Tag: recipe

  • ಸುಲಭವಾಗಿ ಮಾಡಿ ರುಚಿರುಚಿಯಾದ ಎಗ್ 65

    ಸುಲಭವಾಗಿ ಮಾಡಿ ರುಚಿರುಚಿಯಾದ ಎಗ್ 65

    ಮೊಟ್ಟೆಯಿಂದ ಮಾಡಲಾಗುವ ಯಾವ ರೀತಿಯ ಖಾದ್ಯವೂ ರುಚಿಕರವಾಗಿರುತ್ತದೆ. ಬೇಯಿಸಿದ ಮೊಟ್ಟೆಯಿಂದ ಹಿಡಿದು ಸಿಂಪಲ್ ಆಗಿ ಮಾಡಬಹುದಾದ ಆಮ್ಲೆಟ್ ವರೆಗೂ ಎಲ್ಲರೂ ಅದನ್ನು ಇಷ್ಟಪಡುತ್ತಾರೆ. ಹೆಚ್ಚಿನ ಪ್ರೋಟೀನ್ ಯುಕ್ತ ಮೊಟ್ಟೆಯನ್ನು ವಿವಿಧ ರೀತಿಯಲ್ಲಿ ಅಡುಗೆ ಮಾಡಬಹುದು. ಇಂದು ರುಚಿಕರ ಹಾಗೂ ಅತ್ಯಂತ ಸರಳವಾಗಿ ಮಾಡಬಹುದಾದ ಎಗ್ 65 ರೆಸಿಪಿ ನೋಡೋಣ.

    ಬೇಕಾಗುವ ಪದಾರ್ಥಗಳು:
    ಮೊಟ್ಟೆ – 3
    ಮೆಣಸಿನ ಪುಡಿ- 1 ಟೀಸ್ಪೂನ್
    ಕಡಲೆ ಹಿಟ್ಟು- ಎರಡುವರೆ ಟೀಸ್ಪೂನ್
    ಹೆಚ್ಚಿದ ಕಾಯಿ ಮೆಣಸು- 2 ಟೀಸ್ಪೂನ್
    ಹೆಚ್ಚಿದ ಬೆಳ್ಳುಳಿ- 2 ಟೀಸ್ಪೂನ್
    ಹೆಚ್ಚಿದ ಶುಂಠಿ- 1 ಟೀಸ್ಪೂನ್
    ಕಾಳು ಮೆಣಸಿನ ಪುಡಿ- 1/4 ಟೀಸ್ಪೂನ್

    ಮಸಾಲೆಗೆ:
    ಎಣ್ಣೆ- 1 ಟೀಸ್ಪೂನ್
    ಕರಿಬೇವು- 8 ಎಸಳು
    ಒಣಗಿದ ಕೆಂಪು ಮೆಣಸಿನ ಕಾಯಿ- 1
    ಹೆಚ್ಚಿದ ಬೆಳ್ಳುಳ್ಳಿ- 1 ಟೀಸ್ಪೂನ್
    ಹೆಚ್ಚಿದ ಶುಂಠಿ- 1 ಟೀಸ್ಪೂನ್
    ಹಸಿರು ಮೆಣಸು- 1
    ಕೆಂಪು ಮೆಣಸಿನ ಪುಡಿ- ಅರ್ಧ ಟೀಸ್ಪೂನ್
    ಗರಂ ಮಸಾಲೆ- ಅರ್ಧ ಟೀಸ್ಪೂನ್
    ಕೆಚಪ್- 3 ಟೀಸ್ಪೂನ್

     

    ಮಾಡುವ ವಿಧಾನ:
    * ಬೇಯಿಸಿದ ಮೊಟ್ಟೆಗಳನ್ನು 4 ಭಾಗಗಳಾಗಿ ಕತ್ತರಿಸಿ.
    * ಪಾತ್ರೆಯಲ್ಲಿ ಮೆಣಸಿನ ಪುಡಿ, ಕಡಲೆ ಹಿಟ್ಟು, ಹೆಚ್ಚಿದ ಹಸಿರು ಮೆಣಸಿನಕಾಯಿ, ಹೆಚ್ಚಿದ ಬೆಳ್ಳುಳ್ಳಿ, ಹೆಚ್ಚಿದ ಶುಂಠಿ, ಉಪ್ಪು ಮತ್ತು ಪುಡಿಮಾಡಿದ ಕರಿಮೆಣಸು, ಸ್ವಲ್ಪ ನೀರು ಸೇರಿಸಿ ದಪ್ಪ ಹಿಟ್ಟಾಗಿ ಕಲಸಿ.
    * ಅದಕ್ಕೆ ಕತ್ತರಿಸಿದ ಮೊಟ್ಟೆಗಳನ್ನು ಸೇರಿಸಿ, ಚೆಂಡಿನಂತೆ ರೋಲ್ ಮಾಡಿ.
    * ಮೊಟ್ಟೆಯ ಮಿಶ್ರಣವನ್ನು ಎಣ್ಣೆಯಲ್ಲಿ ಗರಿಗರಿಯಾಗಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
    * ಮಸಾಲೆ ತಯಾರಿಸಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಅದಕ್ಕೆ ಕರಿಬೇವಿನ ಎಲೆಗಳು, ಕೆಂಪು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಗರಂ ಮಸಾಲೆ ಹಸಿರು ಮೆಣಸು ಸೇರಿಸಿ, 2 ನಿಮಿಷಗಳ ಕಾಲ ಫ್ರೈ ಮಾಡಿ.
    * ಈಗ ಹುರಿದ ಮೊಟ್ಟೆಗಳನ್ನು ತಯಾರಿಸಿದ ಮಸಾಲೆಯಲ್ಲಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
    * ಸ್ವಾದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ, ಕೆಚಪ್ ಜೊತೆ ಬಿಸಿಬಿಸಿಯಾಗಿ ಬಡಿಸಿ.

    Live Tv
    [brid partner=56869869 player=32851 video=960834 autoplay=true]

  • ಚಹಾದೊಂದಿಗೆ ಆನಂದಿಸಿ ಹಾಗಲಕಾಯಿ ಫ್ರೈ

    ಚಹಾದೊಂದಿಗೆ ಆನಂದಿಸಿ ಹಾಗಲಕಾಯಿ ಫ್ರೈ

    ಹಿಯಾದ ಹಾಗಲಕಾಯಿಯ ಅಡುಗೆಯನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ಅತ್ಯಂತ ಆರೋಗ್ಯಕರ ತರಕಾರಿ ಪಟ್ಟಿಯಲ್ಲಿ ಇದು ಸೇರುತ್ತದೆ. ಮನೆಯ ಎಲ್ಲಾ ಸದಸ್ಯರಿಗೂ ಹಾಗಲಕಾಯಿಯ ಅಡುಗೆಯನ್ನು ಮಾಡಿ ಬಡಿಸುವುದು ಗೃಹಿಣಿಯರಿಗೆ ಒಂದು ಸವಾಲಾಗಿಯೇ ಉಳಿದಿದೆ. ಆದರೆ ಇಂದು ನಾವು ತೋರಿಸುತ್ತಿರುವ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿದರೆ, ಎಂತಹ ಹಾಗಲಕಾಯಿ ದ್ವೇಷಿಗಳೂ ಅದನ್ನು ಇಷ್ಟಪಡುತ್ತಾರೆ.

    ಬೇಕಾಗುವ ಪದಾರ್ಥಗಳು:
    * ಹಾಗಲಕಾಯಿ – 2
    * ಕಾರ್ನ್ ಫ್ಲೋರ್ – 1 ಟೀಸ್ಪೂನ್
    * ಕಡಲೆ ಹಿಟ್ಟು – 1
    * ಅರಿಶಿನ – ಅರ್ಧ ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್
    * ಅಕ್ಕಿ ಹಿಟ್ಟು – 1 ಟೀಸ್ಪೂನ್
    * ಆಮ್ಚೂರ್ ಪುಡಿ – 1 ಟೀಸ್ಪೂನ್
    * ಉಪ್ಪು – ರುಚಿಗೆ ತಕ್ಕಷ್ಟು
    * ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು

    ಮಾಡುವ ವಿಧಾನ:

    * ಮೊದಲಿಗೆ ಹಾಗಲಕಾಯಿಯನ್ನು ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ.
    * ಕತ್ತರಿಸಿದ ಹಾಗಲಕಾಯಿಗೆ ಕಾರ್ನ್ ಫ್ಲೋರ್, ಕಡಲೆ ಹಿಟ್ಟು, ಅಕ್ಕಿಹಿಟ್ಟು, ಅರಿಶಿನ, ಮೆಣಸಿನ ಪುಡಿ, ಆಮ್ಚೂರ್ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿ.
    * ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಸ್ವಲ್ಪ ಸ್ವಲ್ಪವೇ ಹಾಗಲಕಾಯಿ ಮಿಶ್ರಣವನ್ನು ಎಣ್ಣೆಗೆ ಹಾಕಿ ಕರಿಯಿರಿ.
    * ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಫ್ರೈ ಮಾಡಿ.

    – ಗರಿಗರಿಯಾದ ಹಾಗಲಕಾಯಿ ಫ್ರೈ ತಯಾರಾಗಿದ್ದು, ಇದನ್ನು ಟೀ ಟೈಮ್ ಅಥವಾ ಊಟದೊಂದಿಗೆ ಸೈಡ್ ಡಿಶ್ ಆಗಿ ಬಡಿಸಬಹುದು.

    Live Tv

  • ಫ್ರೀ ಟೈಂನಲ್ಲಿ ಮನೆಯಲ್ಲೇ ಮಾಡಿ ಗುಲಾಬ್ ಜಾಮೂನ್

    ಫ್ರೀ ಟೈಂನಲ್ಲಿ ಮನೆಯಲ್ಲೇ ಮಾಡಿ ಗುಲಾಬ್ ಜಾಮೂನ್

    ತ್ಯಂತ ಮೃದುವಾದ, ಬಾಯಿಗಿಟ್ಟರೆ ಕರಗುವಂತಹ ರುಚಿಕರವಾದ ಗುಲಾಬ್ ಜಾಮೂನ್ ಯಾರಿಗೆ ಇಷ್ಟ ಇಲ್ಲ ಹೇಳಿ? ಭಾರತದ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಗುಲಾಬ್ ಜಾಮೂನ್ ಕೂಡಾ ಒಂದು. ಆದರೂ ಜನರು ಮಾರುಕಟ್ಟೆಯಲ್ಲಿ ದೊರಕುವ ರೆಡಿಮೆಡ್ ಇನ್ಸ್ಟೆಂಟ್ ಮಿಕ್ಸರ್‌ಗಳಿಂದಲೇ ಜಾಮೂನ್ ತಯಾರಿಸುವುದು ಎಷ್ಟು ಬೇಸರ ಅಲ್ವಾ? ಆದರೂ ಇದನ್ನು ಮನೆಯಲ್ಲಿಯೇ ಯಾವುದೇ ರೆಡಿಮೆಡ್ ಪೌಡರ್ ಬಳಸದೇ ಸುಲಭವಾಗಿ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಫ್ರೀ ಟೈಮ್‌ನಲ್ಲಿ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಗುಲಾಬ್ ಜಾಮೂನ್ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    * ಮೈದಾ – 1/2 ಕಪ್
    * ತುರಿದ ಖೋವಾ- 1 ಕಪ್ (200-225 ಗ್ರಾಂ)
    * ಅಡುಗೆ ಸೋಡ- 1/8 ಟೀಸ್ಪೂನ್
    * ತುಪ್ಪ/ಎಣ್ಣೆ- ಡೀಪ್ ಫ್ರೈಗೆ ಬೇಕಾಗುವಷ್ಟು
    * ಹಸಿರು ಏಲಕ್ಕಿ – 3-4
    * ಕೇಸರಿ ಎಳೆಗಳು – 8-10
    * ಸಕ್ಕರೆ – ಒಂದೂವರೆ ಕಪ್
    * ನೀರು – ಎರಡೂವರೆ ಕಪ್

    ಮಾಡುವ ವಿಧಾನ:
    * ಮೊದಲು ಸಕ್ಕರೆ ಪಾಕ ತಯಾರಿಸಲು ಆಳವಾದ ಪಾತ್ರೆ ತೆಗೆದುಕೊಂಡು ಅದಕ್ಕೆ ನೀರಿನೊಂದಿಗೆ ಸಕ್ಕರೆ, ಏಲಕ್ಕಿ ಹಾಗೂ ಕೇಸರಿ ಎಳೆಗಳನ್ನು ಹಾಕಿ ಕುದಿಸಿ. ಬಳಿಕ 10-12 ನಿಮಿಷಗಳವರೆಗೆ ಪಾಕ ಜಿಗುಟಾಗುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ, ಪಕ್ಕಕ್ಕಿಡಿ.
    * ಜಾಮೂನ್ ಮಿಶ್ರಣ ತಯಾರಿಸಲು ತುರಿದ ಖೋವಾಗೆ ಅಡುಗೆ ಸೋಡಾ, ಜರಡಿ ಹಿಡಿದ ಮೈದಾ ಸೇರಿಸಿ, ಹಿಟ್ಟಿನಂತೆ ನುಣ್ಣಗೆ ಮಿಶ್ರಣ ಮಾಡಿ. ಅಂಟು ಬರಲು ಸ್ವಲ್ಪ ಹಾಲು ಬಳಸಬಹುದು.
    * ಈ ಹಿಟ್ಟನ್ನು 20 ನಿಮಿಷಗಳ ಕಾಲ ಪಕ್ಕಕ್ಕೆ ಇಟ್ಟು, ಬಳಿಕ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಕೈಗೆ ಸ್ವಲ್ಪ ತುಪ್ಪ ಸವರಿ ಉಂಡೆ ಕಟ್ಟುವುದರಿಂದ ಉಂಡೆ ನಯವಾಗಿ ಮೂಡಿ ಬರುತ್ತದೆ. ಉಂಡೆಯಲ್ಲಿ ಬಿರುಕು ಬೀಳದಂತೆ ಎಚ್ಚರವಹಿಸಿ.
    * ಮಧ್ಯಮ ಉರಿಯಲ್ಲಿ ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಬಿಸಿ ಮಾಡಿ. ಅದರಲ್ಲಿ ಉಂಡೆಗಳನ್ನು ಹಾಕಿ ಗಾಢ ಕಂದು ಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ.
    * ಕಾದ ಉಂಡೆಗಳನ್ನು ಎಣ್ಣೆಯಿಂದ ತೆಗೆದು 5 ನಿಮಿಷ ಆರಲು ಬಿಡಿ.
    * ಬಿಸಿ ಸ್ವಲ್ಪ ಆರಿದ ಬಳಿಕ ಸಕ್ಕರೆ ಪಾಕಕ್ಕೆ ಅವುಗಳನ್ನು ಹಾಕಿ, 2 ಗಂಟೆ ಹೀರಿಕೊಳ್ಳಲು ಬಿಡಿ.

     

    ಬೇಕೆಂದಲ್ಲಿ ಬಾದಾಮಿ ಪಿಸ್ತಾಗಳನ್ನು ಇಟ್ಟು ಅಲಂಕಾರ ಮಾಡಿದರೆ ಮೃದುವಾದ ಗುಲಾಬ್ ಜಾಮೂನ್ ಸವಿಯಲು ಸಿದ್ಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಗಂಜಿ ಜೊತೆ ಸೂಪರ್ ಆಗಿರುತ್ತೆ ಸಿಗಡಿ ಚಟ್ನಿ

    ಗಂಜಿ ಜೊತೆ ಸೂಪರ್ ಆಗಿರುತ್ತೆ ಸಿಗಡಿ ಚಟ್ನಿ

    ರಾವಳಿ ಭಾಗದಲ್ಲಿ ಅತ್ಯಂತ ಫೇಮಸ್ ಈ ಸಿಗಡಿ ಚಟ್ನಿ. ಉಪ್ಪು, ಹುಳಿ ಖಾರದೊಂದಿಗಿನ ಸ್ವಾದ ಯಾವ ರೆಸ್ಟೊರೆಂಟ್‌ನ ರುಚಿಯನ್ನೂ ಹಿಂದಿಕ್ಕಬಲ್ಲದು. ಕುಚಿಲಕ್ಕಿಯ ಗಂಜಿಯೊಂದಿಗಂತೂ ಈ ಚಟ್ನಿ ಇದ್ದರೆ ಬೇರೇನೂ ಬೇಡ. ನಿಮಿಷಗಳಲ್ಲಿ ನಿಮ್ಮ ಬಟ್ಟಲು ಖಾಲಿ ಆಗೋದು ಗ್ಯಾರೆಂಟಿ. ನಾನ್‌ವೆಜ್ ಪ್ರಿಯರು ಟ್ರೈ ಮಾಡಲೇ ಬೇಕಾದ ಸಿಗಡಿ ಚಟ್ನಿಯ ರೆಸಿಪಿ ಇಲ್ಲಿದೆ ನೋಡಿ.

    ಬೇಕಾಗುವ ಪದಾರ್ಥಗಳು:
    * ಎಳೆ ಹಾಗೂ ಒಣ ಸಿಗಡಿ – 1 ಕಪ್
    * ತೆಂಗಿನಕಾಯಿ – 1
    * ಈರುಳ್ಳಿ – 1
    * ಬೆಳ್ಳುಳ್ಳಿ, ಲವಂಗ – 8 ರಿಂದ 10
    * ಅರಿಶಿನ ಪುಡಿ – 4 ಟೀಸ್ಪೂನ್
    * ಕೆಂಪು ಮೆಣಸಿನಕಾಯಿ – 2
    * ಎಣ್ಣೆ – 2 ಟೀಸ್ಪೂನ್
    * ಕರಿಬೇವಿನ ಎಲೆ

    ಮಾಡುವ ವಿಧಾನ:
    * ಎಳೆಯ ಹಾಗೂ ಒಣ ಸಿಗಡಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ತೊಳೆದು ಒಣಗಿಸಿ.
    * ಸಣ್ಣ ಉರಿಯಲ್ಲಿ 1/4 ಟೀಸ್ಪೂನ್ ಅರಿಶಿನ ಪುಡಿಯನ್ನು ತವಾದಲ್ಲಿ ಹಾಕಿ, ಒಂದೆರಡು ನಿಮಿಷಗಳ ಕಾಲ ಸುವಾಸನೆ ಬರುವವರೆಗೂ ಹುರಿಯಿರಿ.
    * ಒಂದು ಪ್ಯಾನ್ ತೆಗೆದುಕೊಂಡು, 1 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ, ಈರುಳ್ಳಿ, ಬೆಳ್ಳುಳ್ಳಿ, ಸ್ವಲ್ಪ ಕರಿಬೇವಿನ ಎಲೆಗಳು, 2 ಕೆಂಪು ಮೆಣಸಿನಕಾಯಿ ಹಾಕಿ ಹುರಿಯಿರಿ. ಈರುಳ್ಳಿ ಮೃದುವಾದ ಮೇಲೆ ಪಕ್ಕಕ್ಕೆ ಸರಿಸಿ.
    * ಹುರಿದ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ, ಅದಕ್ಕೆ 2 ಟೀಸ್ಪೂನ್ ನೀರನ್ನು ಹಾಕಿ ಒರಟಾದ ಪೇಸ್ಟ್ ಆಗುವತನಕ ರುಬ್ಬಿ.
    * ಬಾಣಲೆಗೆ 2 ಟೀಸ್ಪೂನ್ ಎಣ್ಣೆ ಹಾಕಿ, ತೆಂಗಿನ ತುರಿ ಸೇರಿಸಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
    * ಅದಕ್ಕೆ ಹುಣಸೆ ಹಣ್ಣಿನ ರಸ, ರುಬ್ಬಿದ ಮಿಶ್ರಣ, ಹಾಗೂ ಒಣಗಿಸಿದ ಸಿಗಡಿಯನ್ನು ಹಾಕಿ ಮಿಕ್ಸ್ ಮಾಡಿ. ತೇವಾಂಶ ಆರುವವರೆಗೂ ಹುರಿಯಿರಿ.

    – ಇದೀಗ ಒಣ ಸಿಗಡಿ ಚಟ್ನಿ ಸಿದ್ಧವಾಗಿದ್ದು, ಬಿಸಿ ಬಿಸಿ ಗಂಜಿಯೊಂದಿಗೆ ಬಡಿಸಿ, ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ‘ಬೆಂಡೆಕಾಯಿ ಹುಳಿ’ ಮಾಡುವ ವಿಧಾನ

    ‘ಬೆಂಡೆಕಾಯಿ ಹುಳಿ’ ಮಾಡುವ ವಿಧಾನ

    ಬೆಂಡೆಕಾಯಿಯಿಂದ ನಮ್ಮ ದೇಹಕ್ಕೆ ಹಲವು ಉಪಯೋಗಗಳಿವೆ. ಅದಕ್ಕೆ ಹೆಚ್ಚು ಜನರು ಬೆಂಡೆಕಾಯಿಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲಿಯೂ ಬೆಂಡೆಕಾಯಿ ಡ್ರೈ ಪಲ್ಯ ಎಂದರೇ ಎಲ್ಲರಿಗೂ ತುಂಬಾ ಇಷ್ಟ. ಆದರೆ ಇಂದು ನಾವು ಬೆಂಡೆಕಾಯಿ ಹುಳಿಯನ್ನು ಸಿಂಪಲ್ ಆಗಿ ಹೇಗೆ ಮಾಡಬೇಕು ಎಂದು ಹೇಳಿಕೊಡುತ್ತಿದ್ದೇವೆ.

    ಬೇಕಾಗಿರುವ ಪದಾರ್ಥಗಳು
    * ಹುಣಸೆಹಣ್ಣಿನ ಸಾರ – 1ವರೆ ಕಪ್
    * ಬೆಲ್ಲ – 2 ಟೀಸ್ಪೂನ್
    * ಬೆಂಡಕಾಯಿ – 2 ಕಪ್
    * ಹಸಿರು ಮೆಣಸಿನಕಾಯಿ – 3
    * ಅರಿಶಿನ – ಅರ್ಧ ಟೀಸ್ಪೂನ್


    * ಕರಿಬೇವು – ಅರ್ಧ ಕಪ್
    * ಉಪ್ಪು – 1 ಟೀಸ್ಪೂನ್
    * ತೊಗರಿ ಬೇಳೆ – 1ವರೆ ಕಪ್
    * ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್
    ಒಗ್ಗರಣೆಗಾಗಿ:
    * ಎಣ್ಣೆ – 2 ಟೀಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಉದ್ದಿನ ಬೇಳೆ – 1 ಟೀಸ್ಪೂನ್
    * ಕೆಂಪು ಮೆಣಸಿನಕಾಯಿ – 1

    ಮಾಡುವ ವಿಧಾನ:
    * ಮೊದಲನೆಯದಾಗಿ, ದೊಡ್ಡ ಕಡಾಯಿಗೆ ಎಣ್ಣೆ ಸೇರಿಸಿ ಬೆಂಡೆಕಾಯಿ ಹಾಕಿ ಚೆನ್ನಾಗಿ ಅದರ ಅಂಟು ಹೋಗುವವರೆಗೂ ಫ್ರೈ ಮಾಡಿ. ಪಕ್ಕಕ್ಕೆ ಹಿಡಿ.
    * ನಂತರ ಒಂದು ಕಡಾಯಿ ಹುಣಸೆಹಣ್ಣು ಸಾರ, ಬೆಲ್ಲ, ಹಸಿ ಮೆಣಸಿನಕಾಯಿ, ಅರಿಶಿನ, ಕರಿಬೇವಿನ ಎಲೆ ಮತ್ತು ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಅದನ್ನು ಕವರ್ ಮಾಡಿ 10 ನಿಮಿಷಗಳ ಕಾಲ ಕುದಿಸಿ ಚೆನ್ನಾಗಿ ಬೇಯಿಸಿ.
    * ಅದಕ್ಕೆ ತೊಗರಿ ಬೇಳೆ ಒಂದುವರೆ ಕಪ್ ನೀರು ಹೊಂದಾಣಿಕೆ ಆಗುವವರೆಗೂ ಸೇರಿಸಿ 3 ನಿಮಿಷಗಳ ಕಾಲ ಕುದಿಸಿ.
    * ಈಗ ಸಣ್ಣ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ, ಉದ್ದಿನ ಬೇಳೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಒಗ್ಗರಣೆಗೆ ಮಾಡಿ ಅದಕ್ಕೆ ಬೆಂಡೆಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ನಂತರ ಸಾಂಬಾರ್ ಮೇಲೆ ಒಗ್ಗರಣೆ ಸುರಿಯಿರಿ, ಕೊತ್ತಂಬರಿ ಸೊಪ್ಪನ್ನು ಸೇರಿಸಿ.

    – ಅಂತಿಮವಾಗಿ, ಬೆಂಡೆಕಾಯಿ ಹುಳಿಯನ್ನು ಬಿಸಿ ಬಿಸಿ ಅನ್ನದೊಂದಿಗೆ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಹೆಂಗಳೆಯರ ಮನಗೆದ್ದ ʼಗೋಬಿ ಮಂಚೂರಿʼ ಮಾಡುವ ಸಿಂಪಲ್ ವಿಧಾನ

    ಹೆಂಗಳೆಯರ ಮನಗೆದ್ದ ʼಗೋಬಿ ಮಂಚೂರಿʼ ಮಾಡುವ ಸಿಂಪಲ್ ವಿಧಾನ

    ಗೋಬಿ ಎಂದರೇ ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಅದರಲ್ಲಿಯೂ ಯುವಜನತೆಗೆ ಮಾತ್ರ ಗೋಬಿ ಹೆಸರು ಕೇಳಿದ್ರೆ ತಿನ್ನಲೇ ಬೇಕು ಎಂದು ಹಾತೊರೆಯುತ್ತಾರೆ. ‘ಗೋಬಿ ಮಂಚೂರಿ’ ರೆಸಿಪಿ ತುಂಬಾ ಸಿಂಪಲ್ ಆಗಿದ್ದು, ನೀವು ಮನೆಯಲ್ಲಿ ಟ್ರೈ ಮಾಡಬಹುದು. ಅದು ಹೇಗೆ ಎಂದು ಯೋಚನೆ ಮಾಡುತ್ತಿದ್ದೀರಾ, ಈ ಕೆಳಗೆ ಸೂಚಿಸಿದ ರೀತಿ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ನೀರು – 4 ಕಪ್
    * ಉಪ್ಪು – ಅರ್ಧ ಟೀಸ್ಪೂನ್
    * ಕಟ್ ಮಾಡಿದ ಗೋಬಿ/ಹೂಕೋಸು – 20
    * ಮೈದಾ – ಅರ್ಧ ಕಪ್
    * ಕಾರ್ನ್ ಫ್ಲೋರ್ – 2 ಕಪ್
    * ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ನೀರು – 1 ಕಪ್
    * ಎಣ್ಣೆ ಹುರಿಯಲು
    * ರುಚಿಗೆ ತಕ್ಕಷ್ಟು ಉಪ್ಪು

    ಮಂಚೂರಿಯನ್ ಸಾಸ್‍ಗಾಗಿ:
    * ಎಣ್ಣೆ – 4 ಟೀಸ್ಪೂನ್
    * ಕಟ್ ಮಾಡಿದ ಬೆಳ್ಳುಳ್ಳಿ, ಶುಂಠಿ – 2 ಟೀಸ್ಪೂನ್
    * ಹಸಿರು ಮೆಣಸಿನಕಾಯಿ – 1
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಸ್ಪ್ರಿಂಗ್ ಈರುಳ್ಳಿ – 1 ಕಪ್
    * ಕ್ಯಾಪ್ಸಿಕಂ – ಅರ್ಧ ಕಪ್
    * ಟೊಮೆಟೊ ಸಾಸ್ – 2 ಟೇಬಲ್ಸ್ಪೂನ್
    * ಮೆಣಸಿನಕಾಯಿ ಸಾಸ್ – 1 ಟೀಸ್ಪೂನ್
    * ವಿನೆಗರ್ – 2 ಟೀಸ್ಪೂನ್
    * ಸೋಯಾ ಸಾಸ್ – 2 ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲನೆಯದಾಗಿ, ಒಂದು ದೊಡ್ಡ ಪಾತ್ರೆಯಲ್ಲಿ 4 ಕಪ್ ನೀರನ್ನು ತೆಗೆದುಕೊಂಡು ಉಪ್ಪು ಸೇರಿಸಿ ಕುದಿಸಿ.
    * ನೀರು ಕುದಿಯಲು ಬಂದ ನಂತರ ಕಟ್ ಮಾಡಿದ ಗೋಬಿ ಹಾಕಿ 2 ನಿಮಿಷ ಕುದಿಸಿ.
    * ಗೋಬಿ ಬೇಯಿಸಿದ ಮೇಲೆ ನೀರನ್ನು ಸುರಿದು ತಣ್ಣಗಾಗಲು ಬಿಡಿ. ಈಗ ಮೈದಾ ಮತ್ತು ಕಾರ್ನ್‍ನ್ನು ಬಟ್ಟಲಿಗೆ ಹಾಕಿ ಹಿಟ್ಟುನ್ನು ತಯಾರಿಸಿ. ಅದಕ್ಕೆ ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ. ಯಾವುದೇ ರೀತಿಯ ಗಟ್ಟಾಗದಂತೆ ಹಿಟ್ಟು ತಯಾರಿಸಿ.
    * ಈ ಮಿಶ್ರಣಕ್ಕೆ ಗೋಬಿ ಸೇರಿಸಿ ಸಂಪೂರ್ಣವಾಗಿ ಮಿಶ್ರಣ ಮಾಡಿ. ನಂತರ ಇದನ್ನು ನಿಂಬೆ ಹಣ್ಣಿನ ಗಾತ್ರದಲ್ಲಿ ಉಂಡೆ ಮಾಡಿಟ್ಟುಕೊಳ್ಳಿ.


    * ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಗೋಬಿ ಮಿಶ್ರಣವನ್ನು ಡೀಪ್ ಫ್ರೈ ಮಾಡಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ಮೊದಲನೆಯದಾಗಿ, ದೊಡ್ಡ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಲವಂಗ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ಸರಿಯಾಗಿ ಫ್ರೈ ಮಾಡಿ.
    * ಅದಕ್ಕೆ ಈರುಳ್ಳಿ ಮತ್ತು ಸ್ಪ್ರಿಂಗ್ ಈರುಳ್ಳಿ, ಕ್ಯಾಪ್ಸಿಕಂ ಸೇರಿಸಿ 5 ನಿಮಿಷ ಉರಿಯಿರಿ.
    * ಟೊಮೆಟೊ ಸಾಸ್, ಮೆಣಸಿನಕಾಯಿ ಸಾಸ್, ವಿನೆಗರ್, ಸೋಯಾ ಸಾಸ್, ಪೆಪರ್ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಒಂದು ನಿಮಿಷ ಬೇಯಿಸಿ.
    * ಕಾರ್ನ್ ಫ್ಲೊರ್‌ ಸ್ವಲ್ಪ ಹಾಕಿ ಗ್ರೇವಿ ಸ್ವಲ್ಪ ಗಟ್ಟಿಯಾಗುವವರೆಗೂ ಫ್ರೈ ಮಾಡಿ. ಇದಕ್ಕೆ ಹುರಿದ ಗೋಬಿಯನ್ನು ಸೇರಿಸಿ. ಸಾಸ್ ಚೆನ್ನಾಗಿ ಮಿಶ್ರಣ ಮಾಡಿ.


    – ಅಂತಿಮವಾಗಿ, ಗೋಬಿ ಮಂಚೂರಿಯನ್‍ಯನ್ನು ಸರ್ವಿಂಗ್ ಬೌಲ್‍ಗೆ ವರ್ಗಾಯಿಸಿ, ಕತ್ತರಿಸಿದ ಸ್ಪ್ರಿಂಗ್ ಈರುಳ್ಳಿಯಿಂದ ಅಲಂಕರಿಸಿ ಸರ್ವ್ ಮಾಡಿ.

    Live Tv
    [brid partner=56869869 player=32851 video=960834 autoplay=true]

  • ನಾನ್‍ವೆಜ್ ಪ್ರಿಯರ ಆಲ್‍ಟೈಮ್ ಫೇವರೆಟ್ ‘ಕುಷ್ಕಾ’ ಮಾಡುವ ರೆಸಿಪಿ

    ನಾನ್‍ವೆಜ್ ಪ್ರಿಯರ ಆಲ್‍ಟೈಮ್ ಫೇವರೆಟ್ ‘ಕುಷ್ಕಾ’ ಮಾಡುವ ರೆಸಿಪಿ

    ನಾನ್‍ವೆಜ್ ಪ್ರಿಯರಿಗೆ ಕುಷ್ಕಾ ಮಾಡುವ ವಿಧಾನ ತುಂಬಾ ಸುಲಭವಾಗಿದೆ. ಇದು ಎಲ್ಲ ನಾನ್‍ವೆಜ್ ಪ್ರಿಯರಿಗೆ ತುಂಬಾ ಇಷ್ಟವಾದ ಪಾಕವಿಧಾನವಾಗಿದೆ. ‘ಕುಷ್ಕಾ’ ತಿನ್ನಲು ಇಷ್ಟಪಡದವರೂ ಸಹ ಇಂದು ನಾವು ಹೇಳಿಕೊಡುವ ರೆಸಿಪಿ ಮಾಡಿ ಸವಿದ್ರೆ, ಇಷ್ಟಪಡುತ್ತಾರೆ.

    ಬೇಕಾಗಿರುವ ಪದಾರ್ಥಗಳು:
    * ಬಾಸ್ಮತಿ ಅಕ್ಕಿ – 1 ಕಪ್
    * ನೀರು – 2 ಕಪ್
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಕಟ್ ಮಾಡಿದ ಟೊಮೆಟೊ – ಅರ್ಧ ಕಪ್


    * ಹಸಿರು ಮೆಣಸಿನಕಾಯಿ – 1
    * ಎಣ್ಣೆ – 2 ಟೀಸ್ಪೂನ್
    * ದಾಲ್ಚಿನ್ನಿ – 1
    * ಲವಂಗ – 4
    * ಏಲಕ್ಕಿ – 3
    * ಮೊಸರು – 2 ಟೀಸ್ಪೂನ್
    * ರೆಡ್ ಚಿಲ್ಲಿ ಪೌಡರ್ – 2 ಟೀಸ್ಪೂನ್


    * ಅರಿಶಿನ ಪುಡಿ – 1 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    * ಪುದೀನ ಸೊಪ್ಪು – 1 ಕಪ್
    * ಅಗತ್ಯವಿರುವಷ್ಟು ಉಪ್ಪು
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    * ಹಸಿರು ಮೆಣಸಿನಕಾಯಿ – 2

    ಮಾಡುವ ವಿಧಾನ:
    * ಬಾಸ್ಮತಿ ಅಕ್ಕಿಯನ್ನು 2 ಕಪ್ ನೀರಿನಲ್ಲಿ ತೊಳೆದು 15-20 ನಿಮಿಷಗಳ ಕಾಲ ನೆನೆಸಿಡಿ. ಕುಷ್ಕಾ ಮಸಾಲಾ ಪೇಸ್ಟ್‌ಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ, ದಾಲ್ಚಿನ್ನಿ, ಏಲಕ್ಕಿ, ಲವಂಗ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ರೆಡಿ ಮಾಡಿಕೊಳ್ಳಿ.
    * ಬಾಣಲೆ ಬಿಸಿ ಮಾಡಿ ಎಣ್ಣೆ ಹಾಕಿ. ಮೆಂತ್ಯ ಎಲೆ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಫ್ರೈ ಮಾಡಿ.
    * ನಂತರ ಕಟ್ ಮಾಡಿದ ಈರುಳ್ಳಿ, ಟೊಮೆಟೊ ಜೊತೆಗೆ ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಫ್ರೈ ಮಾಡಿ.
    * ಮಸಾಲಾ ಮಿಶ್ರಣವನ್ನು ಪೇಸ್ಟ್ ಅನ್ನು ಹಾಕಿ, ಹಸಿ ವಾಸನೆ ಹೋಗುವವರೆಗೆ ಕೆಲವು ನಿಮಿಷಗಳ ಕಾಲ ಫ್ರೈ ಮಾಡಿ.
    * ನಂತರ ಅದಕ್ಕೆ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಅಗತ್ಯಕ್ಕೆ ಉಪ್ಪು ಸೇರಿಸಿ. 2-3 ನಿಮಿಷಗಳ ಕಾಲ ಫ್ರೈ ಮಾಡಿ.
    * ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಒಂದೆರಡು ನಿಮಿಷ ಬೇಯಿಸಿ. ಈಗ ಸಣ್ಣಗೆ ಕತ್ತರಿಸಿದ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಫ್ರೈ ಮಾಡಿ.

    * ನಂತರ ನೆನೆಸಿದ ಬಾಸ್ಮತಿ ಅಕ್ಕಿಯಿಂದ ನೀರನ್ನು ಸುರಿಯಿರಿ ಮತ್ತು ಅಗತ್ಯವಿದ್ದರೆ ಉಪ್ಪನ್ನು ಹಾಕಿ. ನೀರು ಕುದಿಯಲು ಪ್ರಾರಂಭಿಸಿದಾಗ, ನೆನೆಸಿದ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
    * ಪ್ಯಾನ್ ಅನ್ನು ಮುಚ್ಚಳದಿಂದ ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ 12-15 ನಿಮಿಷ ಬೇಯಿಸಿ.
    * ಶಾಖವನ್ನು ಆಫ್ ಮಾಡಿ ಮತ್ತು ಅದನ್ನು ತೆರೆಯುವ ಮೊದಲು 5-10 ನಿಮಿಷಗಳ ಕಾಲ ಬಿಡಿ.

    – ಕುಷ್ಕಾ ಈಗ ಸವಿಯಲು ಸಿದ್ಧವಾಗಿದ್ದು, ಈರುಳ್ಳಿ ಮತ್ತು ರೈಯಿತಾ ಜೊತೆಗೆ ಬಿಸಿಯಾಗಿ ಬಡಿಸಿ.

    Live Tv
    [brid partner=56869869 player=32851 video=960834 autoplay=true]

  • ದೇವಸ್ಥಾನದ ಶೈಲಿಯಲ್ಲಿ ಮಾಡಿ ‘ತರಕಾರಿ ಸಾಂಬಾರ್’ ಮಾಡುವ ವಿಧಾನ

    ದೇವಸ್ಥಾನದ ಶೈಲಿಯಲ್ಲಿ ಮಾಡಿ ‘ತರಕಾರಿ ಸಾಂಬಾರ್’ ಮಾಡುವ ವಿಧಾನ

    ನೆಯಲ್ಲಿ ವಾರಕ್ಕೆ ಒಮ್ಮೆಯಾದರೂ ‘ತರಕಾರಿ ಸಾಂಬಾರ್’ ಮಾಡುತ್ತಿರುತ್ತೇವೆ. ಆದರೆ ನಾವು ದೇವಸ್ಥಾನಕ್ಕೆ ಹೋದಾಗ ಸಿಗುವ ಪ್ರಸಾದದ ಟೇಸ್ಟ್ ಬರುವುದು ಕಷ್ಟ. ಅದಕ್ಕೆ ಕೆಲವೊಮ್ಮೆ ನಾವು ‘ತರಕಾರಿ ಸಾಂಬಾರ್’ ಊಟ ಮಾಡಬೇಕಾದ್ರೆ ದೇವಸ್ಥಾನದ ಟೇಸ್ಟ್ ಬರುವುದಿಲ್ಲ ಎಂದು ಹೇಳುತ್ತಿರುತ್ತೇವೆ. ಅದಕ್ಕೆ ಇಂದು ನಿಮಗೆ ಸಿಂಪಲ್ ಆಗಿ ಹೇಗೆ ದೇವಸ್ಥಾನದ ಮಾದರಿಯಲ್ಲಿ ಸಾಂಬಾರ್ ಮಾಡಬಹುದು ಎಂದು ಹೇಳಿಕೊಡುತ್ತೇವೆ. ಇದೇ ರೀತಿ ಫಾಲೋ ಮಾಡಿ.

    ಬೇಕಾಗಿರುವ ಪದಾರ್ಥಗಳು:
    ಮಸಾಲೆಗೆ:
    * ಎಣ್ಣೆ – 2 ಟೀಸ್ಪೂನ್
    * ದಾನಿಯಾ ಬೀಜ – 1 ಟೇಬಲ್ಸ್ಪೂನ್
    * ಜೀರಿಗೆ – ಅರ್ಧ ಟೇಬಲ್ಸ್ಪೂನ್
    * ಕಡ್ಲೆ ಬೇಳೆ – 1 ಟೇಬಲ್ಸ್ಪೂನ್
    * ಉದ್ದಿನ ಬೇಳೆ – 1 ಟೇಬಲ್ಸ್ಪೂನ್
    * ಮೆಂತ್ಯ – 1 ಟೇಬಲ್ಸ್ಪೂನ್
    * ಕರಿಬೇವಿನ ಎಲೆ – 5 ರಿಂದ 10
    * ಒಣಗಿದ ಕೆಂಪು ಮೆಣಸಿನಕಾಯಿ – 4
    * ತುರಿದ ತೆಂಗಿನಕಾಯಿ – 1 ಕಪ್
    * ನೀರು – ಅರ್ಧ ಕಪ್


    ಸಾಂಬಾರಿಗೆ:
    * ಎಣ್ಣೆ – 2 ಟೇಬಲ್ಸ್ಪೂನ್
    * ಕಟ್ ಮಾಡಿದ ಸೋರೆಕಾಯಿ – 1 ಕಪ್
    * ಸಿಹಿ ಕುಂಬಳಕಾಯಿ ಹೋಳು – ಅರ್ಧ ಕಪ್
    * ಬೀನ್ಸ್ – 5
    * ಕಟ್ ಮಾಡಿದ ಟೊಮೆಟೊ – 1 ಕಪ್
    * ನುಗ್ಗೆ ಕಾಯಿ – 1
    * ಬದನೆಕಾಯಿ – 2
    * ನೀರು – 5 ಕಪ್
    * ಅರಿಶಿನ – ಅರ್ಧ ಟೀಸ್ಪೂನ್
    * ಬೆಲ್ಲ – ಅರ್ಧ ಟೀಸ್ಪೂನ್
    * ಹುಣಸೆಹಣ್ಣಿನ ಸಾರ – ಅರ್ಧ ಕಪ್
    * ಉಪ್ಪು – 1 ಟೀಸ್ಪೂನ್
    * ತೊಗರಿ ಬೇಳೆ – 1 ಕಪ್
    ಒಗ್ಗರಣೆಗಾಗಿ:
    * ಎಣ್ಣೆ – 3 ಟೀಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಒಣಗಿದ ಕೆಂಪು ಮೆಣಸಿನಕಾಯಿ – 2
    * ಕರಿಬೇವಿನ ಎಲೆಗಳು – 5 ರಿಂದ 8

    ಮಾಡುವ ವಿಧಾನ:
    ಸಾಂಬಾರ್ ಮಸಾಲ ತಯಾರಿಕೆ:
    * ಮೊದಲನೆಯದಾಗಿ, ಗ್ಯಾಸ್ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ದಾನಿಯಾ ಬೀಜ, ಜೀರಿಗೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಮೇಥಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಮಸಾಲೆಗಳು ಗೋಲ್ಡನ್ ಬ್ರೌನ್ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಈಗ ಕರಿಬೇವಿನ ಎಲೆಗಳು, ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ. ಮಸಾಲೆಗಳು ಪರಿಮಳ ಆಗುವವರೆಗೆ ಹುರಿಯಿರಿ. ಸಂಪೂರ್ಣವಾಗಿ ತಣ್ಣಗಾದ ಮೇಲೆ ಮಿಕ್ಸರ್‍ಗೆ ಹಾಕಿ ತೆಂಗಿನಕಾಯಿ ಹಾಕಿ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಪಕ್ಕಕ್ಕೆ ಇರಿಸಿ. ಇಲ್ಲಿಗೆ ಸಾಂಬಾರ್ ಮಸಾಲ ರೆಡಿಯಾಗುತ್ತೆ.


    * ನಂತರ ದೊಡ್ಡ ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ಸೋರೆಕಾಯಿ, ಸಿಹಿ ಕುಂಬಳಕಾಯಿ, ಬೀನ್ಸ್, ಟೊಮೆಟೊ, ನುಗ್ಗೆಕಾಯಿ ಮತ್ತು 2 ಬದನೆಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ತರಕಾರಿಗಳು ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಈಗ ನೀರು, ಕರಿಬೇವಿನ ಎಲೆಗಳು, ಅರಿಶಿನ ಮತ್ತು ಬೆಲ್ಲ ಸೇರಿಸಿ 10 ನಿಮಿಷ ಫ್ರೈ ಮಾಡಿ. ತರಕಾರಿಗಳನ್ನು ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ.
    * ಅದಕ್ಕೆ ಹುಣಸೆಹಣ್ಣು ರಸ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ. 2 ನಿಮಿಷ ಅಥವಾ ಹುಣಸೆಹಣ್ಣಿನ ಹಸಿ ವಾಸನೆ ಹೋಗುವವರೆಗೆ ಕುದಿಸಿ. 1 ಕಪ್ ಬೇಯಿಸಿದ ತೊಗರೆ ಬೇಳೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 2 ನಿಮಿಷಗಳ ಕಾಲ ಅಥವಾ ಎಲ್ಲವನ್ನೂ ಚೆನ್ನಾಗಿ ಕುದಿಸಿ.
    * ಈಗ ತಯಾರಾದ ಮಸಾಲೆ ಪೇಸ್‍ನ್ನು ಸೇರಿಸಿ ಚೆನ್ನಾಗಿ ಬೆರೆಸಿ. 4-5 ನಿಮಿಷ ಅಥವಾ ತೆಂಗಿನಕಾಯಿ ಹಸಿ ಪರಿಮಳ ಹೋಗುವವರೆಗೆ ಕುದಿಸಿ.
    * ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳು ಸೇರಿಸಿ ಒಗ್ಗರಣೆ ತಯಾರಿಸಿ

    – ಅಂತಿಮವಾಗಿ, ಬಿಸಿ ಅನ್ನದೊಂದಿಗೆ ಈ ದೇವಾಲಯದ ಶೈಲಿಯ ಸಾಂಬಾರ್ ಅನ್ನು ಆನಂದಿಸಿ.

    Live Tv
    [brid partner=56869869 player=32851 video=960834 autoplay=true]

  • ಯಾರಿಗೆ ಬೇಕು ‘ಚಿಕನ್ ಕಥಿ ರೋಲ್’ – ಮನೆಯಲ್ಲಿ ಟ್ರೈ ಮಾಡಿ

    ಯಾರಿಗೆ ಬೇಕು ‘ಚಿಕನ್ ಕಥಿ ರೋಲ್’ – ಮನೆಯಲ್ಲಿ ಟ್ರೈ ಮಾಡಿ

    ಚಿಕನ್ ಎಂದು ಹೆಸರು ಕೇಳಿದರೆ ನಾನ್‍ವೆಜ್ ಪ್ರಿಯರ ಬಾಯಲ್ಲಿ ನೀರು ಬರುತ್ತೆ. ಮಟನ್‍ಗಿಂತ ಹೆಚ್ಚು ನಾನ್‍ವೆಜ್ ಪ್ರಿಯರು ಚಿಕನ್ ತಿನ್ನುತ್ತಾರೆ. ಅದರಲ್ಲಿಯೂ ಇತ್ತೀಚೆಗೆ ಹೆಚ್ಚು ಫೇಮಸ್ ಆಗಿರುವ ‘ಚಿಕನ್ ಕಥಿ ರೋಲ್’ ಚಿಕ್ಕವರಿಂದ ದೊಡ್ಡವರ ತನಕ ಇಷ್ಟಪಟ್ಟು ತಿನ್ನುತ್ತಾರೆ. ಅದಕ್ಕೆ ಇಂದು ನೀವು ಮನೆಯಲ್ಲಿ ಹೇಗೆ ‘ಚಿಕನ್ ಕಥಿ ರೋಲ್’ ಮಾಡಬಹುದು ಎಂದು ಹೇಳಿಕೊಡುತ್ತೇವೆ.

    ಬೇಕಾಗಿರುವ ವಿಧಾನ:
    * ಮೊಸರು – 2 ಟೇಬಲ್ಸ್ಪೂನ್
    * ಕಟ್ ಮಾಡಿದ ಶುಂಠಿ – 2 ಟೀಸ್ಪೂನ್
    * ಕಟ್ ಮಾಡಿದ ಬೆಳ್ಳುಳ್ಳಿ, ಲವಂಗ – 2 ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್
    * ಅರಿಶಿನ – ಅರ್ಧ ಟೀಸ್ಪೂನ್

    * ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    * ಗರಂ ಮಸಾಲಾ – 1 ಟೀಸ್ಪೂನ್
    * ಕಸೂರಿ ಮೆಂತ್ಯ – 1 ಟೀಸ್ಪೂನ್
    * ತಾಜಾ ನಿಂಬೆ ರಸ – 1 ಟೀಸ್ಪೂನ್
    * ಬೋನ್‍ಲೆಸ್ ಚಿಕನ್- 1 ಕಪ್
    * ಆಲಿವ್ ಎಣ್ಣೆ – 2 ಟೀಸ್ಪೂನ್
    * ಕೆಂಪು ಮೆಣಸು – 1 ಟೀಸ್ಪೂನ್
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಹಸಿರು ಚಟ್ನಿ ಅಥವಾ ಪುದೀನ ಚಟ್ನಿ – 2 ಟೀಸ್ಪೂನ್
    * ದೊಡ್ಡ ಮೊಟ್ಟೆ – 1
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ದೊಡ್ಡ ಬಾಣಲೆಗೆ ಮೊಸರು, ಕಟ್ ಮಾಡಿದ ಶುಂಠಿ, ಬೆಳ್ಳುಳ್ಳಿ, ಲವಂಗ, ಉಪ್ಪು, ಅರಿಶಿನ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ, ಕಸೂರಿ ಮೆಂತ್ಯ, ತಾಜಾ ನಿಂಬೆ ರಸ ಕೊನೆ ಬೋನ್‍ಲೆಸ್ ಚಿಕನ್ ಬೆರೆಸಿ ಚೆನ್ನಾಗಿ ಫ್ರೈ ಮಾಡಿ. ಪಕ್ಕಕ್ಕಿಡಿ.
    * ಕಟ್ ಮಾಡಿದ ಈರುಳ್ಳಿಯನ್ನು ಉಪ್ಪು, ಕೆಂಪು ಮೆಣಸಿನಕಾಯಿ ಮತ್ತು ನಿಂಬೆ ರಸದೊಂದಿಗೆ ಟ್ರೈ ಮಾಡಿ ಮತ್ತು ನಂತರ ಪಕ್ಕಕ್ಕೆ ಇರಿಸಿ. ಮಧ್ಯಮ ಉರಿಯಲ್ಲಿ ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
    * ಕಟ್ ಮಾಡಿದ ಈರುಳ್ಳಿ, ಮೆಣಸು ಸೇರಿಸಿ ಮತ್ತು 3 ನಿಮಿಷಗಳ ಕಾಲ ಹುರಿಯಿರಿ, ಅವು ಸ್ವಲ್ಪ ಮೃದುವಾಗಲು ಪ್ರಾರಂಭವಾಗುತ್ತವೆ. ನಂತರ ಮಸಾಲೆಯುಕ್ತ ಚಿಕನ್ ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ. ಬಾಣಲೆಯನ್ನು ಮುಚ್ಚಿ 5 ನಿಮಿಷ ಬೇಯಿಸಿ. ಕಟ್ ಮಾಡಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿ.


    * ಅಂಗಡಿಯಲ್ಲಿ ಸಿಗುವ ಪರಾಠವನ್ನು ತೆಗೆದುಕೊಂಡು ಬಂದು ಅದಕ್ಕೆ ಆಲಿವ್ ಎಣ್ಣೆಯಾಕಿ ತವ ಮೇಲೆ ಬೇಯಿಸಿ. ತಿಳಿ ಕಂದು ಬಣ್ಣ ಬರುವವರೆಗೆ 2 ನಿಮಿಷ ಬೇಯಿಸಿ.
    * ನಂತರ ಅದರ ಮೇಲೆ ಮೊಟ್ಟೆಯನ್ನು ಹಾಕಿ ಅದನ್ನು ಫ್ರೈ ಮಾಡಿ 30 ಸೆಕೆಂಡುಗಳ ಕಾಲ ಬೇಯಿಸಿ.
    * ನಂತರ ಅದಕ್ಕೆ ಹಸಿರು ಚಟ್ನಿಯನ್ನು ಹರಡಿ. ಮಧ್ಯದಲ್ಲಿ ಸುಮಾರು ಚಿಕನ್ ಮಿಶ್ರಣವನ್ನು ಹಾಕಿ ಈರುಳ್ಳಿ, ಕೊತ್ತಂಬರಿ, ಟೊಮೆಟೊ ಸಾಸ್ ಹಾಕಿ ಪರಾಠವನ್ನು ರೂಲ್ ಮಾಡಿ.

    – ‘ಚಿಕನ್ ಕಥಿ ರೋಲ್’ ಸವಿಯಲು ಸಿದ್ಧವಾಗಿದ್ದು, ಟೊಮೆಟೊ ಕೆಚಪ್ ಜೊತೆ ಬಡಿಸಿ.

    Live Tv
    [brid partner=56869869 player=32851 video=960834 autoplay=true]

  • ಹೆಚ್ಚು ಪ್ರೋಟೀನ್ ಇರುವ ‘ಸೋಯಾ ಕರಿ’ ಮಾಡುವ ರೆಸಿಪಿ

    ಹೆಚ್ಚು ಪ್ರೋಟೀನ್ ಇರುವ ‘ಸೋಯಾ ಕರಿ’ ಮಾಡುವ ರೆಸಿಪಿ

    ಸೋಯಾದಲ್ಲಿ ಹೆಚ್ಚು ಪ್ರೋಟೀನ್ ಇದ್ದು, ಜನರಿಗೆ ಬೇಕಾದ ಪೋಷಕಾಂಶವನ್ನು ಉತ್ತಮವಾಗಿ ನೀಡುತ್ತೆ. ಅದಕ್ಕೆ ಇಂದು ಆರೋಗ್ಯಕ್ಕೂ ಒಳ್ಳೆಯದು ಮತ್ತು ಬಾಯಿ ರುಚಿಗೂ ಸಿಗಬೇಕು ಎಂದು ‘ಸೋಯಾ ಕರಿ’ ಮಾಡುವುದನ್ನು ಹೇಳಿಕೊಡುತ್ತಿದ್ದೇವೆ. ಈ ವಿಧಾನವನ್ನು ಓದಿ ಹೇಗೆ ‘ಸೋಯಾ ಕರಿ’ ಮಾಡಬಹುದು ಎಂದು ತಿಳಿದುಕೊಳ್ಳಿ.

    ಬೇಕಾಗಿರುವ ಪದಾರ್ಥಗಳು:
    * ಸೋಯಾ – 2 ಕಪ್
    * ಸಾಸಿವೆ ಎಣ್ಣೆ – ಅರ್ಧ ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ರುಚುಗೆ ತಕ್ಕಷ್ಟು ಉಪ್ಪು
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಕಟ್ ಮಾಡಿದ ಟೊಮೆಟೊ – 1 ಕಪ್
    * ಹಸಿರು ಮೆಣಸಿನಕಾಯಿ – 2
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್


    ಮಸಾಲೆಗಳು:
    * ಕೆಂಪುಮೆಣಸು – 1 ಟೀಸ್ಪೂನ್
    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ಜೀರಿಗೆ ಪುಡಿ – 1 ಟೀಸ್ಪೂನ್
    * ದಾನಿಯಾ ಪುಡಿ – 1 ಟೀಸ್ಪೂನ್
    * ಗರಂ ಮಸಾಲಾ – ಅರ್ಧ ಟೀಸ್ಪೂನ್

    ಮಾಡುವ ವಿಧಾನ:
    * ಸೋಯಾ ಬೀನ್ಸ್‍ಗಳನ್ನು ಬಿಸಿ ನೀರಿನಲ್ಲಿ 15 ನಿಮಿಷಗಳ ಕಾಲ ಮುಚ್ಚಿಡಿ. ನಂತರ ಸೋಯಾ ಬೀನ್ಸ್ ಸೋಸಿ ತಣ್ಣಗಾಗುವವರೆಗೂ ಬಿಡಿ. ಸೋಯಾದಲ್ಲಿರುವ ನೀರನ್ನು ಸಂಪೂರ್ಣವಾಗಿ ಹಿಂಡಿ. ಪಕ್ಕಕ್ಕೆ ಹಿಡಿ.
    * ಒಂದು ಜಾರಿಗೆ ಕಟ್ ಮಾಡಿದ ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿಗಳು, ಶುಂಠಿ, ಬೆಳ್ಳುಳ್ಳಿ ಪೇಸ್ಟ್‍ಗಳನ್ನು ಹಾಕಿ ನಯವಾದ ಪೇಸ್ಟ್ ಮಾಡಿ.
    * ಗ್ಯಾಸ್ ಮೇಲೆ ಬಾಣಲೆಯನ್ನು ಇಟ್ಟು ಅದಕ್ಕೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಮಸಾಲಾ ಪೇಸ್ಟ್ ನಿಧಾನವಾಗಿ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.


    * ನಂತರ ಅದಕ್ಕೆ ಕೆಂಪುಮೆಣಸು, ಅರಿಶಿನ ಪುಡಿ, ಜೀರಿಗೆ ಪುಡಿ, ದಾನಿಯಾ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಫ್ರೈ ಮಾಡಿ. ನಂತರ ಎಣ್ಣೆಯು ಪಾತ್ರೆಯ ಬದಿಗಳನ್ನು ಬಿಡುವವರೆಗೆ ಚೆನ್ನಾಗಿ ಫ್ರೈ ಮಾಡಿ.
    * ಈಗ, ನೆನೆಸಿದ ಮತ್ತು ಹಿಂಡಿದ ಸೋಯಾ ತುಂಡುಗಳನ್ನು ಮಸಾಲೆಯೊಂದಿಗೆ ಮಿಕ್ಸ್ ಮಾಡಿ ಸುಮಾರು 2-3 ನಿಮಿಷಗಳ ಕಾಲ ಎಲ್ಲವನ್ನೂ ಫ್ರೈ ಮಾಡಿ.
    * ಅದಕ್ಕೆ 1.5 ಕಪ್ ನೀರನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಫ್ರೈ ಮಾಡಿ. 5 ನಿಮಿಷ ಬಿಡಿ.

    – ಕೊನೆಗೆ ಕಟ್ ಮಾಡಿದ ಕೊತ್ತಂಬರಿ ಸೊಪ್ಪಿನಿಂದ ಸೋಯಾ ಕರಿ ಅಲಂಕರಿಸಿ. ಬಿಸಿಯಾಗಿ ಬಡಿಸಿ. ಆನಂದಿಸಿ!

    Live Tv
    [brid partner=56869869 player=32851 video=960834 autoplay=true]