Tag: recipe

  • ರಕ್ತಹೀನತೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಜ್ಯೂಸ್ ಕುಡಿಯಿರಿ

    ರಕ್ತಹೀನತೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಜ್ಯೂಸ್ ಕುಡಿಯಿರಿ

    ಬೀಟ್‌ರೂಟ್ ಅನ್ನು ನಮ್ಮ ನಿತ್ಯದ ಆಹಾರದಲ್ಲಿ ಬಳಸುವುದರಿಂದ ನಮ್ಮ ದೇಹದಲ್ಲಿ ರಕ್ತ ಹೆಚ್ಚುವುದಲ್ಲದೇ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀರಿನಂಶ ಹೊಂದಿರುವ ಪಾನೀಯ ಮತ್ತು ವಸ್ತುಗಳನ್ನು ತಿನ್ನುವುದರಿಂದ ಅಥವಾ ಕುಡಿಯುವುದರಿಂದ ನಮ್ಮ ದೇಹ ಡಿಹೈಡ್ರೇಟ್ ಆಗದಂತೆ ನೋಡಿಕೊಳ್ಳಬಹುದು. ಇವತ್ತಿನ ರೆಸಿಪಿಯಲ್ಲಿ ಬೀಟ್‌ರೂಟ್ ಜ್ಯೂಸ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಬಾಳೆಕಾಯಿಯ ಸಿಪ್ಪೆಯಿಂದ ಮಾಡ್ಬೋದು ರುಚಿಕರ ಚಟ್ನಿ

    ಬೇಕಾಗುವ ಸಾಮಗ್ರಿಗಳು:
    ತುರಿದ ಬೀಟ್‌ರೂಟ್ – 1 ಕಪ್
    ನಿಂಬೆ ಹಣ್ಣಿನ ರಸ – ಅರ್ಧ ನಿಂಬೆ
    ಜೇನುತುಪ್ಪ – ಒಂದೂವರೆ ಚಮಚ
    ಉಪ್ಪು – ಒಂದು ಚಿಟಿಕೆ
    ಕಾಳುಮೆಣಸಿನ ಪುಡಿ – ಅರ್ಧ ಚಮಚ
    ತುರಿದ ಶುಂಠಿ – ಸ್ವಲ್ಪ

    ಮಾಡುವ ವಿಧಾನ:
    *ಮೊದಲಿಗೆ ಒಂದು ಮಿಕ್ಸರ್ ಜಾರಿಗೆ ತುರಿದ ಬೀಟ್‌ರೂಟ್, ಶುಂಠಿ, ಕಾಳುಮೆಣಸಿನ ಪುಡಿ, ಉಪ್ಪು ಹಾಗೂ ನಿಂಬೆರಸವನ್ನು ಹಾಕಿಕೊಳ್ಳಿ.
    *ಈಗ ಇದಕ್ಕೆ ಅರ್ಧ ಗ್ಲಾಸ್ ನೀರನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
    *ಬಳಿಕ ಇದನ್ನು ಸೋಸಬೇಕು. ನಂತರ ಒಂದು ಗ್ಲಾಸ್‌ಗೆ ಸ್ವಲ್ಪ ಜೇನುತುಪ್ಪ ಹಾಕಿಕೊಂಡು ಇದಕ್ಕೆ ಸೋಸಿದ ಬೀಟ್‌ರೂಟ್ ಜ್ಯೂಸ್ ಅನ್ನು ಹಾಕಿ ಕುಡಿಯಲು ಕೊಡಿ.
    *ಇದು ಶುಗರ್ ಪೇಷೆಂಟ್‌ಗಳು ಮಾತ್ರವಲ್ಲದೇ ರಕ್ತಹೀನತೆಯಿಂದ ಬಳಲುವವರು ಕುಡಿಯಬಹುದಾದ ಒಂದು ಉತ್ತಮ ಪಾನೀಯವಾಗಿದೆ. ಇದನ್ನೂ ಓದಿ: ನೆಗಡಿ, ಕೆಮ್ಮು ಕಡಿಮೆ ಮಾಡುತ್ತೆ ಶುಂಠಿ ಬೆಳ್ಳುಳ್ಳಿ ಸೂಪ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಳೆಕಾಯಿಯ ಸಿಪ್ಪೆಯಿಂದ ಮಾಡ್ಬೋದು ರುಚಿಕರ ಚಟ್ನಿ

    ಬಾಳೆಕಾಯಿಯ ಸಿಪ್ಪೆಯಿಂದ ಮಾಡ್ಬೋದು ರುಚಿಕರ ಚಟ್ನಿ

    ಬಾಳೆಕಾಯಿಯ ಸಿಪ್ಪೆ ಎಂದಿಗೂ ಅಡುಗೆಯಲ್ಲಿ ಉಪಯೋಗಕ್ಕೆ ಬರಲ್ಲ ಎಂದು ಹೆಚ್ಚಿನವರು ಅಂದುಕೊಂಡಿರಬಹುದು. ಆದರೆ ಇದೇ ಸಿಪ್ಪೆ ಬಳಸಿ ರುಚಿಕರವಾದ ಚಟ್ನಿ ಮಾಡಬಹುದು. ಬಾಳೆಕಾಯಿ ಅಡುಗೆಯಲ್ಲಿ ಯಾವಾಗಲೂ ಉಪಯೋಗಕ್ಕೆ ಬರುತ್ತದೆ. ಪಲ್ಯ ಇಲ್ಲವೇ ಚಿಪ್ಸ್‌ಗಳನ್ನು ತಯಾರಿಸಿರುತ್ತೀರಿ. ಇನ್ನು ಮುಂದೆ ಅದರ ಸಿಪ್ಪೆಯನ್ನು ಎಸೆಯದೇ ಒಮ್ಮೆ ಚಟ್ನಿಯೂ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಬಾಳೆಕಾಯಿ ಸಿಪ್ಪೆ – 1 ಕಪ್
    ಜೀರಿಗೆ – 1 ಟೀಸ್ಪೂನ್
    ಒಣ ಕೆಂಪು ಮೆಣಸಿನಕಾಯಿ – 3
    ಅರಿಶಿನ ಪುಡಿ – 1 ಟೀಸ್ಪೂನ್
    ನೀರು – 1 ಕಪ್
    ಹುಣಿಸೆ ಹಣ್ಣಿನ ಪೇಸ್ಟ್ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಸಕ್ಕರೆ – 1 ಟೀಸ್ಪೂನ್
    ಎಣ್ಣೆ – ಅರ್ಧ ಟೀಸ್ಪೂನ್ ಇದನ್ನೂ ಓದಿ: ನೆಗಡಿ, ಕೆಮ್ಮು ಕಡಿಮೆ ಮಾಡುತ್ತೆ ಶುಂಠಿ ಬೆಳ್ಳುಳ್ಳಿ ಸೂಪ್

    ಮಾಡುವ ವಿಧಾನ :
    * ಮೊದಲಿಗೆ ಬಾಳೆಕಾಯಿಯ ಸಿಪ್ಪೆಯನ್ನು ಅರಿಶಿನ ನೀರಿನಲ್ಲಿ 5 ನಿಮಿಷ ನೆನೆಸಿಡಿ.
    * ಬಳಿಕ 1 ಕಪ್ ನೀರಿನೊಂದಿಗೆ ಪ್ರೆಷರ್ ಕುಕ್ಕರ್‌ನಲ್ಲಿ 1 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
    * ಒಂದು ಪ್ಯಾನ್ ತೆಗೆದುಕೊಂಡು ಎಣ್ಣೆ ಬಿಸಿ ಮಾಡಿ, ಜೀರಿಗೆ, ಮೆಣಸಿನಕಾಯಿ ಹಾಕಿ 1 ನಿಮಿಷ ಹುರಿಯಿರಿ.
    * ಬಳಿಕ ಬಾಳೆಕಾಯಿಯ ಸಿಪ್ಪೆ ಸೇರಿಸಿ ಡ್ರೈ ಆಗುವವರೆಗೆ 3-4 ನಿಮಿಷ ಹುರಿದುಕೊಳ್ಳಿ.
    * ಬಳಿಕ ಉರಿಯನ್ನು ಆಫ್ ಮಾಡಿ, ತಣ್ಣಗಾಗಿಸಿ.
    * ಈಗ ಮಿಕ್ಸರ್ ಜಾರ್‌ನಲ್ಲಿ ಹುರಿದ ಬಾಳೆಕಾಯಿ ಸಿಪ್ಪೆ, ಹುಣಸೆಹಣ್ಣಿನ ಪೇಸ್ಟ್, ಸಕ್ಕರೆ, ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
    * ಇದೀಗ ಬಾಳೆಕಾಯಿ ಸಿಪ್ಪೆಯ ಚಟ್ನಿ ತಯಾರಾಗಿದ್ದು, ಊಟ ಅಥವಾ ಯಾವುದೇ ತಿಂಡಿಯೊಂದಿಗೆ ಆನಂದಿಸಿ. ಇದನ್ನೂ ಓದಿ: ಟ್ರೈ ಮಾಡಿ ಕಾಬೂಲ್ ಕಡಲೆಯ ಟೇಸ್ಟಿ ಉಪ್ಪಿನಕಾಯಿ ರೆಸಿಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಂದೂರಿ ಫಿಶ್ ಟಿಕ್ಕಾ ಮಾಡಿ ಸಂಡೇಯನ್ನು ಮಜವಾಗಿಸಿ

    ತಂದೂರಿ ಫಿಶ್ ಟಿಕ್ಕಾ ಮಾಡಿ ಸಂಡೇಯನ್ನು ಮಜವಾಗಿಸಿ

    ನೀವು ಮೀನು ಖಾದ್ಯ ಪ್ರಿಯರಾಗಿದ್ರೆ ಅದನ್ನು ರುಚಿಕರವಾಗಿ ಆಸ್ವಾದಿಸಲು ಈ ರೆಸಿಪಿ ಪರ್ಫೆಕ್ಟ್ ಆಗಿದೆ. ಉತ್ತರ ಭಾರತ ಭಾಗದಲ್ಲಿ ಫೇಮಸ್ ಆಗಿರೋ ತಂದೂರಿ ಫಿಶ್ ಟಿಕ್ಕಾವನ್ನು ಓವನ್ ಅಥವಾ ಗ್ರಿಲ್ ಪ್ಯಾನ್‌ನಲ್ಲಿಯೂ ತಯಾರಿಸಬಹುದು. ತಂದೂರಿ ಫಿಶ್ ಟಿಕ್ಕಾ ತಯಾರಿಸಲು ಬಾರ್ಬೆಕ್ಯೂ ಮಾಡೋದು ಉತ್ತಮ ಹಾಗೂ ನಿಮ್ಮಿಷ್ಟದ ಯಾವುದೇ ಮೀನುಗಳನ್ನು ಇದಕ್ಕಾಗಿ ಆಯ್ಕೆ ಮಾಡಬಹುದು. ಟೇಸ್ಟಿ ತಂದೂರಿ ಫಿಶ್ ಟಿಕ್ಕಾ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮೀನು – ಅರ್ಧ ಕೆಜಿ
    ದಪ್ಪ ಮೊಸರು – 1 ಕಪ್
    ಎಣ್ಣೆ – 5 ಟೀಸ್ಪೂನ್
    ರುಬ್ಬಿಕೊಂಡ ಈರುಳ್ಳಿ – 1
    ಶುಂಠಿ ಪೇಸ್ಟ್ – 1 ಟೀಸ್ಪೂನ್
    ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ನಿಂಬೆ ರಸ – 5 ಟೀಸ್ಪೂನ್
    ಅರಿಶಿನ – 4 ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಜೀರಿಗೆ ಪುಡಿ – 1 ಟೀಸ್ಪೂನ್
    ಜಾಯಿಕಾಯಿ ಪುಡಿ – ಕಾಲು ಟೀಸ್ಪೂನ್
    ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ಮಟನ್ ಕೋಫ್ತಾ ಕರಿ ರೆಸಿಪಿ ನಿಮಗಾಗಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ದಪ್ಪ ಮೊಸರು, ಎಣ್ಣೆ, ರುಬ್ಬಿಕೊಂಡ ಈರುಳ್ಳಿ, ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ, ಅರಿಶಿನ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಜಾಯಿಕಾಯಿ ಪುಡಿ, ಕೆಂಪು ಮೆಣಸಿನಪುಡಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
    * ಈಗ ಮೀನುಗಳನ್ನು ಮ್ಯಾರಿನೇಶನ್ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕೋಟ್ ಮಾಡಬೇಕು.
    * ಈಗ ಪಾತ್ರೆಯ ಮುಚ್ಚಳ ಮುಚ್ಚಿ, ಒಂದು ಗಂಟೆ ಫ್ರಿಜ್‌ನಲ್ಲಿಡಿ.
    * ಈಗ ಮೀನುಗಳನ್ನು ಓರೆಗಳಿಗೆ ಸಿಕ್ಕಿಸಿ, ಅದನ್ನು ಗ್ರಿಲ್ ಪ್ಯಾನ್ ಅಥವಾ ಓವನ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿಕೊಳ್ಳಿ.
    * ಇದೀಗ ತಂದೂರಿ ಫಿಶ್ ಟಿಕ್ಕಾ ರೆಡಿಯಾಗಿದ್ದು, ಗ್ರೀನ್ ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಸುಲಭದ ಎಗ್ ಕೀಮಾ ರೆಸಿಪಿ – ಫಟಾಫಟ್ ಅಂತ ಮಾಡ್ಬೋದು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೆಗಡಿ, ಕೆಮ್ಮು ಕಡಿಮೆ ಮಾಡುತ್ತೆ ಶುಂಠಿ ಬೆಳ್ಳುಳ್ಳಿ ಸೂಪ್

    ನೆಗಡಿ, ಕೆಮ್ಮು ಕಡಿಮೆ ಮಾಡುತ್ತೆ ಶುಂಠಿ ಬೆಳ್ಳುಳ್ಳಿ ಸೂಪ್

    ಳೆಗಾಳ ಆರಂಭವಾಗಿದ್ದು, ಮಳೆಯಲ್ಲಿ ನೆನೆದರೆ ಮಕ್ಕಳಿಗೆ ಮಾತ್ರವಲ್ಲದೇ ದೊಡ್ಡವರಿಗೂ ಸಹಾ ನೆಗಡಿ, ಕೆಮ್ಮು ಪ್ರಾರಂಭವಾಗುತ್ತದೆ. ಈ ರೀತಿಯ ಅನಾರೋಗ್ಯಕ್ಕೆ ಬಿಸಿಬಿಸಿಯಾದ ಶುಂಠಿ ಮತ್ತು ಬೆಳ್ಳುಳ್ಳಿ ಸೂಪ್ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಅಡಗಿದ್ದು, ತುಂಬಾ ಸಿಂಪಲ್ ಆಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಇದು ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೇ ಹಸಿವನ್ನೂ ನೀಗಿಸುತ್ತದೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ತರಕಾರಿ ಖಾಲಿ ಆಗಿದ್ರೆ ಸೇವ್ ಬಳಸಿ ಮಾಡಿ ಸ್ಪೈಸಿ ಪಲ್ಯ

    ಬೇಕಾಗುವ ಸಾಮಗ್ರಿಗಳು:
    ಕರಿಮೆಣಸು – 20 ಕಾಳು
    ಶುಂಠಿ – ಅಗತ್ಯಕ್ಕೆ ತಕ್ಕಷ್ಟು
    ಬೆಳ್ಳುಳ್ಳಿ – 6 ಎಸಳು
    ತುಪ್ಪ – ಅರ್ಧ ಚಮಚ
    ಹೆಚ್ಚಿದ ಎಲೆಕೋಸು – 2 ಚಮಚ
    ಸಣ್ಣದಾಗಿ ಹೆಚ್ಚಿದ ಕ್ಯಾರೆಟ್ – 2 ಚಮಚ
    ನೀರು – 3 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಜೋಳದ ಹಿಟ್ಟು – 1 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಕರಿಮೆಣಸನ್ನು ಕುಟ್ಟಿ ಪುಡಿ ಮಾಡಿಟ್ಟುಕೊಂಡು ಬೌಲ್‌ನಲ್ಲಿ ತೆಗೆದಿಟ್ಟುಕೊಳ್ಳಿ. ಬಳಿಕ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಒಟ್ಟಿಗೆ ಹಾಕಿ ಜಜ್ಜಿಕೊಂಡು ಪೇಸ್ಟ್ ಮಾಡಿಕೊಳ್ಳಿ.
    * ಬಳಿಕ ಒಂದು ಪಾತ್ರೆಗೆ ಅರ್ಧ ಚಮಚ ತುಪ್ಪ ಹಾಕಿಕೊಂಡು ನಂತರ ಅದಕ್ಕೆ ಜಜ್ಜಿರುವ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿಕೊಂಡು ಲೋ ಫ್ಲೇಮ್‌ನಲ್ಲಿ ಫ್ರೈ ಮಾಡಿಕೊಳ್ಳಿ.
    * ಬಳಿಕ ಇದಕ್ಕೆ ಹೆಚ್ಚಿದ ಎಲೆಕೋಸು ಮತ್ತು ಕ್ಯಾರೆಟ್ ಅನ್ನು ಹಾಕಿಕೊಂಡು ಒಂದರಿಂದ 2 ನಿಮಿಷಗಳವರೆಗೆ ಚನ್ನಾಗಿ ಫ್ರೈ ಮಾಡಿಕೊಳ್ಳಿ.
    * ಬಳಿಕ ಇದಕ್ಕೆ 2 ಕಪ್ ನೀರನ್ನು ಸೇರಿಸಿಕೊಳ್ಳಿ. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಚನ್ನಾಗಿ ಕುದಿಸಿಕೊಳ್ಳಿ.
    * ಈಗ ಒಂದು ಬೌಲಿನಲ್ಲಿ ಒಂದು ಚಮಚ ಜೋಳದ ಹಿಟ್ಟನ್ನು ಹಾಕಿಕೊಂಡು ಅದಕ್ಕೆ 1 ಕಪ್ ನೀರನ್ನು ಸೇರಿಸಿಕೊಂಡು ಗಂಟಾಗದಂತೆ ತಿರುವಿಕೊಳ್ಳಿ.
    * ಈಗ ಇದಕ್ಕೆ ಕುಟ್ಟಿ ಪುಡಿ ಮಾಡಿದ ಕರಿಮೆಣಸಿನ ಪುಡಿಯನ್ನು ಹಾಕಿಕೊಂಡು ಬಳಿಕ ಇದಕ್ಕೆ ಜೋಳದ ನೀರನ್ನು ಹಾಕಿಕೊಳ್ಳಬೇಕು. ಬಳಿಕ ಉಪ್ಪು ಕಡಿಮೆಯಿದ್ದರೆ ಹಾಕಿಕೊಂಡು 2ರಿಂದ 3 ನಿಮಿಷಗಳ ಕಾಲ ಕುದಿಸಿಕೊಳ್ಳಿ.
    * ಬಿಸಿಬಿಸಿಯಾದ ಶುಂಠಿ ಬೆಳ್ಳುಳ್ಳಿ ಸೂಪ್ ಸವಿಯಲು ರೆಡಿ.
    * ಇದನ್ನು ಒಂದು ಬೌಲ್‌ನಲ್ಲಿ ಹಾಕಿ ಕುಡಿಯಲು ಕೊಡಿ. ಮಕ್ಕಳು ಹಸಿವಾಗುವುದಿಲ್ಲ ಎಂದಾಗ ಈ ರೀತಿಯಾದ ಸೂಪ್ ಅನ್ನು ಕೊಡುವುದರಿಂದ ಹೊಟ್ಟೆ ಹಸಿವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಕ್ರೀಮಿ ಮಕೈ ಕ್ಯಾಪ್ಸಿಕಮ್ – ಈ ಗುಜರಾತಿ ರೆಸಿಪಿ ಟ್ರೈ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಲೂಗಡ್ಡೆಯ ಹಪ್ಪಳ ಮಾಡೋದು ಎಷ್ಟೊಂದು ಸುಲಭ – ನೀವೂ ಟ್ರೈ ಮಾಡಿ

    ಆಲೂಗಡ್ಡೆಯ ಹಪ್ಪಳ ಮಾಡೋದು ಎಷ್ಟೊಂದು ಸುಲಭ – ನೀವೂ ಟ್ರೈ ಮಾಡಿ

    ಟಕ್ಕೆ, ಅಥವಾ ಫ್ರೀ ಟೈಮ್‌ನಲ್ಲಿ ತಿನ್ನಲು ಹಪ್ಪಳ ತುಂಬಾ ಚೆನ್ನಾಗಿರುತ್ತದೆ. ಮಾರುಕಟ್ಟೆಯಲ್ಲೂ ವಿವಿಧ ರೀತಿಯ ಹಪ್ಪಳವನ್ನು ನೀವು ನೋಡಿರುತ್ತೀರಿ. ಇದನ್ನು ಮನೆಯಲ್ಲೂ ತುಂಬಾ ಸುಲಭವಾಗಿ ತಯಾರಿಸಬಹುದು. ನಾವಿಂದು ಆಲೂಗಡ್ಡೆ ಹಾಗೂ ಅಡುಗೆ ಮನೆಯಲ್ಲಿ ಸಿಗೋ ಕೆಲ ಸಿಂಪಲ್ ಸಾಮಾಗ್ರಿಗಳಿಂದ ಹಪ್ಪಳವನ್ನು ಹೇಗೆ ಮಾಡೋದು ಎಂಬುದನ್ನು ಹೇಳಿಕೊಡುತ್ತೇವೆ. ಆಲೂಗಡ್ಡೆ ಹಪ್ಪಳದ ಸಿಂಪಲ್ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಆಲೂಗಡ್ಡೆ – 1 ಕೆಜಿ
    ಕಲ್ಲುಪ್ಪು – ರುಚಿಗೆ ತಕ್ಕಷ್ಟು
    ಕೆಂಪು ಮೆಣಸಿನಪುಡಿ – 2 ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಎಣ್ಣೆ – ಹಪ್ಪಳ ತಯಾರಿಸಲ ಬೇಕಾಗುವಷ್ಟು ಇದನ್ನೂ ಓದಿ: ಟ್ರೈ ಮಾಡಿ ಕಾಬೂಲ್ ಕಡಲೆಯ ಟೇಸ್ಟಿ ಉಪ್ಪಿನಕಾಯಿ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಮ್ಯಾಶ್ ಮಾಡಿ.
    * ಅದಕ್ಕೆ ಕಲ್ಲುಪ್ಪು, ಕೆಂಪು ಮೆಣಸಿನಪುಡಿ ಹಾಗೂ ಜೀರಿಗೆ ಸೇರಿಸಿ ಹಿಟ್ಟಿನಂತೆ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಮಿಶ್ರಣದಿಂದ ಪುಟ್ಟ ಪುಟ್ಟ ಉಂಡೆಗಳನ್ನು ತಯಾರಿಸಿ.
    * ಎರಡು ಪ್ಲಾಸ್ಟಿಕ್ ಹಾಳೆಗಳನ್ನು ತೆಗೆದುಕೊಳ್ಳಿ. ಒಂದು ಹಾಳೆಯ ಮೇಲ್ಭಾಗದಲ್ಲಿ ಸ್ವಲ್ಪ ಎಣ್ಣೆ ಸವರಿ, ಅದರ ಮೇಲೆ ಆಲೂಗಡ್ಡೆಯ ಉಂಡೆಯನ್ನಿಟ್ಟು, ಅದರ ಮೇಲೆ ಮತ್ತೆ ಎಣ್ಣೆ ಸವರಿದ ಮತ್ತೊಂದು ಪ್ಲಾಸ್ಟಿಕ್ ಹಾಳೆಯನ್ನಿಡಿ.
    * ಈಗ ನಿಧಾನವಾಗಿ ಕೈಗಳಿಂದ ಒತ್ತಿಕೊಂಡು ತೆಳ್ಳಗಿನ ಪೂರಿಯಂತೆ ಮಾಡಿ. ನಿಮ್ಮ ಬಳಿ ರೋಲಿಂಗ್ ಪಿನ್ ಇದ್ದರೆ ಲಟ್ಟಿಸಲು ಅದನ್ನು ಬಳಸಬಹುದು.
    * ಈಗ ಪ್ಲಾಸ್ಟಿಕ್‌ನಿಂದ ಹಪ್ಪಳವನ್ನು ನಿಧಾನವಾಗಿ ಬೇರ್ಪಡಿಸಿ, ಒಂದು ದೊಡ್ಡ ಪ್ಲಾಸ್ಟಿಕ್ ಹಾಳೆಯಲ್ಲಿ ಹರಡಿ. ಎಲ್ಲಾ ಹಪ್ಪಳವನ್ನು ಹೀಗೇ ಮುಂದುವರಿಸಿ, ದೊಡ್ಡ ಪ್ಲಾಸ್ಟಿಕ್ ಹಾಳೆಯಲ್ಲಿ ಜೋಡಿಸಿಕೊಳ್ಳಿ.
    * ಈಗ ಹಪ್ಪಳವನ್ನು ಜೋಡಿಸಿದ ಪ್ಲಾಸ್ಟಿಕ್ ಹಾಳೆಯನ್ನು ಸೂರ್ಯನ ಬಿಸಿಲಿನಲ್ಲಿ ಇಡಿ. ಹಪ್ಪಳ ಎರಡೂ ಬದಿ ಚೆನ್ನಾಗಿ ಒಣಗಲು ಒಂದೆರಡು ದಿನ ಬೇಕಾಗಬಹುದು.
    * ಹಪ್ಪಳ ಸಂಪೂರ್ಣ ಒಣಗಿದ ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಡಿ. ನಿಮಗೆ ಬೇಕೆನಿಸಿದಾಗ ಇದನ್ನು ಬಿಸಿ ಎಣ್ಣೆಯಲ್ಲಿ ಹುರಿದುಕೊಂಡು ಸವಿಯಬಹುದು. ಇದನ್ನೂ ಓದಿ: ಕುರುಕಲು ತಿಂಡಿಗೆ ಹಠ ಹಿಡಿಯೋ ಮಕ್ಕಳಿಗಾಗಿ ಮಾಡಿ ರಿಬ್ಬನ್ ಸೇವ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತರಕಾರಿ ಖಾಲಿ ಆಗಿದ್ರೆ ಸೇವ್ ಬಳಸಿ ಮಾಡಿ ಸ್ಪೈಸಿ ಪಲ್ಯ

    ತರಕಾರಿ ಖಾಲಿ ಆಗಿದ್ರೆ ಸೇವ್ ಬಳಸಿ ಮಾಡಿ ಸ್ಪೈಸಿ ಪಲ್ಯ

    ಡುಗೆ ಮನೆಯಲ್ಲಿ ತರಕಾರಿ ಖಾಲಿ ಆದ್ರೆ, ಮಾರುಕಟ್ಟೆಗೆ ಹೋಗೋಕೆ ಮನಸ್ಸು ಇಲ್ಲ ಎಂದರೆ ನಿಮಗೊಂದು ಸೂಪರ್ ಪಲ್ಯ ರೆಸಿಪಿಯನ್ನು ನಾವಿಂದು ಹೇಳಿಕೊಡುತ್ತೇವೆ. ಮನೆಯಲ್ಲಿ ಕುರುಕಲು ತಿಂಡಿ ನೆಂಟರಿಷ್ಟರು ಬಂದಾಗ ಇರಲೇ ಬೇಕು. ಅದರಂತೆಯೇ ಸೇವ್ ಇದ್ದರೆ ನೀವು ಪಲ್ಯಕ್ಕೆ ತರಕಾರಿ ಇಲ್ಲ ಅಂತ ತಲೆಕೆಡಿಸಿಕೊಳ್ಳೋದು ಬೇಕೆಂದಿಲ್ಲ. ಇದೇ ಸೇವ್ ಬಳಸಿ ಸ್ಪೈಸಿ ಪಲ್ಯ ಮಾಡೋದು ಹೇಗೆಂದು ನಾವಿಂದು ನಿಮಗೆ ಹೇಳಿಕೊಡುತ್ತಿದ್ದೇವೆ. ಸ್ಪೈಸಿ ಸೇವ್ ಪಲ್ಯ ಮಾಡೋ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಸೇವ್ – 1 ಕಪ್ (ದಪ್ಪಗಿನ ಸೇವ್ ಬಳಸಿದರೆ ಉತ್ತಮ)
    ಎಣ್ಣೆ – 4 ಟೀಸ್ಪೂನ್
    ಅರಿಶಿನ ಪುಡಿ – 1 ಟೀಸ್ಪೂನ್
    ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
    ಗರಂ ಮಸಾಲೆ ಪುಡಿ – 1 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಹೆಚ್ಚಿದ ಈರುಳ್ಳಿ – 2
    ಹೆಚ್ಚಿದ ಟೊಮೆಟೊ – 1
    ದಾಲ್ಚಿನಿ ಎಲೆ – 2
    ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಕ್ರೀಮಿ ಮಕೈ ಕ್ಯಾಪ್ಸಿಕಮ್ – ಈ ಗುಜರಾತಿ ರೆಸಿಪಿ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‌ನಲ್ಲಿ ಅರಿಶಿನ, ಮೆಣಸಿನಪುಡಿ, ಉಪ್ಪು, ಗರಂ ಮಸಾಲೆ ಪುಡಿ, ಹಾಗೂ ಅದಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿ ಪಕ್ಕಕ್ಕಿಡಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ದಾಲ್ಚಿನಿ ಎಲೆ ಹಾಕಿ ಫ್ರೈ ಮಾಡಿ.
    * ಬಳಿಕ ಹೆಚ್ಚಿದ ಈರುಳ್ಳಿ ಹಾಗೂ ಮಸಾಲೆ ಪುಡಿಗಳ ಪೇಸ್ಟ್ ಸೇರಿಸಿ ಹುರಿದುಕೊಳ್ಳಿ.
    * ನಂತರ ಟೊಮೆಟೊ, ಸೇವ್ ಹಾಗೂ ಕಾಲು ಕಪ್ ನೀರು ಸೇರಿಸಿ ಬೇಯಿಸಿ.
    * ಬಳಿಕ ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಬೇಯಿಸಿ ಬಳಿಕ ಉರಿಯನ್ನು ಆಫ್ ಮಾಡಿ.
    * ಇದೀಗ ಸ್ಪೈಸಿ ಸೇವ್ ಪಲ್ಯ ತಯಾರಾಗಿದ್ದು, ಇದನ್ನು ಬಿಸಿಬಿಸಿಯಾಗಿ ಊಟಕ್ಕೆ ಬಡಿಸಿ. ಇದನ್ನೂ ಓದಿ: ಟ್ರೈ ಮಾಡಿ ಕಾಬೂಲ್ ಕಡಲೆಯ ಟೇಸ್ಟಿ ಉಪ್ಪಿನಕಾಯಿ ರೆಸಿಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಯಲ್ಲಿ ನೀರೂರಿಸೋ ಮಟನ್ ಕೋಫ್ತಾ ಕರಿ ರೆಸಿಪಿ ನಿಮಗಾಗಿ

    ಬಾಯಲ್ಲಿ ನೀರೂರಿಸೋ ಮಟನ್ ಕೋಫ್ತಾ ಕರಿ ರೆಸಿಪಿ ನಿಮಗಾಗಿ

    ಟನ್ ಕೋಫ್ತಾ ಕರಿ ಇಂದು ಭಾರತೀಯ ನಾನ್‌ವೆಜ್ ರೆಸಿಪಿ. ಮಟನ್ ಖೀಮಾದ ಚೆಂಡುಗಳನ್ನು ಗರಿಗರಿಯಾಗಿ ಹುರಿದು ಬಳಿಕ ಮಸಾಲೆಯುಕ್ತ ಗ್ರೇವಿಯಲ್ಲಿ ಬೇಯಿಸೋ ಈ ಕೋಫ್ತಾ ಕರಿ ರೆಸಿಪಿ ಅನ್ನ ಅಥವಾ ರೋಟಿಯೊಂದಿಗೆ ಸವಿಯಲು ಪರ್ಫೆಕ್ಟ್ ಆಗಿದೆ. ಮಾಂಸದ ಚೆಂಡಿನ ಗರಿಗರಿಯಾದ ಹೊರ ಪದರ ಹಾಗೂ ಮೃದುವಾದ ಒಳ ಪದರದ ಸವಿ ನಾಲಿಗೆಗೆ ಮಜ ನೀಡುತ್ತದೆ. ಬಾಯಲ್ಲಿ ನೀರೂರಿಸೋ ಮಟನ್ ಕೋಫ್ತಾ ಕರಿ ರೆಸಿಪಿ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮಟನ್ ಖೀಮಾ – ಅರ್ಧ ಕೆಜಿ
    ಈರುಳ್ಳಿ – 1
    ಕೊತ್ತಂಬರಿ ಸೊಪ್ಪು – 1 ಕಟ್ಟು
    ಬೆಳ್ಳುಳ್ಳಿ – 3
    ಹಸಿರು ಮೆಣಸಿನಕಾಯಿ – 4
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಜೀರಿಗೆ ಪುಡಿ – 2 ಟೀಸ್ಪೂನ್
    ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
    ಅರಿಶಿನ ಪುಡಿ – ಒಂದೂವರೆ ಟೀಸ್ಪೂನ್
    ಕಾಶ್ಮೀರಿ ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
    ಉಪ್ಪು – 3 ಟೀಸ್ಪೂನ್
    ಚಾಟ್ ಮಸಾಲಾ ಪುಡಿ – 1 ಟೀಸ್ಪೂನ್
    ಗರಂ ಮಸಾಲಾ ಪುಡಿ – 1 ಟೀಸ್ಪೂನ್
    ಸಕ್ಕರೆ – 3 ಟೀಸ್ಪೂನ್
    ಹೆಚ್ಚಿದ ಬೆಳ್ಳುಳ್ಳಿ – 1 ಟೀಸ್ಪೂನ್
    ಎಣ್ಣೆ – ಅರ್ಧ ಕಪ್
    ಗೋಡಂಬಿ – ಅರ್ಧ ಕಪ್ (30 ನಿಮಿಷ ನೀರಿನಲ್ಲಿ ನೆನೆಸಿಡಿ)
    ಟೊಮೆಟೊ – 2
    ಕಸೂರಿ ಮೇಥಿ – 2 ಟೀಸ್ಪೂನ್ ಇದನ್ನೂ ಓದಿ: ಸುಲಭದ ಎಗ್ ಕೀಮಾ ರೆಸಿಪಿ – ಫಟಾಫಟ್ ಅಂತ ಮಾಡ್ಬೋದು

    ಮಾಡುವ ವಿಧಾನ:
    * ಮೊದಲಿಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಅದಕ್ಕೆ ಮಟನ್ ಕೀಮಾ ಬೆರೆಸಿ.
    * ಅದಕ್ಕೆ ಉಪ್ಪು, ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲಾ, ಗರಂ ಮಸಾಲಾ, 1 ಟೀಸ್ಪೂನ್ ಜೀರಿಗೆ ಪುಡಿ ಮತ್ತು 1 ಟೀಸ್ಪೂನ್ ಅರಿಶಿನ ಮತ್ತು ಕೊತ್ತಂಬರಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
    * ಇದೀಗ ಮಿಶ್ರಣವನ್ನು ಸುಮಾರು 30 ಸಣ್ಣ ಸಣ್ಣ ಉಂಡೆಗಳಾಗುವಂತೆ ಕಟ್ಟಿಕೊಳ್ಳಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮಧ್ಯಮ ಉರಿಯಲ್ಲಿ ಉಂಡೆಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ. ಬಳಿಕ ಅದನ್ನು ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ಈಗ ಮಿಕ್ಸರ್ ಜಾರ್‌ನಲ್ಲಿ ನೆನೆಸಿಟ್ಟ ಗೋಡಂಬಿ, ಟೊಮೆಟೊ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.
    * ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಹೆಚ್ಚಿದ ಬೆಳ್ಳುಳ್ಳಿ ಫ್ರೈ ಮಾಡಿ.
    * ಬಳಿಕ ಉಳಿದ 1 ಟೀಸ್ಪೂನ್ ಜೀರಿಗೆ ಪುಡಿ ಗೋಡಂಬಿ ಟೊಮೆಟೊ ಪೇಸ್ಟ್ ಹಾಗೂ 1 ಕಪ್ ನೀರು ಸೇರಿಸಿ ಮಿಶ್ರಣ ಮಾಡಿ.
    * ನಂತರ ಉಳಿದ ಅರ್ಧ ಟೀಸ್ಪೂನ್ ಅರಿಶಿನ, ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಸಕ್ಕರೆಯನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಯಲು ಬಿಡಿ. ತಳ ಅಂಟಿಕೊಳ್ಳದಂತೆ ಆಗಾಗ ಕೈಯಾಡಿಸುತ್ತಿರಿ.
    * ಮಿಶ್ರಣಕ್ಕೆ ಕಸೂರಿ ಮೇಥಿ ಸೇರಿಸಿ, ಕುದಿಯಲು ಪ್ರಾರಂಭವಾದಾಗ ಮಟನ್ ಉಂಡೆಗಳನ್ನು ಅದರಲ್ಲಿ ಹಾಕಿ ನಿಧಾನವಾಗಿ ಮಿಶ್ರಣ ಮಾಡಿ.
    * ಇದೀಗ ರುಚಿಕರ ಮಟನ್ ಕೋಫ್ತಾ ಕರಿ ತಯಾರಾಗಿದ್ದು, ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ. ಇದನ್ನೂ ಓದಿ: ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡೋ ಬದ್ಲು ಮನೆಯಲ್ಲೇ ಟ್ರೈ ಮಾಡಿ ಚಿಕನ್ ಷವರ್ಮಾ ಸಲಾಡ್

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಗರಿಗರಿಯಾಗಿ ಮಾಡಿ ಪಾಲಕ್ ದೋಸೆ

    ಗರಿಗರಿಯಾಗಿ ಮಾಡಿ ಪಾಲಕ್ ದೋಸೆ

    ದೋಸೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಚಳಿಗೆ ಬಿಸಿಬಿಸಿ ದೋಸೆ ಅದರಲ್ಲೂ ಗರಿಗರಿಯಾದ ದೋಸೆ ತಿನ್ನುವ ಮಜಾನೇ ಬೇರೆ. ದೋಸೆಗಳಲ್ಲಿ ಹಲವಾರು ಬಗೆಯಿವೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಾಲಕ್ ದೋಸೆ ಹೇಗೆ ಮಾಡುವುದೆಂದು ತಿಳಿಸಿಕೊಡುತ್ತೇವೆ. ನೀವೂ ಕೂಡಾ ಇದನ್ನು ನಿಮ್ಮ ಮನೆಯಲ್ಲಿ ಬ್ರೇಕ್‌ಫಾಸ್ಟ್‌ಗೆ ಟ್ರೈ ಮಾಡಿ ನೋಡಿ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಮಳೆಗಾಲದ ತಂಪಲ್ಲಿ ಸವಿಯಿರಿ ಚಾಕೊಲೇಟ್ ಫಲೂಡಾ!

    ಬೇಕಾಗುವ ಸಾಮಾಗ್ರಿಗಳು:
    ಗೋಧಿ ಹಿಟ್ಟು – 2 ಕಪ್
    ಕಡ್ಲೆ ಹಿಟ್ಟು – 2 ಕಪ್
    ಗಟ್ಟಿ ಮಜ್ಜಿಗೆ – 1 ಕಪ್
    ಪಾಲಕ್ ಸೊಪ್ಪು – 2 ಕಟ್ಟು
    ಹಸಿ ಶುಂಠಿ – ಸ್ವಲ್ಪ
    ಹಸಿ ಮೆಣಸಿನಕಾಯಿ – 12
    ಈರುಳ್ಳಿ – 2
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:

    * ಮೊದಲಿಗೆ ಪಾಲಕ್ ಸೊಪ್ಪನ್ನು ತೊಳೆದು ಬಿಡಿಸಿ, ಸಣ್ಣಗೆ ಹೆಚ್ಚಿಕೊಳ್ಳಿ.
    * ಬಳಿಕ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಹೆಚ್ಚಿಕೊಳ್ಳಿ.
    * ನಂತರ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು ಮತ್ತು ಗೋಧಿ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ಹೆಚ್ಚಿದ ತರಕಾರಿಗಳನ್ನು ಹಾಕಿಕೊಳ್ಳಿ.
    * ಬಳಿಕ ಅದಕ್ಕೆ ಮಜ್ಜಿಗೆ, ಉಪ್ಪು ಮತ್ತು ನೀರನ್ನು ಸೇರಿಸಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಕಲಸಿ.
    * ಒಗ್ಗರಣೆ ಇಷ್ಟಪಡುವವರು ಇದಕ್ಕೆ ಒಗ್ಗರಣೆ ಸೇರಿಸಿಕೊಳ್ಳಬಹುದು.
    * ಬಳಿಕ ತವಾ ಬಿಸಿಗೆ ಇಟ್ಟು ಕಾದಮೇಲೆ ಎಣ್ಣೆಯನ್ನು ಸವರಿಕೊಂಡು ದೋಸೆಯನ್ನು ಹುಯ್ಯಿರಿ.
    * ದೋಸೆ ಬೆಂದ ಬಳಿಕ ಅದನ್ನು ತಿರುವಿ ಹಾಕಿ ಬೇಯಿಸಿಕೊಳ್ಳಿ.
    * ಈಗ ಗರಿಗರಿಯಾದ ಪಾಲಕ್ ದೋಸೆ ತಿನ್ನಲು ರೆಡಿ.
    * ಇದನ್ನು ಒಂದು ಪ್ಲೇಟ್‌ನಲ್ಲಿ ಹಾಕಿ ಚಟ್ನಿಯೊಂದಿಗೆ ಸವಿಯಲು ಕೊಡಿ. ಇದನ್ನೂ ಓದಿ: ಕುರುಕಲು ತಿಂಡಿಗೆ ಹಠ ಹಿಡಿಯೋ ಮಕ್ಕಳಿಗಾಗಿ ಮಾಡಿ ರಿಬ್ಬನ್ ಸೇವ್

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಕ್ರೀಮಿ ಮಕೈ ಕ್ಯಾಪ್ಸಿಕಮ್ – ಈ ಗುಜರಾತಿ ರೆಸಿಪಿ ಟ್ರೈ ಮಾಡಿ

    ಕ್ರೀಮಿ ಮಕೈ ಕ್ಯಾಪ್ಸಿಕಮ್ – ಈ ಗುಜರಾತಿ ರೆಸಿಪಿ ಟ್ರೈ ಮಾಡಿ

    ಜೊಳ ಹಾಗೂ ಕ್ಯಾಪ್ಸಿಕಮ್‌ನ ಮಿಶ್ರಣದೊಂದಿಗೆ ಮಾಡಲಾಗುವ ಈ ರೆಸಿಪಿ ಗುಜರಾತ್‌ನ ಸಾಂಪ್ರದಾಯಿಕ ಖಾದ್ಯ ಅಲ್ಲದಿದ್ದರೂ ಇದು ಫೇಮಸ್. ಯುವ ಜನರು ಇದನ್ನು ತುಂಬಾ ಇಷ್ಟಪಟ್ಟು ಸವಿಯುತ್ತಾರೆ. ಏಕೆಂದರೆ ಇದಕ್ಕೆ ಹೆಚ್ಚು ಎಣ್ಣೆ ಹಾಗೂ ಮಸಾಲೆಗಳನ್ನು ಸೇರಿಸಲಾಗುವುದಿಲ್ಲ. ಹಾಲಿನೊಂದಿಗೆ ಬೇಯಿಸಿ, ಭಾರತೀಯ ಸ್ಟೈಲ್‌ನ ಒಗ್ಗರಣೆ ನೀಡಿ ಮಾಡಲಾಗುವ ಈ ಟೇಸ್ಟಿ ಮಕೈ ಕ್ಯಾಪ್ಸಿಕಮ್ ಅನ್ನು ಒಮ್ಮೆ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಬೇಯಿಸಿದ ಸ್ವೀಟ್ ಕಾರ್ನ್ – 2 ಕಪ್
    ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಮ್ – 1 ಕಪ್
    ತುಪ್ಪ – 1 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಶುಂಠಿ, ಹಸಿರು ಮೆಣಸಿನಕಾಯಿ ಪೇಸ್ಟ್ – 1 ಟೀಸ್ಪೂಮ್
    ಮೈದಾ ಹಿಟ್ಟು – 2 ಟೀಸ್ಪೂನ್
    ಹಾಲು – 2 ಕಪ್
    ಸಕ್ಕರೆ – ಅರ್ಧ ಟೀಸ್ಪೂನ್
    ಕರಿ ಮೆಣಸಿನಪುಡಿ – ಕಾಲು ಟೀಸ್ಪೂನ್ ಇದನ್ನೂ ಓದಿ: ಚಪಾತಿ, ರೋಟಿ ಜೊತೆ ಸವಿಯಿರಿ ಪಂಜಾಬಿ ಸ್ಟೈಲ್ ಮಟರ್ ಪನೀರ್

    ಮಾಡುವ ವಿಧಾನ:
    * ಮೊದಲಿಗೆ ಒಂದು ನಾನ್ ಸ್ಟಿಕ್ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಜೀರಿಗೆ ಹಾಗೂ ಶುಂಠಿ, ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಿ.
    * ಜೀರಿಗೆ ಸಿಡಿದ ಬಳಿಕ ಮೈದಾ ಹಿಟ್ಟನ್ನು ಸೇರಿಸಿ, ಕಡಿಮೆ ಉರಿಯಲ್ಲಿ 2-3 ನಿಮಿಷ ಹುರಿದುಕೊಳ್ಳಿ.
    * ಬಳಿಕ ಕಾರ್ನ್ ಹಾಗೂ ಕ್ಯಾಪ್ಸಿಕಮ್ ಸೇರಿಸಿ ಮಧ್ಯಮ ಉರಿಯಲ್ಲಿ 3-4 ನಿಮಿಷ ಬೇಯಿಸಿಕೊಳ್ಳಿ.
    * ನಂತರ ಹಾಲು ಸೇರಿಸಿ ಕಡಿಮೆ ಉರಿಯಲ್ಲಿ 4-5 ನಿಮಿಷಗಳ ವರೆಗೆ ಕೈ ಆಡಿಸುತ್ತಾ ಕುದಿಸಿಕೊಳ್ಳಿ.
    * ಮಿಶ್ರಣ ದಪ್ಪವಾಗುತ್ತಿದ್ದಂತೆ ಸಕ್ಕರೆ, ಕರಿ ಮೆಣಸಿನಪುಡಿ ಹಾಗೂ ಉಪ್ಪು ಸೇರಿಸಿ ಮಿಕ್ಸ್ ಮಾಡಿ.
    * ಇದೀಗ ಕ್ರೀಮಿ ಮಕೈ ಕ್ಯಾಪ್ಸಿಕಮ್ ತಯಾರಾಗಿದ್ದು, ಇದನ್ನು ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಕುರುಕಲು ತಿಂಡಿಗೆ ಹಠ ಹಿಡಿಯೋ ಮಕ್ಕಳಿಗಾಗಿ ಮಾಡಿ ರಿಬ್ಬನ್ ಸೇವ್

  • ಸುಲಭವಾಗಿ ‘ಆಲೂ ಚಿಕನ್ ಕಬಾಬ್’ ಮಾಡುವುದು ಹೇಗೆ? ನೋಡಿ

    ಸುಲಭವಾಗಿ ‘ಆಲೂ ಚಿಕನ್ ಕಬಾಬ್’ ಮಾಡುವುದು ಹೇಗೆ? ನೋಡಿ

    ರುಚಿಕರವಾಗಿರುವ ‘ಆಲೂ ಚಿಕನ್ ಕಬಾಬ್’ ಮಾಡುವುದು ಹೇಗೆ ಎಂಬ ಸುಲಭದ ರೆಸಿಪಿ ಇಲ್ಲಿದೆ. ಚಿಕನ್ ಮಾಡುವುದು ಕಷ್ಟ ಆದರೆ ತಿನ್ನುವುದಕ್ಕೆ ತುಂಬಾ ಇಷ್ಟ. ಅದಕ್ಕೆ ಇಲ್ಲೊಂದು ಸರಳ ರೆಸಿಪಿಯಲ್ಲಿ ‘ಆಲೂ ಚಿಕನ್ ಕಬಾಬ್’ ಮಾಡುವುದು ಹೇಗೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

    ಬೇಕಾದ ಪದಾರ್ಥಗಳು:
    ಬೇಯಿಸಿದ ಆಲೂಗಡ್ಡೆ – 250 ಗ್ರಾಂ
    ಬೇಯಿಸಿ ಸಣ್ಣದಾಗಿ ಕಟ್‌ ಮಾಡಿದ ಚಿಕನ್‌ – 250 ಗ್ರಾಂ
    ಗರಂ ಮಸಾಲಾ – 1 ಟೀಸ್ಪೂನ್
    ಹುರಿದ ಜೀರಿಗೆ ಪುಡಿ – 1 ಟೀಸ್ಪೂನ್

    ಸೋಯಾ ಸಾಸ್ – 1 ಟೀಸ್ಪೂನ್
    ಕಪ್ಪು ಮೆಣಸು – 1/2 ಟೀಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಹಸಿರು ಮೆಣಸಿನಕಾಯಿಗಳು – 3-4
    ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಕಪ್
    ಮೊಟ್ಟೆ – 2
    ಬ್ರೆಡ್ ಕ್ರಂಬ್ಸ್ – 1 ಕಪ್
    ಎಣ್ಣೆ ಹುರಿಯಲು
    ರುಚಿಗೆ ಉಪ್ಪು

    ಮಾಡುವ ವಿಧಾನ:
    * ಮೊದಲು ಮಿಕ್ಸಿಂಗ್ ಬೌಲ್ ಅನ್ನು ತೆಗೆದುಕೊಂಡು, ಬೇಯಿಸಿದ ಆಲೂಗಡ್ಡೆಯನ್ನು ಸೇರಿಸಿ ಮತ್ತು ಸರಿಯಾಗಿ ಮ್ಯಾಶ್ ಮಾಡಿ.
    * ಆಲೂ ಮ್ಯಾಶ್‍ಗೆ ಬೇಯಿಸಿದ ಚಿಕನ್ ಜೊತೆಗೆ ಗರಂ ಮಸಾಲಾ, ಉಪ್ಪು, ಹುರಿದ ಜೀರಾ ಪುಡಿ, ಕಾಲಿ ಮಿರ್ಚ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಪುದೀನ ಎಲೆಗಳು, ಸೋಯಾ ಸಾಸ್ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.


    * 10-15 ನಿಮಿಷಗಳ ಕಾಲ ಫ್ರಿಜ್‍ನಲ್ಲಿಡಿ.
    * ನಂತರ ಫ್ರಿಜ್‍ನಲ್ಲಿದ್ದ ಮಿಶ್ರಣವನ್ನು ವಡೆಯ ರೀತಿ ತಟ್ಟಿ ಅದನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಬೇಕು.
    * ಈಗ ‘ಆಲೂ ಚಿಕನ್ ಕಬಾಬ್’ ಸವಿಯಲು ಸಿದ್ಧವಾಗಿದ್ದು, ಸಾಸ್ ಜೊತೆ ಸವಿಯಿರಿ.