Tag: recipe

  • ಮೂರೇ ಪದಾರ್ಥ ಬಳಸಿ ಮಾಡಿ ಹೆಲ್ತಿ ಓಟ್ಸ್ ಬಾರ್

    ಮೂರೇ ಪದಾರ್ಥ ಬಳಸಿ ಮಾಡಿ ಹೆಲ್ತಿ ಓಟ್ಸ್ ಬಾರ್

    ಟ್ಸ್ ಹೆಲ್ತಿ ಪದಾರ್ಥಗಳಲ್ಲಿ ಒಂದು. ಆರೋಗ್ಯವನ್ನು ಚೆನ್ನಾಗಿ ಕಾಪಾಡಲು ಬಯಸುವವರು ಇತ್ತೀಚಿನ ದಿನಗಳಲ್ಲಿ ಓಟ್ಸ್ ಅನ್ನು ಹೆಚ್ಚು ಹೆಚ್ಚು ಸೇವಿಸುತ್ತಾರೆ. ಇದೇ ಓಟ್ಸ್ ಬಳಸಿ ನಾವಿಂದು ನಿಮಗೆ ಒಂದು ಸಿಂಪಲ್ ಆದ ಸ್ನ್ಯಾಕ್ಸ್ ಅಥವಾ ಎನರ್ಜಿ ಬಾರ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಇದಕ್ಕೆ ಕೇವಲ ಮೂರೇ ಪದಾರ್ಥಗಳು ಸಾಕು. ಹೆಲ್ತಿ ಹಾಗೂ ಟೇಸ್ಟಿ ಓಟ್ಸ್ ಬಾರ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಓಟ್ಸ್ – 2 ಕಪ್
    ಪೀನಟ್ ಬಟರ್ – 1 ಕಪ್
    ಜೇನು ತುಪ್ಪ – ಕಾಲು ಕಪ್ ಇದನ್ನೂ ಓದಿ: ಹೀಗೆ ಮಾಡಿ ಇನ್ಸ್ಟೆಂಟ್ ಮಗ್ ಬ್ರೌನಿ

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 350 ಡಿಗ್ರಿ ಪ್ಯಾರಾಹೀಟ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
    * ಒಂದು ಬಟ್ಟಲಿನಲ್ಲಿ ಓಟ್ಸ್, ಪೀನಟ್ ಬಟರ್ ಹಾಗೂ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ಇದನ್ನು ಬೇಕಿಂಗ್ ಟ್ರೇಗೆ ವರ್ಗಾಯಿಸಿ, ಸಮಾನವಾಗಿ ಹರಡಿಕೊಳ್ಳಿ.
    * ಬಳಿಕ ಅದನ್ನು ಓವನ್‌ನಲ್ಲಿ ಇಟ್ಟು ಸುಮಾರು 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಈಗ ಮಿಶ್ರಣ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬಂದಿರುತ್ತದೆ. ಅದನ್ನು ಓವನ್‌ನಿಂದ ತೆಗೆದು ತಣ್ಣಗಾಗಲು ಬಿಡಿ.
    * ನಂತರ ಅದನ್ನು ಬಾರ್‌ಗಳಾಗಿ ಕತ್ತರಿಸಿಕೊಳ್ಳಿ.
    * ಇದೀಗ ಹೆಲ್ತಿ ಓಟ್ಸ್ ಬಾರ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ ಇಡಬಹುದು. ಇದನ್ನೂ ಓದಿ: ಮಕ್ಕಳಿಗೆ ಇಷ್ಟವಾಗೋ ಟೇಸ್ಟಿ ಕ್ಯಾರೆಟ್ ಕೇಕ್ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೀಗೆ ಮಾಡಿ ಇನ್ಸ್ಟೆಂಟ್ ಮಗ್ ಬ್ರೌನಿ

    ಹೀಗೆ ಮಾಡಿ ಇನ್ಸ್ಟೆಂಟ್ ಮಗ್ ಬ್ರೌನಿ

    ಚಾಕ್ಲೆಟಿ ಬ್ರೌನಿ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಸಂಜೆ ವೇಳೆ ಎನಾದ್ರೂ ಸಿಹಿ, ರುಚಿಕರ ತಿಂಡಿಯನ್ನು ಮಕ್ಕಳು ಕೇಳೇ ಕೇಳುತ್ತಾರೆ. ಅವರಿಗಾಗಿ ನಾವಿಂದು ಮಗ್ ಬ್ರೌನಿ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಇದಕ್ಕೆ ಹೆಚ್ಚು ಪದಾರ್ಥಗಳು ಹಾಗೂ ಸಮಯವೂ ಬೇಕೆಂದಿಲ್ಲ. ಮಕ್ಕಳು ಬೇಕು ಎಂದು ಹಠ ಹಿಡಿದರೆ ಇದನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಿ ಕೊಡಬಹುದು. ಹಾಗಿದ್ರೆ ಇನ್ಸ್ಟೆಂಟ್ ಮಗ್ ಬ್ರೌನಿ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಡಾರ್ಕ್ ಚಾಕ್ಲೆಟ್ – 25 ಗ್ರಾಂ
    ಬೆಣ್ಣೆ – 1 ಟೀಸ್ಪೂನ್
    ಸಕ್ಕರೆ ಪುಡಿ – 1 ಟೀಸ್ಪೂನ್
    ಹಾಲು – 2 ಟೀಸ್ಪೂನ್
    ಮೈದಾ ಹಿಟ್ಟು – 2 ಟೀಸ್ಪೂನ್
    ಬೇಕಿಂಗ್ ಪೌಡರ್ – ಚಿಟಿಕೆ
    ಕೋಕೋ ಪೌಡರ್ – 2 ಟೀಸ್ಪೂನ್
    ಕತ್ತರಿಸಿದ ವಾಲ್ನಟ್ – 1 ಟೀಸ್ಪೂನ್
    ವೆನಿಲಾ ಐಸ್ ಕ್ರೀಮ್ – ಅರ್ಧ ಕಪ್
    ಚಾಕ್ಲೆಟ್ ಸಿರಪ್ – 1 ಟೀಸ್ಪೂನ್ ಇದನ್ನೂ ಓದಿ: ಮಕ್ಕಳಿಗೆ ಇಷ್ಟವಾಗೋ ಟೇಸ್ಟಿ ಕ್ಯಾರೆಟ್ ಕೇಕ್ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಮಗ್ ತೆಗೆದುಕೊಂಡು ಅದರಲ್ಲಿ ಡಾರ್ಕ್ ಚಾಕ್ಲೆಟ್ ಹಾಗೂ ಬೆಣ್ಣೆ ಹಾಕಿ 30 ಸೆಕೆಂಡ್ ಮೈಕ್ರೋವೇವ್ ಮಾಡಿ.
    * ಈಗ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ, ಅದಕ್ಕೆ ಸಕ್ಕರೆ, ಹಾಲು, ಕೋಕೋ ಪೌಡರ್, ಬೇಕಿಂಗ್ ಪೌಡರ್, ಮೈದಾ ಹಿಟ್ಟು ಹಾಗೂ ವಾಲ್ನಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಮಗ್ ಅನ್ನು ಓವ್‌ನಲ್ಲಿಟ್ಟು 2 ನಿಮಿಷಗಳ ಕಾಲ ಮೈಕ್ರೋವೇವ್ ಮಾಡಿ.
    * ಬಳಿಕ ಒಂದು ಟೂತ್ ಪಿಕ್ ಸಹಾಯದಿಂದ ಬ್ರೌನಿ ಬೆಂದಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
    * ಈಗ ಬ್ರೌನಿ ಮೇಲ್ಭಾಗದಲ್ಲಿ ಐಸ್ ಕ್ರಿಮ್ ಹಾಗೂ ಚಾಕ್ಲೆಟ್ ಸಿರಪ್ ಸುರಿದು ಮಕ್ಕಳಿಗೆ ಸವಿಯಲು ನೀಡಿ. ಇದನ್ನೂ ಓದಿ: ಮದ್ರಾಸ್ ಮಸಾಲಾ ಮಿಲ್ಕ್ ರೆಸಿಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫಟಾಫಟ್ ಅಂತ ಮಾಡ್ಬೋದಾದ ನಾನ್‌ವೆಜ್ ರೆಸಿಪಿ – ಏಷ್ಯನ್ ಜಿಂಜರ್ ಚಿಕನ್

    ಫಟಾಫಟ್ ಅಂತ ಮಾಡ್ಬೋದಾದ ನಾನ್‌ವೆಜ್ ರೆಸಿಪಿ – ಏಷ್ಯನ್ ಜಿಂಜರ್ ಚಿಕನ್

    ಚಿಕನ್ ಮಂಚೂರಿಯನ್, ಚಿಕನ್ ಚಿಲ್ಲಿ ಇವುಗಳ ಹೆಸರು ಕೇಳಿದ್ರೇನೇ ಹೆಚ್ಚಿನವರ ಬಾಯಲ್ಲಿ ನೀರು ಬರದೇ ಇರಲಾರದು. ಸಖತ್ ರುಚಿಯಾದ ಈ ಅಡುಗೆಗಳಲ್ಲಿ ಸ್ವಲ್ಪ ಸಿಹಿ ಅಂಶವೂ ಇರುತ್ತದೆ. ಆದರೆ ನಾವಿಂದು ಹೇಳಿಕೊಡುತ್ತಿರೋ ಜಿಂಜರ್ ಚಿಕನ್ ಇದೇ ಏಷ್ಯನ್ ರೆಸಿಪಿ ವರ್ಗಕ್ಕೆ ಸೇರುತ್ತದೆಯಾದರೂ ಸ್ವಲ್ಪ ಡಿಫರೆಂಟ್. ಈ ರೆಸಿಪಿ ತುಂಬಾ ರುಚಿಯಾಗಿದ್ದರೂ ಇದ್ರಲ್ಲಿ ಸಕ್ಕರೆ ಅಂಶ ಇಲ್ಲ. ಫಟಾಫಟ್ ಅಂತ ಏಷ್ಯನ್ ಜಿಂಜರ್ ಚಿಕನ್ ಮಾಡೋದು ಹೇಗೆಂದು ನೊಡೋಣ.

    ಬೇಕಾಗುವ ಪದಾರ್ಥಗಳು:
    ತೆಳ್ಳಗಿನ ತುಂಡುಗಳಾಗಿ ಕತ್ತರಿಸಿದ ಚಿಕನ್ ಬ್ರೆಸ್ಟ್ – ಅರ್ಧ ಕೆಜಿ
    ತೆಳ್ಳಗೆ ಹೆಚ್ಚಿದ ಬೆಲ್ ಪೆಪ್ಪರ್ – 1 (ಹಸಿರು, ಹಳದಿ, ಕೆಂಪು ಬಣ್ಣದ್ದು ಬಳಸಬಹುದು)
    ಆಲಿವ್ ಎಣ್ಣೆ – 1 ಟೀಸ್ಪೂನ್
    ಟೊಮೆಟೊ ಪೇಸ್ಟ್ – 1 ಟೀಸ್ಪೂನ್
    ಸೋಯಾ ಸಾಸ್ – 1 ಟೀಸ್ಪೂನ್
    ವಿನೆಗರ್ – 1 ಟೀಸ್ಪೂನ್
    ಶುಂಠಿ ಪೇಸ್ಟ್ – ಅರ್ಧ ಟೀಸ್ಪೂನ್
    ಕಾರ್ನ್ ಫ್ಲೋರ್ – 1 ಟೀಸ್ಪೂನ್
    ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಕಾಲು ಕಪ್
    ಎಳ್ಳು – ಅರ್ಧ ಟೀಸ್ಪೂನ್ ಇದನ್ನೂ ಓದಿ: ತೆಂಗಿನ ಹಾಲು ಬಳಸಿ ಮಾಡೋ ಗೋವಾ ಸ್ಟೈಲ್‌ನ ಸಿಗಡಿ ಕರಿ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಸೋಯಾ ಸಾಸ್, ವಿನೆಗರ್, ಶುಂಠಿ ಪೇಸ್ಟ್ ಹಾಗೂ ಟೊಮೆಟೊ ಪೇಸ್ಟ್ ಅನ್ನು ತೆಗೆದುಕೊಂಡು ಮಿಶ್ರಣ ಮಾಡಿ.
    * ಇನ್ನೊಂದು ಸಣ್ಣ ಬೌಲ್‌ನಲ್ಲಿ ಕಾರ್ನ್ ಫ್ಲೋರ್‌ಗೆ ಕಾಲು ಕಪ್ ನೀರು ಹಾಕಿ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿ ಬದಿಗಿಡಿ.
    * ದೊಡ್ಡ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಚಿಕನ್ ಸೇರಿಸಿ ಆಗಾಗ ತಿರುವುತ್ತಾ 4-5 ನಿಮಿಷ ಬೇಯಿಸಿಕೊಳ್ಳಿ.
    * ಬಳಿಕ ಬೆಲ್ ಪೆಪ್ಪರ್ ಸೇರಿಸಿ ಇನ್ನೊಂದು ನಿಮಿಷ ಟಾಸ್ ಮಾಡಿ.
    * ಬಳಿಕ ಸಾಸ್ ಮಿಶ್ರಣವನ್ನು ಸೇರಿಸಿ ಕುದಿಸಿಕೊಳ್ಳಿ.
    * ನಂತರ ಕಾರ್ನ್ ಫ್ಲೋರ್‌ನ ಸ್ಲರಿಯನ್ನು ಹಾಕಿ ಮಿಶ್ರಣ ದಪ್ಪವಾಗಲು ಬಿಡಿ.
    * ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಿಸಿಕೊಳ್ಳಿ.
    * ಸರ್ವಿಂಗ್ ಪ್ಲೇಟ್‌ಗೆ ಚಿಕನ್ ಅನ್ನು ವರ್ಗಾಯಿಸಿ, ಸ್ಪ್ರಿಂಗ್ ಆನಿಯನ್ ಹಾಗೂ ಎಳ್ಳಿನಿಂದ ಅಲಂಕರಿಸಿ.
    * ಇದೀಗ ಟೇಸ್ಟಿ ಏಷ್ಯನ್ ಜಿಂಜರ್ ಚಿಕನ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಟ್ರೈ ಮಾಡಿ ಕೇರಳ ಸ್ಟೈಲ್‌ನ ಟೇಸ್ಟಿ ಸ್ಕ್ವಿಡ್ ರೋಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಖತ್ ರುಚಿ ಈ ಚೆಟ್ಟಿನಾಡ್ ಆಲೂಗಡ್ಡೆ ಫ್ರೈ

    ಸಖತ್ ರುಚಿ ಈ ಚೆಟ್ಟಿನಾಡ್ ಆಲೂಗಡ್ಡೆ ಫ್ರೈ

    ಹಿಂದೆ ಚೆಟ್ಟಿನಾಡ್ ಚಿಕನ್ ರೆಸಿಪಿಯನ್ನು ನಾವು ಮಾಡೋದು ಹೇಗೆ ಎಂದು ಹೇಳಿಕೊಟ್ಟಿದ್ದೇವೆ. ಆದರೆ ಅದೇ ಚೆಟ್ಟಿನಾಡ್ ಮಸಾಲೆಯ ಸ್ವಾದವನ್ನು ನಾವಿಂದು ಸಸ್ಯಾಹಾರ ಸೇವಿಸುವವರಿಗಾಗಿಯೂ ಹೇಳಿಕೊಡಲಿದ್ದೇವೆ. ಚೆಟ್ಟಿನಾಡ್ ಆಲೂಗಡ್ಡೆ ಫ್ರೈ ಎಳೆಯ ಆಲೂಗಡ್ಡೆಯ ಮಸಾಲೆಯುಕ್ತ ರೋಸ್ಟ್ ಆಗಿದೆ. ಇದಕ್ಕೆ ಸೇರಿಸಲಾಗುವ ಮಸಾಲೆಯನ್ನು ಹುರಿದು ಪುಡಿಮಾಡಲಾಗುತ್ತದೆ. ಇದರ ಸುವಾಸನೆ ಅದ್ಭುತವಾಗಿದ್ದು, ಅತ್ಯಂತ ಫೇಮಸ್ ಕೂಡಾ ಆಗಿದೆ. ಚೆಟ್ಟಿನಾಡ್ ಆಲೂಗಡ್ಡೆ ಫ್ರೈ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಉದ್ದಿನ ಬೇಳೆ – ಎರಡೂವರೆ ಟೀಸ್ಪೂನ್
    ಒಣ ಕೆಂಪು ಮೆಣಸಿನಕಾಯಿ – 5
    ಕರಿಮೆಣಸು – 1 ಟೀಸ್ಪೂನ್
    ಕಡಲೆ ಬೇಳೆ – ಅರ್ಧ ಟೀಸ್ಪೂನ್
    ಜೀರಿಗೆ – ಕಾಲು ಟೀಸ್ಪೂನ್
    ಸಾಸಿವೆ – ಕಾಲು ಟೀಸ್ಪೂನ್
    ಹಿಂಗ್ – ಕಾಲು ಟೀಸ್ಪೂನ್
    ಸಣ್ಣಗೆ ಕೊಚ್ಚಿದ ಈರುಳ್ಳಿ – 2
    ಕರಿಬೇವಿನ ಎಲೆ – 2 ಚಿಗುರು
    ಬೇಯಿಸಿದ ಎಳೆಯ ಆಲೂಗಡ್ಡೆ – 15 ರಿಂದ 20
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಧಿಡೀರ್ ಅಂತಾ ಮಾಡಿ ರವಾ ಉತ್ತಪ್ಪ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ 2 ಟೀಸ್ಪೂನ್ ಉದ್ದಿನ ಬೇಳೆ, ಒಣ ಕೆಂಪು ಮೆಣಸಿನಕಾಯಿ, ಕರಿಮೆಣಸನ್ನು ಹಾಕಿ ಹುರಿದುಕೊಳ್ಳಿ.
    * ಬಳಿಕ ಅದನ್ನು ತಣ್ಣಗಾಗಿಸಿ, ಮಿಕ್ಸರ್ ಜಾರ್‌ಗೆ ಹಾಕಿ ಪುಡಿಮಾಡಿಕೊಳ್ಳಿ. ಇದೀಗ ಚೆಟ್ಟಿನಾಡ್ ಮಸಾಲಾ ಪುಡಿ ತಯಾರಾಗಿದೆ.
    * ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಕಡಲೆ ಬೇಳೆ, ಉಳಿದ ಅರ್ಧ ಟೀಸ್ಪೂನ್ ಉದ್ದಿನ ಬೇಳೆ, ಜೀರಿಗೆ, ಸಾಸಿವೆ ಹಾಗೂ ಹಿಂಗ್ ಹಾಕಿ ಸಿಡಿಸಿ.
    * ಬಳಿಕ ಈರುಳ್ಳಿ ಹಾಕಿ ಮೃದುವಾಗುವವರೆಗೆ ಹುರಿದುಕೊಳ್ಳಿ. ನಂತರ ಕರಿಬೇವಿನ ಸೊಪ್ಪು ಸೇರಿಸಿ.
    * ಈಗ ಬೇಯಿಸಿದ ಎಳೆಯ ಆಲೂಗಡ್ಡೆಯನ್ನು ಹಾಕಿ ಮಿಶ್ರಣ ಮಾಡಿ.
    * ಪುಡಿ ಮಾಡಿದ ಮಸಾಲೆ ಹಾಗೂ ಉಪ್ಪು ಸೇರಿಸಿ, ಮಿಶ್ರಣ ಮಾಡಿ, ಕೆಲ ನಿಮಿಷ ಬೇಯಿಸಿಕೊಳ್ಳಿ.
    * ಇದೀಗ ಚೆಟ್ಟಿನಾಡ್ ಆಲೂಗಡ್ಡೆ ಫ್ರೈ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಡಿಫರೆಂಟ್ ಸ್ವಾದದ ಹೆಲ್ತಿ ರೆಸಿಪಿ – ಕೊಕೊನಟ್, ಮಿಂಟ್ ರೈಸ್ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳಿಗೆ ಇಷ್ಟವಾಗೋ ಟೇಸ್ಟಿ ಕ್ಯಾರೆಟ್ ಕೇಕ್ ಮಾಡಿ

    ಮಕ್ಕಳಿಗೆ ಇಷ್ಟವಾಗೋ ಟೇಸ್ಟಿ ಕ್ಯಾರೆಟ್ ಕೇಕ್ ಮಾಡಿ

    ಕೇಕ್ ಎಂದರೆ ಎಲ್ಲಾ ಮಕ್ಕಳಿಗೂ ಇಷ್ಟ. ಬೇಕರಿಗಳಲ್ಲಿ ಸಿಗೋ ಈ ಸಿಹಿಯಾದ ತಿಂಡಿಗೆ ಮಕ್ಕಳು ಹಠ ಹಿಡಿಯೋದೂ ಸಹಜ. ನಾವಿಂದು ಈ ಮಕ್ಕಳಿಗಾಗಿ ಟೇಸ್ಟಿ ಕ್ಯಾರೆಟ್ ಕೇಕ್ ಅನ್ನು ಮನೆಯಲ್ಲೇ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಇದನ್ನು ಪ್ರತಿಯೊಬ್ಬರೂ ಮನೆಯಲ್ಲಿ ಟ್ರೈ ಮಾಡಿ, ಮಕ್ಕಳಿಗೆ ಸವಿಯಲು ನೀಡಿ.

    ಬೇಕಾಗುವ ಪದಾರ್ಥಗಳು:
    ತುರಿದ ಕ್ಯಾರೆಟ್ – 2 ಕಪ್
    ಕತ್ತರಿಸಿದ ಖರ್ಜೂರ – 2 ಕಪ್
    ಮೈದಾ – 2 ಕಪ್
    ಅಡುಗೆ ಸೋಡಾ – 1 ಟೀಸ್ಪೂನ್
    ಮೊಟ್ಟೆ – 3
    ಸಕ್ಕರೆ ಪುಡಿ – ಅರ್ಧ ಕಪ್
    ಜಾಯಿಕಾಯಿ ಪುಡಿ – 1 ಟೀಸ್ಪೂನ್
    ಎಣ್ಣೆ – 1 ಕಪ್
    ವೆನಿಲ್ಲಾ ಸಾರ – 1 ಟೀಸ್ಪೂನ್
    ಲವಂಗ, ದಾಲ್ಚಿನ್ನಿ ಮತ್ತು ಏಲಕ್ಕಿ ಪುಡಿ – 1 ಟೀಸ್ಪೂನ್
    ಬಾದಾಮಿ, ಪಿಸ್ತಾ, ವಾಲ್ನಟ್ – ಅರ್ಧ ಕಪ್ (ಐಚ್ಛಿಕ) ಇದನ್ನೂ ಓದಿ: ಮದ್ರಾಸ್ ಮಸಾಲಾ ಮಿಲ್ಕ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 160 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಬಿಸಿ ಮಾಡಿಕೊಳ್ಳಿ.
    * ಒಂದು ಮೊಟ್ಟೆಯನ್ನು ತೆಗೆದುಕೊಂಡು ಅದನ್ನು 2 ನಿಮಿಷಗಳ ಕಾಲ ಬೀಟ್ ಮಾಡಿಕೊಳ್ಳಿ. ಬಳಿಕ 3 ಮೊಟ್ಟೆಗಳನ್ನು ಅದಕ್ಕೆ ಸೇರಿಸಿ ಬೀಟ್ ಮಾಡಿ.
    * ಸಕ್ಕರೆ ಪುಡಿಯನ್ನು ಸೇರಿಸಿ ಮತ್ತು ನಯವಾಗುವತನಕ ಬೀಟ್ ಮಾಡಿ.
    * ಎಣ್ಣೆ, ತುರಿದ ಕ್ಯಾರೆಟ್, ಖರ್ಜೂರ ಮತ್ತು ಒಣ ಹಣ್ಣುಗಳನ್ನು ಸೇರಿಸಿ ಇನ್ನೆರಡು ನಿಮಿಷಗಳ ಕಾಲ ಬೀಟ್ ಮಾಡಿ.
    * ಅಡುಗೆ ಸೋಡಾ ಹಾಗೂ ಮೈದಾವನ್ನು ಶೋಧಿಸಿ. ವೆನಿಲ್ಲಾ ಸಾರ ಮತ್ತು ಪುಡಿ ಮಾಡಿದ ಮಸಾಲೆ ಸೇರಿಸಿ. ಇದನ್ನು ಮೊಟ್ಟೆಯ ಮಿಶ್ರಣಕ್ಕೆ ಸೇರಿಸಿ ಮತ್ತು ಒಂದು ನಿಮಿಷ ಬೀಟ್ ಮಾಡಿ.
    * ಮಿಶ್ರಣವನ್ನು ಗ್ರೀಸ್ ಮಾಡಿದ ಟ್ರೇಗೆ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 50 ನಿಮಿಷಗಳ ಕಾಲ ಓವನ್‌ನಲ್ಲಿ ಬೇಯಿಸಿ.
    * ಬಳಿಕ ಟೂತ್ ಪಿಕ್ ಬಳಸಿ ಕೇಕ್ ಬೆಂದಿದೆಯೇ ಎಂಬುದನ್ನು ಪರಿಶೀಲಿಸಿ.
    * ಇದೀಗ ಟೇಸ್ಟಿ ಕ್ಯಾರೆಟ್ ಕೇಕ್ ತಯಾರಾಗಿದ್ದು ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಧಿಡೀರ್ ಅಂತಾ ಮಾಡಿ ರವಾ ಉತ್ತಪ್ಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಂಗಿನ ಹಾಲು ಬಳಸಿ ಮಾಡೋ ಗೋವಾ ಸ್ಟೈಲ್‌ನ ಸಿಗಡಿ ಕರಿ ರೆಸಿಪಿ

    ತೆಂಗಿನ ಹಾಲು ಬಳಸಿ ಮಾಡೋ ಗೋವಾ ಸ್ಟೈಲ್‌ನ ಸಿಗಡಿ ಕರಿ ರೆಸಿಪಿ

    ಕರಿ ಗೋವಾದಲ್ಲಿ ತುಂಬಾ ಫೇಮಸ್ ಮಾತ್ರವಲ್ಲದೇ ಮಾಡೋದೂ ತುಂಬಾ ಸುಲಭವಾಗಿದೆ. ತೆಂಗಿನ ಹಾಲು ಬಳಸಿ ಸಿಗಡಿಯನ್ನು ಬೇಯಿಸಿ ಮಾಡಲಾಗುವ ಕರಿಯ ಸ್ವಾದವೇ ಅದ್ಭುತ ಎನಿಸುತ್ತದೆ. ಮೀನು ಖಾದ್ಯ ಪ್ರಿಯರು ಖಡಿತವಾಗಿಯೂ ಟ್ರೈ ಮಾಡಬೇಕಾದ ರೆಸಿಪಿ ಇದು. ಗೋವಾ ಸ್ಟೈಲ್‌ನ ಸಿಗಡಿ ಕರಿ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಸಿಗಡಿ – 500 ಗ್ರಾಂ
    ಅರಿಶಿನ – ಒಂದೂವರೆ ಟೀಸ್ಪೂನ್
    ಹೆಚ್ಚಿದ ಈರುಳ್ಳಿ – 1
    ಎಣ್ಣೆ – 1 ಟೀಸ್ಪೂನ್
    ತೆಂಗಿನ ತುರಿ – 1 ಕಪ್
    ಕೆಂಪು ಮೆಣಸಿನಕಾಯಿ – 5
    ಕೊತ್ತಂಬರಿ – 1 ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಕರಿಮೆಣಸು – 5
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಲವಂಗ – 4
    ವಿನೆಗರ್ – ಕಾಲು ಕಪ್
    ತೆಂಗಿನ ಹಾಲು – 1 ಕಪ್ ಇದನ್ನೂ ಓದಿ: ಟ್ರೈ ಮಾಡಿ ಕೇರಳ ಸ್ಟೈಲ್‌ನ ಟೇಸ್ಟಿ ಸ್ಕ್ವಿಡ್ ರೋಸ್ಟ್

    ಮಾಡುವ ವಿಧಾನ:
    * ಮೊದಲಿಗೆ ಸಿಗಡಿಗಳನ್ನು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಅರಿಶಿನದೊಂದಿಗೆ 15-20 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.
    * ಅರಿಶಿನ, ಕೆಂಪು ಮೆಣಸಿನಕಾಯಿ, ಜೀರಿಗೆ, ಕರಿಮೆಣಸು, ಲವಂಗ ಮತ್ತು ವಿನೆಗರ್ ಅನ್ನು ಮಿಕ್ಸರ್ ಜಾರ್‌ನಲ್ಲಿ ರುಬ್ಬಿ ಪಕ್ಕಕ್ಕಿಡಿ.
    * ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಜೀರಿಗೆ, ಕರಿಬೇವಿನ ಎಲೆಗಳು ಮತ್ತು ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಹುರಿಯಿರಿ.
    * ನಂತರ ಈರುಳ್ಳಿ ಸೇರಿಸಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
    * ರುಬ್ಬಿಕೊಂಡ ಮಸಾಲೆ ಹಾಗೂ ಸಿಗಡಿಯನ್ನು ಸೇರಿಸಿ, ಸೀಗಡಿಗಳು ಗುಲಾಬಿ ಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ.
    * ಬಳಿಕ ತೆಂಗಿನ ಹಾಲು ಮತ್ತು ತೆಂಗಿನ ತುರಿ ಸೇರಿಸಿ, ಹಾಲು ಕುದಿಯುವ ತನಕ ಬೇಯಿಸಿಕೊಳ್ಳಿ.
    * ಇದೀಗ ಗೋವಾ ಸ್ಟೈಲ್‌ನ ಸಿಗಡಿ ಕರಿ ತಯಾರಾಗಿದ್ದು, ಬಿಸಿ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ತಂದೂರಿ ಫಿಶ್ ಟಿಕ್ಕಾ ಮಾಡಿ ಸಂಡೇಯನ್ನು ಮಜವಾಗಿಸಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧಿಡೀರ್ ಅಂತಾ ಮಾಡಿ ರವಾ ಉತ್ತಪ್ಪ

    ಧಿಡೀರ್ ಅಂತಾ ಮಾಡಿ ರವಾ ಉತ್ತಪ್ಪ

    ವಾ ಉತ್ತಪ್ಪ ಎಂಬುದು ಭಾರತೀಯ ಖಾದ್ಯಗಳಲ್ಲಿ ಒಂದಾಗಿದ್ದು, ಅಕ್ಕಿ ಮತ್ತು ಮೊಸರಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಮತ್ತು ಪ್ರೋಟಿನ್‌ನ ಅಂಶಗಳಿದ್ದು, ಇದನ್ನು ಸೇವಿಸುವುದರಿಂದ ನಮ್ಮ ಶಕ್ತಿಯು ಹೆಚ್ಚುತ್ತದೆ. ಇದನ್ನು ಬಹು ಸುಲಭವಾಗಿ ತಯಾರಿಸಬಹುದಾಗಿದೆ. ಇದರಲ್ಲಿ ತರಕಾರಿಗಳನ್ನು ಹಾಕುವುದರಿಂದ ಹೆಚ್ಚಿನ ರುಚಿಯನ್ನು ಒದಗಿಸುವುದಲ್ಲದೇ ಮಕ್ಕಳು ಕೂಡಾ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಹಾಗಿದ್ರೆ ಇದನ್ನು ಯಾವ ರೀತಿಯಾಗಿ ಮಾಡಬಹುದು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಇದನ್ನೂ ಓದಿ: ಡಿಫರೆಂಟ್ ಸ್ವಾದದ ಹೆಲ್ತಿ ರೆಸಿಪಿ – ಕೊಕೊನಟ್, ಮಿಂಟ್ ರೈಸ್ ಮಾಡಿ

    ಬೇಕಾಗುವ ಸಾಮಗ್ರಿಗಳು:
    ಚಿರೋಟಿ ರವೆ – 1 ಕಪ್
    ಮೊಸರು – ಅರ್ಧ ಕಪ್
    ನೀರು – ಅಗತ್ಯಕ್ಕೆ ತಕ್ಕಷ್ಟು
    ಉಪ್ಪು – ರುಚಿಗೆ ತಕ್ಕಷ್ಟು
    ಕೊತ್ತಂಬರಿ ಸೊಪ್ಪು – ಸ್ವಲ್ಪ
    ಕರಿಬೇವು – 10 ಎಲೆ
    ಸೋಡಾ ಪೌಡರ್ – ಒಂದು ಚಿಟಿಕೆ
    ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ಅಚ್ಚಖಾರದ ಪುಡಿ – ಅರ್ಧ ಚಮಚ
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಟೊಮೆಟೊ – 1
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಬೌಲ್‌ಗೆ ರವೆ ಹಾಕಿಕೊಂಡು ಅದಕ್ಕೆ ಮೊಸರು, ಸೋಡಾ ಮತ್ತು ಉಪ್ಪನ್ನು ಹಾಕಿಕೊಂಡು ಚನ್ನಾಗಿ ಕಲಸಿಕೊಳ್ಳಿ.
    * ಈಗ ಇದಕ್ಕೆ ಅರ್ಧ ಕಪ್ ನೀರನ್ನು ಹಾಕಿಕೊಳ್ಳಬೇಕು. ಬಳಿಕ ಹಿಟ್ಟು ತುಂಬಾ ದಪ್ಪ ಎನಿಸಿದರೆ ಸ್ವಲ್ಪ ಜಾಸ್ತಿ ನೀರನ್ನು ಹಾಕಿಕೊಳ್ಳಿ. ಈ ಹಿಟ್ಟು ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು.
    * ಬಳಿಕ ಈ ಮಿಶ್ರಣವನ್ನು ಅರ್ಧ ಗಂಟೆ ಹಾಗೆಯೇ ಬಿಡಿ. ಬೇಗ ಮಾಡಬೇಕು ಎನ್ನುವವರು 10 ನಿಮಿಷಗಳ ಕಾಲ ಬಿಟ್ಟರೆ ಸಾಕು.
    * ನಂತರ ಈ ಮಿಶ್ರಣಕ್ಕೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ, ಹಸಿಮೆಣಸಿನ ಕಾಯಿ, ಕರಿಬೇವು, ಅಚ್ಚಖಾರದ ಪುಡಿ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಬಳಿಕ ಗ್ಯಾಸ್‌ ಸ್ಟವ್‌ನಲ್ಲಿ ಪ್ಯಾನ್ ಬಿಸಿಗಿಟ್ಟು, ಬಿಸಿಯಾದ ಬಳಿಕ ದೋಸೆಯ ರೀತಿಯಲ್ಲಿ ಹುಯ್ಯಿರಿ. ಇದನ್ನು 3-4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಮತ್ತೊಮ್ಮೆ ಇದನ್ನು ತಿರುವಿ ಹಾಕಿಕೊಂಡು 2 ನಿಮಿಷಗಳ ಬೇಯಿಸಿಕೊಳ್ಳಿ. ಬೇಯಿಸಿಕೊಳ್ಳಬೇಕಾದರೇ ಎರಡೂ ಬದಿ ಸ್ವಲ್ಪ ಎಣ್ಣೆಯನ್ನು ಹಾಕಿಕೊಳ್ಳಿ.
    *ಇದನ್ನು ಒಂದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಚಟ್ನಿಯೊಂದಿಗೆ ಸವಿಯಲು ಕೊಡಿ. ಇದನ್ನೂ ಓದಿ: ಮದ್ರಾಸ್ ಮಸಾಲಾ ಮಿಲ್ಕ್ ರೆಸಿಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿಫರೆಂಟ್ ಸ್ವಾದದ ಹೆಲ್ತಿ ರೆಸಿಪಿ – ಕೊಕೊನಟ್, ಮಿಂಟ್ ರೈಸ್ ಮಾಡಿ

    ಡಿಫರೆಂಟ್ ಸ್ವಾದದ ಹೆಲ್ತಿ ರೆಸಿಪಿ – ಕೊಕೊನಟ್, ಮಿಂಟ್ ರೈಸ್ ಮಾಡಿ

    ಸುಲಭದಲ್ಲಿ ಮಾಡಬಹುದಾದ ಉಪಾಹಾರ ಅಥವಾ ಊಟಕ್ಕೆ ಪರ್ಫೆಕ್ಟ್ ಎನಿಸೋ ರೈಸ್ ಐಟಮ್ ಲಿಸ್ಟ್‌ನಲ್ಲಿ ಹಲವು ರೆಸಿಪಿಗಳಿವೆ. ಚಿತ್ರಾನ್ನ, ಪಲಾವು, ರೈಸ್‌ಬಾತ್ ಎಲ್ಲಾ ಬದಿಗಿಟ್ಟು ಏನಾದ್ರೂ ಹೊಸದಾಗಿ ಟ್ರೈ ಮಾಡ್ಬೇಕು ಎನಿಸಿದ್ರೆ ನಾವಿಂದು ಹೇಳಿಕೊಡುತ್ತಿರೋ ಕೊಕೊನಟ್ ಮಿಂಟ್ ರೈಸ್ ನೀವು ಟ್ರೈ ಮಾಡ್ಲೇ ಬೇಕು. ಯಾವಾಗ್ಲೂ ಒಂದೇ ರೀತಿಯ ರೈಸ್ ಐಟಮ್‌ಗಳನ್ನು ಮಾಡೋ ಬದ್ಲು ಈ ರೀತಿ ಡಿಫರೆಂಟ್ ರೆಸಿಪಿಗಳನ್ನೂ ಮನೆಯಲ್ಲಿ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಅಕ್ಕಿ – 1 ಕಪ್
    ಪುದೀನಾ – ಅರ್ಧ ಕಪ್
    ಹಸಿರು ಮೆಣಸಿನಕಾಯಿ – 2
    ಶುಂಠಿ – 3 ತುಂಡು
    ಬೆಳ್ಳುಳ್ಳಿ – 1 ಗಡ್ಡೆ
    ಕೊತ್ತಂಬರಿ ಸೊಪ್ಪು – ಅರ್ಧ ಕಪ್
    ಎಣ್ಣೆ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ತೆಂಗಿನ ತುರಿ – ಕಾಲು ಕಪ್
    ಚಕ್ರಿ ಹೂವು – 1
    ಜೀರಿಗೆ – ಅರ್ಧ ಟೀಸ್ಪೂನ್
    ಲವಂಗ – 6
    ಏಲಕ್ಕಿ – 4
    ದಾಲ್ಚಿನ್ನಿ – 2
    ಗೋಡಂಬಿ ಬೀಜಗಳು – 2 ಟೀಸ್ಪೂನ್ ಇದನ್ನೂ ಓದಿ: ಮದ್ರಾಸ್ ಮಸಾಲಾ ಮಿಲ್ಕ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಅಕ್ಕಿಯನ್ನು ತೊಳೆದು 15 ನಿಮಿಷ ನೀರಲ್ಲಿ ನೆನೆಸಿಡಿ.
    * ಪುದೀನಾ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ತೆಂಗಿನ ತುರಿಯನ್ನು ಮಿಕ್ಸರ್ ಜಾರ್‌ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ.
    * ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಚಕ್ರಿ ಹೂವು, ಜೀರಿಗೆ, ಲವಂಗ, ಏಲಕ್ಕಿ, ದಾಲ್ಚಿನ್ನಿ ಹಾಕಿ ಹುರಿದುಕೊಳ್ಳಿ.
    * ಬಳಿಕ ಅದಕ್ಕೆ ರುಬ್ಬಿದ ಪೇಸ್ಟ್ ಅನ್ನು ಸೇರಿಸಿ, 2-3 ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಈಗ ಅದಕ್ಕೆ ನೀರು ಸೇರಿಸಿ, ಕುದಿಸಿ.
    * ಬಳಿಕ ಅಕ್ಕಿ ಸೇರಿಸಿ, ಬಹುತೇಕ ನೀರು ಆವಿಯಾಗುವವರೆಗೆ ಕುದಿಸಿಕೊಳ್ಳಿ.
    * ಅಕ್ಕಿಯಲ್ಲಿ ಸ್ವಲ್ಪ ನೀರು ಉಳಿದಾಗ ಕುಕ್ಕರ್ ಮುಚ್ಚಳ ಮುಚ್ಚಿ, 5 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ. ನಂತರ ಉರಿಯನ್ನು ಆಫ್ ಮಾಡಿ. (ಸೀಟಿ ಹೊಡೆಯಲು ಬಿಡಬೇಡಿ)
    * ಕೊನೆಯಲ್ಲಿ ಪುದೀನಾ ಹಾಗೂ ಗೋಡಂಬಿಯಿಂದ ಅಲಂಕರಿಸಿದರೆ ಕೊಕೊನಟ್, ಮಿಂಟ್ ರೈಸ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಬಾಳೆಕಾಯಿಯ ಸಿಪ್ಪೆಯಿಂದ ಮಾಡ್ಬೋದು ರುಚಿಕರ ಚಟ್ನಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ರಾಸ್ ಮಸಾಲಾ ಮಿಲ್ಕ್ ರೆಸಿಪಿ

    ಮದ್ರಾಸ್ ಮಸಾಲಾ ಮಿಲ್ಕ್ ರೆಸಿಪಿ

    ಮಿಳು ಜನರಿಗೆ ಅದ್ರಲ್ಲೂ ಮುಖ್ಯವಾಗಿ ಚೆನ್ನೈಯವರಿಗೆ ಮಸಾಲಾ ಪಾಲ್ ಬಗ್ಗೆ ಹೇಳಬೇಕೆಂದೇ ಇಲ್ಲ. ಹಾಲಿಗೆ ಒಣ ಬೀಜ ಹಾಗೂ ಮಸಾಲೆ ಪದಾರ್ಥಗಳನ್ನು ಸೇರಿಸಿ ಪರಿಮಳಯುಕ್ತವಾಗಿ ಮಾಡೋ ಈ ರೆಸಿಪಿ ಅದ್ಭುತ ಸ್ವಾದ ಹೊಂದಿದೆ. ಚೆನ್ನೈನಲ್ಲಿ ಅತ್ಯಂತ ಪ್ರಸಿದ್ಧವಾಗಿರೋ ಈ ಮಸಾಲಾ ಮಿಲ್ಕ್ ಅನ್ನು ಮದ್ರಾಸ್ ಮಸಾಲಾ ಪಾಲ್ ಎಂದೂ ಕರೆಯಲಾಗುತ್ತೆ. ಸಖತ್ ರುಚಿಯಾದ ಮದ್ರಾಸ್ ಮಸಾಲಾ ಮಿಲ್ಕ್ ಮಾಡೋದು ಹೇಗೆಂದು ನಾವಿಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಹಾಲು – ಅರ್ಧ ಲೀಟರ್
    ಸಕ್ಕರೆ – ಎರಡೂವರೆ ಟೀಸ್ಪೂನ್
    ಬಾದಾಮಿ – 10
    ಲವಂಗ – 2
    ದಾಲ್ಚಿನ್ನಿ – 1 ಇಂಚು
    ಪುಡಿ ಮಾಡಿದ ಏಲಕ್ಕಿ – 2
    ಜಾತಿಕಾಯಿ ಪುಡಿ – ಚಿಟಿಕೆ (ಐಚ್ಛಿಕ)
    ಮೆಣಸಿನ ಪುಡಿ – ಚಿಟಿಕೆ
    ಕೇಸರಿ ಎಳೆ – ಕೆಲವು
    ಒಣ ಕಲ್ಲಂಗಡಿ ಬೀಜ – 2 ಟೀಸ್ಪೂನ್ ಇದನ್ನೂ ಓದಿ: ರಕ್ತಹೀನತೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಜ್ಯೂಸ್ ಕುಡಿಯಿರಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಬಿಸಿ ಮಾಡಿ, ಅದರಲ್ಲಿ ಬಾದಾಮಿಯನ್ನು ಹಾಕಿ 1 ನಿಮಿಷ ಕುದಿಸಿಕೊಳ್ಳಿ.
    * ಬಿಸಿ ನೀರನ್ನು ಬಸಿದು, ತಕ್ಷಣವೇ ಬಾದಾಮಿಯನ್ನು ತಣ್ಣಗಿನ ನೀರಿನಲ್ಲಿ ಹಾಕಿ. ಈಗ ಬಾದಾಮಿಯ ಸಿಪ್ಪೆಯನ್ನು ಬೇರ್ಪಡಿಸಿ.
    * ಮಿಕ್ಸರ್ ಜಾರ್‌ಗೆ ಬಾದಾಮಿಗಳನ್ನು ಹಾಕಿ, ಸ್ವಲ್ಪ ನೀರು ಸೇರಿಸಿ ನಯವಾದ ಪೇಸ್ಟ್ ಆಗುವವರೆಗೆ ರುಬ್ಬಿಕೊಳ್ಳಿ.
    * ಈಗ ಹಾಲನ್ನು ಬಿಸಿಗೆ ಇಟ್ಟು, ಅದಕ್ಕೆ ದಾಲ್ಚಿನ್ನಿ, ಲವಂಗ, ಏಲಕ್ಕಿ, ಕೇಸರಿ ಎಳೆಗಳು ಮತ್ತು ಜಾಯಿಕಾಯಿ ಪುಡಿಹಾಕಿ.
    * ಹಾಲು ಕುದಿಯಲಾರಂಭಿಸಿದಾಗ ಸಕ್ಕರೆ ಹಾಗೂ ಬಾದಾಮಿ ಪೇಸ್ಟ್ ಅನ್ನು ಸೇರಿಸಿ ಮಧ್ಯಮ ಉರಿಯಲ್ಲಿ 15-20 ನಿಮಿಷಗಳ ವರೆಗೆ ಹಾಗೂ ಹಾಲಿನ ಪ್ರಮಾಣ ಅರ್ಧದಷ್ಟು ಆಗುವವರೆಗೆ ಚೆನ್ನಾಗಿ ಕುದಿಸಿ. ತಳ ಹಿಡಿಯದಂತೆ ತಪ್ಪಿಸಲು ಆಗಾಗ ಬೆರೆಸುತ್ತಿರಿ.
    * ಕೊನೆಯಲ್ಲಿ ಉರಿಯನ್ನು ಆಫ್ ಮಾಡುವುದಕ್ಕೂ ಮೊದಲು ಚಿಟಿಕೆ ಕಾಳು ಮೆಣಸಿನಪುಡಿ ಹಾಗೂ ಒಣ ಕಲ್ಲಂಗಡಿ ಬೀಜವನ್ನು ಸೇರಿಸಿ. ನಂತರ ಅದನ್ನು ಚೆನ್ನಾಗಿ ಬೆರೆಸಿ.
    * ಮಸಾಲಾ ಮಿಲ್ಕ್ ಅನ್ನು ಬಡಿಸುವುದಕ್ಕೂ ಮೊದಲು ಮಸಾಲೆ ಪದಾರ್ಥಗಳನ್ನು ಅದರಿಂದ ತೆಗೆದು ಹಾಕಿ. ನಂತರ ಬಿಸಿಬಿಸಿಯಾಗಿ ಆನಂದಿಸಿ. ಇದನ್ನೂ ಓದಿ: ನೆಗಡಿ, ಕೆಮ್ಮು ಕಡಿಮೆ ಮಾಡುತ್ತೆ ಶುಂಠಿ ಬೆಳ್ಳುಳ್ಳಿ ಸೂಪ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ರೈ ಮಾಡಿ ಕೇರಳ ಸ್ಟೈಲ್‌ನ ಟೇಸ್ಟಿ ಸ್ಕ್ವಿಡ್ ರೋಸ್ಟ್

    ಟ್ರೈ ಮಾಡಿ ಕೇರಳ ಸ್ಟೈಲ್‌ನ ಟೇಸ್ಟಿ ಸ್ಕ್ವಿಡ್ ರೋಸ್ಟ್

    ಸ್ಕ್ವಿಡ್ ರೋಸ್ಟ್ ಹೆಸರು ಕೇಳಿದ್ರೇನೇ ಮೀನು ಖಾದ್ಯ ಪ್ರಿಯರ ಬಾಯಲ್ಲಿ ನೀರು ಬರದೇ ಇರಲಾರದು. ಕರ್ನಾಟಕ ಕರಾವಳಿ ಭಾಗದಲ್ಲಿ ಬೊಂಡಾಸ್ ಎಂದೇ ಫೇಮಸ್ ಈ ಮೀನು. ಬೊಂಡಾಸ್ ಸುಕ್ಕ, ಬೊಂಡಾಸ್ ಚಿಲ್ಲಿ ಸೇರಿದಂತೆ ಹಲವು ರೆಸಿಪಿಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಇಂದು ನಾವು ಕೇರಳ ಸ್ಟೈಲ್‌ನಲ್ಲಿ ಸ್ಕ್ವಿಡ್ ರೋಸ್ಟ್ ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇವೆ.

    ಬೇಕಾಗುವ ಪದಾರ್ಥಗಳು:
    ಸ್ಕ್ವಿಡ್ – 1 ಕೆಜಿ
    ಈರುಳ್ಳಿ – 2
    ಹಸಿರು ಮೆಣಸಿನಕಾಯಿ – 3
    ಟೊಮೆಟೊ – 2
    ಕರಿಬೇವಿನ ಎಲೆ – ಕೆಲ ಚಿಗುರು
    ಶುಂಠಿ – ಒಂದೆರಡು ಇಂಚು
    ಬೆಳ್ಳುಳ್ಳಿ – 5
    ಹುಣಿಸೆ ಹುಳಿ ರಸ – 2 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಒಂದೂವರೆ ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಗರಂ ಮಸಾಲೆ ಪುಡಿ – 1 ಟೀಸ್ಪೂನ್
    ಅರಿಶಿನ ಪುಡಿ – 1 ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ಮಟನ್ ಕೋಫ್ತಾ ಕರಿ ರೆಸಿಪಿ ನಿಮಗಾಗಿ

    ಮಾಡುವ ವಿಧಾನ:
    * ಮೊದಲಿಗೆ ಸ್ಕ್ವಿಗಳನ್ನು ಸ್ವಚ್ಛಗೊಳಿಸಿ ಉಂಗುರಾಕಾರದಲ್ಲಿ ಕತ್ತರಿಸಿ ಪಕ್ಕಕ್ಕಿಡಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ ಮತ್ತು ಸಾಸಿವೆ ಸೇರಿಸಿ ಸಿಡಿಸಿ.
    * ಬಳಿಕ ಕೊಚ್ಚಿದ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಬೆರೆಸಿ.
    * ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಉಪ್ಪು, ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ, ನಂತರ 3-4 ನಿಮಿಷಗಳ ಕಾಲ ಬೆರೆಸಿ.
    * ಪದಾರ್ಥಗಳು ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಗರಂ ಮಸಾಲೆ ಪುಡಿ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಸೇರಿಸಿ ಮತ್ತು ಕೆಲವು ನಿಮಿಷಗಳ ಕಾಲ ಹುರಿದುಕೊಳ್ಳಿ.
    * ಹೆಚ್ಚಿದ ಟೊಮೆಟೊ ಸೇರಿಸಿ ಮೃದುವಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಸ್ಕ್ವಿಡ್ ಅನ್ನು ಸೇರಿಸಿ ಮಿಶ್ರಣ ಮಾಡಿ, ನಂತರ ಮುಚ್ಚಳ ಮುಚ್ಚಿ ಬೇಯಿಸಿ.
    * ಬಳಿಕ ಮುಚ್ಚಳ ತೆಗೆದು ಮಿಶ್ರಣ ಮಾಡಿ.
    * ಇದೀಗ ಕೇರಳ ಶೈಲಿಯ ಸ್ಕ್ವಿಡ್ ರೋಸ್ಟ್ ತಯಾರಾಗಿದ್ದು, ಇದನ್ನು ದಾಲ್, ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ಸುಲಭವಾಗಿ ‘ಆಲೂ ಚಿಕನ್ ಕಬಾಬ್’ ಮಾಡುವುದು ಹೇಗೆ? ನೋಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]