Tag: recipe

  • ಮೂರೇ ಪದಾರ್ಥದಲ್ಲಿ ಮಾಡಿ ಸಖತ್ ಟೇಸ್ಟಿ ಪೀನಟ್ ಬಟರ್ ಕುಕೀಸ್

    ಮೂರೇ ಪದಾರ್ಥದಲ್ಲಿ ಮಾಡಿ ಸಖತ್ ಟೇಸ್ಟಿ ಪೀನಟ್ ಬಟರ್ ಕುಕೀಸ್

    ಕೇವಲ 3 ಪದಾರ್ಥಗಳನ್ನು ಬಳಸಿ ನೀವು ಕೂಡಾ ಕುಕೀಸ್ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಟೀ ಟೈಮ್‌ನಲ್ಲಿ ಸವಿಯಲು ಪರ್ಫೆಕ್ ಆದ ಪೀನಟ್ ಬಟರ್ ಕುಕೀಸ್ ಎಷ್ಟು ರುಚಿಕರವೋ ಮಾಡುವುದು ಕೂಡಾ ಅಷ್ಟೇ ಸುಲಭ. ಕೇವಲ ಅರ್ಧ ಗಂಟೆಯಲ್ಲಿ ಮಾಡಬಹುದಾದ ಪೀನಟ್ ಬಟರ್ ಕುಕೀಸ್ ರೆಸಿಪಿ ನೋಡಿ ನೀವು ಕೂಡಾ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಪೀನಟ್ ಬಟರ್ – 1 ಕಪ್
    ಸಕ್ಕರೆ ಪುಡಿ – ಅರ್ಧ ಕಪ್(ರೋಲಿಂಗ್‌ಗೆ ಇನ್ನಷ್ಟು ಬೇಕಾಗಬಹುದು)
    ಮೊಟ್ಟೆ – 1

    ಮಾಡುವ ವಿಧಾನ:
    * ಓವನ್ ಅನ್ನು ಮೊದಲೇ 350 ಡಿಗ್ರಿಯಲ್ಲಿ ಕಾಯಿಸಿ. ಬೇಕಿಂಗ್ ಶೀಟ್ ಅನ್ನು ಟ್ರೇಗೆ ಜೋಡಿಸಿ ಪಕ್ಕಕ್ಕಿಡಿ.
    * ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಪೀನಟ್ ಬಟರ್, ಸಕ್ಕರೆ ಪುಡಿ ಹಾಗೂ ಮೊಟ್ಟೆ ಒಡೆದು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.
    * ಹಿಟ್ಟು ಸ್ವಲ್ಪ ಗಟ್ಟಿಯಾಗಬೇಕು ಎನಿಸಿದರೆ, 10-20 ನಿಮಿಷಗಳ ಕಾಲ ಫ್ರಿಡ್ಜ್ನಲ್ಲಿಡಬಹುದು.
    * ಬಳಿಕ ಹಿಟ್ಟನ್ನು ಸಣ್ಣನೆಯ ಉಂಡೆಗಳಾಗಿ ಮಾಡಿ, ಸಕ್ಕರೆ ಪುಡಿಯಲ್ಲಿ ಅದ್ದಿ, ಕುಕೀಸ್ ಶೇಪ್‌ನಲ್ಲಿ ರೋಲ್ ಮಾಡಿ. ಬೇಕೆಂದರೆ ಫೋರ್ಕ್ ಬಳಸಿ ಅವುಗಳ ಮೇಲೆ ವಿನ್ಯಾಸ ರಚಿಸಬಹುದು.
    * ಬಳಿಕ ಅವುಗಳನ್ನು ಟ್ರೇಗೆ ಜೋಡಿಸಿದ ಬೇಕಿಂಗ್ ಶೀಟ್‌ನಲ್ಲಿಟ್ಟು, ಓವನ್‌ನಲ್ಲಿ ಬೇಯಿಸಿ.
    * 8-10 ನಿಮಿಷಗಳ ಬಳಿಕ ಕುಕೀಸ್ ತಳಭಾಗ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುತ್ತದೆ. ಬಳಿಕ ಅದನ್ನು ಓವನ್‌ನಿಂದ ತೆಗೆದು 2 ನಿಮಿಷಗಳ ಕಾಲ ಆರಲು ಬಿಡಿ.
    * ಪೀನಟ್ ಬಟರ್ ಕುಕೀಸ್ ಇದೀಗ ತಯಾರಾಗಿದ್ದು, ಟೀ ಯೊಂದಿಗೆ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಟೊಮೆಟೊ ಬಿರಿಯಾನಿ ಒಂದ್ಸಲ ಮಾಡಿ ನೋಡಿ

    ಟೊಮೆಟೊ ಬಿರಿಯಾನಿ ಒಂದ್ಸಲ ಮಾಡಿ ನೋಡಿ

    ಬಿರಿಯಾನಿ ತಿನ್ನಬೇಕು ಅಂತ ಹಲವರಿಗೆ ಆಗಾಗ ಅನ್ನಿಸುತ್ತಲೇ ಇರುತ್ತೆ. ಆದರೆ ಕೆಲವೊಮ್ಮೆ ನಾನ್‌ವೆಜ್ ತಿನ್ನಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಬಿರಿಯಾನಿ ಮಾಡಲು ವೆಜ್ ಆಯ್ಕೆಯನ್ನೇ ಮಾಡಿಕೊಳ್ಳಬೇಕಾಗುತ್ತದೆ. ಈ ಸಂದರ್ಭ ಮಶ್ರೂಮ್, ಪನೀರ್ ನಿಮ್ಮ ತಲೆಯಲ್ಲಿ ಹೊಳೆಯಬಹುದು. ಆದರೆ ಅದಾವುದೂ ನಿಮ್ಮ ಮನೆಯಲ್ಲಿ ಇಲ್ಲದೇ ಹೋದಾಗ ಟೊಮೆಟೊ ಬಳಸಿಯೇ ಬಿರಿಯಾನಿ ಮಾಡಿ ನೋಡಿ. ಟೊಮೆಟೊ ಬಿರಿಯಾನಿ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ತುಪ್ಪ – 1 ಟೀಸ್ಪೂನ್
    ಲವಂಗ – 5
    ದಾಲ್ಚಿನ್ನಿ – 1 ಇಂಚು
    ಏಲಕ್ಕಿ – 2
    ಜೀರಿಗೆ – 1 ಟೀಸ್ಪೂನ್
    ಸೋಂಪು – ಅರ್ಧ ಟೀಸ್ಪೂನ್
    ಸಣ್ಣಗೆ ಕತ್ತರಿಸಿದ ಈರುಳ್ಳಿ – 1
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಹಸಿರು ಮೆಣಸಿನಕಾಯಿ – 1
    ಟೊಮೆಟೊ ಪ್ಯೂರಿ – 1 ಕಪ್
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಬಿರಿಯಾನಿ ಮಸಾಲಾ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕತ್ತರಿಸಿದ ಕ್ಯಾರೆಟ್ – ಅರ್ಧ
    ಬಟಾಣಿ – 2 ಟೀಸ್ಪೂನ್
    ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
    ತೆಂಗಿನ ಹಾಲು – 1 ಕಪ್
    ಸಣ್ಣಗೆ ಕತ್ತರಿಸಿದ ಪುದಿನಾ – 2 ಟೀಸ್ಪೂನ್
    ನೀರು – 1 ಕಪ್
    ಬಾಸ್ಮತಿ ಅಕ್ಕಿ – 1 ಕಪ್ (20 ನಿಮಿಷ ನೀರಿನಲ್ಲಿ ನೆನೆಸಿಡಿ)

    ಮಾಡುವ ವಿಧಾನ:
    * ಮೊದಲಿಗೆ ಪ್ರೆಶರ್ ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ದಾಲ್ಚಿನ್ನಿ, ಲವಂಗ, ಏಲಕ್ಕಿ, ಜೀರಿಗೆ ಮತ್ತು ಸೋಂಪು ಹಾಕಿ ಹುರಿಯಿರಿ.
    * ಬಳಿಕ ಈರುಳ್ಳಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಭಾಗ ಮಾಡಿದ ಹಸಿರು ಮೆಣಸಿನಕಾಯಿಯನ್ನು ಸೇರಿಸಿ.
    * ಈಗ ಟೊಮೆಟೊ ಪ್ಯೂರಿಯನ್ನು ಸೇರಿಸಿ, ಅದು ದಪ್ಪವಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ.
    * ಬಳಿಕ ಅರಿಶಿನ, ಮೆಣಸಿನ ಪುಡಿ, ಬಿರಿಯಾನಿ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮಸಾಲೆಗಳು ಸಂಪೂರ್ಣವಾಗಿ ಬೇಯುವವರೆಗೆ ಹುರಿಯಿರಿ.
    * ಹೆಚ್ಚುವರಿಯಾಗಿ ಕ್ಯಾರೆಟ್, ಬಟಾಣಿ, ಪುದಿನಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ಒಂದು ನಿಮಿಷ ಹುರಿಯಿರಿ.
    * ಈಗ ತೆಂಗಿನ ಹಾಲು ಮತ್ತು ನೀರನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
    * 20 ನಿಮಿಷ ನೆನೆಸಿದ ಬಾಸ್ಮತಿ ಅಕ್ಕಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಪ್ರೆಶರ್ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಮಧ್ಯಮ ಉರಿಯಲ್ಲಿ 2 ಸೀಟಿ ಹೊಡೆಯುವವರೆಗೆ ಬೇಯಿಸಿ.
    * ಇದೀಗ ಟೊಮೆಟೊ ಬಿರಿಯಾನಿ ರೆಡಿಯಾಗಿದ್ದು, ಈರುಳ್ಳಿ ಟೊಮೆಟೊ ರಾಯಿತದೊಂದಿಗೆ ಬಡಿಸಿದರೆ ಸೂಪರ್ ಟೇಸ್ಟ್ ನೀಡುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಈರುಳ್ಳಿ ಚಟ್ನಿ ಮಾಡೋದು ಹೇಗೆ ಗೊತ್ತಾ?

    ಈರುಳ್ಳಿ ಚಟ್ನಿ ಮಾಡೋದು ಹೇಗೆ ಗೊತ್ತಾ?

    ಪ್ರತಿ ಬಾರಿಯೂ ದೋಸೆ, ಇಡ್ಲಿಯೊಂದಿಗೆ ಶೇಂಗಾ, ತೆಂಗಿಕಾಯಿ ಚಟ್ನಿ ತಿಂದು ಬೋರ್ ಆಗಿ ಹೋಗಿದ್ದರೆ, ಈರುಳ್ಳಿ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ. ಸೂಪರ್ ಸುವಾಸನೆಯುಕ್ತ ಟ್ಯಾಂಗಿ ಈರುಳ್ಳಿ ಚಟ್ನಿಯ ರುಚಿ ಒಮ್ಮೆ ನೋಡಿದರೆ, ಮತ್ತೆ ಮತ್ತೆ ಸವಿಯುವ ಮನಸಾಗುವುದಂತೂ ಖಂಡಿತಾ. ಸಿಂಪಲ್ ಆದ ಈರುಳ್ಳಿ ಚಟ್ನಿ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಎಣ್ಣೆ – 2 ಟೀಸ್ಪೂನ್
    ಉದ್ದಿನ ಬೇಳೆ – 1 ಟೀಸ್ಪೂನ್
    ಕಡಲೆ ಬೇಳೆ – 1 ಟೀಸ್ಪೂನ್
    ಒಣ ಕಾಶ್ಮೀರಿ ಕೆಂಪು ಮೆಣಸು – 4
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ಹುಣಿಸೇಹಣ್ಣು – ಸಣ್ಣ ತುಂಡು
    ಬೆಲ್ಲ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – ಕಾಲು ಕಪ್

    ಒಗ್ಗರಣೆಗೆ:
    ಎಣ್ಣೆ – 2 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಉದ್ದಿನ ಬೇಳೆ – 1 ಟೀಸ್ಪೂನ್
    ಇಂಗ್ – ಚಿಟಿಕೆ
    ಒಣ ಕೆಂಪು ಮೆಣಸಿನಕಾಯಿ – 1
    ಕರಿಬೇವಿನ ಎಲೆಗಳು – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಹಾಕಿ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಒಣ ಕಾಶ್ಮೀರಿ ಕೆಂಪು ಮೆಣಸಿನಕಾಯಿಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ.
    * ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ, ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
    * ಅದನ್ನು ಪಕ್ಕಕ್ಕಿಟ್ಟು, ಸಂಪೂರ್ಣ ತಣ್ಣಗಾದ ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ. ಹುಣಿಸೇಹಣ್ಣು, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ನೀರು ಹಾಕಿ ನಯವಾಗಿ ಬ್ಲೆಂಡ್ ಮಾಡಿ.
    * ಒಗ್ಗರಣೆಗೆ ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಹಾಕಿ, ಸಾಸಿವೆ, ಉದ್ದಿನ ಬೇಳೆ, ಹಿಂಗ್, ಒಣ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ. ಒಗ್ಗರಣೆ ಸಿಡಿಯಲು ಬಿಡಿ.
    * ಕೊನೆಯದಾಗಿ ಈರುಳ್ಳಿ ಚಟ್ನಿ ಮೇಲೆ ಒಗ್ಗರಣೆ ಹಾಕಿ, ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.

    Live Tv
    [brid partner=56869869 player=32851 video=960834 autoplay=true]

  • ಡಾಬಾ ಸ್ಟೈಲ್‌ನಲ್ಲಿ ಮಾಡಿ ಪನೀರ್ ಭುರ್ಜಿ ಗ್ರೇವಿ

    ಡಾಬಾ ಸ್ಟೈಲ್‌ನಲ್ಲಿ ಮಾಡಿ ಪನೀರ್ ಭುರ್ಜಿ ಗ್ರೇವಿ

    ವೆಜ್ ಪ್ರಿಯರು ರುಚಿಯಾಗಿ ಏನಾದರೂ ಮಾಡಬೇಕು ಎಂದಾಗ ನೆನಪಿಗೆ ಬರುವುದೇ ಪನೀರ್. ಪನೀರ್‌ನಿಂದ ವಿವಿಧ ರೀತಿಯ ಅಡುಗೆ ಮಾಡಿ ಸವಿಯುವುದೇ ಮಜಾ. ಅದರಲ್ಲೂ ಡಾಬಾ ಸ್ಟೈಲ್‌ನ ಅಡುಗೆ ಯಾರಿಗೆ ತಾನೇ ಇಷ್ಟ ಆಗಲ್ಲ? ಮನೆಯಲ್ಲೇ ನೀವೂ ಕೂಡಾ ಡಾಬಾ ಸ್ಟೈಲ್‌ನಲ್ಲಿ ಪನೀರ್ ಭುರ್ಜಿ ಗ್ರೇವಿ ಮಾಡಿ ನೋಡಿ. ಇದು ಚಪಾತಿ, ರೋಟಿಯೊಂದಿಗೆ ಸೂಪರ್ ಎನ್ನದೇ ಇರಲು ಸಾಧ್ಯವಿಲ್ಲ.

    ಬೇಕಾಗುವ ಪದಾರ್ಥಗಳು:
    * ಎಣ್ಣೆ – 2 ಟೀಸ್ಪೂನ್
    * ಬೆಣ್ಣೆ – 1 ಟೀಸ್ಪೂನ್
    * ಜೀರಿಗೆ – 1 ಟೀಸ್ಪೂನ್
    * ಸಣ್ಣಗೆ ಹೆಚ್ಚಿದ ಈರುಳ್ಳಿ – 1
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಅರಿಶಿನ – ಕಾಲು ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್
    * ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    * ಕೊತ್ತಂಬರಿ ಪುಡಿ – 1 ಟೀಸ್ಪೂನ್
    * ಉಪ್ಪು – ರುಚಿಗೆ ತಕ್ಕಷ್ಟು
    * ಕಡಲೆ ಹಿಟ್ಟು – 1 ಟೀಸ್ಪೂನ್
    * ಸಣ್ಣಗೆ ಕತ್ತರಿಸಿದ ಟೊಮೆಟೊ – 3
    * ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ – ಅರ್ಧ
    * ನೀರು – 1 ಕಪ್
    * ಪನೀರ್ – 200 ಗ್ರಾಂ
    * ಗರಂ ಮಸಾಲಾ – ಅರ್ಧ ಟೀಸ್ಪೂನ್
    * ಪುಡಿ ಮಾಡಿದ ಕಸೂರಿ ಮೇಥಿ – 1 ಟೀಸ್ಪೂನ್
    * ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ, ದೊಡ್ಡ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಬೆಣ್ಣೆ ಮತ್ತು ಜೀರಿಗೆ ಸೇರಿಸಿ. ಜೀರಿಗೆ ಪರಿಮಳ ಬರುವ ತನಕ ಹುರಿಯಿರಿ.
    * ಈಗ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಸಾಟ್ ಮಾಡಿ.
    * ಜ್ವಾಲೆ ಕಡಿಮೆ ಮಾಡಿ, ಅರಿಶಿನ, ಮೆಣಸಿನ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಹಾಗೂ ಕಡಲೆ ಹಿಟ್ಟು ಹಾಕಿ, ಪರಿಮಳ ಬರುವವರೆಗೆ ಹುರಿಯಿರಿ.
    * ಬಳಿಕ ಟೊಮೆಟೊ ಸೇರಿಸಿ, ಮೃದುವಾಗುವವರೆಗೆ ಕೈಯಾಡಿಸಿ.
    * ಕ್ಯಾಪ್ಸಿಕಂ ಸೇರಿಸಿ, 1 ನಿಮಿಷ ಸಾಟ್ ಮಾಡಿ.
    * ಈಗ 1 ಕಪ್ ನೀರು, ಹಿಸುಕಿದ ಪನೀರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕಡಾಯಿಯನ್ನು ಮುಚ್ಚಿ, 2 ನಿಮಿಷ ಬೇಯಿಸಿ.
    * ಕೊನೆಯಲ್ಲಿ ಗರಂ ಮಸಾಲಾ, ಕಸೂರಿ ಮೇಥಿ, ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
    * ಪಾವ್, ಚಪಾತಿ, ಪರೋಟ ಯಾವುದರೊಂದಿಗೂ ಪರ್ಫೆಕ್ಟ್ ಎನಿಸುವ ಪನೀರ್ ಭುರ್ಜಿ ಗ್ರೇವಿ ಆನಂದಿಸಿ.

    Live Tv
    [brid partner=56869869 player=32851 video=960834 autoplay=true]

  • ದಿಢೀರ್ ಅಂತ ಮಾಡ್ಬೋದು ಆರೋಗ್ಯಕರ ಬೀಟ್ರೂಟ್ ದೋಸಾ

    ದಿಢೀರ್ ಅಂತ ಮಾಡ್ಬೋದು ಆರೋಗ್ಯಕರ ಬೀಟ್ರೂಟ್ ದೋಸಾ

    ರೋಗ್ಯಕರ ಉಪಹಾರದ ರೆಸಿಪಿ ಹುಡುಕುತ್ತಿರುವವರಿಗೆ ಇಲ್ಲಿದೆ ದಿಢೀರ್ ಅಂತ ಮಾಡಬಹುದಾದ ಬೀಟ್ರೂಟ್ ದೋಸಾ. ಬೆಳಗ್ಗಿನ ತಿಂಡಿಗೆ ಬೇಕಾಗುವ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡ ಬೀಟ್ರೂಟ್ ದೋಸಾ ಅಷ್ಟೇ ರುಚಿಕರವೂ ಆಗಿದೆ. ಗೃಹಿಣಿಯರಿಗೆ ಅರ್ಜೆಂಟ್ ಆಗಿ ಹಾಗೂ ಸ್ಪೆಷಲ್ ಆಗಿ ಮಾಡಬೇಕಾದ ಉಪಹಾರಗಳ ಪಟ್ಟಿಯಲ್ಲಿ ಇದನ್ನೂ ಸೇರಿಸಬಹುದು.

    ಬೇಕಾಗುವ ಪದಾರ್ಥಗಳು:
    * ಹೆಚ್ಚಿದ ಬೀಟ್ರೂಟ್ – ಅರ್ಧ ಕಪ್
    * ಅಕ್ಕಿ ಹಿಟ್ಟು – 1 ಕಪ್
    * ರವೆ – ಅರ್ಧ ಕಪ್
    * ಉಪ್ಪು – ರುಚಿಗೆ ತಕ್ಕಷ್ಟು
    * ನೀರು – 3 ಕಪ್
    * ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
    * ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 2
    * ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    * ಕತ್ತರಿಸಿದ ಕರಿಬೇವಿನ ಎಳೆಗಳು – ಸ್ವಲ್ಪ
    * ಜೀರಿಗೆ – 1 ಟೀಸ್ಪೂನ್
    * ನೀರು – ಹಿಟ್ಟಿಗೆ
    * ಎಣ್ಣೆ – ಹುರಿಯಲು

    ಮಾಡುವ ವಿಧಾನ:
    * ಮೊದಲಿಗೆ ಮಿಕ್ಸರ್ ಜಾರ್‌ನಲ್ಲಿ ಬೀಟ್ರೂಟ್ ಮತ್ತು ಅರ್ಧ ಕಪ್ ನೀರನ್ನು ತೆಗೆದುಕೊಳ್ಳಿ. ನಯವಾಗಿ ರುಬ್ಬಿ.
    * ಬೀಟ್ರೂಟ್ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿ, ಅಕ್ಕಿ ಹಿಟ್ಟು, ರವೆ, ಉಪ್ಪು, 3 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕೆಲವು ಕರಿಬೇವಿನ ಎಲೆಗಳು ಮತ್ತು ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * 10 ನಿಮಿಷ ವಿಶ್ರಾಂತಿ ನೀಡಿ, ಬಳಿಕ ಅಗತ್ಯವಿದ್ದರೆ ನೀರನ್ನು ಸೇರಿಸಿ, ಹಿಟ್ಟನ್ನು ಸರಿಹೊಂದಿಸಬಹುದು.
    * ಪ್ಯಾನ್ ಅನ್ನು ಬಿಸಿಗಿಟ್ಟು, ಕಾದ ಬಳಿಕ ಹಿಟ್ಟನ್ನು ಹರಡಿ, 1 ಟೀಸ್ಪೂನ್ ಎಣ್ಣೆ ಹಾಕಿ, 2 ನಿಮಿಷ ಬಿಡಿ.
    * ಗರಿಗರಿಯಾದ ಬೀಟ್ರೂಟ್ ದೋಸೆಯನ್ನು ಪ್ಲೇಟ್‌ಗೆ ಹಾಕಿ, ನಿಮಗಿಷ್ಟದ ಚಟ್ನಿಯೊಂದಿಗೆ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಆಪಲ್‌ನಿಂದಲೂ ಮಾಡ್ಬೋದು ಹಲ್ವಾ

    ಆಪಲ್‌ನಿಂದಲೂ ಮಾಡ್ಬೋದು ಹಲ್ವಾ

    ಲ್ಲೇ ಹೋದರೂ ಕೈಗೆ ಸಿಗುವ ಹಣ್ಣುಗಳಲ್ಲೊಂದು ಆಪಲ್. ಫ್ರೂಟ್ ಸಲಾಡ್ ಮಾಡಲು ಹೆಚ್ಚಾಗಿ ಆಪಲ್‌ಗಳನ್ನು ಬಳಸಿರುತ್ತೇವೆ. ಆದರೆ ಆಪಲ್‌ನಿಂದಲೂ ಹಲ್ವಾ ಮಾಡಬಹುದು ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಎಷ್ಟು ಕುತೂಹಲಕಾರಿ ರೆಸಿಪಿಯೋ ಅಷ್ಟೇ ಟೇಸ್ಟಿಯಾಗಿರುವ ಆಪಲ್ ಹಲ್ವಾವನ್ನು ನೀವು ಕೂಡಾ ಒಮ್ಮೆ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    * ಆಪಲ್ – 4
    * ತುಪ್ಪ – 2 ಟೀಸ್ಪೂನ್
    * ಗೋಡಂಬಿ – 8
    * ಸಕ್ಕರೆ – 4 ಕಪ್
    * ಕೇಸರಿ – 4 ಟೀಸ್ಪೂನ್
    * ವೆನಿಲ್ಲಾ ಸಾರ – 1 ಟೀಸ್ಪೂನ್
    * ದಾಲ್ಚಿನಿ ಪೌಡರ್ – 4 ಟೀಸ್ಪೂನ್

    ಮಾಡುವ ವಿಧಾನ:

    * ಮೊದಲಿಗೆ ಆಪಲ್‌ಗಳನ್ನು ಕತ್ತರಿಸಿಕೊಂಡು ನಂತರ ತುರಿಯಿರಿ. ಬೇಕೆಂದರೆ ಮೆದುವಾಗಿ ಪೇಸ್ಟ್ನಂತೆ ರುಬ್ಬಿಕೊಳ್ಳಬಹುದು.
    * ದೊಡ್ಡ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿಯನ್ನು ಹುರಿದುಕೊಳ್ಳಿ. ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುತ್ತಿದ್ದಂತೆ ಗೋಡಂಬಿಯನ್ನು ಮಾತ್ರವೇ ತೆಗೆದು ಪಕ್ಕಕ್ಕೆ ಇರಿಸಿ.
    * ಕಡಾಯಿಯಲ್ಲಿ ಉಳಿದ ತುಪ್ಪಕ್ಕೆ ತುರಿದ ಆಪಲ್‌ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದರ ರಸ ಬಿಡುಗಡೆಯಾಗುವವರೆಗೂ ಕೈಯಾಡಿಸುತ್ತಿರಿ.
    * ಆಪಲ್ ಮೃದುವಾದ ಬಳಿಕ ಅದಕ್ಕೆ ಸಕ್ಕರೆ, ಕೇಸರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೈ ಆಡಿಸಿ ಸಕ್ಕರೆಯನ್ನು ಕರಗಿಸಿ.
    * ಮಿಶ್ರಣ ದಪ್ಪವಾದ ಬಳಿಕ ವೆನಿಲ್ಲಾ ಸಾರ, ದಾಲ್ಚಿನಿ ಪೌಡರ್ ಹಾಗೂ ಹುರಿದ ಗೋಡಂಬಿ ಸೇರಿಸಿ ಬೇಯಿಸಿ.
    * ಆಪಲ್ ಹಲ್ವಾ ಇದೀಗ ತಯಾರಾಗಿದ್ದು, ಗೋಡಂಬಿಯಿಂದ ಅಲಂಕರಿಸಿ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ನೀವೂ ಟ್ರೈ ಮಾಡಿ ರುಚಿಯಾದ ಸ್ಪೈಸಿ ಚಿಕನ್ ಲಿವರ್ ಫ್ರೈ

    ನೀವೂ ಟ್ರೈ ಮಾಡಿ ರುಚಿಯಾದ ಸ್ಪೈಸಿ ಚಿಕನ್ ಲಿವರ್ ಫ್ರೈ

    ನೀವು ಚಿಕನ್ ಪ್ರಿಯರಾಗಿದ್ದರೆ, ಈ ಸ್ಪೈಸಿ ಚಿಕನ್ ಲಿವರ್ ಫ್ರೈ ಅನ್ನು ಖಂಡಿತಾ ಇಷ್ಟ ಪಡುತ್ತೀರಿ. ಚಿಕನ್ ಲಿವರ್ ಅನ್ನು ಇಷ್ಟಪಡದವರು ಇದ್ದರೂ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ, ನೀವೂ ಇದರ ಅಭಿಮಾನಿಗಳಾಗುವುದು ಖಂಡಿತಾ! ಸೈಡ್ ಡಿಶ್ ಅಥವಾ ಎರಡು ಬ್ರೆಡ್ ಸ್ಲೈಸ್‌ಗಳ ಮಧ್ಯದಲ್ಲಿ ಹರಡಿ ಸ್ಯಾಂಡ್ ವಿಚ್‌ನಂತೆ ಆನಂದಿಸಲು ಇದು ಪರ್ಫೆಕ್ಟ್ ಆಗಿರುತ್ತದೆ.

    ಬೇಕಾಗುವ ಪದಾರ್ಥಗಳು:
    * ಚಿಕನ್ ಲಿವರ್- ಅರ್ಧ ಕೆ.ಜಿ
    * ಎಣ್ಣೆ- 3 ಟೀಸ್ಪೂನ್
    * ಜೀರಿಗೆ- 1 ಟೀಸ್ಪೂನ್
    * ಸಾಸಿವೆ ಕಾಳು- ಅರ್ಧ ಟೀಸ್ಪೂನ್
    * ಏಲಕ್ಕಿ- 2
    * ದಾಲ್ಚಿನಿ ಚಕ್ಕೆ- ಅರ್ಧ ಇಂಚು
    * ಕತ್ತರಿಸಿದ ಹಸಿರು ಮೆಣಸಿನಕಾಯಿ- 1
    * ರುಬ್ಬಿದ ಈರುಳ್ಳಿ- ಅರ್ಧ ಕಪ್
    * ಗರಂ ಮಸಾಲೆ- 1 ಟೀಸ್ಪೂನ್
    * ಉಪ್ಪು- 1 ಟೀಸ್ಪೂನ್
    * ಕರಿಮೆಣಸು- ಅರ್ಧ ಟೀಸ್ಪೂನ್
    * ನಿಂಬೆ ಹಣ್ಣು- ಅರ್ಧ ಭಾಗ

    ಮಾಡುವ ವಿಧಾನ:
    * ಚಿಕನ್ ಲಿವರ್ ಅನ್ನು 10 ನಿಮಿಷಗಳ ಕಾಲ ತಣ್ಣನೆಯ ನೀರಿನಲ್ಲಿ ನೆನೆಸಿಡಿ. ಬಳಿಕ ತೊಳೆದು ನೀರಿನಿಂದ ಬೇರ್ಪಡಿಸಿ.
    * ಮಧ್ಯಮ ಉರಿಯಲ್ಲಿ ಒಲೆಯ ಮೇಲೆ ಬಾಣಲೆ ಇಟ್ಟು, ಅದಕ್ಕೆ ಎಣ್ಣೆ ಹಾಕಿ. ಬಿಸಿಯಾದ ಬಳಿಕ ಜೀರಿಗೆ, ಸಾಸಿವೆ ಕಾಳು, ಏಲಕ್ಕಿ, ದಾಲ್ಚಿನಿ ಹಾಕಿ ಫ್ರೈ ಮಾಡಿ.
    * ಜೀರಿಗೆ ಕಂದು ಬಣ್ಣಕ್ಕೆ ತಿರುಗಿದಾಗ ಕತ್ತರಿಸಿದ ಹಸಿರು ಮೆಣಸಿನಕಾಯಿ, ರುಬ್ಬಿದ ಈರುಳ್ಳಿ, ಗರಂ ಮಸಾಲೆ, ಉಪ್ಪು, ಕರಿಮೆಣಸು ಹಾಕಿ ಹುರಿಯಿರಿ.
    * ಬಳಿಕ ಚಿಕನ್ ಲಿವರ್ ಸೇರಿಸಿ, 10-15 ನಿಮಿಷಗಳ ಕಾಲ ಬೇಯಿಸಿ.
    * ದ್ರವ ಆವಿಯಾದ ಬಳಿಕ ನಿಂಬೆ ರಸವನ್ನು ಹಿಂಡಿ, ಉರಿಯನ್ನು ಕಡಿಮೆ ಮಾಡಿ, ಮುಚ್ಚಳದಿಂದ ಮುಚ್ಚಿ 5 ನಿಮಿಷ ಬೇಯಿಸಿ.
    * ರುಚಿಕರ ಸ್ಪೈಸಿ ಚಿಕನ್ ಲಿವರ್ ಫ್ರೈ ತಯಾರಾಗಿದ್ದು, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಸರ್ವ್ ಮಾಡಿ.

    Live Tv
    [brid partner=56869869 player=32851 video=960834 autoplay=true]

  • ಫಟಾಫಟ್ ಅಂತ ಮಾಡ್ಬೋಡು ಟೇಸ್ಟಿ ಪ್ಯಾನ್ ಕೇಕ್

    ಫಟಾಫಟ್ ಅಂತ ಮಾಡ್ಬೋಡು ಟೇಸ್ಟಿ ಪ್ಯಾನ್ ಕೇಕ್

    ಬೆಳಗ್ಗೆ ಹೊಸ ಹೊಸ ರೀತಿಯ ತಿಂಡಿ ತಯಾರಿಸುವುದು ಪ್ರತಿಯೊಬ್ಬ ಗೃಹಿಣಿಯರಿಗೂ ಸವಾಲು. ಒಂದೊಳ್ಳೆ ತಿಂಡಿ ತಯಾರಿಸಬೇಕೆಂದರೆ, ಹಿಟ್ಟು, ಬೇಳೆ, ಅಕ್ಕಿಯನ್ನು ರಾತ್ರಿಯಿಡೀ ನೆನೆಸಿಡಬೇಕಾಗುತ್ತದೆ. ಆದರೆ ಫಟಾಫಟ್ ಅಂತ ಮಾಡೋ ತಿಂಡಿಗಳ ಪಟ್ಟಿಯಲ್ಲಿ ಕೆಲವೇ ಕೆಲವು ಐಟಮ್‌ಗಳಿದ್ದು, ಅದನ್ನು ತಿಂದು ಬೋರ್ ಆಗಿರಲೂ ಬಹುದು.

    ಇಂದಿನ ರೆಸಿಪಿ ಪ್ರತಿಯೊಬ್ಬರೂ ಕೇವಲ ಅರ್ಧಗಂಟೆಯಲ್ಲಿ ಮಾಡಬಹುದು, ಮಾತ್ರವಲ್ಲದೇ ಅತ್ಯಂತ ಸುಲಭದ ವೆಸ್ಟರ್ನ್ ಸ್ಟೈಲ್‌ನ ಬ್ರೇಕ್‌ಫಸ್ಟ್ ಕಲಿತಂತೆಯೂ ಆಗುತ್ತದೆ.

    ಬೇಕಾಗುವ ಪದಾರ್ಥಗಳು:
    * ಆಲ್ ಪರ್ಪಸ್ ಫ್ಲೋರ್(ಮೈದಾ ಅಥವಾ ಗೋಧಿ) – 1 ಕಪ್
    * ಸಕ್ಕರೆ – 2 ಟೀಸ್ಪೂನ್
    * ಬೇಕಿಂಗ್ ಪೌಡರ್ – 2 ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ಹಾಲು – 1 ಕಪ್
    * ಕಾಯಿಸಿದ ಬೆಣ್ಣೆ – 2 ಟೀಸ್ಪೂನ್
    * ಮೊಟ್ಟೆ – 1
    * ಎಣ್ಣೆ – 1 ಟೀಸ್ಪೂನ್

    ಮಾಡುವ ವಿಧಾನ: 

    * ಆವನ್ ಅನ್ನು 200 ಡಿಗ್ರಿ ಬಿಸಿಯಾಗಲು ಬಿಡಿ.
    * ಸಣ್ಣ ಪಾತ್ರೆಯಲ್ಲಿ ಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್ ಹಾಗೂ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಬಳಿಕ ಹಾಲು, ಬೆಣ್ಣೆ, ಮೊಟ್ಟೆರನ್ನು ಹಾಕಿ ಮಿಕ್ಸ್ ಮಾಡಿ. ಈ ಬಾರಿ ಅತಿಯಾಗಿ ಮಿಶ್ರಣ ಮಾಡುವುದು ಬೇಡ.
    * ದೊಡ್ಡ ನಾನ್ ಸ್ಟಿಕ್ ಪ್ಯಾನ್ ಅನ್ನು ಒಲೆಯಲ್ಲಿ ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ.
    * ಅದರ ಮೇಲೆ 2-3 ಟೀಸ್ಪೂನ್ ಬ್ಯಾಟರ್(ತಯಾರಿಸಿದ ಹಿಟ್ಟು) ಹಾಕಿ, ಚಮಚದ ಹಿಂಬದಿಯಿಂದ ನಿಧಾನವಾಗಿ ಸ್ವಲ್ಪ ಹರಡಿ. ದೊಡ್ಡ ಪ್ಯಾನ್ ಆಗಿದ್ದರೆ ಒಂದು ಬಾರಿಗೆ 2-3 ಬಾರಿ ಪ್ಯಾನ್ ಕೇಕ್ ಹಾಕಲು ಸಾಧ್ಯವಾಗುತ್ತದೆ.
    * 2-3 ನಿಮಿಷ ಬೆಂದ ಬಳಿಕ ತೆಳುವಾದ ಸೌಟಿನಿಂದ ಅವುಗಳನ್ನು ತಿರುವಿ ಹಾಕಿ ಹಾಗೂ ಕಂದು ಬಣ್ಣವಾಗುವವರೆಗೆ ಬೇಯಿಸಿ.
    * ಅವುಗಳನ್ನು ಬೇಕಿಂಗ್ ಶೀಟ್ ಹಾಕಿರುವ ಆವನ್‌ನಲ್ಲಿ ಇಡಬಹುದಾದ ಪಾತ್ರೆಗೆ ಹಾಕಿ, ಅಲ್ಯೂಮಿನಿಯಂ ಫಾಯಿಲ್‌ನಿಂದ ಮುಚ್ಚಿ, ಆವನ್‌ನಲ್ಲಿ ಇರಿಸಿ.
    * 5 ನಿಮಿಷ ಬೆಂದ ಬಳಿಕ ಬೆಚ್ಚನೆಯ ಪ್ಯಾನ್ ಕೇಕ್‌ಗಳನ್ನು ಪ್ಲೇಟ್‌ಗಳಿಗೆ ಹಾಕಿ, ಅದಕ್ಕೆ ನಿಮಗಿಷ್ಟದ ಸಿರಪ್(ಮೇಪಲ್ ಸಿರಪ್, ಬೆಣ್ಣೆ, ಶುಗರ್ ಸಿರಪ್, ಜೇನುತುಪ್ಪ, ಜಾಮ್, ಚಾಕೊಲೇಟ್ ಸಿರಪ್ ಮುಂತಾದವು) ಅನ್ನು ಹಾಕಿ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಕೃಷ್ಣ ಜನ್ಮಾಷ್ಟಮಿಗೆ ಮಾಡಿ‌ ಸವಿಯಿರಿ ಸ್ಪೆಷಲ್ ಡ್ರೈ ಫ್ರೂಟ್ಸ್ ಲಡ್ಡು

    ಕೃಷ್ಣ ಜನ್ಮಾಷ್ಟಮಿಗೆ ಮಾಡಿ‌ ಸವಿಯಿರಿ ಸ್ಪೆಷಲ್ ಡ್ರೈ ಫ್ರೂಟ್ಸ್ ಲಡ್ಡು

    ಕೃಷ್ಣಾ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹಬ್ಬ- ಹರಿದಿನಗಳಲ್ಲಿ ಸಿಹಿ ಮಾಡಿ ಸವಿಯುತ್ತಾರೆ. ಅದರಂತೆ  ಇಂದು ಆಚರಿಸುವ ಕೃಷ್ಣ ಜನ್ಮಾಷ್ಟಮಿಗೆ ರುಚಿ ರುಚಿಯಾದ ಹಾಗೂ ಆರೋಗ್ಯಕರವಾದ ಲಡ್ಡು ಮಾಡಿ ಸವಿದು ಹಬ್ಬವನ್ನು ಎಂಜಾಯ್‌ ಮಾಡಿ.

    ಹಬ್ಬಕ್ಕಾಗಿ ನಾನಾ ತರಹದ ಸಿಹಿ ತಿಂಡಿಗಳನ್ನು ಮಾಡಬೇಕಾಗುತ್ತದೆ. ಆಗ ನೀವು ಮಾಡುವ ಸಿಹಿ ಅಡುಗೆಯಲ್ಲಿ ಡ್ರೈ ಫ್ರೂಟ್ಸ್ ಲಡ್ಡನ್ನು ಸೇರಿಸಿಕೊಳ್ಳಬಹುದಾಗಿದೆ. ಈ ಸಿಹಿ ತಿಂಡಿಯನ್ನು ಒಣಗಿದ ಹಣ್ಣುಗಳಿಂದ ಮಾಡುವುದರಿಂದ ರುಚಿಯಾಗಿರುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಈ ಸ್ವೀಟ್‍ನ್ನು 15 ರಿಂದ 20 ದಿನಗಳಕಾಲ ನೀವು ಇಟ್ಟು ತಿನ್ನಬಹುದಾಗಿದೆ.  

    ಬೇಕಾಗುವ ಸಾಮಗ್ರಿಗಳು:
    * ದ್ರಾಕ್ಷಿ- ಅರ್ಧ ಕಪ್
    * ಬಾದಾಮಿ- ಅರ್ಧ ಕಪ್
    * ಗೋಡಂಬಿ- ಅರ್ಧ ಕಪ್
    * ಖರ್ಜೂರ- ಅರ್ಧ ಕಪ್
    * ಪಿಸ್ತಾ- ಅರ್ಧ ಕಪ್
    * ತುಪ್ಪ-2 ಟೇಬಲ್ ಸ್ಪೂನ್
    * ಗಸಗಸೆ-1 ಟೇಬಲ್ ಸ್ಪೂನ್
    * ಏಲಕ್ಕಿ ಪುಡಿ-1 ಟೀ ಸ್ಪೂನ್
    * ಬೆಲ್ಲ- ಅರ್ಧ ಕಪ್
    * ಎಳ್ಳು- ಅರ್ಧ ಕಪ್
    * ಬಾದಾಮಿ- ಅರ್ಧ ಕಪ್
    * ಒಣ ಕೊಬ್ಬರಿ- ಅರ್ಧ ಕಪ್

    ಮಾಡುವ ವಿಧಾನ:
    * ಒಂದು ಬಾಣಲೆಗೆ ಎಳ್ಳು, ಗಸಗಸೆ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
    * ಬಾಣಲೆಯಲ್ಲಿ ಒಂದು ಟೇಬಲ್ ಸ್ಪೂನ್ ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾವನ್ನು ಹಾಕಿ ಚೆನ್ನಾಗಿ ಹುರಿಯ ಬೇಕು.

    * ನಂತರ ಮಿಕ್ಸಿ ಜಾರ್ ಗೆ ಒಣಗಿದ ಕೊಬ್ಬರಿ ಹಾಗೂ ಹುರಿದ ಡ್ರೈ ಫ್ರೂಟ್ಸ್, ಖರ್ಜೂರ, ಬೆಲ್ಲವನ್ನು ಹಾಕಿ ತರಿತರಿಯಾಗಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ.

    * ನಂತರ ಈ ಡ್ರೈ ಫ್ರೂಟ್ಸ್ ಮಿಶ್ರಣಕ್ಕೆ ಈ ಮೊದಲು ಹುರಿದು ತೆಗೆದಿಟ್ಟ ಎಳ್ಳು, ಗಸಗಸೆ ಹಾಕಿ ಮಿಶ್ರಣವನ್ನು ಮಾಡಿ ನಿಮಗೆ ಬೇಕಾದ ಅಳತೆಯಲ್ಲಿ ಉಂಡೆಯನ್ನು ಕಟ್ಟಿದರೆ ರುಚಿಯಾ ದ ಡ್ರೈ ಫ್ರೂಟ್ಸ್ ಲಾಡು ಸವಿಯಲು ಸಿದ್ಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಮಸಾಲಾ ನಿಂಬೂ ಸೋಡಾ ಮನೆಯಲ್ಲಿ ಟ್ರೈ ಮಾಡಿದ್ದೀರಾ?

    ಮಸಾಲಾ ನಿಂಬೂ ಸೋಡಾ ಮನೆಯಲ್ಲಿ ಟ್ರೈ ಮಾಡಿದ್ದೀರಾ?

    ಹೆಚ್ಚಾಗಿ ಬಾಯಾರಿಕೆಯಾದಾಗ ದಾಹ ತಣಿಸಲು ನಿಂಬೆ ಹಣ್ಣಿನ ಜ್ಯೂಸ್ ಅನ್ನೇ ಮಾಡಿಕೊಳ್ಳುತ್ತಾರೆ. ಆದರೆ ಪ್ರತೀ ಸಲ ಅದನ್ನೇ ಮಾಡಿ, ಕುಡಿದು ಬೋರ್ ಎನಿಸಲ್ವಾ? ಪ್ರತಿ ಸಲ ಅಡುಗೆ ಮನೆಯಲ್ಲಿ ಎಕ್ಸ್ಪರಿಮೆಂಟ್ ಮಾಡೋದು ಮುಖ್ಯ ಹಾಗೂ ಮಜಾ. ಇಂದು ಸ್ವಲ್ಪ ವಿಭವಿನ್ನವಾಗಿ ಮಸಾಲಾ ನಿಂಬೂ ಸೋಡಾ ಮಾಡೋದು ಹೇಗೆ ಎಂಬುದನ್ನು ನೋಡೋಣ. ನಿಮ್ಮ ಅಡುಗೆ ಮನೆಯಲ್ಲಿಯೇ ಹೊಸ ಪ್ರಯತ್ನದೊಂದಿಗೆ ಹೊಸ ರುಚಿಯನ್ನು ಆಸ್ವಾದಿಸಿ.

     

    ಬೇಕಾಗುವ ಪದಾರ್ಥಗಳು:
    ತಾಜಾ ನಿಂಬೆ ರಸ – ಅರ್ಧ ಕಪ್
    ಕ್ಲಬ್ ಸೋಡಾ – 4 ಕಪ್
    ಸಕ್ಕರೆ – 3 ಟೀಸ್ಪೂನ್
    ಪುದೀನಾ ಎಲೆಗಳು – ಅರ್ಧ ಕಪ್
    ಚ್ಯಾಟ್ ಮಸಾಲಾ – 2 ಟೀಸ್ಪೂನ್
    ಹುರಿದ ಜೀರಿಗೆ – 1 ಟೀಸ್ಪೂನ್

    ಮಾಡುವ ವಿಧಾನ:
    * ತಾಜಾ ಪುದೀನಾ ಎಲೆಗಳನ್ನು ತೆಗೆದುಕೊಂಡು ಅದನ್ನು ಹುರಿದ ಜೀರಿಗೆಯೊಂದಿಗೆ ಗ್ರೈಂಡ್ ಮಾಡಿ.
    * ಗ್ರೈಂಡ್ ಮಾಡಿದ ಪುದೀನಾವನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ನಿಂಬೆ ರಸ, ಸಕ್ಕರೆ, ಚ್ಯಾಟ್ ಮಸಾಲಾ, ಸ್ವಲ್ಪ ಉಪ್ಪು ಹಾಗೂ ಕ್ಲಬ್ ಸೋಡಾವನ್ನು ಹಾಕಿ ಮಿಶ್ರಣ ಮಾಡಿ.
    * ಬೇಕೆಂದಲ್ಲಿ ಐಸ್ ಕ್ಯೂಬ್‌ಗಳನ್ನು ಬಳಸಿ, ಲೋಟಗಳಿಗೆ ಸುರಿಯಿರಿ.
    * ಅಲಂಕಾರಕ್ಕೆ ಬೆಂಕೆಂದಲ್ಲಿ ಸ್ವಲ್ಪ ಪುದೀನಾ ಎಲೆಗಳು ಹಾಗೂ ನಿಂಬೆ ಹಣ್ಣಿನ ಹೋಳುಗಳನ್ನು ಬಳಸಿ, ಚಿಲ್ ಆಗಿ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]