧ ಕಪ್
    ಗರಂ ಮಸಾಲ – ಅರ್ಧ ಚಮಚ
    ಖಾರದಪುಡಿ – 1 ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ನಿಂಬೆ ರಸ – 2 ಚಮಚ

    ಮಾಡುವ ವಿಧಾನ:
    * ಒಂದು ಬೌಲ್‌ನಲ್ಲಿ ಮೊಸರು, ನಿಂಬೆ ರಸ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಕೊತ್ತಂಬರಿ ಪುಡಿ, ಕಸೂರಿ ಮೇತಿ, ಖಾರದಪುಡಿ ಮತ್ತು ರುಚಿಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಬಳಿಕ ಇದೇ ಬೌಲ್‌ಗೆ ಪನೀರ್ ತುಂಡುಗಳನ್ನು ಸೇರಿಸಿ ಅದರೊಂದಿಗೆ ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ. ಇದನ್ನ ಅರ್ಧ ಗಂಟೆಯವರೆಗೆ ಪಕ್ಕಕ್ಕೆ ಇರಿಸಿ.
    * ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಮಿಶ್ರಣ ಮಾಡಿ.
    * ನಂತರ ಮೊದಲೇ ಮ್ಯಾರಿನೇಟ್ ಮಾಡಿದ ಪನೀರ್ ತುಂಡುಗಳನ್ನು ಬಾಣಲೆಯಲ್ಲಿ ಒಂದೊಂದಾಗಿ ಫ್ರೈ ಮಾಡಿ. ಎಲ್ಲವನ್ನೂ ಬಾಣಲೆಗೆ ಹಾಕಿದ ನಂತರ ಅದರ ಮೇಲೆ ಮುಚ್ಚಳವನ್ನು ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. ಪನೀರ್ ತುಂಡುಗಳು ಚೆನ್ನಾಗಿ ಬೇಯುವವರೆಗೆ ನೋಡಿಕೊಳ್ಳಿ.
    * ನಂತರ ಮುಚ್ಚಳ ತೆಗೆದು ಈ ಪನೀರ್ ಅನ್ನು ಫ್ರೈ ಮಾಡಿ. ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿದರೆ ಟೇಸ್ಟಿ ಚಿಲ್ಲಿ ಗಾರ್ಲಿಕ್ ಪನೀರ್ ಸವಿಯಲು ಸಿದ್ಧ.
    * ಇದು ಮಧ್ಯಾಹ್ನದ ಊಟ, ಸಂಜೆ ಸ್ನ್ಯಾಕ್ಸ್‌ಗೆ ಹೇಳಿ ಮಾಡಿಸಿದ ತಿನಿಸು.

  • ‌ಸುಲಭವಾಗಿ ಮಾಡಿ ಟೇಸ್ಟಿ ಹಲಸಿನ ಗುಜ್ಜೆ ಪಲ್ಯ!

    ‌ಸುಲಭವಾಗಿ ಮಾಡಿ ಟೇಸ್ಟಿ ಹಲಸಿನ ಗುಜ್ಜೆ ಪಲ್ಯ!

    ಲಸಿನಹಣ್ಣು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರೂ ಹಲಸಿನ ಸೀಸನ್‌ಗೇ ಅಂತಾನೇ ಕಾಯ್ತ ಇರ್ತಾರೆ. ಬರೀ ಹಲಸಿನ ಹಣ್ಣಿನಿಂದ ಮಾತ್ರ ಬೇರೆ ಬೇರೆ ಖಾದ್ಯಗಳನ್ನು ಮಾಡುವುದಿಲ್ಲ. ಹಲಸಿನ ಕಾಯಿ ಅಂದ್ರೆ ಹಲಸಿನ ಗುಜ್ಜೆ ಇಂದಲೂ ಪಲ್ಯ, ಕಬಾಬ್‌ ಹೀಗೆ ತಯಾರು ಮಾಡುತ್ತಾರೆ. ಗಂಜಿ ಜೊತೆ ಹಲಸಿನ ಗುಜ್ಜೆಯ ಪಲ್ಯ ಅಂತೂ ಸೂಪರ್‌ ಕಾಂಬಿನೇಷನ್‌. ನಿಮ್ಗೂ ಹಲಸಿನ ಗುಜ್ಜೆ ಪಲ್ಯ ತಿನ್ಬೇಕು ಅಂತಾ ಅನ್ನಿಸುತ್ತಿದ್ಯಾ? ಹಾಗಿದ್ರೆ ಗುಜ್ಜೆ ಪಲ್ಯ ಹೇಗೆ ಮಾಡೋದು ಅಂತಾ ತಿಳಿಯೋಣ.

    ಬೇಕಾಗಿರುವ ಸಾಮಾಗ್ರಿಗಳು:
    ಹಲಸಿನ ಗುಜ್ಜೆ – 1/2 ಭಾಗ
    ಉದ್ದಿನ ಬೇಳೆ – 1 ಟೀಸ್ಪೂನ್
    ಕಡಲೆ ಬೇಳೆ – 1 ಟೀಸ್ಪೂನ್
    ಅಡುಗೆ ಎಣ್ಣೆ – 4 ರಿಂದ 6 ಚಮಚ
    ಸಾಸಿವೆ – 1/2 ಟೀಸ್ಪೂನ್
    ಅರಿಶಿನ ಪುಡಿ – 1 ಚಿಟಿಕೆ
    ಇಂಗು – 1 ಚಿಟಿಕೆ
    ಕರಿಬೇವು – 4-5 ಎಲೆಗಳು
    ಬೆಲ್ಲ – ಸ್ವಲ್ಪ
    ಹುಣಸೆಹಣ್ಣು – 1
    ಉಪ್ಪು – ರುಚಿಗೆ ತಕ್ಕಷ್ಟು
    ಸಾಸಿವೆ 1/2 ಟೀಸ್ಪೂನ್
    ಕೆಂಪು ಮೆಣಸು – 3
    ತುರಿದ ತೆಂಗಿನಕಾಯಿ – 1/2 ಕಪ್
    ಕೊತ್ತಂಬರಿ – 1 ಟೀಸ್ಪೂನ್

    ಮಾಡುವ ವಿಧಾನ:
    * ಗುಜ್ಜೆಯ ಹೊರಗಿನ ಮುಳ್ಳಿನ ಚರ್ಮ ಮತ್ತು ಮಧ್ಯಭಾಗವನ್ನು ತೆಗೆದುಹಾಕಿ. ಒಳಗಿನ ತಿರುಳನ್ನು ಒಂದು ಇಂಚಿನ ತುಂಡುಗಳಾಗಿ ಕತ್ತರಿಸಿ.
    * 10 ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿಸಿ. ನೀರನ್ನು ಬಸಿದು ಪಕ್ಕಕ್ಕೆ ಇರಿಸಿ.
    * ದಪ್ಪ ತಳದ ಕಡಾಯಿ ಅಥವಾ ಪ್ರೆಶರ್ ಕುಕ್ಕರ್ ತೆಗೆದುಕೊಳ್ಳಿ.
    * ಕತ್ತರಿಸಿದ ಹಲಸಿನ ತುಂಡುಗಳು, ಉಪ್ಪು, ಹುಣಸೆಹಣ್ಣು, ಬೆಲ್ಲ, ಕೆಂಪು ಮೆಣಸಿನ ಪುಡಿ, ಅರಿಶಿನ ಹಾಕಿ. ಈಗ ಒಂದು ಕಪ್ ನೀರು ಸೇರಿಸಿ ಒಂದು ಸೀಟಿ ಬರುವವರೆಗೆ ಬೇಯಿಸಿ.
    * ಬಳಿಕ ಬೇಯಿಸಿದ ಗುಜ್ಜೆಯನ್ನು ಅನ್ನು ಸ್ವಲ್ಪ ಮ್ಯಾಶ್ ಮಾಡಿ.
    * ತೆಂಗಿನಕಾಯಿ, ಹುರಿದ ಮೆಂತ್ಯ ಮತ್ತು ಕೆಂಪು ಮೆಣಸಿನಕಾಯಿಯನ್ನು ಒಣಗಿಸಿ ಪುಡಿ ಮಾಡಿ ಸೇರಿಸಿ.
    * ಬಳಿಕ ಉಳಿದ ನೀರು ಆರಿಸಿ, ಮಸಾಲೆ ಚೆನ್ನಾಗಿ ಹಿಡಿದುಕೊಳ್ಳುವವರೆಗೆ ಬೇಯಿಸಿ.
    * ತೆಂಗಿನ ಎಣ್ಣೆ ಬಿಸಿ ಮಾಡಿ ಸಾಸಿವೆ, ಬೇಳೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿದ ಒಗ್ಗರಣೆಯನ್ನು ಗುಜ್ಜೆ ಪಲ್ಯಕ್ಕೆ ಹಾಕಿ.
    * ಈಗ ರುಚಿರುಚಿಯಾದ ಗುಜ್ಜೆ ಪಲ್ಯ ಗಂಜಿಯೊಂದಿಗೆ ಸವಿಯಲು ಸಿದ್ಧ.

  • ಆಹಾ ಸಕತ್‌ ಆಗಿರುತ್ತೆ.. ಈ ನುಗ್ಗೆ ಬಿರಿಯಾನಿ – ನೀವು ಟ್ರೈ ಮಾಡಿ..!

    ಆಹಾ ಸಕತ್‌ ಆಗಿರುತ್ತೆ.. ಈ ನುಗ್ಗೆ ಬಿರಿಯಾನಿ – ನೀವು ಟ್ರೈ ಮಾಡಿ..!

    ನೀವು ಹಲವು ರೀತಿಯ ಬಿರಿಯಾನಿ ಸವಿದಿರಬಹುದು. ಆದ್ರೆ ನಾನು ಇವತ್ತು ಹೇಳೋ ವಿಶೇಷವಾದ ನುಗ್ಗೆಕಾಯಿ ಬಿರಿಯಾನಿಯನ್ನು ನೀವು ತಿಂದಿರಲಿಕ್ಕಿಲ್ಲ. ಈ ನುಗ್ಗೆಕಾಯಿ ಆರೋಗ್ಯಕ್ಕೆ ಒಳ್ಳೆಯದು ಅದರ ಜೊತೆ ಇದನ್ನು ಬಿರಿಯಾನಿ ಮಾಡಿದ್ರೆ ಸಕತ್ ರುಚಿಯನ್ನು ಕೊಡುತ್ತೆ. ಹಾಗಾದ್ರೆ ಈ ನುಗ್ಗೆಕಾಯಿ ಬಳಸಿ ಬಿರಿಯಾನಿ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ.

    ನುಗ್ಗೆಕಾಯಿ ಬಿರಿಯಾನಿ ಮಾಡೋಕೆ ಏನೆಲ್ಲ ಬೇಕು?

    *ಅಕ್ಕಿ
    *ನುಗ್ಗೆಕಾಯಿ
    *ದಾಲ್ಚಿನ್ನಿ
    *ಏಲಕ್ಕಿ
    *ಲವಂಗ
    *ಚಕ್ರಮೊಗ್ಗು
    *ಈರುಳ್ಳಿ
    *ಟೊಮೆಟೋ
    *ಪುದೀನ
    *ಕೊತ್ತಂಬರಿ ಸೊಪ್ಪು
    *ಹಸಿರು ಮೆಣಸಿನಕಾಯಿ
    *ಹಸಿರು ಬಟಾಣಿ
    *ಮೊಸರು
    *ಶುಂಠಿ ಬೆಳ್ಳುಳ್ಳಿ ಪೇಸ್ಟ್
    *ಬಿರಿಯಾನಿ ಪೌಡರ್
    *ಕಸೂರಿ ಮೇಥಿ
    *ಖಾರದ ಪುಡಿ
    *ಅಡುಗೆ ಎಣ್ಣೆ
    *ರುಚಿಗೆ ತಕ್ಕಷ್ಟು ಉಪ್ಪು

    ನುಗ್ಗೆಕಾಯಿ ಬಿರಿಯಾನಿ ಮಾಡುವುದು ಹೇಗೆ?
    ಮೊದಲಿಗೆ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಏಲಕ್ಕಿ, ಚಕ್ಕೆ, ಲವಂಗ, ಪಲಾವ್ ಎಲೆ, ಮೊಗ್ಗು ಹಾಕಿ. ಹಾಗೆ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. 3 ನಿಮಿಷದ ಬಳಿಕ ಈಗ ಪುದಿನ, ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ ಸಹ ಹಾಕಿ, ನಂತರ ಖಾರದ ಪುಡಿ, ಹಸಿ ಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿಕೊಳ್ಳಬೇಕು.

    ಹೆಚ್ಚಿದ ಟೊಮೆಟೋ ಹಾಕಿಕೊಂಡು ಬಳಿಕ ಬಟಾಣಿ, ಹಾಗೆ ಕತ್ತರಿಸಿಕೊಂಡಿರುವ ನುಗ್ಗೆಕಾಯಿ ಸ್ವಲ್ಪ ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡುತ್ತಾ ಮಿಕ್ಸ್ ಮಾಡಬೇಕು. ನಂತರ ಉಪ್ಪು ಕೂಡ ಹಾಕಿ 5 ನಿಮಿಷ ಫ್ರೈ ಮಾಡಿಕೊಳ್ಳಿ. ಹಾಗೆ ಬಿರಿಯಾನಿ ಪೌಡರ್ ಹಾಕಿ ಫ್ರೈ ಮಾಡಿಕೊಳ್ಳಬೇಕು.

    ಬಳಿಕ ಅಕ್ಕಿಯನ್ನು ತೆಗೆದುಕೊಂಡು ನೆನಸಿಡಬೇಕು. ಈಗ ನೀರನ್ನು ಅದರ ಎರಡರಷ್ಟು ತೆಗೆದುಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಉಪ್ಪು ಹಾಕಿ 5 ನಿಮಿಷ ಕುದಿಸಬೇಕು. ಈಗ ನೆನೆಸಿಟ್ಟಿರುವ ಅಕ್ಕಿಯನ್ನು ಇದಕ್ಕೆ ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿ. ನಂತರ ಚೆನ್ನಾಗಿ ಕುದಿಸಬೇಕು. ನೀರು ಕಡಿಮೆಯಾದಾಗ ಉರಿ ಸಣ್ಣದಾಗಿ ಮಾಡಿ ಮುಚ್ಚಳ ಮುಚ್ಚಿ 15 ನಿಮಿಷ ಬಿಡಬೇಕು.

    ಬಳಿಕ ಒಲೆ ಆಫ್ ಮಾಡಿ, ಮುಚ್ಚಳ ತೆಗೆದು ಮಿಕ್ಸ್ ಮಾಡಿದ್ರೆ ನುಗ್ಗೆಕಾಯಿ ಬಿರಿಯಾನಿ ರೆಡಿ! ಇದರ ಜೊತೆಗೆ ಮೊಸರು ಬಜ್ಜಿ ಅಥವಾ ಕುರ್ಮಾ ಮಾಡಿಕೊಂಡು ಸವಿಯಬಹುದು.

  • ಮನೆಯಲ್ಲೇ ಮಾಡಿ ಹಲಸಿನ ಹಣ್ಣಿನ ಐಸ್‌ಕ್ರೀಮ್!

    ಮನೆಯಲ್ಲೇ ಮಾಡಿ ಹಲಸಿನ ಹಣ್ಣಿನ ಐಸ್‌ಕ್ರೀಮ್!

    ಲಸಿನ ಹಣ್ಣಿನ ಸೀಸನ್ ಶುರುವಾಗಿದೆ. ಕೆಲವರು ಮನೆಯಲ್ಲೇ ಹಲಸಿನ ಹಣ್ಣು ಬೆಳೆದರೆ ಇನ್ನೂ ಕೆಲವು ಹಲಸಿನ ಹಣ್ಣು ಪ್ರಿಯರು ಮಾರ್ಕೆಟ್‌ನಿಂದ ಹಲಸಿನ ಹಣ್ಣು ಖರೀದಿಸಿ ತಮ್ಮ ಆಸೆ ಪೂರೈಸಿಕೊಳ್ಳುತ್ತಾರೆ. ಹಲಸಿನ ಹಣ್ಣಿನಲ್ಲಿ ನಾನಾರೀತಿಯ ತಿಂಡಿ ತಿನಿಸುಗಳನ್ನು ಮಾಡಬಹುದು. ಈ ಪೈಕಿ ಬೇಸಿಗೆಯಲ್ಲಿ ದಾಹ ನೀಗಿಸುವ, ಹೊಟ್ಟೆ ತಂಪಾಗಿಸುವ ಹಲಸಿನ ಹಣ್ಣಿನ ಐಸ್‌ಕ್ರೀಮ್ ಯಾವ ರೀತಿ ಮಾಡುವುದು ಎಂಬುದನ್ನು ನಾವು ಇಂದು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ತಡಮಾಡದೇ ನೀವೂ ಕೂಡ ಈ ರೆಸಿಪಿಯನ್ನೊಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.

    ಬೇಕಾಗುವ ಸಾಮಗ್ರಿಗಳು:
    ಹಣ್ಣಾದ ಹಲಸಿನ ತೊಳೆಗಳು – 1 ಕಪ್
    ಸಕ್ಕರೆ – ಅರ್ಧ ಕಪ್
    ಕೆನೆ/ಫ್ರೆಶ್ ಕ್ರೀಮ್ – 1 ಕಪ್
    ಕಂಡೆನ್ಸ್ಡ್ ಮಿಲ್ಕ್ – ಅರ್ಧ ಕಪ್
    ಹಾಲು – ಕಾಲು ಕಪ್

    ಮಾಡುವ ವಿಧಾನ:
    * ಮೊದಲಿಗೆ ಹಲಸಿನ ತೊಳೆಗಳನ್ನು ಹಾಗೂ ಸಕ್ಕರೆಯನ್ನು ಮಿಕ್ಸರ್ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಲು ಹಾಲು ಅಥವಾ ನೀರನ್ನು ಬೆರೆಸಿಕೊಳ್ಳಬಹುದು.
    * ಈಗ ಒಂದು ಬಟ್ಟಲಿನಲ್ಲಿ ಕೆನೆ ಹಾಕಿ ಗಟ್ಟಿಯಾಗುವವರೆಗೆ ಕಡೆಯಿರಿ.
    * ಬಳಿಕ ಕಡೆದ ಕೆನೆಗೆ ರುಬ್ಬಿದ ಹಲಸಿನ ಹಣ್ಣಿನ ಮಿಶ್ರಣ ಹಾಗೂ ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ನಂತರ ಈ ಮಿಶ್ರಣವನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರೀಜರ್‌ನಲ್ಲಿ 6-8 ಗಂಟೆಗಳ ಕಾಲ ಇಡಿ.
    * ಐಸ್‌ಕ್ರೀಮ್ ಗಟ್ಟಿಯಾದ ಬಳಿಕ ಸ್ಕೂಪ್ ಸಹಾಯದಿಂದ ಬೌಲ್‌ಗೆ ಹಾಕಿ ಸವಿಯಲು ಕೊಡಿ.

  • ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಶೇಂಗಾ ಚಿಕ್ಕಿ

    ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಶೇಂಗಾ ಚಿಕ್ಕಿ

    ಸಿಹಿತಿಂಡಿ ಅಂದ್ರೆ ಯಾರಿಗೆ ಇಷ್ಟ ಇಲ್ಲಾ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟ. ಸ್ವೀಟ್‌ ಅಲ್ಲಿ ಚಿಕ್ಕಿ ಅಂದ್ರೆ ಅಂತೂ ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಶೇಂಗಾ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಂಗಡಿಗಳಿಂದ ಚಿಕ್ಕಿಯನ್ನ ತೆಗೆದುಕೊಂಡು ತಿಂತೀರಾ, ಹಾಗಿದ್ರೆ ಇಲ್ಲಿದೆ ಮನೆಯಲ್ಲೇ ಚಿಕ್ಕಿ ತಯಾರಿಸುವ ಸುಲಭ ವಿಧಾನ

    ಬೇಕಾಗುವ ಸಾಮಾಗ್ರಿಗಳು:
    ಶೇಂಗಾ – 200 ಗ್ರಾಂ
    ಬಿಳಿ ಬೆಲ್ಲ – 250 ಗ್ರಾಂ
    ತುಪ್ಪ – 2 ಟೀಸ್ಪೂನ್
    ಅಡುಗೆ ಸೋಡಾ – ಸ್ವಲ್ಪ
    ತುರಿದ ಒಣ ಕೊಬ್ಬರಿ- 50 ಗ್ರಾಂ
    ರೋಸ್ ಎಸೆನ್ಸ್ – ಒಂದು ಟೀಸ್ಪೂನ್‌

    ಮಾಡುವ ವಿಧಾನ:
    *ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು ಶೇಂಗಾ ಹಾಕಿ. ಶೇಂಗಾಗಳನ್ನು ಕೆಂಪಾಗುವಂತೆ ಚೆನ್ನಾಗಿ ಫ್ರೈ ಮಾಡಿ.
    *ಶೇಂಗಾಗಳು ಬೇಯಿಸಿದ ನಂತರ ಸಿಪ್ಪೆಯನ್ನು ತೆಗೆದುಹಾಕಿ.
    *ಸಿಪ್ಪೆ ತೆಗೆದ ಶೇಂಗಾ ಬಟ್ಟೆಯಲ್ಲಿ ಹಾಕಿ ಲತ್ತುಗುಣಿಯಿಂದ ಒತ್ತಬೇಕಾಗುತ್ತದೆ. ಲತ್ತುಗುಣಿ ಹೀಗೆ ಉರುಳಿಸುವುದರಿಂದ ಶೇಂಗಾ ಸಣ್ಣಗೆ ಒಡೆಯುತ್ತವೆ. ಚಿಕ್ಕಿ ತುಂಬಾ ಚೆನ್ನಾಗಿ ಆಗುತ್ತದೆ.
    *ಪಾತ್ರೆಯನ್ನು ಒಲೆಯ ಮೇಲೆ ಇರಿಸಿ. ಅದಕ್ಕೆ ಬಿಳಿ ಬೆಲ್ಲ ಹಾಕಿ.
    *ಬೆಲ್ಲದಲ್ಲಿ ಒಂದು ಹನಿ ನೀರು ಕೂಡ ಹಾಕಬೇಡಿ. ಬೆಲ್ಲವು ಶಾಖದಲ್ಲಿ ಕರಗುತ್ತದೆ.
    *ಬೆಲ್ಲವು ಸಂಪೂರ್ಣವಾಗಿ ಕರಗಿ ಬೆಲ್ಲದ ಪಾಕ ಸಿದ್ಧವಾಗುತ್ತದೆ. ನಂತರ, ಅರ್ಧ ಚಮಚ ತುಪ್ಪವನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ.
    *ಬೆಲ್ಲದ ಪಾಕ ಕೆಂಪು ಬಣ್ಣಕ್ಕೆ ಬಂದಾಗ ಸ್ವಲ್ಪ ಕಟುವಾದ ವಾಸನೆ ಬರುತ್ತದೆ. ಈಗ ಒಲೆಯನ್ನು ಕಡಿಮೆ ಉರಿಯಲ್ಲಿ ಹಾಕಿ. ಈ ಹಂತದಲ್ಲಿ ಚಿಟಿಕೆ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    *ಅಡುಗೆ ಸೋಡಾವನ್ನು ಸೇರಿಸುವುದರಿಂದ ಪಾಕ ಸ್ವಲ್ಪ ಉಬ್ಬುತ್ತದೆ. ನಂತರ ಈ ಪಾಕಕ್ಕೆ ಶೇಂಗಾ, ಒಣ ಕೊಬ್ಬರಿ ತುರಿ ಮತ್ತು ರೋಸ್ ಎಸೆನ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    *ಬೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
    *ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಯಲ್ಲಿ ಹಾಕಿ ಎಲ್ಲಾ ಕಡೆ ಹರಡಿ.
    *ನಂತರ ಸ್ವಲ್ಪ ತುರಿದ ಕೊಬ್ಬರಿಯನ್ನು ಮೇಲೆ ಸಿಂಪಡಿಸಿ ಮತ್ತು ಬೌಲ್​ನಿಂದ ಮತ್ತೊಮ್ಮೆ ಒತ್ತಿರಿ.
    *ಈ ಮಿಶ್ರಣವನ್ನು ಹೊರತೆಗೆಯಿರಿ. ತುಪ್ಪ ಲೇಪಿತ ಚಪಾತಿ ಲತ್ತುಗುಣಿ ಕಡ್ಡಿಯಿಂದ ಸಮವಾಗಿ ಸುತ್ತಿಕೊಳ್ಳಿ.
    *ಬೇಕಾದ ಗಾತ್ರದ ಮೇಲಿನ ಅರ್ಧವನ್ನು ಕತ್ತರಿಸಿ.  ರುಚಿಕರವಾದ ಶೇಂಗಾ ಕೊಬ್ಬರಿ ಚಿಕ್ಕಿ ತಿನ್ನಲು ರೆಡಿ.

  • ಹಲಸಿನ ಗಟ್ಟಿ ಸವಿಯಲು ಬಲು ರುಚಿ!

    ಹಲಸಿನ ಗಟ್ಟಿ ಸವಿಯಲು ಬಲು ರುಚಿ!

    ಹಸಿದವರಿಗೆ ಹಲಸು, ಉಂಡವರಿಗೆ ಮಾವು ಎಂಬ ಮಾತಿದೆ. ಹಲಸಿನ ಹಣ್ಣಿನ ಸೀಸನ್‌ ಶುರುವಾಗಿದೆ. ರುಚಿಯಾದ ಹಲಸು ಎಂತಹವರನ್ನೂ ಆಕರ್ಷಿಸುತ್ತದೆ. ಮಲೆನಾಡು, ಕರಾವಳಿ ಭಾಗದಲ್ಲಂತೂ ಹಲಸಿನ ಸೀಸನ್‌ ಮುಗಿಯುವವರೆಗೂ ಅದರದ್ದೇ ಕಾರುಬಾರು. ಹಲಸಿನ ಹಣ್ಣಿನಲ್ಲಿ ನಾನಾ ರೀತಿಯ ತಿಂಡಿಗಳನ್ನು ತಯಾರಿಸಲಾಗುತ್ತದೆ. ಈ ಪೈಕಿ ಹಲಸಿನ ಹಣ್ಣಿನ ಗಟ್ಟಿ ಕೂಡ ಒಂದು. ಮಲೆನಾಡು, ಕರಾವಳಿ ಜನರಿಗೆ ಈ ತಿಂಡಿ ಅಚ್ಚುಮೆಚ್ಚು. ಈ ಭಾಗದ ಜನರನ್ನು ಬಿಟ್ಟು ಹೆಚ್ಚಿನವರಿಗೆ ಇದರ ಅರಿವಿರಲು ಸಾಧ್ಯವಿಲ್ಲ. ಇಂದು ನಾವು ನಿಮಗೆ ಸುಲಭವಾಗಿ ಹಲಸಿನ ಹಣ್ಣಿನ ಗಟ್ಟಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ನೀವೂ ನಿಮ್ಮ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.

    ಹಲಸಿನ ಗಟ್ಟಿಗೆ ಬೇಕಾಗುವ ಪದಾರ್ಥಗಳು:
    ಬೀಜ ತೆಗೆದ ಹಲಸಿನ ಹಣ್ಣು – 1 ಕಪ್ ಅಕ್ಕಿ
    ತೆಂಗಿನ ತುರಿ – ಅರ್ಧ ಕಪ್‌
    ಬೆಲ್ಲ – ಕಾಲು ಕಪ್‌
    ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು
    ಬಾಳೆ ಎಲೆಗಳು

    ಮಾಡುವ ವಿಧಾನ:
    *ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ.
    *ಸುಲಭವಾಗಿ ರುಬ್ಬಲು ಹಲಸಿನ ಹಣ್ಣಿನ ತೊಳೆಗಳನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
    *ಈಗ ಬಾಳೆ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಅದನ್ನು ಹಬೆಯಲ್ಲಿ ಬೇಯಿಸಿ ಅಥವಾ ಒಲೆಯ ಮೇಲೆ ಕೆಲವು ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ.
    *ನೆನೆಸಿದ ಅಕ್ಕಿ, ಹಲಸು, ತೆಂಗಿನತುರಿ, ಬೆಲ್ಲ ಮತ್ತು ಉಪ್ಪನ್ನು ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ನೀರು ಸೇರಿಸುವ ಅಗತ್ಯವಿಲ್ಲ
    *ಬಳಿಕ ರುಬ್ಬಿಕೊಂಡ ಹಿಟ್ಟನ್ನು ಪಾತ್ರೆಗೆ ವರ್ಗಾಯಿಸಿ.
    *ಹಿಟ್ಟು ದಪ್ಪವಾದ ಉದುರುವ ಸ್ಥಿರತೆಯನ್ನು ಹೊಂದಿರಬೇಕು.
    *ನಂತರ ಒಂದು ಬಾಳೆ ಎಲೆಯ ಮೇಲೆ ಒಂದು ಹಿಡಿ ಹಿಟ್ಟು ಹಾಕಿ.
    *ಬಳಿಕ ಅದನ್ನು ಅದನ್ನು ಆಯತಾಕಾರದಲ್ಲಿ ಮಡಿಸಿ.
    *30 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ.
    *ಈಗ ಹಲಸಿನ ಹಣ್ಣಿನ ಗಟ್ಟಿ ಸವಿಲು ಸಿದ್ಧ