Tag: recipe

  • ಸಖತ್ ಕ್ರಂಚಿ ಟೋಫು ನಗ್ಗೆಟ್ಸ್ ರೆಸಿಪಿ

    ಸಖತ್ ಕ್ರಂಚಿ ಟೋಫು ನಗ್ಗೆಟ್ಸ್ ರೆಸಿಪಿ

    ಗ್ಗೆಟ್ಸ್ ಮಕ್ಕಳ ಇತ್ತೀಚಿನ ಫೇವರಿಟ್ ಖಾದ್ಯಗಳಲ್ಲೊಂದು. ಸಾಮಾನ್ಯವಾಗಿ ಆಲೂಗಡ್ಡೆ ಅಥವಾ ಪನೀರ್ ಬಳಸಿ ಸುಲಭವಾಗಿ ಈ ನಗ್ಗೆಟ್ಸ್‌ಗಳನ್ನು ಮಾಡಬಹುದು. ನಾವಿಂದು ಟೋಫು ಬಳಸಿ ಕ್ರಂಚಿ ನಗ್ಗೆಟ್ಸ್ ಮಾಡೋದು ಹೇಗೆಂದು ಹೇಳಿಕೊಡುತ್ತಿದ್ದೇವೆ. ಇಲ್ಲಿ ಟೋಫುಗಳನ್ನು ಆವನ್‌ನಲ್ಲಿ ಬೇಯಿಸಲಾಗಿದ್ದು, ಇದನ್ನು ಗರಿಗರಿಯಾಗಿ ಮಾಡಲು ಆಲೂಗಡ್ಡೆ ಚಿಪ್ಸ್ ಬಳಸಲಾಗಿದೆ. ಇದರ ಬದಲು ಕಾರ್ನ್‌ಫ್ಲೇಕ್ಸ್ ಸಹ ಬಳಸಬಹುದು. ಕ್ರಂಚಿ ಟೋಫು ನಗ್ಗೆಟ್ಸ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಟೋಫು – 300 ಗ್ರಾಂ
    ಮೆಯೋನೀಸ್ – ಕಾಲು ಕಪ್
    ಬೆಳ್ಳುಳ್ಳಿ ಪುಡಿ – ಕಾಲು ಟೀಸ್ಪೂನ್
    ಈರುಳ್ಳಿ ಪುಡಿ – ಕಾಲು ಟೀಸ್ಪೂನ್
    ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಆಲೂಗಡ್ಡೆ ಚಿಪ್ಸ್ – 1 ಕಪ್ ಇದನ್ನೂ ಓದಿ: ಮೂರೇ ಪದಾರ್ಥ ಬಳಸಿ ಮಾಡಿ ಹೆಲ್ತಿ ಓಟ್ಸ್ ಬಾರ್

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 375 ಡಿಗ್ರಿ ಪ್ಯಾರಾಹೀಟ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
    * ಟೋಫುವಿನಿಂದ ಹೆಚ್ಚುವರಿ ನೀರಿನಂಶ ತೆಗೆಯಿರಿ. ಇದಕ್ಕಾಗಿ ಒಂದು ಸ್ವಚ್ಛ ಬಟ್ಟೆ ತೆಗೆದುಕೊಂಡು ಅದರಲ್ಲಿ ಟೋಫುವನ್ನು ಸುತ್ತಿ, ಅದರ ಮೇಲೆ ಭಾರವಾದ ವಸ್ತುವನ್ನು ಇಟ್ಟು, ಸುಮಾರು ಅರ್ಧ ಗಂಟೆ ಹಾಗೆಯೇ ಬಿಡಿ.
    * ಬಳಿಕ ಟೋಫುವನ್ನು ಸಣ್ಣ ಸಣ್ಣ ಘನಾಕಾರವಾಗಿ ಕತ್ತರಿಸಿಕೊಳ್ಳಿ.
    * ಈಗ ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ಮೆಯೋನೀಸ್, ಬೆಳ್ಳುಳ್ಳಿ ಪುಡಿ, ಈರುಳ್ಳಿ ಪುಡಿ, ಉಪ್ಪು ಹಾಗೂ ಕರಿಮೆಣಸಿನಪುಡಿ ಹಾಕಿ ಮಿಶ್ರಣ ಮಾಡಿ ಪಕ್ಕಕ್ಕಿಡಿ
    * ಈಗ ಆಲೂಗಡ್ಡೆ ಚಿಪ್ಸ್ ಅನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ಲಟ್ಟಣಿಗೆಯಿಂದ ಅರನ್ನು ರೋಲ್ ಮಾಡಿ ಒರಟಾಗಿ ಪುಡಿ ಮಾಡಿಕೊಳ್ಳಿ. ಬಳಿಕ ಅದನ್ನು ಒಂದು ತಟ್ಟೆಗೆ ವರ್ಗಾಯಿಸಿ.
    * ಈಗ ಟೋಫುಗಳನ್ನು ಮೆಯೋನೀಸ್ ಮಿಶ್ರಣದಲ್ಲಿ ಅದ್ದಿ, ಚೆನ್ನಾಗಿ ಲೇಪನವಾಗುವಂತೆ ಮಿಶ್ರಣ ಮಾಡಿ.
    * ಈಗ ಒಂದೊಂದೇ ಟೋಫುವನ್ನು ಆಲೂಗಡ್ಡೆ ಚಿಪ್ಸ್ ಪುಡಿಯಲ್ಲಿ ಹಾಕಿ ಸುತ್ತಲೂ ಕೋಟ್ ಆಗುವಂತೆ ಒತ್ತಿಕೊಳ್ಳಿ. ನಂತರ ಅದನ್ನು ಬೇಕಿಂಗ್ ಟ್ರೇಯಲ್ಲಿ ಜೋಡಿಸಿ. ಉಳಿದ ಟೋಫುಗಳನ್ನೂ ಹೀಗೇ ಮಾಡುವುದನ್ನು ಮುಂದುವರಿಸಿ.
    * ಈಗ ಓವನ್‌ನಲ್ಲಿ ಅದನ್ನಿಟ್ಟು ಸುಮಾರು 20-25 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಡುವೆ ಒಂದು ಬಾರಿ ಅದನ್ನು ಹೊರ ತೆಗೆದು ಮಗುಚಿ ಹಾಕಿ ಬೇಯಿಸಿಕೊಳ್ಳಿ.
    * ಇದೀಗ ಕ್ರಂಚಿ ಟೋಫು ನಗ್ಗೆಟ್ಸ್ ತಯಾರಾಗಿದ್ದು, ಸವಿಯುದಕ್ಕೂ ಮುನ್ನ 10 ನಿಮಿಷ ಆರಲು ಬಿಡಿ. ಹಾಗೂ ನಿಮ್ಮಿಷ್ಟದ ಸಾಸ್‌ನೊಂದಿಗೆ ಆನಂದಿಸಿ. ಇದನ್ನೂ ಓದಿ: ಮೊಟ್ಟೆ ಬಳಸದೇ ಟೇಸ್ಟಿ ಡೋನಟ್ ಹೀಗೆ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊಘಲ್ ಸ್ಟೈಲ್‌ನ ಮಟನ್ ಕಡೈ ಚಪ್ಪರಿಸಿ ನೋಡಿ

    ಮೊಘಲ್ ಸ್ಟೈಲ್‌ನ ಮಟನ್ ಕಡೈ ಚಪ್ಪರಿಸಿ ನೋಡಿ

    ನಾವಿಂದು ಹೇಳಿಕೊಡುತ್ತಿರುವ ರೆಸಿಪಿ ನಾನ್ ವೆಜ್ ಪ್ರಿಯರಿಗಾಗಿ. ಅದರಲ್ಲೂ ಹೆಚ್ಚಾಗಿ ಮಟನ್ ಪ್ರಿಯರಿಗಾಗಿ. ಮಟನ್ ಬಳಸಿ ಯಾವಾಗಲೂ ಒಂದೇ ರೀತಿಯ ಖಾದ್ಯ ಇಲ್ಲವೇ ಗ್ರೇವಿ ಮಾಡಿ ಬೋರ್ ಎನಿಸಿದ್ದರೆ ಒಮ್ಮೆ ಮಟನ್ ಕಡೈ ಟ್ರೈ ಮಾಡಿ ನೋಡಿ. ವಿಶೇಷ ಎಂದರೆ ಇದು ಮೊಘಲ್ ಶೈಲಿಯದ್ದಾಗಿದೆ. ಸಖತ್ ರುಚಿಯಾದ ಮಟನ್ ಕಡೈಯನ್ನು ಪ್ರತಿಯೊಬ್ಬರೂ ಚಪ್ಪರಿಸಿ ಸವಿಯುತ್ತಾರೆ. ಮಟನ್ ಕಡೈ ಮಾಡೋ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಮಟನ್ – 500 ಗ್ರಾಂ
    ಹೆಚ್ಚಿದ ಈರುಳ್ಳಿ – 4
    ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 3
    ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 10
    ಸಣ್ಣಗೆ ಹೆಚ್ಚಿದ ಟೊಮೆಟೋ – 3
    ಅನಾರ್ದನ ಪುಡಿ – 2 ಟೀಸ್ಪೂನ್
    ಮೊಸರು – 100 ಗ್ರಾಂ
    ಅರಿಶಿನ ಪುಡಿ – 1 ಟೀಸ್ಪೂನ್
    ಮೆಣಸಿನ ಪುಡಿ – 1 ಟೀಸ್ಪೂನ್
    ಕರಿಮೆಣಸಿನ ಪುಡಿ – 1 ಟೀಸ್ಪೂನ್
    ದಾಲ್ಚಿನ್ನಿ ಎಲೆ – 1
    ಜೀರಿಗೆ – 1 ಟೀಸ್ಪೂನ್
    ಗರಂ ಮಸಾಲೆ ಪುಡಿ – 1 ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಈರುಳ್ಳಿ, ಟೊಮೆಟೋ ಯಾವ್ದೂ ಬೇಡ – ಹೀಗೆ ಮಾಡಿ ರುಚಿಕರ ಚಿಕನ್ ಫ್ರೈ

    ಮಾಡುವ ವಿಧಾನ:
    * ಮೊದಲಿಗೆ ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ, ದಾಲ್ಚಿನ್ನಿ ಎಲೆ, ಜೀರಿಗೆ ಸೇರಿಸಿ, ಅದು ಸಿಡಿದ ಬಳಿಕ ಮಟನ್ ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ.
    * ಬಳಿಕ ಈರುಳ್ಳಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಟೊಮೆಟೋ ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ.
    * ಉಳಿದ ಮಸಾಲೆ ಪುಡಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
    * ಈಗ ಕುಕ್ಕರ್ ಮುಚ್ಚಳ ಮುಚ್ಚಿ, 5-7 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
    * ಹಬೆ ತಣಿದ ಬಳಿಕ ಜಾಗರೂಕತೆಯಿಂದ ಮುಚ್ಚಳ ತೆಗೆದು ಮಿಶ್ರಣವನ್ನು ಕಡೈಗೆ ವರ್ಗಾಯಿಸಿ ಮಧ್ಯಮ ಉರಿಯಲ್ಲಿ ಬೇಯಿಸಿ.
    * ಬಳಿಕ ಅನಾರ್ದನ ಹಾಗೂ ಮೊಸರು ಸೇರಿಸಿ ಬೆರೆಸಿಕೊಳ್ಳಿ.
    * ಎಣ್ಣೆ ಬೇರ್ಪಡುವವರೆಗೆ ಸುಮಾರು 20-25 ನಿಮಿಷ ಬೇಯಿಸಿಕೊಳ್ಳಿ.
    * ಇದೀಗ ಮೊಘಲ್ ಸ್ಟೈಲ್‌ನ ಮಟನ್ ಕಡೈ ತಯಾರಾಗಿದ್ದು, ರೋಟಿ, ಅನ್ನದೊಂದಿಗೆ ಚಪ್ಪರಿಸಿ. ಇದನ್ನೂ ಓದಿ: ಏರ್ ಫ್ರೈಯರ್‌ನಲ್ಲಿ ಮಾಡಿ ಟೇಸ್ಟಿ ಕೋಕನಟ್ ಸಿಗಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸವಿಯಿರಿ ಆರೋಗ್ಯಕರ ಬಾಳೆಹಣ್ಣಿನ ಖೀರ್

    ಸವಿಯಿರಿ ಆರೋಗ್ಯಕರ ಬಾಳೆಹಣ್ಣಿನ ಖೀರ್

    ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ, ಪೊಟ್ಯಾಸಿಯಂ, ಕಬ್ಬಿನಾಂಶ ಮುಂತಾದ ಪೌಷ್ಟಿಕಾಂಶಗಳಿದ್ದು, ದಿನನಿತ್ಯದ ಆಹಾರದಲ್ಲಿ ಬಾಳೆಹಣ್ಣನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇಂದು ಬಾಳೆಹಣ್ಣಿನ ಖೀರ್ ಯಾವ ರೀತಿ ತಯಾರಿಸಬಹುದು ಎಂಬುದರ ಕುರಿತು ನಾವು ನಿಮಗೆ ತಿಳಿಸಿಕೊಡುತ್ತೇವೆ. ಹಾಗಿದ್ರೆ ಬಾಳೆಹಣ್ಣಿನ ಖೀರ್ ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಮನೆಯಲ್ಲೇ ಮಾಡಿ ಸಿಂಪಲ್ ಮೆಕ್ಸಿಕನ್ ರೈಸ್

    ಬೇಕಾಗುವ ಸಾಮಗ್ರಿಗಳು:
    ಹಾಲು – 2 ಕಪ್
    ಕಿವುಚಿದ ಬಾಳೆಹಣ್ಣು – 1 ಕಪ್
    ಹೆಚ್ಚಿದ ಬಾಳೆಹಣ್ಣು – ಸ್ವಲ್ಪ
    ಏಲಕ್ಕಿ ಪೌಡರ್ – ಅರ್ಧ ಚಮಚ
    ಕೇಸರಿ – ಸ್ವಲ್ಪ
    ಬೆಲ್ಲದ ಪೌಡರ್ – ರುಚಿಗೆ ತಕ್ಕಷ್ಟು
    ಹೆಚ್ಚಿದ ನಟ್ಸ್ಗಳು (ನಿಮಗೆ ಇಷ್ಟವಾದದ್ದು) – ಅರ್ಧ ಕಪ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿಗಿಟ್ಟು ಕುದಿಸಿಕೊಳ್ಳಿ.
    * ಬಳಿಕ ಇದಕ್ಕೆ ಕೇಸರಿ, ಏಲಕ್ಕಿ ಪೌಡರ್ ಮತ್ತು ಸಣ್ಣಗೆ ಹೆಚ್ಚಿದ ನಟ್ಸ್ಗಳನ್ನು ಸೇರಿಸಿಕೊಳ್ಳಿ.
    * ನಂತರ ಕೇಸರಿ ಬಣ್ಣ ಬಿಡುವವರೆಗೂ ಗ್ಯಾಸ್ ಅನ್ನು ಸಣ್ಣ ಉರಿಯಲ್ಲಿ ಇಟ್ಟುಕೊಳ್ಳಬೇಕು.
    * ಈಗ ಒಂದು ಬೌಲ್‌ನಲ್ಲಿ ಕಿವುಚಿದ ಬಾಳೆಹಣ್ಣನ್ನು ತೆಗೆದುಕೊಂಡು ಅದಕ್ಕೆ ಕುದಿಸಿ, ನಟ್ಸ್ ಸೇರಿಸಿದ ಹಾಲನ್ನು ಹಾಕಿಕೊಳ್ಳಿ.
    * ಈಗ ಹೆಚ್ಚಿದ ಬಾಳೆಹಣ್ಣಿನಿಂದ ಖೀರ್ ಅನ್ನು ಅಲಂಕರಿಸಿ ಮನೆಯವರಿಗೆ ಸವಿಯಲು ಕೊಡಿ. ಇದನ್ನೂ ಓದಿ: ಟ್ರೈ ಮಾಡಿ ಟೇಸ್ಟಿ ಬನಾನ ಕಟ್ಲೆಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊಟ್ಟೆ ಬಳಸದೇ ಟೇಸ್ಟಿ ಡೋನಟ್ ಹೀಗೆ ಮಾಡಿ

    ಮೊಟ್ಟೆ ಬಳಸದೇ ಟೇಸ್ಟಿ ಡೋನಟ್ ಹೀಗೆ ಮಾಡಿ

    ಬೇಕರಿಗಳಲ್ಲಿ ಮಕ್ಕಳ ಗಮನ ಸೆಳೆಯೋದು ಸಿಹಿ ಹಾಗೂ ರುಚಿಕರವಾದ ಡೋನಟ್‌ಗಳು. ಆದರೆ ಹೆಚ್ಚಿನ ಕಡೆಗಳಲ್ಲಿ ಮೊಟ್ಟೆ ಬಳಸದೇ ಡೋನಟ್ ಮಾಡೋದು ವಿರಳ. ಆದರೆ ನಾವಿಂದು ಹೇಳಿಕೊಡುತ್ತಿರುವ ಡೋನಟ್ ರೆಸಿಪಿ ಶುದ್ಧ ಸಸ್ಯಾಹಾರಿಗಳಿಗಾಗಿ. ಇಲ್ಲಿ ನಾವು ಮೊಟ್ಟೆ ಬಳಸಿಲ್ಲ. ವೆಗನ್ ಡಯಟ್‌ನಲ್ಲಿರುವವರಿಗೂ ಈ ರೆಸಿಪಿ ಸೂಕ್ತವಾಗಲಿದೆ. ಇಲ್ಲಿ ಸಾಮಾನ್ಯ ಬೆಣ್ಣೆ ಬಳಸೋ ಬದಲು ವೆಗನ್ ಬೆಣ್ಣೆಯನ್ನು ಬಳಸಿ ಈ ಡೋನಟ್ ಅನ್ನು ಮಾಡಬಹುದು. ಹಾಗಿದ್ದರೆ ಸಸ್ಯಾಹಾರಿಗಳಿಗಾಗಿ ಡೋನಟ್ ಹೇಗೆ ಮಾಡೋದು ಎಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮೈದಾ ಹಿಟ್ಟು – 2 ಕಪ್
    ಬಾದಾಮಿ ಅಥವಾ ಸೋಯಾ ಮಿಲ್ಕ್ – ಅರ್ಧ ಕಪ್
    ಆಕ್ಟಿವ್ ಒಣ ಈಸ್ಟ್ – 1 ಟೀಸ್ಪೂನ್
    ಬ್ರೌನ್ ಶುಗರ್ – 2 ಟೀಸ್ಪೂನ್
    ಬೆಣ್ಣೆ – 2 ಟೀಸ್ಪೂನ್
    ವೆನಿಲ್ಲಾ ಸಾರ – 1 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಎಣ್ಣೆ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ಚಾಕ್ಲೇಟ್, ಕುಂಬಳಕಾಯಿ ಕಾಂಬಿನೇಷನ್‌ನಲ್ಲಿ ಮಾಡಿ ರುಚಿಕರ ಪ್ಯಾನ್‌ಕೇಕ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಈಸ್ಟ್, ಸಕ್ಕರೆ, ಉಪ್ಪು, ಕರಗಿದ ಬೆಣ್ಣೆ, ವೆನಿಲ್ಲಾ ಸಾರ ಹಾಗೂ ಬಾದಾಮಿ ಹಾಲನ್ನು ಸೇರಿಸಿ ನಯವಾದ ಹಿಟ್ಟಿನಂತೆ ಬೆರೆಸಿಕೊಳ್ಳಿ.
    * ಒಂದು ಪಾತ್ರೆಗೆ ಎಣ್ಣೆ ಸವರಿ, ಅದರಲ್ಲಿ ಹಿಟ್ಟನ್ನು ಇಟ್ಟು, ಒಂದು ಶುಭ್ರವಾದ ಬಟ್ಟೆಯಿಂದ ಮುಚ್ಚಿ 1 ಗಂಟೆ ಬೆಚ್ಚಗಿನ ಸ್ಥಳದಲ್ಲಿ ಇಡಿ. ಈ ವೇಳೆ ಹಿಟ್ಟು ಉಬ್ಬಿಕೊಳ್ಳುತ್ತದೆ.
    * ಈಗ ಹಿಟ್ಟನ್ನು ಲಟ್ಟಣಿಗೆಯಿಂದ ಸುಮಾರು 4 ಇಂಚು ದಪ್ಪವಿರುವಂತೆ ಸುತ್ತಿಕೊಳ್ಳಿ. ಡೋನಟ್ ಕಟರ್ ಸಹಾಯದಿಂದ ಅದಕ್ಕೆ ಡೋನಟ್ ಆಕಾರ ನೀಡಿ. ಈ ಹಿಟ್ಟಿನಲ್ಲಿ ಸಾಮಾನ್ಯ ಗಾತ್ರದ ಸುಮಾರು 7-8 ಡೋನಟ್‌ಗಳಾಗುತ್ತವೆ.
    * ಈಗ ಬೇಕಿಂಗ್ ಟ್ರೇಯಲ್ಲಿ ಡೋನಟ್‌ಗಳನ್ನು ಇರಿಸಿ, ಅದನ್ನು ಮತ್ತೆ ಶುಭ್ರ ಬಟ್ಟೆಯಿಂದ ಮುಚ್ಚಿ, ಇನ್ನೊಂದು ಗಂಟೆ ಬೆಚ್ಚಗಿನ ಸ್ಥಳದಲ್ಲಿ ಉಬ್ಬಲು ಬಿಡಿ.
    * ಈಗ ಒಂದು ದೊಡ್ಡ ಪ್ಯಾನ್ ತೆಗೆದುಕೊಂಡು ಅದರಲ್ಲಿ 2 ಇಂಚಿನಷ್ಟು ಎತ್ತರಕ್ಕೆ ಎಣ್ಣೆ ಸುರಿದು ಮಧ್ಯಮ ಉರಿಯಲ್ಲಿ ಬಿಸಿಗೆ ಇಡಿ. ಬಳಿಕ ಒಂದೊಂದೇ ಡೋನಟ್‌ಗಳನ್ನು ಎಣ್ಣೆಯಲ್ಲಿ ಹಾಕಿ, ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣ ಹಾಗೂ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ.
    * ಬಳಿಕ ಡೋನಟ್‌ಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ ಹಾಗೂ ತಣ್ಣಗಾಗಲು ಬಿಡಿ.
    * ಇದೀಗ ಮೊಟ್ಟೆ ಬಳಸದ ಟೇಸ್ಟಿ ಡೋನಟ್ ತಯಾರಾಗಿದೆ. ನೀವು ಬೇಕೆಂದರೆ ನಿಮ್ಮಿಷ್ಟದ ವೈಟ್ ಅಥವಾ ನಾರ್ಮಲ್ ಚಾಕ್ಲೆಟ್‌ನಲ್ಲಿ ಅರ್ಧಕ್ಕೆ ಡಿಪ್ ಮಾಡಿ ಚಾಕ್ಲೆಟ್ ಚಿಪ್ಸ್‌ನಿಂದ ಅಲಂಕರಿಸಿ ಸವಿಯಬಹುದು. ಇದನ್ನೂ ಓದಿ: ಹೀಗೆ ಮಾಡಿ ಇನ್ಸ್ಟೆಂಟ್ ಮಗ್ ಬ್ರೌನಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆಯಲ್ಲೇ ಮಾಡಿ ಸಿಂಪಲ್ ಮೆಕ್ಸಿಕನ್ ರೈಸ್

    ಮನೆಯಲ್ಲೇ ಮಾಡಿ ಸಿಂಪಲ್ ಮೆಕ್ಸಿಕನ್ ರೈಸ್

    ಬೆಳಗ್ಗೆ ಅಥವಾ ಸಂಜೆ, ತಿಂಡಿ ಅಥವಾ ಸ್ನ್ಯಾಕ್ಸ್ ಹೊತ್ತಲ್ಲಿ ರೈಸ್ ಐಟಮ್ ಏನಾದ್ರೂ ಮಾಡೋದು ಎಂದರೆ ಅಲ್ಲಿ ಬಹಳಷ್ಟು ಆಯ್ಕೆಗಳಿವೆ. ಚಿತ್ರಾನ್ನದಿಂದ ಹಿಡಿದು ಫ್ರೈಡ್ ರೈಸ್ ವರೆಗೂ ವಿವಿಧ ರೆಸಿಪಿಗಳಿವೆ. ಆದರೆ ಕೆಲವೊಂದು ಬೋರಿಂಗ್ ರೆಸಿಪಿ ಎನಿಸಿದರೆ ಕೆಲವೊಂದು ಟೇಸ್ಟಿಯಾಗಿಯೂ ಇರುತ್ತದೆ. ನಾವಿಂದು ಸಖತ್ ಟೇಸ್ಟಿ ಮೆಕ್ಸಿಕನ್ ರೈಸ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ರೈಸ್ ಐಟಮ್‌ನಲ್ಲಿ ಹೊಸದೇನಾದ್ರೂ ಟ್ರೈ ಮಾಡ್ಬೇಕು ಎಂದುಕೊಂಡವರಿಗೆ ಈ ರೆಸಿಪಿ ಬೆಸ್ಟ್ ಆಫ್ಶನ್.

    ಬೇಕಾಗುವ ಪದಾರ್ಥಗಳು:
    ಅಕ್ಕಿ – ಒಂದೂವರೆ ಕಪ್
    ಎಣ್ಣೆ – ಕಾಲು ಕಪ್
    ಕೊಚ್ಚಿದ ಬೆಳ್ಳುಳ್ಳಿ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಈರುಳ್ಳಿ – ಕಾಲು ಭಾಗ
    ಟೊಮೆಟೋ ಸಾಸ್ – ಕಾಲು ಕಪ್
    ಟೊಮೆಟೋ ಬೌಲನ್ – 2 ಟೀಸ್ಪೂನ್
    ಉಪ್ಪು – ರಚಿಗೆ ತಕ್ಕಷ್ಟು
    ಹೆಚ್ಚಿದ ಕ್ಯಾರೆಟ್ – 1
    ತಾಜಾ ಬಟಾಣಿ – ಅರ್ಧ ಕಪ್
    ನೀರು – 3 ಕಪ್
    ಹಸಿರು ಮೆಣಸಿನಕಾಯಿ -2 (ಐಚ್ಛಿಕ) ಇದನ್ನೂ ಓದಿ: ಆರೋಗ್ಯಕರ ಪಾಲಕ್ ದಾಲ್ ಕಿಚಡಿ ರೆಸಿಪಿ ನಿಮಗಾಗಿ..

    ಮಾಡುವ ವಿಧಾನ:
    * ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಪಕ್ಕಕ್ಕಿಡಿ.
    * ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಅಕ್ಕಿ ಸೇರಿಸಿ ಮಿಶ್ರಣ ಮಾಡಿ.
    * ಮಧ್ಯಮ ಉರಿಯಲ್ಲಿ ಆಗಾಗ ಬೆರೆಸುತ್ತಾ ಅಕ್ಕಿ ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 10 ನಿಮಿಷ ಹುರಿದುಕೊಳ್ಳಿ.
    * ಬಳಿಕ ಅದಕ್ಕೆ ಟೊಮೆಟೊ ಸಾಸ್, ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ ಬೆರೆಸಿಕೊಳ್ಳಿ.
    * ಟೊಮೆಟೋ ಬೌಲನ್, ಉಪ್ಪು, ಕ್ಯಾರೆಟ್, ಬಟಾಣಿ, ಮೆಣಸಿನಕಾಯಿ ಹಾಗೂ ನೀರು ಸೇರಿಸಿ ಕುದಿಸಿಕೊಳ್ಳಿ.
    * ಕುದಿ ಬಂದ ಬಳಿಕ ಪಾತ್ರೆಗೆ ಮುಚ್ಚಳ ಹಾಕಿ, ಉರಿಯನ್ನು ಕಡಿಮೆ ಮಾಡಿ, ಸುಮಾರು 20 ನಿಮಿಷಗಳವರೆಗೆ ಅಥವಾ ನೀರು ಸಂಪೂರ್ಣವಾಗಿ ಹೀರಿಕೊಳ್ಳುವವರೆಗೆ ಬೇಯಿಸಿಕೊಳ್ಳಿ.
    * ಬಳಿಕ ಉರಿಯನ್ನು ಆಫ್ ಮಾಡಿ, 5 ನಿಮಿಷ ಆರಲು ಬಿಟ್ಟು ಬಳಿಕ ಮಿಶ್ರಣ ಮಾಡಿ.
    * ಇದೀಗ ಸಿಂಪಲ್ ಹಾಗೂ ಟೇಸ್ಟಿ ಮೆಕ್ಸಿಕನ್ ರೈಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಡಿಫರೆಂಟ್ ಸ್ವಾದದ ಹೆಲ್ತಿ ರೆಸಿಪಿ – ಕೊಕೊನಟ್, ಮಿಂಟ್ ರೈಸ್ ಮಾಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈರುಳ್ಳಿ, ಟೊಮೆಟೋ ಯಾವ್ದೂ ಬೇಡ – ಹೀಗೆ ಮಾಡಿ ರುಚಿಕರ ಚಿಕನ್ ಫ್ರೈ

    ಈರುಳ್ಳಿ, ಟೊಮೆಟೋ ಯಾವ್ದೂ ಬೇಡ – ಹೀಗೆ ಮಾಡಿ ರುಚಿಕರ ಚಿಕನ್ ಫ್ರೈ

    ರುಳ್ಳಿ ಟೊಮೆಟೋಗಳಂತಹ ಪದಾರ್ಥಗಳು ಇಲ್ಲದೇ ಹೋದಾಗ ಕೆಲವೇ ದಾರ್ಥಗಳನ್ನು ಬಳಸಿ ಚಿಕನ್‌ನ ಖಾದ್ಯ ಏನಾದ್ರೂ ಮಾಡಬೇಕಾಗಿ ಬಂದರೆ ನೀವು ಟ್ರೈ ಮಾಡೋಕೆ ಪರ್ಫೆಕ್ಟ್ ಆಗಿದೆ ಈ ರೆಸಿಪಿ. ಸುಲಭ ಹಾಗೂ ರುಚಿಕರವಾಗಿ ತಯಾರಿಸಬಹುದಾದ ಚಿಕನ್ ಫ್ರೈ ಇದಾಗಿದ್ದು, ತಕ್ಷಣವೇ ಮಾಡಬಹುದು. ಮೊಸರು, ಕಾಶ್ಮೀರಿ ಕೆಂಪು ಮೆಣಸಿನಕಾಯಿ ಹಾಗೂ ಇತರ ಕೆಲ ಪದಾರ್ಥಗಳಷ್ಟೇ ಸಾಕು. ಸಿಂಪಲ್ ಚಿಕನ್ ಫ್ರೈ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಚಿಕನ್ – 300 ಗ್ರಾಂ
    ಮೊಸರು – 3 ಟೀಸ್ಪೂನ್
    ಪುಡಿ ಮಾಡಿದ ಕಾಳುಮೆಣಸು – 1 ಟೀಸ್ಪೂನ್
    ತುಪ್ಪ – 2 ಟೀಸ್ಪೂನ್
    ಮುರಿದ ಕಾಶ್ಮೀರಿ ಕೆಂಪು ಮೆಣಸಿನಕಾಯಿ – 5
    ಕರಿಬೇವು – 2 ಚಿಗುರು
    ನಿಂಬೆ ರಸ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – ಅಗತ್ಯವಿರುವಂತೆ ಇದನ್ನೂ ಓದಿ: ಏರ್ ಫ್ರೈಯರ್‌ನಲ್ಲಿ ಮಾಡಿ ಟೇಸ್ಟಿ ಕೋಕನಟ್ ಸಿಗಡಿ

    ಮಾಡುವ ವಿಧಾನ:
    * ಮೊದಲಿಗೆ ಚಿಕನ್‌ಗೆ ಮೊಸರು, ಕರಿ ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ ಮ್ಯಾರಿನೇಟ್ ಆಗಲು ಸ್ವಲ್ಪ ಹೊತ್ತು ಪಕ್ಕಕ್ಕಿಡಿ.
    * ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಕಾಶ್ಮೀರಿ ಮೆಣಸು ಸೇರಿಸಿ ಸ್ವಲ್ಪ ಹುರಿಯಿರಿ.
    * ಬಳಿಕ ಚಿಕನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪ್ಯಾನ್ ಅನ್ನು ಮುಚ್ಚಿ, ಮಧ್ಯಮ ಉರಿಯಲ್ಲಿ ಆಗಾಗ ಕೈಯಾಡಿಸುತ್ತಾ ಸುಮಾರು 10 ನಿಮಿಷ ಬೇಯಿಸಿಕೊಳ್ಳಿ.
    * ಬಳಿಕ ಸ್ವಲ್ಪ ನೀರು ಸೇರಿಸಿ 5 ನಿಮಿಷಗಳ ಕಾಲ ಬೇಯಿಸುವುದನ್ನು ಮುಂದುವರಿಸಿ.
    * ನಂತರ ಕರಿಬೇವಿನ ಎಲೆ ಸೇರಿಸಿ, 3-5 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಬೇಯಿಸಿಕೊಳ್ಳಿ.
    * ಕೊನೆಯಲ್ಲಿ ನಿಂಬೆ ರಸ ಸೇರಿಸಿ, ಉರಿಯನ್ನು ಆಫ್ ಮಾಡಿ, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದಾದ ನಾನ್‌ವೆಜ್ ರೆಸಿಪಿ – ಏಷ್ಯನ್ ಜಿಂಜರ್ ಚಿಕನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ರೈ ಮಾಡಿ ಟೇಸ್ಟಿ ಬನಾನ ಕಟ್ಲೆಟ್

    ಟ್ರೈ ಮಾಡಿ ಟೇಸ್ಟಿ ಬನಾನ ಕಟ್ಲೆಟ್

    ಬಾಳೆಕಾಯಿ ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದು ಪೌಷ್ಟಿಕಾಂಶವನ್ನು ಹೊಂದಿದ್ದು, ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಅಷ್ಟು ಮಾತ್ರವಲ್ಲದೇ ಇದು ಕಿಡ್ನಿ ಸಮಸ್ಯೆಯನ್ನು ದೂರ ಮಾಡಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಬಾಳೆಕಾಯಿಯನ್ನು ನಮ್ಮ ನಿತ್ಯದ ಆಹಾರದಲ್ಲಿ ಹೆಚ್ಚೆಚ್ಚು ಬಳಸುವುದು ಉತ್ತಮ. ಇವತ್ತಿನ ನಮ್ಮ ರೆಸಿಪಿಯಲ್ಲಿ ಬನಾನ ಕಟ್ಲೆಟ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಚಾಕ್ಲೇಟ್, ಕುಂಬಳಕಾಯಿ ಕಾಂಬಿನೇಷನ್‌ನಲ್ಲಿ ಮಾಡಿ ರುಚಿಕರ ಪ್ಯಾನ್‌ಕೇಕ್

    ಬೇಕಾಗುವ ಸಾಮಗ್ರಿಗಳು:
    ಬಾಳೆಕಾಯಿ – 6
    ಜೋಳದ ಹಿಟ್ಟು- 2 ಚಮಚ
    ಹಸಿರು ಮೆಣಸಿನಕಾಯಿ – ಅಗತ್ಯಕ್ಕೆ ತಕ್ಕಷ್ಟು
    ಅಚ್ಚಖಾರದ ಪುಡಿ – 1 ಚಮಚ
    ಅರಶಿಣ ಪುಡಿ – ಅರ್ಧ ಚಮಚ
    ಕೊತ್ತಂಬರಿ ಪೌಡರ್ – ಅರ್ಧ ಚಮಚ
    ಗರಂ ಮಸಾಲ – ಅರ್ಧ ಚಮಚ
    ಪೆಪ್ಪರ್ ಪೌಡರ್- ಅರ್ಧ ಚಮಚ
    ನಿಂಬೆ ರಸ – 1 ಚಮಚ
    ಸಾಸಿವೆ – ಅರ್ಧ ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
    ಕೊತ್ತಂಬರಿ ಸೊಪ್ಪು – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ಅಲ್ಲಿ ಸ್ವಲ್ಪ ನೀರನ್ನು ಬಿಸಿಗಿಟ್ಟು, ಕಾದ ಬಳಿಕ ಅದಕ್ಕೆ ಬಾಳೆಕಾಯಿಯನ್ನು ಹಾಕಿ ಬೇಯಲು ಬಿಡಿ.
    * ಬಾಳೆಕಾಯಿ ಸರಿಯಾಗಿ ಬೆಂದ ಬಳಿಕ ಅದನ್ನು ಬಿಸಿ ನೀರಿನಿಂದ ಅದನ್ನು ಹೊರತೆಗೆದು ಆರಲು ಬಿಡಿ. ನಂತರ ಅದರ ಸಿಪ್ಪೆ ಬಿಡಿಸಿಕೊಂಡು ಬಾಳೆಕಾಯಿಯನ್ನು ಚನ್ನಾಗಿ ಪುಡಿ ಮಾಡಿಕೊಳ್ಳಿ.
    * ಬಳಿಕ ಒಂದು ಬೌಲ್‌ಗೆ ಅಚ್ಚಖಾರದ ಪೌಡರ್, ಜೋಳದ ಹಿಟ್ಟು, ನಿಂಬೆರಸ, ಕೊತ್ತಂಬರಿ ಪೌಡರ್, ಸಾಸಿವೆ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಗರಂ ಮಸಾಲವನ್ನು ಹಾಕಿಕೊಳ್ಳಿ.
    * ಈಗ ಇದಕ್ಕೆ ಬೇಯಿಸಿ ಪುಡಿ ಮಾಡಿದ್ದ ಬಾಳೆಕಾಯಿಯನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಸ್ವಲ್ಪ ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಅದಕ್ಕೆ ಕಟ್ಲೆಟ್ ರೂಪವನ್ನು ನೀಡಿ.
    * ಈಗ ಒಂದು ಪ್ಯಾನ್ ಅಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಗಿಡಿ. ಎಣ್ಣೆ ಕಾದ ಬಳಿಕ ಅದಕ್ಕೆ ಕಟ್ಲೆಟ್ ಅನ್ನು ಹಾಕಿಕೊಂಡು ಗೋಲ್ಡನ್ ಬಣ್ಣ ಬರುವವರೆಗೆ ಚನ್ನಾಗಿ ಫ್ರೈ ಮಾಡಿಕೊಳ್ಳಿ.
    * ಹೀಗೇ ಎರಡೂ ಬದಿ ಚನ್ನಾಗಿ ಫ್ರೈ ಮಾಡಿದ ಬಳಿಕ ಅದನ್ನು ಸರ್ವಿಂಗ್ ಪ್ಲೇಟ್‌ಗೆ ಹಾಕಿ ಸಾಸ್ ಅಥವಾ ಗ್ರೀನ್ ಚಟ್ನಿಯೊಂದಿಗೆ ಬಿಸಿ ಬಿಸಿಯಾಗಿ ಸರ್ವ್ ಮಾಡಿ. ಇದನ್ನೂ ಓದಿ: ಆರೋಗ್ಯಕರ ಪಾಲಕ್ ದಾಲ್ ಕಿಚಡಿ ರೆಸಿಪಿ ನಿಮಗಾಗಿ..

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಾಕ್ಲೇಟ್, ಕುಂಬಳಕಾಯಿ ಕಾಂಬಿನೇಷನ್‌ನಲ್ಲಿ ಮಾಡಿ ರುಚಿಕರ ಪ್ಯಾನ್‌ಕೇಕ್

    ಚಾಕ್ಲೇಟ್, ಕುಂಬಳಕಾಯಿ ಕಾಂಬಿನೇಷನ್‌ನಲ್ಲಿ ಮಾಡಿ ರುಚಿಕರ ಪ್ಯಾನ್‌ಕೇಕ್

    ಪ್ಯಾನ್‌ಕೇಕ್ ಸಾಮಾನ್ಯವಾಗಿ ಹೆಚ್ಚಿನವರು ಸವಿದಿರುತ್ತಾರೆ. ಯುನಜನರು ಹಾಗೂ ಮಕ್ಕಳಿಗೆ ಈ ರೆಸಿಪಿ ಇಷ್ಟವಾಗುತ್ತದೆ. ಬಾಳೆಹಣ್ಣು, ಆಪಲ್, ಸ್ಟ್ರಾಬೆರಿ ಸೇರಿದಂತೆ ಹಲವು ಹಣ್ಣುಗಳನ್ನು ಬಳಸಿಯೂ ಈ ಪ್ಯಾನ್‌ಕೇಕ್ ಅನ್ನು ವಿಧವಿಧವಾಗಿ ತಯಾರಿಸಬಹುದು. ಆದರೆ ನೀವು ಚಾಕ್ಲೇಟ್ ಹಾಗೂ ಕುಂಳಕಾಯಿಯ ಕಾಂಬಿನೇಷನ್‌ನಲ್ಲಿ ಪ್ಯಾನ್‌ಕೇಕ್ ಅನ್ನು ಎಂದೂ ಸವಿದಿಲ್ಲ ಎಂದರೆ ಇದೀಗ ಹೊಸ ಟೇಸ್ಟ್ ಅನ್ನು ಟ್ರೈ ಮಾಡೋ ಸಮಯ ಬಂದಿದೆ. ಚಾಕ್ಲೇಟ್ ಹಾಗೂ ಕುಂಬಳಕಾಯಿಯ ಈ ಪ್ಯಾನ್‌ಕೇಕ್ ರಿಚ್ ಟೇಸ್ಟ್ ನೀಡುತ್ತದೆ. ಮಕ್ಕಳು, ಯುವಜನರೇ ಏಕೆ? ಎಲ್ಲರಿಗೂ ಇದು ಖಂಡಿತಾ ಇಷ್ಟವಾಗುತ್ತದೆ.

    ಬೇಕಾಗುವ ಪದಾರ್ಥಗಳು:
    ಸಿಹಿ ಕುಂಬಳಕಾಯಿಯ ಪ್ಯೂರಿ – 1 ಕಪ್
    ಮೊಟ್ಟೆ – 1
    ಕರಗಿಸಿದ ಬೆಣ್ಣೆ – 2 ಟೀಸ್ಪೂನ್
    ಮೈದಾ ಹಿಟ್ಟು – 2 ಕಪ್
    ಸಕ್ಕರೆ – 3 ಟೀಸ್ಪೂನ್
    ಬೇಕಿಂಗ್ ಪೌಡರ್ – 2 ಟೀಸ್ಪೂನ್
    ಅಡುಗೆ ಸೋಡಾ – 1 ಟೀಸ್ಪೂನ್
    ಕೋಕೋ ಪೌಡರ್ – 2 ಟೀಸ್ಪೂನ್
    ದಾಲ್ಚಿನ್ನಿ ಪೌಡರ್ – 1 ಟೀಸ್ಪೂನ್
    ತುರಿದ ಶುಂಠಿ – ಅರ್ಧ ಟೀಸ್ಪೂನ್
    ಚಾಕ್ಲೇಟ್ ಮಿಲ್ಕ್ – 2 ಕಪ್
    ಚಾಕ್ಲೇಟ್ ಚಿಪ್ಸ್ – ಅಲಂಕರಿಸಲು
    ಚಾಕ್ಲೇಟ್ ಸಿರಪ್ – ಅಲಂಕರಿಸಲು ಇದನ್ನೂ ಓದಿ: ಮೂರೇ ಪದಾರ್ಥ ಬಳಸಿ ಮಾಡಿ ಹೆಲ್ತಿ ಓಟ್ಸ್ ಬಾರ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಸಿಹಿ ಕುಂಬಳಕಾಯಿ ಪ್ಯೂರಿ, ಮೊಟ್ಟೆ ಹಾಗೂ ಕರಗಿದ ಬೆಣ್ಣೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.
    * ಇನ್ನೊಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಅಡುಗೆ ಸೋಡಾ, ಕೋಕೋ ಪೌಡರ್, ದಾಲ್ಚಿನ್ನಿ ಪೌಡರ್ ಹಾಗೂ ತುರಿದ ಶುಂಠಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.
    * ಮೈದಾ ಮಿಶ್ರಣವನ್ನು ಕುಂಬಳಕಾಯಿ ಮಿಶ್ರಣಕ್ಕೆ ಸೇರಿಸಿ, ಚಾಕ್ಲೇಟ್ ಮಿಲ್ಕ್ ಹಾಕಿ ಚೆನ್ನಾಗಿ ಸಂಯೋಜಿಸುವವರೆಗೆ ಬೆರೆಸಿಕೊಳ್ಳಿ.
    * ಈಗ ಪ್ಯಾನ್ ಅನ್ನು ಬಿಸಿಗೆ ಇಟ್ಟು, ಅದರ ಮೇಲೆ ಸ್ವಲ್ಪ ಬೆಣ್ಣೆಯನ್ನು ಗ್ರೀಸ್ ಮಾಡಿ, ಅರ್ಧ ಕಪ್ ಹಿಟ್ಟನ್ನು ಹಾಕಿ ಬೇಯಿಸಿ.
    * ಪ್ಯಾನ್‌ಕೇಕ್‌ನಲ್ಲಿ ಗುಳ್ಳೆಗಳು ರೂಪುಗೊಳ್ಳುತ್ತದೆ ಹಾಗೂ ಅಂಚುಗಳು ಗಟ್ಟಿಯಾಗಲಾರಂಭಿಸುತ್ತದೆ. ಅದು 2-3 ನಿಮಿಷ ಬೆಂದ ಬಳಿಕ ತಿರುವಿ ಹಾಕಿ, ಇನ್ನೊಂದು ಬದಿಯೂ 2 ನಿಮಿಷ ಬೇಯಿಸಿಕೊಳ್ಳಿ. ಉಳಿದ ಹಿಟ್ಟನ್ನೂ ಇದೇ ರೀತಿ ಮುಂದುವರಿಸಿ.
    * ಈಗ ಪ್ಯಾನ್‌ಕೇಕ್‌ಗಳ ಮೇಲೆ ಚಾಕ್ಲೇಟ್ ಸಿರಪ್ ಹಾಗೂ ಚಾಕ್ಲೇಟ್ ಚಿಪ್ ಅನ್ನು ಚಿಮುಕಿಸಿ, ಸವಿಯಿರಿ. ಇದನ್ನೂ ಓದಿ: ಹೀಗೆ ಮಾಡಿ ಇನ್ಸ್ಟೆಂಟ್ ಮಗ್ ಬ್ರೌನಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏರ್ ಫ್ರೈಯರ್‌ನಲ್ಲಿ ಮಾಡಿ ಟೇಸ್ಟಿ ಕೋಕನಟ್ ಸಿಗಡಿ

    ಏರ್ ಫ್ರೈಯರ್‌ನಲ್ಲಿ ಮಾಡಿ ಟೇಸ್ಟಿ ಕೋಕನಟ್ ಸಿಗಡಿ

    ಹೆಚ್ಚು ಎಣ್ಣೆ ಬಳಸದೇ ಮಾಡೋ ಈ ಕೋಕನಟ್ ಸಿಗಡಿ ಕುರುಕಲಾದ ಗರಿಗರಿ ಫ್ರೈ ಆಗಿದ್ದು, ಸವಿಯುವಾಗ ಸಖತ್ ಮಜ ನೀಡುತ್ತದೆ. ಹೆಚ್ಚು ಎಣ್ಣೆ ಬಳಸದೇ ನೀವು ಅಡುಗೆ ಮಾಡಲು ಬಯಸುತ್ತೀರಾದರೆ ಏರ್ ಫ್ರೈಯರ್ ಪರ್ಫೆಕ್ಟ್. ನಾವಿಂದು ಕೋಕನಟ್ ಸಿಗಡಿ ಏರ್ ಫ್ರೈಯರ್‌ನಲ್ಲಿ ತಯಾರಿಸೋದು ಹೇಗೆಂದು ಹೇಳಿಕೊಡುತ್ತಿದ್ದೇವೆ. ನೀವು ಕೂಡಾ ಈ ಗರಿಗರಿಯಾದ ಕೋಕನಟ್ ಸಿಗಡಿ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಸಿಪ್ಪೆ ಸುಲಿದು ಸ್ವಚ್ಛಗೊಳಿಸಿದ ಸಿಗಡಿ – 500 ಗ್ರಾಂ
    ಮೈದಾ ಹಿಟ್ಟು – ಎರಡೂವರೆ ಟೀಸ್ಪೂನ್
    ಮೊಟ್ಟೆಯ ಬಿಳಿ ಭಾಗ – ಕಾಲು ಕಪ್
    ಬ್ರೆಡ್‌ಕ್ರಂಬ್ಸ್ – 1 ಕಪ್
    ಒಣ ತೆಂಗಿನ ತುರಿ – ಕಾಲು ಕಪ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದಾದ ನಾನ್‌ವೆಜ್ ರೆಸಿಪಿ – ಏಷ್ಯನ್ ಜಿಂಜರ್ ಚಿಕನ್

    ಮಾಡುವ ವಿಧಾನ:
    * ಮೊದಲಿಗೆ ಸ್ವಚ್ಛಗೊಳಿಸಿದ ಸಿಗಡಿಯಲ್ಲಿ ಹೆಚ್ಚಿನ ನೀರಿನಂಶ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
    * ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಮತ್ತೊಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿ ಭಾಗ ಹಾಕಿ ಬದಿಗಿಡಿ.
    * ಇನ್ನೊಂದು ಬಟ್ಟಲಿಗೆ ಬ್ರೆಡ್ ಕ್ರಂಬ್ಸ್, ಒಣ ತೆಂಗಿನ ತುರಿ ಹಾಗೂ ಉಪ್ಪು ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಿ.
    * ಈಗ ಸಿಗಡಿಯನ್ನು ಮೈದಾ ಹಿಟ್ಟಿನಲ್ಲಿ ಹಾಕಿ, ಚೆನ್ನಾಗಿ ಕೋಟ್ ಆಗುವವರೆಗೆ ಮಿಶ್ರಣ ಮಾಡಿಕೊಳ್ಳಿ.
    * ಬಳಿಕ ಒಂದೊಂದೇ ಸಿಗಡಿಯನ್ನು ಮೊಟ್ಟೆಯ ಬಿಳಿ ಭಾಗವಿರುವ ಬಟ್ಟಲಿನಲ್ಲಿ ಅದ್ದಿ, ನಂತರ ತೆಂಗಿನ ತುರಿ ಮಿಶ್ರಣದಲ್ಲಿ ಕೋಟ್ ಮಾಡಿಕೊಳ್ಳಿ. ಇದೇ ರೀತಿ ಎಲ್ಲಾ ಸಿಗಡಿಯನ್ನು ತಯಾರಿಸಿ ಒಂದು ಬಟ್ಟಲಿನಲ್ಲಿ ಇಡಿ.
    * ಈಗ ಏರ್ ಫ್ರೈಯರ್‌ನ ಟ್ರೇಗೆ ಕುಕಿಂಗ್ ಸ್ಪ್ರೇ ಸಿಂಪಡಿಸಿ, ಸಿಗಡಿಗಳನ್ನು ಒಂದೊಂದಾಗಿಯೆ ಅದರಲ್ಲಿ ಜೋಡಿಸಿಕೊಳ್ಳಿ. ನಂತರ ಅದರ ಮೇಲೆ ಮತ್ತೆ ಕುಕಿಂಗ್ ಸ್ಪ್ರೇ ಸಿಂಪಡಿಸಿ. (ಒಂದೇ ಬಾರಿ ಜೋಡಿಸಲು ಸಾಧ್ಯವಿಲ್ಲವೆಂದರೆ ಬ್ಯಾಚ್‌ಗಳಲ್ಲಿ ಬೇಯಿಸಿಕೊಳ್ಳಬಹುದು)
    * ಸಿಗಡಿಗಳನ್ನು 400 ಡಿಗ್ರಿ ಪ್ಯಾರಾಹೀಟ್‌ನಲ್ಲಿ ಸುಮಾರು 8-10 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ. ಈ ಸಮಯದ ನಡುವೆ ಒಂದು ಬಾರಿ ಸಿಗಡಿಗಳನ್ನು ತಿರುವಿ ಹಾಕಿ ಬೇಯಿಸಿಕೊಳ್ಳಿ.
    * ಸಿಗಡಿಗಳು ಗೋಲ್ಡನ್ ಬ್ರೌನ್ ಬಣ್ಣ ಹಾಗೂ ಗರಿಗರಿಯಾದ ಬಳಿಕ ಸವಿಯಲು ಸಿದ್ಧವಾಗುತ್ತದೆ.
    * ಇದನ್ನು ಸಿಹಿ ಹಾಗೂ ಹುಳಿಯಾದ ಸಾಸ್‌ನೊಂದಿಗೆ ಬಡಿಸಿ. ಇದನ್ನೂ ಓದಿ: ಟ್ರೈ ಮಾಡಿ ಕೇರಳ ಸ್ಟೈಲ್‌ನ ಟೇಸ್ಟಿ ಸ್ಕ್ವಿಡ್ ರೋಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರೋಗ್ಯಕರ ಪಾಲಕ್ ದಾಲ್ ಕಿಚಡಿ ರೆಸಿಪಿ ನಿಮಗಾಗಿ..

    ಆರೋಗ್ಯಕರ ಪಾಲಕ್ ದಾಲ್ ಕಿಚಡಿ ರೆಸಿಪಿ ನಿಮಗಾಗಿ..

    ಸಿರು ಸೊಪ್ಪುಗಳನ್ನು ಸೇವಿಸುವುದರಿಂದ ನಾವು ಆರೋಗ್ಯವಂತರಾಗಿರಬಹುದು. ಸೊಪ್ಪುಗಳಲ್ಲಿ ಒಂದಾದ ಪಾಲಕ್ ಸೊಪ್ಪನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಪಾಲಕ್ ಸೊಪ್ಪು ಅಧಿಕ ಪೋಷಕಾಂಶಗಳನ್ನು ಹೊಂದಿದ್ದು, ಕಡಿಮೆ ಕ್ಯಾಲೊರಿಯನ್ನು ಹೊಂದಿರುತ್ತದೆ. ಇದನ್ನು ನಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸಿ, ಕ್ಯಾನ್ಸರ್‌ನಂತಹ ರೋಗಗಳನ್ನು ತಡೆಗಟ್ಟುತ್ತದೆ. ಅಲ್ಲದೇ ಮೂಳೆಗಳನ್ನು ಬಲಿಷ್ಟಗೊಳಿಸುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಆರೋಗ್ಯಕರ ಪಾಲಕ್ ದಾಲ್ ಕಿಚಡಿಯನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಹೀಗೆ ಮಾಡಿ ಇನ್ಸ್ಟೆಂಟ್ ಮಗ್ ಬ್ರೌನಿ

    ಬೇಕಾಗುವ ಸಾಮಗ್ರಿಗಳು:
    ಹೆಚ್ಚಿದ ಪಾಲಕ್ – 1 ಕಪ್
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಟೊಮೆಟೊ – 2
    ಅಕ್ಕಿ – ಒಂದೂವರೆ ಕಪ್
    ಬೇಳೆ – 1 ಕಪ್
    ಜೀರಿಗೆ – 1 ಚಮಚ
    ಸಾಸಿವೆ – 1 ಚಮಚ
    ಕೊತ್ತಂಬರಿ ಪುಡಿ – 1 ಚಮಚ
    ಅರಶಿಣ ಪುಡಿ – 1 ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಅಚ್ಚ ಖಾರದ ಪುಡಿ – ಸ್ವಲ್ಪ
    ಕರಿ ಬೇವು – 5ರಿಂದ 6 ಎಲೆ
    ತುಪ್ಪ – 1 ಚಮಚ
    ಹಸಿರು ಮೆಣಸು – ಅಗತ್ಯಕ್ಕೆ ತಕ್ಕಷ್ಟು
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    ನೀರು – 1 ಗ್ಲಾಸ್

    ಮಾಡುವ ವಿಧಾನ:
    * ಮೊದಲಿಗೆ ಅಕ್ಕಿ ಮತ್ತು ಬೇಳೆಯನ್ನು 2ರಿಂದ 3 ಬಾರಿ ಚೆನ್ನಾಗಿ ತೊಳೆದು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
    * ಬಳಿಕ ಒಂದು ಕುಕ್ಕರಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಗಿಡಿ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
    * ನಂತರ ಇದಕ್ಕೆ ಹೆಚ್ಚಿದ ಟೊಮೆಟೋ, ಈರುಳ್ಳಿ ಮತ್ತು ಹಸಿರು ಮೆಣಸು ಹಾಕಿ ಸ್ವಲ್ಪ ಹೊತ್ತು ಬೇಯಲು ಬಿಡಿ.
    * ಈಗ ಇದಕ್ಕೆ ಅರಶಿಣ ಪುಡಿ, ಕೊತ್ತಂಬರಿ ಪುಡಿ ಮತ್ತು ಅಚ್ಚ ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಬಳಿಕ ನೆನೆಸಿಟ್ಟಿದ್ದ ಬೇಳೆ ಮತ್ತು ಅಕ್ಕಿಯನ್ನು ಹಾಕಿಕೊಂಡು ಒಂದು ಗ್ಲಾಸ್ ನೀರನ್ನು ಸೇರಿಸಿಕೊಂಡು 2 ನಿಮಿಷಗಳ ಕಾಲ ಬೇಯಲು ಬಿಡಿ. ಈಗ ಇದಕ್ಕೆ ಹೆಚ್ಚಿದ ಪಾಲಕ್ ಸೊಪ್ಪನ್ನು ಹಾಕಿಕೊಂಡು ಕುಕ್ಕರ್ ಮುಚ್ಚಳವನ್ನು ಮುಚ್ಚಿ 10ರಿಂದ 12 ನಿಮಿಷಗಳವರೆಗೆ ಬೇಯಿಸಿಕೊಳ್ಳಿ.
    * ಕುಕ್ಕರ್ 2 ವಿಶಲ್ ಆದ ಬಳಿಕ ಕಿಚಡಿಯನ್ನು ಕುಕ್ಕರ್‌ನಿಂದ ತೆಗೆದು ಒಂದು ಪಾತ್ರೆಗೆ ಹಾಕಿಕೊಂಡು ಅದರ ಮೇಲೆ ಒಂದು ಚಮಚ ತುಪ್ಪವನ್ನು ಹಾಕಿಕೊಳ್ಳಿ.
    * ಈಗ ಬಿಸಿ ಬಿಸಿ ಪಾಲಕ್ ದಾಲ್ ಕಿಚಡಿ ಸವಿಯಲು ಸಿದ್ಧ. ಇದನ್ನೂ ಓದಿ: ಸಖತ್ ರುಚಿ ಈ ಚೆಟ್ಟಿನಾಡ್ ಆಲೂಗಡ್ಡೆ ಫ್ರೈ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]