Tag: recipe

  • ಬಿಸಿ-ಬಿಸಿ ಅನ್ನದೊಂದಿಗೆ ಸವಿಯಿರಿ ನುಗ್ಗೆಕಾಯಿ ಸಾಂಬಾರ್

    ಬಿಸಿ-ಬಿಸಿ ಅನ್ನದೊಂದಿಗೆ ಸವಿಯಿರಿ ನುಗ್ಗೆಕಾಯಿ ಸಾಂಬಾರ್

    ಸಾಂಬಾರ್ ಪಾಕವಿಧಾನಗಳು ದಕ್ಷಿಣ ಭಾರತೀಯರಿಗೆ ಪ್ರಧಾನ ಮತ್ತು ಹೆಚ್ಚು ಆದ್ಯತೆಯ ಪಾಕವಿಧಾನವಾಗಿದೆ. ಸಾಂಬಾರ್ ಅನ್ನ, ಇಡ್ಲಿ ಜೊತೆ ತಿನ್ನುವುದರಿಂದ ಸವಿಯಲು ಸಖತ್ ಟೇಸ್ಟಿಯಾಗಿರುತ್ತೆ. ಅದರಲ್ಲಿಯೂ ಅನ್ನಕ್ಕೆ ನುಗ್ಗೆಕಾಯಿ ಸಾಂಬಾರ್ ಸಖತ್ ಕಾಂಬಿನೇಷನ್. ನುಗ್ಗೆಕಾಯಿಯಲ್ಲಿ ಮಾಡುವ ಸಾಂಬಾರ್ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಈ ಸಾಂಬಾರ್ ಮಾಡುವ ವಿಧಾನ ತುಂಬಾ ಸುಲಭವಾಗಿದ್ದು, ರೆಸಿಪಿ ಇಲ್ಲಿದೆ.

    ಬೇಕಾಗಿರುವ ಪದಾರ್ಥಗಳು
    * ನುಗ್ಗೆಕಾಯಿ – 20 ತುಂಡುಗಳು
    * ಸಾಂಬಾರ್ ಪೌಡರ್ – 2 ಟೀಸ್ಪೂನ್
    * ಎಣ್ಣೆ – 3 ಟೀಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಒಣಗಿದ ಕೆಂಪು ಮೆಣಸಿನಕಾಯಿ – 3

    * ಚಿಕ್ಕ ಈರುಳ್ಳಿ – 1 ಕಪ್
    * ಕರಿಬೇವು – 10 ಎಲೆಗಳು
    * ಕಟ್ ಮಾಡಿದ ಟೊಮೆಟೊ – 1
    * ಅರಿಶಿನ – ಅರ್ಧ ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್
    * ನೀರು – 2 ಕಪ್
    * ತೊಗರಿ ಬೇಳೆ – 2 ಕಪ್
    * ಹುಣಸೆಹಣ್ಣಿನ ಸಾರ – ಅರ್ಧ ಕಪ್
    * ಕೊತ್ತಂಬರಿ – 2 ಟೇಬಲ್ಸ್ಪೂನ್
    * ಬೆಳ್ಳುಳ್ಳಿ – 2

    ಮಾಡುವ ವಿಧಾನ
    * ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಸಾಸಿವೆ, ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ.
    * ಈ ಮಿಶ್ರಣಕ್ಕೆ ಚಿಕ್ಕ ಈರುಳ್ಳಿಗಳನ್ನು ಸೇರಿಸಿ, 2 ನಿಮಿಷ ಬೇಯಿಸಿ. ನಂತರ ಅದಕ್ಕೆ ಟೊಮೆಟೊ ಸೇರಿಸಿ ಫ್ರೈ ಮಾಡಿ.
    * ಅದಕ್ಕೆ ಅರಿಶಿನ, ಸಾಂಬಾರ್ ಪೌಡರ್ ಮತ್ತು ಉಪ್ಪು ಸೇರಿಸಿ ಒಂದು ನಿಮಿಷ ಬೇಯಿಸಿ.
    * ಆ ಮಸಾಲೆಗೆ ನುಗ್ಗೆಕಾಯಿ ತುಂಡುಗಳನ್ನು ಸೇರಿಸಿ 1 ಕಪ್ ನೀರು ಸೇರಿಸಿ. 10 ನಿಮಿಷಗಳ ಕಾಲ ಮುಚ್ಚಿಡಿ. ಅದಕ್ಕೆ ತೊಗರಿ ಬೇಳೆ ಮತ್ತು ನೀರು ಸೇರಿಸಿ ಬೇಯಿಸಿ.
    * ಈ ಮಿಶ್ರಣಕ್ಕೆ ಹುಣಸೆಹಣ್ಣಿನ ಸಾರವನ್ನು ಸೇರಿಸಿ, ಚೆನ್ನಾಗಿ ಬೆರೆಸಿ ಪರಿಮಳ ಬರುವವರೆಗೂ ಕುದಿಸಿ.-

    – ಅಂತಿಮವಾಗಿ, ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತು ಬಿಸಿ ಬಿಸಿ ಅನ್ನದೊಂದಿಗೆ ನುಗ್ಗೆಕಾಯಿ ಸಾಂಬಾರ್ ಜೊತೆ ಆನಂದಿಸಿ.

    Live Tv

  • ದಿಢೀರ್ ಎಂದು ಮಾಡಿ ‘ರವೆ ದೋಸೆ’

    ದಿಢೀರ್ ಎಂದು ಮಾಡಿ ‘ರವೆ ದೋಸೆ’

    ಬೆಳಗ್ಗೆ ಎದ್ದ ತಕ್ಷಣ ತಾಯಂದಿರು ಏನು ತಿಂಡಿ ಮಾಡಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ. ಅದಕ್ಕೆ ಇಂದು ನಾವು ನಿಮಗೆ ಸುಲಭವಾಗಿ ಮತ್ತು ಸಿಂಪಲ್ ರೆಸಿಪಿಯಲ್ಲಿ ಹೇಗೆ ‘ರವೆ ದೋಸೆ’ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ. ನೀವು ಇದನ್ನು ಮಾಡಿ ರುಚಿ ನೋಡಿ.

    ಬೇಕಾಗುವ ಸಾಮಾಗ್ರಿಗಳು
    * ರವೆ – 1 ಕಪ್
    * ಅಕ್ಕಿ ಹಿಟ್ಟು – 1/2 ಕಪ್
    * ಮೈದಾ ಹಿಟ್ಟು – 1/4 ಕಪ್
    * ಸಣ್ಣಗೆ ಕಟ್ ಮಾಡಿದ ಹಸಿರು ಮೆಣಸಿನಕಾಯಿ – 1


    * ಜೀರಿಗೆ – 1/2 ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಮೊಸರು – 1/4 ಕಪ್
    * ಸಣ್ಣದಾಗಿ ಕಟ್ ಮಾಡಿದ ಈರುಳ್ಳಿ – 2 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ಎಣ್ಣೆ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ
    * ಒಂದು ಪಾತ್ರೆಯಲ್ಲಿ ರವೆ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಜೀರಿಗೆ, ಉಪ್ಪು ಮತ್ತು ಮೊಸರು ತೆಗೆದುಕೊಳ್ಳಿ. ಚೆನ್ನಾಗಿ ಕಲಸಿ. * 2 ಕಪ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ, ಹಿಟ್ಟನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ.
    * ನಂತರ ಮತ್ತೆ ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ. ದೋಸೆ ಹಿಟ್ಟು ಮಜ್ಜಿಗೆಯಷ್ಟೇ ತೆಳುವಾಗಿರಬೇಕು.
    * ಬಿಸಿ ಕಾವಲಿ ಮೇಲೆ ನೀರು ಸಿಂಪಡಿಸಿ ಒಂದು ಬಟ್ಟೆಯಿಂದ ಒರೆಸಿ. ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಕಾವಲಿ ಮೇಲೆ ಹರಡಿ.
    * ಒಂದು ಸಣ್ಣ ಲೋಟದ ಸಹಾಯದಿಂದ ದೋಸೆ ಹಿಟ್ಟನ್ನು ಕಾವಲಿಯ ಮೇಲೆ ಹರಡಿ. ಮೇಲ್ಗಡೆ ಒಂದು ಚಮಚ ಎಣ್ಣೆಯನ್ನು ಹಾಕಿ.
    * ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ದೋಸೆ ಗರಿಯಾಗುವ ತನಕ ಬೇಯಿಸಿ ತೆಗೆಯಿರಿ.

    – ನಿಮಗಿಷ್ಟವಾದ ಚಟ್ನಿಯ ಜೊತೆ ಸವಿಯಲು ಗರಿಯಾದ ರವೆ ದೋಸೆ ರೆಡಿ

    Live Tv

  • ದೇಹವನ್ನು ಹೈಡ್ರೇಟ್ ಮಾಡುವ ‘ತುಳಸಿ ಕಷಾಯ’ ಮಾಡಿ ಕುಡಿಯಿರಿ

    ದೇಹವನ್ನು ಹೈಡ್ರೇಟ್ ಮಾಡುವ ‘ತುಳಸಿ ಕಷಾಯ’ ಮಾಡಿ ಕುಡಿಯಿರಿ

    ತ್ತೀಚೆಗೆ ದಿಢೀರ್ ಎಂದು ಬದಲಾಗುತ್ತಿರುವ ವಾತಾವರಣದಿಂದ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅದಕ್ಕೆ ನೀವು ಆರೋಗ್ಯ ಕೆಟ್ಟ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕಾಗಿ ಇಂದು ನಿಮಗೆ ದೇಹವನ್ನು ಒಳಗಿನಿಂದ ಹೈಡ್ರೇಟ್ ಮಾಡುವ ಸೂಪರ್ ರೆಸಿಪಿಯನ್ನು ಹೇಳಿಕೊಡುತ್ತಿದ್ದೇವೆ. ಬೆಳಗ್ಗೆಯೇ ‘ತುಳಸಿ ಕಷಾಯ’ವನ್ನು ಮಾಡಿ ಕುಡಿದ್ರೆ ಇಡೀ ದಿನ ಎನರ್ಜಿಯಿಂದ ಇರಬಹುದು.

    ಬೇಕಾಗಿರುವ ಪದಾರ್ಥಗಳು:
    * ನೀರು – 2 ಕಪ್
    * ತುಳಸಿ – 5 ರಿಂದ 4 ಎಲೆ
    * ಕರಿಮೆಣಸಿನ ಪುಡಿ – 1/2 ಟೀಸ್ಪೂನ್
    * ಒಣ ಶುಂಠಿ ಪುಡಿ – 1/2 ಟೀಸ್ಪೂನ್
    * ಸಕ್ಕರೆ – 1 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲು ಎಲ್ಲ ಪದಾರ್ಥಗಳನ್ನು ಸರಿಯಾಗಿ ತೆಗೆದುಕೊಳ್ಳಿ.
    * ಒಂದು ಪ್ಯಾನ್‍ಗೆ ನೀರು ಸೇರಿಸಿ, ತುಳಸಿ ಎಲೆಗಳನ್ನು ಹರಿದು ಹಾಕಿ ಕುದಿಸಿ.
    * ನೀರಿನ ಬಣ್ಣ ಬದಲಾದ ನಂತರ, ಕರಿಮೆಣಸಿನ ಪುಡಿ, ಶುಂಠಿ, ಸಕ್ಕರೆ ಸೇರಿಸಿ ಕೆಲವು ನಿಮಿಷ ಕುದಿಸಿ ಮತ್ತು ಗ್ಯಾಸ್ ಆಫ್ ಮಾಡಿ.
    * ತುಳಸಿ ಕಷಾಯವನ್ನು ಬಿಸಿಯಾಗಿರುವಾಗಲೇ ಸೇವಿಸಿ.

    – ಇದನ್ನು ದಿನಕ್ಕೆ 2 ರಿಂದ 3 ಬಾರಿ ಸೇವಿಸಿದರೆ ಕೆಮ್ಮು ಮತ್ತು ಶೀತದಿಂದ ಕಡಿಮೆಯಾಗುತ್ತೆ.

    Live Tv

  • ಕೇರಳ ಶೈಲಿಯಲ್ಲಿ ಮಾಡಿ ‘ಫಿಶ್ ಫ್ರೈ’

    ಕೇರಳ ಶೈಲಿಯಲ್ಲಿ ಮಾಡಿ ‘ಫಿಶ್ ಫ್ರೈ’

    ಕೇರಳ ಎಂದರೆ ಮೀನಿನ ರೆಸಿಪಿಗೆ ಫೇಮಸ್. ಕೇರಳಗೆ ಹೋದ ನಾನ್‍ವೆಜ್ ಪ್ರಿಯರು ‘ಫಿಶ್ ಫ್ರೈ’ ತಿನ್ನದೆ ಬರವುದೇ ಇಲ್ಲ. ಕೇರಳ ಶೈಲಿಯಲ್ಲಿಯೇ ಮಿನು ತಿನ್ನಬೇಕು ಎಂದು ಜನರು ರೆಸ್ಟೋರೆಂಟ್‌ಗಳನ್ನು ಹುಡುಕುತ್ತಿರುತ್ತಾರೆ. ಆದರೆ ಬೇಕು ಎಂದಾಗ ಅದೇ ರೀತಿ ರುಚಿ ಸಿಗಾದೇ ಹಲವು ಜನರು ‘ಫಿಶ್ ಫ್ರೈʼ ಮಿಸ್ ಮಾಡಿಕೊಳ್ಳುತ್ತಿರುತ್ತಾರೆ. ಅದಕ್ಕೆ ನಾವು ಕೇರಳ ಶೈಲಿಯಲ್ಲಿ ಸಿಂಪಲ್ ಆಗಿ ‘ಫಿಶ್ ಫ್ರೈ’ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದೇವೆ. ಇದು ಮಸಾಲೆಯುಕ್ತವಾಗಿರುವುದರಿಂದ ಎಲ್ಲರಿಗೂ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ.

    ಬೇಕಾಗಿರುವ ಸಾಮಾಗ್ರಿಗಳು:
    * ಅವೊಲಿ ಮೀನು – 1
    * ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್


    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ನಿಂಬೆ ರಸ – 2 ಟೀಸ್ಪೂನ್
    * ಕರಿಬೇವು – 10 ರಿಂದ 15 ಎಲೆಗಳು
    * ಎಣ್ಣೆ – ಅರ್ಧ ಕಪ್
    * ನಿಂಬೆ ಹೋಳು – 2
    * ಕಟ್ ಮಾಡಿದ ಈರುಳ್ಳಿ – 1 ಕಪ್

    ಮಾಡುವ ವಿಧಾನ:
    * ಮೀನುಗಳನ್ನು ಸ್ವಚ್ಛಗೊಳಿಸಿ, ಅದರ ಎರಡೂ ಬದಿಗಳನ್ನು ಕಟ್ ಮಾಡಿ.
    * ಕೆಂಪು ಮೆಣಸಿನ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಉಪ್ಪು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡುವ ಮೂಲಕ ಮಸಾಲಾವನ್ನು ತಯಾರಿಸಿ.
    * ಎರಡೂ ಬದಿಗಳಲ್ಲಿ ಮೀನಿನ ಮಸಾಲಾವನ್ನು ಸಮವಾಗಿ ಲೇಪಿಸಿ, 30 ನಿಮಿಷಗಳ ಕಾಲ ಮಸಾಲಾ ಜೊತೆಗೆ ಬಿಡಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕರಿಬೇವಿನ ಎಲೆಗಳನ್ನು ಹಾಕಿ. ನಂತರ ಮಸಾಲಾ ಮೀನನ್ನು ಮಧ್ಯಮ ಉರಿಯಲ್ಲಿ ಫ್ರೈ(ಕಡಿಮೆ ಎಣ್ಣೆಯನ್ನು ಬಳಸಿ) ಮಾಡಿ.
    * ಅದು ಚೆನ್ನಾಗಿ ಸುಟ್ಟು, ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ ತದನಂತರ ಇನ್ನೊಂದು ಬದಿ ಬೇಯಿಸಲು ತಿರುಗಿಸಿ.
    * ಕೊನೆಗೆ ಕರಿದ ಮೀನಿನ ಫ್ರೈ ಮೇಲೆ ಪೇಪರ್ ಪೌಡರ್, ನಿಂಬೆ ರಸ ಮತ್ತು ಈರುಳ್ಳಿ ಹಾಕಿ ಬಡಿಸಿ.

    Live Tv

  • ಬಾಯಲ್ಲಿ ನೀರು ಬರಿಸುವ ‘ಮಾವಿನಕಾಯಿ ಸಿಹಿ ಪಚಡಿ’ ಮಾಡಿ ಸವಿಯಿರಿ

    ಬಾಯಲ್ಲಿ ನೀರು ಬರಿಸುವ ‘ಮಾವಿನಕಾಯಿ ಸಿಹಿ ಪಚಡಿ’ ಮಾಡಿ ಸವಿಯಿರಿ

    ಮಾವಿನಕಾಯಿ ಹೆಸರು ಹೇಳಿದ್ರೆ ಬಾಯಲ್ಲಿ ನೀರು ಬರುತ್ತೆ. ಮಾವಿನಿಂದ ಮಾಡುವ ಎಲ್ಲ ತಿನಿಸು, ಜ್ಯೂಸ್ ಎಂದರೆ ಎಲ್ಲರಿಗೂ ಇಷ್ಟ. ಭಿನ್ನ ಮತ್ತು ಟೇಸ್ಟಿ ರೆಸಿಪಿ ‘ಮಾವಿನಕಾಯಿ ಸಿಹಿ ಪಚಡಿ’ ಮಾಡುವ ವಿಧಾನ ಇಲ್ಲಿದೆ ನೋಡಿ.

    ಬೇಕಾಗಿರುವ ಸಾಮಗ್ರಿ:
    * ಮಾವಿನಕಾಯಿ- 2
    * ಪುಡಿ ಬೆಲ್ಲ – 200 ಗ್ರಾಂ
    * ಹಸಿರು ಮೆಣಸಿನಕಾಯಿ – 2
    * ಅರಿಶಿನ ಪುಡಿ – 1 ಟೀಸ್ಪೂನ್


    * ಸಾಸಿವೆ – 1 ಟೀಸ್ಪೂನ್
    * ಕರಿಬೇವು – 1 ಕಡ್ಡಿ
    * ಕೆಂಪು ಮೆಣಸಿನಕಾಯಿ – 2
    * ರುಚಿಗೆ ತಕ್ಕಷ್ಟು ಉಪ್ಪು
    * ಎಣ್ಣೆ – 2 ಟೀಸ್ಪೂನ್

    ಮಾಡುವ ವಿಧಾನ:
    * ಮಾವಿನಕಾಯಿ ತೊಳೆದು, ಸಿಪ್ಪೆ ತೆಗೆದು ಕ್ಯೂಬ್ ಗಳಾಗಿ ಕತ್ತರಿಸಿಕೊಳ್ಳಿ.
    * ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿಯನ್ನು ಕಟ್ ಮಾಡಿಕೊಳ್ಳಿ.
    * ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಹಸಿರು ಮೆಣಸಿನಕಾಯಿ, ಕೆಂಪು ಮಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ ಒಗ್ಗರಣೆ ಮಾಡಿ.
    * ಈ ಮಿಶ್ರಣಕ್ಕೆ ಸ್ವಲ್ಪ ನೀರು ಹಾಕಿ, ನೀರು ಕುದಿಯಲು ಆರಂಭವಾಗುತ್ತಿದ್ದಂತೆಯೇ, ಮಾವಿನ ಕ್ಯೂಬ್‍ಗಳನ್ನು ಹಾಕಿ ಅದಕ್ಕೆ ಅರಿಶಿನ ಪುಡಿ, ಬೆಲ್ಲ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

    – ಮಾವಿನಕಾಯಿ ಬೆಂದ ನಂತರ, ಎರಡು ಚಿಟಿಕೆ ಉಪ್ಪು ಸೇರಿಸಿ, ಚೆನ್ನಾಗಿ ಬೆರೆಸಿ. ಈಗ ಮಾವಿನಕಾಯಿ ಸಿಹಿ ಪಚಡಿ ಸವಿಯಲು ಸಿದ್ಧ.

    Live Tv

  • ವಾವ್ಹ್‌.. ‘ಜೀರಾ ರೈಸ್’ ಮಾಡುವುದು ಇಷ್ಟು ಸುಲಭನಾ.. ನೀವು ಟ್ರೈ ಮಾಡಿ

    ವಾವ್ಹ್‌.. ‘ಜೀರಾ ರೈಸ್’ ಮಾಡುವುದು ಇಷ್ಟು ಸುಲಭನಾ.. ನೀವು ಟ್ರೈ ಮಾಡಿ

    ಹೆಚ್ಚು ಮಸಾಲೆ ಇಷ್ಟ ಪಡದವರಿಗೆ ಜೀರಾ ರೈಸ್ ತುಂಬಾ ಇಷ್ಟ. ಏಕೆಂದರೆ ಇದಕ್ಕೆ ಹೆಚ್ಚು ಮಸಾಲಾ ಮತ್ತು ತರಕಾರಿಗಳನ್ನು ಹಾಕದೆ ಸಿಂಪಲ್ ಮತ್ತು ರುಚಿಕರವಾಗಿ ಮಾಡಬಹುದು. ಇದನ್ನು ನಾವು ಹೆಚ್ಚು ಹೋಟೆಲ್‌ಗೆ ಹೋಗಿ ತಿನ್ನುತ್ತೇವೆ. ಆದರೆ ಇಂದು ನೀವೇ ನಿಮ್ಮ ಮನೆಯಲ್ಲಿ ಸುಲಭವಾಗಿ ಹೇಗೆ ಜೀರಾ ರೈಸ್ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ. ಇದನ್ನು ಟೆಸ್ಟ್ ಮಾಡಿದ್ರೆ ನೀವು ಹೋಟೆಲ್‌ನಲ್ಲಿ ತಿನ್ನುವ ಅಗತ್ಯವೇ ಇರುವುದಿಲ್ಲ.

    ಬೇಕಾಗಿರುವ ಪದಾರ್ಥಗಳು:
    * ಬೇಯಿಸಿದ ಬಾಸ್ಮತಿ ರೈಸ್ – 3 ಕಪ್
    * ಎಣ್ಣೆ – 1 ಟೀಸ್ಪೂನ್
    * ತುಪ್ಪ – 1 ಟೀಸ್ಪೂನ್
    * ಜೀರಿಗೆ – 1 ಟೀಸ್ಪೂನ್


    * ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಹಸಿರು ಮೆಣಸಿನಕಾಯಿ – 1
    * ಏಲಕ್ಕಿ – 1

    ಮಾಡುವ ವಿಧಾನ:
    * ದೊಡ್ಡ ಬಾಣಲೆಗೆ ತುಪ್ಪ ಹಾಕಿ ಅದು ಬಿಸಿಯಾದ ಮೇಲೆ ಜೀರಿಗೆ, ಹಸಿರು ಮೆಣಸಿನಕಾಯಿ, ಏಲಕ್ಕಿ ಹಾಕಿ ಫ್ರೈ ಮಾಡಿ.
    * ಈಗ ಬೇಯಿಸಿದ ಬಾಸ್ಮತಿ ರೈಸ್ ಸೇರಿಸಿ. ನಂತರ ಉಪ್ಪು ಹಾಕಿ ನಿಧಾನವಾಗಿ ಮಿಶ್ರಣ ಮಾಡಿ.
    * ಅಂತಿಮವಾಗಿ ಕಟ್ ಮಾಡಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ದಾಲ್ ನೊಂದಿಗೆ ಜೀರಾ ರೈಸ್ ಆನಂದಿಸಿ.

    Live Tv

  • ಹೊಸ ರೀತಿಯ ‘ಆಲೂ ಮಸಾಲಾ ಪುರಿ’ ಮಾಡುವ ವಿಧಾನ

    ಹೊಸ ರೀತಿಯ ‘ಆಲೂ ಮಸಾಲಾ ಪುರಿ’ ಮಾಡುವ ವಿಧಾನ

    ಇಂದು ನಾವು ಹೇಳಿಕೊಡುತ್ತಿರುವ ರೆಸಿಪಿಯನ್ನು ನೀವು ಯಾವುದೇ ಉಪ್ಪಿನಕಾಯಿ ಅಥವಾ ಸಬ್ಜಿಯೊಂದಿಗೆ ಸವಿಯಬಹುದು. ಇದು ಗರಿಗರಿ ಮತ್ತು ರುಚಿಕರವಾಗಿದ್ದು, ಹೊಸ ರೀತಿಯ ಪುರಿಯಾಗಿದೆ. ಏನಿದು ಈ ಪುರಿ ಅಷ್ಟು ರುಚಿಯಾಗಿರುತ್ತೆ ಎಂದು ಯೋಚನೆ ಮಾಡುತ್ತೀದ್ದೀರಾ. ಹೌದು, ಇದು ನಿಜಕ್ಕೂ ತುಂಬಾ ರುಚಿಯಾಗಿರುತ್ತೆ. ನೀವು ಇಂದು ನಿಮ್ಮ ಮನೆಯಲ್ಲಿ ‘ಆಲೂ ಮಸಾಲಾ ಪುರಿ’ ಮಾಡಿ ರುಚಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ಬೇಯಿಸಿದ ಆಲೂಗಡ್ಡೆ – 1 ಕಪ್
    * ಗೋಧಿ – 1 ಕಪ್
    * ರವೆ – ಅರ್ಧ ಕಪ್
    * ಜೀರಿಗೆ – 1 ಟೀಚಮಚ


    * ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ಧನಿಯಾ ಪುಡಿ – 1 ಟೀಸ್ಪೂನ್
    * ಗರಂ ಮಸಾಲಾ – 1 ಟೀಸ್ಪೂನ್
    * ಕಸೂರಿ ಮೇಥಿ – 1 ಟೀಸ್ಪೂನ್
    * ರೆಡ್ ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
    * ಎಳ್ಳು – 2 ಟೀಸ್ಪೂನ್

    ಮಾಡುವ ವಿಧಾನ:
    * ಆಲೂ ಮಸಾಲಾ ಪುರಿ ಪಾಕವಿಧಾನವನ್ನು ತಯಾರಿಸಲು ಪ್ರಾರಂಭಿಸುವ ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ. ನಂತರ ಅದನ್ನು ಗೋಧಿ ಹಿಟ್ಟಿನೊಂದಿಗೆ ಕಲಸಿ ಅದಕ್ಕೆ ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ, ಇಂಗು, ಅರಿಶಿನ ಪುಡಿ, ಕಸೂರಿ ಮೇಥಿ, ಎಳ್ಳು, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.

    * ಕೊನೆಗೆ ಹಿಟ್ಟಿಗೆ ನೀರನ್ನು ಸೇರಿಸಿ ಕಲಸಿ. ಕೆಲವು ನಿಮಿಷಗಳ ಕಾಲ ಅದನ್ನು ಪಕ್ಕಕ್ಕೆ ಇರಿಸಿ.
    * ಈ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ಅವುಗಳನ್ನು ಪುರಿಯ ರೂಪದಲ್ಲಿ ಒತ್ತಿ.
    * ಅವುಗಳನ್ನು ಡೀಪ್ ಫ್ರೈ ಪ್ಯಾನ್‍ನಲ್ಲಿ ಫ್ರೈ ಮಾಡಿ ಮತ್ತು ಅದು ಬಡಿಸಲು ಸಿದ್ಧವಾಗಿದೆ.

    – ಆಲೂ ಮಸಾಲಾ ಪುರಿಯನ್ನು ಬೆಳಗಿನ ಉಪಾಹಾರ ಅಥವಾ ಊಟಕ್ಕೆ ಬಡಿಸಿ.

    Live Tv

  • ನಾನ್ ವೆಜ್ ಪ್ರಿಯರು ಮರೆಯಲಾಗದ ಹೊಸ ರುಚಿ ‘ಸಿಗಡಿ ಪಲ್ಯ’ – ಟ್ರೈ ಮಾಡಿ

    ನಾನ್ ವೆಜ್ ಪ್ರಿಯರು ಮರೆಯಲಾಗದ ಹೊಸ ರುಚಿ ‘ಸಿಗಡಿ ಪಲ್ಯ’ – ಟ್ರೈ ಮಾಡಿ

    ಚಿಕನ್, ಮಟನ್ ತಿಂದು ಬೇಜಾರಾಗಿರುವ ನಾನ್‍ವೆಜ್ ಪ್ರಿಯರಿಗೆ ಇಂದು ಕರಾವಳಿ ಸ್ಪೆಷಲ್ ‘ಸಿಗಡಿ ಪಲ್ಯ’ ರೆಸಿಪಿಯನ್ನು ಕೇಳಿಕೊಡುತ್ತಿದ್ದೇವೆ. ಕರಾವಳಿ ಪ್ರದೇಶದಲ್ಲಿ ಸೀಗಡಿ ಮೀನುಗಳ ರೆಸಿಪಿ ಹೆಚ್ಚು ಪ್ರಸಿದ್ಧಿ. ಅಲ್ಲದೇ ಒಂದೇ ಸ್ಟೈಲ್ ರೆಸಿಪಿ ತಿಂದು ಬೋರ್ ಆಗಿರುವ ನಿಮ್ಮ ನಾಲಿಗೆಗೆ ಇಂದು ಕರಾವಳಿಯ ‘ಸಿಗಡಿ ಪಲ್ಯ’ ರುಚಿ ತೋರಿಸಿ.

    ಬೇಕಾಗಿರುವ ಪದಾರ್ಥಗಳು:
    * ಎಣ್ಣೆ – 3 ಟೇಬಲ್ಸ್ಪೂನ್
    * ಸಿಗಡಿ ಮೀನು – 250 ಗ್ರಾಂ
    * ದಾಲ್ಚಿನ್ನಿ – ಸಣ್ಣ ತುಂಡುಗಳು
    * ಜೀರಿಗೆ – 1 ಟೀಸ್ಪೂನ್
    * ಏಲಕ್ಕಿ – 2
    * ಕಟ್ ಮಾಡಿದ ಈರುಳ್ಳಿ – 1 ಕಪ್

    * ಹಸಿರು ಮೆಣಸಿನಕಾಯಿ – 1
    * ಕರಿಬೇವಿನ ಎಲೆ – 1 ಚಿಗುರು
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್
    * ಧನಿಯಾ ಪುಡಿ- 1 ಟೀಸ್ಪೂನ್
    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ಗರಂ ಮಸಾಲಾ – ಅರ್ಧ ಟೀಸ್ಪೂನ್
    * ಮೆಣಸು ಪುಡಿ – ಅರ್ಧ ಟೀಸ್ಪೂನ್
    * ಕಟ್ ಮಾಡಿದ ಟೊಮೆಟೊ – 1 ಕಪ್
    * ನೀರು – ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಕಾಳುಮೆಣಸಿನ ಪುಡಿ – 1 ಟೀಸ್ಪೂನ್

    ಮಾಡುವ ವಿಧಾನ:
    * ಒಂದು ಬಟ್ಟಲಿನಲ್ಲಿ ಸ್ವಚ್ಛಗೊಳಿಸಿದ ಸಿಗಡಿಯನ್ನು ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ದಾನಿಯಾ, ಅರಿಶಿನ ಪುಡಿ, ಗರಂ ಮಸಾಲಾ, ಕಾಳುಮೆಣಸಿನ ಪುಡಿ ಮತ್ತು ರುಚಿಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷಗಳ ಕಾಲ ಬಿಡಿ.
    * ಈಗ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಮಸಾಲೆ ಮಿಕ್ಸ್ ಮಾಡಿದ ಸೀಗಡಿ ಹಾಕಿ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿ. ಅದು ಬೆಂದು ಗುಲಾಬಿ ಬಣ್ಣಕ್ಕೆ 5 ರಿಂದ 7 ನಿಮಿಷ ಬೇಯಿಸಿ. ನಂತರ ಕಡಾಯಿಯಲ್ಲಿ ರಸವನ್ನು ಬಿಟ್ಟು ಒಂದು ಬಟ್ಟಲಿಗೆ ಸಿಗಡಿಗಳನ್ನು ಮಾತ್ರ ತೆಗೆದುಹಾಕಿ.
    * ಈಗ ರಸವನ್ನು ಒಂದೆರಡು ನಿಮಿಷಗಳ ಕುದಿಸಿ ಅದಕ್ಕೆ ದಾಲ್ಚಿನ್ನಿ, ಜೀರಿಗೆ ಹಾಕಿ ಫ್ರೈ ಮಾಡಿ. ನಂತರ ಅದಕ್ಕೆ ಈರುಳ್ಳಿ, ಟೊಮೆಟೊ, ಕರಿಬೇವಿನ ಎಲೆ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ 5 ನಿಮಿಷಗಳ ಕಾಲ ಹುರಿಯಿರಿ.
    * ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಒಂದು ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉಪ್ಪು ಮತ್ತು ಎಲ್ಲ ಮಸಾಲೆ ಪುಡಿಗಳನ್ನು ಸೇರಿಸಿ ಒಂದು ನಿಮಿಷ ಚೆನ್ನಾಗಿ ಫ್ರೈ ಮಾಡಿ. ಸ್ವಲ್ಪ ನೀರು ಸೇರಿಸಿ ಒಂದು ನಿಮಿಷ ಬೇಯಿಸಿ.
    * ಕೊನೆಗೆ ಬೇಯಿಸಿದ ಸಿಗಡಿಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷಗಳ ಕಾಲ ಬೇಯಿಸಿ.

    – ಈಗ ‘ಸಿಗಡಿ ಪಲ್ಯ’ ಸವಿಯಲು ಸಿದ್ಧ. ಇದನ್ನು ಅನ್ನ ಅಥವಾ ರೊಟ್ಟಿಯೊಂದಿಗೆ ಬಡಿಸಿ ಸವಿಯಿರಿ.

    Live Tv

  • ದೇಸಿ ಶೈಲಿಯಲ್ಲಿ ಮಾಡಿ ‘ಹೆಸರು ಕಾಳಿನ ಪಲ್ಯ’

    ದೇಸಿ ಶೈಲಿಯಲ್ಲಿ ಮಾಡಿ ‘ಹೆಸರು ಕಾಳಿನ ಪಲ್ಯ’

    ಹೆಸರು ಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜನರು ಬಳಸುವ ಕಾಳುಗಳಲ್ಲಿ ‘ಹೆಸರು ಕಾಳು’ ಅಗ್ರಸ್ಥಾನದಲ್ಲಿದೆ. ಈ ಕಾಳಿನಲ್ಲಿ ಜನರು ಸಾರು, ಸಲಾಡ್ ಮಾಡಿಕೊಳ್ಳುತ್ತಾರೆ. ಇಂದು ನಾವು ಸಿಂಪಲ್ ಆಗಿ ಹೇಗೆ ಹೆಸರು ಕಾಳಿನ ಪಲ್ಯ ಮಾಡುವುದು ಎಂಬುದನ್ನು ಹೇಳಿಕೊಡುತ್ತೇನೆ. ಇದನ್ನು ಮಾಡುವುದು ಸುಲಭವಾಗಿದ್ದು, ಆರೋಗ್ಯಕರವು ಆಗಿದೆ.

    ಬೇಕಾಗಿರುವ ಪದಾರ್ಥಗಳು:
    * ಮೊಳಕೆ ಕಟ್ಟಿದ ಹೆಸರು ಕಾಳು – 2 ಕಪ್
    * ಎಣ್ಣೆ – ಅರ್ಧ ಟೀಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಜೀರಿಗೆ – 1 ಟೀಸ್ಪೂನ್
    * ಹಿಂಗು – ಸ್ವಲ್ಪ
    * ಕರಿಬೇವಿನ ಎಲೆ – ಅರ್ಧ ಕಪ್
    * ಕಟ್ ಮಾಡಿದ ಬೆಳ್ಳುಳ್ಳಿ – 2


    * ಮೆಣಸಿನಕಾಯಿ – 1
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಕಟ್ ಮಾಡಿದ ಟೊಮೆಟೊ – 1 ಕಪ್
    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    * ಬೆಲ್ಲ – ಅರ್ಧ ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್
    * ನೀರು – 2 ಲೂಟಾ
    * ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ಬಾಣಲಿಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಸಾಸಿವೆ, ಜೀರಿಗೆ, ಸ್ವಲ್ಪ ಹಿಂಗು ಮತ್ತು ಕರಿ ಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ.
    * ಅದಕ್ಕೆ ಬೆಳ್ಳುಳ್ಳಿ, ಮೆಣಸಿನಕಾಯಿ, ಈರುಳ್ಳಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
    * 2 ರಿಂದ 3 ನಿಮಿಷ ಬಿಟ್ಟು ಟೊಮೆಟೊ ಸೇರಿಸಿ ಮೃದುವಾಗಿ ತಿರುಗಿಸಿ. ಅದಕ್ಕೆ ಅರಿಶಿನ, ಮೆಣಸಿನ ಪುಡಿ, ಬೆಲ್ಲ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಈ ಫ್ರೈ ಪರಿಮಳ ಬರುವ ತನಕ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
    * ಬೇರೆ ಪಾತ್ರೆಯಲ್ಲಿ ಹೆಸರು ಕಾಳನ್ನು ಹೆಚ್ಚು ಬೇಯಿಸಿ ಅದಕ್ಕೆ ಗ್ರೇವಿ ಹಾಕಿ ಮಿಕ್ಸ್ ಮಾಡಿ ಸ್ವಲ್ಪ ನೀರು ಹಾಕಿ ಬೇಯಿಸಿ. 15 ನಿಮಿಷಗಳ ಕಾಲ ಮುಚ್ಚಿ.

    – ಅಂತಿಮವಾಗಿ ಕೊತ್ತಂಬರಿ ಸೊಪ್ಪನ್ನು ಸೇರಿಸಿದ್ರೆ ‘ಹೆಸರು ಕಾಳಿನ ಪಲ್ಯ’ ರೆಡಿ. ಇದನ್ನು ಜೋಳದ ರೊಟ್ಟಿ/ಚಪಾತಿಯೊಂದಿಗೆ ಸೇವಿಸಿ.

    Live Tv

  • ಮಕ್ಕಳಿಗೆ ಇಷ್ಟವಾದ ‘ತಂಬಿಟ್ಟಿನ ಉಂಡೆ’ ಮಾಡಿ ಸವಿಯಿರಿ

    ಮಕ್ಕಳಿಗೆ ಇಷ್ಟವಾದ ‘ತಂಬಿಟ್ಟಿನ ಉಂಡೆ’ ಮಾಡಿ ಸವಿಯಿರಿ

    ಮಕ್ಕಳಿಗೆ ಸಿಹಿ ತಿಂಡಿಗಳು ಎಂದರೆ ತುಂಬಾ ಇಷ್ಟ. ಆದರೆ ಪೋಷಕರು ಸಿಹಿ ತಿಂಡಿ ಕೊಟ್ರೆ ಎಲ್ಲಿ ಮಕ್ಕಳ ಹಲ್ಲಿಗೆ ತೊಂದರೆ ಆಗುತ್ತೆ ಎಂದು ಭಯಪಡುತ್ತಾರೆ. ಆದರೆ ಇಂದು ನಾವು ಹೇಳಿಕೊಡುತ್ತಿರುವ ಸಿಹಿ ತಿಂಡಿ ಆರೋಗ್ಯಕ್ಕೂ ಒಳ್ಳೆಯದು ಮತ್ತು ಮಕ್ಕಳು ಸಹ ಆಟಾಡಿಕೊಂಡು ಇಷ್ಟಪಟ್ಟು ತಿನ್ನುತ್ತಾರೆ. ಅದು ಯಾವ ತಿಂಡಿ ಎಂದು ಯೋಚನೆ ಮಾಡುತ್ತಿದ್ದೀರಾ ಅದೇ ‘ತಂಬಿಟ್ಟಿನ ಉಂಡೆ’. ಈ ಉಂಡೆಯನ್ನು ಧಾನ್ಯಗಳನ್ನು ಬಳಸಿ ಮಾಡುವುದರಿಂದ ಮಕ್ಕಳ ಆರೋಗ್ಯಕ್ಕೆ ಮತ್ತು ದೊಡ್ಡವರಿಗೆ ಶಕ್ತಿ ಹೆಚ್ಚಿಸಲು ಸಹಾಯವಾಗುತ್ತೆ.

    ಬೇಕಾಗುವ ಪದಾರ್ಥಗಳು:
    * ಕಡಲೆ ಕಾಳು – 1 ಕಪ್
    * ಹೆಸರು ಕಾಳು – 1 ಕಪ್
    * ಅಕ್ಕಿ – 1/3 ಕಪ್
    * ಉದ್ದಿನ ಬೇಳೆ – 1/8 ಕಪ್


    * ಬೆಲ್ಲ – ಒಂದುವರೆ ಕಪ್
    * ತೆಂಗಿನ ತುರಿ – 1 ಕಪ್
    * ಹುರಿದು ಸಿಪ್ಪೆ ತೆಗೆದ ಶೇಂಗಾ ಬೀಜ – 1/2 ಕಪ್
    * ಏಲಕ್ಕಿ ಪುಡಿ – 1/2 ಟೀಸ್ಪೋನ್

    ಮಾಡುವ ವಿಧಾನ:
    * ಮೊದಲು ಒಂದು ಬಾಣಲೆಗೆ ಕಡಲೆ ಕಾಳು ಹಾಕಿ 5 ರಿಂದ 6 ನಿಮಿಷ ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ. ನಂತರ ಅದೇ ಬಾಣಲೆಗೆ ಹೆಸರು ಕಾಳು ಹಾಕಿ 5 ರಿಂದ 6 ನಿಮಿಷ ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ. ಅದೇ ರೀತಿ ಕ್ರಮವಾಗಿ ಅಕ್ಕಿ, ಉದ್ದಿನ ಬೇಳೆ ಹಾಕಿ 5 ನಿಮಿಷ ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ.
    * ಹುರಿದ ಶೇಂಗಾಬೀಜಗಳನ್ನೊಂದು ಹೊರತು ಪಡಿಸಿ ಉಳಿದೆಲ್ಲವುಗಳನ್ನು ಒಂದು ಪಾತ್ರೆಗೆ ಹಾಕಿ ಕಲಸಿ. ಒಂದು ಮಿಕ್ಸಿ ಜಾರಿಗೆ ಈ ಸಾಮಾಗ್ರಿಗಳನ್ನು ಹಾಕಿ ನುಣ್ಣಗೆ ರುಬ್ಬಿ ಪುಡಿ ಮಾಡಿಕೊಳ್ಳಿ.
    * ಒಂದು ಬಾಣಲೆಯಲ್ಲಿ ಒಂದು ಮುಕ್ಕಾಲು ಕಪ್ ಬೆಲ್ಲ, ಅರ್ಧ ಕಪ್ ನೀರು ಹಾಕಿ ಕಲಕಿ. ಮಧ್ಯಮ ಉರಿಯಲ್ಲಿ 4 ರಿಂದ 5 ನಿಮಿಷ ಬೆಲ್ಲ ಕರಗುವ ತನಕ ಕುದಿಸಿ. ತೆಂಗಿನ ತುರಿ ಹಾಕಿ ಕಲಸಿ.
    * ಬೆಲ್ಲ ಸ್ವಲ್ಪ ಅಂಟಿಕೊಳ್ಳಲು ಪ್ರಾರಂಭಿಸಿದಾಗ ಇದಕ್ಕೆ 2 ಕಪ್ ರುಬ್ಬಿದ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಅರ್ಧ ಕಪ್ ಶೇಂಗಾ ಬೀಜ, ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ.
    * ಈಗ ಇದನ್ನು ಚಿಕ್ಕ, ಚಿಕ್ಕ ಉಂಡೆಗಳನ್ನು ಮಾಡಿ.

    – ಪೌಷ್ಟಿಕವಾದ ತಂಬಿಟ್ಟಿನ ಉಂಡೆ ತಿನ್ನಲು ಸಿದ್ಧ.

    Live Tv