Tag: recipe

  • ಮಳೆಗಾಲದ ತಂಪಲ್ಲಿ ಸವಿಯಿರಿ ಚಾಕೊಲೇಟ್ ಫಲೂಡಾ!

    ಮಳೆಗಾಲದ ತಂಪಲ್ಲಿ ಸವಿಯಿರಿ ಚಾಕೊಲೇಟ್ ಫಲೂಡಾ!

    ಳೆಗಾಲ ಬಂದಾಗ ತಂಪಿನ ವಾತಾವರಣದಲ್ಲಿ ಕೆಲವರು ಬಿಸಿ ಬಿಸಿಯಾಗಿ ಏನಾದರೂ ತಿನ್ನುವುದು ಸಾಮಾನ್ಯ. ಆದರೆ ಮಳೆಗಾಲದಲ್ಲಿ ಕೆಲವರಿಗೆ ಐಸ್‌ಕ್ರೀಮ್ ತಿನ್ನುವ ಅಭ್ಯಾಸವಿರುತ್ತದೆ. ಮುಂಗಾರಿನ ಸಂದರ್ಭದಲ್ಲಿ ಐಸ್‌ಕ್ರೀಮ್ ತಿನ್ನಲು ಬಯಸುವವರು ಒಂದು ಸಲ ಚಾಕೊಲೇಟ್ ಫಲೂಡಾ ಸವಿದು ನೋಡಿ. ನಿಮ್ಮ ಮನೆಯಲ್ಲಿ ಚಾಕೊಲೇಟ್ ಸಿರಪ್ ಮತ್ತು ಐಸ್‌ಕ್ರೀಮ್ ಇದ್ದರೆ ಇದನ್ನು ತುಂಬಾ ಸಿಂಪಲ್ ಆಗಿ ತಯಾರಿಸಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಚಾಕೊಲೇಟ್ ಫಲೂಡಾ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ದರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಟ್ರೈ ಮಾಡಿ ಕಾಬೂಲ್ ಕಡಲೆಯ ಟೇಸ್ಟಿ ಉಪ್ಪಿನಕಾಯಿ ರೆಸಿಪಿ

    ಬೇಕಾಗುವ ಸಾಮಗ್ರಿಗಳು:
    ಫಲೂಡಾ ಶ್ಯಾವಿಗೆ – ಅಗತ್ಯಕ್ಕೆ ತಕ್ಕಷ್ಟು
    ಹಾಲು – ಕಾಲು ಕಪ್
    ಕಸ್ಟರ್ಡ್ ಪೌಡರ್ – 1 ಚಮಚ
    ಕೋಕೋ ಪೌಡರ್ – 1 ಚಮಚ
    ಸಕ್ಕರೆ – 4 ಚಮಚ
    ಚಿಯಾ ಸೀಡ್ಸ್ – 4 ಚಮಚ
    ಚಾಕೊಲೇಟ್ ಐಸ್‌ಕ್ರೀಮ್ – ಅಗತ್ಯಕ್ಕೆ ತಕ್ಕಷ್ಟು
    ಚಾಕೊಲೇಟ್ ಸಿರಪ್ – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು ಕಾದ ನಂತರ ಅದಕ್ಕೆ ಫಲೂಡಾ ಶ್ಯಾವಿಗೆ ಹಾಕಿಕೊಂಡು 2 ನಿಮಿಷಗಳ ಕಾಲ ಚನ್ನಾಗಿ ಬೇಯಿಸಿಕೊಳ್ಳಿ.
    * ಇನ್ನೊಂದು ಸಣ್ಣ ಬೌಲ್‌ನಲ್ಲಿ ನೀರು ಹಾಕಿಕೊಂಡು ಅದರಲ್ಲಿ ಚಿಯಾ ಸೀಡ್ಸ್‌ ಹಾಕಿ 10 ನಿಮಿಷಗಳ ಕಾಲ ನೆನೆಯಲು ಬಿಡಿ.
    * ಬಳಿಕ ಒಂದು ಪಾತ್ರೆಯಲ್ಲಿ ಕಾಲು ಕಪ್ ಹಾಲನ್ನು ಹಾಕಿಕೊಂಡು ಅದಕ್ಕೆ 1 ಚಮಚ ಕಸ್ಟರ್ಡ್ ಪೌಡರ್ ಮತ್ತು 1 ಚಮಚ ಕೋಕೋ ಪೌಡರ್ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
    * ನಂತರ ಇದಕ್ಕೆ 4 ಚಮಚ ಸಕ್ಕರೆಯನ್ನು ಸೇರಿಸಿಕೊಂಡು ಸಕ್ಕರೆ ಕರಗುವವರೆಗೂ ತಿರುವಿಕೊಳ್ಳಿ.
    * ಈಗ ಒಂದು ಗಾಜಿನ ಗ್ಲಾಸ್ ಅನ್ನು ತೆಗೆದುಕೊಂಡು ಅದಕ್ಕೆ ಚಾಕೊಲೇಟ್ ಸಿರಪ್ ಹಾಕಿಕೊಂಡು ಅದರ ಮೇಲೆ ಚಿಯಾ ಸೀಡ್ಸ್ ಹಾಕಿಕೊಳ್ಳಿ. ಅದರ ಮೇಲೆ ಫಲೂಡಾ ಶ್ಯಾವಿಗೆಯನ್ನು ಸೇರಿಸಿಕೊಳ್ಳಿ.
    * ನಂತರ ಅದಕ್ಕೆ ಮಿಶ್ರಣ ಮಾಡಿಟ್ಟಿದ್ದ ಹಾಲನ್ನು ಹಾಕಿಕೊಂಡು ಅದರ ಮೇಲೆ ಚಾಕೊಲೇಟ್ ಐಸ್‌ಕ್ರೀಮ್ ಹಾಕಿದರೆ ಚಾಕೊಲೇಟ್ ಫಲೂಡಾ ಸವಿಯಲು ಸಿದ್ಧ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ಟ್ರೈ ಮಾಡಿ ಬ್ರೆಡ್ ಉಪ್ಮಾ

  • ಕುರುಕಲು ತಿಂಡಿಗೆ ಹಠ ಹಿಡಿಯೋ ಮಕ್ಕಳಿಗಾಗಿ ಮಾಡಿ ರಿಬ್ಬನ್ ಸೇವ್

    ಕುರುಕಲು ತಿಂಡಿಗೆ ಹಠ ಹಿಡಿಯೋ ಮಕ್ಕಳಿಗಾಗಿ ಮಾಡಿ ರಿಬ್ಬನ್ ಸೇವ್

    ಕುರುಕಲು ತಿಂಡಿ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮಕ್ಕಳು ಮನೆಯಲ್ಲಿದ್ದಾಗ ನೆಚ್ಚಿನ ಆಹಾರಕ್ಕಾಗಿ ಹಠ ಹಿಡಿಯೋದು ಸಹಜ. ಅವರಿಗಾಗಿ ನಾವಿಂದು ಒಂದು ಸುಲಭದ ರೆಸಿಪಿ ಹೇಳಿಕೊಡುತ್ತೇವೆ. ರಿಬ್ಬನ್ ಸೇವ್ ಮಾಡೋದು ಸುಲಭವಾಗಿದ್ದು, ಇದನ್ನು ತಯಾರಿಸಲು ಹೆಚ್ಚಿನ ಪದಾರ್ಥಗಳು ಬೇಕಾಗಿಲ್ಲ. ಇದನ್ನು ಮನೆಯಲ್ಲೇ ತಯಾರಿಸುವುದರಿಂದ ಮಕ್ಕಳ ಆರೋಗ್ಯದ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳೊ ಅಗತ್ಯವಿರುವುದಿಲ್ಲ. ರಿಬ್ಬನ್ ಸೇವ್ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಕಡಲೆ ಹಿಟ್ಟು – ಅರ್ಧ ಕಪ್
    ಗೋಧಿ ಹಿಟ್ಟು – ಕಾಲು ಕಪ್
    ಅರಿಶಿನ ಪುಡಿ – ಕಾಲು ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಹಿಂಗ್ – ಕಾಲು ಟೀಸ್ಪೂನ್
    ಎಣ್ಣೆ – ಮುಕ್ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ಟ್ರೈ ಮಾಡಿ ಬ್ರೆಡ್ ಉಪ್ಮಾ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟು, ಗೋಧಿ ಹಿಟ್ಟು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಹಿಂಗ್ ಹಾಗೂ ಉಪ್ಪು ಸೇರಿಸಿ ಮಿಕ್ಸ್ ಮಾಡಿ.
    * ಎಣ್ಣೆಯನ್ನು ಸ್ವಲ್ಪ ಬೆಚ್ಚಗಾಗಿಸಿ, ಹಿಟ್ಟಿನ ಮಿಶ್ರಣಕ್ಕೆ ಸುರಿಯಿರಿ.
    * ಹಿಟ್ಟಿಗೆ ಅಗತ್ಯವಿರುವಂತೆ ನೀರು ಬೆರೆಸುತ್ತಾ ಮೃದುವಾದ ಹಿಟ್ಟಿನ ಹದಕ್ಕೆ ತನ್ನಿ.
    * ಈಗ ಚಕ್ಕುಲಿ ಮೇಕರ್‌ನಲ್ಲಿ ರಿಬ್ಬನ್ ಸೇವ್ ತಯಾರಿಸೋ ಅಚ್ಚನ್ನು ಬಳಸಿ ಹಿಟ್ಟನ್ನು ಒತ್ತಿಕೊಳ್ಳಿ. ನಿಮ್ಮ ಬಳಿ ಚಕ್ಕುಲಿ ಮೇಕರ್ ಇಲ್ಲವೆಂದರೆ ಹಿಟ್ಟನ್ನು ತೆಳ್ಳಗೆ ಲಟ್ಟಿಸಿಕೊಂಡು, ಚಾಕುವಿನ ಸಹಾಯದಿಂದ ರಿಬ್ಬನ್ ಆಕಾರದಲ್ಲಿ ಕತ್ತರಿಸಿಕೊಳ್ಳಬಹುದು.
    * ಸೇವ್ ರಿಬ್ಬನ್ ಅನ್ನು ನೇರವಾಗಿ ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ. ನೀವು ಎಣ್ಣೆಯಲ್ಲಿ ಕರಿಯಲು ಇಷ್ಟಪಡುವುದಿಲ್ಲವೆಂದಾದರೆ ಮೊದಲೇ ಕಾಯಿಸಿಟ್ಟ ಓವನ್‌ನಲ್ಲಿ 180 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಮಾರು 10 ನಿಮಿಷಗಳ ಕಾಲ ಬೇಯಿಸಬಹುದು.
    * ಬಳಿಕ ರಿಬ್ಬನ್ ಸೇವ್ ಅನ್ನು ತಣ್ಣಗಾಗಿಸಿ, ಮಕ್ಕಳಿಗೆ ಸವಿಯಲು ನೀಡಿ.
    * ನೀವಿದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟ್ಟರೆ ವಾರಗಳ ವರೆಗೆ ಸವಿಯಬಹುದು. ಇದನ್ನೂ ಓದಿ: ಸಿಂಪಲ್ಲಾಗಿ ಮಾಡಿ ಮಶ್ರೂಮ್ 65..

  • ಸುಲಭದ ಎಗ್ ಕೀಮಾ ರೆಸಿಪಿ – ಫಟಾಫಟ್ ಅಂತ ಮಾಡ್ಬೋದು

    ಸುಲಭದ ಎಗ್ ಕೀಮಾ ರೆಸಿಪಿ – ಫಟಾಫಟ್ ಅಂತ ಮಾಡ್ಬೋದು

    ಗ್ ಕೀಮಾ ಮಸಾಲೆಯುಕ್ತ ರುಚಿಕರವಾದ ಅಡುಗೆಯಾಗಿದ್ದು, ಇದನ್ನು ಕೇವಲ 30 ನಿಮಿಷಗಳಲ್ಲಿ ತಯಾರಿಸಬಹುದು. ಅನ್ನ, ಚಪಾತಿ, ಪರೋಟ ಯಾವುದರೊಂದಿಗೂ ಇದು ಸರಿಹೊಂದುತ್ತದೆ. ಚಪಾತಿಗಾಗಿ ಗ್ರೇವಿ ತಯಾರಿಸೋದು ಹೆಚ್ಚು ಟೈಮ್ ತೆಗೆದುಕೊಳ್ಳುತ್ತದೆ. ನಿಮ್ಮಲ್ಲಿ ಹೆಚ್ಚು ಸಮಯ ಇಲ್ಲ ಎಂದರೆ ಎಗ್ ಕೀಮಾವನ್ನು ಒಮ್ಮೆ ಟ್ರೈ ಮಾಡಿ ನೋಡಬಹುದು. ಎಗ್ ಕೀಮಾ ಮಾಡೋದು ಹೇಗೆಂದು ನಾವಿಂದು ತಿಳಿಸಿಕೊಡುತ್ತೇವೆ.

    ಬೇಕಾಗುವ ಪದಾರ್ಥಗಳು:
    ಬೇಯಿಸಿದ ಮೊಟ್ಟೆ – 2
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಟೊಮೆಟೊ – 1
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಗರಂ ಮಸಾಲೆ ಪುಡಿ – ಅರ್ಧ ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಎಣ್ಣೆ – 4 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಕರಿಬೇವಿನ ಸೊಪ್ಪು – ಕೆಲವು
    ಕೆಂಪು ಮೆಣಸಿನಪುಡಿ – 1 ಟೀಸ್ಪೂನ್ ಇದನ್ನೂ ಓದಿ: ಖಾರ ಸವೀಬೇಕು ಎನ್ನೋರಿಗೆ ಚಿಕನ್ ಮದ್ರಾಸ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಈರುಳ್ಳಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಸೇರಿಸಿ ಈರುಳ್ಳಿ ಮೃದುವಾಗುವವರೆಗೆ ಹುರಿಯಿರಿ.
    * ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿಕೊಳ್ಳಿ.
    * ಹೆಚ್ಚಿದ ಟೊಮೆಟೊ ಸೇರಿಸಿ ಮೃದುವಾಗುವವರೆಗೆ ಬೇಯಿಸಿಕೊಳ್ಳಿ.
    * ನಂತರ ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಉಪ್ಪು, ಕೆಂಪು ಮೆಣಸಿನಪುಡಿ, ಗರಂ ಮಸಾಲೆ ಸೇರಿಸಿ ಮಿಶ್ರಣ ಮಾಡಿ.
    * ಮಸಾಲೆ ಸುಡುವುದನ್ನು ತಪ್ಪಿಸಲು ಸ್ವಲ್ಪ ನೀರು ಸೇರಿಸಿ, ಮಸಾಲೆಗಳ ಹಸಿ ವಾಸನೆ ಹೋಗುವವರೆಗೆ ಬೇಯಿಸಿಕೊಳ್ಳಿ.
    * ಈಗ ಬೇಯಿಸಿದ ಮೊಟ್ಟೆಗಳನ್ನು ಸಣ್ಣದಾಗಿ ಕತ್ತರಿಸಿ, ಮಸಾಲೆಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
    * ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಎಗ್ ಕೀಮಾ ಚಪಾತಿ, ಅನ್ನದೊಂದಿಗೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮಕ್ಕಳಿಗೆ ಇಷ್ಟವಾಗುತ್ತೆ ವೆಸ್ಟರ್ನ್ ಟಚ್‌ನ ಕ್ರೀಮಿ ಗಾರ್ಲಿಕ್ ಚಿಕನ್

  • ಸಂಜೆಯ ಸ್ನ್ಯಾಕ್ಸ್‌ಗೆ ಟ್ರೈ ಮಾಡಿ ಬ್ರೆಡ್ ಉಪ್ಮಾ

    ಸಂಜೆಯ ಸ್ನ್ಯಾಕ್ಸ್‌ಗೆ ಟ್ರೈ ಮಾಡಿ ಬ್ರೆಡ್ ಉಪ್ಮಾ

    ಪ್ರಸ್ತುತ ರಾಜ್ಯದಲ್ಲಿ ಆಗಾಗ ಮಳೆಯಾಗುತ್ತಿರುವುದರಿಂದ ಚಳಿಗೆ ಏನಾದರೂ ಬಿಸಿ ಬಿಸಿ ತಿನ್ನಬೇಕು ಎಂದೆನಿಸುವುದು ಸಹಜ. ಸಂಜೆಯ ಚಹಾದೊಂದಿಗೆ ಏನಾದರೂ ತಿಂದರೆ ಹಸಿವನ್ನು ನೀಗಿಸುವುದರ ಜೊತೆಗೆ ಚಳಿಯನ್ನೂ ದೂರ ಮಾಡಿ ಮನಸ್ಸಿಗೆ ಮುದವನ್ನು ನೀಡುತ್ತದೆ. ಮನೆಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ಬ್ರೆಡ್ ಉಪ್ಮಾ ಮಾಡುವ ರೆಸಿಪಿಯನ್ನು ನಾವು ಇವತ್ತು ನಿಮಗೆ ತಿಳಿಸಿಕೊಡಲಿದ್ದೇವೆ. ಹಾಗಿದ್ದರೆ ಅತ್ಯಂತ ಸುಲಭವಾಗಿ ಬ್ರೆಡ್ ಉಪ್ಮಾ ಹೇಗೆ ಮಾಡುವುದು ಎಂಬುವುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ನಾಲ್ಕೇ ಪದಾರ್ಥ ಸಾಕು – ಹೆಲ್ತಿ ಅಂಜೂರದ ಐಸ್‌ಕ್ರೀಮ್ ಮಾಡಿ ನೋಡಿ

    ಬೇಕಾಗುವ ಸಾಮಾಗ್ರಿಗಳು:
    ಬ್ರೆಡ್ – 2 ರಿಂದ 3
    ಎಣ್ಣೆ – 1 ಚಮಚ
    ಸಾಸಿವೆ – ಅರ್ಧ ಚಮಚ
    ಉದ್ದಿನ ಬೇಳೆ – ಅರ್ಧ ಚಮಚ
    ಕರಿ ಬೇವು – 5 ರಿಂದ 6 ಎಲೆ
    ಶುಂಠಿ ಪೇಸ್ಟ್ – ಮುಕ್ಕಾಲು ಚಮಚ
    ಹೆಚ್ಚಿದ ಹಸಿಮೆಣಸು – 1
    ಗೋಡಂಬಿ – 8 ರಿಂದ 10
    ಹೆಚ್ಚಿದ ಈರುಳ್ಳಿ- ಕಾಲು ಕಪ್
    ಹೆಚ್ಚಿದ ಟೊಮೆಟೊ – ಅರ್ಧ ಕಪ್
    ಉಪ್ಪು – ಅಗತ್ಯಕ್ಕೆ ತಕ್ಕಷ್ಟು
    ಅರಶಿನ ಪುಡಿ – ಅರ್ಧ ಚಮಚ
    ಅಚ್ಚಖಾರದ ಪುಡಿ – ಅರ್ಧ ಚಮಚ
    ಸಕ್ಕರೆ – ಅರ್ಧ ಚಮಚ
    ನೀರು – 3 ರಿಂದ 4 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟುಕೊಂಡು ಬ್ರೆಡ್ ಅನ್ನು ರೋಸ್ಟ್ ಮಾಡಿಕೊಳ್ಳಿ. ಬಳಿಕ ಅದನ್ನು ಕ್ಯೂಬ್ಸ್ ರೀತಿಯಲ್ಲಿ ತುಂಡು ಮಾಡಿಕೊಂಡು ಒಂದು ಬೌಲ್‌ನಲ್ಲಿ ಹಾಕಿ ಪಕ್ಕಕ್ಕಿಡಿ.
    * ಬಳಿಕ ಅದೇ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಅದಕ್ಕೆ ಗೋಡಂಬಿ ಹಾಕಿಕೊಂಡು ಗೋಲ್ಡನ್ ಬಣ್ಣ ಬರುವವರೆಗೆ ಕರಿದುಕೊಳ್ಳಿ. ಬಳಿಕ ಇದನ್ನು ಬದಿಗಿಟ್ಟುಕೊಂಡು ಪ್ಯಾನ್‌ಗೆ ಸ್ವಲ್ಪ ಸಾಸಿವೆ, ಉದ್ದಿನ ಬೇಳೆ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
    * ನಂತರ ಇದಕ್ಕೆ ಹಸಿಮೆಣಸು ಮತ್ತು ಕರಿಬೇವಿನ ಎಲೆಯನ್ನು ಹಾಕಿಕೊಂಡು ಫ್ರೈ ಮಾಡಿದ ಬಳಿಕ ಸ್ವಲ್ಪ ಇಂಗು ಮತ್ತು ಹೆಚ್ಚಿದ ಈರುಳ್ಳಿಯನ್ನು ಹಾಕಿಕೊಳ್ಳಿ. ಈರುಳ್ಳಿ ಫ್ರೈ ಆದ ನಂತರ ಅದಕ್ಕೆ ಶುಂಠಿ ಪೇಸ್ಟ್ ಅನ್ನು ಹಾಕಿಕೊಂಡು 30 ಸೆಕೆಂಡುಗಳ ಕಾಲ ಅದರ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಿ.
    * ಈಗ ಇದಕ್ಕೆ ಹೆಚ್ಚಿದ ಟೊಮೆಟೊ, ಉಪ್ಪು ಮತ್ತು ಅರಶಿನ ಪುಡಿ ಹಾಕಿಕೊಂಡು ಟೊಮೆಟೊ ಮೆತ್ತಗಾಗುವವರೆಗೂ ತಿರುವಿಕೊಳ್ಳಿ. ಬಳಿಕ ಅಚ್ಚಖಾರದ ಪುಡಿ ಮತ್ತು ಸಕ್ಕರೆ ಹಾಕಿಕೊಂಡು 1 ರಿಂದ 2 ನಿಮಿಷ ಫ್ರೈ ಮಾಡಿಕೊಳ್ಳಬೇಕು.
    * ಈಗ ಈ ಮಿಶ್ರಣಕ್ಕೆ ಸ್ವಲ್ಪ ನೀರನ್ನು ಸೇರಿಸಿಕೊಂಡು ಮಿಶ್ರಣ ಹದವಾಗಿ ದಪ್ಪ ಆಗುವವರೆಗೂ ತಿರುವಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಉಪ್ಪು ಹಾಕಿಕೊಂಡು ಬಳಿಕ ಬ್ರೆಡ್ ಕ್ಯೂಬ್ಸ್‌ಗಳನ್ನು ಸೇರಿಸಿಕೊಳ್ಳಿ. ಬಳಿಕ ಹುರಿದ ಗೋಡಂಬಿಯನ್ನೂ ಸೇರಿಸಿಕೊಂಡು ಬ್ರೆಡ್ ಮಿಶ್ರಣಕ್ಕೆ ಸರಿಯಾಗಿ ಹೊಂದಿಕೊಳ್ಳುವಂತೆ ತಿರುವಿಕೊಳ್ಳಿ.
    * ಈಗ ಬ್ರೆಡ್ ಉಪ್ಮಾ ತಿನ್ನಲು ರೆಡಿ. ಇದನ್ನು ಒಂದು ಸರ್ವಿಂಗ್ ಪ್ಲೇಟ್‌ಗೆ ಹಾಕಿಕೊಂಡು ಚಹಾದೊಂದಿಗೆ ತಿಂದು ಆನಂದಿಸಿ. ಇದನ್ನೂ ಓದಿ: ಚಪಾತಿ, ರೋಟಿ ಜೊತೆ ಸವಿಯಿರಿ ಪಂಜಾಬಿ ಸ್ಟೈಲ್ ಮಟರ್ ಪನೀರ್

  • ನಾಲ್ಕೇ ಪದಾರ್ಥ ಸಾಕು – ಹೆಲ್ತಿ ಅಂಜೂರದ ಐಸ್‌ಕ್ರೀಮ್ ಮಾಡಿ ನೋಡಿ

    ನಾಲ್ಕೇ ಪದಾರ್ಥ ಸಾಕು – ಹೆಲ್ತಿ ಅಂಜೂರದ ಐಸ್‌ಕ್ರೀಮ್ ಮಾಡಿ ನೋಡಿ

    ಸ್‌ಕ್ರೀಮ್ ಎಲ್ಲರಿಗೂ ಇಷ್ಟ. ಆದರೆ ಅದನ್ನು ಆರೋಗ್ಯಕರ ರೀತಿಯಲ್ಲಿ ಮಾಡೋ ವಿಧಾನವೂ ಇದೆ ಎಂದರೆ ನಂಬುತ್ತೀರಾ? ನಾವಿಂದು ಆರೋಗ್ಯಕ್ಕೆ ಹಿತವೆನಿಸುವ ಅಂಜೂರದ ಐಸ್‌ಕ್ರೀಮ್ ರೆಸಿಪಿಯನ್ನು ಹೇಳಿಕೊಡಲಿದ್ದೇವೆ. ಇದಕ್ಕೆ ಕಂಡೆನ್ಸ್‌ಡ್ ಮಿಲ್ಕ್ ಬೇಡ ಹಾಗೂ ಸಕ್ಕರೆ ಕಡಿಮೆ ಬೆಳಕೆಯಾಗುವುದರಿಂದ ಇದು ಆರೋಗ್ಯಕ್ಕೂ ಉತ್ತಮವೆನಿಸುತ್ತದೆ. ಕೇವಲ ನಾಲ್ಕೇ ಪದಾರ್ಥ ಬಳಸಿ ನೀವೂ ಕೂಡಾ ಸಖತ್ ರುಚಿಯಾದ ಅಂಜೂರದ ಐಸ್‌ಕ್ರೀಮ್ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಒಣ ಅಂಜೂರ – ಅರ್ಧ ಕಪ್
    ದನದ ಹಾಲು – ಒಂದು ಮುಕ್ಕಾಲು ಕಪ್
    ಸಕ್ಕರೆ ಪುಡಿ – 1 ಟೀಸ್ಪೂನ್
    ಹಾಲಿನ ಪುಡಿ – 2 ಟೀಸ್ಪೂನ್ ಇದನ್ನೂ ಓದಿ: ಟ್ರಾವೆಲ್ ಮಾಡೋವಾಗ ಯಾವಾಗ್ಲೂ ಇಟ್ಟುಕೊಂಡಿರಿ ಚಾಕ್ಲೇಟ್ ಕಾಫಿ ಎನರ್ಜಿ ಬೈಟ್ಸ್

    ಮಾಡುವ ವಿಧಾನ:
    * ಮೊದಲಿಗೆ ಒಂದು ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಮುಕ್ಕಾಲು ಕಪ್ ಹಾಲು ಹಾಗೂ ಒಣ ಅಂಜೂರ ಹಾಕಿ ಮಧ್ಯಮ ಉರಿಯಲ್ಲಿ ಕೈ ಆಡಿಸುತ್ತಾ ಸುಮಾರು 6-7 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಈ ಮಿಶ್ರಣವನ್ನು ಸಂಪೂರ್ಣ ತಣ್ಣಗಾಗಿಸಿ, ಬಳಿಕ ಒಂದು ಬ್ಲೆಂಡರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
    * ಒಂದು ತಳವಿರುವ ಪಾತ್ರೆಗೆ ಈ ಮಿಶ್ರಣ ಹಾಕಿ, ಉಳಿದ 1 ಕಪ್ ಹಾಲು, ಸಕ್ಕರೆ ಪುಡಿ ಹಾಗೂ ಹಾಲಿನ ಪುಡಿ ಸೇರಿಸಿ ಚೆನ್ನಾಗಿ ವಿಸ್ಕ್ ಮಾಡಿ.
    * ಪಾತ್ರೆಯನ್ನು ಅಲ್ಯುಮಿನಿಯಂ ಫಾಯಿಲ್‌ನಿಂದ ಮುಚ್ಚಿ, ಸುಮಾರು 6 ಗಂಟೆಗಳ ಕಾಲ ಫ್ರೀಜರ್‌ನಲ್ಲಿಡಿ.
    * ಈಗ ಮತ್ತೆ ಮಿಶ್ರಣವನ್ನು ಬ್ಲೆಂಡರ್‌ಗೆ ವರ್ಗಾಯಿಸಿ, ನಯವಾಗಿ ರುಬ್ಬಿಕೊಳ್ಳಿ.
    * ಮತ್ತೆ ಈ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿ, ಸುಮಾರು 10 ಗಂಟೆಗಳ ಕಾಲ, ಐಸ್‌ಕ್ರೀಮ್ ಗಟ್ಟಿಯಾಗುವವರೆಗೆ ಫ್ರೀಜರ್‌ನಲ್ಲಿಡಿ.
    * ಇದೀಗ ಹೆಲ್ತಿ ಅಂಜೂರದ ಐಸ್‌ಕ್ರೀಮ್ ತಯಾರಾಗಿದ್ದು, ಮನೆ ಮಂದಿಗೆ ಸವಿಯಲು ನೀಡಿ. ಇದನ್ನೂ ಓದಿ: ಗರಿಗರಿಯಾದ ಕಾರ್ನ್ ಪಕೋಡಾ ಸವಿಯಲು ತುಂಬಾ ಮಜಾ

  • ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡೋ ಬದ್ಲು ಮನೆಯಲ್ಲೇ ಟ್ರೈ ಮಾಡಿ ಚಿಕನ್ ಷವರ್ಮಾ ಸಲಾಡ್

    ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡೋ ಬದ್ಲು ಮನೆಯಲ್ಲೇ ಟ್ರೈ ಮಾಡಿ ಚಿಕನ್ ಷವರ್ಮಾ ಸಲಾಡ್

    ರೆಸ್ಟೋರೆಂಟ್‌ಗಳಲ್ಲಿ ಚಿಕನ್ ಷವರ್ಮಾ ಹೆಚ್ಚಿನವರು ಸವಿದಿರುತ್ತಾರೆ. ಮಕ್ಕಳು ಮಾತ್ರವಲ್ಲದೇ ಯುವಕರಿಗೂ ಷವರ್ಮಾ ಅಚ್ಚುಮೆಚ್ಚು. ಆದರೆ ಈ ಬಾರಿ ಷವರ್ಮಾದ ರುಚಿಯನ್ನು ನೀವು ಮನೆಯಲ್ಲೇ ಟ್ರೈ ಮಾಡಿ ನೋಡಿ. ನಾವಿಂದು ಹೇಳಿಕೊಡುತ್ತಿರೋ ಚಿಕನ್ ಷವರ್ಮಾ ಸಲಾಡ್ ರೆಸಿಪಿ ಖಂಡಿತಾ ರೆಸ್ಟೊರೆಂಟ್‌ನ ಷವರ್ಮಾವನ್ನು ನೆನಪಿಸುತ್ತದೆ.

    ಬೇಕಾಗುವ ಪದಾರ್ಥಗಳು:
    ಮ್ಯಾರಿನೇಷನ್‌ಗೆ:
    ಮೂಳೆ, ಚರ್ಮರಹಿತ ಕೋಳಿ ತೊಡೆ – 1 ಕೆಜಿ
    ಎಣ್ಣೆ – ಅರ್ಧ ಕಪ್
    ಕೊಚ್ಚಿದ ಬೆಳ್ಳುಳ್ಳಿ – 3
    ನಿಂಬೆ ಹಣ್ಣು – 2
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಏಲಕ್ಕಿ ಪುಡಿ – 1 ಟೀಸ್ಪೂನ್
    ಉಪ್ಪು – 2 ಟೀಸ್ಪೂನ್
    ಕರಿಮೆಣಸಿನಪುಡಿ – 1 ಟೀಸ್ಪೂನ್
    ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
    ಅರಿಶಿನ ಪುಡಿ – ಅರ್ಧ ಟೀಸ್ಪೂನ್
    ಸಲಾಡ್ ತಯಾರಿಸಲು:
    ಅರ್ಧಕ್ಕೆ ಕತ್ತರಿಸಿದ ಚೆರಿ ಟೊಮೆಟೊ – ಒಂದೂವರೆ ಕಪ್
    ಹೆಚ್ಚಿದ ಸೌತೆಕಾಯಿ – 1
    ಕತ್ತರಿಸಿದ ಈರುಳ್ಳಿ – 1
    ಹೆಚ್ಚಿದ ಎಲೆಕೋಸು – ಅರ್ಧ
    ಸಣ್ಣಗೆ ಹೆಚ್ಚಿ ಪುದೀನಾ – ಅರ್ಧ ಕಪ್
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
    ಮೆಯೋನೀಸ್/ಡ್ರೆಸ್ಸಿಂಗ್ – ಅರ್ಧ ಕಪ್ ಇದನ್ನೂ ಓದಿ: ಖಾರ ಸವೀಬೇಕು ಎನ್ನೋರಿಗೆ ಚಿಕನ್ ಮದ್ರಾಸ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಚಿಕನ್ ಅನ್ನು ಹೊರತುಪಡಿಸಿ ಮ್ಯಾರಿನೇಷನ್‌ಗೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.
    * ಒಂದು ಝಿಪ್ಪರ್ ಪ್ಲಾಸ್ಟಿಕ್ ಚೀಲದಲ್ಲಿ ಚಿಕನ್ ಅನ್ನು ಹಾಕಿ ಅದಕ್ಕೆ ಮ್ಯಾರಿನೇಷನ್ ಮಿಶ್ರಣವನ್ನು ಸುರಿದು ಚೆನ್ನಾಗಿ ಉಜ್ಜಿಕೊಳ್ಳಿ. (ನಿಮ್ಮ ಬಳಿ ಝಿಪ್ಪರ್ ಬ್ಯಾಗ್ ಇಲ್ಲವೆಂದರೆ ಅದೇ ಪಾತ್ರೆಯಲ್ಲಿ ಚಿಕನ್ ಹಾಕಿ ಮ್ಯಾರಿನೇಷನ್ ಮಾಡಬಹುದು)
    * ಬಳಿಕ ಚೀಲದಿಂದ ಸಂಪೂರ್ಣ ಗಾಳಿಯನ್ನು ಹೊರಹಾಕಿ ಝಿಪ್ಪರ್ ಅನ್ನು ಮುಚ್ಚಿ, 4 ಗಂಟೆಗಳ ಕಾಲ ಅದನ್ನು ಫ್ರಿಜ್‌ನಲ್ಲಿಡಿ. (ಇಡೀ ರಾತ್ರಿ ಬಿಡಬಹುದು)
    * ಈಗ ಓವನ್ ಅನ್ನು 425 ಡಿಗ್ರಿ ಪ್ಯಾರಾಹೀಟ್‌ನಲ್ಲಿ ಬಿಸಿ ಮಾಡಿಕೊಳ್ಳಿ. ಬೇಕಿಂಗ್ ಶೀಟ್‌ಗೆ ಫಾಯಿಲ್ ಅನ್ನು ಜೋಡಿಸಿ, ಅದರ ಮೇಲೆ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಹಾಕಿಕೊಳ್ಳಿ.
    * ಈಗ ಚಿಕನ್ ಅನ್ನು ಸುಮಾರು 30 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬಳಿಕ ಓವನ್‌ನಿಂದ ತೆಗೆದು ತಣ್ಣಗಾಗಲು ಬಿಡಿ.
    * ಈಗ ಸಲಾಡ್ ಬೇಸ್ ಅಥವಾ ತಟ್ಟೆಯಲ್ಲಿ ಚೆರಿ ಟೊಮೆಟೊ, ಸೌತೆಕಾಯಿ, ಈರುಳ್ಳಿ, ಎಲೆಕೋಸು ಹಾಕಿ, ಅದರ ಮೇಲೆ ಚಿಕನ್ ತುಂಡುಗಳನ್ನು ಇರಿಸಿ.
    * ಮೆಯೋನೀಸ್ ಅಥವಾ ನಿಮ್ಮಿಷ್ಟದ ಡ್ರೆಸ್ಸಿಂಗ್ ಅನ್ನು ಅದರ ಮೇಲೆ ಸುರಿಯಿರಿ.
    * ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ ಷವರ್ಮಾ ಸಲಾಡ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಬಿರಿಯಾನಿಗೆ ಸೂಪರ್ ಸೈಡ್ ಡಿಶ್ – ಮಟನ್ ದಾಲ್ಚಾ ರೆಸಿಪಿ

  • ಚಪಾತಿ, ರೋಟಿ ಜೊತೆ ಸವಿಯಿರಿ ಪಂಜಾಬಿ ಸ್ಟೈಲ್ ಮಟರ್ ಪನೀರ್

    ಚಪಾತಿ, ರೋಟಿ ಜೊತೆ ಸವಿಯಿರಿ ಪಂಜಾಬಿ ಸ್ಟೈಲ್ ಮಟರ್ ಪನೀರ್

    ಹೋಟೆಲ್‌ನಲ್ಲಿ ರೋಟಿ, ಚಪಾತಿ ಜೊತೆ ಸವಿಯಲು ಸೈಡ್ ಡಿಶ್ ಆಗಿ ನಾರ್ತ್ ಇಂಡಿಯನ್ ಗ್ರೇವಿಗಳನ್ನು ಕೊಡುತ್ತಾರೆ. ಇದು ಅತ್ಯಂತ ರುಚಿಕರವಾಗಿದ್ದು, ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತದೆ. ಆದರೆ ಈ ಗ್ರೇವಿಗಳು ತುಂಬಾ ದುಬಾರಿಯಾಗಿದ್ದು, ಪ್ರತಿಸಲ ಹೋಟೆಲ್ ಅಲ್ಲಿ ತಿನ್ನಲು ಅಸಾಧ್ಯ. ಆದ್ದರಿಂದ ಇದನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಿಕೊಂಡು ತಿನ್ನಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಂಜಾಬಿ ಸ್ಟೈಲ್ ಮಟರ್ ಪನೀರ್ ಅನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಈ ರೀತಿ ಮಾಡಿ ಕ್ರಿಸ್ಪಿ ಮೆಂತ್ಯ ವಡಾ‌

    ಬೇಕಾಗುವ ಸಾಮಗ್ರಿಗಳು:
    ಪನೀರ್ ಕ್ಯೂಬ್ಸ್ – 250 ಗ್ರಾಂ
    ಬಟಾಣಿ – 1 ಕಪ್
    ರುಬ್ಬಿದ ಈರುಳ್ಳಿ ಪೇಸ್ಟ್ – 2 ಈರುಳ್ಳಿ
    ಟೊಮೆಟೊ ಪ್ಯೂರಿ – 3 ಟೊಮೆಟೊ
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    ಜೀರಾ ಪೌಡರ್ – 1 ಚಮಚ
    ಕೊತ್ತಂಬರಿ ಪುಡಿ – 1 ಚಮಚ
    ಅಚ್ಚ ಖಾರದ ಪುಡಿ – ಅರ್ಧ ಚಮಚ
    ಅರಶಿಣ ಪುಡಿ – ಅರ್ಧ ಚಮಚ
    ಜೀರಿಗೆ – ಅರ್ಧ ಚಮಚ
    ಕಿಸಾನ್ ಟೊಮೆಟೊ ಪ್ಯೂರಿ – 1 ಚಮಚ
    ಕೊತ್ತಂಬರಿ – 1 ಚಮಚ
    ಇಂಗು – 1 ಚಿಟಿಕೆ
    ಎಣ್ಣೆ – 2 ಚಮಚ
    ನೀರು – 1 ಕಪ್

    ಮಾಡುವ ವಿಧಾನ:

    • ಮೊದಲಿಗೆ ಒಂದು ಕುಕ್ಕರ್‌ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಇಂಗು, ಜೀರಿಗೆ ಮತ್ತು ರುಬ್ಬಿದ ಈರುಳ್ಳಿ ಪೇಸ್ಟ್ ಅನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಬಳಿಕ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಪುನಃ 2ರಿಂದ 3 ನಿಮಿಷಗಳವರೆಗೆ ಚನ್ನಾಗಿ ತಿರುವಿಕೊಳ್ಳಿ.
    • ಬಳಿಕ ಇದಕ್ಕೆ ತಯಾರಿಸಿದ ಟೊಮೆಟೊ ಪ್ಯೂರಿ ಮತ್ತು ಕಿಸಾನ್ ಟೊಮೆಟೊ ಪ್ಯೂರಿಯನ್ನು ಹಾಕಿಕೊಂಡು ಚನ್ನಾಗಿ ತಿರುವಿಕೊಂಡ ಬಳಿಕ ಉಳಿದ ಮಸಾಲೆಗಳನ್ನು ಹಾಕಿಕೊಂಡು ಎಣ್ಣೆ ಬಿಡುವವರೆಗೂ ಫ್ರೈ ಮಾಡಿಕೊಳ್ಳಬೇಕು.
    • ಈಗ ಇದಕ್ಕೆ ಬಟಾಣಿ ಮತ್ತು ಪನೀರ್ ಕ್ಯೂಬ್ಸ್‌ಗಳನ್ನು ಹಾಕಿಕೊಂಡು ಮಸಾಲೆ ಹಿಡಿಯುವಂತೆ ತಿರುವಿಕೊಳ್ಳಿ. ನಂತರ ನೀರನ್ನು ಹಾಕಿಕೊಂಡು ಉಪ್ಪು, ಖಾರ ಕಡಿಮೆ ಇದ್ದಲ್ಲಿ ಸೇರಿಸಿಕೊಳ್ಳಿ.
    • ನಂತರ ಕುಕ್ಕರ್‌ನ ಮುಚ್ಚಳ ಮುಚ್ಚಿ 2 ವಿಶಲ್ ಕೂಗಿಸಿಕೊಳ್ಳಿ. ನಂತರ ಇದನ್ನು ಕುಕ್ಕರ್‌ನಿಂದ ಸರ್ವಿಂಗ್ ಬೌಲ್‌ಗೆ ಹಾಕಿಕೊಂಡು ಬಿಸಿ ಬಿಸಿ ಅನ್ನ, ಚಪಾತಿ ಹಾಗೂ ರೋಟಿ ಜೊತೆ ಸವಿಯಲು ಕೊಡಿ. ಇದನ್ನೂ ಓದಿ: ಸಿಂಪಲ್ಲಾಗಿ ಮಾಡಿ ಮಶ್ರೂಮ್ 65..

  • ಈ ರೀತಿ ಮಾಡಿ ಕ್ರಿಸ್ಪಿ ಮೆಂತ್ಯ ವಡಾ

    ಈ ರೀತಿ ಮಾಡಿ ಕ್ರಿಸ್ಪಿ ಮೆಂತ್ಯ ವಡಾ

    ರೋಗ್ಯಕ್ಕೂ ಹಿತವೆನಿಸಬೇಕು, ರುಚಿರುಚಿಯೂ ಆಗಿರಬೇಕೆಂದರೆ ಅಂತಹ ರೆಸಿಪಿ ಸಿಗೋದು ಅಪರೂಪ. ಆದರೂ ನಾವಿಂದು ಹೇಳಿಕೊಡುತ್ತಿರೋ ಕ್ರಿಸ್ಪಿಯಾದ ಮೆಂತ್ಯ ವಡಾ ರುಚಿಗೂ ಕಮ್ಮಿಯಿಲ್ಲ, ಆರೋಗ್ಯಕ್ಕೂ ಬೆಸ್ಟ್ ಆಗಿದೆ. ಬಾಯಲ್ಲಿ ನೀರೂರಿಸೋ ಮಸಾಲೆಯುಕ್ತ ಮೆಂತ್ಯ ವಡಾವನ್ನು ಗ್ರೀನ್ ಚಟ್ನಿ ಅಥವಾ ಸಾಸ್ ನೊಂದಿಗೆ ಸವಿಯಬಹುದು. ಕ್ರಿಸ್ಪಿ ಮೆಂತ್ಯ ವಡಾ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಹಸಿರು ಮೆಣಸಿನಕಾಯಿ – 2
    ಬೆಳ್ಳುಳ್ಳಿ – 10
    ಶುಂಠಿ – ಒಂದೂವರೆ ಇಂಚು
    ಜೀರಿಗೆ – 1 ಟೀಸ್ಪೂನ್
    ಕೊತ್ತಂಬರಿ ಬೀಜ – 1 ಟೀಸ್ಪೂನ್
    ಅವಲಕ್ಕಿ – 1 ಕಪ್
    ತಾಜಾ ಮೆಂತ್ಯ ಸೊಪ್ಪು – 2 ಕಪ್
    ಎಳ್ಳು – 1 ಟೀಸ್ಪೂನ್
    ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
    ಅರಿಶಿನ ಪುಡಿ – ಕಾಲು ಟೀಸ್ಪೂನ್
    ಹಿಂಗ್ – ಕಾಲು ಟೀಸ್ಪೂನ್
    ಆಮ್‌ಚೂರ್ ಪುಡಿ – 1 ಟೀಸ್ಪೂನ್
    ಹೆಚ್ಚಿದ ಈರುಳ್ಳಿ – 1
    ಕಡಲೆ ಹಿಟ್ಟು – ಮುಕ್ಕಾಲು ಕಪ್
    ಎಣ್ಣೆ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಡೀಪ್ ಫ್ರೈ ಅಥವಾ ಶ್ಯಾಲೋ ಫ್ರೈಗೆ ಬೇಕಾಗುವಷ್ಟು ಇದನ್ನೂ ಓದಿ: ಸಿಂಪಲ್ಲಾಗಿ ಮಾಡಿ ಮಶ್ರೂಮ್ 65..

    ಮಾಡುವ ವಿಧಾನ:
    * ಮೊದಲಿಗೆ ಒಂದು ಮಿಕ್ಸರ್ ಜಾರ್‌ನಲ್ಲಿ ಹಸಿರು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಕೊತ್ತಂಬರಿ ಸೇರಿಸಿ ಒರಟಾಗಿ ರುಬ್ಬಿಕೊಳ್ಳಿ.
    * ಅವಲಕ್ಕಿ ತೆಗೆದುಕೊಂಡು ಅದನ್ನು 2-3 ಬಾರಿ ತೊಳೆಯಿರಿ. ಅದನ್ನು ಒಂದು ತಟ್ಟೆಗೆ ಹಾಕಿ ಕೈಗಳಿಂದ ನಿಧಾನವಾಗಿ ಮ್ಯಾಶ್ ಮಾಡಿಕೊಳ್ಳಿ.
    * ಮೆಂತ್ಯ ಸೊಪ್ಪನ್ನು ತೊಳೆದು, ಒಣಗಿಸಿ, ಕೈಗಳಿಂದ ಪುಡಿ ಮಾಡಿ.
    * ಮೆಂತ್ಯ ಸೊಪ್ಪು ಹಾಗೂ ಅವಲಕ್ಕಿಯನ್ನು ಒಂದು ಬೌಲ್‌ಗೆ ಹಾಕಿ, ಎಳ್ಳು, ರುಬ್ಬಿಕೊಂಡ ಮಸಾಲೆ, ಕೆಂಪು ಮೆಣಸಿನಪುಡಿ, ಅರಿಶಿನ ಪುಡಿ, ಹಿಂಗ್, ಆಮ್‌ಚೂರ್ ಪೌಡರ್ ಸೇರಿಸಿ ಮಿಶ್ರಣ ಮಾಡಿ.
    * ಅದಕ್ಕೆ ಈರುಳ್ಳಿ, ಅಗತ್ಯವಿದ್ದರೆ ನೀರು, ಉಪ್ಪು, ಎಣ್ಣೆ ಸೇರಿಸಿ ಮೃದುವಾದ ಹಿಟ್ಟಿನ ಹದಕ್ಕೆ ಬೆರೆಸಿಕೊಳ್ಳಿ.
    * ಈಗ ತಯಾರಿಸಿಟ್ಟ ಹಿಟ್ಟನ್ನು ಸಣ್ಣ ಸಣ್ಣ ವಡೆಗಳ ರೂಪಕ್ಕೆ ತನ್ನಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ವಡೆಗಳನ್ನು ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.
    * ವಡೆಗಳ ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಗರಿಗರಿಯಾಗಿ ಹುರಿಯಿರಿ.
    * ನಂತರ ಅವುಗಳನ್ನು ಟಿಶ್ಯೂ ಪೇಪರ್ ಹರಡಿದ ತಟ್ಟೆಗೆ ವರ್ಗಾಯಿಸಿ.
    * ಇದೀಗ ಕ್ರಿಸ್ಪಿ ಮೆಂತ್ಯ ವಡಾ ತಯಾರಾಗಿದ್ದು, ಗ್ರೀನ್ ಚಟ್ನಿ ಅಥವಾ ಸಾಸ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ಫ್ರೀ ಟೈಮ್‌ನಲ್ಲಿ ಬೇಕೆನಿಸುತ್ತೆ ಚಟ್‌ಪಟಾ ಆಲೂ ಚಾಟ್

  • 4 ಪದಾರ್ಥ, 30 ನಿಮಿಷ – ಮಾಡ್ನೋಡಿ ಕ್ರೀಮಿ ಆಲೂಗಡ್ಡೆಯ ಸೂಪ್

    4 ಪದಾರ್ಥ, 30 ನಿಮಿಷ – ಮಾಡ್ನೋಡಿ ಕ್ರೀಮಿ ಆಲೂಗಡ್ಡೆಯ ಸೂಪ್

    ನಾಲ್ಕೇ ಮುಖ್ಯ ಪದಾರ್ಥಗಳನ್ನು ಬಳಸಿ ತುಂಬಾ ಟೇಸ್ಟಿಯಾದ ಸೂಪ್ ಮಾಡಬಹುದು ಎಂದರೆ ಯಾರೂ ನಂಬೋಕೆ ಸಾಧ್ಯವಿಲ್ಲ. ಆದರೆ ನಾವಿಂದು ಅಂತಹುದೇ ಒಂದು ರೆಸಿಪಿ ಹೇಳಿಕೊಡಲಿದ್ದೇವೆ. ಕ್ರೀಮಿ ಆಲೂಗಡ್ಡೆಯ ಸೂಪ್ ಮಾಡಲು ಮುಖ್ಯವಾಗಿ ನಾಲ್ಕೇ ಪದಾರ್ಥಗಳನ್ನು ಬಳಸಲಾಗಿದೆ. ಮಾತ್ರವಲ್ಲದೆ ಇದು ನೀವು ಇಲ್ಲಿಯವರೆಗೆ ಎಂದೂ ಟ್ರೈ ಮಾಡದ ಅತ್ಯಂತ ಸುಲಭದ ಸೂಪ್ ಕೂಡಾ ಆಗಬಹುದು. ಇದನ್ನು ಮಾಡಲು ಕೇವಲ 30 ನಿಮಿಷ ಸಾಕು ಎಂದರೆ ಸವಿದವರು ಖಂಡತಾ ಸುಳ್ಳು ಎನ್ನುತ್ತಾರೆ.

     

    ಬೇಕಾಗುವ ಪದಾರ್ಥಗಳು:
    ಬೆಣ್ಣೆ – 6 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ಸಿಪ್ಪೆ ಸುಲಿದು ಘನಗಳಾಗಿ ಕತ್ತರಿಸಿದ ಆಲೂಗಡ್ಡೆ – 400 ಗ್ರಾಂ
    ನೀರು – ಆಲೂಗಡ್ಡೆ ಬೇಯಿಸಲು ಬೇಕಾಗುವಷ್ಟು
    ಹಾಲು – 2 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಕರಿಮೆಣಸಿನ ಪುಡಿ – ಸ್ವಾದಕ್ಕೆ ಅನುಸಾರ
    ತುರಿದ ಚೀಸ್ – 1 ಕಪ್ ಇದನ್ನೂ ಓದಿ: ಬೆಳಗ್ಗಿನ ಉಪಹಾರಕ್ಕೆ ಮಾಡಿ ಆರೋಗ್ಯಕರ ಓಟ್ಸ್ ಮಸಾಲ..

    ಮಾಡುವ ವಿಧಾನ:
    * ಮೊದಲಿಗೆ ಪ್ಯಾನ್‌ನಲ್ಲಿ 1 ಟೀಸ್ಪೂನ್ ಬೆಣ್ಣೆಯನ್ನು ಕರಗಿಸಿ, ಈರುಳ್ಳಿ ಹಾಕಿ ಮೃದುವಾಗುವವರೆಗೆ ಹುರಿಯಿರಿ. ಬಳಿಕ ಅದನ್ನು ಒಂದು ಬೌಲ್‌ಗೆ ವರ್ಗಾಯಿಸಿ.
    * ಒಂದು ಪಾತ್ರೆಯಲ್ಲಿ ಆಲೂಗಡ್ಡೆ ಹಾಕಿ, ಅದು ಮುಳುಗುವುದಕ್ಕಿಂತಲೂ ಒಂದು ಇಂಚಿನಷ್ಟು ಹೆಚ್ಚುವರಿ ನೀರು ಸೇರಿಸಿ, ಸುಮಾರು 15 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ.
    * ಆಲೂಗಡ್ಡೆ ಮೃದುವಾದ ಬಳಿಕ ಅದರ ಅರ್ಧ ಇಂಚಿನಷ್ಟು ನೀರನ್ನು ಉಳಿಸಿಕೊಂಡು ಉಳಿದ ನೀರನ್ನು ಹರಿಸಿ.
    * ಈಗ ಅದಕ್ಕೆ ಹುರಿದ ಈರುಳ್ಳಿಯನ್ನು ಸೇರಿಸಿ, ಉಳಿದ 5 ಟೀಸ್ಪೂನ್ ಬೆಣ್ಣೆ, ಉಪ್ಪು, ಮೆಣಸಿನಪುಡಿ ಹಾಗೂ ಹಾಲನ್ನು ಸೇರಿಸಿಕೊಳ್ಳಿ.
    * ಈಗ ಆಲೂಗಡ್ಡೆಯನ್ನು ನಿಧಾನವಾಗಿ ಮ್ಯಾಶ್ ಮಾಡಿ.
    * ಬಳಿಕ ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸುವುದನ್ನು ಮುಂದುವರಿಸಿ. ನಡುವೆ ತುರಿದ ಚೀಸ್ ಸೇರಿಸಿ.
    * ಇದೀಗ ಕ್ರೀಮಿ ಆಲೂಗಡ್ಡೆ ಸೂಪ್ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಫ್ರೀ ಟೈಮ್‌ನಲ್ಲಿ ಬೇಕೆನಿಸುತ್ತೆ ಚಟ್‌ಪಟಾ ಆಲೂ ಚಾಟ್

  • ಸಿಂಪಲ್ಲಾಗಿ ಮಾಡಿ ಮಶ್ರೂಮ್ 65..

    ಸಿಂಪಲ್ಲಾಗಿ ಮಾಡಿ ಮಶ್ರೂಮ್ 65..

    ನಾನ್‌ವೆಜ್ ಪ್ರಿಯರಿಗೆ ಚಿಕನ್ 65 ಎಂದರೆ ಬಾಯಲ್ಲಿ ನೀರೂರುತ್ತದೆ. ಆದರೆ ನೋಡಲು ಅದೇ ರೀತಿ ಕಾಣುವ ಹಾಗೂ ಅದೇ ರುಚಿ ನೀಡುವ ಮಶ್ರೂಮ್ 65 ಯಾವತ್ತಾದರೂ ತಿಂದಿದ್ದೀರಾ? ತಿಂದಿಲ್ಲ ಅಂದ್ರೆ ಒಂದು ಸಲ ತಿಂದುನೋಡಿ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮಶ್ರೂಮ್ 65 ಹೇಗೆ ಮಾಡುವುದು ಎಂದು ತಿಳಿಸಿಕೊಡುತ್ತೇವೆ. ಇದೊಂದು ಸಿಂಪಲ್ ರೆಸಿಪಿ ಆಗಿದ್ದು, ಮಳೆ ಬಂದಾಗ ಬಿಸಿ ಬಿಸಿಯಾಗಿ ತಿನ್ನಲು ತುಂಬಾ ಮಜವಾಗಿರುತ್ತದೆ. ಇದನ್ನೂ ಓದಿ: ಫ್ರೀ ಟೈಮ್‌ನಲ್ಲಿ ಬೇಕೆನಿಸುತ್ತೆ ಚಟ್‌ಪಟಾ ಆಲೂ ಚಾಟ್

    ಬೇಕಾಗುವ ಸಾಮಗ್ರಿಗಳು:
    ಹೆಚ್ಚಿದ ಮಶ್ರೂಮ್ – 1 ಕಪ್
    ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
    ನಿಂಬೆ ಹಣ್ಣು- ಅರ್ಧ
    ಅಕ್ಕಿ ಹಿಟ್ಟು – 3 ಚಮಚ
    ಮೈದಾ ಹಿಟ್ಟು – 1 ಚಮಚ
    ಜೋಳದ ಹಿಟ್ಟು – 1 ಚಮಚ
    ಅಚ್ಚ ಖಾರದ ಪುಡಿ – 1 ಚಮಚ
    ಗರಂ ಮಸಾಲ – ಅರ್ಧ ಚಮಚ
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:

    • ಮೊದಲಿಗೆ ಒಂದು ಬೌಲಿಗೆ ಅಕ್ಕಿ ಹಿಟ್ಟು, ಜೋಳದ ಹಿಟ್ಟು ಹಾಗೂ ಮೈದಾ ಹಿಟ್ಟನ್ನು ಹಾಕಿಕೊಳ್ಳಿ. ಬಳಿಕ ಇದಕ್ಕೆ ಗರಂ ಮಸಾಲ, ಅಚ್ಚ ಖಾರದ ಪುಡಿ ಹಾಗೂ ಉಪ್ಪನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    • ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿಕೊಳ್ಳಬೇಕು. ನಂತರ ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಅರ್ಧ ನಿಂಬೆಹಣ್ಣಿನ ರಸವನ್ನು ಇದಕ್ಕೆ ಹಿಂಡಿಕೊಳ್ಳಿ. ನಿಂಬೆ ಹಣ್ಣಿನ ರಸದ ಬದಲಿಗೆ ಮೊಸರನ್ನೂ ಹಾಕಿಕೊಳ್ಳಬಹುದು. ಬಳಿಕ ಇದನ್ನು ತೀರ ತೆಳ್ಳಗಾಗದಂತೆ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳಿ.
    • ಬಳಿಕ ಈ ಮಿಶ್ರಣಕ್ಕೆ ಹೆಚ್ಚಿದ ಮಶ್ರೂಮ್ ಅನ್ನು ಸೇರಿಸಿಕೊಂಡು ಮಸಾಲೆ ಚನ್ನಾಗಿ ಅಂಟಿಕೊಳ್ಳುವಂತೆ ಕಲಸಿಕೊಳ್ಳಿ. ನಂತರ ಇದನ್ನು 10 ನಿಮಿಷಗಳ ಕಾಲ ನೆನೆಯಲು ಬಿಡಿ.
    • ನಂತರ ಒಂದು ಬಾಣಾಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಚನ್ನಾಗಿ ಕಾದ ಬಳಿಕ ಗ್ಯಾಸ್ ಅನ್ನು ಮೀಡಿಯಮ್ ಫ್ಲೇಮ್‌ನಲ್ಲಿ ಇಟ್ಟುಕೊಂಡು ಒಂದೊಂದಾಗಿ ಮಶ್ರೂಮ್ ಅನ್ನು ಎಣ್ಣೆಯಲ್ಲಿ ಬಿಡಿ. ಮಶ್ರೂಮ್ ಬಣ್ಣ ಕೆಂಪಾಗುವವರೆಗೂ ಸೌಟಿನಲ್ಲಿ ತಿರುಗಿಸಲು ಹೋಗಬೇಡಿ. ಹೀಗೆ ತಿರುಗಿಸಿದರೆ ಅದರ ಮಸಾಲೆ ಬಿಡುವ ಸಾಧ್ಯತೆಯಿದೆ. ಆದ್ದರಿಂದ ಮಶ್ರೂಮ್ ಬಣ್ಣ ಸ್ವಲ್ಪ ಕೆಂಪಾದ ಬಳಿಕ ತಿರುವಿಕೊಳ್ಳಿ.
    • ಇದನ್ನು 5ರಿಂದ 6 ನಿಮಿಷಗಳವರೆಗೆ ಚನ್ನಾಗಿ ಬೇಯಿಸಿಕೊಂಡ ಬಳಿಕ ಒಂದು ಸರ್ವಿಂಗ್ ಪ್ಲೇಟ್‌ಗೆ ಹಾಕಿಕೊಂಡು ಕೆಚಪ್ ಅಥವಾ ಚಿಲ್ಲಿ ಸಾಸ್‌ನೊಂದಿಗೆ ಸವಿಯಲು ಕೊಡಿ. ಇದನ್ನೂ ಓದಿ: ಉಳಿದ ಅನ್ನದಲ್ಲಿ ಮಾಡಿ ಬೊಂಬಾಟ್ ಮಶ್ರೂಮ್ ಫ್ರೈಡ್‌ರೈಸ್