Tag: recipe

  • ನೀವು ಸಿಹಿಪ್ರಿಯರಾಗಿದ್ರೆ ಟ್ರೈ ಮಾಡಿ ಬಾಳೆಹಣ್ಣಿನ ಇಡ್ಲಿ

    ನೀವು ಸಿಹಿಪ್ರಿಯರಾಗಿದ್ರೆ ಟ್ರೈ ಮಾಡಿ ಬಾಳೆಹಣ್ಣಿನ ಇಡ್ಲಿ

    ಡ್ಲಿಯನ್ನು ಸಾಮಾನ್ಯವಾಗಿ ಎಲ್ಲರೂ ತಿಂದಿರುತ್ತೀರಿ. ಇಡ್ಲಿಯಲ್ಲಿ ಹಲವಾರು ವಿಧಗಳಿವೆ. ಉದಾಹರಣೆಗೆ ರವಾ ಇಡ್ಲಿ, ಓಟ್ಸ್ ಇಡ್ಲಿ, ಸಬ್ಬಕ್ಕಿ ಇಡ್ಲಿ ಮುಂತಾದವು. ಇವತ್ತಿನ ನಮ್ಮ ರೆಸಿಪಿಯಲ್ಲಿ ಇನ್ನೊಂದು ರೀತಿಯ ಇಡ್ಲಿಯನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಅದುವೇ ಬಾಳೆಹಣ್ಣಿನ ಇಡ್ಲಿ. ಸಿಹಿ ಇಷ್ಟಪಡುವವರು ಇದನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಬೆಳಗ್ಗಿನ ಉಪಹಾರಕ್ಕೆ ಮಾಡಿ ಆರೋಗ್ಯಕರ ಓಟ್ಸ್ ಮಸಾಲ..

    ಬೇಕಾಗುವ ಸಾಮಗ್ರಿಗಳು:
    ಇಡ್ಲಿ ಹಿಟ್ಟು – 1 ಕಪ್
    ಬೆಲ್ಲದ ಪೌಡರ್ – 6 ಚಮಚ
    ಉಪ್ಪು – ಅಗತ್ಯಕ್ಕೆ ತಕ್ಕಷ್ಟು
    ಏಲಕ್ಕಿ ಪುಡಿ – 1 ಚಿಟಿಕೆ
    ಹೆಚ್ಚಿದ ಬಾಳೆಹಣ್ಣು – 1
    ತೆಂಗಿನ ಹಾಲು – 1 ಕಪ್

    ಮಾಡುವ ವಿಧಾನ:

    • ಮೊದಲಿಗೆ ಒಂದು ದೊಡ್ಡ ಪಾತ್ರೆಗೆ ಇಡ್ಲಿ ಹಿಟ್ಟನ್ನು ಹಾಕಿಕೊಳ್ಳಿ. ಬಳಿಕ ಅದಕ್ಕೆ 4 ಚಮಚ ಬೆಲ್ಲದ ಪೌಡರ್, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಹೆಚ್ಚಿದ ಬಾಳೆಹಣ್ಣು ಹಾಗೂ ಏಲಕ್ಕಿ ಪುಡಿಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    • ನಂತರ ಇಡ್ಲಿ ಟ್ರೇಗೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಸವರಿಕೊಳ್ಳಿ. ಬಳಿಕ ಇಡ್ಲಿ ಹಿಟ್ಟಿನ ಮಿಶ್ರಣವನ್ನು ಇದರಲ್ಲಿ ಹಾಕಿ ಬೇಯಲು ಇಡಿ. ಬೆಂದ ನಂತರ ಒಂದು ಪ್ಲೇಟ್‌ನಲ್ಲಿ ತೆಗೆದಿಡಿ.
    • ನಂತರ ತೆಂಗಿನ ಹಾಲನ್ನು ಬಿಸಿ ಮಾಡಿ ಅದಕ್ಕೆ 2 ಚಮಚ ಬೆಲ್ಲದ ಪುಡಿಯನ್ನು ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ. ಈಗ ಇದನ್ನು ಸರ್ವಿಂಗ್ ಪ್ಲೇಟ್‌ನಲ್ಲಿ ಇರಿಸಿ ಇಡ್ಲಿ ಜೊತೆ ಸವಿಯಲು ಕೊಡಿ. ಇದನ್ನೂ ಓದಿ: ಟ್ರಾವೆಲ್ ಮಾಡೋವಾಗ ಯಾವಾಗ್ಲೂ ಇಟ್ಟುಕೊಂಡಿರಿ ಚಾಕ್ಲೇಟ್ ಕಾಫಿ ಎನರ್ಜಿ ಬೈಟ್ಸ್

  • ಬೆಳಗ್ಗಿನ ಉಪಹಾರಕ್ಕೆ ಮಾಡಿ ಆರೋಗ್ಯಕರ ಓಟ್ಸ್ ಮಸಾಲ..

    ಬೆಳಗ್ಗಿನ ಉಪಹಾರಕ್ಕೆ ಮಾಡಿ ಆರೋಗ್ಯಕರ ಓಟ್ಸ್ ಮಸಾಲ..

    ಯೆಟ್ ಮಾಡುವವರು, ಸಣ್ಣ ಆಗಲು ಬಯಸುವವರು ಓಟ್ಸ್ ತಿನ್ನುವುದನ್ನು ನೋಡಿಯೇ ಇರುತ್ತೀರಿ. ಓಟ್ಸ್ ತಿನ್ನುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಿಂದ ಯಾವುದೇ ದುಷ್ಪರಿಣಾಮಗಳಿಲ್ಲ. ದಿನಾ ಒಂದೇ ರೀತಿಯಾಗಿ ಓಟ್ಸ್ ತಿನ್ನುವ ಬದಲು ಸ್ವಲ್ಪ ಡಿಫರೆಂಟ್ ಆಗಿ ಮಾಡಿ ತಿಂದರೆ ಚೆನ್ನಾಗಿರುತ್ತದೆ ಅಲ್ವಾ. ಹಾಗಿದ್ರೆ ಇವತ್ತಿನ ನಮ್ಮ ರೆಸಿಪಿಯಯಲ್ಲಿ ಓಟ್ಸ್ ಮಸಾಲ ಹೇಗೆ ಮಾಡಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ. ಇದನ್ನೂ ಓದಿ: ಟ್ರಾವೆಲ್ ಮಾಡೋವಾಗ ಯಾವಾಗ್ಲೂ ಇಟ್ಟುಕೊಂಡಿರಿ ಚಾಕ್ಲೇಟ್ ಕಾಫಿ ಎನರ್ಜಿ ಬೈಟ್ಸ್

    ಬೇಕಾಗುವ ಸಾಮಗ್ರಿಗಳು:
    ಓಟ್ಸ್ – 1 ಕಪ್
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಟೊಮೆಟೊ – 1
    ಹೆಚ್ಚಿದ ಕ್ಯಾರೆಟ್ – 2 ಚಮಚ
    ಹಸಿ ಮೆಣಸಿನಕಾಯಿ – 2
    ಬಟಾಣಿ – 2 ಚಮಚ
    ಗರಂ ಮಸಾಲ – ಅರ್ಧ ಚಮಚ
    ಅಚ್ಚ ಖಾರದ ಪುಡಿ – ಅಗತ್ಯಕ್ಕೆ ತಕ್ಕಷ್ಟು
    ಅರಶಿಣ ಪುಡಿ – 1 ಚಮಚ
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:

    • ಮೊದಲಿಗೆ ಒಂದು ಬಾಣಲೆಗೆ ಓಟ್ಸ್ ಹಾಕಿಕೊಂಡು ಗರಿ ಗರಿಯಾಗುವವರೆಗೂ ಹುರಿದುಕೊಳ್ಳಿ. ನಂತರ ಅದನ್ನು ಪಕ್ಕಕ್ಕೆ ಇಡಿ.
    • ನಂತರ ಒಂದು ಪ್ಯಾನ್‌ಗೆ ಒಂದು ಚಮಚ ತುಪ್ಪ ಹಾಕಿಕೊಂಡು ಬಿಸಿಯಾದ ಬಳಿಕ ಅದಕ್ಕೆ ಸ್ವಲ್ಪ ಜೀರಿಗೆ ಹಾಕಿಕೊಳ್ಳಿ. ಜೀರಿಗೆ ಕೆಂಪಾದ ಬಳಿಕ ಅದಕ್ಕೆ 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಅದರ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಿ.
    • ಈಗ ಇದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಬಳಿಕ ಇದಕ್ಕೆ ಹೆಚ್ಚಿದ ತರಕಾರಿಗಳನ್ನು ಹಾಕಿಕೊಂಡು, ಬಟಾಣಿಯನ್ನು ಹಾಕಿಕೊಂಡು ಹುರಿದುಕೊಳ್ಳಿ.
    • ನಂತರ ಈ ಮಿಶ್ರಣಕ್ಕೆ ಅಚ್ಚ ಖಾರದ ಪುಡಿ, ಅರಶಿಣ ಪುಡಿ, ಗರಂ ಮಸಾಲ ಹಾಕಿಕೊಳ್ಳಿ. ಅಲ್ಲದೇ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಬೇಕು.
    • ಈಗ ಇದಕ್ಕೆ ಎಷ್ಟು ಬೇಕೋ ಅಷ್ಟು ನೀರನ್ನು ಹಾಕಿಕೊಂಡು ಅದಕ್ಕೆ ಹುರಿದಿಟ್ಟಿದ್ದ ಓಟ್ಸ್ ಅನ್ನು ಹಾಕಿಕೊಳ್ಳಿ. ಬಳಿಕ ಇದನ್ನು 5ರಿಂದ 6 ನಿಮಿಷಗಳ ಕಾಲ ಬೇಯಲು ಬಿಡಿ. ನಂತರ ಇದನ್ನು ಸರ್ವಿಂಗ್ ಪ್ಲೇಟ್‌ಗೆ ಹಾಕಿಕೊಂಡು ಬಿಸಿ ಬಿಸಿಯಾಗಿ ತಿನ್ನಿ. ಇದನ್ನೂ ಓದಿ: ಫ್ರೀ ಟೈಮ್‌ನಲ್ಲಿ ಬೇಕೆನಿಸುತ್ತೆ ಚಟ್‌ಪಟಾ ಆಲೂ ಚಾಟ್

  • ಟ್ರಾವೆಲ್ ಮಾಡೋವಾಗ ಯಾವಾಗ್ಲೂ ಇಟ್ಟುಕೊಂಡಿರಿ ಚಾಕ್ಲೇಟ್ ಕಾಫಿ ಎನರ್ಜಿ ಬೈಟ್ಸ್

    ಟ್ರಾವೆಲ್ ಮಾಡೋವಾಗ ಯಾವಾಗ್ಲೂ ಇಟ್ಟುಕೊಂಡಿರಿ ಚಾಕ್ಲೇಟ್ ಕಾಫಿ ಎನರ್ಜಿ ಬೈಟ್ಸ್

    ನೀವು ಕಾಫಿ ಹಾಗೂ ಚಾಕ್ಲೇಟ್ ಪ್ರಿಯರಾಗಿದ್ದರೆ ಈ ರೆಸಿಪಿ ನಿಮಗೆ ಖಂಡಿತಾ ಇಷ್ಟವಾಗುತ್ತದೆ. ನೀವು ಟ್ರಾವೆಲ್ ಮಾಡುತ್ತಿರೋ ಸಂದರ್ಭ ಹಸಿವಾದರೆ, ಹೊರಗಡೆಯಿಂದ ಏನೂ ಖರೀದಿ ಮಾಡೋಕೆ ಸಾಧ್ಯವಾಗದೇ ಹೋದರೆ ಎನರ್ಜಿ ಬೈಟ್‌ಗಳು ಯಾವಾಗಲೂ ಉಪಯೋಗಕ್ಕೆ ಬರುತ್ತದೆ. ಇದನ್ನು ಲಘು ಆಹಾರವಾಗಿ ಯಾವಾಗ ಬೇಕಾದರೂ ಸವಿಯಬಹುದು. ಎನರ್ಜಿ ಬೈಟ್‌ಗಳನ್ನು ಹೆಚ್ಚಾಗಿ ಒಣ ಹಣ್ಣುಗಳಿಂದ ಮಾಡಲಾಗುತ್ತದೆ. ನಾವಿಂದು ಹೇಳಿಕೊಡುತ್ತಿರೋ ಅಂತಹುದೇ ರೆಸಿಪಿ ಚಾಕ್ಲೇಟ್ ಕಾಫಿ ಎನರ್ಜಿ ಬೈಟ್ಸ್.

    ಬೇಕಾಗುವ ಪದಾರ್ಥಗಳು:
    ಒಣ ಗೋಡಂಬಿ – 1 ಕಪ್
    ಕಾಫಿ ಬೀಜಗಳು – 3 ಟೀಸ್ಪೂನ್
    ಮೃದು ಖರ್ಜೂರ – 1 ಕಪ್
    ಸಣ್ಣಗೆ ಕತ್ತರಿಸಿದ ಡಾರ್ಕ್ ಚಾಕ್ಲೇಟ್ ಅಥವಾ ಚಾಕ್ಲೇಟ್ ಚಿಪ್ಸ್ – ಕಾಲು ಕಪ್ ಇದನ್ನೂ ಓದಿ: ಫ್ರೀ ಟೈಮ್‌ನಲ್ಲಿ ಬೇಕೆನಿಸುತ್ತೆ ಚಟ್‌ಪಟಾ ಆಲೂ ಚಾಟ್

    ಮಾಡುವ ವಿಧಾನ:
    * ಮೊದಲಿಗೆ ಬ್ಲೆಂಡರ್‌ಗೆ ಗೋಡಂಬಿ ಹಾಗೂ ಕಾಫಿ ಬೀಜಗಳನ್ನು ಹಾಕಿ ಒರಟಾಗಿ ಪುಡಿ ಮಾಡಿಕೊಳ್ಳಿ.
    * ಮೃದುವಾದ ಖರ್ಜೂರಗಳ ಬೀಜಗಳನ್ನು ಬೇರ್ಪಡಿಸಿ, ನಂತರ ಹೋಳುಗಳನ್ನು ಬ್ಲೆಂಡರ್‌ಗೆ ಹಾಕಿ ಮತ್ತೆ ಒರಟಾಗಿ ಪುಡಿ ಮಾಡಿ.
    * ಈಗ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿ 1 ಟೀಸ್ಪೂನ್ ನೀರನ್ನು ಬೆರೆಸಿ.
    * ಮಿಶ್ರಣವನ್ನು ನಿಮ್ಮ ಕೈಗಳಿಂದ ಉಂಡೆಗಳಾಗಿ ಮಾಡುವಷ್ಟು ಜಿಗುಟಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ. ಮಿಶ್ರಣ ಇನ್ನು ಕೂಡಾ ಒಣ ಎನಿಸಿದರೆ ಮತ್ತೆ ಒಂದೆರಡು ಟೀಸ್ಪೂನ್ ನೀರು ಸೇರಿಸಿ ಮತ್ತೆ ಜಿಗುಟುತನವನ್ನು ಪರಿಶೀಲಿಸಿ.
    * ಈಗ ಮಿಶ್ರಣಕ್ಕೆ ಚಾಕ್ಲೇಟ್ ಚಿಪ್ಸ್ ಅಥವಾ ಸಣ್ಣಗೆ ಕತ್ತರಿಸಿದ ಡಾರ್ಕ್ ಚಾಕ್ಲೇಟ್ ಹಾಕಿ ಮಿಶ್ರಣ ಮಾಡಿ.
    * ಈಗ ಮಿಶ್ರಣವನ್ನು ನಿಂಬೆ ಗಾತ್ರದ ಉಂಡೆಗಳಾಗಿ ಕಟ್ಟಿಕೊಳ್ಳಿ.
    * ಇದೀಗ ಚಾಕ್ಲೇಟ್ ಕಾಫಿ ಎನರ್ಜಿ ಬೈಟ್ಸ್ ತಯಾರಾಗಿದ್ದು ಸವಿಯಲು ಸಿದ್ಧವಾಗಿದೆ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಫ್ರಿಜ್‌ನಲ್ಲಿ ಇಟ್ಟರೆ 2 ವಾರಗಳ ವರೆಗೆ ಸವಿಯಬಹುದು. ರೂಂ ಟೆಂಪರೇಚರ್‌ನಲ್ಲಿ ಇದನ್ನು ಒಂದೆರಡು ದಿನಗಳವರೆಗೆ ಇಟ್ಟು ಸವಿಯಬಹುದು. ಇದನ್ನೂ ಓದಿ: ಗರಿಗರಿಯಾದ ಕಾರ್ನ್ ಪಕೋಡಾ ಸವಿಯಲು ತುಂಬಾ ಮಜಾ

  • ಫ್ರೀ ಟೈಮ್‌ನಲ್ಲಿ ಬೇಕೆನಿಸುತ್ತೆ ಚಟ್‌ಪಟಾ ಆಲೂ ಚಾಟ್

    ಫ್ರೀ ಟೈಮ್‌ನಲ್ಲಿ ಬೇಕೆನಿಸುತ್ತೆ ಚಟ್‌ಪಟಾ ಆಲೂ ಚಾಟ್

    ಲೂ ಚಾಟ್ ಭಾರತದ ಸ್ಟ್ರೀಟ್ ಫುಡ್‌ಗಳಲ್ಲಿ ಒಂದಾಗಿದ್ದು, ಇದನ್ನು ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ. ಸಿಹಿ, ಹುಳಿ, ಖಾರ ಸ್ವಾದದ ಮಿಶ್ರಣ ಇದರಲ್ಲಿರೋದ್ರಿಂದ ಹೆಚ್ಚಿನವರಿಗೆ ಇದು ಇಷ್ಟವಾಗುತ್ತದೆ. ಬಿಡುವಿನ ಸಮಯದಲ್ಲಿ ಅಥವಾ ಸಂಜೆ ಆದರೆ ಏನಾದ್ರೂ ಚಟ್‌ಪಟಾ ತಿಂಡಿಗಳನ್ನು ಸವಿಯಬೇಕು ಎನಿಸಿದ್ರೆ ಆಲೂ ಚಾಟ್ ಟ್ರೈ ಮಾಡಲು ಒಂದು ಬೆಸ್ಟ್ ಆಪ್ಶನ್. ರುಚಿಕರವಾದ ಆಲೂ ಚಾಟ್ ಅನ್ನು ಒಮ್ಮೆ ನೀವೂ ಟ್ರೈ ಮಾಡಿ ಬಿಡುವಿನ ಸಮಯವನ್ನು ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ಆಲೂಗಡ್ಡೆ – 2
    ಎಣ್ಣೆ – 1 ಟೀಸ್ಪೂನ್
    ತುರಿದ ಬೆಳ್ಳುಳ್ಳಿ – 1 ಟೀಸ್ಪೂನ್
    ಹೆಚ್ಚಿದ ಹಸಿರು ಮೆಣಸಿನಕಾಯಿ – 1
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಚಾಟ್ ಮಸಾಲಾ ಪುಡಿ – ಅರ್ಧ ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
    ಸೇವ್ – 4 ಟೀಸ್ಪೂನ್
    ದಾಳಿಂಬೆ ಬೀಜ – 2 ಟೀಸ್ಪೂನ್
    ನಿಂಬೆ ರಸ – ಅರ್ಧ ಟೀಸ್ಪೂನ್
    ಗ್ರೀನ್ ಚಟ್ನಿ ತಯಾರಿಸಲು:
    ಕೊತ್ತಂಬರಿ ಸೊಪ್ಪು – ಅರ್ಧ ಕಪ್
    ಪುದೀನಾ ಸೊಪ್ಪು – 5
    ಬೆಳ್ಳುಳ್ಳಿ – 1
    ಶುಂಠಿ – ಸಣ್ಣ ತುಂಡು
    ನೀರು – 1 ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್ ಇದನ್ನೂ ಓದಿ: ಗರಿಗರಿಯಾದ ಕಾರ್ನ್ ಪಕೋಡಾ ಸವಿಯಲು ತುಂಬಾ ಮಜಾ

    ಮಾಡುವ ವಿಧಾನ:
    * ಮೊದಲಿಗೆ ಆಲೂಗಡ್ಡೆಗಳನ್ನು ಶುಚಿಗೊಳಿಸಿ ಸಿಪ್ಪೆ ಸುಲಿದು ಒಂದೊಂದು ಇಂಚಿನ ತುಂಡುಗಳಾಗಿ ಕತ್ತರಿಸಿ.
    * ಈಗ ಆಲೂಗಡ್ಡೆಗಳನ್ನು ಕುಕ್ಕರ್ ಅಥವಾ ಪಾತ್ರೆಯಲ್ಲಿ ಬೇಯಿಸಿಕೊಳ್ಳಬೇಕು. ನಂತರ ಅದನ್ನು ಆರಲು ಬಿಡಬೇಕು.
    * ಗ್ರೀನ್ ಚಟ್ನಿ ತಯಾರಿಸಲು ಮಿಕ್ಸರ್ ಜಾರ್‌ಗೆ ಕೊತ್ತಂಬರಿ ಸೊಪ್ಪು, ಪುದೀನಾ, ಬೆಳ್ಳುಳ್ಳಿ, ಶುಂಠಿ, ಉಪ್ಪು ಹಾಗೂ ನೀರು ಸೇರಿಸಿ ಪೇಸ್ಟ್ ಆಗಿ ರುಬ್ಬಿಕೊಳ್ಳಿ. (ಇದರಲ್ಲಿ ಆಲೂ ಚಾಟ್ 2 ಟೀಸ್ಪೂನ್ ಬಳಸಿದರೆ ಉಳಿದ ಗ್ರೀನ್ ಚಟ್ನಿಯನ್ನು ಬೇಕೆಂದಾಗ ಬಳಸಲು ಫ್ರಿಜ್‌ನಲ್ಲಿ ಶೇಖರಿಸಿಡಬಹುದು)
    * ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಶುಂಠಿ, ಬೆಳ್ಳುಳ್ಳಿ ಹಾಗೂ ಹಸಿರು ಮೆಣಸಿನಕಾಯಿ ಹಾಕಿ ಫ್ರೈ ಮಾಡಿಕೊಳ್ಳಿ.
    * ಬಳಿಕ ಅದಕ್ಕೆ ಆಲೂಗಡ್ಡೆ ಸೇರಿಸಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
    * ಈಗ ಒಂದು ಬೌಲ್‌ನಲ್ಲಿ ಹುರಿದ ಆಲೂಗಡ್ಡೆಯನ್ನು ಹಾಕಿ, ಅದಕ್ಕೆ ಕೆಂಪು ಮೆಣಸಿನಪುಡಿ, ಚಾಟ್ ಮಸಾಲಾ, ಉಪ್ಪು ಹಾಗೂ ಜೀರಿಗೆ ಪುಡಿ ಹಾಕಿ ಮಿಶ್ರಣ ಮಾಡಿ.
    * ಅದಕ್ಕೆ 2 ಟೀಸ್ಪೂನ್ ಗ್ರೀನ್ ಚಟ್ನಿ ಹಾಗೂ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ.
    * ಈಗ ಸರ್ವಿಂಗ್ ಪ್ಲೇಟ್‌ಗೆ ಆಲೂ ಚಾಟ್ ಹಾಕಿ, ಅದರ ಮೇಲೆ ಸೇವ್‌, ಕೊತ್ತಂಬರಿ ಸೊಪ್ಪು ಹಾಗೂ ದಾಳಿಂಬೆ ಬೀಜದಿಂದ ಅಲಂಕರಿಸಿ. ಹಾಗೂ ತಕ್ಷಣವೇ ಸವಿಯಿರಿ. ಇದನ್ನೂ ಓದಿ: ಟ್ರೈ ಮಾಡಿ ನೋಡಿ ಸ್ಪೈಸೀ ಸಿಹಿಗೆಣಸಿನ ವೆಡ್ಜಸ್

  • ಖಾರ ಸವೀಬೇಕು ಎನ್ನೋರಿಗೆ ಚಿಕನ್ ಮದ್ರಾಸ್ ರೆಸಿಪಿ

    ಖಾರ ಸವೀಬೇಕು ಎನ್ನೋರಿಗೆ ಚಿಕನ್ ಮದ್ರಾಸ್ ರೆಸಿಪಿ

    ನೀವು ಖಾರವಾದ ಭಾರತೀಯ ನಾನ್‌ವೆಜ್ ಅಡುಗೆ ಸವೀಬೇಕು ಎಂದೆನಿಸಿದ್ರೆ ಚಿಕನ್ ಮದ್ರಾಸ್ ರೆಸಿಪಿಯನ್ನು ಖಂಡಿತಾ ಇಷ್ಟಪಡುತ್ತೀರಿ. ಜಗತ್ತಿನಲ್ಲಿ ಚಿಕನ್ ರೆಸಿಪಿ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮಾಡಲಾಗುತ್ತದೆ. ಕೆಲವೊಂದುಕಡೆ ಹೆಚ್ಚು ಖಾರ ಬಳಸುವುದಿಲ್ಲ ಹಾಗೂ ಕೆಲವೊಂದು ಕಡೆ ಹೆಚ್ಚು ಖಾರ ಬಳಸಲಾಗುತ್ತದೆ. ಭಾರತದಲ್ಲೂ ಅಷ್ಟೇ ಒಂದೊಂದು ಭಾಗದಲ್ಲಿ ಮಾಡೋ ಖಾದ್ಯ ಒಂದೊಂದು ರೀತಿಯ ರುಚಿ ನೀಡುತ್ತದೆ. ಚಿಕನ್ ಮದ್ರಾಸ್ ಭಾರತದಲ್ಲಿ ಫೇಮಸ್ ಆಗಿರೋ ನಾನ್‌ವೆಜ್ ರೆಸಿಪಿಗಳಲ್ಲೊಂದು. ಚಿಕನ್ ಮದ್ರಾಸ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಚಿಕನ್ – 700 ಗ್ರಾಂ (ಬ್ರೆಸ್ಟ್, ತೊಡೆ ಭಾಗಗಳು ಸೂಕ್ತ)
    ಹಸಿರು ಮೆಣಸಿನಕಾಯಿ – 3
    ಎಣ್ಣೆ – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 2
    ತುರಿದ ಶುಂಠಿ – 1 ಇಂಚು
    ತುರಿದ ಬೆಳ್ಳುಳ್ಳಿ – 4
    ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
    ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಅರಿಶಿನ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಜಾಯಿಕಾಯಿ ಪುಡಿ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಟೊಮೆಟೊ – 200 ಗ್ರಾಂ
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
    ಗರಂ ಮಸಾಲೆ ಪುಡಿ – 1 ಟೀಸ್ಪೂನ್ ಇದನ್ನೂ ಓದಿ: ಮಕ್ಕಳಿಗೆ ಇಷ್ಟವಾಗುತ್ತೆ ವೆಸ್ಟರ್ನ್ ಟಚ್‌ನ ಕ್ರೀಮಿ ಗಾರ್ಲಿಕ್ ಚಿಕನ್

    ಮಾಡುವ ವಿಧಾನ:
    * ಮೊದಲಿಗೆ ಚಿಕನ್‌ನಲ್ಲಿರುವ ಚರ್ಮದ ಭಾಗಗಳನ್ನು ತೆಗೆದುಹಾಕಿ, ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ.
    * ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಬಳಿಕ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
    * ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಅರ್ಧ ನಿಮಿಷ ಫ್ರೈ ಮಾಡಿ.
    * ಬಳಿಕ ಕೆಂಪು ಮೆಣಸಿನ ಪುಡಿ, ಜೀರಿಗೆ, ಕೊತ್ತಂಬರಿ, ಅರಿಶಿನ ಮತ್ತು ಉಪ್ಪು ಸೇರಿಸಿ, ಬೆರೆಸಿ.
    * ಚಿಕನ್ ಹಾಗೂ 50 ಮಿ.ಲೀ ನೀರನ್ನು ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ.
    * ಬಳಿಕ ಜಾಯಿಕಾಯಿ ಮತ್ತು ಟೊಮೆಟೊ ಸೇರಿಸಿ 10 ನಿಮಿಷ ಬೇಯಿಸಿಕೊಳ್ಳಿ.
    * ಗರಂ ಮಸಾಲೆ ಸೇರಿಸಿ ಮಿಶ್ರಣ ಮಾಡಿ.
    * ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಉರಿಯನ್ನು ಆಫ್ ಮಾಡಿ.
    * ಇದೀಗ ಚಿಕನ್ ಮದ್ರಾಸ್ ತಯಾರಾಗಿದ್ದು, ಬಾಸ್ಮತಿ ರೈಸ್ ಅಥವಾ ಚಪಾತಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಬಿರಿಯಾನಿಗೆ ಸೂಪರ್ ಸೈಡ್ ಡಿಶ್ – ಮಟನ್ ದಾಲ್ಚಾ ರೆಸಿಪಿ

  • ಉಳಿದ ಅನ್ನದಲ್ಲಿ ಮಾಡಿ ಬೊಂಬಾಟ್ ಮಶ್ರೂಮ್ ಫ್ರೈಡ್‌ರೈಸ್

    ಉಳಿದ ಅನ್ನದಲ್ಲಿ ಮಾಡಿ ಬೊಂಬಾಟ್ ಮಶ್ರೂಮ್ ಫ್ರೈಡ್‌ರೈಸ್

    ಹಸಿದವನಿಗೆ ಅನ್ನ ಹಾಕಿದರೆ ಒಳಿತಾಗುತ್ತದೆ ಎಂಬ ಹಿರಿಯರ ಮಾತಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಲೆಕ್ಕಕ್ಕಿಂತ ಹೆಚ್ಚಿನ ಆಹಾರ ತೆಗೆದುಕೊಂಡು ಎಸೆಯುವವರೇ ಜಾಸ್ತಿ. ಇದು ಒಳ್ಳೆಯ ಅಭ್ಯಾಸವಲ್ಲ. ಹಾಗಿದ್ದರೆ ಉಳಿದ ಅನ್ನದಿಂದ ಏನು ಮಾಡಬಹುದು ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿದೆ. ರಾತ್ರಿ ಉಳಿದ ಅನ್ನದಿಂದ ಬೊಂಬಾಟ್ ಮಶ್ರೂಮ್ ಫ್ರೈಡ್‌ರೈಸ್ ಮಾಡುವುದನ್ನು ನಾವು ತಿಳಿಸಿಕೊಡುತ್ತೇವೆ. ಹಾಗಿದ್ದರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.

    ಬೇಕಾಗುವ ಸಾಮಾಗ್ರಿಗಳು:
    ಉಳಿದ ಅನ್ನ – 1 ಕಪ್
    ತೊಳೆದು ಹೆಚ್ಚಿಟ್ಟುಕೊಂಡ ಅಣಬೆ – 150 ಗ್ರಾಂ
    ಹೆಚ್ಚಿದ ಬೆಳ್ಳುಳ್ಳಿ – ಸ್ವಲ್ಪ
    ಹೆಚ್ಚಿದ ಈರುಳ್ಳಿ – ಅರ್ಧ ಕಪ್
    ಕೊತ್ತಂಬರಿ ಸೊಪ್ಪು – ಅರ್ಧ ಚಮಚ
    ಆಲಿವ್ ಆಯಿಲ್- 2 ಚಮಚ
    ಕರಿಮೆಣಸಿನ ಪುಡಿ – ಕಾಲು ಚಮಚ
    ಉಪ್ಪು – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:

    • ಮೊದಲಿಗೆ ಒಂದು ಬಾಣಾಲೆಯಲ್ಲಿ ಆಲಿವ್ ಆಯಿಲ್ ಹಾಕಿಕೊಂಡು ಕಾದ ನಂತರ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಹಾಕಿಕೊಂಡು 2 ನಿಮಿಷಗಳ ಕಾಲ ಚನ್ನಾಗಿ ಫ್ರೈ ಮಾಡಿಕೊಳ್ಳಿ.
    • ಬಳಿಕ ಇದಕ್ಕೆ ಹೆಚ್ಚಿದ ಅಣಬೆಗಳನ್ನು ಹಾಕಿಕೊಂಡು ಕಂದು ಬಣ್ಣ ಬರುವವರೆಗೆ ಚನ್ನಾಗಿ ಹುರಿದುಕೊಳ್ಳಿ. ಇದರ ನೀರಿನಾಂಶ ಸಂಪೂರ್ಣವಾಗಿ ಬಿಡುವುದರಿಂದ ಫ್ರೈಡ್‌ರೈಸ್ ಇನ್ನಷ್ಟು ರುಚಿಯನ್ನು ನೀಡುತ್ತದೆ.
    • ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಸ್ವಲ್ಪ ಫ್ರೈ ಮಾಡಿ ನಂತರ ಅದಕ್ಕೆ ಕರಿಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ.
    • ಬಳಿಕ ಈ ಮಿಶ್ರಣಕ್ಕೆ ಅನ್ನವನ್ನು ಹಾಕಿಕೊಂಡು 5ರಿಂದ 6 ನಿಮಿಷಗಳ ಕಾಲ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    • ಈಗ ಮಶ್ರೂಮ್ ಫ್ರೈಡ್‌ರೈಸ್ ತಿನ್ನಲು ರೆಡಿ. ಇದನ್ನು ಬಿಸಿ ಇರುವಾಗಲೇ ಸರ್ವ್ ಮಾಡಿ ತಿಂದು ಆನಂದಿಸಿ.

  • ಗರಿಗರಿಯಾದ ಕಾರ್ನ್ ಪಕೋಡಾ ಸವಿಯಲು ತುಂಬಾ ಮಜಾ

    ಗರಿಗರಿಯಾದ ಕಾರ್ನ್ ಪಕೋಡಾ ಸವಿಯಲು ತುಂಬಾ ಮಜಾ

    ಒಂದು ಕಪ್ ಟೀ ಜೊತೆಗೆ ಏನಾದರೂ ಕುರುಕಲು, ಕರಿದ ತಿಂಡಿಯಿಲ್ಲದಿದ್ದರೆ ಬೇಜಾರು ಅಲ್ವಾ? ಬಗೆ ಬಗೆಯ ಪಕೋಡಾಗಳನ್ನು ಮಾಡಿ ಸ್ನ್ಯಾಕ್ಸ್ ಟೈಮ್‌ನಲ್ಲಿ ಮನೆ ಮಂದಿಗೆ ಹಂಚಿದರೆ ಎಲ್ಲರಿಗೂ ಖುಷಿ. ಇಂದು ನೀವು ಡಿಫರೆಂಟ್ ಆಗಿ ಕಾರ್ನ್ ಪಕೋಡಾ ಮಾಡಿ ನೋಡಿ. ಇದನ್ನು ಸಾಮಾನ್ಯ ಕಾರ್ನ್ ಅಥವಾ ಸ್ವೀಟ್ ಕಾರ್ನ್ ಬಳಸಿಯೂ ಮಾಡಬಹುದು. ಕೇವಲ ಟೀ ಟೈಮ್ ಯಾಕೆ, ಊಟದೊಂದಿಗೆ ಸೈಡ್ ಡಿಶ್ ಆಗಿ ಬಡಿಸಲು ಕೂಡಾ ಇದು ಪರ್ಫೆಕ್ಟ್ ಆಗಿರುತ್ತದೆ. ಕಾರ್ನ್ ಪಕೋಡಾ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮಧ್ಯಮ ಗಾತ್ರದ ಇಡೀ ಜೋಳ – 2
    ಕಡಲೆ ಹಿಟ್ಟು – ಒಂದೂವರೆ ಕಪ್
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಹಸಿರು ಮೆಣಸಿನಕಾಯಿ – 1
    ಕತ್ತರಿಸಿದ ಶುಂಠಿ – 1 ಇಂಚು
    ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
    ಅರಿಶಿನ ಪುಡಿ – ಕಾಲು ಟೀಸ್ಪೂನ್
    ಗರಂ ಮಸಾಲೆ ಪುಡಿ – ಕಾಲು ಟೀಸ್ಪೂನ್
    ಹಿಂಗ್ – ಚಿಟಿಕೆ
    ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
    ಜೀರಿಗೆ ಪುಡಿ – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – ಅರ್ಧ ಕಪ್
    ಚಾಟ್ ಮಸಾಲಾ – ಐಚ್ಛಿಕ
    ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು ಇದನ್ನೂ ಓದಿ: ಟೀ ಪಾರ್ಟಿಗೆ ಮಾಡಿ ಪೈನಾಪಲ್ ಕುಕ್ಕೀಸ್

    ಮಾಡುವ ವಿಧಾನ:
    * ಮೊದಲಿಗೆ ಜೋಳಗಳನ್ನು ಪ್ರೆಶರ್ ಕುಕ್ಕರ್ ಅಥವಾ ಪ್ಯಾನ್‌ನಲ್ಲಿ ಬೇಯಿಸಿಕೊಳ್ಳಿ.
    * ನೀರನ್ನು ಹರಿಸಿ, ತಣ್ಣಗಾಗಲು ಬಿಡಿ. ಬಳಿಕ ಚಾಕುವಿನಿಂದ ಜಾಗರೂಕತೆಯಿಂದ ಜೋಳದ ಕಾಳುಗಳನ್ನು ಬೇರ್ಪಡಿಸಿ ಪಕ್ಕಕ್ಕಿಡಿ.
    * ಒಂದು ಬಟ್ಟಲಿನಲ್ಲಿ ಈರುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲೆ ಪುಡಿ, ಹಿಂಗ್, ಕರಿಮೆಣಸಿನ ಪುಡಿ, ಜೀರಿಗೆ ಪುಡಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
    * ಈಗ ಕಡಲೆ ಹಿಟ್ಟು ಹಾಗೂ ನೀರು ಸೇರಿಸಿ ಮಿಶ್ರಣ ಮಾಡಿ.
    * ಮಿಶ್ರಣಕ್ಕೆ ಬೇಯಿಸಿದ ಜೋಳ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ಈಗ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ತಯಾರಿಸಿಟ್ಟ ಬ್ಯಾಟರ್ ಅನ್ನು ಪಕೋಡಾ ರೀತಿಯಲ್ಲಿ ಸ್ವಲ್ಪ ಸ್ವಲ್ಪವೇ ಬಿಡಿ.
    * ಪಕೋಡಾಗಳು ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣ ಬರುವಂತೆ ಹಾಗೂ ಗರಿಗರಿಯಾಗುವವರೆಗೆ ಚೆನ್ನಾಗಿ ಹುರಿದುಕೊಳ್ಳಿ.
    * ಈಗ ಪಕೋಡಾಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ಕೊನೆಯಲ್ಲಿ ಚಾಟ್ ಮಸಾಲಾ ಸಿಂಪಡಿಸಿದರೆ ಗರಿಗರಿಯಾದ ಜೋಳದ ಪಕೋಡಾ ಸವಿಯಲು ಸಿದ್ಧವಾಗುತ್ತದೆ. ಇದನ್ನು ಗ್ರೀನ್ ಚಟ್ನಿ, ಪುದೀನಾ ಚಟ್ನಿ ಅಥವಾ ಸಾಸ್‌ನೊಂದಿಗೂ ಸವಿಯಬಹುದು. ಇದನ್ನೂ ಓದಿ: ಟ್ರೈ ಮಾಡಿ ನೋಡಿ ಸ್ಪೈಸೀ ಸಿಹಿಗೆಣಸಿನ ವೆಡ್ಜಸ್

  • ಮಕ್ಕಳಿಗೆ ಇಷ್ಟವಾಗುತ್ತೆ ವೆಸ್ಟರ್ನ್ ಟಚ್‌ನ ಕ್ರೀಮಿ ಗಾರ್ಲಿಕ್ ಚಿಕನ್

    ಮಕ್ಕಳಿಗೆ ಇಷ್ಟವಾಗುತ್ತೆ ವೆಸ್ಟರ್ನ್ ಟಚ್‌ನ ಕ್ರೀಮಿ ಗಾರ್ಲಿಕ್ ಚಿಕನ್

    ನೆಯಲ್ಲಿ ಏನೇ ಅಡುಗೆ ಮಾಡಿದರೂ ಮಕ್ಕಳ ಮನವೊಲಿಸಿ ಅದನ್ನು ಅವರಿಗೆ ತಿನ್ನಿಸೋದು ಕಷ್ಟವೇ ಸರಿ. ಆದರೆ ನಾನ್‌ವೆಜ್ ವಿಷಯ ಬಂದಾಗ ಮಕ್ಕಳು ಅದನ್ನು ಬೇಡ ಎನ್ನೋದೇ ವಿರಳ. ಅದರಲ್ಲೂ ಇತ್ತೀಚಿನ ಮಕ್ಕಳು ವೆಸ್ಟರ್ನ್ ಸ್ಟೈಲ್‌ನ ರೆಸಿಪಿಗಳನ್ನು ಇನ್ನಷ್ಟು ಇಷ್ಟಪಟ್ಟು ತಿನ್ನುತ್ತಾರೆ. ಇಂತಹ ಮಕ್ಕಳಿಗಾಗಿ ನಾವಿಂದು ಹೇಳಿಕೊಡುತ್ತಿರೋ ರೆಸಿಪಿ ಕ್ರೀಮಿ ಗಾರ್ಲಿಕ್ ಚಿಕನ್. ಮಕ್ಕಳೇ ಏಕೆ, ವೆಸ್ಟರ್ನ್ ಟಚ್ ಇರೋ ದೇಸೀ ಚಿಕನ್ ರೆಸಿಪಿ ಇದಾಗಿರೋದ್ರಿಂದ ದೊಡ್ಡವರಿಗೂ ಇದು ಖಂಡಿತಾ ಇಷ್ಟವಾಗುತ್ತದೆ.

    ಬೇಕಾಗುವ ಪದಾರ್ಥಗಳು:
    ಮ್ಯಾರಿನೇಟ್ ಮಾಡಲು:
    ಚಿಕನ್ – 1 ಕೆಜಿ (ಬ್ರೆಸ್ಟ್, ತೊಡೆ ಭಾಗಗಳು ಉತ್ತಮ)
    ಬೆಳ್ಳುಳ್ಳಿ ಪುಡಿ – 1 ಟೀಸ್ಪೂನ್
    ಕರಿ ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಬೆಣ್ಣೆ – 1 ಟೀಸ್ಪೂನ್
    ಆಲಿವ್ ಎಣ್ಣೆ – 1 ಟೀಸ್ಪೂನ್
    ಗ್ರೇವಿ ತಯಾರಿಸಲು:
    ಬೆಣ್ಣೆ – 1 ಟೀಸ್ಪೂನ್
    ಆಲಿವ್ ಎಣ್ಣೆ – 1 ಟೀಸ್ಪೂನ್
    ಹೆಚ್ಚಿದ ಈರುಳ್ಳಿ – 1 ಕಪ್
    ತುರಿದ ಬೆಳ್ಳುಳ್ಳಿ – 6
    ದಪ್ಪಗೆ ಕತ್ತರಿಸಿದ ಮಶ್ರೂಮ್ – 2 ಕಪ್
    ಚಿಕನ್ ಸ್ಟಾಕ್ – ಒಂದೂವರೆ ಕಪ್
    ಹೆವಿ ಕ್ರೀಮ್ – 500 ಮಿ.ಲೀ
    ತುರಿದ ಚೀಸ್ – ಕಾಲು ಕಪ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಒರಿಗಾನೋ – 1 ಟೀಸ್ಪೂನ್ ಇದನ್ನೂ ಓದಿ: ಫಿಶ್ ಫ್ರೈಗೆ ಟ್ವಿಸ್ಟ್ – ಪೆಪ್ಪರ್ ಫ್ರೈ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಬೆಳ್ಳುಳ್ಳಿ ಪುಡಿ, ಕರಿ ಮೆಣಸಿನ ಪುಡಿ, ಉಪ್ಪು ಹಾಗೂ ಎಣ್ಣೆಯನ್ನು ಒಂದು ಬಟ್ಟಲಿಗೆ ಹಾಕಿ, ಅದಕ್ಕೆ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಲೇಪಿಸಿಕೊಳ್ಳಿ.
    * ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಅದರಲ್ಲಿ ಚಿಕನ್ ತುಂಡುಗಳನ್ನು ಹಾಕಿ ಹುರಿದುಕೊಳ್ಳಿ.
    * ಚಿಕನ್ ತುಂಡುಗಳ ಪ್ರತಿ ಭಾಗ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 4-5 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ. ಬಳಿಕ ಅದನ್ನು ಪಕ್ಕಕ್ಕಿಡಿ.
    * ಈಗ ಅದೇ ಪ್ಯಾನ್ ಅನ್ನು ಸ್ವಚ್ಛಗೊಳಿಸಿ, ಅದರಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ಈರುಳ್ಳಿ ಸೇರಿಸಿ ಮೃದುವಾಗುವವರೆಗೆ ಹುರಿದುಕೊಳ್ಳಿ.
    * ಅದಕ್ಕೆ ಬೆಳ್ಳುಳ್ಳಿ ಸೇರಿಸಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ.
    * ನಂತರ ಮಶ್ರೂಮ್ ಸೇರಿಸಿ, 2-3 ನಿಮಿಷ ಬೇಯಿಸಿಕೊಳ್ಳಿ.
    * ಚಿಕನ್ ಸ್ಟಾಕ್, ಕ್ರೀಮ್, ಚೀಸ್, ಓರಿಗಾನೋ, ಕೊತ್ತಂಬರಿ ಸೊಪ್ಪು ಸೇರಿಸಿ ಬೆರೆಸಿಕೊಳ್ಳಿ. ಅದನ್ನು 5 ನಿಮಿಷ ಕುದಿಸಿಕೊಳ್ಳಿ.
    * ಈಗ ಉರಿಯನ್ನು ಮಧ್ಯಮಕ್ಕೆ ತಂದು ಹುರಿದ ಚಿಕನ್ ಅನ್ನು ಸೇರಿಸಿ 10 ನಿಮಿಷ ಕುದಿಸಿಕೊಳ್ಳಿ.
    * ಇದೀಗ ಕ್ರೀಮಿ ಗಾರ್ಲಿಕ್ ಚಿಕನ್ ತಯಾರಾಗಿದ್ದು, ಅನ್ನ ಅಥವಾ ಪಾಸ್ತಾದೊಂದಿಗೆ ಸವಿಯಿರಿ. ಇದನ್ನೂ ಓದಿ: ಬಿರಿಯಾನಿಗೆ ಸೂಪರ್ ಸೈಡ್ ಡಿಶ್ – ಮಟನ್ ದಾಲ್ಚಾ ರೆಸಿಪಿ

  • ಟೀ ಪಾರ್ಟಿಗೆ ಮಾಡಿ ಪೈನಾಪಲ್ ಕುಕ್ಕೀಸ್

    ಟೀ ಪಾರ್ಟಿಗೆ ಮಾಡಿ ಪೈನಾಪಲ್ ಕುಕ್ಕೀಸ್

    ಸ್ನೇಹಿತರು, ಆತ್ಮೀಯರು ಮತ್ತು ಕುಟುಂಬದವರು ಸಂಜೆ ಟೀ ಪಾರ್ಟಿ ಮಾಡುತ್ತಾರೆ. ಈ ಪಾರ್ಟಿಗಳಲ್ಲಿ ಅನೇಕ ರೀತಿಯ ತಿಂಡಿ ತಿನಿಸುಗಳಿರುತ್ತವೆ. ನಿಮ್ಮ ಟೀ ಟೈಮ್ ಪಾರ್ಟಿಗೆ ಫರ್ಪೆಕ್ಟ್ ಮ್ಯಾಚ್ ಆಗುವಂತಹ ಒಂದು ರೆಸಿಪಿಯನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಅದರ ಹೆಸರೇ ಪೈನಾಪಲ್ ಕುಕ್ಕೀಸ್. ಇದನ್ನು ಮಕ್ಕಳು ಮಾತ್ರವಲ್ಲದೇ ದೊಡ್ಡವರೂ ಟೀ ಜೊತೆ ಸವಿಯಬಹುದು. ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಒಮ್ಮೆ ಸವಿದ್ರೆ ರುಚಿ ಮರೆಯಲ್ಲ – ಕಾಶ್ಮೀರ್ ಆಪಲ್ ಖೀರ್ ಮಾಡಿ ನೋಡಿ

    ಬೇಕಾಗುವ ಸಾಮಗ್ರಿಗಳು:
    ಮೈದಾ ಅಥವಾ ಗೋಧಿ ಹಿಟ್ಟು – 500 ಗ್ರಾಂ
    ಬೆಣ್ಣೆ – 425 ಗ್ರಾಂ
    ಪೈನಾಪಲ್ ಎಸೆನ್ಸ್ – 1 ಚಮಚ
    ಸಕ್ಕರೆ – 230 ಗ್ರಾಂ
    ಸಣ್ಣಗೆ ಹೆಚ್ಚಿದ ಪೈನಾಪಲ್ ತುಂಡುಗಳು – 100 ಗ್ರಾಂ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಾಲೆಗೆ ಬೆಣ್ಣೆ ಮತ್ತು ಸಕ್ಕರೆಯನ್ನು ಹಾಕಿ ಹದವಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ಗೋಧಿ ಹಿಟ್ಟನ್ನು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ.
    * ನಂತರ ಇದಕ್ಕೆ ಪೈನಾಪಲ್ ಎಸೆನ್ಸ್ ಮತ್ತು ಹೆಚ್ಚಿದ ಪೈನಾಪಲ್ ತುಂಡುಗಳನ್ನು ಸೇರಿಸಿಕೊಂಡು ಹದವಾದ ಮಿಶ್ರಣ ಮಾಡಿಕೊಳ್ಳಿ. ನಂತರ ಸ್ವಲ್ಪ ಪ್ರಮಾಣದ ಹಿಟ್ಟನ್ನು ತೆಗೆದುಕೊಂಡು ಕುಕ್ಕೀಸ್ ರೀತಿಯಲ್ಲಿ ದುಂಡಗಿನ ಶೇಪ್ ಬರುವಂತೆ ಅಂಗೈಯಲ್ಲಿ ತಟ್ಟಿಕೊಳ್ಳಿ. ಅದೇ ರೀತಿ ಎಲ್ಲಾ ಕುಕ್ಕೀಸ್‌ಗಳನ್ನು ಮಾಡಿಟ್ಟುಕೊಳ್ಳಿ.
    * ಬಳಿಕ ಒಂದು ಟ್ರೇಯಲ್ಲಿ ಬೇಕಿಂಗ್ ಪೇಪರ್ ಹಾಕಿಕೊಂಡು ಅದರಲ್ಲಿ ಕುಕ್ಕೀಸ್‌ಗಳನ್ನು ಇಟ್ಟುಕೊಂಡು ಓವನ್‌ನಲ್ಲಿ 180 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ 15 ರಿಂದ 20 ನಿಮಿಷ ಬೇಯಿಸಿಕೊಳ್ಳಿ. ನಂತರ ಇದನ್ನು ಒಂದು ಪ್ಲೇಟ್‌ಗೆ ಹಾಕಿಕೊಂಡು ಆರಲು ಬಿಡಿ. ಈಗ ಪೈನಾಪಲ್ ಕುಕ್ಕೀಸ್ ಸರ್ವ್ ಮಾಡಲು ಸಿದ್ಧ. ಇದನ್ನೂ ಓದಿ: ದಾಹಕ್ಕೆ ಸವಿಯಿರಿ ಕೂಲ್ ಕೂಲ್ ಕಲ್ಲಂಗಡಿ ಮೊಜಿಟೊ

  • ಒಮ್ಮೆ ಸವಿದ್ರೆ ರುಚಿ ಮರೆಯಲ್ಲ – ಕಾಶ್ಮೀರ್ ಆಪಲ್ ಖೀರ್ ಮಾಡಿ ನೋಡಿ

    ಒಮ್ಮೆ ಸವಿದ್ರೆ ರುಚಿ ಮರೆಯಲ್ಲ – ಕಾಶ್ಮೀರ್ ಆಪಲ್ ಖೀರ್ ಮಾಡಿ ನೋಡಿ

    ಕಾಶ್ಮೀರಿ ಆಪಲ್ ಎಷ್ಟು ಫೇಮಸ್ ಅಂತ ಎಲ್ಲರಿಗೂ ಗೊತ್ತು. ಜೇನಿನಂತಹ ಸಿಹಿಯಾದ ಇದರ ರುಚಿ ಉಳಿದೆಲ್ಲಾ ಹಣ್ಣುಗಳನ್ನು ಹಿಂದಿಕ್ಕಬಲ್ಲದು. ನಾವಿಂದು ಇದೇ ಕಾಶ್ಮೀರ್ ಆಪಲ್ ಬಳಸಿ ದೇಸೀ ಸಿಹಿಯಾದ ಖೀರ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಈ ರೆಸಿಪಿ ಬೇಕೆಂದರೆ ಇತರ ಸೇಬುಗಳನ್ನೂ ಬಳಸಿ ಮಾಡಬಹುದು. ಆದರೆ ಕಾಶ್ಮೀರಿ ಆಪಲ್‌ನ ರುಚಿ ಯಾರಿಂದ ತಾನೇ ಮರೆಯೋಕೆ ಸಾಧ್ಯ? ಇದೇ ಕಾಶ್ಮೀರಿ ಆಪಲ್ ಬಳಸಿ ಮಾಡಿದ ಖೀರ್ ಕೂಡಾ ಅಷ್ಟೆ. ಒಮ್ಮೆ ಸವಿದರೆ ರುಚಿ ಮರೆಯೋದು ಅಸಾಧ್ಯ.

     

    ಬೇಕಾಗುವ ಪದಾರ್ಥಗಳು:
    ಕಾಶ್ಮೀರ್ ಆಪಲ್ – 1
    ತುಪ್ಪ – 1 ಟೀಸ್ಪೂನ್
    ಹಾಲು – 3 ಕಪ್
    ಕೇಸರಿ ಎಸಳು – ಕಾಲು ಟೀಸ್ಪೂನ್
    ಕಂಡೆನ್ಸ್ಡ್ ಮಿಲ್ಕ್ – ಕಾಲು ಕಪ್
    ಏಲಕ್ಕಿ ಪುಡಿ – ಕಾಲು ಟೀಸ್ಪೂನ್
    ಕತ್ತರಿಸಿದ ಒಣ ಹಣ್ಣುಗಳು – 2 ಟೀಸ್ಪೂನ್ ಇದನ್ನೂ ಓದಿ: ದಾಹಕ್ಕೆ ಸವಿಯಿರಿ ಕೂಲ್ ಕೂಲ್ ಕಲ್ಲಂಗಡಿ ಮೊಜಿಟೊ

    ಮಾಡುವ ವಿಧಾನ:
    * ಮೊದಲಿಗೆ ಆಪಲ್‌ನ ಸಿಪ್ಪೆ ತೆಗೆದು, ತುರಿಯಿರಿ.
    * ತಕ್ಷಣ ಅದನ್ನು ಪ್ಯಾನ್‌ಗೆ ಹಾಕಿ ತುಪ್ಪ ಸೇರಿಸಿ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ.
    * ಅದರಲ್ಲಿರುವ ನೀರಿನಂಶ ಆವಿಯಾಗುವವರೆಗೆ ಚೆನ್ನಾಗಿ ಬೇಯಿಸಿ. ಬಳಿಕ ಉರಿಯನ್ನು ಆಫ್ ಮಾಡಿ ತಣ್ಣಗಾಗಲು ಬಿಡಿ.
    * ಈಗ ಒಂದು ಕಡಾಯಿಯಲ್ಲಿ ಹಾಲನ್ನು ಬಿಸಿ ಮಾಡಿ, ಕೇಸರಿ ಸೇರಿಸಿ ಕುದಿಸಿಕೊಳ್ಳಿ.
    * ಬಳಿಕ ಕಂಡೆನ್ಸ್ಡ್ ಮಿಲ್ಕ್ ಸೇರಿಸಿ 10 ನಿಮಿಷ ಹಾಲು ದಪ್ಪಗಾಗುವವರೆಗೆ ಕುದಿಸಿ.
    * ನಂತರ ಏಲಕ್ಕಿ ಪುಡಿ ಸೇರಿಸಿ, ಮಿಶ್ರಣ ಮಾಡಿ.
    * ಉರಿಯನ್ನು ಆಫ್ ಮಾಡಿ ಹಾಲು ಸಂಪೂರ್ಣ ತಣ್ಣಗಾಗಲು ಬಿಡಿ.
    * ಈಗ ಬೇಯಿಸಿ ತಣ್ಣಗಾಗಿಸಿದ ಸೇಬನ್ನು ಕುದಿಸಿ ತಣ್ಣಗಾಗಿಸಿದ ಹಾಲಿನ ಮಿಶ್ರಣಕ್ಕೆ ಹಾಕಿ ಬೆರೆಸಿ. (ಹಾಲು ಬೆಚ್ಚಗಿದ್ದರೆ ಹಾಳಾಗುವ ಸಾಧ್ಯತೆಯಿರುತ್ತದೆ)
    * ಈಗ ಖೀರ್ ಅನ್ನು ತಣ್ಣಗಾಗಲು 30 ನಿಮಿಷ ಫ್ರಿಡ್ಜ್‌ನಲ್ಲಿ ಇಡಿ.
    * ಕೊನೆಯಲ್ಲಿ ಕತ್ತರಿಸಿದ ಒಣ ಹಣ್ಣುಗಳಿಂದ ಅಲಂಕರಿಸಿದರೆ ಕಾಶ್ಮೀರ್ ಆಪಲ್ ಖೀರ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಹಠ ಮಾಡೋ ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಪಪ್ಪಾಯ ಐಸ್‌ಕ್ರೀಮ್