Tag: recipe

  • ಟ್ರೆಂಡಿ ‘ಚೀಸೀ ಪಾಸ್ತಾ ಸಾಸ್’ ಮಾಡುವ ದೇಸಿ ವಿಧಾನ

    ಟ್ರೆಂಡಿ ‘ಚೀಸೀ ಪಾಸ್ತಾ ಸಾಸ್’ ಮಾಡುವ ದೇಸಿ ವಿಧಾನ

    ಬಾರಿ ದೇಸಿ ಶೈಲಿಯ ಅಡುಗೆ ಮಾಡಿ ಮಾಡಿ ಬೇಜಾರಾಗಿರುವ ನಿಮಗೆ ಇಂದು ದೇಸಿ ಮಸಾಲಾಯಲ್ಲಿಯೇ ಹೇಗೆ ಪಾಸ್ತಾ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ. ಈ ರೆಸಿಪಿ ತುಂಬಾ ಚೆನ್ನಾಗಿದ್ದು, ನಮ್ಮ ಭಾರತೀಯ ಮಸಾಲೆಯಲ್ಲಿಯೇ ಈ ರೆಸಿಪಿ ಮಾಡಿ ಸವಿಯಬಹುದು. ಆಗಾದರೆ ಯಾಕೆ ತಡ ಇಂದೇ ಮಾಡಿ ‘ಚೀಸೀ ಪಾಸ್ತಾ ಸಾಸ್’ ಮಾಡಿ.

    ಬೇಕಾಗಿರುವ ಪದಾರ್ಥಗಳು
    ಪಾಸ್ತಾ ಬೇಯಿಸಲು:
    * ನೀರು – 2 ಲೀಟರ್
    * ಉಪ್ಪು – 1 ಟೇಬಲ್ಸ್ಪೂನ್
    * ಪಾಸ್ತಾ – 2 ಕಪ್
    ಪಾಸ್ತಾ ಸಾಸ್‍ಗಾಗಿ:
    * ಆಲಿವ್ ಎಣ್ಣೆ – 2 ಟೇಬಲ್ಸ್ಪೂನ್
    * ಬೆಣ್ಣೆ – 1 ಟೇಬಲ್ಸ್ಪೂನ್
    * ಕಟ್ ಮಾಡಿದ ಬೆಳ್ಳುಳ್ಳಿ – 2 ಎಸಳು
    * ಮೆಣಸಿನಕಾಯಿ – 1
    * ಶುಂಠಿ – 1 ಇಂಚು

    * ಕಟ್ ಮಾಡಿದ ಈರುಳ್ಳಿ – ಅರ್ಧ ಕಪ್
    * ಮೆಣಸಿನ ಪುಡಿ – 1 ಟೀಸ್ಪೂನ್
    * ಅರಿಶಿನ – ಅರ್ಧ ಟೀಸ್ಪೂನ್
    * ಕಟ್ ಮಾಡಿದ ಟೊಮೆಟೊ – 1 ಕಪ್
    * ದಾನಿಯ ಪುಡಿ – ಅರ್ಧ ಟೀಸ್ಪೂನ್
    * ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    * ಗರಂ ಮಸಾಲಾ – ಅರ್ಧ ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ಸ್ವೀಟ್ ಕಾರ್ನ್ – 2 ಟೇಬಲ್ಸ್ಪೂನ್
    * ಕಟ್ ಮಾಡಿದ ಕ್ಯಾರೆಟ್ – 2 ಟೇಬಲ್ಸ್ಪೂನ್
    * ಕಟ್ ಮಾಡಿದ ಕ್ಯಾಪ್ಸಿಕಂ – 2 ಟೇಬಲ್ಸ್ಪೂನ್
    * ಪಾಸ್ತಾ ಬೇಯಿಸಿದ ನೀರು – ಅರ್ಧ ಕಪ್
    * ಟೊಮೆಟೊ ಸಾಸ್ – 2 ಟೇಬಲ್ಸ್ಪೂನ್
    * ಮಿಕ್ಸ್ಡ್ ಹಬ್ರ್ಸ್ – 1 ಟೀಸ್ಪೂನ್
    * ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
    * ಚೀಸ್ – ಅರ್ಧ ಕಪ್
    * ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ಪಾತ್ರೆಯಲ್ಲಿ 2 ಲೀಟರ್ ನೀರು ಮತ್ತು 1 ಟೀಸ್ಪೂನ್ ಉಪ್ಪನ್ನು ತೆಗೆದುಕೊಳ್ಳಿ. 2 ಕಪ್ ಪಾಸ್ತಾ ಸೇರಿಸಿ.
    * 7 ನಿಮಿಷಗಳ ಕಾಲ ಕುದಿಸಿ. ಪಾಸ್ತಾವನ್ನು ಸೋಸಿ ಮತ್ತು ತಣ್ಣನೆಯ ನೀರಿನಿಂದ ತೊಳೆಯಿರಿ. ಪಕ್ಕಕ್ಕೆ ಇರಿಸಿ.
    * ಪಾಸ್ತಾ ಸಾಸ್ ತಯಾರಿಸಲು, ದೊಡ್ಡ ಬಾಣಲೆಯಲ್ಲಿ ಆಲಿವ್ ಎಣ್ಣೆ ಮತ್ತು ಬೆಣ್ಣೆಯನ್ನು ಬಿಸಿ ಮಾಡಿ. ಬೆಳ್ಳುಳ್ಳಿ, ಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ ಸ್ವಲ್ಪ ಹುರಿಯಿರಿ. ನಂತರ ಅದಕ್ಕೆ ಈರುಳ್ಳಿಯನ್ನು ಹಾಕಿ ಬೋಲ್ಡನ್ ಬಣ್ಣ ಬರುವವರೆಗೂ ಹುರಿಯಿರಿ.
    * ನಂತರ ಉರಿಯನ್ನು ಕಡಿಮೆ ಮಾಡಿ, 1 ಟೀಸ್ಪೂನ್ ಮೆಣಸಿನ ಪುಡಿ ಮತ್ತು ಅರಿಶಿನವನ್ನು ಸೇರಿಸಿ. ಮಸಾಲೆಗಳು ಸುವಾಸನೆಯುಕ್ತವಾಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಟೊಮೆಟೊ ಚೆನ್ನಾಗಿ ಬೇಯಿಸಿ. ಎಣ್ಣೆಯು ಬೇರ್ಪಡುವವರೆಗೆ ಬೇಯಿಸಿ.
    * ದಾನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಹುರಿಯಿರಿ. ಸ್ವೀಟ್ ಕಾರ್ನ್, ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಸೇರಿಸಿ ಒಂದು ನಿಮಿಷ ಬೇಯಿಸಿ.
    * ಪಾಸ್ತಾ ಬೇಯಿಸಿದ ನೀರು, ಟೊಮೆಟೊ ಸಾಸ್, ಚಿಲ್ಲಿ ಫ್ಲೇಕ್ಸ್ ಸೇರಿಸಿ. ಮಸಾಲೆಗಳು ಚೆನ್ನಾಗಿ ಮಿಕ್ಸ್ ಆಗುವವರೆಗೂ ಬೇಯಿಸಿ. ಇದಲ್ಲದೆ, ಚೀಸ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಬೇಯಿಸಿದ ಪಾಸ್ತಾವನ್ನು ಸೇರಿಸಿ ಮತ್ತು ಪಾಸ್ತಾ ಸಾಸ್ ಅನ್ನು ಪಾಸ್ತಾದೊಂದಿಗೆ ಚೆನ್ನಾಗಿ ಸಂಯೋಜಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

    – ಅಂತಿಮವಾಗಿ, ದೇಸಿ ಮಸಾಲಾ ಪಾಸ್ತಾವನ್ನು ಚೀಸ್ ಮತ್ತು ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿ ಆನಂದಿಸಿ.

    Live Tv
    [brid partner=56869869 player=32851 video=960834 autoplay=true]

  • ಪುದೀನಾ ಪಲಾವ್ ಮಾಡಿ ರಾಯಿತಾದೊಂದಿಗೆ ಸವಿಯಿರಿ

    ಪುದೀನಾ ಪಲಾವ್ ಮಾಡಿ ರಾಯಿತಾದೊಂದಿಗೆ ಸವಿಯಿರಿ

    ಸಿಟಿಯಲ್ಲಿ ರೈಸ್‍ನಲ್ಲಿ ಮಾಡುವ ಬೆಳಗ್ಗಿನ ಆಹಾರ ಫೇಮಸ್. ರೈಸ್‍ನಲ್ಲಿ ಭಿನ್ನ-ಭಿನ್ನ ಶೈಲಿಯ ಅಡುಗೆ ಮಾಡಬಹುದು. ಅದರಲ್ಲಿಯೂ ಪಲಾವ್ ಇಲ್ಲಿ ಎಲ್ಲರೂ ಇಷ್ಟಪಟ್ಟು ತಿನ್ನುವ ತಿಂಡಿಯಲ್ಲಿ ಒಂದು. ಅದಕ್ಕೆ ಇಂದು ನಾವು ನಿಮಗೆ ‘ಪುದೀನಾ ಪಲಾವ್’ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದೇವೆ. ಈ ವಿಧಾನ ಸಿಂಪಲ್ ಆಗಿದ್ದು, ರಾಯಿತಾದೊಂದಿಗೆ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ಬಾಸ್ಮತಿ ಅಕ್ಕಿ – 1 ಕಪ್
    * ಪುದೀನ ಸೊಪ್ಪು – ಅರ್ಧ ಕಪ್
    * ಕೊತ್ತಂಬರಿ ಸೊಪ್ಪು – ಮೂರರಿಂದ ನಾಲ್ಕು ಕಡ್ಡಿ
    * ಲವಂಗ – 3
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಮೆಣಸಿನಕಾಯಿ – 2
    * ಈರುಳ್ಳಿ – ಅರ್ಧ ಕಪ್
    * ತುರಿದ ತೆಂಗಿನಕಾಯಿ – 2 ಟೇಬಲ್ಸ್ಪೂನ್
    * ಏಲಕ್ಕಿ – 1 ರಿಂದ 3
    * ಲವಂಗ – 5
    * ದಾಲ್ಚಿನ್ನಿ – 1 ಇಂಚು
    * ಮೆಣಸು ಅರ್ಧ ಟೀಸ್ಪೂನ್
    * ತುಪ್ಪ – 2 ಟೇಬಲ್ಸ್ಪೂನ್
    * ಜೀರಿಗೆ – 1 ಟೀಸ್ಪೂನ್
    * ಪಲಾವ್ ಎಲೆ – 2
    * ಗೋಡಂಬಿ – 10
    * ಕಟ್ ಮಾಡಿದ ಟೊಮೆಟೊ – ಅರ್ಧ ಕಪ್
    * ಆಲೂಗಡ್ಡೆ – 1
    * ಕ್ಯಾಪ್ಸಿಕಂ – 1


    * ಕ್ಯಾರೆಟ್ – 1
    * ನೆನೆಸಿದ ಬಟಾಣಿ – 2 ಟೇಬಲ್ಸ್ಪೂನ್
    * ಬೀನ್ಸ್ – 5
    * ನೀರು – 2 ಕಪ್
    * ಉಪ್ಪು – 1 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲನೆಯದಾಗಿ, ಸ್ವಲ್ಪ ಪುದೀನ ಮತ್ತು ಕೊತ್ತಂಬರಿಯನ್ನು ತೆಗೆದುಕೊಳ್ಳಿ. ಅದಕ್ಕೆ ಲವಂಗ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನಕಾಯಿ, ಈರುಳ್ಳಿ ಮತ್ತು ಟೀಸ್ಪೂನ್ ತೆಂಗಿನಕಾಯಿ, ಏಲಕ್ಕಿ, ಲವಂಗ, ದಾಲ್ಚಿನ್ನಿ ಮತ್ತು ಮೆಣಸು ಸೇರಿಸಿ ಅಗತ್ಯವಿರುವಷ್ಟು ನೀರನ್ನು ಸೇರಿಸಿ ನಯವಾದ ಪೇಸ್ಟ್ ಮಾಡಿಕೊಳ್ಳಿ. ಪಕ್ಕಕ್ಕೆ ಇರಿಸಿ.
    * ಆಲೂಗಡ್ಡೆ, ಕ್ಯಾಪ್ಸಿಕಂ, ಬೀನ್ಸ್ ಮತ್ತು ಕ್ಯಾರೆಟ್ ಕಟ್ ಮಾಡಿ.

    * ಪ್ರೆಶರ್ ಕುಕ್ಕರ್‌ನಲ್ಲಿ 2 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ಜೀರಿಗೆ ಮತ್ತು ಪಲಾವ್ ಎಲೆ ಹಾಕಿ ಸುವಾಸನೆ ಬರುವವರೆಗೆ ಬಿಸಿ ಮಾಡಿ.
    * ಅದಕ್ಕೆ ಗೋಡಂಬಿ ಸೇರಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಅದಕ್ಕೆ ಈರುಳ್ಳಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
    * ನಂತರ ಟೊಮೆಟೊ ಸೇರಿಸಿ ಅದು ಮೆತ್ತಗಾಗುವವರೆಗೆ ಫ್ರೈ ಮಾಡಿ. ಈಗ ಆಲೂಗಡ್ಡೆ, ಕ್ಯಾಪ್ಸಿಕಂ, ಕ್ಯಾರೆಟ್, ಬಟಾಣಿ ಮತ್ತು ಬೀನ್ಸ್ ಸೇರಿಸಿ 2 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ.
    * ಈ ಮಿಶ್ರಣಕ್ಕೆ ಮಸಾಲಾ ಪೇಸ್ಟ್‌ನ್ನು ಸೇರಿಸಿ. 2 ಕಪ್ ನೀರು ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ ಬಾಸ್ಮತಿ ಅಕ್ಕಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ನಂತರ ಅದನ್ನು ಕವರ್ ಮಾಡಿ ಮತ್ತು ಪ್ರೆಶರ್ ಕುಕ್ಕರ್‍ನಲ್ಲಿ 2 ಸೀಟಿಗಳು ಬರುವವರೆಗೆ ಬೇಯಿಸಿ.

    – ಅಂತಿಮವಾಗಿ, ಪುದೀನಾ ಪಲಾವ್/ ಪುದೀನ ರೈಸ್ ಪಾಕವಿಧಾನ ರೈತಾದೊಂದಿಗೆ ಬಡಿಸಲು ಸಿದ್ಧವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಿಹಿ, ಹುಳಿ ಮಿಶ್ರಿತ ‘ಧೋಕ್ಲಾ’ ಮಾಡುವ ಸಿಂಪಲ್ ವಿಧಾನ

    ಸಿಹಿ, ಹುಳಿ ಮಿಶ್ರಿತ ‘ಧೋಕ್ಲಾ’ ಮಾಡುವ ಸಿಂಪಲ್ ವಿಧಾನ

    ಗುಜರಾತಿನ ಫುಲ್ ಫೇಮಸ್ ಫುಡ್ ಧೋಕ್ಲಾ ಎಂದರೆ ತಿಂಡಿ ಪ್ರಿಯರಿಗೆ ಸಖತ್ ಇಷ್ಟ. ಈ ತಿನಿಸು ಸಿಹಿ ಮತ್ತು ಹುಳಿ ಮಿಶ್ರಣ ಇರುವುದರಿಂದ ಮಕ್ಕಳಿಗೂ ಇದು ಇಷ್ಟವಾಗುತ್ತೆ. ಈ ತಿನಿಸನ್ನು ನೋಡಿದ ಎಷ್ಟೋ ಜನರು ಇದನ್ನು ಮಾಡುವುದು ಕಷ್ಟ ಎಂದೇ ಭಾವಿಸುತ್ತಾರೆ. ಆದರೆ ಈ ರೆಸಿಪಿ ತುಂಬಾ ಸಿಂಪಲ್ ಆಗಿದೆ. ನೀವು ಇದನ್ನು ಮನೆಯಲ್ಲಿ ಟ್ರೈ ಮಾಡಿ.

    ಬೇಕಾಗಿರುವ ಪದಾರ್ಥಗಳು:
    * ಕಡಲೆ ಹಿಟ್ಟು – 1ವರೆ ಕಪ್
    * ರವಾ – 3 ಟೇಬಲ್ಸ್ಪೂನ್
    * ಶುಂಠಿ ಪೇಸ್ಟ್ – ಅರ್ಧ ಟೀಸ್ಪೂನ್
    * ಮೆಣಸಿನಕಾಯಿ – 2
    * ಅರಿಶಿನ – ಅರ್ಧ ಟೀಸ್ಪೂನ್
    * ಸಕ್ಕರೆ – 1 ಟೀಸ್ಪೂನ್
    * ಹಿಂಗು – ಪಿಂಚ್
    * ಉಪ್ಪು – ಅರ್ಧ ಟೀಸ್ಪೂನ್
    * ನಿಂಬೆ ರಸ – 1 ಟೇಬಲ್ಸ್ಪೂನ್
    * ಎಣ್ಣೆ – 1 ಟೇಬಲ್ಸ್ಪೂನ್
    * ನೀರು – 1 ಕಪ್
    * ಸೋಡಾ – ಅರ್ಧ ಟೀಸ್ಪೂನ್

    ಒಗ್ಗರಣೆಗಾಗಿ:
    * ಎಣ್ಣೆ – 3 ಟೀಸ್ಪೂನ್
    * ಸಾಸಿವೆ – ಅರ್ಧ ಟೀಸ್ಪೂನ್
    * ಜೀರಾ – ಅರ್ಧ ಟೀಸ್ಪೂನ್
    * ಎಳ್ಳು – 1 ಟೀಸ್ಪೂನ್
    * ಹಿಂಗು – ಸ್ವಲ್ಪ
    * ಕರಿಬೇವು – 5 ರಿಂದ 10 ಎಲೆಗಳು
    * ಮೆಣಸಿನಕಾಯಿ – 2
    * ನೀರು – ಅರ್ಧ ಕಪ್
    * ಸಕ್ಕರೆ – 1 ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ನಿಂಬೆ ರಸ – 1 ಟೀಸ್ಪೂನ್

    ಅಲಂಕರಿಸಲು:
    * ತೆಂಗಿನಕಾಯಿ ತುರಿ – 2 ಟೇಬಲ್ಸ್ಪೂನ್
    * ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಬೌಲ್‍ನಲ್ಲಿ ಕಡಲೆ ಹಿಟ್ಟು ಮತ್ತು ರವಾ ಜರಡಿ ಇಡಿದುಕೊಳ್ಳಿ.
    * ಅದಕ್ಕೆ ಶುಂಠಿ ಪೇಸ್ಟ್, ಮೆಣಸಿನಕಾಯಿ, ಅರಿಶಿನ, ಸಕ್ಕರೆ, ಹಿಂಗ್, ಉಪ್ಪು, ನಿಂಬೆ ರಸ ಮತ್ತು ಎಣ್ಣೆ ಸೇರಿಸಿ ಕಲಸಿ.
    * ಅಗತ್ಯವಿರುವಷ್ಟು 1 ಕಪ್ ನೀರು ಹಾಕಿ ಮೃದುವಾದ ಬ್ಯಾಟರ್ ತಯಾರಿಸಿ. 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅದಕ್ಕೆ ಅರ್ಧ ಟೀಸ್ಪೂನ್ ಅಡಿಗೆ ಸೋಡಾವನ್ನು ಹಾಕಿ.
    * ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಧೋಕ್ಲಾ ಮಿಶ್ರಣವನ್ನು ಕೇಕ್ ಪ್ಯಾನ್‍ಗೆ ಹಾಕಿ ಸ್ಟೀಮ್ ಮಾಡಿ. 5 ನಿಮಿಷಗಳ ಕಾಲ ಧೋಕ್ಲಾವನ್ನು ತಣ್ಣಗಾಗಲು ಬಿಡಿ. ಧೋಕ್ಲಾವನ್ನು ಬಯಸಿದ ಆಕಾರಕ್ಕೆ ಕತ್ತರಿಸಿ.

    ಒಗ್ಗರಣೆ ಮಾಡುವ ವಿಧಾನ:
    * ಮಧ್ಯಮ ಉರಿಯಲ್ಲಿ ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಎಳ್ಳಿನ ಬೀಜಗಳು ಮತ್ತು ಹಿಂಗ್ ಸೇರಿಸಿ ಫ್ರೈ ಮಾಡಿ.
    * ನಂತರ ಮೆಣಸಿನಕಾಯಿ, ಕರಿ ಬೇವು ಎಲೆಗಳನ್ನು ಸೇರಿಸಿ. ಅರ್ಧ ಕಪ್ ನೀರು, 1 ಟೀಸ್ಪೂನ್ ಸಕ್ಕರೆ ಮತ್ತು ಉಪ್ಪು ಸೇರಿಸಿ ಕುದಿಸಿ.
    * ಅದಕ್ಕೆ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಧೋಕ್ಲಾ ಮೇಲೆ ಒಗ್ಗರಣೆಯನ್ನು ಸುರಿಯಿರಿ.
    * ಅಲಂಕರಿಸಲು, ಕೊತ್ತಂಬರಿ ಸೊಪ್ಪು ಮತ್ತು ತುರಿದ ತೆಂಗಿನಕಾಯಿಯನ್ನು ಟಾಪ್ ಮೇಲೆ ಹಾಕಿ.

    – ಅಂತಿಮವಾಗಿ, ಹಸಿರು ಚಟ್ನಿ ಮತ್ತು ಹುಣಿಸೇಹಣ್ಣು ಚಟ್ನಿಯೊಂದಿಗೆ ಧೋಕ್ಲಾವನ್ನು ಸೇವಿಸಿ.

    Live Tv
    [brid partner=56869869 player=32851 video=960834 autoplay=true]

  • ‘ಚಿಕನ್ ಫ್ರೈಡ್ ರೈಸ್’ ಇಷ್ಟು ಸುಲಭನಾ..! – ನೀವು ಟ್ರೈ ಮಾಡಿ

    ‘ಚಿಕನ್ ಫ್ರೈಡ್ ರೈಸ್’ ಇಷ್ಟು ಸುಲಭನಾ..! – ನೀವು ಟ್ರೈ ಮಾಡಿ

    ಸಾಮಾನ್ಯವಾಗಿ ಎಲ್ಲರೂ ‘ಫ್ರೈಡ್ ರೈಸ್’ ತಿನ್ನುತ್ತಿರುತ್ತಾರೆ. ಆದರೆ ‘ಚಿಕನ್ ಫ್ರೈಡ್ ರೈಸ್’ ಎನ್ನುವ ರೆಸಿಪಿ ಇದೆ ಎಂದು ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ. ಅದಕ್ಕೆ ಇಂದು ನಿಮ್ಮ ಮನೆಯಲ್ಲಿಯೇ ಸಿಂಪಲ್ ಆಗಿ ಹೇಗೆ ಈ ರೆಸಿಪಿ ಟ್ರೈ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ.

    ಬೇಕಾಗಿರುವ ಪದಾರ್ಥಗಳು:
    * ಆಲಿವ್ ಎಣ್ಣೆ – 2 ಟೀಸ್ಪೂನ್
    * ಕಟ್ ಮಾಡಿದ ಚಿಕನ್ – 2 ಕಪ್
    * ಕರಿಮೆಣಸು – 2 ಟೀಸ್ಪೂನ್
    * ಎಳ್ಳಿನ ಎಣ್ಣೆ – 2 ಟೀಸ್ಪೂನ್
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಕಟ್ ಮಾಡಿದ ಕ್ಯಾರೆಟ್ – ಅರ್ಧ ಕಪ್

    * ಲವಂಗ – 1 ಟೀಸ್ಪೂನ್
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಬೇಯಿಸಿದ ಅಕ್ಕಿ – 3 ಕಪ್
    * ನೆನೆಸಿಟ್ಟ ಬಟಾಣಿ – ಅರ್ಧ ಕಪ್
    * ಮೊಟ್ಟೆಗಳು – 2
    * ಸೋಯಾ ಸಾಸ್ – 3 ಟೀಸ್ಪೂನ್

    ಮಾಡುವ ವಿಧಾನ:
    * ಮಧ್ಯಮ ಉರಿಯಲ್ಲಿ ಒಂದು ಬಾಣಲೆಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ಚಿಕನ್ ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದಕ್ಕೆ ಉಪ್ಪು ಮತ್ತು ಮೆಣಸಿನಕಾಯಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೂ ಉರಿಯಿರಿ.
    * ಚಿಕನ್ ಬಾಣಲೆಯಿಂದ ತೆಗೆದು 5 ನಿಮಿಷಗಳ ಕಾಲ ಬಿಡಿ.
    * ಅದೇ ಬಾಣಲೆಗೆ ಎಳ್ಳಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಈರುಳ್ಳಿ ಮತ್ತು ಕ್ಯಾರೆಟ್ ಸೇರಿಸಿ 5 ನಿಮಿಷಗಳು ಬೇಯಿಸಿ.
    * ನಂತರ ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಸೇರಿಸಿ 1 ನಿಮಿಷ ಬಿಡಿ. ಅನ್ನ ಮತ್ತು ಬಟಾಣಿಗಳನ್ನು ಬೆರೆಸಿ 2 ನಿಮಿಷ ಫ್ರೈ ಮಾಡಿ.
    * ಇನ್ನೊಂದು ಪಾತ್ರೆಯಲ್ಲಿ ಮೊಟ್ಟೆಯನ್ನು ಬೇಯಿಸಿ. ನಂತರ ಮೊಟ್ಟೆಯನ್ನು ಕಟ್ ಮಾಡಿ ರೈಸ್ ಜೊತೆ ಮಿಕ್ಸ್ ಮಾಡಿ.
    * ಅದಕ್ಕೆ ಸೋಯಾ ಸಾಸ್ ಮತ್ತು ಹಸಿರು ಈರುಳ್ಳಿ ಹಾಕಿ ಸರಿಯಾಗಿ ಫ್ರೈ ಮಾಡಿ.

    • ‘ಚಿಕನ್ ಫ್ರೈಡ್ ರೈಸ್’ ಸವಿಯಲು ಸಿದ್ಧವಾಗಿದ್ದು, ಕೆಚಪ್‌ ಜೊತೆ ಬಡಿಸಿ.

    Live Tv
    [brid partner=56869869 player=32851 video=960834 autoplay=true]

  • ದೇಶಿ ಶೈಲಿಯ ‘ಹಸಿ ಕೈ ಗೊಜ್ಜು’ ಮಾಡುವ ವಿಧಾನ

    ದೇಶಿ ಶೈಲಿಯ ‘ಹಸಿ ಕೈ ಗೊಜ್ಜು’ ಮಾಡುವ ವಿಧಾನ

    ಇಂದು ನಾವು ಹೇಳಿಕೊಡುತ್ತಿರುವ ಸಾರಿನ ಹೆಸರು ‘ಹಸಿ ಕೈ ಗೊಜ್ಜು’. ಈ ಸಾರನ್ನು ಮುದ್ದೆ, ಅನ್ನದ ಜೊತೆ ಸವಿದರೆ ಬಹಳ ರುಚಿಯಾಗಿರುತ್ತೆ. ಸಿಟಿಯಲ್ಲೆ ಇದ್ದವರಿಗೆ ಈ ಸಾರಿನ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಅದಕ್ಕೆ ಇಂದು ನೀವು ನಿಮ್ಮ ಮನೆಯಲ್ಲಿ ‘ಹಸಿ ಕೈ ಗೊಜ್ಜು’ ಟ್ರೈ ಮಾಡಿ ರುಚಿ ನೋಡಿ. ಇದನ್ನು ಮಾಡುವುದು ತುಂಬಾ ಸುಲಭ.

    ಬೇಕಾಗಿರುವ ಸಾಮಾಗ್ರಿಗಳು:
    * ಬದನೆಕಾಯಿ – 2
    * ಟೊಮೊಟೊ – 1
    * ಕಟ್ ಮಾಡಿದ ಈರುಳ್ಳಿ – 1
    * ಮೆಣಸಿನಕಾಯಿ – 5
    * ಹುಣಸೆಹಣ್ಣು – 1/4 ಗ್ರಾಂ
    * ಜೀರಿಗೆ – 1/4 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – 1/2 ಟೀಸ್ಪೂನ್
    * ರುಚುಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲಿಗೆ ಹುಣಸೆಹಣ್ಣನ್ನು ನೀರಿನಲ್ಲಿ ನೆನಸಿಡಿ.
    * ಬದನೆಕಾಯಿಯನ್ನು ಚಾಕುವಿನಿಂದ ಚುಚ್ಚಿ ಅದನ್ನು ಗ್ಯಾಸ್ ಉರಿಯಲ್ಲಿ ಬೇಯಿಸಿ. ಅದೇ ರೀತಿ ಟೊಮೆಟೊ ಮತ್ತು ಮೆಣಸಿನಕಾಯಿಯನ್ನು ಬೇಯಿಸಿ ಪಕ್ಕಕ್ಕೆ ಇಡಿ.
    * ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಟೊಮೆಟೊ, ಮೆಣಸಿನಕಾಯಿ ಹಾಗೂ ಬದನೆಕಾಯಿ ಹಾಕಿ ಸಂಪೂರ್ಣ ಮೆತ್ತಗೆ ಆಗುವವರೆಗೂ ಫ್ರೈ ಮಾಡಿ.
    * ಈಗ ಫ್ರೈಗೆ ಈರುಳ್ಳಿ, ಹುಣಸೆಹಣ್ಣು ಹಾಗೂ ಉಪ್ಪು ಹಾಕಿ ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.

    Live Tv
    [brid partner=56869869 player=32851 video=960834 autoplay=true]

  • ಚಾಟ್ಸ್ ಪ್ರಿಯರು ಮಾಡಿ ಸವಿಯಿರಿ ‘ಮಸಾಲಾ ಕಾರ್ನ್ ಚಾಟ್’

    ಚಾಟ್ಸ್ ಪ್ರಿಯರು ಮಾಡಿ ಸವಿಯಿರಿ ‘ಮಸಾಲಾ ಕಾರ್ನ್ ಚಾಟ್’

    ಳೆಯಲ್ಲಿ ಏನಾದರೂ ಚಾಟ್ಸ್ ತಿನ್ನಬೇಕು ಎಂದು ಅನಿಸುತ್ತೆ. ಹೊರಗಡೆ ಹೋಗಬೇಕು ಎಂದರೆ ಮಳೆ ಬರುತ್ತಿರುತ್ತೆ. ಅದಕ್ಕೆ ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಬಳಿಯಲ್ಲಿ ಇರುವ ಸಾಮಾಗ್ರಿಗಳನ್ನು ಬಳಸಿಕೊಂಡು ಹೇಗೆ ಸಿಂಪಲ್ ಮತ್ತು ರುಚಿಕರವಾದ ‘ಮಸಾಲಾ ಕಾರ್ನ್ ಚಾಟ್’ ಮಾಡುವುದು ಎಂದು ಇಲ್ಲಿ ಹೇಳಿಕೊಡುತ್ತಿದ್ದೇವೆ.

    ಬೇಕಾಗುವ ಪದರ್ಥಾಗಳು:
    * ಸ್ವೀಟ್ ಕಾರ್ನ್ – 1 ಕಪ್
    * ತುಪ್ಪ – ಅರ್ಧ ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್


    * ಕಾಳುಮೆಣಸಿನ ಪುಡಿ – 1 ಚಿಟಿಕೆ
    * ಕಟ್ ಮಾಡಿದ ಟೊಮೆಟೊ – 1 ಕಪ್
    * ತುರಿದ ಕ್ಯಾರೆಟ್ – 2 ಟೀಸ್ಪೂನ್
    * ಕಟ್ ಮಾಡಿದ ಈರುಳ್ಳಿ – 2 ಟೀಸ್ಪೂನ್
    * ಸೆವ್ – 2 ಟೀಸ್ಪೂನ್
    * ಕಟ್ ಮಾಡಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್

    ಮಾಡುವ ವಿಧಾನ:
    * ಬಾಣಲೆಯಲ್ಲಿ ಬೆಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಸ್ವೀಟ್ ಕಾರ್ನ್ 2 ಕಪ್ ನೀರು ಮತ್ತು 1 ಟೀಸ್ಪೂನ್ ಉಪ್ಪು ಹಾಕಿ ಬೇಯಿಸಿಕೊಳ್ಳಿ. ತಣ್ಣಗಾಗಲು ಬಿಡಿ.
    * ನಂತರ ಅದಕ್ಕೆ ನಿಂಬೆ ರಸವನ್ನು ಹಿಂಡಿ ಮತ್ತು ಮಿಶ್ರಣ ಮಾಡಿ.
    * ಸರ್ವಿಂಗ್ ಪ್ಲೇಟ್‍ಗೆ ಕಾರ್ನ್ ಹಾಕಿ ಅದಕ್ಕೆ ಟೊಮಾಟೊ, ಈರುಳ್ಳಿ, ತುರಿದ ಕ್ಯಾರೆಟ್ ಸೇರಿಸಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
    * ಕಾರ್ನ್ ಮಸಾಲಾಗೆ ಕೊನೆಯಲ್ಲಿ ಸೇವ್ ಹಾಕಿ ಅಲಂಕರಿಸಿ.

    – ಈಗ ಬಾಯಲ್ಲಿ ನೀರೂರಿಸುವ ಮಸಾಲಾ ಕಾರ್ನ್ ಚಾಟ್ ಬಡಿಸಲು ಸಿದ್ಧವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಾಲಿಗೆಗೆ ರುಚಿ ನೀಡುವ ನ್ಯೂ ಸ್ಟೈಲ್ ‘ಎಗ್ ಫ್ರೈ’ ಮಾಡಿ

    ನಾಲಿಗೆಗೆ ರುಚಿ ನೀಡುವ ನ್ಯೂ ಸ್ಟೈಲ್ ‘ಎಗ್ ಫ್ರೈ’ ಮಾಡಿ

    ಮೊಟ್ಟೆ ಪ್ರಿಯಾರಿಗೆ ದಿನಕ್ಕೊಂದಾದರೂ ಮೊಟ್ಟೆ ತಿನ್ನದಿದ್ರೆ ಸಮಾಧಾನವಾಗುವುದಿಲ್ಲ. ಆದರೆ ಒಂದೇ ರೀತಿಯ ಎಗ್ ಫ್ರೈ ತಿಂದು ಬೇಜಾರಾಗಿರುವ ನಿಮ್ಮ ನಾಲಿಗೆಗೆ ಇಂದು ಹೊಸ ಪಾಕವಿಧಾನವನ್ನು ಹೇಳಿಕೊಡುತ್ತಿದ್ದೇವೆ. ಮನೆಯಲ್ಲಿಯೇ ಇದನ್ನು ಟ್ರೈ ಮಾಡಿ.

    ಬೇಕಾಗಿರುವ ಸಾಮಾಗ್ರಿಗಳು:
    * ಮೊಟ್ಟೆಗಳು – 4
    * ಮೆಣಸಿನ ಪುಡಿ – 1 ಟೀಸ್ಪೂನ್
    * ಕಪ್ಪು ಮೆಣಸು – 1 ಟೀಸ್ಪೂನ್
    * ಅರಿಶಿನ – 1 ಪಿಂಚ್
    * ಕೊತ್ತಂಬರಿ ಸೊಪ್ಪು- 1 ಟೀಸ್ಪೂನ್
    * ಕರಿಬೇವು – 1 ರಿಂದ 5 ಎಲೆಗಳು
    * ರುಚಿಗೆ ಉಪ್ಪು

    ಮಾಡುವ ವಿಧಾನ:
    * ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಮೆಣಸಿನ ಪುಡಿ, ಕರಿಮೆಣಸು, ಅರಿಶಿನ, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ ಮಸಾಲಾವನ್ನು ರೆಡಿ ಮಾಡಿಕೊಳ್ಳಿ.
    * ಇನ್ನೊಂದು ಪಾತ್ರೆಯಲ್ಲಿ ಎಲ್ಲ ಮೊಟ್ಟೆಗಳನ್ನು ಬೇಯಿಸಿ. ನಂತರ ಆ ಮೊಟ್ಟೆಗಳನ್ನು ಅರ್ಧ ಕಟ್ ಮಾಡಿ.
    * ಕಟ್ ಮಾಡಿದ ಮೊಟ್ಟೆಗಳಿಗೆ ಮಸಾಲೆ ಹಾಕಿ 1 ನಿಮಿಷ ಹುರಿಯಿರಿ. ಮೊಟ್ಟೆಯ ಹಳದಿ ಭಾಗಕ್ಕೆ ಹೆಚ್ಚು ಮಸಾಲೆ ಹಾಕಿ. ಅದು ಬಡೆಯದಂತೆ ನೋಡಿಕೊಳ್ಳಿ.

    – ರುಚಿಕರವಾದ ಎಗ್ ಫ್ರೈ ಸಿದ್ಧವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ʼಬೆಲ್ಲದ ದೋಸೆʼ ಮಾಡುವ ಸೂಪರ್‌ ವಿಧಾನ

    ʼಬೆಲ್ಲದ ದೋಸೆʼ ಮಾಡುವ ಸೂಪರ್‌ ವಿಧಾನ

    ನೀವು ಹೆಚ್ಚು ಮಸಾಲೆ ದೋಸೆ, ಸೆಟ್​ ದೋಸೆ ಈರುಳ್ಳಿ ದೋಸೆ ಮಾಡುತ್ತೇವೆ. ದೋಸೆಗಳನ್ನು ಮಾಡಲು ಹಿಂದಿನ ದಿನ ಅಕ್ಕಿಯನ್ನು ನೆನಸಿ ಮಾಡಬೇಕಾಗುತ್ತದೆ. ಆದರೆ ಈ ದೋಸೆ ಮಾಡಲು ಕೇವಲ 10 ನಿಮಿಷ ಸಾಕು. ಫಟ್​ ಅಂತ ತಯಾರಾಗುವ ಈ ಸರಳ ದೋಸೆ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ ಹಿಟ್ಟು- 1 ಕಪ್
    * ಗೋಧಿ ಹಿಟ್ಟು- 2 ಕಪ್
    * ಬೆಲ್ಲದ ಪುಡಿ- ಕಪ್
    * ತೆಂಗಿನ ತುರಿ – ಅರ್ಧ ಕಪ್
    * ಏಲಕ್ಕಿ ಪುಡಿ- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಸೋಡ- ಸ್ವಲ್ಪ
    * ತುಪ್ಪ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲಿಗೆ ಪಾತ್ರೆಯೊಂದಕ್ಕೆ ಬೆಲ್ಲವನ್ನು ಹಾಕಿ, ಕಾಯಿಸಿ ಶೋಧಿಸಿಟ್ಟುಕೊಂಡಿರಬೇಕು.
    * ಪಾತ್ರೆಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಬೆಲ್ಲದ ನೀರು, ಏಲಕ್ಕಿ ಪುಡಿ, ಚಿಟಿಕೆಯಷ್ಟು ಉಪ್ಪು, ಅಡುಗೆ ಸೋಡ ಎಲ್ಲವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.

    * ನಂತರ ದೋಸೆ ಮಿಶ್ರಣಕ್ಕೆ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

    * ತವಾವನ್ನು ಬಿಸಿ ಮಾಡಿ ದೋಸೆ ಆಕಾರದಲ್ಲಿ ಮಿಶ್ರಣವನ್ನು ಹಾಕಿ ಬೇಯಿಸಿದರೆ ರುಚಿಯಾದ ದೋಸೆ ಸವಿಯಲು ಸಿದ್ಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಹಳ್ಳಿ ಶೈಲಿ ‘ಕಾಯಿ ಹಾಲು ಕಾಳುಮೆಣಸಿನ ಸಾರು’ ಮಾಡುವ ವಿಧಾನ

    ಹಳ್ಳಿ ಶೈಲಿ ‘ಕಾಯಿ ಹಾಲು ಕಾಳುಮೆಣಸಿನ ಸಾರು’ ಮಾಡುವ ವಿಧಾನ

    ಯಾವಾಗಲೂ ಒಂದೇ ರೀತಿಯ ಸಾರು ತಿಂದು ನಿಮ್ಮ ನಾಲಿಗೆಗೆ ಬೋರ್ ಆಗಿರುತ್ತೆ. ಅದಕ್ಕೆ ಇಂದು ನಿಮ್ಮ ನಾಲಿಗೆಗೆ ಹಳ್ಳಿ ರುಚಿಯನ್ನು ತೋರಿಸಿ. ಇದನ್ನು ಮಾಡುವುದು ತುಂಬಾ ಸರಳ. ಹೆಚ್ಚು ಮಸಾಲೆ ಏನು ಬೇಡ. ಸಿಂಪಲ್ ಆಗಿ ಮಾಡುವ ಈ ರೆಸಿಪಿಯನ್ನು 20 ನಿಮಿಷದಲ್ಲಿಯೇ ಮಾಡಬಹುದು. ಹಾಗಾದರೆ ಯಾವುದು ಆ ರೆಸಿಪಿ ಎಂದು ಯೋಚನೆ ಮಾಡುತ್ತಿದ್ದೀರಾ ಅದೇ ‘ಕಾಯಿ ಹಾಲು ಕಾಳುಮೆಣಸಿನ ಸಾರು’. ಈ ಸಾರನ್ನು ನೀವು ಮನೆಯಲ್ಲಿಯೇ ಟ್ರೈ ಮಾಡಿ.

    ಬೇಕಾಗುವ ಸಾಮಾಗ್ರಿಗಳು:
    * ಕಾಳು ಮೆಣಸು – 1 ಟೀಸ್ಪೂನ್
    * ಜೀರಿಗೆ – 1/2 ಟೀಸ್ಪೂನ್
    * ಬೆಳ್ಳುಳ್ಳಿ – 7 ಎಸಳು
    * ಹಸಿ ಶುಂಠಿ – 1/2 ಇಂಚು
    * ಅರಿಶಿನ ಪುಡಿ – 1/4 ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್
    * ಬೆಲ್ಲ – 1/2 ಟೀಸ್ಪೂನ್


    * ತೆಂಗಿನಕಾಯಿ ಹಾಲು – 1 ಕಪ್
    * ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ನಿಂಬೆ ರಸ – 2 ಟೀಸ್ಪೂನ್
    * ಎಣ್ಣೆ – 2 ಟೀಸ್ಪೂನ್
    * ಸಾಸಿವೆ – 1/2 ಟೀಸ್ಪೂನ್
    * ಒಣ ಮೆಣಸಿನಕಾಯಿ – 2
    * ಕರಿಬೇವು – 10

    ಮಾಡುವ ವಿಧಾನ:
    * ಒಂದು ಕುಟ್ಟಾಣಿಗೆ ಕಾಳು ಮೆಣಸು, ಜೀರಿಗೆ ಹಾಕಿ, ಕುಟ್ಟಿ ಪುಡಿಮಾಡಿ. ಇದಕ್ಕೆ 6 ರಿಂದ 7 ಬೆಳ್ಳುಳ್ಳಿ ಎಸಳು, ಅರ್ಧ ಇಂಚು ಹಸಿ ಶುಂಠಿ ಹಾಕಿ ತರಿ ತರಿಯಾಗಿ ಕುಟ್ಟಿ.
    * ಒಂದು ಪಾತ್ರೆಗೆ 2 ಕಪ್ ನೀರು ಹಾಕಿ, ಅದಕ್ಕೆ ಕುಟ್ಟಿದ ಪೇಸ್ಟ್ ಹಾಕಿ ಕಲಕಿ, 6 ರಿಂದ 7 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ.
    * ನಂತರ ಕಾಲು ಅರಿಶಿಣ ಪುಡಿ, ಉಪ್ಪು ಹಾಕಿ ಕಲಕಿ. ಇದಕ್ಕೆ ಅರ್ಧ ಚಮಚ ಬೆಲ್ಲ, ಕಾಯಿ ಹಾಲು ಹಾಕಿ, ಚೆನ್ನಾಗಿ ಕಲಕಿ 3 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ.
    * ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿ ಕಲಕಿ.
    * ಒಗ್ಗರಣೆಗೆ ಒಂದು ಚಿಕ್ಕ ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ ಒಣ ಮೆಣಸಿನಕಾಯಿ ಮುರಿದು ಹಾಕಿ. ಇದಕ್ಕೆ ಕರಿಬೇವು ಹಾಕಿ ಹುರಿಯಿರಿ. ನಂತರ ಈ ಒಗ್ಗರಣೆಯನ್ನು ಸಾರಿಗೆ ಹಾಕಿ, ಚೆನ್ನಾಗಿ ಕಲಸಿದರೆ ರುಚಿಯಾದ ತಿಳಿ ಸಾರು ಸಿದ್ಧ.

    Live Tv
    [brid partner=56869869 player=32851 video=960834 autoplay=true]

  • ಟೇಸ್ಟಿ, ಸ್ಪೈಸಿ ‘ಚಿಲ್ಲಿ ಚಿಕನ್’ ಮಾಡುವ ಸಿಂಪಲ್ ವಿಧಾನ

    ಟೇಸ್ಟಿ, ಸ್ಪೈಸಿ ‘ಚಿಲ್ಲಿ ಚಿಕನ್’ ಮಾಡುವ ಸಿಂಪಲ್ ವಿಧಾನ

    ಚಿಕನ್ ಇಷ್ಟ ಪಡುವವರಿಗೆ ‘ಚಿಲ್ಲಿ ಚಿಕನ್’ ತುಂಬಾ ಇಷ್ಟ. ತಮಗೆ ಇಷ್ಟವಾದ ರುಚಿಯನ್ನು ಹುಡುಕಿಕೊಂಡು ಜನರು ಹೋಟೆಲ್‍ಗೆ ಹೋಗುತ್ತಾರೆ. ಕೆಲವೊಮ್ಮೆ ಎಲ್ಲ ಹೋಟೆಲ್‍ನಲ್ಲಿಯೂ ನಮಗೆ ಇಷ್ಟವಾದ ಟೇಸ್ಟ್ ಸಿಗುವುದಿಲ್ಲ. ಆದರೆ ಮನೆಯಲ್ಲಿ ನಿಮಗೆ ಇಷ್ಟವಾದ ಅಡುಗೆ ಮಾಡಿಕೊಂಡು ತಿಂದ್ರೆ ನಿಮ್ಮ ಮನಸ್ಸಿಗೂ ತೃಪ್ತಿ, ನಿಮಗೆ ಇಷ್ಟವಾದ ಟೇಸ್ಟ್‌ ಸಹ ಸಿಗುತ್ತೆ. ಅದಕ್ಕೆ ಇಂದು ‘ಚಿಲ್ಲಿ ಚಿಕನ್’ ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದೇವೆ. ಈ ರೆಸಿಪಿಯನ್ನು ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    * ಚಿಕನ್ ಪೀಸ್ – 2 ಕಪ್
    * ಉಪ್ಪು – 1 ಟೀಸ್ಪೂನ್
    * ಕಾಳುಮೆಣಸು – 1/2 ಟೀಸ್ಪೂನ್
    * ಮೊಟ್ಟೆ – 1
    * ಜೋಳದ ಹಿಟ್ಟು – 100ಗ್ರಾಂ
    * ಕಟ್ ಮಾಡಿದ ದೊಣ್ಣೆ ಮೆಣಸಿನಕಾಯಿ – 1
    * ಕಟ್ ಮಾಡಿದ ಈರುಳ್ಳಿ – 1 ಕಪ್

    ಚಿಲ್ಲಿ ಸಾಸ್‍ಗೆ ಸಾಮಗ್ರಿ
    * ಜಜ್ಜಿದ ಬೆಳ್ಳುಳ್ಳಿ – 3
    * ಕೆಂಪು ಮೆಣಸು – 1
    * ಸೋಯಾ ಸಾಸ್ – 3 ಟೀಸ್ಪೂನ್
    * ಟೊಮೆಟೊ ಸಾಸ್ – 2 ಟೀಸ್ಪೂನ್
    * ನೀರು – 1/2 ಕಪ್

    ಮಾಡುವ ವಿಧಾನ:
    * ಚಿಕನ್ ತೊಳೆದು ಉದ್ದುದ್ದವಾಗಿ ಕತ್ತರಿಸಿ, ಉಪ್ಪು ಮತ್ತು ಕಾಳು ಮೆಣಸಿನ ಪುಡಿ ಉದುರಿಸಿ ಮಿಕ್ಸ್ ಮಾಡಿ. ಒಂದು ಬಟಲಿನಲ್ಲಿ ಮೊಟ್ಟೆ ಹಾಕಿ ಪೇಸ್ಟ್ ರೀತಿ ರೆಡಿ ಮಾಡಿಕೊಳ್ಳಿ.
    * ಈಗ ತವಾವನ್ನು ಬಿಸಿ ಮಾಡಲು ಇಟ್ಟು ಅದಕ್ಕೆ ಎಣ್ಣೆ ಹಾಕಿ, ಚಿಕನ್ ತುಂಡುಗಳನ್ನು ಮೊಟ್ಟೆಯಲ್ಲಿ ಅದ್ದಿ, ನಂತರ ಜೋಳದ ಹಿಟ್ಟಿನಲ್ಲಿ ಒಮ್ಮೆ ಹೊರಳಾಡಿಸಿ ತವಾಕ್ಕೆ ಹಾಕಿ ಸ್ವಲ್ಪ ಫ್ರೈ ಮಾಡಿ.
    * ಚಿಕನ್ ಸ್ವಲ್ಪ ರೋಸ್ಟ್ ಆದ ಬಳಿಕ ಅದಕ್ಕೆ ಕಟ್ ಮಾಡಿದ ಕೆಂಪು ಹಾಗೂ ಹಸಿರುದೊಣ್ಣೆ ಮೆಣಸಿನ ಕಾಯಿ, ಈರುಳ್ಳಿ ಹಾಕಿ ಫ್ರೈ ಮಾಡಿ ಚಿಕನ್ ಬೆಂದ ಮೇಲೆ ಅದನ್ನು ಒಂದು ಪಾತ್ರೆಯಲ್ಲಿ ತೆಗದಿಡಿ.
    * ಈಗ ಅದೇ ಪ್ಯಾನ್‍ಗೆ ಜಜ್ಜಿದ ಬೆಳ್ಳುಳ್ಳಿ, ಕೆಂಪು ಮೆಣಸು, ಸೋಯಾ ಸಾಸ್, ಟೊಮೆಟೊ ಸಾಸ್ ಅಥವಾ ಪೇಸ್ಟ್ ಹಾಗೂ ನೀರು ಹಾಕಿ ಮಿಶ್ರಣ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿ.
    * ಈ ಮಿಶ್ರಣವನ್ನು ಗ್ರೇವಿ ರೀತಿ ಮಾಡಿ, ಫ್ರೈ ಮಾಡಿಟ್ಟ ಚಿಕನ್ ಹಾಗೂ ದೊಣ್ಣೆಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿದರೆ ‘ಚಿಲ್ಲಿ ಚಿಕನ್’ ಸರ್ವ್ ಮಾಡಲು ರೆಡಿ.

    Live Tv