Tag: recipe

  • ಬಿಸಿಲಿನಿಂದ ಬಳಲಿದವರಿಗೆ ಪವರ್ ಕೊಡುತ್ತೆ ಈ ಮಿಲ್ಕ್‌ಶೇಕ್

    ಬಿಸಿಲಿನಿಂದ ಬಳಲಿದವರಿಗೆ ಪವರ್ ಕೊಡುತ್ತೆ ಈ ಮಿಲ್ಕ್‌ಶೇಕ್

    ದಿನ ಕಳೆದಂತೆ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಜನರು ಮನೆಯಿಂದ ಹೊರಬರಲಾರದ ಸ್ಥಿತಿಯುಂಟಾಗಿದೆ. ಬಿಸಿಲಿನಿಂದ ನಮ್ಮನ್ನು ನಾವು ಕಾಪಾಡಲು ಆರೋಗ್ಯಕರವಾದ ತಿಂಡಿ ತಿನಿಸುಗಳನ್ನು ಮತ್ತು ಫಲಾಹಾರಗಳನ್ನು ಜಾಸ್ತಿ ತಿಂದರೆ ಒಳ್ಳೆಯದು. ಅದೇ ರೀತಿ ಬಿಸಿಲಿನಲ್ಲಿ ಬಳಲಿ ಬಂದವರಿಗೆ ಎಳನೀರು ಶಕ್ತಿ ನೀಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ. ಇವತ್ತು ನಾವು ಎಳನೀರಿನಿಂದ ತಯಾರಿಸಬಹುದಾದ ಒಂದು ರೆಸಿಪಿಯನ್ನು ತಿಳಿಸಿಕೊಡುತ್ತಿದ್ದೇವೆ. ಈ ರೆಸಿಪಿಯ ಹೆಸರು ಎಳನೀರು ಮಿಲ್ಕ್‌ಶೇಕ್. ಹಾಗಿದ್ದರೆ ಇದನ್ನು ಹೇಗೆ ತಯಾರಿಸುವುದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಪಿಜ್ಜಾ ಸ್ಯಾಂಡ್‌ವಿಚ್ ಅಂದ್ರೆ ಇಷ್ಟ, ಆದ್ರೆ ಮಾಡಲು ಗೊತ್ತಿಲ್ಲ ಅನ್ನೋರಿಗೆ ಇಲ್ಲಿದೆ ರೆಸಿಪಿ

    ಬೇಕಾಗುವ ಸಾಮಗ್ರಿಗಳು:
    ಎಳನೀರು- 1
    ವೆನಿಲ್ಲಾ ಐಸ್‌ಕ್ರೀಮ್ – 1 ಕಪ್
    ಹಾಲು- ಅರ್ಧ ಕಪ್
    ಸಣ್ಣಗೆ ಹೆಚ್ಚಿದ ಬಾದಾಮ್ – ಸ್ವಲ್ಪ
    ಸಣ್ಣಗೆ ಹೆಚ್ಚಿದ ಪಿಸ್ತಾ – ಸ್ವಲ್ಪ
    ಕಂಡೆನ್ಸ್ಡ್ ಮಿಲ್ಕ್ – ಅಗತ್ಯಕ್ಕೆ ತಕ್ಕಷ್ಟು
    ಐಸ್ ಕ್ಯೂಬ್ಸ್ – 4ರಿಂದ 5

    ಮಾಡುವ ವಿಧಾನ:

    • ಮೊದಲಿಗೆ ಎಳನೀರಿನ ಗಂಜಿಯನ್ನು ತೆಗೆದು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ನಂತರ ಎಳನೀರಿನ ನೀರನ್ನು ಸಹಾ ಅದಕ್ಕೆ ಸೇರಿಸಿಕೊಳ್ಳಿ. ಬಳಿಕ 1 ಕಪ್ ವೆನಿಲ್ಲಾ ಐಸ್‌ಕ್ರೀಮ್, ಅರ್ಧ ಕಪ್ ಹಾಲು ಮತ್ತು ಹೆಚ್ಚಿದ ಬಾದಾಮ್ ಮತ್ತು ಪಿಸ್ತಾವನ್ನು ಹಾಕಿಕೊಳ್ಳಬೇಕು. ಬಳಿಕ ಇದಕ್ಕೆ ಸ್ವಲ್ಪ ಕಂಡೆನ್ಸ್ಡ್ ಮಿಲ್ಕ್ ಸೇರಿಸಿಕೊಳ್ಳಿ.
    • ಬಳಿಕ ದೇಹಕ್ಕೆ ತಂಪೆನಿಸುವ ಐಸ್‌ಕ್ಯೂಬ್ಸ್‌ಗಳನ್ನು ಹಾಕಿಕೊಂಡು ಚನ್ನಾಗಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ಗ್ಲಾಸಿಗೆ ಹಾಕಿಕೊಳ್ಳಿ. ನಂತರ ಅದರ ಮೇಲೆ ಸ್ವಲ್ಪ ಡ್ರೈ ಫ್ರೂಟ್ಸ್ ಹಾಕಿ ಅಲಂಕರಿಸಿ ಸವಿಯಲು ಕೊಡಿ. ಇದು ಉತ್ತಮ ರುಚಿಯನ್ನು ನೀಡುವುದು ಮಾತ್ರವಲ್ಲದೇ ಆರೋಗ್ಯವನ್ನೂ ಕಾಪಾಡುತ್ತದೆ. ಇದನ್ನೂ ಓದಿ: ಮೊಹಬ್ಬತ್ ಕಾ ಶರ್ಬತ್ ಕುಡಿದು ಚಿಲ್ ಆಗಿರಿ

  • ಟೇಸ್ಟಿ ಟೇಸ್ಟಿ ಸಿಂಗಾಪುರ್ ನೂಡಲ್ಸ್ ರೆಸಿಪಿ

    ಟೇಸ್ಟಿ ಟೇಸ್ಟಿ ಸಿಂಗಾಪುರ್ ನೂಡಲ್ಸ್ ರೆಸಿಪಿ

    ನೆಯಲ್ಲಿ ಏನಾದ್ರೂ ಸುಲಭವಾಗಿ ನಾನ್‌ವೆಜ್ ಸ್ಟ್ರೀಟ್ ಫುಡ್ ಸ್ಟೈಲ್‌ನಲ್ಲಿ ಅಡುಗೆ ಮಾಡಬೇಕು ಎಂದುಕೊಂಡಿದ್ರೆ ಒಮ್ಮೆ ಸಿಂಗಾಪುರ್ ನೂಡಲ್ಸ್ ಮಾಡಿ. ಸಿಂಗಾಪುರ್ ನೂಡಲ್ಸ್‌ನ ಮೂಲ ಸಿಂಗಾಪುರ ಅಲ್ಲ ಬದಲಿಗೆ ಹಾಂಗ್ ಕಾಂಗ್ ಎನ್ನೋದು ಹಾಸ್ಯಕರ ಸಂಗತಿ. ಸಿಗಡಿ ಮೀನು ಹಾಗೂ ಪೋರ್ಕ್‌ನಿಂದ ಮಾಡೋ ಈ ರೆಸಿಪಿ ತುಂಬಾ ಸಿಂಪಲ್ ಆಗಿದ್ದು, ತಕ್ಷಣವೂ ತಯಾರಾಗುತ್ತದೆ. ಟೇಸ್ಟಿ ಸಿಂಗಾಪುರ್ ನೂಡಲ್ಸ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಅಕ್ಕಿ ನೂಡಲ್ಸ್ – 400 ಗ್ರಾಂ
    ಬೇಯಿಸಿದ ಸಿಗಡಿ ಮೀನು – ಮಧ್ಯಮ ಗಾತ್ರದ 10
    ತಳ್ಳಗೆ ಕತ್ತರಿಸಿದ ಪೋರ್ಕ್ – 250 ಗ್ರಾಂ
    ಹೆಚ್ಚಿದ ಕೆಂಪು ಮೆಣಸು – 1
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – 3 ಎಸಳು
    ಮೊಟ್ಟೆ – 2
    ಎಣ್ಣೆ – 3 ಟೀಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಕರಿಬೇವು – 1 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಸೋಯಾ ಸಾಸ್ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಟ್ರೈ ಮಾಡಿ ಟೇಸ್ಟಿ ಫಿಶ್ ಪಕೋಡಾ

    ಮಾಡುವ ವಿಧಾನ:
    * ಮೊದಲಿಗೆ ಅಕ್ಕಿ ನೂಡಲ್ಸ್ ಅನ್ನು ಕುದಿಯುತ್ತಿರುವ ನೀರಿಗೆ ಹಾಕಿ 2-3 ನಿಮಿಷಗಳ ಕಾಲ ನೆನೆಸಿ ಬೇಯಿಸಿಕೊಳ್ಳಿ. ಬಳಿಕ ಉರಿಯನ್ನು ಆಫ್ ಮಾಡಿ, ನೀರನ್ನು ಹರಿಸಿ, ಪಕ್ಕಕ್ಕಿಡಿ.
    * ಒಂದು ಬಾಣಲೆಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ಅದರಲ್ಲಿ ಮೊಟ್ಟೆಯನ್ನು ಒಡೆದು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ಈಗ ಮೊಟ್ಟೆಯನ್ನು ಪಕ್ಕಕ್ಕಿಟ್ಟು ಬಾಣಲೆಯನ್ನು ಒರೆಸಿಕೊಳ್ಳಿ.
    * ಈಗ ಮಧ್ಯಮ ಉರಿಯಲ್ಲಿ ಉಳಿದ ಎಣ್ಣೆಯನ್ನು ಹಾಕಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
    * ಉರಿಯನ್ನು ಕಡಿಮೆ ಮಾಡಿಕೊಂಡು ಕರಿಬೇವು ಹಾಗೂ ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ.
    * ಕೆಂಪು ಮೆಣಸು ಸೇರಿಸಿ ಸುಮಾರು 2 ನಿಮಿಷ ಬೇಯಿಸಿ.
    * ಬಳಿಕ ಹಂದಿ ಮಾಂಸವನ್ನು ಸೇರಿಸಿ 1 ನಿಮಿಷ ಬೇಯಿಸಿ.
    * ಸ್ಪ್ರಿಂಗ್ ಆನಿಯನ್ ಹಾಗೂ ಸಿಗಡಿ ಸೇರಿಸಿ ಇನ್ನೊಂದು 30 ಸೆಕೆಂಡುಗಳ ಕಾಲ ಬೇಯಿಸಿ.
    * ಈಗ ಬೇಯಿಸಿಟ್ಟಿದ್ದ ನೂಡಲ್ಸ್ ಹಾಗೂ ಸೋಯಾ ಸಾಸ್ ಹಾಗೂ ಉಪ್ಪು ಹಾಕಿ 1 ನಿಮಿಷ ಮಿಶ್ರಣ ಮಾಡಿ. ಬಳಿಕ ಹುರಿದಿಟ್ಟಿದ್ದ ಮೊಟ್ಟೆಯನ್ನು ಸೇರಿಸಿ.
    * ಸಾಧ್ಯವಾದರೆ ನೂಡಲ್ಸ್ ಅನ್ನು ಸುಮಾರು 30 ಸೆಕೆಂಡುಗಳ ಕಾಲ ಹೆಚ್ಚಿನ ಉರಿಯಲ್ಲಿ ಟಾಸ್ ಮಾಡಿ.
    * ಇದೀಗ ಟೇಸ್ಟಿ ಸಿಂಗಾಪುರ್ ನೂಡಲ್ಸ್ ತಯಾರಾಗಿದ್ದು, ಬೆಚ್ಚಗೆ ಬಡಿಸಿ. ಇದನ್ನೂ ಓದಿ: ಈ ಸೀಸನ್‌ನಲ್ಲಿ ಮಾಡಿ ಟೇಸ್ಟಿ ಮ್ಯಾಂಗೋ ಚಿಕನ್

  • ಪಿಜ್ಜಾ ಸ್ಯಾಂಡ್‌ವಿಚ್ ಅಂದ್ರೆ ಇಷ್ಟ, ಆದ್ರೆ ಮಾಡಲು ಗೊತ್ತಿಲ್ಲ ಅನ್ನೋರಿಗೆ ಇಲ್ಲಿದೆ ರೆಸಿಪಿ

    ಪಿಜ್ಜಾ ಸ್ಯಾಂಡ್‌ವಿಚ್ ಅಂದ್ರೆ ಇಷ್ಟ, ಆದ್ರೆ ಮಾಡಲು ಗೊತ್ತಿಲ್ಲ ಅನ್ನೋರಿಗೆ ಇಲ್ಲಿದೆ ರೆಸಿಪಿ

    ಪಿಜ್ಜಾ, ಬರ್ಗರ್ ಸ್ಯಾಂಡ್‌ವಿಚ್‌ನಂತಹ ತಿಂಡಿಗಳನ್ನು ಈಗಿನ ಮಕ್ಕಳ ಮುಂದಿಟ್ಟರೆ ಕಣ್ಣುಮುಚ್ಚಿ ತಿನ್ನುತ್ತಾರೆ. ಆದರೆ ಎಷ್ಟೋ ಅಮ್ಮಂದಿರಿಗೆ ಈ ರೆಸಿಪಿ ಮಾಡಲು ಗೊತ್ತಿರುವುದಿಲ್ಲ. ಹಾಗಿದ್ದರೆ ನಮ್ಮ ರೆಸಿಪಿಯನ್ನೊಮ್ಮೆ ನೋಡಿ. ಓವನ್ ಇಲ್ಲದೇ ಕೇವಲ ತವಾದಲ್ಲಿ ಪಿಜ್ಜಾ ಸ್ಯಾಂಡ್‌ವಿಚ್ ಮಾಡುವುದು ಹೇಗೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ರೆಸ್ಟೋರೆಂಟ್ ಸ್ಟೈಲ್‌ನ ಕಾರ್ನ್ ಸೂಪ್ ಮನೆಯಲ್ಲೇ ಮಾಡಿ

    ಬೇಕಾಗುವ ಸಾಮಾಗ್ರಿಗಳು:
    ಹೆಚ್ಚಿದ ಈರುಳ್ಳಿ – 1 ಕಪ್
    ದೊಣ್ಣೆ ಮೆಣಸು – 1 ಕಪ್
    ಬೇಯಿಸಿದ ಸ್ವೀಟ್ ಕಾರ್ನ್ – 1 ಕಪ್
    ಹೆಚ್ಚಿದ ಟೊಮೆಟೊ – 1
    ಚಿಲ್ಲಿ ಫ್ಲೇಕ್ಸ್ – ಸ್ವಲ್ಪ
    ಪಿಜ್ಜಾ ಮಿಕ್ಸ್ ಪೌಡರ್ – ಅಗತ್ಯಕ್ಕೆ ತಕ್ಕಷ್ಟು
    ಉಪ್ಪು- ರುಚಿಗೆ ತಕ್ಕಷ್ಟು
    ತುರಿದ ಚೀಸ್ – 1 ಕಪ್
    ಬ್ರೆಡ್- 2
    ಬೆಣ್ಣೆ- ಸ್ವಲ್ಪ
    ಟೊಮೆಟೊ ಸಾಸ್- ಸ್ವಲ್ಪ
    ಮಯೋನಿಸ್- ಸ್ವಲ್ಪ

    ಮಾಡುವ ವಿಧಾನ:

    • ಮೊದಲಿಗೆ ಒಂದು ಬೌಲಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿಕೊಳ್ಳಿ. ಅದಕ್ಕೆ ಹೆಚ್ಚಿದ ದೊಣ್ಣೆ ಮೆಣಸು, ಬೇಯಿಸಿದ ಜೋಳ ಹಾಗೂ ಟೊಮೆಟೊ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
    • ನಂತರ ಅದಕ್ಕೆ ಚಿಲ್ಲಿ ಫ್ಲೇಕ್ಸ್, ಪಿಜ್ಜಾ ಮಿಕ್ಸ್ ಪೌಡರ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ತುರಿದ ಚೀಸ್ ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ.
    • ಈಗ ಎರಡು ಬ್ರೆಡ್ ಅನ್ನು ತೆಗೆದುಕೊಂಡು ಅದರ ಒಂದು ಬದಿಗೆ ಸ್ವಲ್ಪ ಬೆಣ್ಣೆಯನ್ನು ಹಚ್ಚಿಕೊಳ್ಳಿ. ಹಾಗೆಯೇ ಒಂದು ಬ್ರೆಡ್‌ನ ಇನ್ನೊಂದು ಬದಿಗೆ ಟೊಮೆಟೊ ಸಾಸ್ ಹಾಗೂ ಇನ್ನೊಂದು ಬ್ರೆಡ್‌ನ ಹಿಂಬದಿಗೆ ಸ್ವಲ್ಪ ಮಯೋನೀಸ್ ಹಾಕಿಕೊಳ್ಳಿ. ನಂತರ ಮಯೋನೀಸ್ ಹಚ್ಚಿದ ಬ್ರೆಡ್‌ನ ಮೇಲೆ ತರಕಾರಿ ಮಿಶ್ರಣವನ್ನು ಎಷ್ಟು ಬೇಕು ಅಷ್ಟು ಹಾಕಿಕೊಂಡು ಟೊಮೆಟೊ ಸಾಸ್ ಇರುವ ಬ್ರೆಡ್ ಅನ್ನು ಅದಕ್ಕೆ ಮುಚ್ಚಿ. ಬೆಣ್ಣೆ ಹಚ್ಚಿದ ಭಾಗ ಮೇಲ್ಗಡೆ ಇರುವಂತೆ ನೋಡಿಕೊಳ್ಳಿ.
    • ಈಗ ಗ್ಯಾಸ್ ಮೇಲೆ ಒಂದು ಗ್ರಿಲ್ ಪ್ಯಾನ್ ಅಥವಾ ತವಾ ಇಟ್ಟುಕೊಂಡು ಬಿಸಿ ಮಾಡಿಕೊಳ್ಳಿ. ತವಾ ಬಿಸಿಯಾದ ಬಳಿಕ ಅದಕ್ಕೆ ಸ್ಟಫ್ ಮಾಡಿದ್ದ ಬ್ರೆಡ್ ಅನ್ನು ಇಟ್ಟುಕೊಂಡು ಚನ್ನಾಗಿ ರೋಸ್ಟ್ ಮಾಡಿಕೊಳ್ಳಿ. ಎರಡೂ ಬದಿ ಚನ್ನಾಗಿ ರೋಸ್ಟ್ ಆಗಿ ಕಂದು ಬಣ್ಣ ಬಂದ ಮೇಲೆ ಒಂದು ಪ್ಲೇಟ್‌ಗೆ ತೆಗೆದಿಡಿ.
    • ರೋಸ್ಟ್ ಮಾಡಿದ್ದ ಪಿಜ್ಜಾ ಸ್ಯಾಂಡ್‌ವಿಚ್ ಅನ್ನು ಬಿಸಿ ಇರುವಾಗಲೇ ಅರ್ಧ ತುಂಡು ಮಾಡಿ ಮಕ್ಕಳಿಗೆ ಮತ್ತು ಮನೆಯವರಿಗೆ ಸವಿಯಲು ಕೊಡಿ. ಜೊತೆಗೆ ನೀವೂ ಸವಿದು ಆನಂದಿಸಿ. ಇದನ್ನೂ ಓದಿ: ಕ್ರಿಸ್ಪಿ ಟೋಫು ಬೈಟ್ಸ್ – ಟೀ ಟೈಮ್‌ಗೆ ಪರ್ಫೆಕ್ಟ್

  • ಅತಿಥಿಗಳಿಗೆ ಬಡಿಸಿ ಸಿಹಿ ಸಿಹಿ ಖೋವಾ ಕಚೋರಿ

    ಅತಿಥಿಗಳಿಗೆ ಬಡಿಸಿ ಸಿಹಿ ಸಿಹಿ ಖೋವಾ ಕಚೋರಿ

    ಫೇಮಸ್ ಸ್ಟ್ರೀಟ್ ಫುಡ್ ಕಚೋರಿ ನಾವು ಕೇಳಿದ್ದೇವೆ. ಆದರೆ ಖೋವಾ ಕಚೋರಿ ಕೇಳಿದ್ದೀರಾ? ಸಿಹಿ ಸಿಹಿಯಾದ ಖೋವಾ ಕಚೋರಿ ರಾಜಸ್ಥಾನದಲ್ಲಿ ಹಬ್ಬದ ತಿಂಡಿಗಳಲ್ಲಿ ಫೇಮಸ್. ಮನೆಗೆ ಅತಿಥಿಗಳು ಬಂದಾಗಲೂ ಈ ಸಿಹಿ ಹಂಚಲು ಒಂದು ಉತ್ತಮ ಆಯ್ಕೆ. ಖೋವಾ ಕಚೋರಿ ಹೇಗೆ ಮಾಡೋದು ಎಂಬುದನ್ನು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮೈದಾ ಹಿಟ್ಟು – 1 ಕಪ್
    ತುಪ್ಪ – 75 ಗ್ರಾಂ
    ಉಪ್ಪು – ಚಿಟಿಕೆ
    ನೀರು – 1 ಕಪ್
    ಸ್ಟಫಿಂಗ್ ತಯಾರಿಸಲು:
    ಖೋವಾ – ಅರ್ಧ ಕಪ್
    ಕೇಸರಿ – ಚಿಟಿಕೆ
    ತೆಳ್ಳಗೆ ಕತ್ತರಿಸಿದ ಬಾದಾಮಿ – 2 ಟೀಸ್ಪೂನ್
    ತೆಳ್ಳಗೆ ಕತ್ತರಿಸಿದ ಪಿಸ್ತಾ – 2 ಟೀಸ್ಪೂನ್
    ಒಣ ದ್ರಾಕ್ಷಿ – 2 ಟೀಸ್ಪೂನ್
    ಏಲಕ್ಕಿ ಪುಡಿ – 1 ಟೀಸ್ಪೂನ್
    ಎಣ್ಣೆ – ಹುರಿಯಲು ಬೇಕಾಗುವಷ್ಟು
    ಸಕ್ಕರೆ ಪಾಕ ತಯಾರಿಸಲು:
    ಸಕ್ಕರೆ – 1 ಕಪ್
    ನಿಂಬೆ ರಸ – 2 ಟೀಸ್ಪೂನ್
    ಬಾದಾಮಿ, ಪಿಸ್ತಾ ಚೂರುಗಳು – ಅಲಂಕಾರಕ್ಕೆ ಇದನ್ನೂ ಓದಿ: ಟ್ರೈ ಮಾಡಿ ಸಾಂಪ್ರದಾಯಿಕ ಪಂಜಾಬಿ ಸಿಹಿಯಾದ ಲಸ್ಸಿ

    ಮಾಡುವ ವಿಧಾನ:
    * ಮೊದಲಿಗೆ ಮೈದಾ, ತುಪ್ಪ ಹಾಗೂ ಉಪ್ಪನ್ನು ಒಂದು ಬಟ್ಟಲಿನಲ್ಲಿ ಸೇರಿಸಿ ಮಿಶ್ರಣ ಮಾಡಿ. ಬಳಿಕ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಮೃದುವಾದ ಹಿಟ್ಟನ್ನಾಗಿ ನಾದಿಕೊಳ್ಳಿ.
    * ಹಿಟ್ಟನ್ನು ಒದ್ದೆ ಬಟ್ಟೆಯಿಂದ ಮುಚ್ಚಿ, 15 ನಿಮಿಷ ವಿಶ್ರಾಂತಿ ನೀಡಿ.
    * ಈಗ ಒಂದು ಬೌಲ್‌ನಲ್ಲಿ ಖೋವಾ, ಬಾದಾಮಿ, ಪಿಸ್ತಾ, ಒಣ ದ್ರಾಕ್ಷಿ, ಕೇಸರಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಸಕ್ಕರೆ ಪಾಕ ತಯಾರಿಸಲು 4 ಕಪ್ ನೀರಿಗೆ 1 ಕಪ್ ಸಕ್ಕರೆ ಸೇರಿಸಿ ಕುದಿಸಿ. ಬಳಿಕ ಅದಕ್ಕೆ ಕೇಸರಿ ಹಾಗೂ ನಿಂಬೆ ರಸ ಸೇರಿಸಿ ಪಕ್ಕಕ್ಕೆ ಇಡಿ.
    * ಈಗ ಹಿಟ್ಟು ಹಾಗೂ ಖೋವಾ ಮಿಶ್ರಣಗಳನ್ನು ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಿ.
    * ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು ಅದನ್ನು ಸಣ್ಣ ಹಾಗೂ ಸ್ವಲ್ಪ ದಪ್ಪಗೆ ವೃತ್ತಾಕಾರದಲ್ಲಿ ಲಟ್ಟಿಸಿಕೊಳ್ಳಿ.
    * ಅದರ ನಡುವೆ ಖೋವಾ ಮಿಶ್ರಣದ ಉಂಡೆಯನ್ನು ಇಟ್ಟು, ಹಿಟ್ಟಿನ ಬದಿಗಳನ್ನು ನಡುವೆ ತಂದು ಮತ್ತೆ ಉಂಡೆಯಾಗಿ ಸುತ್ತಿಕೊಳ್ಳಿ.
    * ಈಗ ಇದನ್ನು ಸ್ವಲ್ಪ ಚಪ್ಪಟೆಯಾಗಿ ಲಟ್ಟಿಸಿಕೊಳ್ಳಿ ಹಾಗೂ ಬಿಸಿ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ.
    * ಎಲ್ಲಾ ಉಂಡೆಗಳನ್ನೂ ಇದೇ ರೀತಿ ಪುನರಾವರ್ತಿಸಿ.
    * ಬಳಿಕ ಹುರಿದ ಕಚೋರಿಗಳನ್ನು ಸಕ್ಕರೆ ಪಾಕದಲ್ಲಿ ಮುಳುಗಿಸಿ ಸುಮಾರು 15 ನಿಮಿಷ ಪಾಕವನ್ನು ಹೀರಿಕೊಳ್ಳಲು ಹಾಗೇ ಬಿಡಿ.
    * ನಂತರ ಅವುಗಳನ್ನು ಪಾಕದಿಂದ ತೆಗೆದು ತಟ್ಟೆಗಳಲ್ಲಿ ಜೋಡಿಸಿ, ಅದರ ಮೇಲೆ ಬಾದಾಮಿ ಹಾಗೂ ಪಿಸ್ತಾ ಚೂರುಗಳಿಂದ ಅಲಂಕರಿಸಿ.
    * ಇದೀಗ ಸಿಹಿ ಸಿಹಿ ಖೋವಾ ಕಚೋರಿ ತಯಾರಾಗಿದ್ದು, ಅತಿಥಿಗಳಿಗೆ ಬಡಿಸಿ. ಇದನ್ನೂ ಓದಿ: ಸ್ವೀಟ್ ರಂಗೀಲಾ ಬರ್ಫಿ ಟೇಸ್ಟ್ ಮಾಡಿ ಥ್ರಿಲ್ ಆಗಿ

  • ಈ ರೀತಿ ಮಾಡಿ ನೋಡಿ ಬದನೆ ಫ್ರೈ

    ಈ ರೀತಿ ಮಾಡಿ ನೋಡಿ ಬದನೆ ಫ್ರೈ

    ದನೆಯನ್ನು ಮಕ್ಕಳು ಸೇರಿದಂತೆ ಹೆಚ್ಚಿನವರು ಇಷ್ಟ ಪಡಲ್ಲ. ಆದರೆ ಅದರ ನಿಜವಾದ ರುಚಿ ವಿವಿಧ ರೀತಿಯಲ್ಲಿ ಅಡುಗೆ ಮಾಡಿ ಸವಿದವರಿಗಷ್ಟೇ ಗೊತ್ತು. ನಾವಿಂದು ರುಚಿಕರ ಹಾಗೂ ಸುಲಭದ ಬದನೆ ಫ್ರೈ ರೆಸಿಪಿಯನ್ನು ಹೇಳಿಕೊಡುತ್ತೇವೆ. ಇದನ್ನು ಬದನೆ ಇಷ್ಟ ಪಡದವರು ಕೂಡಾ ಖಂಡಿತಾ ಇಷ್ಟಪಟ್ಟು ಸವಿಯುತ್ತಾರೆ. ಊಟದೊಂದಿಗೆ ಸೈಡ್ ಡಿಶ್ ಆಗಿಯೂ ಇದನ್ನು ಸವಿಯಬಹುದು. ಟೇಸ್ಟಿ ಬದನೆ ಫ್ರೈ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಬದನೆ – 2
    ಮೆಣಸಿನ ಪುಡಿ – ಒಂದೂವರೆ ಟೀಸ್ಪೂನ್
    ಅರಿಶಿನ ಪುಡಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – 4 ಟೀಸ್ಪೂನ್ ಇದನ್ನೂ ಓದಿ: ಕ್ರಿಸ್ಪಿ ಟೋಫು ಬೈಟ್ಸ್ – ಟೀ ಟೈಮ್‌ಗೆ ಪರ್ಫೆಕ್ಟ್

    ಮಾಡುವ ವಿಧಾನ:
    * ಮೊದಲಿಗೆ ಬದನೆಯನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿಕೊಳ್ಳಿ.
    * ಒಂದು ಬೌಲ್‌ನಲ್ಲಿ ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಉಪ್ಪನ್ನು ಹಾಕಿ ಮಿಶ್ರಣ ಮಾಡಿ.
    * ಬಳಿಕ ಬದನೆ ಹೋಳುಗಳಿಗೆ ಮೆಣಸಿನ ಪುಡಿ ಮಿಶ್ರಣವನ್ನು ಚೆನ್ನಾಗಿ ಕೋಟ್ ಆಗುವಂತೆ ಲೇಪಿಸಿಕೊಳ್ಳಿ.
    * ಈಗ ಪ್ಯಾನ್‌ನಲ್ಲಿ ಎಣ್ಣೆ ಸುರಿದು, ಬಿಸಿಯಾದ ಬಳಿಕ ಬದನೆ ಹೋಳುಗಳನ್ನು ಅದರಲ್ಲಿ ಇಟ್ಟು ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.
    * ಬದನೆ ಹೋಳುಗಳ ಎರಡೂ ಬದಿ ಚೆನ್ನಾಗಿ ಬೇಯುವವರೆ ಫ್ರೈ ಮಾಡಿಕೊಳ್ಳಿ. ಬಳಿಕ ಅದನ್ನು ಪ್ಯಾನ್‌ನಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ಇದೀಗ ರುಚಿಕರ ಬದನೆ ಫ್ರೈ ತಯಾರಾಗಿದ್ದು, ಊಟದೊಂದಿಗೆ ಅಥವಾ ಹಾಗೆಯೇ ಸವಿಯಿರಿ. ಇದನ್ನೂ ಓದಿ: ನೀವೊಮ್ಮೆ ಟ್ರೈ ಮಾಡ್ಲೇ ಬೇಕು ಪೋಡಿ ಇಡ್ಲಿ

  • ಟ್ರೈ ಮಾಡಿ ಟೇಸ್ಟಿ ಫಿಶ್ ಪಕೋಡಾ

    ಟ್ರೈ ಮಾಡಿ ಟೇಸ್ಟಿ ಫಿಶ್ ಪಕೋಡಾ

    ಮೀನು ಖಾದ್ಯ ಪ್ರಿಯರು ನಮ್ಮಲ್ಲಿ ಬಹಳಷ್ಟು ಜನ ಇದ್ದಾರೆ. ಪ್ರತಿ ಬಾರಿ ವಿವಿಧ ರೀತಿಯಲ್ಲಿ ಮೀನಿನ ಅಡುಗೆಗಳನ್ನು ಸವಿಯಲು ಬಯಸುತ್ತಾರೆ. ಇಂತಹವರಿಗಾಗಿ ನಾವಿಂದು ಸೂಪರ್ ಆದ ಮೀನಿನ ರೆಸಿಪಿ ಹೇಳಿಕೊಡುತ್ತೇವೆ. ಫಿಶ್ ಪಕೋಡಾ ಅಥವಾ ಫಿಶ್ 65 ಎಂತಲೂ ಇದನ್ನು ಕರೆಯಬಹುದು. ಮಾಡೋದಕ್ಕೂ ಸುಲಭವಾದ ಈ ರೆಸಿಪಿಯನ್ನು ನೀವೂ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಮೀನು ಮಾಂಸ – 250 ಗ್ರಾಂ (ಸಣ್ಣ ಮೂಳೆಗಳಿಲ್ಲದ ಬಿಳಿ ಮಾಂಸದ ಯಾವುದೇ ಮೀನು ಬಳಸಬಹುದು)
    ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಅರಿಶಿನ ಪುಡಿ – ಅರ್ಧ ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಕಾರ್ನ್ ಫ್ಲೋರ್ – 1 ಟೀಸ್ಪೂನ್
    ಕಡಲೆ ಹಿಟ್ಟು – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಡೀಪ್‌ಫ್ರೈಗೆ ಬೇಕಾಗುವಷ್ಟು ಇದನ್ನೂ ಓದಿ: ಈ ಸೀಸನ್‌ನಲ್ಲಿ ಮಾಡಿ ಟೇಸ್ಟಿ ಮ್ಯಾಂಗೋ ಚಿಕನ್

    ಮಾಡುವ ವಿಧಾನ:
    * ಮೊದಲಿಗೆ ಮೀನನ್ನು ಶುಚಿಗೊಳಿಸಿ, ಮೂಳೆಗಳನ್ನು ಬೇರ್ಪಡಿಸಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ.
    * ಒಂದು ಬೌಲ್‌ನಲ್ಲಿ ಎಣ್ಣೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ.
    * ಅದಕ್ಕೆ ಮೀನಿನ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ, 20 ನಿಮಿಷ ಮ್ಯಾರಿನೇಟ್ ಆಗಲು ಬಿಡಿ.
    * ಈಗ ಎಣ್ಣೆ ಬಿಸಿ ಮಾಡಿ, ಮೀನಿನ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಕೈಯಲ್ಲಿ ತೆಗೆದುಕೊಂಡು ಪಕೋಡಾ ರೀತಿಯಲ್ಲಿ ಎಣ್ಣೆಯಲ್ಲಿ ಬಿಡಿ.
    * ಪಕೋಡಾ ಗೋಲ್ಡನ್ ಬ್ರೌನ್ ಬಣ್ಣ ಹಾಗೂ ಗರಿಗರಿಯಾಗುವವರೆಗೆ ಫ್ರೈ ಮಾಡಿಕೊಳ್ಳಿ.
    * ಇದೀಗ ಗರಿಗರಿಯಾದ ಫಿಶ್ ಪಕೋಡಾ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಕ್ಲಾಸಿಕ್ ಬೆಂಗಾಲಿ ಮೀನು ಸಾರು – ಹೆಚ್ಚು ಮಸಾಲೆ ಇಲ್ಲದಿದ್ರೂ ಸೂಪರ್ ಸ್ವಾದ

  • ರೆಸ್ಟೋರೆಂಟ್ ಸ್ಟೈಲ್‌ನ ಕಾರ್ನ್ ಸೂಪ್ ಮನೆಯಲ್ಲೇ ಮಾಡಿ

    ರೆಸ್ಟೋರೆಂಟ್ ಸ್ಟೈಲ್‌ನ ಕಾರ್ನ್ ಸೂಪ್ ಮನೆಯಲ್ಲೇ ಮಾಡಿ

    ಕೆಲವರಿಗೆ ರೆಸ್ಟೋರೆಂಟ್‌ಗೆ ಹೋದರೆ ಊಟಕ್ಕೂ ಮೊದಲು ಸೂಪ್ ಕುಡಿಯುವ ಅಭ್ಯಾಸವಿರುತ್ತದೆ. ಸೂಪ್ ಕುಡಿಯುವುದರಿಂದ ನಮ್ಮ ಜೀರ್ಣಶಕ್ತಿ ಹೆಚ್ಚಿಸುತ್ತದೆ. ಹೀಗಾಗಿ ಊಟಕ್ಕೂ ಮೊದಲು ಸೂಪ್ ಕುಡಿಯುವುದು ಒಳ್ಳೆಯ ಅಭ್ಯಾಸ. ಸೂಪ್‌ಗಳಲ್ಲಿ ಅನೇಕ ರೀತಿಯ ಸೂಪ್‌ಗಳಿರುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕಾರ್ನ್ ಸೂಪ್ (Corn Soup) ಮಾಡುವುದು ಹೇಗೆ ಎಂದು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ದರೆ ಇದನ್ನು ಯಾವ ರೀತಿ ಮಾಡುವುದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಕ್ರಿಸ್ಪಿ ಟೋಫು ಬೈಟ್ಸ್ – ಟೀ ಟೈಮ್‌ಗೆ ಪರ್ಫೆಕ್ಟ್

    ಬೇಕಾಗುವ ಸಾಮಗ್ರಿಗಳು:
    ಸ್ವೀಟ್ ಕಾರ್ನ್ – ಅರ್ಧ ಕಪ್
    ಸಣ್ಣಗೆ ಹೆಚ್ಚಿದ ಶುಂಠಿ- 1 ಚಮಚ
    ಸಣ್ಣಗೆ ಹೆಚ್ಚಿದ ಕ್ಯಾರೆಟ್- ಕಾಲು ಕಪ್
    ವಿನೇಗರ್- 1 ಚಮಚ
    ಬೆಣ್ಣೆ- 2 ಚಮಚ
    ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ- 1 ಚಮಚ
    ಹೆಚ್ಚಿದ ಸ್ಪ್ರಿಂಗ್ ಆನಿಯನ್- 5 ಚಮಚ
    ಜೋಳದ ಹಿಟ್ಟು- 1 ಚಮಚ
    ಬ್ಲ್ಯಾಕ್ ಪೆಪ್ಪರ್- ಕಾಲು ಚಮಚ
    ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:

    • ಮೊದಲಿಗೆ ಒಂದು ಪ್ಯಾನ್‌ನಲ್ಲಿ ಬೆಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಬೆಣ್ಣೆ ಕರಗಿದ ಬಳಿಕ ಅದಕ್ಕೆ ಹೆಚ್ಚಿದ ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಹಾಕಿಕೊಂಡು ಅದರ ಹಸಿವಾಸನೆ ಹೋಗುವವರೆಗೂ ಬಾಡಿಸಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಸ್ಪ್ರಿಂಗ್ ಆನಿಯನ್ ಹಾಕಿ ತಿರುವಿಕೊಳ್ಳಬೇಕು. ಈಗ ಅದಕ್ಕೆ ಕಾಲು ಕಪ್ ಸ್ವೀಟ್ ಕಾರ್ನ್ ಹಾಗೂ ಕ್ಯಾರೆಟ್ ಅನ್ನು ಹಾಕಿಕೊಂಡು 3ರಿಂದ 4 ನಿಮಿಷಗಳವರೆಗೆ ಫ್ರೈ ಮಾಡಿಕೊಳ್ಳಿ.
    • ಬಳಿಕ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಚೆನ್ನಾಗಿ ತಿರುವಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಉಳಿದ ಕಾಲು ಕಪ್ ಜೋಳವನ್ನು ಹಾಕಿಕೊಂಡು ಅದಕ್ಕೆ 2 ಚಮಚ ನೀರನ್ನು ಸೇರಿಸಿಕೊಳ್ಳಿ. ಈಗ ಅದನ್ನು ದಪ್ಪ ಪೇಸ್ಟ್ ಆಗುವಂತೆ ಚನ್ನಾಗಿ ರುಬ್ಬಿಕೊಳ್ಳಬೇಕು.
    • ರುಬ್ಬಿದ ಪೇಸ್ಟ್ ಅನ್ನು ಪ್ಯಾನ್‌ಗೆ ತರಕಾರಿ ಫ್ರೈ ಮಾಡಿರುವ ಪ್ಯಾನ್‌ಗೆ ಹಾಕಿಕೊಂಡು 3ರಿಂದ 4 ನಿಮಿಷಗಳ ಕಾಲ ಚನ್ನಾಗಿ ತಿರುವಿಕೊಳ್ಳಿ. ಬಳಿಕ ಇದಕ್ಕೆ 3 ಕಪ್ ನೀರನ್ನು ಸೇರಿಸಿಕೊಂಡು ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಒಂದು ಮುಚ್ಚಳದ ಸಹಾಯದಿಂದ ಇದನ್ನು ಮುಚ್ಚಿ 10 ರಿಂದ 12 ನಿಮಿಷಗಳವರೆಗೆ ಬೇಯಿಸಿಕೊಳ್ಳಿ. ಈಗ ಇದಕ್ಕೆ 1 ಚಮಚ ಜೋಳದ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿಕೊಂಡು ಮತ್ತೆ 5 ನಿಮಿಷಗಳವರೆಗೆ ಕುದಿಸಿಕೊಳ್ಳಿ.
    • ಕೊನೆಯಲ್ಲಿ ಇದಕ್ಕೆ ವಿನೇಗರ್ ಬ್ಲ್ಯಾಕ್ ಪೆಪ್ಪರ್ ಪೌಡರ್ ಹಾಗೂ ಉಳಿದ ಸ್ಪ್ರಿಂಗ್ ಆನಿಯನ್ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ. ಈಗ ಕಾರ್ನ್ ಸೂಪ್ ಸವಿಯಲು ಸಿದ್ಧ. ಇದನ್ನು ಸರ್ವಿಂಗ್ ಬೌಲ್‌ಗೆ ಹಾಕಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ. ಇದನ್ನೂ ಓದಿ: ಮೊಹಬ್ಬತ್ ಕಾ ಶರ್ಬತ್ ಕುಡಿದು ಚಿಲ್ ಆಗಿರಿ

  • ಕ್ರಿಸ್ಪಿ ಟೋಫು ಬೈಟ್ಸ್ – ಟೀ ಟೈಮ್‌ಗೆ ಪರ್ಫೆಕ್ಟ್

    ಕ್ರಿಸ್ಪಿ ಟೋಫು ಬೈಟ್ಸ್ – ಟೀ ಟೈಮ್‌ಗೆ ಪರ್ಫೆಕ್ಟ್

    ದೇಹವನ್ನು ಆರೋಗ್ಯವಾಗಿಡಲು ಸ್ವಲ್ಪ ಮಟ್ಟಿಗಾದರೂ ಮಂಸಾಹಾರವನ್ನು ಬದಿಗಿಡೋದು ಒಳ್ಳೆಯದು. ಆದರೆ ನಾನ್‌ವೆಜ್ ಬೇಕು ಎನಿಸಿದಾಗ, ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದಾಗ ಸೇವಿಸಲು ಬೆಸ್ಟ್ ಆಪ್ಶನ್ ಟೋಫು. ನಾವಿದು ಕ್ರಿಸ್ಪಿ ಟೋಫು ಬೈಟ್ಸ್ ಹೇಗೆ ಮಾಡೋದು ಎಂದು ಹೇಳಿಕೊಡುತ್ತಿದ್ದೇವೆ. ಟೀ ಟೈಮ್‌ನಲ್ಲಿ ಅಥವಾ ಫ್ರೀ ಟೈಮ್‌ನಲ್ಲಿ ಸವಿಯಲು ಇದು ಪರ್ಫೆಕ್ಟ್ ಆಗಿರುತ್ತೆ. ರುಚಿಕರವಾದ ಟೋಫು ಬೈಟ್ಸ್ ಸವಿಯುತ್ತ ನೀವು ಆರೋಗ್ಯವನ್ನೂ ಕಾಪಾಡಿಕೊಳ್ಳಿ.

    ಬೇಕಾಗುವ ಪದಾರ್ಥಗಳು:
    ಟೋಫು – 500 ಗ್ರಾಂ
    ತೆಂಗಿನ ಎಣ್ಣೆ – 1 ಟೀಸ್ಪೂನ್
    ಸೋಯಾ ಸಾಸ್ – 2 ಟೀಸ್ಪೂನ್
    ವಿನೆಗರ್ – 2 ಟೀಸ್ಪೂನ್
    ಜೇನುತುಪ್ಪ – 1 ಟೀಸ್ಪೂನ್
    ಚಿಲ್ಲಿ ಸಾಸ್ – 1 ಟೀಸ್ಪೂನ್
    ಬೆಳ್ಳುಳ್ಳಿ ಪುಡಿ – ಒಂದೂವರೆ ಟೀಸ್ಪೂನ್
    ಕಾರ್ನ್ ಫ್ಲೋರ್ – ಕಾಲು ಕಪ್ ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಬಿ ಬೈಟ್ಸ್

    ಮಾಡುವ ವಿಧಾನ:
    * ಮೊದಲಿಗೆ ಟೋಫು ಅನ್ನು ಪೇಪರ್ ಟವಲ್‌ನಿಂದ ಒತ್ತಿ ಅದರಲ್ಲಿರುವ ನೀರಿನ ಅಂಶ ಆದಷ್ಟು ತೆಗೆದುಹಾಕಿ. ಸುಮಾರು ಅರ್ಧ ಗಂಟೆ ಹಾಗೇ ಬಿಡಿ.
    * ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆ, ಸೋಯಾ ಸಾಸ್, ವಿನೆಗರ್, ಜೇನುತುಪ್ಪ, ಚಿಲ್ಲಿ ಸಾಸ್ ಮತ್ತು ಬೆಳ್ಳುಳ್ಳಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ.
    * ಟೋಫು ಒಣಗಿದ ನಂತರ ಅದನ್ನು ಒಂದೊಂದು ಇಂಚಿನ ತುಂಡುಗಳಾಗಿ ಕತ್ತರಿಸಿ. ಅಥವಾ ತ್ರಿಕೋನಾಕಾರವಾಗಿಯೂ ಕತ್ತರಿಸಬಹುದು.
    * ಈಗ ಸಾಸ್ ಮಿಶ್ರಣಕ್ಕೆ ಟೋಫುಗಳನ್ನು ಹಾಕಿ ಮಿಶ್ರಣ ಮಾಡಿ, ಸುಮಾರು 1 ಗಂಟೆ ಮ್ಯಾರಿನೇಟ್ ಆಗಲು ಬಿಡಿ.
    * ಓವನ್ ಅನ್ನು 190 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿ.
    * ಮ್ಯಾರಿನೇಟ್ ಮಾಡಿದ ಟೋಫುವನ್ನು ತೆಗೆದು ಬೇಕಿಂಗ್ ಶೀಟ್‌ನಲ್ಲಿ ಜೋಡಿಸಿ.
    * ಟೋಫುಗಳ ಮೇಲೆ ಕಾರ್ನ್ ಫ್ಲೋರ್ ಅನ್ನು ಸಿಂಪಡಿಸಿ. ಟೋಫುಗಳನ್ನು ತಿರುವಿ ಮತ್ತೆ ಸಿಂಪಡಿಸಿ ಸುತ್ತಲೂ ಕೋಟ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
    * ಈಗ ಟೋಫು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 20-25 ನಿಮಿಷಗಳ ವರೆಗೆ ಓವನ್‌ನಲ್ಲಿ ಬೇಯಿಸಿಕೊಳ್ಳಿ. ನಡುವೆ ಒಂದು ಬಾರಿ ಟೋಫುಗಳನ್ನು ತಿರುವಿ ಹಾಕಿ ಮತ್ತೆ ಗರಿಗರಿಯಾಗುವವರೆಗೆ ಬೇಯಿಸಿಕೊಳ್ಳಿ.
    * ಇದೀಗ ಕ್ರಿಸ್ಪಿ ಟೋಫು ಬೈಟ್ಸ್ ತಯಾರಾಗಿದ್ದು, ಇದನ್ನು ನಿಮ್ಮಿಷ್ಟದ ಸಾಸ್‌ನೊಂದಿಗೆ ಬೆಚ್ಚಗೆ ಸವಿಯಿರಿ. ಉಳಿದ ಟೋಫುಗಳನ್ನು ಬೇಕೆಂದರೆ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಫ್ರಿಜ್‌ನಲ್ಲಿಟ್ಟರೆ 5 ದಿನಗಳ ವರೆಗೆ ಸವಿಯಬಹುದು. ಇದನ್ನೂ ಓದಿ: ಟ್ರೈ ಮಾಡಿ ಕ್ರಿಸ್ಪಿ ಪೋಹಾ ಕಟ್ಲೆಟ್..

  • ಮೊಹಬ್ಬತ್ ಕಾ ಶರ್ಬತ್ ಕುಡಿದು ಚಿಲ್ ಆಗಿರಿ

    ಮೊಹಬ್ಬತ್ ಕಾ ಶರ್ಬತ್ ಕುಡಿದು ಚಿಲ್ ಆಗಿರಿ

    ಬೇಸಿಗೆ ಕಾಲದಲ್ಲಿ ಯಾವುದಾದರೂ ಕಾರ್ಯಕ್ರಮಗಳಿಗೆ ಹೋದರೆ ತಂಪಾದ ಶರ್ಬತ್ ಕೊಡುವುದು ರೂಢಿ. ಇದರಿಂದ ಬಿಸಿಲಿನಿಂದ ಬಳಲಿ ಬಂದವರಿಗೆ ದೇಹ ತಂಪಾಗಿಸಿ ಅವರ ದಾಹವನ್ನು ನೀಗಿಸುತ್ತದೆ. ಇಂತಹದೇ ಒಂದು ರುಚಿಕರವಾದ ಶರ್ಬತ್ ರೆಸಿಪಿಯನ್ನು ನಾವು ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ. ಅದರ ಹೆಸರೇ ಮೊಹಬ್ಬತ್ ಕಾ ಶರ್ಬತ್. ಹಾಗಿದ್ದರೆ ಇದನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ನೀವೊಮ್ಮೆ ಟ್ರೈ ಮಾಡ್ಲೇ ಬೇಕು ಪೋಡಿ ಇಡ್ಲಿ

    ಬೇಕಾಗುವ ಸಾಮಾಗ್ರಿಗಳು:
    ತಣ್ಣನೆಯ ಹಾಲು – ಅರ್ಧ ಕಪ್
    ರೋಸ್ ಸಿರಪ್ – 1 ಚಮಚ
    ಕಲ್ಲಂಗಡಿ ರಸ – ಅರ್ಧ ಕಪ್
    ಐಸ್ ಕ್ಯೂಬ್‌ಗಳು – 2
    ಅಲಂಕಾರಕ್ಕಾಗಿ ಗುಲಾಬಿ ದಳಗಳು- 2ರಿಂದ 3

    ಮಾಡುವ ವಿಧಾನ:

    • ಮೊದಲಿಗೆ ಒಂದು ಲೋಟದಲ್ಲಿ ಹಾಲು ಮತ್ತು ರೋಸ್ ಸಿರಪ್ ಹಾಕಿಕೊಳ್ಳಿ. ಬಳಿಕ ಅದಕ್ಕೆ ಕಲ್ಲಂಗಡಿ ರಸವನ್ನು ಸೇರಿಸಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    • ನಂತರ ಅದಕ್ಕೆ ಕತ್ತರಿಸಿದ ಕಲ್ಲಂಗಡಿ ಹಾಗೂ ಐಸ್ ತುಂಡುಗಳನ್ನು ಸೇರಿಸಿ.
    • ಬಳಿಕ ಅದನ್ನು ಗುಲಾಬಿ ದಳಗಳಿಂದ ಅಲಂಕರಿಸಿ ತಣ್ಣಗಿದ್ದಾಗಲೇ ಸರ್ವ್ ಮಾಡಿ. ಇದನ್ನೂ ಓದಿ: ಟ್ರೈ ಮಾಡಿ ಸಾಂಪ್ರದಾಯಿಕ ಪಂಜಾಬಿ ಸಿಹಿಯಾದ ಲಸ್ಸಿ

  • ನೀವೊಮ್ಮೆ ಟ್ರೈ ಮಾಡ್ಲೇ ಬೇಕು ಪೋಡಿ ಇಡ್ಲಿ

    ನೀವೊಮ್ಮೆ ಟ್ರೈ ಮಾಡ್ಲೇ ಬೇಕು ಪೋಡಿ ಇಡ್ಲಿ

    ಕ್ಷಿಣ ಭಾರತದ ಅತ್ಯಂತ ಜನಪ್ರಿಯ ಉಪಾಹಾರ ಇಡ್ಲಿ. ಸಾಂಪ್ರದಾಯಿಕ ಇಡ್ಲಿಗೆ ವಿವಿಧ ರೀತಿಯ ಮಸಾಲೆ ಹಾಗೂ ತರಕಾರಿಗಳನ್ನು ಬಳಸಿ ಇನ್ನಷ್ಟು ರುಚಿಕರವನ್ನಾಗಿ ಮಾಡಲಾಗುತ್ತದೆ. ನಾವಿಂದು ಹೇಳಿಕೊಡುತ್ತಿರೋ ಪೋಡಿ ಇಡ್ಲಿಯೂ ಅಂತಹುದೇ. ಸಾಂಪ್ರದಾಯಿಕ ಇಡ್ಲಿಯನ್ನು ಮಸಾಲೆಯುಕ್ತ ಒಗ್ಗರಣೆಗೆ ಹಾಕಿ ಸ್ವಲ್ಪ ಫ್ರೈ ಮಾಡಿದರೆ ಪೋಡಿ ಇಡ್ಲಿ ಸುಲಭವಾಗಿ ತಯಾರಾಗುತ್ತದೆ. ಈ ವಿಧಾನ ಮಾಡಿದರೆ ಚಟ್ನಿ ಅಥವಾ ಸಾಂಬಾರ್‌ನ ಅಗತ್ಯವಿರುವುದಿಲ್ಲ. ರುಚಿಕರವಾದ ಈ ಉಪಾಹಾರವನ್ನು ಮನೆಮಂದಿ ಇಷ್ಟಪಟ್ಟು ಸವಿಯುತ್ತಾರೆ. ಪೋಡಿ ಇಡ್ಲಿ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಕಡಲೆಕಾಯಿ – 2 ಟೀಸ್ಪೂನ್
    ಕಡಲೆ ಬೇಳೆ – 1 ಟೀಸ್ಪೂನ್
    ಉದ್ದಿನ ಬೇಳೆ – 1 ಟೀಸ್ಪೂನ್
    ಒಣ ಕೆಂಪು ಮೆಣಸು – 3
    ಎಳ್ಳು – ಒಂದೂವರೆ ಟೀಸ್ಪೂನ್
    ಒಣ ಕೊಬ್ಬರಿ – ಒಂದೂವರೆ ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಕರಿಬೇವಿನ ಎಲೆ – ಕೆಲವು
    ಹುಣಿಸೆಹಣ್ಣು – ಕಾಲು ಟೀಸ್ಪೂನ್
    ಬೆಲ್ಲ – ಕಾಲು ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಸಾದಾ ಇಡ್ಲಿಗಳು – ಸುಮಾರು 10
    ತುಪ್ಪ – 2 ಟೀಸ್ಪೂನ್
    ಸಾಸಿವೆ – ಕಾಲು ಟೀಸ್ಪೂನ್  ಇದನ್ನೂ ಓದಿ: ಫಿಶ್ ಫ್ರೈನಂತೆ ರುಚಿಕರ ಬಾಳೆಕಾಯಿ ರವಾ ಫ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು ಕಡಲೆಕಾಯಿ ಹಾಗೂ ಒಣ ಕೆಂಪು ಮೆಣಸನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
    * ಬಳಿಕ ಕಡಲೆ ಬೇಳೆ ಹಾಗೂ ಉದ್ದಿನ ಬೇಳೆಯನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಹುರಿದುಕೊಳ್ಳಿ.
    * ಬಳಿಕ ಎಳ್ಳು, ಒಣ ಕೊಬ್ಬರಿ, ಜೀರಿಗೆ, ಕರಿಬೇವಿನ ಸೊಪ್ಪು ಸೇರಿಸಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ.
    * ಈಗ ಹುರಿದ ಎಲ್ಲಾ ಪದಾರ್ಥಗಳನ್ನು ತಣ್ಣಗಾಗಲು ಬಿಟ್ಟು ಬಳಿಕ ಮಿಕ್ಸರ್ ಜಾರಿಗೆ ಹಾಕಿ, ಹುಣಿಸೆಹಣ್ಣು, ಬೆಲ್ಲ ಹಾಗೂ ಉಪ್ಪು ಸೇರಿಸಿ ಪುಡಿ ಮಾಡಿಕೊಳ್ಳಿ.
    * ಈಗ ಒಂದು ಕಡಾಯಿ ತೆಗೆದುಕೊಂಡು ಅದರಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ಸಾಸಿವೆ ಸಿಡಿಯಲು ಬಿಡಿ.
    * ಬಳಿಕ ಇಡ್ಲಿಗಳನ್ನು ಅದರಲ್ಲಿ ಹಾಕಿ ಉರಿಯನ್ನು ಆಫ್ ಮಾಡಿ.
    * ಈಗ ಪುಡಿ ಮಾಡಿಟ್ಟಿದ್ದ ಮಸಾಲೆಯನ್ನು ಇಡ್ಲಿಗಳ ಮೇಲೆ ಹರಡಿ ಟಾಸ್ ಮಾಡಿ.
    * ಇಡ್ಲಿಗೆ ಮಸಾಲೆ ಚೆನ್ನಾಗಿ ಕೋಟ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
    * ಇದೀಗ ಮಸಾಲೆಯುಕ್ತ ಪೋಡಿ ಇಡ್ಲಿ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಟ್ರೈ ಮಾಡಿ ಕ್ರಿಸ್ಪಿ ಪೋಹಾ ಕಟ್ಲೆಟ್..