Tag: recipe

  • ಟ್ರೈ ಮಾಡಿ ಸಾಂಪ್ರದಾಯಿಕ ಪಂಜಾಬಿ ಸಿಹಿಯಾದ ಲಸ್ಸಿ

    ಟ್ರೈ ಮಾಡಿ ಸಾಂಪ್ರದಾಯಿಕ ಪಂಜಾಬಿ ಸಿಹಿಯಾದ ಲಸ್ಸಿ

    ಸ್ವೀಟ್ ಲಸ್ಸಿ ಪಂಜಾಬಿ ಪಾನೀಯವಾಗಿದ್ದು, ಉತ್ತರ ಭಾರತದಾದ್ಯಂತ ಇದು ಜನಪ್ರಿಯ. ಸಾಮಾನ್ಯವಾಗಿ ಊಟದ ಬಳಿಕ ಅಥವಾ ಬೇಸಿಗೆಯ ದಿನಗಳಲ್ಲಿ ದೇಹವನ್ನು ತಂಪಾಗಿಡಲು ಇದನ್ನು ಸವಿಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಟ್ರಾಬೆರಿ, ಮ್ಯಾಂಗೋ, ರೋಸ್ ಹೀಗೆ ವಿವಿಧ ಫ್ಲೇವರ್‌ಗಳಲ್ಲಿ ಲಸ್ಸಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಾವಿಂದು ಪಂಜಾಬ್‌ನ ಸಾಂಪ್ರದಾಯಿಕ ಸ್ವೀಟ್ ಲಸ್ಸಿ (Sweet Lassi) ಮಾಡೋದು ಹೇಗೆಂದು ಹೇಳಿಕೊಡಲಿದ್ದೇವೆ. ಇದಕ್ಕೆ ಯಾವುದೇ ಹೆಚ್ಚುವರಿ ಫ್ಲೇವರ್ ಸೇರಿಸಲಾಗಿಲ್ಲ ಹಾಗೂ ಮಾಡೋದು ಅತ್ಯಂತ ಸುಲಭವಾಗಿದೆ. ಸಾಂಪ್ರದಾಯಿಕ ಪಂಜಾಬಿ ಸ್ವೀಟ್ ಲಸ್ಸಿ ನೀವು ಕೂಡಾ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಸಾದಾ ಮೊಸರು – 2 ಕಪ್
    ಸಕ್ಕರೆ – 3 ಟೀಸ್ಪೂನ್
    ಏಲಕ್ಕಿ ಪುಡಿ – ಕಾಲು ಟೀಸ್ಪೂನ್
    ಹಾಲು – ಅರ್ಧ ಕಪ್
    ಕತ್ತರಿಸಿದ ಒಣ ಹಣ್ಣುಗಳು – 1 ಟೀಸ್ಪೂನ್ (ಐಚ್ಛಿಕ) ಇದನ್ನೂ ಓದಿ: ಸ್ವೀಟ್ ರಂಗೀಲಾ ಬರ್ಫಿ ಟೇಸ್ಟ್ ಮಾಡಿ ಥ್ರಿಲ್ ಆಗಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಳ್ಳಿ.
    * ಅದಕ್ಕೆ ಸಕ್ಕರೆ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ.
    * ಈಗ ಹ್ಯಾಂಡ್ ಬೀಟರ್ ಅಥವಾ ಹ್ಯಾಂಡ್ ಬ್ಲೆಂಡರ್ ಬಳಸಿ ಮೊಸರನ್ನು ನಯವಾಗುವವರೆಗೆ ಚೆನ್ನಾಗಿ ವಿಸ್ಕ್ ಮಾಡಿಕೊಳ್ಳಿ.
    * ಈಗ ಮೊಸರಿಗೆ ಹಾಲು ಸೇರಿಸಿ ಮತ್ತೆ 1-2 ನಿಮಿಷ ಚೆನ್ನಾಗಿ ವಿಸ್ಕ್ ಮಾಡಿಕೊಳ್ಳಿ.
    * ಇದೀಗ ಸ್ವೀಟ್ ಲಸ್ಸಿ ತಯಾರಾಗಿದ್ದು, ಅದನ್ನು ಗ್ಲಾಸ್‌ಗಳಿಗೆ ಸುರಿದು ಕತ್ತರಿಸಿದ ಒಣ ಹಣ್ಣುಗಳಿಂದ ಅಲಂಕರಿಸಿ ಸವಿಯರಿ. ಇದನ್ನೂ ಓದಿ: ಡಿಫರೆಂಟ್ ಆಗಿ ಮಾಡಿ ರುಚಿಕರ ಈರುಳ್ಳಿ ಪರೋಟ

  • ಫಿಶ್ ಫ್ರೈನಂತೆ ರುಚಿಕರ ಬಾಳೆಕಾಯಿ ರವಾ ಫ್ರೈ ಮಾಡಿ

    ಫಿಶ್ ಫ್ರೈನಂತೆ ರುಚಿಕರ ಬಾಳೆಕಾಯಿ ರವಾ ಫ್ರೈ ಮಾಡಿ

    ಫಿಶ್ ಫ್ರೈ  ಎಂದರೆ ನಾನ್‌ವೆಜ್ ಪ್ರಿಯರು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಅದೇ ರುಚಿ ನೀಡುವ ಬಾಳೆಕಾಯಿ ರವಾ ಫ್ರೈ ಎಂದಾದರೂ ತಿಂದಿದ್ದೀರಾ? ತಿಂದಿಲ್ಲ ಅಂದ್ರೆ ಒಂದು ಸಲ ಟ್ರೈ ಮಾಡಿ ನೋಡಿ. ಅದರಲ್ಲೂ ಜಿಟಿ ಜಿಟಿ ಮಳೆ ಬಂದಾಗ ಚಹಾದ ಜೊತೆ ಬಿಸಿ ಬಿಸಿಯಾಗಿ ಇದನ್ನು ತಿನ್ನುವ ಮಜವೇ ಬೇರೆ. ಹಾಗಿದ್ದರೆ ಇದನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಟ್ರೈ ಮಾಡಿ ಕ್ರಿಸ್ಪಿ ಪೋಹಾ ಕಟ್ಲೆಟ್..

    ಬೇಕಾಗುವ ಸಾಮಾಗ್ರಿಗಳು:
    ಬಾಳೆಕಾಯಿ – 2
    ಅಚ್ಚಖಾರದ ಪುಡಿ – 2 ಚಮಚ
    ದನಿಯಾ ಪುಡಿ – ಅರ್ಧ ಚಮಚ
    ಅರಶಿಣ ಪುಡಿ – ಕಾಲು ಚಮಚ
    ಗರಂ ಮಸಾಲ – ಕಾಲು ಚಮಚ
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
    ನಿಂಬೆ ರಸ – ಒಂದು ಚಮಚ
    ಅಕ್ಕಿ ಹಿಟ್ಟು – ಅರ್ಧ ಚಮಚ
    ನೀರು – ಅಗತ್ಯಕ್ಕೆ ತಕ್ಕಷ್ಟು
    ಚಿರೋಟಿ ರವೆ – 1 ಕಪ್
    ಉಪ್ಪು – ಅಗತ್ಯಕ್ಕೆ ತಕ್ಕಷ್ಟು
    ಎಣ್ಣೆ – 5ರಿಂದ 6 ಚಮಚ

    ಮಾಡುವ ವಿಧಾನ:

    • ಮೊದಲಿಗೆ ಬಾಳೆಕಾಯಿಯ ಸಿಪ್ಪೆಯನ್ನು ತೆಗೆದು ಉದ್ದುದ್ದವಾಗಿ ಹಚ್ಚಿಕೊಳ್ಳಿ. ಇದನ್ನು ತುಂಬಾ ತೆಳುವಾಗಿ ಹಚ್ಚಿಕೊಳ್ಳದೆ ಸ್ವಲ್ಪ ದಪ್ಪವಾಗಿಯೇ ಹೆಚ್ಚಿಕೊಂಡು ನೀರಿನಲ್ಲಿ ಹಾಕಿಟ್ಟುಕೊಳ್ಳಿ. ಬಾಳೆಕಾಯಿಯನ್ನು ನೀರಿನಲ್ಲಿ ಹಾಕಿಡುವುದರಿಂದ ಅದು ಕಪ್ಪಾಗುವುದಿಲ್ಲ.
    • ಬಳಿಕ ಒಂದು ಪ್ಲೇಟ್‌ಗೆ ಅಚ್ಚ ಖಾರದ ಪುಡಿ, ದನಿಯಾ ಪುಡಿ, ಅರಶಿಣ ಪುಡಿ, ಗರಂ ಮಸಾಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ, ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಗಂಟಾಗದಂತೆ ಗಟ್ಟಿಯಾಗಿ ಕಲಸಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ.
    • ನಂತರ ಒಂದೊಂದೆ ಬಾಳೆಕಾಯಿಗೆ ಎರಡೂ ಕಡೆ ಈ ಮಸಾಲೆಯನ್ನು ಹಚ್ಚಿಕೊಳ್ಳಿ. ಬಳಿಕ ಅದನ್ನು 20 ನಿಮಿಷಗಳ ಕಾಲ ಹಾಗೇ ಇಡಿ. ಇದರಿಂದ ಬಾಳೆಕಾಯಿ ಮಸಾಲೆಯನ್ನು ಚನ್ನಾಗಿ ಹೀರಿಕೊಳ್ಳುತ್ತದೆ.
    • ಬಳಿಕ ಇನ್ನೊಂದು ಪ್ಲೇಟ್‌ನಲ್ಲಿ ಒಂದು ಕಪ್ ಚಿರೋಟಿ ರವೆ ತೆಗೆದುಕೊಳ್ಳಿ. ಇದಕ್ಕೆ ಅರ್ಧ ಚಮಚದಷ್ಟು ಉಪ್ಪನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    • ಒಂದು ಪ್ಯಾನ್‌ಗೆ 5ರಿಂದ 6 ಚಮಚದಷ್ಟು ಎಣ್ಣೆಯನ್ನು ಹಾಕಿಕೊಳ್ಳಿ. ಎಣ್ಣೆ ಚನ್ನಾಗಿ ಕಾದ ಬಳಿಕ ಬಾಳೆಕಾಯಿಗಳನ್ನು ಚಿರೋಟಿ ರವೆಯಲ್ಲಿ ಅದ್ದಿ ಎಣ್ಣೆಗೆ ಹಾಕಿಕೊಂಡು ಎರಡೂ ಕಡೆ ಚನ್ನಾಗಿ ಫ್ರೈ ಮಾಡಿಕೊಳ್ಳಿ. ಮೂರು ನಿಮಿಷಗಳವರೆಗೆ ಒಂದು ಸೈಡ್ ಫ್ರೈ ಮಾಡಿಕೊಂಡರೆ ಸಾಕು. ಹಾಗೆಯೇ ಇನ್ನೊಂದು ಬದಿಯನ್ನೂ ಫ್ರೈ ಮಾಡಿಕೊಳ್ಳಿ.
    • ಬಳಿಕ ಇದನ್ನು ಪ್ಯಾನ್‌ನಿಂದ ತೆಗೆದು ಪ್ಲೇಟ್‌ಗೆ ಹಾಕಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಬಿ ಬೈಟ್ಸ್

  • ಮಕ್ಕಳ ಇಷ್ಟದ ಸಿಹಿ ಸಿಹಿ ಬಾಳೆಹಣ್ಣಿನ ದೋಸೆ ರೆಸಿಪಿ

    ಪುಟ್ಟ ಮಕ್ಕಳು ಯಾವಾಗಲೂ ಸಿಹಿ ಸಿಹಿಯಾದ ತಿಂಡಿಗಳಿಗೆ ಹಠ ಹಿಡಿಯುತ್ತಾರೆ. ಸಾಮಾನ್ಯ ಅಡುಗೆಗಳನ್ನು ತಳ್ಳಿ ತಮಗೆ ಪುಟ್ಟ ಪುಟ್ಟ ದೋಸೆ, ಇಡ್ಲಿಗಳನ್ನು ಮಾಡಿ ಕೊಡುವಂತೆ ಕೇಳುತ್ತಾರೆ. ಮಕ್ಕಳನ್ನು ಸಮಾಧಾನಪಡಿಸೋದು ಪ್ರತಿಯೊಬ್ಬ ಪೋಷಕರಿಗೂ ಸವಾಲು. ಮಕ್ಕಳಿಗೆಂದೇ ವಿಶೇಷ ಆಹಾರ ತಯಾರಿಸೋದು ಅಮ್ಮಂದಿರಿಗೂ ಕಷ್ಟ. ಈ ಪುಟ್ಟ ಮಕ್ಕಳಿಗಾಗಿ ನಾವಿದು ಸಿಂಪಲ್ ರೆಸಿಪಿಯೊಂದನ್ನು ಹೇಳಿಕೊಡುತ್ತೇವೆ. ನಾವು ಸಾಮಾನ್ಯವಾಗಿ ಮಾಡೋ ದೋಸೆ ಹಿಟ್ಟನ್ನೇ ಬಳಸಿ ಸಿಹಿ ಸಿಹಿಯಾದ ಬಾಳೆಹಣ್ಣಿನ ಪುಟ್ಟ ಪುಟ್ಟ ದೋಸೆಗಳನ್ನು ಮಾಡಿದರೆ ಮಕ್ಕಳು ಇಷ್ಟಪಟ್ಟು ಸವಿಯುತ್ತಾರೆ.

    ಬೇಕಾಗುವ ಪದಾರ್ಥಗಳು:
    ರೆಡಿಮೇಡ್ ದೋಸೆ ಹಿಟ್ಟು – ಅರ್ಧ ಕಪ್ (ಮನೆಯಲ್ಲಿ ಮಾಡಿದ ಸಾಮಾನ್ಯ ದೋಸೆ ಹಿಟ್ಟನ್ನೂ ಬಳಸಬಹುದು)
    ಕಿವುಚಿದ ಬಾಳೆಹಣ್ಣು – ಅರ್ಧ ಕಪ್
    ಸಕ್ಕರೆ – 2 ಟೀಸ್ಪೂನ್
    ತುಪ್ಪ ಅಥವಾ ಬೆಣ್ಣೆ – ದೋಸೆ ಕಾಯಿಸಲು ಬೇಕಾಗುವಷ್ಟು ಇದನ್ನೂ ಓದಿ: ಟ್ರೈ ಮಾಡಿ ಕ್ರಿಸ್ಪಿ ಪೋಹಾ ಕಟ್ಲೆಟ್..

    ಮಾಡುವ ವಿಧಾನ:
    * ಮೊದಲಿಗೆ ದೋಸೆ ಹಿಟ್ಟಿಗೆ ಕಿವುಚಿದ ಬಾಳೆಹಣ್ಣು ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ರುಚಿ ಹಾಗೂ ಸ್ಥಿರತೆ ನೋಡಿಕೊಂಡು ಉಪ್ಪು ಹಾಗೂ ನೀರನ್ನು ಸೇರಿಸಿಕೊಳ್ಳಬಹುದು.
    * ಈಗ ದೋಸೆಯ ತವಾವನ್ನು ಬಿಸಿ ಮಾಡಿ, 1 ಟೀಸ್ಪೂನ್‌ನಷ್ಟು ತುಪ್ಪ ಅಥವಾ ಬೆಣ್ಣೆಯನ್ನು ಸವರಿ.
    * ಅದರ ಮೇಲೆ ಪುಟ್ಟ ಪುಟ್ಟ ದೋಸೆಗಳನ್ನು ಹರಡಿಕೊಳ್ಳಿ ಹಾಗೂ ಸ್ವಲ್ಪ ಸ್ವಲ್ಪವೇ ಬೆಣ್ಣೆ ಅಥವಾ ತುಪ್ಪವನ್ನು ಹಾಕಿ.
    * ಕಾವಲಿ ಮುಚ್ಚಿ, ಮಧ್ಯಮ ಉರಿಯಲ್ಲಿ ದೋಸೆಗಳನ್ನು 1-2 ನಿಮಿಷ ಬೇಯಿಸಿಕೊಳ್ಳಿ.
    * ದೋಸೆಗಳನ್ನು ಮಗುಚಿ ಹಾಕಿ ಮತ್ತೆ 1 ನಿಮಿಷ ಬೇಯಿಸಿಕೊಳ್ಳಿ.
    * ಇದೀಗ ಮಕ್ಕಳ ಫೇವ್ರೆಟ್ ಸಿಹಿ ಸಿಹಿ ಬಾಳೆಹಣ್ಣಿನ ದೋಸೆ ತಯಾರಾಗಿದ್ದು, ಬಿಸಿ ಬಿಸಿಯಾಗಿ ಸವಿಯಲು ನೀಡಿ. ಇದನ್ನೂ ಓದಿ: ಬಾದಾಮಿ ಹಿಟ್ಟು ಬಳಸಿ ಮಾಡಿ ಟೇಸ್ಟಿ ಪ್ಯಾನ್ ಕೇಕ್

  • ಈ ಸೀಸನ್‌ನಲ್ಲಿ ಮಾಡಿ ಟೇಸ್ಟಿ ಮ್ಯಾಂಗೋ ಚಿಕನ್

    ಈ ಸೀಸನ್‌ನಲ್ಲಿ ಮಾಡಿ ಟೇಸ್ಟಿ ಮ್ಯಾಂಗೋ ಚಿಕನ್

    ದು ಮಾವಿನ ಹಣ್ಣು ಸಿಗೋ ಸೀಸನ್. ಮಾವಿನ ಹಣ್ಣನ್ನು ಹಾಗೇ ಸವಿಯೋದಕ್ಕಿಂತ ವಿವಿಧ ಅಡುಗೆಗಳಲ್ಲಿ ಬಳಸಿದರೆ ರುಚಿಗೆ ಹೊಸ ಟಚ್ ಸಿಗುವುದರೊಂದಿಗೆ ಸವಿಯಲು ಮಜವಾಗಿರುತ್ತದೆ. ನಾವಿಂದು ಹೇಳಿಕೊಡುತ್ತಿರುವ ಮ್ಯಾಂಗೋ ಚಿಕನ್ ಸಿಹಿ ಹಾಗೂ ಖಾರವಾದ ಏಷ್ಯನ್ ಶೈಲಿಯ ರೆಸಿಪಿ. ಇದನ್ನು ಕೇವಲ 30 ನಿಮಿಷಗಳಲ್ಲಿ ತಯಾರಿಸಬಹುದಾಗಿದ್ದು ಅನ್ನ ಅಥವಾ ನೂಡಲ್ಸ್‌ನೊಂದಿಗೂ ಸವಿಯಬಹುದು. ಹಾಗಿದ್ದರೆ ಟೇಸ್ಟಿ ಮ್ಯಾಂಗೋ ಚಿಕನ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಚಿಕನ್ ಫ್ರೈಗೆ:
    ಸಣ್ಣ ತುಂಡುಗಳಾಗಿ ಕತ್ತರಿಸಿದ ಮೂಳೆಗಳಿಲ್ಲದ ಕೋಳಿ ಮಾಂಸ – ಅರ್ಧ ಕೆಜಿ
    ಕಾರ್ನ್ ಫ್ಲೋರ್ – ಕಾಲು ಕಪ್
    ಮೈದಾ ಹಿಟ್ಟು – ಕಾಲು ಕಪ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಕರಿ ಮೆಣಸಿನಪುಡಿ – ಕಾಲು ಟೀಸ್ಪೂನ್
    ಎಣ್ಣೆ – ಹುರಿಯಲು ಬೇಕಾಗುವಷ್ಟು
    ಗ್ರೇವಿ ತಯಾರಿಸಲು:
    ಎಣ್ಣೆ – 3 ಟೀಸ್ಪೂನ್
    ಹೆಚ್ಚಿದ ಬೆಳ್ಳುಳ್ಳಿ – 2 ಟೀಸ್ಪೂನ್
    ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಕ್ಯಾಪ್ಸಿಕಮ್ – 1
    ಸೋಯಾ ಸಾಸ್ – 2 ಟೀಸ್ಪೂನ್
    ರೆಡ್ ಚಿಲ್ಲಿ ಸಾಸ್ – 2 ಟೀಸ್ಪೂನ್
    ಟೊಮೆಟೊ ಕೆಚಪ್ – 2 ಟೀಸ್ಪೂನ್
    ಸ್ವೀಟ್ ಚಿಲ್ಲಿ ಸಾಸ್ – 4 ಟೀಸ್ಪೂನ್
    ವಿನೆಗರ್ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕರಿ ಮೆಣಸಿನಪುಡಿ – ಅರ್ಧ ಟೀಸ್ಪೂನ್
    ಕಾರ್ನ್ ಫ್ಲೋರ್ – 2 ಟೀಸ್ಪೂನ್
    ನೀರು – 1 ಕಪ್
    ಸಿಪ್ಪೆ ಸುಲಿದು ಘನಾಕಾರದಲ್ಲಿ ಕತ್ತರಿಸಿದ ಮಾವಿನ ಹಣ್ಣು – 1 ಕಪ್ ಇದನ್ನೂ ಓದಿ: ಕ್ಲಾಸಿಕ್ ಬೆಂಗಾಲಿ ಮೀನು ಸಾರು – ಹೆಚ್ಚು ಮಸಾಲೆ ಇಲ್ಲದಿದ್ರೂ ಸೂಪರ್ ಸ್ವಾದ

    ಮಾಡುವ ವಿಧಾನ:
    * ಮೊದಲಿಗೆ ಚಿಕನ್ ಅನ್ನು ಶುಚಿಗೊಳಿಸಿ, ಒಣಗಿಸಿಡಿ.
    * ಒಂದು ಬೌಲ್‌ನಲ್ಲಿ ಕಾರ್ನ್ ಫ್ಲೋರ್, ಮೈದಾ ಹಿಟ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕರಿ ಮೆಣಸಿನಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಚಿಕನ್ ತುಂಡುಗಳನ್ನು ಬೌಲ್‌ಗೆ ಹಾಕಿ ಹಿಟ್ಟಿನ ಮಿಶ್ರಣ ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿ.
    * ಈಗ ಚಿಕನ್ ತುಂಡುಗಳನ್ನು ಬಿಸಿ ಎಣ್ಣೆಯಲ್ಲಿ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ. ಬಳಿಕ ತೆಗೆದು ಪಕ್ಕಕ್ಕಿಡಿ.
    * ಈಗ ಒಂದು ಬಾಣಲೆ ತೆಗೆದುಕೊಂಡು ಅದರಲ್ಲಿ 3 ಟೀಸ್ಪೂನ್ ಎಣ್ಣೆ ಹಾಕಿ ಬಿಸಿಯಾದ ಬಳಿಕ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಕೆಲ ಸೆಕೆಂಡುಗಳ ವರೆಗೆ ಫ್ರೈ ಮಾಡಿಕೊಳ್ಳಿ.
    * ಬಳಿಕ ಈರುಳ್ಳಿ ಮತ್ತು ಕ್ಯಾಪ್ಸಿಕಮ್ ಸೇರಿಸಿ ಒಂದು ನಿಮಿಷ ಹೆಚ್ಚಿನ ಉರಿಯಲ್ಲಿ ಫ್ರೈ ಮಾಡಿ.
    * ಈಗ ಸೋಯಾ ಸಾಸ್, ಸ್ವೀಟ್ ಚಿಲ್ಲಿ ಸಾಸ್, ರೆಡ್ ಚಿಲ್ಲಿ ಸಾಸ್, ಟೊಮೆಟೊ ಕೆಚಪ್, ವಿನೆಗರ್, ಉಪ್ಪು ಮತ್ತು ಕರಿ ಮೆಣಸಿನಪುಡಿ ಸೇರಿಸಿ ಮಿಶ್ರಣ ಮಾಡಿ.
    * ಒಂದು ಸಣ್ಣ ಬೌಲ್‌ನಲ್ಲಿ ಕಾರ್ನ್ ಫ್ಲೋರ್‌ಗೆ 1 ಕಪ್ ನೀರು ಸೇರಿಸಿ, ಗಂಟಿಲ್ಲದಂತೆ ಮಿಶ್ರಣ ಮಾಡಿ ಸ್ಲರಿ ತಯಾರಿಸಿ.
    * ಈಗ ಸಾಸ್ ಮಿಶ್ರಣಕ್ಕೆ ಹುರಿದಿಟ್ಟಿದ್ದ ಚಿಕನ್, ಸ್ಲರಿ ಹಾಗೂ ಮಾವಿನ ತುಂಡುಗಳನ್ನು ಸೇರಿಸಿ ಮಿಶ್ರಣ ಮಾಡಿ.
    * ಇದೀಗ ಟೇಸ್ಟಿ ಮ್ಯಾಂಗೋ ಚಿಕನ್ ತಯಾರಾಗಿದ್ದು, ಬಿಸಿ ಅನ್ನ ಅಥವಾ ನೂಡಲ್ಸ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ದಕ್ಷಿಣ ಭಾರತದ ರುಚಿಕರ ಏಡಿ ಕರಿ ರೆಸಿಪಿ

  • ಟ್ರೈ ಮಾಡಿ ಕ್ರಿಸ್ಪಿ ಪೋಹಾ ಕಟ್ಲೆಟ್..

    ಟ್ರೈ ಮಾಡಿ ಕ್ರಿಸ್ಪಿ ಪೋಹಾ ಕಟ್ಲೆಟ್..

    ಮಕ್ಕಳಿಗೆ ತಿಂಡಿಗಳೆಂದರೆ ಅಚ್ಚುಮೆಚ್ಚು. ಅದರಲ್ಲೂ ಕುರುಕುಲು ತಿಂಡಿ ಎಂದರೆ ಇನ್ನೂ ಖುಷಿಪಡುತ್ತಾರೆ. ಸಂಜೆ ಶಾಲೆಯಿಂದ ಬಂದ ಮಕ್ಕಳಿಗೆ ಏನಾದರೂ ತಿಂಡಿ ರೆಡಿ ಮಾಡಬೇಕು ಎಂದರೆ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ. ಇವತ್ತಿನ ನಮ್ಮ ರೆಸಿಪಿ ಕ್ರಿಸ್ಪಿ ಪೋಹಾ ಕಟ್ಲೆಟ್. ಇದನ್ನು ಮಕ್ಕಳು ಮಾತ್ರವಲ್ಲದೇ ದೊಡ್ಡವರೂ ಸಹ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾದ್ರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಬಿ ಬೈಟ್ಸ್

    ಬೇಕಾಗುವ ಸಾಮಾಗ್ರಿಗಳು:
    ನೆನೆಸಿದ ದಪ್ಪ ಅವಲಕ್ಕಿ – 2 ಕಪ್
    ಬೇಯಿಸಿದ ಆಲುಗೆಡ್ಡೆ- 4
    ತುರಿದ ಕ್ಯಾರೆಟ್ – 1 ಕಪ್
    ಹೆಚ್ಚಿದ ದೊಣ್ಣೆ ಮೆಣಸು – ಅರ್ಧ ಕಪ್
    ಸಣ್ಣಗೆ ಹೆಚ್ಚಿದ ಈರುಳ್ಳಿ- ಒಂದು
    ಹೆಚ್ಚಿದ ಶುಂಠಿ – ಸ್ವಲ್ಪ
    ಹೆಚ್ಚಿದ ಹಸಿಮೆಣಸಿನ ಕಾಯಿ – ಸ್ವಲ್ಪ
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
    ಅರಶಿಣ – ಒಂದು ಚಿಟಿಕೆ
    ಉಪ್ಪು – ರುಚಿಗೆ ತಕ್ಕಷ್ಟು
    ಚಾಟ್ ಮಸಾಲ – ಅರ್ಧ ಚಮಚ
    ಅಚ್ಚ ಖಾರದ ಪುಡಿ – ಅರ್ಧ ಚಮಚ
    ದನಿಯಾ ಪುಡಿ – ಅರ್ಧ ಚಮಚ
    ಗರಂ ಮಸಾಲ – ಅರ್ಧ ಚಮಚ
    ಜೋಳದ ಹುಡಿ – ಅರ್ಧ ಕಪ್
    ನಿಂಬೆ ಹಣ್ಣು – ಅರ್ಧ
    ಎಣ್ಣೆ- ಕಾಯಿಸಲು ಬೇಕಾಗುವಷ್ಟು
    ಬ್ರೆಡ್- 2

    ಮಾಡುವ ವಿಧಾನ:

    • ಮೊದಲಿಗೆ ಬ್ರೆಡ್ ಕ್ರಂಪ್ಸ್ ಮಾಡಿಕೊಳ್ಳಿ. ಬ್ರೆಡ್ ಅನ್ನು ಓವನ್ ಅಲ್ಲಿ ರೋಸ್ಟ್ ಮಾಡಿಕೊಂಡು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಅದನ್ನು ಒಂದು ಬೌಲಿಗೆ ಹಾಕಿಟ್ಟುಕೊಳ್ಳಬೇಕು.
    • ಬಳಿಕ ನೆನೆಸಿದ ದಪ್ಪ ಅವಲಕ್ಕಿ ಹಾಗೂ ಬೇಯಿಸಿದ ಆಲೂಗಡ್ಡೆಯನ್ನು ಒಂದು ಬೌಲಿಗೆ ಹಾಕಿ ಚನ್ನಾಗಿ ಕಿವುಚಿಕೊಳ್ಳಿ. ಬಳಿಕ ಅದಕ್ಕೆ ಒಂದು ಕಪ್ ತುರಿದ ಕ್ಯಾರೆಟ್, ಅರ್ಧ ಕಪ್ ಹೆಚ್ಚಿದ ದೊಣ್ಣೆ ಮೆಣಸು, ಸಣ್ಣಗೆ ಹೆಚ್ಚಿದ ಈರುಳ್ಳಿ, ಸಣ್ಣದಾಗಿ ಹೆಚ್ಚಿದ ಶುಂಠಿ ಮತ್ತು ಹಸಿ ಮೆಣಸಿನಕಾಯಿ, ಹೆಚ್ಚಿದ ಕೊತ್ತಂಬರಿ, ಉಪ್ಪು, ಅರಶಿಣ, ಚಾಟ್ ಮಸಾಲ, ಗರಂ ಮಸಾಲ, ಅಚ್ಚ ಖಾರದ ಪುಡಿ, ದನಿಯಾ ಪುಡಿಯನ್ನು ಸೇರಿಸಿಕೊಳ್ಳಿ. ಬಳಿಕ ಇದಕ್ಕೆ ಒಂದು ಚಮಚ ಜೋಳದ ಹುಡಿಯನ್ನು ಹಾಕಿ, ಅರ್ಧ ನಿಂಬೆ ರಸವನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    • ಬಳಿಕ ಒಂದು ಚಿಕ್ಕ ಬೌಲ್‌ನಲ್ಲಿ ಎರಡು ಚಮಚ ಜೋಳದ ಹುಡಿಗೆ ಸ್ವಲ್ಪ ನೀರು ಹಾಕಿ ತೆಳ್ಳಗೆ ಕಲಸಿಕೊಳ್ಳಿ. ಅಂಗೈಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಕಟ್ಲೆಟ್ ಮಿಶ್ರಣವನ್ನು ಸ್ವಲ್ಪ ತೆಗೆದುಕೊಂಡು ಅಂಗೈಯಲ್ಲಿ ತಟ್ಟಿಕೊಳ್ಳಬೇಕು. ಬಳಿಕ ಇದನ್ನು ಜೋಳದ ನೀರಿನಲ್ಲಿ ಅದ್ದಿಕೊಂಡು ಬಳಿಕ ಬ್ರೆಡ್ ಕ್ರಂಪ್ಸ್‌ಗೆ ಅದ್ದಿಕೊಳ್ಳಬೇಕು. ಇದೇ ರೀತಿ ಎಲ್ಲವನ್ನು ಮಾಡಿಟ್ಟುಕೊಳ್ಳಿ.
    • ನಂತರ ಒಂದು ಬಾಣಾಲೆಯಲ್ಲಿ ಎಣ್ಣೆ ಬಿಸಿಗಿಟ್ಟುಕೊಂಡು ಕಾದ ಬಳಿಕ ಅದಕ್ಕೆ ಎರಡರಿಂದ ಮೂರು ಕಟ್ಲೆಟ್ ಹಾಕಿಕೊಂಡು ಚನ್ನಾಗಿ ಕಾಯಿಸಿಕೊಳ್ಳಬೇಕು. ಗ್ಯಾಸ್ ಚಿಕ್ಕ ಉರಿಯಲ್ಲಿ ಇಟ್ಟರೆ ಕಟ್ಲೆಟ್ ಕ್ರಿಸ್ಪಿಯಾಗಿ ಬರುತ್ತದೆ. ಕಟ್ಲೆಟ್ ಚೆನ್ನಾಗಿ ಬೆಂದು ಕಂದು ಬಣ್ಣ ಬಂದಮೇಲೆ ಎಣ್ಣೆಯಿಂದ ತೆಗೆದು ಒಂದು ಪ್ಲೇಟ್‌ಗೆ ಹಾಕಿ ಬಿಸಿಬಿಸಿಯಾಗಿ ಸರ್ವ್ ಮಾಡಿ. ಇದನ್ನೂ ಓದಿ: ಡಿಫರೆಂಟ್ ಆಗಿ ಮಾಡಿ ರುಚಿಕರ ಈರುಳ್ಳಿ ಪರೋಟ
  • ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಬಿ ಬೈಟ್ಸ್

    ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಬಿ ಬೈಟ್ಸ್

    ಹೂಕೋಸು ಅಥವಾ ಗೋಬಿಯ ಯಾವುದೇ ಖಾದ್ಯವನ್ನು ರುಚಿಕರವಾಗಿ ತಯಾರಿಸಬಹುದು. ಅಡುಗೆ ಮನೆಯಲ್ಲಿ ಹೊಸ ತರಕಾರಿಗಳು ಯಾವುದೂ ಇಲ್ಲ ಎನಿಸಿದರೆ ಈ ತರಕಾರಿಯನ್ನು ಖರೀದಿಸೋದು ಬೆಸ್ಟ್. ಬೇಕೆನಿಸಿದಾಗ ರುಚಿ ರುಚಿಯಾದ ಸ್ನ್ಯಾಕ್ಸ್ ತಯಾರಿಸಲು ಇದು ಪರ್ಫೆಕ್ಟ್ ಆಗಿರುತ್ತದೆ. ನಾವಿಂದು ಸಿಹಿ, ಹುಳಿ, ಮಸಾಲೆಯುಕ್ತ ರುಚಿಕರವಾದ ಗೋಬಿ ಬೈಟ್ಸ್ ಮಾಡೋದು ಹೇಗೆಂದು ತಿಳಿಸಿಕೊಡುತ್ತೇವೆ. ಇದನ್ನು ಸಂಜೆ ವೇಳೆ ಸ್ನ್ಯಾಕ್ಸ್ ಆಗಿ ಸವಿಯಬಹುದು.

    ಬೇಕಾಗುವ ಪದಾರ್ಥಗಳು:
    ಕತ್ತರಿಸಿ ಶುಚಿಗೊಳಿಸಿದ ಹೂಕೋಸು – 1 (ಸುಮಾರು 500 ಗ್ರಾಂ)
    ಎಣ್ಣೆ – 2 ಟೀಸ್ಪೂನ್
    ಟೊಮೆಟೊ ಕೆಚಪ್ – 4 ಟೀಸ್ಪೂನ್
    ಚಿಲ್ಲಿ ಸಾಸ್ – 2 ಟೀಸ್ಪೂನ್
    ಕಂದು ಸಕ್ಕರೆ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ ಇದನ್ನೂ ಓದಿ: ಮಕ್ಕಳು ಇಷ್ಟಪಟ್ಟು ತಿನ್ನುವ ರೆಸಿಪಿ – ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಏರ್ ಫ್ರೈಯರ್ ಅನ್ನು ಪೂರ್ವಭಾವಿಯಾಗಿ 350 ಡಿಗ್ರಿ ಎಫ್‌ಗೆ 5 ನಿಮಿಷಗಳ ಕಾಲ ಕಾಯಿಸಿಕೊಳ್ಳಿ.
    * ಕತ್ತರಿಸಿ ಶುಚಿಗೊಳಿಸಿದ ಹೂಕೋಸನ್ನು ಒಂದು ಮಿಕ್ಸಿಂಗ್ ಬೌಲ್‌ಗೆ ಹಾಕಿ ಅದಕ್ಕೆ ಎಣ್ಣೆ ಚಿಮುಕಿಸಿ ಕೈಗಳಿಂದ ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿ.
    * ಈಗ ಹೂಕೋಸನ್ನು ಏರ್ ಫ್ರೈಯರ್‌ನ ಬಾಸ್ಕೆಟ್‌ಗೆ ಹಾಕಿ ಸಮವಾಗಿ ಹರಡಿ. ಹೆಚ್ಚುವರಿ ಹೂಕೋಸು ಇದ್ದರೆ ಬ್ಯಾಚ್‌ಗಳಲ್ಲಿ ಕಾಯಿಸಿಕೊಳ್ಳಬಹುದು.
    * ಹೂಕೋಸುಗಳನ್ನು 8 ನಿಮಿಷಗಳ ಕಾಲ ಫ್ರೈ ಮಾಡಿ.
    * ಗೋಬಿ ಫ್ರೈ ಆಗುತ್ತಿರುವ ವೇಳೆ ಸಾಸ್ ಅನ್ನು ತಯಾರಿಸಿ. ಅದಕ್ಕಾಗಿ ಒಂದು ಬೌಲ್‌ನಲ್ಲಿ ಕೆಚಪ್, ಚಿಲ್ಲಿ ಸಾಸ್, ಸಕ್ಕರೆ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಹೂಕೋಸು ಭಾಗಶಃ ಬೆಂದಿರುತ್ತದೆ. ಇದನ್ನು ಬೌಲ್‌ಗೆ ಹಾಕಿ ಸಾಸ್‌ನೊಂದಿಗೆ ಚೆನ್ನಾಗಿ ಲೇಪನವಾಗುವವರೆಗೆ ಮಿಶ್ರಣ ಮಾಡಿ.
    * ಈಗ ಮತ್ತೆ ಏರ್ ಫ್ರೈಯರ್‌ನ ಬಾಸ್ಕೆಟ್‌ಗೆ ಹೂಕೋಸನ್ನು ಹಾಕಿ, ಹರಡಿ 370 ಡಿಗ್ರಿ ಎಫ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ಬೇಯಿಸಿ. ಸುಮಾರು 8 ನಿಮಿಷಗಳ ನಡುವೆ ಒಮ್ಮೆ ಟಾಸ್ ಮಾಡಿ.
    * ಇದೀಗ ಗೋಬಿ ಬೈಟ್ಸ್ ಅನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಚಹಾದ ಸಮಯದಲ್ಲಿ ಗೋಬಿ ಬೈಟ್ಸ್ ಅನ್ನು ಸವಿದು ಆನಂದಿಸಿ. ಇದನ್ನೂ ಓದಿ: ಉಳಿದ ಇಡ್ಲಿಗಳಿಂದ ಮಾಡಿ ಇಡ್ಲಿ ಮಂಚೂರಿಯನ್

  • ಡಿಫರೆಂಟ್ ಆಗಿ ಮಾಡಿ ರುಚಿಕರ ಈರುಳ್ಳಿ ಪರೋಟ

    ಡಿಫರೆಂಟ್ ಆಗಿ ಮಾಡಿ ರುಚಿಕರ ಈರುಳ್ಳಿ ಪರೋಟ

    ರುಳ್ಳಿ ಪರೋಟ ಭಾರತೀಯ ಫ್ಲಾಟ್‌ಬ್ರೆಡ್. ಮುಖ್ಯವಾಗಿ ಪಂಜಾಬ್‌ನಲ್ಲಿ ಅತ್ಯಂತ ಫೇಮಸ್ ಆಗಿರೋ ಪರೋಟಗೆ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಗೋಧಿಯಿಂದ ಮಾಡಲಾಗುವ ಪರೋಟವನ್ನು ಇನ್ನೂ ವಿವಿಧ ರೀತಿಯ ತರಕಾರಿಗಳನ್ನು ಬಳಸಿ ಮತ್ತಷ್ಟು ರುಚಿಕರವನ್ನಾಗಿ ಮಾಡಬಹುದು. ಆಲೂ ಪರೋಟಾ, ಮಸಾಲಾ ಪರೋಟಾ ನಾವು ಈ ಹಿಂದೆ ಮಾಡೋದು ಹೇಗೆಂದು ಹೇಳಿಕೊಟ್ಟಿದ್ದೇವೆ. ಇಂದು ನಾವು ಈರುಳ್ಳಿ ಪರೋಟ ರೆಸಿಪಿ ಹೇಳಿಕೊಡುತ್ತಿದ್ದೇವೆ. ಇದನ್ನು ಮನೆಯಲ್ಲಿ ಟ್ರೈ ಮಾಡಿ ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ಹಿಟ್ಟು ತಯಾರಿಸಲು:
    ಗೋಧಿ ಹಿಟ್ಟು – 2 ಕಪ್
    ಉಪ್ಪು – ಅರ್ಧ ಟೀಸ್ಪೂನ್
    ಎಣ್ಣೆ – 2 ಟೀಸ್ಪೂನ್
    ನೀರು – ಅಗತ್ಯವಿರುವಂತೆ
    ಈರುಳ್ಳಿ ಸ್ಟಫಿಂಗ್ ತಯಾರಿಸಲು:
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ಗರಂ ಮಸಾಲೆ ಪುಡಿ – ಅಗತ್ಯವಿರುವಂತೆ
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಪರೋಟ ಕಾಯಿಸಲು ಬೇಕಾಗುವಷ್ಟು ಇದನ್ನೂ ಓದಿ: ಬಾದಾಮಿ ಹಿಟ್ಟು ಬಳಸಿ ಮಾಡಿ ಟೇಸ್ಟಿ ಪ್ಯಾನ್ ಕೇಕ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಗೋಧಿ ಹಿಟ್ಟು ಹಾಕಿ, 2 ಟೀಸ್ಪೂನ್ ಎಣ್ಣೆ, ಉಪ್ಪು ಹಾಗೂ ಚಪಾತಿ ಹಿಟ್ಟಿನ ಹದಕ್ಕೆ ತರಲು ಬೇಕಾಗುವಷ್ಟು ನೀರು ಸೇರಿಸಿ ಮೃದುವಾಗಿ ಬೆರೆಸಿಕೊಳ್ಳಿ.
    * ಹಿಟ್ಟನ್ನು ಮುಚ್ಚಿ 20-30 ನಿಮಿಷ ಪಕ್ಕಕ್ಕಿಟ್ಟು ವಿಶ್ರಾಂತಿ ನೀಡಿ.
    * ಈ ನಡುವೆ ನೀವು ಈರುಳ್ಳಿ ಸ್ಟಫಿಂಗ್ ತಯಾರಿಸಬೇಕು. ಅದಕ್ಕಾಗಿ ಇನ್ನೊಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಈರುಳ್ಳಿ ಹಾಗೂ ಹಸಿರು ಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಈಗ ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆಗಳನ್ನು ತಯಾರಿಸಿ, ಸುಮಾರು 3-4 ಇಂಚಿನಷ್ಟು ವ್ಯಾಸ ಬರುವಂತೆ ಲಟ್ಟಣಿಗೆಯಿಂದ ಲಟ್ಟಿಸಿಕೊಳ್ಳಿ.
    * ಅದರ ನಡುವೆ ಹೆಚ್ಚಿದ ಈರುಳ್ಳಿ ಹಾಗೂ ಮೆಣಸಿನಕಾಯಿ ಮಿಶ್ರಣವನ್ನು 1-2 ಟೀಸ್ಪೂನ್‌ನಷ್ಟು ಇಟ್ಟು, ಅದರ ಮೇಲೆ ಚಿಟಿಕೆ ಗರಂ ಮಸಾಲೆ ಪುಡಿ, ಕೆಂಪು ಮೆಣಸಿನ ಪುಡಿ ಹಾಗೂ ಉಪ್ಪನ್ನು ಸಿಂಪಡಿಸಿ.
    * ಈಗ ಹಿಟ್ಟಿನ ಅಂಚುಗಳನ್ನು ಜೋಡಿಸಿ, ಅದರ ಮಧ್ಯದಲ್ಲಿ ಒತ್ತಿ ಮತ್ತೆ ಚೆಂಡನ್ನಾಗಿ ಮಾಡಿ.
    * ಈಗ ಸುಮಾರು 5-8 ಇಂಚು ವ್ಯಾಸಕ್ಕೆ ಬರುವಂತೆ ಲಟ್ಟಣಿಗೆ ಸಹಾಯದಿಂದ ಸುತ್ತಿಕೊಳ್ಳಿ.
    * ಇಗ ತವಾವನ್ನು ಬಿಸಿ ಮಾಡಿ ಪರೋಟವನ್ನು ಅದರಲ್ಲಿಟ್ಟು ಎರಡೂ ಬದಿ ಸಮವಾಗಿ ಬೇಯಿಸಿಕೊಳ್ಳಿ. ಎರಡೂ ಬದಿ ಸ್ವಲ್ಪ ಎಣ್ಣೆಯನ್ನು ಹಚ್ಚಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕಾಯಿಸಿ.
    * ಇದೀಗ ಈರುಳ್ಳಿ ಪರೋಟ ತಯಾರಾಗಿದ್ದು, ಉಪ್ಪಿನಕಾಯಿ, ಮೊಸರು, ಅಥವಾ ಯಾವುದಾದರೂ ಗ್ರೇವಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಮಕ್ಕಳು ಇಷ್ಟಪಟ್ಟು ತಿನ್ನುವ ರೆಸಿಪಿ – ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡಿ

  • ಸ್ವೀಟ್ ರಂಗೀಲಾ ಬರ್ಫಿ ಟೇಸ್ಟ್ ಮಾಡಿ ಥ್ರಿಲ್ ಆಗಿ

    ಸ್ವೀಟ್ ರಂಗೀಲಾ ಬರ್ಫಿ ಟೇಸ್ಟ್ ಮಾಡಿ ಥ್ರಿಲ್ ಆಗಿ

    ಸಿಹಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಸಿಹಿ ಎಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ಕಡಿಮೆ ಸಮಯದಲ್ಲಿ ಸಿಹಿ ಮಾಡಬೇಕು ಎಂದುಕೊಂಡಿದ್ದರೆ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ ನೋಡಿ. ಇವತ್ತಿನ ನಮ್ಮ ರೆಸಿಪಿಯ ಹೆಸರು ರಂಗೀಲಾ ಬರ್ಫಿ. ಹಾಗಿದ್ದರೆ ಇದನ್ನು ಹೇಗೆ ಮಾಡೋದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಉಳಿದ ಅನ್ನ ಇದ್ರೆ ಖಂಡಿತ ಟ್ರೈ ಮಾಡಿ ಬೆಳ್ಳುಳ್ಳಿ ರೈಸ್

    ಬೇಕಾಗುವ ಸಾಮಗ್ರಿಗಳು:
    ಹಾಲಿನ ಪೌಡರ್- 2 ಕಪ್
    ಹಾಲು- 1 ಕಪ್
    ಸಕ್ಕರೆ- ಅರ್ಧ ಕಪ್
    ತುಪ್ಪ- ಅರ್ಧ ಕಪ್
    ಕಲರ್ ಪೌಡರ್- ಸ್ವಲ್ಪ
    ಏಲಕ್ಕಿ ಪುಡಿ- ಸ್ವಲ್ಪ

    ಮಾಡುವ ವಿಧಾನ:

    • ಮೊದಲಿಗೆ ಒಂದು ಪ್ಯಾನ್‌ನಲ್ಲಿ ತುಪ್ಪ ಹಾಕಿಕೊಂಡು ಮಧ್ಯಮ ಉರಿಯಲ್ಲಿ ಅದನ್ನು ಕರಗಿಸಿಕೊಳ್ಳಿ. ಬಳಿಕ ಅದಕ್ಕೆ ಹಾಲನ್ನು ಹಾಕಿ ಚನ್ನಾಗಿ ತಿರುವಿಕೊಳ್ಳಬೇಕು.
    • ಬಳಿಕ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಾಲಿನ ಪೌಡರ್ ಮತ್ತು ಸಕ್ಕರೆಯನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವು ಮಂದವಾಗುತ್ತಾ ಬಂದಾಗ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿಕೊಂಡು ತಿರುವಿಕೊಳ್ಳಿ.
    • ನಂತರ ಆ ಮಿಶ್ರಣವನ್ನು ಒಂದು ಬೌಲಿಗೆ ಹಾಕಿಕೊಂಡು ಅದಕ್ಕೆ ಕಲರ್ ಪೌಡರ್ ಸೇರಿಸಿಕೊಳ್ಳಿ. ಬಳಿಕ ಒಂದು ಟ್ರೇ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿಕೊಳ್ಳಿ. ಬೇಕಿಂಗ್ ಪೇಪರ್ ಕೂಡಾ ಬಳಸಿಕೊಳ್ಳಬಹುದು.
    • ಬಳಿಕ ಆ ಟ್ರೇಗೆ ಮಿಶ್ರಣವನ್ನು ಹಾಕಿಕೊಂಡು ಎಲ್ಲಾ ಕಡೆ ಹರಡಿಕೊಳ್ಳಿ. ನಂತರ ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ನಂತರ ಅದನ್ನು ಒಂದು ಪ್ಲೇಟ್‌ಗೆ ಹಾಕಿಕೊಂಡು ಬಾದಾಮಿ ಪೀಸ್‌ಗಳಿಂದ ಅಲಂಕರಿಸಿ. ರಂಗೀಲಾ ಬರ್ಫಿ ತಿನ್ನಲು ರೆಡಿ. ಇದನ್ನೂ ಓದಿ: ದೇಹಕ್ಕೆ, ಮನಸ್ಸಿಗೆ ಮುದನೀಡುವ ಡ್ರೈಫ್ರೂಟ್ಸ್ ಮಿಲ್ಕ್‌ಶೇಕ್

  • ಉಳಿದ ಅನ್ನ ಇದ್ರೆ ಖಂಡಿತ ಟ್ರೈ ಮಾಡಿ ಬೆಳ್ಳುಳ್ಳಿ ರೈಸ್

    ಉಳಿದ ಅನ್ನ ಇದ್ರೆ ಖಂಡಿತ ಟ್ರೈ ಮಾಡಿ ಬೆಳ್ಳುಳ್ಳಿ ರೈಸ್

    ನೆಯಲ್ಲಿ ಆಗಾಗ ಅನ್ನ ಉಳಿದು ಹೋಗೋದು ಸಾಮಾನ್ಯ. ರಾತ್ರಿ ಹೆಚ್ಚಾದ ಅನ್ನ ಬೆಳಗ್ಗೆ ಚಿತ್ರಾನ್ನ ಮಾಡೋದು ಎಲ್ಲರಿಗೂ ಗೊತ್ತು. ಆದರೆ ಪ್ರತಿ ಬಾರಿ ಚಿತ್ರಾನ್ನ ಮಾಡಿದ್ರೆ ಯಾರಿಗೆ ತಾನೇ ಬೋರ್ ಎನಿಸಲ್ಲ? ಮುಂದಿನ ಬಾರಿ ಉಳಿದು ಹೋದ ಅನ್ನದಿಂದ ಬೆಳ್ಳುಳ್ಳಿ ರೈಸ್ ಮಾಡೋದು ಖಂಡಿತಾ ಮರೆಯಬೇಡಿ. ಇದು ಮಾಡೋಕೆ ತುಂಬಾ ಸುಲಭವಾಗಿದ್ದು, ಮುಂದೆ ಅನ್ನ ಉಳಿದು ಹೋದಾಗ ಪದೇ ಪದೇ ಇದನ್ನು ಖಂಡಿತ ಮಾಡುತ್ತಲೇ ಇರುತ್ತೀರಿ.

    ಬೇಕಾಗುವ ಪದಾರ್ಥಗಳು:
    ಎಣ್ಣೆ – 1 ಟೀಸ್ಪೂನ್
    ಬೆಣ್ಣೆ – ಅರ್ಧ ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 3
    ಹೆಚ್ಚಿದ ಈರುಳ್ಳಿ – ಅರ್ಧ ಕಪ್
    ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಕಾಲು ಕಪ್
    ಹೆಚ್ಚಿದ ಮಶ್ರೂಮ್ – 3
    ಅನ್ನ – 3 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಸೋಯಾ ಸಾಸ್ – ಒಂದೂವರೆ ಟೀಸ್ಪೂನ್
    ಕರಿ ಮೆಣಸಿನಪುಡಿ – ಅರ್ಧ ಟೀಸ್ಪೂನ್ ಇದನ್ನೂ ಓದಿ: ಮಕ್ಕಳು ಇಷ್ಟಪಟ್ಟು ತಿನ್ನುವ ರೆಸಿಪಿ – ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ, ಬೆಳ್ಳುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ಬಳಿಕ ಬೆಳ್ಳುಳ್ಳಿಯನ್ನು ತೆಗೆದು ಪಕ್ಕಕ್ಕಿಡಿ.
    * ಈಗ ಉರಿಯನ್ನು ಹೆಚ್ಚಿಸಿ, ಅದೇ ಪ್ಯಾನ್‌ಗೆ ಬೆಣ್ಣೆ ಸೇರಿಸಿ, ಅದು ಕರಗಿದ ಬಳಿಕ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿದುಕೊಳ್ಳಿ.
    * ಬಳಿಕ ಮಶ್ರೂಮ್ ಸೇರಿಸಿ 2-3 ನಿಮಿಷ ಬೇಯಿಸಿಕೊಳ್ಳಿ.
    * ಬಳಿಕ ಉಪ್ಪು ಸೇರಿಸಿ ಮಿಶ್ರಣ ಮಾಡಿ.
    * ಈಗ ಅನ್ನವನ್ನು ಪ್ಯಾನ್‌ಗೆ ಹಾಕಿ 2-3 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ.
    * ಬಳಿಕ ಸೋಯಾ ಸಾಸ್, ಕರಿ ಮೆಣಸಿನಪುಡಿ ಸೇರಿಸಿ ಮಿಶ್ರಣ ಮಾಡಿ.
    * ಈಗ ಹುರಿದಿಟ್ಟಿದ್ದ ಬೆಳ್ಳುಳ್ಳಿ ಹಾಗೂ ಸ್ಪ್ರಿಂಗ್ ಆನಿಯನ್ ಅನ್ನು ಸೇರಿಸಿ ಮಿಕ್ಸ್ ಮಾಡಿ.
    * ಇದೀಗ ರುಚಿಕರ ಬೆಳ್ಳುಳ್ಳಿ ರೈಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದು ಗುಜರಾತಿ ಬಟಾಟಾ ಪೋಹಾ

  • ಬರೀ 15 ನಿಮಿಷ – ಎಗ್ ಡ್ರಾಪ್ ಸೂಪ್ ಮನೆಯಲ್ಲೇ ಮಾಡಿ

    ಬರೀ 15 ನಿಮಿಷ – ಎಗ್ ಡ್ರಾಪ್ ಸೂಪ್ ಮನೆಯಲ್ಲೇ ಮಾಡಿ

    ಮೊಟ್ಟೆ ಬಳಸಿ ಎಷ್ಟು ಬಗೆಯ ಅಡುಗೆ ಮಾಡಬಹುದು ಎಂದರೆ ಲೆಕ್ಕ ಹಿಡಿಯುವುದೇ ಕಷ್ಟ. ಮನೆಯಲ್ಲಿ ಒಂದಷ್ಟು ಮೊಟ್ಟೆ ಇದ್ದಾಗ ಫಟಾಫಟ್ ಅಂತ ಯಾವ ರೀತಿಯ ಅಡುಗೆಯನ್ನೂ ಮಾಡಬಹುದು. ಪಲ್ಯವಾಗಲಿ, ಸಾರು ಆಗಲಿ ಅಥವಾ ಹುರಿದ ಅಡುಗೆಗಳನ್ನೂ ಕೆಲವೇ ನಿಮಿಷಗಳಲ್ಲಿ ಮಾಡಬಹುದು. ನಾವಿಂದು ಕೇವಲ 15 ನಿಮಿಷಗಳಲ್ಲಿ ಮೊಟ್ಟೆಯ ಸೂಪ್ ಮಾಡೋದು ಹೇಗೆಂದು ತಿಳಿಸಿಕೊಡುತ್ತೇವೆ. ಚೈನೀಸ್ ಅಡುಗೆಗಳ ಪಟ್ಟಿಗೆ ಸೇರೋ ಈ ರೆಸಿಪಿಯನ್ನು ಎಗ್ ಡ್ರಾಪ್ ಸೂಪ್ ಎಂತಲೂ ಕರೆಯಬಹುದು.

    ಬೇಕಾಗುವ ಪದಾರ್ಥಗಳು:
    ಚಿಕನ್ ಸ್ಟಾಕ್/ ವೆಜ್‌ಟೇಬಲ್ ಸ್ಟಾಕ್ – 4 ಕಪ್
    ಶುಂಠಿ ಪೇಸ್ಟ್ – 1 ಟೀಸ್ಪೂನ್
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಕಾಲು ಕಪ್
    ಹೆಪ್ಪುಗಟ್ಟಿದ ಕಾರ್ನ್ – 1 ಕಪ್
    ಕಾರ್ನ್ ಫ್ಲೋರ್ – 2 ಟೀಸ್ಪೂನ್
    ಬೆಳ್ಳುಳ್ಳಿ ಪುಡಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕರಿ ಮೆಣಸಿನಪುಡಿ – ಸ್ವಾದಕ್ಕನುಸಾರ
    ಅರಿಶಿನ – ಕಾಲು ಟೀಸ್ಪೂನ್
    ನೀರು – ಕಾಲು ಕಪ್
    ಮೊಟ್ಟೆ – 6 ಇದನ್ನೂ ಓದಿ: ಬಾದಾಮಿ ಹಿಟ್ಟು ಬಳಸಿ ಮಾಡಿ ಟೇಸ್ಟಿ ಪ್ಯಾನ್ ಕೇಕ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆ ತೆಗೆದುಕೊಂಡು ಅದರಲ್ಲಿ ಚಿಕನ್ ಸ್ಟಾಕ್, ಶುಂಠಿ, ಸ್ಪ್ರಿಂಗ್ ಆನಿಯನ್, ಕಾರ್ನ್ ಹಾಕಿ ಕುದಿಯಲು ಬಿಡಿ.
    * ಒಂದು ಬೌಲ್‌ನಲ್ಲಿ ಕಾರ್ನ್ ಫ್ಲೋರ್, ಬೆಳ್ಳುಳ್ಳಿ ಪುಡಿ, ಉಪ್ಪು, ಕರಿ ಮೆಣಸಿನಪುಡಿ, ಅರಿಶಿನ ಹಾಕಿ, ಕಾಲು ಕಪ್ ನೀರನ್ನು ಸುರಿದು ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿ.
    * ಕಾರ್ನ್ ಫ್ಲೋರ್ ಮಿಶ್ರಣವನ್ನು ಸೂಪ್‌ಗೆ ಸುರಿದು ಮಿಶ್ರಣ ಮಾಡಿ ಹಾಗೂ ಉರಿಯನ್ನು ಕಡಿಮೆ ಮಾಡಿ.
    * ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿ ಚೆನ್ನಾಗಿ ಕಲಡಿಕೊಳ್ಳಿ.
    * ಈಗ ಕುದಿಯುತ್ತಿರುವ ಸೂಪ್‌ಗೆ ಮಿಶ್ರಣ ಮಾಡಿಟ್ಟ ಮೊಟ್ಟೆಯನ್ನು ನಿಧಾನವಾಗಿ ಸುರಿಯಿರಿ. ಈ ವೇಳೆ ಚಮಚದ ಸಹಾಯದಿಂದ ನಿಧಾನವಾಗಿ ಮಿಶ್ರಣ ಮಾಡಿ.
    * ಈಗ ಉರಿಯನ್ನು ಆಫ್ ಮಾಡಿ, ಇನ್ನಷ್ಟು ಸ್ಪ್ರಿಂಗ್ ಆನಿಯನ್‌ನಿಂದ ಅಲಂಕರಿಸಿ.
    * ಇದೀಗ ರುಚಿಕರ ಎಗ್ ಡ್ರಾಪ್ ಸೂಪ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಮಕ್ಕಳು ಇಷ್ಟಪಟ್ಟು ತಿನ್ನುವ ರೆಸಿಪಿ – ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡಿ